30.03.25 Avyakt Bapdada
Kannada
Murli 30.11.2004 Om Shanti Madhuban
ಈಗ ತಮ್ಮ ಚಲನೆ ಮತ್ತು
ಚಹರೆಯ ಮೂಲಕ ಬ್ರಹ್ಮಾತಂದೆಯ ಸಮಾನ ಅವ್ಯಕ್ತ ರೂಪವನ್ನು ತೋರಿಸಿ, ಸಾಕ್ಷಾತ್ಕಾರ ಮೂರ್ತಿಗಳಾಗಿ”
ಇಂದು ಭಾಗ್ಯವಿಧಾತ ತಂದೆ
ತನ್ನ ನಾಲ್ಕೂಕಡೆಯ ಶ್ರೇಷ್ಠ ಭಾಗ್ಯವಂತ ಮಕ್ಕಳನ್ನು ನೋಡಿ ಹರ್ಷಿತರಾಗುತ್ತಿದ್ದಾರೆ. ಇಡೀ
ಕಲ್ಪದಲ್ಲಿ ಇಂತಹ ಶ್ರೇಷ್ಠಭಾಗ್ಯವು ಮತ್ತ್ಯಾರಿಗೂ ಸಿಗಲು ಸಾಧ್ಯವಿಲ್ಲ. ಕಲ್ಪ-ಕಲ್ಪವು ತಾವು
ಮಕ್ಕಳೇ ಈ ಭಾಗ್ಯದ ಅಧಿಕಾರವನ್ನು ಪ್ರಾಪ್ತಿ ಮಾಡಿಕೊಳ್ಳುತ್ತೀರಿ, ತಮ್ಮ ಕಲ್ಪ-ಕಲ್ಪದ ಅಧಿಕಾರದ
ಭಾಗ್ಯವು ನೆನಪಿದೆಯೇ? ಈ ಭಾಗ್ಯವು ಸರ್ವಶ್ರೇಷ್ಠ ಭಾಗ್ಯವಾಗಿದೆ ಏಕೆ? ಏಕೆಂದರೆ ಸ್ವಯಂ
ಭಾಗ್ಯವಿಧಾತನು ಈ ಶ್ರೇಷ್ಠಭಾಗ್ಯದ ದಿವ್ಯಜನ್ಮವನ್ನು ತಾವು ಮಕ್ಕಳಿಗೆ ನೀಡಿದ್ದಾರೆ, ಯಾರ ಜನ್ಮ
ಭಾಗ್ಯವಿಧಾತನ ಮೂಲಕವೇ ಆಗಿದೆಯೋ ಅವರಿಗಿಂತ ಶ್ರೇಷ್ಠಭಾಗ್ಯವು ಮತ್ತ್ಯಾರಿಗೂ ಇರಲು ಸಾಧ್ಯವಿಲ್ಲ.
ತಮ್ಮ ಭಾಗ್ಯದ ನಶೆಯ ಸ್ಮೃತಿ ಇರುತ್ತದೆಯೇ? ತಮ್ಮ ಭಾಗ್ಯದ ಪಟ್ಟಿಯನ್ನು ತೆಗೆದರೆ ಎಷ್ಟು ದೊಡ್ಡ
ಪಟ್ಟಿ ಇದೆ? ತಾವು ಬ್ರಾಹ್ಮಣರ ಭಾಗ್ಯವಂತ ಜೀವನದಲ್ಲಿ ಯಾವುದೇ ಅಪ್ರಾಪ್ತ ವಸ್ತುವಿಲ್ಲ. ಎಲ್ಲರ
ಮನಸ್ಸಿನಲ್ಲಿ ತಮ್ಮ ಭಾಗ್ಯದ ಪಟ್ಟಿಯು ಸ್ಮೃತಿಯಲ್ಲಿ ಬಂದಿದೆಯೇ! ಸ್ಮೃತಿಯಲ್ಲಿ ತಂದುಕೊಳ್ಳಿ, ಈಗ
ಸ್ಮೃತಿಯಲ್ಲಿ ಬಂದಿತೆ? ಹೃದಯವು ಯಾವ ಗೀತೆಯನ್ನು ಹಾಡುತ್ತದೆ? ವಾಹ್! ಭಾಗ್ಯವಿಧಾತ ಮತ್ತು ವಾಹ್
ನನ್ನ ಭಾಗ್ಯವೇ! ಈ ಶ್ರೇಷ್ಠಭಾಗ್ಯದ ವಿಶೇಷತೆಯೇನೆಂದರೆ ಒಬ್ಬ ಭಗವಂತನ ಮೂಲಕ ಮೂರು ಸಂಬಂಧಗಳು
ಪ್ರಾಪ್ತಿಯಾಗಿದೆ. ಒಬ್ಬರ ಮೂಲಕ ಒಬ್ಬರಲ್ಲಿ ಮೂರು ಸಂಬಂಧ, ಜೀವನದಲ್ಲಿ ತಂದೆ-ಶಿಕ್ಷಕ-ಸದ್ಗುರು ಈ
ವಿಶೇಷ ಸಂಬಂಧಗಳ ಗಾಯನವಿದೆ, ಯಾರಿಗೆ ಒಬ್ಬರ ಮೂಲಕ ಮೂರು ವಿಶೇಷ ಸಂಬಂಧ ಮತ್ತು
ಪ್ರಾಪ್ತಿಯಿದೆಯೆಂದು ತಾವು ನಶೆಯಿಂದ ಹೇಳುತ್ತೀರಿ - ನಮ್ಮ ತಂದೆ ತಂದೆಯೂ ಆಗಿದ್ದಾರೆ, ಶಿಕ್ಷಕನೂ
ಆಗಿದ್ದಾರೆ, ಸದ್ಗುರುವೂ ಆಗಿದ್ದಾರೆ. ತಂದೆಯ ಮೂಲಕ ಸರ್ವ ಖಜಾನೆಗಳ ಗಣಿಯು ಪ್ರಾಪ್ತವಾಗಿದೆ.
ಖಜಾನೆಗಳ ಪಟ್ಟಿಯು ಸ್ಮೃತಿಯಲ್ಲಿ ಬಂದಿದೆಯೇ! ಸ್ಮೃತಿಯಲ್ಲಿ ತಂದುಕೊಳ್ಳಿ. ತಂದೆಯ ಮೂಲಕ ಯಾವ-ಯಾವ
ಖಜಾನೆಗಳು ಸಿಕ್ಕಿಬಿಟ್ಟಿದೆ! ಸಿಕ್ಕಿದೆಯೋ ಅಥವಾ ಸಿಗಬೇಕಾಗಿದೆಯೋ? ಏನು ಹೇಳುವಿರಿ? ಬಾಲಕನಿಂದ
ಮಾಲೀಕರಂತೂ ಆಗಿಯೇ ಇದ್ದೀರಿ. ಶಿಕ್ಷಕನ ಮೂಲಕ ಶಿಕ್ಷಣದಿಂದ ಶ್ರೇಷ್ಠಪದವಿಯು
ಪ್ರಾಪ್ತಿಯಾಗಿಬಿಟ್ಟಿದೆ. ಹಾಗೆ ನೋಡಿದರೆ ಪ್ರಪಂಚದಲ್ಲಿಯೂ ಸಹ ಎಲ್ಲದಕ್ಕಿಂತ ಶ್ರೇಷ್ಠಪದವಿಯು
ರಾಜ್ಯಪದವಿಯೆಂದು ಹೇಳಲಾಗುತ್ತದೆ ಅಂದಾಗ ತಾವಂತೂ ಡಬಲ್ ರಾಜರಾಗಿಬಿಟ್ಟಿದ್ದೀರಿ. ವರ್ತಮಾನ
ಸ್ವರಾಜ್ಯಾಧಿಕಾರಿಗಳು ಹಾಗೂ ಭವಿಷ್ಯದಲ್ಲಿ ಅನೇಕ ಜನ್ಮಗಳ ರಾಜ್ಯಪದವಿಯ ಅಧಿಕಾರಿಗಳು. ವಿದ್ಯೆಯು
ಒಂದೇ ಜನ್ಮದ್ದಾಗಿದೆ, ಅದರಲ್ಲಿಯೂ ಅತೀ ಚಿಕ್ಕದಾದ ಜನ್ಮ ಮತ್ತು ಪದವಿಯ ಪ್ರಾಪ್ತಿಯನ್ನು ನೋಡಿ!
