29.05.26         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ - ಈ ಹಳೆಯ ಪ್ರಪಂಚ ಹಾಗೂ ದೇಹಧಾರಿಗಳೊಂದಿಗೆ ಎಂದೂ ಮನಸ್ಸನ್ನು ಇಡಬಾರದು, ಮನಸ್ಸನ್ನು ಇಟ್ಟಿದ್ದೀರೆಂದರೆ ಅದೃಷ್ಟವು ಕೆಟ್ಟು ಹೋಗುವುದು”

ಪ್ರಶ್ನೆ:
ತಂದೆಯು ಮಕ್ಕಳಿಗೆ ಈ ನಾಟಕದ ಯಾವ ಗುಹ್ಯ ರಹಸ್ಯವನ್ನು ತಿಳಿಸಿದ್ದಾರೆ?

ಉತ್ತರ:
ಮಕ್ಕಳೇ, ಈಗ ಈ ನಾಟಕವು ಸಮಾಪ್ತಿ ಆಗುವುದಿದೆ ಆದ್ದರಿಂದ ಎಲ್ಲಾ ಆತ್ಮರು ಇಲ್ಲಿ ಹಾಜರಾಗಲೇಬೇಕಾಗಿದೆ. ಎಲ್ಲಾ ಧರ್ಮದ ಆತ್ಮರು ಈಗ ಇಲ್ಲಿ ಹಾಜರಾಗುವರು ಏಕೆಂದರೆ ಸರ್ವರ ತಂದೆಯು ಇಲ್ಲಿ ಹಾಜರಾಗಿದ್ದಾರೆ. ಎಲ್ಲರೂ ತಂದೆಯ ಮುಂದೆ ಸಲಾಮು ಮಾಡಲು ಬರಲೇಬೇಕಾಗಿದೆ. ಎಲ್ಲಾ ಧರ್ಮದ ಆತ್ಮವು ಮನ್ಮನಾಭವದ ಮಂತ್ರವನ್ನು ತೆಗೆದುಕೊಂಡು ಹೋಗುವರು. ಅವರು ಮಧ್ಯಾಜೀಭವದ ಮಂತ್ರವನ್ನು ಧಾರಣೆ ಮಾಡಿ ಚಕ್ರವರ್ತಿಗಳಾಗುವುದಿಲ್ಲ.

ಗೀತೆ:
ಹೃದಯದ ಆಸರೆ ತುಂಡಾಗದಿರಲಿ............

ಓಂ ಶಾಂತಿ.
ಎಲ್ಲಾ ಸೇವಾಕೇಂದ್ರದ ಮಕ್ಕಳು ಗೀತೆಯನ್ನು ಕೇಳಿದಿರಿ, ನೀವು ಇಂದು ಕೇಳುತ್ತಿದ್ದೀರಿ, ದೂರದಲ್ಲಿರುವ ಮಕ್ಕಳು 2-4 ದಿನಗಳನಂತರ ಕೇಳುತ್ತಾರೆ. ಒಂದುವೇಳೆ ಹಳೆಯ ಪ್ರಪಂಚ, ಹಳೆಯ ಶರೀರದೊಂದಿಗೆ ಮನಸ್ಸನ್ನಿಟ್ಟಿದ್ದೇ ಆದರೆ ಅದೃಷ್ಟವು ಕೆಟ್ಟು ಹೋಗುವುದು ಏಕೆಂದರೆ ಈ ಶರೀರವು ಹಳೆಯ ಪ್ರಪಂಚದ್ದಾಗಿದೆ ಆದ್ದರಿಂದ ಒಂದುವೇಳೆ ದೇಹಾಭಿಮಾನಿಗಳಾದರೆ ಇಷ್ಟೊಂದು ಯಾವ ಅದೃಷ್ಟವು ರೂಪಿಸಲ್ಪಡುತ್ತಿದೆಯೋ ಅದೂ ಸಹ ಕೆಟ್ಟು ಹೋಗುವುದು. ನೀವೀಗ ದುರಾದೃಷ್ಟರಿಂದ ಅದೃಷ್ಟವಂತರಾಗುತ್ತಿದ್ದೀರಿ ಆದ್ದರಿಂದ ಎಷ್ಟು ಸಾಧ್ಯವೋ ಒಬ್ಬ ತಂದೆಯನ್ನು ನೆನಪು ಮಾಡಿ, ಯಾರು ಬೇಹದ್ದಿನ ಆಸ್ತಿಯನ್ನು ಕೊಡುತ್ತಿದ್ದಾರೆ. ತಂದೆ ಮತ್ತು ಆಸ್ತಿಯನ್ನು ನೆನಪು ಮಾಡಿ, ಈ ಹಳೆಯ ಪ್ರಪಂಚದಲ್ಲಿ ಇನ್ನು ಸ್ವಲ್ಪವೇ ಸಮಯವಿದೆ, ಇದರಲ್ಲಿ ನೀವು ಪುರುಷಾರ್ಥ ಮಾಡಿ. ಅವಶ್ಯವಾಗಿ ಸರ್ವಗುಣ ಸಂಪನ್ನ ಆಗಬೇಕಾಗಿದೆ. ಅನೇಕರು ಪವಿತ್ರರಾಗಿಯೂ ಇದ್ದಾರೆ, ಕೆಲವರು ಪದೇ-ಪದೇ ಕೆಳಗೆ ಬೀಳುತ್ತಾರೆ. ತಂದೆಯು ತಿಳಿಸುತ್ತಾರೆ - ನೀವು ಅವಶ್ಯವಾಗಿ ಸರ್ವಗುಣ ಸಂಪನ್ನರಾಗಬೇಕಾಗಿದೆ. ತಂದೆಯ ಜೊತೆ ಸೇವೆಯಲ್ಲಿಯೂ ಜೊತೆಗಾರರಾಗಬೇಕು. ಬಹಳ ದೊಡ್ಡ ಸೇವೆಯಾಗಿದೆ. ಇಡೀ ಪತಿತ ಪ್ರಪಂಚವನ್ನು ಪಾವನ ಮಾಡಲು ಎಲ್ಲರೂ ತಂದೆಗೆ ಸಹಯೋಗ ನೀಡುತ್ತಾರೆಂದಲ್ಲ. ಯಾರು ಕಲ್ಪದ ಹಿಂದೆ ಸಹಯೋಗ ನೀಡಿದ್ದಾರೆಯೋ ಬ್ರಾಹ್ಮಣ ಕುಲಭೂಷಣ ಬಿ.