28.03.25 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ - ನೀವು
ಬಹಳ ಅದೃಷ್ಟವಂತರಾಗಿದ್ದೀರಿ ಏಕೆಂದರೆ ನಿಮಗೆ ತಂದೆಯ ನೆನಪಿನ ವಿನಃ ಮತ್ತ್ಯಾವುದೇ ಚಿಂತೆಯಿಲ್ಲ,
ಈ ತಂದೆಗಾದರೊ (ಬ್ರಹ್ಮಾ) ಬಹಳಷ್ಟು ವಿಚಾರಗಳು ನಡೆಯುತ್ತವೆ”
ಪ್ರಶ್ನೆ:
ತಂದೆಯ ಬಳಿ ಯಾರು
ಸುಪುತ್ರ ಮಕ್ಕಳಿದ್ದಾರೆ, ಅವರ ಲಕ್ಷಣಗಳೇನು?
ಉತ್ತರ:
ಅವರು ಎಲ್ಲರ
ಬುದ್ಧಿಯೋಗವನ್ನು ಒಬ್ಬ ತಂದೆಯೊಂದಿಗೆ ಜೋಡಣೆ ಮಾಡಿಸುತ್ತಿರುತ್ತಾರೆ, ಸೇವಾಧಾರಿಗಳಾಗಿರುತ್ತಾರೆ.
ಒಳ್ಳೆಯ ರೀತಿಯಲ್ಲಿ ಓದಿ ಅನ್ಯರಿಗೂ ಓದಿಸುತ್ತಾರೆ. ತಂದೆಯ ಹೃದಯವನ್ನೇರಿರುತ್ತಾರೆ. ಇಂತಹ
ಸುಪುತ್ರ ಮಕ್ಕಳು ತಂದೆಯ ಹೆಸರನ್ನು ಪ್ರಸಿದ್ಧಗೊಳಿಸುತ್ತಾರೆ. ಯಾರು ಪೂರ್ಣ ಓದುವುದಿಲ್ಲವೋ ಅವರು
ಅನ್ಯರನ್ನೂ ಹಾಳು ಮಾಡುತ್ತಾರೆ. ಇದೂ ಸಹ ನಾಟಕದಲ್ಲಿ ನಿಗಧಿಯಾಗಿದೆ.
ಗೀತೆ:
ತಂದೆ-ತಾಯಿಯ
ಆಶೀರ್ವಾದಗಳನ್ನು ತೆಗೆದುಕೊಳ್ಳಿ..................
ಓಂ ಶಾಂತಿ.
ಪ್ರತಿಯೊಂದು ಮನೆಯಲ್ಲಿ ತಂದೆ-ತಾಯಿ ಮತ್ತು ಇಬ್ಬರು-ಮೂವರು ಮಕ್ಕಳಿರುತ್ತಾರೆ ಮತ್ತೆ
ಆಶೀರ್ವಾದವನ್ನು ಬೇಡುತ್ತಾರೆ. ಅದಂತೂ ಲೌಕಿಕದ ಮಾತಾಯಿತು, ಇದು ಲೌಕಿಕಕ್ಕಾಗಿ ಗಾಯನವಿದೆ.
ಬೇಹದ್ದಿನದು ಯಾರಿಗೂ ತಿಳಿದಿಲ್ಲ, ಈಗ ನೀವು ಮಕ್ಕಳು ತಿಳಿದುಕೊಂಡಿದ್ದೀರಿ - ಈಗ ನಾವು ಬೇಹದ್ದಿನ
ತಂದೆಯ ಮಕ್ಕಳಾಗಿದ್ದೇವೆ. ಅವರು ಹದ್ದಿನ ಮಾತಾಪಿತರಾಗಿರುತ್ತಾರೆ. ತಂದೆ-ತಾಯಿಯ ಆಶೀರ್ವಾದವನ್ನು
ತೆಗೆದುಕೊಳ್ಳಿ ಎಂದು ಹೇಳುತ್ತಾರೆ. ಇಲ್ಲಿ ಇವರು ಬೇಹದ್ದಿನ ಮಾತಾಪಿತನಾಗಿದ್ದಾರೆ, ಆ ಲೌಕಿಕ
ತಾಯಿ-ತಂದೆಯೂ ಸಹ ಮಕ್ಕಳನ್ನು ಸಂಭಾಲನೆ ಮಾಡುತ್ತಾರೆ ಮತ್ತು ಶಿಕ್ಷಕರು ಓದಿಸುತ್ತಾರೆ. ಇಲ್ಲಿ
ನೀವು ತಿಳಿದುಕೊಂಡಿದ್ದೀರಿ - ಇವರು ಅಲೌಕಿಕ ಮಾತಾಪಿತ ಬೇಹದ್ದಿನ ಶಿಕ್ಷಕ, ಬೇಹದ್ದಿನ ಸದ್ಗುರು,
ಪರಮ ತಂದೆ, ಶಿಕ್ಷಕ, ಪರಮ ಗುರುವಾಗಿದ್ದಾರೆ. ಸತ್ಯವನ್ನು ತಿಳಿಸುವ, ಸತ್ಯವನ್ನು
ಕಲಿಸುವವರಾಗಿದ್ದಾರೆ. ಮಕ್ಕಳಲ್ಲಿ ನಂಬರ್ವಾರಂತೂ ಇರುತ್ತಾರಲ್ಲವೆ. ಲೌಕಿಕದ ಮನೆಯಲ್ಲಿ ಇಬ್ಬರು
ಅಥವಾ ಮೂವರು ಮಕ್ಕಳಿದ್ದರೆ ಅವರನ್ನು ಎಷ್ಟೊಂದು ಸಂಭಾಲನೆ ಮಾಡಬೇಕಾಗುತ್ತದೆ. ಇಲ್ಲಂತೂ ಎಷ್ಟೊಂದು
ಮಂದಿ ಮಕ್ಕಳಿದ್ದಾರೆ! ಎಷ್ಟೊಂದು ಸೇವಾಕೇಂದ್ರಗಳಿಂದ ಇವರು ಇಂತಹವರಾಗಿದ್ದಾರೆ, ಇವರು ತಪ್ಪು
ಮಾಡುತ್ತಾರೆ, ಇವರು ತೊಂದರೆ ಕೊಡುತ್ತಾರೆ, ಇವರು ವಿಘ್ನಗಳನ್ನು ಹಾಕುತ್ತಾರೆಂದು ಮಕ್ಕಳ
ಸಮಾಚಾರಗಳೂ ಬರುತ್ತವೆ. ಚಿಂತೆಯಂತೂ ಈ ತಂದೆಗೇ (ಬ್ರಹ್ಮಾ) ಇರುತ್ತದೆಯಲ್ಲವೆ. ಇವರು
ಪ್ರಜಾಪಿತನಾಗಿದ್ದಾರಲ್ಲವೆ. ಎಷ್ಟೊಂದು ಮಂದಿ ಮಕ್ಕಳ ಚಿಂತನೆಯಿರುತ್ತದೆ! ಆದ್ದರಿಂದಲೇ ತಂದೆಯು
ತಿಳಿಸುತ್ತಾರೆ - ನೀವು ಮಕ್ಕಳು ಬಹಳ ಚೆನ್ನಾಗಿ ತಂದೆಯ ನೆನಪಿನಲ್ಲಿರಬಹುದು ಏಕೆಂದರೆ ನಿಮಗೆ
ಯಾವುದೇ ಚಿಂತೆಯಿಲ್ಲ. ಇವರಿಗಂತೂ ಸಾವಿರಾರು ಚಿಂತೆಯಿರುತ್ತದೆ. ಒಂದು ಚಿಂತೆಯಂತೂ ಇದ್ದೇ ಇದೆ,
ಉಳಿದಂತೆ ಸಾವಿರಾರು ಚಿಂತೆಗಳಿವೆ. ಎಷ್ಟೊಂದು ಮಕ್ಕಳನ್ನು ಸಂಭಾಲನೆ ಮಾಡಬೇಕಾಗುತ್ತದೆ. ಮಾಯೆಯೂ
ಸಹ ದೊಡ್ಡಶತ್ರುವಾಗಿದೆಯಲ್ಲವೆ. ಬಹಳ ಚೆನ್ನಾಗಿ ಕೆಲವರ ಚರ್ಮವನ್ನು ಸುಲಿದುಬಿಡುತ್ತದೆ, ಕೆಲವರ
ಮೂಗನ್ನು, ಕೆಲವರ ಜುಟ್ಟನ್ನು ಹಿಡಿದುಕೊಳ್ಳುತ್ತದೆ. ಇವರೆಲ್ಲರ ವಿಚಾರವಂತೂ ತಂದೆಯು
ಮಾಡಲೇಬೇಕಾಗುತ್ತದೆ ಆದರೂ ಸಹ ಬೇಹದ್ದಿನ ತಂದೆಯ ನೆನಪಿನಲ್ಲಿರುತ್ತಾರೆ. ನೀವು ಬೇಹದ್ದಿನ ತಂದೆಯ
ಮಕ್ಕಳಾಗಿದ್ದೀರಿ, ನಿಮಗೆ ತಿಳಿದಿದೆ - ನಾವು ತಂದೆಯ ಶ್ರೀಮತದಂತೆ ನಡೆದು ತಂದೆಯಿಂದ ಸಂಪೂರ್ಣ
ಆಸ್ತಿಯನ್ನು ಏಕೆ ಪಡೆಯಬಾರದು! ಎಲ್ಲರೂ ಏಕರಸವಾಗಿ ನಡೆಯಲು ಸಾಧ್ಯವಿಲ್ಲ ಏಕೆಂದರೆ ಈಗ ರಾಜಧಾನಿಯು
ಸ್ಥಾಪನೆಯಾಗುತ್ತಿದೆ. ಇದು ಮತ್ತ್ಯಾರ ಬುದ್ಧಿಯಲ್ಲಿಯೂ ಬರಲು ಸಾಧ್ಯವಿಲ್ಲ. ಇದು ಬಹಳ ಉನ್ನತವಾದ
ವಿದ್ಯೆಯಾಗಿದೆ. ರಾಜ್ಯಪದವಿಯು ಸಿಕ್ಕಿದಮೇಲೆ ಈ ರಾಜಧಾನಿಯು ಹೇಗೆ ಸ್ಥಾಪನೆಯಾಯಿತೆಂಬುದೇ
ನೆನಪಿರುವುದಿಲ್ಲ. ಈ ರಾಜಧಾನಿಯು ಸ್ಥಾಪನೆಯಾಗುವುದೂ ಸಹ ಬಹಳ ವಿಚಿತ್ರವಾದುದಾಗಿದೆ. ಈಗ ನೀವು
ಅನುಭವಿಗಳಾಗಿದ್ದೀರಿ. ಮೊದಲು ನಾವು ಏನಾಗಿದ್ದೆವು ಮತ್ತೆ ಹೇಗೆ 84 ಜನ್ಮಗಳನ್ನು ತೆಗೆದುಕೊಂಡೆವು
ಎಂಬುದು ಇವರಿಗೂ (ಬ್ರಹ್ಮಾ) ಸಹ ತಿಳಿದಿರಲಿಲ್ಲ, ಅದು ಈಗ ಅರ್ಥವಾಗಿದೆ. ನೀವೂ ಹೇಳುತ್ತೀರಿ -
ಬಾಬಾ, ತಾವು ಅದೇ ತಂದೆಯಾಗಿದ್ದೀರಿ, ಇದು ಬಹಳ ತಿಳಿದುಕೊಳ್ಳುವ ಮಾತಾಗಿದೆ. ಈ ಸಮಯದಲ್ಲಿ ತಂದೆಯು
ಬಂದು ಎಲ್ಲಾ ಮಾತುಗಳನ್ನು ತಿಳಿಸುತ್ತಾರೆ. ಈ ಸಮಯದಲ್ಲಿ ಭಲೆ ಯಾರೆಷ್ಟೇ ಲಕ್ಷಾಧಿಪತಿ,
ಕೋಟ್ಯಾಧಿಪತಿಯಾಗಿರಬಹುದು ಆದರೆ ತಂದೆಯು ತಿಳಿಸುತ್ತಾರೆ, ಈ ಹಣ-ಆಸ್ತಿ ಎಲ್ಲವೂ ಮಣ್ಣುಪಾಲಾಗಲಿದೆ
ಉಳಿದಂತೆ ಸಮಯವೇ ಕಡಿಮೆಯಿದೆ. ಪ್ರಪಂಚದ ಸಮಾಚಾರಗಳನ್ನಂತೂ ನೀವು ರೇಡಿಯೋದಲ್ಲಿ ಅಥವಾ
ಪತ್ರಿಕೆಗಳಲ್ಲಿ ಏನೇನು ನಡೆಯುತ್ತಿದೆ ಎಂಬುದನ್ನು ಕೇಳುತ್ತೀರಿ. ದಿನ-ಪ್ರತಿದಿನ ಕಲಹಗಳು
ಹೆಚ್ಚುತ್ತಲೇ ಹೋಗುತ್ತಿದೆ. ಸೂತ್ರವು ಗಂಟಾಗುತ್ತಲೇ ಇರುತ್ತದೆ. ಎಲ್ಲರೂ ಪರಸ್ಪರ
ಹೊಡೆದಾಡಿ-ಜಗಳವಾಡಿ ಸಾಯುತ್ತಾರೆ. ಈ ರೀತಿ ತಯಾರಿಗಳು ನಡೆಯುತ್ತಿದೆ. ಇದರಿಂದ ಯುದ್ಧವು
ಆರಂಭವಾಯಿತೆಂದರೆ ಆಯಿತು ಎಂಬುದು ತಿಳಿದುಬರುತ್ತದೆ. ಇದೇನು ನಡೆಯುತ್ತಿದೆ, ಇದೇನಾಗಲಿದೆ
ಎಂಬುದನ್ನು ಪ್ರಪಂಚದವರು ತಿಳಿದುಕೊಂಡಿಲ್ಲ. ನಿಮ್ಮಲ್ಲಿಯೂ ಸಹ ಕೆಲವರಷ್ಟೇ ಇದನ್ನು ಸಂಪೂರ್ಣ
ರೀತಿಯಿಂದ ಅರಿತುಕೊಳ್ಳುತ್ತಾರೆ ಮತ್ತು ಖುಷಿಯಲ್ಲಿರುತ್ತಾರೆ. ಈ ಪ್ರಪಂಚದಲ್ಲಿ ನಾವು ಇನ್ನು
ಸ್ವಲ್ಪದಿನಗಳು ಮಾತ್ರವೇ ಇರುತ್ತೇವೆ. ಈಗ ನಾವು ಕರ್ಮಾತೀತ ಸ್ಥಿತಿಯಲ್ಲಿ ಹೋಗಬೇಕಾಗಿದೆ.
