29.03.25 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ -
ಜ್ಞಾನದಿಂದ ನಿಮಗೆ ಒಳ್ಳೆಯ ಜಾಗೃತಿ ಬಂದಿದೆ, ನೀವು ತಮ್ಮ 84 ಜನ್ಮಗಳನ್ನೂ ನಿರಾಕಾರ ಮತ್ತು
ಸಾಕಾರ ತಂದೆಯನ್ನೂ ಅರಿತುಕೊಂಡಿದ್ದೀರಿ, ನಿಮ್ಮ ಅಲೆದಾಟವು ನಿಂತುಹೋಯಿತು”
ಪ್ರಶ್ನೆ:
ಈಶ್ವರನ ಗತಿಮತವು
ಭಿನ್ನವೆಂದು ಏಕೆ ಗಾಯನವಿದೆ?
ಉತ್ತರ:
1. ಏಕೆಂದರೆ
ಅವರು ಇಂತಹ ಮತವನ್ನು ಕೊಡುತ್ತಾರೆ ಅದರಿಂದ ನೀವು ಬ್ರಾಹ್ಮಣರು ಎಲ್ಲರಿಗಿಂತ
ಭಿನ್ನರಾಗಿಬಿಡುತ್ತೀರಿ. ನಿಮ್ಮೆಲ್ಲರದು ಏಕಮತವಾಗಿಬಿಡುತ್ತದೆ. 2. ಈಶ್ವರನೊಬ್ಬನೇ ಎಲ್ಲರ ಸದ್ಗತಿ
ಮಾಡುತ್ತಾರೆ, ಪೂಜಾರಿಗಳಿಂದ ಪೂಜ್ಯರನ್ನಾಗಿ ಮಾಡುತ್ತಾರೆ ಆದ್ದರಿಂದ ಅವರ ಗತಿಮತವು ಭಿನ್ನವಾಗಿದೆ,
ಇದನ್ನು ನೀವು ಮಕ್ಕಳ ವಿನಃ ಯಾರೂ ತಿಳಿದುಕೊಂಡಿಲ್ಲ.
ಓಂ ಶಾಂತಿ.
ನೀವು ಮಕ್ಕಳಿಗೆ ತಿಳಿದಿದೆ - ಒಂದುವೇಳೆ ಮಕ್ಕಳ ಆರೋಗ್ಯವು ಸರಿಯಿಲ್ಲವೆಂದರೆ ತಂದೆಯು ಹೇಳುತ್ತಾರೆ
- ಭಲೆ ಇಲ್ಲಿ ಮಲಗಿಕೊಳ್ಳಿ, ಪರವಾಗಿಲ್ಲಾ ಏಕೆಂದರೆ ನೀವು ಅಗಲಿಹೋಗಿ ಮರಳಿಸಿಕ್ಕಿದ
ಮಕ್ಕಳಾಗಿದ್ದೀರಿ ಅರ್ಥಾತ್ 5000 ವರ್ಷಗಳ ನಂತರ ಪುನಃ ಬಂದು ಮಿಲನ ಮಾಡಿದ್ದೀರಿ, ಯಾರನ್ನು ಮಿಲನ
ಮಾಡಿದ್ದೀರಿ? ಬೇಹದ್ದಿನ ತಂದೆಯನ್ನು. ಇದನ್ನೂ ಸಹ ನೀವು ಮಕ್ಕಳು ತಿಳಿದುಕೊಂಡಿದ್ದೀರಿ, ನಾವು
ಬೇಹದ್ದಿನ ತಂದೆಯೊಂದಿಗೆ ಮಿಲನ ಮಾಡಿದ್ದೇವೆಂದು ನಿಮಗೆ ನಿಶ್ಚಯವಿದೆ ಏಕೆಂದರೆ ತಂದೆಯರಿರುವುದೇ
ಒಬ್ಬರು ಲೌಕಿಕ ಮತ್ತೊಬ್ಬರು ಅಲೌಕಿಕ. ದುಃಖದಲ್ಲಿ ಎಲ್ಲರೂ ಬೇಹದ್ದಿನ ತಂದೆಯನ್ನು ನೆನಪು
ಮಾಡುತ್ತಾರೆ. ಸತ್ಯಯುಗದಲ್ಲಿ ಒಬ್ಬರೇ ಲೌಕಿಕ ತಂದೆಯನ್ನು ನೆನಪು ಮಾಡುತ್ತಾರೆ ಏಕೆಂದರೆ ಅದು
ಸುಖಧಾಮವಾಗಿದೆ. ಯಾರು ಈ ಲೋಕದಲ್ಲಿ ಶರೀರಕ್ಕೆ ಜನ್ಮನೀಡುವರೋ ಅವರಿಗೆ ಲೌಕಿಕ ತಂದೆಯೆಂದು
ಕರೆಯಲಾಗುತ್ತದೆ. ಪಾರಲೌಕಿಕ ತಂದೆಯಂತೂ ಒಂದೇಬಾರಿ ಬಂದು ನಿಮ್ಮನ್ನು ತನ್ನವರನ್ನಾಗಿ
ಮಾಡಿಕೊಳ್ಳುತ್ತಾರೆ. ನೀವೂ ಸಹ ಆ ತಂದೆಯ ಜೊತೆ ಅಮರಲೋಕದಲ್ಲಿರುತ್ತೀರಿ. ಅದಕ್ಕೆ ಪರಲೋಕ,
ಪರಮಧಾಮವೆಂದು ಹೇಳಲಾಗುತ್ತದೆ. ಅದು ಅತ್ಯಂತ ಮೇಲೆ ಇರುವ ಧಾಮವಾಗಿದೆ. ಸ್ವರ್ಗವನ್ನು ಅತಿಮೇಲೆ
ಇರುವ ಸ್ಥಾನವೆಂದು ಹೇಳುವುದಿಲ್ಲ. ಸ್ವರ್ಗ, ನರಕ ಇಲ್ಲಿಯೇ ಆಗುತ್ತದೆ. ಹೊಸಪ್ರಪಂಚಕ್ಕೆ
ಸ್ವರ್ಗವೆಂದು ಹಳೆಯ ಪ್ರಪಂಚಕ್ಕೆ ನರಕವೆಂದು ಹೇಳಲಾಗುತ್ತದೆ. ಈಗ ಇದು ಪತಿತ ಪ್ರಪಂಚವಾಗಿದೆ. ಹೇ
ಪತಿತ-ಪಾವನ ಬನ್ನಿ ಎಂದು ಇಲ್ಲಿಯೇ ಕರೆಯುತ್ತಾರೆ. ಸತ್ಯಯುಗದಲ್ಲಿ ಈ ರೀತಿ ಕರೆಯುವುದಿಲ್ಲ,
ರಾವಣರಾಜ್ಯವು ಆರಂಭವಾದಾಗಿನಿಂದ ಪತಿತರಾಗುತ್ತಾ ಹೋಗುತ್ತಾರೆ. ಇದಕ್ಕೆ ಪಂಚವಿಕಾರಗಳ ರಾಜ್ಯವೆಂದು
ಹೇಳಲಾಗುವುದು. ಸತ್ಯಯುಗದಲ್ಲಿ ನಿರ್ವಿಕಾರಿ ರಾಜ್ಯವಿರುತ್ತದೆ. ಭಾರತಕ್ಕೆ ಎಷ್ಟೊಂದು ಮಹಿಮೆಯಿದೆ
ಆದರೆ ವಿಕಾರಿಗಳಾಗಿರುವ ಕಾರಣ ಭಾರತದ ಮಹಿಮೆಯನ್ನೇ ತಿಳಿದುಕೊಂಡಿಲ್ಲ. ಭಾರತವು ಸಂಪೂರ್ಣ
ನಿರ್ವಿಕಾರಿಯಾಗಿತ್ತು, ಆಗ ಈ ಲಕ್ಷ್ಮೀ-ನಾರಾಯಣರು ರಾಜ್ಯ ಮಾಡುತ್ತಿದ್ದರು. ಈಗ ಅವರ ರಾಜ್ಯವಿಲ್ಲ.
ಅವರ ರಾಜ್ಯವು ಎಲ್ಲಿ ಹೋಯಿತು ಎಂಬುದು ಈ ಕಲ್ಲುಬುದ್ಧಿಯವರಿಗೆ ಗೊತ್ತಿಲ್ಲ. ಮತ್ತೆಲ್ಲರೂ
ತಮ್ಮ-ತಮ್ಮ ಧರ್ಮಸ್ಥಾಪಕರನ್ನು ತಿಳಿದುಕೊಂಡಿದ್ದಾರೆ, ಭಾರತವಾಸಿಗಳು ಮಾತ್ರ ತಮ್ಮ ಧರ್ಮವನ್ನಾಗಲಿ,
ಧರ್ಮ ಸ್ಥಾಪಕರನ್ನಾಗಲಿ ತಿಳಿದುಕೊಂಡಿಲ್ಲ. ಅನ್ಯಧರ್ಮದವರು ತಮ್ಮ ಧರ್ಮವನ್ನು ಅರಿತುಕೊಂಡಿದ್ದಾರೆ
ಆದರೆ ಅವರು ಮತ್ತೆ ಯಾವಾಗ ಸ್ಥಾಪನೆ ಮಾಡಲು ಬರುತ್ತಾರೆ ಎಂಬುದನ್ನು ಮಾತ್ರ ತಿಳಿದುಕೊಂಡಿಲ್ಲ.
ನಮ್ಮ ಸಿಖ್ಖ್ ಧರ್ಮವು ಮೊದಲು ಇರಲಿಲ್ಲವೆಂಬುದು ಸಿಖ್ಖರಿಗೂ ತಿಳಿದಿರಲಿಲ್ಲ. ಗುರುನಾನಕರ ಬಂದು
ಸ್ಥಾಪನೆ ಮಾಡಿದರೆಂದರೆ ಅವಶ್ಯವಾಗಿ ಸುಖಧಾಮದಲ್ಲಿ ಇದು ಇರುವುದಿಲ್ಲ ಆದ್ದರಿಂದಲೇ ನಂತರ ಬಂದು
ಗುರುನಾನಕರು ಸ್ಥಾಪನೆ ಮಾಡುತ್ತಾರೆ ಏಕೆಂದರೆ ವಿಶ್ವದ ಇತಿಹಾಸ ಭೂಗೋಳವು
ಪುನರಾವರ್ತನೆಯಾಗುತ್ತದೆಯಲ್ಲವೆ. ಕ್ರೈಸ್ತ ಧರ್ಮವೂ ಸಹ ಮೊದಲು ಇರಲಿಲ್ಲ ನಂತರದಲ್ಲಿ
ಸ್ಥಾಪನೆಯಾಯಿತು. ಮೊದಲಿಗೆ ಹೊಸಪ್ರಪಂಚವಿತ್ತು, ಒಂದುಧರ್ಮವಿತ್ತು ಕೇವಲ ನೀವು ಭಾರತವಾಸಿಗಳೇ
ಇದ್ದಿರಿ. ಒಂದೇ ಧರ್ಮವಿತ್ತು ನಂತರ ನೀವು 84 ಜನ್ಮಗಳನ್ನು
ತೆಗೆದುಕೊಳ್ಳುತ್ತಾ-ತೆಗೆದುಕೊಳ್ಳುತ್ತಾ ನಾವೇ ದೇವತೆಗಳಾಗಿದ್ದೆವು ಮತ್ತೆ ನಾವೇ 84 ಜನ್ಮಗಳನ್ನು
ತೆಗೆದುಕೊಳ್ಳುತ್ತೇವೆ ಎಂಬುದನ್ನು ಮರೆತುಹೋಗಿದ್ದೀರಿ ಆದ್ದರಿಂದಲೇ ತಂದೆಯು ತಿಳಿಸುತ್ತಾರೆ -
ನೀವು ತಮ್ಮ ಜನ್ಮಗಳ ಬಗ್ಗೆ ಅರಿತುಕೊಂಡಿಲ್ಲ, ನಾನು ನಿಮಗೆ ತಿಳಿಸುತ್ತೇನೆ. ಅರ್ಧಕಲ್ಪ
ರಾಮರಾಜ್ಯವಿತ್ತು ಅನಂತರ ರಾವಣರಾಜ್ಯವಾಗಿದೆ, ಮೊದಲು ಸೂರ್ಯವಂಶಿ ಮನೆತನವಿರುತ್ತದೆ ನಂತರ
ಚಂದ್ರವಂಶಿ ಮನೆತನ ರಾಮರಾಜ್ಯವಿರುತ್ತದೆ. ಸೂರ್ಯವಂಶಿ ಲಕ್ಷ್ಮೀ-ನಾರಾಯಣರ ಮನೆತನವಿದ್ದಾಗ ಯಾರು
ಸೂರ್ಯವಂಶಿ ಲಕ್ಷ್ಮೀ-ನಾರಾಯಣರ ಮನೆತನದವರಾಗಿದ್ದರೋ ಅವರೇ 84 ಜನ್ಮಗಳನ್ನು ತೆಗೆದುಕೊಂಡು ಈಗ
ರಾವಣನ ಮನೆತನದವರಾಗಿದ್ದಾರೆ. ಮೊದಲು ಪುಣ್ಯಾತ್ಮರ ಮನೆತನದವರಾಗಿದ್ದವರು ಈಗ ಪಾಪಾತ್ಮರ
ಮನೆತನದವರಾಗಿದ್ದೀರಿ. 84 ಜನ್ಮಗಳನ್ನು ತೆಗೆದುಕೊಂಡಿದ್ದೀರಿ. ಸನ್ಯಾಸಿಗಳು 84 ಲಕ್ಷ ಜನ್ಮಗಳೆಂದು
ಹೇಳುತ್ತಾರೆ, 84 ಲಕ್ಷ ಜನ್ಮಗಳ ಬಗ್ಗೆ ಯಾರು ಕುಳಿತು ವಿಚಾರ ಮಾಡುತ್ತಾರೆ ಆದ್ದರಿಂದ ಯಾರೂ ಅದರ
ಬಗ್ಗೆ ಚಿಂತನೆಯನ್ನೇ ನಡೆಸುವುದಿಲ್ಲ. ಈಗ ನಿಮಗೆ ತಂದೆಯು ತಿಳಿಸುತ್ತಾರೆ - ಈಗ ನೀವು ತಂದೆಯ
ಮುಂದೆ ಕುಳಿತಿದ್ದೀರಿ. ನಿರಾಕಾರ ತಂದೆ ಮತ್ತು ಸಾಕಾರತಂದೆ ಇಬ್ಬರೂ ಭಾರತದಲ್ಲಿ
ಹೆಸರುವಾಸಿಯಾಗಿದ್ದಾರೆ. ಗಾಯನ ಮಾಡುತ್ತಾರೆ ಆದರೆ ತಂದೆಯನ್ನು ತಿಳಿದುಕೊಂಡಿಲ್ಲ. ಅಜ್ಞಾನದ
