28.09.25 Avyakt Bapdada
Kannada
Murli 15.02.2007 Om Shanti Madhuban
“ಹುಡುಗಾಟಿಕೆ, ಆಲಸ್ಯ
ಮತ್ತು ನೆಪಗಳ ನಿದ್ರೆಯಿಂದ ಜಾಗೃತರಾಗುವುದೇ ಶಿವರಾತ್ರಿಯ ಸತ್ಯ ಜಾಗರಣೆಯಾಗಿದೆ”
ಇಂದು ಬಾಪದಾದಾ
ವಿಶೇಷವಾಗಿ ತಮ್ಮ ನಾಲ್ಕೂ ಕಡೆಯ ಅತೀ ಮುದ್ದಾದ, ಬಹಳ ಕಾಲದಿಂದ ಅಗಲಿ ಮತ್ತೆ ಸಿಕ್ಕಿರುವ,
ಪರಮಾತ್ಮ ಪ್ರೀತಿಗೆ ಪಾತ್ರರಾಗಿರುವ ಮಕ್ಕಳನ್ನು ಮಿಲನ ಮಾಡಲು ಮತ್ತು ವಿಚಿತ್ರ ತಂದೆ ಮಕ್ಕಳ ಬರ್ತ್
ಡೇ (ಜನ್ಮದಿನ) ಆಚರಿಸಲು ಬಂದಿದ್ದಾರೆ. ನೀವೆಲ್ಲರೂ ಇಂದು ವಿಶೇಷವಾಗಿ ವಿಚಿತ್ರ ಬರ್ತ್ ಡೇ (ಜನ್ಮದಿನ)
ಆಚರಿಸಲು ಬಂದಿರುವಿರಲ್ಲವೇ! ಈ ಬರ್ತ್ ಡೇ ಇಡೀ ಕಲ್ಪದಲ್ಲಿ ಯಾರದ್ದೂ ಈ ರೀತಿ ಆಗುವುದಿಲ್ಲ. ತಂದೆ
ಮತ್ತು ಮಕ್ಕಳ ಬರ್ತ್ ಡೇ ಒಂದೇ ದಿನವಾಗಿರುವುದನ್ನು ಎಂದೂ ಕೇಳಿರಲಿಕ್ಕಿಲ್ಲ. ಅಂದಮೇಲೆ ನೀವೆಲ್ಲರೂ
ತಂದೆಯ ಬರ್ತ್ ಡೇ ಆಚರಿಸಲು ಬಂದಿರುವಿರೋ ಅಥವಾ ಮಕ್ಕಳದ್ದನ್ನೂ ಆಚರಿಸಲು ಬಂದಿರುವಿರೋ? ಏಕೆಂದರೆ
ಇಡೀ ಕಲ್ಪದಲ್ಲಿ ಪರಮಾತ್ಮ ತಂದೆ ಮತ್ತು ಪರಮಾತ್ಮ ಮಕ್ಕಳ ಜೊತೆಗಿನ ಪ್ರೀತಿ ಎಷ್ಟಿದೆಯೆಂದರೆ
ಜನ್ಮವೂ ಜೊತೆ ಜೊತೆಯಾಗಿರುತ್ತದೆ. ಕೇವಲ ತಂದೆಯು ಒಂಟಿಯಾಗಿ ವಿಶ್ವ ಪರಿವರ್ತನೆ ಮಾಡುವುದಿಲ್ಲ,
ಮಕ್ಕಳ ಜೊತೆ-ಜೊತೆಗೆ ಮಾಡುತ್ತಾರೆ. ಈ ಅಲೌಕಿಕ ಜೊತೆಯಾಗಿರುವ ಪ್ರೀತಿ, ಸಾಥಿಯಾಗುವ ಪ್ರೀತಿಯನ್ನು
ಈ ಸಂಗಮದಲ್ಲಿಯೂ ಅನುಭವ ಮಾಡುತ್ತೀರಿ. ತಂದೆ ಮಕ್ಕಳ ಇಂತಹ ಆಳವಾದ ಪ್ರೀತಿಯಿದೆ, ಜನ್ಮವೂ
ಜೊತೆಯಾಗಿದೆ ಮತ್ತು ನಿವೆಲ್ಲರೂ ಇರುವುದೂ ಎಲ್ಲಿ? ಒಂಟಿಯಾಗಿಯೋ ಅಥವ ಜೊತೆಗೋ? ಪ್ರತಿಯೊಬ್ಬ ಮಗುವೂ
ಉಮಂಗ ಉತ್ಸಾಹದಿಂದ ನಾವು ತಂದೆಯ ಜೊತೆ ಕಂಬೈನ್ಡ್ ಎಂದು ಹೇಳುತ್ತಾರೆ. ಕಂಬೈನ್ಡ್
ಆಗಿರುತ್ತೀರಲ್ಲವೇ? ಒಂಟಿಯಾಗಿರುವುದಿಲ್ಲ ತಾನೆ? ಜನ್ಮವೂ ಜೊತೆಗೆ, ಇರುವುದೂ ಜೊತೆಗೆ ಮತ್ತು
ಮುಂದಿನ ವಾಯಿದೆ ಏನು? ಜೊತೆಯಲ್ಲಿದ್ದೇವೆ, ಜೊತೆಯಲ್ಲಿರುತ್ತೇವೆ, ಸ್ವೀಟ್ ಹೋಮ್ಗೆ ಜೊತೆಯಲ್ಲಿ
ಹೋಗುತ್ತೇವೆ. ಇಷ್ಟೊಂದು ಪ್ರೀತಿಯನ್ನು ಇನ್ನಾವುದಾದರೂ ತಂದೆ-ಮಕ್ಕಳಲ್ಲಿ ನೋಡಿದ್ದೀರಾ? ಯಾವುದೇ
ಮಗುವಾಗಿರಲಿ, ಎಲ್ಲದರೂ ಇರಲಿ, ಹೇಗಾದರೂ ಇರಲಿ, ಜೊತೆಯಾಗಿಯೇ ಇದ್ದಾರೆ ಮತ್ತು ಜೊತೆಯಾಗಿಯೇ
ಹೋಗುವವರಾಗಿದ್ದಾರೆ. ಅಂದಮೇಲೆ ಇಂತಹ ವಿಚಿತ್ರ ಮತ್ತು ಅತಿ ಪ್ರೀತಿಯ ಜನ್ಮದಿನವನ್ನು ಆಚರಿಸಲು
ಬಂದಿರುವರು. ಸನ್ಮುಖದಲ್ಲಾದರೂ ಆಚರಿಸುತ್ತಿರಬಹುದು, ದೇಶ-ವಿದೇಶದಲ್ಲಾದರೂ ಆಗಿರಬಹುದು, ನಾಲ್ಕೂ
ಕಡೆ ಒಂದೇ ಸಮಯದಲ್ಲಿ ಜೊತೆ ಜೊತೆಯಾಗಿ ಆಚರಿಸುತ್ತಿರುವಿರಿ.
ಎಲ್ಲಾ ಮಕ್ಕಳು ಉಮಂಗ
ಉತ್ಸಾಹದಿಂದ ಹೃದಯದಾಳದಲ್ಲಿ ವಾಹ್ ಬಾಬಾ! ವಾಹ್ ಬಾಬಾ! ವಾಹ್ ಬರ್ತ್ ಡೇಯ ಗೀತೆಯನ್ನು ಹೇಗೆ
ಹಾಡುತ್ತಿದ್ದಾರೆಂದು ಬಾಪದಾದಾ ನಾಲ್ಕೂ ಕಡೆ ನೋಡುತ್ತಿದ್ದಾರೆ. ಒಂದು ವೇಳೆ ಸ್ವಿಚ್ ತೆರೆದರೆ
ನಾಲ್ಕೂ ಕಡೆಯ ಧ್ವನಿ, ಹೃದಯದ ಧ್ವನಿ, ಉಮಂಗ-ಉತ್ಸಾಹದ ಧ್ವನಿಗಳು ಕಿವಿಗಳಲ್ಲಿ ಕೇಳಿಸುತ್ತಿದೆ.