ಪ್ರತಿಯೊಬ್ಬರೂ ತಮಗಾಗಿ ಪುರುಷಾರ್ಥ ಮಾಡಬೇಕಾಗಿದೆ. ನೀವಂತೂ ತಮಗಾಗಿ ಪುರುಷಾರ್ಥ ಮಾಡುತ್ತೀರಿ.
ಯಾರೆಷ್ಟು ಮಾಡುವರೋ ಅಷ್ಟು ಫಲವನ್ನು ಪಡೆಯುತ್ತಾರೆ. ತಮ್ಮ ಪುರುಷಾರ್ಥವನ್ನೂ ಮಾಡಬೇಕು ಮತ್ತು
ಅನ್ಯರಿಂದಲೂ ಪುರುಷಾರ್ಥ ಮಾಡಿಸಬೇಕಾಗಿದೆ, ಮಾರ್ಗವನ್ನು ತಿಳಿಸಬೇಕಾಗಿದೆ. ಈ ಹಳೆಯ ಪ್ರಪಂಚವು
ಸಮಾಪ್ತಿಯಾಗುವುದು ಅಂದಾಗ ಈಗ ತಂದೆಯು ಹೊಸ ಪ್ರಪಂಚವನ್ನು ಸ್ಥಾಪನೆ ಮಾಡಲು ಬರುತ್ತಾರೆ ಆದ್ದರಿಂದ
ಈ ವಿನಾಶಕ್ಕೆ ಮೊದಲೇ ನೀವು ಹೊಸ ಪ್ರಪಂಚಕ್ಕಾಗಿ ವಿದ್ಯೆಯನ್ನು ಓದಿರಿ. ಭಗವಾನುವಾಚ - ನಾನು ನಿಮಗೆ
ರಾಜಯೋಗವನ್ನು ಕಲಿಸುತ್ತೇನೆ. ಮುದ್ದಾದ ಮಕ್ಕಳೇ, ನೀವು ಬಹಳಷ್ಟು ಭಕ್ತಿ ಮಾಡಿದ್ದೀರಿ, ಅರ್ಧಕಲ್ಪ
ನೀವು ರಾವಣರಾಜ್ಯದಲ್ಲಿದ್ದಿರಲ್ಲವೆ. ಯಾರಿಗೆ ರಾಮನೆಂದು ಕರೆಯಲಾಗುತ್ತದೆ? ರಾಮರಾಜ್ಯದ ಸ್ಥಾಪನೆ
ಹೇಗಾಯಿತು ಎಂಬುದನ್ನು ಯಾರೂ ತಿಳಿದುಕೊಂಡಿಲ್ಲ. ಇದೆಲ್ಲವನ್ನೂ ನೀವು ಬ್ರಾಹ್ಮಣರೇ
ತಿಳಿದುಕೊಂಡಿದ್ದೀರಿ. ನಿಮ್ಮಲ್ಲಿಯೂ ಸಹ ಕೆಲವರು ಏನನ್ನೂ ಅರ್ಥಮಾಡಿಕೊಂಡಿಲ್ಲ.
ತಂದೆಯ ಬಳಿ ಸುಪುತ್ರರು
ಯಾರೆಂದರೆ ಯಾರು ಎಲ್ಲರ ಬುದ್ಧಿಯೋಗವನ್ನು ಒಬ್ಬ ತಂದೆಯ ಜೊತೆ ಜೋಡಣೆ ಮಾಡಿಸುತ್ತಾರೆ, ಯಾರು
ಸೇವಾಧಾರಿಗಳಾಗಿದ್ದಾರೆ, ಒಳ್ಳೆಯ ರೀತಿಯಲ್ಲಿ ಓದುತ್ತಾರೆಯೋ ಅವರೇ ತಂದೆಯ ಹೃದಯವನ್ನೇರುತ್ತಾರೆ.
ಕೆಲವರು ಯೋಗ್ಯರಲ್ಲದವರೂ ಇರುತ್ತಾರೆ, ಕೆಲವರು ಸೇವೆಯ ಬದಲು ಸೇವಾಭಂಗ ಮಾಡುತ್ತಾರೆ. ಅವರು
ತಂದೆಯಿಂದ ಅನ್ಯರ ಬುದ್ಧಿಯೋಗವನ್ನು ದೂರ ಮಾಡುತ್ತಾರೆ. ಇದೂ ಸಹ ನಾಟಕದಲ್ಲಿ ನಿಗಧಿಯಾಗಿದೆ.
ನಾಟಕದನುಸಾರ ಇದೆಲ್ಲವೂ ಆಗಲೇಬೇಕಾಗಿದೆ. ಯಾರು ಸರಿಯಾಗಿ ಓದುವುದಿಲ್ಲವೋ ಅವರೇನು ಮಾಡುತ್ತಾರೆ?
ಅನ್ಯರನ್ನೂ ಸಹ ಹಾಳುಮಾಡಿಬಿಡುತ್ತಾರೆ ಆದ್ದರಿಂದ ಮಕ್ಕಳಿಗೆ ತಿಳಿಸಲಾಗುತ್ತದೆ, ತಂದೆಯನ್ನು
ಅನುಸರಿಸಿ ಮತ್ತು ಯಾರೆಲ್ಲಾ ಸೇವಾಧಾರಿ ಮಕ್ಕಳಿದ್ದಾರೆಯೋ ತಂದೆಯ ಹೃದಯವನ್ನೇರಿದ್ದಾರೆಯೋ ಅವರ
ಸಂಗವನ್ನು ಮಾಡಿ. ಯಾರ ಸಂಗ ಮಾಡುವುದೆಂದು ನೀವು ಭಲೆ ಕೇಳಬಹುದು. ಇಂತಹವರ ಸಂಗವು ಒಳ್ಳೆಯದಾಗಿದೆ
ಎಂಬುದನ್ನು ತಂದೆಯು ತಿಳಿಸುತ್ತಾರೆ. ಅನೇಕರು ಇಂತಹವರ ಸಂಗ ಮಾಡುತ್ತಾರೆ ಅವರಿಗೆ ಉಲ್ಟಾ ಬಣ್ಣವು
ಅಂಟಿಬಿಡುತ್ತದೆ. ಸತ್ಸಂಗವು ಮೇಲೆತ್ತುತ್ತದೆ, ಕೆಟ್ಟಸಂಗವು ಕೆಳಗೆ ಬೀಳಿಸುತ್ತದೆ ಎಂದು ಗಾಯನವಿದೆ.
