30.08.25 Morning Kannada Murli Om Shanti
BapDada Madhuban
"ಮಧುರ ಮಕ್ಕಳೇ -
ಜ್ಞಾನವನ್ನು ಬುದ್ಧಿಯಲ್ಲಿ ಧಾರಣೆ ಮಾಡಿಕೊಂಡು ಪರಸ್ಪರ ಸೇರಿ ತರಗತಿಯನ್ನು ನಡೆಸಿ, ತಮ್ಮ ಮತ್ತು
ಅನ್ಯರ ಕಲ್ಯಾಣ ಮಾಡಿ, ಸತ್ಯ ಸಂಪಾದನೆ ಮಾಡಿಕೊಳ್ಳುತ್ತಾ ಇರಿ".
ಪ್ರಶ್ನೆ:
ನೀವು ಮಕ್ಕಳಿಗೆ
ಯಾವ ಅಹಂಕಾರವು ಎಂದೂ ಬರಬಾರದು?
ಉತ್ತರ:
ಈ ಚಿಕ್ಕ-ಚಿಕ್ಕ
ಬಾಲಕಿಯರು ನಮಗೇನು ತಿಳಿಸುತ್ತಾರೆಂದು ಕೆಲವು ಮಕ್ಕಳಲ್ಲಿ ಅಹಂಕಾರವು ಬಂದು ಬಿಡುತ್ತದೆ. ಹಿರಿಯ
ಸಹೋದರಿಯು ಎಲ್ಲಿಯಾದರೂ ಹೋದರೆಂದರೆ ಮುನಿಸಿಕೊಂಡು ತರಗತಿಗೆ ಬರುವುದನ್ನೇ ನಿಲ್ಲಿಸಿ ಬಿಡುತ್ತಾರೆ,
ಇದು ಮಾಯೆಯ ವಿಘ್ನವಾಗಿದೆ. ತಂದೆಯು ತಿಳಿಸುತ್ತಾರೆ - ಮಕ್ಕಳೇ, ನಿಮಗೆ ತಿಳಿಸುವಂತಹ ಶಿಕ್ಷಕರ
ನಾಮ-ರೂಪವನ್ನು ನೋಡದೆ ತಂದೆಯ ನೆನಪಿನಲ್ಲಿದ್ದು ಮುರುಳಿಯನ್ನು ಕೇಳಿ ಅಹಂಕಾರದಲ್ಲಿ ಬರಬೇಡಿ.
ಓಂ ಶಾಂತಿ.
ತಂದೆಯು ಕುಳಿತು ಮಕ್ಕಳಿಗೆ ತಿಳಿಸುತ್ತಾರೆ - ತಂದೆಯೆಂದು ಹೇಳಲಾಗುತ್ತದೆ ಅಂದಮೇಲೆ ಇಷ್ಟೊಂದು
ಮಕ್ಕಳಿಗೆ ಒಬ್ಬ ದೈಹಿಕ ತಂದೆಯಂತೂ ಆಗಿರಲು ಸಾಧ್ಯವಿಲ್ಲ. ಇವರು ಆತ್ಮಿಕ ತಂದೆಯಾಗಿದ್ದಾರೆ,
ಅವರಿಗೆ ಅನೇಕ ಮಕ್ಕಳಿದ್ದೀರಿ. ಮಕ್ಕಳಿಗಾಗಿ ಈ ಟೇಪ್, ಮುರುಳಿ ಇತ್ಯಾದಿಯೆಲ್ಲವೂ ಸಾಮಗ್ರಿಯಾಗಿದೆ.
ಮಕ್ಕಳಿಗೆ ತಿಳಿದಿದೆ- ನಾವೀಗ ಪುರುಷೋತ್ತಮರಾಗಲು ಸಂಗಮಯುಗದಲ್ಲಿ ಕುಳಿತಿದ್ದೇವೆ, ಇದೂ ಸಹ ಖುಷಿಯ
ಮಾತಾಗಿದೆ. ತಂದೆಯೇ ಪುರುಷೋತ್ತಮರನ್ನಾಗಿ ಮಾಡುತ್ತಾರೆ. ಈ ಲಕ್ಷ್ಮೀ-ನಾರಾಯಣರು
ಪುರುಷೋತ್ತಮರಲ್ಲವೆ. ಈ ಸೃಷ್ಟಿಯಲ್ಲಿಯೇ ಉತ್ತಮ ಪುರುಷರು, ಮಧ್ಯಮ ಮತ್ತು ಕನಿಷ್ಟರಿರುತ್ತಾರೆ.
