26.09.24 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ- ಸದಾ
ಶ್ರೀಮತದಂತೆ ನಡೆಯುವುದೇ ಶ್ರೇಷ್ಠ ಪುರುಷಾರ್ಥವಾಗಿದೆ, ಶ್ರೀಮತದಂತೆ ನಡೆಯುವುದರಿಂದ
ಆತ್ಮಜ್ಯೋತಿಯು ಜಾಗೃತವಾಗಿಬಿಡುತ್ತದೆ”
ಪ್ರಶ್ನೆ:
ಸಂಪೂರ್ಣ
ಪುರುಷಾರ್ಥವನ್ನು ಯಾರು ಮಾಡಲು ಸಾಧ್ಯ? ಶ್ರೇಷ್ಠ ಪುರುಷಾರ್ಥವು ಯಾವುದಾಗಿದೆ?
ಉತ್ತರ:
ಯಾರ ಗಮನ ಅಥವಾ
ಬುದ್ಧಿಯೋಗವು ಒಬ್ಬ ತಂದೆಯಲ್ಲಿಯೇ ಇರುವುದೋ ಅವರೇ ಸಂಪೂರ್ಣ ಪುರುಷಾರ್ಥ ಮಾಡಲು ಸಾಧ್ಯ. ತಂದೆಗೆ
ಪೂರ್ಣ ಬಲಿಹಾರಿಯಾಗುವುದೇ ಎಲ್ಲದಕ್ಕಿಂತ ಶ್ರೇಷ್ಠ ಪುರುಷಾರ್ಥವಾಗಿದೆ. ಬಲಿಹಾರಿಯಾಗುವಂತ ಮಕ್ಕಳೇ
ತಂದೆಗೆ ಪ್ರಿಯರಾಗುತ್ತಾರೆ.
ಪ್ರಶ್ನೆ:
ಸತ್ಯ-ಸತ್ಯವಾದ
ದೀಪಾವಳಿಯನ್ನಾಚರಿಸಲು ಬೇಹದ್ದಿನ ತಂದೆಯು ಯಾವ ಸಲಹೆಯನ್ನು ನೀಡುತ್ತಾರೆ?
ಉತ್ತರ:
ಮಕ್ಕಳೇ, ಬೇಹದ್ದಿನ (ಸಂಪೂರ್ಣ) ಪವಿತ್ರತೆಯನ್ನು ಧಾರಣೆ ಮಾಡಿ, ಇಲ್ಲಿ ಬೇಹದ್ದಿನ
ಪವಿತ್ರರಾಗುವಂತಹ ಶ್ರೇಷ್ಠ ಪುರುಷಾರ್ಥವನ್ನು ಮಾಡುವುದರಿಂದಲೇ ಲಕ್ಷ್ಮೀ-ನಾರಾಯಣರ ರಾಜ್ಯದಲ್ಲಿ
ಹೋಗಲು ಸಾಧ್ಯ ಅರ್ಥಾತ್ ಸತ್ಯ-ಸತ್ಯವಾದ ದೀಪಾವಳಿ ಅಥವಾ ಪಟ್ಟಾಭಿಷೇಕದ ದಿನವನ್ನಾಚರಿಸಲು
ಸಾಧ್ಯವಾಗುತ್ತದೆ.
ಓಂ ಶಾಂತಿ.
ಮಕ್ಕಳು ಈಗ ಇಲ್ಲಿ ಕುಳಿತು ಏನು ಮಾಡುತ್ತಿದ್ದೀರಿ? ನಡೆಯುತ್ತಾ-ತಿರುಗಾಡುತ್ತಾ ಅಥವಾ ಇಲ್ಲಿ
ಕುಳಿತು-ಕುಳಿತ್ತಿದ್ದಂತೆಯೇ ಜನ್ಮ-ಜನ್ಮಾಂತರದ ತಲೆಯ ಮೇಲಿರುವ ಪಾಪವನ್ನು ನೆನಪಿನ ಯಾತ್ರೆಯಿಂದ
ವಿನಾಶ ಮಾಡಿಕೊಳ್ಳುತ್ತೀರಿ. ನಾವು ತಂದೆಯನ್ನು ಎಷ್ಟು ನೆನಪು ಮಾಡುತ್ತೇವೆಯೋ ಅಷ್ಟು ಪಾಪವು
ಭಸ್ಮವಾಗುತ್ತದೆ ಎಂದು ಆತ್ಮಕ್ಕೆ ಗೊತ್ತಿದೆ. ತಂದೆಯು ಬಹಳ ಚೆನ್ನಾಗಿ ತಿಳಿಸಿದ್ದಾರೆ- ಮಕ್ಕಳೇ,
ಭಲೇ ಇಲ್ಲಿ ಕುಳಿತ್ತಿದ್ದೀರಿ ಆದರೂ ಸಹ ಯಾರು ಶ್ರೀಮತದಂತೆ ನಡೆಯುವವರಿದ್ದಾರೆಯೋ ಅವರಿಗೇ ತಂದೆಯ
ಸಲಹೆಯು ಇಷ್ಟವಾಗುತ್ತದೆ. ಬೇಹದ್ದಿನ ತಂದೆಯ ಸಲಹೆ ಸಿಗುತ್ತದೆ. ಬೇಹದ್ದಿನ ಪವಿತ್ರರಾಗಬೇಕಾಗಿದೆ.
