30.07.24 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ-
ದುಃಖಹರ್ತ-ಸುಖಕರ್ತ ಒಬ್ಬ ತಂದೆಯಾಗಿದ್ದಾರೆ, ಅವರೇ ನಿಮ್ಮೆಲ್ಲರ ದುಃಖವನ್ನು ದೂರ ಮಾಡುತ್ತಾರೆ,
ಮನುಷ್ಯರು ಯಾರದೇ ದುಃಖವನ್ನು ದೂರ ಮಾಡಲು ಸಾಧ್ಯವಿಲ್ಲ”
ಪ್ರಶ್ನೆ:
ವಿಶ್ವದಲ್ಲಿ
ಅಶಾಂತಿಗೆ ಕಾರಣವೇನಾಗಿದೆ? ಶಾಂತಿಯ ಸ್ಥಾಪನೆಯು ಹೇಗಾಗುತ್ತದೆ?
ಉತ್ತರ:
ವಿಶ್ವದಲ್ಲಿ
ಅಶಾಂತಿಗೆ ಕಾರಣವಾಗಿದೆ- ಅನೇಕಾನೇಕ ಧರ್ಮಗಳು. ಕಲಿಯುಗದ ಅಂತಿಮದಲ್ಲಿ ಯಾವಾಗ ಅನೇಕತೆಯಿರುತ್ತದೆ
ಆಗ ಅಶಾಂತಿಯಿರುತ್ತದೆ. ತಂದೆಯು ಬಂದು ಒಂದು ಸತ್ಯಧರ್ಮವನ್ನು ಸ್ಥಾಪನೆ ಮಾಡುತ್ತಾರೆ. ಅಲ್ಲಿ
ಶಾಂತಿಯಾಗಿಬಿಡುತ್ತದೆ. ಈ ಲಕ್ಷ್ಮೀ-ನಾರಾಯಣರ ರಾಜ್ಯದಲ್ಲಿ ಶಾಂತಿಯಿತ್ತೆಂದು ನೀವು ತಿಳಿಯಲು
ಸಾಧ್ಯ. ಪವಿತ್ರಧರ್ಮ, ಪವಿತ್ರ ಕರ್ಮವಿತ್ತು, ಕಲ್ಯಾಣಕಾರಿ ತಂದೆಯು ಬಂದು ಪುನಃ ಈ
ಹೊಸಪ್ರಪಂಚವನ್ನು ಮಾಡುತ್ತಿದ್ದಾರೆ. ಅದರಲ್ಲಿ ಅಶಾಂತಿಯ ಹೆಸರೇ ಇರುವುದಿಲ್ಲ.
ಓಂ ಶಾಂತಿ.
ಆತ್ಮಿಕ ತಂದೆಯು ಕುಳಿತು ಆತ್ಮಿಕ ಮಕ್ಕಳಿಗೆ ತಿಳಿಸಿಕೊಡುತ್ತಾರೆ, ಆತ್ಮಿಕ ತಂದೆಗೇ
ಜ್ಞಾನಸಾಗರನೆಂದು ಹೇಳಲಾಗುತ್ತದೆ. ಇದಂತೂ ಮಕ್ಕಳಿಗೆ ತಿಳಿಸಿದ್ದಾರೆ- ಮುಂಬೈನಲ್ಲಿಯೂ ಬಹಳ
ಸಮಾಜಸೇವಕರಿದ್ದಾರೆ. ಅವರ ಸಭೆ ಸೇರುತ್ತಿರುತ್ತದೆ. ಮುಂಬೈಯಲ್ಲಿ ವಿಶೇಷವಾಗಿ ಎಲ್ಲಿ ಸಭೆ ಸೇರುವರೋ
ಅದರ ಹೆಸರಾಗಿದೆ- ಭಾರತೀಯ ವಿದ್ಯಾಭವನ. ಈಗ ವಿದ್ಯೆಯು 2 ಪ್ರಕಾರದ್ದಾಗಿರುತ್ತದೆ. ಒಂದನೆಯದು-
ದೈಹಿಕ ವಿದ್ಯೆಯಾಗಿದೆ, ಅದನ್ನು ಶಾಲಾಕಾಲೇಜುಗಳಲ್ಲಿ ಕಲಿಸಲಾಗುತ್ತದೆ.ಈಗ ಅದಕ್ಕೆ
ವಿಧ್ಯಾಭವನವೆಂದು ಹೇಳುತ್ತಾರೆ, ಅವಶ್ಯವಾಗಿ ಅಲ್ಲಿ ಯಾವುದೋ ಎರಡನೇ ವಸ್ತುವೂ ಇರಬೇಕು ಈಗ
ವಿಧ್ಯೆಎಂದು ಯಾವುದಕ್ಕೆ ಹೇಳಲಾಗುತ್ತದೆ ಎಂಬುದು ಮನುಷ್ಯರಿಗೆ ತಿಳಿದೇ ಇಲ್ಲ.ಇದಂತೂ ಆತ್ಮಿಕ
ವಿದ್ಯಾಭವನೆವೆಂದಿರಬೇಕು. ವಿದ್ಯೆಯೆಂದು ಜ್ಞಾನಕ್ಕೆ ಹೇಳಲಾಗುತ್ತದೆ. ಪರಮಪಿತ ಪರಮಾತ್ಮನೇ
ಜ್ಞಾನಸಾಗರನಾಗಿದ್ದಾರೆ. ಕೃಷ್ಣನಿಗೆ ಜ್ಞಾನಸಾಗರನೆಂದು ಹೇಳಲಾಗುವುದಿಲ್ಲ. ಶಿವತಂದೆಯ ಮಹಿಮೆಯೇ
ಬೇರೆ, ಕೃಷ್ಣನ ಮಹಿಮೆಯೇ ಬೇರೆಯಾಗಿದೆ. ಇದರಲ್ಲಿ ಭಾರತವಾಸಿಗಳು ತಬ್ಬಿಬ್ಬಾಗಿದ್ದಾರೆ. ಗೀತೆಯ
ಭಗವಂತನು ಕೃಷ್ಣನೆಂದು ತಿಳಿದು ಕುಳಿತಿದ್ದಾರೆ ಆದ್ದರಿಂದ ವಿದ್ಯಾಭವನ ಮೊದಲಾದವುಗಳನ್ನು