ನಿದ್ರೆಯಲ್ಲಿ ಮಲಗಿದ್ದಾರೆ. ಜ್ಞಾನದಿಂದ ಜಾಗೃತಿ ಬರುತ್ತದೆ, ಬೆಳಕಿನಲ್ಲಿ ಮನುಷ್ಯರು ಎಂದೂ
ಹುಡುಕಾಡುವುದಿಲ್ಲ. ಅಂಧಕಾರದಲ್ಲಿಯೇ ಹುಡುಕುತ್ತಾರೆ, ಅಲೆದಾಡುತ್ತಾರೆ. ಭಾರತವಾಸಿಗಳು
ಪೂಜ್ಯರಾಗಿದ್ದರು, ಈಗ ಪೂಜಾರಿಗಳಾಗಿದ್ದಾರೆ. ಲಕ್ಷ್ಮೀ-ನಾರಾಯಣರು ಪೂಜ್ಯರಾಗಿದ್ದರಲ್ಲವೆ, ಇವರು
ಯಾರ ಪೂಜೆ ಮಾಡುತ್ತಾರೆ! ತಮ್ಮ ಚಿತ್ರವನ್ನು ಮಾಡಿ ತಮ್ಮ ಪೂಜೆಯನ್ನಂತೂ ಮಾಡಿಕೊಳ್ಳುವುದಿಲ್ಲ, ಇದು
ಸಾಧ್ಯವೂ ಇಲ್ಲ. ನೀವು ಮಕ್ಕಳು ತಿಳಿದುಕೊಂಡಿದ್ದೀರಿ - ನಾವೇ ಪೂಜ್ಯ, ನಾವೇ ಹೇಗೆ
ಪೂಜಾರಿಗಳಾಗುತ್ತೇವೆ. ಈ ಮಾತುಗಳನ್ನು ಮತ್ತ್ಯಾರೂ ತಿಳಿದುಕೊಳ್ಳಲು ಸಾಧ್ಯವಿಲ್ಲ. ತಂದೆಯೇ
ತಿಳಿಸಿಕೊಡುತ್ತಾರೆ ಆದ್ದರಿಂದಲೇ ಈಶ್ವರನ ಗತಿಮತವು ಭಿನ್ನವಾಗಿದೆ ಎಂದು ಹೇಳಲಾಗಿದೆ.
ನೀವು ಮಕ್ಕಳಿಗೆ
ತಿಳಿದಿದೆ - ತಂದೆಯು ಇಡೀ ಪ್ರಪಂಚಕ್ಕಿಂತ ನಮ್ಮ ಗತಿಮತವನ್ನು ಭಿನ್ನ ಮಾಡಿಬಿಟ್ಟಿದ್ದಾರೆ. ಇಡೀ
ಪ್ರಪಂಚದಲ್ಲಿ ಅನೇಕ ಮತ-ಮತಾಂತರಗಳಿವೆ, ಇಲ್ಲಿ ನೀವು ಬ್ರಾಹ್ಮಣರದು ಒಂದೇ ಮತವಾಗಿದೆ. ಈಶ್ವರನ ಗತಿ
ಮತ್ತು ಮತ. ಗತಿ ಎಂದರೆ ಸದ್ಗತಿ, ಸದ್ಗತಿದಾತನು ಒಬ್ಬರೇ ತಂದೆಯಾಗಿದ್ದಾರೆ, ಸರ್ವರ ಸದ್ಗತಿದಾತ
ರಾಮನೆಂದು ಹಾಡುತ್ತಾರೆ ಆದರೆ ಯಾರಿಗೆ ರಾಮನೆಂದು ಹೇಳಲಾಗುತ್ತದೆ ಎಂಬುದನ್ನು ತಿಳಿದುಕೊಂಡಿಲ್ಲ.
ಎಲ್ಲಿ ನೋಡಿದರಲ್ಲಿ ರಾಮನೇ ರಾಮನು ಎಂದು ಹೇಳುತ್ತಾರೆ. ಇದಕ್ಕೇ ಅಜ್ಞಾನ ಅಂಧಕಾರವೆಂದು
ಕರೆಯಲಾಗುತ್ತದೆ. ಅಂಧಕಾರದಲ್ಲಿ ದುಃಖವಿದೆ, ಪ್ರಕಾಶತೆಯಲ್ಲಿ ಸುಖವಿದೆ. ಅಂಧಕಾರದಲ್ಲಿಯೇ
ಕರೆಯುತ್ತಾರಲ್ಲವೆ. ಭಕ್ತಿ ಮಾಡುವುದು ಎಂದರೆ ತಂದೆಯನ್ನು ಕರೆಯುವುದು, ಭಿಕ್ಷೆಯನ್ನು
ಬೇಡುತ್ತಾರಲ್ಲವೆ. ದೇವತೆಗಳ ಮಂದಿರದಲ್ಲಿ ಹೋಗಿ ಭಿಕ್ಷೆಯನ್ನು ಬೇಡುವುದಾಯಿತಲ್ಲವೆ.
ಸತ್ಯಯುಗದಲ್ಲಿ ಈ ರೀತಿ ಭಿಕ್ಷೆ ಬೇಡುವ ಅವಶ್ಯಕತೆಯಿಲ್ಲ. ಬಿಕಾರಿಗಳಿಗೆ ಬಡವರೆಂದು ಹೇಳಲಾಗುತ್ತದೆ.
ಸತ್ಯಯುಗದಲ್ಲಿ ನೀವು ಎಷ್ಟೊಂದು ಸಾಹುಕಾರರಾಗಿದ್ದಿರಿ, ಅದಕ್ಕೆ ಸಾಹುಕಾರ ಭಾರತವೆಂದು
ಹೇಳಲಾಗುತ್ತದೆ. ಈಗಿನ ಭಾರತವು ಬಡದೇಶವಾಗಿದೆ, ಇದೂ ಸಹ ಯಾರಿಗೂ ತಿಳಿದಿಲ್ಲ. ಕಲ್ಪದ ಆಯಸ್ಸನ್ನು
ಉಲ್ಟಾ-ಸುಲ್ಟಾ ಬರೆದಿರುವುದರಿಂದ ಮನುಷ್ಯರ ತಲೆಯೇ ಕೆಟ್ಟುಹೋಗಿದೆ. ತಂದೆಯು ಬಹಳ ಪ್ರೀತಿಯಿಂದ
ತಿಳಿಸಿಕೊಡುತ್ತಾರೆ. ಕಲ್ಪದ ಮೊದಲೂ ಸಹ ಮಕ್ಕಳಿಗೆ ತಿಳಿಸಿಕೊಟ್ಟಿದ್ದೇನೆ, ನಾನು ಪತಿತ-ಪಾವನ
ತಂದೆಯನ್ನು ನೆನಪು ಮಾಡುವುದರಿಂದ ಪಾವನರಾಗುತ್ತೀರಿ. ಪತಿತರೂ ಹೇಗಾಗಿದ್ದೀರಿ, ವಿಕಾರಗಳ
ತುಕ್ಕುಹಿಡಿದಿದೆ. ಎಲ್ಲಾ ಮನುಷ್ಯರಲ್ಲಿಯೂ ತುಕ್ಕುಹಿಡಿದಿದೆ, ಈಗ ಅದು ಬಿಟ್ಟುಹೋಗುವುದು ಹೇಗೆ?