ತಾವಿಲ್ಲಿ ಸಂಪೂರ್ಣ ಪವಿತ್ರರಾಗುವುದಕ್ಕಾಗಿಯೇ ಬಂದಿದ್ದೀರಿ ಅಂದಮೇಲೆ ನೆನಪಿನ ಯಾತ್ರೆಯಿಂದಲೇ
ಆಗುತ್ತೀರಿ. ಕೆಲವರು ನೆನಪೇ ಮಾಡುವುದಿಲ್ಲ. ಇನ್ನೂ ಕೆಲವರು ತಿಳಿಯುತ್ತಾರೆ- ನಾವು ನೆನಪಿನ
ಯಾತ್ರೆಯಿಂದ ನಮ್ಮ ಪಾಪಗಳನ್ನು ನಾಶ ಮಾಡಿಕೊಳ್ಳುತ್ತೇವೆ. ಅರ್ಥಾತ್ ನಮ್ಮ ಕಲ್ಯಾಣ
ಮಾಡಿಕೊಳ್ಳುತ್ತಿದ್ದೇವೆ. ಹೊರಗಿನವರಂತೂ ಈ ಮಾತುಗಳನ್ನು ಅರಿತುಕೊಂಡಿಲ್ಲ. ನಿಮಗೇ ತಂದೆಯು
ಸಿಕ್ಕಿದ್ದಾರೆ, ನೀವೇ ತಂದೆಯ ಬಳಿ ಇರುತ್ತೀರಿ. ನಿಮಗೆ ತಿಳಿದಿದೆ- ಈಗ ನಾವು ಈಶ್ವರೀಯ
ಸಂತಾನರಾಗಿದ್ದೇವೆ. ಮೊದಲು ಆಸುರೀ ಸಂತಾನರಾಗಿದ್ದೇವು. ಈಗ ನಮ್ಮ ಸಂಗವು ಈಶ್ವರೀಯ
ಸಂತಾನರೊಂದಿಗಿದೆ. ಸತ್ಸಂಗವು ಮೇಲೆತ್ತುವುದು ಕೆಟ್ಟ ಸಂಗವು ಮುಳುಗಿಸುತ್ತದೆ. ನಾವೂ ಈಶ್ವರೀಯ
ಸಂತಾನರಾಗಿದ್ದೇವೆ. ಅಂದಮೇಲೆ ನಾವು ಈಶ್ವರೀಯ ಮತದನುಸಾರವೇ ನಡೆಯಬೇಕು. ತನ್ನ ಮತದಂತಲ್ಲ ಎಂಬುದು
ಮಕ್ಕಳಿಗೆ ಪದೇ-ಪದೇ ಮರೆತುಹೋಗುತ್ತದೆ. ಮನುಷ್ಯರ ಮತಕ್ಕೆ ಮನಮತವೆಂದು ಹೇಳಲಾಗುತ್ತದೆ. ಮನುಷ್ಯರ
ಮತವು ಆಸುರೀ ಮತವಾಗಿರುತ್ತದೆ. ಯಾವ ಮಕ್ಕಳು ತಮ್ಮ ಕಲ್ಯಾಣವಾಗಬೇಕೆಂದು ಬಯಸುತ್ತಾರೆ. ಅವರು
ಸತೋಪ್ರಧಾನರಾಗಲು ಬಹಳ ಚೆನ್ನಾಗಿ ನೆನಪು ಮಾಡುತ್ತಿರುತ್ತಾರೆ. ಸತೋಪ್ರಧಾನವರಿಗೆ ಮಹಿಮೆಯೂ
ಆಗುತ್ತದೆ. ಅವಶ್ಯವಾಗಿ ಮಕ್ಕಳಿಗೆ ಗೊತ್ತಿದೆ. ನಾವು ನಂಬರ್ವಾರ್ ಸುಖಧಾಮದ ಮಾಲೀಕರಾಗುತ್ತೇವೆ.
ಎಷ್ಟೆಷ್ಟು ಶ್ರೀಮತದನುಸಾರ ನಡೆಯುತ್ತೀರೋ, ಅಷ್ಟು ಶ್ರೇಷ್ಠಪದವಿಯನ್ನು ಪಡೆಯುತ್ತೀರಿ, ತನ್ನ
ಮತದಂತೆ ನಡೆದರೆ ಪದವಿಯು ಭ್ರಷ್ಟವಾಗಿ ಬಿಡುತ್ತದೆ. ತಮ್ಮ ಕಲ್ಯಾಣ ಮಾಡಿಕೊಳ್ಳಲು ತಂದೆಯ ಸಲಹೆಯಂತೂ
ಸಿಗುತ್ತಲೇ ಇರುತ್ತದೆ. ತಂದೆಯು ತಿಳಿಸಿದ್ದಾರೆ- ಮಕ್ಕಳೇ, ಇದೂ ಸಹ ಪುರುಷಾರ್ಥವಾಗಿದೆ. ಯಾರೆಷ್ಟು
ಪುರುಷಾರ್ಥ ಮಾಡುವರೋ ಅವರದೇ ಪಾಪಗಳು ಭಸ್ಮವಾಗುತ್ತವೆ. ನೆನಪಿನ ಯಾತ್ರೆಯಿಲ್ಲದೆ ಪವಿತ್ರರಾಗಲು
ಸಾಧ್ಯವಿಲ್ಲ. ಏಳುತ್ತಾ-ಕುಳಿತುಕೊಳ್ಳುತ್ತಾ, ನಡೆಯುತ್ತಾ ಇದೇ ಚಿಂತೆಯನ್ನಿಟ್ಟುಕೊಳ್ಳಬೇಕಾಗಿದೆ.
ನೀವು ಮಕ್ಕಳಿಗೆ ಎಷ್ಟೊಂದು ವರ್ಷಗಳಿಂದ ಶಿಕ್ಷಣವು ಸಿಗುತ್ತಿದೆ. ಆದರೂ ಸಹ ನಾವು ಬಹಳ
ದೂರವಿದ್ದೇವೆ. ನಾವು ಎಷ್ಟೊಂದು ತಂದೆಯನ್ನು ನೆನಪು ಮಾಡುವುದಿಲ್ಲವೆಂದು ತಿಳಿಯುತ್ತಾರೆ.
ಸತೋಪ್ರಧಾನಾಗುವುದರಲ್ಲಿ ಬಹಳ ಸಮಯ ಹಿಡಿಸುತ್ತದೆ. ಇದರ ನಡುವೆ ಶರೀರವನ್ನು ಬಿಟ್ಟು ಹೋದರೆ
ಕಲ್ಪ-ಕಲ್ಪಾಂತರಕ್ಕಾಗಿ ಪದವಿಯು ಕಡಿಮೆಯಾಗಿಬಿಡುತ್ತದೆ. ಈಶ್ವರನ ಮಕ್ಕಳಾಗಿದ್ದೀರೆಂದರೆ ಅವರಿಂದ
ಪೂರ್ಣಆಸ್ತಿಯನ್ನು ಪಡೆಯುವ ಪುರುಷಾರ್ಥ ಮಾಡಬೇಕು. ಬುದ್ಧಿಯು ಒಬ್ಬ ತಂದೆಯ ಕಡೆಯೇ ಇರಬೇಕು. ಈಗ
ನಿಮಗೆ ಶ್ರೀಮತವು ಸಿಗುತ್ತದೆ. ಅವರು ಶ್ರೇಷ್ಠಾತಿಶ್ರೇಷ್ಠ ಭಗವಂತನಾಗಿದ್ದಾರೆ. ಒಂದುವೇಳೆ ಅವರ
ಮತದಂತೆ ನಡೆಯುದಿದ್ದರೆ ಬಹಳ ಮೋಸಹೋಗುತ್ತೀರಿ. ನಡೆಯುತ್ತೀರಿ ಅಥವಾ ಇಲ್ಲವೆಂಬುದು ನಿಮಗೆ ಗೊತ್ತು
ಮತ್ತು ಶಿವತಂದೆಗೆ ಗೊತ್ತು. ನಿಮಗೆ ಪುರುಷಾರ್ಥ ಮಾಡಿಸುವವರು ಶಿವತಂದೆಯಾಗಿದ್ದಾರೆ.
