26.06.24         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ- ಸದಾ ಇದೇ ನಶೆಯಲ್ಲಿರಿ- ನಮ್ಮದು ಪದಮಾಪದಮ ಭಾಗ್ಯವಾಗಿದೆ, ಪತಿತ-ಪಾವನ ತಂದೆಗೆ ನಾವು ಮಕ್ಕಳಾಗಿದ್ದೇವೆ, ಅವರಿಂದ ನಮಗೆ ಬೇಹದ್ದಿನ ಸುಖದ ಆಸ್ತಿಯು ಸಿಗುತ್ತದೆ”

ಪ್ರಶ್ನೆ:
ನೀವು ಮಕ್ಕಳಿಗೆ ಯಾವುದೇ ಧರ್ಮದೊಂದಿಗೆ ಈಷ್ರ್ಯೆ ಅಥವಾ ತಿರಸ್ಕಾರವಿರಲು ಸಾಧ್ಯವಿಲ್ಲ-ಏಕೆ?

ಉತ್ತರ:
ಏಕೆಂದರೆ ನೀವು ಬೀಜ ಮತ್ತು ವೃಕ್ಷವನ್ನು ಅರಿತಿದ್ದೀರಿ. ನಿಮಗೆ ಗೊತ್ತಿದೆ- ಇದು ಮನುಷ್ಯ ಸೃಷ್ಟಿರೂಪಿ ಬೇಹದ್ದಿನ ವೃಕ್ಷವಾಗಿದೆ. ಇದರಲ್ಲಿ ಪ್ರತಿಯೊಬ್ಬರದೂ ತಮ್ಮ-ತಮ್ಮ ಪಾತ್ರವಿದೆ, ನಾಟಕದಲ್ಲಿ ಎಂದೂ ಪಾತ್ರಧಾರಿಗಳು ಒಬ್ಬರು ಇನ್ನೊಬ್ಬರನ್ನು ತಿರಸ್ಕರಿಸುವುದಿಲ್ಲ. ಹಾಗೆಯೇ ನಿಮಗೂ ತಿಳಿದಿದೆ- ನಾವು ಈ ನಾಟಕದ ನಾಯಕ-ನಾಯಕಿಯ ಪಾತ್ರವನ್ನಭಿನಯಿಸಿದೆವು. ನಾವು ಯಾವ ಸುಖವನ್ನು ನೋಡಿದೆವೋ ಅದನ್ನು ಮತ್ತ್ಯಾರೂ ನೋಡಲು ಸಾಧ್ಯವಿಲ್ಲ. ನಾವು ಇಡೀ ವಿಶ್ವದ ಮೇಲೆ ರಾಜ್ಯ ಮಾಡುವವರಾಗಿದ್ದೇವೆ ಎಂದು ನಿಮಗೆ ಅಪಾರ ಖುಷಿಯಿದೆ.

ಓಂ ಶಾಂತಿ.
ಓಂ ಶಾಂತಿ ಎಂದು ಹೇಳುವುದರಿಂದಲೇ ಮಕ್ಕಳಿಗೆ ಯಾವ ಜ್ಞಾನ ಸಿಕ್ಕಿದೆಯೋ ಅದೆಲ್ಲವೂ ಮಕ್ಕಳ ಬುದ್ಧಿಯಲ್ಲಿ ಬಂದುಬಿಡಬೇಕು. ತಂದೆಯ ಬುದ್ಧಿಯಲ್ಲಿ ಯಾವ ಜ್ಞಾನವಿದೆ? ಇದು ಮನುಷ್ಯಸೃಷ್ಟಿರೂಪಿ ವೃಕ್ಷವಾಗಿದೆ, ಇದನ್ನು ಕಲ್ಪವೃಕ್ಷವೆಂದೂ ಹೇಳುತ್ತಾರೆ, ಅದರ ಉತ್ಪತ್ತಿ, ಪಾಲನೆ ಮತ್ತೆ ವಿನಾಶ ಹೇಗಾಗುತ್ತದೆ ಎಂಬುದೆಲ್ಲವೂ ಬುದ್ಧಿಯಲ್ಲಿ ಬರಬೇಕು. ಹೇಗೆ ಆ ಜಡವೃಕ್ಷವಿರುತ್ತದೆಯೋ ಹಾಗೆಯೇ ಇದು ಚೈತನ್ಯವಾಗಿದೆ, ಬೀಜವೂ ಚೈತನ್ಯವಾಗಿದ್ದಾರೆ. ಅವರು ಸತ್ಯವೆಂದು ಅವರ ಮಹಿಮೆ ಮಾಡುತ್ತಾರೆ. ಅವರು ಸತ್ಯ-ಚೈತನ್ಯವಾಗಿದ್ದಾರೆ ಅರ್ಥಾತ್ ವೃಕ್ಷದ ಆದಿ-ಮಧ್ಯ-ಅಂತ್ಯದ ರಹಸ್ಯವನ್ನು ತಿಳಿಸುತ್ತಿದ್ದಾರೆ. ಯಾರೂ ಸಹ ಅವರ ಕರ್ತವ್ಯವನ್ನು ತಿಳಿದುಕೊಂಡಿಲ್ಲ. ಪ್ರಜಾಪಿತ ಬ್ರಹ್ಮಾರವರ ಕರ್ತವ್ಯವನ್ನೂ ಅರಿತುಕೊಳ್ಳಬೇಕಲ್ಲವೆ. ಬ್ರಹ್ಮಾರವರನ್ನು ಯಾರೂ ನೆನಪು ಮಾಡುವುದಿಲ್ಲ ಏಕೆಂದರೆ ಗೊತ್ತೇ ಇಲ್ಲ. ಅಜ್ಮೀರ್ನಲ್ಲಿ ಬ್ರಹ್ಮಾನ ಮಂದಿರವಿದೆ, ತ್ರಿಮೂರ್ತಿ ಚಿತ್ರವನ್ನು ಮುದ್ರಿಸುತ್ತಾರೆ ಅದರಲ್ಲಿ ಬ್ರಹ್ಮಾ-ವಿಷ್ಣು-ಶಂಕರರಿದ್ದಾರೆ. ಬ್ರಹ್ಮ ದೇವತಾಯ ನಮಃ ಎಂದು ಹೇಳುತ್ತಾರೆ. ಈಗ ನೀವು ಮಕ್ಕಳು ತಿಳಿದುಕೊಂಡಿದ್ದೀರಿ- ಈ ಸಮಯದಲ್ಲಿ ಬ್ರಹ್ಮನಿಗೆ ದೇವತೆ ಎಂದು ಹೇಳಲಾಗುವುದಿಲ್ಲ. ಯಾವಾಗ ಸಂಪೂರ್ಣರಾಗುವರೋ ಆಗಲೇ ದೇವತೆಯೆಂದು ಹೇಳಲಾಗುತ್ತದೆ. ಸಂಪೂರ್ಣರಾಗಿ ಸೂಕ್ಷ್ಮವತನದಲ್ಲಿ ಹೊರಟುಹೋಗುತ್ತಾರೆ.

