26.07.24 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ- ಈ ಅನಾದಿ
ನಾಟಕವು ತಿರುಗುತ್ತಲೇ ಇರುತ್ತದೆ, ಟಿಕ್-ಟಿಕ್ ಎಂದು ನಡೆಯುತ್ತಿರುತ್ತದೆ, ಇದರಲ್ಲಿ ಒಬ್ಬರ
ಪಾತ್ರವು ಇನ್ನೊಬ್ಬರಿಗೆ ಹೋಲುವುದಿಲ್ಲ, ಇದನ್ನು ಯಥಾರ್ಥವಾಗಿ ಅರಿತುಕೊಂಡು ಸದಾ
ಹರ್ಷಿತರಾಗಿರಬೇಕಾಗಿದೆ”
ಪ್ರಶ್ನೆ:
ಯಾವ
ಯುಕ್ತಿಯಿಂದ ಭಗವಂತನು ಬಂದಿದ್ದಾರೆ ಎಂಬುದನ್ನು ಸಿದ್ಧ ಮಾಡಿ ತಿಳಿಸಬಹುದು?
ಉತ್ತರ:
ಯಾರಿಗೇ ಆಗಲಿ
ಭಗವಂತನು ಬಂದಿದ್ದಾರೆಂದು ನೇರವಾಗಿ ಹೇಳಬಾರದು, ಈ ರೀತಿ ಹೇಳಿದ್ದೇ ಆದರೆ ಅವರು ಹಾಸ್ಯ
ಮಾಡುತ್ತಾರೆ, ಟೀಕೆ ಮಾಡುತ್ತಾರೆ ಏಕೆಂದರೆ ಇಂದಿನ ದಿನಗಳಲ್ಲಿ ತಮ್ಮನ್ನು ಭಗವಂತನೆಂದು
ಕರೆಸಿಕೊಳ್ಳುವವರು ಅನೇಕರಿದ್ದಾರೆ ಆದ್ದರಿಂದ ನೀವು ಮೊದಲು ಯುಕ್ತಿಯಿಂದ ಇಬ್ಬರು ತಂದೆಯ
ಪರಿಚಯವನ್ನು ಕೊಡಿ. ಒಬ್ಬರು ಲೌಕಿಕ ತಂದೆ ಇನ್ನೊಬ್ಬರು ಪಾರಲೌಕಿಕ ತಂದೆಯಾಗಿದ್ದಾರೆ. ಲೌಕಿಕ
ತಂದೆಯಿಂದ ಮಿತವಾದ ಆಸ್ತಿಯು ಸಿಗುತ್ತದೆ, ಪಾರಲೌಕಿಕ ತಂದೆಯು ಅಪಾರವಾದ ಆಸ್ತಿಯನ್ನು ಕೊಡುತ್ತಾರೆ
ಎಂದು ತಿಳಿಸಿದಾಗ ಅರ್ಥಮಾಡಿಕೊಳ್ಳುತ್ತಾರೆ.
ಓಂ ಶಾಂತಿ.
ಆತ್ಮಿಕ ತಂದೆಯು ಕುಳಿತು ಆತ್ಮಿಕ ಮಕ್ಕಳಿಗೆ ತಿಳಿಸುತ್ತಾರೆ, ಸೃಷ್ಟಿಯಂತೂ ಇದೇ ಆಗಿದೆ, ತಂದೆಗೂ
ಸಹ ಮಕ್ಕಳಿಗೆ ತಿಳಿಸಲು ಇಲ್ಲಿಯೇ ಬರಬೇಕಾಗುತ್ತದೆ. ಮೂಲವತನದಲ್ಲಂತೂ ತಿಳಿಸಿಕೊಡುವುದಿಲ್ಲ.
ಸ್ಥೂಲವತನದಲ್ಲಿಯೇ ತಿಳಿಸಲಾಗುತ್ತದೆ. ತಂದೆಗೆ ಗೊತ್ತಿದೆ, ಮಕ್ಕಳೆಲ್ಲರೂ ಪತಿತರಾಗಿದ್ದಾರೆ, ಏನೂ
ಕೆಲಸಕ್ಕೆ ಬರದವರಾಗಿದ್ದಾರೆ. ಈ ಪ್ರಪಂಚದಲ್ಲಿ ದುಃಖವೇ ದುಃಖವಿದೆ. ತಂದೆಯು ತಿಳಿಸುತ್ತಾರೆ- ಈಗ
ನೀವು ವಿಷಯಸಾಗರದಲ್ಲಿದ್ದೀರಿ, ಮೂಲತಃ ನೀವು ಕ್ಷೀರಸಾಗರದಲ್ಲಿದ್ದಿರಿ. ವಿಷ್ಣುಪುರಿಯನ್ನು
ಕ್ಷೀರಸಾಗರವೆಂದು ಕರೆಯಲಾಗುತ್ತದೆ. ಈಗ ಕ್ಷೀರಸಾಗರವಂತೂ ಇಲ್ಲಿ ಸಿಗಲು ಸಾಧ್ಯವಿಲ್ಲ ಆದ್ದರಿಂದ
ಅವರು ಅಲ್ಲಿ ಸರೋವರವನ್ನು ತೋರಿಸಿಬಿಟ್ಟಿದ್ದಾರೆ. ಸತ್ಯಯುಗದಲ್ಲಂತೂ ಹಾಲು-ತುಪ್ಪದ ನದಿಗಳು
ಹರಿಯುತ್ತಿದ್ದವು ಎಂದು ಹೇಳುತ್ತಾರೆ. ಅಲ್ಲಿನ ಹಸುಗಳೂ ಸಹ ಬಹಳ ಸುಂದರ ಮತ್ತು ಪ್ರಸಿದ್ಧವಾಗಿವೆ.