ದೇವಧಾರಿಗಳೆಲ್ಲರೂ ಪುರುಷಾರ್ಥ ಮಾಡುತ್ತಾರೆ. ಇವರಿಂದಲೂ (ಬ್ರಹ್ಮ) ಶಿವತಂದೆಯೇ ಪುರುಷಾರ್ಥ
ಮಾಡಿಸುತ್ತಾರೆ. ಮಕ್ಕಳೇ ಪುರುಷಾರ್ಥ ಮಾಡಬೇಕಾಗಿದೆ. ಪತಿತರನ್ನು ಪಾವನ ಮಾಡುವುದೇ ಮೂಲಮಾತಾಗಿದೆ.
ಹಾಗೆ ನೋಡಿದರೆ ಪ್ರಪಂಚದಲ್ಲಿ ಅನೇಕರು ಪಾವನರಿರುತ್ತಾರೆ. ಸನ್ಯಾಸಿಗಳೂ ಪವಿತ್ರರಾಗಿರುತ್ತಾರೆ.
ಆದರೆ ಅವರು ಕೇವಲ ಒಂದು ಜನ್ಮಕ್ಕಾಗಿ ಪಾವನರಾಗಿರುತ್ತಾರೆ. ಒಂದು ಜನ್ಮದಲ್ಲಿ
ಬಾಲಬ್ರಹ್ಮಾಚಾರಿಗಳಾಗಿರುವವರು ಅನೇಕರಿರುತ್ತಾರೆ. ಆದರೆ ಅವರೇನು ಪ್ರಪಂಚಕ್ಕೆ ಪವಿತ್ರತೆಯ
ಸಹಯೋಗವನ್ನು ಕೊಡಲು ಸಾಧ್ಯವಿಲ್ಲ. ಯಾವಾಗಲ ಶ್ರೀಮತದಂತೆ ನಡೆಯುವರೋ ಮತ್ತು ಪ್ರಪಂಚವನ್ನು ಪಾವನ
ಮಾಡುವರೋ ಆಗಲೇ ಪ್ರಪಂಚಕ್ಕೆ ಸಹಯೋಗ ಕೊಟ್ಟಂತಾಗುತ್ತದೆ.
ಈಗ ನಿಮಗೆ ಶ್ರೀಮತವು
ಸಿಗುತ್ತಿದೆ. ಜನ್ಮ-ಜನ್ಮಾಂತರವಂತೂ ನೀವು ಆಸುರೀ ಮತದಂತೆ ನಡೆದಿದ್ದೀರಿ. ಈಗ ನಿಮಗೆ ಗೊತ್ತಿದೆ.
ಸುಖಧಾಮದ ಸ್ಥಾಪನೆಯಾಗುತ್ತಿದೆ. ನಾವು ಎಷ್ಟು ಶ್ರೀಮತದನುಸಾರ ಪುರುಷಾರ್ಥ ಮಾಡುತ್ತೇವೆಯೋ ಅಷ್ಟು
ಶ್ರೇಷ್ಠಪದವಿಯನ್ನು ಪಡೆಯುತ್ತೇವೆ. ಇದು ಬ್ರಹ್ಮರವರ ಮತವಲ್ಲ. ಇವರಿನ್ನೂ ಪುರುಷಾರ್ಥಿಯಾಗಿದ್ದಾರೆ.
ಅಂದಾಗ ಇವರ ಪುರುಷಾರ್ಥವು ಅವಶ್ಯವಾಗಿ ಇಷ್ಟು ಶ್ರೇಷ್ಠವಾಗಿದೆ. ಆದ್ದರಿಂದಲೇ
ಲಕ್ಷ್ಮೀ-ನಾರಾಯಣರಾಗುತ್ತಾರೆ. ಅಂದಮೇಲೆ ಮಕ್ಕಳೂ ಸಹ ಇದನ್ನು ಅನುಸರಿಸಬೇಕಾಗಿದೆ. ಅದಕ್ಕಾಗಿ
ಶ್ರೀಮತದಂತೆಯೇ ನಡೆಯಬೇಕು. ಮನಮತದಂತಲ್ಲ. ತಮ್ಮ ಆತ್ಮಜ್ಯೋತಿಯನ್ನು ಜಾಗೃತ ಮಾಡಿಕೊಳ್ಳಬೇಕಾಗಿದೆ.
ಈಗ ದೀಪಾವಳಿಯು ಬರುತ್ತಿದೆ. ಸತ್ಯಯುಗದಲ್ಲಿ ಇರುವುದಿಲ್ಲ. ಕೇವಲ ಪಟ್ಟಾಭಿಷೇಕದ ದಿನವಿರುತ್ತದೆ.