ತಂದೆಯು ಕೇಳುತ್ತಾರೆ- ನಿಮ್ಮ ತಂದೆಯ ಹೆಸರೇನು? ಯಾರೊಂದಿಗೆ ಕೇಳುತ್ತಾರೆ? ಆತ್ಮಗಳೊಂದಿಗೆ. ನಮ್ಮ ತಂದೆಯಾಗಿದ್ದಾರೆ ಎಂದು ಆತ್ಮವು ಹೇಳುತ್ತದೆ. ಯಾರಿಗೆ ಇದನ್ನು ಯಾರು ಹೇಳಿದರೆಂದು ತಿಳಿದಿಲ್ಲವೋ ಅವರು ಈ ಪ್ರಶ್ನೆಯನ್ನು ಕೇಳಲು ಸಾಧ್ಯವಿಲ್ಲ. ಈಗ ಮಕ್ಕಳು ತಿಳಿದುಕೊಂಡಿದ್ದೀರಿ- ಅವಶ್ಯವಾಗಿ ಎಲ್ಲರಿಗೂ ಇಬ್ಬರು ತಂದೆಯರಿದ್ದಾರೆ. ಜ್ಞಾನವನ್ನಂತೂ ಒಬ್ಬ ತಂದೆಯೇ ಕೊಡುತ್ತಾರೆ. ಈಗ ನೀವು ಮಕ್ಕಳು ತಿಳಿದುಕೊಂಡಿರುತ್ತೀರಿ- ಇವರು ಶಿವತಂದೆಯ ರಥವಾಗಿದ್ದಾರೆ, ತಂದೆಯು ಈ ರಥದ ಮೂಲಕ ನಮಗೆ ಜ್ಞಾನವನ್ನು ತಿಳಿಸುತ್ತಾರೆ. ಮೊದಲನೆಯದಾಗಿ ಇದು (ಬ್ರಹ್ಮಾರವರ ಶರೀರ) ಶಾರೀರಿಕ ಬ್ರಹ್ಮಾತಂದೆಯ ರಥವೂ ಹೌದು, ಎರಡನೆಯದಾಗಿ ಅತ್ಮಿಕ ತಂದೆಗೂ ಹೌದು. ಆ ಆತ್ಮಿಕ ತಂದೆಯ ಮಹಿಮೆಯಾಗಿದೆ- ಸುಖದಸಾಗರ, ಶಾಂತಿಯ ಸಾಗರ..... ಮೊದಲಂತೂ ಇದು ಬುದ್ಧಿಯಲ್ಲಿರುವುದು- ಇವರು ಬೇಹದ್ದಿನ ತಂದೆಯಾಗಿದ್ದಾರೆ, ಅವರಿಂದ ಬೇಹದ್ದಿನ ಆಸ್ತಿಯು ಸಿಗುತ್ತದೆ. ಪಾವನ ಪ್ರಪಂಚದ ಮಾಲೀಕರಾಗುತ್ತೇವೆ. ಪತಿತ-ಪಾವನ ಬನ್ನಿ ಎಂದು ನಿರಾಕಾರನನ್ನು ಕರೆಯುತ್ತಾರೆ, ಹೀಗೆ ಆತ್ಮವೇ ಕರೆಯುತ್ತದೆ. ಯಾವಾಗ ಪಾವನ ಆತ್ಮವಾಗಿರುವುದೋ ಆಗ ಕರೆಯುವುದಿಲ್ಲ, ಪತಿತವಾಗಿದ್ದಾಗಲೇ ಕರೆಯುತ್ತಾರೆ. ಈಗ ನೀವಾತ್ಮರು ಅರಿತಿದ್ದೀರಿ, ಆ ಪತಿತ-ಪಾವನ ತಂದೆಯು ಈ ಶರೀರದಲ್ಲಿ ಬಂದಿದ್ದಾರೆ. ನಾವು ಅವರ ಮಕ್ಕಳಾಗಿದ್ದೇವೆಂದು ಮರೆಯಬಾರದು. ಇದು ಸೌಭಾಗ್ಯವಲ್ಲ. ಪದಮಾಪದಮ ಭಾಗ್ಯದ ಮಾತಾಗಿದೆ. ಮತ್ತೆ ಅಂತಹ ತಂದೆಯನ್ನು ಏಕೆ ಮರೆಯಬೇಕು! ಈ ಸಮಯದಲ್ಲಿ ತಂದೆಯೂ ಬಂದಿದ್ದಾರೆ. ನಾವು ಅವರ ಮಕ್ಕಳಾಗಿದ್ದೇವೆಂದು ಮರೆಯಬಾರದು. ಇದು ಹೊಸಮಾತಾಗಿದೆ. ಶಿವಜಯಂತಿಯನ್ನೂ ಸಹ ಪ್ರತೀವರ್ಷವೂ ಆಚರಿಸಲಾಗುತ್ತದೆ ಅಂದಾಗ ಅವಶ್ಯವಾಗಿ ಅವರು ಒಂದೇಬಾರಿ ಬರುತ್ತಾರೆ. ಲಕ್ಷ್ಮೀ-ನಾರಾಯಣರು ಸತ್ಯಯುಗದಲ್ಲಿದ್ದರು, ಈ ಸಮಯದಲ್ಲಿ ಅಲ್ಲ ಆದ್ದರಿಂದ ತಿಳಿಸಬೇಕು- ಅವರು ಪುನರ್ಜನ್ಮವನ್ನು ತೆಗೆದುಕೊಂಡಿರಬಹುದು, 16 ಕಲೆಗಳಿಂದ 14-12 ಈಗ ಕೆಳಗೆ ಇಳಿಯುತ್ತಾ ಬಂದಿರಬೇಕು. ಇದನ್ನು ನಿಮ್ಮ ವಿನಃ ಯಾರೂ ತಿಳಿದುಕೊಂಡಿಲ್ಲ. ಸತ್ಯಯುಗವೆಂದು ಹೊಸಪ್ರಪಂಚಕ್ಕೆ ಹೇಳಲಾಗುತ್ತದೆ. ಅಲ್ಲಂತೂ ಎಲ್ಲವೂ ಹೊಸದೇ ಹೊಸದಿರುತ್ತದೆ. ದೇವತಾಧರ್ಮದ ಹೆಸರನ್ನೂ ಗಾಯನ ಮಾಡಲಾಗುತ್ತದೆ. ಅದೇ ದೇವತೆಗಳು ವಾಮಮಾರ್ಗದಲ್ಲಿ ಹೋದಾಗ ಅವರನ್ನು ಹೊಸಬರು ಎಂದಾಗಲಿ, ದೇವತೆಗಳೆಂದಾಗಲಿ ಹೇಳಲು ಸಾಧ್ಯವಿಲ್ಲ. ಯಾರೂ ಸಹ ನಾವು ಅವರ ವಂಶಾವಳಿಯಾಗಿದ್ದೇವೆಂದು ಹೇಳುವುದಿಲ್ಲ. ಒಂದುವೇಳೆ ತಮ್ಮನ್ನು ಆ ವಂಶಾವಳಿಯೆಂದು ತಿಳಿಯುವಂತಿದ್ದರೆ ಮತ್ತೆ ಅವರ ಮಹಿಮೆ ತಮ್ಮ ನಿಂದನೆ ಏಕೆ ಮಾಡಿಕೊಳ್ಳುತ್ತಾರೆ? ಯಾವಾಗ ಮಹಿಮೆ ಮಾಡುತ್ತಾರೆಯೋ ಆಗ ಅವಶ್ಯವಾಗಿ ಅವರು ಪವಿತ್ರರು, ತಮ್ಮನ್ನು ಅಪವಿತ್ರ, ಪತಿತರೆಂದು ತಿಳಿಯುತ್ತಾರೆ. ಪಾವನರಿಂದ ಪತಿತರಾಗುತ್ತಾರೆ, ಪುನರ್ಜನ್ಮ ತೆಗೆದುಕೊಳ್ಳುತ್ತಾರೆ. ಮೊಟ್ಟಮೊದಲು ಯಾರು ಪಾವನರಾಗಿದ್ದರೋ ಅವರೇ ನಂತರ ಪತಿತರಾಗುತ್ತಾರೆ. ನಿಮಗೂ ಗೊತ್ತಿದೆ, ಈಗ ಪಾವನರಿಂದ ಪತಿತರಾಗಿದ್ದೀರಿ. ನೀವು ಶಾಲೆಯಲ್ಲಿ ಓದುತ್ತೀರಿ, ಅದರಲ್ಲಿ ನಂಬರ್ವಾರ್ ಪ್ರಥಮ, ದ್ವಿತೀಯ, ತೃತಿಯ ದರ್ಜೆಯಂತೂ ಇರುತ್ತದೆ.

ಈಗ ನೀವು ಮಕ್ಕಳು ತಿಳಿಯುತ್ತೀರಿ- ನಮಗೆ ತಂದೆಯು ಓದಿಸುತ್ತಾರೆ ಆದ್ದರಿಂದಲೇ ಬರುತ್ತೀರಲ್ಲವೆ. ಇಲ್ಲದಿದ್ದರೆ ಇಲ್ಲಿ ಬರುವ ಅವಶ್ಯಕತೆಯಾದರೂ ಏನಿದೆ! ಇಲ್ಲಿ ಇವರು (ಬ್ರಹ್ಮಾ) ಯಾವುದೇ ಗುರು, ಮಹಾತ್ಮ, ಮಹಾಪುರುಷರಲ್ಲ. ಇದಂತೂ ಸಾಧಾರಣ ಮನುಷ್ಯ ತನುವಾಗಿದೆ, ಅದರಲ್ಲೂ ಬಹಳ ಹಳೆಯದಾಗಿದೆ. ಬಹಳ ಜನ್ಮಗಳ ಅಂತಿಮದಲ್ಲಿ ಪ್ರವೇಶ ಮಾಡುತ್ತೇನೆ. ಮತ್ತ್ಯಾವುದೇ ಇವರ ಮಹಿಮೆಯಿಲ್ಲ ಕೇವಲ ಇವರಲ್ಲಿ ಪ್ರವೇಶ ಮಾಡುತ್ತೇನೆ ಆಗ ಇವರ ಹೆಸರಾಗುತ್ತದೆ ಇಲ್ಲವೆಂದರೆ ಪ್ರಜಾಪಿತ ಬ್ರಹ್ಮಾ ಎಲ್ಲಿಂದ ಬಂದರು. ಮನುಷ್ಯರು ಅವಶ್ಯವಾಗಿ ತಬ್ಬಿಬ್ಬಾಗುತ್ತಾರಲ್ಲವೆ. ತಂದೆಯು ನಿಮಗೆ ತಿಳಿಸಿದ್ದಾರೆ ಆದ್ದರಿಂದಲೇ ನೀವು ಅನ್ಯರಿಗೂ ತಿಳಿಸುತ್ತೀರಿ. ಬ್ರಹ್ಮಾರವರ ತಂದೆ ಯಾರು? ಬ್ರಹ್ಮಾ-ವಿಷ್ಣು-ಶಂಕರ - ಇವರ ರಚಯಿತ ಶಿವತಂದೆಯಾಗಿದ್ದಾರೆ. ಬುದ್ಧಿಯು ಮೇಲೆ ಹೋಗುತ್ತದೆ. ಪರಮಪಿತ ಪರಮಾತ್ಮ ಯಾರು ಪರಮಧಾಮದಲ್ಲಿರುತ್ತಾರೆಯೋ ಅವರದು ಈ ರಚನೆಯಾಗಿದೆ. ಬ್ರಹ್ಮಾ-ವಿಷ್ಣು-ಶಂಕರರ ಕರ್ತವ್ಯವೇ ಬೇರೆಯಾಗಿದೆ. ಯಾರಾದರೂ ಪರಸ್ಪರ 3-4 ಜನ ಇರುತ್ತಾರೆಂದರೆ ಎಲ್ಲರ ವೃತ್ತಿಯು ಬೇರೆ-ಬೇರೆಯಾಗಿರುತ್ತದೆ. ಪ್ರತಿಯೊಬ್ಬ ಪಾತ್ರವೂ ತಮ್ಮತಮ್ಮದೇ ಆಗಿದೆ. ಇಷ್ಟು ಕೋಟ್ಯಾಂತರ ಆತ್ಮಗಳಿದ್ದಾರೆ ಆದರೆ ಒಬ್ಬರ ಪಾತ್ರವು ಇನ್ನೊಬ್ಬರಿಗೆ ಹೋಲುವುದಿಲ್ಲ. ಈ ಅದ್ಭುತವಾದ ಮಾತುಗಳನ್ನು ತಿಳಿದುಕೊಳ್ಳಬೇಕಾಗಿದೆ. ಅನೇಕ ಮನುಷ್ಯರಿರುತ್ತಾರೆ, ಈಗ ಚಕ್ರವು ಪೂರ್ಣವಾಗುತ್ತದೆ. ಅಂತ್ಯವಾಗಿದೆಯಲ್ಲವೆ. ಎಲ್ಲರೂ ಹಿಂತಿರುಗಿ ಹೋಗುತ್ತಾರೆ, ಪುನಃ ಚಕ್ರವು ಪುನರಾವರ್ತನೆಯಾಗುತ್ತದೆ. ತಂದೆಯು ಈ ಎಲ್ಲಾ ಮಾತುಗಳನ್ನೂ ಭಿನ್ನ-ಭಿನ್ನ ಪ್ರಕಾರದಿಂದ ತಿಳಿಸುತ್ತಿರುತ್ತಾರೆ, ಹೊಸಮಾತಿಲ್ಲ. ನಾನು ಕಲ್ಪದ ಹಿಂದೆಯೂ ತಿಳಿಸಿದ್ದೆನೆಂದು ತಂದೆಯು ಹೇಳುತ್ತಾರೆ. ಬಹಳ ಪ್ರಿಯತಂದೆಯಾಗಿದ್ದಾರೆ, ಇಂತಹ ತಂದೆಯನ್ನು ಬಹಳ ಪ್ರೀತಿಯಿಂದ ನೆನಪು ಮಾಡಬೇಕು. ನೀವೂ ಸಹ ತಂದೆಯ ಅತಿಪ್ರಿಯ ಮಕ್ಕಳಾಗಿದ್ದೀರಲ್ಲವೆ. ತಂದೆಯನ್ನು ಎಲ್ಲರೂ ನೆನಪು ಮಾಡುತ್ತಾ ಬಂದಿದ್ದೀರಿ. ಮೊದಲು ಎಲ್ಲರೂ ಒಬ್ಬರ ಪೂಜೆ ಮಾಡುತ್ತಿದ್ದರು, ಬೇಧ-ಭಾವದ ಮಾತಿಲ್ಲ. ಈಗಂತೂ ಎಷ್ಟೊಂದು ಬೇಧ-ಭಾವವಿದೆ. ಇವರು ರಾಮನ ಭಕ್ತರು, ಇವರು ಕೃಷ್ಣನ ಭಕ್ತರಾಗಿರುತ್ತಾರೆ. ರಾಮನ ಭಕ್ತರು ಧೂಪಹಾಕಿದರೆ ಕೃಷ್ಣನ ಮೂಗನ್ನು ಮುಚ್ಚಿಬಿಡುತ್ತಾರೆ. ಇಂತಹ ಕೆಲವು ಮಾತುಗಳು ಶಾಸ್ತ್ರದಲ್ಲಿವೆ. ನಮ್ಮ ಭಗವಂತನು ದೊಡ್ಡವರೆಂದು ಇವರು ಹೇಳುತ್ತಾರೆ, ನಮ್ಮವರು ದೊಡ್ಡವರೆಂದು ಇನ್ನೊಬ್ಬರು ಹೇಳುತ್ತಾರೆ- ಇಬ್ಬರು ಭಗವಂತನೆಂದು ತಿಳಿದುಬಿಡುತ್ತಾರೆ ಅಂದಾಗ ಈ ತಪ್ಪುಗಳಾಗುವಕಾರಣವೇ ಎಲ್ಲರೂ ಆಸತ್ಯ ಕೆಲಸವನ್ನೇ ಮಾಡುತ್ತಾರೆ.

ತಂದೆಯು ತಿಳುವಳಿಕೆ ನೀಡುತ್ತಾರೆ- ಮಕ್ಕಳೇ, ಭಕ್ತಿಯು ಭಕ್ತಿಯಾಗಿದೆ, ಜ್ಞಾನವು ಜ್ಞಾನವಾಗಿದೆ. ಜ್ಞಾನಸಾಗರ ಒಬ್ಬರೇ ಆಗಿದ್ದಾರೆ. ಉಳಿದವರೆಲ್ಲರೂ ಭಕ್ತಿಯ ಸಾಗರರಾಗಿದ್ದಾರೆ. ಜ್ಞಾನದಿಂದ ಸದ್ಗತಿಯಾಗುತ್ತದೆ, ಈಗ ನೀವು ಮಕ್ಕಳು ಜ್ಞಾನವಂತರಾಗುತ್ತೀರಿ, ತಂದೆಯು ನಿಮಗೆ ತಮ್ಮ ಮತ್ತು ಇಡೀ ಚಕ್ರದ ಪರಿಚಯವನ್ನು ಕೊಡುತ್ತಾರೆ ಅದನ್ನು ಮತ್ತ್ಯಾರೂ ಕೊಡಲು ಸಾಧ್ಯವಿಲ್ಲ ಆದ್ದರಿಂದ ನೀವು ಮಕ್ಕಳು ಸ್ವದರ್ಶನ ಚಕ್ರಧಾರಿಗಳಾಗಿದ್ದೀರೆಂದು ತಂದೆಯು ಹೇಳುತ್ತಾರೆ. ಪರಮಪಿತ ಪರಮಾತ್ಮ ಒಬ್ಬರೇ ಆಗಿದ್ದಾರೆ ಉಳಿದವರೆಲ್ಲರೂ ಮಕ್ಕಳೇ ಮಕ್ಕಳಾಗಿದ್ದಾರೆ. ತಮ್ಮನ್ನು ಯಾರೂ ಪರಮಪಿತನೆಂದು ಹೇಳಿಕೊಳ್ಳಲು ಸಾಧ್ಯವಿಲ್ಲ. ಯಾರು ಒಳ್ಳೆಯ ಬುದ್ಧಿವಂತ ಮನುಷ್ಯರಿರುತ್ತಾರೆಯೋ ಅವರು ಇದು ಎಷ್ಟು ದೊಡ್ಡ ನಾಟಕವಾಗಿದೆ, ಅದರಲ್ಲಿ ಎಲ್ಲಾ ಪಾತ್ರಧಾರಿಗಳು ಅವಿನಾಶಿ ಪಾತ್ರವನ್ನಭಿನಯಿಸುತ್ತಾರೆಂದು ತಿಳಿಯುತ್ತಾರೆ. ಹೇಗೆ ಆ ಚಿಕ್ಕನಾಟಕವು ಅಲ್ಪಕಾಲದ್ದಾಗಿರುತ್ತದೆ, ಇದು ಅನಾದಿ-ಅವಿನಾಶಿಯಾಗಿದೆ, ಎಂದಿಗೂ ಮುಗಿಯುವಂತದ್ದಲ್ಲ. ಇಷ್ಟು ಸೂಕ್ಷ್ಮವಾದ ಆತ್ಮಕ್ಕೆ ಇಷ್ಟು ದೊಡ್ಡ ಪಾತ್ರವು ಸಿಕ್ಕಿದೆ. ಇದು ಶರೀರವನ್ನು ತೆಗೆದುಕೊಳ್ಳುವ ಮತ್ತು ಬಿಡುವ ಹಾಗೂ ಪಾತ್ರವನ್ನಭಿನಯಿಸುವ ಪಾತ್ರವು ಸಿಕ್ಕಿದೆ. ಈ ಮಾತುಗಳು ಯಾವುದೇ ಶಾಸ್ತ್ರಗಳಲ್ಲಿಲ್ಲ. ಒಂದುವೇಳೆ ಇದನ್ನು ಯಾವುದೇ ಗುರು ತಿಳಿಸುವಂತಿದ್ದರೆ ಎಲ್ಲರೂ ಅವರಿಗೆ ಅನುಯಾಯಿಗಳಾಗುತ್ತಾರಲ್ಲವೆ. ಕೇವಲ ಒಬ್ಬ ಅನುಯಾಯಿ ಏನು ಕೆಲಸಕ್ಕೆ ಬರುತ್ತಾರೆ! ಪೂರ್ಣ ಅನುಸರಿಸುವವರೇ ಅನುಯಾಯಿಗಳು. ಇವರ ಉಡುಗೆ ಇತ್ಯಾದಿಯಂತೂ ಗುರುಗಳಂತಿಲ್ಲ ಅಂದಮೇಲೆ ಇಂತಹವರನ್ನು ಶಿಷ್ಯರೆಂದು ಯಾರು ಹೇಳುತ್ತಾರೆ. ಇಲ್ಲಂತೂ ತಂದೆಯು ಓದಿಸುತ್ತಾರೆ, ತಂದೆಯನ್ನೇ ಅನುಸರಿಸಬೇಕಾಗಿದೆ. ಹೇಗೆ ವರನಮೆರವಣಿಗೆಯಾಗಿದೆ,ಶಿವನ ದಿಬ್ಭಣವೆಂದೂ ಹೇಳುತ್ತಾರೆ. ತಂದೆ ಹೇಳುತ್ತಾರೆ ಇದು ನನ್ನ ದಿಬ್ಬಣವಾಗಿದೆ ನೀವೆಲ್ಲರೂ ಭಕ್ತಿನಿಯರಾಗಿದ್ದೀರಿ ನಾನು ಭಗವಂತನಾಗಿದ್ದೇನೆ. ನೀವೆಲ್ಲರೂ ಪ್ರಿಯತಮೆಯರಾಗಿದ್ದೀರಿ, ನಿಮ್ಮನ್ನು ಶೃಂಗಾರ ಮಾಡಿ ಕರೆದುಕೊಂಡು ಹೋಗಲು ನಾನು ಬಂದಿದ್ದೇನೆ ಅಂದಾಗ ಎಷ್ಟೊಂದು ಖುಷಿಯಿರಬೇಕು. ಈಗ ನೀವು ಸೃಷ್ಟಿಯ ಆದಿ-ಮಧ್ಯ-ಅಂತ್ಯವನ್ನು ತಿಳಿದುಕೊಂಡಿದ್ದೀರಿ. ನೀವು ತಂದೆಯನ್ನು ನೆನಪು ಮಾಡುತ್ತಾ-ಮಾಡುತ್ತಾ ಪವಿತ್ರರಾಗುತ್ತೀರಿ, ಪವಿತ್ರ ರಾಜ್ಯಭಾಗ್ಯವೂ ಸಿಗುತ್ತದೆ. ತಂದೆಯು ತಿಳಿಸುತ್ತಾರೆ- ನಾನು ಬರುವುದೇ ಅಂತ್ಯದಲ್ಲಿ. ನನ್ನನ್ನು ಪಾವನಪ್ರಪಂಚದ ಸ್ಥಾಪನೆ ಮತ್ತು ಪತಿತಪ್ರಪಂಚದ ವಿನಾಶ ಮಾಡಲು ಬನ್ನಿ ಎಂದೇ ಕರೆಯುತ್ತಾರೆ ಆದ್ದರಿಂದ ತಂದೆಗೆ ಮಹಾಕಾಲನೆಂದೂ ಹೇಳುತ್ತಾರೆ. ಮಹಾಕಾಲನ ಮಂದಿರವೂ ಇದೆ. ಕಾಲನ ಮಂದಿರವಂತೂ ನೋಡುತ್ತೀರಲ್ಲವೆ. ಶಿವನಿಗೆ ಕಾಲನೆಂದು ಹೇಳುತ್ತಾರಲ್ಲವೆ. ಬಂದು ಪಾವನರನ್ನಾಗಿ ಮಾಡಿ ಎಂದು ಹೇಳುತ್ತಾರೆ. ತಂದೆಯು ಆತ್ಮಗಳನ್ನು ಕರೆದುಕೊಂಡು ಹೋಗುತ್ತಾರೆ. ತಂದೆಯು ಎಷ್ಟೊಂದು ಆತ್ಮಗಳನ್ನು ಕರೆದುಕೊಂಡು ಹೋಗಲು ಬಂದಿದ್ದಾರೆ. ಕಾಲರಕಾಲ ಮಹಾಕಾಲ ಎಲ್ಲಾ ಆತ್ಮಗಳನ್ನು ಪವಿತ್ರ ಹೂಗಳನ್ನಾಗಿ ಮಾಡಿ ಕರೆದುಕೊಂಡು ಹೋಗುತ್ತಾರೆ. ನೀವು ಪವಿತ್ರರಾಗಿಬಿಟ್ಟರೆ ತಂದೆಯೂ ಸಹ ಮಡಿಲಿನಲ್ಲಿಕರೆದುಕೊಂಡು ಹೋಗುತ್ತಾರೆ. ಒಂದುವೇಳೆ ಪವಿತ್ರರಾಗದಿದ್ದರೆ ಶಿಕ್ಷೆಯನ್ನನುಭವಿಸಬೇಕಾಗುತ್ತದೆ, ಅನಂತರವಂತೂ ಇರುತ್ತದೆಯಲ್ಲವೇ ಪಾಪವು