ಕೆಟ್ಟಸಂಗವನ್ನು ಸೇರಿದರೆಂದರೆ ಒಮ್ಮೆಲೆ ಸಮಾಪ್ತಿ ಮಾಡಿಬಿಡುತ್ತದೆ. ಮನೆಯಲ್ಲಿಯೂ ದಾಸ-ದಾಸಿಯರು
ಬೇಕು, ಪ್ರಜೆಗಳಿಗೂ ನೌಕರರು-ಚಾಕರರು ಎಲ್ಲರೂ ಬೇಕಲ್ಲವೆ. ಈಗ ಇಡೀ ರಾಜಧಾನಿಯು
ಸ್ಥಾಪನೆಯಾಗುತ್ತಿದೆ, ಇದರಲ್ಲಿ ಬಹಳ ವಿಶಾಲಬುದ್ಧಿಯು ಬೇಕು ಆದ್ದರಿಂದ ಬೇಹದ್ದಿನ ತಂದೆಯು
ಸಿಕ್ಕಿದ್ದಾರೆಂದಮೇಲೆ ಅವರ ಶ್ರೀಮತದಂತೆ ನಡೆಯಿರಿ. ಇಲ್ಲವಾದರೆ ಸುಮ್ಮನೆ ಪದವಿ
ಭ್ರಷ್ಟವಾಗಿಬಿಡುತ್ತೀರಿ. ಇದು ವಿದ್ಯೆಯಾಗಿದೆ, ಇದರಲ್ಲಿ ಈಗ ಅನುತ್ತೀರ್ಣರಾದಿರೆಂದರೆ
ಜನ್ಮ-ಜನ್ಮಾಂತರ, ಕಲ್ಪ-ಕಲ್ಪಾಂತರವೂ ಅನುತ್ತೀರ್ಣರಾಗುತ್ತಾ ಇರುತ್ತೀರಿ. ಚೆನ್ನಾಗಿ
ಓದುತ್ತೀರೆಂದರೆ ಕಲ್ಪ-ಕಲ್ಪವೂ ಚೆನ್ನಾಗಿ ಓದುತ್ತೀರಿ. ಪದವಿಯಿಂದಲೇ ತಿಳಿಯುತ್ತದೆ ಇವರೇನು
ಓದುತ್ತಿಲ್ಲ. ಅಂದಾಗ ಏನು ಪದವಿ ಸಿಗುವುದು? ಇವರು ಓದಿಲ್ಲವೆಂಬುದು ತಿಳಿಯಬಹುದಾಗಿದೆ - ನಾವು
ಸರ್ವೀಸ್ ಮಾಡುವುದಿಲ್ಲ, ನಮಗಿಂತಲೂ ಬುದ್ಧಿವಂತರು ಅನೇಕರಿದ್ದಾರೆ, ಬುದ್ಧಿವಂತರನ್ನೇ ಭಾಷಣಕ್ಕಾಗಿ
ಕರೆಸುತ್ತಾರೆ ಅಂದಾಗ ಅವಶ್ಯವಾಗಿ ಯಾರು ಬುದ್ಧಿವಂತರಿದ್ದಾರೆಯೋ ಅವರು ಶ್ರೇಷ್ಠಪದವಿಯನ್ನೇ
ಪಡೆಯುತ್ತಾರೆ. ನಾವು ಅಷ್ಟು ಸೇವೆಯನ್ನು ಮಾಡುವುದಿಲ್ಲ ಆದ್ದರಿಂದ ಉತ್ತಮ ಪದವಿಯನ್ನು ಪಡೆಯಲು
ಸಾಧ್ಯವಿಲ್ಲ. ಶಿಕ್ಷಕರಂತೂ ವಿದ್ಯಾರ್ಥಿಗಳನ್ನು ತಿಳಿದುಕೊಂಡಿರುತ್ತಾರಲ್ಲವೆ. ಪ್ರತಿನಿತ್ಯವೂ
ಓದಿಸುತ್ತಾರೆ, ಅವರ ಬಳಿ ರಿಜಿಸ್ಟರ್ ಇರುತ್ತದೆ. ವಿದ್ಯೆ ಮತ್ತು ನಡವಳಿಕೆಯದೂ ರಿಜಿಸ್ಟರ್
ಇರುತ್ತದೆ. ಇಲ್ಲಿಯೂ ಹಾಗೆಯೇ, ಇದರಲ್ಲಿ ಮುಖ್ಯವಾದುದು ಯೋಗದ ಮಾತಾಗಿದೆ. ಯೋಗವು ಚೆನ್ನಾಗಿದ್ದರೆ
ನಡವಳಿಕೆಯು ಚೆನ್ನಾಗಿರುವುದು. ವಿದ್ಯೆಯಲ್ಲಿ ಕೆಲವೊಮ್ಮೆ ಅಹಂಕಾರವು ಬಂದುಬಿಡುತ್ತದೆ. ಇದರಲ್ಲಿ
ನೆನಪಿನ ಗುಪ್ತ ಪರಿಶ್ರಮಪಡಬೇಕಾಗಿದೆ. ಆದ್ದರಿಂದಲೇ ಬಾಬಾ, ನಾವು ಯೋಗದಲ್ಲಿ ಇರುವುದಕ್ಕೆ
ಸಾಧ್ಯವಾಗುವುದಿಲ್ಲವೆಂದು ಅನೇಕರ ದೂರು ಬರುತ್ತದೆ. ತಂದೆಯೂ ತಿಳಿಸಿದ್ದಾರೆ - ಯೋಗ ಎಂಬ
ಶಬ್ಧವನ್ನು ತೆಗೆದುಹಾಕಿ. ಯಾವ ತಂದೆಯಿಂದ ಆಸ್ತಿಯು ಸಿಗುತ್ತದೆಯೋ ಅವರನ್ನೇ ನೀವು ನೆನಪು
ಮಾಡುವುದಿಲ್ಲವೆ! ಆಶ್ಚರ್ಯಕರವಾಗಿದೆ. ಹೇ ಆತ್ಮಗಳೇ, ನೀವು ತಂದೆಯಾದ ನನ್ನನ್ನೇ ನೆನಪು
ಮಾಡುವುದಿಲ್ಲವೆ? ನಾನು ನಿಮಗೆ ಮಾರ್ಗವನ್ನು ತಿಳಿಸಲು ಬಂದಿದ್ದೇನೆ, ನೀವು ನನ್ನನ್ನು ನೆನಪು ಮಾಡಿ