ಅದಕ್ಕಾಗಿ ನನ್ನನ್ನು ನೆನಪು ಮಾಡಿ, ದೇಹದ ಅಭಿಮಾನವನ್ನು ಬಿಟ್ಟು ದೇಹೀ-ಅಭಿಮಾನಿಯಾಗಿ, ತನ್ನನ್ನು
ಆತ್ಮವೆಂದು ತಿಳಿಯಿರಿ. ಮೊದಲಿಗೆ ನೀವು ಆತ್ಮನಾಗಿದ್ದೀರಿ, ನಂತರದಲ್ಲಿ ಶರೀರವನ್ನು
ತೆಗೆದುಕೊಳ್ಳುತ್ತೀರಿ. ಆತ್ಮವಂತೂ ಅಮರವಾಗಿದೆ, ಈ ಶರೀರವೇ ಮೃತ್ಯುವನ್ನು ಹೊಂದುತ್ತದೆ.
ಸತ್ಯಯುಗಕ್ಕೆ ಅಮರಲೋಕವೆಂದು ಕರೆಯಲಾಗುತ್ತದೆ, ಕಲಿಯುಗಕ್ಕೆ ಮೃತ್ಯುಲೋಕವೆಂದು ಕರೆಯಲಾಗುತ್ತದೆ.
ಅಮರಲೋಕವಿತ್ತು, ಅದು ನಂತರ ಹೇಗೆ ಮೃತ್ಯುಲೋಕವಾಯಿತು ಎಂಬುದನ್ನೂ ಸಹ ಪ್ರಪಂಚದಲ್ಲಿ ಯಾರೂ
ತಿಳಿದುಕೊಂಡಿಲ್ಲ. ಅಮರಲೋಕವೆಂದರೆ ಎಲ್ಲಿ ಅಕಾಲಮೃತ್ಯುವಾಗುವುದಿಲ್ಲವೋ ಅಲ್ಲಿ ಆಯಸ್ಸೂ ಸಹ
ಧೀರ್ಘವಾಗಿರುತ್ತದೆ, ಅದು ಪವಿತ್ರ ಪ್ರಪಂಚವಾಗಿದೆ.
ನೀವು ರಾಜಋಷಿಯಾಗಿದ್ದೀರಿ,
ಪವಿತ್ರರಿಗೆ ಋಷಿ ಎಂದು ಕರೆಯಲಾಗುತ್ತದೆ. ನಿಮ್ಮನ್ನು ಪವಿತ್ರರನ್ನಾಗಿ ಯಾರು ಮಾಡಿದರು? ಹೇಗೆ
ಅವರನ್ನು ಶಂಕರಾಚಾರ್ಯರು ಮಾಡುತ್ತಾರೆಯೋ ಹಾಗೆಯೇ ನಿಮ್ಮನ್ನು ಶಿವಾಚಾರ್ಯರು ಮಾಡುತ್ತಿದ್ದಾರೆ.
ಇವರು ಏನೂ ಓದಿಲ್ಲ. ಈ ಬ್ರಹ್ಮಾರವರ ಮೂಲಕ ಶಿವತಂದೆಯು ನಿಮಗೆ ಓದಿಸುತ್ತಾರೆ. ಶಂಕರಾಚಾರ್ಯರಂತೂ
ಗರ್ಭದಿಂದ ಜನ್ಮಪಡೆದರು. ಮೇಲಿನಿಂದೇನು ಅವತರಿತರಾಗಲಿಲ್ಲ. ಶಿವತಂದೆಯು ಬ್ರಹ್ಮಾರವರಲ್ಲಿ ಪ್ರವೇಶ
ಮಾಡುತ್ತಾರೆ, ಬರುತ್ತಾರೆ ಹೋಗುತ್ತಾರೆ, ಮಾಲೀಕರಾಗಿದ್ದಾರೆ. ಯಾವಾಗ ಯಾರಲ್ಲಿ ಬೇಕೋ ಅವರಲ್ಲಿ
ಹೋಗಬಲ್ಲರು. ಯಾರ ಕಲ್ಯಾಣವಾದರೂ ಮಾಡುವುದಿದ್ದರೆ ನಾನು ಪ್ರವೇಶ ಮಾಡಿಬಿಡುತ್ತೇನೆ. ಬರುವುದಂತೂ
ಪತಿತ ಶರೀರದಲ್ಲಿಯೇ ಅಲ್ಲವೆ, ಬಂದು ಅನೇಕರ ಕಲ್ಯಾಣ ಮಾಡುತ್ತೇನೆಂದು ತಂದೆಯು ತಿಳಿಸುತ್ತಾರೆ.
ಮಾಯೆಯೂ ಸಹ ಕಡಿಮೆಯಿಲ್ಲ. ಕೆಲಕೆಲವೊಮ್ಮೆ ಧ್ಯಾನದಲ್ಲಿ ಹೋದಾಗ ಮಾಯೆಯು ಪ್ರವೇಶ ಮಾಡಿ
ಉಲ್ಟಾ-ಸುಲ್ಟಾ ಮಾತನಾಡಿಸುತ್ತಿರುತ್ತದೆ ಆದ್ದರಿಂದ ಮಕ್ಕಳು ಬಹಳ ಸಂಭಾಲನೆ ಮಾಡಿಕೊಳ್ಳಬೇಕಾಗಿದೆ.
ಕೆಲವರಲ್ಲಿ ಮಾಯೆಯು ಪ್ರವೇಶವಾದಾಗ ನಾನೇ ಶಿವನಾಗಿದ್ದೇನೆ, ನಾನೇ ಇಂತಹವನಾಗಿದ್ದೇನೆಂದು
ಹೇಳಿಕೊಳ್ಳುತ್ತಾರೆ. ಮಾಯೆಯು ದೊಡ್ಡ ಸೈತಾನನಾಗಿದ್ದಾನೆ. ಇವರಲ್ಲಿ ಯಾರ ಪ್ರವೇಶತೆಯಾಗಿದೆ ಎಂದು
ಬುದ್ಧಿವಂತ ಮಕ್ಕಳು ಬಹಳ ಚೆನ್ನಾಗಿ ಅರ್ಥಮಾಡಿಕೊಳ್ಳುತ್ತಾರೆ. ಶಿವತಂದೆಗೆ ಈ ರಥವೇ
ನಿಗಧಿಯಾಗಿದೆಯಲ್ಲವೆ. ಅಂದಮೇಲೆ ನಾವು ಅನ್ಯರದನ್ನು ಕೇಳುವುದಾದರೂ ಏಕೆ ? ಒಂದುವೇಳೆ
ಕೇಳುತ್ತೀರೆಂದರೂ ಸಹ ಮತ್ತೆ ತಂದೆಯೊಂದಿಗೆ ಈ ಮಾತು ಸರಿಯೇ ಅಥವಾ ತಪ್ಪೇ ಎಂಬುದನ್ನು ಕೇಳಿ.