ಉಳಿದುಕೊಂಡರೆ ಮತ್ತೆ ಶಿಕ್ಷೆಯನ್ನು ಅನುಭವಿಸಬೇಕಾಗುವುದು. ಪದವಿಯೂ ಅಂತಹದ್ದೇ ಸಿಗುವುದು ಆದ್ದರಿಂದ ತಂದೆಯು ತಿಳಿಸುತ್ತಾರೆ- ಮಧುರವಾದಂತಹ ಮಕ್ಕಳೇ, ಬಹಳ-ಬಹಳ ಮಧುರರಾಗಿ. ಕೃಷ್ಣನು ಎಲ್ಲರಿಗೆ ಮಧುರನೆನಿಸುತ್ತಾನಲ್ಲವೆ. ಅಷ್ಟು ಪ್ರೀತಿಯಿಂದ ಕೃಷ್ಣನನ್ನು ತೂಗುತ್ತಾರೆ, ಧ್ಯಾನದಲ್ಲಿ ಕೃಷ್ಣನನ್ನು ಚಿಕ್ಕಮಗುವನ್ನಾಗಿ ನೋಡಿ ಮಡಿಲಿಗೆ ತೆಗೆದುಕೊಂಡು ಪ್ರೀತಿ ಮಾಡುತ್ತಾರೆ, ವೈಕುಂಠಕ್ಕೆ ಹೊರಟುಹೋಗುತ್ತಾರೆ. ಅಲ್ಲಿ ಕೃಷ್ಣನನ್ನು ಚೈತನ್ಯರೂಪದಲ್ಲಿ ನೋಡುತ್ತಾರೆ. ಈಗ ನೀವು ಮಕ್ಕಳಂತೂ ತಿಳಿದುಕೊಂಡಿದ್ದೀರಿ- ಸತ್ಯವಾಗಿಯೂ ವೈಕುಂಠವು ಬರುತ್ತಿದೆ, ನಾವು ಭವಿಷ್ಯದಲ್ಲಿ ಈ ರೀತಿಯಾಗುತ್ತೇವೆ. ಶ್ರೀಕೃಷ್ಣನಿಗೆ ಕಳಂಕವನ್ನು ಹಾಕುತ್ತಾರೆ ಅದೆಲ್ಲವೂ ತಪ್ಪಾಗಿದೆ. ನೀವು ಮಕ್ಕಳಿಗೆ ನಶೆಯೇರಬೇಕು. ಪ್ರಾರಂಭದಲ್ಲಿ ಹೇಗೆ ಬಹಳ ಸಾಕ್ಷಾತ್ಕಾರವಾಗಿತ್ತೋ ಮತ್ತೆ ಅಂತ್ಯದಲ್ಲಿಯೂ ಬಹಳ ಸಾಕ್ಷಾತ್ಕಾರವಾಗುತ್ತದೆ. ಜ್ಞಾನವು ಎಷ್ಟೊಂದು ರಮಣೀಕವಾಗಿದೆ, ಎಷ್ಟೊಂದು ಖುಷಿಯಿರುತ್ತದೆ. ಭಕ್ತಿಯಲ್ಲಂತೂ ಏನೂ ಖುಷಿಯಿರುವುದಿಲ್ಲ. ಭಕ್ತರಿಗೆ ಜ್ಞಾನದಲ್ಲಿ ಎಷ್ಟು ಸುಖವಿರುತ್ತದೆಯೆಂದು ತಿಳಿದಿರುತ್ತದೆಯೇ! ಅದನ್ನು ಹೋಲಿಸಲು ಸಾಧ್ಯವಿಲ್ಲ. ನೀವು ಮಕ್ಕಳಿಗೆ ಮೊದಲು ಈ ನಶೆಯಿರಬೇಕು. ಈ ಜ್ಞಾನವನ್ನು ತಂದೆಯ ವಿನಃ ಯಾವುದೇ ಋಷಿ-ಮುನಿಗಳು ತಿಳಿಸಲು ಸಾಧ್ಯವಿಲ್ಲ. ಲೌಕಿಕ ಗುರು ಯಾರಿಗೂ ಮುಕ್ತಿ-ಜೀವನ್ಮುಕ್ತಿಯ ಮಾರ್ಗವನ್ನು ತಿಳಿಸಲು ಸಾಧ್ಯವಿಲ್ಲ. ಹೇ ಆತ್ಮಗಳೇ, ಮಕ್ಕಳೇ, ನಾನು ನಿಮಗೆ ತಿಳಿಸುತ್ತೇನೆ ಎಂಬ ಮಾತನ್ನು ಯಾವುದೇ ಮನುಷ್ಯ ಗುರುಗಳು ಹೇಳಲು ಸಾಧ್ಯವಿಲ್ಲ. ತಂದೆಗಂತೂ ಮಕ್ಕಳೇ-ಮಕ್ಕಳೇ ಎಂದು ಹೇಳುವ ಅಭ್ಯಾಸವಿದೆ. ಇವರು ನಮ್ಮ ರಚನೆಯಾಗಿದ್ದಾರೆಂದು ಗೊತ್ತಿದೆ. ಈ ತಂದೆಯೂ ಸಹ ಹೇಳುತ್ತಾರೆ- ನಾನು ಎಲ್ಲರ ರಚಯಿತನಾಗಿದ್ದೇನೆ, ನೀವೆಲ್ಲರೂ ಸಹೋದರ-ಸಹೋದರರಾಗಿದ್ದೀರಿ. ಅವರಿಗೆ ಪಾತ್ರವು ಸಿಕ್ಕಿದೆ, ಹೇಗೆ ಸಿಕ್ಕಿದೆ ಎಂಬುದನ್ನು ಕುಳಿತು ತಿಳಿಸುತ್ತಾರೆ. ಆತ್ಮದಲ್ಲಿಯೇ ಪಾತ್ರವು ತುಂಬಿದೆ. ಯಾರೆಲ್ಲರೂ ಮನುಷ್ಯರು ಬರುತ್ತಾರೆ, 84 ಜನ್ಮಗಳಲ್ಲಿ ಎಂದೂ ಒಬ್ಬರು ಇನ್ನೊಬ್ಬರಿಗೆ ಹೋಲುವುದಕ್ಕೆ ಸಾಧ್ಯವಿಲ್ಲ. ಅವಶ್ಯವಾಗಿ ಸ್ವಲ್ಪ ವ್ಯತ್ಯಾಸವಿರುತ್ತದೆ. ಸ್ವಲ್ಪ-ಸ್ವಲ್ಪ ವ್ಯತ್ಯಾಸವಿರುತ್ತದೆ, ತತ್ವಗಳೂ ಸಹ ಸತೋ-ತಜೋ-ತಮೋ ಆಗುತ್ತದೆ. ಪ್ರತಿಯೊಂದು ಜನ್ಮದ ಮುಖಲಕ್ಷಣಗಳು ಒಬ್ಬರದು ಇನ್ನೊಬ್ಬರಿಗೆ ಹೋಲುವುದಿಲ್ಲ. ಇವೂ ಸಹ ತಿಳಿದುಕೊಳ್ಳುವ ಮಾತುಗಳಾಗಿವೆ. ತಂದೆಯು ಪ್ರತಿನಿತ್ಯವೂ ತಿಳಿಸುತ್ತಿರುತ್ತಾರೆ- ಮಧುರ ಮಕ್ಕಳೇ, ತಂದೆಯಲ್ಲೆಂದೂ ಸಂಶಯ ತರಬೇಡಿ. ಸಂಶಯ ಮತ್ತು ನಿಶ್ಚಯ ಎರಡು ಶಬ್ಧಗಳಿವೆಯಲ್ಲವೆ. ತಂದೆ ತಂದೆಯೇ, ಇದರಲ್ಲಿ ಸಂಶಯ ಬರಲು ಸಾಧ್ಯವೇ ಇಲ್ಲ. ನಾನು ತಂದೆಯನ್ನು ನೆನಪು ಮಾಡಲು ಆಗುವುದಿಲ್ಲವೆಂದು ಯಾವುದೇ ಮಗು ಹೇಳಲು ಸಾಧ್ಯವಿಲ್ಲ. ಯೋಗವು ಹಿಡಿಯುವುದಿಲ್ಲವೆಂದು ನೀವು ಪದೇ-ಪದೇ ಹೇಳುತ್ತೀರಿ. ಯೋಗವೆಂಬ ಶಬ್ಧವು ಸರಿಯಿಲ್ಲ. ನೀವಂತೂ ರಾಜಋಷಿಗಳಾಗಿದ್ದೀರಿ. ಋಷಿ ಶಬ್ಧವು ಪವಿತ್ರತೆಯದಾಗಿದೆ. ನೀವು ರಾಜಋಷಿಗಳಾಗಿದ್ದೀರೆಂದರೆ ಅವಶ್ಯವಾಗಿ ಪವಿತ್ರರಾಗಿರುತ್ತೀರಿ. ಸ್ವಲ್ಪಮಾತಿನಲ್ಲಿ ಅನುತ್ತೀರ್ಣರಾಗುವುದರಿಂದ ಮತ್ತೆ ರಾಜ್ಯವು ಸಿಗುವುದಿಲ್ಲ, ಪ್ರಜೆಗಳಲ್ಲಿ ಹೊರಟುಹೋಗುತ್ತೀರಿ. ಎಷ್ಟೊಂದು ನಷ್ಟವುಂಟಾಗುತ್ತದೆ, ನಂಬರ್ವಾರ್ ಪದವಿಗಳಿರುತ್ತವೆಯಲ್ಲವೆ. ಒಬ್ಬರ ಪದವಿ ಇನ್ನೊಬ್ಬರಿಗೆ ಹೋಲುವುದಿಲ್ಲ. ಇದು ಬೇಹದ್ದಿನ ಮಾಡಿ-ಮಾಡಲ್ಪಟ್ಟಂತಹ ನಾಟಕವಾಗಿದೆ, ಇದನ್ನು ಬೇಹದ್ದಿನ ತಂದೆಯ ವಿನಃ ಬೇರೆ ಯಾರೂ ತಿಳಿಸಲು ಸಾಧ್ಯವಿಲ್ಲ ಆದ್ದರಿಂದ ನೀವು ಮಕ್ಕಳಿಗೆ ಎಷ್ಟೊಂದು ಖುಷಿಯಿರುತ್ತದೆ. ಹೇಗೆ ತಂದೆಯ ಬುದ್ಧಿಯಲ್ಲಿ ಪೂರ್ಣ ಜ್ಞಾನವಿದೆಯೋ ಹಾಗೆಯೇ ನಿಮ್ಮ ಬುದ್ಧಿಯಲ್ಲಿಯೂ ಇದೆ. ಬೀಜ ಮತ್ತು ವೃಕ್ಷವನ್ನು ತಿಳಿಯಬೇಕಾಗಿದೆ. ಮನುಷ್ಯ ಸೃಷ್ಟಿಯ ವೃಕ್ಷವಾಗಿದೆ. ಇದರ ಜೊತೆ ಆಲದಮರದ ಉದಾಹರಣೆಯು ಸಂಪೂರ್ಣ ಸರಿಯಾಗಿದೆ. ಬುದ್ಧಿಯೂ ಹೇಳುತ್ತದೆ- ನಮ್ಮ ಆದಿಸನಾತನ ದೇವಿ-ದೇವತಾ ಧರ್ಮದ ಬುನಾದಿಯು ಪ್ರಾಯಲೋಪವಾಗಿಬಿಟ್ಟಿದೆ. ಉಳಿದ ಎಲ್ಲಾ ಧರ್ಮಗಳ ರೆಂಬೆ-ಕೊಂಬೆಗಳು ನಿಂತಿವೆ. ನಾಟಕದನುಸಾರ ಇದೆಲ್ಲವೂ ಆಗಲೇಬೇಕಾಗಿದೆ. ಇದರಲ್ಲಿ ತಿರಸ್ಕಾರ ಬರುವುದಿಲ್ಲ. ನಾಟಕದಲ್ಲಿ ಪಾತ್ರಧಾರಿಗಳಿಗೆಂದಾದರೂ ತಿರಸ್ಕಾರ ಬರುತ್ತದೆಯೇ! ತಂದೆಯು ತಿಳಿಸುತ್ತಾರೆ- ನೀವು ಪತಿತರಾಗಿಬಿಟ್ಟಿದ್ದೀರಿ ಮತ್ತೆ ಪಾವನರಾಗಬೇಕು. ನೀವು ಎಷ್ಟು ಸುಖವನ್ನು ನೋಡುತ್ತೀರೋ ಅಷ್ಟು ಬೇರೆ ಯಾರೂ ನೋಡಲು ಸಾಧ್ಯವಿಲ್ಲ. ನೀವು ನಾಯಕ-ನಾಯಕಿಯಾಗಿದ್ದೀರಿ. ವಿಶ್ವದ ರಾಜ್ಯಭಾಗ್ಯವನ್ನು ಪಡೆಯುವವರಾಗಿದ್ದೀರಿ. ಅಪಾರ ಖುಷಿಯಿರಬೇಕಲ್ಲವೆ. ಭಗವಂತನೇ ಓದಿಸುತ್ತಾರೆ ಅಂದಮೇಲೆ ಎಷ್ಟೊಂದು ನಿಯಮಿತವಾಗಿ ಓದಬೇಕು. ಎಷ್ಟೊಂದು ಖುಷಿಯಿರಬೇಕು! ಬೇಹದ್ದಿನ ತಂದೆಯೇ ನಮಗೆ ಓದಿಸುತ್ತಾರೆ, ರಾಜಯೋಗವನ್ನೂ ಕಲಿಸಿದ್ದಾರೆ, ಆತ್ಮವೇ ಧಾರಣೆ ಮಾಡುತ್ತದೆ. ತಂದೆಯು ಒಂದೇಬಾರಿ ಪಾತ್ರವನ್ನಭಿನಯಿಸಲು ಬರುತ್ತಾರೆ. ಆತ್ಮವೇ ಪಾತ್ರವನ್ನಭಿನಯಿಸಿ ಒಂದು ಶರೀರವನ್ನು ಬಿಟ್ಟು ಇನ್ನೊಂದನ್ನು ತೆಗೆದುಕೊಳ್ಳುತ್ತದೆ. ತಂದೆಯು ಆತ್ಮಗಳಿಗೇ ಓದಿಸುತ್ತಾರೆ ದೇವತೆಗಳಿಗಲ್ಲ. ಅಲ್ಲಂತೂ ದೇವತೆಗಳೇ ಓದಿಸುತ್ತಾರೆ. ಈ ಸಂಗಮಯುಗವು ಒಂದೇ ಆಗಿದೆ, ಈ ಸಮಯದಲ್ಲಿ ನೀವು ಪುರುಷೋತ್ತಮರಾಗುತ್ತೀರಿ. ಸತ್ಯವಂತರನ್ನಾಗಿ ಮಾಡುವವರು, ಸತ್ಯಯುಗದ ಸ್ಥಾಪನೆ ಮಾಡುವವರು ಒಬ್ಬರೇ ಸತ್ಯತಂದೆಯು ಆಗಿದ್ದಾರೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತ ಬಾಪ್ದಾದಾರವರ ನೆನಪು ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ಸಂಗಮಯುಗದಲ್ಲಿ ಡೈರೆಕ್ಟ್ ಭಗವಂತನಿಂದ ವಿದ್ಯೆಯನ್ನು ಓದಿ ಜ್ಞಾನವಂತರು, ಆಸ್ತಿಕರಾಗಬೇಕು ಮತ್ತು ಅನ್ಯರನ್ನೂ ಮಾಡಬೇಕು. ಎಂದೂ ಸಹ ತಂದೆ ಮತ್ತು ವಿದ್ಯೆಯಲ್ಲಿ ಸಂಶಯ ಬರಬಾರದು.

2. ತಂದೆಯ ಸಮಾನ ಪ್ರಿಯರಾಗಬೇಕು. ಭಗವಂತ ನಮ್ಮ ಶೃಂಗಾರ ಮಾಡುತ್ತಿದ್ದಾರೆಂಬ ಖುಷಿಯಲ್ಲಿರಬೇಕು. ಯಾವುದೇ ಪಾತ್ರಧಾರಿಯೊಂದಿಗೆ ಈಷ್ರ್ಯೆ ಅಥವಾ ತಿರಸ್ಕಾರ ಬರಬಾರದು. ಪ್ರತಿಯೊಬ್ಬರದೂ ಈ ನಾಟಕದಲ್ಲಿ ಆಕ್ಯೂರೇಟ್ ಪಾತ್ರವಾಗಿದೆ.

ವರದಾನ:
ಸೇವೆಯ ಪ್ರವೃತ್ತಿಯಲ್ಲಿರುತ್ತಾ ಮಧ್ಯೆ-ಮಧ್ಯೆ ಏಕಾಂತವಾಸಿಯಾಗಿರುವಂತಹ ಅಂತರ್ಮುಖಿ ಭವ.

ಸೈಲೆನ್ಸ್ ನ ಶಕ್ತಿಯ ಪ್ರಯೋಗ ಮಾಡುವುದಕ್ಕಾಗಿ ಅಂತರ್ಮುಖಿ ಮತ್ತು ಏಕಾಂತವಾಸಿ ಯಾಗುವಂತಹ ಅವಶ್ಯಕತೆ ಇದೆ. ಅಂತರ್ಮುಖಿ ಸ್ಥಿತಿಯ ಅನುಭವ ಮಾಡಲು ಮತ್ತು ಏಕಾಂತವಾಸಿಗಳಾಗಲು ಸಮಯವೇ ಸಿಗುವುದಿಲ್ಲ ಏಕೆಂದರೆ ಸೇವೆಯ ಪ್ರವೃತ್ತಿ, ವಾಣಿಯ ಶಕ್ತಿಯ ಪ್ರವೃತ್ತಿ ಬಹಳ ಹೆಚ್ಚಾಗಿಬಿಟ್ಟಿದೆ ಎಂದು ಕೆಲವು ಮಕ್ಕಳು ಹೇಳುತ್ತಾರೆ ಆದರೆ ಇದಕ್ಕಾಗಿ ಒಟ್ಟಿಗೆ ಅರ್ಧಗಂಟೆ ಅಥವಾ ಒಂದುಗಂಟೆ ಸಮಯ ತೆಗೆಯುವ ಬದಲು ಮಧ್ಯೆ-ಮಧ್ಯೆ ಸ್ವಲ್ಪ ಸಮಯವಾದರೂ ತೆಗೆದರೆ ಶಕ್ತಿಶಾಲಿ ಸ್ಥಿತಿಯಾಗಿಬಿಡುತ್ತದೆ.

ಸ್ಲೋಗನ್:
ಬ್ರಾಹ್ಮಣ ಜೀವನದಲ್ಲಿ ಯುದ್ಧ ಮಾಡುವ ಬದಲು ಮೋಜಿನಲ್ಲಿರಿ ಆಗ ಕಷ್ಟಗಳು ಸಹಜವಾಗಿಬಿಡುವುದು.