ತೆರೆಯುತ್ತಿರುತ್ತಾರೆ, ಏನನ್ನೂ ತಿಳಿದುಕೊಂಡಿಲ್ಲ. ವಿದ್ಯೆಯು ಗೀತಾಜ್ಞಾನವಾಗಿದೆ. ಆ ಜ್ಞಾನವು
ಒಬ್ಬ ತಂದೆಯಲ್ಲಿಯೇ ಇದೆ, ಅವರಿಗೆ ಜ್ಞಾನಸಾಗರನೆಂದು ಹೇಳಲಾಗುತ್ತದೆ, ಯಾರನ್ನು ಮನುಷ್ಯಾತ್ಮರು
ತಿಳಿದುಕೊಂಡಿಲ್ಲ, ಭಾರತವಾಸಿಗಳ ಧರ್ಮಶಾಸ್ತ್ರವು ವಾಸ್ತವದಲ್ಲಿ ಒಂದೇ ಆಗಿದೆ- ಸರ್ವಶಾಸ್ತ್ರಮಯಿ
ಶಿರೋಮಣಿ ಭಗವದ್ಗೀತಾ. ಈಗ ಭಗವಂತನೆಂದು ಯಾರಿಗೆ ಹೇಳಲಾಗುವುದು? ಅದನ್ನೂ ಸಹ ಈ ಸಮಯದಲ್ಲಿ
ಭಾರತವಾಸಿಗಳು ತಿಳಿದುಕೊಂಡಿಲ್ಲ. ಕೃಷ್ಣನಿಗೆ ಹೇಳಿಬಿಡುತ್ತಾರೆ, ಇಲ್ಲವೆ ರಾಮನಿಗೆ ಇಲ್ಲವೆಂದರೆ
ತಮ್ಮನ್ನೇ ಪರಮಾತ್ಮನೆಂದು ಹೇಳಿಬಿಡುತ್ತಾರೆ. ಈಗಂತೂ ಸಮಯವೂ ತಮೋಪ್ರಧಾನವಾಗಿದೆ,
ರಾವಣರಾಜ್ಯವಲ್ಲವೆ.
ನೀವು ಮಕ್ಕಳು ಅನ್ಯರಿಗೆ ತಿಳಿಸುವಾಗ ಹೇಳಿ, ಶಿವಭಗವಾನುವಾಚ. ಮೊದಲು ಇದನ್ನು ತಿಳಿದುಕೊಳ್ಳಿ-
ಜ್ಞಾನಸಾಗರ ಒಬ್ಬರೇ ಪರಮಪಿತ ಪರಮಾತ್ಮನಾಗಿದ್ದಾರೆ, ಅವರ ಹೆಸರು ಶಿವ ಎಂದಾಗಿದೆ. ಶಿವರಾತ್ರಿಯನ್ನೂ
ಆಚರಿಸುತ್ತಾರೆ ಆದರೆ ಇದು ಯಾರಿಗೂ ಅರ್ಥವಾಗುವುದಿಲ್ಲ. ಅವಶ್ಯವಾಗಿ ಶಿವನು ಬಂದಿದ್ದಾರೆ
ಆದ್ದರಿಂದಲೇ ರಾತ್ರಿಯನ್ನಾಚರಿಸುತ್ತಾರೆ. ಶಿವ ಯಾರು ಎಂಬುದನ್ನು ತಿಳಿದುಕೊಂಡಿಲ್ಲ. ತಂದೆಯು
ತಿಳಿಸುತ್ತಾರೆ- ಭಗವಂತನಂತೂ ಎಲ್ಲರಿಗೂ ಒಬ್ಬರೇ ಆಗಿದ್ದಾರೆ. ಸರ್ವ ಆತ್ಮರು ಸಹೋದರರಾಗಿದ್ದಾರೆ
ಆತ್ಮಗಳ ತಂದೆ ಒಬ್ಬರೇ ಪರಮಪಿತ ಪರಮಾತ್ಮನಾಗಿದ್ದಾರೆ, ಅವರಿಗೇ ಜ್ಞಾನಸಾಗರನೆಂದು ಹೇಳುತ್ತೇವೆ,
ದೇವತೆಗಳಲ್ಲಿ ಈ ಜ್ಞಾನವಿರುವುದಿಲ್ಲ, ಯಾವ ಜ್ಞಾನ? ರಚಯಿತ ಮತ್ತು ರಚನೆಯ ಆದಿ-ಮಧ್ಯ-ಅಂತ್ಯದ
ಜ್ಞಾನವು ಯಾವುದೇ ಮನುಷ್ಯಾತ್ಮರಲ್ಲಿಲ್ಲ. ಪ್ರಾಚೀನ ಋಷಿ-ಮುನಿಗಳೂ ಸಹ ತಿಳಿದುಕೊಂಡಿರಲಿಲ್ಲವೆಂದು
ಹೇಳುತ್ತಾರೆ. ಪ್ರಾಚೀನವೆಂಬುದರ ಅರ್ಥವೂ ಗೊತ್ತಿಲ್ಲ. ಸತ್ಯಯುಗ-ತ್ರೇತಾಯುಗವು ಪ್ರಾಚೀನವಾಯಿತು.
ಸತ್ಯಯುಗವು ಹೊಸ ಪ್ರಪಂಚವಾಗಿದೆ. ಅಲ್ಲಂತೂ ಋಷಿ-ಮುನಿಗಳಿರುವುದೇ ಇಲ್ಲ. ಈ ಋಷಿ-ಮುನಿಗಳೆಲ್ಲರೂ
ನಂತರದಲ್ಲಿ ಬಂದಿದ್ದಾರೆ. ಅವರೂ ಸಹ ಈ ಜ್ಞಾನವನ್ನು ತಿಳಿದುಕೊಂಡಿಲ್ಲ. ನಮಗೂ ಗೊತ್ತಿಲ್ಲ,
ಗೊತ್ತಿಲ್ಲವೆಂದು ಹೇಳಿಬಿಡುತ್ತಾರೆ. ಅವರೇ ತಿಳಿದುಕೊಂಡಿಲ್ಲ ಅಂದಮೇಲೆ ಭಾರತವಾಸಿಗಳು ಯಾರು ಈಗ
ತಮೋಗುಣಿಯಾಗಿಬಿಟ್ಟಿದ್ದಾರೆ ಅವರು ಹೇಗೆ ತಿಳಿದುಕೊಳ್ಳುತ್ತಾರೆ!