ಇಲ್ಲಂತೂ ಮನುಷ್ಯರೂ ಸಹ ರೋಗಿಗಳಾಗಿಬಿಡುತ್ತಾರೆ ಆದರೆ ಸತ್ಯಯುಗದಲ್ಲಿ ಹಸುಗಳಿಗೂ ಸಹ ಎಂದೂ ರೋಗ
ಬರುವುದಿಲ್ಲ, ಬಹಳ ಚೆನ್ನಾಗಿರುತ್ತವೆ. ಪ್ರಾಣಿಗಳೂ ಸಹ ರೋಗಿಯಾಗುವುದಿಲ್ಲ. ಇಲ್ಲಿ ಮತ್ತು
ಅಲ್ಲಿಗೆ ಬಹಳ ವ್ಯತ್ಯಾಸವಿದೆ, ಇದನ್ನು ತಂದೆಯೇ ಬಂದು ತಿಳಿಸುತ್ತಾರೆ. ಪ್ರಪಂಚದಲ್ಲಿ ಇದನ್ನು
ಮತ್ತ್ಯಾರೂ ತಿಳಿದುಕೊಂಡಿಲ್ಲ. ನಿಮಗೆ ಗೊತ್ತಿದೆ, ಇದು ಪುರುಷೋತ್ತಮ ಸಂಗಮಯುಗವಾಗಿದೆ. ಈಗಲೇ
ತಂದೆಯು ಬರುತ್ತಾರೆ, ಎಲ್ಲರನ್ನು ಹಿಂತಿರುಗಿ ಕರೆದುಕೊಂಡು ಹೋಗುತ್ತಾರೆ. ತಂದೆಯು ತಿಳಿಸುತ್ತಾರೆ-
ಯಾರೆಲ್ಲಾ ಮಕ್ಕಳಿದ್ದಾರೆಯೋ ಕೆಲವರು ಅಲ್ಲಾ ಎಂದು, ಕೆಲವರು ಗಾಡ್ ಎಂದು, ಕೆಲವರು ಭಗವಂತನೆಂದು
ಕರೆಯುತ್ತಾರೆ. ನನಗೆ ಬಹಳ ಹೆಸರುಗಳನ್ನಿಟ್ಟುಬಿಟ್ಟಿದ್ದಾರೆ. ಒಳ್ಳೆಯದು, ಕೆಟ್ಟದ್ದು ಏನು ಬಂದರೆ
ಆ ಹೆಸರನ್ನು ಇಟ್ಟುಬಿಡುತ್ತಾರೆ. ಈಗ ನೀವು ಮಕ್ಕಳಿಗೆ ಗೊತ್ತಿದೆ, ತಂದೆಯು ಬಂದಿದ್ದಾರೆ ಆದರೆ
ಪ್ರಪಂಚದವರಂತೂ ಇದನ್ನು ತಿಳಿದುಕೊಂಡಿಲ್ಲ. ಯಾರು 5000 ವರ್ಷಗಳ ಮೊದಲು ತಿಳಿದುಕೊಂಡಿದ್ದಾರೆಯೋ
ಅವರೇ ಈಗಲೂ ತಿಳಿದುಕೊಳ್ಳುತ್ತಾರೆ ಆದ್ದರಿಂದ ಗಾಯನವಿದೆ- ನನ್ನನ್ನು ಕೋಟಿಯಲ್ಲಿ ಕೆಲವರು
ಕೆಲವರಲ್ಲಿಯೂ ಕೆಲವರೇ ಅರಿತುಕೊಳ್ಳುತ್ತಾರೆ. ನಾನು ಯಾರಾಗಿದ್ದೇನೆ, ಹೇಗಿದ್ದೇನೆ, ಮಕ್ಕಳಿಗೆ ಏನು
ಕಲಿಸುತ್ತೇನೆಂದು ನೀವು ಮಕ್ಕಳಿಗೇ ಗೊತ್ತಿದೆ ಮತ್ತ್ಯಾರೂ ತಿಳಿಯಲು ಸಾಧ್ಯವಿಲ್ಲ. ಇದೂ ಸಹ ನಿಮಗೆ
ಗೊತ್ತಿದೆ, ನಾವು ಯಾವುದೇ ಸಾಕಾರ ತಂದೆಯಿಂದ ಓದುವುದಿಲ್ಲ, ನಿರಾಕಾರನೇ ಓದಿಸುತ್ತಾರೆ. ಇದರಲ್ಲಿ
ಮನುಷ್ಯರು ನಿರಾಕಾರ ತಂದೆಯು ಮೇಲಿರುತ್ತಾರೆ, ಅವರು ಹೇಗೆ ಓದಿಸುತ್ತಾರೆಂದು ಖಂಡಿತ
ತಬ್ಬಿಬ್ಬಾಗುತ್ತಾರೆ. ನೀವು ನಿರಾಕಾರ ಆತ್ಮಗಳೂ ಸಹ ಮೇಲಿರುತ್ತೀರಿ. ನಂತರ ಈ ಭೃಕುಟಿ
ಸಿಂಹಾಸನದಲ್ಲಿಬರುತ್ತೀರಿ. ಈ ಸಿಂಹಾಸನವು ವಿನಾಶಿಯಾಗಿದೆ, ಆತ್ಮವು ಅಕಾಲವಾಗಿದೆ. ಅದೆಂದೂ
ಮೃತ್ಯುವನ್ನು ಹೊಂದುವುದಿಲ್ಲ. ಶರೀರಕ್ಕೆ ಮೃತ್ಯು ಬರುತ್ತದೆ, ಇದು ಚೈತನ್ಯ ಸಿಂಹಾಸನವಾಗಿದೆ,
ಅಮೃತಸರದಲ್ಲಿಯೂ ಸಹ ಅಕಾಲಸಿಂಹಾಸನ ಇದೆಯಲ್ಲವೆ, ಅದು ಮರದ ಸಿಂಹಾಸನವಾಗಿದೆ. ಅಕಾಲವು ಆತ್ಮವಾಗಿದೆ.
ಅದನ್ನು ಎಂದೂ ಕಾಲವು ಕಬಳಿಸುವುದಿಲ್ಲವೆಂದು ಪಾಪ ಆ ಮನುಷ್ಯರಿಗೆ ಗೊತ್ತೇ ಇಲ್ಲ. ಅಕಾಲಮೂರ್ತ
ಆತ್ಮವು ಒಂದು ಶರೀರವನ್ನು ಬಿಟ್ಟು ಇನ್ನೊಂದನ್ನು ತೆಗೆದುಕೊಳ್ಳುತ್ತದೆ. ಅದಕ್ಕೆ ರಥವಂತೂ
ಬೇಕಲ್ಲವೆ ಹಾಗೆಯೇ ನಿರಾಕಾರ ತಂದೆಗೂ ಸಹ ಅವಶ್ಯವಾಗಿ ಮನುಷ್ಯನ ರಥವು ಬೇಕು ಏಕೆಂದರೆ ತಂದೆಯು
ಜ್ಞಾನಸಾಗರ, ಜ್ಞಾನೇಶ್ವರನಾಗಿದ್ದಾರೆ. ಈಗ ಜ್ಞಾನೇಶ್ವರ ಎಂಬ ಹೆಸರಂತೂ ಅನೇಕರಿಗಿದೆ, ತಮ್ಮನ್ನು
ಈಶ್ವರನೆಂದು ತಿಳಿಯುತ್ತಾರಲ್ಲವೆ. ಭಕ್ತಿಯ ಶಾಸ್ತ್ರಗಳ ಮಾತುಗಳನ್ನು ತಿಳಿಸುತ್ತಾರೆ.
