27.11.24 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ-ಹದ್ದಿನ
ಸಂಸಾರದ ವ್ಯರ್ಥ ಮಾತುಗಳಲ್ಲಿ ನಿಮ್ಮ ಸಮಯ ಕಳೆಯಬೇಡಿ, ಬುದ್ಧಿಯಲ್ಲಿ ಸದಾ ಉನ್ನತ ವಿಚಾರಗಳೆ
ನಡೆಯುತ್ತಿರಲಿ”
ಪ್ರಶ್ನೆ:
ಯಾವ ಮಕ್ಕಳು
ತಂದೆಯ ಎಲ್ಲಾ ಸೂಚನೆಗಳನ್ನು ಕಾರ್ಯರೂಪದಲ್ಲಿ ತರಲು ಸಾಧ್ಯ?
ಉತ್ತರ:
ಯಾರು
ಅಂತರ್ಮುಖಿಗಳಾಗಿರುತ್ತಾರೆ, ತಮ್ಮ ಷೋ ಮಾಡದೆ, ಆತ್ಮೀಯ ನಶೆಯಲ್ಲಿರುತ್ತಾರೆ, ಅವರೇ ತಂದೆಯ ಎಲ್ಲ
ಸೂಚನೆಗಳನ್ನು ಕಾರ್ಯರೂಪದಲ್ಲಿ ತರಲು ಸಾಧ್ಯ, ನಿಮಗೆ ಮಿತ್ಯ ಅಹಂಕಾರ ಬರಬಾರದು. ಒಳಗೆ ಬಹಳ
ಸ್ವಚ್ಛತೆಯಿರಬೇಕು. ಆತ್ಮ ತುಂಬಾ ಒಳ್ಳೆಯದಾಗಿರಬೇಕು, ಒಬ್ಬ ತಂದೆಯ ಜೊತೆ ಸತ್ಯವಾದ
ಪ್ರೀತಿಯಿರಬೇಕು. ಎಂದೂ ಉಪ್ಪು-ನೀರು ಅರ್ಥಾತ್ ಕಠುವಾದ ಸಂಸ್ಕಾರ ಇರಬಾರದು, ಆಗ ತಂದೆಯ ಎಲ್ಲಾ
ಸೂಚನೆಗಳು ಕಾರ್ಯರೂಪದಲ್ಲಿ ಬರುವುದು.
ಓಂ ಶಾಂತಿ.
ಮಕ್ಕಳು ಕೇವಲ ನೆನಪಿನ ಯಾತ್ರೆಯಲ್ಲಿ ಮಾತ್ರ ಕುಳಿತಿಲ್ಲ. ಮಕ್ಕಳಿಗೆ ನಶೆಯಿದೆ ನಾವು ಶ್ರೀಮತದ
ಮೇಲೆ ನಮ್ಮ ಫರಿಸ್ತಾನ ಸ್ಥಾಪನೆ ಮಾಡುತ್ತಿದ್ದೇವೆ. ಇಷ್ಟು ಒಲವು-ಉತ್ಸಾಹವಿರಬೇಕಾಗಿದೆ. ಕೊಳಕು
ಇತ್ಯಾದಿ ಎಲ್ಲಾ ವ್ಯರ್ಥ ಮಾತುಗಳೂ ಬಿಟ್ಟು ಹೋಗಬೇಕು. ಬೇಹದ್ದಿನ ತಂದೆಯನ್ನು ನೋಡುತ್ತಲೇ
ಉಲ್ಲಾಸದಲ್ಲಿ ಬರಬೇಕು.ಎಷ್ಟೆಷ್ಟು ನೀವು ನೆನಪಿನ ಯಾತ್ರೆಯಲ್ಲಿರುವಿರಿ ಅಷ್ಟು
ಉನ್ನತಿಯಾಗುತ್ತಿರುವುದು. ತಂದೆ ಹೇಳುತ್ತಾರೆ ಮಕ್ಕಳಿಗಾಗಿ ಆತ್ಮೀಯ ಯೂನಿವರ್ಸಿಟಿ (ವಿಶ್ವವಿದ್ಯಾಲಯ)
ಇರಬೇಕಾಗಿದೆ. ನಿಮ್ಮದು ಆಧ್ಯಾತ್ಮಿಕ ವಿಶ್ವವಿದ್ಯಾಲಯವಾಗಿದೆ. ಅಂದಾಗ ಆ ವಿಶ್ವ ವಿದ್ಯಾಲಯ
ಎಲ್ಲಿದೆ? ವಿಶ್ವ ವಿದ್ಯಾಲಯಗಳನ್ನು ಸ್ಥಾಪನೆ ಮಾಡಲಾಗುವುದು. ಅವುಗಳ ಜೊತೆಗೆ ದೊಡ್ಡ ಉನ್ನತವಾದ
ಹಾಸ್ಟಲ್ ಸಹಾ ಇರಬೇಕಾಗುವುದು. ನಿಮ್ಮದು ಎಷ್ಟು ಉನ್ನತವಾದ ವಿಚಾರಗಳಿರಬೇಕು. ತಂದೆಗಂತೂ ಹಗಲಿರಳು
ಇದೇ ವಿಚಾರಗಳು ನಡೆಯುತ್ತಿರುತ್ತದೆ- ಮಕ್ಕಳಿಗೆ ಹೇಗೆ ಓದಿಸಿ ಉನ್ನತವಾದ ಪರೀಕ್ಷೆಯಲ್ಲಿ ತೇರ್ಗಡೆ
ಮಾಡಿಸುವುದು? ಯಾವುದರಿಂದ ಅವರು ಪುನಃ ಈ ವಿಶ್ವದ ಮಾಲೀಕರಾಗುವವರಿದ್ದಾರೆ. ವಾಸ್ತವವಾಗಿ ನಿಮ್ಮ
ಆತ್ಮ ಶುದ್ಧ ಸತೋಪ್ರಧಾನವಾಗಿತ್ತು ಆಗ ಶರೀರವೂ ಸಹಾ ಎಷ್ಟು ಸತೋಪ್ರಧಾನ ಸುಂದರ ವಾಗಿತ್ತು.