ಆದಿಯಲ್ಲಿ ಉತ್ತಮರು, ಮಧ್ಯದಲ್ಲಿ ಮಧ್ಯಮರು, ಅಂತ್ಯದಲ್ಲಿ ಕನಿಷ್ಟರಿರುತ್ತಾರೆ. ಹೇಗೆ ಪ್ರತಿಯೊಂದು
ವಸ್ತು ಮೊದಲು ಹೊಸದು, ಉತ್ತಮವಾಗಿರುತ್ತದೆ ನಂತರ ಮಧ್ಯಮ, ಕೊನೆಯಲ್ಲಿ ಕನಿಷ್ಟ ಅರ್ಥಾತ್
ಹಳೆಯದಾಗುತ್ತದೆ. ಪ್ರಪಂಚದ ಸ್ಥಿತಿಯೂ ಹಾಗೆಯೇ. ಅಂದಾಗ ಯಾವ-ಯಾವ ಮಾತುಗಳ ಮೇಲೆ ಮನುಷ್ಯರಿಗೆ
ಸಂಶಯ ಬರುತ್ತದೆಯೋ ಅದರ ಮೇಲೆ ತಿಳಿಸಬೇಕಾಗಿದೆ. ಬಹುತೇಕವಾಗಿ ಬ್ರಹ್ಮನ ಬಗ್ಗೆಯೇ ಕೇಳುತ್ತಾರೆ -
ಇವರನ್ನು ಏಕೆ ಕೂರಿಸಿದ್ದೀರಿ? ಆಗ ಅವರನ್ನು ಕಲ್ಪವೃಕ್ಷದ ಚಿತ್ರದ ಮುಂದೆ ಕರೆ ತರಬೇಕು. ನೋಡಿ,
ಕೆಳಗೆ ತಪಸ್ಸು ಮಾಡುತ್ತಿದ್ದಾರೆ ಮತ್ತು ಮೇಲೆ ಅಂತ್ಯದಲ್ಲಿ ಬಹಳ ಜನ್ಮಗಳ ಅಂತಿಮದಲ್ಲಿ
ನಿಂತಿದ್ದಾರೆ. ತಂದೆಯು ತಿಳಿಸುತ್ತಾರೆ - ನಾನು ಇವರಲ್ಲಿ ಪ್ರವೇಶ ಮಾಡುತ್ತೇನೆ. ಈ ಮಾತುಗಳನ್ನು
ತಿಳಿಸುವವರು ಬಹಳ ಬುದ್ಧಿವಂತರು ಬೇಕು. ಒಂದುವೇಳೆ ಒಬ್ಬರು ಮಂಧಬುದ್ಧಿಯವರಿರುತ್ತಾರೆಂದರೆ
ಅವರಿಂದ ಎಲ್ಲಾ ಬಿ.ಕೆ.ಗಳ ಹೆಸರು ಹಾಳಾಗುತ್ತದೆ, ಪೂರ್ಣ ತಿಳಿಸಲು ಬರುವುದಿಲ್ಲ. ಭಲೆ ಎಲ್ಲರೂ
ಅಂತಿಮದಲ್ಲಿಯೇ ಸಂಪೂರ್ಣ ತೇರ್ಗಡೆಯಾಗುತ್ತಾರೆ. ಈ ಸಮಯದಲ್ಲಿ 16 ಕಲಾ ಸಂಪೂರ್ಣರಾಗಲು
ಸಾಧ್ಯವಿಲ್ಲ ಆದರೆ ತಿಳಿಸಿಕೊಡುವುದರಲ್ಲಿ ಅವಶ್ಯವಾಗಿ ನಂಬರ್ವಾರ್ ಇರುತ್ತಾರೆ. ಪರಮಪಿತ
ಪರಮಾತ್ಮನೊಂದಿಗೆ ಪ್ರೀತಿಯಿಲ್ಲವೆಂದರೆ ವಿಪರೀತ ಬುದ್ಧಿಯವರಾದರಲ್ಲವೆ. ಇದರ ಮೇಲೆ ನೀವು
ತಿಳಿಸಿಕೊಡಿ - ಯಾರು ಪ್ರೀತಿ ಬುದ್ಧಿಯವರಾಗಿದ್ದಾರೆಯೋ ಅವರದು ವಿಜಯಂತಿ, ವಿಪರೀತ ಬುದ್ಧಿಯವರದು
ವಿನಃಶ್ಯಂತಿ. ಈ ಮಾತಿಗೆ ಕೆಲವರು ಕೋಪ ಮಾಡಿಕೊಳ್ಳುತ್ತಾರೆ ಮತ್ತು ಏನಾದರೊಂದು ನಿಂದನೆ
ಹಾಕುತ್ತಾರೆ. ಜಗಳ ಕಾಯುವುದರಲ್ಲಿಯೂ ನಿಧಾನಿಸುವುದಿಲ್ಲ. ಯಾರೇನು ತಾನೆ ಮಾಡಲು ಸಾಧ್ಯ?