ಈ ಸಮಯದಲ್ಲಿ ವಿಜ್ಞಾನದ ಅಭಿಮಾನವು ಎಷ್ಟೊಂದಿದೆ. ಈ ವಿಜ್ಞಾನದ ಮೂಲಕ ಭಾರತವು
ಸ್ವರ್ಗವಾಗಿಬಿಟ್ಟಿದೆಯೆಂದು ತಿಳಿದುಕೊಳ್ಳುತ್ತಾರೆ. ಇದಕ್ಕೆ ಮಾಯೆಯ ಆಡಂಭರವೆಂದು ಹೇಳಲಾಗುತ್ತದೆ.
ಫಾಲ್ ಆಫ್ ಪಾಂಪ್ ಎಂಬ ಒಂದು ನಾಟಕವೂ ಇದೆ. ಈ ಸಮಯದಲ್ಲಿ ಭಾರತದ ಪತನವಾಗಿದೆಯೆಂದೂ ಹೇಳುತ್ತಾರೆ.
ಸತ್ಯಯುಗದಲ್ಲಿ ಉತ್ಥಾನವಾಗಿತ್ತು ಈಗ ಪತನವಾಗಿದೆ. ಇದೇನು ಸ್ವರ್ಗವೇ? ಇದಂತೂ ಮಾಯೆಯ ಶೋ ಆಗಿದೆ.
ಇದು ಸಮಾಪ್ತಿಯಾಗಲೇಬೇಕಾಗಿದೆ, ವಿಮಾನಗಳಿವೆ, ದೊಡ್ಡ-ದೊಡ್ಡ ಮಹಲು, ವಿದ್ಯುತ್ ಎಲ್ಲವೂ ಇದೆ.
ಅಂದಮೇಲೆ ಇದೇ ಸ್ವರ್ಗವಾಗಿದೆಯೆಂದು ಮನುಷ್ಯರು ತಿಳಿಯುತ್ತಾರೆ. ಯಾರಾದರೂ ಶರೀರಬಿಟ್ಟರೆ
ಸ್ವರ್ಗವಾಸಿಗಳಾದರೆಂದು ಹೇಳುತ್ತಾರೆ. ಆದರೆ ಇದರಿಂದಲೂ ಸಹ ತಿಳಿದುಕೊಳ್ಳುವುದಿಲ್ಲ- ಸ್ವರ್ಗಕ್ಕೆ
ಹೋದರೆಂದರೆ ಅವಶ್ಯವಾಗಿ ಸ್ವರ್ಗವು ಯಾವುದೋ ಬೇರೆ ಇದೆಯಲ್ಲವೆ. ಇದಂತೂ ರಾವಣನ ಆಡಂಬರವಾಗಿದೆ,
ಬೇಹದ್ದಿನ ತಂದೆಯು ಸ್ವರ್ಗಸ್ಥಾಪನೆ ಮಾಡುತ್ತಿದ್ದಾರೆ. ಈ ಸಮಯದಲ್ಲಿ ಮಾಯೆ ಮತ್ತು ಈಶ್ವರನ, ಆಸುರೀ
ಪ್ರಪಂಚ ಮತ್ತು ಈಶ್ವರೀಯ ಪ್ರಪಂಚದ ಪೈಪೆÇೀಟಿಯಾಗಿದೆ. ಇದನ್ನೂ ಸಹ ಭಾರತವಾಸಿಗಳಿಗೆ ತಿಳಿಸಬೇಕು.
ಇನ್ನೂ ಬಹಳ ದುಃಖವು ಬರುವುದಿದೆ. ಅಪಾರ ದುಃಖವು ಬರುತ್ತದೆ. ಸ್ವರ್ಗವಂತೂ ಸತ್ಯಯುಗದಲ್ಲಿರುತ್ತದೆ,
ಕಲಿಯುಗದಲ್ಲಿರಲು ಸಾಧ್ಯವಿಲ್ಲ. ಪುರುಷೋತ್ತಮ ಸಂಗಮಯುಗವೆಂದು ಯಾವುದಕ್ಕೆ ಹೇಳುತ್ತಾರೆಂಬುದು
ಯಾರಿಗೂ ಗೊತ್ತಿಲ್ಲ, ಇದನ್ನೂ ಸಹ ತಂದೆಯು ತಿಳಿಸುತ್ತಾರೆ. ಜ್ಞಾನವು ದಿನ, ಭಕ್ತಿಯು
ರಾತ್ರಿಯಾಗಿದೆ. ಅಂಧಕಾರದಲ್ಲಿ ಮೋಸ ಹೋಗುತ್ತಿರುತ್ತಾರೆ. ಭಗವಂತನೊಂದಿಗೆ ಮಿಲನ ಮಾಡಲು ಎಷ್ಟೊಂದು
ವೇದಶಾಸ್ತ್ರಗಳನ್ನು ಓದುತ್ತಾರೆ. ಬ್ರಹ್ಮಾನ ದಿನ ಮತ್ತು ರಾತ್ರಿ ಸೊ ಬ್ರಾಹ್ಮಣರ ದಿನ ಮತ್ತು
ರಾತ್ರಿಯಾಗಿದೆ. ಸತ್ಯವಾದ ಮುಖವಂಶಾವಳಿ ಬ್ರಾಹ್ಮಣರು ನೀವಾಗಿದ್ದೀರಿ. ಅವರಂತೂ ಕಲಿಯುಗೀ
ಕುಖವಂಶಾವಳಿ ಬ್ರಾಹ್ಮಣರಾಗಿದ್ದಾರೆ. ನೀವಂತೂ ಪುರುಷೋತ್ತಮ ಸಂಗಮಯುಗದ ಬ್ರಾಹ್ಮಣರಾಗಿದ್ದೀರಿ. ಈ
ಮಾತುಗಳು ಬೇರೆ ಯಾರಿಗೂ ಗೊತ್ತಿಲ್ಲ. ಯಾವಾಗ ಈ ಮಾತುಗಳನ್ನು ತಿಳಿದುಕೊಳ್ಳುತ್ತಾರೆಯೋ ಆಗ ನಾವು
