28.07.24 Avyakt Bapdada
Kannada
Murli 31.12.20 Om Shanti Madhuban
ಉಳಿತಾಯದ ಖಾತೆಯನ್ನು ಜಮಾ
ಮಾಡಿ ಅಖಂಡ ಮಹಾದಾನಿಗಳಾಗಿ.
ನವಯುಗದ ಸೃಷ್ಟಿಕರ್ತನು
ಇಂದು ತನ್ನ ನವಯುಗದ ಅಧಿಕಾರಿ ಮಕ್ಕಳನ್ನು ನೋಡುತ್ತಿದ್ದಾರೆ. ಇಂದು ಹಳೆಯ ಯುಗದಲ್ಲಿ ಅವರು
ಸಾಮಾನ್ಯರಾಗಿದ್ದಾರೆ ಹಾಗೂ ನಾಳೆ ನವಯುಗದಲ್ಲಿ ರಾಜ್ಯ ಅಧಿಕಾರಿ ಪೂಜ್ಯರಾಗುತ್ತಾರೆ. ಇದು ಇಂದು
ಮತ್ತು ನಾಳೆಯ ಆಟವಾಗಿದೆ ಇಂದು ಏನಾಗಿದ್ದಾರೆ ಹಾಗೂ ನಾಳೆ ಏನಾಗುತ್ತಾರೆ! ಅನನ್ಯ ಜ್ಞಾನಿ ತೂ
ಆತ್ಮ ಮಕ್ಕಳಿಗೆ ಮುಂದೆ ಬರುವ ನಾಳೆಯೂ ಕೂಡ ಇಂದಿನಂತೆಯೇ ಸ್ಪಷ್ಟವಾಗಿದೆ. ತಾವೆಲ್ಲರೂ ಹೊಸ
ವರ್ಷವನ್ನು ಆಚರಿಸಲು ಬಂದಿದ್ದೀರಿ. ಆದರೆ ಬಾಪ್ದಾದ ಹೊಸಯುಗವನ್ನು ನೋಡುತ್ತಿದ್ದಾರೆ. ಹೊಸ
ವರ್ಷದಲ್ಲಿ, ಪ್ರತಿಯೊಬ್ಬರೂ ತಮ್ಮದೇ ಆದ ಹೊಸ ಯೋಜನೆಯನ್ನು ಮಾಡಿರಬೇಕು. ಇಂದು ಹಳೆಯದರ
ಅಂತ್ಯವಾಗಿದೆ ಕೊನೆಯಲ್ಲಿ ಇಡೀ ವರ್ಷದ ಫಲಿತಾಂಶಗಳು ಕಂಡುಬರುತ್ತವೆ ಆದ್ದರಿಂದ ಇಂದು ಬಾಪ್ದಾದ
ಕೂಡ ಪ್ರತಿಯೊಂದು ಮಗುವಿನ ಇಡೀ ವರ್ಷದ ಫಲಿತಾಂಶ ನೋಡಿದರು. ಬಾಪ್ದಾದ ಅವರಿಗಂತೂ ಫಲಿತಾಂಶ ನೋಡಲು
ಹೆಚ್ಚು ಸಮಯ ಆಗುವುದಿಲ್ಲ ಹಾಗಾಗಿ ಇಂದು ವಿಶೇಷವಾಗಿ ಎಲ್ಲಾ ಮಕ್ಕಳ ಜಮಾದ ಖಾತೆಯನ್ನು ನೋಡಿದರು
ಎಲ್ಲಾ ಮಕ್ಕಳು ಪುರುಷಾರ್ಥವನ್ನು ಮಾಡಿದ್ದಾರೆ, ನೆನಪನ್ನು ಮಾಡಿದ್ದಾರೆ, ಸೇವೆಯನ್ನು ಮಾಡಿದ್ದಾರೆ,
ಲೌಕಿಕ ಅಥವಾ ಅಲೋಕಿಕ ಪರಿವಾರದೊಂದಿಗೆ ಸಂಬಂಧ ಸಂಪರ್ಕವನ್ನು ನಿಭಾಯಿಸಿದ್ದಾರೆ ಆದರೆ ಈ ಮೂರು
ವಿಷಯಗಳ ಖಾತೆಯಲ್ಲಿ ಎಷ್ಟು ಜಮಾ ಮಾಡಿದ್ದಾರೆ?
ಬಾಪ್ದಾದಾ ಇಂದು ವತನದಲ್ಲಿ ಜಗದ0ಬೆ ಮಾತೆಯನ್ನು ಇಮರ್ಜ್ ಮಾಡಿದರು (ಕೆಮ್ಮು ಬಂದಿತು) ಇಂದು
ವಾದ್ಯ, ಗಂಟಲು ಸ್ವಲ್ಪ ಕೆಟ್ಟಿದೆ ಆದರೂ ಉಪಯೋಗಿಸಲೇಬೇಕಲ್ಲವೇ. ಹಾಗಾಗಿ ಬಾಬಾ ಮತ್ತು ಮಮ್ಮಾ
ಇಬ್ಬರು ಸೇರಿ ಎಲ್ಲಾ ಮಕ್ಕಳ ಉಳಿತಾಯ ಖಾತೆಯನ್ನು ನೋಡಿದರು. ಉಳಿತಾಯದ ನಂತರ ಜಮಾ ಎಷ್ಟಾಗಿದೆ! ಏನು
ನೋಡಿದರು? ಎಲ್ಲರೂ ನಂಬರ್ವಾರ್ ಆಗಿದ್ದಾರೆ, ಆದರೆ ಖಾತೆಯಲ್ಲಿ ಠೇವಣಿ ಮೊತ್ತ
ಇರಬೇಕಾದುದ್ದಕ್ಕಿಂತ ಕಡಿಮೆ ಇತ್ತು ಆದ್ದರಿಂದ ತಾಯಿ ಜಗದಂಬೆ ಪ್ರಶ್ನೆಯನ್ನು ಕೇಳಿದರು --
ನೆನಪಿನ ವಿಷಯದಲ್ಲಿ ಅನೇಕ ಮಕ್ಕಳ ಗುರಿ ಉತ್ತಮವಾಗಿದೆ, ಅವರ ಪುರುಷಾರ್ಥವೂ ಉತ್ತಮವಾಗಿದೆ ಹಾಗಾದರೆ
ಜಮಾದ ಖಾತೆಯು ಇರಬೇಕಾದುದ್ದಕ್ಕಿಂತ ಕಡಿಮೆ ಏಕೆ ಇದೆ? ಮಾತುಗಳು, ಆತ್ಮಿಕ ವಾರ್ತಾಲಾಪ, ನಡೆಯುತ್ತಾ
ನಡೆಯುತ್ತಾ, ಇದೇ ಫಲಿತಾಂಶ ಬಂದಿತು ಏನೆಂದರೆ, ಯೋಗದ ಅಭ್ಯಾಸವನ್ನಂತು ಮಾಡುತ್ತಲೇ ಇದ್ದಾರೆ ಆದರೆ
ಯೋಗದ ಸ್ಥಿತಿಯ ಪಸೆರ್ಂಟೇಜ್ ಸಾಧಾರಣವಾಗಿರುವ ಕಾರಣ ಜಮಾದ ಖಾತೆ ಸಾಧಾರಣವಾಗಿಯೇ ಇದೆ ಯೋಗದ
