26.11.24         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ - ನೀವು ತ್ರಿಮೂರ್ತಿ ತಂದೆಯ ಮಕ್ಕಳಾಗಿದ್ದೀರಿ, ನಿಮಗೆ ತಮ್ಮ ಮೂರು ಕರ್ತವ್ಯಗಳ ನೆನಪಿರಲಿ - ಸ್ಥಾಪನೆ, ವಿನಾಶ ಮತ್ತು ಪಾಲನೆ”

ಪ್ರಶ್ನೆ:
ದೇಹಾಭಿಮಾನದ ಕಠಿಣ ಖಾಯಿಲೆಯುಂಟಾಗುವುದರಿಂದ ಯಾವ-ಯಾವ ನಷ್ಟವಾಗುತ್ತದೆ?

ಉತ್ತರ:
1. ದೇಹಾಭಿಮಾನದವರಲ್ಲಿ ಈಷ್ರ್ಯೆಯಿರುತ್ತದೆ. ಈಷ್ರ್ಯೆಯ ಕಾರಣ ಪರಸ್ಪರ ಉಪ್ಪು-ನೀರಾಗುತ್ತಿರುತ್ತಾರೆ. ಪ್ರೀತಿಯಿಂದ ಸೇವೆ ಮಾಡುವುದಿಲ್ಲ. ಒಳಗಿಂದೊಳಗೆ ಸುಡುತ್ತಿರುತ್ತಾರೆ. 2. ನಿಶ್ಚಿಂತರಾಗಿರುವುದಿಲ್ಲ. ಮಾಯೆಯು ಅವರಿಗೆ ಬಹಳ ಮೋಸ ಮಾಡುತ್ತಿರುತ್ತದೆ. ಪುರುಷಾರ್ಥ ಮಾಡುತ್ತಾ-ಮಾಡುತ್ತಾ ಬಿದ್ದುಹೋಗುತ್ತಾರೆ. ಇದರ ಕಾರಣ ವಿದ್ಯೆಯೇ ಬಿಟ್ಟುಹೋಗುತ್ತದೆ. 3. ದೇಹಾಭಿಮಾನದ ಕಾರಣ ಹೃದಯ ಶುದ್ಧವಾಗಿರುವುದಿಲ್ಲ. ಹೃದಯವು ಶುದ್ಧವಿಲ್ಲದಿರುವಕಾರಣ ತಂದೆಯ ಹೃದಯವನ್ನೇರುವುದಿಲ್ಲ. 4. ಮೂಡ್ ಆಫ್ ಆಗಿಬಿಡುತ್ತಾರೆ. ಅವರ ಚಹರೆಯೇ ಬೇರೆಯಾಗಿಬಿಡುತ್ತದೆ.

ಓಂ ಶಾಂತಿ.
ಕೇವಲ ತಂದೆಯನ್ನೇ ನೆನಪು ಮಾಡುತ್ತೀರಾ ಅಥವಾ ಇನ್ನೇನಾದರೂ ನೆನಪಿಗೆ ಬರುತ್ತದೆಯೋ? ಮಕ್ಕಳಿಗೆ ಸ್ಥಾಪನೆ, ವಿನಾಶ ಮತ್ತು ಪಾಲನೆ - ಮೂರರ ನೆನಪಿರಬೇಕು ಏಕೆಂದರೆ ಜೊತೆಜೊತೆಗೆ ಒಟ್ಟಿಗೆ ನಡೆಯುತ್ತದೆಯಲ್ಲವೆ. ಹೇಗೆ ಯಾರಾದರೂ ವಕೀಲ ವಿದ್ಯೆಯನ್ನು ಓದುತ್ತಾರೆಂದರೆ ಅವರಿಗೆ ನಾನು ವಕೀಲನಾಗುತ್ತೇನೆ, ವಕೀಲ ವೃತ್ತಿಯನ್ನು ಮಾಡುತ್ತೇನೆ ಎಂದು ತಿಳಿದಿರುತ್ತದೆಯಲ್ಲವೆ. ವಕೀಲ ವೃತ್ತಿಯ ಪಾಲನೆಯನ್ನು ಮಾಡುತ್ತಾರಲ್ಲವೆ. ಏನೇ ಓದುವರೆಂದರೆ ಅದರ ಗುರಿಯಂತೂ ಮುಂದಿರುತ್ತದೆ. ನಿಮಗೆ ತಿಳಿದಿದೆ - ನಾವೀಗ ನಿರ್ಮಾಣ ಮಾಡುತ್ತಿದ್ದೇವೆ. ಪವಿತ್ರ ಹೊಸ ಪ್ರಪಂಚವನ್ನು ಸ್ಥಾಪನೆ ಮಾಡುತ್ತಿದ್ದೇವೆ, ಇದರಲ್ಲಿ ಯೋಗವು ಅವಶ್ಯಕವಾಗಿದೆ. ಯೋಗದಿಂದಲೇ ಪತಿತವಾಗಿರುವ ಆತ್ಮವು ಪಾವನವಾಗುತ್ತದೆ. ನಾವು ಪವಿತ್ರರಾಗಿ ಪವಿತ್ರ ಪ್ರಪಂಚದಲ್ಲಿ ಹೋಗಿ ರಾಜ್ಯ ಮಾಡುತ್ತೇವೆ. ಇದು ಬುದ್ಧಿಯಲ್ಲಿ ಬರಬೇಕು. ಎಲ್ಲಾ ಪರೀಕ್ಷೆಗಳು ಎಲ್ಲದಕ್ಕಿಂತ ದೊಡ್ಡಪರೀಕ್ಷೆ ಹಾಗೂ ಎಲ್ಲಾ ವಿದ್ಯೆಯಲ್ಲಿ ಶ್ರೇಷ್ಠವಿದ್ಯೆಯು ಇದಾಗಿದೆ. ವಿದ್ಯೆಗಳಂತೂ ಅನೇಕ ಪ್ರಕಾರದ್ದಾಗಿದೆ. ಎಲ್ಲಾ ಮನುಷ್ಯರಿಗೆ ಓದಿಸುತ್ತಾರೆ ಮತ್ತು ಆ ವಿದ್ಯೆಗಳು ಈ ಪ್ರಪಂಚಕ್ಕಾಗಿ ಇದೆ. ಓದಿ ಮತ್ತೆ ಅದರ ಫಲವನ್ನು ಇಲ್ಲಿಯೇ ಪಡೆಯುತ್ತಾರೆ. ನೀವು ಮಕ್ಕಳು ತಿಳಿದುಕೊಂಡಿದ್ದೀರಿ - ಈ ಬೇಹದ್ದಿನ ಫಲವು ನಮಗೆ ಹೊಸ ಪ್ರಪಂಚದಲ್ಲಿ ಸಿಗುತ್ತದೆ. ಆ ಹೊಸ ಪ್ರಪಂಚವು ದೂರವೇನಿಲ್ಲ. ಈಗ ಸಂಗಮಯುಗವಾಗಿದೆ, ಹೊಸ ಪ್ರಪಂಚದಲ್ಲಿಯೇ ನಾವು ರಾಜ್ಯ ಮಾಡಬೇಕಾಗಿದೆ. ಇಲ್ಲಿ ಕುಳಿತಿದ್ದರೂ ಸಹ ಬುದ್ಧಿಯಲ್ಲಿ ಇದನ್ನು ನೆನಪು ಮಾಡಬೇಕಾಗಿದೆ. ತಂದೆಯ ನೆನಪಿನಿಂದಲೂ ಆತ್ಮವು ಪವಿತ್ರವಾಗಬೇಕಾಗಿದೆ ಮತ್ತು ಇದನ್ನೂ ಸಹ ನೆನಪಿಡಬೇಕು - ನಾವು ಪವಿತ್ರರಾಗುತ್ತೇವೆ ನಂತರ ಈ ಹಳೆಯ ಪ್ರಪಂಚದ ವಿನಾಶವೂ ಸಹ ಅವಶ್ಯವಾಗಿ ಆಗುವುದು. ಎಲ್ಲರೂ ಪವಿತ್ರರಾಗುವುದಿಲ್ಲ, ಶಕ್ತಿಯಿರುವವರು ನಿಮ್ಮಲ್ಲಿ ಕೆಲವರೇ ಇದ್ದೀರಿ. ನಿಮ್ಮಲ್ಲಿಯೂ ಸಹ ನಂಬರ್ವಾರ್ ಶಕ್ತಿಯನುಸಾರವೇ ಸೂರ್ಯವಂಶಿ, ಚಂದ್ರವಂಶಿಯರಾಗುತ್ತಾರಲ್ಲವೆ. ಶಕ್ತಿಯಂತೂ ಪ್ರತಿಯೊಂದು ಮಾತಿನಲ್ಲಿಯೂ ಬೇಕು. ಇದು ಈಶ್ವರೀಯ ಶಕ್ತಿಯಾಗಿದೆ. ಇದಕ್ಕೆ ಯೋಗಬಲದ ಶಕ್ತಿಯೆಂದು ಹೇಳಲಾಗುತ್ತದೆ. ಉಳಿದೆಲ್ಲವೂ ದೈಹಿಕ ಶಕ್ತಿಗಳಾಗಿವೆ, ಇದು ಆತ್ಮಿಕ ಶಕ್ತಿಯಾಗಿದೆ. ತಂದೆಯು ಕಲ್ಪ-ಕಲ್ಪವೂ ತಿಳಿಸುತ್ತಾರೆ - ಹೇ ಮಕ್ಕಳೇ, ನನ್ನೊಬ್ಬನನ್ನೇ ನೆನಪು ಮಾಡಿ. ಸರ್ವಶಕ್ತಿವಂತ ತಂದೆಯನ್ನು ನೆನಪು ಮಾಡಿ. ಅವರು ಒಬ್ಬ ತಂದೆಯೇ ಆಗಿದ್ದಾರೆ, ಅವರನ್ನು ನೆನಪು ಮಾಡುವುದರಿಂದಲೇ ಆತ್ಮವು ಪವಿತ್ರವಾಗುವುದು. ಇವು ಧಾರಣೆ ಮಾಡುವ ಬಹಳ ಒಳ್ಳೆಯ ಮಾತುಗಳಾಗಿವೆ. ನಾವು 84 ಜನ್ಮಗಳನ್ನು ತೆಗೆದುಕೊಂಡಿದ್ದೇವೆಂದು ಯಾರಿಗೆ ನಿಶ್ಚಯವೇ ಇಲ್ಲವೋ ಅವರ ಬುದ್ಧಿಯಲ್ಲಿ ಈ ಮಾತುಗಳು ಕುಳಿತುಕೊಳ್ಳುವುದಿಲ್ಲ. ಯಾರು ಸತೋಪ್ರಧಾನ ಪ್ರಪಂಚದಲ್ಲಿ ಬಂದಿದ್ದರೋ ಅವರೇ ಈಗ ತಮೋಪ್ರಧಾನತೆಯಲ್ಲಿ ಬಂದಿದ್ದಾರೆ. ಅವರೇ ಬಂದು ಬಹುಬೇಗನೆ ನಿಶ್ಚಯಬುದ್ಧಿಯವರಾಗುತ್ತಾರೆ. ಒಂದುವೇಳೆ ಏನೇ ಅರ್ಥವಾಗದಿದ್ದರೂ ಕೇಳಬೇಕು. ಪೂರ್ಣರೀತಿಯಲ್ಲಿ ಅರಿತುಕೊಂಡಾಗಲೇ ತಂದೆಯನ್ನೂ ನೆನಪು ಮಾಡುವಿರಿ. ಅರ್ಥವಾಗದಿದ್ದರೆ ನೆನಪು ಮಾಡಲು ಸಾಧ್ಯವಿಲ್ಲ, ಇದು ನೇರಮಾತಾಗಿದೆ. ನಾವಾತ್ಮಗಳು ಯಾರು ಸತೋಪ್ರಧಾನರಾಗಿದ್ದೆವೋ ಅವರೇ ತಮೋಪ್ರಧಾನರಾಗಿದ್ದೇವೆ. ನಾವು 84 ಜನ್ಮಗಳನ್ನು ತೆಗೆದುಕೊಳ್ಳುತ್ತೇವೆ ಹಾಗೂ ತಂದೆಯಿಂದ ಕಲ್ಪದ ಹಿಂದೆಯೂ ಆಸ್ತಿಯನ್ನು ಪಡೆದುಕೊಂಡಿದ್ದೇವೆಂದು ಹೇಗೆ ತಿಳಿದುಕೊಳ್ಳುವುದು ಎಂಬ ಸಂಶಯವು ಯಾರಿಗೆ ಇರುವುದೋ ಅವರು ವಿದ್ಯೆಯಲ್ಲಿ ಪೂರ್ಣಗಮನವನ್ನು ಕೊಡುವುದೇ ಇಲ್ಲ ಆಗ ಇವರ ಅದೃಷ್ಟದಲ್ಲಿಲ್ಲ. ಕಲ್ಪದ ಹಿಂದೆಯೂ ತಿಳಿದುಕೊಂಡಿರಲಿಲ್ಲ ಆದ್ದರಿಂದ ನೆನಪು ಮಾಡುತ್ತಿಲ್ಲವೆಂದು ತಿಳಿಯಲಾಗುತ್ತದೆ. ಇದು ಭವಿಷ್ಯಕ್ಕಾಗಿ ವಿದ್ಯೆಯಾಗಿದೆ. ಓದದಿದ್ದರೆ ಕಲ್ಪ-ಕಲ್ಪವೂ ಓದಿಲ್ಲ ಅಥವಾ ಕಡಿಮೆ ಅಂಕಗಳಿಂದ ತೇರ್ಗಡೆಯಾಗಿದ್ದರು ಎಂದು ತಂದೆಯು ತಿಳಿಯುತ್ತಾರೆ. ಶಾಲೆಯಲ್ಲಿ ಅನೇಕರು ಅನುತ್ತೀರ್ಣರೂ ಆಗುತ್ತಾರೆ. ನಂಬರ್ವಾರ್ ಆಗಿಯೇ ತೇರ್ಗಡೆಯಾಗುತ್ತಾರೆ. ಹಾಗೆಯೇ ಇದೂ ಸಹ ವಿದ್ಯೆಯಾಗಿದೆ, ಇದರಲ್ಲಿ ನಂಬರ್ವಾರ್ ತೇರ್ಗಡೆಯಾಗುತ್ತಾರೆ. ಯಾರು ಬುದ್ಧಿವಂತರಾಗಿರುತ್ತಾರೆಯೋ ಅವರು ಓದಿ ಅನ್ಯರಿಗೂ ಓದಿಸುತ್ತಾ ಇರುತ್ತಾರೆ. ತಂದೆಯು ತಿಳಿಸುತ್ತಾರೆ - ನಾನು ನೀವು ಮಕ್ಕಳ ಸೇವಕನಾಗಿದ್ದೇನೆ ಮತ್ತು ಮಕ್ಕಳೂ ಹೇಳುತ್ತೀರಿ - ಪ್ರತಿಯೊಬ್ಬ ಸಹೋದರ-ಸಹೋದರಿಯರ ಕಲ್ಯಾಣ ಮಾಡಬೇಕಾಗಿದೆ. ತಂದೆಯು ನಮ್ಮ ಕಲ್ಯಾಣ ಮಾಡುತ್ತಾರೆ ಮತ್ತೆ ನಾವು ಅನ್ಯರ ಕಲ್ಯಾಣ ಮಾಡಬೇಕಾಗಿದೆ. ತಂದೆಯನ್ನು ನೆನಪು ಮಾಡಿ ಅದರಿಂದ ಪಾಪಗಳು ಭಸ್ಮವಾಗುತ್ತವೆ ಎಂಬುದನ್ನು ಎಲ್ಲರಿಗೂ ತಿಳಿಸಬೇಕಾಗಿದೆ. ಯಾರೆಷ್ಟು ಅನೇಕರಿಗೆ ಸಂದೇಶವನ್ನು ಕೊಡುವರೋ ಅವರಿಗೆ ಅಷ್ಟೆ ದೊಡ್ಡ ಸಂದೇಶವಾಹಕರೆಂದು ಹೇಳುತ್ತಾರೆ. ಅವರಿಗೆ ಮಹಾರಥಿ ಅಥವಾ ಕುದುರೆ ಸವಾರರೆಂದು ಹೇಳಲಾಗುತ್ತದೆ. ಕಾಲಾಳುಗಳು ಪ್ರಜೆಗಳಲ್ಲಿ ಹೊರಟುಹೋಗುತ್ತಾರೆ. ಇದರಲ್ಲಿಯೂ ಸಹ ಯಾರ್ಯಾರೂ ಸಾಹುಕಾರರಾಗುತ್ತಾರೆ ಎಂಬುದನ್ನು ಮಕ್ಕಳು ತಿಳಿದುಕೊಳ್ಳುತ್ತೀರಿ, ಈ ಜ್ಞಾನವು ಬುದ್ಧಿಯಲ್ಲಿರಬೇಕು. ನೀವು ಮಕ್ಕಳಲ್ಲಿ ಯಾರು ಸೇವೆಗಾಗಿಯೇ ನಿಮಿತ್ತರಾಗಿದ್ದೀರೋ, ಸೇವೆಗಾಗಿಯೇ ಜೀವನವನ್ನು ಕೊಟ್ಟಿದ್ದೀರೋ ಅವರು ಪದವಿಯನ್ನು ಶ್ರೇಷ್ಠವಾದುದನ್ನೇ ಪಡೆಯುತ್ತಾರೆ. ಅವರಿಗೆ ಯಾರ ಚಿಂತೆಯೂ ಇರುವುದಿಲ್ಲ. ಮನುಷ್ಯ ಮನುಷ್ಯರಿಗೆ ತಮ್ಮ ಕೈಕಾಲುಗಳನ್ನು ಹೊಂದಿರುತ್ತಾರಲ್ಲವೆ. ಯಾರನ್ನೂ ಕಟ್ಟಿಹಾಕಲು ಸಾಧ್ಯವಿಲ್ಲ. ತಮ್ಮನ್ನು ಸ್ವತಂತ್ರವಾಗಿಟ್ಟುಕೊಳ್ಳುತ್ತಾರೆ. ಹೀಗೆ ಬಂಧನದಲ್ಲೇಕೆ ಸಿಕ್ಕಿಕೊಳ್ಳಲಿ, ತಂದೆಯಿಂದ ಅಮೃತವನ್ನು ತೆಗೆದುಕೊಂಡು ಅಮೃತದ ದಾನವನ್ನು ಏಕೆ ಮಾಡಬಾರದು! ನನ್ನನ್ನು ಅನ್ಯರು ಕಟ್ಟಿಹಾಕಲು ನಾನೇನು ಕುರಿಯೇ! ಹೀಗೆ ನೀವು ಮಕ್ಕಳು ಆರಂಭದಲ್ಲಿ ಹೇಗೆ ಬಿಡಿಸಿಕೊಂಡಿರಿ, ಕೂಗಾಡಿದಿರಿ, ಅಯ್ಯೊಯ್ಯೊ ಎಂದು ಕುಳಿತುಕೊಂಡಿರಿ. ನೀವು ಹೇಳುತ್ತೀರಿ - ನಮಗೇನು ಚಿಂತೆಯಿದೆ, ನಾವು ಸ್ವರ್ಗದ ಸ್ಥಾಪನೆ ಮಾಡಬೇಕೆ ಅಥವಾ ಕುಳಿತು ಈ ಕೆಲಸ ಮಾಡಬೇಕೆ! ಆ ನಶೆಯು ಏರಿಬಿಡುತ್ತದೆ. ಇದಕ್ಕೆ ಮೌಲಾಯಿಮಸ್ತಿ ಎಂದು ಹೇಳಲಾಗುತ್ತದೆ. ಮೌಲನ (ಈಶ್ವರನ) ಮಸ್ತಾನಿಗಳಾಗಿದ್ದೇವೆ. ನಿಮಗೆ ತಿಳಿದಿದೆ - ಈಶ್ವರನಿಂದ ನಮಗೆ ಏನೇನು ಪ್ರಾಪ್ತಿಯಾಗುತ್ತಿದೆ, ಅವರು ನಮಗೆ ಓದಿಸುತ್ತಿದ್ದಾರಲ್ಲವೆ! ಅವರಿಗೆ ಹೆಸರುಗಳಂತೂ ಬಹಳ ಇದೆ ಆದರೆ ಕೆಲಕೆಲವು ಹೆಸರುಗಳು ಬಹಳ ಮಧುರವಾಗಿವೆ, ಈಗ ನಾವು ಮೌಲಾಯಿಮಸ್ತಿ(ಈಶ್ವರೀಯ ನಶೆ)ಗಳಾಗಿದ್ದೇವೆ. ತಂದೆಯು ಬಹಳ ಸಹಜವಾದ ಸೂಚನೆ ನೀಡುತ್ತಾರೆ. ಬುದ್ದಿಯೂ ಸಹ ತಿಳಿದುಕೊಳ್ಳುತ್ತದೆ - ಅವಶ್ಯವಾಗಿ ನಾವು ತಂದೆಯನ್ನು ನೆನಪು ಮಾಡುತ್ತಾ-ಮಾಡುತ್ತಾ ಸತೋಪ್ರಧಾನರಾಗುತ್ತೇವೆ ಮತ್ತು ವಿಶ್ವದ ಮಾಲೀಕರೂ ಆಗುತ್ತೇವೆ. ಇದೇ ಚಿಂತೆಯಿದೆ, ತಂದೆಯನ್ನು ಪ್ರತೀ ಶ್ವಾಸವು ಅಥವಾ ಪ್ರತೀ ಕ್ಷಣವು ನೆನಪು ಮಾಡಬೇಕು. ಸನ್ಮುಖದಲ್ಲಿ ಕುಳಿತುಕೊಂಡಿದ್ದೀರಲ್ಲವೆ! ಇಲ್ಲಿಂದ ಹೊರಗೆ ಹೋಗುತ್ತೀರೆಂದರೆ ಮರೆತುಹೋಗುತ್ತೀರಿ. ಇಲ್ಲಿರುವಾಗ ಎಷ್ಟು ನಶೆಯಿರುವುದೋ ಅಷ್ಟು ಹೊರಗಡೆ ಹೋದಾಗ ಮರೆತುಹೋಗುತ್ತೀರಿ. ನೀವು ಮರೆಯಬಾರದು ಆದರೆ ಅದೃಷ್ಟದಲ್ಲಿಲ್ಲವೆಂದರೆ ಇಲ್ಲಿ ಕುಳಿತಿದ್ದರೂ ಸಹ ಮರೆತುಹೋಗುತ್ತದೆ.

ಮಕ್ಕಳಿಗಾಗಿ ಮ್ಯೂಸಿಯಂನಲ್ಲಿ ಮತ್ತು ಹಳ್ಳಿ-ಹಳ್ಳಿಗಳಲ್ಲಿ ಸೇವೆ ಮಾಡುವುದಕ್ಕಾಗಿ ಪ್ರಬಂಧಗಳಾಗುತ್ತಿದೆ. ಎಷ್ಟು ಸಮಯ ಸಿಗುವುದೋ ಅಷ್ಟರಲ್ಲಿ ಬೇಗ-ಬೇಗನೆ ಮಾಡಿ ಎಂದು ತಂದೆಯು ಹೇಳುತ್ತಾರೆ ಆದರೆ ನಾಟಕದಲ್ಲಿ ಬೇಗನೆ ಆಗಲು ಸಾಧ್ಯವಿಲ್ಲ. ತಂದೆಯಂತೂ ತಿಳಿಸುತ್ತಾರೆ - ಇಂತಹ ಯಂತ್ರವಿರಬೇಕು, ಕೈಹಾಕಿದ ತಕ್ಷಣ ವಸ್ತು ತಯಾರಾಗಿಬಿಡಬೇಕು. ಇದನ್ನೂ ಸಹ ತಂದೆಯು ತಿಳಿಸುತ್ತಿರುತ್ತಾರೆ - ಒಳ್ಳೊಳ್ಳೆಯ ಮಕ್ಕಳಿಗೆ ಮಾಯೆಯು ಕಿವಿ-ಮೂಗನ್ನು ಚೆನ್ನಾಗಿ ಹಿಡಿದುಕೊಳ್ಳುತ್ತದೆ. ಯಾರು ತಮ್ಮನ್ನು ಮಹಾವೀರರೆಂದು ತಿಳಿಯುತ್ತಾರೆಯೋ ಅವರಿಗೂ ಸಹ ಮಾಯೆಯ ಬಿರುಗಾಳಿಗಳು ಬಹಳ ಬರುತ್ತವೆ. ಅನಂತರ ಅವರು ಯಾವುದನ್ನೂ ಲೆಕ್ಕಿಸುವುದಿಲ್ಲ, ಮುಚ್ಚಿಟ್ಟುಕೊಳ್ಳುತ್ತಾರೆ. ಆಂತರಿಕವಾಗಿ ಹೃದಯವು ಸ್ವಚ್ಚವಿರುವುದಿಲ್ಲ. ಸ್ವಚ್ಛ ಹೃದಯದವರೇ ವಿದ್ಯಾರ್ಥಿವೇತನವನ್ನು ಪಡೆಯುತ್ತಾರೆ. ಪತಿತರಿಗೆ ಹೃದಯವು ಸರಿಯಾಗಿ ಚಾಲನೆಯಲ್ಲಿರುವುದಿಲ್ಲ. ಪತಿತ ಹೃದಯದಿಂದ ತಮ್ಮದೇ ದೋಣಿಯನ್ನು ಸಿಕ್ಕಿಹಾಕಿಸುತ್ತಾರೆ. ಎಲ್ಲರಿಗೆ ಶಿವತಂದೆಯೊಂದಿಗೆ ಕೆಲಸವಿದೆ, ಇದನ್ನಂತೂ ಸಾಕ್ಷಾತ್ಕಾರ ಮಾಡುತ್ತೀರಿ. ಬ್ರಹ್ಮಾರವರನ್ನೂ ಸಹ ಮಾಡುವವರು ಶಿವತಂದೆಯಾಗಿದ್ದಾರೆ. ಇವರು ಶಿವತಂದೆಯನ್ನು ನೆನಪು ಮಾಡಿದುದರಿಂದಲೇ ಈ ರೀತಿಯಾದರು. ತಂದೆಗೆ ಗೊತ್ತಿದೆ - ಮಾಯೆಯು ಬಹಳ ಶಕ್ತಿಶಾಲಿಯಾಗಿದೆ, ಹೇಗೆ ಇಲಿಯು ಕಚ್ಚಿದಾಗ ಅದು ತಿಳಿಯುವುದೇ ಇಲ್ಲ, ಅದೇ ರೀತಿ ಮಾಯೆಯೂ ಸಹ ಇಂತಹ ಮಸ್ತಇಲಿಯಾಗಿದೆ. ಮಹಾರಥಿಗಳೂ ಸಹ ಎಚ್ಚರಿಕೆಯಿಂದಿರಬೇಕು. ನಮ್ಮನ್ನು