ರಾಜ್ಯಭಾಗ್ಯವೂ ಸಹಾ ಎಷ್ಟು ಉನ್ನತವಾಗಿತ್ತು. ನಿಮ್ಮ ಹದ್ಧಿನ ಸಂಸಾರದ ಕೊಳಕು ಮಾತುಗಳಲ್ಲಿ ಸಮಯ
ಬಹಳ ವ್ಯರ್ಥವಾಗಿ ಹೋಗುವುದು. ನೀವು ವಿಧ್ಯಾರ್ಥಿಗಳ ಒಳಗೆ ಕೊಳಕುವಿಚಾರಗಳು ಇರಬಾರದಾಗಿದೆ. ಬಹಳ
ಒಳ್ಳೊಳ್ಳೆಯ ಸಮಿತಿಗಳಂತೂ ರಚಿಸುವಿರಿ.ಆದರೆ ಯೋಗಬಲವೇ ಇಲ್ಲ. ಸುಮ್ಮನೆ ಹೇಳುತ್ತಿರುತ್ತಾರೆ ನಾವು
ಇದನ್ನು ಮಾಡುತ್ತೇವೆ, ಅದನ್ನು ಮಾಡುತ್ತೇವೆ. ಮಾಯೆಯೂ ಸಹ ಹೇಳುತ್ತೆ ನಾವು ಇವರನ್ನು
ಮೂಗು-ಕಿವಿಯಿಂದ ಹಿಡಿಯೋಣ ಎಂದು. ತಂದೆಯ ಜೊತೆ ಪ್ರೀತಿಯೇ ಇಲ್ಲ. ಹೇಳಲಾಗುವುದಲ್ಲವೇ ನರ ಬಯಸುವುದೇ
ಒಂದು........ ಮಾಯೆಯೂ ಸಹ ಏನೂ ಮಾಡಲು ಬಿಡುವುದಿಲ್ಲ. ಮಾಯೆ ಬಹಳ ಮೋಸಮಾಡುವುದಿದೆ, ಕಿವಿಯನ್ನೇ
ಕತ್ತರಿಸಿಬಿಡುತ್ತದೆ. ತಂದೆ ಮಕ್ಕಳನ್ನು ಎಷ್ಟು ಶ್ರೇಷ್ಠರನ್ನಾಗಿ ಮಾಡುತ್ತಾರೆ, ಸೂಚನೆಗಳನ್ನು
ಕೊಡುತ್ತಾರೆ-ಇದನ್ನು ಮಾಡಿ-ಇದನ್ನು ಮಾಡಿ ಎಂದು. ತಂದೆ ಬಹಳ ರಾಯಲ್-ರಾಯಲ್ ಮಕ್ಕಳನ್ನು
ಕಳುಹಿಸುತ್ತಾರೆ. ಕೆಲವರು ಕೇಳುತ್ತಾರೆ ಬಾಬಾ ನಾವು ತರಬೇತಿ ಪಡೆಯಲು ಹೋಗೋಣವೇ? ಆಗ ಬಾಬಾ
ಹೇಳುತ್ತಾರೆ ಮಗು ಮೊದಲು ನಿಮ್ಮ ಬಲಹೀನತೆಗಳನ್ನು ತೆಗೆದುಹಾಕಿ. ನಿಮ್ಮನ್ನು ನೋಡಿಕೊಳ್ಳಿ
ನನ್ನಲ್ಲಿ ಎಷ್ಟು ಅವಗುಣಗಳಿವೆ? ಒಳ್ಳೊಳ್ಳೆಯ ಮಹಾರಥಿಗಳನ್ನೂ ಸಹಾ ಮಾಯೆ ಏಕ್ದಂ ಉಪ್ಪು-ನೀರಾಗಿ
ಮಾಡಿಬಿಡುತ್ತದೆ. ಇಂತಹ ಉಪ್ಪು ಮಕ್ಕಳಿದ್ದಾರೆ ಯಾರು ತಂದೆಯನ್ನು ಎಂದೂ ನೆನಪು ಸಹ ಮಾಡುವುದಿಲ್ಲ.
ಜ್ಞಾನದ “ಗ” ಸಹ ತಿಳಿದುಕೊಂಡಿಲ್ಲ ಹೊರಗಿನಿಂದ ಷೋ ಬಹಳ ಇದೆ. ಇದರಲ್ಲಂತೂ ಬಹಳ
ಅಂತರ್ಮುಖಿಯಾಗಿರಬೇಕು, ಆದರೆ ಕೆಲವರದಂತೂ ಅವಿದ್ಯಾವಂತರಂತೆ ಚಲನೆ ಇರುತ್ತದೆ, ಸ್ವಲ್ಪ ಹಣಯಿದ್ದರೆ
ಸಾಕು ಅದರ ನಶೆ ಏರಿಬಿಡುತ್ತದೆ. ಇದು ತಿಳಿಯುವುದೇ ಇಲ್ಲ ಅರೇ, ನಾವಂತೂ ಕಂಗಾಲರಾಗಿದ್ದೇವೆ ಎಂದು.
ಮಾಯೆ ತಿಳಿದುಕೊಳ್ಳಲು ಬಿಡುವುದಿಲ್ಲ. ಮಾಯೆ ಬಹಳ ಜಬರ್ದಸ್ತ್ ಆಗಿದೆ.ಬಾಬಾ ಸ್ವಲ್ಪ ಮಹಿಮೆ
ಮಾಡಿದೊಡನೆ ಬಹಳ ಖುಶಿಯಾಗಿಬಿಡುತ್ತಾರೆ.
ಬಾಬಾನಿಗೆ ಹಗಲು-ರಾತ್ರಿ
ಇದೇ ವಿಚಾರ ನಡೆಯುತ್ತಿರುತ್ತದೆ ವಿಶ್ವವಿದ್ಯಾಲಯ ಬಹಳ ಫಸ್ಟ್ ಕ್ಲಾಸ್ ಆಗಿರಬೇಕು, ಅಲ್ಲಿ ಮಕ್ಕಳು
ಚೆನ್ನಾಗಿ ಓದಬೇಕು. ನೀವು ತಿಳಿದಿರುವಿರಿ ನಾವು ಸ್ವರ್ಗದಲ್ಲಿ ಹೋಗುತ್ತಿದ್ದೇವೆ ಎಂದಮೇಲೆ ಖುಷಿಯ
ಪಾರ ಏರಿರಬೇಕಲ್ಲವೇ, ಇಲ್ಲಿ ಬಾಬಾ ಬಿನ್ನ-ಬಿನ್ನ ತರಹದ ಡೋಸ್ ಕೊಡುತ್ತಾರೆ, ನಶೆ ಏರಿಸುತ್ತಾರೆ.
ಯಾರಿಗಾದರೂ ತುಂಬಾ ನಷ್ಟವಾಗಿ ದೀವಾಳಿಯಾಗಿರುವವರಿಗೆ, ಷರಾಬು ಕುಡಿಸಿದೊಡನೆ ತಿಳಿಯುತ್ತಾರೆ ನಾನು
ಬಾದ್ಷಾಹಾ ಆಗಿದ್ದೇನೆ ಎಂದು. ನಂತರ ನಶೆ ಪೂರ್ತಿ ಇಳಿದಮೇಲೆ ಹೇಗಿದ್ದರೋ ಹಾಗೇ ಆಗಿಬಿಡುತ್ತಾರೆ.