ಅನೇಕ ಜನ್ಮಗಳು ಮತ್ತು ರಾಜ್ಯವು ಅಖಂಡ, ಅಟಲ, ನಿರ್ವಿಘ್ನ ರಾಜ್ಯವಾಗಿರುತ್ತದೆ. ಈಗಲೂ ಸಹ
ಸ್ವರಾಜ್ಯಾಧಿಕಾರಿ ನಿಶ್ಚಿಂತಚಕ್ರವರ್ತಿಗಳಾಗಿದ್ದೀರಿ, ಆಗಿದ್ದೀರಾ?
ನಿಶ್ಚಿಂತಚಕ್ರವರ್ತಿಗಳಾಗಿದ್ದೀರಾ? ಯಾರು ನಿಶ್ಚಿಂತರಾಗಿದ್ದೀರೋ ಅವರು ಕೈಯನ್ನೆತ್ತಿ.
ನಿಶ್ಚಿಂತರು, ಸ್ವಲ್ಪವು ಚಿಂತೆಯಿಲ್ಲ ಅಲ್ಲವೇ? ನೋಡುತ್ತೇವೆ, ಯಾವಾಗಲಾದರೂ ಯಾವುದೇ ಪಪ್ಪೆಟ್ ಶೋ
ಮುಂದೆ ಬಂದಾಗ ಚಿಂತೆ ಬರುತ್ತದೆಯೇ? ಮಾಯೆಯ ಪಪ್ಪಟ್ ಶೋ ಮುಂದೆ ಬರುತ್ತದೆಯೇ ಅಥವಾ ಇಲ್ಲವೇ? ಆಗ
ಸ್ವಲ್ಪ-ಸ್ವಲ್ಪ ಚಿಂತೆಯಾಗುತ್ತದೆಯೇ? ಆಗುವುದಿಲ್ಲವೇ? ಸ್ವಲ್ಪ ಚಿಂತೆ, ಚಿಂತನೆಯು ನಡೆಯುತ್ತದೆಯೋ
ಅಥವಾ ನಡೆಯುವುದಿಲ್ಲವೋ? ಶ್ರೇಷ್ಠಭಾಗ್ಯವು ಈಗಿನಿಂದಲೇ ನಿಶ್ಚಿಂತಚಕ್ರವರ್ತಿಗಳನ್ನಾಗಿ ಮಾಡುತ್ತದೆ.
ಈಗ ಯಾವ ಅಲ್ಪ-ಸ್ವಲ್ಪ ಮಾತುಗಳು ಬರುತ್ತದೆಯೋ ಅವು ನಿಮ್ಮನ್ನು ಮುಂದಿನದಕ್ಕಾಗಿ ಅನುಭವಿ,
ಪರಿಪಕ್ವ ಮಾಡುವಂತದ್ದಾಗಿದೆ.
ಈಗಂತೂ ಎಲ್ಲರೂ ಈ
ಭಿನ್ನ-ಭಿನ್ನ ಮಾತುಗಳ ಅನುಭವಿಗಳಾಗಿಬಿಟ್ಟಿದ್ದೀರಲ್ಲವೇ! ಗಾಬರಿಯಾಗುವುದಿಲ್ಲ ಅಲ್ಲವೇ? ಆರಾಮವಾಗಿ
ಸಾಕ್ಷಿಯ ಆಸನದ ಮೇಲೆ ಕುಳಿತು ಈ ಗೊಂಬೆ ಆಟವನ್ನು ನೋಡಿ ವಾಸ್ತವದಲ್ಲಿ ಇವು ಗೊಂಬೆಗಳಷ್ಟೇ ಮತ್ತೇನೂ
ಅಲ್ಲ. ಈಗಂತೂ ಶಕ್ತಿಶಾಲಿಗಳಾಗಿಬಿಟ್ಟಿದ್ದೀರಲ್ಲವೇ? ಅಥವಾ ಕೆಲ-ಕೆಲವೊಮ್ಮೆ ಗಾಬರಿ ಆಗುತ್ತೀರಾ?
ಇವು ಕಾಗದದ ಹುಲಿಯಾಗಿ ನಿಮ್ಮ ಮುಂದೆ ಬರುತ್ತದೆ. ವಾಸ್ತವದಲ್ಲಿ ಇದು ಕಾಗದದ ಹುಲಿಯಾಗಿದೆ ಆದರೆ
ಹುಲಿಯಾಗಿ ಬರುತ್ತದೆ. ಈಗ ಸಮಯ ಪ್ರಮಾಣ ಅನುಭವಿ ಮೂರ್ತಿಗಳಾಗಿ ಪ್ರಕೃತಿಗೆ, ಸಮಯಕ್ಕೆ, ಮಾಯೆಗೆ
ನಾವು ವಿಜಯಿಗಳಾಗಿದ್ದೇವೆ ಭಲೆ ಬನ್ನಿ ಎಂದು ಚಾಲೆಂಜ್ ಮಾಡಿ, ವಿಜಯದ ಚಾಲೆಂಜ್ ಮಾಡಿ. ಇಂದು ರಥವು
ಸ್ವಲ್ಪ ಅನಾರೋಗ್ಯವಾಗಿದೆ ಆದರೂ ಮಿಲನವನ್ನಂತೂ ಮಾಡಬೇಕಲ್ಲವೇ!
ಬಾಪ್ದಾದಾರವರ ಬಳಿ ಎರಡು
ಗ್ರೂಪ್ಗಳು ಮತ್ತೆ-ಮತ್ತೆ ಬರುತ್ತವೆ. ಏತಕ್ಕಾಗಿ ಬರುತ್ತವೆ? ಎರಡು ಗ್ರೂಪ್ನವರು ಬಾಪ್ದಾದಾರವರಿಗೆ
ಹೇಳುತ್ತಾರೆ - ನಾವು ತಯಾರಾಗಿದ್ದೇವೆ ಎಂದು. ಮೊದಲನೆಯದು ಸಮಯ, ಪ್ರಕೃತಿ ಮತ್ತು ಮಾಯೆ. ಮಾಯೆಗೆ
ಈಗ ನನ್ನ ರಾಜ್ಯವು ಹೋಗುವುದಿದೆ ಎಂದು ಅರ್ಥವಾಗಿದೆ ಮತ್ತು ಎರಡನೆಯ ಗ್ರೂಪ್ ಅಡ್ವಾನ್ಸ್
ಪಾರ್ಟಿಯಾಗಿದೆ. ಎರಡು ಗ್ರೂಪ್ಗಳು ದಿನಾಂಕವನ್ನು ಕೇಳುತ್ತಿದ್ದಾರೆ. ವಿದೇಶದಲ್ಲಂತೂ ಒಂದು ವರ್ಷದ
ಮೊದಲೇ ನಿಗಧಿಪಡಿಸುತ್ತೀರಲ್ಲವೇ? ಮತ್ತು ಇಲ್ಲಿ (ಭಾರತದಲ್ಲಿ) 6 ತಿಂಗಳ ಮೊದಲು
ನಿಗಧಿಪಡಿಸುತ್ತೀರಿ. ಭಾರತದಲ್ಲಿ ತೀವ್ರವಾಗಿ ಹೋಗುತ್ತಾರೆ. 15 ದಿನಗಳಲ್ಲಿಯೂ ಯಾವುದೇ
ಕಾರ್ಯಕ್ರಮದ ದಿನಾಂಕವು ನಿಗಧಿಯಾಗಿಬಿಡುತ್ತದೆ ಅಂದಮೇಲೆ ಸಮಾಪ್ತಿ, ಸಂಪನ್ನತೆ, ತಂದೆಯ
ಸಮಾನರಾಗುವ ದಿನಾಂಕ ಯಾವುದು? ಅದನ್ನು ಬಾಪ್ದಾದಾರವರೊಂದಿಗೆ ಎರಡೂ ಗ್ರೂಪ್ನವರು ಕೇಳುತ್ತಾರೆ. ಆ
ದಿನಾಂಕವನ್ನು ಈಗ ತಾವು ಬ್ರಾಹ್ಮಣರು ನಿಗಧಿ ಪಡಿಸಬೇಕಾಗಿದೆ. ಆಗುತ್ತದೆಯೇ? ದಿನಾಂಕವನ್ನು ನಿಗಧಿ
ಪಡಿಸಲು ಸಾಧ್ಯವೇ? ಪಾಂಡವರೇ ಹೇಳಿ, ಮೂವರೂ ಹೇಳಿ (ಬಾಪ್ದಾದಾ ನಿರ್ವೈರ್ಭಾಯಿ, ರಮೇಶ್ಭಾಯಿ,
ಬೃಜ್ಮೋಹನ್ ಭಾಯಿಯವರನ್ನು ಕೇಳುತ್ತಿದ್ದಾರೆ) ದಿನಾಂಕವು ನಿಗದಿಪಡಿಸಲು ಆಗುತ್ತದೆಯೇ? ಹೇಳಿ
ಸಾಧ್ಯವಿದೆಯೇ? ಅಥವಾ ಆಕಸ್ಮಿಕವಾಗಿ ಆಗಿಬಿಡುವುದೋ, ನಾಟಕದಲ್ಲಿ ನಿಗಧಿಯಾಗಿದೆ ಆದರೆ ಅದನ್ನು
ಪ್ರತ್ಯಕ್ಷದಲ್ಲಿ ತರಬೇಕೋ ಅಥವಾ ಬೇಡವೋ? ಅದು ಯಾವ ದಿನಾಂಕ ತಿಳಿಸಿ. ಸಮಯ ಬಂದಾಗ ಆಗಿಬಿಡುತ್ತೀರಾ?
ದಿನಾಂಕವನ್ನು ನಿಗಧಿ ಪಡಿಸುವ ಅವಶ್ಯಕತೆಯಿದೆಯೇ? ಮೊದಲಿನ ಸಾಲಿನಲ್ಲಿ ಕುಳಿತಿರುವವರು ತಿಳಿಸಿ,
ಆಗುತ್ತದೆಯೇ? ನಾಟಕವನ್ನು ಪ್ರತ್ಯಕ್ಷದಲ್ಲಿ ತರಲು ಮನಸ್ಸಿನಲ್ಲಿ ಮೊದಲು ದಿನಾಂಕದ ಸಂಕಲ್ಪ
ಮಾಡಲೇಬೇಕೆಂದು ಯಾರು ಹೇಳುತ್ತೀರೋ ಕೈ ಎತ್ತಿರಿ. ದಿನಾಂಕವನ್ನು ನಿಗಧಿ ಪಡಿಸಬೇಕಾಗುತ್ತದೆಯೇ?
ಇವರು ಕೈ ಎತ್ತುತ್ತಿಲ್ಲ. ಸಮಯವು ಬಂದಾಗ ತಯಾರಾಗಿಬಿಡುತ್ತೇವೆ ಎಂದು ಹೇಳುತ್ತೀರಾ? ದಿನಾಂಕವನ್ನು
ನಿಗಧಿಪಡಿಸಲು ಆಗುತ್ತದೆಯೇ? ಹಿಂದೆ ಇರುವವರಿಗೆ ಅರ್ಥವಾಯಿತೇ? ಸಮಯ ಬಂದಾಗ ತಯಾರಾಗಿಬಿಡುತ್ತೀರಿ
ಇದಂತೂ ಸರಿ ಆದರೆ ತಮ್ಮನ್ನು ತಯಾರು ಮಾಡಿಕೊಳ್ಳಲು ಲಕ್ಷ್ಯವಂತೂ ಅವಶ್ಯವಾಗಿ
ಇಟ್ಟುಕೊಳ್ಳಬೇಕಾಗುತ್ತದೆ. ಸಂಪನ್ನರಾಗುವುದರಲ್ಲಿ ಲಕ್ಷ್ಯವಿಲ್ಲದೆ ಹೋದರೆ ಹುಡುಗಾಟಿಕೆ
ಬಂದುಬಿಡುತ್ತದೆ. ನೋಡಿ, ಯಾವಾಗ ದಿನಾಂಕವನ್ನು ನಿಗಧಿಪಡಿಸುತ್ತೀರೋ ಆಗಲೇ ಸಫಲತೆಯು
ಸಿಗುತ್ತದೆಯಲ್ಲವೇ. ಯಾವುದೇ ಕಾರ್ಯಕ್ರಮವನ್ನು ಮಾಡಬೇಕಾದರೂ ಅದಕ್ಕೆ ದಿನಾಂಕವನ್ನು
ನಿಗಧಿಪಡಿಸುತ್ತೀರಲ್ಲವೇ. ಆಗಲೇಬೇಕು ಎನ್ನುವ ಸಂಕಲ್ಪವನ್ನು ಮಾಡಬೇಕಲ್ಲವೇ ಅಥವಾ ನಾಟಕದಲ್ಲಿ
ತಾನಾಗಿಯೇ ಆಗಿಬಿಡುತ್ತದೆಯೋ? ಏನು ತಿಳಿಯುತ್ತೀರಿ? ಮೊದಲ ಸಾಲಿನಲ್ಲಿ ಕುಳಿತಿರುವವರು ಹೇಳಿ
ಪ್ರೇಮ್ (ಪ್ರೇಮ್ ಸಹೋದರಿ) ತಿಳಿಸಿ. ಮಾಡಬೇಕಾಗುತ್ತದೆಯೇ, ಮಾಡಲೇಬೇಕಾಗುತ್ತದೆ. ಜಯಂತಿ ಹೇಳಿ.
ಮಾಡಲೇಬೇಕು ಅದು ಯಾವಾಗ ಆಗುವುದು? ಯಾವಾಗ ಸಮಯವು ಬಂದುಬಿಡುವುದೋ ಆಗ ಅಂತ್ಯದಲ್ಲಿ ಆಗಿಬಿಡುವುದೇ!
ಸಮಯವು ನಿಮ್ಮನ್ನು ಸಂಪನ್ನರಾಗಿ ಮಾಡುವುದೋ ಅಥವಾ ತಾವು ಸಮಯವನ್ನು ಸಮೀಪ ತರುತ್ತೀರೋ?
