27.07.24 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ- ತಂದೆಯ
ಸಮಾನ ದಯಾಹೃದಯಿ ಹಾಗೂ ಕಲ್ಯಾಣಕರಿಗಳಾಗಿ, ಯಾರು ತಾವೂ ಪುರುಷಾರ್ಥ ಮಾಡಿ ಮತ್ತು ಅನ್ಯರಿಂದಲೂ
ಮಾಡಿಸುತ್ತಾರೆ ಅವರೇ ಬುದ್ಧಿವಂತರಾಗಿದ್ದಾರೆ”
ಪ್ರಶ್ನೆ:
ನೀವು ಮಕ್ಕಳು
ತಮ್ಮ ವಿದ್ಯೆಯಿಂದ ಯಾವ ಪರಿಶೀಲನೆ ಮಾಡಿಕೊಳ್ಳಬಹುದು, ನಿಮ್ಮ ಪುರುಷಾರ್ಥವೇನಾಗಿದೆ?
ಉತ್ತರ:
ವಿದ್ಯೆಯಿಂದ
ನೀವು ಪರಿಶೀಲನೆ ಮಾಡಿಕೊಳ್ಳಬಹುದು- ನಾವು ಮ ಪಾತ್ರವನ್ನು ಅಭಿನಯಿಸುತ್ತಿದ್ದೇವೆಯೇ ಇಲ್ಲವೆ
ಮಧ್ಯಮ ಅಥವಾ ಕನಿಷ್ಠವೇ! ಯಾರು ಅನ್ಯರನ್ನೂ ಮರನ್ನಾಗಿಮಾಡುವರೋ ಅಂದರೆ ಸೇವೆ ಮಾಡಿ ಬ್ರಾಹ್ಮಣರ
ವೃದ್ಧಿ ಮಾಡುವರೋ ಅವರದೇ ಎಲ್ಲರಿಗಿಂತ ಮ ಪಾತ್ರವೆಂದು ಹೇಳಬಹುದು. ನಿಮ್ಮ ಪುರುಷಾರ್ಥವೇ ಆಗಿದೆ-
ಹಳೆಯ ಪಾದರಕ್ಷೆ (ಶರೀರ)ಯನ್ನು ಕಳಚಿ ಹೊಸಪಾದರಕ್ಷೆಯನ್ನು ತೆಗೆದುಕೊಳ್ಳುವುದು. ಯಾವಾಗ ಆತ್ಮವು
ಪವಿತ್ರವಾಗುವುದೋ ಆಗ ಅದಕ್ಕೆ ಹೊಸ ಪವಿತ್ರವಾದ ಶರೀರವು ಸಿಗುತ್ತದೆ.
ಓಂ ಶಾಂತಿ.
ಮಕ್ಕಳು ಎರಡೂ ಕಡೆ ಸಂಪಾದನೆ ಮಾಡುತ್ತಿದ್ದೀರಿ, ಒಂದುಕಡೆ ನೆನಪಿನ ಯಾತ್ರೆಯಿಂದ
ಸಂಪಾದನೆಯಾಗುತ್ತಿದೆ ಮತ್ತು ಇನ್ನೊಂದುಕಡೆ 84 ಜನ್ಮಗಳ ಚಕ್ರದ ಜ್ಞಾನದ ಸ್ಮರಣೆ ಮಾಡುವುದರಿಂದ
ಸಂಪಾದನೆಯಾಗುತ್ತಿದೆ, ಇದಕ್ಕೆ ಡಬಲ್ ಲಾಭವೆಂದು ಹೇಳಲಾಗುತ್ತದೆ ಮತ್ತು ಜ್ಞಾನವಿಲ್ಲದ ಸಮಯದಲ್ಲಿ
ಅಲ್ಪಕಾಲದ ಕ್ಷಣಭಂಗುರದ ಒಂದು ಸಂಪಾದನೆಯಾಗುವುದು. ಈಗ ಈ ನಿಮ್ಮ ನೆನಪಿನ ಯಾತ್ರೆಯ ಸಂಪಾದನೆಯು
ಬಹಳ ದೊಡ್ಡದಾಗಿದೆ, ಆಯಸ್ಸೂ ಸಹ ಧೀರ್ಘವಾಗಿಬಿಡುತ್ತದೆ, ಪವಿತ್ರರೂ ಆಗುತ್ತೀರಿ. ಎಲ್ಲಾ
ದುಃಖಗಳಿಂದ ಮುಕ್ತರಾಗುತ್ತೀರಿ. ಬಹಳ ದೊಡ್ಡ ಲಾಭವಿದೆ. ಸತ್ಯಯುಗದಲ್ಲಿ ಧೀರ್ಘಾಯಸ್ಸು ಇರುತ್ತದೆ,
ದುಃಖದ ಹೆಸರೂ ಇರುವುದಿಲ್ಲ ಏಕೆಂದರೆ ಅಲ್ಲಿ ರಾವಣರಾಜ್ಯವೇ ಇರುವುದಿಲ್ಲ. ಜ್ಞಾನವಿಲ್ಲದಿದ್ದಾಗ
ವಿದ್ಯೆಗೆ ಪ್ರತಿಫಲವಾಗಿ ಅಲ್ಪಕಾಲದ ಸುಖವು ಸಿಗುತ್ತದೆ ಮತ್ತು ಎರಡನೆಯದಾಗಿ ವಿದ್ಯೆಯ ಸುಖವು
ಶಾಸ್ತ್ರಗಳನ್ನು ಓದುವವರಿಗೆ ಸಿಗುತ್ತದೆ. ಅವರಿಂದ ಅನುಯಾಯಿಗಳಿಗೆ ಏನೂ ಲಾಭವಿಲ್ಲ. ವಾಸ್ತವಿಕವಾಗಿ
ಅವರು ಅನುಯಾಯಿಗಳಲ್ಲವೇ ಅಲ್ಲ ಏಕೆಂದರೆ ಅವರಂತೂ ಉಡುಪನ್ನು ಬದಲಾಯಿಸುವುದಿಲ್ಲ, ತಮ್ಮ ಗುರುಗಳ
ತರಹ ಮನೆ-ಮಠವನ್ನೂ ಬಿಡುವುದಿಲ್ಲ ಅಂದಾಗ ಅವರನ್ನು ಅನುಯಾಯಿಗಳೆಂದು ಹೇಳಲು ಹೇಗೆ ಸಾಧ್ಯ!
