27.06.24         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ- ತಾವು ಶರೀರದಿಂದ ಬೇರೆಯಾಗಿ ತಂದೆಯ ಬಳಿ ಹೋಗಬೇಕಾಗಿದೆ, ನೀವು ಶರೀರವನ್ನು ಜೊತೆ ತೆಗೆದುಕೊಂಡು ಹೋಗುವುದಿಲ್ಲ ಆದ್ದರಿಂದ ಶರೀರವನ್ನು ಮರೆತು ಆತ್ಮವನ್ನು ನೋಡಬೇಕು”

ಪ್ರಶ್ನೆ:
ನೀವು ಮಕ್ಕಳು ತಮ್ಮ ಆಯಸ್ಸನ್ನು ಯೋಗಬಲದಿಂದ ಹೆಚ್ಚಿಸಿಕೊಳ್ಳುವ ಪುರುಷಾರ್ಥವನ್ನು ಏಕೆ ಮಾಡುತ್ತೀರಿ?

ಉತ್ತರ:
ಏಕೆಂದರೆ ನಿಮಗೆ ಇಚ್ಛೆಯಾಗುತ್ತದೆ- ನಾವು ತಂದೆಯ ಮೂಲಕ ಈ ಜನ್ಮದಲ್ಲಿಯೇ ತಂದೆಯಿಂದ ಎಲ್ಲವನ್ನೂ ಅರಿತುಕೊಳ್ಳಬೇಕು, ತಂದೆಯಿಂದ ಎಲ್ಲವನ್ನೂ ಕೇಳಬೇಕು ಆದ್ದರಿಂದ ನೀವು ಯೋಗಬಲದಿಂದ ತಮ್ಮ ಆಯಸ್ಸನ್ನು ಹೆಚ್ಚಿಸಿಕೊಳ್ಳುವ ಪುರುಷಾರ್ಥ ಮಾಡುತ್ತೀರಿ. ನಿಮಗೆ ಈಗಲೇ ತಂದೆಯಿಂದ ಪ್ರೀತಿಯು ಸಿಗುತ್ತದೆ. ಇಂತಹ ಪ್ರೀತಿಯು ಮತ್ತೆ ಇಡೀ ಕಲ್ಪದಲ್ಲಿಯೇ ಸಿಗಲು ಸಾಧ್ಯವಿಲ್ಲ ಬಾಕಿ ಯಾರು ಶರೀರವನ್ನು ಬಿಟ್ಟು ಹೊರಟುಹೋದರೋ ಅವರಿಗಾಗಿ ಹೇಳಲಾಗುತ್ತದೆ- ಡ್ರಾಮ, ಅವರದು ಅಷ್ಟೇ ಪಾತ್ರವಿತ್ತು.

ಓಂ ಶಾಂತಿ.
ಮಕ್ಕಳು ಜನ್ಮ-ಜನ್ಮಾಂತರ ಅನ್ಯಸತ್ಸಂಗಗಳಿಗೆ ಹೋಗಿದ್ದೀರಿ ಮತ್ತು ಇಲ್ಲಿಯೂ ಬಂದಿದ್ದೀರಿ. ವಾಸ್ತವದಲ್ಲಿ ಇದಕ್ಕೂ ಸತ್ಸಂಗವೆಂದು ಹೇಳಲಾಗುತ್ತದೆ. ಸತ್ಯಸಂಗವು ಮೇಲೆತ್ತುತ್ತದೆ, ಮಕ್ಕಳ ಮನಸ್ಸಿನಲ್ಲಿ ಬರುತ್ತದೆ- ನಾವು ಮೊದಲು ಸತ್ಸಂಗಗಳಿಗೆ ಹೋಗುತ್ತಿದ್ದೆವು ಈಗ ಇಲ್ಲಿ ಕುಳಿತ್ತಿದ್ದೇವೆ. ರಾತ್ರಿ-ಹಗಲಿನ ಅಂತರವು ಭಾಸವಾಗುತ್ತದೆ. ಇಲ್ಲಿ ಮೊಟ್ಟಮೊದಲಂತೂ ತಂದೆಯ ಪ್ರೀತಿಯು ಸಿಗುತ್ತದೆ ಮತ್ತೆ ತಂದೆಗೆ ಮಕ್ಕಳ ಪ್ರೀತಿಯು ಸಿಗುತ್ತದೆ. ಈಗ ಈ ಜನ್ಮದಲ್ಲಿ ನಿಮ್ಮ ಪರಿವರ್ತನೆಯಾಗುತ್ತಿದೆ. ನೀವು ಮಕ್ಕಳು ಅರಿತುಕೊಂಡಿದ್ದೀರಿ- ನಾವಾತ್ಮರಾಗಿದ್ದೇವೆ, ಶರೀರವಲ್ಲ. ನಮ್ಮ ಆತ್ಮವೆಂದು ಶರೀರವು ಹೇಳುವುದಿಲ್ಲ. ನನ್ನ ಶರೀರವೆಂದು ಆತ್ಮವೇ ಹೇಳಲು ಸಾಧ್ಯ. ಮಕ್ಕಳೂ ಸಹ ತಿಳಿಯುತ್ತೀರಿ - ಜನ್ಮ-ಜನ್ಮಾಂತರವಂತೂ ಆ ಸಾಧು-ಸಂತ ಮಹಾತ್ಮರನ್ನು ಮಾಡಿಕೊಳ್ಳುತ್ತಾ ಬಂದೆವು. ಇತ್ತೀಚೆಗೆ ಫ್ಯಾಷನ್ ಆಗಿಬಿಟ್ಟಿದೆ - ಸಾಯಿಬಾಬಾ, ಮೆಹೆರ್ಬಾಬಾ,......