28.11.24 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ - ನೀವು
ಒಬ್ಬ ತಂದೆಯಿಂದಲೇ ಕೇಳಬೇಕಾಗಿದೆ ಮತ್ತು ಕೇಳಿದುದನ್ನು ಅನ್ಯರಿಗೂ ತಿಳಿಸಬೇಕಾಗಿದೆ”
ಪ್ರಶ್ನೆ:
ತಂದೆಯು ನೀವು
ಮಕ್ಕಳಿಗೆ ಯಾವ ತಿಳುವಳಿಕೆಯನ್ನು ಕೊಟ್ಟಿದ್ದಾರೆ? ಅದನ್ನು ಅನ್ಯರಿಗೂ ತಿಳಿಸಬೇಕಾಗಿದೆ.
ಉತ್ತರ:
ತಂದೆಯು ನಿಮಗೆ
ತಿಳುವಳಿಕೆಯನ್ನು ಕೊಟ್ಟರು - ನೀವಾತ್ಮಗಳೆಲ್ಲರೂ ಸಹೋದರರಾಗಿದ್ದೀರಿ, ನೀವು ಒಬ್ಬ ತಂದೆಯ
ನೆನಪಿನಲ್ಲಿರಬೇಕು. ಇದೇ ಮಾತನ್ನು ನೀವು ಎಲ್ಲರಿಗೂ ತಿಳಿಸಿ ಏಕೆಂದರೆ ನೀವು ಇಡೀ ವಿಶ್ವದ,
ನಿಮ್ಮದೇ ಸಹೋದರರ ಕಲ್ಯಾಣ ಮಾಡಬೇಕಾಗಿದೆ. ನೀವೇ ಈ ಸೇವೆಗೆ ನಿಮಿತ್ತರಾಗಿದ್ದೀರಿ.
ಓಂ ಶಾಂತಿ.
ಓಂ ಶಾಂತಿ ಎಂಬುದನ್ನು ಏಕೆ ಹೇಳಲಾಗುತ್ತದೆ? ಇದು ಪರಿಚಯ ಕೊಡುವುದಾಗಿದೆ - ಆತ್ಮದ ಪರಿಚಯವನ್ನು
ಆತ್ಮವೇ ಕೊಡುತ್ತದೆ. ಆತ್ಮವೇ ಶರೀರದ ಮೂಲಕ ವಾರ್ತಾಲಾಪ ಮಾಡುತ್ತದೆ, ಆತ್ಮವಿಲ್ಲದೆ ಶರೀರವು
ಏನನ್ನೂ ಮಾಡಲು ಸಾಧ್ಯವಿಲ್ಲ ಆದ್ದರಿಂದ ಈ ಆತ್ಮವು ತನ್ನ ಪರಿಚಯವನ್ನು ಕೊಡುತ್ತದೆ. ನಾವಾತ್ಮಗಳು
ಪರಮಪಿತ ಪರಮಾತ್ಮನ ಸಂತಾನರಾಗಿದ್ದೇವೆ. ಆದರೆ ಅವರು ಆತ್ಮವನ್ನೇ ಪರಮಾತ್ಮನೆಂದು ಹೇಳಿಬಿಡುತ್ತಾರೆ.
ನೀವು ಮಕ್ಕಳಿಗೆ ಇವೆಲ್ಲಾ ಮಾತುಗಳನ್ನು ತಿಳಿಸಿಕೊಡಲಾಗುತ್ತದೆ. ತಂದೆಯಂತೂ ಮಕ್ಕಳೇ, ಮಕ್ಕಳೇ ಎಂದು
ಹೇಳುತ್ತಾರಲ್ಲವೆ! ಆತ್ಮಿಕ ತಂದೆಯು ಹೇ ಆತ್ಮಿಕ ಮಕ್ಕಳೇ ಎಂದು ತಿಳಿಸುತ್ತಾರಲ್ಲವೆ! ಈ
ಕರ್ಮೇಂದ್ರಿಯಗಳ ಮೂಲಕ ನೀವು ತಿಳಿದುಕೊಳ್ಳುತ್ತೀರಿ. ತಂದೆಯು ತಿಳಿಸುತ್ತಾರೆ - ಮೊಟ್ಟಮೊದಲು
ಜ್ಞಾನ ನಂತರ ಭಕ್ತಿಯಾಗಿದೆ. ಮೊದಲು ಭಕ್ತಿ ನಂತರ ಜ್ಞಾನವಲ್ಲ. ಮೊದಲು ಜ್ಞಾನ ದಿನವಾಗಿದೆ,
ಭಕ್ತಿಯು ರಾತ್ರಿಯಾಗಿದೆ ನಂತರ ಕೊನೆಯಲ್ಲಿ ದಿನವು ಯಾವಾಗ ಬರುತ್ತದೆ? ಯಾವಾಗ ಭಕ್ತಿಯ ವೈರಾಗ್ಯವು
ಬರುವುದೋ ಆಗ. ನಿಮ್ಮ ಬುದ್ಧಿಯಲ್ಲಿ ಇದು ಇರಬೇಕು - ಜ್ಞಾನ ಮತ್ತು ವಿಜ್ಞಾನವಾಗಿದೆಯಲ್ಲವೆ! ಈಗ
ನೀವು ಜ್ಞಾನದ ವಿದ್ಯೆಯನ್ನು ಓದುತ್ತಿದ್ದೀರಿ ನಂತರ ಸತ್ಯಯುಗ-ತ್ರೇತಾಯುಗದಲ್ಲಿ ನಿಮಗೆ ಜ್ಞಾನದ
ಪ್ರಾಲಬ್ಧವು ಸಿಗುತ್ತದೆ. ಜ್ಞಾನವನ್ನು ತಂದೆಯು ಈಗ ಕೊಡುತ್ತಾರೆ, ಇದರ ಪ್ರಾಲಬ್ಧವು
ಸತ್ಯಯುಗದಲ್ಲಿ ಇರುತ್ತದೆ. ಇವು ತಿಳಿದುಕೊಳ್ಳುವ ಮಾತುಗಳಾಗಿವೆಯಲ್ಲವೆ. ಈಗ ತಂದೆಯು ನಿಮಗೆ
ಜ್ಞಾನವನ್ನು ಕೊಡುತ್ತಿದ್ದಾರೆ. ನಿಮಗೆ ತಿಳಿದಿದೆ - ನೀವು ಈ ಜ್ಞಾನದಿಂದ ದೂರ ವಿಜ್ಞಾನ ಅಂದರೆ
ತಮ್ಮ ಮನೆ ಶಾಂತಿಧಾಮದಲ್ಲಿ ಹೋಗುತ್ತೀರಿ ಅದಕ್ಕೆ ಜ್ಞಾನವೆಂದೂ ಹೇಳುವುದಿಲ್ಲ, ಭಕ್ತಿಯೆಂದೂ
ಹೇಳುವುದಿಲ್ಲ, ಇದಕ್ಕೆ ವಿಜ್ಞಾನ (ಯೋಗ) ವೆಂದು ಹೇಳಲಾಗುತ್ತದೆ. ಜ್ಞಾನದಿಂದ ದೂರ ಶಾಂತಿಧಾಮದಲ್ಲಿ
ಹೊರಟುಹೋಗುತ್ತೀರಿ - ಈ ಜ್ಞಾನವೆಲ್ಲವನ್ನೂ ಬುದ್ಧಿಯಲ್ಲಿಟ್ಟುಕೊಳ್ಳಬೇಕಾಗಿದೆ. ತಂದೆಯು
ಜ್ಞಾನವನ್ನು ಏತಕ್ಕಾಗಿ ಕೊಡುತ್ತಾರೆ? ಭವಿಷ್ಯ ಹೊಸಪ್ರಪಂಚಕ್ಕಾಗಿ ಕೊಡುತ್ತಾರೆ. ಹೊಸ
ಪ್ರಪಂಚದಲ್ಲಿ ಹೋಗುತ್ತೀರೆಂದರೆ ಅದಕ್ಕೆ ಮೊದಲು ತಮ್ಮ ಮನೆಗೆ ಹೋಗುತ್ತೀರಿ. ಮುಕ್ತಿಧಾಮದಲ್ಲಿ
ಹೋಗಬೇಕಾಗಿದೆ. ಆತ್ಮಗಳು ಎಲ್ಲಿನ ನಿವಾಸಿಗಳಾಗಿದ್ದೀರೋ ಅಲ್ಲಿಗೆ ಅವಶ್ಯವಾಗಿ ಹೋಗುತ್ತೀರಲ್ಲವೆ!