ಬಾಪ್ದಾದಾ ಎಲ್ಲಾ ಮಕ್ಕಳ ಉತ್ಸಾಹವನ್ನು ನೋಡಿ ಮಕ್ಕಳಿಗೆಲ್ಲ ತಮ್ಮ ದಿವ್ಯ ಜನ್ಮದ ಪದಮಾ ಪದಮದಷ್ಟು
ಅಭಿನಂದನೆಗಳನ್ನು ಕೊಡುತ್ತಿದ್ದಾರೆ. ವಾಸ್ತವಿಕವಾಗಿ ಉಮಂಗ-ಉತ್ಸಾಹದಲ್ಲಿರುವುದೇ
ಉತ್ಸವದಲ್ಲಿರುವುದು ಎಂದರ್ಥ. ಅಂದಮೇಲೆ ಉತ್ಸಾಹದಿಂದಲೇ ನೀವೆಲ್ಲರೂ ಉತ್ಸವವನ್ನು
ಆಚರಿಸುತ್ತಿದ್ದೀರಿ. ಭಕ್ತರು ಹೆಸರನ್ನೂ ಶಿವರಾತ್ರಿ ಎಂದು ಇಟ್ಟಿದ್ದಾರೆ.
ಇಂದು ಬಾಪ್ದಾದಾ ಆ ಭಕ್ತ
ಆತ್ಮ, ಯಾರು ನಿಮಗೆ ಈ ವಿಚಿತ್ರ ಜನ್ಮ ದಿನವನ್ನು ಆಚರಿಸಲು, ನೀವು ಜ್ಞಾನ ಮತ್ತು ಪ್ರೇಮ ರೂಪದಲ್ಲಿ
ಆಚರಿಸುತ್ತೀರಿ ಮತ್ತು ಆ ಭಕ್ತ ಆತ್ಮರು ಭಾವನೆ, ಶ್ರದ್ಧೆಗಳ ಮೂಲಕ ಆಚರಿಸುವುದನ್ನು ಬಹಳ ಚೆನ್ನಾಗಿ
ಕಾಪಿ ಮಾಡಿದ್ದಾರೆ, ಇಂದು ಕಾಪಿ ಮಾಡುವುದರಲ್ಲಿ ಒಳ್ಳೆಯ ಪಾತ್ರ ಮಾಡಿರುವಂತಹ ಮಕ್ಕಳಿಗೆ ಅಭಿನಂದನೆ
ಕೊಡುತ್ತಿದ್ದಾರೆ. ನೋಡಿ, ಪ್ರತಿಯೊಂದು ಮಾತನ್ನು ಕಾಪಿ ಮಾಡಿದ್ದಾರೆ. ಕಾಪಿ ಮಾಡಲೂ ಬುದ್ಧಿ
ಬೇಕಲ್ಲವೇ! ಮುಖ್ಯ ಮಾತೇನೆಂದರೆ ಈ ದಿನ ಭಕ್ತ ಜನರೂ ವ್ರತವನ್ನು ಪಾಲನೆ ಮಾಡುತ್ತಾರೆ, ಆ ವ್ರತವು
ತಿನ್ನುವುದು-ಕುಡಿಯುವುದರಲ್ಲಿ ಇಟ್ಟುಕೊಳ್ಳುತ್ತಾರೆ, ಭಾವನೆಯಲ್ಲಿ ವೃತ್ತಿಯನ್ನು ಶ್ರೇಷ್ಠ ಮಾಡಲು
ವ್ರತವನ್ನಿಟ್ಟುಕೊಳ್ಳುತ್ತಾರೆ, ಅವರಿಗೆ ಪ್ರತಿಯೊಂದು ವರ್ಷ ಇಟ್ಟುಕೊಳ್ಳಬೇಕಾಗುತ್ತದೆ ಆದರೆ ತಾವು
ಯಾವ ವ್ರತವನ್ನು ಇಟ್ಟುಕೊಂಡಿದ್ದೀರಿ? ಒಂದೇ ಬಾರಿಗೆ ನೀವು ವ್ರತವನ್ನು ಇಟ್ಟುಕೊಳ್ಳುತ್ತೀರಿ,
ಪ್ರತಿ ವರ್ಷ ವ್ರತವನ್ನಿಟ್ಟುಕೊಳ್ಳುವುದಿಲ್ಲ. ಪವಿತ್ರತೆಯ ಒಂದೇ ವ್ರತವನ್ನು ಇಟ್ಟುಕೊಂಡಿರಿ.
ಎಲ್ಲರೂ ಪವಿತ್ರತೆಯ ವ್ರತವನ್ನು ಇಟ್ಟುಕೊಂಡಿರಿ, ಪಕ್ಕಾ ಇಟ್ಟುಕೊಂಡಿರುವಿರಾ? ಯಾರು ಪಕ್ಕಾ
ಇಟ್ಟುಕೊಂಡಿರುವಿರೋ ಅವರು ಕೈ ಎತ್ತಿರಿ, ಪಕ್ಕಾ, ಸ್ವಲ್ಪವೂ ಕಚ್ಚಾ ಇಲ್ಲವೇ? ಪಕ್ಕಾ? ಒಳ್ಳೆಯದು,
ಇನ್ನೊಂದು ಪ್ರಶ್ನೆಯಿದೆ, ವ್ರತವನ್ನು ತೆಗೆದುಕೊಂಡಿರಿ ಎಂದ ಮೇಲೆ ಅಭಿನಂದನೆಗಳು. ಆದರೆ
ಅಪವಿತ್ರತೆಯ ಮುಖ್ಯ 5 ಜೊತೆಗಾರರಿದ್ದಾರೆ, ಸರಿಯಲ್ಲವೇ? ಕತ್ತನ್ನು ಅಲ್ಲಾಡಿಸಿರಿ. ಒಳ್ಳೆಯದು,
ಐದೂ ವ್ರತಗಳನ್ನು ತೆಗೆದುಕೊಂಡಿದ್ದೀರಾ? ಅಥವಾ ಎರಡು ಅಥವಾ ಮೂರನ್ನು ಮಾತ್ರ ತೆಗೆದುಕೊಂಡಿದ್ದೀರಾ?
ಏಕೆಂದರೆ ಎಲ್ಲಿ ಅಪವಿತ್ರತೆಯು ಇದೆಯೋ ಅಲ್ಲಿ ಅಂಶ ಮಾತ್ರವೂ ಅಪವಿತ್ರತೆಯಿದ್ದಲ್ಲಿ ಸಂಪೂರ್ಣ
ಪವಿತ್ರಾತ್ಮ ಎಂದು ಹೇಳಲಾಗುತ್ತದೆಯೇ? ಮತ್ತು ನೀವು ಬ್ರಾಹ್ಮಣ ಆತ್ಮರದ್ದಂತೂ ಪವಿತ್ರತೆಯು
ಬ್ರಾಹ್ಮಣ ಜನ್ಮದ ಆಸ್ತಿಯಾಗಿದೆ, ವ್ಯಕ್ತಿತ್ವವಾಗಿದೆ, ಘನತೆಯಾಗಿದೆ. ಅಂದಮೇಲೆ ಚೆಕ್
ಮಾಡಿಕೊಳ್ಳಿರಿ ಏನೆಂದರೆ ಸಂಪೂರ್ಣ ಪವಿತ್ರತೆಯಲ್ಲಿ ಮುಖ್ಯ ಪವಿತ್ರತೆಯಲ್ಲಿ ಗಮನವಿದೆ, ಆದರೆ
ಜೊತೆಯಿರುವ ಸಾಥಿಗಳನ್ನು ಹಗುರವಾಗಿ ಬಿಟ್ಟಿರುವುದು, ಈ ರೀತಿ ಇಲ್ಲಾ ತಾನೆ? ಚಿಕ್ಕವರೊಂದಿಗೆ
ಪ್ರೀತಿಯನ್ನು ಇಟ್ಟಿರುವಿರಿ, ಆದರೆ ದೊಡ್ಡವರನ್ನು ಸರಿ ಮಾಡಿದ್ದೀರಿ. ಇತರ ನಾಲ್ಕು ಇರುವುದಕ್ಕೆ
ತಂದೆಯಿಂದ ಅನುಮತಿಯಿದೆಯೇ? ಪವಿತ್ರತೆಯನ್ನು ಕೇವಲ ಬ್ರಹ್ಮಚರ್ಯಕ್ಕೆ ಹೇಳಲಾಗುವುದಿಲ್ಲ,
ಬ್ರಹ್ಮಾಚಾರಿ. ಬ್ರಹ್ಮಾಚಾರಿ ಆಗುವುದೆಂದರೆ ಪವಿತ್ರತೆಯ ಪಾಲನೆ ಮಾಡಿರುವುದು. ಕೆಲವು ಮಕ್ಕಳು
ಆತ್ಮಿಕ ವಾರ್ತಾಲಾಪದಲ್ಲಿ ಹೇಳುತ್ತಾರೆ, ಆತ್ಮಿಕ ವಾರ್ತಾಲಾಪವನ್ನು ಎಲ್ಲರೂ ಮಾಡುತ್ತೀರಲ್ಲವೇ?