ಈಗ ಇದಾಗಿದೆ ಆತ್ಮೀಯ ನಶೆ. ನೀವು ತಿಳಿದಿರುವಿರಿ ಬೇಹದ್ದಿನ ತಂದೆ ಶಿಕ್ಷಕರಾಗಿ ನಮಗೆ
ಓದಿಸುತ್ತಾರೆ ಮತ್ತು ಸೂಚನೆಗಳನ್ನು ಕೊಡುತ್ತಾರೆ ಹೀಗೆ-ಹೀಗೆ ಮಾಡಿ ಎಂದು. ಕೆಲವೊಮ್ಮೆ ಕೆಲವರಿಗೆ
ಮಿತ್ಯ ಅಹಂಕಾರ ಸಹಾ ಬಂದುಬಿಡುವುದು. ಮಾಯೆ ಅಲ್ಲವೇ. ಇಂತಿಂತಹ ಮಾತುಗಳನ್ನು ಆಡುತ್ತಾರೆ ಅದನ್ನು
ಕೇಳಲೇ ಬೇಡಿ. ಬಾಬಾ ತಿಳಿಯುತ್ತಾರೆ ಇದೆಲ್ಲಾ ನಡೆಯುವುದಿಲ್ಲ. ಒಳಗೆ ಬಹಳ ಸ್ವಚ್ಚತೆ ಇರಬೇಕಿದೆ.
ಆತ್ಮ ಬಹಳ ಒಳ್ಳೆಯದಾಗಿರಬೇಕು. ನಿಮ್ಮದು ಪ್ರೇಮ ವಿವಾಹ ಆಯಿತಲ್ಲವೇ. ಪ್ರೇಮವಿವಾಹದಲ್ಲಿ ಎಷ್ಟು
ಪ್ರೀತಿಇರುತ್ತದೆ, ಇವರಂತೂ ಪತಿಯರ ಪತಿಯಾಗಿದ್ದಾರೆ. ಹಾಗೆ ನೋಡಿದರೆ ಎಷ್ಟು ಜನಗಳ ಜೊತೆ
ಪ್ರೇಮವಿವಾಹವಾಗುವುದು, ಒಬ್ಬರ ಜೊತೆಯಂತೂ ಅಲ್ಲ. ಎಲ್ಲರೂ ಹೇಳುತ್ತಾರೆ ನಮಗಂತೂ ಶಿವಬಾಬಾನ ಜೊತೆ
ನಿಶ್ಚಿತಾರ್ಥವಾಗಿಬಿಟ್ಟಿದೆ. ನಾವಂತೂ ಸ್ವರ್ಗದಲ್ಲಿ ಹೋಗಿ ಕುಳಿತುಕೊಳ್ಳುತ್ತೇವೆ. ಖುಶಿಯ
ಮಾತಾಗಿದೆಯಲ್ಲವೆ. ಒಳಗೆ ಬರಬೇಕಲ್ಲವೇ ಬಾಬಾ ನಮಗೆ ಎಷ್ಟು ಶೃಂಗಾರ ಮಾಡುತ್ತಾರೆ. ಶಿವಬಾಬಾ
ಶೃಂಗಾರ ಮಾಡುತ್ತಾರೆ ಇವರ ಮುಖಾಂತರ. ನಿಮ್ಮ ಬುದ್ಧಿಯಲ್ಲಿದೆ ನಾವು ತಂದೆಯನ್ನು ನೆನಪು
ಮಾಡುತ್ತಾ-ಮಾಡುತ್ತಾ ಸತೋಪ್ರಧಾನರಾಗಿಬಿಡುತ್ತೇವೆ. ಈ ಜ್ಞಾನ ಬೇರೆಯಾರಿಗೂ ಗೋತ್ತೇಇಲ್ಲ. ಇದರಲ್ಲಿ
ಬಹಳ ನಶೆ ಇರುತ್ತದೆ. ಆದರೆ ಈಗ ಇನ್ನೂ ಆ ನಶೆ ಏರುತ್ತಿಲ್ಲ. ಖಂಡಿತ ಆಗಬೇಕು. ಗಾಯನ ಸಹಾ ಇದೆ
ಅತೀಂದ್ರಿಯ ಸುಖ ಗೋಪಗೋಪಿಯರನ್ನು ಕೇಳಿ ಎಂದು. ಈಗ ನಿಮ್ಮ ಆತ್ಮ ಎಷ್ಟು ಛೀ! ಛೀ! ಆಗಿದೆ. ಹೇಗೆ
ಬಹಳ ಛೀ! ಛೀ! ಕೊಳಕಿನಲ್ಲಿ ಕುಳಿತಿರುವಿರಿ. ಅದನ್ನು ತಂದೆ ಬಂದು ಬದಲಾಯಿಸುತ್ತಾರೆ, ಪುರ್ನಜೀವ
ನೀಡುತ್ತಾರೆ. ಮನುಷ್ಯನ ಧೃಷ್ಠ್ಠಿಕೋನವನ್ನು ಬದಲಾಯಿಸಿದಾಗ ಎಷ್ಟು ಖುಶಿಯಾಗುವುದು. ನಿಮಗೆ ಈಗ
ತಂದೆ ಸಿಕ್ಕಿದ್ದಾರೆ ಆಗ ದೋಣಿಯೇ ಪಾರಾಗಿಬಿಡುವುದು. ನಾವು ಬೇಹದ್ದಿನ ತಂದೆಯವರಾಗಿದ್ದೇವೆ ಎಂದು
ತಿಳಿದಿರುವಿರಿ ಅಂದಮೇಲೆ ನಿಮ್ಮನ್ನು ಎಷ್ಟು ಬೇಗ ಸುಧಾರಣೆ ಮಾಡಿಕೊಳ್ಳಬೇಕಿದೆ. ಹಗಲು-ರಾತ್ರಿ ಇದೇ
ಖುಶಿ, ಇದೇ ಚಿಂತನೆ ಇರಲಿ-ನೋಡಿ ನಿಮಗೆ ಎಂತಹ ಮಾರ್ಷಲ್ (ಸೈನ್ಯಾಧಿಕಾರಿ) ಸಿಕ್ಕಿದ್ದಾರೆ.
ಹಗಲು-ರಾತ್ರಿ ಇದೇ ಚಿಂತನೆಯಲ್ಲಿರ ಬೇಕಾಗುತ್ತದೆ. ಯಾರ್ಯಾರು ಒಳ್ಳೆಯರೀತಿ ತಿಳಿಯುತ್ತಾರೆ,
ಗುರುತಿಸುತ್ತಾರೆ, ಅವರಂತೂ ಹೇಗೆ ಹಾರುತ್ತಿರುತ್ತಾರೆ.