ಆತ್ಮಗಳೆಲ್ಲರೂ ಸತೋಪ್ರಧಾನರಾಗಿಬಿಡುತ್ತಾರೆ. ಇಲ್ಲಿ ಯಾವ ದೀಪಾವಳಿಯನ್ನು ಆಚರಿಸುವರೋ ಅದು
ಅಸತ್ಯವಾಗಿದೆ. ಹೊರಗೆ ಸ್ಥೂಲದೀಪಗಳನ್ನು ಬೆಳಗಿಸುತ್ತಾರೆ. ಸತ್ಯಯುಗದಲ್ಲಂತೂ ಮನೆ-ಮನೆಯಲ್ಲಿ
ದೀಪವು ಬೆಳಗಿರುತ್ತದೆ. ಅರ್ಥಾತ್ ಎಲ್ಲರ ಆತ್ಮವು ಸತೋಪ್ರಧಾನವಾಗಿರುತ್ತದೆ. 21 ಜನ್ಮಗಳಿಗಾಗಿ
ಜ್ಞಾನದ ಎಣ್ಣೆಯು ಇಲ್ಲಿ ತುಂಬುತ್ತದೆ. ನಂತರ ನಿಧಾನ-ನಿಧಾನವಾಗಿ ಕಡಿಮೆಯಾಗುತ್ತಾ-ಆಗುತ್ತಾ ಈ
ಸಮಯದಲ್ಲಿ ಇಡೀ ಪ್ರಪಂಚದ ಜ್ಯೋತಿಯು ನಂದಿಹೋಗುವ ಸ್ಥಿತಿಗೆ ಬಂದಿದೆ. ಇಡೀ ಪ್ರಪಂಚದ ಅದರಲ್ಲಿಯೂ
ವಿಶೇಷವಾಗಿ ಭಾರತವಾಸಿಗಳ ಸ್ಥಿತಿಯು ಈ ರೀತಿಯಾಗಿದೆ. ಈಗಂತೂ ಎಲ್ಲರೂ ಪಾಪಾತ್ಮರಾಗಿದ್ದಾರೆ.
ಎಲ್ಲರದೂ ಅಂತಿಮ ಸಮಯವಾಗಿದೆ. ಎಲ್ಲರೂ ಲೆಕ್ಕಾಚಾರಗಳನ್ನು ಸಮಾಪ್ತಿ ಮಾಡಿಕೊಳ್ಳಬೇಕಾಗಿದೆ. ಈಗ
ನೀವು ಶ್ರೇಷ್ಠಾತಿಶ್ರೇಷ್ಠ ಪದವಿಯನ್ನು ಪಡೆಯುವ ಪುರುಷಾರ್ಥ ಮಾಡಬೇಕಾಗಿದೆ. ಶ್ರೀಮತದನುಸಾರ
ನಡೆಯುವುದರಿಂದಲೇ ಶ್ರೇಷ್ಠಪದವಿಯನ್ನು ಪಡೆಯುತ್ತೀರಿ. ರಾವಣರಾಜ್ಯದಲ್ಲಂತೂ ಶಿವತಂದೆಯ ಮತವನ್ನು
ಬಹಳ ಉಲ್ಲಂಘನೆ ಮಾಡಿದ್ದೀರಿ. ಒಂದುವೇಳೆ ಅವರ ಆಜ್ಞೆಯಂತೆ ನಡೆಯಲಿಲ್ಲವೆಂದರೆ ಬಹಳ ಮೋಸ
ಹೋಗುತ್ತೀರಿ. ಬಂದು ನಮ್ಮನ್ನು ಪಾವನರನ್ನಾಗಿ ಮಾಡಿ ಎಂದೇ ತಂದೆಯನ್ನು ಕರೆದಿರಿ ಅಂದಾಗ ಈಗ ತಮ್ಮ
ಕಲ್ಯಾಣ ಮಾಡಿಕೊಳ್ಳಲು ಶಿವತಂದೆಯ ಶ್ರೀಮತದಂತೆ ನಡೆಯಬೇಕಾಗುತ್ತದೆ. ಇಲ್ಲವೆಂದರೆ ಬಹಳ
ಅಕಲ್ಯಾಣವಾಗಿಬಿಡುತ್ತದೆ. ಮಧುರಾತಿ ಮಧುರ ಮಕ್ಕಳು ಇದನ್ನೂ ಸಹ ತಿಳಿದುಕೊಂಡಿದ್ದೀರಿ- ಶಿವತಂದೆಯ
ನೆನಪಿನ ವಿನಃ ನಾವು ಸಂಪೂರ್ಣ ಪಾವನರಾಗಲು ಸಾಧ್ಯವಿಲ್ಲ. ನಿಮಗೆ ಇಷ್ಟೊಂದು ವರ್ಷಗಳಾಗಿವೆ ಆದರೂ
ನಿಮಗೆ ಜ್ಞಾನದ ಧಾರಣೆಯು ಏಕೆ ಆಗುತ್ತಿಲ್ಲ! ಚಿನ್ನದ ಪಾತ್ರೆಯಲ್ಲಿ (ಬುದ್ಧಿಯಲ್ಲಿಯೇ)
ಧಾರಣೆಯಾಗುವುದು. ಹೊಸ-ಹೊಸ ಮಕ್ಕಳು ಎಷ್ಟೊಂದು ಸೇವಾಧಾರಿಗಳಾಗಿಬಿಡುತ್ತಾರೆ. ಅಂತರ ನೋಡಿ,
ಎಷ್ಟೊಂದಿದೆ! ಹೊಸಮಕ್ಕಳು ಎಷ್ಟು ನೆನಪು ಮಾಡುತ್ತಾರೆಯೋ ಅಷ್ಟು ಹಳೆಯ ಮಕ್ಕಳು ನೆನಪಿನ
ಯಾತ್ರೆಯಲ್ಲಿರುವುದಿಲ್ಲ. ಕೆಲವರು ಶಿವತಂದೆಯ ಒಳ್ಳೆಯ ಮಕ್ಕಳು ಬರುತ್ತಾರೆ.
ಬಲಿಹಾರಿಯಾಗುವುದರಿಂದ ಸೇವೆಯನ್ನು ಎಷ್ಟೊಂದು ಮಾಡುತ್ತಾರೆ. ಎಷ್ಟೊಂದು ಪ್ರಿಯರಾಗುತ್ತಾರೆ.
ನೆನಪಿನ ಯಾತ್ರೆಯಲ್ಲಿರುವುದರಿಂದಲೇ ತಂದೆಗೆ ಸಹಯೋಗ ಕೊಡುತ್ತೀರಿ. ತಂದೆಯು ಹೇಳುತ್ತಾರೆ-
ನನ್ನನ್ನು ನೆನಪು ಮಾಡುವುದರಿಂದ ನೀವು ಪಾವನರಾಗುತ್ತೀರಿ. ಬಂದು ನಮ್ಮನ್ನು ಪಾವನ ಮಾಡಿ ಎಂದೇ
ನನ್ನನ್ನು ಕರೆದಿರಿ ಅಂದಮೇಲೆ ಈಗ ನಾನು ಬಂದು ಹೇಳುತ್ತೇನೆ- ನನ್ನನ್ನು ನೆನಪು ಮಾಡುತ್ತಾ ಇರಿ,
ಇದರಲ್ಲಿ ತ್ಯಾಗ ಮಾಡಬೇಕಾಗುತ್ತದೆ. ಒಬ್ಬ ತಂದೆಯ ವಿನಃ ಯಾವುದೇ ಮಿತ್ರಸಂಬಂಧಿಗಳ ನೆನಪಿರಬಾರದು.
ಆಗಲೇ ಶ್ರೇಷ್ಠಪದವಿಯನ್ನು ಪಡೆಯಲು ಸಾಧ್ಯ. ನೆನಪು ಮಾಡದಿದ್ದರೆ ಶ್ರೇಷ್ಠಪದವಿಯನ್ನೂ ಪಡೆಯಲು
ಸಾಧ್ಯವಿಲ್ಲ. ಇದು ಬಾಪ್ದಾದಾರವರಿಗೂ ಸಹ ಗೊತ್ತಿದೆ. ನೀವು ಮಕ್ಕಳೂ ತಿಳಿದುಕೊಂಡಿದ್ದೀರಿ-
ಹೊಸ-ಹೊಸಬರು ಬರುತ್ತಾರೆ. ಅರಿತುಕೊಳ್ಳುತ್ತಾರೆ- ದಿನ-ಪ್ರತಿದಿನ ಅದರಂತೆ ಸುಧಾರಣೆಯಾಗುತ್ತಾ
ಹೋಗುತ್ತಾರೆ. ಶ್ರೀಮತದಂತೆ ನಡೆಯುವುದರಿಂದ ಸುಧಾರಣೆಯಾಗುತ್ತಾರೆ. ಕ್ರೋಧವನ್ನು ತೆಗೆಯಲು
ಪುರುಷಾರ್ಥವನ್ನು ಮಾಡುತ್ತಾ ಅದರ ಮೇಲೆ ವಿಜಯಿಗಳಾಗುತ್ತಾರೆ. ಆದ್ದರಿಂದ ತಂದೆಯು ತಿಳಿಸುತ್ತಾರೆ-
ಅವಗುಣಗಳನ್ನು ತೆಗೆಯುತ್ತಾ ಹೋಗಿ. ಕ್ರೋಧವೂ ಸಹ ಬಹಳ ಕೆಟ್ಟದಾಗಿದೆ. ಕ್ರೋಧಿಗಳು ತನ್ನೊಳಗೂ
ಸುಟ್ಟುಕೊಳ್ಳುತ್ತಾರೆ. ಅನ್ಯರನ್ನೂ ಸುಡುತ್ತಾರೆ. ಆದ್ದರಿಂದ ತೆಗೆದುಹಾಕಬೇಕು, ಮಕ್ಕಳೇ, ತಂದೆಯ
ಮತದಂತೆ ನಡೆಯದಿದ್ದರೆ ಪದವಿಯು ಕಡಿಮೆಯಾಗಿಬಿಡುತ್ತದೆ. ಜನ್ಮ-ಜನ್ಮಾಂತರ, ಕಲ್ಪ-ಕಲ್ಪಾಂತರಕ್ಕಗಿ
ನಷ್ಟವಾಗಿಬಿಡತ್ತದೆ.
ನೀವು ಮಕ್ಕಳಿಗೆ
ಗೊತ್ತಿದೆ- ಅದು ದೈಹಿಕ ವಿದ್ಯೆಯಾಗಿದೆ. ಇದು ಆತ್ಮಿಕ ವಿದ್ಯೆಯಾಗಿದೆ. ಇದನ್ನು ಆತ್ಮಿಕ ತಂದೆಯೇ
ಓದಿಸುತ್ತಾರೆ. ಪ್ರತಿಯೊಂದು ಪ್ರಕಾರದ ಸಂಭಾಲನೆಯಾಗುತ್ತಿರುತ್ತದೆ. ಯಾರೂ ವಿಕಾರಿಗಳು ಇಲ್ಲಿ (ಮಧುಬನ)
ಬರುವಂತಿಲ್ಲ. ಖಾಯಿಲೆಯ ಸಮಯದಲ್ಲಿ ವಿಕಾರಿ, ಮಿತ್ರ-ಸಂಬಂಧಿಗಳು ಬರುವುದು ಚೆನ್ನಾಗಿರುವುದಿಲ್ಲ.
ನಾವು ಅದನ್ನು ಇಷ್ಟಪಡುವುದಿಲ್ಲ. ಇಲ್ಲವೆಂದರೆ ಅಂತ್ಯಕಾಲದಲ್ಲಿ ಮಿತ್ರಸಂಬಂಧಿಗಳೇ ನೆನಪಿಗೆ
ಬರುತ್ತಾರೆ. ಅದರಿಂದ ಶ್ರೇಷ್ಠಪದವಿಯನ್ನು ಪಡೆಯಲು ಸಾಧ್ಯವಿಲ್ಲ. ತಂದಯಂತೂ ಯಾರೂ ನೆನಪಿಗೆ
ಬಂದಿರುವ ಪುರುಷಾರ್ಥ ಮಾಡಿಸುತ್ತಾರೆ. ನಾನು ರೋಗಿಯಾಗಿದ್ದೇನೆ. ಆದ್ದರಿಂದ ನೋಡುವುದಕ್ಕಾಗಿ
ಮಿತ್ರಸಂಬಂಧಿಗಳು ಬರಬೇಕೆಂದಲ್ಲ. ಅವರನ್ನೂ ಕರೆಸಬಾರದು. ಅದು ನಿಯಮವೇ ಇಲ್ಲ. ನಿಯಾಮನುಸಾರವಾಗಿ
ನಡೆಯುವುದರಿಂದಲೇ ಸದ್ಗತಿಯಾಗುತ್ತದೆ. ಇಲ್ಲವೆಂದರೆ ಸುಮ್ಮನೆ ತಮಗೆ ನಷ್ಟವುಂಟು
ಮಾಡಿಕೊಳ್ಳುತ್ತಾರೆ. ಆದರೆ ತಮೋಪ್ರಧಾನ ಬುಧ್ದಿಯವರು ಇದನ್ನು ತಿಳಿದುಕೊಂಡಿಲ್ಲ. ಈಶ್ವರನು
ಸಲಹೆಯನ್ನು ಕೊಡುತ್ತಾರೆಂದರೂ ಸಹ ಸುಧಾರಣೆಯಾಗುವುದಿಲ್ಲ. ಬಹಳ ಎಚ್ಚರಿಕೆಯಿಂದ ನಡೆಯಬೇಕು. ಇದು
ಹೋಲಿಯೆಸ್ಟ್ ಆಫ್ ಹೋಲಿ (ಸಂಪೂರ್ಣ ಪವಿತ್ರಸ್ಥಾನ) ಸ್ಥಾನವಾಗಿದೆ. ಪತಿತರು ನಿಲ್ಲಲು ಸಾಧ್ಯವಿಲ್ಲ.