ಕೆ. ಆಗಿದ್ದಾರೆಯೋ ಅವರು ಬುದ್ಧಿವಂತರಾಗುತ್ತಾರೆ. ಪ್ರಜಾಪಿತ ಬಹ್ಮಾನ ಹೆಸರಂತೂ ಗಾಯನವಿದೆ, ಬ್ರಹ್ಮಾನ ಮಕ್ಕಳಿಗೆ ಅವಶ್ಯವಾಗಿ ಬ್ರಹ್ಮಾಕುಮಾರ-ಕುಮಾರಿಯರೆಂದೇ ಹೇಳಲಾಗುತ್ತದೆ. ಅವಶ್ಯವಾಗಿ ಇದ್ದು ಹೋಗಿದ್ದಾರೆ, ಆದಿ ದೇವ –ಆದಿ ದೇವಿಯನ್ನೂ ನೆನಪು ಮಾಡುತ್ತಾರೆ ಏಕೆಂದರೆ ಯಾವುದು ಮೊದಲು ಆಗಿ ಹೋಗಿದೆಯೋ ಅದು ಪುನಃ ಆಗುವುದು. ಇದನ್ನು ನೀವು ತಿಳಿದುಕೊಂಡಿದ್ದೀರಿ, ಸತ್ಯಯುಗವು ಬಂದು ಹೋಗಿದೆ. ಆದಿ ಸನಾತನ ದೇವಿ-ದೇವತೆಗಳ ರಾಜ್ಯವಿತ್ತು, ಅದು ಈಗ ಇಲ್ಲ. ದೇವಿ-ದೇವತೆಗಳು ಯಾರು ಪವಿತ್ರ ಪ್ರವೃತ್ತಿ ಮಾರ್ಗದವರು ರಾಜ್ಯ ಮಾಡುತ್ತಿದ್ದರೋ ಅವರು ಈಗ 84ನೇ ಜನ್ಮದ ಅಂತಿಮದಲ್ಲಿದ್ದಾರೆ. ಈಗ ಪವಿತ್ರರಿಲ್ಲ ಮತ್ತು ಆ ರಾಜ್ಯವೂ ಇಲ್ಲ. ಎಲ್ಲರೂ ಪತಿತರಾಗಿ ಬಿಟ್ಟಿದ್ದಾರೆ, ಪುನಃ ಪಾವನರನ್ನಾಗಿ ಮಾಡಲು ತಂದೆಯು ಬಂದಿದ್ದಾರೆ. ತಂದೆಯು ತಿಳಿಸುತ್ತಾರೆ-ಮಕ್ಕಳೇ, ಪತಿತರೊಂದಿಗೆ ಬುದ್ಧಿಯೋಗವನ್ನು ಇಡಬೇಡಿ, ಒಬ್ಬ ತಂದೆಯನ್ನು ನೆನಪು ಮಾಡಿ.

ನೀವು ತಿಳಿದುಕೊಂಡಿದ್ದೀರಿ - ನಾವು ತಂದೆಯ ಸಲಹೆಯಂತೆ ನಡೆದು ತಂದೆಯಿಂದ ಆಸ್ತಿಯನ್ನು ತೆಗೆದುಕೊಳ್ಳುತ್ತಿದ್ದೇವೆ. ಆಸ್ತಿಯನ್ನು ಹೇಗೆ ತೆಗೆದುಕೊಳ್ಳಬೇಕು ಎಂದು ಯುಕ್ತಿಯನ್ನೂ ತಿಳಿಸುತ್ತಾರೆ. ಮನುಷ್ಯರಂತೂ ಅನೇಕ ಪ್ರಕಾರದ ಯುಕ್ತಿಗಳನ್ನು ರಚಿಸುತ್ತಾರೆ. ಕೆಲವರು ವಿಜ್ಞಾನದ ಅಭಿಮಾನಿಗಳಾಗಿದ್ದಾರೆ, ಕೆಲವರು ವೈದ್ಯಕೀಯ ಅಭಿಮಾನಿಗಳಾಗಿದ್ದಾರೆ. ಮನುಷ್ಯರ ಹೃದಯವು ಹಾಳಾದರೆ ಇನ್ನೊಂದು ಪ್ಲಾಸ್ಟಿಕ್ ಹೃದಯವನ್ನು ಹಾಕಬಲ್ಲೆವು ಎಂದು ಬರೆಯುತ್ತಾರೆ. ನಿಜವಾದುದನ್ನು ತೆಗೆದು ತಾತ್ಕಾಲಿಕ ಹೃದಯವನ್ನು ನಡೆಸುತ್ತಿರುತ್ತಾರೆ. ಇದೂ ಸಹ ಎಷ್ಟು ಒಳ್ಳೆಯ ಕಲೆಯಾಗಿದೆ ಆದರೆ ಇದು ಅಲ್ಪಕಾಲದ ಸುಖಕ್ಕಾಗಿ. ನಾಳೆ ಅವರು ಮರಣ ಹೊಂದಿದರೆ ಶರೀರವೇ ಸಮಾಪ್ತಿ ಆಗಿ ಬಿಡುವುದು, ಪ್ರಾಪ್ತಿಯೇನೂ ಆಗುವುದಿಲ್ಲ. ಅಲ್ಪಕಾಲಕ್ಕಾಗಿ ಸಿಕ್ಕಿತಷ್ಟೇ. ವಿಜ್ಞಾನದ ಮೂಲಕ ಬಹಳಷ್ಟು ಕಮಾಲ್ ಮಾಡಿ ತೋರಿಸುತ್ತಾರೆ ಅದೂ ಕೇವಲ ಅಲ್ಪಕಾಲಕ್ಕಾಗಿ. ಈ ಮಾತಂತೂ ಎಲ್ಲದಕ್ಕಿಂತ ಸಂಪೂರ್ಣ ಭಿನ್ನವಾಗಿದೆ. ಪಾವನ ಆತ್ಮವು 84 ಜನ್ಮಗಳನ್ನು ತೆಗೆದುಕೊಳ್ಳುತ್ತಾ-ತೆಗೆದುಕೊಳ್ಳುತ್ತಾ ಪತಿತವಾಗಿ ಬಿಟ್ಟಿದೆ. ಆ ಪತಿತ ಆತ್ಮವನ್ನು ಪುನಃ ಪಾವನವನ್ನಾಗಿ ತಂದೆಯ ವಿನಃ ಮತ್ತ್ಯಾರೂ ಮಾಡಲು ಸಾಧ್ಯವಿಲ್ಲ. ಒಬ್ಬ ತಂದೆಯದೇ ಗಾಯನವಿದೆ, ಸರ್ವರ ಪತಿತ-ಪಾವನ, ಸರ್ವರ ಸದ್ಗತಿದಾತ, ಸರ್ವರ ಮೇಲೆ ದಯಾ ದೃಷ್ಟಿಯನ್ನು ಇಡುವವರು, ಸರ್ವೋದಯ ಲೀಡರ್ ಆಗಿದ್ದಾರೆ. ಮನುಷ್ಯರು ತಮ್ಮನ್ನು ಸರ್ವೋದಯ ಲೀಡರ್ ಎಂದು ಕರೆಸಿಕೊಳ್ಳುತ್ತಾರೆ ಆದರೆ ಸರ್ವ ಎಂದರೆ ಅದರಲ್ಲಿ ಎಲ್ಲರೂ ಬಂದು ಬಿಡುತ್ತಾರೆ. ಅಂದಮೇಲೆ ಸರ್ವರ ಮೇಲೆ ದಯೆ ತೋರಿಸುವವರು ತಂದೆಯೊಬ್ಬರೇ ಎಂದು ಗಾಯನವಿದೆ. ಅವರಿಗೇ ದಯಾ ಸಾಗರ, ಆನಂದ ಸಾಗರನೆಂದು ಹೇಳುತ್ತಾರೆ. ಉಳಿದ ಮನುಷ್ಯರು ಸರ್ವರ ಮೇಲೆ ದಯೆ ತೋರಿಸಲು ಸಾಧ್ಯವೇ? ತಮ್ಮ ಮೇಲೆ ದಯೆ ಮಾಡಿಕೊಳ್ಳಲು ಸಾಧ್ಯವಿಲ್ಲವೆಂದರೆ ಅನ್ಯರಮೇಲೆ ಏನು ಮಾಡುವರು? ಇವರು ಅಲ್ಪಕಾಲದ ದಯೆ ತೋರಿಸುತ್ತಾರೆ. ಎಷ್ಟು ದೊಡ್ಡ ಹೆಸರುಗಳನ್ನು ಇಟ್ಟುಕೊಂಡಿದ್ದಾರೆ.