ಇದೇನು ಮಾಡುತ್ತಿದ್ದೇವೆಂಬ ಈ ಮಾತುಗಳು ಬುದ್ಧಿಯಲ್ಲಿ ಬರುತ್ತವೆ. ಭಾರತವು ಸತೋಪ್ರಧಾನವಾಗಿತ್ತು
ಅದನ್ನೇ ಸ್ವರ್ಗವೆಂದು ಹೇಳುತ್ತಾರೆ ಅಂದಮೇಲೆ ಅವಶ್ಯವಾಗಿ ಇದು ನರಕವಾಗಿದೆ. ಆದ್ದರಿಂದಲೇ
ನರಕದಿಂದ ಸ್ವರ್ಗದಲ್ಲಿ ಹೋಗುತ್ತೇವೆ. ಅಲ್ಲಿ ಶಾಂತಿಯೂ ಇದೆ, ಸುಖವೂ ಇದೆ, ಲಕ್ಷ್ಮೀ-ನಾರಾಯಣರ
ರಾಜ್ಯವಲ್ಲವೆ. ನೀವು ತಿಳಿಸಬಹುದು- ಮನುಷ್ಯರ ವೃದ್ಧಿಯು ಹೇಗೆ ಕಡಿಮೆಯಾಗುತ್ತದೆ? ಅಶಾಂತಿ ಹೇಗೆ
ಕಡಿಮೆಯಾಗುತ್ತದೆ? ಅಶಾಂತಿಯಿರುವುದೇ ಹಳೆಯ ಪ್ರಪಂಚ ಕಲಿಯುಗದಲ್ಲಿ, ಹೊಸ ಪ್ರಪಂಚದಲ್ಲಿಯೇ
ಶಾಂತಿಯಿರುತ್ತದೆ. ಸ್ವರ್ಗದಲ್ಲಿ ಶಾಂತಿಯಿರುತ್ತದೆಯಲ್ಲವೆ. ಅದಕ್ಕೆ ಆದಿಸನಾತನ
ದೇವಿ-ದೇವತಾಧರ್ಮವೆಂದು ಹೇಳಲಾಗುತ್ತದೆ. ಹಿಂದೂಧರ್ಮವು ಈಗಿನದಾಗಿದೆ. ಇದಕ್ಕೆ ಆದಿಸನಾತನ
ಧರ್ಮವೆಂದು ಹೇಳುವುದಿಲ್ಲ. ಹಿಂದೂಸ್ಥಾನದ ಹೆಸರಿನ ಮೇಲೆ ಹಿಂದೂಗಳೆಂದು ಹೇಳಿಬಿಡುತ್ತಾರೆ.
ಆದಿಸನಾತನ ದೇವಿ-ದೇವತಾ ಧರ್ಮವಿತ್ತು. ಅಲ್ಲಿ ಸಂಪೂರ್ಣ ಸುಖ, ಶಾಂತಿ, ಪವಿತ್ರತೆ, ಆರೋಗ್ಯ-ಭಾಗ್ಯ
ಎಲ್ಲವೂ ಇತ್ತು. ನಾವು ಪತಿತರಾಗಿದ್ದೇವೆ. ಹೇ ಪತಿತ-ಪಾವನ ಬನ್ನಿ ಎಂದು ಈಗ ಕರೆಯುತ್ತಾರೆ. ಈಗ
ಪ್ರಶ್ನೆಯಾಗಿದೆ- ಪತಿತ-ಪಾವನ ಯಾರು? ಕೃಷ್ಣನಿಗಂತೂ ಹೇಳುವುದಿಲ್ಲ. ಪತಿತ-ಪಾವನ ಪರಮಪಿತ
ಪರಮಾತ್ಮನೇ ಜ್ಞಾನಸಾಗರನಾಗಿದ್ದಾರೆ. ಅವರೇ ಬಂದು ಓದಿಸುತ್ತಾರೆ. ಜ್ಞಾನಕ್ಕೆ ವಿದ್ಯೆಯೆಂದು
ಹೇಳಲಾಗುತ್ತದೆ. ಎಲ್ಲವೂ ಗೀತೆಯ ಮೇಲೆ ಆಧಾರಿತವಾಗಿರುತ್ತದೆ. ನೀವು ಪ್ರದರ್ಶನಿ, ಮ್ಯೂಸಿಯಂ
ಮುಂತಾದವನ್ನು ನಿರ್ಮಿಸುತ್ತೀರಿ ಆದರೆ ಇಲ್ಲಿಯವರೆಗೂ ಬಿ.ಕೆ. ಎಂಬುದರ ಅರ್ಥವನ್ನು
ತಿಳಿದುಕೊಂಡಿಲ್ಲ. ಇವರದು ಯಾವುದೋ ಹೊಸ ಧರ್ಮವೆಂದು ತಿಳಿಯುತ್ತಾರೆ. ಕೇಳುತ್ತಾರೆ, ಆದರೆ ಏನೂ
ತಿಳಿದುಕೊಳ್ಳುವುದಿಲ್ಲ ತಂದೆಯು ಸಂಪೂರ್ಣ ತಮೋಪ್ರದಾನ ಬುದ್ಧಿಯೆಂದು ಹೇಳಿದ್ದಾರೆ. ಈ ಸಮಯದಲ್ಲಿ
ವಿಜ್ಞಾನದ ಅಭಿಮಾನಿಗಳೂ ಸಹ ಅನೇಕರಾಗಿಬಿಟ್ಟಿದ್ದಾರೆ. ವಿಜ್ಞಾನದಿಂದಲೇ ತಮ್ಮ ವಿನಾಶ
ಮಾಡಿಕೊಳ್ಳುತ್ತಾರೆ ಅಂದಮೇಲೆ ಕಲ್ಲುಬುದ್ಧಿಯವರೆಂದು ಹೇಳಬಹುದಲ್ಲವೆ. ಅವರಿಗೆ
ಪಾರಸಬುದ್ಧಿಯವರೆಂದು ಹೇಳುತ್ತಾರೆಯೆ? ಬಾಂಬು ಇತ್ಯಾದಿಯನ್ನು ತಮ್ಮ ವಿನಾಶಕ್ಕಾಗಿ ತಯಾರಿಸುತ್ತಾರೆ.