ನೀವು ಮಕ್ಕಳು ಈಗ
ಸಂಗಮದಲ್ಲಿರುವಿರಿ. ಬಾಕಿ ಅವರೆಲ್ಲರೂ ಕೊಳಕಿನಲ್ಲಿ ಬಿದ್ದಿದ್ದಾರೆ. ಹೇಗೆ ಕೊಳಕಿನ ತೀರದಲ್ಲಿ
ಗುಡಿಸಲುಗಳನ್ನು ಹಾಕಿಕೊಂಡು ಕೊಳಕಿನಲ್ಲಿಯೆ ಕಾಲಕಳೆಯುತ್ತಿರುತ್ತಾರಲ್ಲವೇ. ಎಷ್ಟು ಕೊಳೆಗೇರಿಗಳು
ನಿರ್ಮಾಣವಾಗಿರುತ್ತವೆ. ಇದಾಗಿದೆ ಬೇಹದ್ಧಿನ ಮಾತು. ಈಗ ಅದರಿಂದ ಹೊರಬರಲು ಶಿವಬಾಬಾ ನಿಮಗೆ ಬಹಳ
ಸಹಜ ಯುಕ್ತಿ ತಿಳಿಸುತ್ತಾರೆ. ಮಧುರ ಮಧುರ ಮಕ್ಕಳೇ ನೀವು ತಿಳಿದಿರುವಿರಲ್ಲವೇ ಈ ಸಮಯದಲ್ಲಿ ನಿಮ್ಮ
ಆತ್ಮ ಮತ್ತು ಶರೀರ ಎರಡೂ ಸಹಾ ಪತಿತವಾಗಿದೆ. ಈಗ ನೀವು ಹೊರ ಬಂದಿರುವಿರಿ. ಯಾರ್ಯಾರು
ಹೊರಬಂದಿರುವಿರಿ ಅವರಲ್ಲಿ ಜ್ಞಾನದ ಪರಾಕಾಷ್ಠೆ ಇದೆಯಲ್ಲವೇ. ನಿಮಗೆ ತಂದೆ ಸಿಕ್ಕಿದ್ದಾರೆ ಅಂದಮೇಲೆ
ಮತ್ತೆ ಏನು! ಈ ನಶೆ ಯಾವಾಗ ಏರುವುದೆಂದರೆ ಯಾವಾಗ ನೀವು ಬೇರೆಯವರಿಗೆ ತಿಳಿಸುವಿರಿ ಆಗ.ತಂದೆ
ಬಂದಿದ್ದಾರೆ. ತಂದೆ ನಮ್ಮ ಆತ್ಮಗಳನ್ನು ಪವಿತ್ರಮಾಡುತ್ತಾರೆ. ಆತ್ಮ ಯಾವಾಗ ಪವಿತ್ರವಾಗುವುದು ಆಗ
ಶರಿರವೂ ಸಹ ಫಸ್ಟ್ಕ್ಲಾಸ್ ಆಗಿರುವುದು ಸಿಗುವುದು. ಈಗ ನಿಮ್ಮ ಆತ್ಮ ಎಲ್ಲಿ ಕುಳಿತಿದೆ? ಈ
ಕೊಳೆಗೇರಿ(ಶರೀರ)ದಲ್ಲಿ ಕುಳಿತಿದೆ. ತಮೋಪ್ರಧಾನ ಜಗತ್ತಾಗಿದೆಯಲ್ಲವೇ. ಕೊಳಕಿನ ತೀರದಲ್ಲಿ ಬಂದು
ಕುಳಿತಿರುವಿರಲ್ಲವೇ. ವಿಚಾರಮಾಡಿ ನಾವು ಎಲ್ಲಿಂದ ಹೊರಬಂದಿದ್ದೇವೆ. ತಂದೆಯು ಕೊಳಕುನಾಲೆಯಿಂದ
ಹೊರತೆಗೆದಿದ್ದಾರೆ. ಈಗ ನಮ್ಮ ಆತ್ಮ ಸ್ವಚ್ಚ ಆಗಿಬಿಡುವುದು. ವಾಸ ಇರುವಂತಹವರೂ ಸಹಾ ಫಸ್ಟ್ಕ್ಲಾಸ್
ಮಹಲುಗಳನ್ನು ನಿರ್ಮಿಸುತ್ತಾರೆ. ನಮ್ಮ ಆತ್ಮಕ್ಕೆ ತಂದೆ ಶೃಂಗಾರಮಾಡಿ ಸ್ವರ್ಗಕ್ಕೆ
ಕರೆದೊಯ್ಯುತ್ತಿದ್ದಾರೆ. ಒಳಗೆ ಇಂತಹ-ಇಂತಹ ವಿಚಾರಗಳು ಮಕ್ಕಳಲ್ಲಿ ಬರ ಬೇಕಿದೆ. ತಂದೆ ಎಷ್ಟು ನಶೆ
ಏರಿಸುತ್ತಾರೆ. ನೀವು ಇಷ್ಟು ಉನ್ನತವಾಗಿದ್ದಿರಿ ನಂತರ ಬೀಳುತ್ತಾ-ಬೀಳುತ್ತಾ ಬಂದು ಕೆಳಗೆ
ಬಿದ್ದಿರುವಿರಿ. ಶಿವಾಲಯದಲ್ಲಿದ್ದಾಗ ಆತ್ಮ ಎಷ್ಟು ಶುದ್ಧವಾಗಿತ್ತು. ನಂತರ ಪರಸ್ಪರ ಸೇರಿ
ಬೇಗ-ಬೇಗ ಶಿವಾಲಯದಲ್ಲಿ ಹೋಗುವ ಉಪಾಯಮಾಡಬೇಕು.
ಬಾಬಾರವರಿಗಂತು
ಆಶ್ಚರ್ಯವೆನಿಸುತ್ತದೆ-ಮಕ್ಕಳಿಗೆ ಬುದ್ಧಿ ಇಲ್ಲ! ಬಾಬಾ ನಮ್ಮನ್ನು ಎಲ್ಲಿಂದ ಹೊರತೆಗೆಯುತ್ತಾರೆ!
ಪಾಂಡವ ಸರ್ಕಾರವನ್ನು ಸ್ಥಾಪನೆ ಮಾಡುವವರು ತಂದೆ ಆಗಿದ್ದಾರೆ. ಭಾರತ ಏನು ಸ್ವರ್ಗವಾಗಿತ್ತು ಈಗ ಅದು
ನರಕವಾಗಿದೆ. ಆತ್ಮನ ಮಾತಾಗಿದೆ. ಆತ್ಮದ ಮೇಲೆಯೆ ದಯೆ ಬರುತ್ತದೆ. ಸಂಪೂರ್ಣ ತಮೋಪ್ರಧಾನ
ಪ್ರಪಂಚದಲ್ಲಿ ಬಂದು ಆತ್ಮ ಕುಳಿತಿದೆ ಆದ್ದರಿಂದ ತಂದೆಯನ್ನು ನೆನಪು ಮಾಡುತ್ತದೆ- ಬಾಬಾ, ನಮ್ಮನ್ನು
ಅಲ್ಲಿಗೆ ಕರೆದುಕೊಂಡು ಹೋಗು. ಇಲ್ಲಿ ಕುಳಿತಿದ್ದರೂ ಸಹ ನಿಮಗೆ ಇದೇ ಚಿಂತನೆಗಳು ನಡೆಯಬೇಕಾಗಿದೆ
ಆದ್ದರಿಂದ ಬಾಬಾ ಹೇಳುತ್ತಾರೆ ಮಕ್ಕಳಿಗಾಗಿ ಫಸ್ಟ್ ಕ್ಲಾಸ್ ವಿಶ್ವ ವಿಧ್ಯಾಲಯ ನಿರ್ಮಾಣಮಾಡಿ.
