30.06.24    Avyakt Bapdada     Kannada Murli    30.03.20     Om Shanti     Madhuban


ಮನಸ್ಸನ್ನು ಆರೋಗ್ಯವಾಗಿಡಲು, ಮಧ್ಯ ಮಧ್ಯದಲ್ಲಿ ಐದು ಸೆಕೆಂಡುಗಳನ್ನು ತೆಗೆದುಕೊಂಡು ಮನಸ್ಸಿನ ಎಕ್ಸರ್ಸೈಜ್(ವ್ಯಯಾಮ) ಮಾಡಿರಿ.


ಇಂದು ದೂರದೇಶದಲ್ಲಿರುವ ಬಾಪ್ ದಾದಾ ಅವರು ಭೌತಿಕ ಪ್ರಪಂಚದ ವಿವಿಧ ದೇಶಗಳ ಮಕ್ಕಳನ್ನು ಮಿಲನ ಮಾಡಲು ಬಂದಿದ್ದಾರೆ ಬಾಪ್ದಾದಾ ಅವರು ವಿವಿಧ ದೇಶಗಳ ಮಕ್ಕಳನ್ನು ಒಂದು ದೇಶದ ನಿವಾಸಿಗಳಂತೆ ನೋಡುತ್ತಿದ್ದಾರೆ. ಯಾರು ಎಲ್ಲಿಂದಲಾದರೂ ಬಂದಿರಲಿ, ಆದರೆ ಎಲ್ಲದಕ್ಕಿಂತ ಮೊದಲು ಎಲ್ಲರೂ ಒಂದೇ ದೇಶದಿಂದ ಬಂದಿದ್ದೀರಿ. ಹಾಗಾದರೆ ತಮ್ಮ ಅನಾದಿ ದೇಶ ನೆನಪಿದೆಯಲ್ಲವೇ! ತಮ್ಮ ದೇಶ ಪ್ರಿಯವಾಗಿದೆಯಲ್ಲವೇ! ತಂದೆಯ ಜೊತೆಗೆ ತಮ್ಮ ಅನಾದಿ ದೇಶ ಕೂಡ ತುಂಬಾ ಪ್ರಿಯವಾಗಿದೆ ಅಲ್ಲವೇ!

ಇಂದು ಬಾಪ್ದಾದಾ ಎಲ್ಲಾ ಮಕ್ಕಳ ಐದು ಸ್ವರೂಪಗಳನ್ನು ನೋಡುತ್ತಿದ್ದರು ಐದು ಸ್ವರೂಪಗಳು ಯಾವುದು ಎಂದು ತಿಳಿದಿದೆಯಲ್ಲವೇ? ತಿಳಿದುಕೊಂಡಿದ್ದೀರಲ್ಲವೇ! ಪಂಚಮುಖ ಬ್ರಹ್ಮನನ್ನು ಪೂಜಿಸಲಾಗುತ್ತದೆ. ಹಾಗಾಗಿ ಎಲ್ಲಾ ಮಕ್ಕಳ ಐದು ಸ್ವರೂಪಗಳನ್ನು ನೋಡುತ್ತಿದ್ದಾರೆ.

ಮೊದಲನೆಯದು- ಅನಾದಿ ಜ್ಯೋತಿರ್ಬಿಂದು ಸ್ವರೂಪ ತಮ್ಮ ರೂಪ ನೆನಪಿದೆಯಲ್ಲವೇ? ಮರೆತು ಹೋಗುವುದಿಲ್ಲ ಅಲ್ಲವೇ? ಎರಡನೆಯದು -ಆದಿ ದೇವತೆಯ ಸ್ವರೂಪ. ದೇವತಾ ಸ್ವರೂಪಕ್ಕೆ ತಲುಪಿದಿರಾ? ಮೂರನೆಯದು- ಮಧ್ಯದಲ್ಲಿ ಪೂಜ್ಯ ಸ್ವರೂಪ, ಅದು ಕೂಡ ನೆನಪಿದೆಯಲ್ಲ್ಲವೇ? ತಮ್ಮೆಲ್ಲರ ಪೂಜೆಯಾಗುತ್ತದೆಯೋ ಅಥವಾ ಭಾರತವಾಸಿಗಳ ಪೂಜೆಯಾಗುತ್ತದೆಯೋ? ತಮ್ಮ ಪೂಜೆ ಆಗುತ್ತದೆಯೇ? ಕುಮಾರಾರು ಹೇಳಿ ತಮ್ಮ ಪೂಜೆಯಾಗುತ್ತದೆಯೇ? ಆದ್ದರಿಂದ ಮೂರನೆಯದು ಪೂಜ್ಯ ಸ್ವರೂಪವಾಗಿದೆ. ನಾಲ್ಕನೆಯದು- ಸಂಗಮ ಯುಗದ ಬ್ರಾಹ್ಮಣ ಸ್ವರೂಪ ಮತ್ತು ಕೊನೆಯದು-- ಫರಿಶ್ತ್ತಾ ಸ್ವರೂಪ. ಹಾಗಾದರೆ ಐದು ರೂಪಗಳು ನೆನಪಿಗೆ ಬಂದವೇ? ಒಳ್ಳೆಯದು ಒಂದು ಸೆಕೆಂಡಿನಲ್ಲಿ ಈ ಐದು ರೂಪಗಳಲ್ಲಿ ತಮ್ಮನ್ನು ಅನುಭವ ಮಾಡಲು ಸಾಧ್ಯವೇ? ಒಂದು ಎರಡು ಮೂರು ನಾಲ್ಕು ಐದು.... ಅನುಭವ ಮಾಡಿದಿರಾ? ಈ ಐದು ಸ್ವರೂಪಗಳು ಎಷ್ಟು ಸುಂದರವಾಗಿವೆ? ತಮಗೆ ಬೇಕಾದಾಗ ಬೇಕಾದ ರೂಪದಲ್ಲಿ ಸ್ಥಿತರಾಗಲು ಬಯಸಿದರೆ, ಆ ಸ್ವರೂಪವನ್ನು ನೆನಪಿಸಿಕೊಳ್ಳಿ ಮತ್ತು ಅನುಭವ ಮಾಡಿ. ಇದೇ ಮನಸ್ಸಿನ ಆತ್ಮಿಕ ವ್ಯಾಯಾಮವಾಗಿದೆ. ಇತ್ತೀಚಿನ ದಿನಗಳಲ್ಲಿ ಎಲ್ಲರೂ ಏನು ಮಾಡುತ್ತಾರೆ? ವ್ಯಾಯಾಮ ಮಾಡುತ್ತಾರಲ್ಲವೇ! ಆದಿಯ ಸಮಯದಲ್ಲಿ ತಮ್ಮ ಪ್ರಪಂಚದಲ್ಲಿ (ಸತ್ಯಯುಗದಲ್ಲಿ) ನಡೆದಾಡುವಾಗ ನೈಸರ್ಗಿಕ ವ್ಯಾಯಾಮ ಇತ್ತು. ಹೀಗೆ ನಿಂತುಕೊಂಡು ಒಂದು, ಎರಡು, ಮೂರು... ವ್ಯಾಯಾಮವಲ್ಲ. ಆದ್ದರಿಂದ, ಈಗ ಕೊನೆಯಲ್ಲಿ ಸಹ, ಬಾಪ್ದಾದಾರವರು ಮನಸ್ಸಿನ ಎಕ್ಸರ್ಸೈಜ್ ಮಾಡಿಸುತ್ತಾರೆ ಹೇಗೆ ದೈಹಿಕ ಕಸರತ್ತು ದೇಹವನ್ನು ಆರೋಗ್ಯವಾಗಿರುವಂತೆ ಮಾಡುತ್ತದೆಯಲ್ಲವೇ! ಹಾಗೆಯೇ ನಡೆದಾಡುತ್ತಾ ಮನಸ್ಸಿನ ಈ ಎಕ್ಸರ್ಸೈಜ್ ಮಾಡುತ್ತಾ ಇರಿ. ಇದಕ್ಕಾಗಿ ಬಹಳ ಸಮಯ ಬೇಕಾಗಿಲ್ಲ. ಯಾವಾಗಲಾದರೂ ಐದು ಸೆಕೆಂಡುಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತದೆಯೋ ಇಲ್ಲವೋ! 5 ಸೆಕೆಂಡ್ ಕೂಡ ತೆಗೆದುಕೊಳ್ಳಲಾರದಷ್ಟು ಬ್ಯುಸಿ ಯಾರಾದರೂ ಇದ್ದಾರೆಯೇ! ಯಾರಾದರೂ ಇದ್ದರೆ, ಕೈ ಎತ್ತಿ. ನಂತರ ಹೇಳಬಾರದು- ಏನು ಮಾಡುವುದು ಸಮಯವೇ ಸಿಗುವುದಿಲ್ಲ? ಹೀಗಂತೂ ಹೇಳುವುದಿಲ್ಲ ಅಲ್ಲವೇ! ಸಮಯ ಸಿಗುತ್ತದೆಯೇ? ಹಾಗಾದರೆ ಮಧ್ಯಮಧ್ಯದಲ್ಲಿ ಈ ಎಕ್ಸರ್ಸೈಜ್ ಅನ್ನು ಮಾಡಿರಿ. ಆಗ ಮನಸ್ಸು ಸದಾ ಆರೋಗ್ಯವಾಗಿರುತ್ತದೆ, ಉತ್ತಮವಾಗಿರುತ್ತದೆ. ಬಾಪ್ದಾದಾರವರು ಹೇಳುತ್ತಾರೆ-- ಪ್ರತಿ ಘಂಟೆಗೆ 5 ಸೆಕೆಂಡಗಳ ಕಾಲ ಈ ವ್ಯಾಯಾಮ ಮಾಡಿ ಸಾಧ್ಯವಾಗಬಹುದೇ? ನೋಡಿ- ಎಲ್ಲರೂ ಹೇಳುತ್ತಾರೆ- ಇದು ಸಾಧ್ಯ. ನೆನಪಿಟ್ಟುಕೊಳ್ಳಿ. ಓಂ ಶಾಂತಿ ಭವನವನ್ನು ನೆನಪಿಟ್ಟುಕೊಳ್ಳಿ, ಮರೆಯಬೇಡಿರಿ. ಮನಸ್ಸಿನ ವಿವಿಧ ಕಂಪ್ಲೇಂಟ್ಸ್ಗಳಿವೆಯಲ್ಲವೇ! ಏನು ಮಾಡುವುದು ಮನಸ್ಸು ಸ್ಥಿರವಾಗಿರುವುದಿಲ್ಲ! ಮನಸ್ಸನ್ನು ಭಾರ ಮಾಡಿಕೊಂಡು ಬಿಡುತ್ತೀರಿ. ಭಾರ ಮಾಡಿಕೊಳ್ಳುತ್ತೀರಲ್ಲವೇ! ಹಿಂದಿನ ಕಾಲದಲ್ಲಿ ಪಾವು, ಸೇರು ಮತ್ತು ಮಣ ಇರುತ್ತಿದ್ದವು, ಇತ್ತೀಚೆಗೆ ಬದಲಾಗಿವೆ. ಹಾಗಾಗಿ ಮನಸ್ಸು ಭಾರದಿಂದ ತುಂಬಿರುತ್ತದೆ ಹಾಗೂ ನೀವು ಈ ವ್ಯಾಯಾಮವನ್ನು ಮುಂದುವರಿಸಿದರೆ, ಸಂಪೂರ್ಣವಾಗಿ ಹಗುರವಾಗುತ್ತಿರಿ. ಅಭ್ಯಾಸವಾಗುತ್ತದೆ. ಬ್ರಾಹ್ಮಣ ಎಂಬ ಶಬ್ದ ನೆನಪಾದರೆ ಬ್ರಾಹ್ಮಣ ಜೀವನದ ಅನುಭವ ಮಾಡಿ. ಫರಿಶ್ತ ಶಬ್ದ ಹೇಳಿದರೆ, ಫರಿಶ್ತ ಆಗಿರಿ. ಕಠಿಣವೇ? ತಾವು ಫರಿಶ್ತಗಳಾಗಿದ್ದೀರೋ ಅಥವಾ ಇಲ್ಲವೋ? ತಾವೇ ಆಗಿದ್ದೀರೋ ಅಥವಾ ಬೇರೆಯವರೋ? ಎಷ್ಟು ಸಲ ಫರಿಶ್ತ ಆಗಿದ್ದೀರಿ? ಲೆಕ್ಕವಿಲ್ಲದಷ್ಟು ಬಾರಿ ಆಗಿದ್ದೀರಿ. ತಾವೇ ಆಗಿದ್ದೀರಲ್ಲವೇ? ಒಳ್ಳೆಯದು ಲೆಕ್ಕವಿಲ್ಲದಷ್ಟು ಬಾರಿ ಆಗಿರುವ ವಿಷಯವನ್ನು ಪುನರಾವರ್ತಿಸುವುದು ಕಷ್ಟವಾಗುತ್ತದೆಯೇ? ಕೆಲವೊಮ್ಮೆ ಕಷ್ಟವಾಗುತ್ತದೆಯೇ? ಈಗ ಈ ಅಭ್ಯಾಸವನ್ನು ಮಾಡಿರಿ. ಎಲ್ಲಿಯೇ ಇದ್ದರೂ 5 ಸೆಕೆಂಡುಗಳ ಕಾಲ ಮನಸ್ಸನ್ನು ಸುತ್ತಿಸಿರಿ, ತಿರುಗಿಸಿ. ತಿರುಗಿಸಲು ಹಿತವೆನಿಸುತ್ತದೆ ಅಲ್ಲವೇ? ಶಿಕ್ಷಕರೇ ಸರಿಯಾಗಿದೆ ಅಲ್ಲವೇ? ಒಂದು ಸುತ್ತು ಮಾಡಲು ಬರುತ್ತದೆಯಲ್ಲವೇ? ಒಂದು ಸುತ್ತು ಮಾಡಿ ಅಷ್ಟೇ, ನಂತರ ಕೆಲಸವನ್ನು ಮುಂದುವರಿಸಿ. ಪ್ರತಿ ಗಂಟೆಗೆ ಒಂದು ರೌಂಡ್ ಮಾಡಿ ಮತ್ತು ನಂತರ ಕೆಲಸಕ್ಕೆ ಹಿಂತಿರುಗಿ. ಏಕೆಂದರೆ ತಾವು ಕೆಲಸವನ್ನು ಬಿಡಲು ಸಾಧ್ಯವಿಲ್ಲ ! ಡ್ಯೂಟಿ ನಿರ್ವಹಿಸಲೇಬೇಕು. ಆದರೆ ಐದು ಸೆಕೆಂಡ್, ನಿಮಿಷಗಳು ಅಲ್ಲ, ಸೆಕೆಂಡ್ ತಮಗಾಗಿ ತೆಗೆದುಕೊಳ್ಳಲು ಸಾಧ್ಯವಿಲ್ಲವೇ? ತೆಗೆದುಕೊಳ್ಳಬಹುದೇ? ಯು ಎನ್ನ ಆಫೀಸ್ ನಲ್ಲಿ ತೆಗೆದುಕೊಳ್ಳಬಹುದೇ? ತಾವು ಮಾಸ್ಟರ್ ಸರ್ವಶಕ್ತಿವಂತರಾಗಿದ್ದೀರಿ. ಆದ್ದರಿಂದ ಮಾಸ್ಟರ್ ಸರ್ವಶಕ್ತಿವಂತರು ಏನು ಮಾಡಲು ಸಾಧ್ಯವಿಲ್ಲ?