ಈ ಹೊಸ-ಹೊಸ ಮಾತುಗಳನ್ನು ನೀವೇ ಕೇಳುತ್ತೀರಿ, ಮತ್ತ್ಯಾರೂ ಅರಿತುಕೊಳ್ಳಲು ಸಾಧ್ಯವಿಲ್ಲ. ನಿಮಗೆ
ತಿಳಿದಿದೆ - ನಾವಾತ್ಮಗಳು ಆತ್ಮಿಕ ತಂದೆಯ ಆತ್ಮಿಕ ಮಕ್ಕಳಾಗಿದ್ದೇವೆ. ಆತ್ಮಿಕ ಮಕ್ಕಳಿಗೆ
ಅವಶ್ಯವಾಗಿ ಆತ್ಮಿಕ ತಂದೆಯು ಬೇಕು. ಆತ್ಮಿಕ ತಂದೆ ಮತ್ತು ಆತ್ಮಿಕ ಮಕ್ಕಳಿಗೆ ಒಬ್ಬರೇ ಆತ್ಮಿಕ
ತಂದೆಯಾಗಿದ್ದಾರೆ. ಅವರು ಬಂದು ಜ್ಞಾನವನ್ನು ಕೊಡುತ್ತಾರೆ. ತಂದೆಯು ಹೇಗೆ ಬರುತ್ತಾರೆಂಬುದನ್ನೂ
ಸಹ ತಿಳಿಸಿದ್ದಾರೆ. ತಂದೆಯು ಹೇಳುತ್ತಾರೆ - ನಾನೂ ಸಹ ಪ್ರಕೃತಿ (ಶರೀರ) ಯ ಧಾರಣೆ
ಮಾಡಬೇಕಾಗುತ್ತದೆ. ಈಗ ನೀವು ತಂದೆಯಿಂದಲೇ ಕೇಳಬೇಕಾಗಿದೆ. ತಂದೆಯ ವಿನಃ ಮತ್ತ್ಯಾರಿಂದಲೂ
ಕೇಳುವಂತಿಲ್ಲ. ಮಕ್ಕಳು ಕೇಳಿ ಮತ್ತೆ ತಮ್ಮ ಸಹೋದರರಿಗೆ ತಿಳಿಸುತ್ತೀರಿ. ಏನಾದರೊಂದು ಅವಶ್ಯವಾಗಿ
ತಿಳಿಸುತ್ತಾರೆ. ತಮ್ಮನ್ನು ಆತ್ಮನೆಂದು ತಿಳಿಯಿರಿ, ತಂದೆಯನ್ನು ನೆನಪು ಮಾಡಿ ಏಕೆಂದರೆ ಅವರೇ
ಪತಿತ-ಪಾವನನಾಗಿದ್ದಾರೆ. ಬುದ್ಧಿಯು ಅಲ್ಲಿಗೆ ಹೊರಟುಹೋಗುತ್ತದೆ. ಮಕ್ಕಳಿಗೆ ಇದನ್ನು
ತಿಳಿಸುವುದರಿಂದ ಅರ್ಥಮಾಡಿಕೊಳ್ಳುತ್ತಾರೆ ಏಕೆಂದರೆ ಮೊದಲು ತಿಳುವಳಿಕೆಯಿಲ್ಲದವರಾಗಿದ್ದಾರೆ.
ಭಕ್ತಿಮಾರ್ಗದಲ್ಲಿ ಬುದ್ಧಿಹೀನತೆಯಿಂದ ರಾವಣನ ವಶದಲ್ಲಿ ಬರುವುದರಿಂದ ಏನೇನು ಮಾಡುತ್ತಾರೆ! ಎಷ್ಟು
ಪತಿತರಾಗಿಬಿಡುತ್ತಾರೆ. ಮದ್ಯಪಾನ ಮಾಡುವುದರಿಂದ ಏನಾಗಿಬಿಡುತ್ತಾರೆ? ಮದ್ಯಪಾನವು ಕೊಳಕನ್ನು ಇನ್ನೂ
ಹರಡಿಸುತ್ತದೆ. ನಾವು ಬೇಹದ್ದಿನ ತಂದೆಯಿಂದ ಆಸ್ತಿಯನ್ನು ತೆಗೆದುಕೊಳ್ಳಬೇಕು, ಅದನ್ನು
ಕಲ್ಪ-ಕಲ್ಪವೂ ತೆಗೆದುಕೊಳ್ಳುತ್ತಾ ಬಂದಿದ್ದೇವೆಂದು ನಿಮ್ಮ ಬುದ್ಧಿಯಲ್ಲಿದೆ ಆದ್ದರಿಂದ
ದೈವೀಗುಣಗಳನ್ನೂ ಸಹ ಅವಶ್ಯವಾಗಿ ಧಾರಣೆ ಮಾಡಬೇಕಾಗಿದೆ. ಕೃಷ್ಣನ ದೈವೀಗುಣಗಳ ಎಷ್ಟೊಂದು ಮಹಿಮೆಯಿದೆ!
ವೈಕುಂಠದ ಮಾಲೀಕನು ಎಷ್ಟೊಂದು ಮಧುರನಾಗಿದ್ದಾನೆ! ಈಗ ಕೃಷ್ಣನ ರಾಜಧಾನಿಯೆಂದು ಹೇಳುವುದಿಲ್ಲ.