ಈಗ ತಂದೆಯು ತಿಳಿಸುತ್ತಾರೆ - ನಿಮಗೆ ಸದಾ ಆರೋಗ್ಯವಂತರು, ಐಶ್ವರ್ಯವಂತರಾಗುವ ಎಷ್ಟು ಸಹಜ ಯುಕ್ತಿಯನ್ನು ತಿಳಿಸುತ್ತಾರೆ. ಯುಕ್ತಿಯು ಅತಿ ಸಹಜವಾಗಿದೆ, ಕೇವಲ ನನ್ನನ್ನು ನೆನಪು ಮಾಡಿರಿ ಏಕೆಂದರೆ ನೀವು ನನ್ನನ್ನೇ ಮರೆತು ಹೋದಿರಿ. ಸತ್ಯಯುಗದಲ್ಲಿ ನೀವು ಸುಖಿಯಾಗಿರುತ್ತೀರಿ ಆದ್ದರಿಂದ ನನ್ನನ್ನು ನೆನಪು ಮಾಡುವುದಿಲ್ಲ. ನಿಮ್ಮ 84 ಜನ್ಮಗಳ ಚರಿತ್ರೆ-ಭೂಗೋಳವನ್ನು ನಿಮಗೆ ತಿಳಿಸುತ್ತೇನೆ, ನೀವು ಹೀಗೆ ರಾಜ್ಯ ಮಾಡುತ್ತಿದ್ದಿರಿ, ಸದಾ ಸುಖಿಯಾಗಿದ್ದಿರಿ, ನಂತರ ದಿನ-ಪ್ರತಿದಿನ ಕೆಳಗಿಳಿಯುತ್ತಾ-ಇಳಿಯುತ್ತಾ ತಮೋಪ್ರಧಾನ, ದುಃಖಿ, ಪತಿತರಾಗಿ ಬಿಟ್ಟಿದ್ದೀರಿ. ಈಗ ತಂದೆಯು ಪುನಃ ನೀವು ಮಕ್ಕಳಿಗೆ ಕಲ್ಪದ ಮೊದಲಿನಂತೆ ಆಸ್ತಿಯನ್ನು ಕೊಡುತ್ತಿದ್ದಾರೆ. ನೀವೇ ಕಲ್ಪ-ಕಲ್ಪವೂ ಬಂದು ಆಸ್ತಿಯನ್ನು ತೆಗೆದುಕೊಳ್ಳುತ್ತೀರಿ, ಶ್ರೀಮತದಂತೆ ನಡೆಯುತ್ತೀರಿ. ಶ್ರೀಮತವು ಬಾಪ್ದಾದಾರವರ ಮತವಾಗಿದೆ. ಅವರನ್ನು ಬಿಟ್ಟರೆ ಶ್ರೀಮತವೆಲ್ಲಿಂದ ಸಿಗುವುದು! ತಂದೆಯು ತಿಳಿಸುತ್ತಾರೆ - ನೀವು ವಿಚಾರ ಮಾಡಿ, ಈ ಕಲೆಯು ಯಾರಲ್ಲಿಯಾದರೂ ಇದೆಯೇ? ಇಲ್ಲ. ವಿಶ್ವದ ಮಾಲೀಕರನ್ನಾಗಿ ಮಾಡುವ ಯುಕ್ತಿಯನ್ನು ತಂದೆಯೇ ತಿಳಿಸಿ ಕೊಡುತ್ತಾರೆ. ಇದರ ವಿನಃ ಮತ್ತ್ಯಾವುದೇ ಉಪಾಯವಿಲ್ಲ. ಪತಿತ-ಪಾವನ ತಂದೆಯೇ ಶ್ರೇಷ್ಠ ಪದವಿಯನ್ನು ಪಡೆಯುವುದಕ್ಕಾಗಿ ಜ್ಞಾನ ತಿಳಿಸುತ್ತಾರೆ. ಕೇವಲ ಸೃಷ್ಟಿಚಕ್ರದ ಜ್ಞಾನವನ್ನು ತಿಳಿದುಕೊಳ್ಳುವುದರಿಂದ ನೀವು ಪವಿತ್ರರಾಗಿ ಬಿಡುವುದಿಲ್ಲ. ತಂದೆಯು ತಿಳಿಸುತ್ತಾರೆ - ನನ್ನನ್ನು ನೆನಪು ಮಾಡಿರಿ, ಈ ಯೋಗಾಗ್ನಿಯಿಂದಲೇ ನಿಮ್ಮ ಪಾಪದ ಕೊಡವು ಸಮಾಪ್ತಿ ಆಗುವುದು.

ನೀವೇ 84 ಜನ್ಮಗಳನ್ನು ತೆಗೆದುಕೊಳ್ಳುತ್ತಾ-ತೆಗೆದುಕೊಳ್ಳುತ್ತಾ ಬಹಳ ಪತಿತರಾಗಿದ್ದೀರಿ ಎಂದು ತಂದೆಯು ತಿಳಿಸುತ್ತಾರೆ. ಇತ್ತೀಚೆಗಂತೂ ಮನುಷ್ಯರು ನಾನೇ ಶಿವನೆಂದು ಹೇಳಿಕೊಳ್ಳುತ್ತಾರೆ ಅಥವಾ ನೀವು ಪರಮಾತ್ಮನ ರೂಪವಾಗಿದ್ದೀರಿ, ಆತ್ಮನೇ ಪರಮಾತ್ಮನೆಂದು ಹೇಳುತ್ತಾರೆ. ಈಗ ತಂದೆಯು ಬಂದಿದ್ದಾರೆ, ನೀವು ತಿಳಿದುಕೊಂಡಿದ್ದೀರಿ – ಶಿವ ತಂದೆಯೇ ನೆನಪು ತರಿಸಬೇಕಾಗಿದೆ. ಸರ್ವರ ಸದ್ಗತಿದಾತನು ಒಬ್ಬ ಪರಮಪಿತ ಪರಮಾತ್ಮನೇ ಆಗಿದ್ದಾರೆ. ಶಿವನ ಮಂದಿರಗಳನ್ನು ಪ್ರತ್ಯೇಕವಾಗಿ ಕಟ್ಟಿಸುತ್ತಾರೆ, ಶಂಕರನ ರೂಪವೇ ಬೇರೆಯಾಗಿದೆ. ಪ್ರದರ್ಶನಿಯಲ್ಲಿಯೂ ಇದನ್ನು ತೋರಿಸಬೇಕಾಗಿದೆ, ಶಿವ ನಿರಾಕಾರ, ಶಂಕರ ಆಕಾರಿಯಾಗಿದ್ದಾನೆ. ಕೃಷ್ಣನಂತೂ ಸಾಕಾರದಲ್ಲಿದ್ದಾನೆ, ಜೊತೆಯಲ್ಲಿ ರಾಧೆಯನ್ನು ತೋರಿಸುವುದು ಸರಿಯಾಗಿದೆ. ಆಗ ಇದು ಸಿದ್ಧವಾಗುವುದು - ಇವರೇ ನಂತರ ಲಕ್ಷ್ಮೀ-ನಾರಾಯಣ ಆಗುತ್ತಾರೆಂದು. ಕೃಷ್ಣನು ದ್ವಾಪರದಲ್ಲಿ ಗೀತೆಯನ್ನು ತಿಳಿಸಲು ಬರುವುದೇ ಇಲ್ಲ. ಪತಿತರಾಗುವುದು ಕಲಿಯುಗದ ಅಂತ್ಯದಲ್ಲಿ, ಸತ್ಯಯುಗದಲ್ಲಿ ಪಾವನರಿರುತ್ತಾರೆ ಅಂದಮೇಲೆ ತಂದೆಯು ಸಂಗಮದಲ್ಲಿಯೇ ಬರುತ್ತಾರೆ. ಇದನ್ನು ತಂದೆಯೇ ತಿಳಿದುಕೊಂಡಿದ್ದಾರೆ, ಅವರೇ ತ್ರಿಕಾಲದರ್ಶಿಯಾಗಿದ್ದಾರೆ. ಕೃಷ್ಣನಿಗೆ ತ್ರಿಕಾಲದರ್ಶಿಯೆಂದು ಹೇಳಲಾಗುವುದಿಲ್ಲ, ಅವರು ಮೂರು ಕಾಲಗಳ ಜ್ಞಾನವನ್ನು ತಿಳಿಸಲು ಸಾಧ್ಯವಿಲ್ಲ ಏಕೆಂದರೆ ಕೃಷ್ಣನಿಗೆ ಸೃಷ್ಟಿಯ ಆದಿ-ಮಧ್ಯ-ಅಂತ್ಯದ ಜ್ಞಾನವೇ ಇಲ್ಲ. ಕೃಷ್ಣನು ಚಿಕ್ಕ ಮಗುವಾಗಿದ್ದಾನೆಂದು ಹೇಳುತ್ತಾರೆ. ದೈವೀ ರಾಜಕುಮಾರ-ಕುಮಾರಿಯರು ಕಾಲೇಜಿಗೆ ಓದಲು ಹೋಗುತ್ತಾರೆ. ಮೊದಲು ಇಲ್ಲಿಯೂ ಸಹ ರಾಜ ಕುಮಾರ-ಕುಮಾರಿಯರ ಕಾಲೇಜುಗಳಿತ್ತು, ಈಗ ಒಂದೇ ಬೆರಕೆಯಾಗಿ ಬಿಟ್ಟಿದೆ. ಕೃಷ್ಣನು ರಾಜಕುಮಾರನಾಗಿದ್ದನು, ಅನ್ಯ ರಾಜಕುಮಾರ-ಕುಮಾರಿಯರೂ ಇರುತ್ತಾರೆ, ಎಲ್ಲರೂ ಒಟ್ಟಿಗೆ ಓದುತ್ತಾರೆ. ಅದಂತೂ ನಿರ್ವಿಕಾರಿ ಪ್ರಪಂಚವಾಗಿದೆ, ಒಬ್ಬ ಶಿವ ತಂದೆಯು ಸರ್ವರ ಸದ್ಗತಿದಾತನಾಗಿದ್ದಾರೆ. ಮನುಷ್ಯರು ಸರ್ವರ ಸದ್ಗತಿದಾತನಾಗಲು ಸಾಧ್ಯವಿಲ್ಲ. ತಂದೆಯೇ ಬಂದು ಸರ್ವರಿಗೆ ಮುಕ್ತಿ-ಜೀವನ್ಮುಕ್ತಿಯನ್ನು ಕೊಡುತ್ತಾರೆ. ದೇವತೆಗಳ ರಾಜ್ಯದಲ್ಲಿ ಮತ್ತ್ಯಾವುದೇ ಧರ್ಮವಿರಲಿಲ್ಲ. ಧರ್ಮಗಳು ಅರ್ಧದಿಂದ ಬರುತ್ತವೆ ಅಂದಮೇಲೆ ಸತ್ಯಯುಗದಲ್ಲಿ ಈ ಧರ್ಮಗಳಿರಲು ಹೇಗೆ ಸಾಧ್ಯ! ಇವರು ನಿವೃತ್ತಿ ಮಾರ್ಗದವರು ಹಠಯೋಗಿಗಳಾಗಿದ್ದಾರೆ. ರಾಜಯೋಗವನ್ನು ತಿಳಿದುಕೊಂಡಿಲ್ಲ. ಪ್ರವೃತ್ತಿ ಮಾರ್ಗದವರಿಗಾಗಿ ಈ ರಾಜಯೋಗವಿದೆ, ಭಾರತವು ಪವಿತ್ರ ಪ್ರವೃತ್ತಿ ಮಾರ್ಗವಿತ್ತು, ಈಗ ಕಲಿಯುಗದಲ್ಲಿ ಪತಿತ ಪ್ರವೃತ್ತಿ ಮಾರ್ಗದವರಾಗಿ ಬಿಟ್ಟಿದ್ದೀರಿ. ಭಗವಾನುವಾಚ, ನನ್ನೊಬ್ಬನನ್ನೇ ನೆನಪು ಮಾಡಿರಿ. ಹಳೆಯ ಪ್ರಪಂಚ ಅಥವಾ ದೇಹದ ಸಂಬಂಧಗಳೊಂದಿಗೆ ಮನಸ್ಸನ್ನಿಟ್ಟರೆ ಅದೃಷ್ಟವು ಕೆಟ್ಟು ಹೋಗುವುದು. ಅನೇಕರ ಅದೃಷ್ಟವು ಕೆಟ್ಟು ಹೋಗುತ್ತದೆ. ಯಾರಾದರೂ ಅಕರ್ತವ್ಯ ಮಾಡಿದ್ದರೆ ಅಂತಿಮದಲ್ಲಿ ಅದೆಲ್ಲವೂ ಮುಂದೆ ಬರುತ್ತದೆ, ಸಾಕ್ಷಾತ್ಕಾರವಾಗುತ್ತದೆ. ಕೆಲವು ಮಕ್ಕಳು ಬಹಳ ಮುಚ್ಚಿಡುತ್ತಾರೆ. ಈ ಜನ್ಮದಲ್ಲಿ ಮಾಡಿರುವ ಪಾಪ ಕರ್ಮಗಳನ್ನು ತಂದೆಗೆ ತಿಳಿಸುವುದರಿಂದ ಅರ್ಧ ಶಿಕ್ಷೆಯು ಕಳೆದು ಹೋಗುವುದು. ಆದರೆ ಸಂಕೋಚಕ್ಕೊಳಗಾಗಿ ತಿಳಿಸುವುದೇ ಇಲ್ಲ. ಬಹಳ ಕೊಳಕು ಕೆಲಸಗಳನ್ನು ಮಾಡುತ್ತಾರೆ. ಬುದ್ಧಿಯಲ್ಲಿ ನೆನಪಂತೂ ಇರುತ್ತದೆ ಆದರೆ ಅದನ್ನು ತಿಳಿಸುವುದರಿಂದ ಶಿಕ್ಷೆಯಿಂದ ಮುಕ್ತರಾಗುವಿರಿ. ಇವರು ಅವಿನಾಶಿ ಸರ್ಜನ್ ಆಗಿದ್ದಾರೆ. ಇರುವ ಕಾಯಿಲೆಯನ್ನು ಸಂಕೋಚಕ್ಕೊಳಗಾಗಿ ಸರ್ಜನ್ಗೆ ತಿಳಿಸಲಿಲ್ಲವೆಂದರೆ ಅದು ಕಳೆಯುವುದಾದರೂ ಹೇಗೆ? ಯಾವುದೇ ವಿಕರ್ಮ ಮಾಡಿದ್ದರೂ ಸಹ ತಿಳಿಸುವುದರಿಂದ ಅರ್ಧ ಪಾಪವು ತುಂಡಾಗುವುದು. ತಿಳಿಸದೇ ಇದ್ದರೆ ಅದು ವೃದ್ಧಿಯಾಗುತ್ತಾ ಹೋಗುವುದು. ಹೆಚ್ಚು ಸಿಕ್ಕಿ ಹಾಕಿಕೊಳ್ಳುತ್ತಾ ಹೋಗುವಿರಿ ಮತ್ತೆ ಅದೃಷ್ಟವು ಸಮಾಪ್ತಿಯಾಗಿ ದುರಾದೃಷ್ಟವಾಗಿ ಬಿಡುತ್ತದೆ. ತಂದೆಯು ತಿಳಿಸುತ್ತಾರೆ - ದೇಹದೊಂದಿಗೂ ಸಂಬಂಧವನ್ನು ಇಡಬೇಡಿ.ಯಾವಾಗಲೂ ನನ್ನೊಬ್ಬನನ್ನೇ ನೆನಪು ಮಾಡಿ ಆಗ ನಿಮ್ಮಿಂದ ಯಾವುದೇ ಕೆಟ್ಟ ಕೆಲಸವಾಗುವುದಿಲ್ಲ. ಇವರು ಧರ್ಮರಾಜನೂ ಆಗಿದ್ದಾರೆ, ಅವರೊಂದಿಗೂ ಮುಚ್ಚಿಡುತ್ತಾ ಇದ್ದರೆ ಮತ್ತೆ ನಿಮ್ಮಷ್ಟು ಶಿಕ್ಷೆ ಮತ್ತ್ಯಾರಿಗೂ ಸಿಗುವುದಿಲ್ಲ. ಸಮಯವು ಎಷ್ಟು ಸಮೀಪಿಸುತ್ತಾ ಹೋಗುವುದೋ ಎಲ್ಲರಿಗೂ ಸಾಕ್ಷಾತ್ಕಾರವಾಗುತ್ತಾ ಹೋಗುವುದು. ಈಗ ಎಲ್ಲರ ಅಂತಿಮ ಸಮಯವಾಗಿದೆ, ಎಲ್ಲರೂ ಪತಿತರಾಗಿದ್ದಾರೆ. ಪಾಪಗಳ ಶಿಕ್ಷೆಯು ಖಂಡಿತ ಸಿಗುತ್ತದೆ. ಹೇಗೆ ಒಂದು ಸೆಕೆಂಡಿನಲ್ಲಿ ಜೀವನ್ಮುಕ್ತಿ ಸಿಗುವುದೋ ಹಾಗೆಯೇ ಒಂದು ಸೆಕೆಂಡಿನಲ್ಲಿ ಶಿಕ್ಷೆಗಳ ಈ ರೀತಿ ಅನುಭವವಾಗುತ್ತದೆ ಹೇಗೆ ಬಹಳ ಸಮಯದಿಂದ ಶಿಕ್ಷೆಯನ್ನು ಅನುಭವಿಸುತ್ತಿದ್ದೇನೆ ಎಂಬಂತೆ. ಇದು ಬಹಳ ಸೂಕ್ಷ್ಮ ಮೆಷಿನರಿಯಾಗಿದೆ, ಎಲ್ಲರ ಅಂತಿಮ ಸಮಯವಾಗಿದೆ. ಶಿಕ್ಷೆಗಳನ್ನು ಖಂಡಿತವಾಗಿಯೂ ಅನುಭವಿಸಬೇಕಾಗಿದೆ ನಂತರ ಎಲ್ಲಾ ಆತ್ಮರು ಪವಿತ್ರರಾಗಿ ಹೊರಟು ಹೋಗುವರು. ತಂದೆಯು ಬಂದು ಪತಿತ ಆತ್ಮರನ್ನು ಪಾವನರನ್ನಾಗಿ ಮಾಡುತ್ತಾರೆ. ತಂದೆಯ ವಿನಃ ಮತ್ತ್ಯಾರಿಗೂ ಈ ಶಕ್ತಿಯಿಲ್ಲ. 63 ಜನ್ಮಗಳಿಂದ ಪಾಪಗಳನ್ನು ಮಾಡುತ್ತಾ-ಮಾಡುತ್ತಾ ಈಗ ಪಾಪದ ಕೊಡವು ತುಂಬಿದೆ. ಮಾಯೆಯ ಗ್ರಹಣವು ಎಲ್ಲರಿಗೂ ಹಿಡಿದಿದೆ. ದೊಡ್ಡ ಗ್ರಹಣವು ನಿಮಗೆ ಹಿಡಿದಿದೆ, ನೀವೇ ಸರ್ವಗುಣ ಸಂಪನ್ನರಾಗಿದ್ದಿರಿ, ನಿಮ್ಮ ಮೇಲೆ ಗ್ರಹಣ ಹಿಡಿದಿದೆ. ಜ್ಞಾನವೂ ಸಹ ಈಗ ನೀವು ಮಕ್ಕಳಿಗೆ ಸಿಕ್ಕಿದೆ. ತಂದೆಯು ತಿಳಿಸುತ್ತಾರೆ - ನೀವು ಭಾರತದ ಮಾಲೀಕರಾಗಿದ್ದಿರಿ ನಂತರ 84 ಜನ್ಮಗಳನ್ನು ನೀವು ತೆಗೆದುಕೊಂಡಿರಿ. ನೀವು ಅವಶ್ಯವಾಗಿ ದೇವಿ-ದೇವತಾ ಧರ್ಮದವರಾಗಿದ್ದಿರಿ, ಮತ್ತೆ ಪತಿತರಾದ ಕಾರಣ ಹಿಂದೂಗಳೆಂದು ಕರೆಸಿಕೊಂಡಿದ್ದಿರಿ ಎಂದು ತಂದೆಯು ನೇರವಾಗಿ ತಿಳಿಸುತ್ತಾರೆ. ಹಿಂದೂ ಧರ್ಮವನ್ನು ಯಾರೂ ಸ್ಥಾಪನೆ ಮಾಡಿಯೇ ಇಲ್ಲ. ಮಠ ಪಂಥಕ್ಕೆ ರಾಜಧಾನಿ ಎಂದು ಹೇಳುವುದಿಲ್ಲ. ರಾಜ್ಯವು ರಾಜರಿಗಿರುತ್ತದೆ. ಮೊದಲನೇ ಲಕ್ಷ್ಮೀ-ನಾರಾಯಣ, ಎರಡನೇ ಲಕ್ಷ್ಮೀ-ನಾರಾಯಣ......ಹೀಗೆ ರಾಜ್ಯವು ನಡೆಯುತ್ತದೆ. ಇದೂ ಸಹ ಅವಶ್ಯವಾಗಿದೆ, ಪಾವನರಿಂದ ಪತಿತರಾಗಲೇಬೇಕಾಗಿದೆ. ಪತಿತರಾಗುವ ಕಾರಣ ದೇವಿ-ದೇವತೆಗಳೆಂದು ಕರೆಸಿಕೊಳ್ಳಲು ಸಾಧ್ಯವಿಲ್ಲ. ನೀವು ತಿಳಿದುಕೊಳ್ಳುತ್ತೀರಿ, ನಾವು ಪೂಜ್ಯ ಆದಿ ಸನಾತನ ದೇವಿ-ದೇವತಾ ಧರ್ಮದವರಾಗಿದ್ದೆವು, ತಮ್ಮ ಧರ್ಮದ ಚಿತ್ರಗಳನ್ನೇ ಪೂಜಿಸುತ್ತಾರೆ. ನಾವೇ ಪೂಜ್ಯ ದೇವಿ-ದೇವತೆಗಳಾಗಿದ್ದೆವು, ಈಗ ಪೂಜಾರಿಗಳಾಗಿದ್ದೇವೆ ಎಂಬುದನ್ನೇ ಮರೆತು ಹೋಗಿದ್ದೇವೆ. ತಂದೆಯು ಆಸ್ತಿಯನ್ನು ಕೊಟ್ಟಿದ್ದರು, ನಂತರ ಪತಿತರಾದೆವು ಆದ್ದರಿಂದ ನಮ್ಮದೇ ಚಿತ್ರಗಳಿವೆ. ಕುಳಿತು ಪೂಜೆ ಮಾಡಿದೆವು ಎಂದು ನೀವೀಗ ತಿಳಿದುಕೊಳ್ಳುತ್ತೀರಿ. ತಾವೇ ಪೂಜ್ಯ, ತಾವೇ ಪೂಜಾರಿ. ಇದು ಭಾರತದ ವಿನಃ ಮತ್ತ್ಯಾರಿಗೂ ಹೇಳುವುದಿಲ್ಲ, ತಂದೆಯೂ ಸಹ ಭಾರತದಲ್ಲಿಯೇ ಬಂದು ಪುನಃ ದೇವಿ-ದೇವತೆಗಳನ್ನಾಗಿ ಮಾಡಲು ಜ್ಞಾನ ಕೊಡುತ್ತಾರೆ. ಉಳಿದೆಲ್ಲರೂ ಲೆಕ್ಕಾಚಾರಗಳನ್ನು ಮುಗಿಸಿಕೊಂಡು ಹಿಂತಿರುಗಿ ಹೊರಟು ಹೋಗುತ್ತಾರೆ. ಆತ್ಮರೆಲ್ಲರೂ ಓ ಗಾಡ್ ಫಾದರ್ ಎಂದು ತಂದೆಯನ್ನು ಕರೆಯುತ್ತಾ ಇರುತ್ತಾರೆ. ಇದೂ ಸಹ ತಿಳಿದುಕೊಳ್ಳುವ ಮಾತುಗಳಾಗಿವೆ. ಈ ಸಮಯದಲ್ಲಿ ನಿಮಗೆ ಮೂವರು ತಂದೆಯರಿದ್ದಾರೆ, ಒಬ್ಬರು ಶಿವ ತಂದೆ, ಇನ್ನೊಬ್ಬರು ಲೌಕಿಕ ತಂದೆ ಮತ್ತು ಇವರು ಅಲೌಕಿಕ ತಂದೆ ಪ್ರಜಾಪಿತ ಬ್ರಹ್ಮಾನಾಗಿದ್ದಾರೆ. ಮತ್ತೆಲ್ಲರಿಗೆ ಇಬ್ಬರು ತಂದೆಯರಿದ್ದಾರೆ, ಲೌಕಿಕ ಮತ್ತು ಪಾರಲೌಕಿಕ. ಸತ್ಯಯುಗದಲ್ಲಿ ಕೇವಲ ಒಬ್ಬರೇ ಲೌಕಿಕ ತಂದೆಯಿರುತ್ತಾರೆ. ಪಾರಲೌಕಿಕ ತಂದೆಯನ್ನು