ಜ್ಞಾನೇಶ್ವರ ಅರ್ಥಾತ್ ಜ್ಞಾನವನ್ನು ಕೊಡುವ ಈಶ್ವರನೆಂದು ಹೆಸರಿಟ್ಟುಕೊಳ್ಳುತ್ತಾರೆ. ಅವರಂತೂ
ಜ್ಞಾನಸಾಗರರಾಗಿದ್ದಾರೆ, ಅವರನ್ನೇ ಗಾಡ್ಫಾದರ್ ಎಂದು ಹೇಳಲಾಗುತ್ತದೆ. ಇಲ್ಲಂತೂ ಅನೇಕರು
ಭಗವಂತನಾಗಿಬಿಟ್ಟಿದ್ದಾರೆ. ಯಾವಾಗ ಬಹಳ ನಿಂದನೆಯಾಗುವುದೋ, ಬಹಳ ಬಡವರಾಗಿಬಿಡುತ್ತಾರೆಯೋ, ಬಹಳ
ದುಃಖಿಗಳಾಗಿಬಿಡುವರೋ ಆಗಲೇ ತಂದೆಯು ಬರುತ್ತಾರೆ. ತಂದೆಗೆ ಬಡವರ ಬಂಧುವೆಂದು ಹೇಳಲಾಗುತ್ತದೆ.
ಕೊನೆಗೂ ಆ ದಿನವು ಬರುತ್ತದೆ, ಬಡವರ ಬಂಧು ತಂದೆಯು ಬರುತ್ತಾರೆ. ಮಕ್ಕಳಿಗೂ ಗೊತ್ತಿದೆ- ಅಂತಹ
ತಂದೆಯು ಬಂದು ಈಗ ಸ್ವರ್ಗ ಸ್ಥಾಪನೆ ಮಾಡುತ್ತಾರೆ. ಸ್ವರ್ಗದಲ್ಲಂತೂ ಅಪಾರ ಧನವಿರುತ್ತದೆ, ಅಲ್ಲಿನ
ಹಣವನ್ನು ಎಣಿಕೆ ಮಾಡಲು ಸಾಧ್ಯವಿಲ್ಲ. ಇಲ್ಲಂತೂ ಇಷ್ಟು ಅರಬ್-ಕರಬ್ಗಳು ಖರ್ಚಾಯಿತೆಂದು ಲೆಕ್ಕ
ತೆಗೆಯುತ್ತಾರೆ ಆದರೆ ಅಲ್ಲಿ ಈ ಹೆಸರೇ ಇರುವುದಿಲ್ಲ, ಅಪಾರ ಧನವಿರುತ್ತದೆ. ಈಗ ನೀವು ಮಕ್ಕಳಿಗೆ
ತಿಳಿಯುತ್ತದೆ- ತಂದೆಯು ನಮ್ಮನ್ನು ತನ್ನ ಮನೆಗೆ ಕರೆದುಕೊಂಡು ಹೋಗಲು ಬಂದಿದ್ದಾರೆ, ಮಕ್ಕಳಿಗೆ
ತಮ್ಮ ಮನೆಯು ಮರೆತುಹೋಗಿದೆ. ಭಕ್ತಿಮಾರ್ಗದಲ್ಲಿ ಮೋಸ ಹೋಗುತ್ತಿರುತ್ತಾರೆ, ಇದಕ್ಕೆ ರಾತ್ರಿಯೆಂದು
ಹೇಳಲಾಗುತ್ತದೆ. ಭಗವಂತನನ್ನು ಹುಡುಕುತ್ತಲೇ ಇರುತ್ತಾರೆ ಆದರೆ ಯಾರಿಗೂ ಭಗವಂತನು ಸಿಗುವುದಿಲ್ಲ,
ಈಗ ಭಗವಂತನು ಬಂದಿದ್ದಾರೆ, ಇದೂ ಸಹ ನೀವು ಮಕ್ಕಳಿಗೆ ಗೊತ್ತಿದೆ, ನಿಶ್ಚಯವೂ ಇದೆ. ಎಲ್ಲರಿಗೂ
ಪಕ್ಕಾ ನಿಶ್ಚಯವಿದೆ ಎಂದಲ್ಲ. ಕೆಲವೊಂದು ಸಮಯದಲ್ಲಿ ಮಾಯೆಯು ಮರೆಸಿಬಿಡುತ್ತದೆ ಆದ್ದರಿಂದಲೇ
ತಂದೆಯು ತಿಳಿಸುತ್ತಾರೆ- ಆಶ್ಚರ್ಯವಾಗಿ ನನ್ನನ್ನು ನೋಡುತ್ತಾರೆ, ನನ್ನವರಾಗುತ್ತಾರೆ, ಅನ್ಯರಿಗೂ
ಈ ಜ್ಞಾನವನ್ನು ತಿಳಿಸುತ್ತಾರೆ. ಓಹೋ ಮಾಯೆ! ನೀನೆಷ್ಟು ಶಕ್ತಿಶಾಲಿಯಾಗಿದ್ದೀಯೇ? ಅಂತಹವರನ್ನೂ ಸಹ
ಮರೆಸಿಬಿಡುತ್ತೀಯಾ. ಅನೇಕರು ಓಡಿಹೋಗುತ್ತಾರೆ, ವಿಚ್ಛೇದನವನ್ನು ಕೊಟ್ಟುಬಿಡುತ್ತಾರೆ, ಅಂತಹವರು
ಎಲ್ಲಿಗೆ ಹೋಗಿ ಜನ್ಮಪಡೆಯುತ್ತಾರೆ! ಬಹಳ ಹಗುರ ಅರ್ಥಾತ್ ಸಾಧಾರಣ ಜನ್ಮವನ್ನು ಪಡೆಯುತ್ತಾರೆ,
ಪರೀಕ್ಷೆಯಲ್ಲಿ ಅನುತ್ತೀರ್ಣರಾಗುತ್ತಾರೆ. ಇದು ಮನುಷ್ಯರಿಂದ ದೇವತೆಗಳಾಗುವ ಪರೀಕ್ಷೆಯಾಗಿದೆ.