ಅವರೆಲ್ಲರೂ ಸಹ ಶರೀರಧಾರಿಗಳಾಗಿಬಿಟ್ಟರು. ದೈಹಿಕ ಪ್ರೀತಿಯಲ್ಲಿ ಸುಖವಂತೂ ಇರುವುದಿಲ್ಲ. ಈಗ ನೀವು ಮಕ್ಕಳದು ಆತ್ಮಿಕ ಪ್ರೀತಿಯಾಗಿದೆ. ಇಲ್ಲಂತೂ ನಿಮಗೆ ತಿಳುವಳಿಕೆ ಸಿಗುತ್ತದೆ, ಅಲ್ಲಂತೂ ಸಂಪೂರ್ಣ ತಿಳುವಳಿಕೆ ಇರಲಿಲ್ಲ. ಈಗ ನೀವು ತಿಳಿದುಕೊಳ್ಳುತ್ತೀರಿ- ತಂದೆಯು ಬಂದು ನಮಗೆ ಓದಿಸುತ್ತಾರೆ, ಅವರು ಎಲ್ಲರ ತಂದೆಯಾಗಿದ್ದಾರೆ. ಸ್ತ್ರೀಯರು ಹಾಗೂ ಪುರುಷರು ಎಲ್ಲರೂ ತಮ್ಮನ್ನು ಆತ್ಮವೆಂದು ತಿಳಿಯುತ್ತಾರೆ. ತಂದೆಯೂ ಸಹ ಹೇ ಮಕ್ಕಳೇ ಎಂದು ಕರೆಯುತ್ತಾರೆ. ಮಕ್ಕಳೂ ಪ್ರತ್ಯುತ್ತರ ನೀಡುತ್ತೀರಿ- ಇದು ತಂದೆ ಮತ್ತು ಮಕ್ಕಳ ಮೇಳವಾಗಿದೆ. ಇದು ತಂದೆ-ಮಕ್ಕಳ ಮೇಳ, ಆತ್ಮ ಮತ್ತು ಪರಮಾತ್ಮನ ಮೇಳವು ಒಂದೇಬಾರಿ ಆಗುತ್ತದೆ ಎಂದು ಮಕ್ಕಳಿಗೆ ತಿಳಿದಿದೆ. ಮಕ್ಕಳು ಬಾಬಾ, ಬಾಬಾ ಎನ್ನುತ್ತಿರುತ್ತೀರಿ. ಬಾಬಾ ಶಬ್ಧವು ಬಹಳ ಮಧುರವಾಗಿದೆ. ಬಾಬಾ ಎಂದು ಹೇಳಿದಕೂಡಲೇ ಆಸ್ತಿಯು ನೆನಪಿಗೆ ಬರುತ್ತದೆ. ನೀವು ಚಿಕ್ಕವರಂತೂ ಅಲ್ಲ, ತಂದೆಯ ತಿಳುವಳಿಕೆಯು ಮಕ್ಕಳಿಗೆ ಬಹುಬೇಗ ತಿಳಿಯುತ್ತದೆ. ತಂದೆಯಿಂದ ಯಾವ ಆಸ್ತಿಯು ಸಿಗುತ್ತದೆ ಎಂಬುದು ಆ ಚಿಕ್ಕಮಗುವಂತೂ ತಿಳಿದುಕೊಳ್ಳಲು ಸಾಧ್ಯವಿಲ್ಲ. ಇಲ್ಲಿ ನೀವು ತಿಳಿದುಕೊಂಡಿದ್ದೀರಿ- ನಾವು ತಂದೆಯ ಬಳಿಬಂದಿದೆವೆ. ತಂದೆಯೂ ತಿಳಿಸುತ್ತಾರೆ- ಹೇ ಮಕ್ಕಳೇ ಎಂದು. ಅಂದಮೇಲೆ ಇದರಲ್ಲಿ ಎಲ್ಲಾ ಮಕ್ಕಳು ಬಂದುಬಿಟ್ಟಿರಿ. ಎಲ್ಲಾ ಆತ್ಮಗಳು ಮನೆಯಿಂದ ಇಲ್ಲಿಗೆ ಪಾತ್ರವನ್ನಭಿನಯಿಸಲು ಬರುತ್ತೀರಿ. ಯಾರ್ಯಾರು ಯಾವಾಗ ಪಾತ್ರವನ್ನಭಿನಯಿಸಲು ಬರುತ್ತಾರೆಂದು ಬುದ್ಧಿಯಲ್ಲಿದೆ. ಎಲ್ಲರ ವಿಭಾಗಗಳು ಬೇರೆ-ಬೇರೆಯಾಗಿವೆ, ಅಲ್ಲಿಂದ ಬರುತ್ತಾರೆ ಮತ್ತೆ ಕೊನೆಯಲ್ಲಿಯೂ ಸಹ ಎಲ್ಲರೂ ತಮ್ಮ-ತಮ್ಮ ವಿಭಾಗಗಳಿಗೆ ಹೋಗುತ್ತಾರೆ. ಇದೆಲ್ಲವೂ ನಾಟಕದಲ್ಲಿ ನಿಗಧಿಯಾಗಿದೆ. ತಂದೆಯು ಯಾರನ್ನೂ ಕಳುಹಿಸುವುದಿಲ್ಲ. ತಾನಾಗಿಯೇ ಈ ನಾಟಕವು ಮಾಡಲ್ಪಟ್ಟಿದೆ. ಪ್ರತಿಯೊಬ್ಬರೂ ತಮ್ಮ-ತಮ್ಮ ಧರ್ಮದಲ್ಲಿ ಬರುತ್ತಿರುತ್ತಾರೆ. ಬುದ್ಧನ ಧರ್ಮವು ಸ್ಥಾಪನೆಯಾಗಲಿಲ್ಲವೆಂದರೆ ಆ ಧರ್ಮದವರು ಯಾರೂ ಬರುವುದಿಲ್ಲ. ಮೊಟ್ಟಮೊದಲು ಸೂರ್ಯವಂಶಿ, ಚಂದ್ರವಂಶಿಯರೇ ಬರುತ್ತಾರೆ. ಯಾರು ತಂದೆಯಿಂದ ಬಹಳ ಚೆನ್ನಾಗಿ ಓದುವರೋ ಅವರೇ ನಂಬರ್ವಾರ್ ಸೂರ್ಯವಂಶ, ಚಂದ್ರವಂಶದಲ್ಲಿ ಶರೀರವನ್ನು ತೆಗೆದುಕೊಳ್ಳುತ್ತಾರೆ ಅಲ್ಲಿ ವಿಕಾರದ ಮಾತೇ ಇರುವುದಿಲ್ಲ. ಯೋಗಬಲದಿಂದ ಆತ್ಮವು ಬಂದು ಗರ್ಭದಲ್ಲಿ ಪ್ರವೇಶ ಮಾಡುತ್ತದೆ ಅದರಿಂದ ತಿಳಿಯುತ್ತಾರೆ- ನನ್ನ ಆತ್ಮವು ಈ ಶರೀರದಲ್ಲಿ ಹೋಗಿ ಪ್ರವೇಶ ಮಾಡುವುದು. ನಾವಾತ್ಮಗಳು ಯೋಗಬಲದಿಂದ ಹೋಗಿ ಈ ಶರೀರವನ್ನು ತೆಗೆದುಕೊಳ್ಳುತ್ತೇವೆ, ನಾನಾತ್ಮ ಈ ಶರೀರವನ್ನು ತೆಗೆದುಕೊಳ್ಳುತ್ತೇನೆಂದು ನನ್ನ ಆತ್ಮ ಈಗ ಪುನರ್ಜನ್ಮ ಪಡೆಯುತ್ತಿದೆಯೆಂದು ವೃದ್ಧರಿಗೆ ತಿಳಿಯುತ್ತದೆ, ಅದನ್ನು ತಂದೆಯೂ ತಿಳಿಯುತ್ತಾರೆ- ನಮ್ಮ ಬಳಿ ಮಗು ಬಂದಿದೆ. ಮಗುವಿನ ಆತ್ಮವು ಬರುತ್ತಿದೆ ಎಂಬುದು ಸಾಕ್ಷಾತ್ಕಾರವಾಗುತ್ತದೆ ಮತ್ತೆ ಅವರೂ ಸಹ ತಮ್ಮ ಬಗೆ ತಿಳಿಯುತ್ತಾರೆ- ನಾವು ಹೋಗಿ ಇನ್ನೊಂದು ಶರೀರದಲ್ಲಿ ಪ್ರವೇಶ ಮಾಡುತ್ತೇನೆ, ಈ ವಿಚಾರವೂ ಬರುತ್ತದೆಯಲ್ಲವೆ. ಅವಶ್ಯವಾಗಿ ಅಲ್ಲಿನ ನಿಯಮವಿರುತ್ತದೆ- ಮಗು ಯಾವ ವಯಸ್ಸಿನಲ್ಲಿ ಬರುವುದು ಎಂದು. ಅಲ್ಲಂತೂ ಎಲ್ಲವೂ ನಿಯಮಿತವಾಗಿಯೇ ನಡೆಯುತ್ತದೆಯಲ್ಲವೆ! ಅದಂತೂ ಮುಂದೆಹೋದಂತೆ ಅನುಭವವಾಗುವುದು. ಎಲ್ಲವೂ ತಿಳಿಯುವುದು. ಇಲ್ಲಿಯ ಹಾಗೆ 15-20 ವರ್ಷಗಳಲ್ಲಿ ಮಗುವಾಗುತ್ತದೆಯೆಂದಲ್ಲ. ಅಲ್ಲಿ 150 ವರ್ಷ ಆಯಸ್ಸಿರುವ ಕಾರಣ ಅವರ ಅರ್ಧ ವಯಸ್ಸಿಗೆ ಸ್ವಲ್ಪ ಮುಂಚೆ ಮಗುವಾಗುತ್ತದೆ ಏಕೆಂದರೆ ಅಲ್ಲಿ ಆಯಸ್ಸು ದೊಡ್ಡದಾಗಿರುತ್ತದೆ, ಒಂದೇ ಗಂಡು ಮಗುವಾಗುತ್ತದೆ ನಂತರ ಹೆಣ್ಣು ಮಗು ನಿಯಮಪೂರ್ವಕವಾಗಿ ಆಗುವುದು. ಮೊದಲು ಗಂಡು ಮಗುವಿನ ನಂತರ ಹೆಣ್ಣುಮಗುವಿನ ಆತ್ಮವು ಬರುತ್ತದೆ. ಮೊದಲು ಗಂಡು ಮಗು ಆಗಬೇಕೆಂದು ವಿವೇಕವು ಹೇಳುತ್ತದೆ, ಮೊದಲು ಪುರುಷ ನಂತರ ಸ್ತ್ರೀ. 8-10 ವರ್ಷ ತಡವಾಗಿ ಬರುತ್ತಾರೆ. ಮುಂದೆ ಹೋದಂತೆ ನೀವು ಮಕ್ಕಳಿಗೆ ಎಲ್ಲವೂ ಸಾಕ್ಷಾತ್ಕಾರವಾಗುವುದು. ಅಲ್ಲಿಯ ರೀತಿ-ಪದ್ಧತಿಗಳು ಹೇಗಿರುತ್ತದೆ ಎಂಬ ಹೊಸ ಪ್ರಪಂಚದ ಎಲ್ಲಾ ಮಾತುಗಳನ್ನು ತಂದೆಯು ಕುಳಿತು ತಿಳಿಸಿಕೊಡುತ್ತಾರೆ. ತಂದೆಯೇ ಹೊಸಪ್ರಪಂಚದ ಸ್ಥಾಪನೆ ಮಾಡುವವರಾಗಿದ್ದಾರೆ. ರೀತಿ-ನೀತಿಗಳನ್ನು ಅವಶ್ಯವಾಗಿ ತಿಳಿಸುತ್ತಾ ಹೋಗುತ್ತಾರೆ. ಮುಂದೆಹೋದಂತೆ ಇನ್ನೂ ಬಹಳ ತಿಳಿಸುತ್ತಾರೆ ಮತ್ತು ಆಗ ಸಾಕ್ಷಾತ್ಕಾರಗಳೂ ಆಗುತ್ತಾ ಹೋಗುತ್ತವೆ. ಅಲ್ಲಿ ಮಕ್ಕಳು ಹೇಗೆ ಜನಿಸುತ್ತಾರೆ ಎಂಬುದೇನೂ ಹೊಸಮಾತಲ್ಲ.