ಸತ್ಯಯುಗದಲ್ಲಂತೂ ಶಾಂತಿ, ಪವಿತ್ರತೆ ಎಲ್ಲವೂ ಇರುತ್ತದೆ. ಇಲ್ಲಿ ಅಪವಿತ್ರತೆಯಿರುವ ಕಾರಣ
ಮನೆ-ಮನೆಯಲ್ಲಿ ಎಷ್ಟೊಂದು ಅಶಾಂತಿಯಿದೆ. ನೀವು ಮಕ್ಕಳಿಗೆ ಈಶ್ವರನ ಮತವು ಸಿಗುತ್ತದೆ. ಈಗ ನೀವು
ತಮ್ಮ ತಂದೆಯನ್ನು ನೆನಪು ಮಾಡಿ, ತಮ್ಮನ್ನು ಈಶ್ವರೀಯ ಸರ್ಕಾರದವರೆಂದು ತಿಳಿಯಿರಿ ಆದರೆ ನೀವು
ಗುಪ್ತವಾಗಿದ್ದೀರಿ. ಮನಸ್ಸಿನಲ್ಲಿ ಬಹಳ ಖುಷಿಯಿರಬೇಕು ಏಕೆಂದರೆ ನಾವೀಗ ತಂದೆಯ ಶ್ರೀಮತದಂತೆ
ಇದ್ದೇವೆ, ಅವರ ಶಕ್ತಿಯಿಂದ ಸತೋಪ್ರಧಾನರಾಗುತ್ತಿದ್ದೇವೆ. ಇಲ್ಲಂತೂ ಯಾವುದೇ ರಾಜ್ಯಭಾಗ್ಯವನ್ನು
ತೆಗೆದುಕೊಳ್ಳಬೇಕಾಗಿಲ್ಲ. ನಮ್ಮ ರಾಜ್ಯಭಾಗ್ಯವಿರುವುದೇ ಹೊಸಪ್ರಪಂಚದಲ್ಲಿ, ಈಗ ಅದರ ಬಗ್ಗೆಯೂ ನಮಗೆ
ತಿಳಿದಿದೆ. ಈ ಲಕ್ಷ್ಮೀ-ನಾರಾಯಣರ ಕಥೆಯನ್ನೂ ನೀವು ತಿಳಿಸಬಹುದು. ಭಲೆ ಎಂತಹ ಮನುಷ್ಯರೇ ಇರಲಿ,
ಬಹಳ ಓದಿರುವವರೇ ಆಗಿರಲಿ ಆದರೆ ಬನ್ನಿ, ನಾವು ಇವರ 84 ಜನ್ಮಗಳ ಕಥೆಯನ್ನು ತಿಳಿಸುತ್ತೇವೆಂದು
ಒಬ್ಬರೂ ಸಹ ಹೇಳಲು ಸಾಧ್ಯವಿಲ್ಲ. ನಿಮ್ಮ ಬುದ್ಧಿಯಲ್ಲಿ ಈಗ ಸ್ಮೃತಿಯಿರುತ್ತದೆ- ವಿಚಾರಸಾಗರ
ಮಂಥನವನ್ನೂ ಮಾಡುತ್ತೀರಿ.
ಈಗ ನೀವು ಜ್ಞಾನಸೂರ್ಯವಂಶಿಯರಾಗಿದ್ದೀರಿ ಮತ್ತೆ ಸತ್ಯಯುಗದಲ್ಲಿ ವಿಷ್ಣುವಂಶಿಯರೆಂದು ಹೇಳಲಾಗುವುದು.
ಜ್ಞಾನಸೂರ್ಯ ಪ್ರಕಟ....... ಈ ಸಮಯದಲ್ಲಿ ನಿಮಗೆ ಜ್ಞಾನವು ಸಿಗುತ್ತಿದೆಯೆಂದರೆ ಜ್ಞಾನದಿಂದಲೇ
ಸದ್ಗತಿಯಾಗುತ್ತದೆ. ಅರ್ಧಕಲ್ಪ ಜ್ಞಾನವು ನಡೆಯುತ್ತದೆ, ಇನ್ನರ್ಧಕಲ್ಪ ಅಜ್ಞಾನವಾಗಿಬಿಡುತ್ತದೆ.
ಇದೂ ಸಹ ನಾಟಕದ ನಿಗಧಿಯಾಗಿದೆ. ನೀವೀಗ ಬುದ್ಧಿವಂತರಾಗಿದ್ದೀರಿ, ನೀವು ಎಷ್ಟೆಷ್ಟು
ಬುದ್ಧಿವಂತರಾಗುತ್ತೀರಿ, ಅಷ್ಟು ಅನ್ಯರನ್ನೂ ಸಮಾನರನ್ನಾಗಿ ಮಾಡಿಕೊಳ್ಳುವ ಪುರುಷಾರ್ಥ ಮಾಡುತ್ತೀರಿ.
ನಿಮ್ಮ ತಂದೆ ದಯಾಹೃದಯಿ, ಕಲ್ಯಾಣಕಾರಿ ಆಗಿದ್ದಾರೆ ಅಂದಮೇಲೆ ಮಕ್ಕಳೂ ಆಗಬೇಕಲ್ಲವೆ. ಮಕ್ಕಳೂ
ಕಲ್ಯಾಣಕಾರಿಗಳಾಗದಿದ್ದರೆ ಅಂತಹವರಿಗೆ ಏನು ಹೇಳುವುದು? ಗಾಯನವೂ ಇದೆಯಲ್ಲವೆ- ಸಾಹಸ ಮಕ್ಕಳದು,
ಸಹಯೋಗ ತಂದೆಯದು. ಸಾಹಸವೂ ಅವಶ್ಯವಾಗಿ ಬೇಕು, ಇಲ್ಲದಿದ್ದರೆ ಆಸ್ತಿಯನ್ನು ಹೇಗೆ ಪಡೆಯುತ್ತೀರಿ,
ಸರ್ವೀಸಿನನುಸಾರವೇ ಆಸ್ತಿಯನ್ನು ಪಡೆಯುತ್ತೀರಿ. ಈಶ್ವರೀಯ ಮಿಷನ್ ಆಗಿದ್ದೀರಲ್ಲವೆ. ಹೇಗೆ
ಕ್ರಿಶ್ಚಿಯನ್ ಮಿಷನ್, ಇಸ್ಲಾಮಿ ಮಿಷನ್ ಇರುವವರು ತಮ್ಮ ಧರ್ಮವನ್ನು ವೃದ್ಧಿಪಡಿಸುತ್ತಾರೆ. ನೀವು
ತಮ್ಮ ಬ್ರಾಹ್ಮಣ ಧರ್ಮವನ್ನು ದೈವೀಧರ್ಮವನ್ನು ವೃದ್ಧಿ ಮಾಡುತ್ತೀರಿ. ಡ್ರಾಮಾನುಸಾರ ನೀವು ಮಕ್ಕಳು
ಅವಶ್ಯವಾಗಿ ಸಹಯೋಗಿಗಳಾಗುತ್ತೀರಿ, ಕಲ್ಪದ ಹಿಂದೆ ಯಾವ ಪಾತ್ರವನ್ನು ಅಭಿನಯಿಸಿದ್ದೀರೋ ಅವಶ್ಯವಾಗಿ
ಈಗಲೂ ಅದನ್ನೇ ಅಭಿನಯಿಸುತ್ತಿದ್ದಾರೆ. ಯಾರು ಉತ್ತಮರನ್ನಾಗಿ ಮಾಡುವವರಿದ್ದಾರೆಯೋ ಅವರೇ
ಎಲ್ಲರಿಗಿಂತ ಉತ್ತಮ ಪಾತ್ರವನ್ನಭಿನಯಿಸುತ್ತಾರೆ ನೀವು ನೋಡುತ್ತಿದ್ದೀರಿ ಪ್ರತಿಯೊಬ್ಬರೂ ತಮ್ಮ