ಲಕ್ಷ್ಯ ಚೆನ್ನಾಗಿದೆ ಆದರೆ ಯೋಗದ ರಿಸಲ್ಟ್-- ಯೋಗಯುಕ್ತ, ಯುಕ್ತಿಯುಕ್ತ-ತರ್ಕಬದ್ಧ ಮಾತು ಮತ್ತು
ಚಲನೆ ಇದರಲ್ಲಿ ಕಡಿಮೆ ಇರುವ ಕಾರಣ, ಯೋಗ ಮಾಡುವ ಸಮಯದಲ್ಲಿ ಯೋಗದಲ್ಲಿ ಉತ್ತಮವಾಗಿದ್ದಾರೆ ಆದರೆ
ಯೋಗಿ ಎಂದರೆ ಜೀವನದಲ್ಲಿ ಯೋಗದ ಪ್ರಭಾವ. ಆದ್ದರಿಂದ ಕೆಲವೊಮ್ಮೆ ಉಳಿತಾಯ ಖಾತೆಯಲ್ಲಿ ಜಮಾ
ಆಗುತ್ತದೆ ಆದರೆ ಎಲ್ಲಾ ಸಮಯದಲ್ಲೂ ಜಮಾ ಆಗುವುದಿಲ್ಲ ನಡೆಯುತ್ತಾ ನಡೆಯುತ್ತಾ ನೆನಪಿನ ಪಸೆರ್ಂಟೇಜ್
ಸಾಧಾರಣವಾಗುತ್ತದೆ ಆಗ ಬಹಳ ಕಡಿಮೆ ಜಮಾ ಆಗುತ್ತದೆ
ಎರಡನೆಯದಾಗಿ-- ಸೇವೆಯ ಹೃದಯದಿಂದ ಹೃದಯದ ವಾರ್ತಾಲಾಪ ನಡೆಯಿತು ಸೇವೆಯನಂತೂ ಬಹಳ ಚೆನ್ನಾಗಿ
ಮಾಡುತ್ತಾರೆ ಹಗಲು ರಾತ್ರಿ ಕಾರ್ಯನಿರತರಾಗಿರುತ್ತಾರೆ. ಉತ್ತಮ ಯೋಜನೆಗಳನ್ನು ರೂಪಿಸುತ್ತಾರೆ
ಮತ್ತು ಸೇವೆಯ ವೃದ್ಧಿಯು ತುಂಬಾ ಉತ್ತಮವಾಗಿದೆ ಆದರೂ, ಅನೇಕರ ಉಳಿತಾಯ ಖಾತೆಗಳು ಏಕೆ ಕಡಿಮೆಯಾಗಿವೆ?
ಪ್ರತಿಯೊಬ್ಬರೂ ಸೇವೆಯನ್ನು ಮಾತ್ರ ಮಾಡುತ್ತಿಲ್ಲ, ಅವರು ತಮ್ಮನ್ನು ತಾವು
ಕಾರ್ಯನಿರತವಾಗಿಸಿಕೊಳ್ಳಲು ಉತ್ತಮ ಪ್ರಯತ್ನಗಳನ್ನು ಮಾಡುತ್ತಿದ್ದಾರೆ ಎಂಬುದು ತಮ್ಮ ಹೃದಯದಿಂದ
ಹೃದಯದ ಸಂಭಾಷಣೆಯಲ್ಲಿ ಮನವರಿಕೆಯಾಯಿತು ಹಾಗಾದರೆ ಕಡಿಮೆಯಾಗಲು ಕಾರಣವೇನು? ಸೇವೆಯು ಶಕ್ತಿ ಮತ್ತು
ಫಲವನ್ನು ನೀಡುತ್ತದೆ. ಶಕ್ತಿ ಎಂದರೆ ತಮ್ಮ ಸ್ವಂತ ಹೃದಯದ ತೃಪ್ತಿಯಾಗಿದೆ ಮತ್ತು ಫಲ ಎಲ್ಲರ
ಸಂತುಷ್ಟತೆಯಾಗಿದೆ. ತಾವು ಸೇವೆಯನ್ನು ಮಾಡಿದರೆ ಕಠಿಣ ಪರಿಶ್ರಮ ಮತ್ತು ಸಮಯವನ್ನು ವಿನಿಯೋಗಿಸಿದರೆ,
ತಮ್ಮ ಹೃದಯದ ತೃಪ್ತಿ ಮತ್ತು ಜೊತೆಗಾರರು ಹಾಗೂ ಯಾರ ಸೇವೆಯನ್ನು ಮಾಡಿದಿರೋ ಅವರು,
ಸಂತುಷ್ಟತೆಯನ್ನು ಹೃದಯದಲ್ಲಿ ಅನುಭವ ಮಾಡಬೇಕು. ಅವರು ಬಹಳ ಒಳ್ಳೆಯದು, ಬಹಳ ಒಳ್ಳೆಯದು ಎಂದು ಹೇಳಿ
ಹೋಗುವುದಲ್ಲ, ಆದರೆ ಅವರು ಹೃದಯದಲ್ಲಿ ಸಂತುಷ್ಟತೆಯ ಅಲೆಯನ್ನು ಅನುಭವ ಮಾಡಬೇಕು. ಏನೋ ಸಿಕ್ಕಿತು,
ಬಹಳ ಒಳ್ಳೆಯದನ್ನು ಕೇಳಿದೆವು, ಅದು ಬೇರೆ ಮಾತು. ಏನು ಸಿಕ್ಕಿತು ಏನನ್ನೋ ಪಡೆದುಕೊಂಡೆವು ಇದಕ್ಕೆ
ಬಾಪ್ದಾದಾರವರು ಈ ಹಿಂದೆಯೂ ಹೇಳಿದ್ದರು-- ಒಂದಾಗಿದೆ ಮೆದುಳಿಗೆ ಹೊಡೆಯುವ ಬಾಣ, ಮತ್ತು ಇನ್ನೊಂದು
ಹೃದಯಕ್ಕೆ ಹೊಡೆಯುವ ಬಾಣ. ಸೇವೆ ಮಾಡಿದಿರಿ ಮತ್ತು ಮಾತ್ರ ಸ್ವಯಂನ ಸಂತುಷ್ಟತೆ, ತಮ್ಮನ್ನು ಖುಷಿ
ಪಡಿಸಿಕೊಳ್ಳುವ ಸಂತುಷ್ಟತೆ ಅಲ್ಲ, ಬಹಳ ಒಳ್ಳೆಯದಾಯಿತು, ಬಹಳ ಒಳ್ಳೆಯದು ಆಯಿತು, ಅಲ್ಲ. ಹೃದಯ,
ಸ್ವಯಂನ ಹಾಗೂ ಸರ್ವರ ಸಂತುಷ್ಟತೆಯನ್ನು ಬಯಸಬೇಕು. ಮತ್ತು ಎರಡನೇ ವಿಷಯವೇನೆಂದರೆ, ಸೇವೆ ಆಯಿತು
ಮತ್ತು ಅದರ ಫಲಿತಾಂಶವು ನನ್ನ ಪರಿಶ್ರಮದಿಂದ ಅಥವಾ ನಾನು ಮಾಡಿದೆ...... ನಾನು ಮಾಡಿದ್ದೇನೆ ಎಂದು