ತಂದೆಯು ಎಲ್ಲರೂ ನಾರಾಯಣನೇ ಆಗುತ್ತಾರೆಂದು ಹೇಳುವುದಿಲ್ಲ. ಯಾರು ಒಳ್ಳೆಯ ಪುರುಷಾರ್ಥ ಮಾಡುವರೋ
ಅವರು ಒಳ್ಳೆಯ ಪದವಿಯನ್ನೇ ಪಡೆಯುತ್ತಾರೆ. ಯಾರು ಒಳ್ಳೆಯ ಪುರುಷಾರ್ಥಿಗಳಾಗಿದ್ದಾರೆ, ಅನ್ಯರನ್ನು
ಮನುಷ್ಯರಿಂದ ದೇವತೆಗಳಾಗುವ ಪುರುಷಾರ್ಥ ಮಾಡಿಸುತ್ತಾರೆ ಅರ್ಥಾತ್ ತಂದೆಯ ಪರಿಚಯವನ್ನು
ಕೊಡುತ್ತಾರೆಂದು ತಂದೆಗೂ ತಿಳಿಯುತ್ತದೆ, ಇತ್ತೀಚಿನ ದಿನಗಳಲ್ಲಿ ಇದಕ್ಕೆ ವಿರುದ್ಧವಾಗಿ ಎಷ್ಟು
ಮನುಷ್ಯರು ತಮ್ಮನ್ನೇ ಭಗವಂತನೆಂದು ಹೇಳಿಕೊಳ್ಳುತ್ತಾರೆ, ನಿಮ್ಮನ್ನು ಅಬಲೆಯರೆಂದು ತಿಳಿಯುತ್ತಾರೆ.
ಈಗ ಅವರಿಗೆ ಹೇಗೆ ತಿಳಿಸುವುದು? ಭಗವಂತ ಬಂದಿದ್ದಾನೆ ಎಂದು, ನೇರವಾಗಿ ಯಾರಿಗಾದರೂ ಭಗವಂತ
ಬಂದಿದ್ದಾನೆ ಎಂದು ಹೇಳಿದರೆ ಅವರು ಹಾಗೆ ಎಂದೂ ಒಪ್ಪುವುದಿಲ್ಲ ಆದ್ದರಿಂದ ತಿಳಿಸುವುದಕ್ಕೂ
ಯುಕ್ತಿಯು ಬೇಕು. ಯಾರಿಗೂ ನೇರವಾಗಿ ಭಗವಂತನು ಬಂದಿದ್ದಾರೆಂದು ಹೇಳಿಬಿಡಬಾರದು. ಅವರಿಗೆ
ತಿಳಿಸಬೇಕು- ನಿಮಗೆ ಇಬ್ಬರು ತಂದೆಯರಿದ್ದಾರೆ, ಒಬ್ಬರು ಪಾರಲೌಕಿಕ ಬೇಹದ್ದಿನ ತಂದೆ, ಇನ್ನೊಬ್ಬರು
ಲೌಕಿಕ ತಂದೆ. ಬಹಳ ಚೆನ್ನಾಗಿ ಪರಿಚಯ ಕೊಡಬೇಕು, ಇದರಿಂದ ಇವರು ಹೇಳುವುದೂ ಸರಿಯೆಂದು ಅವರಿಗೆ
ಅರ್ಥವಾಗಬೇಕು. ಬೇಹದ್ದಿನ ತಂದೆಯಿಂದ ಹೇಗೆ ಆಸ್ತಿಯು ಸಿಗುವುದೆಂದು ಯಾರಿಗೂ ಗೊತ್ತಿಲ್ಲ. ಆಸ್ತಿಯು
ಸಿಗುವುದೇ ತಂದೆಯಿಂದ. ಮನುಷ್ಯರಿಗೆ ಇಬ್ಬರು ತಂದೆಯರಿರುತ್ತಾರೆಂದು ಮತ್ತ್ಯಾರೂ ಇದನ್ನು
ತಿಳಿಸುವುದಿಲ್ಲ. ನೀವು ಇದನ್ನು ಸಿದ್ಧ ಮಾಡಿ ಹೇಳಬಹುದು ಹದ್ದಿನ ಲೌಕಿಕ ತಂದೆಯಿಂದ ಹದ್ದಿನ ಆಸ್ತಿ
ಮತ್ತು ಪಾರಲೌಕಿಕ ಬೇಹದ್ದಿನ ತಂದೆಯಿಂದ ಬೇಹದ್ದಿನ ಅರ್ಥಾತ್ ಹೊಸಪ್ರಪಂಚದ ಆಸ್ತಿಯು ಸಿಗುತ್ತದೆ.
ಹೊಸ ಪ್ರಪಂಚವು ಸ್ವರ್ಗವಾಗಿದೆ, ಯಾವಾಗ ತಂದೆಯು ಬರುತ್ತಾರೆಯೋ ಆಗಲೇ ಬಂದು ಆ ಆಸ್ತಿಯನ್ನು
ಕೊಡುತ್ತಾರೆ, ಅವರು ಹೊಸಸೃಷ್ಟಿಯ ರಚನೆಯನ್ನು ಮಾಡುವ ರಚಯಿತನಾಗಿದ್ದಾರೆ. ಕೇವಲ ನೀವು ಭಗವಂತನು
ಬಂದಿದ್ದಾರೆಂದು ಹೇಳಿದ್ದೇ ಆದರೆ ಅವರು ಎಂದೂ ನಂಬುವುದಿಲ್ಲ, ಇನ್ನೂ ಟೀಕೆ ಮಾಡುತ್ತಾರೆ,
ಕೇಳುವುದೇ ಇಲ್ಲ. ಸತ್ಯಯುಗದಲ್ಲಂತೂ ತಿಳಿಸಲಾಗುವುದಿಲ್ಲ. ಯಾವಾಗ ತಂದೆಯು ಬಂದು ಶಿಕ್ಷಣ
ಕೊಡುತ್ತಾರೆಯೋ ಆಗಲೇ ತಿಳಿಸಲಾಗುತ್ತದೆ. ದುಃಖದಲ್ಲಿ ಎಲ್ಲರೂ ಸ್ಮರಿಸುತ್ತಾರೆ, ಸುಖದಲ್ಲಿ ಯಾರೂ
ಸ್ಮರಿಸುವುದಿಲ್ಲ ಆದ್ದರಿಂದ ಆ ಪಾರಲೌಕಿಕ ತಂದೆಗೇ ದುಃಖಹರ್ತ-ಸುಖಕರ್ತನೆಂದು ಹೇಳಲಾಗುತ್ತದೆ.