ಬಹಳ ಮಧುರಾತಿ ಮಧುರವಾಗಿ ಮಾತನಾಡುತ್ತಾರೆ. ಹೇಳುತ್ತಾರೆ, ಬಾಬಾ, ಮುಖ್ಯವಾಗಿರುವುದು
ಸರಿಯಾಗಿರುವುದಲ್ಲವೇ, ಬಾಕಿ ಚಿಕ್ಕ-ಚಿಕ್ಕವು ಹಾಗೆಯೇ ಎಂದಾದರೂ ಮನಸಾ ಸಂಕಲ್ಪದಲ್ಲಿ ಬಂದು
ಬಿಡುತ್ತವೆ. ಮನಸ್ಸಿನಲ್ಲಿ ಬಂದು ಬಿಡುತ್ತವೆ, ಮಾತಿನಲ್ಲಿ ಬರುವುದಿಲ್ಲ, ಮತ್ತು ಮನಸ್ಸನ್ನಂತೂ
ಯಾರೂ ನೋಡುವುದಿಲ್ಲ. ಮತ್ತು ಕೆಲವರು ಹೇಳುತ್ತಾರೆ, ಏನೆಂದರೆ, ಚಿಕ್ಕ-ಚಿಕ್ಕ ಮರಿ ಮಕ್ಕಳೊಂದಿಗೆ
ಪ್ರೀತಿಯಂತು ಇರುತ್ತದಲ್ಲವೇ. ಈ ನಾಲ್ಕರೊಂದಿಗೆ ಪ್ರೀತಿಯಾಗಿ ಬಿಡುತ್ತದೆ. ಕ್ರೋಧ ಬರುತ್ತದೆ,
ಮೋಹ ಬರುತ್ತದೆ, ಬಯಸುವುದಿಲ್ಲ, ಬಂದು ಬಿಡುತ್ತದೆ. ಬಾಪ್ದಾದಾ ಹೇಳುತ್ತಾರೆ, ಏನಾದರೂ
ಬರುತ್ತದೆಯೆಂದರೆ ಬಾಗಿಲು ತೆರೆದಿರುತ್ತದೆ, ಆಗ ಬರುತ್ತದೆಯಲ್ಲವೇ! ಅಂದ ಮೇಲೆ ಬಾಗಿಲನ್ನು
ತೆರೆದಿರುವಿರೇಕೆ? ಬಾಗಿಲು ತೆರೆದಿರುವುದು ಬಲಹೀನತೆಗಳದ್ದು, ಬಲಹೀನತೆಗಳ ಬಾಗಿಲನ್ನು
ತೆರೆಯುವುದೆಂದರೆ ಆಹ್ವಾನವನ್ನು ಮಾಡುವುದಾಗಿದೆ.
ಅಂದಮೇಲೆ ಇಂದಿನ ದಿನ
ಬರ್ತ್ ಡೇಯನ್ನು ತಂದೆಯ ಹಾಗೂ ತಮ್ಮದನ್ನು ಆಚರಿಸುತ್ತಿರುವಿರಿ, ಆದರೆ, ಹುಟ್ಟುತ್ತಲೇ ವ್ರತದ
ವಾಯಿದೆಯನ್ನು ಮಾಡಿರುವುದು, ತಂದೆಯು ಮೊಟ್ಟ ಮೊದಲ ವರದಾನ ಕೊಟ್ಟಿರುವುದಾವುದು, ನೆನಪಿದೆಯೇ?
ಬರ್ತ್ ಡೇಯ ವರದಾನ ನೆನಪಿದೆಯೇ? ಏನು ಕೊಟ್ಟರು? ಪವಿತ್ರ ಭವ, ಯೋಗಿ ಭವ. ವರದಾನ ಎಲ್ಲರಿಗೆ
ನೆನಪಿದೆಯಲ್ಲವೇ? ನೆನೆಪಿದೆ, ಮರೆತಿಲ್ಲಾ ತಾನೆ? ಪವಿತ್ರ ಭವದ ವರದಾನ ಒಂದರದಷ್ಟೇ ಕೊಟ್ಟಿಲ್ಲ,
ಐದರದೂ ಕೊಟ್ಟಿರುವರು. ಅಂದಮೇಲೆ ಇಂದು ಬಾಪ್ದಾದಾ ಏನು ಬಯಸುತ್ತಾರೆ? ಬರ್ತ್ ಡೇ (ಜನ್ಮದಿನ)
ಆಚರಿಸಲು ಬಂದಿರುವಿರಿ, ತಂದೆಯದ್ದೂ ಆಚರಿಸಲು ಬಂದಿರುವಿರಲ್ಲವೇ? ಶಿವರಾತ್ರಿಯನ್ನು ಆಚರಿಸಲು
ಬಂದಿರುವಿರಿ, ಅಂದಮೇಲೆ ಬರ್ತ್ ಡೇಯ ಉಡೂಗೋರೆಯನ್ನು ತಂದಿರುವಿರೋ ಅಥವಾ ಬರಿ ಕೈಯಲ್ಲಿ ಬಂದಿರುವಿರೋ?
70 ವರ್ಷದ ಸ್ಥಾಪನೆಯ ಸಮಾಪ್ತಿಯಾಗುತ್ತಿದೆ. ನೆನಪಿದೆಯಲ್ಲವೇ? 70 ವರ್ಷಗಳನ್ನು ವಿಚಾರಮಾಡಿ, ನೀವು
ನಂತರ ಬಂದಿರಬಹುದು ಆದರೆ ಸ್ಥಾಪನೆಯದಂತೂ 70 ವರ್ಷಗಳಾಗಿವೆಯಲ್ಲವೇ? ಈಗೀಗ ಬಂದಿರಬಹುದು, ಆದರೆ
ಸ್ಥಾಪನೆಯ ಕರ್ತವ್ಯದಲ್ಲಿ ನೀವೆಲ್ಲರೂ ಜೊತೆಗಾರರಾಗಿದ್ದೀರಲ್ಲವೇ! ಜೊತೆಗಾರರಾಗಿದ್ದೀರಲ್ಲವೇ!
ಮೊದಲ ಬಾರಿ ಬಂದಿರಬಹುದು. ದೊಡ್ಡದಾಗಿ ಕೈಯೆತ್ತಿರಿ. ಒಳ್ಳೆಯದು, ತಾವೆಲ್ಲರೂ ಒಂದು
ವರ್ಷದವರಾಗಿರಬಹುದು, ಎರಡು ವರ್ಷದವರಾಗಿರಬಹುದು ಆದರೆ ತಮ್ಮನ್ನು ಏನೆಂದು ಕರೆದುಕೊಳ್ಳುತ್ತೀರಿ?
ಬ್ರಹ್ಮಾಕುಮಾರಿ, ಬ್ರಹ್ಮಾಕುಮಾರ ಅಥವಾ ಪುರುಷಾರ್ಥಿ ಕುಮಾರ? ಏನೆಂದು ಕರೆದುಕೊಳ್ಳುತ್ತೀರಿ?