ಕಲ್ಪ-ಕಲ್ಪವೂ ಆಗುತ್ತದೆ. ನಿಮ್ಮ ಚಿಂತನೆಗಳು ಬಹಳ ವಿಶಾಲವಾದದ್ದಾಗಿರಬೇಕು. ಇನ್ನೂ ಆ ನಶೆ
ಏರಿಲ್ಲ. ನಶೆ ಏರಿತು ಎಂದರೆ ಏನು ಮಾಡಿ ತೋರಿಸುವಿರೋ ಗೊತ್ತಿಲ್ಲಾ. ಮಕ್ಕಳು ವಿಶ್ವ ವಿದ್ಯಾಲಯದ
ಅರ್ಥತಿಳಿದುಕೊಂಡಿಲ್ಲ. ಆ ಒಂದು ರಾಯಲ್ಟಿಯ ನಶೆಯಲ್ಲಿ ಇರುವುದಿಲ್ಲ. ಮಾಯೆ ಒತ್ತರಿಸಿ ಕುಳಿತಿದೆ.
ಬಾಬಾ ತಿಳಿಸುತ್ತಾರೆ ಮಕ್ಕಳೇ ತಮ್ಮ ಉಲ್ಟಾ ನಶೆಯನ್ನು ಏರಿಸಬೇಡಿ. ಪ್ರತಿಯೊಬ್ಬರೂ ತಮ್ಮ-ತಮ್ಮ
ವಿದ್ಯಾರ್ಹತೆಯನ್ನು ನೋಡಿಕೊಳ್ಳಿ. ನಾವು ಹೇಗೆ ಓದುತ್ತಿದ್ದೇವೆ, ಏನು ಸಹಾಯ ಮಾಡುತ್ತಿದ್ದೇವೆ,
ಕೇವಲ ಮಾತಿನ ಪಕೋಡವನ್ನು ತಿನ್ನುವುದಲ್ಲ. ಏನು ಹೇಳುವಿರಿ ಅದನ್ನು ಮಾಡಬೇಕು, ಇದು ಮಾಡುವೆ, ಅದು
ಮಾಡುವೆ ಎಂದು ಸುಮ್ಮನೆ ಸುಳ್ಳು ಭರವಸೆ ನೀಡುವುದಲ್ಲ. ಇಂದು ಹೇಳುವಿರಿ ಇದನ್ನು ಮಾಡುವೆ ಎಂದು,
ನಾಳೆ ಮೃತ್ಯು ಬಂದರೆ ಎಲ್ಲಾ ಸಮಾಪ್ತಿಯಾಗಿಬಿಡುವುದು. ಸತ್ಯಯುಗದಲ್ಲಿಯಂತು ಹೀಗೆ ಹೇಳುವುದಿಲ್ಲ.
ಅಲ್ಲಿ ಎಂದೂ ಅಕಾಲ ಮೃತ್ಯು ಆಗುವುದಿಲ್ಲ. ಕಾಲ ಬರಲು ಸಾದ್ಯವಿಲ್ಲ ಅದು ಸುಖಧಾಮವಾಗಿದೆ.
ಸುಖಧಾಮದಲ್ಲಿ ಕಾಲನು ಬರುವ ಆಜ್ಞೆಯೇ ಇಲ್ಲ. ರಾವಣ ರಾಜ್ಯ ಮತ್ತು ರಾಮರಾಜ್ಯದ ಅರ್ಥವನ್ನೂ ಸಹ
ತಿಳಿದುಕೊಳ್ಳ ಬೇಕು. ಈಗ ನಿಮ್ಮ ಯುದ್ಧ ವಿರುವುದೇ ರಾವಣನ ಜೊತೆ. ದೇಹಾಭಿಮಾನವೂ ಸಹಾ ಕಮಾಲ್
ಮಾಡುವುದು, ಯಾವುದು ಸಂಪೂರ್ಣ ಪತಿತರನ್ನಾಗಿ ಮಾಡಿಬಿಡುವುದು. ದೇಹೀ-ಅಭಿಮಾನಿಯಾಗುವುದರಿಂದ ಆತ್ಮ
ಶುದ್ಧವಾಗಿಬಿಡುವುದು. ನೀವು ತಿಳಿದಿರುವಿರಲ್ಲವೇ ಅಲ್ಲಿ ನಮ್ಮ ಮಹಲುಗಳು ಹೇಗೆ ನಿರ್ಮಾಣವಾಗುವುವು
ಎಂದು. ಈಗ ನೀವು ಸಂಗಮದಲ್ಲಿ ಬಂದಿರುವಿರಿ. ನಂಬರ್ವಾರ್ ಸುಧಾರಣೆಯಾಗುತ್ತಿರುವಿರಿ,
ಲಾಯಕ್ಕಾಗುತ್ತಿರುವಿರಿ. ನಿಮ್ಮ ಆತ್ಮ ಪತಿತವಾದ ಕಾರಣ ಶರೀರವೂ ಸಹ ಪತಿತವಾಗಿರುವುದು ಸಿಕ್ಕಿದೆ.
ಈಗ ನಾನು ಬಂದಿರುವೆನು ನಿಮ್ಮನ್ನು ಸ್ವರ್ಗವಾಸಿಗಳನ್ನಾಗಿ ಮಾಡಲು. ನೆನಪಿನ ಜೊತೆ ದೈವೀಗುಣವೂ ಸಹ
ಅವಶ್ಯಕವಾಗಿದೆ. ಚಿಕ್ಕಮ್ಮನ ಮನೆಯಂತೂ ಅಲ್ಲ. ಬಾಬಾ ಬಂದಿದ್ದಾರೆ ಎಂದು ತಿಳಿದಿರುವಿರಿ ನಮ್ಮನ್ನು
ನರನಿಂದ ನಾರಾಯಣ ಮಾಡಲು ಆದರೆ ಮಾಯೆಯ ಗುಪ್ತ ಯುದ್ಧವಾಗಿದೆ.ನಿಮ್ಮ ಯುದ್ದವೇ ಆಗಿದೆ ಗುಪ್ತ
ಆದ್ದರಿಂದ ನಿಮ್ಮನ್ನು ಗುಪ್ತಯೋಧರು ಎಂದು ಗಾಯನಮಾಡಲಾಗಿದೆ. ನಿಮ್ಮಂತೆ ಬೇರೆಯಾರೂ ಆಗಿಲ್ಲ.