ಮಾಯೆಯು ಬೀಳಿಸಿಬಿಟ್ಟಿದೆ, ಉಪ್ಪುನೀರನ್ನಾಗಿ ಮಾಡಿದೆ ಎಂಬುದನ್ನು ಅವರು ಅರಿತುಕೊಳ್ಳುವುದೇ ಇಲ್ಲ. ಇದನ್ನು ತಿಳಿದುಕೊಳ್ಳಬೇಕು - ಉಪ್ಪುನೀರಾಗಿ ನಡೆದುಕೊಂಡರೆ ನಾವು ತಂದೆಯ ಸೇವೆಯನ್ನು ಮಾಡಲು ಸಾಧ್ಯವಿಲ್ಲ ಅಂತಹವರು ಒಳಗೆ ತಮಗೆತಾವೇ ಸುಟ್ಟುಕೊಳ್ಳುತ್ತಾರೆ. ದೇಹಾಭಿಮಾನವಿದೆ ಆದ್ದರಿಂದಲೇ ಸುಟ್ಟುಕೊಳ್ಳುತ್ತಾರೆ. ಆ ಶಕ್ತಿಶಾಲಿ ಸ್ಥಿತಿಯಂತೂ ಇನ್ನೂ ಇಲ್ಲ. ನೆನಪಿನ ಹರಿತವು ತುಂಬುವುದಿಲ್ಲ ಆದ್ದರಿಂದ ಬಹಳ ಎಚ್ಚರವಾಗಿರಬೇಕು. ಮಾಯೆಯು ಬಹಳ ತೀಕ್ಷ್ಣವಾಗಿದೆ. ಈಗ ನೀವು ಯುದ್ಧದ ಮೈದಾನದಲ್ಲಿದ್ದೀರೆಂದರೆ ಮಾಯೆಯೂ ಸಹ ಬಿಡುವುದಿಲ್ಲ. ಅರ್ಧ-ಮುಕ್ಕಾಲು ಭಾಗವಾದರೂ ಸಮಾಪ್ತಿ ಮಾಡಿಬಿಡುತ್ತದೆ. ಯಾರಿಗೂ ಸಹ ಇದು ತಿಳಿಯುವುದೇ ಇಲ್ಲ. ಹೇಗೆ ಒಳ್ಳೊಳ್ಳೆಯ ಹೊಸ-ಹೊಸ ಮಕ್ಕಳೂ ಸಹ ವಿದ್ಯಾಭ್ಯಾಸವನ್ನು ನಿಲ್ಲಿಸಿ ಹೋಗಿ ಮನೆಯಲ್ಲಿ ಕುಳಿತುಕೊಳ್ಳುತ್ತಾರೆ. ಒಳ್ಳೊಳ್ಳೆಯ ಪ್ರಸಿದ್ಧರಾದವರ ಮೇಲೂ ಸಹ ಮಾಯೆಯ ಯುದ್ಧವಾಗುತ್ತದೆ. ಇದನ್ನರಿತಿದ್ದರೂ ಸಹ ಅವರು ಇದನ್ನು ಲೆಕ್ಕಿಸುವುದಿಲ್ಲ. ಚಿಕ್ಕಮಾತಿನಲ್ಲಿಯೇ ಬಹುಬೇಗನೆ ಉಪ್ಪುನೀರಾಗಿಬಿಡುತ್ತಾರೆ. ತಂದೆಯು ತಿಳಿಸುತ್ತಾರೆ - ದೇಹಾಭಿಮಾನದ ಕಾರಣವೇ ಉಪ್ಪುನೀರಾಗಿಬಿಡುತ್ತಾರೆ. ತಮ್ಮನ್ನು ಮೋಸಗೊಳಿಸಿಕೊಳ್ಳುತ್ತಾರೆ. ತಂದೆಯು ತಿಳಿಸುತ್ತಾರೆ - ಇದೂ ಸಹ ನಾಟಕವಾಗಿದೆ, ಏನೆಲ್ಲವನ್ನೂ ನೋಡುತ್ತೀರಿ, ಎಲ್ಲವೂ ಕಲ್ಪದ ಹಿಂದಿನ ತರಹ ನಾಟಕವು ನಡೆಯುತ್ತಾ ಇರುತ್ತದೆ. ಸ್ಥಿತಿಯು ಕೆಳಗೆ-ಮೇಲೆ ಆಗುತ್ತಿರುತ್ತದೆ. ಕೆಲವೊಮ್ಮೆ ಗ್ರಹಚಾರವು ಕುಳಿತುಕೊಳ್ಳುತ್ತದೆ, ಇನ್ನೂ ಕೆಲವೊಮ್ಮೆ ಬಹಳ ಒಳ್ಳೆಯ ಸೇವೆ ಮಾಡಿ ಖುಷಿಯ ಸಮಾಚಾರವನ್ನು ಬರೆಯುತ್ತಾರೆ. ಮೇಲೆ-ಕೆಳಗಾಗುತ್ತಿರುತ್ತದೆ. ಕೆಲವೊಮ್ಮೆ ಸೋಲು, ಕೆಲವೊಮ್ಮೆ ಗೆಲುವು, ಪಾಂಡವರಿಗೆ ಮಾಯೆಯೊಂದಿಗೆ ಕೆಲವೊಮ್ಮೆ ಸೋಲು, ಕೆಲವೊಮ್ಮೆ ಗೆಲುವುಂಟಾಗುತ್ತದೆ. ಒಳ್ಳೊಳ್ಳೆಯ ಮಹಾರಥಿಗಳೂ ಸಹ ಅಲುಗಾಡುತ್ತಾರೆ. ಕೆಲವೊಮ್ಮೆ ಸತ್ತುಹೋಗುತ್ತಾರೆ (ಜ್ಞಾನವನ್ನು ಬಿಟ್ಟುಹೋಗುವುದು) ಆದ್ದರಿಂದ ಎಲ್ಲಿಯೇ ಇರಿ ತಂದೆಯನ್ನು ನೆನಪು ಮಾಡುತ್ತಾ ಇರಿ ಮತ್ತು ಸೇವೆ ಮಾಡುತ್ತಾ ಇರಿ. ನೀವು ಸೇವೆಗಾಗಿ ನಿಮಿತ್ತರಾಗಿದ್ದೀರಿ. ನೀವೀಗ ಯುದ್ಧದ ಮೈದಾನದಲ್ಲಿದ್ದೀರಲ್ಲವೆ. ಯಾರು ಹೊರಗೆ ಗೃಹಸ್ಥವ್ಯವಹಾರದಲ್ಲಿರುವರೋ ಅವರಲ್ಲಿಯೂ ಸಹ ಕೆಲವರು ಬಹಳ ತೀಕ್ಷ್ಣವಾಗಿ ಮುಂದೆ ಹೋಗುತ್ತಾರೆ. ಮಾಯೆಯ ಜೊತೆ ಪೂರ್ಣ ಯುದ್ಧವು ನಡೆಯುತ್ತಿರುತ್ತದೆ. ಕ್ಷಣ-ಪ್ರತಿಕ್ಷಣ ನಿಮ್ಮ ಪಾತ್ರವು ಕಲ್ಪದ ಹಿಂದಿನ ತರಹ ನಡೆಯುತ್ತಾ ಬಂದಿದೆ. ಇಷ್ಟು ಸಮಯ ಕಳೆದುಹೋಗಿದೆ ಎಂದು ನೀವು ಹೇಳುತ್ತೀರಿ, ಇದರಲ್ಲಿ ಏನೇನಾಗಿದೆ ಎಂಬುದೂ ಸಹ ನಿಮ್ಮ ಬುದ್ಧಿಯಲ್ಲಿದೆ, ಪೂರ್ಣ ಜ್ಞಾನವು ಬುದ್ದಿಯಲ್ಲಿದೆ. ಹೇಗೆ ತಂದೆಯಲ್ಲಿ ಜ್ಞಾನವಿದೆ, ಈ ದಾದಾರವರಲ್ಲಿಯೂ ಸಹ ಅಷ್ಟೇ ಜ್ಞಾನವಿದೆ. ತಂದೆಯು ಮುರುಳಿಯನ್ನು ಹೇಳುತ್ತಿರಬೇಕಾದರೂ ಸಹ ಅವಶ್ಯವಾಗಿ ದಾದಾರವರೂ ಸಹ ನಡುನಡುವೆ ಹೇಳುತ್ತಿರುತ್ತಾರೆ. ನೀವೂ ಸಹ ತಿಳಿದುಕೊಂಡಿದ್ದೀರಿ - ಯಾರ್ಯಾರು ಸ್ವಚ್ಛ ಹೃದಯದವರಾಗಿದ್ದಾರೆ, ಸ್ವಚ್ಛಹೃದಯದವರೇ ತಂದೆಯ ಹೃದಯವನ್ನೇರುತ್ತಾರೆ. ಅವರಲ್ಲಿ ಉಪ್ಪುನೀರಿನ ಸ್ವಭಾವವಿರುವುದಿಲ್ಲ, ಸದಾ ಹರ್ಷಿತರಾಗಿರುತ್ತಾರೆ. ಅವರ ಮನಸ್ಸೆಂದೂ ಬದಲಾಗುವುದಿಲ್ಲ. ಇಲ್ಲಂತೂ ಅನೇಕರ ಮನಸ್ಸು ತಿರುಗಿಬಿಡುತ್ತದೆ. ಮಾತೇ ಕೇಳಬೇಡಿ, ಮುಖವು ಹೇಗೆ ಇಲಿಯಂತೆ ಮಾಡಿಬಿಟ್ಟಿದೆ. ನಾವು ಪತಿತರಾಗಿದ್ದೇವೆ ಎಂದೂ ಸಹ ಹೇಳುತ್ತಾರೆ, ಬಂದು ಪಾವನರನ್ನಾಗಿ ಮಾಡಿ ಎಂದು ಪತಿತ-ಪಾವನ ತಂದೆಯನ್ನು ಕರೆಯುತ್ತಾರೆ. ಇದಕ್ಕೆ ತಂದೆಯು ತಿಳಿಸುತ್ತಾರೆ - ಮಕ್ಕಳೇ, ನನ್ನನ್ನು ನೆನಪು ಮಾಡಿ ಆಗ ನಿಮ್ಮ ವಸ್ತ್ರಗಳು ಶುದ್ಧವಾಗುತ್ತವೆ. ನನ್ನ ಶ್ರೀಮತದಂತೆ ನಡೆಯಿರಿ, ಶ್ರೀಮತದಂತೆ ನಡೆಯದೇ ಇರುವವರ ವಸ್ತ್ರಗಳು ಶುದ್ಧವಾಗುವುದೇ ಇಲ್ಲ. ತಂದೆಯಂತೂ ದಿನ-ರಾತ್ರಿ ಇದನ್ನೇ ಒತ್ತುಕೊಟ್ಟು ಹೇಳುತ್ತಾರೆ - ತನ್ನನ್ನು ಆತ್ಮನೆಂದು ತಿಳಿಯಿರಿ, ದೇಹಾಭಿಮಾನದಲ್ಲಿ ಬರುವುದರಿಂದಲೇ ನೀವು ಗುಟುಕರಿಸುತ್ತೀರಿ. ಎಷ್ಟೆಷ್ಟು ಮೇಲೇರುತ್ತಾ ಹೋಗುತ್ತೀರಿ ಅಷ್ಟು ಪ್ರಸನ್ನಚಿತ್ತರಾಗುತ್ತಾ ಹೋಗುತ್ತೀರಿ ಮತ್ತು ಹರ್ಷಿತಮುಖವಿರುತ್ತದೆ. ತಂದೆಗೆ ಗೊತ್ತಿದೆ, ಒಳ್ಳೊಳ್ಳೆಯ ಮಕ್ಕಳಿದ್ದಾರೆ ಆದರೆ ಒಳಗಿನ ಸ್ಥಿತಿಯನ್ನು ನೋಡಿದರೆ ಕರಗಿಹೋಗುತ್ತಿದ್ದಾರೆ. ದೇಹಾಭಿಮಾನದ ಬೆಂಕಿಯು ಹೇಗೆ ಅವರನ್ನು ಕರಗಿಸುತ್ತಿದೆ, ಈ ಖಾಯಿಲೆಯು ಎಲ್ಲಿಂದ ಬಂದಿದೆ ಎಂಬುದನ್ನು ಅರಿತುಕೊಳ್ಳುವುದೇ ಇಲ್ಲ. ತಂದೆಯು ತಿಳಿಸುತ್ತಾರೆ - ದೇಹಾಭಿಮಾನದಿಂದಲೇ ಈ ಖಾಯಿಲೆಯು ಬರುತ್ತದೆ. ದೇಹಿ-ಅಭಿಮಾನಿಗಳಿಗೆ ಎಂದೂ ಈ ಖಾಯಿಲೆಯು ಬರುವುದಿಲ್ಲ. ದೇಹಾಭಿಮಾನಿಗಳು ಒಳಗೆ ಬಹಳ ಸುಡುತ್ತಿರುತ್ತಾರೆ. ತಂದೆಯು ಹೇಳುತ್ತಾರೆ - ಮಕ್ಕಳೇ, ದೇಹೀ-ಅಭಿಮಾನಿಭವ. ಈ ರೋಗವು ಏಕೆ ಬಂದಿತೆಂದು ಕೇಳುತ್ತಾರೆ ಅದಕ್ಕೆ ತಂದೆಯು ತಿಳಿಸುತ್ತಾರೆ - ಈ ದೇಹಾಭಿಮಾನದ ಖಾಯಿಲೆಯು ಈ ರೀತಿಯಿದೆ ಅದನ್ನು ಕೇಳಲೇಬೇಡಿ. ಯಾರಿಗಾದರೂ ಈ ಖಾಯಿಲೆಯುಂಟಾದರೆ ಒಮ್ಮೆಲೆ ಅಂಟಿಕೊಂಡುಬಿಡುತ್ತದೆ, ಬಿಡುವುದೇ ಇಲ್ಲ. ಶ್ರೀಮತದಂತೆ ನಡೆಯದೆ ತಮ್ಮ ದೇಹಾಭಿಮಾನದಲ್ಲಿ ನಡೆಯುತ್ತಿದ್ದರೆ ಬಹಳ ಜೋರಾಗಿ ಪೆಟ್ಟುಬೀಳುತ್ತದೆ. ತಂದೆಯ ಬಳಿ ಎಲ್ಲಾ ಸಮಾಚಾರಗಳು ಬರುತ್ತವೆ. ಮಾಯೆಯು ಹೇಗೆ ಒಮ್ಮೆಲೆ ಕಿವಿಯನ್ನು ಹಿಡಿದುಕೊಂಡು ಕೆಳಗೆ ಬೀಳಿಸುತ್ತದೆ, ಬುದ್ಧಿಯನ್ನು ಕೊಂದುಬಿಡುತ್ತದೆ, ಸಂಶಯಬುದ್ಧಿಯವರಾಗಿಬಿಡುತ್ತಾರೆ. ಭಗವಂತನೇ ಬಂದು ನಮ್ಮನ್ನು ಕಲ್ಲುಬುದ್ಧಿಯಿಂದ ಪಾರಸಬುದ್ಧಿಯವರನ್ನಾಗಿ ಮಾಡಿ ಎಂದು ಭಗವಂತನನ್ನು ಕರೆಯುತ್ತಾರೆ ಮತ್ತೆ ಅವರಿಗೂ ವಿರುದ್ಧವಾಗಿಬಿಡುತ್ತಾರೆಂದರೆ ಗತಿಯೇನಾಗುವುದು! ಒಮ್ಮೆಲೆ ಬಿದ್ದು ಕಲ್ಲುಬುದ್ದಿಯವರಾಗಿಬಿಡುತ್ತಾರೆ. ಮಕ್ಕಳಿಗೆ ಇಲ್ಲಿ ಕುಳಿತಿದ್ದಂತೆಯೇ ಈ ಖುಷಿಯಿರಬೇಕು - ಇದು ಈ ವಿದ್ಯಾರ್ಥಿಜೀವನವು ಅತ್ಯುತ್ತಮವಾಗಿದೆ. ತಂದೆಯು ತಿಳಿಸುತ್ತಾರೆ - ಇದಕ್ಕಿಂತಲೂ ಶ್ರೇಷ್ಠವಿದ್ಯೆಯು ಮತ್ತ್ಯಾವುದಾದರೂ ಇದೆಯೇ? ಇದೇ ಅತ್ಯುತ್ತಮವಾಗಿದೆ. 21 ಜನ್ಮಗಳ ಬಲವನ್ನು ಕೊಡುತ್ತದೆ ಅಂದಮೇಲೆ ಇಂತಹ ವಿದ್ಯೆಯಲ್ಲಿ ಎಷ್ಟೊಂದು ಗಮನವಿಡಬೇಕು. ಕೆಲವರಂತೂ ಸ್ವಲ್ಪವೂ ಗಮನ ಕೊಡುವುದಿಲ್ಲ. ಮಾಯೆಯು ಒಮ್ಮೆಲೆ ಕಿವಿ-ಮೂಗನ್ನು ಕತ್ತರಿಸಿಬಿಡುತ್ತದೆ. ಸ್ವಯಂ ತಂದೆಯು ಹೇಳುತ್ತಾರೆ - ಅರ್ಧಕಲ್ಪ ಮಾಯಾರಾಜ್ಯವು ನಡೆಯುವುದರಿಂದ ಮಾಯೆಯು ಈ ರೀತಿ ಹಿಡಿದುಕೊಳ್ಳುತ್ತದೆ ಅದರ ಮಾತೇ ಕೇಳಬೇಡಿ ಆದ್ದರಿಂದ ಬಹಳ ಎಚ್ಚರಿಕೆಯಿಂದಿರಿ, ಪರಸ್ಪರ ಒಬ್ಬರು ಇನ್ನೊಬ್ಬರನ್ನು ಎಚ್ಚರಿಸುತ್ತಾ ಇರಿ. ಶಿವತಂದೆಯನ್ನು ನೆನಪು ಮಾಡದಿದ್ದರೆ ಮಾಯೆಯು ಕಿವಿ-ಮೂಗನ್ನು ಕತ್ತರಿಸಿಬಿಡುತ್ತದೆ ನಂತರ ಅವರು ಏನೂ ಪ್ರಯೋಜನವಿಲ್ಲ. ನಾವು ಲಕ್ಷ್ಮಿ-ನಾರಾಯಣರ ಪದವಿಯನ್ನು ಪಡೆಯಬೇಕೆಂದು ಅನೇಕರು ತಿಳಿಯುತ್ತಾರೆ ಆದರೆ ಇದು ಅಸಂಭವವಾಗಿದೆ. ಸುಸ್ತಾಗಿ ಕೆಳಗೆ ಬೀಳುತ್ತಾರೆ. ಮಾಯೆಯಿಂದ ಸೋಲನ್ನನುಭವಿಸಿ ಒಮ್ಮೆಲೆ ಕೆಸರಿನಲ್ಲಿ ಹೋಗಿ ಬೀಳುತ್ತಾರೆ. ನೋಡಿ, ನಮ್ಮ ಬುದ್ಧಿಯು ಕೆಡುತ್ತದೆಯೆಂದರೆ ಮಾಯೆಯು ಕಿವಿಯನ್ನು ಹಿಡಿದುಕೊಂಡಿದೆ ಎಂದು ತಿಳಿಯಬೇಕು. ನೆನಪಿನ ಯಾತ್ರೆಯಲ್ಲಿ ಬಹಳ ಬಲವಿದೆ, ಬಹಳಷ್ಟು ಖುಷಿಯು ತುಂಬಿದೆ ಆದ್ದರಿಂದಲೇ ಖುಷಿಯಂತಹ ಔಷಧಿಯಿಲ್ಲವೆಂದು ಹೇಳುತ್ತಾರೆ. ಅಂಗಡಿಯಲ್ಲಿ ಗ್ರಾಹಕರು ಬರುತ್ತಿರುತ್ತಾರೆ, ಸಂಪಾದನೆಯಾಗುತ್ತಾ ಇರುತ್ತದೆಯೆಂದರೆ ಅವರಿಗೆ ಎಂದೂ ಸುಸ್ತಾಗುವುದಿಲ್ಲ, ಹಸಿವು ಆಗುವುದಿಲ್ಲ ಬಹಳ ಖುಷಿಯಲ್ಲಿರುತ್ತಾರೆ. ನಿಮಗಂತೂ ಅಪಾರವಾದ ಧನವು ಸಿಗುತ್ತದೆ ಅಂದಮೇಲೆ ನಿಮಗೆ ಬಹಳ ಖುಷಿಯಿರಬೇಕು. ನೋಡಿಕೊಳ್ಳಬೇಕು - ನಮ್ಮ ಚಲನೆಯು ದೈವೀಚಲನೆಯಾಗಿದೆಯೇ ಅಥವಾ ಆಸುರಿಯಾಗಿದೆಯೇ? ಸಮಯವು ಬಹಳ ಕಡಿಮೆಯಿದೆ. ಅಕಾಲಮೃತ್ಯುವಿಗೂ ಸಹ ಸ್ಪರ್ಧೆಯಿದೆ. ಅಪಘಾತಗಳು ನೋಡಿ ಎಷ್ಟೊಂದು ಆಗುತ್ತಿರುತ್ತದೆ. ತಮೋಪ್ರಧಾನ ಬುದ್ಧಿಯವರಾಗುತ್ತಾ ಹೋಗುತ್ತಾರೆ. ಬಹಳ ಜೋರಾಗಿ ಮಳೆಬಿದ್ದರೆ ಅದಕ್ಕೂ ಸಹ ಸೃಷ್ಟಿಯ ಅಪಘಾತವೆಂದು ಹೇಳುತ್ತಾರೆ. ಮೃತ್ಯುವು ಸನ್ಮುಖದಲ್ಲಿ ಬಂದಿತೆಂದರೆ ಬಂದಿತು. ಅಣುಬಾಂಬುಗಳ ಯುದ್ಧವು ಆರಂಭವಾಗಿಬಿಡುತ್ತದೆ ಎಂಬುದನ್ನೂ ತಿಳಿದುಕೊಂಡಿದ್ದಾರೆ ಆದರೆ ಇಂತಿಂತಹ ಅಪಾಯಕರ ಕೆಲಸಗಳನ್ನು ಮಾಡುತ್ತಾರೆ, ತೊಂದರೆ ಕೊಡುತ್ತಾರೆಂದರೆ ಮತ್ತೆ ಯುದ್ಧವೂ ಸಹ ಆರಂಭವಾಗಿಬಿಡುವುದು. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತಾ ಬಾಪ್ದಾದಾರವರ ನೆನಪು ಪ್ರೀತಿ ಹಾಗೂ ನಮಸ್ತೆ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ಮೌಲಾಯಿಮಸ್ತಿಯಲ್ಲಿದ್ದು ಸ್ವಯಂನ್ನು ಸ್ವತಂತ್ರ ಮಾಡಿಕೊಳ್ಳಬೇಕಾಗಿದೆ. ಯಾರದೇ ಬಂಧನದಲ್ಲಿ ಬಂಧಿತರಾಗಬಾರದು. ಮಾಯೆ ಎಂಬ ಇಲಿಯಿಂದ ಬಹಳ-ಬಹಳ ಸುರಕ್ಷಿತವಾಗಿಟ್ಟುಕೊಳ್ಳಬೇಕು, ಎಚ್ಚರಿಕೆಯಿಂದಿರಬೇಕು. ಮನಸ್ಸಿನಲ್ಲಿ ಎಂದೂ ಪತಿತ ವಿಚಾರವು ಬರಬಾರದು.

2. ತಂದೆಯ ಮೂಲಕ ಜ್ಞಾನದ ಯಾವ ಅಪಾರ ಧನವು ಸಿಗುತ್ತದೆಯೋ ಅದರ ಖುಷಿಯಲ್ಲಿರಬೇಕಾಗಿದೆ. ಈ ಸಂಪಾದನೆಯಲ್ಲೆಂದೂ ಸಂಶಯಬುದ್ಧಿಯವರಾಗಿ ಸುಸ್ತಾಗಬಾರದು. ಈ ವಿದ್ಯಾರ್ಥಿಜೀವನವು ಅತ್ಯುತ್ತಮವಾಗಿದೆ ಆದ್ದರಿಂದ ವಿದ್ಯಾಭ್ಯಾಸದ ಮೇಲೆ ಸಂಪೂರ್ಣ ಗಮನ ಕೊಡಬೇಕಾಗಿದೆ.

ವರದಾನ:
ಸದಾ ಎಚ್ಚರಿಕೆಯಿಂದಿರುತ್ತಾ ಎಲ್ಲರ ಆಸೆಗಳನ್ನು ಪೂರ್ಣ ಮಾಡುವಂತಹ ಮಾಸ್ಟರ್ ಮುಕ್ತಿ-ಜೀವನ್ಮುಕ್ತಿ ದಾತಾ ಭವ.

ಈಗ ಎಲ್ಲಾ ಮಕ್ಕಳಲ್ಲಿಯೂ ಇದೇ ಶುಭ ಸಂಕಲ್ಪ ಇಮರ್ಜ್ ಆಗಿರಬೇಕು ಸರ್ವರ ಆಸೆಗಳನ್ನು ಪೂರ್ಣ ಮಾಡಬೇಕು. ಎಲ್ಲರ ಇಚ್ಛೆ ಆಗಿದೆ ಜನನ-ಮರಣದಿಂದ ಮುಕ್ತವಾಗಿ ಬಿಡಬೇಕು, ಅದರ ಅನುಭವ ಮಾಡಿಸಿ. ಇದಕ್ಕಾಗಿ ತಮ್ಮ ಶಕ್ತಿಶಾಲಿ ಸತೋಪ್ರಧಾನ ವೈಭ್ರೇಷನ್ ನಿಂದ ಪ್ರಕೃತಿ ಮತ್ತು ಮನುಷ್ಯಾತ್ಮರ ವೃತ್ತಿಯನ್ನು ಬದಲಾಯಿಸಿ. ಮಾಸ್ಟರ್ ದಾತಾ ಆಗಿ ಎಲ್ಲಾ ಆತ್ಮರ ಆಸೆಗಳನ್ನು ಪೂರ್ಣ ಮಾಡಿ. ಮುಕ್ತಿ, ಜೀವನ್ಮುಕ್ತಿಯ ದಾನ ನೀಡಿ. ಈ ಜವಾಬ್ದಾರಿಯ ಸ್ಮೃತಿ ನಿಮ್ಮನ್ನು ಸದಾ ಎಚ್ಚರಿಕೆಯಿಂದಿಡುತ್ತದೆ.

ಸ್ಲೋಗನ್:
ಮುರಳೀಧರನ ಮುರಳಿಯ ಮೇಲೆ ದೇಹದ ಪರಿವೆಯನ್ನೂ ಮರೆತು ಬಿಡುವಂತಹವರೇ ಸತ್ಯ ಗೋಪ, ಗೊಪಿಕೆಯರು.