ಕೆಲವೊಮ್ಮೆ ಚಿತ್ರಗಳಿಗೆ ಬೆಂಕಿ ಹಾಕುವುದರಲ್ಲಿಯೂ ತಡ ಮಾಡುವುದಿಲ್ಲ. ತಂದೆಯು ಸಲಹೆಯನ್ನು
ಕೊಡುತ್ತಾರೆ - ಈ ಚಿತ್ರಗಳನ್ನು ಇನ್ಶೂರ್ ಮಾಡಿಸಿ. ಮಕ್ಕಳ ಸ್ಥಿತಿಯು ತಂದೆಗೂ ಗೊತ್ತಿದೆ. ವಿಕಾರಿ
ದೃಷ್ಟಿಯ ಬಗ್ಗೆಯೂ ತಂದೆಯು ನಿತ್ಯವೂ ತಿಳಿಸುತ್ತಿರುತ್ತಾರೆ. ಬಾಬಾ, ತಾವು ವಿಕಾರಿ ದೃಷ್ಟಿಯ
ಬಗ್ಗೆ ತಿಳಿಸಿದ್ದೀರಿ ಎಂದು ಬರೆಯುತ್ತಾರೆ. ಇದು ತಮೋಪ್ರಧಾನ ಪ್ರಪಂಚವಲ್ಲವೆ, ದಿನ-ಪ್ರತಿದಿನ
ತಮೋಪ್ರಧಾನವಾಗುತ್ತಲೇ ಹೋಗುತ್ತಾರೆ. ಅವರಂತೂ ತಿಳಿಯುತ್ತಾರೆ - ಕಲಿಯುಗವು ಇನ್ನೂ ಮೊಣ ಕಾಲುಗಳ
ಬಲದಿಂದ ನಡೆಯುತ್ತಿದೆ. ಅಜ್ಞಾನ ನಿದ್ರೆಯಲ್ಲಿ ಮಲಗಿ ಬಿಟ್ಟಿದ್ದಾರೆ. ಕೆಲಕೆಲವೊಮ್ಮೆ ಇದನ್ನೂ
ಹೇಳುತ್ತಾರೆ - ಇದು ಮಹಾಭಾರತದ ಯುದ್ಧದ ಸಮಯವಾಗಿದೆ ಅಂದಮೇಲೆ ಅವಶ್ಯವಾಗಿ ಭಗವಂತನು ಯಾವುದೋ
ರೂಪದಲ್ಲಿರುವರು. ರೂಪವನ್ನಂತು ತಿಳಿಸುವುದಿಲ್ಲ, ಅವರು ಯಾರಲ್ಲಿ ಪ್ರವೇಶ ಮಾಡುತ್ತಾರೋ ಅವರಿಗೆ
ಭಾಗ್ಯಶಾಲಿ ರಥವೆಂದು ಗಾಯನವಿದೆ. ಆತ್ಮನಿಗೆ ತನ್ನದೇ ಆದ ರಥವಿದೆಯಲ್ಲವೆ, ಅದರಲ್ಲಿ ಬಂದು ಪ್ರವೇಶ
ಮಾಡುತ್ತಾರೆ. ಅವರಿಗೆ (ಬ್ರಹ್ಮಾ) ಭಾಗ್ಯಶಾಲಿ ರಥವೆಂದು ಹೇಳಲಾಗುತ್ತದೆ. ಆದರೆ ಶಿವ ತಂದೆಯು
ಜನ್ಮ ತೆಗೆದುಕೊಳ್ಳುವುದಿಲ್ಲ, ಇವರ (ಬ್ರಹ್ಮಾ) ಪಕ್ಕದಲ್ಲಿಯೇ ಕುಳಿತು ಜ್ಞಾನವನ್ನು
ತಿಳಿಸುತ್ತಾರೆ. ಎಷ್ಟು ಚೆನ್ನಾಗಿ ತಿಳಿಸುತ್ತಾರೆ! ತ್ರಿಮೂರ್ತಿ ಚಿತ್ರವೂ ಇದೆ.