ವಿಷ್ಣು ಅಥವಾ ಲಕ್ಷ್ಮಿ-ನಾರಾಯಣರ ರಾಜಧಾನಿಯೆಂದು ಹೇಳುತ್ತಾರೆ. ಈಗ ನೀವು ಮಕ್ಕಳಿಗೆ ತಿಳಿದಿದೆ -
ತಂದೆಯೇ ಸತ್ಯಯುಗೀ ರಾಜ್ಯದ ರಾಜಧಾನಿಯನ್ನು ಸ್ಥಾಪನೆ ಮಾಡುತ್ತಾರೆ. ಭಲೆ ಈ ಚಿತ್ರಗಳಿಲ್ಲದಿದ್ದರೂ
ಸಹ ತಿಳಿಸಬಹುದು. ಮಂದಿರಗಳಂತೂ ಬಹಳಷ್ಟು ನಿರ್ಮಿತವಾಗುತ್ತಿರುತ್ತವೆ. ಯಾರಲ್ಲಿ ಜ್ಞಾನವಿದೆಯೋ
ಅವರು ಅನ್ಯರ ಕಲ್ಯಾಣವನ್ನು ಮಾಡಲು, ತಮ್ಮ ಸಮಾನರನ್ನಾಗಿ ಮಾಡಿಕೊಳ್ಳಲು ಓಡುತ್ತಿರುತ್ತಾರೆ. ನಾವು
ಎಷ್ಟು ಮಂದಿಗೆ ಜ್ಞಾನವನ್ನು ತಿಳಿಸಿದ್ದೇವೆ ಎಂದು ತಮ್ಮನ್ನು ನೋಡಿಕೊಳ್ಳಬೇಕಾಗಿದೆ. ಕೆಲವರಿಗಂತೂ
ಜ್ಞಾನದ ಬಾಣವು ಬಹಳ ಬೇಗನೆ ನಾಟುತ್ತದೆ. ನಮಗೆ ಕುಮಾರಿಯರು ಜ್ಞಾನದ ಬಾಣವನ್ನು ಹೊಡೆದರೆಂದು
ಭೀಷ್ಮ ಪಿತಾಮಹ ಮೊದಲಾದವರೂ ಸಹ ಹೇಳಿದ್ದಾರಲ್ಲವೆ. ಇವರೆಲ್ಲರೂ ಪವಿತ್ರ
ಕುಮಾರ-ಕುಮಾರಿಯರಾಗಿದ್ದಾರೆ ಅರ್ಥಾತ್ ಮಕ್ಕಳಾಗಿದ್ದಾರೆ. ನೀವೆಲ್ಲರೂ ಮಕ್ಕಳಾಗಿದ್ದೀರಿ
ಆದ್ದರಿಂದಲೇ ನಾವು ಬ್ರಹ್ಮನ ಮಕ್ಕಳು ಕುಮಾರ-ಕುಮಾರಿಯರು ಸಹೋದರ-ಸಹೋದರರೆಂದು ಹೇಳುತ್ತೀರಿ. ಇದು
ಪವಿತ್ರ ಸಂಬಂಧವಾಗುತ್ತದೆ, ದತ್ತುಮಕ್ಕಳಾಗಿದ್ದೀರಲ್ಲವೆ. ತಂದೆಯು ದತ್ತು ಮಾಡಿಕೊಂಡಿದ್ದಾರೆ,
ಶಿವತಂದೆಯು ಪ್ರಜಾಪಿತ ಬ್ರಹ್ಮಾರವರ ಮೂಲಕ ದತ್ತು ಮಾಡಿಕೊಂಡಿದ್ದಾರೆ. ವಾಸ್ತವದಲ್ಲಿ ದತ್ತು ಎಂಬ
ಶಬ್ಧವನ್ನು ಹೇಳುವುದಿಲ್ಲ. ಶಿವತಂದೆಯ ಮಕ್ಕಳಂತೂ ಆಗಿಯೇ ಇದ್ದೀರಿ, ಎಲ್ಲರೂ ನನ್ನನ್ನು ಶಿವತಂದೆಯೆ
ಬನ್ನಿ ಎಂದು ಕರೆಯುತ್ತಾರೆ ಆದರೆ ಸ್ವಲ್ಪವೂ ತಿಳುವಳಿಕೆಯಿಲ್ಲ, ಎಲ್ಲಾ ಆತ್ಮಗಳೂ ಶರೀರಧಾರಣೆ ಮಾಡಿ
ಪಾತ್ರವನ್ನಭಿನಯಿಸುತ್ತಾರೆ ಅಂದಾಗ ಶಿವತಂದೆಯೂ ಸಹ ಅವಶ್ಯವಾಗಿ ಶರೀರದ ಮೂಲಕ
ಪಾತ್ರವನ್ನಭಿನಯಿಸುತ್ತಾರಲ್ಲವೆ. ಶಿವತಂದೆಯು ಪಾತ್ರವನ್ನಭಿನಯಿಸದಿದ್ದರೆ ಅವರಿಂದ ಯಾವುದೇ
ಪ್ರಯೋಜನವಿಲ್ಲವೆಂದಾಗುತ್ತದೆ, ಬೆಲೆಯೇ ಇರುವುದಿಲ್ಲ. ಯಾವಾಗ ಅವರು ಇಡೀ ಪ್ರಪಂಚಕ್ಕೆ
ಸದ್ಗತಿಯನ್ನು ನೀಡುತ್ತಾರೆಯೋ ಆಗಲೇ ಅವರಿಗೆ ಬೆಲೆಯಿರುತ್ತದೆ ಆದ್ದರಿಂದಲೇ ಅವರ ಮಹಿಮೆಯನ್ನು
ಭಕ್ತಿಯಲ್ಲಿ ಹಾಡುತ್ತಾರೆ. ಸದ್ಗತಿಯಾದಮೇಲೆ ಮತ್ತೆ ತಂದೆಯನ್ನು ನೆನಪು ಮಾಡುವ ಅವಶ್ಯಕತೆಯೇ
ಇರುವುದಿಲ್ಲ. ತಂದೆಯನ್ನು ಅವರು ಕೇವಲ ಭಗವಂತನೆಂದು ಹೇಳುತ್ತಾರೆಂದರೆ ಅಲ್ಲಿ ಶಿಕ್ಷಕನ ಸಂಬಂಧವೇ
ಹೊರಟುಹೋಗುತ್ತದೆ. ಪರಮಪಿತ ಪರಮಾತ್ಮನು ಪಾವನ ಮಾಡುವವರಾಗಿದ್ದಾರೆ ಎಂಬ ಮಾತು
ನಾಮಮಾತ್ರವಾಗಿಬಿಡುತ್ತದೆ. ಅವರು ಸದ್ಗತಿ ಮಾಡುವವರೆಂದು ಹೇಳುತ್ತಿಲ್ಲ, ಸರ್ವರ ಸದ್ಗತಿದಾತನು
ಒಬ್ಬರೇ ಆಗಿದ್ದಾರೆಂದು ಭಲೆ ಗಾಯನದಲ್ಲಿ ಬರುತ್ತದೆ ಆದರೆ ಅರ್ಥವಿಲ್ಲದೆ ಹೇಳಿಬಿಡುತ್ತಾರೆ. ಈಗ
ನೀವು ಏನೇ ಹೇಳಿದರೂ ಅರ್ಥ ಸಹಿತವಾಗಿ ಹೇಳುತ್ತೀರಿ. ನಿಮಗೆ ತಿಳಿದಿದೆ, ಭಕ್ತಿಯು ರಾತ್ರಿಯಾಗಿದೆ.