ಮಕ್ಕಳ ಒಂದು ಮಾತನ್ನು ನೋಡಿ, ಬಾಪ್ದಾದಾರವರು ಮುದ್ದಾಗಿ ನಗುತ್ತಾರೆ. ಯಾವ ಮಾತು? ಅವರು ಚಾಲೆಂಜ್ ಮಾಡುತ್ತಾರೆ, ಕರಪತ್ರಗಳನ್ನು ಮುದ್ರಿಸುತ್ತಾರೆ, ಭಾಷಣ ಮಾಡುತ್ತಾರೆ, ಕೋರ್ಸ್ಗಳನ್ನು ನಡೆಸುತ್ತಾರೆ, ಏನು ಮಾಡುವಿರಿ? ಎಂದರೆ, ನಾವು ವಿಶ್ವವನ್ನು ಪರಿವರ್ತನೆ ಮಾಡುತ್ತೇವೆ ಎಂದು ಎಲ್ಲರೂ ಹೇಳುತ್ತಾರೆ. ಅಲ್ಲವೇ! ಅಥವಾ ಇಲ್ಲವೇ? ಎಲ್ಲರೂ ಹೇಳುತ್ತೀರೋ ಅಥವಾ ಭಾಷಣ ಮಾಡುವವರು ಮಾತ್ರ ಹೇಳುತ್ತೀರೋ? ಒಂದು ಕಡೆ ಹೇಳುತ್ತೀರಿ ವಿಶ್ವವನ್ನು ಪರಿವರ್ತನೆ ಮಾಡುತ್ತೇವೆ, ಮಾಸ್ಟರ್ ಸರ್ವಶಕ್ತಿವಂತರಾಗಿದ್ದೇವೆ! ಹಾಗೂ ಇನ್ನೊಂದೆಡೆ ತಮ್ಮ ಮನಸ್ಸನ್ನು ನನ್ನ ಮನಸ್ಸು ಎಂದು ಹೇಳುತ್ತೀರಿ, ಮನಸ್ಸಿನ ಮಾಲೀಕರಾಗಿದ್ದೀರಿ ಮತ್ತು ಮಾಸ್ಟರ್ ಸರ್ವಶಕ್ತಿವಂತರಾಗಿದ್ದೀರಿ. ಕಷ್ಟವಾಗುತ್ತದೆ ಎಂದು ಇನ್ನೂ ಹೇಳುತ್ತೀರಾ? ಹೀಗಾದರೆ ನಗು ಬರುವುದಿಲ್ಲವೇ! ನಗು ಬರುತ್ತದೆ ಅಲ್ಲವೇ! ಮನಸ್ಸು ಒಪ್ಪುವುದಿಲ್ಲ ಎಂದು ಯಾವಾಗ ಯೋಚಿಸುತ್ತಿರೋ, ಆಗ ತಮ್ಮ ಮೇಲೆ ತಾವೇ ಮುಗುಳ್ನಗಬೇಕು. ಮನಸ್ಸಿನಲ್ಲಿ ಯಾವುದಾದರೂ ಯೋಚನೆ ಬರುತ್ತದೆ ಎಂದರೆ ಬಾಪ್ದಾದಾರವರು ಮೂರು ರೇಖೆಗಳ ಬಗ್ಗೆ ಹಾಡುವುದನ್ನು ನೋಡಿದ್ದಾರೆ. ಒಂದು ನೀರಿನ ಮೇಲಿನ ಗೆರೆ. ನೀರಿನ ಮೇಲೆ ಗೆರೆಯನ್ನು ನೋಡಿದ್ದೀರಾ, ಗೆರೆ ಹಾಕಿದರೆ ಅದೇ ಸಮಯ ಅಳಿಸಿ ಹೋಗುತ್ತದೆ. ಗೆರೆಯನ್ನಂತೂ ಹಾಕುತ್ತಿರಲ್ಲವೇ! ಎರಡನೆಯದಾಗಿದೆ -- ಯಾವುದಾದರೂ ಹಾಳೆಯ ಮೇಲೆ, ಸ್ಲೇಟಿನ ಮೇಲೆ ಎಲ್ಲಿಯಾದರೂ ರೇಖೆಯನ್ನು ಎಳೆಯುವುದು. ಮತ್ತು ಎಲ್ಲಕ್ಕಿಂತ ದೊಡ್ಡ ರೇಖೆಯಾಗಿದೆ--ಕಲ್ಲಿನ ಮೇಲೆ ರೇಖೆಯನ್ನು ಎಳೆಯುವುದು. ಕಲ್ಲಿನ ರೇಖೆಯನ್ನು ಅಳಿಸುವುದು ತುಂಬಾ ಕಷ್ಟ. ಆದ್ದರಿಂದ ಅನೇಕ ಬಾರಿ ಮಕ್ಕಳು ತಮ್ಮ ಮನಸ್ಸಿನಲ್ಲಿ ಕಲ್ಲಿನ ಮೇಲಿನ ರೇಖೆಯಂತೆ ಖಚಿತವಾದ ರೇಖೆಯನ್ನು ಎಳೆಯುತ್ತಾರೆ ಎಂದು ಬಾಪ್ದಾದಾರವರು ನೋಡಿದ್ದಾರೆ. ಅದು ಅಳಿಸಿದರೂ ಅಳಿಸಿ ಹೋಗುವುದಿಲ್ಲ. ಅಂತಹ ರೇಖೆ ಚೆನ್ನಾಗಿದೆಯೇ? ಇನ್ನು ಮುಂದೆ ಮಾಡುವುದಿಲ್ಲ, ಇಂದಿನಿಂದ ಹಾಗೆ ಆಗುವುದಿಲ್ಲ ಎಂದು ಎಷ್ಟೊಂದು ಬಾರಿ ಪ್ರತಿಜ್ಞೆ ಕೂಡ ಮಾಡುತ್ತೀರಿ. ಆದರೆ ಮತ್ತೆ ಮತ್ತೆ ಪರವಶರಾಗುತ್ತೀರಿ ಆದ್ದರಿಂದ ಬಾಪ್ದಾದಾರವರಿಗೆ ಮಕ್ಕಳ ಮೇಲೆ ತಿರಸ್ಕಾರ ಬರುವುದಿಲ್ಲ, ಕರುಣೆ ಬರುತ್ತದೆ. ಪರವಶರಾಗುತ್ತಾರೆ. ಪರವಶರಾದವರ ಮೇಲೆ ಕರುಣೆ ಬರುತ್ತದೆ. ಬಾಪ್ದಾದಾರವರು ಮಕ್ಕಳನ್ನು ಹಾಗೆ ಕರುಣೆಯಿಂದ ನೋಡಿದಾಗ, ನಾಟಕದ ಪರದೆಯ ಮೇಲೆ ಏನು ಕಾಣುತ್ತದೆ? ಎಲ್ಲಿಯವರೆಗೆ? ಹಾಗಾದರೆ ತಾವು ಇದಕ್ಕೆ ಉತ್ತರಿಸಿ. ಎಲ್ಲಿಯವರೆಗೆ? ಕುಮಾರರು ಉತ್ತರ ಕೊಡಲು