ದುಃಖದಿಂದ ಬಿಡಿಸಿ ಮಾರ್ಗದರ್ಶಕನಾಗಿ ತಮ್ಮ ಮಧುರಮನೆಗೆ ಕರೆದುಕೊಂಡು ಹೋಗುತ್ತಾರೆ, ಅದಕ್ಕೆ
ಮಧುರಶಾಂತಿಯ ಮನೆಯೆಂದು ಹೇಳುತ್ತಾರೆ. ಅಲ್ಲಿಗೆ ನಾವು ಹೇಗೆ ಹೋಗುವುದೆಂದು ಯಾರಿಗೂ ಗೊತ್ತಿಲ್ಲ.
ಮನುಷ್ಯರು ರಚಯಿತನನ್ನಾಗಲಿ, ರಚನೆಯ ಆದಿ-ಮಧ್ಯ-ಅಂತ್ಯವನ್ನಾಗಲೀ ತಿಳಿದುಕೊಂಡಿಲ್ಲ. ನಮ್ಮನ್ನು
ತಂದೆಯು ನಿರ್ವಾಣಧಾಮದಲ್ಲಿ ಕರೆದುಕೊಂಡು ಹೋಗಲು ಬಂದಿದ್ದಾರೆ. ಎಲ್ಲಾ ಆತ್ಮಗಳನ್ನು ಕರೆದುಕೊಂಡು
ಹೋಗುತ್ತಾರೆ ಒಬ್ಬರನ್ನೂ ಬಿಡುವುದಿಲ್ಲ. ಅದು ಆತ್ಮಗಳ ಮನೆಯಾಗಿದೆ, ಇದು ಶರೀರದ ಮನೆಯಾಗಿದೆ
ಅಂದಾಗ ಮೊಟ್ಟಮೊದಲು ತಂದೆಯ ಪರಿಚಯ ಕೊಡಬೇಕು- ಅವರು ನಿರಾಕಾರ ತಂದೆಯಾಗಿದ್ದಾರೆ, ಅವರನ್ನು
ಪರಮಪಿತನೆಂದೂ ಹೇಳುತ್ತಾರೆ. ಪರಮಪಿತ ಎಂಬ ಶಬ್ಧವು ಸರಿಯಾಗಿದೆ ಮತ್ತು ಮಧುರವಾಗಿದೆ. ಕೇವಲ ಭಗವಂತ,
ಈಶ್ವರ ಎಂದು ಹೇಳುವುದರಿಂದ ಆಸ್ತಿಯ ರುಚಿಯು ಬರುವುದಿಲ್ಲ. ನೀವು ಪರಮಪಿತನನ್ನು ನೆನಪು
ಮಾಡುತ್ತೀರೆಂದರೆ ಆಸ್ತಿಯು ಸಿಗುತ್ತದೆ. ತಂದೆಯಾಗಿದ್ದಾರಲ್ಲವೆ. ಇದೂ ಸಹ ಮಕ್ಕಳಿಗೆ ತಿಳಿಸಲಾಗಿದೆ
- ಸತ್ಯಯುಗವು ಸುಖಧಾಮವಾಗಿದೆ, ಸ್ವರ್ಗಕ್ಕೆ ಶಾಂತಿಧಾಮವೆಂದು ಹೇಳುವುದಿಲ್ಲ. ಶಾಂತಿಧಾಮವೆಂದರೆ
ಎಲ್ಲಿ ಆತ್ಮಗಳಿರುತ್ತಾರೆ, ಇದನ್ನು ಸಂಪೂರ್ಣ ಪಕ್ಕಾ ಮಾಡಿಸಿ.
ತಂದೆಯು ತಿಳಿಸುತ್ತಾರೆ- ಮಕ್ಕಳೇ, ನಿಮಗೆ ಈ ವೇದಶಾಸ್ತ್ರಗಳನ್ನು ಓದುವುದರಿಂದ ಏನೂ
ಪ್ರಾಪ್ತಿಯಾಗುವುದಿಲ್ಲ, ಶಾಸ್ತ್ರಗಳನ್ನು ಓದುವುದೇ ಭಗವಂತನನ್ನು ಪಡೆಯುವುದಕ್ಕಾಗಿ ಮತ್ತು
ಭಗವಂತನು ತಿಳಿಸುತ್ತಾರೆ - ಶಾಸ್ತ್ರಗಳನ್ನು ಓದುವುದರಿಂದ ನಾನು ಯಾರಿಗೂ ಸಿಗುವುದಿಲ್ಲ, ಬಂದು ಈ
ಪತಿತಪ್ರಪಂಚವನ್ನು ಪಾವನ ಮಾಡಿ ಎಂದು ನನ್ನನ್ನು ಇಲ್ಲಿಗೆ ಕರೆಯುತ್ತಾರೆ. ಈ ಮಾತುಗಳನ್ನು ಯಾರೂ
ತಿಳಿದುಕೊಳ್ಳುವುದಿಲ್ಲ, ಕಲ್ಲುಬುದ್ದಿಯವರಾಗಿದ್ದಾರಲ್ಲವೆ. ಶಾಲೆಯಲ್ಲಿ ಮಕ್ಕಳು ಓದದಿದ್ದರೆ
ನೀವಂತೂ ಕಲ್ಲುಬುದ್ಧಿಯವರಾಗಿದ್ದೀರೆಂದು ಹೇಳುತ್ತಾರಲ್ಲವೆ. ಸತ್ಯಯುಗದಲ್ಲಿ ಈ ರೀತಿ
ಹೇಳುವುದಿಲ್ಲ. ಪಾರಸಬುದ್ಧಿಯವರನ್ನಾಗಿ ಮಾಡುವವರು ಪರಮಪಿತ ಬೇಹದ್ದಿನ ತಂದೆಯಾಗಿದ್ದಾರೆ. 1250
ವರ್ಷಗಳಲ್ಲಿ ಎರಡು ಕಲೆಗಳು ಕಡಿಮೆಯಾಗುತ್ತದೆ. ಕ್ಷಣ-ಪ್ರತಿಕ್ಷಣ ಕಳೆದಂತೆ 1250 ವರ್ಷಗಳಲ್ಲಿ
ಕಲೆಗಳು ಕಡಿಮೆಯಾಗುತ್ತಾ ಹೋಗುತ್ತವೆ. ಈ ಸಮಯದಲ್ಲಿ ನಿಮ್ಮ ಜೀವನವು ಸಂಪೂರ್ಣ ಉತ್ತಮವಾಗುತ್ತದೆ.
