29.07.24         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ- ನಿಮಗೆ ಜ್ಞಾನರತ್ನಗಳನ್ನು ಕೊಡಲು, ಮುರುಳಿಯನ್ನು ತಿಳಿಸಲು ತಂದೆಯು ಬಂದಿದ್ದಾರೆ ಆದ್ದರಿಂದ ನೀವು ಮುರುಳಿಯನ್ನೆಂದೂ ತಪ್ಪಿಸಬಾರದು, ಮುರುಳಿಯೊಂದಿಗೆ ಪ್ರೀತಿಯಿಲ್ಲವೆಂದರೆ ತಂದೆಯೊಂದಿಗೆ ಪ್ರೀತಿಯಿಲ್ಲ”

ಪ್ರಶ್ನೆ:
ಎಲ್ಲದಕ್ಕಿಂತ ಒಳ್ಳೆಯ ಕ್ಯಾರೆಕ್ಟರ್ (ನಡವಳಿಕೆ) ಯಾವುದು, ಯಾವುದನ್ನು ನೀವು ಜ್ಞಾನದಿಂದ ಧಾರಣೆ ಮಾಡುತ್ತೀರಿ?

ಉತ್ತರ:
ನಿರ್ವಿಕಾರಿಗಳಾಗುವುದು ಎಲ್ಲದಕ್ಕಿಂತ ಒಳ್ಳೆಯ ನಡವಳಿಕೆಯಾಗಿದೆ. ನಿಮಗೆ ಜ್ಞಾನವು ಸಿಗುತ್ತದೆ - ಇಡೀ ಪ್ರಪಂಚವು ವಿಕಾರಿಯಾಗಿದೆ, ವಿಕಾರಿಯೆಂದರೇನೇ ಚಾರಿತ್ರ್ಯಹೀನ, ತಂದೆಯು ನಿರ್ವಿಕಾರಿ ಪ್ರಪಂಚವನ್ನು ಸ್ಥಾಪನೆ ಮಾಡಲು ಬಂದಿದ್ದಾರೆ. ನಿರ್ವಿಕಾರಿ ದೇವತೆಗಳು ಚಾರಿತ್ರ್ಯವಂತರಾಗಿದ್ದಾರೆ. ತಂದೆಯ ನೆನಪಿನಿಂದಲೇ ಈ ನಡವಳಿಕೆಯು ಸುಧಾರಣೆಯಾಗುತ್ತದೆ.

ಓಂ ಶಾಂತಿ.
ಮಕ್ಕಳೇ ನೀವು ವಿದ್ಯಾಭ್ಯಾಸವನ್ನೆಂದೂ ತಪ್ಪಿಸಬಾರದು. ಒಂದುವೇಳೆ ವಿದ್ಯೆಯನ್ನು ತಪ್ಪಿಸುತ್ತೀರೆಂದರೆ ಪದವಿಯಿಂದಲೂ ತಪ್ಪಿಸಿಕೊಳ್ಳುತ್ತೀರಿ. ಮಧುರಾತಿ ಮಧುರ ಆತ್ಮೀಯ ಮಕ್ಕಳು ಎಲ್ಲಿ ಕುಳಿತಿದ್ದೀರಿ? ಈಶ್ವರೀಯ ಆಧ್ಯಾತ್ಮಿಕ ವಿಶ್ವವಿದ್ಯಾಲಯದಲ್ಲಿ. ಮಕ್ಕಳಿಗೆ ಇದೂ ಸಹ ತಿಳಿದಿದೆ- ಪ್ರತೀ 5000 ವರ್ಷಗಳ ನಂತರ ನಾವು ಈ ವಿಶ್ವವಿದ್ಯಾಲಯದಲ್ಲಿ ದಾಖಲಾಗುತ್ತೇವೆ. ತಂದೆಯು ತಂದೆಯೂ ಆಗಿದ್ದಾರೆ, ಶಿಕ್ಷಕನೂ ಆಗಿದ್ದಾರೆ, ಗುರುವೂ ಆಗಿದ್ದಾರೆ. ಹಾಗೆ ನೋಡಿದರೆ ಗುರುವಿನ ಮೂರ್ತಿಯೇ ಬೇರೆ, ತಂದೆಯದು ಬೇರೆ, ಶಿಕ್ಷಕರದು ಬೇರೆಯಿರುತ್ತದೆ ಆದರೆ ಈ ಮೂರ್ತಿಯು ಒಂದೇ ಇದೆ ಆದರೆ ಮೂವರೂ ಆಗಿದ್ದಾರೆ ಅರ್ಥಾತ್ ತಂದೆಯೂ ಆಗುತ್ತಾರೆ, ಶಿಕ್ಷಕನೂ ಆಗುತ್ತಾರೆ, ಗುರುವೂ ಆಗುತ್ತಾರೆ. ಮನುಷ್ಯನ ಜೀವನದಲ್ಲಿ ಈ ಮೂರು ಸಂಬಂಧಗಳು ಮುಖ್ಯವಾಗಿದೆ. ತಂದೆ-ಶಿಕ್ಷಕ-ಗುರುವು ಅವರೇ ಆಗಿದ್ದಾರೆ, ಮೂರೂ ಪಾತ್ರವನ್ನು ತಾವೇ ಅಭಿನಯಿಸುತ್ತಾರೆ. ಈ ಒಂದೊಂದು ಮಾತುಗಳನ್ನು ತಿಳಿದುಕೊಳ್ಳುವುದರಿಂದ ನೀವು ಮಕ್ಕಳಿಗೆ ಬಹಳ ಖುಷಿಯಾಗಬೇಕು ಮತ್ತು ಇಂತಹ ತ್ರಿಮೂರ್ತಿ ವಿಶ್ವವಿದ್ಯಾಲಯಕ್ಕೆ ಅನೇಕರನ್ನು ಕರೆದುಕೊಂಡು ಬಂದು ದಾಖಲು ಮಾಡಬೇಕು. ಯಾವ-ಯಾವ ವಿಶ್ವವಿದ್ಯಾಲಯದಲ್ಲಿ ಒಳ್ಳೆಯ ವಿದ್ಯೆಯಿರುತ್ತದೆಯೆಂದರೆ ಅಲ್ಲಿ ಓದುವವರು ಅನ್ಯರಿಗೂ ಸಹ ಈ ವಿಶ್ವವಿದ್ಯಾಲಯದಲ್ಲಿ ಓದಿ, ಇಲ್ಲಿ ಒಳ್ಳೆಯ ಜ್ಞಾನ ಸಿಗುತ್ತದೆ ಮತ್ತು ನಡವಳಿಕೆಯು ಸುಧಾರಣೆಯಾಗುತ್ತದೆ ಎಂದು ತಿಳಿಸುತ್ತಾರೆ ಅಂದಮೇಲೆ ನೀವು ಮಕ್ಕಳೂ ಸಹ ಅನ್ಯರನ್ನು ಕರೆದುಕೊಂಡು ಬರಬೇಕಾಗಿದೆ. ಮಾತೆಯರು ಮಾತೆಯರಿಗೆ, ಪುರುಷರು ಪುರುಷರಿಗೆ ತಿಳಿಸಬೇಕು. ನೋಡಿ, ಇವರು ತಂದೆಯೂ ಆಗಿದ್ದಾರೆ, ಶಿಕ್ಷಕನೂ ಆಗಿದ್ದಾರೆ, ಗುರುವೂ ಆಗಿದ್ದಾರೆ. ಈ ರೀತಿ ತಿಳಿಸುತ್ತೇವೆಯೇ ಅಥವಾ ಇಲ್ಲವೆ ಎಂಬುದನ್ನು ಪ್ರತಿಯೊಬ್ಬರೂ ತಮ್ಮ ಹೃದಯದಿಂದ ಕೇಳಿಕೊಳ್ಳಬಹುದು. ಕೆಲವೊಮ್ಮೆ ತಮ್ಮ ಮಿತ್ರ ಸಂಬಂಧಿಗಳು ತಮ್ಮ ಸಖಿಯರಿಗೆ ತಿಳಿಸುತ್ತಾರೆ. ಇವರು ಪಾರಲೌಕಿಕ ತಂದೆಯೂ ಆಗಿದ್ದಾರೆ, ಶಿಕ್ಷಕನೂ ಆಗಿದ್ದಾರೆ, ಸದ್ಗುರುವೂ ಆಗಿದ್ದಾರೆ? ತಂದೆಯು ಶ್ರೇಷ್ಠ ದೇವಿ-ದೇವತೆಗಳನ್ನಾಗಿ ಮಾಡುವವರಾಗಿದ್ದಾರೆ. ತಂದೆಯು ತನ್ನ ಸಮಾನ ತಂದೆಯನ್ನಾಗಿ ಮಾಡುವುದಿಲ್ಲ ಬಾಕಿ ಅವರ ಮಹಿಮೆ ಏನಿದೆ ಅದರಲ್ಲಿ ತಮ್ಮ ಸಮಾನ ಮಾಡುತ್ತಾರೆ. ತಂದೆಯ ಕರ್ತವ್ಯವಾಗಿದೆ- ಪಾಲನೆ ಮಾಡುವುದು ಮತ್ತು ಪ್ರೀತಿ ಮಾಡುವುದು ಅಂದಮೇಲೆ ಇಂತಹ ತಂದೆಯನ್ನು ಅವಶ್ಯವಾಗಿ ನೆನಪು ಮಾಡಬೇಕು. ಅವರ ಹೋಲಿಕೆ ಮತ್ತ್ಯಾರೊಂದಿಗೆ ಮಾಡಲು ಸಾಧ್ಯವಿಲ್ಲ. ಭಲೆ ಗುರುವಿನಿಂದ ಶಾಂತಿ ಸಿಗುತ್ತದೆ ಎಂದು ಹೇಳುತ್ತಾರೆ ಆದರೆ ಇಲ್ಲಂತೂ ವಿಶ್ವದ ಮಾಲೀಕರನ್ನಾಗಿ ಮಾಡುತ್ತಾರೆ. ನಾನು ಎಲ್ಲಾ ಆತ್ಮಗಳ ತಂದೆಯಾಗಿದ್ದೇನೆ ಎಂದು ಯಾರೂ ಹೇಳುವುದಿಲ್ಲ ಎಲ್ಲಾ ಆತ್ಮಗಳ ತಂದೆಯು ಯಾರಾಗಲು ಸಾಧ್ಯ ಎನ್ನುವುದೂ ಸಹ ಯಾರಿಗೂ ಗೊತ್ತಿಲ್ಲ. ಒಬ್ಬ ಬೇಹದ್ದಿನ ತಂದೆ ಯಾರಿಗೆ ಹಿಂದೂ, ಮುಸಲ್ಮಾನ್, ಕ್ರಿಶ್ಚಿಯನ್ ಮೊದಲಾದವರು ಗಾಡ್ಫಾದರ್ ಎಂದು ಅವಶ್ಯವಾಗಿ ಹೇಳುತ್ತಾರೆ, ಬುದ್ಧಿಯು ಖಂಡಿತ ನಿರಾಕಾರನ ಕಡೆ ಹೋಗುತ್ತದೆ. ಇದನ್ನು ಯಾರು ಹೇಳಿದರು? ಆತ್ಮವು ಗಾಡ್ಫಾದರ್ ಎಂದು ಹೇಳುತ್ತದೆ ಅಂದಾಗ ಅವಶ್ಯವಾಗಿ ಮಿಲನ ಮಾಡಬೇಕು. ಕೇವಲ ತಂದೆಯೆಂದು ಹೇಳಿ ಅವರೊಂದಿಗೆ ಮಿಲನವೇ ಮಾಡಲಿಲ್ಲವೆಂದರೆ ಅವರು ತಂದೆಯಾಗಲು ಹೇಗೆ ಸಾಧ್ಯ? ತಂದೆಯು ಇಡೀ ಪ್ರಪಂಚದ ಮಕ್ಕಳ ಯಾವ ಆಸೆಯಿದೆ ಅದನ್ನು ಪೂರ್ಣ ಮಾಡುತ್ತಾರೆ. ನಾವು ಶಾಂತಿಧಾಮಕ್ಕೆ ಹೋಗಬೇಕೆಂದು ಎಲ್ಲರಿಗೂ ಕಾಮನೆಯಿರುತ್ತದೆ. ಆತ್ಮಕ್ಕೆ ಮನೆಯು ನೆನಪಿಗೆ ಬರುತ್ತದೆ ಏಕೆಂದರೆ ಆತ್ಮವು ರಾವಣರಾಜ್ಯದಲ್ಲಿ ಸುಸ್ತಾಗಿಬಿಟ್ಟಿದೆ. ಆಂಗ್ಲ ಭಾಷೆಯಲ್ಲಿಯೂ ಸಹ ಓ ಗಾಡ್ಫಾದರ್, ಲಿಬರೇಟ್ ಮಾಡಿ ಎಂದು ಹೇಳುತ್ತಾರೆ. ತಮೋಪ್ರಧಾನರಾಗುತ್ತಾ-ಆಗುತ್ತಾ, ಪಾತ್ರವನ್ನು ಅಭಿನಯಿಸುತ್ತಾ ಶಾಂತಿಧಾಮಕ್ಕೆ ಹೊರಟುಹೋಗುತ್ತೀರಿ ನಂತರ ಮೊದಲು ಸುಖಧಾಮಕ್ಕೆ ಬರುತ್ತೀರಿ. ಮೊದಲೇ ಬಂದು ವಿಕಾರಿಗಳಾಗುತ್ತೀರಿ ಎಂದಲ್ಲ. ತಂದೆಯು ತಿಳಿಸುತ್ತಾರೆ- ಇದು ವೇಶ್ಯಾಲಯ, ರಾವಣರಾಜ್ಯವಾಗಿದೆ. ಇದಕ್ಕೆ ರೌರವ ನರಕವೆಂದು ಹೇಳಲಾಗುತ್ತದೆ.

ಭಾರತ ಅಥವಾ ಈ ವಿಶ್ವದಲ್ಲಿ ಎಷ್ಟು ಶಾಸ್ತ್ರಗಳು ಎಷ್ಟೊಂದು ವಿದ್ಯೆಯ ಪುಸ್ತಕಗಳಿವೆಯೋ ಇವೆಲ್ಲವೂ ಸಮಾಪ್ತಿಯಾಗಿಬಿಡುತ್ತವೆ. ತಂದೆಯು ನಿಮಗೆ ಯಾವ ಉಡುಗೊರೆಯನ್ನು ಕೊಡುತ್ತಾರೆಯೋ ಅದು ಎಂದಿಗೂ ಸುಡುವಂತದ್ದಲ್ಲ. ಇದು ಧಾರಣೆ ಮಾಡುವಂತದ್ದಾಗಿದೆ. ಯಾವುದು ಕೆಲಸಕ್ಕೆ ಬರುವುದಿಲ್ಲವೋ ಅಂತಹ ವಸ್ತುವನ್ನು ಸುಡಲಾಗುತ್ತದೆ. ಸುಟ್ಟುಹಾಕಲು ಜ್ಞಾನವು ಯಾವುದೇ ಶಾಸ್ತ್ರವಲ್ಲ. ನಿಮಗೆ ಜ್ಞಾನ ಸಿಗುತ್ತದೆ ಆದ್ದರಿಂದ 21 ಜನ್ಮಗಳು ಪಡೆಯುತ್ತೀರಿ. ಇವರ ಶಾಸ್ತ್ರಗಳನ್ನು ಸುಟ್ಟುಹಾಕುತ್ತಾರೆಂದಲ್ಲ, ಈ ಜ್ಞಾನವು ತಾನಾಗಿಯೇ ಪ್ರಾಯಃ ಲೋಪವಾಗಿಬಿಡುತ್ತದೆ. ಇದು ಯಾವುದೇ ಓದುವಂತಹ ಪುಸ್ತಕವಲ್ಲ, ಜ್ಞಾನ-ವಿಜ್ಞಾನದ ಭವನವೆಂದೂ ಹೆಸರಿದೆ ಆದರೆ ಈ ಹೆಸರು ಏಕೆ ಬಂದಿದೆ, ಇದರ ಅರ್ಥವೇನು ಎಂಬುದು ಅವರಿಗೆ ಗೊತ್ತಿಲ್ಲ. ಜ್ಞಾನ-ವಿಜ್ಞಾನದ ಮಹಿಮೆಯು ಎಷ್ಟು ದೊಡ್ಡದಾಗಿದೆ! ಜ್ಞಾನ ಅರ್ಥಾತ್ ಸೃಷ್ಟಿಚಕ್ರದ ಜ್ಞಾನವನ್ನು ಈಗ ನೀವು ಧಾರಣೆ ಮಾಡುತ್ತೀರಿ. ವಿಜ್ಞಾನವೆಂದರೆ ಶಾಂತಿಧಾಮ ಜ್ಞಾನದಿಂದಲೂ ನೀವು ದೂರ ಹೋಗುತ್ತೀರಿ. ಜ್ಞಾನದಲ್ಲಿ ವಿದ್ಯೆಯ ಆಧಾರದಿಂದ ನೀವು ರಾಜ್ಯ ಮಾಡುತ್ತೀರಿ. ನಿಮಗೆ ಗೊತ್ತಿದೆ, ನಾವಾತ್ಮಗಳಿಗೆ ತಂದೆಯು ಬಂದು ಓದಿಸುತ್ತಾರೆ,ಇಲ್ಲವೆಂದಾದರೆ ಭಗವಾನುವಾಚ ಎನ್ನುವುದು ಇರುತ್ತಲೇ ಇರಲಿಲ್ಲ, ಶಾಸ್ತ್ರಗಳನ್ನು ಓದಿ ಬರುವುದಿಲ್ಲ, ಭಗವಂತನಲ್ಲಂತೂ ಜ್ಞಾನ-ವಿಜ್ಞಾನ ಎರಡೂ ಇದೆ. ಯಾರು ಯಾವ ರೀತಿ ಇದ್ದಾರೆಯೋ ಆ ರೀತಿ ಮಾಡುತ್ತಾರೆ. ಇವು ಬಹಳ ಸೂಕ್ಷ್ಮವಾದ ಮಾತುಗಳಾಗಿವೆ. ಜ್ಞಾನಕ್ಕಿಂತ ವಿಜ್ಞಾನವು ಬಹಳ ಸೂಕ್ಷ್ಮವಾಗಿದೆ. ಜ್ಞಾನದಿಂದಲೂ ದೂರ ಹೋಗಬೇಕಾಗಿದೆ, ಜ್ಞಾನವು ಸ್ಥೂಲವಾಗಿದೆ, ನಾವದನ್ನು ಓದಿಸುತ್ತೇವೆ. ಶಬ್ಧವಾಗುತ್ತದೆಯಲ್ಲವೆ ಆದರೆ ವಿಜ್ಞಾನವು (ಯೋಗ) ಸೂಕ್ಷ್ಮವಾಗಿದೆ, ಇದರಲ್ಲಿ ಶಬ್ಧದಿಂದ ದೂರ ಶಾಂತಿಯಲ್ಲಿ ಹೋಗಬೇಕಾಗಿದೆ. ಈ ಶಾಂತಿಗಾಗಿಯೇ ಎಲ್ಲರೂ ಅಲೆದಾಡುತ್ತಾರೆ. ಸನ್ಯಾಸಿಗಳ ಬಳಿ ಹೋಗುತ್ತಾರೆ ಆದರೆ ತಂದೆಯ ಬಳಿ ಯಾವ ವಸ್ತುವಿದೆಯೋ ಅದು ಮತ್ತ್ಯಾರಿಂದಲೂ ಸಿಗುವುದಿಲ್ಲ, ಹಠಯೋಗ ಮಾಡುತ್ತಾರೆ, ಹಳ್ಳಗಳಲ್ಲಿ ಹೋಗಿ ಕುಳಿತುಬಿಡುತ್ತಾರೆ ಆದರೆ ಇದರಿಂದ ಯಾವುದೇ ಶಾಂತಿಯು ಸಿಗುವುದಿಲ್ಲ. ಇಲ್ಲಂತೂ ಕಷ್ಟದ ಯಾವುದೇ ಮಾತಿಲ್ಲ. ವಿದ್ಯೆಯೂ ಸಹ ಬಹಳ ಸಹಜವಾಗಿದೆ.7ದಿನದ ಕೋರ್ಸ್ ತೆಗೆದುಕೊಳ್ಳಲಾಗುತ್ತದೆ 7 ದಿನದ ಕೋರ್ಸ್ತೆಗೆದುಕೊಂಡು ಭಲೆ ಎಲ್ಲಿ ಬೇಕಾದರೂ ಸಹ ಹೊರಗೆ ಹೋಗಬಹುದು. ಈ ರೀತಿ ಬೇರೆ ಶೈಕ್ಷಣಿಕ ಕಾಲೇಜಿನಲ್ಲಿ ಮಾಡಲು ಸಾಧ್ಯವಿಲ್ಲ. ನಿಮಗಾಗಿ ಈ ಶಿಕ್ಷಣವೇ 7 ದಿನಗಳದ್ದಾಗಿದೆ. ಎಲ್ಲವನ್ನೂ ತಿಳಿಸಲಾಗುತ್ತದೆ ಆದರೆ 7 ದಿನಗಳು ಸಹಾ ಯಾರೂ ಕೊಡುವುದಿಲ್ಲ, ಬುದ್ಧಿಯೋಗವು ಎಲ್ಲಿಂದ ಎಲ್ಲೆಲ್ಲಿಗೋ ಹೊರಟುಹೋಗುತ್ತದೆ. ನೀವಂತೂ ಭಟ್ಟಿಯಲ್ಲಿದ್ದಿರಿ, ಯಾರನ್ನೂ ನೋಡುತ್ತಿರಲಿಲ್ಲ, ಯಾರೊಂದಿಗೂ ಮಾತನಾಡುತ್ತಿರಲಿಲ್ಲ, ಹೊರಗೂ ಹೋಗುತ್ತಿರಲಿಲ್ಲ. ತಪಸ್ಸು ಮಾಡಲು ಸಾಗರದ ತೀರದಲ್ಲಿ ಹೋಗಿ ನೆನಪಿನಲ್ಲಿ ಕುಳಿತುಕೊಳ್ಳುತ್ತಿದ್ದಿರಿ. ಆ ಸಮಯದಲ್ಲಿ ಈ ಚಕ್ರದ ಬಗ್ಗೆ ತಿಳಿದಿರಲಿಲ್ಲ. ಈ ವಿದ್ಯೆಯನ್ನೂ ತಿಳಿದಿರಲಿಲ್ಲ ಆದರೆ ಮೊಟ್ಟಮೊದಲು ತಂದೆಯೊಂದಿಗೆ ಯೋಗವಿರಬೇಕು. ತಂದೆಯ ಪರಿಚಯ ಬೇಕು ನಂತರ ಶಿಕ್ಷಕರು ಬೇಕು. ಮೊಟ್ಟಮೊದಲಂತೂ ತಂದೆಯ ಜೊತೆ ಹೇಗೆ ಬುದ್ಧಿಯೋಗವನ್ನಿಡುವುದು ಎಂಬುದನ್ನು ಕಲಿಯಬೇಕಾಗುತ್ತದೆ ಏಕೆಂದರೆ ಈ ತಂದೆಯು ಅಶರೀರಿಯಾಗಿದ್ದಾರೆ. ಅನ್ಯರು ಯಾರೂ ಒಪ್ಪುವುದೇ ಇಲ್ಲ. ಗಾಡ್ಫಾದರ್ ಸರ್ವವ್ಯಾಪಿ ಎಂದು ಹೇಳುತ್ತಾರೆ. ಈ ಸರ್ವವ್ಯಾಪಿಯ ಜ್ಞಾನವು ನಡೆದುಬರುತ್ತದೆ ಆದರೆ ಈಗ ನಿಮ್ಮ ಬುದ್ಧಿಯಲ್ಲಿ ಆ ಮಾತಿಲ್ಲ. ತಾವಂತೂ ವಿದ್ಯಾರ್ಥಿಗಳಾಗಿದ್ದೀರಿ. ತಂದೆಯು ತಿಳಿಸುತ್ತಾರೆ- ತಮ್ಮ ವ್ಯಾಪಾರ-ವ್ಯವಹಾರವನ್ನು ಭಲೆ ಮಾಡಿ ಆದರೆ ಮುರುಳಿಯನ್ನು ಅವಶ್ಯವಾಗಿ ಓದಿ. ಭಲೆ ಗೃಹಸ್ಥ ವ್ಯವಹಾರದಲ್ಲಿರಿ. ಒಂದುವೇಳೆ ಶಾಲೆಗೆ ಹೋಗುವುದಿಲ್ಲವೆಂದು ಹೇಳಿದರೆ ಅದಕ್ಕೆ ತಂದೆಯು ತಾನೇ ಏನು ಮಾಡಲು ಸಾಧ್ಯ! ಅರೆ ಭಗವಂತನು ಭಗವಾನ್-ಭಗವತಿಯನ್ನಾಗಿ ಮಾಡಲು ಓದಿಸುತ್ತಾರೆ. ಭಗವಾನುವಾಚ- ನಾನು ರಾಜರಿಗೂ ರಾಜರನ್ನಾಗಿ ಮಾಡುತ್ತೇನೆ ಅಂದಮೇಲೆ ಏನು ಭಗವಂತನಿಂದ ರಾಜಯೋಗವನ್ನು ಕಲಿಯುವುದಿಲ್ಲವೆ? ಈ ರೀತಿ ಕಲಿಯದೇ ಯಾರು ನಿಲ್ಲಲು ಸಾಧ್ಯ! ಆದ್ದರಿಂದಲೇ ನೀವು ಓಡಿಬಂದಿರಿ. ವಿಷದಿಂದ ಪಾರಾಗಲು ಓಡಿದಿರಿ, ಬಂದು ಭಟ್ಟಿಯಲ್ಲಿ ಕುಳಿತಿರಿ, ಇದರಿಂದ ಯಾರೂ ನೋಡಲು ಸಾಧ್ಯವಾಗಬಾರದು, ಮಿಲನ ಮಾಡಲು ಸಾಧ್ಯವಾಗಬಾರದು ಎಂದು. ಯಾರನ್ನೂ ನೋಡುತ್ತಿರಲಿಲ್ಲ ಅಂದಮೇಲೆ ಯಾರೊಂದಿಗೆ ಮನಸ್ಸನ್ನಿಡುವುದು? ಇದು ಮಕ್ಕಳಿಗೆ ನಿಶ್ಚಯವೂ ಇದೆ- ಇದನ್ನು ಭಗವಂತನು ಓದಿಸುತ್ತಾರೆ ಆದರೆ ಇಂತಹ ವಿದ್ಯೆಯನ್ನು ಓದುವುದಕ್ಕೂ ಸಹ ಖಾಯಿಲೆಯಾಗಿದೆ, ಕೆಲಸವಿದೆ, ಅದು ಇದೆ..... ಎಂದು ನೆಪ ಹೇಳುತ್ತಾರೆ. ತಂದೆಯಂತೂ ಬೇರೆ ಸಮಯದಲ್ಲಿ ಮುರುಳಿ ಕೇಳುವುದಕ್ಕೂ ಅವಕಾಶ ಕೊಡುತ್ತಾರೆ. ಇತ್ತೀಚೆಗೆ ಶಾಲೆಯು ಬಹಳಷ್ಟು ಶಿಫ್ಟ್ ಗಳಿರುತ್ತವೆ. ಇಲ್ಲಿ ಯಾವುದೇ ಹೆಚ್ಚಿನ ವಿದ್ಯೆಯಂತೂ ಇಲ್ಲ ಕೇವಲ ತಂದೆ ಮತ್ತು ರಾಜ್ಯಭಾಗ್ಯವನ್ನು ತಿಳಿಯಲು ಒಳ್ಳೆಯ ಬುದ್ಧಿಯು ಬೇಕು. ಅಲ್ಫ್ ಮತ್ತು ಭೇ ಇವೆರಡನ್ನು ನೆನಪು ಮಾಡಿ. ಎಲ್ಲರಿಗೂ ತಿಳಿಸಿ. ತ್ರಿಮೂರ್ತಿಯನ್ನಂತೂ ಅನೇಕರು ರಚಿಸುತ್ತಾರೆ ಆದರೆ ಮೇಲೆ ಶಿವತಂದೆಯನ್ನು ತೋರಿಸುವುದಿಲ್ಲ. ಅಂದಮೇಲೆ ಗೀತೆಯ ಭಗವಂತ ಶಿವ, ಇವರ ಮೂಲಕವೇ ಜ್ಞಾನವನ್ನು ತೆಗೆದುಕೊಂಡು ವಿಷ್ಣುವಾಗುತ್ತಾರೆಂದು ಮನುಷ್ಯರಿಗೆ ಅರ್ಥವಾಗುತ್ತದೆಯೇ! ರಾಜಯೋಗವಾಗಿದೆಯಲ್ಲವೆ. ಈಗ ಇದು ಬಹಳ ಜನ್ಮಗಳ ಅಂತಿಮ ಜನ್ಮವಾಗಿದೆ, ಎಷ್ಟು ಸಹಜ ತಿಳುವಳಿಕೆಯಾಗಿದೆ. ಯಾವುದೇ ಪುಸ್ತಕಗಳು ಕೈಯಲ್ಲಿಲ್ಲ, ಕೇವಲ ಒಂದು ಬ್ಯಾಡ್ಜ್ ಇದ್ದರೂ ಸಾಕು ಅದರಲ್ಲಿ ತ್ರಿಮೂರ್ತಿ ಚಿತ್ರವಿರಲಿ. ಇದರ ಬಗ್ಗೆ ತಿಳಿಸಬೇಕು- ತಂದೆಯು ಹೇಗೆ ಬ್ರಹ್ಮಾರವರ ಮೂಲಕ ವಿದ್ಯೆಯನ್ನು ಓದಿಸಿ ವಿಷ್ಣುಸಮಾನರನ್ನಾಗಿ ಮಾಡುತ್ತಾರೆ.