ಸ್ವೀಕರಿಸಿದರೆ, ನಾನು ಸೇವೆಯ ಫಲವನ್ನು ಸೇವಿಸಿದೆ, ಸಂಗ್ರಹಿಸಿಲ್ಲ. ಬಾಪ್ದಾದಾ ಮಾಡಿಸಿದರು,
ಬಾಪ್ದಾದಾ ಕಡೆಗೆ ಗಮನಹರಿಸುವಂತೆ ಮಾಡಬೇಕು, ತಮ್ಮ ಆತ್ಮದ ಕಡೆಗಲ್ಲ. ಈ ಸಹೋದರಿ ತುಂಬಾ ಒಳ್ಳೆಯವರು,
ಈ ಸಹೋದರ ತುಂಬಾ ಒಳ್ಳೆಯವರು, ಅಲ್ಲ. ಬಾಪ್ದಾದಾ ಬಹಳ ಒಳ್ಳೆಯವರು ಎಂಬ ಅನುಭವ ಮಾಡಿಸಬೇಕು. --
ಇದಾಗಿದೆ ಜಮಾದ ಖಾತೆಯನ್ನು ಹೆಚ್ಚಿಸುವ ವಿಧಾನ. ಹೀಗಾಗಿ ಸಂಪೂರ್ಣ ಫಲಿತಾಂಶದಲ್ಲಿ ಹೆಚ್ಚು
ಪರಿಶ್ರಮ, ಹೆಚ್ಚು ಸಮಯ, ಶಕ್ತಿ, ಹಾಗೂ ಹೆಚ್ಚು ಆಡಂಬರ ಹೆಚ್ಚು ಎಂದು ಕಂಡು ಬಂದಿದೆ ಆದ್ದರಿಂದಲೇ
ಜಮಾದ ಖಾತೆ ಕಡಿಮೆಯಾಗುತ್ತಾ ಹೋಗುತ್ತದೆ. ಜಮಾದ ಖಾತೆಯ ಕೀಲಿಯು ತುಂಬಾ ಸಹಜ ವಾಗಿದೆ ಇದು ಡೈಮಂಡ್
ಕೀಲಿ ಕೈಯಾಗಿದೆ ನೀವು ಗೋಲ್ಡನ್ ಕೀಯನ್ನು ಬಳಸುತ್ತೀರಿ ಆದರೆ ಜಮಾದ ಡೈಮಂಡ್ ಕೀಲಿ 'ನಿಮಿತ್ತ ಭಾವ
ಮತ್ತು ನಮೃತೆಯ ಭಾವ' ಆಗಿದೆ. ಸೇವೆಯ ಸಮಯದಲ್ಲಿ ಪ್ರತಿ ಆತ್ಮಕ್ಕೂ, ಅದು ನಿಮ್ಮ ಜೊತೆಗಾರರಾಗಿರಲಿ
ಅಥವಾ ನೀವು ಸೇವೆ ಮಾಡುವ ಆತ್ಮವೇ ಆಗಿರಲಿ, ನಿಮಿತ್ತ ಭಾವ, ನಿರ್ಮಾಣ ಭಾವ, ನಿಸ್ವಾರ್ಥ ಶುಭ ಭಾವನೆ
ಮತ್ತು ಶುಭ ಸ್ನೇಹ ಇಮರ್ಜ್ ಆದರೆ ಜಮಾದ ಖಾತೆ ವೃದ್ಧಿಯಾಗುತ್ತಾ ಹೋಗುತ್ತದೆ.
ಈ ರೀತಿ ಸೇವೆ ಮಾಡುವವರ ಖಾತೆಯು ಹೇಗೆ ಹೆಚ್ಚುತ್ತದೆ ಎಂಬುದನ್ನು ಬಾಪ್ದಾದಾ ಮಾತೆ ಜಗದಂಬಾಗೆ
ತೋರಿಸಿದರು ಕೆಲವೇ ಸೆಕೆಂಡುಗಳಲ್ಲಿ ಹಲವಾರು ಗಂಟೆಗಳ ಉಳಿತಾಯ, ಖಾತೆಗೆ ಜಮಾ ಆಗುತ್ತದೆ ಅದನ್ನು
ಹೇಗೆ ಟಿಕ್ ಟಿಕ್ ಟಿಕ್ ತ್ವರಿತವಾಗಿ ಮತ್ತು ಜೋರಾಗಿ ಯಂತ್ರವು ಈ ರೀತಿ ಕಾರ್ಯನಿರ್ವಹಿಸುತ್ತದೆ
ಹಾಗಾಗಿ ಜಮಾದ ಖಾತೆಯನ್ನು ತೆರೆಯುವುದು ತುಂಬಾ ಸುಲಭ ಎಂದು ಜಗದಂಬಾ ತುಂಬಾ ಸಂತೋಷಪಟ್ಟರು
ಆದ್ದರಿಂದ ಅವರಿಬ್ಬರೂ (ಬಾಪ್ದಾದಾ ಹಾಗೂ ಜಗದಂಬಾ) ಪರಾಮರ್ಶಿಸಿದರು, ಈಗ ಹೊಸ ವರ್ಷ
ಪ್ರಾರಂಭವಾಗುತ್ತಿದೆ ಆದ್ದರಿಂದ ತಮ್ಮ ಜಮಾದ ಖಾತೆಯನ್ನು ಪರಿಶೀಲಿಸಿರಿ, ಇಡೀ ದಿನದಲ್ಲಿ ಯಾವ
ತಪ್ಪನ್ನು ಮಾಡಿಲ್ಲ, ಆದರೆ ಸಮಯ ಸಂಕಲ್ಪ ಸೇವೆ ಸಂಬಂಧ ಸಂಪರ್ಕದಲ್ಲಿ ಸ್ನೇಹ ಮತ್ತು ಸಂತುಷ್ಟತೆಯ
ಮೂಲಕ ಎಷ್ಟು ಜಮಾ ಮಾಡಿದಿರಿ? ಅನೇಕ ಮಕ್ಕಳು ಕೇವಲ ಇದನ್ನು ಪರಿಶೀಲಿಸುತ್ತಾರೆ-- ಇಂದು
ಕೆಟ್ಟದ್ದೇನು ಆಗಲಿಲ್ಲ. ಯಾರಿಗೂ ದುಃಖವನ್ನು ಕೊಡಲಿಲ್ಲ. ಆದರೆ ಈಗ, ಇಡೀ ದಿನದಲ್ಲಿ ಶ್ರೇಷ್ಠ
ಸಂಕಲ್ಪಗಳ ಖಾತೆಯನ್ನು ಎಷ್ಟು ಜಮಾ ಮಾಡಿದೆನು? ಎಂಬುದನ್ನು ಪರಿಶೀಲಿಸಿಕೊಳ್ಳಿ. ಶ್ರೇಷ್ಠ
ಸಂಕಲ್ಪಗಳ ಮೂಲಕ ಸೇವೆಯ ಖಾತೆಯಲ್ಲಿ ಎಷ್ಟು ಜಮಾ ಮಾಡಿದೆನು? ಯಾವುದಾದರು ಕಾರ್ಯದಿಂದ ಎಷ್ಟು
ಆತ್ಮಗಳಿಗೆ ಸುಖವನ್ನು ಕೊಟ್ಟೆನು? ಯೋಗ ಮಾಡಿದೆನು ಆದರೆ ಯೋಗದ ಪಸೆರ್ಂಟೇಜ್ ಯಾವ ಪ್ರಕಾರವಾಗಿತ್ತು?