ಬಾಪ್ದಾದಾ ನೋಡಿದರು -
ಸ್ಮೃತಿಯಲ್ಲಿ ಜ್ಞಾನವೂ ಇರುತ್ತದೆ, ನಶೆಯೂ ಇರುತ್ತದೆ, ನಿಶ್ಚಯವೂ ಇರುತ್ತದೆ ಆದರೆ ಈಗ ಚಲನೆ
ಮತ್ತು ಚಹರೆಯಿಂದ ಅದು ಕಂಡುಬರಬೇಕು - ಇದನ್ನು ಪ್ರಯೋಗದಲ್ಲಿ ತನ್ನಿ. ಬುದ್ಧಿಯಲ್ಲಿ ಎಲ್ಲವೂ
ನೆನಪಿರುತ್ತದೆ, ಸ್ಮೃತಿಯಲ್ಲೂ ಬರುತ್ತದೆ ಆದರೆ ಈಗ ಅದು ಸ್ವರೂಪದಲ್ಲಿ ಬರಬೇಕಾಗಿದೆ. ಸಾಧಾರಣ
ರೂಪದಲ್ಲಿ ಒಂದುವೇಳೆ ಯಾವುದೇ ದೊಡ್ಡ ಸ್ಥಾನ-ಮಾನದ ವ್ಯಕ್ತಿಗಳು ಅಥವಾ ಯಾರಾದರೂ ಸಾಹುಕಾರರ
ಮಕ್ಕಳಿದ್ದರೆ ಅವರ ಚಲನೆಯಿಂದಲೇ ಇವರು ಇಂತಹವರೆಂದು ಕಂಡು ಬರುತ್ತದೆ. ಎಲ್ಲರಿಗಿಂತ ಅವರಲ್ಲಿ
ಏನಾದರೂ ಒಂದು ಭಿನ್ನತೆ ಕಂಡುಬರುತ್ತದೆ ಅಂದಾಗ ಇಲ್ಲಿ ನಿಮಗೆ ಇಷ್ಟು ದೊಡ್ಡ ಭಾಗ್ಯ ಆಸ್ತಿಯು ಇದೆ,
ವಿದ್ಯೆ ಮತ್ತು ಪದವಿಯೂ ಇದೆ. ಸ್ವರಾಜ್ಯವಂತೂ ಈಗಲೂ ಇದೆ ಅಲ್ಲವೇ! ಎಲ್ಲಾ ಪ್ರಾಪ್ತಿಗಳು ಇವೆ ಆದರೆ
ಈಗ ಚಲನೆ ಮತ್ತು ಚಹರೆಯಿಂದ ಭಾಗ್ಯದ ನಕ್ಷತ್ರವು ಮಸ್ತಕದಲ್ಲಿ ಹೊಳೆಯುತ್ತಿರುವುದು ಕಂಡು ಬರಲಿ,
ಅದನ್ನು ಈಗ ಸೇರಿಸಿಕೊಳ್ಳಿ. ಈಗ ಮನುಷ್ಯರಿಗೆ ತಾವು ಶ್ರೇಷ್ಠ ಭಾಗ್ಯವಂತ ಆತ್ಮಗಳ ಮೂಲಕ ಈ ಅನುಭವ
ಆಗಬೇಕಾಗಿದೆ. ಆಗಬೇಕು ಎಂದಲ್ಲ ಆಗಲೇಬೇಕಾಗಿದೆ. ಇವರು ನಮ್ಮ ಇಷ್ಟದೇವ-ಇಷ್ಟದೇವಿಯರಾಗಿದ್ದಾರೆ,
ಇವರು ನಮ್ಮವರು ಆಗಿದ್ದಾರೆ ಎಂದು ಅನುಭವವಾಗಲಿ. ಹೇಗೆ ಬ್ರಹ್ಮಾತಂದೆಯಲ್ಲಿ ನೋಡಿದಿರಿ - ಸಾಧಾರಣ
ತನುವಿನಲ್ಲಿದ್ದರೂ ಆದಿಯ ಸಮಯದಲ್ಲಿಯೂ ಬ್ರಹ್ಮಾರವರ ತನುವಿನಲ್ಲಿ ಏನು ಕಂಡುಬರುತ್ತಿತ್ತು?
ಕೃಷ್ಣನ ರೂಪವು ಕಾಣಿಸುತ್ತಿತ್ತು ಅಲ್ಲವೇ! ಅಂದಾಗ ಹೇಗೆ ಆದಿಯಲ್ಲಿ ಬ್ರಹ್ಮಾತಂದೆಯ ಮೂಲಕ
ಆದಿರತ್ನಗಳಿಗೆ ಅನುಭವವಿದೆಯಲ್ಲವೇ! ಅನುಭವವಿದೆ ಮತ್ತು ಅಂತಿಮದಲ್ಲಿಯೂ ತಂದೆಯಿಂದ ಏನು
ಕಾಣುತ್ತಿತ್ತು? ಅವ್ಯಕ್ತರೂಪವೇ ಕಾಣಿಸುತ್ತಿತ್ತಲ್ಲವೇ! ಚಲನೆಯಲ್ಲಿ, ಚಹರೆಯಲ್ಲಿ
ಕಾಣಿಸುತ್ತಿತ್ತು, ಈಗ ಬಾಪ್ದಾದಾರವರು ವಿಶೇಷ ನಿಮಿತ್ತ ಮಕ್ಕಳಿಗೆ ಈ ಹೋಂ ವರ್ಕನ್ನು
ಕೊಡುತ್ತಿದ್ದಾರೆ - ಈಗ ಬ್ರಹ್ಮಾತಂದೆಯ ಸಮಾನ ಅವ್ಯಕ್ತರೂಪ ಕಂಡುಬರಲಿ. ಚಲನೆ ಮತ್ತು ಚಹರೆಯಿಂದ
ಕೊನೆಪಕ್ಷ 108 ರ ಮಾಲೆಯ ಮಣಿಗಳು ಕಂಡುಬರಲಿ. ಬಾಪ್ದಾದಾ ಹೆಸರನ್ನು ಇಚ್ಚಿಸುವುದಿಲ್ಲ,
108ಮಣಿಗಳು ಯಾರು-ಯಾರು? ಎಂದು ಹೆಸರನ್ನು ತಿಳಿಸುವುದಿಲ್ಲ ಆದರೆ ಅವರ ಚಲನೆ ಮತ್ತು ಚಹರೆಯು
ಸ್ವತಃವಾಗಿಯೇ ಪ್ರತ್ಯಕ್ಷವಾಗಲಿ. ಈ ಹೋಮ್ವರ್ಕನ್ನು ಬಾಪ್ದಾದಾ ನಿಮಿತ್ತ ಮಕ್ಕಳಿಗೆ ವಿಶೇಷವಾಗಿ
ಕೊಡುತ್ತಿದ್ದಾರೆ. ಮೊದಲಿನ ಸಾಲಿನಲ್ಲಿ ಕುಳಿತಿರುವವರೆಲ್ಲರೂ ಕೇಳಿದಿರಾ? ಆಗುತ್ತದೆಯೇ? ಎಷ್ಟು
ಸಮಯ ಬೇಕು? ಯಾರು ಕೊನೆಯಲ್ಲಿ ಬಂದಿದ್ದಾರೆಯೋ ಅವರಿಗೆ ಹೆಚ್ಚು ಬೇಕು ಎಂದು ತಿಳಿಯಬಾರದು. ಸಮಯದ
ಮಾತಿಲ್ಲ. ನಾವು ಬಂದು ಕೆಲವೇ ವರ್ಷಗಳಾಯಿತು ಎಂದು ತಿಳಿಯಬೇಡಿ. ಯಾರು ಬೇಕಾದರೂ ಲಾಸ್ಟ್ ಸೋ
ಫಾಸ್ಟ್ ಮತ್ತು ಫಾಸ್ಟ್ ಸೋ ಫಸ್ಟ್ ಬರಬಹುದಾಗಿದೆ. ಇದೂ ಸಹ ಬಾಪ್ದಾದಾರವರ ಚಾಲೆಂಜ್ ಆಗಿದೆ. ಮಾಡಲು
ಸಾಧ್ಯವಿದೆ. ಯಾರು ಬೇಕಾದರೂ ಮಾಡಬಲ್ಲಿರಿ. ಕೊನೆಯವರೂ ಸಹ ಮಾಡಬಹುದಾಗಿದೆ. ಕೇವಲ ಮಾಡಲೇಬೇಕು,
ಆಗಲೇಬೇಕು ಎಂಬ ಲಕ್ಷ್ಯವನ್ನು ಪಕ್ಕಾ ಇಟ್ಟುಕೊಳ್ಳಿ.
ಡಬಲ್ ವಿದೇಶಿಯರು ಕೈ
ಎತ್ತಿ. ಡಬಲ್ ವಿದೇಶಿಯರು ಏನು ಮಾಡುತ್ತೀರಿ? ಡಬಲ್ ಅವಕಾಶವನ್ನು ತೆಗೆದುಕೊಳ್ಳುತ್ತೀರಲ್ಲವೇ.
ಬಾಪ್ದಾದಾ ಹೆಸರನ್ನು ಹೇಳುವುದಿಲ್ಲ ಆದರೆ ಇವರು ಆಗಿದ್ದಾರೆ ಎಂಬುದನ್ನು ಅವರ ಚಹರೆಯೇ
ತಿಳಿಸುತ್ತದೆ. ಸಾಹಸವಿದೆಯೇ? ಮೊದಲ ಸಾಲಿನಲ್ಲಿರುವವರನ್ನು ಬಾಪ್ದಾದಾ ನೋಡುತ್ತಿದ್ದಾರೆ.
