27.09.24         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ- ನೆನಪಿನ ಪರಿಶ್ರಮವನ್ನು ನೀವೆಲ್ಲರೂ ಪಡಬೇಕಾಗಿದೆ. ನಿಮ್ಮನ್ನು ಆತ್ಮನೆಂದು ತಿಳಿದು ತಂದೆಯಾದ ನನ್ನನ್ನು ನೆನಪು ಮಾಡಿ ಆಗ ನಿಮ್ಮನ್ನು ಎಲ್ಲಾ ಪಾಪಗಳಿಂದ ಮುಕ್ತರನ್ನಾಗಿ ಮಾಡುತ್ತೇನೆ.”

ಪ್ರಶ್ನೆ:
ಸರ್ವರ ಸದ್ಗತಿಯ ಸ್ಥಾನವು ಯಾವುದಾಗಿದೆ, ಅದರ ಮಹತ್ವವು ಇಡೀ ಪ್ರಪಂಚಕ್ಕೆ ತಿಳಿಯುತ್ತದೆ.

ಉತ್ತರ:
ಅಬುಭೂಮಿಯು ಎಲ್ಲರ ಸದ್ಗತಿಯ ಸ್ಥಾನವಾಗಿದೆ. ನೀವು ಬ್ರಹ್ಮಕುಮಾರಿಯರು ಎಂಬುದರ ಮುಂದೆ ಬ್ರಾಕೇಟ್ನಲ್ಲಿ ಬರೆಯಬಹುದು. ಇದು ಸರ್ವೋತ್ತಮ ತೀರ್ಥ ಸ್ಥಾನವಾಗಿದೆ. ಇಲ್ಲಿಂದಲೇ ಇಡೀ ಪ್ರಪಂಚದ ಸದ್ಗತಿಯಾಗಬೇಕಾಗಿದೆ. ಸರ್ವರ ಸದ್ಗತಿದಾತ ತಂದೆ ಮತ್ತು ಆದಮ್ (ಬ್ರಹ್ಮ) ಇಲ್ಲಿ ಕುಳಿತು ಎಲ್ಲರ ಸದ್ಗತಿ ಮಾಡುತ್ತಾರೆ. ಆದಂ ಎಂದರೆ ಆದ್ಮಿ (ಮನುಷ್ಯ). ಮನುಷ್ಯನೇ ಹೊರತು ಅವರು ದೇವತೆಯಲ್ಲ, ಅವರಿಗೆ ಭಗವಂತನೆಂದೂ ಹೇಳಲು ಸಾಧ್ಯವಿಲ್ಲ.

ಓಂ ಶಾಂತಿ.
ಡಬಲ್ ಓಂ ಶಾಂತಿ ಏಕೆಂದರೆ ಒಂದು ತಂದೆಯದಾಗಿದೆ. ಇನ್ನೊಂದು ದಾದಾರವರದಾಗಿದೆ. ಇಬ್ಬರೂ ಕುಳಿತಿದ್ದಾರಲ್ಲವೆ. ಅವರು ಪರಮ ಆತ್ಮನಾಗಿದ್ದಾರೆ. ಇವರು ಆತ್ಮನಾಗಿದ್ದಾರೆ. ತಂದೆಯೂ ಸಹ ಲಕ್ಷ್ಯವನ್ನು ತಿಳಿಸುತ್ತಾರೆ - ನಾನು ಪರಮಧಾಮದ ನಿವಾಸಿಯಾಗಿದ್ದೇನೆ, ಇಬ್ಬರೂ ಸಹ ಇದೇ ರೀತಿ ಹೇಳುತ್ತಾರೆ. ಓಂ ಶಾಂತಿ ಎಂದು ತಂದೆಯೂ ಹೇಳುತ್ತಾರೆ. ಬ್ರಹ್ಮಾರವರೂ ಸಹ ಹೇಳುತ್ತಾರೆ. ಮಕ್ಕಳೂ ಸಹ ಹೇಳುತ್ತೀರಿ. ಓಂ ಶಾಂತಿ ಅರ್ಥಾತ್ ನಾವಾತ್ಮಗಳು ಶಾಂತಿಧಾಮದ ನಿವಾಸಿಯಾಗಿದ್ದೇವೆ. ಇಲ್ಲಿ ಬೇರೆ-ಬೇರೆಯಾಗಿ ಕುಳಿತುಕೊಳ್ಳಬೇಕಾಗಿದೆ. ಇಲ್ಲಿ ಅಂಗಕ್ಕೆ ಅಂಗವು ತಾಕುವಂತೆ ಕುಳಿತುಕೊಳ್ಳಬಾರದು. ಏಕೆಂದರೆ ಪ್ರತಿಯೊಬ್ಬರ ಯೋಗಸ್ಥಿತಿಯಲ್ಲಿ ರಾತ್ರಿ-ಹಗಲಿನ ಅಂತರವಿದೆ. ಕೆಲವರು ಬಹಳ ಚೆನ್ನಾಗಿ ಯೋಗ ಮಾಡುತ್ತಾರೆ. ಇನ್ನೂ ಕೆಲವರು ನೆನಪೇ ಮಾಡುವುದಿಲ್ಲ. ಯಾರು ನೆನಪು ಮಾಡುವುದೇ ಇಲ್ಲವೋ ಅವರು ಪಾಪಾತ್ಮರು, ತಮೋಪ್ರಧಾನರಾಗಿದ್ದಾರೆ ಮತ್ತು ಯಾರು ನೆನಪು ಮಾಡುತ್ತಾರೆಯೋ ಅವರು ಸತೋಪ್ರಧಾನ ಪುಣ್ಯಾತ್ಮರಾದರು. ಬಹಳ ಅಂತರವಾಯಿತಲ್ಲವೆ. ಮನೆಯಲ್ಲಿ ಭಲೆ ಜೊತೆಯಿರುತ್ತಾರೆ. ಆದರೆ ಅಂತರವಂತೂ ಇರುತ್ತದೆಯಲ್ಲವೆ ಆದ್ದರಿಂದ ಭಾಗವತದಲ್ಲಿ ಅಸುರರ ಹೆಸರುಗಳು ಇವೆ. ಈ ಸಮಯದ್ದೇ ಇದೆಲ್ಲ ನೆನಪಾರ್ಥವಾಗಿದೆ. - ಈ ಈಶ್ವರೀಯ ಚರಿತ್ರೆಯನ್ನುತಂದೆಯು ಕುಳಿತುಮಕ್ಕಳಿಗೆ ತಿಳಿಸುತ್ತಾರೆ, ಇದನ್ನೇ ಭಕ್ತಿ ಮಾರ್ಗದಲ್ಲಿ ಹಾಡುತ್ತಾರೆ. ಸತ್ಯಯುಗದಲ್ಲಿ ಏನೂ ನೆನಪಿರುವುದಿಲ್ಲ. ಎಲ್ಲವನ್ನೂ ಮರೆತುಹೋಗುತ್ತೀರಿ. ತಂದೆಯು ಈಗಲೇ ಶಿಕ್ಷಣವನ್ನು ಕೊಡುತ್ತಾರೆ. ಸತ್ಯಯುಗದಲ್ಲಂತೂ ಎಲ್ಲವನ್ನೂ ಸಂಪೂರ್ಣವಾಗಿ ಮರೆತುಹೋಗುತ್ತಾರೆ. ನಂತರ ದ್ವಾಪರದಲ್ಲಿ ಶಾಸ್ತ್ರ ಇತ್ಯಾದಿಗಳನ್ನು ರಚಿಸುತ್ತಾರೆ ಮತ್ತು ರಾಜಯೋಗವನ್ನು ಕಲಿಸುವ ಪ್ರಯತ್ನಪಡುತ್ತಾರೆ. ಆದರೆ ರಾಜಯೋಗವನ್ನಂತೂ ಕಲಿಸಲು ಸಾಧ್ಯವಿಲ್ಲ. ರಾಜಯೋಗವನ್ನು ತಂದೆಯು ಸಮ್ಮುಖದಲ್ಲಿ ಬಂದಾಗ ಕಲಿಸುತ್ತಾರೆ. ತಂದೆಯು ಹೇಗೆ ರಾಜಯೋಗವನ್ನು ಕಲಿಸುತ್ತಾರೆಂದು ನಿಮಗೆ ತಿಳಿದಿದೆ. ಮತ್ತೆ 5000 ವರ್ಷಗಳ ನಂತರ ಬಂದು ಇದೇ ರೀತಿ ಹೇಳುತ್ತಾರೆ - ಮಧುರಾತಿ ಮಧುರ ಮಕ್ಕಳೇ ಎಂದು. ಈ ರೀತಿ ಯಾವುದೇ ಮನುಷ್ಯರು ಮನುಷ್ಯರಿಗೆಂದೂ ಹೇಳಲು ಸಾಧ್ಯವಿಲ್ಲ ಅಥವಾ ದೇವತೆಗಳು ದೇವತೆಗಳಿಗೂ ಹೇಳಲು ಸಾಧ್ಯವಿಲ್ಲ. ಆತ್ಮಿಕ ತಂದೆಯೊಬ್ಬರೇ ಆತ್ಮಿಕ ಮಕ್ಕಳಿಗೆ ಹೇಳುತ್ತಾರೆ. ಒಂದು ಬಾರಿ ಪಾತ್ರವನ್ನಭಿನಯಿಸಿದಿರಿ ಮತ್ತೆ 5000 ವರ್ಷಗಳ ನಂತರ ಪಾತ್ರವನ್ನಿಭಿನಯಿಸುತ್ತೀರಿ. ಏಕೆಂದರೆ ಮತ್ತೆ ನೀವು ಏಣಿಯನ್ನು ಇಳಿಯುತ್ತೀರಲ್ಲವೆ. ನಿಮ್ಮ ಬುದ್ಧಿಯಲ್ಲಿ ಈಗ ಆದಿ-ಮಧ್ಯ-ಅಂತ್ಯದ ರಹಸ್ಯವಿದೆ. ನಿಮಗೆ ಗೊತ್ತಿದೆ, ಅದು ಶಾಂತಿಧಾಮ ಅಥವಾ ಪರಮಧಾಮವಾಗಿದೆ. ನಾವಾತ್ಮಗಳು ಭಿನ್ನ-ಭಿನ್ನ ಧರ್ಮದವರು ನಂಬರ್ವಾರ್ ಅಲ್ಲಿ ನಿರಾಕಾರಿ ಪ್ರಪಂಚದಲ್ಲಿರುತ್ತೇವೆ. ಹೇಗೆ ನಕ್ಷತ್ರಗಳನ್ನು ನೋಡುತ್ತೀರಲ್ಲವೆ. ಹೇಗೆ ನಿಂತಿವೆ ಎಂದು ಕಾಣಸುವುದಿಲ್ಲ. ಮೇಲೆ ಯಾವುದೇ ವಸ್ತುವಿಲ್ಲ. ಬ್ರಹ್ಮತತ್ವವಿದೆ. ಇಲ್ಲಿ ನೀವು ಧರಣಿಯ ಮೇಲೆ ನಿಂತಿದ್ದೀರಿ. ಇದು ಕರ್ಮಕ್ಷೇತ್ರವಾಗಿದೆ. ಇಲ್ಲಿ ಒಂದು ಶರೀರವನ್ನು ಪಡೆದು ಕರ್ಮ ಮಾಡುತ್ತೀರಿ. ತಂದೆಯು ತಿಳಿಸಿಕೊಟ್ಟಿದ್ದಾರೆ- ನೀವು ಯಾವಾಗ ಆಸ್ತಿಯನ್ನು ಪಡೆಯುತ್ತೀರೋ ಆಗ 21 ಜನ್ಮಗಳೂ ನಿಮ್ಮ ಕರ್ಮವು ಅಕರ್ಮವಾಗಿಬಿಡುತ್ತದೆ. ಏಕೆಂದರೆ ಅಲ್ಲಿ ರಾವಣರಾಜ್ಯವೇ ಇರುವುದಿಲ್ಲ. ಇದು ಈಶ್ವರೀಯ ರಾಜ್ಯವಾಗಿದೆ. ಅದನ್ನು ಈಗ ಈಶ್ವರನು ಸ್ಥಾಪನೆ ಮಾಡುತ್ತಿದ್ದಾರೆ. ಶಿವತಂದೆಯನ್ನು ನೆನಪು ಮಾಡುವುದರಿಂದ ಸ್ವರ್ಗದ ಮಾಲೀಕರಾಗುವಿರೆಂದು ಮಕ್ಕಳಿಗೆ ತಿಳಿಸುತ್ತಾರೆ. ಸ್ವರ್ಗವನ್ನು ಶಿವತಂದೆಯು ಸ್ಥಾಪನೆ ಮಾಡಿದ್ದರಲ್ಲವೆ ಆದ್ದರಿಂದ ಶಿವತಂದೆಯನ್ನು ಮತ್ತು ಸುಖಧಾಮವನ್ನೂ ನೆನಪು ಮಾಡಿ, ಮೊದಲು ಶಾಂತಿಧಾಮವನ್ನು ನೆನಪು ಮಾಡಿ ಆಗ ಚಕ್ರವೂ ನೆನಪಿಗೆ ಬರುವುದು. ಮಕ್ಕಳು ಮರೆತುಹೋಗುತ್ತಾರೆ. ಆದ್ದರಿಂದ ಪದೇ-ಪದೇ ನೆನಪು ತರಿಸಬೇಕಾಗುತ್ತದೆ. ಹೇ ಮಧುರಾತಿ ಮಧುರ ಮಕ್ಕಳೇ, ತಮ್ಮನ್ನು ಆತ್ಮನೆಂದು ತಿಳಿದು ತಂದೆಯನ್ನು ನೆನಪು ಮಾಡಿದರೆ ನಿಮ್ಮ ಪಾಪಗಳು ಭಸ್ಮವಾಗುತ್ತದೆ. ಪ್ರತಿಜ್ಞೆ ಮಾಡುತ್ತೇನೆ, ನೀವು ನನ್ನನ್ನು ನೆನಪು ಮಾಡಿದರೆ ಪಾಪಗಳಿಂದ ಮುಕ್ತರನ್ನಾಗಿ ಮಾಡುತ್ತೇನೆ. ತಂದೆಯೇ ಪತಿತ-ಪಾವನ, ಸರ್ವಶಕ್ತಿಗಳ ಅಥಾರಿಟಿಯಾಗಿದ್ದಾರೆ. ಅವರಿಗೆ ವಿಶ್ವದ ಆಲ್ಮೈಟಿ ಅಥಾರಿಟಿ ಎಂದು ಹೇಳಲಾಗುತ್ತದೆ. ಅವರು ಇಡೀ ಸೃಷ್ಟಿಯ ಆದಿ-ಮಧ್ಯ-ಅಂತ್ಯವನ್ನು ತಿಳಿದುಕೊಂಡಿದ್ದಾರೆ. ವೇದ-ಶಾಸ್ತ್ರಗಳು ಇತ್ಯಾದಿಯೆಲ್ಲವನ್ನೂ ತಿಳಿದಿದ್ದಾರೆ. ಆದ್ದರಿಂದಲೇ ಇವುಗಳಲ್ಲಿ ಯಾವುದೇ ಸಾರವಿಲ್ಲವೆಂದು ಹೇಳುತ್ತಾರೆ. ಗೀತೆಯಲ್ಲಿಯೂ ಸಹ ಯಾವುದೇ ಸಾರವಿಲ್ಲ. ಭಲೆ ಅದು ಸರ್ವಶಾಸ್ತ್ರಮಯಿ ಶಿರೋಮಣಿಯಾಗಿದೆ, ಉಳಿದೆಲ್ಲವೂ ಮಕ್ಕಳಾಗಿದೆ. ಹೇಗೆ ಮೊದಲು ಪ್ರಜಾಪಿತ ಬ್ರಹ್ಮನಾಗಿದ್ದಾರೆ, ಉಳಿದವರೆಲ್ಲರೂ ಮಕ್ಕಳಾಗಿದ್ದಾರೆ. ಪ್ರಜಾಪಿತ ಬ್ರಹ್ಮನಿಗೆ ಆದಂ ಎಂದು ಹೇಳುತ್ತಾರೆ. ಆದಂ ಎಂದರೆ ಆದ್ಮಿ ಅರ್ಥಾತ್ ಮನುಷ್ಯನಾಗಿದ್ದಾರಲ್ಲವೆ ಅಂದಾಗ ಇವರಿಗೆ ದೇವತೆಯೆಂದು ಹೇಳುವುದಿಲ್ಲ. ಆಡಂಗೆ ಆದಂ ಎಂದು ಹೇಳುತ್ತಾರೆ. ಭಕ್ತರು ಬ್ರಹ್ಮನಿಗೇ ದೇವತೆಯೆಂದು ಹೇಳಿಬಿಡುತ್ತಾರೆ. ಆದರೆ ತಂದೆಯು ತಿಳಿಸುತ್ತಾರೆ - ಆಡಂ ಅರ್ಥಾತ್ ಆದ್ಮಿ (ಮನುಷ್ಯ) ದೇವತೆಯೂ ಅಲ್ಲ, ಭಗವಂತನೂ ಅಲ್ಲ. ಲಕ್ಷ್ಮೀ-ನಾರಾಯಣರು ದೇವತೆಗಳಾಗಿದ್ದಾರೆ. ದೈವೀರಾಜ್ಯವು