ಆಗ ಈ ಯೋಗಾಗ್ನಿಯಿಂದ ಪಾಪಗಳು ಭಸ್ಮವಾಗುತ್ತವೆ, ಭಕ್ತಿಮಾರ್ಗದಲ್ಲಿ ಮನುಷ್ಯರು ಎಷ್ಟೊಂದು
ಅಲೆದಾಡಲು ಹೋಗುತ್ತಾರೆ. ಕುಂಭಮೇಳದಲ್ಲಿ ತಣ್ಣೀರಿನಲ್ಲಿ ಹೋಗಿ ಸ್ನಾನ ಮಾಡುತ್ತಾರೆ. ಎಷ್ಟೊಂದು
ಕಷ್ಟವನ್ನು ಸಹಿಸುತ್ತಾರೆ, ಇಲ್ಲಂತೂ ಯಾವುದೇ ಕಷ್ಟವಿಲ್ಲ, ಯಾರು ಒಳ್ಳೆಯ ಮಕ್ಕಳಿದ್ದಾರೆಯೋ ಅವರು
ಒಬ್ಬ ಪ್ರಿಯತಮನ ಸತ್ಯ-ಸತ್ಯ ಪ್ರಿಯತಮೆಯರಾಗಿ ನೆನಪು ಮಾಡುತ್ತಿರುತ್ತಾರೆ. ತಿರುಗಾಡಲು
ಹೋಗುತ್ತಾರೆಂದರೂ ಸಹ ತೋಟದಲ್ಲಿ ಕುಳಿತುಕೊಂಡು ಏಕಾಂತದಲ್ಲಿ ನೆನಪು ಮಾಡುತ್ತಾರೆ, ಪರಚಿಂತನೆಯ
ವಾರ್ತಾಲಾಪದಲ್ಲಿರುವುದರಿಂದ ವಾಯುಮಂಡಲವು ಹಾಳಾಗುತ್ತದೆ ಆದ್ದರಿಂದ ಸಮಯವು ಸಿಕ್ಕಿದಾಗ ತಂದೆಯನ್ನು
ನೆನಪು ಮಾಡುವ ಅಭ್ಯಾಸ ಮಾಡಿ. ಸುಂದರ ಸತ್ಯ ಪ್ರಿಯತಮನ ಪ್ರಿಯತಮೆಯರಾಗಿ. ತಂದೆಯು ತಿಳಿಸುತ್ತಾರೆ
- ದೇಹಧಾರಿಯ ಭಾವಚಿತ್ರವನ್ನಿಟ್ಟುಕೊಳ್ಳಬೇಡಿ, ಕೇವಲ ಒಬ್ಬ ಶಿವತಂದೆಯ ಚಿತ್ರವನ್ನಿಟ್ಟುಕೊಳ್ಳಿ,
ಅವರನ್ನು ನೆನಪು ಮಾಡಬೇಕು. ಒಂದುವೇಳೆ ಸೃಷ್ಟಿಚಕ್ರವನ್ನು ನೆನಪು ಮಾಡುತ್ತಾ ಇದ್ದರೆ ತ್ರಿಮೂರ್ತಿ
ಮತ್ತು ಗೋಲದ ಚಿತ್ರವು ಬಹಳ ಚೆನ್ನಾಗಿದೆ, ಇದರಲ್ಲಿ ಸಂಪೂರ್ಣ ಜ್ಞಾನವಿದೆ, ಸ್ವದರ್ಶನ ಚಕ್ರಧಾರಿ
ಎಂಬುದು ನಿಮ್ಮ ಅರ್ಥಸಹಿತವಾದ ಹೆಸರಾಗಿದೆ. ಯಾರಾದರೂ ಹೊಸಬರು ಈ ಹೆಸರನ್ನು ಕೇಳಿದರೆ ಅವರಿಗೆ
ಅರ್ಥವಾಗುವುದಿಲ್ಲ, ಇದನ್ನು ನೀವು ಮಕ್ಕಳೇ ತಿಳಿದುಕೊಂಡಿದ್ದೀರಿ. ನಿಮ್ಮಲ್ಲಿಯೂ ಸಹ ಕೆಲವರು ಬಹಳ
ಚೆನ್ನಾಗಿ ನೆನಪು ಮಾಡುತ್ತಾರೆ. ಅನೇಕರು ಇಂತಹವರಿದ್ದಾರೆ, ತಂದೆಯನ್ನು ನೆನಪು ಮಾಡುವುದೇ ಇಲ್ಲ.
ಅವರು ತಮ್ಮ ಆಹಾರ (ಖಜಾನೆ) ವನ್ನು ತಾವೇ ಕೆಡಿಸಿಕೊಳ್ಳುತ್ತಾರೆ. ವಿದ್ಯೆಯು ಬಹಳ ಸಹಜವಾಗಿದೆ.
ತಂದೆಯು ತಿಳಿಸುತ್ತಾರೆ - ಶಾಂತಿಯಿಂದ ನೀವು ವಿಜ್ಞಾನದ ಮೇಲೆ ವಿಜಯಗಳಿಸಬೇಕಾಗಿದೆ. ಸೈಲೆನ್ಸ್
ಮತ್ತು ಸೈನ್ಸ್ ಒಂದೇ ರಾಶಿಯಾಗಿದೆ. ಮಿಲಿಟರಿಯಲ್ಲಿಯೂ ಸಹ ಮೂರು ನಿಮಿಷಗಳ ಕಾಲ ಸೈಲೆನ್ಸ್
ನಲ್ಲಿರಿಸುತ್ತಾರೆ. ಮನುಷ್ಯರೂ ಸಹ ನಮಗೆ ಶಾಂತಿಯು ಬೇಕೆಂದು ಬಯಸುತ್ತಾರೆ. ಈಗ ನಿಮಗೆ ತಿಳಿದಿದೆ
- ಸಂಪೂರ್ಣ ಶಾಂತಿಯ ಸ್ಥಾನವು ಬ್ರಹ್ಮಾಂಡವಾಗಿದೆ, ಆ ಬ್ರಹ್ಮ್ ಮಹಾತತ್ವದಲ್ಲಿ ನಾವಾತ್ಮಗಳೂ ಸಹ
ಬಹಳ ಸೂಕ್ಷ್ಮ ಬಿಂದುವಿನ ರೂಪದಲ್ಲಿರುತ್ತೇವೆ. ಆ ಎಲ್ಲಾ ಆತ್ಮಗಳ ವೃಕ್ಷವು ಬಹಳ
ವಿಚಿತ್ರವಾಗಿರಬಹುದಲ್ಲವೆ. ಭೃಕುಟಿಯ ನಡುವೆ ಹೊಳೆಯುವ ನಕ್ಷತ್ರವೆಂದು ಮನುಷ್ಯರು ಹೇಳುತ್ತಾರೆ.