ಸಾಹಸವಿದೆಯೇ? ಒಂದುವೇಳೆ ಸಾಹಸವಿದ್ದರೆ ಕೈ ಎತ್ತಿ. ಸಾಹಸವಿದ್ದರೆ ಮಾತ್ರ ಕೈಯೆತ್ತಿ. ಹಿಂದೆ
ಕುಳಿತಿರುವವರೂ ಕೈ ಎತ್ತಬಹುದು. ಯಾರು ಮೊದಲು ಮಾಡುವರೋ ಅವರೇ ಅರ್ಜುನರು. ಒಳ್ಳೆಯದು. ಬಾಪ್ದಾದಾ
ಫಲಿತಾಂಶವನ್ನು ನೋಡುವುದಕ್ಕಾಗಿ, ಯಾವ-ಯಾವ ಪುರುಷಾರ್ಥ ಮಾಡುತ್ತಿದ್ದಾರೆ, ಯಾರು-ಯಾರು
ಮಾಡುತ್ತಿದ್ದೀರಿ - ಆ ಫಲಿತಾಂಶವನ್ನು ನೋಡುವುದಕ್ಕಾಗಿ 6 ತಿಂಗಳ ಸಮಯವನ್ನು ಕೊಡುತ್ತಿದ್ದಾರೆ. 6
ತಿಂಗಳ ಫಲಿತಾಂಶ ನೋಡಿ ನಂತರ ತೀರ್ಮಾನ ಮಾಡುತ್ತೇವೆ. ಸರಿಯೇ? ಏಕೆಂದರೆ ಈಗ ನೋಡಿದಾಗ ಸಮಯದ ವೇಗವು
ಬಹಳ ತೀವ್ರವಾಗಿ ಹೋಗುತ್ತಿದೆ ಅಂದಮೇಲೆ ರಚನೆಯು ತೀಕ್ಷ್ಣವಾಗಿ ಹೋಗಬಾರದು, ರಚಯಿತರು ಅದಕ್ಕಿಂತ
ಮುಂದೆ ಹೋಗಬೇಕಾಗಿದೆ. ಈಗ ಸ್ವಲ್ಪ ತೀವ್ರ ಮಾಡಿಕೊಳ್ಳಿ. ಮೇಲೆ ಹಾರಿ, ನಡೆಯುತ್ತಿದ್ದೇವೆ ಅಲ್ಲ.
ಹಾರುತ್ತಿದ್ದೇವೆ. ಉತ್ತರವನ್ನಂತೂ ಬಹಳ ಚೆನ್ನಾಗಿ ಕೊಡುತ್ತೀರಿ - ನಾವೇ ಆಗುತ್ತೇವಲ್ಲವೇ!
ನಾವಲ್ಲದೆ ಮತ್ತ್ಯಾರು ಆಗುವರು! ಎಂದು ಹೇಳುತ್ತೀರಿ ಇದನ್ನು ನೋಡಿ ಬಾಪ್ದಾದಾ ಖುಷಿಯಾಗುತ್ತಾರೆ
ಆದರೆ ಈಗ ಆತ್ಮಗಳು ತಮ್ಮಿಂದ ವಿಶೇಷವಾಗಿ ಏನನ್ನಾದರೂ ನೋಡಲು ಬಯಸುತ್ತಾರೆ. ಬಾಪ್ದಾದಾರವರಿಗೆ
ನೆನಪಿದೆ, ಯಾವಾಗ ಆದಿಯಲ್ಲಿ ತಾವು ಮಕ್ಕಳು ಸೇವೆಗಾಗಿ ಹೊರಟಾಗ ತಾವು ಮಕ್ಕಳಿಂದಲೂ
ಸಾಕ್ಷಾತ್ಕಾರವಾಗುತ್ತಿತ್ತು. ಈಗ ಸೇವೆ ಮತ್ತು ಸ್ವರೂಪ ಎರಡೂ ಕಡೆ ಗಮನವಿಡಬೇಕು ಅಂದಾಗ ಏನು
ಕೇಳಿದಿರಿ! ಈಗ ಸಾಕ್ಷಾತ್ಕಾರಮೂರ್ತಿಗಳಾಗಿ. ಸಾಕ್ಷಾತ್ ಬ್ರಹ್ಮಾ ತಂದೆಯ ಸಮಾನರಾಗಿ. ಒಳ್ಳೆಯದು.
ಇಂದು ಹೊಸ-ಹೊಸ ಮಕ್ಕಳು
ಅನೇಕರು ಬಂದಿದ್ದೀರಿ. ತಮ್ಮ ಸ್ನೇಹದ ಶಕ್ತಿಯಿಂದ ಎಲ್ಲರೂ ಬಂದು ತಲುಪಿದ್ದೀರಿ ಆದ್ದರಿಂದ
ಬಾಪ್ದಾದಾ ವಿಶೇಷವಾಗಿ ಯಾರು ಹೊಸಮಕ್ಕಳು ಬಂದಿದ್ದೀರೋ ಅವರೆಲ್ಲರಿಗೂ ಪ್ರತಿಯೊಬ್ಬರ ಹೆಸರಿನ
ಸಹಿತವಾಗಿ ಪದಮದಷ್ಟು ಶುಭಾಷಯಗಳನ್ನು ನೀಡುತ್ತಿದ್ದಾರೆ. ಜೊತೆಗೆ ವರದಾತ ವರದಾನವನ್ನು
ನೀಡುತ್ತಿದ್ದಾರೆ - ಸದಾ ಬ್ರಾಹ್ಮಣ ಜೀವನದಲ್ಲಿ ಅಮರರಾಗಿರಿ, ಹಾರುತ್ತಾ ಇರಿ. ಒಳ್ಳೆಯದು.
ಸೇವೆಯ ಸರದಿ
ಪಂಜಾಬನವರದ್ದಾಗಿದೆ:-
ಪಂಜಾಬನವರು ಎದ್ದೇಳಿ. ಬಹಳ ಒಳ್ಳೆಯದು. ಈ ಪದ್ದತ್ತಿ ಚೆನ್ನಾಗಿದೆ, ಪ್ರತಿ ಜೋನ್ನವರಿಗೆ ಅವಕಾಶ
ಸಿಗುತ್ತದೆ. ಒಂದಂತು ಯಜ್ಞ ಸೇವೆಯ ಮೂಲಕ ಒಂದೊಂದು ಹೆಜ್ಜೆಯಲ್ಲಿ ಪದಮಗುಣದಷ್ಟು ಸಂಪಾದನೆ ಜಮಾ
ಆಗುತ್ತದೆ ಏಕೆಂದರೆ ಮೆಜಾರಿಟಿ ಯಾವುದೋ ಕರ್ಮ ಮಡುತ್ತಾ ಯಜ್ಞ ಸೇವೆ ನೆನಪಿರುತ್ತದೆ ಮತ್ತು ಯಜ್ಞ
ಸೇವೆ ನೆನಪು ಬರುವುದರಿಂದ ಯಜ್ಞ ರಚಯಿತ ತಂದೆಯಂತೂ ನೆನಪು ಬರುತ್ತದೆ. ಸೇವೆಯಲ್ಲಿಯೂ ಹೆಚ್ಚು
ಪುಣ್ಯದ ಖಾತೆ ಜಮಾ ಮಾಡಿಕೊಳ್ಳುತ್ತಾರೆ ಮತ್ತು ಯಾರು ಸತ್ಯ ಪುರುಷಾರ್ಥಿ ಮಕ್ಕಳಿದ್ದಾರೆ, ಅವರು
ತಮ್ಮ ನೆನಪಿನ ಚಾರ್ಟ್ನ್ನು ಸಹಜ ಮತ್ತು ನಿರಂತರವಾಗಿ ಮಾಡಲು ಸಾಧ್ಯ ಏಕೆಂದರೆ ಇದು ಮಹಾರಾಥಿಗಳ
ಸಂಗವಿದೆ, ಸಂಗದ ರಂಗು ಸಹಜವಾಗಿ ಹತ್ತುವುದು. ಗಮನವಿದ್ದರೆ ಈ 8-10 ದಿನಗಳು ಸಿಗುತ್ತವೆ ಇದರಲ್ಲಿ
ಬಹಳ ಚೆನ್ನಾಗಿ ಪ್ರಗತಿ ಮಾಡಬಹುದು. ಸಾಧಾರಣ ರೀತಿಯಿಂದ ಸೇವೆಯನ್ನು ಮಾಡಿದರೆ ಇಷ್ಟೊಂದು
ಲಾಭವಿಲ್ಲ, ಆದರೆ ಒಬ್ಬ ಸಹಜ ನಿರಂತರ ಯೋಗಿಯಾಗುವ, ಪುಣ್ಯದ ಖಾತೆ ಮಾಡುವ, ಮತ್ತು ದೊಡ್ಡಕ್ಕಿಂತ
ದೊಡ್ಡ ಪರಿವಾರದ ನಶೆಯಲ್ಲಿ, ಖುಷಿಯಲ್ಲಿರುವ ಅವಕಾಶವಿದೆ. ಪಂಜಾಬನ್ವರಿಗೆ ಅವಕಾಶವಿದೆ,
ಪ್ರತಿಜೋನ್ನವರಿಗೆ ಸಿಗುತ್ತದೆ ಆದರೆ ಲಕ್ಷ್ಯ ಇಟ್ಟುಕೊಳ್ಳಿ ಮೂರು ಲಾಭವಾಗಿವೆ. ಎಷ್ಟು ಪುಣ್ಯದ
ಖಾತೆ ಜಮಾ ಆಯಿತು? ಸಹಜ ನೆನಪಿನ ಪ್ರಗತಿಯನ್ನು ಎಷ್ಟು ಮಾಡಿದ್ದೇನೆ? ಮತ್ತು ಸಂಘಟನೆ ಅಥವಾ
ಪರಿವಾರದ ಸ್ನೇಹ, ಸಮೀಪತೆಯು ಎಷ್ಟು ಅನುಭವ ಮಾಡಿದಿರಿ? ಈ ಮೂರು ಮಾತಿನ ಫಲಿತಾಂಶವನ್ನು
ಪ್ರತಿಯೊಬ್ಬರು ಸ್ವಯಂನ ಬಗ್ಗೆ ನೋಡಿಕೊಳ್ಳಬೇಕು. ಡ್ರಾಮಾದಲ್ಲಿ ಅವಕಾಶವಂತು ಸಿಕ್ಕಿದೆ ಆದರೆ
ಅವಕಾಶವನ್ನು (ಚಾಂಸ್ನ್ನು) ತೆಗೆದುಕೊಳ್ಳುವಂತಹ ಕುಲಪತಿ (ಚಾನ್ಸಲರ್) ಆಗಿರಿ. ಪಂಜಾಬಿನವರು
ಬುದ್ಧಿವಂತರಾಗಿದ್ದೀರಲ್ಲವೇ. ಒಳ್ಳೆಯದು. ಒಳ್ಳೆಯ ಸಂಖ್ಯೆಯಲ್ಲಿ ಬಂದಿದ್ದೀರಿ, ಮತ್ತು ಸೇವೆಯು
ತೆರೆದ ಹೃದಯದಿಂದ ಸಿಗುತ್ತದೆ. ಬರುವಂತಹ ಸಂಖ್ಯೆಯು ಸಹ ಚೆನ್ನಾಗಿ ಬಂದಿದ್ದಾರೆ. ಒಳ್ಳೆಯದು.
ಸಂಘಟನೆ ಚೆನ್ನಾಗಿದೆ.
(ಇಂದು ಎರಡು ವಿಂಗ್-
ಗ್ರಾಮ ವಿಕಾಸ ವಿಂಗ್ ಮತ್ತು ಮಹಿಳಾ ವಿಂಗ್ ಮೀಟಿಂಗ್ಗಾಗಿ ಬಂದಿದ್ದಾರೆ)
ಮಹಿಳಾ ವಿಂಗ್ನವರು
ಎದ್ದೇಳಿ- ಇದರಲ್ಲಿ ಟೀಚರ್ಸ್ ಜಾಸ್ತಿ ಇದ್ದಾರೆಯೇ? ಟೀಚರ್ಸ್ ಕೈ ಎತ್ತಿ. ಸೇವೆಯ ಸೇವೆಯ ಸೇವೆ
ಮತ್ತು ಸೇವೆಯ ಮೊದಲು ಫಲ. ಸಂಘಟನೆ ಮತ್ತು ತಂದೆಯಿಂದ ಮಿಲನದ ಮೋಜನ್ನು ತೆಗೆದುಕೊಳ್ಳುವುದು. ಸೇವೆ
ಮತ್ತು ಫಲ ಎರಡು ಸಿಕ್ಕಿ ಬಿಟ್ಟಿತು. ಒಳ್ಳೆಯದು. ಈಗ ಏನಾದರೂ ಹೊಸ ಪ್ಲಾನ್ ಮಾಡಿದ್ದೀರಾ? ಮಹಿಳಾ
ವರ್ಗದವರದಾಗಿರಬಹುದು ಅಥವಾ ಯಾವುದೇ ವರ್ಗದ್ದಿರಬಹುದು. ಪ್ರತಿಯೊಂದು ಗ್ರೂಪ್ನವರು ವಿಶೇಷ
ಪ್ರಾಕ್ಟಿಕಲ್ನಲ್ಲಿ ನಡತೆ ಮತ್ತು ಮುಖದಲ್ಲಿ ಯಾವುದಾದರೂ ಗುಣ ಮತ್ತು ಶಕ್ತಿಯ ಜವಾಬ್ದಾರಿಯನ್ನು
ತೆಗೆದುಕೊಂಡರೆ ನಾವು ಈ ಗ್ರೂಪ್, ಮಹಿಳಾ ಗ್ರೂಪ್ ಈ ಗುಣ ಅಥವಾ ಶಕ್ತಿಯ ಪ್ರಾಕ್ಟಿಕಲ್
ಪ್ರತ್ಯಕ್ಶ್ಃಅ ರೂಪದಲ್ಲಿ ತರುವೆವು. ಈ ರೀತಿ ಪ್ರತಿಯೊಂದು ವರ್ಗವು ಯಾವುದಾದರೂ ವಿಶೇಷ ನಿಗಧಿ
ಪಡಿಸಿ ಮತ್ತು ಅದರ ಪರಸ್ಪರದಲ್ಲಿ ಹೇಗೆ ಸರ್ವೀಸ್ನ ಫಲಿತಾಂಶವನ್ನು ಗಮನಿಸುತ್ತೀರಿ, ಈ ರೀತಿ
ಪರಸ್ಪರದಲ್ಲಿ ಬರೆದಿಟ್ಟುಕೊಳ್ಳಿ, ಅಥವಾ ಸಂಘಟನೆಯಲ್ಲಿ ಇದನ್ನು ಚೆಕ್ ಮಾಡುತ್ತೀರಿ. ಮೊದಲು ನೀವು
ಮಾಡಿ ತೋರಿಸಿರಿ. ಮಹಿಳಾ ವಿಂಗ್ನವರು ಮಾಡಿ ತೋರಿಸಿರಿ. ಸರಿಯಲ್ಲವೇ. ಪ್ರತಿಯೊಂದು ವಿಂಗ್ನವರು
ಏನಾದರೂ ತಮ್ಮ ಪ್ಲಾನ್ ಮಾಡಿರಿ ಮತ್ತು ಸಮಯ ನಿಗಧಿ ಪಡಿಸಿ ಇಷ್ಟು ಸಮಯದಲ್ಲಿ ಇಷ್ಟು ಪರ್ಸೆಟೇಂಜ್
ಪ್ರಾಕ್ಟಿಕಲ್ನಲ್ಲಿ ತರಬೇಕು. ಬಾಪ್ದಾದಾರವರು ಏನು ಬಯಸುತ್ತಾರೆ, ನಡತೆ ಮತ್ತು ಚಿತ್ರ (ಮುಖದಲ್ಲಿ)
ಬರಲಿ ಎಂದು, ಅದು ಬಂದು ಬಿಡುವುದು. ಈ ಪ್ಲಾನ್ ಮಾಡಿ ತಂದೆಗೆ ಕೊಡಬೇಕು. ಪ್ರತಿಯೊಂದು ವಿಂಗ್ ಏನು
ಮಾಡುವುದು? ಸೇವೆಯ ಪ್ಲಾನ್ ಹೇಗೆ ಬರೆದಿಟ್ತುಕೊಳ್ಳುತ್ತೀರಿ, ಹಾಗೆಯೇ ಇದನ್ನು ಮಾಡಿ ಕೊಡಿ.