ಇಂದಿನ ದಿನ ಆಶೀರ್ವಾದದ ಖಾತೆಯಲ್ಲಿ ಎಷ್ಟು ಜಮಾ ಮಾಡಿದೆನು?
ಈ ಹೊಸ ವರ್ಷದಲ್ಲಿ ಏನು ಮಾಡಬೇಕು? ತಾವು ಏನೇ ಮಾಡಿದರು ಸಂಕಲ್ಪಗಳಲ್ಲಿ ಮಾತುಗಳಲ್ಲಿ ಹಾಗೂ
ಕಾರ್ಯಗಳಲ್ಲಿ ಈ ನಿಶ್ಚಯ ಯಾವಾಗಲೂ ನಿಮ್ಮ ಮನಸ್ಸಿನಲ್ಲಿರಲಿ-- ನಾನು ಅಖಂಡ ಮಹಾದಾನಿ ಆಗಲೇಬೇಕು.
ಅಖಂಡ ಮಹಾದಾನಿ. ಮಹಾದಾನಿ ಅಲ್ಲ. ಅಖಂಡ. ತಮ್ಮ ಮನಸ್ಸಿನ ಮೂಲಕ ಶಕ್ತಿಯನ್ನು ದಾನ ಮಾಡಿ, ಮಾತಿನ
ಮೂಲಕ ಜ್ಞಾನವನ್ನು ದಾನ ಮಾಡಿ, ಮತ್ತು ತಮ್ಮ ಕಾರ್ಯಗಳ ಮೂಲಕ ಗುಣಗಳನ್ನು ದಾನ ಮಾಡಿ. ಇತ್ತೀಚೆಗೆ
ಪ್ರಪಂಚದಲ್ಲಿ, ಬ್ರಾಹ್ಮಣ ಪರಿವಾರದ ಜಗತ್ತಾಗಿರಬಹುದು ಅಥವಾ ಅಜ್ಞಾನಿಗಳ ಜಗತ್ತಾಗಿರಬಹುದು ಜನರು
ಕೇಳುವುದರ ಬದಲು ನೋಡಲು ಬಯಸುತ್ತಾರೆ. ನೋಡಿದ ನಂತರ ಮಾಡಲು ಇಚ್ಚಿಸುತ್ತಾರೆ. ತಮ್ಮೆಲ್ಲರಿಗೂ ಇದು
ಏಕೆ ಸಹಜವಾಯಿತು? ಬ್ರಹ್ಮಾಬಾಬಾರವರನ್ನು ಅವರ ಕಾರ್ಯಗಳಲ್ಲಿ ಸದ್ಗುಣ ದಾನಗಳ ಮೂರ್ತರೂಪವಾಗಿ
ನೋಡಿದಿರಿ. ತಾವು ಜ್ಞಾನ ದಾನವನ್ನು ಮಾಡಿಯೇ ಮಾಡುತ್ತೀರಿ ಆದರೆ ಈ ವರ್ಷ ವಿಶೇಷ ಗಮನ ಇಟ್ಟುಕೊಳ್ಳಿ--
ಪ್ರತಿಯೊಂದು ಆತ್ಮನಿಗೆ ಗುಣಗಳ ದಾನ ಅಂದರೆ ತಮ್ಮ ಜೀವನದ ಗುಣಗಳ ಮುಖಾಂತರ ಸಹಯೋಗ ಕೊಡಬೇಕು.
ಬ್ರಾಹ್ಮಣರಿಗೆ ದಾನ ಬೇಡ, ಆದರೆ ಸಹಯೋಗ ಕೊಡಿ. ಏನೇ ಆಗಲಿ ಯಾರಿಗಾದರೂ ಎಷ್ಟೇ ದುರ್ಗುಣಗಳಿದ್ದರೂ
ನನ್ನ ಜೀವನದ ಮೂಲಕ, ನನ್ನ ಕಾರ್ಯಗಳ ಮತ್ತು ನನ್ನ ಸಂಪರ್ಕಗಳ ಮೂಲಕ ನಾನು ಗುಣ ದಾನ ಅಂದರೆ ಸಹಯೋಗ
ಕೊಡಬೇಕು. ಇದರಲ್ಲಿ ಬೇರೆಯವರನ್ನು ನೋಡಬಾರದು, ಅವನು ಮಾಡದಿದ್ದರೆ ನಾನು ಹೇಗೆ ಮಾಡಬೇಕು, ಇವರು
ಕೂಡ ಹೀಗೆ ಹೀಗೆಯೇ ಇದ್ದಾರೆ. ಬ್ರಹ್ಮಾಬಾಬಾ ಶಿವ ಬಾಬಾರನ್ನು ನೋಡಿದರು. ನೋಡುವುದಾದರೆ ಬ್ರಹ್ಮಾ
ತಂದೆಯನ್ನು ನೋಡಿರಿ. ಇದರಲ್ಲಿ ಬೇರೆಯವರನ್ನು ನೋಡಬೇಡಿ ಹಾಗೂ ಇದರಲ್ಲಿ ಇತರರನ್ನು ನೋಡದಿರುವ
ಗುರಿಯನ್ನು ಇಟ್ಟುಕೊಳ್ಳಿ ಬ್ರಹ್ಮಾಬಾಬಾ ಅವರ ಸ್ಲೋಗನ್ ಆಗಿತ್ತು "ಓಟೆ ಸೋ ಅರ್ಜುನ್'' ಅಂದರೆ
ಯಾರು ತಮ್ಮನ್ನು ನಿಮಿತ್ತ ಮಾಡಿಕೊಳ್ಳುತ್ತಾರೋ ಅವರು ನಂಬರ್ವನ್ ಅರ್ಜುನ್ ಆಗುತ್ತಾರೆ
ಬ್ರಹ್ಮಾಬಾಬಾ ಅರ್ಜುನ ನಂಬರ್ಒನ್ ಆದರು. ಬೇರೆಯವರನ್ನು ನೋಡಿ ಅವರ ಹಾಗೆ ಮಾಡಿದರೆ ನಂಬರ್ವನ್
ಆಗುವುದಿಲ್ಲ ನಂಬರ್ವಾರ್ ಆಗುತ್ತಿರಿ ನಂಬರ್ಒನ್ ಆಗುವುದಿಲ್ಲ. ಕೈಯನ್ನು ಎತ್ತುವಾಗ
ನಂಬರ್ವಾರ್ನಲ್ಲಿ ಕೈ ಎತ್ತುತ್ತಿರೋ ಅಥವಾ ನಂಬರ್ಒನ್ನಲ್ಲಿ ಕೈ ಎತ್ತುತ್ತಿರೋ? ಹಾಗಾದರೆ ಯಾವ
ಲಕ್ಷವನ್ನು ಇಟ್ಟುಕೊಳ್ಳುತ್ತೀರಿ? ಅಖಂಡ ಗುಣದಾನಿ, ಸ್ಥಿತಪ್ರಜ್ಞ, ಯಾರು ಎಷ್ಟೇ ಅಲ್ಲಾಡಿಸಿದರು
ಕದಲಬಾರದು. ಎಲ್ಲರೂ ಒಬ್ಬರಿಗೊಬ್ಬರು ಹೇಳುತ್ತಾರೆ, ಎಲ್ಲರೂ ಹೀಗೆ ಇದ್ದಾರೆ, ನೀವು ಹೀಗೆ ಯಾಕೆ
ನಿಮ್ಮನ್ನು ನೀವು ಕೊಲ್ಲುತ್ತೀರಿ, ನೀವು ನಮ್ಮೊಂದಿಗೆ ಸೇರಿಕೊಳ್ಳಿ, ನಮ್ಮನ್ನು ದುರ್ಬಲರನ್ನಾಗಿ
ಮಾಡುವ ಅನೇಕ ಸ್ನೇಹಿತರಿದ್ದಾರೆ. ಆದರೆ ಧೈರ್ಯ ಮತ್ತು ಉಲ್ಲಾಸವನ್ನು ಹೆಚ್ಚಿಸುವಂತಹ ಸಹಚರರು
ಬಾಪ್ದಾದಾರವರಿಗೆ ಬೇಕಾಗಿದೆ. ಹಾಗಾದರೆ ಏನು ಮಾಡಬೇಕೆಂದು ಅರ್ಥವಾಯಿತೆ? ಸೇವೆಯನ್ನು ಮಾಡಿರಿ ಆದರೆ
ಜಮಾದ ಖಾತೆಯನ್ನು ವೃದ್ಧಿಸುತ್ತ ಮಾಡಿರಿ. ಚೆನ್ನಾಗಿ ಸೇವೆ ಮಾಡಿರಿ. ಮೊದಲು ಸ್ವಯಂನ ಸೇವೆ, ನಂತರ
ಸರ್ವರ ಸೇವೆ ಬಾಪ್ದಾದ ಇನ್ನೊಂದು ವಿಷಯವನ್ನು ಗಮನಿಸಿದರು. ಹೇಳಬೇಕೇ?
ಇಂದು ಚಂದ್ರ ಹಾಗೂ ಸೂರ್ಯರ ಮಿಲನವಾಗಿತ್ತಲ್ಲವೇ. ಹಾಗಾಗಿ ಜಗದಂಬೆ ಮಾತೆ ಹೇಳಿದರು ಅಡ್ವಾನ್ಸ್
ಪಾರ್ಟಿ ಎಷ್ಟು ದಿನ ಕಾಯಬೇಕು? ಏಕೆಂದರೆ ತಾವು ಅಡ್ವಾನ್ಸ್ ಸ್ಟೇಜ್ ಗೆ ಹೋದಾಗ ಅಡ್ವಾನ್ಸ್
ಪಾರ್ಟಿಯ ಕಾರ್ಯಗಳು ಪೂರ್ತಿಯಾಗುತ್ತವೆ ಹಾಗಾಗಿ ಜಗದಂಬೆ ಮಾತೆಯವರು ಇಂದು ಬಾಪ್ದಾದಾರವರಿಗೆ ಬಹಳ
ಹಗುರವಾಗಿ ಮತ್ತು ಸೂಕ್ಷ್ಮವಾಗಿ ಒಂದು ಮಾತನ್ನು ಹೇಳಿದರು ಯಾವ ಮಾತನ್ನು ಹೇಳಿದರು? ಬಾಪ್ದಾದಾ
ಅವರಿಗಂತು ಗೊತ್ತೇ ಇದೆ ಆದರೂ ಇಂದು ಹೃದಯದ ಸಂಭಾಷಣೆ ಇತ್ತಲ್ಲವೇ ಹಾಗಾಗಿ ಏನು ಹೇಳಿದರು, ನಾನು
ಕೂಡ ಮಧುಬನ ಹಾಗೂ ಸೆಂಟರ್ಗಳಲ್ಲಿ ಸುತ್ತಾಡುತ್ತೇನೆ. ಮಂದಹಾಸದಿಂದ, ಜಗದಂಬೆ ಅವರನ್ನು ನೋಡಿದವರಿಗೆ
ಗೊತ್ತಿದೆ ಅವರು ಮಂದಹಾಸದಿಂದ ಸಂಕೇತದಲ್ಲಿ ಹೇಳುತ್ತಾರೆ ನೇರವಾಗಿ ಹೇಳುವುದಿಲ್ಲ. ಮಂದಹಾಸದಿಂದ
ಹೇಳಿದರು-- ಇತ್ತೀಚೆಗೆ ಒಂದು ವಿಶೇಷತೆ ಕಂಡು ಬರುತ್ತದೆ, ಯಾವ ವಿಶೇಷತೆ? ಆಗ ಹೇಳಿದರು ಇತ್ತೀಚೆಗೆ
ಅನೇಕ ಪ್ರಕಾರದ ಹುಡುಗಾಟಿಕೆ ಬಂದುಬಿಟ್ಟಿದೆ ಒಬ್ಬರಲ್ಲಿ ಒಂದು ಪ್ರಕಾರದ ಹುಡುಗಾಟಿಕೆ ಇದ್ದರೆ,
ಇನ್ನೊಬ್ಬರಲ್ಲಿ ಇನ್ನೊಂದು ಪ್ರಕಾರದ ಹುಡುಗಾಟಿಕೆ ಇದೆ. ಆಗುತ್ತದೆ, ಮಾಡುತ್ತೇವೆ.... ಇತರರೂ
ಮಾಡುತ್ತಿದ್ದಾರೆ ನಾವು ಕೂಡ ಮಾಡುತ್ತೇವೆ, ಹೀಗಂತೂ ಆಗೇ ಆಗುತ್ತದೆ, ನಡೆಯುತ್ತದೆ... ಅಸಡ್ಡೆಯ
ಭಾಷೆ ಸಂಕಲ್ಪದಲ್ಲಂತೂ ಇದ್ದೆ ಇದೆ ಆದರೆ ಮಾತಿನಲ್ಲೂ ಇದೆ. ಆದ್ದರಿಂದ ಇದಕ್ಕೆ ಹೊಸ ವರ್ಷದಲ್ಲಿ
ತಾವು ಯಾವುದಾದರೂ ಯುಕ್ತಿಯನ್ನು ಮಕ್ಕಳಿಗೆ ಹೇಳಿಕೊಡಿ ಎಂದು ಬಾಪ್ದಾದಾರವರು ಹೇಳಿದರು
ತಮಗೆಲ್ಲರಿಗೂ ಗೊತ್ತೇ ಇದೆ ಜಗದಂಬೆ ಮಾತೆಯ ಒಂದು ಧಾರಣೆಯ ಸ್ಲೋಗನ್ ಇದೆ. ನೆನಪಿದೆಯೇ? ಯಾರಿಗೆ
ನೆನಪಿದೆ (ಹುಕ್ಮೀ ಹುಕುಂ ಚಲಾಎ ರಹಾ- ಮಹಾರಾಜರು ಆಜ್ಞೆ ನಡೆಸುತ್ತಿದ್ದಾರೆ...) ಆಗ ಜಗದಂಬೆ
ಹೇಳಿದರು, ಎಲ್ಲರೂ ಈ ಧಾರಣೆಯನ್ನು ಮಾಡಿಕೊಂಡರೆ ನಮ್ಮನ್ನು ಬಾಪ್ದಾದಾರವರು ನಡೆಸುತ್ತಿದ್ದಾರೆ,
ಅವರ ಆಜ್ಞೆಯಂತೆ ನಾವು ಪ್ರತಿ ಹೆಜ್ಜೆಯನ್ನು ಇಡುತ್ತಿದ್ದೇವೆ, ನಮ್ಮನ್ನು ನಡೆಸುವವರು ಡೈರೆಕ್ಟ್
ತಂದೆಯಾಗಿದ್ದಾರೆ ಎಂಬ ಸ್ಮೃತಿ ಇದ್ದರೆ ದೃಷ್ಟಿ ಇನ್ನೆಲ್ಲಿ ಹೋಗುತ್ತದೆ? ನಡೆಯುವವರ ದೃಷ್ಟಿ
ನಡೆಸುವವರ ಮೇಲೆಯೇ ಇರುತ್ತದೆ, ಬೇರೆ ಕಡೆ ಅಲ್ಲ. ಆದ್ದರಿಂದ ಈ ಮಾಡಿಸುವವರು (ಕರಾವನ್ಹಾರ್)
ನಮ್ಮನ್ನು ನಿಮಿತ್ತ ಮಾಡಿಕೊಂಡು ಮಾಡಿಸುತ್ತಿದ್ದಾರೆ, ನಡೆಸುತ್ತಿದ್ದಾರೆ. ಮಾಡಿಸುವವರ (ಕರಾವನ್ಹಾರ್)
ಜವಾಬ್ದಾರಿಯಾಗಿದೆ. ಆಗ ಸೇವೆಯ ವಿಷಯದಲ್ಲಿ ತಲೆ ಭಾರವಾಗುತ್ತದೆಯಲ್ಲ, ಅದು ಆತ್ಮಿಕ ಗುಲಾಬಿಯಂತೆ
ಸದಾ ಹಗುರವಾಗುತ್ತದೆ. ಏನು ಮಾಡಬೇಕೆಂದು ಅರ್ಥವಾಯಿತೆ? ಅಖಂಡ ಮಹಾದಾನಿ. ಒಳ್ಳೆಯದು.
ಹೊಸ ವರ್ಷವನ್ನು ಆಚರಿಸಲು ಎಲ್ಲರೂ ಓಡೋಡಿ ಬಂದು ತಲುಪಿದ್ದೀರಿ. ಒಳ್ಳೆಯದು. ಹೌಸಫುಲ್ ಆಗಿದೆ.
ಒಳ್ಳೆಯ ನೀರು ಸಿಕ್ಕಿತಲ್ಲವೇ! ನೀರು ಸಿಕ್ಕಿತೆ? ಆದರೂ ಕೂಡ ನೀರಿಗಾಗಿ ಪರಿಶ್ರಮಿಸುತ್ತಿರುವವರಿಗೆ
ಅಭಿನಂದನೆಗಳು ಇಷ್ಟೊಂದು ಸಾವಿರ ಜನರಿಗೆ ನೀರನ್ನು ಒದಗಿಸುವುದು, 4-6 ಬಕೆಟ್ ನೀರು ಕೊಟ್ಟಂತೆ
ಅಲ್ಲ ಅಲ್ಲವೇ! ನಾಳೆಯಿಂದ ಜಾತ್ರೆಯಂತೆ ಆಗುತ್ತದೆ ಎಲ್ಲರೂ ಆರಾಮವಾಗಿರಿ. ಒಂದು ಸಣ್ಣ ಬಿರುಗಾಳಿ
ಪೇಪರ್ ತೆಗೆದುಕೊಂಡಿತು. ಸ್ವಲ್ಪ ಗಾಳಿ ಇತ್ತು. ಎಲ್ಲರೂ ಸುರಕ್ಷಿತವಾಗಿದ್ದರಾ? ಪಾಂಡವರು
ಸುರಕ್ಷಿತವಾಗಿದ್ದರೆ? ಒಳ್ಳೆಯದು ಕುಂಭ ಮೇಳಕ್ಕಿಂತ ಉತ್ತಮವಾಗಿದೆ ಅಲ್ಲವೇ! ಸರಿ ತಮಗೆ 3 ಅಡಿಭೂಮಿ
ಸಿಕ್ಕಿದೆ ಅಲ್ಲವೇ. ಮಂಚ ಸಿಗಲಿಲ್ಲ ಆದರೆ ಮೂರು ಅಡಿ ಪೃಥ್ವಿ ಸಿಕ್ಕಿತು ಅಲ್ಲವೇ!
ಹಾಗಾಗಿ ಹೊಸ ವರ್ಷದಲ್ಲಿ ಎಲ್ಲಾ ಕಡೆಯ ಮಕ್ಕಳು, ಹೊರದೇಶ ಹಾಗೂ ದೇಶದ ಸುತ್ತಮುತ್ತಲಿನ ಮಕ್ಕಳು
ಹೊಸ ವರ್ಷದ ಆಚರಣೆಗಳನ್ನು ತಮ್ಮ ಬುದ್ಧಿ ಶಕ್ತಿಯ ಮೂಲಕ ವೀಕ್ಷಿಸುತ್ತಿದ್ದಾರೆ ಮತ್ತು ಕಿವಿಯಿಂದ
ಕೇಳುತ್ತಿದ್ದಾರೆ. ಮಧುಬನದಲ್ಲೂ ನೋಡುತ್ತಿದ್ದೇವೆ ಮಧುಬನದ ಜನರು ಯಜ್ಞರಕ್ಷಕರಾಗುವ ಮೂಲಕ ತಮ್ಮ
ಸೇವೆಯ ಪಾತ್ರವನ್ನು ನಿರ್ವಹಿಸಿದ್ದಾರೆ. ತುಂಬಾ ಒಳ್ಳೆಯದು ಬಾಪ್ದಾದಾರವರು ದೇಶವಿದೇಶದವರ ಜೊತೆಗೆ
ಸೇವೆಗೆ ನಿಮಿತ್ತರಾಗಿರುವ ಮಧುಬನದ ನಿವಾಸಿಗಳನ್ನು ಅಭಿನಂದಿಸುತ್ತಿದ್ದಾರೆ. ಸರಿ. ಉಳಿದಂತೆ ಬಹಳ
ಕಾಡ್ರ್ಸ್ ಬಂದಿವೆ. ತಾವುಗಳು ನೋಡುತ್ತಿದ್ದೀರಿ ಬಹಳ ಕಾಡ್ರ್ಸ್ ಬಂದಿವೆ, ಕಾಡ್ರ್ಸ್ ಏನು ದೊಡ್ಡ
ವಿಷಯವಲ್ಲ ಆದರೆ ಅದರಲ್ಲಿ ಹೃದಯದ ಪ್ರೀತಿ ಅಡಗಿದೆ ಹಾಗಾಗಿ ಬಾಪ್ದಾದಾರವರು ಕಾಡ್ರ್ನ ಡೆಕೋರೇಷನ್
ನೋಡೋದಿಲ್ಲ, ಆದರೆ ಎಷ್ಟು ಅಮೂಲ್ಯವಾದ ಹೃದಯದ ಸ್ನೇಹ ತುಂಬಿದೆ! ಎಲ್ಲರೂ ತಮ್ಮ ತಮ್ಮ ಹೃದಯದ
ಸ್ನೇಹ ಪ್ರೀತಿ ಕಳುಹಿಸಿದ್ದಾರೆ ಅಂತಹ ಸ್ನೇಹಿ ಆತ್ಮಗಳಿಗೆ ವಿಶೇಷವಾಗಿ ಪ್ರತಿಯೊಬ್ಬರ ಹೆಸರನ್ನು
ತೆಗೆದುಕೊಳ್ಳಲು ಸಾಧ್ಯವಿಲ್ಲ ಅಲ್ಲವೇ! ಆದರೆ ಬಾಪ್ದಾದಾರವರು ಕಾರ್ಡುಗಳ ಬದಲಾಗಿ ಅಂತಹ ಮಕ್ಕಳಿಗೆ
ಸ್ನೇಹ ತುಂಬಿದ ರಿಗಾರ್ಡ್ ಕೊಡುತ್ತಿದ್ದಾರೆ. ನೆನಪಿನ ಪತ್ರಗಳು ಟೆಲಿಫೋನ್, ಕಂಪ್ಯೂಟರ್, ಇ-ಮೇಲ್
ಈ ಎಲ್ಲ ಸಾಧನಗಳಿಗಿಂತ ಮೊದಲು ಸಂಕಲ್ಪದ ಮೂಲಕವೇ ಬಾಪ್ದಾದಾರವರಿಗೆ ತಲುಪಿ ಬಿಡುತ್ತವೆ. ಅದರ ನಂತರ