ಜ್ಞಾನ ದಿನವಾಗಿದೆ. ಜ್ಞಾನ ಮತ್ತು ಭಕ್ತಿಯು ಬೇರೆ-ಬೇರೆಯಾಗಿದೆ. ದಿನಕ್ಕೂ ನಿಗಧಿತ ಸಮಯವಿರುತ್ತದೆ,
ಭಕ್ತಿಗೂ ಇರುತ್ತದೆ. ಇದು ಬೇಹದ್ದಿನ ಮಾತಾಗಿದೆ. ನೀವು ಮಕ್ಕಳಿಗೆ ಬೇಹದ್ದಿನ ಜ್ಞಾನವು ಸಿಕ್ಕಿದೆ,
ಅರ್ಧಕಲ್ಪ ದಿನ-ಅರ್ಧಕಲ್ಪ ರಾತ್ರಿಯಾಗಿದೆ. ತಂದೆಯು ತಿಳಿಸುತ್ತಾರೆ - ನಾನು ರಾತ್ರಿಯನ್ನು
ದಿನವನ್ನಾಗಿ ಮಾಡಲು ಬರುತ್ತೇನೆ.
ನೀವು
ತಿಳಿದುಕೊಂಡಿದ್ದೀರಿ - ಅರ್ಧಕಲ್ಪ ರಾವಣರಾಜ್ಯವಾಗಿದೆ, ಅದರಲ್ಲಿ ಅನೇಕಪ್ರಕಾರದ ದುಃಖವಿದೆ. ಮತ್ತೆ
ತಂದೆಯು ಹೊಸಪ್ರಪಂಚದ ಸ್ಥಾಪನೆ ಮಾಡುತ್ತಾರೆಂದರೆ ಅದರಲ್ಲಿ ಸುಖವೇ ಸುಖವು ಸಿಗುತ್ತದೆ. ಇದು ಸುಖ
ಮತ್ತು ದುಃಖದ ಆಟವೆಂದು ಹೇಳಲಾಗುತ್ತದೆ. ಸುಖವೆಂದರೆ ರಾಮ, ದುಃಖವೆಂದರೆ ರಾವಣ. ರಾವಣನ ಮೇಲೆ
ಜಯಗಳಿಸುತ್ತೀರಿ, ಮತ್ತೆ ರಾಮರಾಜ್ಯವು ಬರುತ್ತದೆ. ಇನ್ನರ್ಧಕಲ್ಪದ ನಂತರ ರಾವಣನು ರಾಮರಾಜ್ಯದ ಮೇಲೆ
ಜಯಗಳಿಸಿ ರಾಜ್ಯ ಮಾಡುತ್ತಾನೆ. ನೀವೀಗ ಮಾಯೆಯ ಮೇಲೆ ಗೆಲ್ಲುತ್ತೀರಿ. ಪ್ರತಿಯೊಂದು ಅಕ್ಷರವನ್ನು
ಅರ್ಥಸಹಿತವಾಗಿ ಹೇಳುತ್ತೀರಿ. ನಿಮ್ಮದು ಈಶ್ವರೀಯ ಭಾಷೆಯಾಗಿದೆ, ಈಶ್ವರನು ಹೇಗೆ ಮಾತನಾಡುತ್ತಾರೆ
ಎಂಬುದನ್ನು ಯಾರೂ ಅರಿತುಕೊಳ್ಳುವುದಿಲ್ಲ. ನಿಮಗೆ ತಿಳಿದಿದೆ - ಇದು ಪರಮಾತ್ಮನ ಭಾಷೆಯಾಗಿದೆ
ಏಕೆಂದರೆ ಪರಮಾತ್ಮನು ಜ್ಞಾನಪೂರ್ಣನಾಗಿದ್ದಾರೆ. ಅವರು ಜ್ಞಾನಸಾಗರ, ಜ್ಞಾನಪೂರ್ಣನೆಂದು
ಗಾಯನವಾಗುತ್ತದೆಯೆಂದರೆ ಅವಶ್ಯವಾಗಿ ಯಾರಿಗಾದರೂ ಜ್ಞಾನವನ್ನು ಕೊಡುತ್ತಾರಲ್ಲವೆ. ಈಗ ನೀವು ತಂದೆಯು
ಹೇಗೆ ಜ್ಞಾನವನ್ನು ಕೊಡುತ್ತಾರೆಂಬುದನ್ನು ತಿಳಿದುಕೊಳ್ಳುತ್ತೀರಿ. ತಮ್ಮ ಪರಿಚಯವನ್ನೂ ಕೊಡುತ್ತಾರೆ
ಮತ್ತು ಸೃಷ್ಟಿಯ ಜ್ಞಾನವನ್ನೂ ಕೊಡುತ್ತಾರೆ. ಯಾವ ಜ್ಞಾನವನ್ನು ತೆಗೆದುಕೊಳ್ಳುವುದರಿಂದ ನಾವು
ಚಕ್ರವರ್ತಿ ರಾಜರಾಗುತ್ತೇವೆ. ಸ್ವದರ್ಶನಚಕ್ರವಿದೆಯಲ್ಲವೆ! ನೆನಪು ಮಾಡುವುದರಿಂದ ನಮ್ಮ ಪಾಪಗಳು
ತುಂಡಾಗುತ್ತಾ ಹೋಗುತ್ತವೆ. ನಿಮ್ಮದು ಇದು ನೆನಪಿನ ಅಹಿಂಸಕ ಚಕ್ರವಾಗಿದೆ. ಅದು ಹಿಂಸಾಚಕ್ರ,
ತಲೆಯನ್ನು ಕತ್ತರಿಸುವಂತಹದ್ದಾಗಿದೆ. ಆ ಅಜ್ಞಾನಿ ಮನುಷ್ಯರು ಪರಸ್ಪರ ಒಬ್ಬರು ಇನ್ನೊಬ್ಬರ
ತಲೆಯನ್ನು ಕತ್ತರಿಸುತ್ತಿರುತ್ತಾರೆ, ನೀವು ಈ ಸ್ವದರ್ಶನಚಕ್ರವನ್ನು ಅರಿತುಕೊಳ್ಳುವುದರಿಂದ
ಚಕ್ರಾಧಿಪತ್ಯವನ್ನು ಪಡೆಯುತ್ತೀರಿ. ಕಾಮಮಹಾಶತ್ರುವಾಗಿದೆ ಇದರಿಂದ ಆದಿ-ಮಧ್ಯ-ಅಂತ್ಯ ದುಃಖವೇ
ಸಿಗುತ್ತದೆ, ಅದು ದುಃಖದ ಚಕ್ರವಾಗಿದೆ. ತಂದೆಯು ನಿಮಗೆ ಈ ಚಕ್ರದ ಜ್ಞಾನವನ್ನು ತಿಳಿಸುತ್ತಾರೆ.