ತಂದೆಯು ತಕ್ಷಣ ತಿಳಿಸಿಬಿಡುತ್ತಾರೆ - ಇದೇನು ನಡೆಯುತ್ತಿದೆ ಎಂಬುದನ್ನು ಕೆಲವರು
ಬ್ರಾಹ್ಮಿಣಿಯರಿಂದಲೂ ಸಹ ಅರಿತುಕೊಳ್ಳಲು ಆಗುವುದಿಲ್ಲ. ಕೆಲವರಲ್ಲಿ ಮಾಯೆಯು ಈ ರೀತಿ
ಪ್ರವೇಶವಾಗುತ್ತದೆ, ಅವರು ಪೆಟ್ಟನ್ನೂ ಕೊಡುತ್ತಾರೆ ಮತ್ತು ನಿಂದನೆ ಮಾಡಲು ತೊಡಗುತ್ತಾರೆ ಅಂದಮೇಲೆ
ಒಂದುವೇಳೆ ಅವರಲ್ಲಿ ತಂದೆಯು ಪ್ರವೇಶ ಮಾಡಿದ್ದರೆ ತಂದೆಯು ನಿಂದನೆ ಮಾಡುತ್ತಾರೆಯೇ! ಈ ಮಾತುಗಳನ್ನೂ
ಸಹ ಕೆಲವು ಮಕ್ಕಳು ಅರಿತುಕೊಳ್ಳುವುದಿಲ್ಲ. ಬಹಳ ಒಳ್ಳೊಳ್ಳೆಯ ಮಕ್ಕಳೂ ಸಹ ಕೆಲವೊಮ್ಮೆ
ಮರೆತುಹೋಗುತ್ತಾರೆ. ಎಲ್ಲಾ ಮಾತುಗಳನ್ನು ತಂದೆಯ ಬಳಿ ಸ್ಪಷ್ಟ ಮಾಡಿಕೊಳ್ಳಬೇಕು ಏಕೆಂದರೆ
ಅನೇಕರಲ್ಲಿ ಮಾಯೆಯು ಪ್ರವೇಶ ಮಾಡಿಬಿಡುತ್ತದೆ ಮತ್ತೆ ಧ್ಯಾನದಲ್ಲಿ ಹೋಗಿ ಏನೇನನ್ನೋ
ಮಾತನಾಡುತ್ತಿರುತ್ತಾರೆ ಆದ್ದರಿಂದ ಇದರಲ್ಲಿಯೂ ಬಹಳ ಎಚ್ಚರಿಕೆಯಿರಬೇಕು, ತಂದೆಗೆ ಪೂರ್ಣ
ಸಮಾಚಾರವನ್ನು ತಿಳಿಸಬೇಕು. ಅವರಲ್ಲಿ ಮಮ್ಮಾ ಬರುತ್ತಾರೆ, ಇವರಲ್ಲಿ ಬಾಬಾ ಬರುತ್ತಾರೆ, ಇವೆಲ್ಲಾ
ಮಾತುಗಳನ್ನು ಬಿಟ್ಟು ತಂದೆಯ ಒಂದೇ ಆದೇಶವಾಗಿದೆ - ನನ್ನೊಬ್ಬನನ್ನೇ ನೆನಪು ಮಾಡಿ. ತಂದೆ ಮತ್ತು
ಸೃಷ್ಟಿಚಕ್ರವನ್ನು ನೆನಪು ಮಾಡಿ. ರಚಯಿತ ಮತ್ತು ರಚನೆಯ ಸ್ಮರಣೆ ಮಾಡುವವರ ಚಹರೆಯು ಬಹಳ
ಹರ್ಷಿತವಾಗಿರುವುದು. ಕೆಲವರು ತಂದೆಯ ಸ್ಮರಣೆಯನ್ನೇ ಮಾಡುವುದಿಲ್ಲ. ಕರ್ಮಬಂಧನವು ಬಹಳ ಕಠಿಣವಾಗಿದೆ.
ವಿವೇಕವೂ ಹೇಳುತ್ತದೆ, ಯಾವಾಗ ಬೇಹದ್ದಿನ ತಂದೆಯು ಸಿಕ್ಕಿದ್ದಾರೆ, ನನ್ನನ್ನು ನೆನಪು ಮಾಡಿ ಎಂದು
ಹೇಳುತ್ತಿದ್ದಾರೆ ಅಂದಮೇಲೆ ನಾವೇಕೆ ನೆನಪು ಮಾಡಬಾರದು! ಏನೇ ಆದರೂ ಸಹ ಅದನ್ನು ತಂದೆಯೊಂದಿಗೆ ಕೇಳಿ
- ತಂದೆಯು ತಿಳಿಸುತ್ತಾರೆ, ಕರ್ಮಭೋಗವು ಇನ್ನೂ ಉಳಿದುಕೊಂಡಿದೆಯಲ್ಲವೆ. ಕರ್ಮಾತೀತ ಸ್ಥಿತಿಯಾದಮೇಲೆ
ನೀವು ಸದಾ ಹರ್ಷಿತರಾಗಿರುತ್ತೀರಿ ಅಲ್ಲಿಯವರೆಗೂ ಏನಾದರೊಂದು ಆಗುತ್ತಲೇ ಇರುತ್ತದೆ. ಇದನ್ನೂ ಸಹ
ತಿಳಿದುಕೊಂಡಿದ್ದೀರಲ್ಲವೆ - ಬೆಕ್ಕಿಗೆ ಚಲ್ಲಾಟ ಇಲಿಗೆ ಪ್ರಾಣಸಂಕಟ. ವಿನಾಶವಾಗಲಿದೆ, ನೀವಂತೂ
ಫರಿಶ್ತೆಗಳಾಗುತ್ತೀರಿ. ಇನ್ನು ಸ್ವಲ್ಪದಿನಗಳು ಮಾತ್ರವೇ ಈ ಪ್ರಪಂಚದಲ್ಲಿರುತ್ತೀರಿ, ಮತ್ತೆ ನೀವು
ಮಕ್ಕಳಿಗೆ ಈ ಸ್ಥೂಲವತನದ ಅನುಭವವೇ ಇರುವುದಿಲ್ಲ. ಸೂಕ್ಷ್ಮವತನ ಮತ್ತು ಮೂಲವತನದ
ಅನುಭವವಾಗುತ್ತಿರುತ್ತದೆ. ಸೂಕ್ಷ್ಮವತನವಾಸಿಗಳಿಗೆ ಫರಿಶ್ತೆಗಳೆಂದು ಹೇಳಲಾಗುತ್ತದೆ. ನೀವು
ಸ್ವಲ್ಪಸಮಯ ಮಾತ್ರವೇ ಆಗುತ್ತೀರಿ, ಯಾವಾಗ ನೀವು ಕರ್ಮಾತೀತ ಸ್ಥಿತಿಯನ್ನು ಹೊಂದುತ್ತೀರಿ.