ತ್ರಿಮೂರ್ತಿಗಳೆಂದು ಬ್ರಹ್ಮಾ, ವಿಷ್ಣು, ಶಂಕರರಿಗೆ ಹೇಳುತ್ತಾರೆ ಅಂದಮೇಲೆ ಅವಶ್ಯವಾಗಿ ಇವರು ಏನೋ
ಕರ್ತವ್ಯ ಮಾಡಿ ಹೋಗಿದ್ದಾರೆ. ಇದನ್ನು ಮತ್ತೆ ರಸ್ತೆಗಳಿಗೆ, ಮನೆಗಳಿಗೂ ಸಹ ತ್ರಿಮೂರ್ತಿ
ಹೆಸರನ್ನಿಟ್ಟಿದ್ದಾರೆ. ಹೇಗೆ ಮಾರ್ಗಕ್ಕೆ ಸುಭಾಷ್ ಮಾರ್ಗವೆಂದು ಹೆಸರನ್ನಿಟ್ಟಿದ್ದಾರೆ,
ಸುಭಾಷ್ರವರ ಚರಿತ್ರೆಯನ್ನಂತೂ ಎಲ್ಲರೂ ತಿಳಿದಿದ್ದಾರೆ. ನಂತರ ಕುಳಿತು ಅವರು ಚರಿತ್ರೆಯನ್ನು
ಬರೆಯುತ್ತಾರೆ ಮತ್ತೆ ಅದನ್ನು ದೊಡ್ಡದನ್ನಾಗಿ ಮಾಡುತ್ತಾರೆ. ಭಲೆ ಎಷ್ಟು ಬೇಕಾದರೂ ಅವರ
ಮಹಿಮೆಯನ್ನು ಬರೆಯುವರು. ಹೇಗೆ ಗುರುನಾನಕರ ಪುಸ್ತಕವನ್ನು ಎಷ್ಟು ದೊಡ್ಡದಾಗಿ ಮಾಡಿದ್ದಾರೆ! ಅವರು
ಇಷ್ಟೊಂದನ್ನು ಬರೆಯಲಿಲ್ಲ, ಜ್ಞಾನದ ಬದಲು ಭಕ್ತಿಯ ಮಾತುಗಳನ್ನು ಬರೆದಿದ್ದಾರೆ. ಈ ಚಿತ್ರ
ಇತ್ಯಾದಿಗಳನ್ನು ತಿಳಿಸುವುದಕ್ಕಾಗಿ ಮಾಡಲಾಗುತ್ತದೆ. ಇದಂತೂ ನಿಮಗೆ ತಿಳಿದಿದೆ - ಈ ಕಣ್ಣುಗಳಿಗೆ
ಏನೆಲ್ಲವೂ ಕಾಣುತ್ತಿದೆಯೋ ಇದೆಲ್ಲವೂ ಭಸ್ಮವಾಗಲಿದೆ. ಬಾಕಿ ಆತ್ಮವು ಇಲ್ಲಿರಲು ಸಾಧ್ಯವಿಲ್ಲ,
ಅವಶ್ಯವಾಗಿ ಮನೆಗೆ ಹೋಗುವುದು. ಇಂತಹ ಮಾತುಗಳು ಎಲ್ಲರ ಬುದ್ಧಿಯಲ್ಲಿಯೂ ಕುಳಿತುಕೊಳ್ಳುವುದಿಲ್ಲ.
ಒಂದುವೇಳೆ ಧಾರಣೆಯಾಗುತ್ತಿದ್ದರೆ ತರಗತಿಯನ್ನು ಏಕೆ ನಡೆಸುವುದಿಲ್ಲ? 7-8 ವರ್ಷಗಳಾದರೂ
ತರಗತಿಯನ್ನು ನಡೆಸುವಷ್ಟು ಯಾರೂ ತಯಾರಾಗುವುದಿಲ್ಲ. ಅನೇಕ ಕಡೆ ಹೀಗೆ ಮಾಡಿಯೂ ಮಾಡುತ್ತಾರೆ. ಆದರೂ
ಸಹ ತಿಳಿದುಕೊಳ್ಳುತ್ತಾರೆ - ಮಾತೆಯರ ಪದವಿಯು ದೊಡ್ಡದಾಗಿದೆ. ಚಿತ್ರಗಳು ಬಹಳಷ್ಟಿವೆ ಮತ್ತೆ
ಮುರುಳಿಯನ್ನು ಧಾರಣೆ ಮಾಡಿಕೊಂಡು ಅದರ ಬಗ್ಗೆ ಸ್ವಲ್ಪ ತಿಳಿಸುತ್ತಾರೆ. ಇದನ್ನು ಯಾರು ಬೇಕಾದರೂ
ಮಾಡಬಲ್ಲರು, ಬಹಳ ಸಹಜವಾಗಿದೆ ಆದರೆ ಬ್ರಾಹ್ಮಣಿಯರನ್ನೇ ಏಕೆ ಬಯಸುವರೋ ಗೊತ್ತಿಲ್ಲ. ಬ್ರಾಹ್ಮಣಿಯು
ಎಲ್ಲಿಯಾದರು ಹೋದರೆ ಸಾಕು ಮುನಿಸಿಕೊಂಡು ಬಿಡುತ್ತಾರೆ, ತರಗತಿಗೇ ಬರುವುದಿಲ್ಲ, ಪರಸ್ಪರ
ಕಿರಿಕಿರಿಯಾಗಿ ಬಿಡುತ್ತದೆ. ಮುರುಳಿಯನ್ನಂತೂ ಯಾರು ಬೇಕಾದರೂ ತಿಳಿಸಬಹುದಲ್ಲವೆ, ಇದಕ್ಕೆ
ಬಿಡುವಿಲ್ಲವೆಂದು ಹೇಳುತ್ತಾರೆ. ಇಲ್ಲಿ ತಮ್ಮ ಕಲ್ಯಾಣವನ್ನು ಮಾಡಿಕೊಂಡು ಅನ್ಯರ ಕಲ್ಯಾಣವನ್ನೂ
ಮಾಡಬೇಕು. ಬಹಳ ದೊಡ್ಡ ಸಂಪಾದನೆ. ಸತ್ಯ ಸಂಪಾದನೆ ಮಾಡಿಸಬೇಕಾಗಿದೆ - ಮನುಷ್ಯರ ಜೀವನವು ವಜ್ರ
ಸಮಾನವಾಗಲಿ, ಸ್ವರ್ಗದಲ್ಲಿ ಎಲ್ಲರೂ ಹೋಗುತ್ತಾರೆ, ಅಲ್ಲಿ ಸದಾ ಸುಖಿಯಾಗಿರುತ್ತಾರೆ. ಪ್ರಜೆಗಳ
ಆಯಸ್ಸು ಕಡಿಮೆಯಿರುತ್ತದೆಯೆಂದಲ್ಲ. ಪ್ರಜೆಗಳಿಗೂ ಧೀರ್ಘಾಯಸ್ಸಿರುತ್ತದೆ. ಇದು ಅಮರ ಲೋಕವಾಗಿದೆ
ಬಾಕಿ ಪದವಿಯು ಹೆಚ್ಚು-ಕಡಿಮೆಯಿರುತ್ತದೆ ಅಂದಾಗ ಯಾವುದೇ ವಿಷಯದ ಮೇಲೆ ಕ್ಲಾಸ್ ಮಾಡಬೇಕು ಆದರೆ
ಒಳ್ಳೆಯ ಬ್ರಾಹ್ಮಣಿಯು ಬೇಕೆಂದು ಏಕೆ ಹೇಳುತ್ತಾರೆ? ಪರಸ್ಪರ ತಾವೇ ತರಗತಿಯನ್ನು ನಡೆಸಬಹುದಾಗಿದೆ
ಆದ್ದರಿಂದ ಹೆಚ್ಚು ತಲೆ ಕೆಡಿಸಿಕೊಳ್ಳಬೇಡಿ. ಕೆಲವರಿಗಂತೂ ಈ ಚಿಕ್ಕ-ಚಿಕ್ಕ ಬಾಲಕಿಯರು ಏನು
ತಿಳಿಸುವರು? ಎಂದು ಅಹಂಕಾರವು ಬಂದು ಬಿಡುತ್ತದೆ. ಮಾಯೆಯ ವಿಘ್ನಗಳು ಬಹಳ ಬರುತ್ತವೆ. ಬುದ್ಧಿಯಲ್ಲಿ
ಕುಳಿತುಕೊಳ್ಳುವುದಿಲ್ಲ.
ತಂದೆಯು ಪ್ರತಿನಿತ್ಯವೂ
ತಿಳಿಸುತ್ತಿರುತ್ತಾರೆ, ಶಿವ ತಂದೆಯಂತೂ ಟಾಫಿಕ್ನ ಮೇಲೆ ತಿಳಿಸುವುದಿಲ್ಲ ಅಲ್ಲವೆ. ಅವರು
ಸಾಗರನಾಗಿದ್ದಾರೆ. ಬೇರೆ-ಬೇರೆ ಅಲೆಗಳು ಬರುತ್ತಿರುತ್ತವೆ. ಕೆಲವೊಮ್ಮೆ ಮಕ್ಕಳಿಗೆ ತಿಳಿಸುತ್ತಾರೆ,
ಕೆಲವೊಮ್ಮೆ ಹೊರಗಿನವರಿಗೆ ತಿಳಿಸುತ್ತಾರೆ. ಮುರುಳಿಯಂತೂ ಎಲ್ಲರಿಗೂ ಸಿಗುತ್ತದೆ. ಅಕ್ಷರಗಳು
ಗೊತ್ತಿಲ್ಲವೆಂದರೆ ಕಲಿಯಬೇಕಲ್ಲವೆ, ತಮ್ಮ ಉನ್ನತಿಗಾಗಿ ಪುರುಷಾರ್ಥ ಮಾಡಬೇಕು. ತಮ್ಮ ಮತ್ತು
ಅನ್ಯರ ಕಲ್ಯಾಣ ಮಾಡಬೇಕು. ಈ ಬ್ರಹ್ಮಾ ತಂದೆಯೂ ಸಹ ತಿಳಿಸುತ್ತಾರಲ್ಲವೆ ಆದರೆ ಮಕ್ಕಳ ಬುದ್ಧಿಯೋಗವು
ಶಿವ ತಂದೆಯ ಕಡೆಯಿರಲೆಂದು ಮಕ್ಕಳೇ, ಯಾವಾಗಲೂ ಶಿವ ತಂದೆಯು ತಿಳಿಸುತ್ತಾರೆಂದು ತಿಳಿದುಕೊಳ್ಳಿ
ಎಂದೇ ಹೇಳುತ್ತಾರೆ. ಶಿವ ತಂದೆಯನ್ನು ನೆನಪು ಮಾಡಿ, ಶಿವ ತಂದೆಯು ಪರಮಧಾಮದಿಂದ ಬಂದಿದ್ದಾರೆ,
ಮುರುಳಿಯನ್ನು ನುಡಿಸುತ್ತಿದ್ದಾರೆ. ಈ ಬ್ರಹ್ಮಾ ತಂದೆಯಂತೂ ಪರಮಧಾಮದಿಂದ ಬಂದು ತಿಳಿಸುವುದಿಲ್ಲ
ಅಂದಾಗ ಸದಾ ಈ ರೀತಿ ತಿಳಿಯಿರಿ – ಶಿವ ತಂದೆಯು ಈ ತನುವಿನಲ್ಲಿ ಬಂದು ನಮಗೆ ಮುರುಳಿಯನ್ನು
ನುಡಿಸುತ್ತಿದ್ದಾರೆ. ಇದು ಬುದ್ಧಿಯಲ್ಲಿ ನೆನಪಿರಬೇಕು. ಯಥಾರ್ಥ ರೀತಿಯಲ್ಲಿ ಇದು
ಬುದ್ಧಿಯಲ್ಲಿದ್ದರೂ ಸಹ ನೆನಪಿನ ಯಾತ್ರೆಯಿರುತ್ತದೆಯಲ್ಲವೆ ಆದರೆ ಇಲ್ಲಿ ಕುಳಿತಿದ್ದರೂ ಸಹ ಅನೇಕರ
ಬುದ್ಧಿಯೋಗವು ಅಲ್ಲಿ-ಇಲ್ಲಿ ಹೊರಟು ಹೋಗುತ್ತದೆ. ನೀವು ಇಲ್ಲಿ ಬಂದಾಗ ಬಹಳ ಚೆನ್ನಾಗಿ ನೆನಪಿನ
ಯಾತ್ರೆಯಲ್ಲಿರಬಹುದು. ಇಲ್ಲವಾದರೆ ತಮ್ಮ ಹಳ್ಳಿಯು ನೆನಪಿಗೆ ಬರುವುದು, ಮನೆಯ ನೆನಪು ಬರುವುದು.
ಶಿವ ತಂದೆಯು ನಮಗೆ ಇವರಲ್ಲಿ ಕುಳಿತು ಓದಿಸುತ್ತಾರೆ ಎಂದು ಬುದ್ಧಿಯಲ್ಲಿ ನೆನಪಿರುತ್ತದೆ, ನಾವು
ಶಿವ ತಂದೆಯ ನೆನಪಿನಲ್ಲಿ ಮುರುಳಿಯನ್ನು ಕೇಳುತ್ತಿದ್ದೆವು ಮತ್ತೆ ಬುದ್ಧಿಯೋಗವು ಎಲ್ಲಿಗೆ ಓಡಿ
ಹೋಯಿತು? ಹೀಗೆ ಅನೇಕರ ಬುದ್ಧಿಯೋಗವು ಅಲ್ಲಿ-ಇಲ್ಲಿ ಓಡುತ್ತಿರುತ್ತದೆ. ವಾಸ್ತವದಲ್ಲಿ ನೀವು
ಇಲ್ಲಿಗೆ ಬಂದಾಗ ಬಹಳ ಚೆನ್ನಾಗಿ ನೆನಪಿನಲ್ಲಿರಲು ಸಾಧ್ಯತೆಯಿದೆ ಏಕೆಂದರೆ ತಿಳಿದುಕೊಂಡಿದ್ದೀರಿ –
ಶಿವ ತಂದೆಯು ಪರಮಧಾಮದಿಂದ ಬಂದಿದ್ದಾರೆ, ಹೊರಗಿನ ಊರುಗಳಲ್ಲಿದ್ದಾಗ ಈ ಸಂಕಲ್ಪವು ಬರುವುದಿಲ್ಲ.
ಕೆಲವರು ಶಿವ ತಂದೆಯ ಮುರುಳಿಯನ್ನು ಈ ಕಿವಿಗಳಿಂದ ಕೇಳುತ್ತಿದ್ದೇವೆ ಎಂದು ತಿಳಿಯುತ್ತಾರೆ ಮತ್ತೆ
ತಿಳಿಸುವವರ ನಾಮ-ರೂಪವು ನೆನಪಿರಬಾರದು. ಈ ಜ್ಞಾನವೆಲ್ಲವೂ ಒಳಗಿನದಾಗಿದೆ, ಆಂತರ್ಯದಲ್ಲಿ ಈ
ವಿಚಾರವಿರಲಿ - ನಾವು ಶಿವ ತಂದೆಯ ಮುರುಳಿಯನ್ನು ಕೇಳುತ್ತೇವೆ. ಇಂತಹ ಸಹೋದರಿಯು ನಮಗೆ
ತಿಳಿಸುತ್ತಿದ್ದಾರೆ ಎಂಬುದನ್ನು ಮರೆಯಬೇಕು. ಶಿವ ತಂದೆಯ ಮುರುಳಿಯನ್ನು ಕೇಳುತ್ತಿದ್ದೇವೆ, ಇವೂ
ಸಹ ನೆನಪಿನಲ್ಲಿರುವ ಯುಕ್ತಿಗಳಾಗಿವೆ. ಎಷ್ಟು ಸಮಯ ನಾವು ಮುರುಳಿಯನ್ನು ಕೇಳುತ್ತೇವೋ ಅಷ್ಟು ಸಮಯ
ನೆನಪಿನಲ್ಲಿದ್ದೇವೆಂದಲ್ಲ. ತಂದೆಯು ತಿಳಿಸುತ್ತಾರೆ - ಇಲ್ಲಿ ಕುಳಿತಿದ್ದರೂ ಸಹ ಅನೇಕರ
ಬುದ್ಧಿಯೋಗವು ಹೊರಗಡೆ ಅಲ್ಲಿ-ಇಲ್ಲಿ ಹೊರಟು ಹೋಗುತ್ತದೆ. ಹೊಲ ಗದ್ದೆ ಇತ್ಯಾದಿಗಳು ನೆನಪು
ಬರುತ್ತಿರುತ್ತದೆ. ನಿಮ್ಮ ಬುದ್ಧಿ ಯೋಗವು ಇಲ್ಲಿ ಅಲೆಯಬಾರದು. ಶಿವ ತಂದೆಯನ್ನು ನೆನಪು
ಮಾಡುವುದರಲ್ಲಿ ಯಾವುದೇ ಕಷ್ಟವಿಲ್ಲ ಆದರೆ ಮಾಯೆಯು ನೆನಪು ಮಾಡಲು ಬಿಡುವುದಿಲ್ಲ. ಇಡೀ ಸಮಯ ಶಿವ
ತಂದೆಯ ನೆನಪು ಇರುವುದಿಲ್ಲ. ಬೇರೆಲ್ಲಾ ಸಂಕಲ್ಪಗಳು ಬಂದು ಬಿಡುತ್ತವೆ. ನಂಬರ್ವಾರ್
ಪುರುಷಾರ್ಥದನುಸಾರ ಇದೆಯಲ್ಲವೆ. ಯಾರು ಬಹಳ ಸಮೀಪದವರಿರುವರೋ ಅವರ ಬುದ್ಧಿಯಲ್ಲಿ ಚೆನ್ನಾಗಿ
ಕುಳಿತುಕೊಳ್ಳುತ್ತದೆ. ಎಲ್ಲರೂ 8ರ ಮಾಲೆಯಲ್ಲಿ ಬರಲು ಸಾಧ್ಯವೇ. ಜ್ಞಾನ, ಯೋಗ, ದೈವೀ ಗುಣ.,
ಇವೆಲ್ಲವನ್ನೂ ತಮ್ಮಲ್ಲಿ ನೋಡಿಕೊಳ್ಳಿ. ನನ್ನಲ್ಲಿ ಯಾವುದೇ ಅವಗುಣವಿಲ್ಲವೆ? ಮಾಯೆಗೆ ವಶವಾಗಿ
ಯಾವುದೇ ವಿಕರ್ಮವಾಗುತ್ತಿಲ್ಲವೆ? ಕೆಲವರಂತೂ ಬಹಳ ಲೋಭಿಗಳಾಗಿ ಬಿಡುತ್ತಾರೆ. ಲೋಭವೂ ಸಹ ಭೂತವಾಗಿದೆ.
ಈ ರೀತಿ ಮಾಯೆಯ ಪ್ರವೇಶತೆಯಾಗಿ ಬಿಡುತ್ತದೆ. ಅವರು ಹಸಿವು, ಹಸಿವು ಎನ್ನುತ್ತಿರುತ್ತಾರೆ, ತಿನ್ನಲೆ
ಎನಿಸುತ್ತಿರುತ್ತದೆ. ಕೆಲವರಲ್ಲಿ ತಿನ್ನುವ ಆಸೆ ಬಹಳ ಇರುತ್ತದೆ. ಭೋಜನವೂ ಸಹ ಕಾಯಿದೆಯನುಸಾರವಿರಲಿ.
ಅನೇಕ ಮಕ್ಕಳಿದ್ದಾರೆ, ಇನ್ನೂ ಬಹಳಷ್ಟು ಮಂದಿ ಬರುವವರಿದ್ದಾರೆ. ಎಷ್ಟೊಂದು ಮಂದಿ
ಬ್ರಾಹ್ಮಣ-ಬ್ರಾಹ್ಮಣಿಯರಾಗುತ್ತಾರೆ. ಮಕ್ಕಳಿಗೂ ಸಹ ತಿಳಿಸುತ್ತೇನೆ - ನೀವು ಬ್ರಾಹ್ಮಣರಾಗಿ
ಕುಳಿತುಕೊಂಡು ಮಾತೆಯರನ್ನು ಮುಂದಿಡಲಾಗುತ್ತದೆ. ಶಿವಶಕ್ತಿ ಭಾರತ ಮಾತೆಯರಿಗೆ ಜಯವಾಗಲಿ.