ಮಿತ್ರಸಂಬಂಧಿ ಮೊದಲಾದವರು ನೆನಪಿದ್ದರೆ ಶರೀರ ಬಿಡುವ ಸಮಯದಲ್ಲಿ ಅವಶ್ಯವಾಗಿ ಅವರ ನೆನಪೇ ಬರುತ್ತದೆ.
ದೇಹಾಭಿಮಾನದಲ್ಲಿ ಬರುವುದರಿಂದಲೇ ತಮಗೇ ನಷ್ಟವುಂಟು ಮಾಡಿಕೊಳ್ಳುತ್ತಾರೆ. ಶಿಕ್ಷೆಗೆ
ಗುರಿಯಾಗುತ್ತಾರೆ. ಶ್ರೀಮತದಂತೆ ನಡೆಯುವುದರಿಂದ ಬಹಳ ದುರ್ಗತಿಯಾಗುತ್ತದೆ. ಸೇವೆಗೆ ಯೋಗ್ಯರಾಗಲು
ಸಾಧ್ಯವಿಲ್ಲ. ಎಷ್ಟೇ ತಲೆಕೆಡಿಸಿಕೊಳ್ಳಲಿ ಆದರೆ ಸೇವೆಗೆ ಯೋಗ್ಯರಾಲು ಸಾಧ್ಯವಿಲ್ಲ. ಉಲ್ಲಂಘನೆ
ಮಾಡಿದರೆ ಕಲ್ಲುಬುದ್ಧಿಯವರಾಗಿ ಬಿಡುತ್ತಾರೆ. ಮೇಲೇರುವ ಬದಲಾಗಿ ಕೆಳಗೆ ಬೀಳುತ್ತಾರೆ. ಆದ್ದರಿಂದ
ತಂದೆಯಂತೂ ಹೇಳುತ್ತಾರೆ- ಮಕ್ಕಳು ಆಜ್ಞಾಕಾರಿಗಳಾಗಬೇಕು. ಇಲ್ಲದಿದ್ದರೆ ಪದವಿಭ್ರಷ್ಟವಾಗಿ
ಬಿಡುತ್ತದೆ. ಲೌಕಿಕ ತಂದೆಯ ಬಳಿಯೂ ನಾಲ್ಕೈದು ಜನ ಮಕ್ಕಳಿರುತ್ತಾರೆ. ಆದರೆ ಅವರಲ್ಲಿ ಯಾರು
ಆಜ್ಞಾಕಾರಿಗಳಾಗಿರುತ್ತಾರೆಯೋ ಅಂತಹ ಮಕ್ಕಳು ಪ್ರಿಯರಾಗುತ್ತಾರೆ. ಯಾರು ಆಜ್ಞಾಕಾರಿಗಳಲ್ಲವೋ ಅವರು
ದುಃಖವನ್ನೇ ಪಡೆಯುತ್ತಾರೆ. ಈಗ ನೀವು ಮಕ್ಕಳಿಗೆ ಇಬ್ಬರೂ ಬಹಳ ದೊಡ್ಡ ತಂದೆಯರು ಸಿಕ್ಕಿದ್ದಾರೆ
ಅಂದಮೇಲೆ ಅವರ ಉಲ್ಲಂಘನೆ ಮಾಡಬಾರದು. ಉಲ್ಲಂಘನೆ ಮಾಡಿದರೆ ಜನ್ಮ-ಜನ್ಮಾಂತರ, ಕಲ್ಪ-ಕಲ್ಪಾಂತರ ಬಹಳ
ಕಡಿಮೆ ಪದವಿಯನ್ನು ಪಡೆಯುತ್ತೀರಿ. ಇಂತಹ ಪುರುಷಾರ್ಥ ಮಾಡಬೇಕು. ಅಂತಿಮದಲ್ಲಿ ಒಬ್ಬ ತಂದೆಯ ನೆನಪೇ
ಬರಬೇಕು. ತಂದೆಯು ತಿಳಿಸುತ್ತಾರೆ- ಪ್ರತಿಯೊಬ್ಬರೂ ಎಂತಹ ಪುರುಷಾರ್ಥ ಮಾಡುತ್ತೀರೆಂದು ನಾನು
ಅರಿತುಕೊಳ್ಳಬಲ್ಲೇನು. ಕೆಲವಂತೂ ಬಹಳ ಅಲ್ಪಸ್ವಲ್ಪ ನೆನಪು ಮಾಡುತ್ತಾರೆ. ಇನ್ನೂ ಕೆಲವರು ತನ್ನ
ಮಿತ್ರಸಂಬಂಧಿಗಳನ್ನೇ ನೆನಪು ಮಾಡುತ್ತಿರುತ್ತಾರೆ. ಅಂತಹವರು ಬಹಳ ಖುಷಿಯಲ್ಲಿರಲು ಸಾಧ್ಯವಿಲ್ಲ.
ಶ್ರೇಷ್ಠಪದವಿಯನ್ನೂ ಪಡೆಯಲು ಸಾಧ್ಯವಿಲ್ಲ.
ನಿಮಗಂತೂ ಪ್ರತಿನಿತ್ಯವೂ
ಸದ್ಗುರುವಾರವಾಗಿದೆ. ಬೃಹಸ್ಪತಿಯ ದಿನದಂದು ಕಾಲೇಜಿನಲ್ಲಿ ಕುಳಿತುಕೊಳ್ಳುತ್ತಾರೆ. ಅದಂತೂ
ಸ್ಥೂಲವಿದ್ಯೆಯಾಗಿದೆ. ಇದು ಆತ್ಮಿಕ ವಿದ್ಯೆಯಾಗಿದೆ. ನಿಮಗೆ ಗೊತ್ತಿದೆ. ಶಿವತಂದೆಯು ನಮ್ಮ ತಂದೆ,
ಶಿಕ್ಷಕ, ಸದ್ಗುರುವಾಗಿದ್ದಾರೆ. ಅಂದಮೇಲೆ ಅವರ ಸಲಹೆಯಂತೆ ನಡೆಯಬೇಕು. ಆಗಲೇ ಶ್ರೇಷ್ಠ ಪದವಿಯನ್ನು
ಪಡೆಯುತ್ತೀರಿ. ಯಾರು ಪುರುಷಾರ್ಥಿಗಳಿದ್ದಾರೆಯೋ ಅವರಲ್ಲಿ ಬಹಳ ಖುಷಿಯಿರುತ್ತದೆ. ಮಾತೇ ಕೇಳಬೇಡಿ!
ಸ್ವಯಂನಲ್ಲಿ ಖುಷಿಯಿದ್ದರೆ ಅನ್ಯರನ್ನೂ ಖುಷಿ ಪಡಿಸುವ ಪುರುಷಾರ್ಥ ಮಾಡುತ್ತಾರೆ. ಮಕ್ಕಳು (ಬ್ರಾಹ್ಮಿಣಿಯರು)
ನೋಡಿ, ದಿನ-ರಾತ್ರಿ ಎಷ್ಟೊಂದು ಪರಿಶ್ರಮಪಡುತ್ತಿರುತ್ತಾರೆ. ಏಕೆಂದರೆ ಇದು ಅದ್ಭುತವಾದ
ಜ್ಞಾನವಾಗಿದೆಯಲ್ಲವೆ, ಬಾಪ್ದಾದಾರವರಿಗೆ ದಯೆ ಬರುತ್ತದೆ. ಕೆಲವು ಮಕ್ಕಳು ತಿಳುವಳಿಕೆಯಿಲ್ಲದ
ಕಾರಣ ಎಷ್ಟೊಂದು ನಷ್ಟವುಂಟು ಮಾಡಿಕೊಳ್ಳುತ್ತಾರೆ. ದೇಹಾಭಿಮಾನದಲ್ಲಿ ಬಂದು ತಮ್ಮನ್ನು ತಾವೇ ಒಳಗೆ
ಸುಟ್ಟುಕೊಳ್ಳುತ್ತಾರೆ. ಕ್ರೋಧದಲ್ಲಿ ಮನುಷ್ಯರು ತಾಮ್ರದಂತೆ ಕೆಂಪಾಗಿಬಿಡುತ್ತಾರೆ. ಕ್ರೋಧವು
ಮನುಷ್ಯನನ್ನು ಸುಡುತ್ತದೆ. ಕಾಮವು ಕಪ್ಪು ಮಾಡಿಬಿಡುತ್ತದೆ. ಎಷ್ಟು ಕ್ರೋಧದಲ್ಲಿ ಸುಡುತ್ತಾರೆಯೋ
ಅಷ್ಟು ಮೋಹ ಅಥವಾ ಲೋಭದಲ್ಲಿ ಸುಡುವುದಿಲ್ಲ. ಕ್ರೋಧದ ಭೂತವು ಅನೇಕರಲ್ಲಿದೆ. ಎಷ್ಟೊಂದು
ಹೊಡೆದಾಡುತ್ತಾರೆ. ಹೊಡೆದಾಡುವುದರಿಂದ ತಮಗೇ ನಷ್ಟಮಾಡಿಕೊಳ್ಳುತ್ತಾರೆ. ನಿರಾಕಾರ ಮತ್ತು ಸಾಕಾರ
ಇಬ್ಬರೂ ತಂದೆಯರ ಉಲ್ಲಂಘನೆ ಮಾಡುತ್ತಾರೆ. ಅಂತಹವರಿಗೆ ತಂದೆಯು ಕುಪುತ್ರರೆಂದು ತಿಳಿಯುತ್ತಾರೆ.
ಪರಿಶ್ರಮಪಟ್ಟರೆ ಶ್ರೇಷ್ಠ ಪದವಿಯನ್ನೂ ಪಡೆಯುತ್ತೀರಿ. ಆದ್ದರಿಂದ ತಮ್ಮ ಕಲ್ಯಾಣಕ್ಕಾಗಿ ಎಲ್ಲಾ
ಸಂಬಂಧಗಳನ್ನೂ ಮರೆಯಬೇಕು. ಒಬ್ಬ ತಂದೆಯ ವಿನಃ ಮತ್ತ್ಯಾರನ್ನೂ ನೆನಪು ಮಾಡಬಾರದು. ಮನೆಯಲ್ಲಿರುತ್ತಾ
ಸಂಬಂಧಿಗಳನ್ನು ನೋಡುತ್ತಲೂ ಶಿವತಂದೆಯನ್ನು ನೆನಪು ಮಾಡಬೇಕಾಗಿದೆ. ನೀವು ಸಂಗಮಯುಗದಲ್ಲಿದ್ದೀರಿ.
ಆದ್ದರಿಂದ ತಮ್ಮ ಮನೆಯನ್ನು ಶಾಂತಿಧಾಮವನ್ನು ನೆನಪು ಮಾಡಬೇಕು.
ಇದಂತೂ ಬೇಹದ್ದಿನ
ವಿದ್ಯೆಯಾಗಿದೆಯಲ್ಲವೆ. ತಂದೆಯು ಶಿಕ್ಷಣ ಕೊಡುತ್ತಾರೆ. ಇದರಲ್ಲಿ ಮಕ್ಕಳಿಗೆ ಲಾಭವಿದೆ. ಕೆಲವು
ಮಕ್ಕಳು ತಮ್ಮ ಕೆಟ್ಟ ಚಲನೆಯಿಂದ ತಮಗೇ ನಷ್ಟವುಂಟು ಮಾಡಿಕೊಳ್ಳುತ್ತಾರೆ. ವಿಶ್ವದ
ರಾಜ್ಯಭಾಗ್ಯವನ್ನು ಪಡೆಯುವುದಕ್ಕಾಗಿ ಪುರುಷಾರ್ಥ ಮಾಡುತ್ತಾರೆ. ಆದರೆ ಮಾಯಾಬೆಕ್ಕು ಕಿವಿಗಳನ್ನು
ಕತ್ತರಿಸಿಬಿಡುತ್ತದೆ. ಜನ್ಮ ತೆಗೆದುಕೊಂಡು ನಾವು ಇಂತಹ ಪದವಿಯನ್ನು ಪಡೆಯುತ್ತೇವೆಮದು ಹೇಳುತ್ತಾರೆ.