ಸತ್ಯಯುಗದಲ್ಲಿದೆ. ಹೊಸ ಪ್ರಪಂಚವಲ್ಲವೆ! ಅದು ವಿಶ್ವದ ಅತಿದೊಡ್ಡ ಅದ್ಭುತವಾಗಿದೆಯಲ್ಲವೆ. ಉಳಿದಂತೆ ಅವೆಲ್ಲವೂ ಮಾಯೆಯ ಅದ್ಭುತಗಳಾಗಿವೆ. ದ್ವಾಪರದ ನಂತರ ಮಾಯೆಯ ಅದ್ಭುತಗಳಾಗುತ್ತವೆ. ಈಶ್ವರನ ಅದ್ಭುತವು ಹೆವೆನ್, ಸ್ವರ್ಗವಾಗಿದೆ. ಅದನ್ನು ತಂದೆಯೇ ಸ್ಥಾಪನೆ ಮಾಡುತ್ತಾರೆ. ಈಗ ಸ್ಥಾಪನೆಯಾಗುತ್ತಾ ಇದೆ. ಈ ದಿಲ್ವಾಡಾ ಮಂದಿರದ ಬೆಲೆಯು ಯಾರಿಗೂ ಗೊತ್ತಿಲ್ಲ. ಮನುಷ್ಯರು ಯಾತ್ರೆ ಮಾಡಲು ಹೋಗುತ್ತಾರೆ. ಅಂದಾಗ ಎಲ್ಲದಕ್ಕಿಂತ ಅತಿದೊಡ್ಡ ತೀರ್ಥಸ್ಥಾನವು ಇದಾಗಿದೆ. ನೀವು ಬರೆಯುತ್ತೀರಲ್ಲವೆ- ಬ್ರಹ್ಮಾಕುಮಾರೀಸ್ ಈಶ್ವರೀಯ ವಿಶ್ವವಿದ್ಯಾಲಯ, ಅಬುಪರ್ವತ ಅಂದಾಗ ಅದರ ಪಕ್ಕದಲ್ಲಿ ಇದು ಸರ್ವೋತ್ತಮ ತೀರ್ಥಸ್ಥಾನ ಆಗಿದೆಯೆಂಬುದನ್ನೂ ಬರೆಯಬೇಕು. ಏಕೆಂದರೆ ನಿಮಗೆ ತಿಳಿದಿದೆ- ಸರ್ವರ ಸದ್ಗತಿಯೂ ಇದರಿಂದಲೇ ಆಗುತ್ತದೆ. ಇದನ್ನು ಯಾರೂ ತಿಳಿದುಕೊಂಡಿಲ್ಲ. ಹೇಗೆ ಸರ್ವಶಾಸ್ತ್ರಮಯಿ ಶಿರೋಮಣಿ ಗೀತೆಯಾಗಿದೆಯೋ ಹಾಗೆಯೇ ಸರ್ವ ತೀರ್ಥಗಳಲ್ಲಿ ಶ್ರೇಷ್ಠತೀರ್ಥವು ಅಬುಪರ್ವತವಾಗಿದೆ. ಹೀಗೆ ಬರೆದಾಗ ಮನುಷ್ಯರು ಓದುತ್ತಾರೆ. ಗಮನ ಹರಿಯುತ್ತದೆ. ಇಡೀ ವಿಶ್ವದ ತೀರ್ಥಸ್ಥಾನದಲ್ಲಿ ಇದು ಎಲ್ಲದಕ್ಕಿಂತ ದೊಡ್ಡ ತೀರ್ಥವಾಗಿದೆ. ಇಲ್ಲಿ ತಂದೆಯು ಕುಳಿತು ಎಲ್ಲರ ಸದ್ಗತಿ ಮಾಡುತ್ತಾರೆ, ತೀರ್ಥಸ್ಥಾನಗಳಂತೂ ಹೆಚ್ಚಾಗಿದೆ. ಗಾಂಧೀಜಿಯ ಸಮಾಧಿಯನ್ನೂ ಸಹ ತೀರ್ಥ ಸ್ಥಾನವೆಂದು ತಿಳಿಯುತ್ತಾರೆ. ಎಲ್ಲರೂ ಹೋಗಿ ಹೂ ಇತ್ಯಾದಿಗಳನ್ನು ಹಾಕುತ್ತಾರೆ. ಅವರಿಗೆ ಏನೂ ಗೊತ್ತಿಲ್ಲ. ನೀವು ಮಕ್ಕಳು ತಿಳಿದುಕೊಂಡಿದ್ದೀರಲ್ಲವೆ. ಆದ್ದರಿಂದ ನಿಮಗೆ ಇಲ್ಲಿ ಕುಳಿತಿದ್ದಂತೆಯೇ ಬಹಳ ಖುಷಿಯಿರಬೇಕು. ನಾವು ಸ್ವರ್ಗದ ಸ್ಥಾಪನೆ ಮಾಡುತ್ತಿದ್ದೇವೆ. ಈಗ ತನ್ನನ್ನು ಆತ್ಮವೆಂದು ತಿಳಿದು ನನ್ನನ್ನು ನೆನಪು ಮಾಡಿ ಎಂದು ತಂದೆಯು ತಿಳಿಸುತ್ತಾರೆ. ವಿದ್ಯೆಯೂ ಸಹ ಬಹಳ ಸಹಜವಾಗಿದೆ, ಏನೂ ಖರ್ಚಾಗುವುದಿಲ್ಲ. ನಿಮ್ಮ ಮಮ್ಮಾರವರಿಗೆ ಒಂದು ಪೈಸೆಯಾದರೂ ಖರ್ಚಾಯಿತೆ? ಕವಡೆಯೂ ಖರ್ಚಿಲ್ಲದೆ ಓದಿ ಎಷ್ಟೊಂದು ಬುದ್ಧಿವಂತ ನಂಬರ್ವನ್ ಆಗಿಬಿಟ್ಟರು! ರಾಜಯೋಗಿನಿಯಾಗಿಬಿಟ್ಟರು. ಮಮ್ಮಾನ ತರಹ ಮತ್ತ್ಯಾರೂ ಆಗಿಲ್ಲ.