ಯಾರಾದರೂ ತಮ್ಮನ್ನು ಪುರುಷಾರ್ಥಿ ಕುಮಾರ ಎಂದು ಕರೆದುಕೊಳ್ಳುತ್ತೀರಾ? ಬ್ರಹ್ಮಾಕುಮಾರರ ಚಿಹ್ನೆ
ಹಾಕಿಕೊಳ್ಳುತ್ತೀರಲ್ಲವೇ! ಎಲ್ಲರೂ ಬಿ.ಕೆ. ಎಂದು ಬರೆಯುತ್ತೀರೋ ಅಥವಾ ಪಿ.ಕೆ. ಎಂದು
ಬರೆದುಕೊಳ್ಳುತ್ತೀರೋ? ಪುರುಷಾರ್ಥಿ ಕುಮಾರ್. ವಾಯಿದೆ ಏನು? ಜೊತೆಗಾರರಾಗಿರುತ್ತೇವೆ,
ಜೊತೆಯಲ್ಲಿರುತ್ತೇವೆ, ಕಂಬೈನ್ಡ್ ಇರುತ್ತೇವೆ, ಅಂದಮೇಲೆ ಕಂಬೈನ್ಡ್ನಲ್ಲಿ ಸಮಾನತೆ ಬೇಕಲ್ಲವೇ?
ಇಂದಿನ 70 ವರ್ಷಗಳ
ಉತ್ಸವವನ್ನು ಆಚರಿಸುತ್ತಾ ಬಂದಿರಿ, ಬಾಪದಾದಾ ನೋಡಿದರು, ಯಾವ ಯಾವ ಜೋನ್ನ ಸರದಿಯಿರುತ್ತದೆಯೋ ಅವರು
70 ವರ್ಷಗಳನ್ನು ಆಚರಿಸುತ್ತಾರೆ. ಸನ್ಮಾನ ಸಮಾರೋಹವನ್ನು ಆಚರಿಸುತ್ತಾರೆ. ಎಲ್ಲರೂ
ಆಚರಿಸುತ್ತೀರಲ್ಲವೇ? ಕೇವಲ ಚಿಕ್ಕ-ಚಿಕ್ಕ ಗಿಫ್ಟ್ ಕೊಡುತ್ತೀರಿ ಅಷ್ಟೆ. ಆದರೆ ಇಂದು ಬರ್ತ್ ಡೇ
ಆಚರಿಸಲು ಬಂದಿರುವಿರಲ್ಲವೇ? ಪಕ್ಕಾ ಇದೆಯಲ್ಲವೇ? ಮತ್ತು ಎರಡನೆಯದಾಗಿ 70 ವರ್ಷಗಳು ಸಮಾಪ್ತಿಯಾದವು,
ಎಂದರೆ ಸನ್ಮಾನವನ್ನೂ ಆಚರಿಸುತ್ತಿದ್ದೀರಿ, ಬರ್ತ್ ಡೇ ಯನ್ನೂ ಆಚರಿಸುತ್ತಿದ್ದೀರಿ, ಅದರಲ್ಲಿ
ಉಡುಗೊರೆಯನ್ನೇನು ಕೊಡುತ್ತೀರಿ? ಟ್ರೇ, ಚಾದರ್ ಕೊಡುವಿರಾ? ಯಾವ ಉಡುಗೊರೆ ತಂದಿರುವಿರಿ? ಒಳ್ಳೆಯದು,
ಬೆಳ್ಳಿಯ ಲೋಟವನ್ನು ಕೊಡುವಿರಾ? ಆದರೆ ಇಂದಿನ ದಿನ ತಮ್ಮ ಆಶೆಯ ದೀಪಗಳಾದ ಮಕ್ಕಳ ಪ್ರತಿ ಬಾಪದಾದಾ
ಅವರ ಶುಭ ಆಶೆಯಿದೆ. ಹೇಳಲೇ, ಮೊದಲ ಸಾಲಿನವರು ಹೇಳಿರಿ, ಹೇಳಲೇ? ಹೇಳುವುದು ಅಥವಾ ಕೇಳುವುದು
ಎಂದರೇನು? ಒಂದು ಕಿವಿಯಿಂದ ಕೇಳುವುದು ಮತ್ತು ಹೃದಯದಲ್ಲಿ ಸಮಾವೇಶ ಮಾಡಿಕೊಳ್ಳುವುದು, ಈ ರೀತಿಯೇ?
ತೆಗೆಯುವುದಂತೂ ಇಲ್ಲ, ಇಷ್ಟಂತೂ ಇಲ್ಲ ಆದರೆ ಹೃದಯಲ್ಲಿಯೇ ಸಮಾವೇಶ ಮಾಡಿಕೊಂಡು ಬಿಡುತ್ತೀರಿ.
ಇಂದಿನ ದಿನ ಮೊದಲ ಸಾಲಿನಲ್ಲಿರುವವರು ಹೇಳಿರಿ, ಕತ್ತನ್ನು ಅಲ್ಲಾಡಿಸಿರಿ, ಟೀಚರ್ಸ್ ಕತ್ತನ್ನು
ಅಲ್ಲಾಡಿಸಿರಿ. ಒಳ್ಳೆಯದು, ಧ್ವಜವನ್ನು ಅಲ್ಲಾಡಿಸುತ್ತಿದ್ದೀರಿ. ಡಬಲ್ ಫಾರಿನರ್ಸ್ ಹೇಳುತ್ತೀರಾ?
ತಮ್ಮನ್ನು ಬಂಧಿಸಿಕೊಳ್ಳಬೇಕಾಗುತ್ತದೆ, ಆಗ ಹೇಳಿರಿ, ಅಲ್ಲವೆ, ಹಾಗೆಯೇ ಅಲ್ಲ. ಏಕೆಂದರೆ, 70
ವರ್ಷ ನೋಡಿದ್ದೀರಿ, 70 ವರ್ಷಗಳಂತೂ ಬಾಪ್ದಾದಾರವರು ಹುಡುಗಾಟಿಕೆ, ಆಲಸ್ಯ ಮತ್ತು ನೆಪಗಳನ್ನು
ಹೇಳುವುದು ಎಲ್ಲಾ ಆಟವನ್ನು ನೋಡಿದರು. ಒಂದು ವೇಳೆ 70 ಆಲ್ಲದಿದ್ದರೂ 50, 40, 30, 20 ಆದರೆ
ಇಷ್ಟು ಸಮಯ ಈ ಮೂರೂ ಆಟಗಳನ್ನು ಮಕ್ಕಳಲ್ಲಿ ಬಹಳ ನೋಡಿದ್ದಾರೆ. ಇಂದಿನ ದಿನ ಭಕ್ತರು ಜಾಗರಣೆ
ಮಾಡುತ್ತಾರೆ, ಮಲಗುವುದಿಲ್ಲ, ಅಂದಮೇಲೆ ನೀವು ಮಕ್ಕಳ ಜಾಗರಣೆ ಏನು? ಯಾವ ನಿದ್ದೆಯಲ್ಲಿ ಸಮಯ
ಸಮಯಕ್ಕೂ ಮಲಗಿ ಬಿಡುತ್ತೀರಿ, ಹುಡುಗಾಟಿಕೆ, ಆಲಸ್ಯ ಮತ್ತು ನೆಪಗಳನ್ನು ಹೇಳುವ ನಿದ್ದೆಯಲ್ಲಿ
ಆರಾಮವಾಗಿ ಮಲಗಿ ಬಿಡುತ್ತೀರಿ.
ಬಾಬಾ ಈ ಮೂರು
ಮಾತುಗಳಲ್ಲಿ ಪ್ರತಿಸಮಯ ಬಾಪದಾದಾ ಜಾಗರಣೆಯನ್ನು ನೋಡಲು ಬಯಸುತ್ತಾರೆ. ಎಂದಾದರೂ ನೋಡಿರಿ, ಕ್ರೋಧ
ಬಂದಾಗ, ಅಭಿಮಾನ ಬಂದಾಗ, ಲೋಭ ಬಂದಾಗ, ಕಾರಣ ಏನು ಹೇಳುತ್ತೀರಿ? ಒಂದು ಬಾಪದಾದಾ ಅವರಿಗೆ
ಟ್ರೇಡ್ಮಾರ್ಕ್ ಕಾಣುತ್ತದೆ, ಯಾವುದೇ ಮಾತು ಬಂದಾಗ ಏನು ಹೇಳುತ್ತೀರಿ? ಇದಂತೂ ನಡೆಯುತ್ತದೆ, ಯಾರು
ನಡೆಸುತ್ತಾರೆ ಗೊತ್ತಿಲ್ಲ. ಆದರೆ ಶಬ್ದ ಇದೇ ಬರುವುದು, ಇದಂತೂ ಆಗಿಯೇ ಆಗುತ್ತದೆ, ಇದು
ನಡೆಯುತ್ತಲೇ ಇರುತ್ತದೆ. ಇದು ಹೊಸ ಮಾತೇನಲ್ಲ, ಇದು ಆಗುತ್ತಲೇ ಇರುತ್ತದೆ. ಇದು ಏನು?
ಹುಡುಗಾಟಿಕೆಯಲ್ಲವೇ? ಇದನ್ನೂ ಮಾಡಬೇಕು, ಮೆಜಾರಿಟಿ ಕ್ರೋಧದಿಂದ ಬಚಾವಾಗಲು - ಇವರು ಮಾಡಿದರು
ಅದಕ್ಕೇ ಆಯಿತು - ನಾನು ತಪ್ಪು ಮಾಡಿದೆ ಎಂದು ಹೇಳುವುದಿಲ್ಲ. ಇವರು ಮಾಡಿದರಲ್ಲವೇ, ಇದು
ಆಯಿತಲ್ಲವೇ, ಆದ್ದರಿಂದ ಆಯಿತು. ಇತರರ ಮೇಲೆ ದೋಷ ಹೊರಿಸುವುದು ಬಹಳ ಸುಲಭ. ಇವರು ಮಾಡದಿದ್ದರೆ
ಆಗುವುದಿಲ್ಲ. ಮತ್ತು ತಂದೆ ಹೇಳಿದ್ದು ಆಗುವುದಿಲ್ಲ. ಅವರು ಮಾಡಿದರೆ ಆಗುವುದು, ತಂದೆಯ
ಶ್ರೀಮತದಂತೆ ಕ್ರೋಧವನ್ನು ಸಮಾಪ್ತಿಮಾಡಲು ಸಾಧ್ಯವಿಲ್ಲವೇ? ಈಗಿನ ಕಾಲದಲ್ಲಿ ಕ್ರೋಧದ ಮಗ ದರ್ಪ,
ದರ್ಪವೂ ಸಹ ವಿವಿಧ ಪ್ರಕಾರಗಳದ್ದಿವೆ. ಅಂದಮೇಲೆ ಇಂದು ನಾಲ್ಕರ ವ್ರತವನ್ನು
ತೆಗೆದುಕೊಳ್ಳುವುದಿಲ್ಲವೇ? ಹೇಗೆ ಮೊದಲ ಮಾತಿನ ವಿಶೇಷ ದೃಢ ಸಂಕಲ್ಪವನ್ನು ಮೆಜಾರಿಟಿ ಮಾಡಿದ್ದೀರಿ.
ಹಾಗೆಯೇ ನಾಲ್ಕರ ಸಂಕಲ್ಪ, ಇವರು ಮಾಡಿದ್ದಕ್ಕೆ ನನ್ನದು ಹೀಗಾಯಿತು ಎಂದು ಕಾರಣ ಕೊಡಬೇಡಿ, ಬಾಬಾ
ಬಾರಿಬಾರಿಗೂ ಏನು ಹೇಳುತ್ತಾರೆಯೋ ಅದು ನೆನಪಿರುವುದಿಲ್ಲ, ಅವರು ಏನು ಮಾಡಿದರೋ ಅದು ನೆನಪಿಗೆ
ಬಂದಿತು, ಇದು ನೆಪ ಹೇಳುವುದಲ್ಲವೇ? ಇಂದು ಬಾಪದಾದಾ ಬರ್ತ್ ಡೇ ಉಡುಗೊರೆಯನ್ನು ಬಯಸುತ್ತಾರೆ. ಈ
ಮೂರು ಮಾತುಗಳು ಆ ನಾಲ್ಕು ಮಾತುಗಳನ್ನು ಹಗುರ ಮಾಡುತ್ತವೆ. ಸಂಸ್ಕಾರಗಳನ್ನು ಎದುರಿಸಲೇಬೇಕು.
ಸಂಸ್ಕಾರವನ್ನು ಎದುರಿಸುವುದಲ್ಲ, ಇದು ಪೇಪರ್ ಆಗಿದೆ. ಒಂದು ಜನ್ಮದ ವಿದ್ಯೆ ಮತ್ತು ಇಡೀ ಕಲ್ಪದ
ಪ್ರಾಪ್ತಿ, ಅರ್ಧಕಲ್ಪ ರಾಜ್ಯಭಾಗ್ಯ, ಅರ್ಧಕಲ್ಪ ಪೂಜ್ಯ, ಇಡೀ ಕಲ್ಪದಲ್ಲಿ ಒಂದು ಜನ್ಮದಲ್ಲಿ
ಪ್ರಾಪ್ತಿ, ಅದೂ ಚಿಕ್ಕ ಜನ್ಮ, ಸಂಪೂರ್ಣ ಜನ್ಮವಲ್ಲ, ಚಿಕ್ಕ ಜನ್ಮವಾಗಿದೆ. ಏನು ಧೈರ್ಯವಿದೆಯೇ?
ಅವಶ್ಯವಾಗಿ ಸಾಹಸವಿಡುತ್ತೇವೆಂದು ಯಾರು ತಿಳಿದಿದ್ದೀರೋ, ಪುರುಷಾರ್ಥ ಮಾಡುತ್ತೇವೆಂದಲ್ಲ,
ಅಟೇಂನ್ಷನ್ ಇಡುತ್ತೇವೆ, ಮಾಡುತ್ತೇವೆ... ಈ ರೀತಿ ಅಲ್ಲ. ನೀವು ಚಿಕ್ಕ ಮಕ್ಕಳಲ್ಲ, 70 ವರ್ಷ
ಪೂರ್ಣವಾಗುತ್ತಿದೆ. ಮಾಡುತ್ತೇವೆ, ಮಾಡುತ್ತೇವೆ... ಈ ರೀತಿಯಂತು 3-4 ತಿಂಗಳ ಮಕ್ಕಳು ಮಾಡುತ್ತಾರೆ.