ಅರಿತುಕೊಂಡೇ ಇಲ್ಲ. ಅಲ್ಲಂತೂ ಸುಖವೇ ಸುಖವಿರುತ್ತದೆ ಅಂದಮೇಲೆ ಮತ್ತೆ ಪಾರಲೌಕಿಕ ತಂದೆಯನ್ನು ಏಕೆ ನೆನಪು ಮಾಡುವರು! ದುಃಖದಲ್ಲಿ ಎಲ್ಲರೂ ಸ್ಮರಣೆ ಮಾಡುತ್ತಾರೆ, ಇಲ್ಲಿ ನಿಮಗೆ ಮೂವರು ತಂದೆಯರಿರುತ್ತಾರೆ, ಇದೂ ಸಹ ತಿಳಿದುಕೊಳ್ಳುವ ಮಾತಾಗಿದೆ. ಅಲ್ಲಿ ಆತ್ಮಾಭಿಮಾನಿಯಾಗಿರುತ್ತಾರೆ, ನಂತರ ದೇಹಾಭಿಮಾನದಲ್ಲಿ ಬಂದುಬಿಡುತ್ತಾರೆ. ಇಲ್ಲಿ ನೀವು ಆತ್ಮಾಭಿಮಾನಿಗಳೂ ಆಗಿದ್ದೀರಿ, ಪರಮಾತ್ಮಾಭಿಮಾನಿಗಳೂ ಆಗಿದ್ದೀರಿ. ನಾವೆಲ್ಲರೂ ತಂದೆಯ ಮಕ್ಕಳಾಗಿದ್ದೇವೆ, ಅವರಿಂದ ಆಸ್ತಿಯನ್ನು ತೆಗೆದುಕೊಳ್ಳುತ್ತಿದ್ದೇವೆ ಎಂದು ನಿಮಗೆ ಶುದ್ಧ ಅಭಿಮಾನವಿದೆ. ತಂದೆಯು ಶಿಕ್ಷಕ, ಸದ್ಗುರುವೂ ಆಗಿದ್ದಾರೆ, ಅವರ ಮಹಿಮೆಯನ್ನೂ ಸಹ ತಿಳಿಸಬೇಕಾಗಿದೆ. ಅವರೇ ಬಂದು ಎಲ್ಲಾ ಮಕ್ಕಳಿಗೆ ಆಸ್ತಿಯನ್ನು ಕೊಡುತ್ತಾರೆ. ಸತ್ಯಯುಗದಲ್ಲಿ ನಿಮಗೆ ಆಸ್ತಿಯಿತ್ತು, ನಂತರ 84 ಜನ್ಮಗಳನ್ನು ತೆಗೆದುಕೊಂಡು ಅದನ್ನು ಕಳೆದುಕೊಂಡಿದ್ದೀರಿ. ಇದನ್ನು ತಿಳಿಸುವುದು ಎಷ್ಟು ಸಹಜವಾಗಿದೆ, ತಂದೆಗೆ ಪತಿತ-ಪಾವನ, ಸರ್ವರ ಸದ್ಗತಿದಾತನೆಂದು ಹೇಳಲಾಗುತ್ತದೆ. ಈ ಪ್ರಪಂಚವೇ ಪತಿತರದಾಗಿದೆ. ಯಾರೂ ಸದ್ಗತಿ ಕೊಡಲು ಸಾಧ್ಯವಿಲ್ಲ. ಬಾಕಿ ಯಾರಾದರೂ ಬಹಳ ಶಾಸ್ತ್ರಗಳನ್ನು ಓದಿದ್ದರೆ ಅವರದು ಅಂತ್ಯಮತಿ ಸೋ ಗತಿಯಾಗುತ್ತದೆ. ನಂತರದ ಜನ್ಮದಲ್ಲಿ ಬಾಲ್ಯದಲ್ಲಿಯೇ ಎಲ್ಲವನ್ನೂ ಕಂಠಪಾಠ ಮಾಡಿ ಬಿಡುತ್ತಾರೆ. ತಂದೆಯು ನೀವು ಮಕ್ಕಳಿಗೆ ಎಷ್ಟು ಒಳ್ಳೆಯ ಮಧುರಾತಿ ಮಧುರ ಮಾತುಗಳನ್ನು ತಿಳಿಸುತ್ತಾರೆ - ಮಕ್ಕಳೇ, ನಿವು ತಮೋಪ್ರಧಾನರಾಗಿ ಬಿಟ್ಟಿದ್ದೀರಿ. ಈಗ ಪುನಃ ತಂದೆಯನ್ನು ನೆನಪು ಮಾಡಿರಿ ಆಗ ತುಕ್ಕು ಕಳೆಯುವುದು. ಈಗ ನಾಟಕವು ಪೂರ್ಣವಾಗುತ್ತದೆ. ಎಲ್ಲರೂ ಇಲ್ಲಿ ರಾಜರಾಗಬೇಕಾಗಿದೆ. ಕ್ರೈಸ್ಟ್ ಮೊದಲಾದವರೆಲ್ಲರ ಆತ್ಮಗಳು ಹಾಜರಿದ್ದಾರೆ, ಅವರೂ ಸಹ ತಂದೆಯ ಬಳಿ ಸಲಾಮು ಹೊಡೆಯಲು ಬರುವರು. ಅವರಂತೂ ಚಕ್ರವರ್ತಿ ರಾಜರಾಗುವುದಿಲ್ಲ, ಕೇವಲ ತಂದೆಯನ್ನು ನೆನಪು ಮಾಡುತ್ತಾರೆ. ಮನ್ಮನಾಭವದ ಮಂತ್ರವನ್ನು ತೆಗೆದುಕೊಂಡು ಹೋಗುತ್ತಾರೆ. ನಿಮ್ಮದು ಮನ್ಮನಾಭವ ಮತ್ತು ಮಧ್ಯಾಜೀಭವದ ಡಬಲ್ ಮಂತ್ರವಾಗಿದೆ. ತಂದೆಯು ಎಷ್ಟು ಒಳ್ಳೆಯ ಯುಕ್ತಿಯನ್ನು ತಿಳಿಸುತ್ತಾರೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ಈ ಹಳೆಯ ಪ್ರಪಂಚದಲ್ಲಿರುತ್ತಾ ಪುರುಷಾರ್ಥ ಮಾಡಿ ಸರ್ವಗುಣ ಸಂಪನ್ನರು ಅವಶ್ಯವಾಗಿ ಆಗಬೇಕಾಗಿದೆ. ಈ ಹಳೆಯ ಶರೀರ ಹಾಗೂ ಹಳೆಯ ಪ್ರಪಂಚದೊಂದಿಗೆ ಮನಸ್ಸನ್ನು ಇಡಬಾರದು. ಅದೃಷ್ಟವಂತರಾಗಬೇಕಾಗಿದೆ.