ಉತ್ತಮ,ಮಧ್ಯಮ,ಕನಿಷ್ಠ ಪಾತ್ರ ಅಭಿನಯಿಸುತ್ತಿರುವರು ಯಾರು ಉತ್ತಮರನ್ನಾಗಿ ಮಾಡುವರೋ, ಅವರೇ
ಎಲ್ಲರಿಗಿಂತ ಉತ್ತಮ ಪಾತ್ರ ಮಾಡುವವರು. ಅಂದಾಗ ಈಗ ಎಲ್ಲರಿಗೆ ತಂದೆಯ ಪರಿಚಯವನ್ನು ಕೊಡಬೇಕು ಮತ್ತು
ಆದಿ-ಮಧ್ಯ-ಅಂತ್ಯದ ರಹಸ್ಯವನ್ನು ತಿಳಿಸಬೇಕಾಗಿದೆ. ಋಷಿ-ಮುನಿ ಮೊದಲಾದವರೂ ಸಹ ಪರಮಾತ್ಮನ ಬಗ್ಗೆ
ಗೊತ್ತಿಲ್ಲ, ಗೊತ್ತಿಲ್ಲ ಎಂದು ಹೇಳಿಹೋದರು ಮತ್ತು ಸರ್ವವ್ಯಾಪಿ ಎಂದು ಹೇಳಿಬಿಡುತ್ತಾರೆ, ಏನನ್ನೂ
ತಿಳಿದುಕೊಂಡಿಲ್ಲ. ನಾಟಕದನುಸಾರ ಆತ್ಮದ ಬುದ್ಧಿಯೂ ಸಹ ತಮೋಪ್ರಧಾನವಾಗಿಬಿಡುತ್ತದೆ. ಶರೀರದ
ಬುದ್ಧಿಯೆಂದು ಹೇಳುವುದಿಲ್ಲ. ಆತ್ಮದಲ್ಲಿಯೇ ಮನಸ್ಸು-ಬುದ್ಧಿಯಿದೆ, ಇದನ್ನು ಬಹಳ ಚೆನ್ನಾಗಿ
ತಿಳಿದುಕೊಂಡು ಮತ್ತೆ ಚಿಂತನೆ ಮಾಡಬೇಕು ನಂತರ ತಿಳಿಸಬೇಕಾಗುತ್ತದೆ. ಆ ಮನುಷ್ಯರು ಶಾಸ್ತ್ರಗಳನ್ನು
ತಿಳಿಸಲು ಎಷ್ಟೊಂದು ಅಂಗಡಿಗಳನ್ನು ತೆರೆದು ಕುಳಿತ್ತಿದ್ದಾರೆ. ನಿಮ್ಮದೂ ಸಹ ಇದು ಜ್ಞಾನದ
ಅಂಗಡಿಯಾಗಿದೆ. ದೊಡ್ಡ-ದೊಡ್ಡ ನಗರಗಳಲ್ಲಿ ದೊಡ್ಡ ಜ್ಞಾನದ ಅಂಗಡಿಗಳಿರಬೇಕು. ಯಾವ ಮಕ್ಕಳು
ತೀಕ್ಷ್ಣವಾಗಿರುತ್ತಾರೆಯೋ ಅವರ ಬಳಿ ಬಹಳಷ್ಟು ಖಜಾನೆಯಿರುತ್ತದೆ. ಇಷ್ಟೊಂದು ಖಜಾನೆಯಿಲ್ಲದಿದ್ದರೆ
ಅನ್ಯರಿಗೆಕೊಡಲೂ ಸಾಧ್ಯವಿಲ್ಲ. ಧಾರಣೆಯೂ ನಂಬರ್ವಾರ್ ಆಗುತ್ತದೆ. ಮಕ್ಕಳು ಬಹಳ ಚೆನ್ನಾಗಿ ಧಾರಣೆ
ಮಾಡಬೇಕು ನಂತರ ಅದನ್ನು ಅನ್ಯರಿಗೂ ತಿಳಿಸುವಂತಿರಬೇಕು, ಇದೇನೂ ದೊಡ್ಡಮಾತಲ್ಲ. ತಂದೆಯಿಂದ
ಆಸ್ತಿಯನ್ನು ತೆಗೆದುಕೊಳ್ಳುವುದು ಸೆಕೆಂಡಿನ ಮಾತಾಗಿದೆ. ನೀವಾತ್ಮರು ತಂದೆಯನ್ನು
ಅರಿತುಕೊಂಡಿರೆಂದರೆ ಬೇಹದ್ದಿನ ಮಾಲೀಕರಾಗಿಬಿಟ್ಟಿರಿ ಆದರೆ ಪದವಿಗಳಲ್ಲಿ ಅಂತರವಾಗುವುದು.
ಮಾಲೀಕರಲ್ಲಿಯೂ ನಂಬರ್ವಾರ್ ಇರುತ್ತಾರೆ. ರಾಜರೂ ಮಾಲೀಕರು, ಪ್ರಜೆಗಳೂ ಸಹ ನಾವು ಮಾಲೀಕರೆಂದು
ಹೇಳುತ್ತಾರೆ. ಇಲ್ಲಿಯೂ ಸಹ ನಮ್ಮ ಭಾರತವೆಂದು ಎಲ್ಲರೂ ಹೇಳುತ್ತಾರೆ. ನೀವೂ ಸಹ ಹೇಳುತ್ತೀರಿ-
ಶ್ರೀಮತದನುಸಾರ ನಾವು ನಮ್ಮ ಸ್ವರ್ಗಸ್ಥಾಪನೆ ಮಾಡುತ್ತೇವೆ ಮತ್ತೆ ಸ್ವರ್ಗದಲ್ಲಿಯೂ
ರಾಜಧಾನಿಯಿರುವುದು., ಅನೇಕ ಪ್ರಕಾರದ ದರ್ಜೆಗಳಿರುವುದು ಅಂದಮೇಲೆ ಶ್ರೇಷ್ಠಪದವಿಯನ್ನು ಪಡೆಯುವ
ಪುರುಷರಾರ್ಥವನ್ನೇ ಮಾಡಬೇಕು. ತಂದೆಯು ತಿಳಿಸುತ್ತಾರೆ- ಈಗ ನೀವು ಎಷ್ಟು ಪುರುಷಾರ್ಥ ಮಾಡಿ
ಪದವಿಯನ್ನು ಪಡೆಯುವಿರೋ ಅದೇ ಕಲ್ಪ-ಕಲ್ಪಾಂತರಕ್ಕಾಗಿ ನಿಗಧಿಯಾಗುವುದು. ಪರೀಕ್ಷೆಯಲ್ಲಿ ಯಾರಾದರೂ
ಕಡಿಮೆ ಅಂಕಗಳನ್ನು ಪಡೆಯುತ್ತಾರೆಂದರೆ ಅವರಿಗೆ ಹೃದಯಾಘಾತವಾಗಿಬಿಡುವುದು. ಆದರೆ ಇದು ಬೇಹದ್ದಿನ
ಮಾತಾಗಿದೆ ಅಂದಮೇಲೆ ಪೂರ್ಣ ಪುರುಷಾರ್ಥ ಮಾಡದಿದ್ದರೆ ಮತ್ತೆ ಉದಾಸರಾಗುತ್ತಾರೆ, ಶಿಕ್ಷೆಗಳನ್ನೂ
ಅನುಭವಿಸಬೇಕಾಗುತ್ತದೆ. ಆ ಸಮಯದಲ್ಲಿ ಏನು ಮಾಡಲು ತಾನೆ ಸಾಧ್ಯ! ಏನೂ ಮಾಡಲಾಗುವುದಿಲ್ಲ. ಆತ್ಮವೇನು
ಮಾಡುತ್ತದೆ! ಅವರಂತೂ ಜೀವಘಾತ ಮಾಡಿಕೊಳ್ಳುತ್ತಾರೆ ಅಥವಾ ನೀರಿನಲ್ಲಿ ಬಿದ್ದು ಸಾಯುತ್ತಾರೆ.