ನೀವು ತಂದೆಯ ಜೊತೆಗಾರರಲ್ಲವೆ? ವಿಶ್ವ ಕಲ್ಯಾಣಕಾರಿಗಳಾಗಿದ್ದೀರಿ, ಅವರಿಗಂತು 70 ವರ್ಷಗಳು
ಪೂರ್ಣವಾಗುತ್ತಿದೆ. ಬಾಪದಾದಾ ಕೈಗಳನ್ನು ಎತ್ತಿಸುವುದಿಲ್ಲ, ಏಕೆಂದರೆ ಕೈಯೆತ್ತಿಯೂ
ಹುಡುಗಾಟಿಕೆಯಲ್ಲಿ ಬರುವುದನ್ನು ಬಾಪದಾದಾ ನೋಡಿದ್ದಾರೆ. ಆದರೆ ಯಾರು ತಿಳಿದುಕೊಳ್ಳುತ್ತೀರಿ, ಏನೇ
ಆಗಲಿ, ಬೆಟ್ಟದಂತಹ ಪೇಪರ್ಗಳೇ ಬರಲಿ, ಆದರೆ ಬೆಟ್ಟವನ್ನು ಸಾಸಿವೆ ಮಾಡುತ್ತೇವೆ - ಈ ರೀತಿ ದೃಢ
ಸಂಕಲ್ಪ ಮಾಡಬೇಕು, ಏಕೆಂದರೆ ಸಂಕಲ್ಪವನ್ನು ಬಹಳ ಚೆನ್ನಾಗಿ ಮಾಡುತ್ತೀರಿ, ಯಾವ ಸಮಯದಲ್ಲಿ ಸಂಕಲ್ಪ
ಮಾಡುತ್ತೀರೋ ಆಗ ಬಾಪದಾದಾ ಅವರೂ ಖುಷಿಯಾಗುತ್ತಾರೆ. ಆದರೆ ಏನೆಂದರೆ, 70 ವರ್ಷಗಳಂತೂ ಹಗುರವಾಗಿ
ಕಳೆದು ಬಿಟ್ಟಿದಿರಿ, ಆದರೆ ಸಮಯದ ಯಾವುದೇ ಭರವಸೆಯಿಲ್ಲವೆಂದು ಬಾಪದಾದಾ ನೋಡುತ್ತಿದ್ದಾರೆ ಮತ್ತು
ಈ ಜ್ಞಾನದ ಆಧಾರದ ಮೇಲೆ ಪ್ರತಿಯೊಬ್ಬ ಪುರುಷಾರ್ಥಿಯ ಮಾತಿನಲ್ಲಿ ಬಹಳಕಾಲದ ಲೆಕ್ಕವಿದೆ. ಒಳ್ಳೆಯದು,
ಈಗೀಗ ಮಾಡುತ್ತೇವೆ, ಬಹಳ ಕಾಲದ ಲೆಕ್ಕವಿದೆ. ಏಕೆಂದರೆ ಎಲ್ಲರೂ ಯಾವ ಪ್ರಾಪ್ತಿ ಮಾಡಿಕೊಳ್ಳಲು
ಇಚ್ಛಿಸುತ್ತಾರೆ? ಈಗಲೇ ಕೈಯೆತ್ತಿಸುತ್ತಾರೆ, ಯಾರಾದರೂ ರಾಮ-ಸೀತಾ ಆಗುತ್ತಾರೆಯೇ? ಯಾರು ರಾಮ ಸೀತಾ
ಆಗುತ್ತಾರೋ ಅವರು ಕೈಯೆತ್ತಿರಿ, ರಾಜ್ಯ ಸಿಗುತ್ತದೆ. ಕೆಲವರು ಕೈಯೆತ್ತುತ್ತಿದ್ದಾರೆ. ರಾಮ ಸೀತಾ
ಆಗುತ್ತಾರೆ, ಲಕ್ಷ್ಮಿ ನಾರಾಯಣ ಆಗುವುದಿಲ್ಲವೇ? ಕೈಯೆತ್ತುತ್ತಿದ್ದಾರೆ? ನೋಡಿ, ನೀವು ನೋಡಿ
ಕೈಯೆತ್ತುತ್ತಿದ್ದಾರೆ. ಫಾರಿನರ್ಸ ಎತ್ತುತ್ತಿದ್ದಾರೆಯೇ? ಡಬಲ್ ಫಾರಿನರ್ಸ್ನಲ್ಲಿ ಯಾರಾದರೂ
ಎತ್ತಿದ್ದಾರೆಯೇ? ಯಾವಾಗ ಬಹಳ ಕಾಲದ ಭಾಗ್ಯ ಪ್ರಾಪ್ತಿ ಮಾಡಿಕೊಳ್ಳಲು ಇಚ್ಛಿಸುತ್ತೀರೋ, ಲಕ್ಷ್ಮಿ
ನಾರಾಯಣರಾಗುವುದೆಂದರೆ ಬಹಳ ಕಾಲದ ರಾಜ್ಯ ಭಾಗ್ಯ ಪ್ರಾಪ್ತಿ ಮಾಡಿಕೊಳ್ಳುವುದಾಗಿದೆ. ಅಂದಮೇಲೆ ಬಹಳ
ಕಾಲದ ಪ್ರಾಪ್ತಿಯಿದೆ. ಪ್ರತಿಯೊಂದು ಮಾತಿನಲ್ಲಿ ಬಹಳ ಕಾಲ ಬೇಕಲ್ಲವೇ? ಈಗ 63 ಜನ್ಮದ ಬಹಳ ಕಾಲದ
ಸಂಸ್ಕಾರವಿದೆ ಎಂದು ಹೇಳುತ್ತೀರಲ್ಲವೆ, ನಮ್ಮ ಭಾವ ಅಲ್ಲ, ಭಾವನೆ ಅಲ್ಲ, 63 ಜನ್ಮದ
ಸಂಸ್ಕಾರಗಳದ್ದಾಗಿದೆ. ಅಂದಮೇಲೆ ಬಹಳ ಕಾಲದ ಲೆಕ್ಕವಿದೆಯಲ್ಲವೇ? ಆದ್ದರಿಂದ ಬಾಪದಾದಾ ಇದನ್ನೇ
ಬಯಸುತ್ತಾರೆ, ಸಂಕಲ್ಪದಲ್ಲಿ ದೃಢತೆಯು ಕಡಿಮೆಯಾಗುತ್ತದೆ, ಆಗುವುದು.. ನಡೆಯುವುದು, ನಡೆಯಲಿ,
ಯಾರಾಗಿದ್ದಾರೆ, ಇನ್ನೊಂದು ಮಾತು ಎಲ್ಲರಿಗೂ ಬಹಳ ಚೆನ್ನಾಗಿ ಬರುತ್ತದೆ, ಬಾಪ್ದಾದಾ ಈ ಮಾತನ್ನು
ನೋಟ್ ಮಾಡಿದ್ದಾರೆ, ತಮಗೆ ಧೈರ್ಯವಿಲ್ಲದಿದ್ದಾಗ ಹೇಳುತ್ತಾರೆ, ಮಹಾರಥಿಗಳೂ ಈ ರೀತಿ ಮಾಡುತ್ತಾರೆ,
ನಾವು ಮಾಡಿದರೇನಾಗುತ್ತದೆ? ಆದರೆ ಬಾಪದಾದಾ ಏನು ಹೇಳುತ್ತಾರೆಂದರೆ, ಯಾವ ಸಮಯದಲ್ಲಿ ಮಹಾರಥಿ ತಪ್ಪು
ಮಾಡುತ್ತಾರೆಯೋ ಆ ಸಮಯದಲ್ಲಿ ಅವರು ಮಹಾರಥಿಯೇ? ಅಂದಮೇಲೆ ಮಹಾರಥಿಯ ಹೆಸರನ್ನು ಏಕೆ ಕೆಡಿಸುತ್ತಿರಿ?
ಆ ಸಮಯದಲ್ಲಿ ಅವರು ಮಹಾರಥಿಯಂತೂ ಅಲ್ಲ, ಅಂದಮೇಲೆ ಮಹಾರಥಿ ಎಂದು ಹೇಳಿ ತಮಗೆ ತಾವು ಬಲಹೀನರಾಗುವುದು
ಎಂದರೆ ಮೋಸ ಮಾಡಿಕೊಳ್ಳುವುದು. ಇತರರನ್ನು ನೋಡುವುದು ಸಹಜವಾಗುತ್ತದೆ, ತಮ್ಮನ್ನು ನೋಡಿಕೊಳ್ಳಲು
ಸ್ವಲ್ಪ ಧೈರ್ಯ ಬೇಕಾಗುವುದು. ಇಂದು ಬಾಪದಾದಾ ಲೆಕ್ಕ ತೆಗೆದುಕೊಳ್ಳಲು ಬಂದಿದ್ದಾರೆ. ಆದರೆ
ಲೆಕ್ಕಾಚಾರದ ಪುಸ್ತಕವನ್ನು ಸಮಾಪ್ತಿ ಮಾಡಿಕೊಳ್ಳುವ ಉಡುಗೆರೆಯನ್ನು ಪಡೆಯಲು ಬಂದಿದ್ದಾರೆ. ಬಲಹೀನ
ಮತ್ತು ನೆಪಗಳ ಲೆಕ್ಕಾಚಾರ, ಬಹಳ ದೊಡ್ಡ ಪುಸ್ತಕವಿದೆ, ಅದನ್ನು ಸಮಾಪ್ತಿ ಮಾಡಬೇಕಿದೆ. ನಾವು ಮಾಡಿ
ತೋರಿಸುತ್ತೇವೆಂದು ಯಾರು ತಿಳಿದುಕೊಳ್ಳುತ್ತಾರೆಯೋ, ಮಾಡಲೇಬೇಕು, ಬಾಗಲೇಬೇಕು, ಬದಲಾವಣೆಯಾಗಲೇ
ಬೇಕು, ಪರಿವರ್ತನೆಯ ಸೆರಿಮನಿಯನ್ನು ಆಚರಿಸಲೇಬೇಕು. ಸಂಕಲ್ಪ ಮಾಡುತ್ತೇವೆಂದು ತಿಳಿಯುವವರು
ಕೈಯೆತ್ತಿರಿ. ದೃಢವೋ ಅಥವಾ ಹಾಗೆಯೇ ನಡೆಸುವುದೋ? ಹಾಗೆಯೇ ನಡೆಸಿಕೊಂಡು ಹೋಗುವ ಸಂಕಲ್ಪಗಳೂ
ಇರುತ್ತವೆ ಮತ್ತು ದೃಢ ಸಂಕಲ್ಪವೂ ಇರುತ್ತದೆ. ತಾವೆಲ್ಲರೂ ದೃಢವಾಗಿ ಕೈಯೆತ್ತಿದ್ದೀರಲ್ಲವೇ?