ಸಾಧ್ಯವೇ- ಯಾವಾಗ ಸಮಾಪ್ತಿಯಾಗುತ್ತದೆ? ಕುಮಾರರು ತುಂಬಾ ಯೋಜನೆಗಳನ್ನು ರೂಪಿಸುತ್ತೀರಲ್ಲವೇ! ಎಲ್ಲಿಯವರೆಗೆ ಎಂದು ಹೇಳಬಹುದೇ? ಉತ್ತರ ಕೊಡಬಹುದೇ ಎಲ್ಲಿಯವರೆಗೆ? ದಾದಿಯರೇ ಹೇಳಿರಿ (ಎಲ್ಲಿಯವರೆಗೆ ಸಂಗಮ ಯುಗ ಇರುತ್ತದೆಯೋ ಅಲ್ಲಿಯವರೆಗೆ ಸ್ವಲ್ಪ ಸ್ವಲ್ಪ ಇರುತ್ತದೆ) ಹಾಗಾದರೆ ಸಂಗಮ ಯುಗವು ಎಲ್ಲಿಯವರೆಗೆ? (ಯಾವಾಗ ಫರಿಶ್ತೆ ಆಗುತ್ತೇವೆ) ಅದು ಕೂಡ ಎಲ್ಲಿಯವರೆಗೆ? (ಬಾಬಾ ಹೇಳಿರಿ) ವರಿಷ್ಠ ಆಗುವವರು ತಾವೋ ಅಥವಾ ತಂದೆಯೋ? ಇದರಿಂದ ಇದರ ಉತ್ತರವನ್ನು ಯೋಚಿಸಿ, ತಂದೆಯಂತು ಈಗಲೇ ಎಂದು ಹೇಳುತ್ತಾರೆ. ತಾವು ತಯಾರಾಗಿದ್ದೀರಾ? ಅರ್ಧ ಮಾಲೆಯಲ್ಲಿಯೂ ಕೈಯನ್ನು ಎತ್ತಲಿಲ್ಲ.

ಬಾಪ್ದಾದಾ ಸದಾ ಮಕ್ಕಳನ್ನು ಸಂಪನ್ನ ಸ್ವರೂಪದಲ್ಲಿ ನೋಡಲು ಬಯಸುತ್ತಾರೆ ತಂದೆಯೇ ನನ್ನ ಸಂಸಾರ ಎಂದು ಹೇಳುತ್ತೀರಿ ಎಲ್ಲರೂ ಇದನ್ನೇ ಹೇಳುತ್ತಿರಲ್ಲವೇ! ಯಾವುದಾದರೂ ಅನ್ಯ ಸಂಸಾರವಿದೆಯೇ? ತಂದೆಯೇ ಸಂಸಾರವಾಗಿದ್ದಾರೆ ಎಂದಮೇಲೆ ಸಂಸಾರದ ಹೊರೆ ಇನ್ನೇನಿದೆ? ಮಾತ್ರ ಸಂಸ್ಕಾರ ಪರಿವರ್ತನೆ ಮಾಡಿಕೊಳ್ಳುವ ಅವಶ್ಯಕತೆ ಇದೆ. ಬ್ರಾಹ್ಮಣರ ಜೀವನದಲ್ಲಿ ಬಹು ಸಂಖ್ಯೆಯ ವಿಘ್ನ ರೂಪವಾಗಿದೆ-- ಸಂಸ್ಕಾರ. ಅದು ತಮ್ಮ ಸಂಸ್ಕಾರವೇ ಆಗಿರಬಹುದು ಅಥವಾ ಬೇರೆಯವರ ಸಂಸ್ಕಾರವಾಗಿರಬಹುದು. ಜ್ಞಾನ ಎಲ್ಲರಲ್ಲಿಯೂ ಇದೆ, ಶಕ್ತಿಗಳು ಕೂಡ ಎಲ್ಲರ ಹತ್ತಿರ ಇವೆ. ಆದರೆ ಕಾರಣವೇನು? ಯಾವ ಶಕ್ತಿ ಯಾವ ಸಮಯದಲ್ಲಿ ಕಾರ್ಯ ರೂಪಕ್ಕೆ ತರಲು ಇಚ್ಚಿಸುವಿರೋ, ಆ ಸಮಯದಲ್ಲಿ ಇಮರ್ಜ್ ಆಗುವ ಬದಲು ಸ್ವಲ್ಪ ಸಮಯದ ನಂತರ ಮರ್ಜ್ ಆಗುತ್ತದೆ ಆಗ ಹೀಗೆ ಹೇಳದೆ ಹೀಗೆ ಹೇಳಿದರೆ ಬಹಳ ಚೆನ್ನಾಗಿತ್ತು ಎಂದು ಯೋಚಿಸುತ್ತೀರಿ ಇದನ್ನು ಮಾಡುವ ಬದಲು ಹೀಗೆ ಮಾಡಿದ್ದರೆ ಬಹಳ ಚೆನ್ನಾಗಿತ್ತು ಆದರೆ ಪಾಸ್ ಆಗುವ ಸಮಯ ಅದಂತು ಕಳೆದು ಹೋಯಿತು, ಹಾಗೆಯೇ ಎಲ್ಲರೂ ತಮ್ಮಲ್ಲಿನ ಶಕ್ತಿಗಳ ಬಗ್ಗೆ ಯೋಚಿಸುತ್ತ ಇರುತ್ತೀರಿ, ಸಹನ ಶಕ್ತಿ ಇದಾಗಿದೆ, ಇದು ನಿರ್ಣಯ ಶಕ್ತಿಯಾಗಿದೆ ಇದನ್ನು ಹೀಗೆ ಉಪಯೋಗಿಸಬೇಕು. ಮಾತ್ರ ಸ್ವಲ್ಪ ಸಮಯದ ಅಂತರವಾಗಿ ಬಿಡುತ್ತದೆ ಮತ್ತು ಎರಡನೆಯ ವಿಷಯ ಯಾವುದು? ಸರಿ ಮೊದಲನೇ ಬಾರಿ ಶಕ್ತಿ ಸಮಯಕ್ಕೆನುಸಾರವಾಗಿ ಕಾರ್ಯರೂಪಕ್ಕೆ ಬರಲಿಲ್ಲ ಮತ್ತು ನಂತರ ಇದನ್ನು ಮಾಡದೆ ಹೀಗೆ ಮಾಡಬೇಕಿತ್ತು ಎಂದು ಅನುಭವವನ್ನು ಮಾಡಿದಿರಿ. ಆನಂತರ ಅರ್ಥವಾಗುತ್ತದೆ ಆದರೆ ಆ ತಪ್ಪನ್ನು ಒಂದು ಬಾರಿ ಅನುಭವ ಮಾಡಿದ ಮೇಲೆ ಮುಂದೆ ಅನುಭವಿಯಾಗಿ ಅದು ಇನ್ನೊಮ್ಮೆ ಆಗದಂತೆ ಚೆನ್ನಾಗಿ ಅರಿತುಕೊಳ್ಳಿ. ಆದರೂ ಪ್ರಗತಿ ಸಾಧಿಸಬಹುದು. ಆ ಸಮಯದಲ್ಲಿ ಅರ್ಥವಾಗುತ್ತದೆ-- ಇದು ತಪ್ಪು, ಇದು ಸರಿ, ಆದರೆ ಅದೇ ತಪ್ಪು, ಮತ್ತೊಮ್ಮೆ ಆಗಬಾರದು, ಅದರಲ್ಲಿಯೂ ಅಂತಹ ಪೂರ್ಣ ಶೇಕಡವಾರು ಅಂಕಗಳೊಂದಿಗೆ ತಾವು ಉತ್ತೀರ್ಣರಾಗುವುದಿಲ್ಲ ಎಂಬುದನ್ನು ತಾವು ಸ್ವತಹ ಚೆನ್ನಾಗಿ ಅರಿತುಕೊಳ್ಳಿ. ಮತ್ತು ಮಾಯೆ ಬಹಳ ಬುದ್ಧಿವಂತವಾಗಿದೆ, ತಮ್ಮಲ್ಲಿ ಸಹಿಷ್ಣತೆ ಕಡಿಮೆ ಇದೆ ಎಂದು ಭಾವಿಸೋಣ, ತಾವು ಸಹನ ಶಕ್ತಿಯನ್ನು ಉಪಯೋಗಿಸುವಂತಹ ಮಾತು ಬರುತ್ತದೆ, ಒಮ್ಮೆ ತಾವು ಇದನ್ನು ಅರಿತುಕೊಂಡಿರಿ, ಆದರೆ ಮಾಯೆ ಏನು ಮಾಡುತ್ತದೆ ಎಂದರೆ, ಇನ್ನೊಮ್ಮೆ ಸ್ವಲ್ಪ ರೂಪ ಬದಲಿಸಿಕೊಂಡು ಬರುತ್ತದೆ. ಆದರೆ ಅದೇ ವಿಷಯವಾಗಿರುತ್ತದೆ. ಹೇಗೆ ವರ್ತಮಾನ ಸಮಯದಲ್ಲಿ ಹಳೆಯ ವಸ್ತುವನ್ನು ಪಾಲಿಶ್ ಮಾಡಿ ಹೊಸತರಂತೆ ಕಾಣುವಂತೆ ಮಾಡುತ್ತಾರೆಯೋ ಹಾಗೆಯೇ ಮಾಯೆ ಕೂಡ ಪಾಲಿಶ್ ಮಾಡಿಕೊಂಡು ಬರುತ್ತದೆ, ಹಳೆಯ ವಿಷಯವೇ ಆಗಿರುತ್ತದೆ. ತಮ್ಮಲ್ಲಿ ಅಸೂಯೆಯ ಭಾವ ಬಂದಿದೆ ಎಂದು ಭಾವಿಸೋಣ. ಅಸೂಯೆಯ ಬೇರೆ ಬೇರೆ ರೂಪಗಳಿವೆ, ಅದು ಒಂದೇ ರೂಪದಲ್ಲಿ ಇರುವುದಿಲ್ಲ. ಆದ್ದರಿಂದ ಅಸೂಯೆಯ ಬೀಜವೇ ಆಗಿರುತ್ತದೆ, ಆದರೆ ಬೇರೆ ರೂಪದಲ್ಲಿ ಬರುತ್ತದೆ. ಮೊದಲಿನ ರೂಪದಲ್ಲಿ ಬರುವುದಿಲ್ಲ ಹಾಗಾಗಿ ಮೊದಲನೆಯ ಮಾತು ಅದಾಗಿತ್ತು, ಇದಂತೂ ಬೇರೆಯದ್ದೆ ಆಗಿದೆ ಎಂದು ಅನೇಕ ಬಾರಿ ಯೋಚಿಸುತ್ತೇವೆ. ಆದರೆ ಬೀಜ ಒಂದೇ ಆಗಿರುತ್ತದೆ ರೂಪ ಮಾತ್ರ ಪರಿವರ್ತನೆಯಾಗುತ್ತದೆ. ಇಂತಹ ಸಮಯದಲ್ಲಿ ಯಾವ ಶಕ್ತಿ ಬೇಕು?-- ನಿರ್ಣಯ ಶಕ್ತಿ ಇದಕ್ಕಾಗಿ ತಾವು ಎರಡು ವಿಷಯಗಳ ಬಗ್ಗೆ ಗಮನ ಕೊಡಬೇಕು ಎಂದು ಬಾಪ್ ದಾದಾ ಈ ಹಿಂದೆಯೂ ಹೇಳಿದ್ದಾರೆ. ಒಂದು-- ಸತ್ಯ ಹೃದಯ. ಸತ್ಯತೆ. ಅದನ್ನು ಒಳಗಡೆ ಇಟ್ಟುಕೊಳ್ಳಬೇಡಿ, ಅದನ್ನು ಒಳಗಡೆ ಇಟ್ಟುಕೊಂಡರೆ ಗಾಳಿಯಿಂದ ಬಲುನು ತುಂಬುತ್ತದೆ ನಂತರ ಕೊನೆಯಲ್ಲಿ ಏನಾಗುತ್ತದೆ? ಒಡೆದು ಹೋಗುತ್ತದೆಯಲ್ಲವೇ! ಆದ್ದರಿಂದ ಸತ್ಯ ಹೃದಯ-- ಆತ್ಮಗಳ ಮುಂದೆ ಸ್ವಲ್ಪ ಹಿಂಜರಿಕೆ, ಸ್ವಲ್ಪ ನಾಚಿಕೆ ಇರುತ್ತದೆ- ಅವರು ನನ್ನನ್ನು ಹೇಗೆ ನೋಡುತ್ತಾರೆ ಎಂದು ನನಗೆ ತಿಳಿದಿಲ್ಲ ಆದರೆ, ಸತ್ಯದ ಹೃದಯ ಮತ್ತು ಭಾವನೆಯಿಂದ ಬಾಪ್ ದಾದ ಅವರ ಅವರ ಮುಂದೆ ತಿಳಿಸಿ. ಹಾಗಲ್ಲ-- ನಾನು ತಪ್ಪು ಮಾಡಿದ್ದೇನೆ ಎಂದು ಬಾಪ್ ದಾದ ಅವರಿಗೆ ಹೇಳಿದೆ, ಆದೇಶವನ್ನು ಚಲಾಯಿಸುವಂತೆ-- ಹೌದು ನಾನು ಈ ತಪ್ಪನ್ನು ಮಾಡಿದ್ದೇನೆ, ಹಾಗೆ ಅಲ್ಲ. ಭಾವನೆಯ ಶಕ್ತಿಯಿಂದ, ಸತ್ಯ ಹೃದಯದಿಂದ, ಬುದ್ಧಿಯಿಂದ ಮಾತ್ರ ಅಲ್ಲ ಆದರೆ ಹೃದಯದಿಂದ --ಬಾಪ್ದಾದ ಅವರ ಮುಂದೆ ಅನುಭವ ಮಾಡುತ್ತೀರೆಂದರೆ, ಮನಸ್ಸು ಖಾಲಿಯಾಗುತ್ತದೆ ಕೆಸರು ಸಮಾಪ್ತಿಯಾಗುತ್ತದೆ. ವಿಷಯವು ದೊಡ್ಡದಲ್ಲ, ಅದು ಚಿಕ್ಕದಾಗಿದೆ. ಆದರೆ ಸಣ್ಣ ಸಣ್ಣ ವಿಷಯಗಳು