ನೋಡಿ, ಆತ್ಮಗಳಿಗೆ ಓದಿಸುತ್ತಾರೆ, ಆತ್ಮಗಳಿಗೆ ರಾಜ್ಯ ಸಿಗುತ್ತದೆ. ಆತ್ಮವೇ ರಾಜ್ಯವನ್ನು ಕಳೆದುಕೊಂಡಿದೆ. ಇಷ್ಟೊಂದು ಸೂಕ್ಷ್ಮ ಆತ್ಮವು ಎಷ್ಟೊಂದು ಕೆಲಸ ಮಾಡುತ್ತದೆ. ಅತಿಕೆಟ್ಟ ಕೆಲಸವು ವಿಕಾರದಲ್ಲಿ ಹೋಗುವುದಾಗಿದೆ. ಆತ್ಮವು 84 ಜನ್ಮಗಳ ಪಾತ್ರವನ್ನಭಿನಯಿಸುತ್ತದೆ. ಅತಿಸೂಕ್ಷ್ಮ ಆತ್ಮದಲ್ಲಿ ಎಷ್ಟೊಂದು ಶಕ್ತಿಯಿದೆ! ಇಡೀ ವಿಶ್ವದ ಮೇಲೆ ರಾಜ್ಯ ಮಾಡುತ್ತದೆ. ಈ ದೇವತೆಗಳ ಆತ್ಮದಲ್ಲಿ ಎಷ್ಟೊಂದು ಶಕ್ತಿಯಿದೆ, ಪ್ರತಿಯೊಂದು ಧರ್ಮದಲ್ಲಿ ಎಷ್ಟೊಂದು ಶಕ್ತಿಯಿರುತ್ತದೆ, ಕ್ರಿಶ್ಚಿಯನ್ ಧರ್ಮದಲ್ಲಿ ಎಷ್ಟೊಂದು ಶಕ್ತಿಯಿದೆ. ಆತ್ಮದಲ್ಲಿ ಇಷ್ಟೊಂದು ಶಕ್ತಿಯಿದೆ. ಅದು ಶರೀರದ ಮೂಲಕ ಕರ್ಮ ಮಾಡುತ್ತದೆ. ಆತ್ಮವೇ ಇಲ್ಲಿ ಬಂದು ಈ ಕರ್ಮಕ್ಷೇತ್ರದಲ್ಲಿ ಕರ್ಮ ಮಾಡುತ್ತದೆ. ಅಲ್ಲಿ ಕೆಟ್ಟ ಕರ್ತವ್ಯವಾಗುವುದಿಲ್ಲ. ಯಾವಾಗ ರಾವಣರಾಜ್ಯವು ಬರುವುದೋ ಆಗಲೇ ಆತ್ಮವು ವಿಕಾರ ಮಾರ್ಗದಲ್ಲಿ ಹೋಗುತ್ತದೆ. ವಿಕಾರವಂತೂ ಸದಾ ಇದದೇ ಇರುತ್ತದೆ ಎಂದು ಮನುಷ್ಯರು ಹೇಳುತ್ತಾರೆ. ಆದರೆ ನೀವು ಅವರಿಗೆ ತಿಳಿಸಿ- ಅಲ್ಲಿ ರಾವಣರಾಜ್ಯವೇ ಇಲ್ಲವೆಂದಾಗ ವಿಕಾರವು ಹೇಗಿರಲು ಸಾಧ್ಯ! ಅಲ್ಲಿ ಯೋಗಬಲವಿರುತ್ತದೆ. ಭಾರತದ ಯೋಗ ಪ್ರಸಿದ್ಧವಾಗಿದೆ. ಅನೇಕರು ಇದನ್ನು ಕಲಿಯಲು ಇಚ್ಛಿಸುತಾರೆ. ಆದರೆ ಯಾವಾಗ ನೀವು ಕಲಿಸುತ್ತೀರೋ ಆಗ ಮತ್ತ್ಯಾರೂ ಸಹ ಕಲಿಸಲು ಸಾಧ್ಯವಿಲ್ಲ. ಹೇಗೆ ಮಹರ್ಷಿ ಇದ್ದರು, ಯೋಗವನ್ನು ಕಲಿಸಲು ಎಷ್ಟೊಂದು ಪರಿಶ್ರಮಪಡುತ್ತಿದ್ದರು. ಆದರೆ ಈ ಹಠಯೋಗಿಯು ರಾಜಯೋಗವನ್ನು ಕಲಿಸಲು ಹೇಗೆ ಸಾಧ್ಯವೆಂದು ಪ್ರಪಂಚಕ್ಕೇನು ಗೊತ್ತಿದೆ? ಚಿನ್ಮಯಾನಂದರ ಬಳಿ ಅನೇಕರು ಹೋಗುತ್ತಾರೆ. ಸತ್ಯವಾಗಿಯೂ ಭಾರತದ ಪ್ರಾಚೀನ ರಾಜಯೋಗವನ್ನು ಬ್ರಹ್ಮಕುಮಾರ-ಕುಮಾರಿಯರ ವಿನಃ ಮತ್ತ್ಯಾರೂ ತಿಳಿಸಲು ಸಾಧ್ಯವಿಲ್ಲ. ಆದರೆ ಈಗ ಈ ಶಬ್ದವು ಹರಡುವ ಹಾಗಿಲ್ಲ. ಎಲ್ಲರೂ ತಿಳಿಯುತ್ತಾರೆಯೇ! ಬಹಳ ಪರಿಶ್ರಮವಿದೆ. ಮಹಿಮೆಯೂ ಆಗುವುದು. ಅಹೋ ಪ್ರಭು ನಿಮ್ಮ ಲೀಲೆಯು ಅಪರಮಪಾರವೆಂದು ಅಂತಿಮದಲ್ಲಿ ಹೇಳುತ್ತಾರಲ್ಲವೆ. ಈಗ ನೀವು ತಿಳಿಯುತ್ತೀರಿ- ನಿಮ್ಮ ವಿನಃ ತಂದೆಯನ್ನು ಅವರು ಪಾರಲೌಕಿಕ ತಂದೆ, ಶಿಕ್ಷಕ, ಸದ್ಗುರುವಾಗಿದ್ದಾರೆಂದು ಮತ್ತ್ಯಾರೂ ತಿಳಿದುಕೊಂಡಿಲ್ಲ. ಇಲ್ಲಿಯೂ ಅನೇಕರಿದ್ದಾರೆ, ನಡೆಯುತ್ತಾ-ನಡೆಯುತ್ತಾ ಮಾಯೆಯು ಆಕರ್ಷಣೆ ಮಾಡುತ್ತದೆ. ಆದ್ದರಿಂದ ಒಮ್ಮೆಲೆ ಮಾಯೆಯು ವಿಘ್ನಗಳನ್ನು ಹಾಕುತ್ತದೆ. ನಿಮ್ಮದು ಬಹಳ ಉನ್ನತ ಗುರಿಯಾಗಿದೆ. ಯುದ್ಧದ ಮೈದಾನವಾಗಿದೆ. ಆದರೆ ಇದರಲ್ಲಿ ಮಾಯೆಯು ಬಹಳ ವಿಘ್ನಗಳನ್ನು ಹಾಕುತ್ತದೆ. ಅವರು ವಿನಾಶಕ್ಕಾಗಿ ತಯಾರಿ ಮಾಡುತ್ತಿದ್ದಾರೆ. ನೀವಿಲ್ಲಿ ಪಂಚವಿಕಾರಗಳನ್ನು ಗೆಲ್ಲಲು ಪುರುಷಾರ್ಥ ಮಾಡುತ್ತಿದ್ದೀರಿ. ನೀವು ವಿಜಯಕ್ಕಾಗಿ ಅವರು ವಿನಾಶಕ್ಕಾಗಿ ಪುರುಷಾರ್ಥ ಮಾಡುತ್ತಿದ್ದಾರೆ. ಎರಡು ಕೆಲಸಗಳು ಒಟ್ಟಿಗೆ ಆಗುತ್ತದೆಯಲ್ಲವೆ. ಇನ್ನೂ ಸ್ವಲ್ಪ ಸಮಯವಿದೆ. ನಮ್ಮ ರಾಜ್ಯವು ಸ್ಥಾಪನೆಯಾಗಿಲ್ಲ. ರಾಜರು, ಪ್ರಜೆಗಳು ಈಗ ಎಲ್ಲರೂ ಆಗಬೇಕಾಗಿದೆ. ನೀವು ಅರ್ಧಕಲ್ಪಕ್ಕಾಗಿ ಆಸ್ತಿಯನ್ನು ಪಡೆಯುತ್ತೀರಿ ಬಾಕಿ ಮೋಕ್ಷವಂತೂ ಯಾರಿಗೂ ಸಿಗಲು ಸಾಧ್ಯವಿಲ್ಲ. ಇಂತಹವರು ಮೋಕ್ಷವನ್ನು ಪಡೆದರೆಂದು ಭಲೇ ಹೇಳುತ್ತಾರೆ. ಆದರೆ ಸತ್ತನಂತರ ಅವರು ಎಲ್ಲಿ ಹೋದರೆಂದು ಅವರಿಗೆ ತಿಳಿಯುತ್ತದೆ. ಹಾಗೆಯೇ ಅಸತ್ಯವನ್ನೂ ಹೇಳುತ್ತಿರುತ್ತಾರೆ.