ನಿಮ್ಮ ಹೆಸರೇ ಆಗಿದೆ ವಾರಿಯರ್ಸ್. ಬೇರೆ ಎಲ್ಲರ ಹೆಸರು ರಿಜಿಸ್ಟರ್ ನಲ್ಲಿ ಇದ್ದೇ ಇದೆ. ನೀವು
ಎಷ್ಟು ಗುಪ್ತವಾಗಿರುವಿರಿ, ಯಾರಿಗೂ ತಿಳಿದೇ ಇಲ್ಲ. ನೀವು ವಿಶ್ವದ ಮೇಲೆ ವಿಜಯ ಪ್ರಾಪ್ತಿ
ಮಾಡಿಕೊಳ್ಳುತ್ತಿರುವಿರಿ ಮಾಯೆಯನ್ನು ವಶ ಮಾಡಿಕೊಳ್ಳುವುದಕ್ಕೋಸ್ಕರ. ನೀವು ತಂದೆಯನ್ನು
ನೆನಪುಮಾಡುವಿರಿ ಆದರೂ ಸಹಾ ಮಾಯೆ ಮರೆಸಿಬಿಡುವುದು. ಕಲ್ಪ-ಕಲ್ಪ ನೀವು ತಮ್ಮ ರಾಜ್ಯ ಸ್ಥಾಪನೆ
ಮಾಡಿಬಿಡುವಿರಿ. ಆದ್ದರಿಂದ ಗುಪ್ತಯೋಧ ನೀವಾಗಿರುವಿರಿ ಯಾರು ಕೇವಲ ತಂದೆಯನ್ನು ನೆನಪುಮಾಡುವಿರಿ.
ಇದರಲ್ಲಿ ಕೈ-ಕಾಲು ಏನನ್ನೂ ಆಡಿಸುವಂತೆನೂ ಇಲ್ಲ. ನೆನಪಿಗಾಗಿ ಯುಕ್ತಿಗಳನ್ನು ಸಹಾ ಬಾಬಾ ಬಹಳಷ್ಟು
ತಿಳಿಸುತ್ತಾರೆ. ನಡೆಯುತ್ತಾ-ತಿರುಗಾಡುತ್ತಾ ನೀವು ನೆನಪಿನ ಯಾತ್ರೆಯನ್ನು ಮಾಡಿ, ವಿಧ್ಯೆಯನ್ನೂ
ಓದಿ.ಈಗ ನೀವು ತಿಳಿದಿರುವಿರಿ ನಾವು ಏನಾಗಿದ್ದೆವು, ಏನಾಗಿಬಿಟ್ಟೆವು. ಈಗ ಬಾಬಾ ನಮ್ಮನ್ನು ಏನು
ಮಾಡುತ್ತಾರೆ. ಎಷ್ಟು ಸಹಜ ಯುಕ್ತಿ ತಿಳಿಸುತ್ತಾರೆ. ಎಲ್ಲೇ ಇದ್ದರೂ ಸಹಾ ನೆನಪು ಮಾಡಿದಾಗ ತುಕ್ಕು
ಬಿಟ್ಟುಹೋಗುವುದು. ಕಲ್ಪ-ಕಲ್ಪ ಇಲ್ಲಿ ಯುಕ್ತಿ ಕೊಡುತ್ತಿರುತ್ತಾರೆ. ನಿಮ್ಮನ್ನು ಆತ್ಮ ಎಂದು
ತಿಳಿದು ತಂದೆಯನ್ನು ನೆನಪುಮಾಡಿ ಆಗ ಸತೋಪ್ರಧಾನರಾಗುವಿರಿ, ಬೇರೆಯಾವುದೇ ಬಂದನ ಇಲ್ಲ. ಸ್ನಾನದ
ಮನೆಗೆ ಹೋದಾಗಲೂ ಸಹಾ ನಿಮ್ಮನ್ನು ಆತ್ಮ ಎಂದು ತಿಳಿದು ತಂದೆಯನ್ನು ನೆನಪು ಮಾಡಿದಾಗ ಆತ್ಮದ ಮೈಲಿಗೆ
ಬಿಟ್ಟುಹೋಗುವುದು. ಆತ್ಮಕ್ಕೆ ಯಾವುದೇ ತಿಲಕ ಇಡುವ ಅಗತ್ಯ ಇಲ್ಲ, ಇದೆಲ್ಲವೂ ಭಕ್ತಿಮಾರ್ಗದ
ನಿಶಾನಿಯಾಗಿದೆ. ಈ ಜ್ಞಾನ ಮಾರ್ಗದಲ್ಲಿ ಇದಾವುದರ ಅವಶ್ಯಕತೆಯಿಲ್ಲ, ನಯಾಪೈಸೆ ಖರ್ಚು ಇಲ್ಲ.
ಮನೆಯಲ್ಲೇ ಕುಳಿತು ನೆನಪುಮಾಡುತ್ತಿರಿ. ಎಷ್ಟು ಸಹಜವಾಗಿದೆ. ಆ ಬಾಬಾ ನಮ್ಮ ತಂದೆ ಸಹಾ ಆಗಿದ್ದಾರೆ,
ಶಿಕ್ಷಕ ಮತ್ತು ಗರು ಸಹಾ ಆಗಿದ್ದಾರೆ.
ಮೊದಲು ತಂದೆಯ ನೆನಪು
ನಂತರ ಶಿಕ್ಷಕರದು ನಂತರ ಗುರುವಿನದು. ಕಾಯಿದೆ ಇದೇ ಹೇಳುವುದು. ಶಿಕ್ಷಕರನ್ನಂತೂ ಖಂಡಿತ ನೆನಪು
ಮಾಡುತ್ತಾರೆ, ಅವರಿಂದ ವಿಧ್ಯೆಯ ಆಸ್ತಿ ಸಿಗುವುದು ನಂತರ ವಾನಪ್ರಸ್ತ ಅವಸ್ತೆಯಲ್ಲಿ ಗುರು
ಸಿಗುತ್ತಾರೆ. ಇಲ್ಲಿ ತಂದೆಯಂತೂ ಎಲ್ಲವನ್ನೂ ಹೋಲ್ಸೇಲ್ ನಲ್ಲಿ ಕೊಟ್ಟುಬಿಡುತ್ತಾರೆ. ನಿಮಗೆ 21
ಜನ್ಮಕ್ಕಾಗಿ ರಾಜ್ಯಭಾಗ್ಯ ಹೋಲ್ ಸೇಲ್ ನಲ್ಲಿ ಕೊಟ್ಟಿದ್ದಾರೆ. ಮದುವೆಯಲ್ಲಿ ಕನ್ಯೆಗೆ
ವರದಕ್ಷಿಣೆಯನ್ನುಗುಪ್ತವಾಗಿ ಕೊಡುವಿರಲ್ಲವೇ. ಷೋ ಮಾಡುವ ಅಗತ್ಯತೆಯಿಲ್ಲ. ಗುಪ್ತದಾನ ಎಂದು
ಹೇಳಲಾಗುವುದು. ಶಿವಬಾಬಾ ಸಹಾ ಗುಪ್ತರಾಗಿರುವರಲ್ಲವೆ, ಇದರಲ್ಲಿ ಅಹಂಕಾರದ ಯಾವುದೇ ಮಾತಿಲ್ಲ.