ಇದರಲ್ಲಿ ಘಾತ ಅಥವಾ ಹತ್ಯೆಯ ಮಾತಿಲ್ಲ ಏಕೆಂದರೆ ಆತ್ಮದ ಹತ್ಯೆಯು ಆಗುವುದಿಲ್ಲ, ಅದಂತೂ
ಅವಿನಾಶಿಯಾಗಿದೆ ಆದರೆ ಶರೀರದ ಹತ್ಯೆಯಾಗುತ್ತದೆ, ಯಾವುದರಿಂದ ನೀವು ಪಾತ್ರವನ್ನಭಿನಯಿಸುತ್ತೀರಿ.
ಈಗ ನೀವು ಈ ಹಳೆಯ ಪಾದರಕ್ಷೆ (ಶರೀರ) ಯನ್ನು ಕಳಚಿ ಹೊಸ ದೈವೀಶರೀರವನ್ನು ಪಡೆಯುವ ಪುರುಷಾರ್ಥ
ಮಾಡುತ್ತೀರಿ. ಇದನ್ನು ಯಾರು ಹೇಳುತ್ತಾರೆ? ಆತ್ಮ. ಹೇಗೆ ನಮಗೆ ಹೊಸವಸ್ತ್ರಗಳನ್ನು ಕೊಡಿ ಎಂದು
ಮಕ್ಕಳು ಕೇಳುತ್ತಾರಲ್ಲವೆ. ನಾವಾತ್ಮಗಳಿಗೂ ಹೊಸವಸ್ತ್ರಗಳು ಬೇಕು, ತಂದೆಯು ತಿಳಿಸುತ್ತಾರೆ-
ನೀವಾತ್ಮಗಳು ಹೊಸದಾದರೆ ಶರೀರವೂ ಸಹ ಹೊಸದೇ ಬೇಕು ಆಗಲೇ ಅದಕ್ಕೆ ಶೋಭೆ. ಆತ್ಮವು
ಪವಿತ್ರವಾಗುವುದರಿಂದ ಪಂಚತತ್ವಗಳೂ ಹೊಸದಾಗಿಬಿಡುತ್ತವೆ. ಪಂಚತತ್ವಗಳಿಂದಲೇ ಶರೀರವು
ರಚನೆಯಾಗುತ್ತದೆ. ಯಾವಾಗ ಆತ್ಮವು ಸತೋಪ್ರಧಾನವಾಗುತ್ತದೆ, ಆಗ ಶರೀರವೂ ಸಹ ಸತೋಪ್ರಧಾನವಾದದ್ದೇ
ಸಿಗುತ್ತದೆ. ಆತ್ಮವು ತಮೋಪ್ರಧಾನವಾದಾಗ ಶರೀರವೂ ತಮೋಪ್ರಧಾನ. ಈಗ ಇಡೀ ಪ್ರಪಂಚದ ಗೊಂಬೆಗಳು
ತಮೋಪ್ರಧಾನವಾಗಿವೆ, ದಿನ-ಪ್ರತಿದಿನ ಪ್ರಪಂಚವು ಹಳೆಯದಾಗುತ್ತಾ ಹೋಗುತ್ತದೆ, ಇಳಿಯುತ್ತಾ
ಹೋಗುತ್ತದೆ. ಪ್ರತಿಯೊಂದು ವಸ್ತುವು ಹೊಸದರಿಂದ ಹಳೆಯದಾಗುತ್ತದೆ. ಹಳೆಯದಾದ ನಂತರ ವಿನಾಶ
ಹೊಂದುತ್ತದೆ. ಇದಂತೂ ಇಡೀ ಸೃಷ್ಟಿಯ ಪ್ರಶ್ನೆಯಾಗಿದೆ, ಹೊಸಪ್ರಪಂಚಕ್ಕೆ ಸತ್ಯಯುಗವೆಂದು,
ಹಳೆಯದಕ್ಕೆ ಕಲಿಯುಗವೆಂದು ಹೇಳಲಾಗುತ್ತದೆ. ಉಳಿದಂತೆ ಈ ಸಂಗಮಯುಗದ ಬಗ್ಗೆ ಯಾರಿಗೂ ಗೊತ್ತಿಲ್ಲ. ಈ
ಹಳೆಯ ಪ್ರಪಂಚವು ಈಗ ಪರಿವರ್ತನೆಯಾಗುವುದಿದೆ ಎಂಬುದನ್ನು ನೀವೇ ತಿಳಿದುಕೊಂಡಿದ್ದೀರಿ.
ಈಗ ಬೇಹದ್ದಿನ ತಂದೆಯು ತಂದೆ-ಶಿಕ್ಷಕ-ಗುರುವಾಗಿದ್ದಾರೆ. ಅವರ ಆದೇಶವಾಗಿದೆ- ಪಾವನರಾಗಿ. ಕಾಮ
ಮಹಾಶತ್ರುವಾಗಿದೆ, ಇದರ ಮೇಲೆ ಜಯಗಳಿಸಿ ಜಗತ್ಜೀತರಾಗಿರಿ. ಜಗತ್ಜೀತರು ಅರ್ಥಾತ್ ವಿಷ್ಣುವಂಶಿಯರಾಗಿ.