ನಾವು ರಾಧೆಯಂತೆ ಆಗಬೇಕೆಂದು ತಿಳಿಯುತ್ತಾರೆ. ಕಳಸವಂತೂ ಮಾತೆಯರಿಗೆ ಸಿಗುತ್ತದೆ ಅಂದರೆ ರಾಧೆಯ ಬಹಳ ಜನ್ಮಗಳ ಅಂತಿಮದಲ್ಲಿ ಅವರಿಗೆ ಕಳಸವು ಸಿಗುತ್ತದೆ. ಈ ರಹಸ್ಯವೂ ಸಹ ತಂದೆಯು ತಿಳಿಸುತ್ತಾರೆ ಮತ್ತ್ಯಾವುದೇ ಮನುಷ್ಯಮಾತ್ರರು ತಿಳಿದುಕೊಂಡಿಲ್ಲ. ನಿಮ್ಮ ಸೇವಾಕೇಂದ್ರದಲ್ಲಿ ಅನೇಕರು ಬರುತ್ತಾರೆ. ಕೆಲವರು ಒಂದುದಿನ ಬರುತ್ತಾರೆ, ಮತ್ತೆ 4ದಿನ ಬರುವುದೇ ಇಲ್ಲ ಅಂದಾಗ ಅವರನ್ನು ಕೇಳಬೇಕು- ಇಷ್ಟು ದಿನ ಏನು ಮಾಡುತ್ತಿದ್ದಿರಿ? ತಂದೆಯನ್ನು ನೆನಪು ಮಾಡುತ್ತಿದ್ದಿರಾ? ಸ್ವದರ್ಶನ ಚಕ್ರವನ್ನು ತಿರುಗಿಸುತ್ತಿದ್ದಿರಾ? ಯಾರು ತಡವಾಗಿ ಬರುತ್ತಾರೆಯೋ ಅವರಿಂದ ಬರೆಸಿಕೊಂಡಾದರೂ ಕೇಳಬೇಕು. ಕೆಲವರು ವರ್ಗಾವಣೆಯಾಗಿ ಹೋಗುತ್ತಾರೆ ಅಂದರೆ ಅವಶ್ಯವಾಗಿ ಯಾವುದೋ ಸೇವಾಕೇಂದ್ರದವರಾಗುತ್ತಾರೆ, ಅವರಿಗೆ ಮಂತ್ರವಂತೂ ಸಿಕ್ಕಿದೆ, ತಂದೆಯನ್ನು ನೆನಪು ಮಾಡಬೇಕು ಮತ್ತು ಚಕ್ರವನ್ನು ತಿರುಗಿಸಬೇಕು. ತಂದೆಯಂತೂ ಬಹಳ ಸಹಜಮಾತನ್ನೂ ತಿಳಿಸುತ್ತಾರೆ- ಶಬ್ಧವೇ ಎರಡಾಗಿದೆ- ಮನ್ಮನಾಭವ. ನನ್ನನ್ನು ನೆನಪು ಮಾಡಿ ಮತ್ತು ಆಸ್ತಿಯನ್ನು ನೆನಪು ಮಾಡಿ. ಇದರಲ್ಲಿ ಪೂರ್ಣಚಕ್ರವು ಬಂದುಬಿಡುತ್ತದೆ. ಯಾರೇ ಶರೀರ ಬಿಡುತ್ತಾರೆಂದರೆ ಇಂತಹವರು ಸ್ವರ್ಗಕ್ಕೆ ಹೋದರೆಂದು ಹೇಳುತ್ತಾರೆ ಆದರೆ ಸ್ವರ್ಗವೇನಾಗಿದೆ ಎಂಬುದು ಯಾರಿಗೂ ಗೊತ್ತಿಲ್ಲ. ಈಗ ನೀವು ತಿಳಿದುಕೊಳ್ಳುತ್ತೀರಿ- ಅಲ್ಲಂತೂ ರಾಜ್ಯಭಾಗ್ಯವಿರುತ್ತದೆ, ಉತ್ತಮರಿಂದ ಹಿಡಿದು ಕಡಿಮೆ ಪದವಿಯತನಕ, ಸಾಹುಕಾರರಿಂದ ಹಿಡಿದು ಬಡವರ ತನಕ ಎಲ್ಲರೂ ಸುಖಿಯಾಗಿರುತ್ತಾರೆ. ಇಲ್ಲಿ ದುಃಖೀ ಪ್ರಪಂಚವಾಗಿದೆ, ಅಲ್ಲಿ ಸುಖೀ ಪ್ರಪಂಚವಾಗಿರುತ್ತದೆ. ತಂದೆಯಂತೂ ಬಹಳ ಚೆನ್ನಾಗಿ ತಿಳಿಸುತ್ತಾರೆ- ಭಲೆ ಯಾರೇ ವ್ಯಾಪಾರಿಗಳಾಗಿರಲಿ ಅಥವಾ ಏನೇ ಆಗಿರಲಿ ಆದರೆ ವಿದ್ಯಾಭ್ಯಾಸಕ್ಕಾಗಿ ನೆಪ ಹೇಳುವುದು ಸರಿಯೆನಿಸುವುದಿಲ್ಲ. ಬರದಿದ್ದರೆ ಅವರನ್ನು ಕೇಳಬೇಕು- ನೀವು ತಂದೆಯನ್ನು ಎಷ್ಟು ನೆನಪು ಮಾಡುತ್ತೀರಾ? ಸ್ವದರ್ಶನ ಚಕ್ರವನ್ನು ತಿರುಗಿಸುತ್ತೀರಾ? ತಿನ್ನಿ-ಕುಡಿಯಿರಿ, ಓಡಾಡಿ-ತಿರುಗಾಡಿ ಅದಕ್ಕೇನೂ ನಿಷೇಧವಿಲ್ಲ. ಆದರೆ ಈ ವಿದ್ಯೆಗಾಗಿಯೂ ಸಮಯವನ್ನು ತೆಗೆಯಿರಿ, ಅನ್ಯರ ಕಲ್ಯಾಣ ಮಾಡಿ. ತಿಳಿದುಕೊಳ್ಳಿ- ಯಾರಿಗಾದರೂ ವಸ್ತ್ರಗಳನ್ನು ಒಗೆಯುವ ಕೆಲಸವಿದೆ, ಅಲ್ಲಿ ಅನೇಕರು ಬರುತ್ತಾರೆ. ಭಲೆ ಮುಸಲ್ಮಾನರಿರಬಹುದು, ಪಾರಸಿಗಳಿರಬಹುದು, ಹಿಂದೂಗಳಿರಬಹುದು ತಿಳಿಸಿ- ನೀವು ಸ್ಥೂಲಬಟ್ಟೆಗಳನ್ನು ಒಗೆಯುತ್ತೀರಿ ಆದರೆ ಈ ನಿಮ್ಮ ಶರೀರವಂತೂ ಹಳೆಯ ಮೈಲಿಗೆ ವಸ್ತ್ರವಾಗಿದೆ. ಆತ್ಮವೂ ಸಹ ತಮೋಪ್ರಧಾನವಾಗಿದೆ, ಅದನ್ನು ಸತೋಪ್ರಧಾನ, ಸ್ವಚ್ಛವನ್ನಾಗಿ ಮಾಡಬೇಕಾಗಿದೆ. ಈ ಇಡೀ ಪ್ರಪಂಚವು ತಮೋಪ್ರಧಾನ, ಕಲಿಯುಗೀ ಹಳೆಯದಾಗಿದೆ. ತಮೋಪ್ರಧಾನದಿಂದ ಸತೋಪ್ರಧಾನರಾಗಲು ಲಕ್ಷ್ಯವಿದೆಯಲ್ಲವೆ. ತಿಳಿದುಕೊಳ್ಳಿ ಅಥವಾ ತಿಳೀದುಕೊಳ್ಳದಿರಿ, ಮಾಡಿ ಮಾಡದೇ ಇರಿ ಅದು ನಿಮ್ಮಿಷ್ಟ. ನೀವು ಆತ್ಮರಾಗಿದ್ದೀರಲ್ಲವೇ, ಆತ್ಮ ಅವಶ್ಯವಾಗಿ ಪವಿತ್ರವಾಗಿರಬೇಕು ಈಗಂತೂ ನಮ್ಮ ಆತ್ಮ ಅಪವಿತ್ರವಾಗಿದೆ. ಆತ್ಮ ಮತ್ತು ಶರೀರ ಎರಡೂ ಮೈಲಿಗೆಯಾಗಿದೆ, ಅವುಗಳನ್ನು ಸ್ವಚ್ಛಮಾಡಲು ತಂದೆಯನ್ನು ನೆನಪುಮಾಡಿ, ಆಗ ಖಂಡಿತವಾಗಿ ನಿಮ್ಮ ಆತ್ಮ ಸಂಪೂರ್ಣ ಶೇಕಡಾ 100 ರಷ್ಟು ಪವಿತ್ರ ಚಿನ್ನವಾಗುತ್ತದೆ. ನಂತರ ಒಡವೆಯೂ ಚೆನ್ನಾಗಿರುತ್ತದೆ ಒಪ್ಪಿ ಅಥವಾ ಬಿಡಿ ನಿಮ್ಮಿಷ್ಟ. ಇದೂ ಸಹ ಎಷ್ಟು ಸೇವೆಯಾಯಿತು! ವೈದ್ಯರ ಬಳಿ ಹೋಗಿ, ಕಾಲೇಜುಗಳಿಗೆ ಹೋಗಿ, ದೊಡ್ಡ-ದೊಡ್ಡವರಿಗೆ ಹೋಗಿ ತಿಳಿಸಿ - ನಡವಳಿಕೆಯು ಬಹಳ ಚೆನ್ನಾಗಿರಬೇಕು. ಇಲ್ಲಂತೂ ಎಲ್ಲರೂ ನಡುವಳಿಕೆಹೀನ, ಚಾರಿತ್ರ್ಯ ಹೀನರಾಗಿದ್ದಾರೆ. ತಂದೆಯು ತಿಳಿಸುತ್ತಾರೆ- ಮಕ್ಕಳೇ, ನಿರ್ವಿಕಾರಿಗಳಾಗಬೇಕಾಗಿದೆ, ನಿರ್ವಿಕಾರಿ ಪ್ರಪಂಚ ಇತ್ತಲ್ಲವೇ ಈಗ ಪ್ರಪಂಚ ವಿಕಾರಿಯಾಗಿದೆ ಚಾರಿತ್ರ್ಯಬಹಳ ಕೆಟ್ಟುಹೋಗಿದೆ. ನಿರ್ವಿಕಾರಿಗಳಾಗದ ವಿನಃ ಸುಧಾರಣೆಯಾಗುವುದಿಲ್ಲ. ಇಲ್ಲಿ ಮನುಷ್ಯರು ಕಾಮಿಗಳಾಗಿದ್ದಾರೆ, ಈಗ ವಿಕಾರಿ ಪ್ರಪಂಚದಿಂದ ನಿರ್ವಿಕಾರಿ ಪ್ರಪಂಚವನ್ನು ಒಬ್ಬ ತಂದೆಯೇ ಸ್ಥಾಪನೆ ಮಾಡುತ್ತಾರೆ. ಬಾಕಿ ಹಳೆಯ ಪ್ರಪಂಚದ ವಿನಾಶವಾಗಿಬಿಡುತ್ತದೆ ಈ ಗೋಲದ ಚಿತ್ರದಲ್ಲಿ ಬಹಳ ಒಳ್ಳೆಯ ತಿಳುವಳಿಕೆಯಿದೆ. ಇದು ನಿರ್ವಿಕಾರಿ ಪ್ರಪಂಚವಿತ್ತು, ಅಲ್ಲಿ ದೇವಿ-ದೇವತೆಗಳು ರಾಜ್ಯ ಮಾಡುತ್ತಿದ್ದರು, ಈಗ ಅವರು ಎಲ್ಲಿಗೆ ಹೋದರು? ಆತ್ಮವಂತೂ ವಿನಾಶವಾಗುವುದಿಲ್ಲ. ಒಂದು ಶರೀರವನ್ನು ಬಿಟ್ಟು ಇನ್ನೊಂದನ್ನು ತೆಗೆದುಕೊಳ್ಳುತ್ತದೆ. ದೇವತೆಗಳೂ ಸಹ 84 ಜನ್ಮಗಳನ್ನು ತೆಗೆದುಕೊಂಡಿದ್ದಾರೆ. ಈಗ ನೀವು ಬುದ್ಧಿವಂತರಾಗಿದ್ದೀರಿ. ಮೊದಲು ಏನೂ ತಿಳಿದಿರಲಿಲ್ಲ. ಈಗ ಈ ಹಳೆಯ ಪ್ರಪಂಚ ಎಷ್ಟು ಕೊಳಕಾಗಿದೆ, ಈಗ ತಂದೆಯು ಹೇಳುವುದು ಸರಿಯೆಂಬುದನ್ನು ನೀವು ಅನುಭವ ಮಾಡುತ್ತೀರಿ. ಅಲ್ಲಂತೂ ಪವಿತ್ರಪ್ರಪಂಚವಾಗಿರುತ್ತದೆ. ಇಲ್ಲಿ ಪವಿತ್ರ ಪ್ರಪಂಚವಿಲ್ಲದ ಕಾರಣ ತಮಗೆ ದೇವತೆ ಬದಲಿಗೆ ಹಿಂದೂಗಳೆಂಬ ಹೆಸರನ್ನಿಟ್ಟುಕೊಂಡಿದ್ದಾರೆ. ಹಿಂದೂಸ್ಥಾನದಲ್ಲಿರುವವರು ಹಿಂದೂಗಳೆಂದು ಹೇಳಿಬಿಡುತ್ತಾರೆ. ದೇವತೆಗಳು ಸ್ವರ್ಗದಲ್ಲಿದ್ದರು, ಈಗ ನೀವು ಈ ಚಕ್ರವನ್ನು ತಿಳಿದುಕೊಂಡಿದ್ದೀರಿ. ಅಂದಾಗ ಯಾರು ಬುದ್ಧಿವಂತರಿದ್ದಾರೆಯೋ ಅವರು ಬಹಳ ಚೆನ್ನಾಗಿ ಅರ್ಥ ಮಾಡಿಕೊಳ್ಳುತ್ತಾರೆ ನಂತರ ತಂದೆಯು ಹೇಗೆ ತಿಳಿಸುವರೋ ಹಾಗೆಯೇ ಕುಳಿತು ಪುನರಾವರ್ತನೆ ಮಾಡಬೇಕು. ಮುಖ್ಯ-ಮುಖ್ಯ ಶಬ್ಧಗಳನ್ನು ನೋಟ್ ಮಾಡಿಕೊಂಡು ನಂತರ ಹೇಳಿ, ತಂದೆಯು ಇಂತಿಂತಹ ಅಂಶಗಳನ್ನು ತಿಳಿಸಿದ್ದಾರೆ- ಹೇಳಿ, ನಾನಂತೂ ಗೀತಾಜ್ಞಾನವನ್ನು ಹೇಳುತ್ತೇನೆ. ಇದು ಗೀತೆಯ ಯುಗವೇ ಆಗಿದೆ. 