ಆದರೆ ಮಾಯಬೆಕ್ಕು ಪದವಿಯನ್ನು ತೆಗೆದುಕೊಳ್ಳಲು ಬಿಡುವುದಿಲ್ಲ. ಅದರಿಂದ
ಪದವಿಭ್ರಷ್ಟವಾಗಿಬಿಡುತ್ತದೆ. ಮಾಯೆಯು ಬಹಳ ಜೋರಾಗಿ ಯುದ್ಧ ಮಾಡುತ್ತದೆ. ನೀವಿಲ್ಲಿ
ರಾಜ್ಯಭಾಗ್ಯವನ್ನು ಪಡೆಯುವುದಕ್ಕಾಗಿಯೇ ಬಂದಿದ್ದೀರಿ. ಆದರೆ ಮಾಯೆಯು ತೊಂದರೆ ಕೊಡುತ್ತದೆ. ಪಾಪ!
ಇವರು ಶ್ರೇಷ್ಠಪದವಿಯನ್ನು ಪಡೆಯಲಿ, ನನ್ನ ನಿಂದನೆಯನ್ನು ಪಡೆಯುವುದಿಲ್ಲ. ಯಾರ ನಿಂದನೆ?
ಶಿವತಂದೆಯ ನಿಂದನೆ. ತಂದೆಯ ನಿಂದನೆಯಾಗುವಂತಹ ನಡುವಳಿಕೆಯಿಂದ ನಡೆಯಬಾರದು. ಇದರಲ್ಲಿ ಅಹಂಕಾರದ
ಮಾತಿಲ್ಲ. ಒಳ್ಳೆಯದು.
ಮಧುರಾತಿ ಮಧುರ ಅಗಲಿ
ಮರಳಿ ಸಿಕ್ಕಿರುವಂತಹ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು-ಪ್ರೀತಿ ಹಾಗೂ ಸುಪ್ರಭಾತ,
ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ತಮ್ಮ
ಕಲ್ಯಾಣಕ್ಕಾಗಿ ದೇಹದ ಎಲ್ಲಾ ಸಂಬಂಧಗಳನ್ನು ಮರೆಯಬೇಕು. ಅದರೊಂದಿಗೆ ಪ್ರೀತಿಯನ್ನು
ಇಟ್ಟುಕೊಳ್ಳಬಾರದು. ಈಶ್ವರನ ಮತದನುಸಾರವೇ ನಡೆಯಬೇಕು. ತನ್ನ ಮತದಂತಲ್ಲ. ಕೆಟ್ಟಸಂಗದಿಂದ
ಪಾರಾಗಬೇಕು. ಈಶ್ವರೀಯ ಸಂಗದಲ್ಲಿರಬೇಕು.
2. ಕ್ರೋಧವು ಬಹಳ
ಕೆಟ್ಟದ್ದಾಗಿದೆ. ಇದು ಸ್ವಯಂನ್ನೂ ಸುಡುತ್ತದೆ. ಕ್ರೋಧಕ್ಕೆ ವಶರಾಗಿ ಉಲ್ಲಂಘನೆ ಮಾಡಬಾರದು. ತಾನೂ
ಖುಷಿಯಾಗಿರಬೇಕು ಮತ್ತು ಎಲ್ಲರನ್ನೂ ಖುಷಿಪಡಿಸುವ ಪುರುಷಾರ್ಥ ಮಾಡಬೇಕು.
ವರದಾನ:
ಸ್ನೇಹಕ್ಕೆ
ಬದಲಾಗಿ ತಾನು ಸ್ವಯಂ ಬದಲಾಗಿ ತಂದೆ ಸಮಾನ ಆಗುವಂತಹ ಸಂಪನ್ನ ಮತ್ತು ಸಂಪೂರ್ಣ ಭವ.
ಸ್ನೇಹದ ಗುರುತಾಗಿದೆ
ಅವರು ತನ್ನ ಸ್ನೇಹಿಯ ಬಲಹೀನತೆಯನ್ನು ನೋಡಲು ಇಚ್ಛಿಸುವುದಿಲ್ಲ. ಸ್ನೇಹಿಯ ತಪ್ಪನ್ನು ತನ್ನ ತಪ್ಪು
ಎಂದು ತಿಳಿಯುತ್ತಾರೆ. ತಂದೆ ಯಾವಾಗ ಮಕ್ಕಳ ಯಾವುದಾದರೂ ಮಾತನ್ನು ಕೇಳಿದರೆ ಆಗ ತಿಳಿಯುತ್ತಾರೆ ಇದು
ನನ್ನ ಮಾತಾಗಿದೆ. ತಂದೆ ಮಕ್ಕಳನ್ನು ತನ್ನ ಸಮಾನ ಸಂಪನ್ನ ಮತ್ತು ಸಂಪೂರ್ಣ ನೋಡಲು ಇಚ್ಛೆ
ಪಡುತ್ತಾರೆ. ಈ ಸ್ನೇಹದ ಬದಲಾಗಿ ತಾನು ಸ್ವಯಂ ಬದಲಾಗಿರಿ. ಭಕ್ತರಂತೂ ತಲೆಯನ್ನೇ ಕತ್ತರಿಸಿ ಇಡಲು
ತಯಾರಾಗಿರುತ್ತಾರೆ. ಆದರೆ ನೀವು ನಿಮ್ಮ ಶರೀರದ ತಲೆಯನ್ನು ಕತ್ತರಿಸುವ ಅಗತ್ಯವಿಲ್ಲ. ಆದರೆ ರಾವಣನ
ತಲೆಯನ್ನು ಕತ್ತರಿಸಿ.
ಸ್ಲೋಗನ್:
ತಮ್ಮ ಆತ್ಮೀಯ
ವೈಭ್ರೇಷನ್ ಮೂಲಕ ಶಕ್ತಿಶಾಲಿ ವಾಯುಮಂಡಲ ರೂಪಿಸುವಂತಹ ಸೇವೆ ಮಾಡುವುದು ಎಲ್ಲಕ್ಕಿಂತಲೂ ಶ್ರೇಷ್ಠ
ಸೇವೆಯಾಗಿದೆ.