ಸ್ವದರ್ಶನಚಕ್ರಧಾರಿಗಳನ್ನಾಗಿ ಮಾಡಿಬಿಡುತ್ತಾರೆ. ಶಾಸ್ತ್ರಗಳಲ್ಲಂತೂ ಎಷ್ಟೊಂದು ಕಥೆಗಳನ್ನು
ಮಾಡಿಬಿಟ್ಟಿದ್ದಾರೆ. ನೀವೀಗ ಎಲ್ಲವನ್ನೂ ಮರೆಯಬೇಕಾಗುತ್ತದೆ ಕೇವಲ ತಂದೆಯೊಬ್ಬರನ್ನೇ ನೆನಪು
ಮಾಡಬೇಕಾಗಿದೆ ಏಕೆಂದರೆ ತಂದೆಯಿಂದಲೇ ಸ್ವರ್ಗದ ಆಸ್ತಿಯನ್ನು ಪಡೆಯುತ್ತೀರಿ. ತಂದೆಯನ್ನು ನೆನಪು
ಮಾಡಿ ಆಸ್ತಿಯನ್ನು ತೆಗೆದುಕೊಳ್ಳಬೇಕಾಗಿದೆ. ಇದು ಎಷ್ಟು ಸಹಜವಾಗಿದೆ! ಬೇಹದ್ದಿನ ತಂದೆಯು
ಹೊಸಪ್ರಪಂಚದ ಸ್ಥಾಪನೆ ಮಾಡುತ್ತಾರೆ ಅಂದಾಗ ಆಸ್ತಿಯನ್ನು ತೆಗೆದುಕೊಳ್ಳುವುದಕ್ಕಾಗಿಯೇ ನೆನಪು
ಮಾಡುತ್ತೀರಿ. ಇದು ಮನ್ಮನಾಭವ, ಮಧ್ಯಾಜೀಭವ ಆಗಿದೆ. ತಂದೆಯನ್ನು ನೆನಪು ಮಾಡುತ್ತಾ ಮಕ್ಕಳಿಗೆ
ಖುಷಿಯ ನಶೆಯೇರಿರಬೇಕು. ನಾವು ಬೇಹದ್ದಿನ ತಂದೆಯ ಮಕ್ಕಳಾಗಿದ್ದೇವೆ. ತಂದೆಯು ಸ್ವರ್ಗದ ಸ್ಥಾಪನೆ
ಮಾಡುತ್ತಾರೆ. ನಾವು ಹಿಂದೆಯೂ ಮಾಲೀಕರಾಗಿದ್ದೆವು, ಈಗ ಅವಶ್ಯವಾಗಿ ಮತ್ತೆ ಆಗುತ್ತೇವೆ. ಮಕ್ಕಳೇ
ನರಕವಾಸಿಗಳಾಗುತ್ತೀರಿ. ಸತೋಪ್ರಧಾನರಾಗಿದ್ದಿರಿ ಈಗ ತಮೋಪ್ರಧಾನರಾಗಿದ್ದೀರಿ. ಭಕ್ತಿಮಾರ್ಗದಲ್ಲಿಯೂ
ಸಹ ನೀವೇ ಬಂದಿದ್ದೀರಿ. ಪೂರ್ಣಚಕ್ರವನ್ನು ಸುತ್ತಿದ್ದೀರಿ. ನಾವು ಭಾರತವಾಸಿಗಳೇ
ಸೂರ್ಯವಂಶಿಯರಾಗಿದ್ದೆವು ನಂತರ ಚಂದ್ರವಂಶಿ, ವೈಶ್ಯವಂಶಿ...... ಆಗಿ ಕೆಳಗಿಳಿದಿದ್ದೇವೆ.
ಭಾರತವಾಸಿಗಳೇ ದೇವಿ-ದೇವತೆಗಳಾಗಿದ್ದೆವು ಮತ್ತೆ ನಾವೇ ಇಳಿದಿದ್ದೇವೆ. ನಿಮಗೆ ಈಗ ಎಲ್ಲವೂ
ಅರ್ಥವಾಗುತ್ತದೆ. ವಾಮಮಾರ್ಗದಲ್ಲಿ ಹೋಗುವುದರಿಂದಲೇ ಎಷ್ಟೊಂದು ಪತಿತರಾಗಿಬಿಡುತ್ತೀರಿ. ದೇವತೆಗಳು
ಸತ್ಯಯುಗದ ಮಾಲೀಕರಾಗಿದ್ದಾಗ ದೈವೀ ಗುಣವಂತ ಮನುಷ್ಯರಾಗಿದ್ದರು, ಈಗ ಆಸುರೀ
ಗುಣವುಳ್ಳವರಾಗಿಬಿಟ್ಟಿದ್ದಾರೆ ಮತ್ತ್ಯಾವುದೇ ಅಂತರವಿಲ್ಲ. ಸೊಂಡಿಲಿರುವ ಅಥವಾ ಬಾಲವುಳ್ಳಂತಹ
ಮನುಷ್ಯರಿರುವುದಿಲ್ಲ. ಕೇವಲ ಇವು ದೇವತೆಗಳ ಸಾಕ್ಷಿಯಾಗಿವೆ. ಸ್ವರ್ಗವು ಪ್ರಾಯಲೋಪವಾಗಿಬಿಟ್ಟಿದೆ
ಕೇವಲ ಈ ಚಿತ್ರಗಳು ಸಾಕ್ಷಿಗಾಗಿ ಇದೆ. ಚಂದ್ರವಂಶಿಯರ ಸಾಕ್ಷಿಗಳೂ ಇವೆ, ಈಗ ನೀವು ಮಾಯೆಯ ಮೇಲೆ
ಜಯಗಳಿಸುವುದಕ್ಕಾಗಿ ಯುದ್ಧ ಮಾಡುತ್ತೀರಿ. ಯುದ್ಧ ಮಾಡುತ್ತಾ-ಮಾಡುತ್ತಾ
ಅನುತ್ತೀರ್ಣರಾಗಿಬಿಡುತ್ತಾರೆ ಆದ್ದರಿಂದ ಅದರ ಚಿಹ್ನೆಯಾಗಿ ಬಿಲ್ಲು-ಬಾಣವನ್ನು ತೋರಿಸಿದ್ದಾರೆ.