ನೀವಂತೂ ಇಂತಹ ಸ್ಥಾನಕ್ಕೆ ಹೋಗುತ್ತೀರಿ ಎಲ್ಲಿಗೆ ಕಲ್ಪ-ಕಲ್ಪವೂ ಹೋಗಲೇಬೇಕಾಗುತ್ತದೆ. ವೈಕುಂಠವಂತೂ ಈಗ ಸಮೀಪಕ್ಕೆ ಬಂದೇಬಿಟ್ಟಿದೆ. ಈಗಂತೂ ಬಹಳ ಹತ್ತಿರ ಬಂದು ತಲುಪಿದ್ದೀರಿ. ನೀವು ಎಷ್ಟು ಜ್ಞಾನ-ಯೋಗದಲ್ಲಿ ಶಕ್ತಿಶಾಲಿಗಳಾಗುತ್ತಾ ಹೋಗುತ್ತೀರೋ ಅಷ್ಟು ಪ್ರತಿಯೊಂದು ಮಾತೂ ಸಹ ನಿಮಗೆ ಸಮೀಪದಲ್ಲಿ ಕಾಣಿಸುವುದು. ಅನೇಕಬಾರಿ ನೀವು ಪಾತ್ರವನ್ನಭಿನಯಿಸಿದ್ದೀರಿ. ನಿಮಗೆ ತಿಳುವಳಿಕೆ ಸಿಕ್ಕಿದೆ ಅದನ್ನೇ ನೀವು ಜೊತೆ ತೆಗೆದುಕೊಂಡು ಹೋಗುತ್ತೀರಿ. ಅಲ್ಲಿ ಯಾವ ಸಂಪ್ರದಾಯವಿರುತ್ತದೆ ಎಂಬುದೆಲ್ಲವನ್ನೂ ಅರಿತುಕೊಳ್ಳುತ್ತೀರಿ. ಪ್ರಾರಂಭದಲ್ಲಿಯೇ ನಿಮಗೆ ಎಲ್ಲವೂ ಸಾಕ್ಷಾತ್ಕಾರವಾಗಿತ್ತು ಆದರೆ ಆ ಸಮಯದಲ್ಲಿ ಇನ್ನೂ ಮೊದಲಿನ ಪಾಠವನ್ನು ಓದುತ್ತಿದ್ದಿರಿ, ಕೊನೆಯಲ್ಲಿಯೂ ನಿಮಗೆ ಸಾಕ್ಷಾತ್ಕಾರವಾಗಬೇಕು. ಅದನ್ನು ತಂದೆಯು ಕುಳಿತು ತಿಳಿಸುತ್ತಾರೆ. ನಿಮಗೆ ಅದೆಲ್ಲವನ್ನೂ ನೋಡುವ ಬಯಕೆಯು ಇಲ್ಲಿಯೇ ಆಗುವುದು ಆದ್ದರಿಂದ ಈ ಶರೀರವು ಬೇಗನೆ ಬಿಡಬಾರದು ಎಲ್ಲವನ್ನೂ ನೋಡಿ ಹೋಗಬೇಕೆಂದು ತಿಳಿಯುತ್ತೀರಿ, ಇದರಲ್ಲಿ ಆಯಸ್ಸನ್ನು ಹೆಚ್ಚಿಸಿಕೊಳ್ಳಲು ಯೋಗಬಲ ಬೇಕು ಅದರಿಂದ ತಂದೆಯಿಂದ ಎಲ್ಲವನ್ನೂ ಕೇಳಬೇಕು ಮತ್ತು ನೋಡಬೇಕು. ಯಾರು ಮೊದಲು ಹೋಗಿಬಿಟ್ಟರೋ ಅವರ ಚಿಂತೆ ಮಾಡಬಾರದು. ಅದಂತೂ ನಾಟಕದಲ್ಲಿ ಅದೇ ಪಾತ್ರವಿತ್ತು. ತಂದೆಯಿಂದ ಹೆಚ್ಚಿನ ಪ್ರೀತಿಯನ್ನು ತೆಗೆದುಕೊಳ್ಳುವುದು ಅವರ ಅದೃಷ್ಟದಲ್ಲಿರಲಿಲ್ಲ ಏಕೆಂದರೆ ಎಷ್ಟೆಷ್ಟು ನೀವು ಸೇವಾಧಾರಿಗಳಾಗುತ್ತೀರೋ ಅಷ್ಟೂ ತಂದೆಗೆ ಬಹಳ-ಬಹಳ ಪ್ರಿಯರಾಗುತ್ತೀರಿ. ಎಷ್ಟು ಸರ್ವೀಸ್ ಮಾಡುತ್ತೀರೋ, ತಂದೆಯನ್ನು ನೆನಪು ಮಾಡುತ್ತೀರೋ ಅಷ್ಟು ನೆನಪು ಸ್ಥಿರವಾಗುತ್ತಾ ಹೋಗುವುದು, ನಿಮಗೆ ಬಹಳ ಮಜಾ ಇರುವುದು. ಈಗ ನೀವು ಈಶ್ವರೀಯ ಸಂತಾನರಾಗುತ್ತೀರಿ. ತಂದೆಯು ತಿಳಿಸುತ್ತಾರೆ- ನೀವಾತ್ಮರು ನನ್ನ ಬಳಿಯಿದ್ದಿರಲ್ಲವೆ. ಭಕ್ತಿಯಲ್ಲಿ ಮುಕ್ತಿಗಾಗಿ ಬಹಳ ಪರಿಶ್ರಮಪಡುತ್ತಾರೆ. ಜೀವನ್ಮುಕ್ತಿಯನ್ನಂತೂ ತಿಳಿದುಕೊಂಡಿಲ್ಲ, ಇದು ಬಹಳ ಪ್ರಿಯವಾದ ಜ್ಞಾನವಾಗಿದೆ, ಬಹಳ ಪ್ರೀತಿಯಿರುತ್ತದೆ. ತಂದೆ ತಂದೆಯೂ ಆಗಿದ್ದಾರೆ, ಶಿಕ್ಷಕನೂ ಆಗಿದ್ದಾರೆ, ಸದ್ಗುರುವೂ ಆಗಿದ್ದಾರೆ. ಸತ್ಯ-ಸತ್ಯ ಪರಮಾತ್ಮನಾಗಿದ್ದಾರೆ, ಅವರು ನಮ್ಮನ್ನು 21 ಜನ್ಮಗಳಿಗಾಗಿ ಸುಖಧಾಮಕ್ಕೆ ಕರೆದುಕೊಂಡು ಹೋಗುತ್ತಾರೆ, ಆತ್ಮವೇ ದುಃಖಿಯಾಗುತ್ತದೆ, ಸುಖ-ದುಃಖವನ್ನು ಆತ್ಮವೇ ಅನುಭವ ಮಾಡುತ್ತದೆ. ಪಾಪಾತ್ಮ, ಪುಣ್ಯಾತ್ಮ ಎಂದು ಹೇಳಲಾಗುತ್ತದೆ. ಈಗ ಎಲ್ಲಾ ದುಃಖಗಳಿಂದ ನಮ್ಮನ್ನು