ಬಹಳ ಚಿಕ್ಕದಾದ ಚಿನ್ನದ ತಿಲಕವನ್ನು ಮಾಡಿಸಿ ಇಟ್ಟುಕೊಳ್ಳುತ್ತಾರೆ. ಆತ್ಮವೂ ಬಿಂದುವಾಗಿದೆ,
ತಂದೆಯೂ ಸಹ ಅವರ (ಬ್ರಹ್ಮಾರವರ) ಆತ್ಮದ ಪಕ್ಕದಲ್ಲಿಯೇ ಬಂದು ಕುಳಿತುಕೊಳ್ಳುತ್ತಾರೆ. ಸಾಧು-ಸಂತ
ಮೊದಲಾದವರು ಯಾರೂ ತಮ್ಮ ಆತ್ಮದ ಬಗ್ಗೆ ತಿಳಿದುಕೊಂಡಿಲ್ಲ, ಆತ್ಮವನ್ನೇ ಕುರಿತು
ತಿಳಿದುಕೊಂಡಿಲ್ಲವೆಂದರೆ ಪರಮಾತ್ಮನನ್ನು ಹೇಗೆ ತಿಳಿದುಕೊಳ್ಳುತ್ತಾರೆ? ಕೇವಲ ನೀವಾತ್ಮಗಳೇ ಆತ್ಮ
ಮತ್ತು ಪರಮಾತ್ಮನನ್ನು ಅರಿತಿದ್ದೀರಿ, ಯಾವುದೇ ಧರ್ಮದವರು ಅರಿತುಕೊಳ್ಳಲು ಸಾಧ್ಯವಿಲ್ಲ. ಹೇಗೆ
ಇಷ್ಟು ಸೂಕ್ಷ್ಮ ಆತ್ಮವು ಸಂಪೂರ್ಣ ಪಾತ್ರವನ್ನಭಿನಯಿಸುತ್ತದೆ ಎಂಬುದನ್ನು ನೀವೇ
ತಿಳಿದುಕೊಂಡಿದ್ದೀರಿ. ಬಹಳಷ್ಟು ಸತ್ಸಂಗಗಳನ್ನು ಮಾಡುತ್ತಾರೆ ಆದರೆ ಮನುಷ್ಯರು ಏನನ್ನೂ
ತಿಳಿದುಕೊಂಡಿಲ್ಲ. ಈ ಬ್ರಹ್ಮಾರವರೂ ಸಹ ಬಹಳ ಮಂದಿ ಗುರುಗಳನ್ನು ಮಾಡಿಕೊಂಡಿದ್ದರು. ಈಗ ತಂದೆಯು
ತಿಳಿಸುತ್ತಾರೆ - ಇವರೆಲ್ಲರೂ ಭಕ್ತಿಮಾರ್ಗದ ಗುರುಗಳಾಗಿದ್ದಾರೆ, ಜ್ಞಾನಮಾರ್ಗದ ಗುರು ಒಬ್ಬರೇ
ಆಗಿದ್ದಾರೆ. ಡಬಲ್ ಕಿರೀಟಧಾರಿ ರಾಜರ ಮುಂದೆ ಸಿಂಗಲ್ ಕಿರೀಟದ ರಾಜರು ತಲೆಬಾಗಿಸುತ್ತಾರೆ,
ನಮಸ್ಕರಿಸುತ್ತಾರೆ ಏಕೆಂದರೆ ಡಬಲ್ ಕಿರೀಟಧಾರಿ ರಾಜರು ಪವಿತ್ರರಾಗಿದ್ದರು, ಆ ಪವಿತ್ರ ರಾಜರ
ಮಂದಿರಗಳೇ ಮಾಡಲ್ಪಟ್ಟಿವೆ. ಪತಿತರು ಹೋಗಿ ಅವರ ಮುಂದೆ ತಲೆಬಾಗುತ್ತಾರೆ ಆದರೆ ಇವರು ಯಾರು? ನಾವೇಕೆ
ತಲೆಬಾಗುತ್ತೇವೆ? ಎಂಬುದು ಅವರಿಗೆ ತಿಳಿದೇ ಇಲ್ಲ. ಸೋಮನಾಥನ ಮಂದಿರವನ್ನು ಕಟ್ಟಿಸಿದರು, ಈಗ
ಪೂಜೆಯನ್ನೂ ಮಾಡುತ್ತಾರೆ ಆದರೆ ಬಿಂದುವಿನ ಪೂಜೆಯನ್ನು ಹೇಗೆ ಮಾಡುವುದು? ಬಿಂದುವಿಗೆ ಮಂದಿರವು
ಹೇಗಾಗುವುದು? ಇವು ಬಹಳ ಗುಹ್ಯಮಾತುಗಳಾಗಿವೆ. ಗೀತೆಯಲ್ಲಿ ಈ ಮಾತುಗಳಿಲ್ಲ. ಯಾರು ಸ್ವಯಂ
ಮಾಲೀಕನಾಗಿದ್ದಾರೆಯೋ ಅವರೇ ಇದನ್ನು ತಿಳಿಸಿಕೊಡುತ್ತಾರೆ. ಹೇಗೆ ಇಷ್ಟು ಚಿಕ್ಕದಾದ ಆತ್ಮದಲ್ಲಿ
ಪಾತ್ರವು ನಿಗಧಿಯಾಗಿದೆ ಎಂಬುದನ್ನು ನೀವೀಗ ಅರ್ಥಮಾಡಿಕೊಂಡಿದ್ದೀರಿ. ಆತ್ಮವೂ ಅವಿನಾಶಿಯಾಗಿದೆ,
ಪಾತ್ರವೂ ಅವಿನಾಶಿಯಾಗಿದೆ, ಆಶ್ಚರ್ಯವಲ್ಲವೆ. ಇದೆಲ್ಲವೂ ಮಾಡಿ-ಮಾಡಲ್ಪಟ್ಟ ಆಟವಾಗಿದೆ.
ಮಾಡಿ-ಮಾಡಲ್ಪಟ್ಟು ಮತ್ತೆ ಮಾಡಲ್ಪಡುತ್ತಿದೆ ಎಂದು ಹೇಳುತ್ತಾರೆ. ನಾಟಕದಲ್ಲಿ ಯಾವುದು
ನಿಗಧಿಯಾಗಿದೆಯೋ ಅದು ಅವಶ್ಯವಾಗಿ ಆಗುವುದು. ಇದರಲ್ಲಿ ಚಿಂತೆಯ ಮಾತಿಲ್ಲ.
ನೀವು ಮಕ್ಕಳೀಗ
ತಮ್ಮೊಂದಿಗೆ ತಾವು ಪ್ರತಿಜ್ಞೆ ಮಾಡಿಕೊಳ್ಳಬೇಕಾಗಿದೆ - ಏನೇ ಆಗಲಿ ಎಂದೂ ಕಣ್ಣೀರು ಹಾಕುವುದಿಲ್ಲ.
ಯಾರೋ ಶರೀರಬಿಟ್ಟರು, ಆತ್ಮವು ಇನ್ನೊಂದು ಶರೀರವನ್ನು ತೆಗೆದುಕೊಂಡಿತು ಇದರಲ್ಲಿ ಅಳುವ
ಅವಶ್ಯಕತೆಯೇನಿದೆ? ಅವರು ಹಿಂತಿರುಗಿ ಬರುವುದಕ್ಕಂತೂ ಸಾಧ್ಯವಿಲ್ಲ ಅಂದಾಗ ಕಣ್ಣೀರು ಬಂದಿತೆಂದರೆ
ಅನುತ್ತೀರ್ಣರಾದಿರಿ ಆದ್ದರಿಂದಲೇ ತಂದೆಯು ತಿಳಿಸುತ್ತಾರೆ - ಮಕ್ಕಳೇ, ನಾವು ಎಂದಿಗೂ
ಅಳುವುದಿಲ್ಲವೆಂದು ಪ್ರತಿಜ್ಞೆ ಮಾಡಿ. ಪರಬ್ರಹ್ಮದಲ್ಲಿರುವ ಪರಮೇಶ್ವರನನ್ನು ಪಡೆಯಬೇಕೆಂಬ
ಚಿಂತೆಯಿತ್ತು, ಅವರು ಸಿಕ್ಕಿಬಿಟ್ಟರೆಂದರೆ ಇನ್ನೇನು ಬೇಕು! ನೀವು ತಂದೆಯಾದ ನನ್ನನ್ನು ನೆನಪು
ಮಾಡಿ. ನಾನು ಒಮ್ಮೆ ಮಾತ್ರವೇ ರಾಜಧಾನಿಯನ್ನು ಸ್ಥಾಪನೆ ಮಾಡುವುದಕ್ಕಾಗಿ ಬರುತ್ತೇನೆ. ಇದರಲ್ಲಿ
ಯುದ್ಧ ಮೊದಲಾದ ಮಾತಿಲ್ಲ. ಯುದ್ಧವು ನಡೆಯಿತು, ಅದರಲ್ಲಿ ಕೇವಲ ಪಾಂಡವರು ಉಳಿದುಕೊಂಡರು. ಅವರು
ನಾಯಿಯನ್ನು ಜೊತೆಯಲ್ಲಿಟ್ಟುಕೊಂಡು ಹೋಗಿ ಪರ್ವತಗಳ ಮೇಲೆ ಕರಗಿಹೋದರು ಎಂದು ಗೀತೆಯಲ್ಲಿ
ತೋರಿಸಿದ್ದಾರೆ. ಜಯವನ್ನು ಗಳಿಸಿದರು ಮತ್ತು ಸತ್ತುಹೋದರು, ಈ ಮಾತೇ ವಾಸ್ತವಿಕವಾಗಿಲ್ಲ, ಇವೆಲ್ಲವೂ
ದಂತಕಥೆಗಳಾಗಿವೆ. ಇದಕ್ಕೆ ಭಕ್ತಿಮಾರ್ಗವೆಂದು ಕರೆಯಲಾಗುತ್ತದೆ.
ತಂದೆಯು ತಿಳಿಸುತ್ತಾರೆ
- ನೀವು ಮಕ್ಕಳಿಗೆ ಇದರಿಂದ ವೈರಾಗ್ಯವು ಬರಬೇಕು. ಹೇಗೆ ಹಳೆಯ ವಸ್ತುವಿನೊಂದಿಗೆ
ತಿರಸ್ಕಾರವುಂಟಾಗುತ್ತದೆಯಲ್ಲವೆ. ತಿರಸ್ಕಾರ ಎಂಬ ಶಬ್ಧವು ಕಠಿಣವಾಗಿದೆ. ವೈರಾಗ್ಯ ಶಬ್ಧವು
ಮಧುರವಾಗಿದೆ. ಯಾವಾಗ ಜ್ಞಾನವು ಸಿಗುತ್ತದೆಯೋ ಆಗ ಭಕ್ತಿಯ ಮೇಲೆ ವೈರಾಗ್ಯವು ಬಂದುಬಿಡುತ್ತದೆ.
ಸತ್ಯಯುಗ, ತ್ರೇತಾಯುಗದಲ್ಲಿ ಮತ್ತೆ ಜ್ಞಾನದ ಪ್ರಾಲಬ್ಧವು 21 ಜನ್ಮಗಳಿಗಾಗಿ ಸಿಕ್ಕಿಬಿಡುತ್ತದೆ.
ಅಲ್ಲಿ ಜ್ಞಾನದ ಅವಶ್ಯಕತೆಯೇ ಇರುವುದಿಲ್ಲ. ನಂತರ ಯಾವಾಗ ನೀವು ವಾಮಮಾರ್ಗದಲ್ಲಿ ಹೋಗುತ್ತೀರೋ ಆಗ
ಏಣಿಯನ್ನಿಳಿಯುತ್ತೀರಿ. ಈಗ ಅಂತ್ಯವಾಗಿದೆ. ತಂದೆಯು ತಿಳಿಸುತ್ತಾರೆ - ಈಗ ಈ ಹಳೆಯ ಪ್ರಪಂಚದಿಂದ
ನೀವು ಮಕ್ಕಳಿಗೆ ವೈರಾಗ್ಯವು ಬರಬೇಕಾಗಿದೆ. ನೀವೀಗ ಶೂದ್ರರಿಂದ ಬ್ರಾಹ್ಮಣರಾಗಿದ್ದೀರಿ, ನಂತರ ನೀವೇ
ದೇವತೆಗಳಾಗುತ್ತೀರಿ. ಅನ್ಯಮನುಷ್ಯರು ಈ ಮಾತುಗಳನ್ನು ಏನು ಅರಿತುಕೊಳ್ಳುವರು! ಭಲೆ ವಿರಾಟ ರೂಪದ
ಚಿತ್ರವನ್ನು ರಚಿಸುತ್ತಾರೆ, ಅದರಲ್ಲಿ ಶಿಖೆಯೂ ಇಲ್ಲ, ಶಿವನೂ ಇಲ್ಲ. ದೇವತಾ, ಕ್ಷತ್ರಿಯ, ವೈಶ್ಯ,
ಶೂದ್ರರೆಂದು ಹೇಳಿಬಿಡುತ್ತಾರೆ. ಶೂದ್ರರಿಂದ ದೇವತೆಗಳನ್ನಾಗಿ ಹೇಗೆ ಮತ್ತು ಯಾರು ಮಾಡುತ್ತಾರೆ
ಎಂಬುದೇನನ್ನೂ ತಿಳಿದುಕೊಂಡಿಲ್ಲ. ತಂದೆಯು ತಿಳಿಸುತ್ತಾರೆ- ನೀವು ದೇವಿ-ದೇವತೆಗಳು ಎಷ್ಟೊಂದು
ಸಾಹುಕಾರರಾಗಿದ್ದಿರಿ ಅಂದಮೇಲೆ ಅಷ್ಟೆಲ್ಲಾ ಸಂಪತ್ತು ನಂತರ ಎಲ್ಲಿ ಹೋಯಿತು!
ತಲೆಬಾಗುತ್ತಾ-ಬಾಗುತ್ತಾ ಹಣೆಯನ್ನೂ ಸವೆಸಿಕೊಂಡಿರಿ, ಹಣವನ್ನೂ ಕಳೆದಿರಿ. ಇದು ನೆನ್ನೆಯ
ಮಾತಾಗಿದೆಯಲ್ಲವೆ. ನಿಮ್ಮನ್ನು ಇಷ್ಟು ಶ್ರೇಷ್ಠರನ್ನಾಗಿ ಮಾಡಿಹೋದೆನು, ನೀವು ಮತ್ತೆ
ಏನಾಗಿಬಿಟ್ಟಿದ್ದೀರಿ! ಒಳ್ಳೆಯದು.