ಈಗ ನೀವು ತಂದೆಯ ತರಹ ಜ್ಞಾನಸಾಗರ, ಸುಖ-ಶಾಂತಿಯ ಸಾಗರರಾಗುತ್ತೀರಿ. ಎಲ್ಲಾ ಆಸ್ತಿಯನ್ನೂ
ಪಡೆಯುತ್ತೀರಿ. ತಂದೆಯು ಬರುವುದೇ ಆಸ್ತಿಯನ್ನು ಕೊಡಲು, ಮೊಟ್ಟಮೊದಲಿಗೆ ನೀವು ಶಾಂತಿಧಾಮಕ್ಕೆ
ಹೋಗುತ್ತೀರಿ ನಂತರ ಸುಖಧಾಮದಲ್ಲಿ ಬರುತ್ತೀರಿ. ಶಾಂತಿಧಾಮದಲ್ಲಂತೂ ಶಾಂತಿಯೇ ಶಾಂತಿಯಿರುತ್ತದೆ
ನಂತರ ಸುಖಧಾಮದಲ್ಲಿ ಬರುತ್ತೀರೆಂದರೆ ಅಲ್ಲಿ ಸ್ವಲ್ಪವೂ ಅಶಾಂತಿಯ ಮಾತಿರುವುದಿಲ್ಲ. ನಂತರ
ಕೆಳಗಿಳಿಯಬೇಕಾಗುತ್ತದೆ. ನಿಮಿಷ-ಪ್ರತಿನಿಮಿಷ ನಿಮ್ಮ ಇಳಿಯುವಿಕೆಯಾಗುತ್ತದೆ. ಹೊಸಪ್ರಪಂಚದಿಂದ
ಹಳೆಯದಾಗುತ್ತಾ ಬರುತ್ತದೆ ಆದ್ದರಿಂದ ತಂದೆಯು ತಿಳಿಸಿದ್ದರು- ಮಕ್ಕಳೇ, ಲೆಕ್ಕವನ್ನು ತೆಗೆಯಿರಿ.
5000 ವರ್ಷಗಳಲ್ಲಿ ಇಷ್ಟು ತಿಂಗಳು, ಇಷ್ಟು ಗಂಟೆಗಳು.... ಅದನ್ನು ನೋಡಿ ಮನುಷ್ಯರು
ಆಶ್ಚರ್ಯಚಕಿತರಾಗುತ್ತಾರೆ. ಈ ಪೂರ್ಣ ಲೆಕ್ಕವನ್ನಂತೂ ತಿಳಿಸಿದ್ದೇನೆ ಆದ್ದರಿಂದ ನಿಖರವಾಗಿ
ಲೆಕ್ಕವನ್ನು ಬರೆಯಬೇಕು. ಇದರಲ್ಲಿ ಸ್ವಲ್ಪವೂ ಅಂತರವಾಗಬಾರದು. ಪ್ರತೀ ನಿಮಿಷ ಟಿಕ್ ಟಿಕ್ ಆಗುತ್ತಾ
ಇರುತ್ತದೆ. ಪೂರ್ಣ ರೀಲ್ ಪುನರಾವರ್ತನೆಯಾಗುತ್ತದೆ, ತಿರುಗುತ್ತಾ-ತಿರುಗುತ್ತಾ ಮತ್ತೆ ರೋಲ್
ಆಗಿಬಿಡುತ್ತದೆ ಮತ್ತೆ ಅದೇ ಪುನರಾವರ್ತನೆಯಾಗುತ್ತದೆ. ಈ ಪುನರಾವರ್ತನೆಯಾಗುವ ರೋಲ್ ಬಹಳ
ವಿಚಿತ್ರವಾಗಿದೆ. ಇದರ ಮಾಪನ ಮಾಡಲು ಸಾಧ್ಯವಿಲ್ಲ. ಇಡೀ ಪ್ರಪಂಚದ ಯಾವ ಪಾತ್ರವು ನಡೆಯುತ್ತದೆಯೋ
ಅದು ಟಿಕ್ ಟಿಕ್ ಆಗುತ್ತಾ ಇರುತ್ತದೆ. ಒಂದುಕ್ಷಣವು ಇನ್ನೊಂದು ಕ್ಷಣಕ್ಕೆ ಹೋಲುವುದಿಲ್ಲ. ಹೀಗೆ ಈ
ಚಕ್ರವು ತಿರುಗುತ್ತಲೇ ಇರುತ್ತದೆ. ಹೇಗೆ ಅದು ಹದ್ದಿನ ನಾಟಕವಾಗಿರುತ್ತದೆ ಆದರೆ ಇದು ಬೇಹದ್ದಿನ
ನಾಟಕವಾಗಿದೆ. ಇದು ಅವಿನಾಶಿ ನಾಟಕವಾಗಿದೆಯೆಂದು ಮೊದಲು ನಿಮಗೆ ಗೊತ್ತಿರಲಿಲ್ಲ.
ಮಾಡಿ-ಮಾಡಲ್ಪಟ್ಟಿರುವುದೇ ಪುನಃ ಮಾಡಲ್ಪಡುತ್ತಿದೆ..... ಏನಾಗಬೇಕಾಗಿದೆಯೋ ಅದೇ ಆಗುತ್ತದೆ,
ಹೊಸಮಾತಿಲ್ಲ. ಅನೇಕಬಾರಿ ಕ್ಷಣ-ಪ್ರತಿಕ್ಷಣ ಈ ನಾಟಕವು ಪುನರಾವರ್ತನೆಯಾಗುತ್ತಾ ಬಂದಿದೆ ಮತ್ತ್ಯಾರೂ
ಈ ಮಾತುಗಳನ್ನು ತಿಳಿಸಲು ಸಾಧ್ಯವಿಲ್ಲ. ಮೊಟ್ಟಮೊದಲಂತೂ ಈ ಮಾತುಗಳನ್ನು ತಿಳಿಸಬೇಕು. ಬೇಹದ್ದಿನ
ತಂದೆಯು ಬೇಹದ್ದಿನ ಆಸ್ತಿಯನ್ನು ಕೊಡುತ್ತಾರೆ. ಅವರ ಹೆಸರು ಒಂದೇ ಆಗಿದೆ - ಶಿವ. ತಂದೆಯು
ತಿಳಿಸುತ್ತಾರೆ- ಯಾವಾಗ ಅತೀಧರ್ಮ ಗ್ಲಾನಿಯಾಗುತ್ತದೆಯೋ ಆಗಲೇ ನಾನು ಬರುತ್ತೇನೆ. ಇದಕ್ಕೆ ಘೋರ
ಕಲಿಯುಗವೆಂದು ಹೇಳಲಾಗುತ್ತದೆ. ಇಲ್ಲಿ ಬಹಳ ದುಃಖವಿದೆ, ಇಂತಹ ಘೋರ ಕಲಿಯುಗದಲ್ಲಿ ನಾವು
ಪವಿತ್ರರಾಗಿರಲು ಹೇಗೆ ಸಾಧ್ಯವೆಂದು ಕೆಲವರು ಕೇಳುತ್ತಾರೆ ಆದರೆ ನಮ್ಮನ್ನು ಪಾವನರನ್ನಾಗಿ
ಮಾಡುವವರು ಯಾರೆಂಬುದು ಅವರಿಗೆ ಗೊತ್ತೇ ಇಲ್ಲ. ತಂದೆಯೇ ಸಂಗಮಯುಗದಲ್ಲಿ ಬಂದು ಪವಿತ್ರ ಪ್ರಪಂಚದ
ಸ್ಥಾಪನೆ ಮಾಡುತ್ತಾರೆ. ಅಲ್ಲಿ ಸ್ತ್ರೀ-ಪುರುಷರಿಬ್ಬರೂ ಪವಿತ್ರರಾಗಿರುತ್ತಾರೆ, ಇಲ್ಲಿ ಇಬ್ಬರೂ
ಅಪವಿತ್ರರಾಗಿದ್ದಾರೆ. ಇದು ಅಪವಿತ್ರ ಪ್ರಪಂಚವೇ ಆಗಿದೆ, ಅದು ಪವಿತ್ರ ಪ್ರಪಂಚ, ಸ್ವರ್ಗ ಹೆವೆನ್
ಆಗಿದೆ. ಇದು ಹೆಲ್ ನರಕ ರೌರವನರಕವಾಗಿದೆ. ನೀವು ಮಕ್ಕಳು ನಂಬರ್ವಾರ್ ಪುರುಷಾರ್ಥದನುಸಾರ
ಅರ್ಥಮಾಡಿಕೊಂಡಿದ್ದೀರಿ. ತಿಳಿಸುವುದರಲ್ಲೂ ಪರಿಶ್ರಮವಿದೆ.ಬಡವರು ತಕ್ಷಣ ಅರ್ಥ ಮಾಡಿಕೊಳ್ಳುತ್ತಾರೆ.