ಭಾರತವಾಸಿಗಳು ವಾಸ್ತವದಲ್ಲಿ ದೇವಿ-ದೇವತಾ ಮನೆತನದವರಾಗಿದ್ದೀರಿ ಇಲ್ಲವೆಂದರೆ ಯಾವ ಮನೆತನದವರೆಂದು
ಹೇಳುವುದು! ಆದರೆ ಭಾರತವಾಸಿಗಳಿಗೆ ನಿಮ್ಮ ಮನೆತನದ ಅರಿವಿಲ್ಲದ ಕಾರಣ ಹಿಂದೂಗಳೆಂದು
ಹೇಳಿಕೊಳ್ಳುತ್ತಾರೆ. ವಾಸ್ತವದಲ್ಲಿ ನಿಮ್ಮದು ಒಂದೇ ಮನೆತನವಾಗಿದೆ. ಭಾರತದಲ್ಲಿ ಎಲ್ಲರೂ ದೇವತಾ
ಮನೆತನದವರಾಗಿದ್ದಾರೆ, ಇದನ್ನು ಬೇಹದ್ದಿನ ತಂದೆಯೇ ಸ್ಥಾಪನೆ ಮಾಡುತ್ತಾರೆ. ಭಾರತದ ಮೂಲಶಾಸ್ತ್ರವೂ
ಒಂದೇ ಆಗಿದೆ. ದೈವೀ ರಾಜಧಾನಿಯ ಸ್ಥಾಪನೆಯಾಗುತ್ತದೆ ಮತ್ತೆ ಅದರಲ್ಲಿ ಭಿನ್ನ-ಭಿನ್ನ
ಶಾಖೆಗಳಾಗಿಬಿಡುತ್ತವೆ. ತಂದೆಯು ದೇವಿ-ದೇವತಾಧರ್ಮವನ್ನು ಸ್ಥಾಪನೆ ಮಾಡುತ್ತಾರೆ. ಮುಖ್ಯವಾದುದು
ನಾಲ್ಕುಧರ್ಮಗಳಾಗಿವೆ. ಅದರಲ್ಲಿ ದೇವಿ-ದೇವತಾಧರ್ಮವೇ ತಳಪಾಯವಾಗಿದೆ. ಎಲ್ಲರೂ ಮುಕ್ತಿಧಾಮದ
ನಿವಾಸಿಗಳೇ ಆಗಿದ್ದಾರೆ ನಂತರ ನೀವು ತಮ್ಮ ದೇವತೆಗಳ ಶಾಖೆಯಲ್ಲಿ ಹೊರಟುಹೋಗುತ್ತೀರಿ. ಭಾರತದ
ಸರಹದ್ದು (ಎಲ್ಲೆ) ಒಂದೇ ಆಗಿದೆ ಮತ್ತ್ಯಾವುದೇ ಧರ್ಮಕ್ಕಿಲ್ಲ. ಇವರು ಮೂಲತಃ
ದೇವತಾಧರ್ಮದವರಾಗಿದ್ದಾರೆ. ಮತ್ತೆ ಅದರಿಂದ ಅನ್ಯ ನಾಟಕದ ಯುಕ್ತಿಯನುಸಾರ ಅನ್ಯಧರ್ಮಗಳು ಬಂದಿವೆ.
ಭಾರತದ ಮೂಲಧರ್ಮವು ದೇವತಾಧರ್ಮವಾಗಿದೆ. ಅದನ್ನು ಸ್ಥಾಪನೆ ಮಾಡುವವರು ತಂದೆಯಾಗಿದ್ದಾರೆ ನಂತರ
ಹೊಸ-ಹೊಸ ಎಲೆಗಳು ಹೊರಬರುತ್ತವೆ. ಇದು ಈಶ್ವರೀಯ ವೃಕ್ಷವಾಗಿದೆ. ತಂದೆಯು ತಿಳಿಸುತ್ತಾರೆ - ನಾನು
ಈ ವೃಕ್ಷದ ಬೀಜರೂಪನಾಗಿದ್ದೇನೆ, ದೇವತಾಧರ್ಮವು ಬುನಾದಿಯಾಗಿದೆ, ಮತ್ತೆ ಅದರಿಂದ ಶಾಖೆಗಳು
ಹೊರಡುತ್ತವೆ. ಮುಖ್ಯಮಾತೇನೆಂದರೆ ನಾವೆಲ್ಲಾ ಆತ್ಮಗಳು ಸಹೋದರರಾಗಿದ್ದೇವೆ, ಎಲ್ಲಾ ಆತ್ಮಗಳ ತಂದೆಯು
ಒಬ್ಬರೇ ಆಗಿದ್ದಾರೆ. ಎಲ್ಲರೂ ಅವರನ್ನೇ ನೆನಪು ಮಾಡುತ್ತಾರೆ. ಈಗ ತಂದೆಯು ತಿಳಿಸುತ್ತಾರೆ - ನೀವು
ಈ ಕಣ್ಣುಗಳಿಂದ ಏನೆಲ್ಲವನ್ನೂ ನೋಡುತ್ತಿದ್ದೀರೋ ಎಲ್ಲವನ್ನೂ ಮರೆಯಬೇಕಾಗಿದೆ. ಇದು ಬೇಹದ್ದಿನ
ವೈರಾಗ್ಯವಾಗಿದೆ. ಅವರದು ಹದ್ದಿನ ವೈರಾಗ್ಯವಾಗಿದೆ. ಕೇವಲ ಗೃಹಸ್ಥದಿಂದ ವೈರಾಗ್ಯವು
ಬಂದುಬಿಡುತ್ತದೆ. ನಿಮಗಂತೂ ಇಡೀ ಹಳೆಯ ಪ್ರಪಂಚದೊಂದಿಗೆ ವೈರಾಗ್ಯವಿದೆ. ಭಕ್ತಿಯ ನಂತರ ಹಳೆಯ
ಪ್ರಪಂಚದ ವೈರಾಗ್ಯವಾಗಿದೆ ಮತ್ತೆ ನಾವು ಶಾಂತಿಧಾಮದ ಮೂಲಕ ಹೊಸಪ್ರಪಂಚದಲ್ಲಿ ಹೋಗುತ್ತೇವೆ. ತಂದೆಯೂ
ತಿಳಿಸುತ್ತಾರೆ - ಈ ಹಳೆಯ ಪ್ರಪಂಚವು ಭಸ್ಮವಾಗಲಿದೆ. ಈ ಹಳೆಯ ಪ್ರಪಂಚದೊಂದಿಗೆ ಈಗ
ಮನಸ್ಸನ್ನಿಡಬಾರದು. ಯೋಗ್ಯರಾಗುವವರೆಗೆ ಇಲ್ಲಿಯೇ ಇರಬೇಕಾಗಿದೆ. ಎಲ್ಲಾ ಲೆಕ್ಕಾಚಾರಗಳನ್ನು
ಸಮಾಪ್ತಿ ಮಾಡಿಕೊಳ್ಳಬೇಕಾಗಿದೆ.