ಮಧುರಾತಿ ಮಧುರ ಅಗಲಿ
ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ.
ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ಅಲ್ಲಸಲ್ಲದ
(ಪರಚಿಂತನೆ) ವಾರ್ತಾಲಾಪದಿಂದ ವಾತಾವರಣವನ್ನು ಹಾಳುಮಾಡಬಾರದು. ಏಕಾಂತದಲ್ಲಿ ಕುಳಿತು
ಸತ್ಯ-ಸತ್ಯವಾದ ಪ್ರಿಯತಮೆಯರಾಗಿ ಒಬ್ಬ ಪ್ರಿಯತಮನನ್ನು ನೆನಪು ಮಾಡಬೇಕಾಗಿದೆ.
2. ನಾವು ಎಂದಿಗೂ
ಅಳುವುದಿಲ್ಲ, ಕಣ್ಣೀರು ಹಾಕುವುದಿಲ್ಲವೆಂದು ತಮ್ಮೊಂದಿಗೆ ತಾವು ಪ್ರತಿಜ್ಞೆ ಮಾಡಿಕೊಳ್ಳಬೇಕಾಗಿದೆ.
ಯಾರು ಸೇವಾಧಾರಿ ತಂದೆಯ ಹೃದಯವನ್ನೇರಿದ್ದಾರೆಯೋ ಅಂತಹವರ ಸಂಗವನ್ನೇ ಮಾಡಬೇಕಾಗಿದೆ. ತಮ್ಮ
ರಿಜಿಸ್ಟರನ್ನು ಬಹಳ ಚೆನ್ನಾಗಿಟ್ಟುಕೊಳ್ಳಬೇಕಾಗಿದೆ.
ವರದಾನ:
ಶಕ್ತಿಶಾಲಿ
ವೃತ್ತಿಯ ಮುಖಾಂತರ ಮನಸಾ ಸೇವೆ ಮಾಡುವಂತಹವರೇ ವಿಶ್ವ ಕಲ್ಯಾಣಕಾರಿ ಭವ.
ವಿಶ್ವದ
ಚಡಪಡಿಸುತ್ತಿರುವ ಆತ್ಮಗಳಿಗೆ ದಾರಿ ತೋರಿಸುವುದಕ್ಕಾಗಿ ಸಾಕ್ಷಾತ್ ತಂದೆಯ ಸಮಾನ ಲೈಟ್ಹೌಸ್,
ಮೈಟ್ಹೌಸ್ ಅಗಿ. ಎಲ್ಲಾ ಆತ್ಮಗಳಿಗೂ ಏನಾದರೂ ಕೊಡಲೇ ಬೇಕು ಎನ್ನುವ ಲಕ್ಷ್ಯ ಇಟ್ಟುಕೊಳ್ಳಿ. ಮುಕ್ತಿ
ಕೊಡಿ ಇಲ್ಲವೆಂದರೆ ಜೀವನ್ಮುಕ್ತಿ ಕೊಡಿ. ಸರ್ವರ ಪ್ರತಿ ಮಹಾದಾನಿ, ವರದಾನಿಯಾಗಿ. ಈಗ
ನಿಮ್ಮ-ನಿಮ್ಮ ಸ್ಥಾನಗಳಲ್ಲಿ ಸೇವೆಯಂತೂ ಮಾಡುತ್ತಿರುವಿರಿ ಆದರೆ ಒಂದೇ ಸ್ಥಾನದಲ್ಲಿರುತ್ತಾ ಮನಸಾ
ಶಕ್ತಿಯ ಮುಖಾಂತರ ವಾಯುಮಂಡಲ, ವೈಭ್ರೇಷನ್ನ ಮುಖಾಂತರ ವಿಶ್ವ ಸೇವೆ ಮಾಡಿ. ಇಂತಹ ಶಕ್ತಿಶಾಲಿ
ವೃತ್ತಿ ಮಾಡಿಕೊಳ್ಳಿ ಅದರಿಂದ ವಾಯುಮಂಡಲ ರಚನೆಯಾಗಲಿ - ಆಗ ಹೇಳಲಾಗುತ್ತದೆ ವಿಶ್ವ ಕಲ್ಯಾಣಕಾರಿ
ಆತ್ಮ .
ಸ್ಲೋಗನ್:
ಅಶರೀರಿ ತನದ
ವ್ಯಾಯಾಮ ಮತ್ತು ವ್ಯರ್ಥ ಸಂಕಲ್ಪರೂಪಿ ಬೋಜನದ ಪಥ್ಯೆಯಿಂದ ಸ್ವಯಂ ಅನ್ನು ಆರೋಗ್ಯಶಾಲಿ ಮಾಡಿಕೊಳ್ಳಿ.
ಅವ್ಯಕ್ತ ಸೂಚನೆ - ಸತ್ಯ
ಮತ್ತು ಸಭ್ಯತೆ ರೊಪಿ ಕಲ್ಚರ್(ಸಂಸ್ಕೃತಿಯನ್ನು) ತಮ್ಮದಾಗಿಸಿಕೊಳ್ಳಿರಿ
ಈಗ ತಮ್ಮ ಭಾಷಣಗಳ
ರೂಪರೇಖೆಯನ್ನು ಹೊಸದನ್ನಾಗಿ ಮಾಡಿ. ವಿಶ್ವ ಶಾಂತಿಯ ಭಾಷಣವನ್ನಂತು ಬಹಳ ಮಾಡಿದ್ದೀರಿ ಆದರೆ
ಆಧ್ಯಾತ್ಮಿಕ ಜ್ಞಾನ ಹಾಗೂ ಶಕ್ತಿ ಏನಾಗಿದೆ ಹಾಗೂ ಇದರ ಜನನಿ ಯಾರಾಗಿದ್ದಾರೆ! ಈ ಸತ್ಯತೆಯನ್ನು
ಸಭ್ಯತಾ ಪೂರ್ವಕವಾಗಿ ಸಿದ್ಧಮಾಡಿ. ಎಲ್ಲರೂ ತಿಳಿದುಕೊಳ್ಳಲಿ- ಇದು ಭಗವಂತನ ಕಾರ್ಯ ನಡೆಯುತ್ತಿದೆ.
ಮಾತೆಯರು ಬಹಳ ಚೆನ್ನಾಗಿ ಕಾರ್ಯ ಮಾಡುತ್ತಿದ್ದಾರೆ- ಸಮಯ ಪ್ರಮಾಣ ಈ ಧರಣಿಯೂ ಸಹ ಮಾಡಬೇಕಾಗಿ
ಬರುವುದು ಆದರೆ ಹೇಗೆ ತಂದೆ ಮಗನನ್ನು ಪ್ರದರ್ಶಿಸುತ್ತಾರೆ, ಅದೇ ರೀತಿ ಮಗ ತಂದೆಯನ್ನು
ಪ್ರದರ್ಶಿಸಲಿ ಆಗ ಪ್ರತ್ಯಕ್ಷತೆಯ ಬಾವುಟ ಹಾರುವುದು.