ಸೂಕ್ಷ್ಮವತನದಲ್ಲಿ ಈ ಮೂಳೆಮಾಂಸಗಳ ಶರೀರವಿರುವುದಿಲ್ಲ. ಈ ಸ್ಥೂಲಶರೀರವೇ ಇಲ್ಲವೆಂದರೆ ಇನ್ನೇನು
ಉಳಿಯಿತು? ಕೇವಲ ಸೂಕ್ಷ್ಮಶರೀರವಿರುತ್ತದೆ ಅಂದರೆ ನಿರಾಕಾರಿಯಾಗಿಬಿಡುತ್ತೀರೆಂದಲ್ಲ, ಸೂಕ್ಷ್ಮ
ಆಕಾರವಿರುತ್ತದೆ ಅಲ್ಲಿ ಸನ್ನೆಯ ಭಾಷೆಯು ನಡೆಯುತ್ತದೆ. ಆತ್ಮವು ಶಬ್ಧದಿಂದ ದೂರವಿರುತ್ತದೆ,
ಅದಕ್ಕೆ ಸೂಕ್ಷ್ಮವತನವೆಂದು ಕರೆಯಲಾಗುತ್ತದೆ. ಸನ್ನೆಯ ಭಾಷೆಯಿರುತ್ತದೆ ಅರ್ಥಾತ್
ಸೂಕ್ಷ್ಮಭಾಷೆಯಿರುತ್ತದೆ, ಇದಂತೂ ಶಬ್ಧದ ಪ್ರಪಂಚವಾಗಿದೆ, ಇದರ ನಂತರ ಮೂವ್ಹಿ (ಸನ್ನೆಯ ಭಾಷೆ)
ಅದರ ಮೇಲೆ ಸೈಲೆನ್ಸ್. ಇಲ್ಲಂತೂ ಶಬ್ಧದ ಭಾಷೆಯು ನಡೆಯುತ್ತದೆ, ಇದು ಡ್ರಾಮಾದ ಮಾಡಿ-ಮಾಡಲ್ಪಟ್ಟ
ಪಾತ್ರವಾಗಿದೆ, ಮೂಲಲೋಕದಲ್ಲಿ ಸಂಪೂರ್ಣ ಶಾಂತಿಯಿರುತ್ತದೆ, ಅದು ಮೂವಿ,ಇಲ್ಲಿ ಟಾಕಿ ಇರುತ್ತದೆ ಈ
ಮೂರೂಲೋಕಗಳನ್ನು ನೆನಪು ಮಾಡುವವರು ಕೆಲವರೇ ವಿರಳ ಇರುತ್ತಾರೆ. ತಂದೆಯು ತಿಳಿಸುತ್ತಾರೆ - ಮಕ್ಕಳೇ,
ಶಿಕ್ಷೆಗಳಿಂದ ಮುಕ್ತರಾಗಲು ಕೊನೆಪಕ್ಷ 8 ಗಂಟೆಗಳಕಾಲ ಕರ್ಮಯೋಗಿಯಾಗಿ ಕರ್ಮ ಮಾಡಿ, 8 ಗಂಟೆ
ವಿಶ್ರಾಂತಿ ಮಾಡಿ. ಇನ್ನೂ 8 ಗಂಟೆಯ ಸಮಯ ತಂದೆಯನ್ನು ನೆನಪು ಮಾಡಿ. ಇದೇ ಅಭ್ಯಾಸದಿಂದ ನೀವು
ಪಾವನರಾಗಿಬಿಡುತ್ತೀರಿ. ನಿದ್ರೆ ಮಾಡುತ್ತೀರೆಂದರೆ ಅದೇನು ತಂದೆಯ ನೆನಪಾಗಲಿಲ್ಲ ಅಥವಾ ನಾವಂತೂ
ತಂದೆಯ ಮಕ್ಕಳಾಗಿದ್ದೇವೆ ಅಂದಮೇಲೆ ನೆನಪು ಮಾಡುವ ಅವಶ್ಯಕತೆಯೇನಿದೆ ಎಂದೂ ತಿಳಿಯಬಾರದು. ತಂದೆಯಂತೂ
ತಿಳಿಸುತ್ತಾರೆ - ಮಕ್ಕಳೇ, ನನ್ನನ್ನು ಪರಮಧಾಮದಲ್ಲಿ ನೆನಪು ಮಾಡಿ, ತನ್ನನ್ನು ಆತ್ಮನೆಂದು ತಿಳಿದು
ನನ್ನನ್ನು ನೆನಪು ಮಾಡಿ. ಎಲ್ಲಿಯವರೆಗೆ ಯೋಗಬಲದಿಂದ ನೀವು ಪವಿತ್ರರಾಗುವುದಿಲ್ಲವೋ ಅಲ್ಲಿಯವರೆಗೆ
ಮನೆಗೆ ಹೋಗಲು ಸಾಧ್ಯವಿಲ್ಲ. ಇಲ್ಲವಾದರೆ ಶಿಕ್ಷೆಗಳನ್ನನುಭವಿಸಿ ಹೋಗಬೇಕು. ಸೂಕ್ಷ್ಮವತನ,
ಮೂಲವತನದಲ್ಲಿಯೂ ಹೋಗುತ್ತೀರಿ ನಂತರ ಸ್ವರ್ಗದಲ್ಲಿ ಬರುತ್ತೀರಿ. ತಂದೆಯು ತಿಳಿಸಿದ್ದಾರೆ -
ಮುಂದೆಹೋದಂತೆ ಪತ್ರಿಕೆಗಳಲ್ಲಿಯೂ ಬರುವುದು, ಇನ್ನೂ ಸಮಯವಿದೆ. ಇಷ್ಟು ದೊಡ್ಡ ರಾಜಧಾನಿಯು
ಸ್ಥಾಪನೆಯಾಗುತ್ತಿದೆ, ಭಾರತದ ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ ಎಷ್ಟೊಂದಿದೆ, ಪತ್ರಿಕೆಗಳ
ಮೂಲಕವೇ ತಂದೆಯ ಪ್ರತ್ಯಕ್ಷತೆಯ ಶಬ್ಧವು ಮೊಳಗುವುದು. ತಂದೆಯು ತಿಳಿಸುತ್ತಾರೆ - ನನ್ನನ್ನು ನೆನಪು
ಮಾಡುವುದರಿಂದ ನಿಮ್ಮ ಪಾಪಗಳು ತುಂಡಾಗುತ್ತವೆ. ಹೇ ಪತಿತ-ಪಾವನ, ಮುಕ್ತಿದಾತ ನಮ್ಮನ್ನು ದುಃಖದಿಂದ
ಮುಕ್ತಗೊಳಿಸು ಎಂದು ಕರೆಯುತ್ತಾರೆ. ಮಕ್ಕಳಿಗೆ ತಿಳಿದಿದೆ – ಡ್ರಾಮದನುಸಾರ ವಿನಾಶವೂ ಆಗಲಿದೆ, ಈ
ಯುದ್ಧದ ನಂತರ ಶಾಂತಿಯೇ ಶಾಂತಿನೆಲೆಸುವುದು, ಸುಖಧಾಮವಾಗಿಬಿಡುವುದು. ಎಲ್ಲವೂ
ಅಲ್ಲೋಲ-ಕಲ್ಲೋಲವಾಗಿಬಿಡುವುದು. ಸತ್ಯಯುಗದಲ್ಲಿ ಒಂದೇ ಧರ್ಮವಿರುತ್ತದೆ. ಕಲಿಯುಗದಲ್ಲಿ ಅನೇಕ
ಧರ್ಮಗಳಿರುವುದು. ಇದನ್ನು ಯಾರು ಬೇಕಾದರೂ ತಿಳಿದುಕೊಳ್ಳಬಲ್ಲರು. ಎಲ್ಲರಿಗಿಂತ ಮೊದಲು ಆದಿಸನಾತನ