ಮಾತು ಒಂದೇ ಆಗಿದೆ. ಈ ಶಬ್ಧಗಳ ಅರ್ಥವು ನಿಮಗೇ ಗೊತ್ತಿದೆ. ಮಕ್ಕಳು ತಿಳಿದುಕೊಂಡಿದ್ದೀರಿ- ನಮಗೆ
ಓದಿಸುವವರು ತಂದೆಯಾಗಿದ್ದಾರೆ, ಮೊದಲಂತೂ ಈ ಪಕ್ಕಾ ನಿಶ್ಚಯವು ಬೇಕು. ಹೇಗೆ ಮಗು ದೊಡ್ಡದಾದಾಗ
ತಂದೆಯನ್ನು ನೆನಪು ಮಾಡಬೇಕಾಗುತ್ತದೆ, ನಂತರ ಶಿಕ್ಷಕನನ್ನು ಅನಂತರ ಗುರುವನ್ನು ನೆನಪು
ಮಾಡಬೇಕಾಗುತ್ತದೆ. ಹೀಗೆ ಭಿನ್ನ-ಭಿನ್ನ ಸಮಯದಲ್ಲಿ ಮೂವರನ್ನೂ ನೆನಪು ಮಾಡುತ್ತಾರೆ. ಹೀಗೆ ಮೂರೂ
ಸಂಬಂಧಗಳು ಒಟ್ಟಿಗೆ ಒಂದೇ ಸಮಯದಲ್ಲಿ ಸಿಕ್ಕಿವೆ. ಇಲ್ಲಿ ಒಬ್ಬ ತಂದೆಯೇ
ತಂದೆ-ಶಿಕ್ಷಕ-ಗುರುವಾಗಿದ್ದಾರೆ. ಆ ಮನುಷ್ಯರಂತೂ ವಾನಪ್ರಸ್ಥ ಶಬ್ಧದ ಅರ್ಥವನ್ನು
ತಿಳಿದುಕೊಂಡಿಲ್ಲ. ವಾನಪ್ರಸ್ಥದಲ್ಲಿ ಹೋಗಬೇಕಾದ್ದರಿಂದ ಗುರುಗಳನ್ನು ಮಾಡಿಕೊಳ್ಳಬೇಕೆಂದು
ತಿಳಿಯುತ್ತಾರೆ. 60 ವರ್ಷಗಳ ನಂತರ ಗುರುಗಳನ್ನು ಮಾಡಿಕೊಳ್ಳುತ್ತಾರೆ. ಈ ಕಾಯಿದೆಯೂ ಸಹ ಈಗಲೇ
ಬಂದಿದೆ. ತಂದೆಯು ತಿಳಿಸುತ್ತಾರೆ- ಇವರ ಬಹಳ ಜನ್ಮಗಳ ಅಂತಿಮದಲ್ಲಿ ವಾನಪ್ರಸ್ಥ ಸ್ಥಿತಿಯಲ್ಲಿ ನಾನು
ಇವರ (ಬ್ರಹ್ಮಾ) ಸದ್ಗುರುವಾಗಿದ್ದೇನೆ. ಈ ಬ್ರಹ್ಮಾರವರೂ ಹೇಳುತ್ತಾರೆ- ನಿರ್ವಾಣಧಾಮಕ್ಕೆ ಹೋಗುವ
ಸಮಯದಲ್ಲಿ ಅಂದರೆ 60 ವರ್ಷಗಳ ನಂತರ ಸದ್ಗುರುವನ್ನು ಮಾಡಿಕೊಂಡಿದ್ದೇನೆ. ತಂದೆಯು ಎಲ್ಲರನ್ನೂ
ನಿರ್ವಾಣಧಾಮದಲ್ಲಿ ಕರೆದುಕೊಂಡು ಹೋಗುವುದಕ್ಕಾಗಿಯೇ ಬರುತ್ತಾರೆ. ಮುಕ್ತಿಧಾಮಕ್ಕೆ ಹೋಗಿ ನಂತರ
ಪಾತ್ರವನ್ನಭಿನಯಿಸಲು ಬರಬೇಕಾಗಿದೆ. ಅನೇಕರದು ವಾನಪ್ರಸ್ಥ ಸ್ಥಿತಿಯಾಗುತ್ತದೆ ನಂತರ ಗುರುಗಳನ್ನು
ಮಾಡಿಕೊಳ್ಳುತ್ತಾರೆ. ಇತ್ತೀಚೆಗಂತೂ ಚಿಕ್ಕಮಗುವಿಗೂ ಸಹ ಗುರುಗಳನ್ನು ಮಾಡಿಸಿಬಿಡುತ್ತಾರೆ ಅರ್ಥಾತ್
ಧೀಕ್ಷೆ ಕೊಡಿಸುತ್ತಾರೆ, ಇದರಿಂದ ಗುರುಗಳಿಗೆ ದಕ್ಷಿಣೆ ಸಿಗುತ್ತದೆ. ಕ್ರಿಶ್ಚಿಯನ್ನರು
ಕ್ರಿಶ್ಚಿಯನೈಜ್ ಮಾಡಿಸಲು ಹೋಗಿ ಅವರ ಮಡಿಲಿಗೆ ಕೊಡುತ್ತಾರೆ ಆದರೆ ಅವರೇನೂ ನಿರ್ವಾಣಧಾಮದಲ್ಲಿ
ಹೋಗುವುದಿಲ್ಲ. ಇದೆಲ್ಲಾ ರಹಸ್ಯವನ್ನು ತಂದೆಯೇ ತಿಳಿಸಿಕೊಡುತ್ತಾರೆ. ಈಶ್ವರನ ಅಂತ್ಯವನ್ನು
ಈಶ್ವರನೇ ತಿಳಿಸುತ್ತಾರೆ. ಪ್ರಾರಂಭದಿಂದ ಹಿಡಿದು ತಿಳಿಸುತ್ತಲೇ ಬಂದಿದ್ದಾರೆ. ತಮ್ಮ ಅಂತ್ಯವನ್ನು
ತಿಳಿಸುತ್ತಾರೆ. ಅಂತ್ಯವನ್ನು ಅರ್ಥಾತ್ ಪೂರ್ಣ ಪರಿಚಯವನ್ನು ಕೊಡುತ್ತಾರೆ, ಸೃಷ್ಟಿಯ ಜ್ಞಾನವನ್ನು
ಕೊಡುತ್ತಾರೆ. ಸ್ವಯಂ ಈಶ್ವರನೇ ಬಂದು ಆದಿಸನಾತನ ದೇವಿ-ದೇವತಾ ಧರ್ಮ ಅರ್ಥಾತ್ ಸ್ವರ್ಗದ ಸ್ಥಾಪನೆ
ಮಾಡುತ್ತಾರೆ. ಇದರ ಹೆಸರು ಭಾರತವೆಂದೇ ನಡೆದುಬರುತ್ತದೆ. ಗೀತೆಯಲ್ಲಿ ಕೇವಲ ಕೃಷ್ಣನ ಹೆಸರನ್ನು
ಹಾಕಿ ಇಷ್ಟೊಂದು ಏರುಪೇರು ಮಾಡಿಬಿಟ್ಟಿದ್ದಾರೆ. ಏನು ಮಾಡಲು ಸಾಧ್ಯವಿಲ್ಲ. ಇದೂ ಸಹ ನಾಟಕವಾಗಿದೆ.