ಕೆಲ-ಕೆಲವರಿಗೆ ಅಹಂಕಾರವಿರುವುದು ಎಲ್ಲರು ನೋಡಲಿ ಎಂದು. ಇದಾಗಿದೆ ಎಲ್ಲಾ ಗುಪ್ತ. ತಂದೆ ನಿಮಗೆ
ವಿಶ್ವದ ಬಾದ್ಷಾಹಿಯನ್ನು ವರದಕ್ಷಿಣೆಯ ರೂಪದಲ್ಲಿ ಕೊಡುತ್ತಾರೆ. ಎಷ್ಟು ಗುಪ್ತವಾಗಿ ನಿಮ್ಮ
ಶೃಂಗಾರ ಆಗುತ್ತಿದೆ. ಎಷ್ಟು ದೊಡ್ಡ ವರದಕ್ಷಿಣೆ ಸಿಗುವುದು.ತಂದೆ ಹೇಗೆ ಯುಕ್ತಿಯಿಂದ ಕೊಡುತ್ತಾರೆ,
ಯಾರಿಗೂ ಗೊತ್ತೇ ಆಗುವುದಿಲ್ಲ. ಇಲ್ಲಿ ನೀವು ಬೆಗ್ಗರ್ (ಬಿಕ್ಷುಕ) ಆಗಿರುವಿರಿ, ಮುಂದಿನ
ಜನ್ಮದಲ್ಲಿ ಬಾಯಲ್ಲಿ ಚಿನ್ನದ ಸ್ಪೂನ್ ಇರುವಂತಾಗುವುದು. ನೀವು ಚಿನ್ನದ ಪ್ರಪಂಚಕ್ಕೆ
ಹೋಗುವಿರಲ್ಲವೆ. ಅಲ್ಲಿ ಎಲ್ಲವೂ ಚಿನ್ನದ್ದಿರುವುದು. ಸಾಹುಕಾರರ ಮಹಲುಗಳಲ್ಲಿ ಒಳ್ಳೊಳ್ಳೆಯ
ಉಪಕರಣಗಳಿರುವುದು. ವ್ಯತ್ಯಾಸಗಳಂತೂ ಖಂಡಿತ ಇರುವುದು. ಇಲ್ಲೂ ಸಹಾ ಈಗ ನೀವು ತಿಳಿಯುವಿರಿ- ಮಾಯೆ
ಎಲ್ಲರನ್ನೂ ಉಲ್ಟಾ ನೇತಾಕುತ್ತದೆ. ಈಗ ತಂದೆ ಬಂದಿದ್ದಾರೆ ಎಂದಮೇಲೆ ಮಕ್ಕಳಲ್ಲಿ ಎಷ್ಟು ಉಲ್ಲಾಸ
ಇರಬೇಕಿದೆ. ಆದರೆ ಮಾಯೆ ಮರೆಸಿಬಿಡುತ್ತದೆ-ತಂದೆಯ ಅಥವಾ ಬ್ರಹ್ಮಾ ರ ಸೂಚನೆಯಾ? ಸಹೋದರರದೋ ತಂದೆಯದೋ?
ಇದರಲ್ಲಿಯೇ ಬಹಳ ಜನ ತಬ್ಬಿಬಾಗುತ್ತಾರೆ. ತಂದೆ ಹೇಳುತ್ತಾರೆ ಒಳ್ಳಯದಾಗಲಿ ಅಥವಾ
ಕೆಟ್ಟದ್ದಾಗಲಿ-ನೀವು ತಂದೆಯ ಸೂಚನೆಎಂದೇ ತಿಳಿಯಿರಿ. ಅದರಂತೆ ನಡೆಯ ಬೇಕು. ಅವರಿಂದ ಏನೇ ತಪ್ಪು
ಆದರೂ ಸಹಾ ಅದನ್ನು ತಪ್ಪಿಲ್ಲದಂತೆ ಮಾಡಿಬಿಡುತ್ತಾರೆ. ಅವರಲ್ಲಿ ಶಕ್ತಿ ಇದೆಯಲ್ಲವೆ. ನೀವು
ನೋಡುತ್ತಿರುವಿರಿ ಇದು ಹೇಗೆ ನಡೆಯುತ್ತಿದೆ, ಅವರ ತಲೆಯಮೇಲೆ ಯಾರು ಕುಳಿತಿದ್ದಾರೆ. ಪೂರ್ತಿ ಅವರ
ಪಕ್ಕದಲ್ಲಿಯೇ ಕುಳಿತಿದ್ದಾರೆ. ಗುರುಜನರುಗಳು ಶಿಷ್ಯರನ್ನು ಪಕ್ಕದಲ್ಲಿ ಕುಳ್ಳಿರಿಸಿಕೊಂಡು
ಕಲಿಸುತ್ತಾರಲ್ಲವೆ. ಆದರೂ ಸಹ ತಮೋ ಪ್ರಧಾನದಿಂದ ಸತೋಪ್ರಧಾನರಾಗಲು ಇವರು ಪರಿಶ್ರಮ
ಮಾಡಬೇಕಾಗುತ್ತದೆ. ಪುರುಷಾರ್ಥ ಮಾಡಬೇಕಾಗುತ್ತದೆ.
ತಂದೆ ತಿಳಿಸುತ್ತಾರೆ
ನನ್ನ ನೆನಪಿನಿಂದ ಬೋಜನವನ್ನು ತಯಾರುಮಾಡಿ,. ಶಿವಬಾಬಾನ ನೆನಪಿನ ಭೋಜನ ಬೇರೆ ಯಾರಿಗೂ
ಸಿಕ್ಕುವುದಿಲ್ಲ. ಈಗಿನ ಭೋಜನದ್ದೇ ಗಾಯನ ವಿದೆ ಆ ಬ್ರಾಹ್ಮಣರು ಭಲೆ ಸ್ಥುತಿ ಹಾಡುತ್ತಾರೆ ಆದರೆ
ಅರ್ಥ ಏನೂ ತಿಳಿದುಕೊಂಡಿಲ್ಲ. ಇಷ್ಟಂತೂ ತಿಳಿಸಲಾಗುವುದು ಇವರು ಧಾರ್ಮಿಕವೃತ್ತಿಯವರು ಏಕೆಂದರೆ
ಪೂಜಾರಿಗಳಾಗಿದ್ದಾರೆ. ಅಲ್ಲಂತೂ ಧಾರ್ಮಿಕವೃತ್ತಿಯ ಮಾತೇ ಇಲ್ಲ, ಅಲ್ಲಿ ಭಕ್ತಿ ಇರುವುದೇ ಇಲ್ಲ.
ಇದೂ ಸಹ ಯಾರಿಗೂ ಗೊತ್ತೇ ಇಲ್ಲ-ಭಕ್ತಿ ಅಂದರೆ ಅದು ಏನು ಎಂದು. ಹೇಳಲಾಗುತ್ತೆ
ಜ್ಞಾನ,ಭಕ್ತಿ,ವೈರಾಗ್ಯ. ಎಷ್ಟು ಫಸ್ಟ್ಕ್ಲಾಸ್ ಅಕ್ಷರವಾಗಿದೆ. ಜ್ಞಾನ ದಿನ, ಭಕ್ತಿ ರಾತ್ರಿ.