ಮಧುಬನದವರು ದೊಡ್ಡದಾಗಿ ಕೈಯೆತ್ತಿರಿ, ಇಷ್ಟೇ ಅಲ್ಲ. ಇಲ್ಲಿ ಮಧುಬನದವರು ಕುಳಿತುಕೊಳ್ಳುತ್ತಾರೆ.
ಬಹಳ ಸಮೀಪ ಕುಳಿತುಕೊಳ್ಳುವ ಅವಕಾಶವಿದೆ. ಮಧುಬನದವರಂತೂ ಸಂಪೂರ್ಣ ಮುಂದೆಯೇ ಕುಳಿತಿದ್ದಾರೆ. ಮೊದಲ
ಸೀಟ್ ಮಧುಬನದವರಿಗೆ ಸಿಗುತ್ತದೆ, ಬಾಪದಾದಾ ಖುಷಿಯಾಗಿದ್ದಾರೆ. ಮೊದಲು ಕುಳಿತಿದ್ದೀರಿ, ಮೊದಲೇ ಇರಿ.
ಅಂದಮೇಲೆ ಇಂದಿನ ಉಡುಗೊರೆ
ದೊಡ್ಡದಾಗಿದೆಯಲ್ಲವೇ? ನೀವೆಲ್ಲ ಒಬ್ಬೊಬ್ಬರೇ ಅಲ್ಲವೆಂದು ಬಾಪ್ದಾದಾ ಅವರಿಗೆ ಖುಷಿಯಿದೆ. ನಿಮ್ಮ
ರಾಜಧಾನಿಯಲ್ಲಿ ನಿಮ್ಮ ಹಿಂದೆ ರಾಯಲ್ ಫ್ಯಾಮಿಲಿ, ನಿಮ್ಮ ರಾಯಲ್ ಪ್ರಜೆ, ನಂತರ ದ್ವಾಪರದಲ್ಲಿ
ನಿಮ್ಮ ಭಕ್ತ, ಸತೋ ರಜೋ ತಮೋಗುಣೀ, ಮೂರು ಪ್ರಕಾರದ ಭಕ್ತರು, ನಿಮ್ಮ ಹಿಂದೆ ಬಹಳ ದೊಡ್ಡ ಲೈನ್ ಇದೆ.
ನೀವು ಏನು ಮಾಡುತ್ತೀರೋ ಅದನ್ನು ನಿಮ್ಮ ಹಿಂದಿನವರು ಮಾಡುತ್ತಾರೆ. ನೀವು ನೆಪಗಳನ್ನು ಕೊಟ್ಟಾಗ
ನಿಮ್ಮ ಭಕ್ತರೂ ಅದನ್ನೇ ಮಾಡುತ್ತಾರೆ. ಈಗ ಬ್ರಾಹ್ಮಣ ಪರಿವಾರವೂ ನಿಮ್ಮನ್ನು ನೋಡಿ ಉಲ್ಟಾ ಕಾಪಿ
ಮಾಡುವುದರಲ್ಲಿ ಹುಷಾರಾಗಿದ್ದಾರೆ. ಈಗ ದೃಢ ಸಂಕಲ್ಪ ಮಾಡಿರಿ, ಸಂಸ್ಕಾರಗಳ ಘರ್ಷಣೆಗಳಿರಬಹುದು,
ಸ್ವಭಾವಗಳ ಮತ ಭೇದಗಳಿರಬಹುದು, ಮೂರನೆಯ ಮಾತು ಬಲಹೀನತೆಗಳದ್ದಾಗಿರುತ್ತದೆ, ಕೆಲವರು ಇತರರ ಮೇಲೆ
ಸುಳ್ಳು ಮಾತುಗಳನ್ನು ಹೇಳಿದಾಗ ನಮಗೆ ಸುಳ್ಳಿನ ಮೇಲೆ ಹೆಚ್ಚು ಕ್ರೋಧ ಬರುತ್ತದೆಂದು ಅನೇಕ ಮಕ್ಕಳು
ಹೇಳುತ್ತಾರೆ. ಆದರೆ ಸತ್ಯ ತಂದೆಯಿಂದ ವೆರಿಫಾಯ್ ಮಾಡಿಸಿದಿರೆ, ಸತ್ಯ ತಂದೆ ನಿಮ್ಮೊಂದಿಗಿದ್ದಾರೆ,
ಎಲ್ಲ ಸುಳ್ಳು ಜಗತ್ತು ಒಂದೆಡೆ ಇರಲಿ, ಮತ್ತು ಒಬ್ಬ ತಂದೆ ನಿಮ್ಮ ಜೊತೆಗಿದ್ದಾರೆ, ನಿಮ್ಮ ವಿಜಯ
ನಿಶ್ಚಿತವಾಗಿದೆ. ಯಾರೂ ನಿಮ್ಮನ್ನು ಅಲುಗಾಡಿಸಲು ಸಾಧ್ಯವಿಲ್ಲ, ಏಕೆಂದರೆ ತಂದೆ ನಿಮ್ಮ
ಜೊತೆಗಿದ್ದಾರೆ. ಸುಳ್ಳೆಂದು ಅವರು ಹೇಳುತ್ತಿದ್ದಾರೆ. ಅಂದಮೇಲೆ ಸುಳ್ಳನ್ನು ಸುಳ್ಳಾಗಿಯೇ
ಮಾಡಿಬಿಡಿ, ಏಕೆ ಬೆಳೆಸುವಿರಿ! ಇಂದು ತಂದೆಗೆ ನೆಪಗಳು ಇಷ್ಟವಾಗುವುದಿಲ್ಲ, ಇದಾಯಿತು, ಇದಾಯಿತು,
ಇದಾಯಿತು... ಇದು ಇದು ಈ ಗೀತೆ ಸಮಾಪ್ತಿಯಾಗಬೇಕು. ಒಳ್ಳೆಯದಾಯಿತು, ಒಳ್ಳೆಯದಾಗುತ್ತದೆ,
ಚೆನ್ನಾಗಿರುತ್ತೇವೆ, ಎಲ್ಲರನ್ನೂ ಒಳ್ಳಯವರಾಗಿ ಮಾಡುತ್ತೇವೆ. ಒಳ್ಳೆಯದು, ಒಳ್ಳೆಯದು, ಈ ಗೀತೆ
ಹಾಡಿರಿ. ಇದು ಇಷ್ಟವಲ್ಲವೇ? ಇಷ್ಟವೇ? ನೆಪಗಳನ್ನು ಸಮಾಪ್ತಿ ಮಾಡುತ್ತೀರಾ? ಮಾಡುತ್ತೀರಾ?
ಎರೆಡೆರೆಡೂ ಜೊತೆಯಲ್ಲಿ ಎತ್ತಿರಿ. ಚೆನ್ನಾಗಿದೆ. ಹಾಂ, ಚೆನ್ನಾಗಿ ಅಲುಗಾಡಿಸಿರಿ. ಒಳ್ಳೆಯದು,
ನೋಡುವವರೂ ಕೈ ಆಡಿಸುತ್ತಿದ್ದಾರೆ. ನೀವು ಎಲ್ಲಾದರೂ ನೋಡುತ್ತಿರಿ, ಕೈಯೆತ್ತಿರಿ. ನೀವಂತೂ
ಎತ್ತುತ್ತಿದ್ದೀರಿ. ಒಳ್ಳೆಯದು, ಈಗ ಕೆಳಗೆ ಮಾಡಿರಿ, ಈಗ ನಿಮ್ಮ ಪರಿವರ್ತನೆಯ ಚಪ್ಪಾಳೆ ಹಾಕಿರಿ,
ಒಳ್ಳೆಯದು.