ದಿನ-ಪ್ರತಿದಿನ ವೃದ್ಧಿಯಾಗುತ್ತಾ ಹೋಗುತ್ತದೆ ಅಂದಮೇಲೆ ಮನೆಯೂ ಸಹ ಅಷ್ಟು ದೊಡ್ಡದಾಗಬೇಕು. ಬಹಳ
ಮಕ್ಕಳು ಬರುತ್ತಾರೆ ಏಕೆಂದರೆ ತಂದೆಯಂತೂ ಈಗ ಎಲ್ಲಿಗೂ ಹೋಗುವುದಿಲ್ಲ. ಮೊದಲು ಯಾರಿಗೂ ಹೇಳದೆ
ಬಾಬಾರವರು ತಾವೇ ಹೊರಟುಹೋಗುತ್ತಿದ್ದರು, ಈಗಂತೂ ಮಕ್ಕಳು ಇಲ್ಲಿಗೆ ಬರುತ್ತಾ ಇರುತ್ತಾರೆ.
ಚಳಿಗಾಲದಲ್ಲಿ ಬರಬೇಕಾಗುತ್ತದೆ. ಮೊದಲು ಕಾರ್ಯಕ್ರಮ ಮಾಡಬೇಕಾಗುತ್ತದೆ ಯಾರಿಗೂ ತುಂಬಾ
ಜನಸಂಖ್ಯೆಯಾಗಬಾರದೆಂದು ಇಂತಿಂತಹ ಸಮಯದಲ್ಲಿ ಬನ್ನಿ ಎಂದು ಮೊದಲೇ ತಿಳಿಸಬೇಕಾಗುತ್ತದೆ. ಎಲ್ಲರೂ
ಒಟ್ಟಿಗೆ ಒಂದೇ ಸಮಯದಲ್ಲಿ ಬರಲು ಸಾಧ್ಯವಿಲ್ಲ. ಮಕ್ಕಳು ವೃದ್ಧಿಯಾಗುತ್ತಾ ಇರುತ್ತಾರೆ. ಇಲ್ಲಂತೂ
ಮಕ್ಕಳು ಚಿಕ್ಕ-ಚಿಕ್ಕ ಮನೆಗಳನ್ನು ನಿರ್ಮಿಸುತ್ತಾರೆ, ಸತ್ಯಯುಗದಲ್ಲಿ ಬಹಳ ದೊಡ್ಡ-ದೊಡ್ಡ ಮಹಲುಗಳು
ಸಿಗುತ್ತವೆ, ಇದಂತೂ ನೀವು ಮಕ್ಕಳಿಗೆ ಗೊತ್ತಿದೆ - ಇಲ್ಲಿನ ಹಣವೆಲ್ಲವೂ ಮಣ್ಣುಪಾಲಾಗುತ್ತದೆ.
ಬಹಳಷ್ಟು ಜನ ಹೀಗೂ ಮಾಡುತ್ತಾರೆ ಹಳ್ಳವನ್ನು ತೋಡಿಅದರಲ್ಲಿ ಮುಚ್ಚಿಡುತ್ತಾರೆ ಕಳ್ಳರು
ತೆಗೆದುಕೊಂಡು ಹೋಗಬಹುದು ಅಥವಾ ಅದು ಗುಣಿಯಲ್ಲಿಯೇ ಉಳಿದುಕೊಳ್ಳಬಹುದು ನಂತರ ಹೊಲವನ್ನು ಅಗೆಯುವಾಗ
ಧನ ಹೊರಗೆ ಬರುವುದು ಈ ವಿನಾಶವಾದಾಗ, ಎಲ್ಲವೂ ಭೂಮಿಯೊಳಗೆ ಹೋಗಿಬಿಡುತ್ತದೆ ಮತ್ತು ಸತ್ಯಯುಗದಲ್ಲಿ
ಎಲ್ಲವೂ ಹೊಸದಾಗಿ ಸಿಗುತ್ತದೆ. ಅನೇಕರ ರಾಜರ ಕೋಟೆಗಳಿವೆ, ಅಲ್ಲಿ ಬಹಳ ಸಾಮಾನುಗಳನ್ನು
ಮುಚ್ಚಿಟ್ಟಿದ್ದಾರೆ.ದೊಡ್ಡ ದೊಡ್ಡ ವಜ್ರಗಳೂ ಸಿಗುತ್ತದೆ, ಅದು ಸಾವಿರ-ಲಕ್ಷಾಂತರಗಳಷ್ಟು ಬಹಳ
ಲಾಭವಾಗುತ್ತದೆ ಆದರೆ ನೀವು ಸ್ವರ್ಗದಲ್ಲಿ ತೋಡಿ ಇಂತಹ ವಜ್ರರತ್ನಗಳನ್ನು ತೆಗೆಯುತ್ತೀರೆಂದಲ್ಲ.