ಸಹ ತಮ್ಮ ಹೃದಯದಲ್ಲಿ ಸಂಗ್ರಹವಾಗುತ್ತಿದ್ದರೆ, ಹೃದಯವು ಅವುಗಳಿಂದ ತುಂಬಿರುತ್ತದೆ ಅದು ಖಾಲಿಯಾಗಿ ಉಳಿಯುವುದಿಲ್ಲ ಅಲ್ಲವೇ? ಹಾಗಾದರೆ ಹೃದಯ ಖಾಲಿ ಆಗದಿದ್ದರೆ ಹೃದಯ ರಾಮ ಎಲ್ಲಿ ಕುಳಿತುಕೊಳ್ಳುತ್ತಾನೆ? ಕುಳಿತುಕೊಳ್ಳಲು ಸ್ಥಳ ಬೇಕಲ್ಲವೇ! ಹಾಗಾಗಿ ಸತ್ಯ ಹೃದಯದ ಮೇಲೆ ಸಾಹೇಬನು ಸಂತಸ ಪಡುತ್ತಾನೆ ನಾನು ಯಾರಾಗಿದ್ದೇನೆ, ಹೇಗಿದ್ದೇನೆ ಬಾಬಾ ತಮ್ಮವನಾಗಿದ್ದೇನೆ. ನಂಬರ್ ಆಗಿರುತ್ತಾರೆಂದು ಬಾಪ್ದಾದ ಅವರಿಗಂತು ಗೊತ್ತೇ ಇದೆ ಆದ್ದರಿಂದ ಬಾಪ್ದಾದ ಆ ದೃಷ್ಟಿಯಿಂದ ತಮ್ಮನ್ನು ನೋಡುವುದಿಲ್ಲ. ಸತ್ಯ ಹೃದಯ ಮತ್ತು ಎರಡನೆಯದಾಗಿ ಹೇಳಿದ್ದರು- ಸದಾ ಬುದ್ಧಿಯ ಲೈನ್ ಕ್ಲಿಯರಾಗಿರಲಿ. ಲೈನಿನಲ್ಲಿ ಡಿಸ್ಟರ್ಬೆನ್ಸ್ ಇರಬಾರದು. ಕಟ್ ಆಫ್ ಆಗಬಾರದು. ಬಾಪ್ದಾದಾರವರು ಸಮಯ ಪ್ರಮಾಣ ಎಷ್ಟು ಶಕ್ತಿ ಕೊಡಲು ಬಯಸುತ್ತಾರೆ, ಆಶೀರ್ವಾದಗಳನ್ನು ಕೊಡಲು ಬಯಸುತ್ತಾರೆ, ಎಕ್ಸ್ರಾ ಸಹಾಯ ಮಾಡಲು ಬಯಸುತ್ತಾರೆ, ಲೈನಿನಲ್ಲಿ ಡಿಸ್ಟರ್ಬೆನ್ಸ್ ಇದ್ದರೆ ಅದೆಲ್ಲ ಸಿಗುವುದಿಲ್ಲ. ತಮ್ಮ ಬುದ್ಧಿಯ ಲೈನ್ ಕ್ಲೀನ್ ಮತ್ತು ಕ್ಲಿಯರ್ ಇಲ್ಲದಿದ್ದರೆ ಕಟ್ ಆಫ್ ಆಗಿದ್ದರೆ, ಸಿಗಬೇಕಾಗಿರುವ ಎಲ್ಲಾ ಪ್ರಾಪ್ತಿಗಳು ಸಿಗುವುದಿಲ್ಲ. ಅನೇಕ ಮಕ್ಕಳು ಯೋಚಿಸುತ್ತಾರೆ-- ಕೆಲವೊಂದು ಆತ್ಮಗಳಿಗೆ ಬಹಳ ಸಹಕಾರ ಸಿಗುತ್ತದೆ, ಬ್ರಾಹ್ಮಣರ ಸಹಕಾರ ದೊಡ್ಡವರ ಸಹಕಾರ, ಬಾಪ್ದಾದಾ ಅವರದು ಸಿಗುತ್ತದೆ, ನಮಗೆ ಕಡಿಮೆ ಸಿಗುತ್ತದೆ. ಕಾರಣವೇನು ಆಗಿದೆ? ಬಾಬಾ ಅಂತೂ ದಾತನಾಗಿದ್ದಾರೆ, ಸಾಗರ ಆಗಿದ್ದಾರೆ. ಯಾರು ಎಷ್ಟನ್ನು ಪಡೆಯಲು ಬಯಸಿದರು ಕೂಡ ಬಾಪ್ದಾದಾರವರ ಭಂಡಾರದಲ್ಲಿ ಕೀಲಿ ಇಲ್ಲ್ಲ, ಕಾಯುವವರು ಇಲ್ಲ. ಬಾಬಾ ಎಂದು ಹೇಳಿದರೆ, ಹಾಜರಾಗುತ್ತಾರೆ. ಬಾಬಾ ಹೇಳುತ್ತಾರೆ-- ತೆಗೆದುಕೊಳ್ಳಿ. ದಾತ ಆಗಿದ್ದಾರಲ್ಲವೆ. ದಾತನೂ ಆಗಿದ್ದಾರೆ, ಸಾಗರ ಕೂಡ ಆಗಿದ್ದಾರೆ. ಹಾಗಾದರೆ ಏನು ಕಡಿಮೆ ಆಗುತ್ತದೆ? ಇವೆರಡು ಮಾತುಗಳು ಕಡಿಮೆಯಾಗುತ್ತದೆ ಒಂದು ಸತ್ಯ ಹೃದಯ, ಶುದ್ಧ ಹೃದಯ ಆಗಿರಬೇಕು, ತಮ್ಮ ಅತಿ ಬುದ್ಧಿವಂತಿಕೆಯನ್ನು ತೋರಿಸಬೇಡಿ ತುಂಬಾ ಅತಿಬುದ್ದಿವಂತಿಕೆ ಇದೆ. ಬೇರೆ ಬೇರೆ ವಿಧದಲ್ಲಿ ಅತಿಬುದ್ಧಿಯನ್ನು ತೋರಿಸುತ್ತೀರಿ. ಆದ್ದರಿಂದ ಶುದ್ಧ ಹೃದಯ ಸತ್ಯ ಹೃದಯ ಮತ್ತು ಎರಡನೆಯದಾಗಿ ಯಾವಾಗಲೂ ಬುದ್ಧಿಯ ಲೈನ್ ಕ್ಲಿಯರ್ ಇದೆಯೇ ಎಂದು ಚೆಕ್ ಮಾಡುತ್ತಿರಿ, ಮತ್ತು ಕ್ಲೀನ್ ಇದೆಯೇ? ಇತ್ತೀಚಿನ ಸೈನ್ಸ್ ಸಾಧನಗಳಲ್ಲಿಯೂ ನೋಡಿದ್ದೀರಲ್ಲವೇ ಸ್ವಲ್ಪ ಡಿಸ್ಟಬ್ರ್ಸ್ ಇದ್ದರೂ ಕೂಡ ಕ್ಲಿಯರ್ ಆಗಿ ಮಾಡಲು ಬರುವುದಿಲ್ಲ ಆದ್ದರಿಂದ ಬುದ್ಧಿಯ ಲೈನ್ ಅವಶ್ಯವಾಗಿ ಕ್ಲಿಯರ್ ಆಗಿರಲಿ.

ವಿಶೇಷ ಮಾತು - ಇದು ಈ ಸೀಸನ್ನ ಲಾಸ್ಟ್ ಟರ್ನ್ ಆಗಿದೆಯಲ್ಲವೇ ಆದ್ದರಿಂದ ಹೇಳುತ್ತಿದ್ದೇವೆ, ಡಬಲ್ ವಿದೇಶಿಯರಿಗಷ್ಟೇ ಅಲ್ಲ, ಎಲ್ಲರಿಗೂ ಆಗಿದೆ. ಕೊನೆಯ ಟರ್ನ್ನಲ್ಲಿ ತಾವು ಎದುರುಗಡೆ ಕುಳಿತುಕೊಂಡಿದ್ದರಿಂದ ತಮಗೆ ಹೇಳಬೇಕಾಗುತ್ತದೆ ಬಾಪ್ದಾದಾ ನೋಡಿದ್ದಾರೆ, ಒಂದು ಸಂಸ್ಕಾರ ಅಥವಾ ನೇಚರ್ ಆಗಿರಲಿ, ನೇಚರ್ ಪ್ರತಿಯೊಬ್ಬರದು ತಮ್ಮದೇ ಆಗಿರುತ್ತದೆ ಆದರೆ ಸರ್ವರ ಸ್ನೇಹಿತ ಮತ್ತು ಎಲ್ಲ್ಲಾ ಮಾತುಗಳಲ್ಲಿ ಸಂಬಂಧಗಳಲ್ಲಿ ಸಫಲತೆ, ಮನಸ್ಸಿನಲ್ಲಿ ವಿಜಯ ಮತ್ತು ವಾಣಿಯಲ್ಲಿ ಮಧುರತೆ ಈಜಿ ನೇಚರ್ ಇದ್ದವರಿಗೆ ಬರಲು ಸಾಧ್ಯವಾಗುತ್ತದೆ. ಹುಡುಗಾಟಕೆಯ ನೇಚರ್ ಅಲ್ಲ ಅಜಾಗರೂಕತೆ ಬೇರೆ ವಿಷಯವಾಗಿದೆ. ಈಜಿ ನೇಚರ್ ಅಂದರೆ- ಎಂತಹ ಸಮಯ, ಎಂತಹ ವ್ಯಕ್ತಿ, ಎಂತಹ ಪರಿಸ್ಥಿತಿ ಇದೆಯೋ ಅದನ್ನು ಪರೀಕ್ಷಿಸುತ್ತಾ ತಮ್ಮನ್ನು ಈಸಿಯಾಗಿ ಮಾಡಿಕೊಳ್ಳಿ ಈಜಿ ಅಂದರೆ ಹೊಂದಿಕೊಳ್ಳುವುದು. ಬಿಗಿಯಾದ ವ್ಯಕ್ತಿತ್ವ - ಬಹಳ ಬಹಳ ಆಫೀಶಿಯಲ್ ಅಲ್ಲ, ಅಫೀಯಲ್ ಆಗಿ ಇರಬೇಕು ಆದರೆ ಬಹಳ ಬಹಳ ಅಲ್ಲ. ಸಮಯ ಹೀಗಿರುವಾಗ ಆ ಸಮಯದಲ್ಲಿ ಯಾರಾದರೂ ಆಫೀಶಿಯಲ್ ಆದರೆ ಅದು ಗುಣದ ಬದಲು ಅವರ ವಿಶೇಷತೆ ಅಲ್ಲಿ ಕಾಣಿಸುವುದಿಲ್ಲ. ತಮ್ಮನ್ನು ಬದಲಾಯಿಸಿಕೊಂಡು ಚಿಕ್ಕವರ ಜೊತೆ, ದೊಡ್ಡವರ ಜೊತೆ ಹೊಂದಿಕೊಳ್ಳಬೇಕು. ದೊಡ್ಡವರಲ್ಲಿ ದೊಡ್ಡವರಂತೆ, ಚಿಕ್ಕವರ ಜೊತೆ ಚಿಕ್ಕವರಂತೆ ನಡೆಯಬೇಕು. ಜೊತೆಗಾರರೊಂದಿಗೆ ಸ್ನೇಹಿತರಂತೆ ನಡೆಯಬೇಕು ದೊಡ್ಡವರಿಗೆ ರೆಕಾರ್ಡ್ ಕೊಡಬೇಕು ಈಜಿಯಾಗಿ ತಮ್ಮನ್ನು ಮೋಲ್ಡ್ ಮಾಡಿಕೊಳ್ಳಬೇಕು. ಶರೀರವನ್ನು ಈಸಿಯಾಗಿ ಇಟ್ಟುಕೊಂಡರೆ ಬೇಕಾದಲ್ಲಿ ಭಾಗಿಸಬಹುದು ಹಾಗೂ ಬಿಗಿಯಾಗಿದ್ದರೆ ಶರೀರವನ್ನು ಬಾಗಿಸಲು ಆಗುವುದಿಲ್ಲ ಹಾಗಾಗಿ ಹುಡುಕಾಟಕೆಯಲ್ಲ ಈಜಿ ನೇಚರ್ ಇದ್ದರೆ ಎಲ್ಲಿ ಬೇಕೋ ಅಲ್ಲಿ ಈಜಿ ಆಗಿರುತ್ತೀರಿ ಬಾಪ್ದಾದಾ ಹೇಳಿದ್ದಾರಲ್ಲ, ಆದ್ದರಿಂದ ಈಸಿಯಾಗಿದ್ದೇವೆ ಹಾಗಲ್ಲ ಎಂತಹ ಸಮಯವಿದೆಯೋ ಹಾಗೆಯೇ ತಮ್ಮ ಸ್ವರೂಪವನ್ನು ಬದಲಾಯಿಸಿಕೊಳ್ಳಿ ಒಳ್ಳೆಯದು. ಡಬಲ್ ವಿದೇಶಿಯರಿಗೆ ಒಳ್ಳೆಯ ಅವಕಾಶ ಸಿಕ್ಕಿದೆ.

ಎಲ್ಲರಿಗೂ ಡ್ರಿಲ್ ನೆನಪಿದೆಯೇ ಅಥವಾ ಮರೆತು ಹೋಯಿತೋ? ಈಗಲೇ ಎಲ್ಲರೂ ಈ ಡ್ರಿಲ್ ಮಾಡಿ ಒಂದು ಸುತ್ತು ತಿರುಗಿಸಿ ಒಳ್ಳೆಯದು.

ಎಲ್ಲಾ ಕಡೆಯ ಸರ್ವ ಸರ್ವ ಶ್ರೇಷ್ಠ ಆತ್ಮಗಳಿಗೆ, ಎಲ್ಲಾ ಕಡೆಯಿಂದ ನೆನಪು ಪ್ರೀತಿ, ಸಮಾಚಾರವನ್ನು ಕಳುಹಿಸುವವರಿಗೆ ಬಹಳ ಒಳ್ಳೆಯ ವಿವಿಧ ಸಂಬಂಧಗಳಿಂದ ಸ್ನೇಹದ ಪತ್ರ ಮತ್ತು ತಮ್ಮ ಕುಶಲವನ್ನು ಬರೆದಿದ್ದಾರೆ, ಸೇವೆಯ ಸಮಾಚಾರ ಉಲ್ಲಾಸ, ಯೋಜನೆ ಬಹಳ ಚೆನ್ನಾಗಿ ಬರೆದಿದ್ದಾರೆ, ಅದೆಲ್ಲಾ ಬಾಪ್ದಾದಾರವರಿಗೆ ತಲುಪಿಬಿಟ್ಟಿದೆ. ಯಾವ ಪ್ರೀತಿಯಿಂದ, ಪರಿಶ್ರಮದಿಂದ ಬರೆದಿದ್ದಾರೆ. ಹಾಗಾಗಿ ಬರೆದವರೆಲ್ಲರೂ ತಮ್ಮ ತಮ್ಮ ಹೆಸರಿನಿಂದ ಬಾಪ್ದಾದ ಅವರ. ಹೃದಯ ರಾಮನ ಹೃದಯದಿಂದ ನೆನಪು ಪ್ರೀತಿಯನ್ನು ಸ್ವೀಕಾರ ಮಾಡಿರಿ. ಮಕ್ಕಳ ಪ್ರೀತಿ ತಂದೆಯ ಮೇಲೆ ಮತ್ತು ಅದರ ಕೋಟೆಯಷ್ಟು ಪ್ರೀತಿ ತಂದೆಗೆ ಮಕ್ಕಳ ಮೇಲಿದೆ ಮತ್ತು ಸದಾ ಅಮರವಾಗಿರುತ್ತದೆ. ಸ್ನೇಹಭರಿತ ಮಕ್ಕಳು, ತಂದೆಯಿಂದ ದೂರವಾಗಲು ಸಾಧ್ಯವಿಲ್ಲ ಹಾಗೂ ತಂದೆ ಮಕ್ಕಳಿಂದ ದೂರವಾಗುವುದಿಲ್ಲ ಜೊತೆಯಲ್ಲಿದ್ದೇವೆ, ಜೊತೆಯಲ್ಲಿಯೇ ಇರುತ್ತೇವೆ.

ನಾಲ್ಕಾರು ಕಡೆಯ ಸದಾ ಸ್ವಯಂ ಅನ್ನು ತಂದೆಯ ಸಮಾನರನ್ನಾಗಿಸಿಕೊಂಡವರು, ಸದಾ ತಂದೆಯ ದೃಷ್ಟಿಯಲ್ಲಿ ಹೃದಯದಲ್ಲಿ ಮಸ್ತಕದಲ್ಲಿ ಸಮೀಪ ಇರುವವರು, ಸದಾ ಒಬ್ಬ ತಂದೆಯ ಸಂಸಾರದಲ್ಲಿ ಇರುವಂತಹವರು, ಸದಾ ಪ್ರತಿಯೊಂದು ಹೆಜ್ಜೆಯಲ್ಲಿಯೂ ಬಾಪ್ದಾದ ಅವರನ್ನು ಫಾಲೋ ಮಾಡುವಂತಹವರು, ಸದಾ ವಿಜಯಿಯಾಗಿದ್ದವರು,ವಿಜಯಿಯಾಗಿರುವವರು ಮತ್ತು ಮುಂದೆಯೂ ವಿಜಯವನ್ನೇ ಪಡೆಯುವವರು- ಇಂತಹ ನಿಶ್ಚಯ ಮತ್ತು ನಶೆಯಲ್ಲಿ ಇರುವಂತಹವರು, ಇಂತಹ ಅತಿ ಶ್ರೇಷ್ಠ ಅಗಲಿ ಹೋಗಿ ಮರಳಿ ಸಿಕ್ಕಂತವರು, ಅತಿ ಪ್ರೀತಿಯ, ಎಲ್ಲ್ಲಾ ಮಕ್ಕಳಿಗೆ ಬಾಪ್ದಾದ ಅವರ ನೆನಪು ಪ್ರೀತಿ ಮತ್ತು ನಮಸ್ತೆ.

ವರದಾನ:
ಪ್ರತಿ ಸೆಕೆಂಡ್ ಹಾಗೂ ಪ್ರತಿಸಂಕಲ್ಪದ ಮಹತ್ವಿಕೆಯನ್ನು ತಿಳಿದು ಜಮಾದ ಖಾತೆಯನ್ನು ಸಂಪನ್ನ ಮಾಡಿಕೊಳ್ಳುವವರೇ ಸಮರ್ಥ ಆತ್ಮ ಭವ

ಸಂಗಮಯುಗದಲ್ಲಿ ಅವಿನಾಶಿ ತಂದೆಯ ಮೂಲಕ ಎಲ್ಲಾ ಸಮಯದಲ್ಲಿಯೂ ಅವಿನಾಶಿ ಪ್ರಾಪ್ತಿಗಳಾಗುವುದು. ಇಡೀ ಕಲ್ಪದಲ್ಲಿ ಇಂತಹ ಭಾಗ್ಯ ಪ್ರಾಪ್ತಿ ಮಾಡಿಕೊಳ್ಳಲು ಇದೊಂದೇ ಸಮಯವಾಗಿದೆ- ಆದ್ದರಿಂದ ನಿಮ್ಮ ಸ್ಲೋಗನ್ ಆಗಿದೆ “ಈಗಿಲ್ಲದಿದ್ದರೆ ಇನ್ನೆಂದಿಗೂ ಇಲ್ಲ”. ಯಾವುದೇ ಶ್ರೇಷ್ಠ ಕಾರ್ಯ ಮಾಡಬೇಕಾದರೂ ಅದನ್ನು ಈಗಲೇ ಮಾಡಿ. ಈ ಸ್ಮೃತಿಯಿಂದ ಎಂದೂ ಸಹಾ ಸಮಯ ಸಂಕಲ್ಪ ಅಥವಾ ಕರ್ಮ ವ್ಯರ್ಥವಾಗಿ ಕಳೆಯುವುದಿಲ್ಲ, ಸಮರ್ಥ ಸಂಕಲ್ಪಗಳಿಂದ ಜಮಾದ ಖಾತೆ ಸಂಪನ್ನ ವಾಗಿಬಿಡುವುದು ಮತ್ತು ಆತ್ಮ ಸಮರ್ಥವಾಗಿ ಬಿಡುವುದು.

ಸ್ಲೋಗನ್:
ಪ್ರತಿ ಮಾತು, ಪ್ರತಿ ಕರ್ಮದ ಅಲೌಕಿಕತೆಯೇ ಪವಿತ್ರತೆಯಾಗಿದೆ, ಸಾಧಾರಣತೆಯನ್ನು ಅಲೌಕಿಕತೆಯಲ್ಲಿ ಪರಿವರ್ತನೆ ಮಾಡಿಬಿಡಿ.