ದೇವಿ-ದೇವತಾಧರ್ಮವಿತ್ತು, ಸೂರ್ಯವಂಶಿಯರಿದ್ದಾಗ ಚಂದ್ರವಂಶಿಯರಿರಲಿಲ್ಲ. ನಂತರ
ಚಂದ್ರವಂಶಿಯರಿರುತ್ತಾರೆ. ಕೊನೆಯಲ್ಲಿ ಈ ದೇವಿ-ದೇವತಾಧರ್ಮವು ಪ್ರಾಯಃಲೋಪವಾಗಿಬಿಡುತ್ತದೆ, ಆಗ
ಅನ್ಯಧರ್ಮದವರು ಬರುತ್ತಾರೆ. ಅವರ ಸಂಸ್ಥೆಯು ವೃದ್ಧಿಯನ್ನು ಹೊಂದುವವರೆಗೆ ಅವರ ಬಗ್ಗೆಯೂ ಸಹ
ಯಾರಿಗೂ ತಿಳಿದಿರುವುದಿಲ್ಲ. ಈಗ ನೀವು ಮಕ್ಕಳು ಸೃಷ್ಟಿಯ ಆದಿ-ಮಧ್ಯ-ಅಂತ್ಯವನ್ನು
ಅರ್ಥಮಾಡಿಕೊಂಡಿದ್ದೀರಿ. ಏಣಿಯ ಚಿತ್ರದಲ್ಲಿ ಕೇವಲ ಭಾರತವಾಸಿಗಳನ್ನೇ ಏಕೆ ತೋರಿಸಿದ್ದೀರಿ ಎಂದು
ನಿಮ್ಮೊಂದಿಗೆ ಪ್ರಶ್ನಿಸುತ್ತಾರೆ. ಆಗ ತಿಳಿಸಿ, ಇದು ಭಾರತದ ಮೇಲಿನ ಆಟವಾಗಿದೆ. ಅರ್ಧಕಲ್ಪ ಅವರ
ಪಾತ್ರವಿರುತ್ತದೆ, ನಂತರ ದ್ವಾಪರ-ಕಲಿಯುಗದಲ್ಲಿ ಅನ್ಯ ಎಲ್ಲಾ ಧರ್ಮದವರು ಬರುತ್ತಾರೆ. ಗೋಲದ
ಚಿತ್ರದಲ್ಲಿ ಇದರ ಸಂಪೂರ್ಣ ಜ್ಞಾನವಿದೆ, ಗೋಲವು ಬಹಳ ಸುಂದರವಾದ ಚಿತ್ರವಾಗಿದೆ.
ಸತ್ಯ-ತ್ರೇತಾಯುಗದಲ್ಲಿ ಶ್ರೇಷ್ಠಾಚಾರಿ ಪ್ರಪಂಚವಾಗಿರುತ್ತದೆ, ದ್ವಾಪರ-ಕಲಿಯುಗವು ಭ್ರಷ್ಟಾಚಾರಿ
ಪ್ರಪಂಚವಾಗಿದೆ. ಈಗ ನೀವು ಸಂಗದಮದಲ್ಲಿದ್ದೀರಿ, ಇವು ಜ್ಞಾನದ ಮಾತುಗಳಾಗಿವೆ. ಈ ನಾಲ್ಕುಯುಗಗಳ
ಚಕ್ರವು ಹೇಗೆ ಸುತ್ತುತ್ತದೆ ಎಂಬುದು ಯಾರಿಗೂ ತಿಳಿದಿಲ್ಲ. ಸತ್ಯಯುಗದಲ್ಲಿ ಈ ಲಕ್ಷ್ಮಿ-ನಾರಾಯಣರ
ರಾಜ್ಯವಿರುತ್ತದೆ. ಇವರಿಗೂ ಸಹ ಸತ್ಯಯುಗದ ನಂತರ ತ್ರೇತಾಯುಗವು ಬರುತ್ತದೆ. ತ್ರೇತಾದ ನಂತರ
ದ್ವಾಪರ-ಕಲಿಯುಗವು ಬರಲಿದೆ ಎಂಬುದು ತಿಳಿದಿರುವುದಿಲ್ಲ. ಇಲ್ಲಿಯೂ ಸಹ ಮನುಷ್ಯರಿಗೆ ಏನೂ
ತಿಳಿದಿಲ್ಲ. ಭಲೆ ಹೇಳುತ್ತಾರೆ ಆದರೆ ಚಕ್ರವು ಹೇಗೆ ಸುತ್ತುತ್ತದೆ ಎಂಬುದನ್ನು ಯಾರೂ
ಅರಿತುಕೊಂಡಿರುವುದಿಲ್ಲ. ಆದ್ದರಿಂದಲೇ ತಂದೆಯು ತಿಳಿಸಿದ್ದಾರೆ - ಗೀತೆಯ ಮೇಲೆ ಒತ್ತುಕೊಟ್ಟು ಹೇಳಿ
- ಸತ್ಯವಾದ ಗೀತೆಯನ್ನು ಕೇಳುವುದರಿಂದ ಸ್ವರ್ಗವಾಸಿಗಳಾಗುತ್ತಾರೆ, ಇಲ್ಲಿ ಸ್ವಯಂ ಶಿವತಂದೆ
ತಿಳಿಸುತ್ತಾರೆ, ಅಲ್ಲಿ ಮನುಷ್ಯರು ಓದುತ್ತಾರೆ. ಗೀತೆಯನ್ನೂ ಸಹ ಎಲ್ಲರಿಗಿಂತ ಮೊದಲು ನೀವೇ
ಓದುತ್ತೀರಿ, ಭಕ್ತಿಯಲ್ಲಿಯೂ ಮೊಟ್ಟಮೊದಲಿಗೆ ನೀವೇ ಹೋಗುತ್ತೀರಲ್ಲವೆ! ಶಿವನ ಪೂಜಾರಿಗಳು ಮೊದಲಿಗೆ
ನೀವೇ ಆಗುತ್ತೀರಿ. ನೀವೇ ಮೊಟ್ಟಮೊದಲು ಅವ್ಯಭಿಚಾರಿ ಒಬ್ಬ ಶಿವತಂದೆಯ ಪೂಜೆ ಮಾಡುತ್ತೀರಿ. ಸೋಮನಾಥ
ಮಂದಿರವನ್ನು ಕಟ್ಟಿಸಲು ಮತ್ತ್ಯಾರಿಗೆ ಶಕ್ತಿಯಿದೆ! ಬೋರ್ಡ್ನ ಮೇಲೆ ಅನೇಕ ಪ್ರಕಾರದ ಮಾತುಗಳನ್ನು
ಬರೆಯಬಹುದಾಗಿದೆ. ಇದನ್ನೂ ಬರೆಯಿರಿ - ಭಾರತವಾಸಿಗಳು ಸತ್ಯಗೀತೆಯನ್ನು ಕೇಳುವುದರಿಂದ ಸತ್ಯಖಂಡದ
ಮಾಲೀಕರಾಗುತ್ತಾರೆ. ಈಗ ನೀವು ಮಕ್ಕಳು ತಿಳಿದುಕೊಂಡಿದ್ದೀರಿ - ನಾವು ಸತ್ಯಗೀತೆಯನ್ನು ಕೇಳಿ
ಸ್ವರ್ಗವಾಸಿಗಳಾಗುತ್ತಿದ್ದೇವೆ. ನೀವು ಮಕ್ಕಳು ತಿಳಿಸುವ ಸಮಯದಲ್ಲಿ ಹೌದು, ಹೌದು, ಇದು ಸರಿಯಾಗಿದೆ
ಎಂದು ಹೇಳುತ್ತಾರೆ. ಹೊರಗೆ ಹೋದನಂತರ ಸಮಾಪ್ತಿಯಾಗುತ್ತದೆ. ಅಲ್ಲಿಯದು ಅಲ್ಲಿಯೇ ಉಳಿಯಿತು.