ಇದು ಸೋಲು ಮತ್ತು ಗೆಲುವಿನ ಆಟವಾಗಿದೆ, ಇದರಲ್ಲಿ ಸೋಲು ಮತ್ತು ಗೆಲುವು ಹೇಗಾಗುತ್ತದೆಯೆಂದು
ತಂದೆಯ ವಿನಃ ಮತ್ತ್ಯಾರೂ ತಿಳಿಸಲು ಸಾಧ್ಯವಿಲ್ಲ. ನಾವು ಕೊನೆಗೆ ಸೋಲನ್ನನುಭವಿಸಬೇಕಾಗುತ್ತದೆ
ಎಂಬುದನ್ನು ಈ ಲಕ್ಷ್ಮೀ-ನಾರಾಯಣರೂ ಸಹ ತಿಳಿದುಕೊಂಡಿರುವುದಿಲ್ಲ. ಇದು ಕೇವಲ ನೀವು ಬ್ರಾಹ್ಮಣರಿಗೆ
ಗೊತ್ತಿದೆ. ಶೂದ್ರರಿಗೂ ಸಹ ಗೊತ್ತಿಲ್ಲ. ತಂದೆಯೇ ಬಂದು ನಿಮ್ಮನ್ನು ಬ್ರಾಹ್ಮಣರಿಂದ
ದೇವತೆಗಳನ್ನಾಗಿ ಮಾಡುತ್ತಾರೆ. ಹಮ್ ಸೋ ಸೋ ಹಮ್ನ ಪೂರ್ಣಅರ್ಥವೇ ಬೇರೆಯಾಗಿದೆ. ಓಮ್ನ ಅರ್ಥವೇ
ಬೇರೆಯಾಗಿದೆ. ಮನುಷ್ಯರು ಅರ್ಥವಿಲ್ಲದೆ ಏನು ಬಂದರೆ ಅದನ್ನು ಹೇಳಿಬಿಡುತ್ತಾರೆ. ನಾವು ಹೇಗೆ
ಕೆಳಗಿಳಿಯುತ್ತೇವೆ ಮತ್ತು ಹೇಗೆ ಮೇಲೇರುತ್ತೇವೆ ಎಂಬುದನ್ನು ಈಗ ನೀವು ತಿಳಿದುಕೊಂಡಿದ್ದೀರಿ. ಈ
ಜ್ಞಾನವು ನೀವು ಮಕ್ಕಳಿಗೆ ಈ ಸಮಯದಲ್ಲಿಯೇ ಸಿಗುತ್ತದೆ. ಡ್ರಾಮಾನುಸಾರ ಮತ್ತೆ ಕಲ್ಪದ ನಂತರವೇ
ಮತ್ತೆ ತಂದೆಯು ಬಂದು ತಿಳಿಸಿಕೊಡುತ್ತಾರೆ. ಯಾರೆಲ್ಲಾ ಧರ್ಮಸ್ಥಾಪಕರಿರುತ್ತಾರೆಯೋ ಅವರೆಲ್ಲಾ ಬಂದು
ತಮ್ಮ ಧರ್ಮವನ್ನು ತಮ್ಮ ಸಮಯದಲ್ಲಿ ಸ್ಥಾಪನೆ ಮಾಡುತ್ತಾರೆ. ಇದಕ್ಕೆ ನಂಬರ್ವಾರ್
ಪುರುಷಾರ್ಥದನುಸಾರ ಎಂದು ಹೇಳುವುದಿಲ್ಲ. ನಂಬರ್ವಾರ್ ಸಮಯದನುಸಾರ ಬಂದು ತಮ್ಮ-ತಮ್ಮ ಧರ್ಮಸ್ಥಾಪನೆ
ಮಾಡುತ್ತಾರೆ. ನಾನು ಹೇಗೆ ಬ್ರಾಹ್ಮಣ ನಂತರ ಸೂರ್ಯವಂಶಿ, ಚಂದ್ರವಂಶಿ ರಾಜಧಾನಿಯನ್ನು ಸ್ಥಾಪನೆ
ಮಾಡುತ್ತೇನೆಂದು ಒಬ್ಬ ತಂದೆಯೇ ತಿಳಿಸುತ್ತಾರೆ. ಈಗ ನೀವು ಜ್ಞಾನಸೂರ್ಯವಂಶಿಯರಾಗಿದ್ದೀರಿ. ಮತ್ತೆ
ನೀವೇ ವಿಷ್ಣುವಂಶಿಯರಾಗುತ್ತೀರಿ. ಈ ಅಕ್ಷರಗಳನ್ನು ಬಹಳ ಎಚ್ಚರಿಕೆಯಿಂದ ಬರೆಯಬೇಕಾಗುತ್ತದೆ
ಏಕೆಂದರೆ ಇದರಲ್ಲಿ ಯಾರೂ ತಪ್ಪು ಕಂಡುಹಿಡಿಯುವಂತಾಗಬಾರದು.
ಮಕ್ಕಳಿಗೆ ಗೊತ್ತಿದೆ- ಈ ಜ್ಞಾನದ ಒಂದೊಂದು ಮಹಾವಾಕ್ಯವು ರತ್ನಗಳು, ವಜ್ರಗಳಾಗಿದೆ. ಮಕ್ಕಳು
ಅನ್ಯರಿಗೆ ತಿಳಿಸಲು ಬಹಳ ಬುದ್ಧಿವಂತಿಕೆಯು ಬೇಕು. ಯಾವುದೇ ಶಬ್ಧವು ತಪ್ಪಾಗಿ ಬಂದುಬಿಟ್ಟರೆ
ಅದನ್ನು ತಕ್ಷಣ ಸರಿಪಡಿಸಿ ತಿಳಿಸಬೇಕು. ಎಲ್ಲದಕ್ಕಿಂತ ಕಠಿಣ ತಪ್ಪು ತಂದೆಯನ್ನು ಮರೆಯುವುದಾಗಿದೆ.
ತಂದೆಯು ಆದೇಶ ನೀಡುತ್ತಾರೆ- ನನ್ನೊಬ್ಬನನ್ನೇ ನೆನಪು ಮಾಡಿ ಅಂದಾಗ ಇದನ್ನು ಮರೆಯಬಾರದು. ನೀವು
ನನ್ನ ಬಹಳ ಹಳೆಯ ಪ್ರಿಯತಮೆಯರಾಗಿದ್ದೀರಿ, ನೀವೆಲ್ಲಾ ಪ್ರಿಯತಮೆಯರಿಗೆ ನಾನೊಬ್ಬನೇ
ಪ್ರಿಯತಮನಾಗಿದ್ದೇನೆ. ಅವರಂತೂ ಒಬ್ಬರು ಇನ್ನೊಬ್ಬರ ಮುಖವನ್ನು ನೋಡಿಕೊಳ್ಳಲು
ಪ್ರಿಯತಮ-ಪ್ರಿಯತಮೆಯರಾಗುತ್ತಾರೆ, ಇಲ್ಲಂತೂ ಒಬ್ಬರೇ ಪ್ರಿಯತಮನಾಗಿದ್ದಾರೆ. ಅವರೊಬ್ಬರು ಎಷ್ಟು
ಪ್ರಿಯತಮನನ್ನು ನೆನಪು ಮಾಡುತ್ತಾರೆ. ಅನೇಕರು ಒಬ್ಬರನ್ನು ನೆನಪು ಮಾಡುವುದು ಸಹಜವಾಗುತ್ತದೆ ಆದರೆ
ಒಬ್ಬರು ಅನೇಕರನ್ನು ಹೇಗೆ ನೆನಪು ಮಾಡುವುದು! ಬಾಬಾ ನಾವು ತಮ್ಮನ್ನು ನೆನಪು ಮಾಡುತ್ತೇವೆ, ತಾವು
ನಮ್ಮನ್ನು ನೆನಪು ಮಾಡುತ್ತೀರಾ? ಎಂದು ಕೆಲವರು ಪ್ರಶ್ನೆ ಮಾಡುತ್ತಾರೆ. ಅರೆ! ಪತಿತರಿಂದ
ಪಾವನರಾಗಲು ನೆನಪು ಮಾಡಬೇಕಾಗಿರುವುದು ನೀವು, ನಾನು ನಿಮ್ಮನ್ನು ನೆನಪು ಮಾಡಲು ನಾನೇ
ಪತಿತನಾಗಿದ್ದೇನೆಯೇ! ನೆನಪು ಮಾಡುವುದು ನಿಮ್ಮ ಕರ್ತವ್ಯವಾಗಿದೆ ಏಕೆಂದರೆ ಪಾವನರಾಗಬೇಕಾಗಿದೆ.