ನೀವು ಅರ್ಧಕಲ್ಪಕ್ಕಾಗಿ
ಸುಖವನ್ನು ಜಮಾ ಮಾಡಿಕೊಳ್ಳುತ್ತೀರಿ. ಅದರ ಹೆಸರೇ ಅಗಿದೆ - ಶಾಂತಿಧಾಮ, ಸುಖಧಾಮ. ಮೊದಲಿಗೆ
ಸುಖವಿರುತ್ತದೆ ನಂತರ ದುಃಖವು ಬರುತ್ತದೆ. ತಂದೆಯು ತಿಳಿಸಿದ್ದಾರೆ - ಯಾರೆಲ್ಲಾ ಹೊಸ-ಹೊಸ ಆತ್ಮಗಳು
ಮೇಲಿನಿಂದ ಬರುತ್ತಾರೆಯೋ ಅಂದರೆ ಹೇಗೆ ಕ್ರಿಸ್ತನ ಆತ್ಮವು ಬಂದಿತು. ಅವರಿಗೆ ಮೊದಲು
ದುಃಖವಾಗುವುದಿಲ್ಲ ಅಂದರೆ ಆಟವೇ ಮೊದಲು ಸುಖ ನಂತರ ದುಃಖದ್ದಾಗಿದೆ. ಹೊಸ-ಹೊಸದಾಗಿ ಬಂದವರು
ಸತೋಪ್ರಧಾನದವರಾಗಿದ್ದಾರೆ. ಹೇಗೆ ನಿಮ್ಮ ಸುಖದ ಲೆಕ್ಕವು ಹೆಚ್ಚಾಗಿದೆಯೋ ಹಾಗೆಯೇ ಎಲ್ಲರ ದುಃಖದ
ಲೆಕ್ಕವು ಹೆಚ್ಚಾಗಿದೆ. ಇದೆಲ್ಲವನ್ನೂ ಬುದ್ಧಿಯಿಂದ ಕೆಲಸ ತೆಗೆದುಕೊಳ್ಳಬೇಕಾಗಿದೆ. ತಂದೆಯು
ಕುಳಿತು ಆತ್ಮಗಳಿಗೆ ತಿಳಿಸುತ್ತಾರೆ ಮತ್ತೆ ನೀವು ಅನ್ಯ ಆತ್ಮಗಳಿಗೆ ತಿಳಿಸುತ್ತೀರಿ. ತಂದೆಯು
ಹೇಳುತ್ತಾರೆ - ನಾನು ಈ ಶರೀರವನ್ನು ಧಾರಣೆ ಮಾಡಿದ್ದೇನೆ. ಬಹಳ ಜನ್ಮಗಳ ಅಂತಿಮದಲ್ಲಿ ಅರ್ಥಾತ್
ತಮೋಪ್ರಧಾನ ಶರೀರದಲ್ಲಿ ನಾನು ಪ್ರವೇಶ ಮಾಡುತ್ತೇನೆ, ಮತ್ತೆ ಅವರೇ (ಬ್ರಹ್ಮಾ) ಮೊದಲನೆ
ನಂಬರಿನಲ್ಲಿ ಹೋಗಬೇಕಾಗಿದೆ. ‘ಫಸ್ಟ್ ಸೋ ಲಾಸ್ಟ್, ಲಾಸ್ಟ್ ಸೋ ಫಸ್ಟ್’ ಇದನ್ನೂ ಸಹ ತಿಳಿಸಬೇಕು.
ಮೊದಲಿಗರ ನಂತರ ಯಾರು? ಮಮ್ಮಾ. ಅವರ ಪಾತ್ರವೂ ಇರಬೇಕು. ಅವರು ಅನೇಕರಿಗೆ ಶಿಕ್ಷಣವನ್ನು
ಕೊಟ್ಟಿದ್ದಾರೆ ಮತ್ತು ನೀವು ಮಕ್ಕಳಲ್ಲಿ ನಂಬರ್ವಾರ್ ಇದ್ದಾರೆ. ಕೆಲವರು ಅನೇಕರಿಗೆ ಶಿಕ್ಷಣವನ್ನು
ಕೊಡುತ್ತಾ ಓದಿಸುತ್ತಾರೆ. ಮತ್ತೆ ನಿಮ್ಮಿಂದ ಓದುವವರೂ ಸಹ ನಿಮಗಿಂತಲೂ ಮೇಲೆ ಹೋಗುವ
ಪ್ರಯತ್ನಪಡುತ್ತಾರೆ. ಬಹಳ ಸೇವಾಕೇಂದ್ರಗಳಲ್ಲಿ ಹೀಗೆ ಓದಿಸುವ ಶಿಕ್ಷಕಿಯರಿಗಿಂತಲೂ ಓದುವವರು ಮುಂದೆ
ಹೊರಟುಹೋಗುತ್ತಾರೆ. ಪ್ರತಿಯೊಬ್ಬರನ್ನೂ ನೋಡುತ್ತೇವೆ, ಎಲ್ಲರ ಚಲನೆಯಿಂದಲೇ
ತಿಳಿದುಬರುತ್ತದೆಯಲ್ಲವೆ. ಮಾಯೆಯು ಕೆಲಕೆಲವರಿಗೆ ಈ ರೀತಿ ಮೂಗನ್ನು ಹಿಡಿಯುತ್ತದೆ, ಒಮ್ಮೆಲೆ
ಸಮಾಪ್ತಿ ಮಾಡಿಬಿಡುತ್ತದೆ. ವಿಕಾರದಲ್ಲಿ ಬೀಳುತ್ತಾರೆ, ಮುಂದೆಹೋದಂತೆ ನೀವು ಅನೇಕರ ಸಮಾಚಾರವನ್ನು
ಕೇಳುತ್ತೀರಿ. ಇದರಿಂದ ಆಶ್ಚರ್ಯಚಕಿತರಾಗುತ್ತೀರಿ, ಇವರು ನಮಗೆ ಜ್ಞಾನವನ್ನು ಹೇಳುತ್ತಿದ್ದರು
ಮತ್ತೆ ಇವರೇ ಹೇಗೆ ಹೊರಟುಹೋದರು. ನಮಗೆ ಪವಿತ್ರರಾಗಿ ಎಂದು ಹೇಳುತ್ತಿದ್ದರು ಮತ್ತೆ ತಾನೇ
ಪತಿತನಾಗಿಬಿಟ್ಟರು ಎಂದು ಆಶ್ಚರ್ಯವಾಗುತ್ತದೆ. ಈ ರೀತಿ ಖಂಡಿತ ತಿಳಿದುಕೊಳ್ಳುತ್ತಾರಲ್ಲವೆ.