ಮುಕ್ತರನ್ನಾಗಿ ಮಾಡಲು ತಂದೆಯು ಬಂದಿದ್ದಾರೆ, ಈಗ ನೀವು ಮಕ್ಕಳು ಬೇಹದ್ದಿನಲ್ಲಿ ಹೋಗಬೇಕಾಗಿದೆ, ಎಲ್ಲರೂ ಸುಖಿಯಾಗಿಬಿಡುತ್ತೀರಿ, ಇಡೀ ಪ್ರಪಂಚವೇ ಸುಖವಾಗಿಬಿಡುತ್ತದೆ. ನಾಟಕದಲ್ಲಿಯಾರದು ಏನು ಪಾತ್ರವಿದೆ, ಅದನ್ನೂ ನೀವು ತಿಳಿದುಕೊಂಡಿದ್ದೀರಿ. ನೀವು ಎಷ್ಟೊಂದು ಖುಷಿಯಲ್ಲಿರುತ್ತೀರಿ, ನಮ್ಮನ್ನು ಸ್ವರ್ಗದಲ್ಲಿ ಕರೆದುಕೊಂಡು ಹೋಗಲು ತಂದೆಯು ಬಂದಿದ್ದಾರೆ. ನಾವೆಲ್ಲಾ ಆತ್ಮಗಳನ್ನು ಸ್ವರ್ಗದಲ್ಲಿ ಕರೆದುಕೊಂಡು ಹೋಗುತ್ತಾರೆ. ತಂದೆಯು ಧೈರ್ಯವನ್ನು ಕೊಡುತ್ತಾರೆ- ಮಧುರಾತಿ ಮಧುರ ಮಕ್ಕಳೇ, ನಾನು ನಿಮ್ಮನ್ನು ಎಲ್ಲಾ ದುಃಖಗಳಿಂದ ದೂರ ಮಾಡಲು ಬಂದಿದ್ದೇನೆ ಅಂದಾಗ ಇಂತಹ ತಂದೆಯಲ್ಲಿ ಎಷ್ಟೊಂದು ಪ್ರೀತಿಯಿರಬೇಕು! ಎಲ್ಲಾ ಸಂಬಂಧಗಳು ನಿಮಗೆ ದುಃಖ ಕೊಟ್ಟಿವೆ. ಇದು ದುಃಖದಾಯಿ ಸಂತಾನವಾಗಿದೆ. ನೀವು ದುಃಖಿಯಾಗುತ್ತಾ ದುಃಖದ ಮಾತುಗಳನ್ನೇ ಕೇಳುತ್ತಾ ಬಂದಿದ್ದೀರಿ. ಈಗ ತಂದೆಯು ಎಲ್ಲಾ ಮಾತುಗಳನ್ನು ತಿಳಿಸುತ್ತಿದ್ದಾರೆ. ನಿಮಗೆ ಅನೇಕಬಾರಿ ತಿಳಿಸಿದ್ದಾರೆ ಮತ್ತು ಚಕ್ರವರ್ತಿ ರಾಜರನ್ನಾಗಿ ಮಾಡಿದ್ದಾರೆ ಅಂದಮೇಲೆ ಯಾವ ತಂದೆಯು ನಮ್ಮನ್ನು ಇಂತಹ ಸ್ವರ್ಗದ ಮಾಲೀಕರನ್ನಾಗಿ ಮಾಡುತ್ತಾರೆಯೋ ಅವರ ಪ್ರತಿ ಎಷ್ಟೊಂದು ಪ್ರೀತಿಯಿರಬೇಕು. ನೀವು ಒಬ್ಬ ತಂದೆಯನ್ನೇ ನೆನಪು ಮಾಡುತ್ತೀರಿ, ತಂದೆಯ ವಿನಃ ಮತ್ತ್ಯಾರೊಂದಿಗೂ ಸಂಬಂಧವಿಲ್ಲ. ಆತ್ಮಕ್ಕೇ ತಿಳಿಸಲಾಗುತ್ತದೆ. ನಾವು ಶ್ರೇಷ್ಠತಂದೆಯ ಮಕ್ಕಳಾಗಿದ್ದೇವೆ. ಈಗ ಹೇಗೆ ನಮಗೆ ಮಾರ್ಗವು ಸಿಕ್ಕಿದೆಯೋ ಮತ್ತೆ ಅನ್ಯರಿಗೂ ಸುಖದ ಮಾರ್ಗವನ್ನು ತಿಳಿಸಬೇಕು. ನಿಮಗೆ ಕೇವಲ ಅರ್ಧಕಲ್ಪಕ್ಕಾಗಿಯೇ ಅಲ್ಲ, ಮುಕ್ಕಾಲು ಕಲ್ಪಕ್ಕಾಗಿ ಸುಖ ಸಿಗುತ್ತದೆ. ನಿಮ್ಮ ಮೇಲೂ ಕೆಲವರು ಬಲಿಹಾರಿಯಾಗುತ್ತಾರೆ ಏಕೆಂದರೆ ನೀವು ಸಂದೇಶವನ್ನು ತಿಳಿಸಿ ಎಲ್ಲರ ದುಃಖವನ್ನು ದೂರ ಮಾಡುತ್ತೀರಿ.

ನಿಮಗೆ ತಿಳಿದಿದೆ- ಈ ಬ್ರಹ್ಮಾರವರಿಗೂ ಸಹ ಈ ಜ್ಞಾನವು ಪಾರಲೌಕಿಕ ತಂದೆಯಿಂದಲೇ ಸಿಗುತ್ತದೆ. ನಂತರ ಇವರು ನಮಗೆ ಪರಿಚಯ ನೀಡುತ್ತಾರೆ ಮತ್ತೆ ನಾವು ಅನ್ಯರಿಗೆ ಸಂದೇಶ ತಿಳಿಸುತ್ತೇವೆ. ತಂದೆಯ ಪರಿಚಯವನ್ನು ಕೊಡುತ್ತಾ ಎಲ್ಲಾ ಮಕ್ಕಳನ್ನು ಅಜ್ಞಾನದ ನಿದ್ರೆಯಿಂದ ಜಾಗೃತ ಮಾಡುತ್ತಾ ಇರುತ್ತೀರಿ. ಭಕ್ತಿಗೆ ಅಜ್ಞಾನವೆಂದು ಹೇಳಲಾಗುತ್ತದೆ, ಜ್ಞಾನ ಮತ್ತು ಭಕ್ತಿ ಬೇರೆ-ಬೇರೆಯಾಗಿದೆ. ಜ್ಞಾನಸಾಗರ ತಂದೆಯು ಈಗ ನೀವು ಮಕ್ಕಳಿಗೆ ಜ್ಞಾನವನ್ನು ಕಲಿಸುತ್ತಾರೆ. ನಿಮ್ಮ ಮನಸ್ಸಿನಲ್ಲಿಯೂ ಬರುತ್ತದೆ- ಬಾಬಾ, ಪ್ರತೀ 5000 ವರ್ಷಗಳ ನಂತರ ಬಂದು ನಮ್ಮನ್ನು ಜಾಗೃತಗೊಳಿಸುತ್ತಾರೆ. ನಾವಾತ್ಮ ಜ್ಯೋತಿಯಲ್ಲಿ ಇನ್ನು ಸ್ವಲ್ಪವೇ ಎಣ್ಣೆಯಿದೆ ಆದ್ದರಿಂದ ತಂದೆಯು ಈಗ ಮತ್ತೆ ಜ್ಞಾನದ ಎಣ್ಣೆಯನ್ನು ಹಾಕಿ ದೀಪವನ್ನು ಬೆಳಗಿಸುತ್ತಾರೆ. ಯಾವಾಗ ತಂದೆಯನ್ನು ನೆನಪು ಮಾಡುತ್ತೀರೋ ಆಗ ಆತ್ಮರೂಪಿ ದೀಪವು ಪ್ರಜ್ವಲಿತವಾಗುತ್ತದೆ, ಆತ್ಮದಲ್ಲಿ ಏರಿರುವ ತುಕ್ಕು ತಂದೆಯ ನೆನಪಿನಿಂದಲೇ ಇಳಿಯುತ್ತದೆ, ಇದರಲ್ಲಿಯೇ ಮಾಯೆಯ ಯುದ್ಧವೂ ನಡೆಯುತ್ತದೆ. ಮಾಯೆಯು ಪದೇ-ಪದೇ ಮರೆಸಿಬಿಡುತ್ತದೆ ಮತ್ತು ತುಕ್ಕು ಇಳಿಯುವ ಬದಲು ಇನ್ನೂ ಏರುತ್ತಾಹೋಗುತ್ತದೆ ಅಂದರೆ ಎಷ್ಟು ಇಳಿದಿತ್ತೋ ಅದಕ್ಕಿಂತಲೂ ಹೆಚ್ಚು ಏರುತ್ತಾಹೋಗುತ್ತದೆ ಆದ್ದರಿಂದ ತಂದೆಯು ತಿಳಿಸುತ್ತಾರೆ- ಮಕ್ಕಳೇ, ನೆನಪು ಮಾಡಿ ಆಗ ತುಕ್ಕು ಬಿಟ್ಟುಹೋಗುವುದು. ಇದರಲ್ಲಿ ಪರಿಶ್ರಮವಿದೆ. ಶರೀರದ ಆಕರ್ಷಣೆಯಾಗಬಾರದು ಆತ್ಮಾಭಿಮಾನಿಗಳಾಗಿ. ನಾವಾತ್ಮರಾಗಿದ್ದೇವೆ, ತಂದೆಯ ಬಳಿ ಶರೀರಸಹಿತವಾಗಿ ಹೋಗಲು ಸಾಧ್ಯವಿಲ್ಲ. ಶರೀರದಿಂದ ಬೇರೆಯಾಗಿಯೇ ಹೋಗಬೇಕಾಗಿದೆ. ಆತ್ಮವನ್ನು ನೋಡುವುದರಿಂದ ತುಕ್ಕು ಇಳಿಯುತ್ತದೆ, ಶರೀರವನ್ನು ನೋಡುವುದರಿಂದ ತುಕ್ಕು ಏರುತ್ತದೆ. ಕೆಲವೊಮ್ಮೆ ಇಳಿಯುತ್ತದೆ, ಕೆಲವೊಮ್ಮೆ ಏರುತ್ತದೆ- ಇದು ನಡೆಯುತ್ತಲೇ ಇರುತ್ತದೆ. ಕೆಲವೊಮ್ಮೆ ಕೆಳಗೆ ಕೆಲವೊಮ್ಮೆ ಮೇಲೆ, ಇದು ಬಹಳ ನಾಜೂಕಾದ ಮಾತಾಗಿದೆ. ಈ ರೀತಿ ಆಗುತ್ತಾ-ಆಗುತ್ತಾ ಅಂತಿಮದಲ್ಲಿ ಕರ್ಮಾತೀತ ಸ್ಥಿತಿಯನ್ನು ಪಡೆಯುತ್ತೀರಿ. ಮುಖ್ಯವಾಗಿ ಪ್ರತಿಯೊಂದು ಮಾತಿನಲ್ಲಿ ಕಣ್ಣುಗಳೇ ಮೋಸ ಮಾಡುತ್ತವೆ ಆದ್ದರಿಂದ ಶರೀರವನ್ನು ನೋಡಬೇಡಿ, ನಮ್ಮ ಬುದ್ಧಿಯು ಶಾಂತಿಧಾಮ, ಸುಖಧಾಮದ ಕಡೆ ಜೋಡಣೆಯಾಗಿದೆ ಮತ್ತು ದೈವೀಗುಣಗಳನ್ನೂ ಧಾರಣೆ ಮಾಡಬೇಕಾಗಿದೆ. ಶುದ್ಧ ಆಹಾರವನ್ನು ಸೇವೆ ಮಾಡಬೇಕು ಏಕೆಂದರೆ ದೇವತೆಗಳದು ಪವಿತ್ರಭೋಜನವಾಗಿದೆ. ವೈಷ್ಣವ ಶಬ್ಧವು ವಿಷ್ಣುವಿನಿಂದ ಬಂದಿದೆ. ದೇವತೆಗಳೆಂದೂ ಕೊಳಕು ಪದಾರ್ಥಗಳನ್ನು ತಿನ್ನುವುದಿಲ್ಲ, ವಿಷ್ಣುವಿನ ಮಂದಿರವಿದೆ, ವಿಷ್ಣುವಿಗೆ ನರ-ನಾರಾಯಣನೆಂದು ಕರೆಯುತ್ತಾರೆ. ಈಗ ಲಕ್ಷ್ಮೀ-ನಾರಾಯಣರಂತೂ ಸಾಕಾರಿ ಮನುಷ್ಯರಾದರು ಅಂದಮೇಲೆ ಅವರಿಗೆ ನಾಲ್ಕುಭುಜಗಳಿರಬಾರದು ಆದರೆ ಭಕ್ತಿಮಾರ್ಗದಲ್ಲಿ ಅವರಿಗೂ ನಾಲ್ಕು ಭುಜಗಳನ್ನು ತೋರಿಸಿದ್ದಾರೆ. ಇದಕ್ಕೆ ಬೇಹದ್ದಿನ ಅಜ್ಞಾನವೆಂದು ಹೇಳಲಾಗುತ್ತದೆ. ನಾಲ್ಕುಭುಜಗಳಿರುವ ಮನುಷ್ಯರಿರಲು ಸಾಧ್ಯವಿಲ್ಲ ಎಂಬುದನ್ನು ತಿಳಿದುಕೊಳ್ಳುವುದೇ ಇಲ್ಲ. ಸತ್ಯಯುಗದಲ್ಲಿ ಎರಡುಭುಜದವರಿರುತ್ತಾರೆ, ಬ್ರಹ್ಮಾನಿಗೂ ಎರಡು ಭುಜಗಳಿವೆ. ಬ್ರಹ್ಮಾರವರ ಮಗಳು ಸರಸ್ವತಿ ಇಬ್ಬರನ್ನೂ ಸೇರಿಸಿ ನಾಲ್ಕುಭುಜಗಳನ್ನು ತೋರಿಸಿದ್ದಾರೆ. ವಾಸ್ತವದಲ್ಲಿ ಸರಸ್ವತಿ, ಬ್ರಹ್ಮಾರವರ ಸ್ತ್ರಿ ಅಲ್ಲ, ಪ್ರಜಾಪಿತ ಬ್ರಹ್ಮಾರವರ ಮಗಳಾಗಿದ್ದಾರೆ. ಎಷ್ಟೆಷ್ಟು ಮಕ್ಕಳು ದತ್ತು ಆಗುತ್ತಾ ಹೋಗುತ್ತಾರೆಯೋ ಅಷ್ಟು ಬ್ರಹ್ಮಾರವರಿಗೆ ಭುಜಗಳು ಹೆಚ್ಚಾಗುತ್ತಾಹೋಗುತ್ತದೆ. ಬ್ರಹ್ಮಾರವರಿಗೇ 1ಂ8 ಭುಜಗಳೆಂದು ಹೇಳುತ್ತಾರೆ, ವಿಷ್ಣು ಅಥವಾ ಶಂಕರನಿಗೆ ಹೇಳುವುದಿಲ್ಲ. ಬ್ರಹ್ಮಾರವರಿಗೆ ಅನೇಕ ಭುಜಗಳಿವೆ. ಭಕ್ತಿಮಾರ್ಗದಲ್ಲಂತೂ ಏನೂ ತಿಳುವಳಿಕೆಯಿಲ್ಲ ತಂದೆಯು ಬಂದು ಮಕ್ಕಳಿಗೆ ತಿಳಿಸುತ್ತಾರೆ ಮತ್ತು ನೀವೂ ಹೇಳುತ್ತೀರಿ- ತಂದೆಯು ಬಂದು ನಮ್ಮನ್ನು ಬುದ್ಧಿವಂತರನ್ನಾಗಿ ಮಾಡಿದ್ದಾರೆ. ನಾವು ಶಿವನ ಭಕ್ತರಾಗಿದ್ದೇವೆಂದು ಹೇಳುತ್ತೀರಿ-ತಂದೆಯು ಬಂದು ನಮ್ಮನ್ನು ಬುದ್ಧಿವಂತರನ್ನಾಗಿ ಮಾಡಿದ್ದಾರೆ. ನಾವು ಶಿವನ ಭಕ್ತರಾಗಿದ್ದೇವೆಂದು ಹೇಳುತ್ತಾರೆ. ಒಳ್ಳೆಯದು, ನೀವು ಶಿವನನ್ನು ಏನೆಂದು ತಿಳಿದಿದ್ದೀರಿ? ಈಗ ಮಕ್ಕಳಿಗೆ ತಿಳಿದಿದೆ- ಶಿವತಂದೆಯು ಎಲ್ಲಾ ಆತ್ಮಗಳ ತಂದೆಯಾಗಿದ್ದಾರೆ ಆದ್ದರಿಂದ ಅವರ ಪೂಜೆ ಮಾಡುತ್ತಾರೆ. ಮುಖ್ಯಮಾತನ್ನು ತಂದೆಯು ತಿಳಿಸುತ್ತಾರೆ- ನನ್ನೊಬ್ಬನನ್ನೇ ನೆನಪು ಮಾಡಿ, ಹೇ ಪತಿತ-ಪಾವನ ಬಂದು ನಮ್ಮನ್ನು ಪಾವನ ಮಾಡು ಎಂದು ನೀವೇ ಕರೆದಿರಿ. ಪತಿತ-ಪಾವನ ಸೀತಾರಾಮ ಎಂದು ಎಲ್ಲರೂ ಕರೆಯುತ್ತಲೇ ಇರುತ್ತಾರೆ. ಇವರೂ ಸಹ ಹಾಡುತ್ತಿದ್ದರು ಆದರೆ ಸ್ವಯಂ ತಂದೆಯೇ ಬಂದು ನನ್ನಲ್ಲಿ ಪ್ರವೇಶ ಮಾಡುತ್ತಾರೆಂದು ಇವರಿಗೆ ತಿಳಿದಿರಲಿಲ್ಲ. ಎಷ್ಟು ವಿಚಿತ್ರವಾಗಿದೆ, ಎಂದೂ ವಿಚಾರದಲ್ಲಿಯೂ ಇರಲಿಲ್ಲ. ಇದೇನಾಗುತ್ತಿದೆ, ನಾನು ಯಾರನ್ನು ನೋಡಿದರೂ ಅವರಿಗೆ ಆಕರ್ಷಣೆಯಾಗುತ್ತಿದೆ ಎಂದು ಮೊದಲು ಆಶ್ಚರ್ಯಚಕಿತರಾಗುತ್ತಿದ್ದರು, ಶಿವತಂದೆಯು ಆಕರ್ಷಣೆ ಮಾಡುತ್ತಿದ್ದರು. ಯಾರೇ ಸಮ್ಮುಖದಲ್ಲಿ ಕುಳಿತರೆ ಧ್ಯಾನದಲ್ಲಿ ಹೋಗಿಬಿಡುತ್ತಿದ್ದರು. ಆಗ ಇದೇನಾಗುತ್ತಿದೆ ಎಂದು ಆಶ್ಚರ್ಯವಾಗುತ್ತಿತ್ತು ಆದ್ದರಿಂದ ಈ ಮಾತುಗಳನ್ನು ಅರಿತುಕೊಳ್ಳಲು ಏಕಾಂತವು ಬೇಕೆನಿಸಿತು, ಆಗ ವೈರಾಗ್ಯವೂ ಬಂದಿತು. ಎಲ್ಲಿ ಹೋಗುವುದೆಂದು ಯೋಚಿಸಿ ಬನಾರಸ್ಗೆ ಹೋಗಬೇಕೆಂದು ತೀರ್ಮಾನಿಸಿದರು. ಇದು ಶಿವತಂದೆಯ ಆಕರ್ಷಣೆಯಾಗಿತ್ತು. ಆ ಆಕರ್ಷಣೆ ಇವರಿಗೂ ಸಹ ಆಗುತ್ತಿತ್ತು ಆದ್ದರಿಂದ ಇಷ್ಟೆಲ್ಲಾ ವ್ಯಾಪಾರ-ವ್ಯವಹಾರವನ್ನು ಬಿಟ್ಟು ಹೊರಟರು. ಪಾಪ! ಅವರಿಗೆ ಇವರು ಏಕೆ ಬನಾರಸಿಗೆ ಹೋಗುತ್ತಾರೆಂದು ಏನು ಗೊತ್ತು? ಮತ್ತೆ ಅಲ್ಲಿ ಉದ್ಯಾನವನದಲ್ಲಿ ಹೋಗಿ ನಿಂತರು. ಅಲ್ಲಿ ಪೆನ್ಸಿಲನ್ನು ಹಿಡಿದು ಗೋಡೆಗಳ ಮೇಲೆ ಚಕ್ರವನ್ನು