ಶಂಕರನೇನೂ ವಿನಾಶ ಮಾಡುವುದಿಲ್ಲ. ಇವರೇ ತಮ್ಮ ವಿನಾಶಕ್ಕಾಗಿ ಎಲ್ಲವನ್ನೂ ತಯಾರಿಸಿದ್ದಾರೆ ಆದರೆ
ತಮೋಪ್ರಧಾನ ಕಲ್ಲುಬುದ್ಧಿಯವರು ತಿಳಿದುಕೊಳ್ಳುವುದಿಲ್ಲ. ಏನೆಲ್ಲವೂ ಮಾಡುತ್ತಾರೆಯೋ ಈ ಹಳೆಯ
ಸೃಷ್ಟಿಯ ವಿನಾಶಕ್ಕಾಗಿಯೇ. ವಿನಾಶವಾದ ನಂತರವೇ ಜಯಜಯಕಾರವಾಗುವುದು. ಸ್ತ್ರೀಯರ ದುಃಖವನ್ನು ಹೇಗೆ
ದೂರ ಮಾಡುವುದು ಎಂದು ಅವರು ತಿಳಿಯುತ್ತಾರೆ ಆದರೆ ಮನುಷ್ಯರು ಯಾರ ದುಃಖವನ್ನಾದರೂ ದೂರ ಮಾಡಲು
ಸಾಧ್ಯವೇ? ದುಃಖಹರ್ತ-ಸುಖಕರ್ತ ಒಬ್ಬರೇ ತಂದೆಯಾಗಿದ್ದಾರೆ. ದೇವತೆಗಳಿಗೂ ಸಹ ಹೇಳುವುದಿಲ್ಲ.
ಕೃಷ್ಣನು ದೇವತೆಯಾಗಿಬಿಟ್ಟನು, ಭಗವಂತನೆಂದು ಹೇಳಲಾಗುವುದಿಲ್ಲ ಎಂಬುದನ್ನು ಮನುಷ್ಯರು
ತಿಳಿದುಕೊಳ್ಳುವುದಿಲ್ಲ. ಯಾರು ತಿಳಿದುಕೊಳ್ಳುವರೋ ಅವರು ಬ್ರಾಹ್ಮಣರಾಗಿ ಅನ್ಯರಿಗೂ
ತಿಳಿಸುತ್ತಿರುತ್ತಾರೆ. ಯಾರು ರಾಜ್ಯಪದವಿಯ ಅಥವಾ ಆದಿಸನಾತನ ದೇವತಾಧರ್ಮದವರಿರುವರೋ ಅವರು
ಬರುತ್ತಾರೆ. ಲಕ್ಷ್ಮೀ-ನಾರಾಯಣರೇ ಸ್ವರ್ಗದ ಮಾಲೀಕರು ಹೇಗಾದರು, ಅವರು ಎಂತಹ ಕರ್ಮ ಮಾಡಿದಕಾರಣ
ವಿಶ್ವದ ಮಾಲೀಕರಾದರು. ಈ ಸಮಯದಲ್ಲಿ ಕಲಿಯುಗದ ಅಂತಿಮದಲ್ಲಂತೂ ಅನೇಕಾನೇಕ ಧರ್ಮಗಳಿವೆ ಆದ್ದರಿಂದ
ಅಶಾಂತಿಯಿದೆ. ಹೊಸ ಪ್ರಪಂಚದಲ್ಲಿ ಈ ರೀತಿ ಇರುತ್ತದೆಯೇ? ಇದು ಸಂಗಮಯುಗವಾಗಿದೆ, ಈಗ ತಂದೆಯು ಬಂದು
ರಾಜಯೋಗವನ್ನು ಕಲಿಸುತ್ತಾರೆ. ತಂದೆಯೇ ಕರ್ಮ-ಅಕರ್ಮ-ವಿಕರ್ಮದ ಜ್ಞಾನವನ್ನು ತಿಳಿಸುತ್ತಾರೆ.
ಆತ್ಮವು ಶರೀರವನ್ನು ತೆಗೆದುಕೊಂಡು ಪಾತ್ರವನ್ನಭಿನಯಿಸಲು ಬರುತ್ತದೆ. ಸತ್ಯಯುಗದಲ್ಲಿ ಯಾವುದೇ
ಕರ್ಮ ಮಾಡಿದರೆ ಅದು ಅಕರ್ಮವಾಗುತ್ತದೆ. ಅಲ್ಲಿ ವಿಕರ್ಮವಾಗುವುದಿಲ್ಲ, ದುಃಖವಾಗುವುದೇ ಇಲ್ಲ.
ಕರ್ಮ-ಅಕರ್ಮ-ವಿಕರ್ಮದ ರಹಸ್ಯವನ್ನು ತಂದೆಯೇ ಬಂದು ಅಂತಿಮದಲ್ಲಿ ತಿಳಿಸುತ್ತಾರೆ- ನಾನು ಇವರ ಬಹಳ
ಜನ್ಮಗಳ ಅಂತಿಮ ಜನ್ಮದಲ್ಲಿಯೂ ಅಂತಿಮದಲ್ಲಿ ಬರುತ್ತೇನೆ, ಈ ರಥದಲ್ಲಿ ಪ್ರವೇಶ ಮಾಡುತ್ತೇನೆ- ಇದು
ಅಕಾಲಮೂರ್ತಿ ಆತ್ಮನ ರಥವಾಗಿದೆ. ಕೇವಲ ಒಂದು ಅಮೃತಸರದಲ್ಲಿಯೇ ಇಲ್ಲ, ಎಲ್ಲಾ ಮನುಷ್ಯರ ಅಕಾಲ
ಸಿಂಹಾಸನವಾಗಿದೆ, ಆತ್ಮವು ಅಕಾಲಮೂರ್ತಿಯಾಗಿದೆ. ಅದಕ್ಕೆ ಈ ಶರೀರ ಮಾತನಾಡುತ್ತದೆ, ನಡೆಯುತ್ತದೆ.