ಯಾರೆಷ್ಟು ನೆನಪು ಮಾಡುತ್ತಾರೆ, ಚೆನ್ನಾಗಿ ಸರ್ವೀಸ್ ಮಾಡುವರೋ ಅವರಿಗೆ ಧಾರಣೆಯಾಗುತ್ತದೆ.
ನೆನಪಿನ ಯಾತ್ರೆಯು ಬಹಳ ಪರಿಶ್ರಮವಾಗಿದೆ. ಇದರಲ್ಲಿಯೇ ಯುದ್ಧವೂ ನಡೆಯುತ್ತದೆ. ಬಾಕಿ 84ರ
ಚಕ್ರವನ್ನು ನೀವು ಮರೆತುಹೋಗುತ್ತೀರೆಂದಲ್ಲ, ಈ ಕಿವಿಗಳು ಚಿನ್ನದ ಪಾತ್ರೆಯಂತಾಗಬೇಕು. ನೀವು ಎಷ್ಟು
ನೆನಪು ಮಾಡುವಿರೋ ಅಷ್ಟು ಚೆನ್ನಾಗಿ ಧಾರಣೆಯಾಗುವುದು. ಇದರಲ್ಲಿ ಶಕ್ತಿಯಿರುವುದು ಆದ್ದರಿಂದ
ತಂದೆಯು ತಿಳಿಸುತ್ತಾರೆ - ಜ್ಞಾನದ ಕತ್ತಿಯಲ್ಲಿ ನೆನಪಿನ ಹರಿತವಿರಬೇಕು. ಜ್ಞಾನದಿಂದ
ಸಂಪಾದನೆಯಾಗುತ್ತದೆ. ನೆನಪಿನಿಂದ ಸರ್ವ ಶಕ್ತಿಗಳು ನಂಬರ್ವಾರ್ ಸಿಗುತ್ತವೆ. ಆಯುಧಗಳಲ್ಲಿಯೂ
ನಂಬರ್ವಾರ್ ಹರಿತವಿರುವುದರಲ್ಲಿ ವ್ಯತ್ಯಾಸವಾಗುತ್ತದೆ. ಅದಂತೂ ಸ್ಥೂಲವಾಯಿತು, ಮೂಲಮಾತು ಒಂದಂತೂ
ತಂದೆಯು ತಿಳಿಸುತ್ತಾರೆ- ತಂದೆಯನ್ನು ನೆನಪು ಮಾಡಿ, ಪ್ರಪಂಚದ ವಿನಾಶಕ್ಕಾಗಿ ಇದೊಂದು ಅಣುಬಾಂಬು
ಸಾಕಾಗುತ್ತದೆ. ಇನ್ನೇನೂ ಬೇಕಾಗಿಲ್ಲ. ವಿನಾಶ ಮಾಡುವುದರಲ್ಲಿ ಸೇನೆಯಾಗಲಿ, ಸೇನಾಧಿಪತಿಯಾಗಲಿ
ಬೇಕಾಗಿಲ್ಲ. ಇಂದಿನ ದಿನಗಳಲ್ಲಿ ಇಂತಹ ಶಸ್ತ್ರಗಳನ್ನು ಕಂಡುಹಿಡಿದಿದ್ದಾರೆ.
ಕುಳಿತು-ಕುಳಿತಿದ್ದಂತೆಯೇ ಬಾಂಬುಗಳನ್ನು ಎಸೆಯುತ್ತಾರೆ. ಇಲ್ಲಿ ಕುಳಿತು-ಕುಳಿತಿದ್ದಂತೆಯೇ
ರಾಜ್ಯವನ್ನು ಪಡೆಯುತ್ತೀರಿ. ಅವರು ಅಲ್ಲಿ ಕುಳಿತಿದ್ದಂತೆಯೇ ಎಲ್ಲವನ್ನೂ ವಿನಾಶ ಮಾಡುತ್ತಾರೆ,
ನಿಮ್ಮದು ಜ್ಞಾನ ಮತ್ತು ಯೋಗವಾಗಿದೆ. ಅವರ ಮೃತ್ಯುವಿನ ಸಾಮಾನುಗಳಿಗೆ ಸರಿಸಮವಾಗಿಬಿಡುತ್ತದೆ. ಇದೂ
ಸಹ ಆಟವಾಗಿದೆ. ಎಲ್ಲರೂ ಪಾತ್ರಧಾರಿಗಳಲ್ಲವೆ. ಭಕ್ತಿಮಾರ್ಗವು ಮುಕ್ತಾಯವಾಯಿತು, ತಂದೆಯೇ ಬಂದು
ತಮ್ಮ ಮತ್ತು ರಚನೆಯ ಆದಿ-ಮಧ್ಯ-ಅಂತ್ಯದ ಪರಿಚಯವನ್ನು ಕೊಡುತ್ತಾರೆ. ಈಗ ತಂದೆಯು ತಿಳಿಸುತ್ತಾರೆ,
ಭಕ್ತಿಮಾರ್ಗದ ಮಾತುಗಳನ್ನು ಈಗ ಕೇಳಬೇಡಿ ಆದ್ದರಿಂದ ಹಿಯರ್ ನೋ ಈವಿಲ್..... ಇದರ ಚಿತ್ರವನ್ನು
ಮಾಡಿದ್ದಾರೆ. ಮೊದಲು ಕೋತಿಗಳ ಚಿತ್ರಗಳನ್ನು ಮಾಡುತ್ತಿದ್ದರು, ಈಗ ಮನುಷ್ಯರ ಚಿತ್ರವನ್ನು
ಮಾಡುತ್ತಿದ್ದಾರೆ. ಏಕೆಂದರೆ ಮುಖ ಮನುಷ್ಯನದು, ಆದರೆ ಬುದ್ಧಿ ಮಾತ್ರ ಮಂಗನ ಸಮಾನವಾಗಿದೆ.