ತಮ್ಮ ಕಂಪ್ಯೂಟರ್ ಮತ್ತು ಇ-ಮೇಲ್ನಲ್ಲಿ ಬರುತ್ತವೆ ಮಕ್ಕಳ ಸ್ನೇಹ ಬಾಪ್ದಾದಾರವರಿಗೆ ಪ್ರತಿ ಸಮಯ
ತಲುಪುತ್ತಲೇ ಇರುತ್ತದೆ ಆದರೆ ಇಂದು ವಿಶೇಷವಾಗಿ ಅನೇಕರು ಹೊಸ ವರ್ಷಕ್ಕಾಗಿ ಯೋಜನೆಗಳನ್ನು
ಬರೆದಿದ್ದಾರೆ, ಪ್ರತಿಜ್ಞೆಗಳನ್ನು ಮಾಡಿದ್ದಾರೆ, ಆಗಿ ಹೋದದ್ದನ್ನು ಮರೆತು ಮುಂದುವರೆಯುವ
ಸಾಹಸವನ್ನು ಇಟ್ಟುಕೊಂಡಿದ್ದಾರೆ ಆದ್ದರಿಂದ ಎಲ್ಲ್ಲಾ ಮಕ್ಕಳಿಗೆ ಬಾಪ್ದಾದಾರವರು ಹೇಳುತ್ತಿದ್ದಾರೆ,
ಬಹಳ ಬಹಳ ಶಭಾಸ್ ಮಕ್ಕಳೇ, ಶಭಾಸ್!
ತಮಗೆಲ್ಲರಿಗೂ ಸಂತೋಷವಾಗುತ್ತಿದೆ ಅಲ್ಲವೇ! ಆದ್ದರಿಂದ ಅವರಿಗೂ ಸಂತೋಷವಾಗುತ್ತಿದೆ ಈಗ
ಬಾಪ್ದಾದಾರವರ ಹೃದಯದ ಹಾರೈಕೆಯಾಗಿದೆ -- "ದಾತಾನ(ದಾನಿ) ಪ್ರತಿಯೊಂದು ಮಗುವು ದಾತಾ ಆಗಲಿ" ಬೇಡ
ಬೇಡಿ, ಇದು ಸಿಗಬೇಕು. ಇದು ಆಗಬೇಕು, ಇದನ್ನು ಮಾಡಬೇಕು, ಕೊಡುವವರಾಗಿರಿ. ಪರಸ್ಪರ
ಮುಂದುವರೆಸುವಲ್ಲಿ ಮುಕ್ತ-ಹೃದಯದಿಂದಿರಿ. ನಮಗೆ ಹಿರಿಯರ ಪ್ರೀತಿ ಬೇಕು ಎಂದು ಕಿರಿಯರಿಗೆ
ಹೇಳುತ್ತಾರೆ ಮತ್ತು ತಂದೆ ಕಿರಿಯರಿಗೆ, ಹಿರಿಯ ಬಗ್ಗೆ ಗೌರವವಿದ್ದರೆ ಅವರು ಪ್ರೀತಿಯನ್ನು
ಪಡೆಯುತ್ತಾರೆ ಎಂದು ಹೇಳುತ್ತಾರೆ. ತಮಗೆಲ್ಲರಿಗೂ ಸಂತೋಷವಾಗುತ್ತಿದೆ ಅಲ್ಲವೇ! ಗೌರವವನ್ನು
ಕೊಡುವುದೇ ಗೌರವವನ್ನು ತೆಗೆದುಕೊಳ್ಳುವುದಾಗಿದೆ. ಗೌರವ ಹಾಗೆಯೇ ಸಿಗುವುದಿಲ್ಲ ಕೊಡುವುದೇ
ತೆಗೆದುಕೊಳ್ಳುವುದಾಗಿದೆ. ತಮ್ಮ ಜಡ ಚಿತ್ರಗಳು ಕೊಡುತ್ತವೆ. ದೇವತೆಯ ಅರ್ಥವೇ ಆಗಿದೆ ಕೊಡುವವರು,
ದೇವಿಯ ಅರ್ಥವೇ ಆಗಿದೆ ಕೊಡುವವಳು. ಆದ್ದರಿಂದ ತಾವು ಚೈತನ್ಯ ದೇವಿ ದೇವತೆಗಳು ದಾತ ಆಗಿ, ದಾನ
ಮಾಡಿರಿ. ಎಲ್ಲರೂ ಕೊಡುವ ದೇವತೆಗಳಾದರೆ ತೆಗೆದುಕೊಳ್ಳುವವರು ಸಮಾಪ್ತಿಯಾಗಿ ಬಿಡುತ್ತಾರಲ್ಲವೆ!
ಆನಂತರ ನಾಲ್ಕು ದಿಕ್ಕುಗಳಲ್ಲಿ ಸಂತುಷ್ಟತೆಯ ಆತ್ಮಿಕ ಗುಲಾಬಿಯ ಪರಿಮಳ ಹರಡುತ್ತದೆ ಕೇಳಿದಿರಾ!
ಹಾಗಾದರೆ ಹೊಸ ವರ್ಷದಲ್ಲಿ ಹಳೆಯ ಭಾಷೆಯನ್ನು ಮಾತನಾಡಬೇಡಿ. ಹಿತವಲ್ಲದ ಹಳೆಯ ಭಾಷೆಯನ್ನು ಕೆಲವರು
ಮಾತನಾಡುತ್ತಾರಲ್ಲ, ಆ ಹಳೆಯ ಮಾತು, ಹಳೆಯ ನಡತೆ, ಹಳೆಯ ಯಾವುದೇ ಅಭ್ಯಾಸದಿಂದ ಬಾಧ್ಯರಾಗಬೇಡಿ.
ಪ್ರತಿ ಮಾತಿನಲ್ಲೂ ಇದು ಹೊಸದಾಗಿದೆಯೇ! ಎಂದು ಕೇಳಿಕೊಳ್ಳಿ. ಏನನ್ನು ಹೊಸದಾಗಿ ಮಾಡಿದಿರಿ? ಮಾತ್ರ
21ನೇ ಶತಮಾನವನ್ನು ಆಚರಿಸುವುದಲ್ಲ, 21 ಜನ್ಮಗಳ ಸಂಪೂರ್ಣ ಅಧಿಕಾರವನ್ನು 21ನೇ ಶತಮಾನದಲ್ಲಿ
ಪಡೆಯಲೇಬೇಕು ಪಡೆಯಲೇಬೇಕಲ್ಲವೇ! ಒಳ್ಳೆಯದು.