4 ಯುಗಗಳಿವೆ. ಇದಂತೂ ಎಲ್ಲರಿಗೂ ಗೊತ್ತಿದೆ. ಇದು ಅಧಿಕ ಯುಗವಾಗಿದೆ. ಈ ಸಂಗಮಯುಗವು ಯಾರಿಗೂ ಗೊತ್ತಿಲ್ಲ, ನೀವು ತಿಳಿದುಕೊಂಡಿದ್ದೀರಿ- ಇದು ಪುರುಷೋತ್ತಮ ಸಂಗಮಯುಗವಾಗಿದೆ. ಮನುಷ್ಯರು ಶಿವಜಯಂತಿಯನ್ನು ಆಚರಿಸುತ್ತಾರೆ ಆದರೆ ಅವರು ಯಾವಾಗ ಬಂದರು, ಏನು ಮಾಡಿದರು ಎಂಬುದು ಗೊತ್ತೇ ಇಲ್ಲ. ಶಿವಜಯಂತಿಯ ನಂತರ ಕೃಷ್ಣಜಯಂತಿ, ನಂತರ ರಾಮಜಯಂತಿ. ಜಗದಂಬಾ, ಜಗತ್ಪಿತರ ಜಯಂತಿಯಂತೂ ಯಾರೂ ಆಚರಿಸುವುದಿಲ್ಲ. ಎಲ್ಲರೂ ನಂಬರ್ವಾರ್ ಆಗಿ ಬರುತ್ತಾರಲ್ಲವೆ. ಈಗ ನಿಮಗೆ ಈ ಇಡೀ ಜ್ಞಾನವು ಸಿಗುತ್ತದೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಮರಳಿ ಸಿಕ್ಕಿರುವಂತಹ ಮಕ್ಕಳ ಪ್ರತಿ ಮಾತಾ-ಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ, ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ನಮ್ಮ ತಂದೆ, ಸುಪ್ರೀಂ ತಂದೆ, ಸುಪ್ರೀಂ ಶಿಕ್ಷಕ, ಸುಪ್ರೀಂ ಸದ್ಗುರುವಾಗಿದ್ದಾರೆ- ಈ ಮಾತನ್ನು ಎಲ್ಲರಿಗೂ ತಿಳಿಸಬೇಕಾಗಿದೆ. ಅಲ್ಫ್ ಮತ್ತು ಬೇ- ವಿದ್ಯೆಯನ್ನು ಓದಿಸಬೇಕಾಗಿದೆ.

2. ಜ್ಞಾನ ಅರ್ಥಾತ್ ಸೃಷ್ಟಿಚಕ್ರದ ಜ್ಞಾನವನ್ನು ಧಾರಣೆ ಮಾಡಿಕೊಂಡು ಸ್ವದರ್ಶನ ಚಕ್ರಧಾರಿಗಳಾಗಬೇಕಾಗಿದೆ ಮತ್ತು ವಿಜ್ಞಾನ ಅರ್ಥಾತ್ ಶಬ್ಧದಿಂದ ದೂರ ಶಾಂತಿಯಲ್ಲಿ ಹೋಗಬೇಕಾಗಿದೆ. 7 ದಿನದ ಕೋರ್ಸ್ ತೆಗೆದುಕೊಂಡು ನಂತರ ಎಲ್ಲಿಯೇಇದ್ದರೂ ವಿದ್ಯೆಯನ್ನು ಓದಬೇಕಾಗಿದೆ.

ವರದಾನ:
ಸೇವೆಯಲ್ಲಿ ಮಾನ್-ಶಾನ್ನ ಕಚ್ಚಾ ಫಲವನ್ನು ತ್ಯಾಗಮಾಡಿ ಸದಾ ಪ್ರಸನ್ನಚಿತ್ತರಾಗಿರುವಂತಹ ಅಭಿಮಾನಮುಕ್ತ ಭವ.

ರಾಯಲ್ ರೂಪದ ಇಚ್ಛೆಯ ಸ್ವರೂಪವಾಗಿದೆ ಹೆಸರು, ಮರ್ಯಾದೆ, ಗೌರವ. ಯಾರು ಹೆಸರಿನ ಹಿಂದೆ ಸೇವೆ ಮಾಡುತ್ತಾರೆ. ಅವರ ಹೆಸರು ಅಲ್ಪಕಾಲಕ್ಕಾಗಿ ಆಗಿಬಿಡುತ್ತದೆ ಆದರೆ ಶ್ರೇಷ್ಠ ಪದವಿಯಲ್ಲಿ ಹೆಸರು ಹಿಂದೆ ಉಳಿದುಬಿಡುತ್ತದೆ ಏಕೆಂದರೆ ಕಚ್ಚಾ ಫಲ ತಿಂದುಬಿಡುವರು. ಕೆಲವು ಮಕ್ಕಳು ಯೋಚಿಸುತ್ತಾರೆ ಸೇವೆಯ ಫಲಿತಾಂಶದಲ್ಲಿ ನನಗೆ ಮರ್ಯಾದೆ ಸಿಗಬೇಕು ಎಂದು. ಆದರೆ ಇದು ಮಾನ ಅಲ್ಲ ಅಭಿಮಾನವಾಗಿದೆ. ಎಲ್ಲಿ ಅಭಿಮಾನವಿದೆ ಅಲ್ಲಿ ಪ್ರಸನ್ನತೆ ಇರಲು ಸಾಧ್ಯವಿಲ್ಲ, ಆದ್ದರಿಂದ ಅಭಿಮಾನ ಮುಕ್ತರಾಗಿ ಸದಾ ಪ್ರಸನ್ನತೆಯ ಅನುಭವ ಮಾಡಿ.

ಸ್ಲೋಗನ್:
ಪರಮಾತ್ಮ ಪ್ರೀತಿಯ ಸುಖದಾಯಿ ಉಯ್ಯಾಲೆಯಲ್ಲಿ ತೂಗಾಡಿದರೆ ದುಃಖದ ಅಲೆ ಬರಲು ಸಾಧ್ಯವಿಲ್ಲ.