ಅಕಾಲ ಆತ್ಮನಿಗೆ ಇದು ಚೈತನ್ಯ ಸಂಹಾಸನವಾಗಿದೆ. ಅಕಾಲ ಮೂರ್ತಿಯಂತೂ ಎಲ್ಲರೂ ಆಗಿದ್ದಾರೆ ಬಾಕಿ
ಶರೀರವನ್ನು ಕಾಲವು ಕಬಳಿಸುತ್ತದೆ. ಆತ್ಮವು ಅಕಾಲವಾಗಿದೆ. ಸಿಂಹಾಸವನ್ನು ಸಮಾಪ್ತಿ ಮಾಡುತ್ತಾರೆ.
ಸತ್ಯಯುಗದಲ್ಲಿ ಈ ಸಿಂಹಾಸನಗಳು ಕೆಲವೇ ಇರುತ್ತವೆ. ಈ ಸಮಯದಲ್ಲಿ ಕೋಟ್ಯಾಂತರ ಆತ್ಮಗಳ ಸಿಂಹಾಸನ (ಶರೀರ)
ಗಳಿವೆ. ಅಕಾಲವೆಂದು ಆತ್ಮಕ್ಕೇ ಹೇಳಲಾಗುತ್ತದೆ. ಆತ್ಮವೇ ತಮೋಪ್ರಧಾನದಿಂದ ಸತೋಪ್ರಧಾನವಾಗುತ್ತದೆ.
ನಾನಂತೂ ಸದಾ ಸತೋಪ್ರಧಾನ, ಪವಿತ್ರವಾಗಿದ್ದೇನೆ. ಭಲೆ ಪ್ರಾಚೀನ ಭಾರತದ ಯೋಗವೆಂದು ಹೇಳುತ್ತಾರೆ
ಆದರೆ ಅದನ್ನು ಕೃಷ್ಣನು ಕಲಿಸಿದನೆಂದು ತಿಳಿಯುತ್ತಾರೆ. ಗೀತೆಯನ್ನೇ ಖಂಡನೆ ಮಾಡಿಬಿಟ್ಟಿದ್ದಾರೆ.
ಜೀವನಕಥೆಯಲ್ಲಿ ಹೆಸರನ್ನು ಬದಲಾಯಿಸಿಬಿಟ್ಟಿದ್ದಾರೆ. ತಂದೆಯ ಬದಲು ಮಗನ ಹೆಸರನ್ನು
ಹಾಕಿಬಿಟ್ಟಿದ್ದಾರೆ. ಶಿವರಾತ್ರಿಯನ್ನಾಚರಿಸುತ್ತಾರೆ ಅದರೆ ಅವರು ಹೇಗೆ ಬರುತ್ತಾರೆಂದು
ಗೊತ್ತಿಲ್ಲ. ಶಿವನೇ ಪರಮಾತ್ಮನಾಗಿದ್ದಾರೆ, ಅವರ ಮಹಿಮೆಯು ಸಂಪೂರ್ಣ ಭಿನ್ನವಾಗಿದೆ, ಆತ್ಮಗಳ
ಮಹಿಮೆಯೇ ಬೇರೆಯಾಗಿದೆ, ಮಕ್ಕಳಿಗೆ ಇದು ಗೊತ್ತಿದೆ- ರಾಧೆ-ಕೃಷ್ಣರೇ ಲಕ್ಷ್ಮೀ-ನಾರಾಯಣರಾಗಿದ್ದಾರೆ.
ಲಕ್ಷ್ಮೀ-ನಾರಾಯಣರ ಎರಡು ರೂಪಗಳಿಗೆ ವಿಷ್ಣುವೆಂದು ಕರೆಯಲಾಗುತ್ತದೆ, ವ್ಯತ್ಯಾಸವಂತೂ ಇಲ್ಲ ಆದರೆ
ನಾಲ್ಕುಭುಜಗಳುಳ್ಳ, 8 ಭುಜಗಳುಳ್ಳ ಯಾವುದೇ ಮನುಷ್ಯರಿರುವುದಿಲ್ಲ. ದೇವಿಯರಿಗೂ ಸಹ ಎಷ್ಟೊಂದು
ಭುಜಗಳನ್ನು ತೋರಿಸಿದ್ದಾರೆ. ಅದನ್ನು ತಿಳಿಸುವುದರಲ್ಲಿ ಸಮಯ ಹಿಡಿಸುತ್ತದೆ.
ತಂದೆಯು ಹೇಳುತ್ತಾರೆ- ಮಕ್ಕಳೇ, ನಾನು ಬಡವರ ಬಂಧುವಾಗಿದ್ದೇನೆ, ಯಾವಾಗ ಬಡಭಾರತವಾಗುತ್ತದೆಯೋ
ರಾಹುವಿನ ಗ್ರಹಣ ಕುಳಿತುಕೊಳ್ಳುತ್ತದೆಯೋ ಆಗ ನಾನು ಬರುತ್ತೇನೆ. ಬೃಹಸ್ಪತಿ ದೆಶೆಯಿತ್ತು, ಈಗ
ರಾಹುವಿನ ಗ್ರಹಣವು ಭಾರತದಲ್ಲೇನೂ ಇಡೀ ವಿಶ್ವದಲ್ಲಿಯೇ ಇದೆ ಆದ್ದರಿಂದ ತಂದೆಯು ಪುನಃ ಭಾರತದಲ್ಲಿಯೇ
ಬರುತ್ತಾರೆ, ಬಂದು ಹೊಸಪ್ರಪಂಚದ ಸ್ಥಾಪನೆ ಮಾಡುತ್ತಾರೆ ಅದಕ್ಕೆ ಸ್ವರ್ಗವೆಂದು ಹೇಳಲಾಗುತ್ತದೆ.