2. ಆತ್ಮಾಭಿಮಾನಿ ಹಾಗೂ ಪರಮಾತ್ಮಾಭಿಮಾನಿ ಆಗಬೇಕಾಗಿದೆ. ಈ ಅಂತಿಮ ಸಮಯದಲ್ಲಿ ತಂದೆಯೊಂದಿಗೆ ಏನನ್ನೂ ಮುಚ್ಚಿಡಬಾರದು. ಅವಿನಾಶಿ ಸರ್ಜನ್ನಿಂದ ಸಲಹೆಯನ್ನು ತೆಗೆದುಕೊಳ್ಳುತ್ತಾ ಇರಬೇಕಾಗಿದೆ.

ವರದಾನ:
ಸಂಗ ದೋಷದಿಂದ ದೂರವಿದ್ದು ಸದಾ ತಂದೆಯ ಸಮೀಪತೆಯ ಭಾಗ್ಯವನ್ನು ಪ್ರಾಪ್ತಿ ಮಾಡಿಕೊಳ್ಳುವಂತಹ ಪಾಸ್-ವಿತ್-ಆನರ್ ಭವ.

ಒಂದುವೇಳೆ ತಂದೆಯ ಸಮೀಪವಿರುವುದು ಇಷ್ಟವಾಗುತ್ತದೆಯೆಂದರೆ, ಎಂದೂ ಯಾವುದೇ ಸಂಗ ದೋಷದಿಂದ ದೂರವಿರಬೇಕು. ಹಲವು ಪ್ರಕಾರದ ಆಕರ್ಷಣೆಯು ಪರೀಕ್ಷೆಯ ರೂಪದಲ್ಲಿ ಬರುತ್ತದೆ ಆದರೆ ಆಕರ್ಷಿತರಾಗಬಾರದು. ಸಂಗ ದೋಷವು ಹಲವು ಪ್ರಕಾರದ್ದಿರುತ್ತದೆ, ವ್ಯರ್ಥ ಸಂಕಲ್ಪಗಳು ಅಥವಾ ಮಾಯೆಯ ಆಕರ್ಷಣೆಯ ಸಂಕಲ್ಪಗಳ ಸಂಗ, ಸಂಬಂಧಿಗಳ ಸಂಗ, ವಾಣಿಯ ಸಂಗ, ಅನ್ನ ದೋಷದ ಸಂಗ, ಕರ್ಮದ ಸಂಗ..... ಇವೆಲ್ಲಾ ಸಂಗ ದೋಷಗಳಿಂದ ತಮ್ಮನ್ನು ರಕ್ಷಿಸಿಕೊಳ್ಳುವವರೇ ಪಾಸ್-ವಿತ್-ಆನರ್ ಆಗುವರು.

ಸ್ಲೋಗನ್:
ತಾವು ಸೂಕ್ಷ್ಮ ದೇವತಾ ಆಗುತ್ತೀರೆಂದರೆ, ಪರಿಸ್ಥಿತಿಗಳಲ್ಲಿ ಸ್ವಯಂ ತಂದೆಯೇ ತಮ್ಮ ಛತ್ರಛಾಯೆ ಆಗಿ ಬಿಡುತ್ತಾರೆ.

ಅವ್ಯಕ್ತ ಸೂಚನೆಗಳು:- ಸದಾ ಅಚಲ, ಅಡೋಲ, ಏಕರಸ ಸ್ಥಿತಿಯ ಅನುಭವ ಮಾಡಿ.

ಸಮಯ ಪ್ರಮಾಣ ಈಗ ಸದಾ ಅಚಲ ಅಡೋಲ ಸರ್ವ ಖಜಾನೆಗಳಿಂದ ಸಂಪನ್ನರಾಗಿ. ಸ್ವಲ್ಪವೂ ಸಹ ಏರು-ಪೇರು ಆಗುತ್ತೀರಿ ಎಂದರೆ ಸರ್ವ ಖಜಾನೆಗಳ ಅನುಭವ ಆಗುವುದಿಲ್ಲ. ತಂದೆಯ ಮೂಲಕ ಸಿಕ್ಕಿರುವ ಖಜಾನೆಗಳನ್ನು ಸದಾ ಖಾಯಂ ಆಗಿ ಇಟ್ಟುಕೊಳ್ಳುವ ಸಾಧನ ಆಗಿದೆ ಸದಾ ಅಚಲ ಅಡೋಲರಾಗಿ ಇರುವುದು. ಅಚಲರಾಗಿರುವುದರಿಂದ ಸದಾ ಖುಷಿಯ ಅನುಭವ ಆಗುತ್ತಾ ಇರುತ್ತದೆ. ಹೇಗೆ ವಿನಾಶಿ ಧನ, ಹೆಸರು - ಮಾನ್ಯತೆ - ಆಡಂಬರ, ಪದವಿ ಇತ್ಯಾದಿಗಳು ಸಿಗುತ್ತದೆ ಎಂದರೆ ಖುಷಿಯಾಗುತ್ತದೆ ಅಲ್ಲವೇ. ಇದಂತೂ ಅವಿನಾಶಿ ಖುಷಿಯಾಗಿದೆ ಆದರೆ ಈ ಖುಷಿ ಅವರಿಗೆ ಇರುತ್ತದೆ ಯಾರು ಅಚಲ ಅಡೋಲ ಏಕ-ರಸ ಸ್ಥಿತಿಯಲ್ಲಿ ಇರುತ್ತಾರೆ.