ಚಿತ್ರಿಸುತ್ತಿದ್ದರು. ಶಿವತಂದೆಯು ಇವರ ಮೂಲಕ ಏನು ಮಾಡಿಸುತ್ತಿದ್ದರೋ ಅದು ತಿಳಿಯುತ್ತಿರಲೇ ಇಲ್ಲ. ರಾತ್ರಿಯಲ್ಲಿ ನಿದ್ರೆ ಬಂದುಬಿಡುತ್ತಿತ್ತು ಆಗಲೂ ಸಹ ಎಲ್ಲಿಯೋ ಹಾರಿಹೋಗುತ್ತಿದ್ದೇನೆ ಎಂದು ಅನಿಸುತ್ತಿತ್ತು ಮತ್ತೆ ಹಾಗೆ ಕೆಳಗೆ ಬಂದುಬಿಡುತ್ತಿದ್ದರು, ಏನೂ ಅರ್ಥವಾಗುತ್ತಿರಲಿಲ್ಲ. ಪ್ರಾರಂಭದಲ್ಲಿ ಎಷ್ಟೊಂದು ಸಾಕ್ಷಾತ್ಕಾರಗಳಾಗುತ್ತಿತ್ತು. ಮಕ್ಕಳು ಕುಳಿತು-ಕುಳಿತಿದ್ದಂತೆಯೇ ಧ್ಯಾನದಲ್ಲಿ ಹೊರಟುಹೋಗುತ್ತಿದ್ದರು. ನೀವು ಹೇಳುತ್ತೀರಿ ನಾವು ಬಹಳಷ್ಟನ್ನು ನೋಡಿದ್ದೇವೋ ಅದನ್ನು ನೀವು ಎಷ್ಟು ನೋಡಿದ್ದೀರಿ ಆದರೆ ತಾವು ನೋಡಿಲ್ಲವೆಂದು ಹೇಳುತ್ತೀರಿ ಮತ್ತೆ ಅಂತಿಮದಲ್ಲಿಯೂ ಸಹ ತಂದೆಯು ಬಹಳ ಸಾಕ್ಷಾತ್ಕಾರಗಳನ್ನು ಮಾಡಿಸುತ್ತಾರೆ. ಏಕೆಂದರೆ ಸಮೀಪವಾಗುತ್ತಾ ಹೋಗುತ್ತೀರಿ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತ ಬಾಪ್ದಾದಾರವರ ನೆನಪು ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ತಂದೆಯ ಸಂದೇಶವನ್ನು ತಿಳಿಸಿ ಎಲ್ಲರ ದುಃಖವನ್ನು ದೂರ ಮಾಡಬೇಕಾಗಿದೆ. ಎಲ್ಲರಿಗೆ ಸುಖದ ಮಾರ್ಗವನ್ನು ತಿಳಿಸಬೇಕಾಗಿದೆ. ಸೀಮಿತದಿಂದ ಹೊರಬಂದು ಬೇಹದ್ದಿನಲ್ಲಿ ಹೋಗಬೇಕಾಗಿದೆ.

2. ಅಂತಿಮದ ಎಲ್ಲಾ ಸಾಕ್ಷಾತ್ಕಾರಗಳನ್ನು ನೋಡಲು ಹಾಗೂ ತಂದೆಯ ಪ್ರೀತಿಯ ಪಾಲನೆಯನ್ನು ಪಡೆಯಲು ಜ್ಞಾನ-ಯೋಗದಲ್ಲಿ ಶಕ್ತಿಶಾಲಿಗಳಾಗಬೇಕು. ಅನ್ಯರ ಚಿಂತೆ ಮಾಡದೆ ಯೋಗಬಲದಿಂದ ತಮ್ಮ ಆಯಸ್ಸನ್ನು ಹೆಚ್ಚಿಸಿಕೊಳ್ಳಬೇಕು.

ವರದಾನ:
ಹುಡುಗಾಟಿಕೆ ಮತ್ತು ಅಟೆನ್ಷನ್ನ ಅಭಿಮಾನ ತೊರೆದು ತಂದೆಯ ಸಹಾಯಕ್ಕೆ ಪಾತ್ರರಾಗುವಂತಹ ಸಹಜ ಪುರುಷಾರ್ಥಿ ಭವ.

ಕೆಲವು ಮಕ್ಕಳು ಸಾಹಸ ಇಡುವ ಬದಲು ಹುಡುಗಾಟಿಕೆಯ ಕಾರಣ ಅಭಿಮಾನದಲ್ಲಿ ಬಂದುಬಿಡುತ್ತಾರೆ ನಾವಂತೂ ಸದಾ ಪಾತ್ರರಾಗಿದ್ದೇವೆ, ತಂದೆ ನಮಗೆ ಸಹಾಯ ಮಾಡದೆ ಬೇರೆಯಾರಿಗೆ ಮಾಡುತ್ತಾರೆ! ಈ ಅಭಿಮಾನದ ಕಾರಣ ಸಾಹಸದ ವಿಧಿಯನ್ನು ಮರೆತುಬಿಡುತ್ತಾರೆ. ಕೆಲವರಲ್ಲಿ ಸ್ವಯಂನ ಮೇಲೆ ಗಮನ ಕೊಡುವುದರಲ್ಲಿಯೂ ಅಭಿಮಾನ ವಿರುವ ಕಾರಣ ಸಹಾಯದಿಂದಲೂ ವಂಚಿತರನ್ನಾಗಿ ಮಾಡಿಬಿಡುತ್ತಾರೆ. ತಿಳಿಯುತ್ತಾರೆ ನಾವಂತೂ ಬಹಳ ಯೋಗ ಮಾಡಿದ್ದೇವೆ, ಜ್ಞಾನಿ-ಯೋಗಿ ಆತ್ಮ ರಾಗಿದ್ದೇವೆ..... ಈ ಪ್ರಕಾರದ ಅಭಿಮಾನವನ್ನು ಬಿಟ್ಟು ಸಾಹಸದ ಆಧಾರದ ಮೇಲೆ ಸಹಾಯಕ್ಕೆ ಪಾತ್ರರಾದರೆ ಸಹಜ ಪುರುಷಾರ್ಥಿಗಳಾಗುವಿರಿ.

ಸ್ಲೋಗನ್:
ಯಾವ ವ್ಯರ್ಥ ಮತ್ತು ನೆಗೆಟೀವ್ ಸಂಕಲ್ಪ ನಡೆಯುತ್ತದೆ ಅದನ್ನು ಪರಿವರ್ತನೆ ಮಾಡಿ ವಿಶ್ವಕಲ್ಯಾಣದ ಕಾರ್ಯದಲ್ಲಿ ತೊಡಗಿಸಿ.