ನಿಮಗೆ ತಿಳಿದಿದೆ- ಯಾರು ಶರೀರ ಬಿಡುತ್ತಾರೆಯೋ ಅವರು ಅವಶ್ಯವಾಗಿ ಇನ್ನೊಂದು ಶರೀರವನ್ನು ಪಡೆಯುತ್ತಾರೆ. ಮೋಕ್ಷವನ್ನು ಪಡೆಯಲು ಸಾಧ್ಯವಿಲ್ಲ. ನೀರಿನ ಗುಳ್ಳೆಯು ನೀರಿನಲ್ಲಿ ಲೀನವಾಗಿಬಿಡುತ್ತವೆ. ಎಂದಲ್ಲ ತಂದೆಯು ತಿಳಿಸುತ್ತಾರೆ- ಈ ಶಾಸ್ತ್ರಗಳೆಲ್ಲವೂ ಭಕ್ತಿಮಾರ್ಗದ ಸಾಮಗ್ರಿಯಾಗಿದೆ. ನೀವು ಮಕ್ಕಳು ಸಮ್ಮುಖದಲ್ಲಿ ಕೇಳುತ್ತೀರಿ. ಬಿಸಿ-ಬಿಸಿಯಾದ ಹಲ್ವ ತಿನ್ನುತ್ತೀರಿ, ಎಲ್ಲರಿಗಿಂತ ಹೆಚ್ಚಿನದಾಗಿ ಬಿಸಿಹಲ್ವ ಯಾರು ತಿನ್ನುತ್ತಾರೆ? (ಬ್ರಹ್ಮ) ಇವರಂತೂ ತಂದೆಯ ಆತ್ಮದ ಪಕ್ಕದಲ್ಲಿಯೇ ಕುಳಿತಿರುತ್ತಾರೆ ಅಂದಾಗ ತಕ್ಷಣ ಕೇಳುತ್ತಾರೆ ಮತ್ತು ಧಾರಣೆ ಮಾಡಿಕೊಳ್ಳುತ್ತಾರೆ ಮತ್ತೆ ಇವರೇ ಶ್ರೇಷ್ಠಪದವಿಯನ್ನು ಪಡೆಯುತ್ತಾರೆ. ಸೂಕ್ಷ್ಮವತನದಲ್ಲಿ ವೈಕುಂಠದಲ್ಲಿ ಇವರದೇ ಸಾಕ್ಷಾತ್ಕಾರ ಮಾಡುತ್ತಾರೆ. ನೀವೂ ಸಹ ಈ ಕಣ್ಣುಗಳಿಂದ ಅವರನ್ನೇ ನೋಡುತ್ತೀರಿ. ತಂದೆಯಂತೂ ಎಲ್ಲರಿಗೂ ಓದಿಸುತ್ತಾರೆ. ಆದರೆ ನೆನಪಿನ ಪರಿಶ್ರಮವಿದೆ. ನೆನಪಿನಲ್ಲಿರುವುದು ನಿಮಗೆ ಹೇಗೆ ಪರಿಶ್ರಮವೆನಿಸುತ್ತದೆಯೋ ಹಾಗೆಯೇ ಇವರಿಗೂ ಅನಿಸುತ್ತದೆ. ಇದರಲ್ಲಿ ಯಾವುದೇ ಕೃಪೆಯ ಮಾತಿಲ್ಲ. ತಂದೆಯು ತಿಳಿಸುತ್ತಾರೆ- ನಾನು ಇವರ ಶರೀರವನ್ನು ಲೋನ್ ಆಗಿ ಪಡೆದಿದ್ದೇನೆ. ಅವರ ಲೆಕ್ಕವನ್ನು ಅವರಿಗೆ ಕೊಟ್ಟುಬಿಡುತ್ತೇನೆ. ಆದರೆ ನೆನಪಿನ ಪುರುಷಾರ್ಥವನ್ನಂತೂ ಇವರೂ ಸಹ ಮಾಡಬೇಕಾಗಿದೆ. ಪಕ್ಕದಲ್ಲಿಯೇ ಕುಳಿತಿದ್ದಾರೆಂದು ತಿಳಿಯುತ್ತೇನೆ (ಬ್ರಹ್ಮಾ). ತಂದೆಯನ್ನು ನಾನು ನೆನಪು ಮಾಡುತ್ತಾ ಮತ್ತೆ ಮರೆತುಹೋಗುತ್ತೇನೆ. ಎಲ್ಲರಿಗಿಂತ ಹೆಚ್ಚಿನ ಪರಿಶ್ರಮವನ್ನು ಇವರೇ ಪಡಬೇಕಾಗುತ್ತದೆ. ಯುದ್ಧದ ಮೈದಾನದಲ್ಲಿ ಯಾವ ಮಹಾರಥಿ ಶಕ್ತಿಶಾಲಿಗಳಿರುತ್ತಾರೆ. ಹೇಗೆ ಮಹಾವೀರನ ಉದಾಹರಣೆಯಿದೆ ಎಂದಾಗ ಅವರಿಗೇ ಮಾಯೆಯು ಪರೀಕ್ಷೆಯನ್ನು ತೆಗೆದುಕೊಳ್ಳುತ್ತದೆ. ಏಕೆಂದರೆ ಅವರು ಮಹಾವೀರರಾಗಿದ್ದರು. ಯಾರು ಹೆಚ್ಚಿನ ಬಲಶಾಲಿಯೋ ಅಷ್ಟೇ ಹೆಚ್ಚಿನದಾಗಿ ಮಾಯೆಯು ಅವರಿಂದ ಪರೀಕ್ಷೆ ತೆಗೆದುಕೊಳ್ಳುತ್ತದೆ. ಹೆಚ್ಚಿನ ಬಿರುಗಾಳಿ ಬರುತ್ತದೆ. ಬಾಬಾ ನಮಗೆ ಈ ರೀತಿ ಆಗುತ್ತದೆಯೆಂದು ಮಕ್ಕಳು ಕರೆಯುತ್ತಾರೆ. ಇದಕ್ಕೆ ತಂದೆಯು ತಿಳಿಸುತ್ತಾರೆ- ಮಕ್ಕಳೇ, ಇದೆಲ್ಲವೂ ಆಗುತ್ತದೆ. ಎಚ್ಚರಿಕೆಯಿಂದಿರಿ ಎಂದು ತಂದೆಯು ಪ್ರತಿನಿತ್ಯವೂ ತಿಳಿಸುತ್ತಾರೆ. ಬಾಬಾ, ಮಾಯೆಯು ಬಹಳ ಬಿರುಗಾಳಿಯನ್ನು ತರುತ್ತದೆ ಎಂದು ಬರೆಯುತ್ತಾರೆ. ಕೆಲವರು ದೇಹಾಭಿಮಾನಿಗಳಾಗಿರುತ್ತಾರೆ. ಅಂತಹವರಿಗೆ ತಂದೆಯು ತಿಳಿಸುವುದೇ ಇಲ್ಲ. ನೀವೀಗ ಬಹಳ ಬುದ್ಧಿವಂತರಾಗಿದ್ದೀರಿ. ಆತ್ಮವು ಪವಿತ್ರವಾಗಿರುವುದರಿಂದ ಮತ್ತೆ ಶರೀರವೂ ಪವಿತ್ರವಾಗಿರುವುದೇ ಸಿಗುವುದು. ಆತ್ಮವು ಎಷ್ಟು ಚಮತ್ಕಾರಿಯಾಗಿಬಿಡುತ್ತದೆ. ಮೊದಲಿಗೆ ಬಡವರೇ ತಿಳಿದುಕೊಳ್ಳುತ್ತಾರೆ. ತಂದೆಗೂ ಸಹ ಬಡವರ ಬಂಧುವೆಂದು ಗಾಯನವಿದೆ. ಉಳಿದವರೆಲ್ಲರೂ ತಡವಾಗಿ ಬರುತ್ತಾರೆ. ನಿಮಗೆ ಗೊತ್ತಿದೆ. ಎಲ್ಲಿಯವರೆಗೆ ಸಹೋದರ-ಸಹೋದರಿಯರಾಗುವುದಿಲ್ಲವೋ ಅಲ್ಲಿಯವರೆಗೆ ಸಹೋದರ-ಸಹೋದರರು ಹೇಗಾಗುತ್ತೀರಿ? ಪ್ರಜಾಪಿತ ಬ್ರಹ್ಮನ ಸಂತಾನರಂತೂ ಸಹೋದರ-ಸಹೋದರಿಯಾದರಲ್ಲವೆ. ತಂದೆಯು ಆತ್ಮದ ದೃಷ್ಟಿಯಲ್ಲಿ ಸಹೋದರ-ಸಹೋದರರೆಂದು ತಿಳಿಯಿರಿ ಎಂದು ಹೇಳುತ್ತಾರೆ. ಇದು ಕೊನೆಯ ಸಂಬಂಧವಾಗಿದೆ. ಮತ್ತೆ ಮೇಲೂ ಸಹ ನೀವು ಹೋಗಿ ಸಹೋದರರೊಂದಿಗೆ ಮಿಲನ ಮಾಡುತ್ತೀರಿ ನಂತರ ಸತ್ಯಯುಗದಲ್ಲಿ ಹೊಸಸಂಬಂಧವು ಪ್ರಾರಂಭವಾಗುವುದು. ಅಲ್ಲಿ ಚಿಕ್ಕಪ್ಪ, ದೊಡ್ಡಪ್ಪ, ಮಾವ ಮೊದಲಾದ ಬಹಳಷ್ಟು ಸಂಬಂಧಗಳಿರುವುದಿಲ್ಲ. ಬಹಳ ಚಿಕ್ಕದಾದ ಸಂಬಂಧವಿರುತ್ತದೆ ನಂತರ ಹೆಚ್ಚುತ್ತಾ ಹೋಗುತ್ತದೆ. ಈಗಂತೂ ತಂದೆಯು ತಿಳಿಸುತ್ತಾರೆ- ಮಕ್ಕಳೇ, ಸಹೋದರ-ಸಹೋದರಿಯೂ ಅಲ್ಲ, ಈಗ ಸಹೋದರ-ಸಹೋದರರೆಂದು ತಿಳಿಯಿರಿ. ನಾಮರೂಪದಿಂದಲೂ ಹೊರಬರಬೇಕಾಗಿದೆ. ತಂದೆಯು ಆತ್ಮಗಳಿಗೇ ಓದಿಸುತ್ತಾರೆ. ಪ್ರಜಾಪಿತ ಬ್ರಹ್ಮನ ಸಂಬಂಧದಿಂದ ಸಹೋದರ-ಸಹೋದರಿಯರಾಗಿದ್ದೀರಲ್ಲ. ಕೃಷ್ಣನಂತೂ ಮಗುವಾಗಿದ್ದಾನೆ. ಅಂದಮೇಲೆ ಕೃಷ್ಣನು ಸಹೋದರ-ಸಹೋದರನ್ನಾಗಿ ಹೇಗೆ ಮಾಡುತ್ತಾನೆ! ಗೀತೆಯಲ್ಲಿಯೂ ಈ ಮಾತುಗಳಿಲ್ಲ. ಇದು ಸಂಪೂರ್ಣ ಭಿನ್ನವಾದ ಮಾತುಗಳಾಗಿವೆ. ನಾಟಕದಲ್ಲಿ ಎಲ್ಲವೂ ನಿಗಧಿಯಾಗಿದೆ. ಒಂದು ಸೆಕೆಂಡಿನ ಪಾತ್ರವು ಇನ್ನೊಂದು ಸೆಕೆಂಡಿಗೆ ಹೋಲುವುದಿಲ್ಲ. ಎಷ್ಟು ತಿಂಗಳು, ಎಷ್ಟು ಗಂಟೆ, ಎಷ್ಟು ದಿನಗಳು ಕಳೆಯಬೇಕಾಗಿದೆಯೋ ಮತ್ತೆ 5000 ವರ್ಷಗಳ ನಂತರ ಅದೇ ರೀತಿ ಕಳೆಯುತ್ತದೆ. ಕಡಿಮೆ ಬುದ್ಧಿಯವರು ಇಷ್ಟೊಂದು ಧಾರಣೆ ಮಾಡುವುದಿಲ್ಲ. ಆದ್ದರಿಂದಲೇ ತಂದೆಯು ಹೇಳುತ್ತಾರೆ- ಇದಂತೂ ಬಹಳ ಸಹಜವಾಗಿದೆ. ತನ್ನನ್ನು ಆತ್ಮನೆಂದು ತಿಳಿಯಿರಿ, ಬೇಹದ್ದಿನ ತಂದೆಯನ್ನು ನೆನಪು ಮಾಡಿ. ಹಳೆಯ ಪ್ರಪಂಚದ ವಿನಾಶವೂ ಆಗಲಿದೆ. ಯಾವಾಗ ಸಂಗಮದ ಸಮಯವಾಗುವುದೋ ಆಗಲೇ ನಾನು ಬರುತ್ತೇನೆ. ನೀವೇ ದೇವಿ-ದೇವತೆಗಳಾಗಿದ್ದೀರಿ. ನೀವು ಸಹ ತಿಳಿದುಕೊಂಡಿದ್ದೀರಿ. ಈ ದೇವತೆಗಳ ರಾಜ್ಯವಿದ್ದಾಗ ಮತ್ತ್ಯಾವುದೇ ಧರ್ಮವಿರಲಿಲ್ಲ. ಈಗಂತೂ ಇವರ ರಾಜ್ಯವು ಇಲ್ಲವೇ ಇಲ್ಲ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳ ಪ್ರತಿ ಮಾತಾಪಿತ ಬಾಪ್ದಾದಾರವರ ನೆನಪು-ಪ್ರೀತಿ ಹಾಗೂ ಸುಪ್ರಭಾತ, ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ಈಗ ಅಂತಿಮ ಸಮಯವಾಗಿದೆ. ಹಿಂತಿರುಗಿ ಮನೆಗೆ ಹೋಗಬೇಕಾಗಿದೆ. ಆದ್ದರಿಂದ ತಮ್ಮ ಬುದ್ಧಿಯನ್ನು ನಾಮ-ರೂಪದಿಂದ ತೆಗೆಯಬೇಕಾಗಿದೆ. ನಾವಾತ್ಮಗಳು ಪರಸ್ಪರ ಸಹೋದರರಾಗಿದ್ದೇವೆಂಬ ಅಭ್ಯಾಸ ಮಾಡಬೇಕಾಗಿದೆ. ದೇಹಾಭಿಮಾನದಲ್ಲಿ ಬರಬಾರದು.

2. ಪ್ರತಿಯೊಬ್ಬರ ಸ್ಥಿತಿ ಮತ್ತು ಯೋಗದಲ್ಲಿ ರಾತ್ರಿ-ಹಗಲಿನ ಅಂತರವಿದೆ. ಆದ್ದರಿಂದ ದೂರ-ದೂರ ಕುಳಿತುಕೊಳ್ಳಬೇಕಾಗಿದೆ. ಒಬ್ಬರ ಅಂಗಕ್ಕೆ ಇನ್ನೊಬ್ಬರ ಅಂಗವು ತಗಲಬಾರದು. ಪುಣ್ಯಾತ್ಮರಾಗಲು ನೆನಪಿನ ಪರಿಶ್ರಮಪಡಬೇಕಾಗಿದೆ.

ವರದಾನ:
ತಂದೆಯ ಪ್ರೀತಿಯಲ್ಲಿ ತನ್ನ ಮೂಲ ಬಲಹೀನತೆಯನ್ನು ಬಲಿಹಾರಿ ಮಾಡುವಂತಹ ಜ್ಞಾನಿತ್ವ ಆತ್ಮ ಭವ.

ಬಾಪ್ದಾದಾ ನೋಡುತ್ತಾರೆ ಇಲ್ಲಿಯವರೆಗೂ ಐದು ವಿಕಾರಗಳ ವ್ಯರ್ಥ ಸಂಕಲ್ಪ ಮೆಜಾರಿಟಿಯವರಲ್ಲಿ ನಡೆಯುತ್ತಿದೆ. ಜ್ಞಾನಿತ್ವ ಆತ್ಮಗಳಲ್ಲಿಯೂ ಕೆಲವೊಮ್ಮೆ ತಮ್ಮ ಗುಣ ಅಥವಾ ವಿಶೇಷತೆಯ ಅಭಿಮಾನ ಬಂದು ಬಿಡುವುದು, ಪ್ರತಿಯೊಬ್ಬರು ತಮ್ಮ ಮೂಲ ಬಲಹೀನತೆ ಅಥವಾ ಮೂಲ ಸಂಸ್ಕಾರವನ್ನು ತಿಳಿದುಕೊಂಡು ಇದ್ದಾರೆ, ಆ ಬಲಹೀನತೆಯನ್ನು ತಂದೆಯ ಪ್ರೀತಿಯಲ್ಲಿ ಅರ್ಪಣೆ ಮಾಡಿ ಬಿಡಿ ಇದೇ ಪ್ರೀತಿಯ ನಿದರ್ಶನವಾಗಿದೆ. ಸ್ನೇಹಿ ಅಥವಾ ಜ್ಞಾನಿತ್ವ ಆತ್ಮಗಳು ತಂದೆಯ ಪ್ರೀತಿಯಲ್ಲಿ ವ್ಯರ್ಥ ಸಂಕಲ್ಪಗಳನ್ನು ಸಹ ಅರ್ಪಣೆ ಮಾಡಿ ಬಿಡುತ್ತಾರೆ.

ಸ್ಲೋಗನ್:
ಸ್ವಮಾನದ ಸೀಟ್ ಮೆಲೆ ಸ್ಥಿತರಾಗಿ ಸರ್ವರಿಗೆ ಸನ್ಮಾನ ಕೊಡುವಂತಹ ಮಾನನೀಯ ಆತ್ಮ ಆಗಿ.