ಎಲ್ಲಾ ಕಡೆಯ ನವಯುಗದ ಶ್ರೇಷ್ಠ ಅಧಿಕಾರಿ ಆತ್ಮಗಳಿಗೆ, ಎಲ್ಲಾ ಮಕ್ಕಳಿಗೆ, ಒಂದು ಹೆಜ್ಜೆಯಲ್ಲಿ
ಪದುಮದಷ್ಟು ಜಮಾ ಮಾಡಿಕೊಳ್ಳುವಂತಹ ಆತ್ಮಗಳಿಗೆ, ಸದಾ ತಮ್ಮನ್ನು ಬ್ರಹ್ಮ ತಂದೆಯ ಸಮಾನ ಸರ್ವರ
ಮುಂದೆ ಸ್ಯಾಂಪಲ್ ಆಗಿ ಸಿಂಪಲ್ ಆಗಿರುವಂತಹ ಆತ್ಮಗಳಿಗೆ, ಸದಾ ತಮ್ಮ ಜೀವನದಲ್ಲಿ ಗುಣಗಳ
ಪ್ರತ್ಯಕ್ಷತೆಯಿಂದ ಇತರರನ್ನು ಗುಣವಂತರನ್ನಾಗಿ ಮಾಡುವವರಿಗೆ, ಸದಾ ಅಖಂಡ ಮಹಾದಾನಿಗಳಿಗೆ, ಮಹಾ
ಸಹಯೋಗಿ ಆತ್ಮಗಳಿಗೆ ಬಾಪ್ದಾದ ಅವರ ನೆನಪು ಪ್ರೀತಿ ಮತ್ತು ನಮಸ್ತೆ.
ಈ ಸಮಯವು ಹಳೆಯ ಮತ್ತು ಹೊಸ ವರ್ಷಗಳ ಸಂಗಮವಾಗಿದೆ. ಸಂಗಮ ಸಮಯ ಎಂದರೆ ಹಳೆಯದು ಮುಗಿಯಿತು ಮತ್ತು
ಹೊಸದು ಪ್ರಾರಂಭವಾಯಿತು. ಬೇಹದ್ದಿನ ಸಂಗಮ ಯುಗದಲ್ಲಿ ನೀವೆಲ್ಲರೂ ಬ್ರಾಹ್ಮಣ ಆತ್ಮಗಳು ಹೇಗೆ
ವಿಶ್ವ ಪರಿವರ್ತನೆಗೆ ನಿಮಿತ್ತರಾಗಿದ್ದಿರಿ ಅದೇ ರೀತಿಯಲ್ಲಿ ಇಂದು ಹಳೆಯ ಮತ್ತು ಹೊಸ ವರ್ಷದ
ಸಂಗಮದಲ್ಲಿ ನೀವು ಸ್ವಯಂ ಪರಿವರ್ತನೆಯ ಬಲವಾದ ಸಂಕಲ್ಪವನ್ನು ಮಾಡಿದ್ದೀರಿ ಮತ್ತು ಮಾಡಲೇಬೇಕು.
ಹೇಳಿದ ಹಾಗೆ ಪ್ರತಿ ಕ್ಷಣ ಆಟಲ ಅಖಂಡ ಮಹಾದಾನಿ ಆಗಬೇಕು. ದಾತಾನ ಮಕ್ಕಳು ಮಾಸ್ಟರ್ ದಾತ ಆಗಬೇಕು.
ಹಳೆಯ ವರ್ಷದ ವಿದಾಯದ ಜೊತೆಗೆ ಹಳೆಯ ಜಗತ್ತಿನ ಬಾಂಧವ್ಯ ಮತ್ತು ಹಳೆಯ ಸಂಸ್ಕಾರಗಳಿಗೂ ವಿದಾಯ
ಕೊಡಬೇಕು, ಹೊಸ ಶ್ರೇಷ್ಠ ಸಂಸ್ಕಾರಗಳಿಗೆ ಆಹ್ವಾನ ಕೊಡಬೇಕು. ಎಲ್ಲರಿಗೂ ಶತಕೋಟಿ ಬಾರಿ
ಅಭಿನಂದನೆಗಳು, ಅಭಿನಂದನೆಗಳು, ಅಭಿನಂದನೆಗಳು.
ವರದಾನ:
ಪ್ರಾಪ್ತಿ
ಸ್ವರೂಪರಾಗಿ ಏಕೆ? ಏನು? ಎನ್ನುವ ಪ್ರಶ್ನೆಗಳಿಂದ ಪಾರಾಗಿರುವಂತಹ ಸದಾ ಪ್ರಸನ್ನಚಿತ್ತ ಭವ.
ಯಾರು ಪ್ರಾಪ್ತಿ ಸ್ವರೂಪ
ಸಂಪನ್ನ ಆತ್ಮಗಳಿದ್ದಾರೆ ಅವರಿಗೆ ಎಂದೂ ಯಾವುದೇ ಮಾತಿನಲ್ಲಿ ಪ್ರಶ್ನೆ ಉದ್ಭವವಾಗುವುದಿಲ್ಲ. ಅವರ
ಚೆಹರೆ ಮತ್ತು ಚಲನೆಯಲ್ಲಿ ಪ್ರಸನ್ನತೆಯ ವ್ಯಕ್ತಿತ್ವ ಕಂಡುಬರುತ್ತದೆ. ಇದಕ್ಕೇ ಸಂತುಷ್ಟತೆ ಎಂದು
ಹೇಳಲಾಗುತ್ತದೆ. ಪ್ರಸನ್ನತೆ ಒಂದುವೇಳೆ ಕಡಿಮೆಯಾದರೆ ಅದರ ಕಾರಣ ಪ್ರಾಪ್ತಿ ಕಡಿಮೆ ಮತ್ತು
ಪ್ರಾಪ್ತಿ ಕಡಿಮೆಯ ಕಾರಣ ಏನಾದರೂ ಒಂದು ಇಚ್ಛೆ. ಬಹಳ ಸೂಕ್ಷ್ಮ ಇಚ್ಛೆಗಳು ಅಪ್ರಾಪ್ತಿಯ ಕಡೆಗೆ
ಸೆಳೆಯುತ್ತದೆ. ಆದ್ದರಿಂದ ಅಲ್ಪಕಾಲದ ಇಚ್ಛೆಗಳನ್ನು ಬಿಟ್ಟು ಪ್ರಾಪ್ತಿ ಸ್ವರೂಪರಾಗಿ ಆಗ ಸದಾ
ಪ್ರಸನ್ನಚಿತ್ತರಾಗಿರುವಿರಿ.
ಸ್ಲೋಗನ್:
ಪರಮಾತ್ಮನ
ಪ್ರೀತಿಯಲ್ಲಿ ಲವಲೀನರಾಗಿದ್ದಾಗ ಮಾಯೆಯ ಆಕರ್ಷಣೆ ಸಮಾಪ್ತಿಯಾಗಿಬಿಡುತ್ತದೆ.