ಒಳ್ಳೆಯದು.
ಮಧುರಾತಿ ಮಧುರ ಅಗಲಿ
ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತಾ ಬಾಪ್ದಾದಾರವರ ನೆನಪು ಪ್ರೀತಿ ಹಾಗೂ
ನಮಸ್ತೆ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1.ರಚಯಿತ ಮತ್ತು
ರಚನೆಯ ಜ್ಞಾನವನ್ನು ಸ್ಮರಣೆ ಮಾಡಿ ಸದಾ ಹರ್ಷಿತರಾಗಿರಬೇಕಾಗಿದೆ. ನೆನಪಿನ ಯಾತ್ರೆಯಿಂದ ತಮ್ಮ
ಹಳೆಯ ಎಲ್ಲಾ ಕರ್ಮಬಂಧನಗಳನ್ನು ಕತ್ತರಿಸಿ ಕರ್ಮಾತೀತ ಸ್ಥಿತಿಯನ್ನು ಮಾಡಿಕೊಳ್ಳಬೇಕಾಗಿದೆ.
2. ಧ್ಯಾನದಲ್ಲಿ ಮಾಯೆಯ
ಪ್ರವೇಶತೆಯು ಬಹಳ ಆಗುತ್ತದೆ ಆದ್ದರಿಂದ ಸಂಭಾಲನೆ ಮಾಡಬೇಕಾಗಿದೆ, ತಂದೆಗೆ ಸಮಾಚಾರವನ್ನು ತಿಳಿಸಿ
ತಂದೆಯಿಂದ ಸಲಹೆಯನ್ನು ಪಡೆಯಬೇಕಾಗಿದೆ, ಯಾವುದೇ ತಪ್ಪು ಮಾಡಬಾರದಾಗಿದೆ.
ವರದಾನ:
ತಮ್ಮ ಶುಭ
ಭಾವನೆಯ ಮುಖಾಂತರ ನಿರ್ಬಲ ಆತ್ಮಗಳಲ್ಲಿ ಬಲ ತುಂಬುವಂತಹ ಸದಾ ಶಕ್ತಿ ಸ್ವರೂಪ ಭವ
ಸೇವಾಧಾರಿ ಮಕ್ಕಳ ವಿಶೇಷ
ಸೇವೆಯಾಗಿದೆ- ಸ್ವಯಂ ಶಕ್ತಿ ಸ್ವರೂಪರಾಗಿರುವುದು ಮತ್ತು ಸರ್ವರನ್ನು ಶಕ್ತಿ ಸ್ವರೂಪರನ್ನಾಗಿ
ಮಾಡುವುದು ಅರ್ಥಾತ್ ನಿರ್ಬಲ ಆತ್ಮರಲ್ಲಿ ಬಲ ತುಂಬುವುದು. ಇದಕ್ಕಾಗಿ ಸದಾ ಶುಭಭಾವನೆ ಮತ್ತು
ಶ್ರೇಷ್ಠ ಕಾಮನಾ ಸ್ವರೂಪರಾಗಿ. ಶುಭಭಾವನೆಯ ಅರ್ಥ ಹೀಗಲ್ಲ ಯಾರಲ್ಲಿಯಾದರೂ ಭಾವನೆ
ಇಡುತ್ತಾ-ಇಡುತ್ತಾ ಅವರ ಭಾವುಕತೆಯಲ್ಲಿ ಬರುವಂತಹ ತಪ್ಪನ್ನು ಎಂದೂ ಮಾಡಬೇಡಿ. ಶುಭಭಾವನೆ ಸಹ
ಬೇಹದ್ದಿನದಾಗಿರಬೇಕು. ಒಬ್ಬರ ಪ್ರತಿ ವಿಶೇಷ ಭಾವನೆಯೂ ಸಹ ನಷ್ಟ ಉಂಟುಮಾಡುತ್ತದೆ ಆದ್ದರಿಂದ
ಬೇಹದ್ದಿನಲ್ಲಿ ಸ್ಥಿತರಾಗಿ ನಿರ್ಬಲ ಆತ್ಮರಿಗೆ ತಮಗೆ ಪ್ರಾಪ್ತಿಯಾಗಿರುವ ಶಕ್ತಿಗಳ ಆಧಾರದಿಂದ
ಶಕ್ತಿ ಸ್ವರೂಪರನ್ನಾಗಿ ಮಾಡಿ.
ಸ್ಲೋಗನ್:
ಅಲಂಕಾರ
ಬ್ರಾಹ್ಮಣ ಜೀವನದ ಶೃಂಗಾರವಾಗಿದೆ- ಆದ್ದರಿಂದ ಅಲಂಕಾರಿಗಳಾಗಿ ದೇಹ ಅಹಂಕಾರಿಯಲ್ಲ.
ಅವ್ಯಕ್ತ ಸೂಚನೆ - ಸತ್ಯ
ಮತ್ತು ಸಭ್ಯತೆ ರೊಪಿ ಕಲ್ಚರ್(ಸಂಸ್ಕೃತಿಯನ್ನು) ತಮ್ಮದಾಗಿಸಿಕೊಳ್ಳಿರಿ
ಕೆಲವು ಮಕ್ಕಳು
ಹೇಳುತ್ತಾರೆ, ಹಾಗೆ ಕ್ರೋಧ ಬರುವುದಿಲ್ಲ, ಆದರೆ ಯಾರಾದರೂ ಸುಳ್ಳು ಹೇಳುತ್ತಾರೆ ಅಂದರೆ ಕ್ರೋದ
ಬಂದುಬಿಡುತ್ತದೆ. ಅವರು ಸುಳ್ಳು ಹೇಳಿದರು ಹಾಗೂ ತಾವು ಕ್ರೋಧದಿಂದ ಹೇಳಿದಿರಿ ಅಂದ ಮೇಲೆ ಇದರಲ್ಲಿ
ಯಾರು ಸರಿ? ಕೆಲವರು ಚತುರತೆಯಿಂದ ಹೇಳುತ್ತಾರೆ - ನಾವು ಕ್ರೋಧ ಮಾಡುವುದಿಲ್ಲ ನಮ್ಮ ಧ್ವನಿ
ಜೋರಾಗಿದೆ, ನಾವು ಮಾತನಾಡುವುದೇ ಈ ರೀತಿ ಆಗಿದೆ ಆದರೆ ಹೇಗೆ ವಿಜ್ಞಾನದ ಸಾಧನೆಗಳಿಂದ ಧ್ವನಿ ಯನ್ನು
ಕಡಿಮೆ ಅಥವಾ ಜಾಸ್ತಿ ಮಾಡಬಹುದು ಅಂದ ಮೇಲೆ ಸೈಲೆನ್ಸ್ನ ಶಕ್ತಿಯಿಂದ ತಮ್ಮ ಧ್ವನಿಯ ಗತಿಯನ್ನು
ಕಡಿಮೆ ಅಥವಾ ಜಾಸ್ತಿ ಮಾಡಲು ಸಾಧ್ಯವಿಲ್ಲವೇ?