ಅಲ್ಲಂತೂ ಪ್ರತಿಯೊಂದು ವಸ್ತುಗಳ ಗಣಿಗಳು ಹೊಸದು ಮತ್ತು ಸಂಪನ್ನವಾಗಿರುತ್ತದೆ. ಇಲ್ಲಂತೂ
ಬಂಜರುಭೂಮಿಯಾಗಿದೆ ಆದ್ದರಿಂದ ಮಣ್ಣಿನಲ್ಲಿ ಸಾರಾಂಶವೇ ಇಲ್ಲ. ಬೀಜವನ್ನು ಬಿತ್ತುತ್ತಾರೆಂದರೆ
ಅದರಲ್ಲಿ ಶಕ್ತಿಯೇ ಇಲ್ಲ. ಕೊಳಕು ಅಶುದ್ಧ, ಕೃತಕ ಗೊಬ್ಬರಗಳನ್ನು ಹಾಕುತ್ತಾರೆ. ಸತ್ಯಯುಗದಲ್ಲಿ
ಅಶುದ್ಧ ಪದಾರ್ಥಗಳ ಹೆಸರೂ ಇರುವುದಿಲ್ಲ, ಪ್ರತಿಯೊಂದು ವಸ್ತುವೂ ಹೊಸದಾಗಿರುತ್ತದೆ. ಸ್ವರ್ಗದ
ಸಾಕ್ಷಾತ್ಕಾರವನ್ನೂ ಸಹ ಮಕ್ಕಳು ನೋಡಿಕೊಂಡು ಬರುತ್ತಾರೆ, ಅಲ್ಲಿನ ಸೌಂದರ್ಯವೇ
ಸ್ವಾಭಾವಿಕವಾಗಿರುತ್ತದೆ. ಈಗ ನೀವು ಮಕ್ಕಳು ಅಂತಹ ಪ್ರಪಂಚದಲ್ಲಿ ಹೋಗುವ ಪುರುಷಾರ್ಥ
ಮಾಡುತ್ತಿದ್ದೀರಿ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಮರಳಿ ಸಿಕ್ಕಿರುವಂತಹ ಮಕ್ಕಳ ಪ್ರತಿ ಮಾತಾ-ಪಿತಾ ಬಾಪ್ದಾದಾರವರ ನೆನಪು,
ಪ್ರೀತಿ ಹಾಗೂ ಸುಪ್ರಭಾತ, ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ಈ
ಸಮಯದಲ್ಲಿಯೇ ತಂದೆಯ ಸಮಾನ ಸಂಪೂರ್ಣರಾಗಿ, ಪೂರ್ಣ ಆಸ್ತಿಯನ್ನು ತೆಗೆದುಕೊಳ್ಳಬೇಕಾಗಿದೆ. ತಂದೆಯ
ಎಲ್ಲಾ ಶಿಕ್ಷಣಗಳನ್ನು ಸ್ವಯಂನಲ್ಲಿ ಧಾರಣೆ ಮಾಡಿಕೊಂಡು ಅವರ ಸಮಾನ ಜ್ಞಾನಸಾಗರ, ಶಾಂತಿ-ಸುಖದ
ಸಾಗರರಾಗಬೇಕು.
2. ಬುದ್ಧಿಯನ್ನು
ಪಾರಸವನ್ನಾಗಿ ಮಾಡಿಕೊಳ್ಳಲು ವಿದ್ಯೆಯ ಮೇಲೆ ಸಂಪೂರ್ಣ ಗಮನ ಕೊಡಬೇಕಾಗಿದೆ. ನಿಶ್ಚಯಬುದ್ಧಿಯವರಾಗಿ
ಮನುಷ್ಯರಿಂದ ದೇವತೆಗಳಾಗುವ ಪರೀಕ್ಷೆಯನ್ನು ತೇರ್ಗಡೆ ಮಾಡಬೇಕಾಗಿದೆ.
ವರದಾನ:
ನಿಶ್ಚಿತ ವಿಜಯದ
ನಶೆಯಲ್ಲಿರುತ್ತಾ ತಂದೆಯಿಂದ ಪದಮಾಗುಣ ಸಹಾಯ ಪ್ರಾಪ್ತಿಮಾಡಿಕೊಳ್ಳುವಂತಹ ಮಾಯಾಜೀತ್ ಭವ.
ತಂದೆಯಿಂದ ಪದಮಾಗುಣ
ಸಹಾಯಕ್ಕೆ ಪಾತ್ರರಾಗಿರುವ ಮಕ್ಕಳು ಮಾಯೆಯ ಯುದ್ಧವನ್ನು ಆಹ್ವಾನ ಮಾಡುತ್ತಾರೆ. ನಿನ್ನ ಕೆಲಸ
ಬರುವುದು ಮತ್ತು ನಮ್ಮ ಕೆಲಸ ವಿಜಯ ಪ್ರಾಪ್ತಿಮಾಡಿಕೊಳ್ಳುವುದು ಎಂದು. ಅವರು ಮಾಯೆಯ ಹುಲಿ
ರೂಪವನ್ನು ಇರುವೆ ಎಂದು ತಿಳಿಯುತ್ತಾರೆ ಏಕೆಂದರೆ ಮಾಯೆಯ ರಾಜ್ಯ ಈಗ ಸಮಾಪ್ತಿಯಾಗುವುದಿದೆ ಎಂದು
ತಿಳಿಯುತ್ತಾರೆ. ನಾವು ಅನೇಕ ಬಾರಿ ವಿಜಯೀ ಆತ್ಮಗಳ ವಿಜಯ 100% ನಿಶ್ಚಿತವಾಗಿದೆ. ಈ ನಿಶ್ಚಿತತನದ
ನಶೆ ತಂದೆಯ ಪದಮಾಗುಣ ಸಹಾಯದ ಅಧಿಕಾರ ಪ್ರಾಪ್ತಿಮಾಡಿಸುತ್ತದೆ. ಇದೇ ನಶೆಯಿಂದ ಸಹಜವಾಗಿ
ಮಾಯಾಜೀತರಾಗಿಬಿಡುವಿರಿ.
ಸ್ಲೋಗನ್:
ಸಂಕಲ್ಪ
ಶಕ್ತಿಯನ್ನು ಜಮಾ ಮಾಡಿಕೊಂಡು ಸ್ವಯಂನ ಪ್ರತಿ ಹಾಗೂ ವಿಶ್ವದ ಪ್ರತಿ ಇದರ ಪ್ರಯೋಗ ಮಾಡಿ.