ಸರಿಯಲ್ಲವೇ! ಮಾಡಿ ಕೊಡಿ. ಚಿಕ್ಕ-ಚಿಕ್ಕ ಸಂಘಟನೆಗಳು ಅದ್ಬುತವನ್ನು ಮಾಡಿ ತೋರಿಸಿರಿ. ಸರಿಯಿದೆ.
ಟೀಚರ್ಸ್ ಏನು ತಿಳಿದುಕೊಳ್ಳುತ್ತೀರಿ? ಮಾಡಬಹುದೇ? ಮಾಡಬಹುದೇ? ಪ್ಲಾನ್ ಮಾಡಿ. ಒಳ್ಳೆಯದು. ಸೇವೆಯ
ಶುಭಾಷಯಗಳು.
ಗ್ರಾಮ ವಿಕಾಸದ ವರ್ಗದವರು
ಎದ್ದೇಳಿ:
ಇಲ್ಲಿಯವರೆಗೆ ಗ್ರಾಮ ವಿಕಾಸದವರು ಎಷ್ಟು ಪರಿವರ್ತನೆ ಮಾಡಿದಿರಿ? ಎಷ್ಟು ಹಳ್ಳಿಗಳಲ್ಲಿ ಮಾಡಿದಿರಿ?
(7 ಹಳ್ಳಿಗಳಲ್ಲಿ ಮಾಡಿದ್ದಾರೆ, ಒಂದು ಹಳ್ಳಿಯಲ್ಲಿ 75% ವರೆಗೆ ಕೆಲಸವಾಗಿದೆ. ಈ ಮೀಟಿಂಗ್ನಲ್ಲಿಯೂ
ಪ್ರೋಗ್ರಾಮ್ ಮಾಡಿದ್ದೇವೆ- “ಸಮಯದ ಕರೆ- ಸ್ವಚ್ಛ ಸರ್ಣಿಮ ಗ್ರಾಮ ಭಾರತ” ಈ ಪ್ರೋಜೆಕ್ಟ್ ನ ಒಳಗಡೆ
ಹಳ್ಳಿ-ಹಳ್ಳಿಯನ್ನು ವ್ಯಸನ ಮುಕ್ತ ಮತ್ತು ಸ್ವಚ್ಛ ಮಾಡುವ ಸೇವೆ ಮಾಡುತ್ತೇವೆ) ಒಳ್ಳೆಯದು -
ಪ್ರಾಕ್ಟಿಕಲ್ಯಿದೆಯಲ್ಲವೇ. ಇದರ ಒಟ್ಟು ಫಲಿತಾಂಶ ಏನೆಲ್ಲಾ ಇದೆ ಅದು ರಾಷ್ಟ್ರಪತಿ,
ಪ್ರಧಾನಮಂತ್ರಿಯ ಹತ್ತಿರ ಹೋಗುತ್ತದೆಯೇ? (ಇನ್ನೂ ಕಳುಹಿಸಿಲ್ಲ) ಕಳುಹಿಸಬೇಕು ಏಕೆಂದರೆ
ಹಳ್ಳಿ-ಹಳ್ಳಿಯಲ್ಲಿ ಪ್ರಾಕ್ಟಿಕಲ್ನಲ್ಲಿ ಮಾಡುತ್ತಿದ್ದೀರಿ, ಇದು ಸರ್ಕಾರದ ಕೆಲಸವಾಗಿದೆ ಆದರೆ
ನೀವು ಸಹಯೋಗಿಯಾಗುತ್ತೀದ್ದೀರಿ ಅಂದಾಗ ಫಲಿತಾಂಶವನ್ನು ನೋಡಿ ಚೆನ್ನಾಗಿ ಎಂದು ಒಪ್ಪಿಕೊಳ್ಳುವರು.
ಒಂದು ಬುಲೆಟಿನ್ (ಚಿಕ್ಕ ದೃಶ್ಯ) ತಯಾರಿ ಮಾಡಿ ಯಾವುದರಿಂದ ಎಲ್ಲಾ ಮುಖ್ಯ ವ್ಯಕ್ತಿಗಳಿಗೆ ಇದು
ಹೋಗಲಿ, ಪುಸ್ತಕವಲ್ಲ, ಪತ್ರಿಕೆಯಲ್ಲ, ಚಿಕ್ಕದರಲ್ಲಿ ಪೂರ್ಣ ಫಲಿತಾಂಶ ಎಲ್ಲಾ ಕಡೆಯು ಕಳುಹಿಸಬೇಕು.
ಒಳ್ಳೆಯದು - ಶುಭಾಷಯಗಳು. ಒಳ್ಳೆಯದು (ಮಧ್ಯ-ಮಧ್ಯದಲ್ಲಿ ಕೆಮ್ಮು ಬರುತ್ತಿದೆ) ಇಂದು ಮಾಧ್ಯಮಕ್ಕೆ
ಶಾಂತಿ ಬೇಕಾಗಿದೆ. ಒಳ್ಳೆಯದು.
ಬಾಪ್ದಾದಾರವರ ಬಳಿ
ನಾಲ್ಕಾರುಕಡೆಯ ಸೇವೆಯ ಸೇವಾಸಮಾಚಾರಗಳು ಬರುತ್ತಿರುತ್ತವೆ ಮತ್ತು ವಿಶೇಷವಾಗಿ ಈಗ ಯಾವುದೇ ಮೂಲೆಯು
ಸಂದೇಶವಿಲ್ಲದೆ ಉಳಿಯಬಾರದು. ಎಲ್ಲರಿಗೆ ಈ ಸಂದೇಶವು ಸಿಗಬೇಕು ಎಂದು ಯಾವ ಯೋಜನೆಯನ್ನು
ಪ್ರತ್ಯಕ್ಷದಲ್ಲಿ ತರುತ್ತಿದ್ದೀರಿ ಅದರ ಫಲಿತಾಂಶವು ಚೆನ್ನಾಗಿದೆ. ಬಾಪ್ದಾದಾರವರ ಬಳಿ ಡಬಲ್
ವಿದೇಶಿ ಮಕ್ಕಳ ಸಮಾಚಾರಗಳು ಬಂದಿವೆ ಮತ್ತು ಯಾರೆಲ್ಲರೂ ಅತಿ ದೊಡ್ಡ ಕಾರ್ಯಕ್ರಮಗಳನ್ನು (ಭಾರತದಲ್ಲಿ)
ಮಾಡಿದ್ದೀರೋ ಅವರ ಸಮಾಚಾರವೆಲ್ಲವೂ ಬಂದಿದೆ. ನಾಲ್ಕಾರೂ ಕಡೆಯ ಸೇವೆಯ ಫಲಿತಾಂಶವು
ಸಫಲತಾಪೂರ್ವಕವಾಗಿ ಬಂದಿದೆ ಅಂದಾಗ ಮಕ್ಕಳು ಹೇಗೆ ಸೇವೆಯಲ್ಲಿ ಸಂದೇಶ ಕೊಡುವ ಫಲಿತಾಂಶದಲ್ಲಿ
ಸಫಲತೆಯನ್ನು ಪ್ರಾಪ್ತಿಮಾಡಿಕೊಂಡಿದ್ದೀರೋ ಹಾಗೆಯೇ ವಾಣಿಯ ಮೂಲಕ, ಸಂಪರ್ಕದ ಮೂಲಕ ಜೊತೆ-ಜೊತೆಗೆ
ತಮ್ಮ ಚಹರೆಯ ಮೂಲಕ ಫರಿಸಶ್ತಾ ರೂಪದ ಸಾಕ್ಷಾತ್ಕಾರವನ್ನು ಮಾಡಿಸುತ್ತಾ ಹೋಗಿ.
ಒಳ್ಳೆಯದು. ಯಾರು
ಮೊದಲಬಾರಿ ಬಂದಿದ್ದೀರಿ ಅವರು ಕೈ ಎತ್ತಿರಿ. ಬಹಳ ಮಂದಿ ಬಂದಿದ್ದೀರಿ. ಹಿಂದೆಯೂ ಇದ್ದಾರೆ.