ಬಹಳಷ್ಟು ಪತಿತರಾಗಿಬಿಡುತ್ತಾರೆ. ತಂದೆಯು ತಿಳಿಸಿದ್ದಾರೆ - ಒಳ್ಳೊಳ್ಳೆಯ ಮಕ್ಕಳಿಗೂ ಸಹ ಮಾಯೆಯು
ಬಹಳ ಹಿಂದೆ ಬೀಳುತ್ತದೆ. ಹೇಗೆ ನೀವು ಮಾಯೆಯನ್ನು ತುಳಿದು ಜಯಗಳಿಸುತ್ತೀರೋ ಹಾಗೆಯೇ ಮಾಯೆಯೂ
ತುಳಿಯುವ ಪ್ರಯತ್ನಪಡುತ್ತದೆ. ತಂದೆಯು ಆರಂಭದಲ್ಲಿ ಎಷ್ಟು ಒಳ್ಳೊಳ್ಳೆಯ ಸುಂದರವಾದ ರಮಣೀಕವಾದ
ಹೆಸರುಗಳನ್ನಿಟ್ಟಿದ್ದರು ಆದರೆ ಓಹೋ ಮಾಯೆ, ಆಶ್ಚರ್ಯವಾಗಿ ಕೇಳಿ ಸ್ವಲ್ಪ ದಿನ ನಡೆದವರು ಮತ್ತೆ
ಓಡಿಹೋದರು, ಕೆಳಗೆ ಬಿದ್ದರು. ಮಾಯೆಯು ಎಷ್ಟೊಂದು ಶಕ್ತಿಶಾಲಿಯಾಗಿದೆ ಆದ್ದರಿಂದ ಮಕ್ಕಳು ಬಹಳ
ಎಚ್ಚರಿಕೆಯಿಂದ ಇರಬೇಕು. ಮಾಯೆಯ ಯುದ್ಧದ ಮೈದಾನವಲ್ಲವೆ. ಮಾಯೆಯ ಜೊತೆ ನಿಮ್ಮದು ಎಷ್ಟು ದೊಡ್ಡ
ಯುದ್ಧವಾಗುತ್ತದೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ
ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತಾ ಬಾಪ್ದಾದಾರವರ ನೆನಪು ಪ್ರೀತಿ ಹಾಗೂ
ನಮಸ್ತೆ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ಎಲ್ಲಾ
ಲೆಕ್ಕಾಚಾರಗಳನ್ನು ಇಲ್ಲಿಯೇ ಸಮಾಪ್ತಿ ಮಾಡಿಕೊಂಡು ಅರ್ಧಕಲ್ಪಕ್ಕಾಗಿ ಸುಖವನ್ನು ಜಮಾ
ಮಾಡಿಕೊಳ್ಳಬೇಕಾಗಿದೆ. ಈ ಹಳೆಯ ಪ್ರಪಂಚದೊಂದಿಗೆ ಈಗ ಮನಸ್ಸನ್ನಿಡಬಾರದು. ಈ ಕಣ್ಣುಗಳಿಗೆ ಏನೆಲ್ಲವೂ
ಕಾಣಿಸುತ್ತದೆಯೋ ಅದನ್ನು ಮರೆಯಬೇಕಾಗಿದೆ.
2. ಮಾಯೆಯು ಬಹಳ
ಶಕ್ತಿಶಾಲಿಯಾಗಿದೆ, ಇದರಿಂದ ಎಚ್ಚರಿಕೆಯನ್ನಿಡಬೇಕಾಗಿದೆ. ವಿದ್ಯೆಯಲ್ಲಿ ಬಹಳ ತೀವ್ರವಾಗಿ ಮುಂದೆ
ಹೋಗಬೇಕಾಗಿದೆ. ಒಬ್ಬ ತಂದೆಯಿಂದ ಕೇಳಬೇಕು ಮತ್ತು ಅವರಿಂದ ಕೇಳಿರುವುದನ್ನು ಅನ್ಯರಿಗೆ
ತಿಳಿಸಿಕೊಡಬೇಕಾಗಿದೆ.
ವರದಾನ:
ಬೇಹದ್ದಿನ
ದೃಷ್ಠಿ, ವೃತ್ತಿ ಮತ್ತು ಸ್ಥಿತಿಯ ಮೂಲಕ ಸರ್ವರ ಪ್ರೀಯ ಆಗುವಂತಹ ಡಬ್ಬಲ್ ಲೈಟ್ ಫರಿಶ್ತಾ ಭವ.
ಫರಿಶ್ತೆಗಳು ಎಲ್ಲರಿಗೂ
ಪ್ರೀಯರೆನಿಸುತ್ತಾರೆ ಏಕೆಂದರೆ ಫರಿಶ್ತೆ ಎಲ್ಲರಿಗೂ ಬೇಕಾದವರಾಗಿರುತ್ತಾರೆ, ಒಬ್ಬರು ಇಬ್ಬರಿಗಲ್ಲ.
ಬೇಹದ್ದಿನ ದೃಷ್ಠಿ,ವೃತ್ತಿ ಮತ್ತು ಬೇಹದ್ದಿನ ಸ್ಥಿತಿಯುಳ್ಳ ಫರಿಶ್ತಾ ಸರ್ವ ಆತ್ಮರ ಪ್ರತಿ
ಪರಮಾತ್ಮನ ಸಂದೇಶವಾಹಕರಾಗಿದ್ದಾರೆ. ಫರಿಶ್ತಾ ಅಂದರೆ ಡಬ್ಬಲ್ ಲೈಟ್, ಸರ್ವರ ಸಂಬಂಧ ಒಬ್ಬ ತಂದೆಯ
ಜೊತೆ ಜೋಡಿಸುವಂತಹವರು, ದೇಹ ಮತ್ತು ದೇಹದ ಸಂಬಂಧದಿಂದ ನ್ಯಾರಾ, ಸ್ವಯಂ ಅನ್ನು ಮತ್ತು ಸರ್ವರನ್ನು
ತಮ್ಮ ಚಲನೆ ಮತ್ತು ಮುಖದ ಮೂಲಕ ತಂದೆ ಸಮಾನರನ್ನಾಗಿ ಮಾಡುವಂತಹ, ಸರ್ವರ ಪ್ರತಿ ಕಲ್ಯಾಣಕಾರಿ.
ಇಂತಹ ಫರಿಶ್ತೆಗಳೇ ಎಲ್ಲರಿಗೂ ಪ್ರೀಯರಾಗಿದ್ದಾರೆ.
ಸ್ಲೋಗನ್:
ಯಾವಾಗ ನಿಮ್ಮ
ಮುಖದಿಂದ ತಂದೆಯ ಚರಿತ್ರೆ ಕಂಡುಬರುವುದು, ಆಗ ಸಮಾಪ್ತಿಯಾಗುವುದು.