ಭಗವಾನುವಾಚ- ನಾನು ನಿಮ್ಮನ್ನು ರಾಜಾಧಿರಾಜ, ಡಬಲ್ ಕಿರೀಟಧಾರಿ ಸ್ವರ್ಗದ ಮಾಲೀಕರನ್ನಾಗಿ
ಮಾಡುತ್ತೇನೆ. 5000 ವರ್ಷಗಳ ಹಿಂದೆ ಆದಿಸನಾತನ ದೇವಿ-ದೇವತಾ ಧರ್ಮವಿತ್ತು, ಈಗ ಅದು ಇಲ್ಲ.
ತಮೋಪ್ರಧಾನರಾಗಿಬಿಟ್ಟಿದ್ದಾರೆ, ಸ್ವಯಂ ತಂದೆಯೇ ತನ್ನ ಅರ್ಥಾತ್ ರಚಯಿತ ಮತ್ತು ರಚನೆಯ ಪರಿಚಯವನ್ನು
ಕೊಡುತ್ತಾರೆ. ನಿಮ್ಮ ಬಳಿ ಪ್ರದರ್ಶನಿ, ಸಂಗ್ರಹಾಲಯದಲ್ಲಿ ಇಷ್ಟೊಂದು ಜನ ಬರುತ್ತಾರೆ ಆದರೆ
ತಿಳಿದುಕೊಳ್ಳುವುದಿಲ್ಲ. ಕೆಲವರೇ ವಿರಳ ಸಾಪ್ತಾಹಿಕ ಶಿಕ್ಷಣವನ್ನು ತೆಗೆದುಕೊಳ್ಳುತ್ತಾರೆ. ರಚಯಿತ
ಮತ್ತು ರಚನೆಯನ್ನು ಅರಿತುಕೊಳ್ಳುತ್ತಾರೆ. ರಚಯಿತನು ಬೇಹದ್ದಿನ ತಂದೆಯಾಗಿದ್ದಾರೆ. ಅವರಿಂದ
ಬೇಹದ್ದಿನ ಆಸ್ತಿಯು ಸಿಗುತ್ತದೆ. ಈ ಜ್ಞಾನವನ್ನು ತಂದೆಯೇ ಕೊಡುತ್ತಾರೆ ನಂತರ ರಾಜ್ಯಭಾಗ್ಯವು
ಸಿಕ್ಕಿಬಿಟ್ಟಿತೆಂದರೆ ಮತ್ತೆ ಜ್ಞಾನದ ಅವಶ್ಯಕತೆಯಿರುವುದಿಲ್ಲ. ಹೊಸಪ್ರಪಂಚ ಸ್ವರ್ಗಕ್ಕೆ
ಸದ್ಗತಿಯೆಂದು ಹೇಳಲಾಗುತ್ತದೆ. ಹಳೆಯ ಪ್ರಪಂಚ, ನರಕಕ್ಕೆ ದುರ್ಗತಿಯೆಂದು ಹೇಳಲಾಗುತ್ತದೆ.
ತಂದೆಯಂತೂ ಬಹಳ ಚೆನ್ನಾಗಿ ತಿಳಿಸುತ್ತಾರೆ, ಮಕ್ಕಳೂ ಸಹ ಈ ರೀತಿ ತಿಳಿಸಬೇಕು- ಲಕ್ಷ್ಮೀ-ನಾರಾಯಣರ
ಚಿತ್ರವನ್ನು ತೋರಿಸಬೇಕಾಗಿದೆ. ಈ ವಿಶ್ವದಲ್ಲಿ ಶಾಂತಿ ಸ್ಥಾಪನೆಯಾಗುತ್ತಾ ಇದೆ. ಆದಿಸನಾತನ
ದೇವಿ-ದೇವತಾಧರ್ಮದ ತಳಹದಿಯು ಇಲ್ಲವೇ ಇಲ್ಲ. ಅದನ್ನು ತಂದೆಯು ಸ್ಥಾಪನೆ ಮಾಡುತ್ತಿದ್ದಾರೆ.
ದೇವತೆಗಳದು ಪವಿತ್ರ ಧರ್ಮ, ಪವಿತ್ರ ಕರ್ಮವಾಗಿತ್ತು, ಈಗ ಇದು ವಿಕಾರಿ ಪ್ರಪಂಚವಾಗಿದೆ.
ಹೊಸಪ್ರಪಂಚಕ್ಕೆ ನಿರ್ವಿಕಾರಿ ಪ್ರಪಂಚ, ಶಿವಾಲಯವೆಂದು ಹೇಳಲಾಗುತ್ತದೆ. ಈಗ ತಿಳಿಸಿಕೊಡಬೇಕು,
ಅದರಿಂದ ಪಾಪ! ಅವರ ಕಲ್ಯಾಣವಾದರೂ ಆಗಲಿ. ತಂದೆಗೆ ಕಲ್ಯಾಣಕಾರಿಯೆಂದು ಹೇಳಲಾಗುತ್ತದೆ, ಅವರು
ಪುರುಷೋತ್ತಮ ಸಂಗಮಯುಗದಲ್ಲಿಯೇ ಬರುತ್ತಾರೆ. ಕಲ್ಯಾಣಕಾರಿ ಯುಗದಲ್ಲಿ ಕಲ್ಯಾಣಕಾರಿ ತಂದೆಯು ಬಂದು
ಎಲ್ಲರ ಕಲ್ಯಾಣ ಮಾಡುತ್ತಾರೆ. ಹಳೆಯ ಪ್ರಪಂಚವನ್ನು ಬದಲಾಯಿಸಿ ಹೊಸಪ್ರಪಂಚವನ್ನು ಸ್ಥಾಪನೆ
ಮಾಡುತ್ತಾರೆ. ಜ್ಞಾನದಿಂದ ಸದ್ಗತಿಯಾಗುತ್ತದೆ, ಇದರ ಬಗ್ಗೆ ಪ್ರತಿನಿತ್ಯವೂ ಸಮಯವನ್ನು ತೆಗೆದು
ತಿಳಿಸಬಹುದು. ಹೇಳಿ- ರಚಯಿತ ಮತ್ತು ರಚನೆಯ ಆದಿ-ಮಧ್ಯ-ಅಂತ್ಯವನ್ನು ನಾವೇ ತಿಳಿದುಕೊಂಡಿದ್ದೇವೆ,
ಈಗ ಗೀತಾಭಾಗವು ನಡೆಯುತ್ತಿದೆ. ಇದರಲ್ಲಿ ಭಗವಂತನು ಬಂದು ರಾಜಯೋಗವನ್ನು ಕಲಿಸಿದ್ದಾರೆ, ಡಬಲ್
ಕಿರೀಟಧಾರಿಗಳನ್ನಾಗಿ ಮಾಡಿದ್ದಾರೆ. ಈ ಲಕ್ಷ್ಮೀ-ನಾರಾಯಣರೂ ಸಹ ರಾಜಯೋಗದಿಂದಲೇ ಈ ರೀತಿ ಆಗಿದ್ದಾರೆ.