ಒಳ್ಳೆಯದು- ಟೂ ಲೇಟ್ ಬೋರ್ಡ್ ಹಾಕುವುದಕ್ಕೆ ಮುಂಚೆ ಬಂದುಬಿಟ್ಟಿದ್ದೀರಿ, ಒಳ್ಳೆಯದು, ಅವಕಾಶವನ್ನು
ತೆಗೆದುಕೊಳ್ಳಿ. ಚಮತ್ಕಾರ ಮಾಡಿ ತೋರಿಸಿ, ಸಾಹಸವನ್ನಿಡಿ, ಬಾಪ್ದಾದಾರವರ ಸಹಯೋಗವು ಪ್ರತಿಯೊಬ್ಬ
ಮಗುವಿನ ಜೊತೆಯಲ್ಲಿ ಇದ್ದೇ ಇದೆ. ಒಳ್ಳೆಯದು.
ಬಾಪ್ದಾದಾ ನಾಲ್ಕಾರು
ಕಡೆಯ ಸಾಕಾರ ಸನ್ಮುಖದಲ್ಲಿ ಕುಳಿತಿರುವ ಮಕ್ಕಳಿಗೆ ಮತ್ತು ತಮ್ಮ-ತಮ್ಮ ಸ್ಥಾನದಲ್ಲಿ, ತಮ್ಮ-ತಮ್ಮ
ದೇಶದಲ್ಲಿ ಮಿಲನವನ್ನು ಆಚರಿಸುವಂತಹ ನಾಲ್ಕಾರುಕಡೆಯ ಮಕ್ಕಳಿಗೆ ಬಹಳ-ಬಹಳ ಸೇವೆಯ, ಸ್ನೇಹದ ಮತ್ತು
ಪುರುಷಾರ್ಥದ ಶುಭಾಷಯಗಳನ್ನು ನೀಡುತ್ತಿದ್ದರೆ ಆದರೆ ಪುರುಷಾರ್ಥದಲ್ಲಿ ತೀವ್ರ ಪುರುಷಾರ್ಥಿಗಳಾಗಿ
ಈಗ ಆತ್ಮಗಳನ್ನು ದುಃಖ, ಆಶಾಂತಿಯಿಂದ ಮುಕ್ತರನ್ನಾಗಿ ಮಾಡುವ ಇನ್ನೂ ತೀವ್ರ ಪುರುಷಾರ್ಥ ಮಾಡಿ.
ದುಃಖ, ಅಶಾಂತಿ, ಭ್ರಷ್ಟಾಚಾರವು ಅತಿಯಾಗಿ ಹೋಗುತ್ತಿದೆ, ಈಗ ಅತಿಯ ಅಂತ್ಯ ಮಾಡಿ. ಎಲ್ಲರಿಗೆ
ಮುಕ್ತಿಧಾಮದ ಆಸ್ತಿಯನ್ನು ತಂದೆಯಿಂದ ಕೊಡಿಸಿ, ಇಂತಹ ಧೃಡಸಂಕಲ್ಪದ ಮಕ್ಕಳಿಗೆ ನೆನಪು, ಪ್ರೀತಿ
ಹಾಗೂ ನಮಸ್ತೆ.
ವರದಾನ:
ನಮ್ರತೆ ಮತ್ತು
ಪ್ರಮಾಣದ ಬ್ಯಾಲೆನ್ಸ್ ಮುಖಾಂತರ ತಂದೆಯನ್ನು ಪ್ರತ್ಯಕ್ಷ ಮಾಡುವಂತಹ ವಿಶೇಷ ಸೇವಾಧಾರಿ ಭವ
ಎಲ್ಲಿ ಬ್ಯಾಲೆನ್ಸ್
ಇರುತ್ತದೆ ಅಲ್ಲಿ ಕಮಾಲ್ ಕಂಡುಬರುತ್ತದೆ. ಯಾವಾಗ ತಾವು ನಮ್ರತೆ ಮತ್ತು ಸತ್ಯತೆಯ ಪ್ರಮಾಣದ
ಬ್ಯಾಲೆನ್ಸ್ ನಿಂದ ಯಾರಿಗೇ ತಂದೆಯ ಪರಿಚಯ ಕೊಟ್ಟಾಗ ಅವರಲ್ಲಿ ಕಮಾಲ್ ಕಂಡುಬರುತ್ತದೆ. ಇದೇ
ರೂಪದಿಂದ ತಂದೆಯನ್ನು ಪ್ರತ್ಯಕ್ಷ ಮಾಡಬೆಕಾಗಿದೆ. ನಿಮ್ಮ ಮಾತು ಸ್ಪಷ್ಟವಾಗಿರಲಿ, ಅದರಲ್ಲಿ
ಸ್ನೇಹಕೂಡ ಇರಲಿ, ನಮ್ರತೆ ಹಾಗೂ ಮಧುರತೆ ಕೂಡಾಯಿರಲಿ ಹಾಗೂ ಮಹಾನತೆ ಮತ್ತು ಸತ್ಯತೆಯೂ ಇರಲಿ ಆಗ
ಪ್ರತ್ಯಕ್ಷತೆಯಾಗುತ್ತದೆ. ಹೇಳುತ್ತಾ-ಹೇಳುತ್ತಾ ಮಧ್ಯ-ಮಧ್ಯ ಅನುಭವ ಮಾಡಿಸುತ್ತಾ ಹೋಗಿ ಇದರಿಂದ
ಲಗನ್ನಲ್ಲಿ ಮಗನ್ಮೂರ್ತ್ನ ಅನುಭವವಾಗಲಿ. ಇಂತಹ ಸ್ವರೂಪದಲ್ಲಿ ಸೇವೆ ಮಾಡುವಂತಹವರೇ ವಿಶೇಷ
ಸೇವಾಧಾರಿಯಾಗಿದ್ದಾರೆ.
ಸ್ಲೋಗನ್:
ಸಮಯದಲ್ಲಿ
ಯಾವುದೇ ಸಾಧನಗಳು ಇಲ್ಲದೇ ಹೋದರೂ ಸಹ ನಿಮ್ಮ ಸಾಧನೆಯಲ್ಲಿ ವಿಘ್ನ ಬೀಳದಿರಲಿ.
ಅವ್ಯಕ್ತ ಸೂಚನೆ - ಸತ್ಯ
ಮತ್ತು ಸಭ್ಯತೆ ರೊಪಿ ಕಲ್ಚರ್(ಸಂಸ್ಕೃತಿಯನ್ನು) ತಮ್ಮದಾಗಿಸಿಕೊಳ್ಳಿರಿ
ಕೆಲವರು ತಿಳಿಯುತ್ತಾರೆ
ಬಹುಶಹ ಕ್ರೋಧ ವಿಕಾರವಲ್ಲ, ಇದು ಶಸ್ತ್ರವಾಗಿದೆ. ಆದರೆ ಕ್ರೋಧ ಜ್ಞಾನಿತು ಆತ್ಮನಿಗಾಗಿ ಮಹಾ ಶತ್ರು
ಆಗಿದೆ ಏಕೆಂದರೆ ಕ್ರೋದ ಅನೇಕ ಆತ್ಮರ ಸಂಬಂಧ ಸಂಪರ್ಕದಲ್ಲಿ ಬರುವುದರಿಂದ ಪ್ರಸಿದ್ಧವಾಗಿ
ಬಿಡುತ್ತದೆ ಹಾಗೂ ಕ್ರೋಧವನ್ನು ನೋಡಿ ತಂದೆಯ ಹೆಸರು ಬಹಳ ಕೆಡುತ್ತದೆ. ಹೇಳುವವರು ಇದನ್ನೇ
ಹೇಳುತ್ತಾರೆ, ನೋಡಿದೆವು ಜ್ಞಾನಿತು ಆತ್ಮ ಮಕ್ಕಳನ್ನು, ಆದ್ದರಿಂದ ಇದರ ಅಂಶ ಮಾತ್ರವನ್ನು ಸಹ
ಸಮಾಪ್ತಿ ಮಾಡಿ. ಸಭ್ಯತಾ ಪೂರ್ವಕವಾಗಿ ವ್ಯವಹಾರ ಮಾಡಿ.