ಆದ್ದರಿಂದ ಹೋಲಿಕೆ ಮಾಡುತ್ತಾರೆ. ಈಗ ನೀವು ಯಾರ ಸೈನ್ಯವಾಗಿದ್ದೀರಿ. ಶಿವತಂದೆಯ ಸೈನ್ಯ. ತಂದೆಯು
ನಿಮ್ಮನ್ನು ಮಂಗನಿಂದ ಮಂದಿರಕ್ಕೆ ಯೋಗ್ಯರನ್ನಾಗಿ ಮಾಡುತ್ತಿದ್ದಾರೆ. ಎಲ್ಲಿಯ ಮಾತನ್ನು ಎಲ್ಲಿ
ತೆಗೆದುಕೊಂಡು ಹೋಗಿದ್ದಾರೆ. ಕೋತಿಗಳು ಎಲ್ಲಿಯಾದರೂ ಸೇತುವೆ ಕಟ್ಟಲು ಸಾಧ್ಯವೇ? ಇದೆಲ್ಲವೂ
ದಂತಕಥೆಗಳಾಗಿವೆ. ನೀವು ಶಾಸ್ತ್ರಗಳನ್ನು ಒಪ್ಪುತ್ತೀರಾ ಎಂದು ಯಾರಾದರೂ ಪ್ರಶ್ನೆ ಮಾಡಿದರೆ ತಿಳಿಸಿ-
ವಾಹ್! ಶಾಸ್ತ್ರಗಳನ್ನು ಒಪ್ಪದಿರುವವರು ಯಾರಿರುತ್ತಾರೆ. ನಾವೇ ಎಲ್ಲರಿಗಿಂತ ಹೆಚ್ಚಿನದಾಗಿ
ಒಪ್ಪುತ್ತೇವೆ. ನಾವು ಓದುವಷ್ಟು ನೀವೂ ಸಹ ಓದುವುದಿಲ್ಲ. ಅರ್ಧಕಲ್ಪ ಓದುತ್ತೇವೆ. ಸ್ವರ್ಗದಲ್ಲಿ
ಶಾಸ್ತ್ರ ಮತ್ತು ಭಕ್ತಿಯ ಯಾವುದೇ ವಸ್ತುಗಳಿರುವುದಿಲ್ಲ. ತಂದೆಯು ಎಷ್ಟು ಸಹಜವಾಗಿ ತಿಳಿಸುತ್ತಾರೆ
ಆದರೂ ಸಹ ಮಕ್ಕಳು ತಮ್ಮ ಸಮಾನರನ್ನಾಗಿ ಮಾಡಿಕೊಳ್ಳುವ ಸೇವೆ ಮಾಡುವುದಿಲ್ಲ. ಮಕ್ಕಳು ಮೊದಲಾದವರ
ಬಂಧನದ ಕಾರಣ ಎಲ್ಲಿಗೂ ಹೋಗಲು ಆಗುವುದಿಲ್ಲ. ಇದನ್ನು ನಾಟಕವೆಂದು ಹೇಳಬೇಕು. ತಂದೆಯು
ತಿಳಿಸುತ್ತಾರೆ- ಒಂದುವಾರ, 15 ದಿನಗಳ ಕೋರ್ಸ್ ತೆಗೆದುಕೊಂಡು ಮತ್ತೆ ಅನ್ಯರನ್ನು ತಮ್ಮ
ಸಮಾನರನ್ನಾಗಿ ಮಾಡಿಕೊಳ್ಳುವುದರಲ್ಲಿ ತೊಡಗಿಬಿಡಬೇಕು. ದೊಡ್ಡ-ದೊಡ್ಡ ನಗರಗಳು, ರಾಜಧಾನಿಯಲ್ಲಿ
ಮುತ್ತಿಗೆ ಹಾಕಬೇಕು ಆಗ ತಂದೆಯ ಸಂದೇಶದ ಸದ್ದು ಕೇಳಿಬರುವುದು. ಹಿರಿಯ ವ್ಯಕ್ತಿಗಳಲ್ಲದೆ ಬೇರೆಯವರ
ಶಬ್ಧವು ಅಷ್ಟಾಗಿ ಹರಡುವುದಿಲ್ಲ. ಆದ್ದರಿಂದ ಬಹಳ ಜೋರಾಗಿ ಮುತ್ತಿಗೆ ಹಾಕಿ ಆಗ ಅನೇಕರು ಬರುತ್ತಾರೆ.
ತಂದೆಯ ಸಲಹೆಯಂತೂ ಸಿಗುತ್ತದೆಯಲ್ಲವೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಮರಳಿ ಸಿಕ್ಕಿರುವಂತಹ ಮಕ್ಕಳ ಪ್ರತಿ ಮಾತಾ-ಪಿತಾ ಬಾಪ್ದಾದಾರವರ ನೆನಪು,
ಪ್ರೀತಿ ಹಾಗೂ ಸುಪ್ರಭಾತ, ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ಜ್ಞಾನ ಮತ್ತು
ಯೋಗದಿಂದ ತಮ್ಮ ಬುದ್ಧಿಯನ್ನು ರಿಫೈನ್ ಮಾಡಿಕೊಳ್ಳಬೇಕಾಗಿದೆ. ತಂದೆಯನ್ನು ಮರೆಯುವ ತಪ್ಪನ್ನು ಎಂದೂ
ಮಾಡಬಾರದು. ಪ್ರಿಯತಮೆಯಾಗಿ ಪ್ರಿಯತಮನನ್ನು ನೆನಪು ಮಾಡಬೇಕಾಗಿದೆ.
2. ಬಂಧನಮುಕ್ತರಾಗಿ
ಅನ್ಯರನ್ನೂ ತಮ್ಮ ಸಮಾನ ಮಾಡುವ ಸೇವೆ ಮಾಡಬೇಕಾಗಿದೆ. ಶ್ರೇಷ್ಠಪದವಿಯನ್ನು ಪಡೆಯುವ
ಪುರುಷಾರ್ಥವನ್ನು ಮಾಡಬೇಕಾಗಿದೆ. ಪುರುಷಾರ್ಥದಲ್ಲಿ ಎಂದೂ ನಿರಾಶ (ಬೇಸತ್ತುಹೋಗುವುದು)ರಾಗಬಾರದು.
ವರದಾನ:
ಒಂದು ನಿಮಿಷದ
ಏಕಾಗ್ರ ಸ್ಥಿತಿಯ ಮುಖಾಂತರ ಶಕ್ತಿಶಾಲಿ ಅನುಭವ ಮಾಡುವಂತಹ ಏಕಾಂತವಾಸಿ ಭವ.
ಏಕಾಂತವಾಸಿಯಾಗುವುದು
ಅರ್ಥಾತ್ ಯಾವುದೇ ಒಂದು ಶಕ್ತಿಶಾಲಿ ಸ್ಥಿತಿಯಲ್ಲಿ ಸ್ಥಿತರಾಗುವುದು. ಬೀಜರೂಪ ಸ್ಥಿತಿಯಲ್ಲಿ
ಸ್ಥಿತರಾಗಿಬಿಡಿ. ಇಲ್ಲವೆಂದರೆ ಲೈಟ್ ಮೈಟ್ ಹೌಸ್ನ ಸ್ಥಿತಿಯಲ್ಲಿ ಸ್ಥಿತರಾಗಿ ವಿಶ್ವಕ್ಕೆ ಲೈಟ್
ಮೈಟ್ ಕೊಡಿ. ಇಲ್ಲಾ ಫರಿಷ್ತಾತನದ ಸ್ಥಿತಿಯ ಮೂಲಕ ಅನ್ಯರಿಗೆ ಅವ್ಯಕ್ತ ಸ್ಥಿತಿಯ ಅನುಭವ ಮಾಡಿಸಿ.
ಒಂದುವೇಳೆ ಒಂದು ಸೆಕೆಂಡ್ ಅಥವಾ ಒಂದು ಮಿನಿಟ್ಗಾದರೂ ಏಕಾಗ್ರ ಸ್ಥಿತಿಯಲ್ಲಿ ಸ್ಥಿತರಾದಾಗ ಸ್ವಯಂಗೆ
ಹಾಗೂ ಅನ್ಯ ಆತ್ಮಗಳಿಗೆ ಬಹಳ ಲಾಭವನ್ನು ಕೊಡಬಹುದು. ಕೇವಲ ಇದರ ಅಭ್ಯಾಸ ಬೇಕು.
ಸ್ಲೋಗನ್:
ಯಾರ ಪ್ರತೀ
ಸಂಕಲ್ಪ, ಪ್ರತೀ ಮಾತಿನಲ್ಲಿ ಪವಿತ್ರತೆಯ ವೈಬ್ರೇಷನ್ ಸಮಾವೇಶವಾಗಿದೆ ಅವರೇ ಬ್ರಹ್ಮಾಚಾರಿಗಳು.