ಈಗ ಪ್ರತಿಯೋಬ್ಬರು ಒಂದು
ನಿಮಿಷದಲ್ಲಿ ದೃಢ ಸಂಕಲ್ಪದ ಸ್ವರೂಪದಲ್ಲಿ ಕುಳಿತು ನೆಪಗಳನ್ನು ಹೇಳುವುದು, ಆಲಸ್ಯ,
ಹುಡುಗಾಟಿಕೆಯನ್ನು ಪ್ರತಿ ಸಮಯ ದೃಢ ಸಂಕಲ್ಪದ ಮೂಲಕ ಸಮಾಪ್ತಿ ಮಾಡಿ ಬಹಳ ಕಾಲದ ಲೆಕ್ಕವನ್ನು ಜಮಾ
ಮಾಡಿಕೊಳ್ಳಲೇ ಬೇಕು. ಏನೇ ಆಗಲಿ, ಏನನ್ನೂ ನೋಡಬೇಡಿ, ಆದರೆ ತಂದೆಯ ಹೃದಯ ಸಿಂಹಾಸನಾರೂಢರು
ಆಗಲೇಬೇಕು, ವಿಶ್ವ ಸಿಂಹಾಸನಾಧೀಶರಾಗಲೇಬೇಕು. ಈ ದೃಢ ಸಂಕಲ್ಪದ ಸ್ವರೂಪದಲ್ಲಿ ಎಲ್ಲರೂ
ಕುಳಿತುಕೊಳ್ಳಿ. ಒಳ್ಳೆಯದು.
ನಾಲ್ಕಾರು ಕಡೆಯ ಸದಾ
ಉಮಂಗ-ಉತ್ಸಾಹದ ಅನುಭವದಲ್ಲಿ ಇರುವಂತಹ, ಸದಾ ದೃಢತೆ ಸಫಲತೆಯ ಬೀಗದ ಕೈಯನ್ನು ಕಾರ್ಯದಲ್ಲಿ
ತೊಡಗಿಸುವಂತಹ ಸದಾ ತಂದೆಯ ಜೊತೆ ಮತ್ತು ಪ್ರತಿಯೊಂದು ಕಾರ್ಯದಲ್ಲಿ ಜೊತೆಗಾರರಾಗಿ ಇರುವಂತಹ ಸದಾ
ಏಕನಾಮಿ ಮತ್ತೆ ಎಕಾನಮಿ (ಉಳಿತಾಯ) ಮಾಡುವಂತಹ ಏಕಾಗ್ರ ಸ್ವರೂಪದಲ್ಲಿ ಎಲ್ಲದಕ್ಕಿಂತ ಮುಂದೆ
ಹಾರುವಂತಹವರು, ಬಾಪ್ದಾದರಾವರ ಅತಿ ಮುದ್ದಾದ, ಬಹಳ ಕಾಲ ಅಗಲಿ ಸಿಕ್ಕಿರುವಂತಹ ವಿಶೇಷ ಮಕಳಿಗೆ
ಬಾಪ್ದಾದಾರವರ ನೆನಪು, ಪ್ರೀತಿ ಮತ್ತು ನಮಸ್ತೆ.
ವರದಾನ:
ಹದ್ದಿನ ಸರ್ವ
ಇಚ್ಛೆಗಳನ್ನು ತ್ಯಾಗ ಮಾಡುವಂತಹ ಸತ್ಯ ತಪಸ್ವಿ ಮೂರ್ತಿ ಭವ.
ಹದ್ಧಿನ ಎಲ್ಲಾ
ಇಚ್ಛೆಗಳನ್ನು ತ್ಯಾಗ ಮಾಡಿ ಸತ್ಯ-ಸತ್ಯ ತಪಸ್ವೀ ಮೂರ್ತಿಗಳಾಗಿ. ತಪಸ್ವೀ ಮೂರ್ತಿ ಅರ್ಥಾತ್
ಹದ್ಧಿನ ಇಚ್ಛಾ ಮಾತ್ರಂ ಅವಿದ್ಯಾ ರೂಪ. ಯಾರು ತೆಗೆದುಕೊಳ್ಳುವ ಸಂಕಲ್ಪ ಮಾಡುತ್ತಾರೆ ಅವರು
ಅಲ್ಪಕಾಲಕ್ಕಾಗಿ ತೆಗೆದುಕೊಳ್ಳುತ್ತಾರೆ ಆದರೆ ಸದಾಕಾಲಕ್ಕಾಗಿ ಕಳೆದುಕೊಳ್ಳುತ್ತಾರೆ.
ತಪಸ್ವಿಗಳಾಗುವುದರಲ್ಲಿ ವಿಶೇಷ ವಿಘ್ನ ರೂಪ ಇದೇ ಅಲ್ಪಕಾಲದ ಇಚ್ಛೆಯಾಗಿದೆ ಆದ್ದರಿಂದ ಈಗ ತಪಸ್ವೀ
ಮೂರ್ತಿಗಳಾಗುವ ಪುರಾವೆಯನ್ನು ಕೊಡಿ ಅರ್ಥಾತ್ ಹದ್ಧಿನ ಮಾನ್ ಷಾನ್ ನ ಲೇವತಾತನದ ತ್ಯಾಗ ಮಾಡಿ
ವಿಧಾತಾ ಆಗಿ. ಯಾವಾಗ ವಿಧಾತಾತನದ ಸಂಸ್ಕಾರ ಇಮರ್ಜ್ ಆಗುವುದು ಆಗ ಅನ್ಯ ಎಲ್ಲಾ ಸಂಸ್ಕಾರಗಳನ್ನು
ಸ್ವತಃ ಅಧುಮಿ ಹೋಗಿ ಬಿಡುವುದು.
ಸ್ಲೋಗನ್:
ಕರ್ಮಫಲದ
ಸೂಕ್ಷ್ಮ ಕಾಮನೆಗಳನ್ನು ಇಟ್ಟುಕೊಳ್ಳುವುದೂ ಸಹಾ ಫಲವು ಹಣ್ಣಾಗುವ ಮೊದಲೆ ತಿಂದು ಬಿಡುವ ಹಾಗೆ.
ಅವ್ಯಕ್ತ ಸೂಚನೆ:- ಈಗ
ಲಗನ್ನಿನ (ಪ್ರೀತಿಯ) ಅಗ್ನಿಯನ್ನು ಪ್ರಜ್ವಲಿತಗೊಳಿಸಿ ಯೋಗವನ್ನು ಜ್ವಾಲಾರೂಪವನ್ನಾಗಿ ಮಾಡಿ.
ಪಾಪ ಕಟೇಶ್ವರ ಅಥವಾ ಪಾಪ
ಹರನಿ ಯಾವಾಗ ಆಗುತ್ತೇವೆಂದರೆ ನೆನಪಿನ ಜ್ವಾಲಾ ಸ್ವರೂಪವಾದಾಗ. ಇಂತಹ ನೆನಪಿನ ಮುಖಾಂತರ ಅನೇಕ
ಆತ್ಮಗಳ ನಿರ್ಬಲತೆ ದೂರವಾಗುತ್ತದೆ. ಇದಕ್ಕಾಗಿ ಪ್ರತಿ ಸೆಕೆಂಡ್, ಪ್ರತಿ ಶ್ವಾಸ ತಂದೆ ಮತ್ತು ನಾವು
ಕಂಬೈಂಡ್ ಆಗಿರಬೇಕು. ಯಾವುದೇ ಸಮಯ ಸಾಧಾರಣ ನೆನಪಿರಬಾರದು, ಸ್ನೇಹ ಮತ್ತು ಶಕ್ತಿ ಎರಡು ರೂಪ
ಕಂಬೈಂಡ್ ಆಗಿರಲಿ.