ನಂತರ ರಾತ್ರಿಯಿಂದ ವೈರಾಗ್ಯ ಆಗ ದಿನದಲ್ಲಿ ಹೋಗುತ್ತಾರೆ. ಎಷ್ಟು ಕ್ಲಿಯರ್ ಆಗಿದೆ ಈಗ ನಿಮಗೆ
ಅರ್ಥವಾಯಿತು ಎಂದ ಮೇಲೆ ನೀವು ಮೋಸಹೋಗಲು ಸಾಧ್ಯವಿಲ್ಲ.
ತಂದೆ ಹೇಳುತ್ತಾರೆ
ನನ್ನನ್ನು ನೆನಪುಮಾಡಿ, ನಾನು ನಿಮ್ಮನ್ನು ವಿಶ್ವದ ಮಾಲೀಕರನ್ನಾಗಿ ಮಾಡುತ್ತೇನೆ, ನಾನು ನಿಮ್ಮ
ಬೇಹದ್ಧಿನ ತಂದೆ ಆಗಿದ್ದೇನೆ, ಸೃಷ್ಠಿಚಕ್ರವನ್ನು ತಿಳಿಯುವುದೂ ಸಹ ಎಷ್ಟು ಸಹಜವಾಗಿದೆ. ಬೀಜ ಮತ್ತು
ವೃಕ್ಷವನ್ನು ನೆನಪುಮಾಡಿ. ಈಗ ಕಲಿಯುಗದ ಅಂತ್ಯವಾಗಿದೆ ನಂತರ ಸತ್ಯಯುಗ ಬರಬೇಕಿದೆ. ಈಗ ನೀವು
ಸಂಗಮಯುಗದಲ್ಲಿ ಗುಲ್-ಗುಲ್ ಆಗುತ್ತಿರುವಿರಿ. ಆತ್ಮ ಸತೋಪ್ರಧಾನ ಆಗಿ ಬಿಡುವುದು ನಂತರ ವಾಸ ಮಾಡಲು
ಸಹಾ ಸತೊಪ್ರಧಾನವಾದ ಮಹಲು ಸಿಗುವುದು. ಇಡೀ ಜಗತ್ತೇ ಹೊಸದಾಗಿಬಿಡುವುದು. ಆದ್ದರಿಂದ ಮಕ್ಕಳಿಗೆ
ಎಷ್ಟು ಖುಶಿ ಇರಬೇಕು. ಒಳ್ಳೆಯದು.
ಮಧುರಾತಿ ಮಧುರ ಅಗಲಿ
ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತಾ ಬಾಪ್ದಾದಾರವರ ನೆನಪು ಪ್ರೀತಿ ಹಾಗೂ
ನಮಸ್ತೆ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1) ಸದಾ
ಫಕುರ್(ನಶೆ) ಇರಲಿ ನಾವು ಶ್ರೀಮತದಂತೆ ನಮ್ಮ ಫರಿಸ್ಥಾನವನ್ನು ಸ್ಥಾಪನೆ ಮಾಡುತ್ತಿದ್ದೇವೆ.
ವ್ಯರ್ಥವಾದ ಕೊಳಕು ಮಾತುಗಳನ್ನು ಬಿಟ್ಟು ಬಹಳ ಉಲ್ಲಾಸದಲ್ಲಿರ ಬೇಕು.
2) ನಿಮ್ಮ ಚಿಂತನೆಗಳನ್ನು
ಬಹಳ ವಿಶಾಲವಾಗಿಡಬೇಕಿದೆ. ಬಹಳ ಒಳ್ಳೆಯ ರಾಯಲ್ ಯುನಿವರ್ಸಿಟಿ(ವಿಶ್ವ ವಿದ್ಯಾಲಯ) ಮತ್ತು
ಹಾಸ್ಪಿಟಲ್ ತೆರೆಯುವ ಪ್ರಬಂಧ ಮಾಡಬೇಕು. ತಂದೆಗೆ ಗುಪ್ತ ಸಹಾಯಕರಾಗಬೇಕು, ತಮ್ಮ ಷೋ ಮಾಡಬಾರದು.
ವರದಾನ:
ನಿಮಿತ್ತವಾಗಿದ್ದು ಯಾವುದೇ ಸೇವೆ ಮಾಡುತ್ತಾ ಬೇಹದ್ದಿನ ವೃತ್ತಿಯ ಮೂಲಕ ವೈಭ್ರೇಷನ್ ಹರಡುವಂತಹವರೇ
ಬೇಹದ್ದಿನ ಸೇವಾಧಾರಿ ಭವ.
ಈಗ ಬೇಹದ್ದಿನ
ಪರಿವರ್ತನೆಯ ಸೇವೆಯಲ್ಲಿ ತೀವ್ರ ಗತಿಯನ್ನು ತನ್ನಿ. ಹೀಗಲ್ಲಾ, ಮಾಡುತ್ತಿದ್ದೇನೆ, ಇಷ್ಟು
ಬಿಝಿಯಾಗಿರುತ್ತೇನೆ ಸಮಯವೇ ಸಿಗುವುದಿಲ್ಲ. ಆದರೆ ನಿಮಿತ್ತರಾಗಿದ್ದು ಯಾವುದೇ ಸೇವೆ ಮಾಡುತ್ತ
ಬೇಹದ್ಧಿನ ಸಹಯೋಗಿಗಳಾಗಲು ಸಾಧ್ಯ, ಕೇವಲ ವೃತ್ತಿ ಬೇಹದ್ದಿನಲ್ಲಿದ್ದಾಗ ವೈಬ್ರೇಷನ್
ಹರಡುತ್ತಿರುವುದು. ಎಷ್ಟು ಬೇಹದ್ದಿನಲ್ಲಿ ಬಿಝಿಯಾಗಿರುವಿರಿ ಆಗ ಏನು ಕರ್ತವ್ಯ ಇರುತ್ತೆ ಅದು
ಇನ್ನೂ ಸಹಜವಾಗಿ ಬಿಡುವುದು. ಪ್ರತಿ ಸಂಕಲ್ಪ, ಪ್ರತಿ ಸೆಕೆಂಡ್ ಶ್ರೇಷ್ಠ ವೈಭ್ರೇಷನ್ ಹರಡುವಂತಹ
ಸೇವೆ ಮಾಡುವುದೇ ಬೆಹದ್ದಿನ ಸೇವಾಧಾರಿಗಳಾಗುವುದಾಗಿದೆ.
ಸ್ಲೋಗನ್:
ಶಿವ ತಂದೆಯ ಜೊತೆ
ಕಂಭೈಂಡ್ ಆಗಿರುವಂತಹ ಶಿವ ಶಕ್ತಿಯರ ಶೃಂಗಾರವಾಗಿದೆ ಜ್ಞಾನದ ಅಸ್ತ್ರ-ಶಸ್ತ್ರ.