ಈ ಪುರುಷೋತ್ತಮ ಸಂಗಮಯುಗದಲ್ಲಿ ತಂದೆಯಿಂದ ರಾಜಯೋಗವನ್ನು ಕಲಿಯುತ್ತಾರೆ. ತಂದೆಯು ಪ್ರತಿಯೊಂದು
ಮಾತನ್ನು ಎಷ್ಟು ಸಹಜವಾಗಿ ತಿಳಿಸುತ್ತಾರೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಮರಳಿ ಸಿಕ್ಕಿರುವಂತಹ ಮಕ್ಕಳ ಪ್ರತಿ ಮಾತಾ-ಪಿತಾ ಬಾಪ್ದಾದಾರವರ ನೆನಪು,
ಪ್ರೀತಿ ಹಾಗೂ ಸುಪ್ರಭಾತ, ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ರಾಜಯೋಗದ
ವಿದ್ಯೆಯು ಆದಾಯದ ಮೂಲವಾಗಿದೆ ಏಕೆಂದರೆ ಇದರಿಂದಲೇ ನಾವು ರಾಜರಿಗೂ ರಾಜರಾಗುತ್ತೇವೆ. ಈ ಆತ್ಮಿಕ
ವಿದ್ಯೆಯನ್ನು ನಿತ್ಯವೂ ಓದಬೇಕು ಮತ್ತು ಓದಿಸಬೇಕಾಗಿದೆ.
2. ಸದಾ ನಶೆಯಿರಲಿ- ನಾವು
ಬ್ರಾಹ್ಮಣರು ಸತ್ಯ ಮುಖವಂಶಾವಳಿ ಆಗಿದ್ದೇವೆ, ನಾವು ಕಲಿಯುಗೀ ರಾತ್ರಿಯಿಂದ ಹೊರಬಂದು ದಿನದಲ್ಲಿ
ಬಂದಿದ್ದೇವೆ. ಇದು ಕಲ್ಯಾಣಕಾರಿ ಪುರುಷೋತ್ತಮ ಯುಗವಾಗಿದೆ, ಇದರಲ್ಲಿ ತಮ್ಮ ಮತ್ತು ಸರ್ವರ ಕಲ್ಯಾಣ
ಮಾಡಬೇಕಾಗಿದೆ.
ವರದಾನ:
ಪ್ರತೀ ಶ್ರೇಷ್ಠ
ಸಂಕಲ್ಪವನ್ನು ಕರ್ಮದಲ್ಲಿ ತರುವಂತಹವರೇ ಮಾಸ್ಟರ್ ಸರ್ವಶಕ್ತಿಮಾನ್ ಭವ
ಮಾಸ್ಟರ್ ಸರ್ವಶಕ್ತಿಮಾನ್
ಎಂದರೆ ಸಂಕಲ್ಪ ಮತ್ತು ಕರ್ಮ ಸಮಾನವಾಗಿರುತ್ತದೆ. ಒಂದುವೇಳೆ ಸಂಕಲ್ಪ ಬಹಳ ಶ್ರೇಷ್ಠವಾಗಿದ್ದು
ಮತ್ತು ಕರ್ಮ ಸಂಕಲ್ಪದ ಪ್ರಮಾಣವಾಗಿಲ್ಲದಿದ್ದರೆ ಮಾಸ್ಟರ್ ಸರ್ವಶಕ್ತಿಮಾನ್ ಎಂದು
ಹೇಳಲಾಗುವುದಿಲ್ಲ. ಹಾಗೆ ಚೆಕ್ ಮಾಡಿಕೊಳ್ಳಿ ಏನೇ ಶ್ರೇಷ್ಠ ಸಂಕಲ್ಪ ಮಾಡುವಿರಿ ಅದು ಕರ್ಮದವರೆಗೆ
ಬರುವುದೋ ಅಥವಾ ಇಲ್ಲವೋ. ಮಾಸ್ಟರ್ ಸರ್ವಶಕ್ತಿಮಾನ್ನ ಚಿನ್ನೆ ಆಗಿದೆ ಯಾವ ಶಕ್ತಿ ಯಾವ ಸಮಯದಲ್ಲಿ
ಅವಶ್ಯಕವಾಗಿದೆ ಆ ಶಕ್ತಿ ಕಾರ್ಯದಲ್ಲಿ ಬರುವಂತಿರಬೇಕು. ಸ್ಥೂಲ ಮತ್ತು ಸೂಕ್ಷ್ಮ ಎಲ್ಲಾ ಶಕ್ತಿಗಳೂ
ಇಷ್ಟು ನಿಯಂತ್ರಣದಲ್ಲಿರಬೇಕು ಯಾವ ಸಮಯದಲ್ಲಿ ಯಾವ ಶಕ್ತಿಯ ಅವಶ್ಯಕತೆಯಿದೆಯೋ ಅದನ್ನು ಕಾರ್ಯದಲ್ಲಿ
ತೋಡಗಿಸುವಂತಿರಬೇಕು.
ಸ್ಲೋಗನ್:
ಜ್ಞಾನಿ ಆತ್ಮ
ಮಕ್ಕಳಲ್ಲಿ ಕ್ರೋಧ ವಿದ್ದರೆ ಅವರಿಂದ ತಂದೆಯ ಹೆಸರಿಗೆ ಗ್ಲಾನಿ ಉಂಟಾಗುತ್ತದೆ.