ತಂದೆಯು ತಿಳಿಸುತ್ತಾರೆ
- ತಮ್ಮನ್ನು ಆತ್ಮನೆಂದು ತಿಳಿಯಿರಿ ಮತ್ತು ನನ್ನನ್ನು ನೆನಪು ಮಾಡಿ, ಸ್ವದರ್ಶನ ಚಕ್ರವನ್ನು
ತಿರುಗಿಸುತ್ತಾ ಇರಿ. ಸ್ವದರ್ಶನ ಚಕ್ರಧಾರಿಗಳು ನೀವು ಬ್ರಾಹ್ಮಣರಾಗಿದ್ದೀರಿ. ಯಾರಾದರೂ ಹೊಸಬರು
ಬಂದರೆ ಈ ಮಾತುಗಳನ್ನು ತಿಳಿದುಕೊಳ್ಳಲು ಸಾಧ್ಯವಿಲ್ಲ. ನೀವು ಸರ್ವೋತ್ತಮ ಬ್ರಹ್ಮಾ ಮುಖವಂಶಾವಳಿ
ಬ್ರಾಹ್ಮಣ ಕುಲಭೂಷಣರು, ಸ್ವದರ್ಶನ ಚಕ್ರಧಾರಿಗಳಾಗಿದ್ದೀರಿ. ಹೊಸಬರು ಯಾರಾದರೂ ಕೇಳಿಸಿಕೊಂಡರೆ
ಸ್ವದರ್ಶನ ಚಕ್ರವಂತೂ ವಿಷ್ಣುವಿಗಿದೆ. ಇವರು ಮತ್ತೆ ಎಲ್ಲರಿಗೆ ಈ ರೀತಿ ಹೇಳುತ್ತಿರುತ್ತಾರೆ ಎಂದು
ತಿಳಿಯುತ್ತಾರೆ, ಒಪ್ಪುವುದಿಲ್ಲ ಆದ್ದರಿಂದ ಹೊಸಬರಿಗೆ ಸಭೆಯಲ್ಲಿ ಬರಲು ಅನುಮತಿಯಿಲ್ಲ ಏಕೆಂದರೆ
ಅವರಿಗೆ ಇದು ಅರ್ಥವಾಗುವುದಿಲ್ಲ. ಕೆಲಕೆಲವರು ಇದಕ್ಕೂ ಸಹ ಮುನಿಸಿಕೊಳ್ಳುತ್ತಾರೆ - ನಮಗೆ ಅನುಮತಿ
ಕೊಡದಿರಲು ನಾವೇನು ಬುದ್ಧಿಹೀನರೆ? ಎಂದು ಕೇಳುತ್ತಾರೆ ಆದರೆ ಅನ್ಯಸತ್ಸಂಗಗಳಲ್ಲಿ ಯಾರು ಬೇಕಾದರೂ
ಹೋಗುತ್ತಿರುತ್ತಾರೆ. ಅಲ್ಲಂತೂ ಶಾಸ್ತ್ರಗಳ ಮಾತುಗಳನ್ನೇ ತಿಳಿಸುತ್ತಿರುತ್ತಾರೆ. ಅದನ್ನು ಕೇಳಲು
ಪ್ರತಿಯೊಬ್ಬರಿಗೂ ಹಕ್ಕಿದೆ ಆದರೆ ಇಲ್ಲಿ ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಈ ಈಶ್ವರೀಯ ಜ್ಞಾನವು
ಬುದ್ಧಿಯಲ್ಲಿ ಕುಳಿತುಕೊಳ್ಳದಿದ್ದರೆ ಅಂತಹವರು ವಿರೋಧಿಗಳಾಗುತ್ತಾರೆ. ಚಿತ್ರಗಳನ್ನೂ ಸಹ ರಕ್ಷಣೆ
ಮಾಡಬೇಕಾಗುತ್ತದೆ. ಈ ಆಸುರೀ ಪ್ರಪಂಚದಲ್ಲಿ ತಮ್ಮ ದೈವೀ ರಾಜಧಾನಿಯನ್ನು ಸ್ಥಾಪನೆ ಮಾಡಬೇಕಾಗಿದೆ.
ಹೇಗೆ ಕ್ರೈಸ್ಟ್ ತಮ್ಮ ಧರ್ಮ ಸ್ಥಾಪನೆ ಮಾಡಲು ಬಂದರು ಹಾಗೆಯೇ ತಂದೆಯು ತಮ್ಮ ದೈವೀ ರಾಜಧಾನಿಯನ್ನು
ಸ್ಥಾಪನೆ ಮಾಡುತ್ತಾರೆ. ಇದರಲ್ಲಿ ಹಿಂಸೆಯ ಮಾತಿಲ್ಲ. ನೀವು ಕಾಮ ಕಟಾರಿಯನ್ನಾಗಲಿ, ಸ್ಥೂಲ
ಹಿಂಸೆಯನ್ನಾಗಲಿ ಮಾಡಲು ಸಾಧ್ಯವಿಲ್ಲ. ಕೊಳಕಾದ ಬಟ್ಟೆಯನ್ನು ಒಗೆದರೆಂದು ಗಾಯನವಿದೆ. ಮನುಷ್ಯರು
ಸಂಪೂರ್ಣ ಅಂಧಕಾರದಲ್ಲಿದ್ದಾರೆ, ತಂದೆಯು ಬಂದು ಘೋರ ಅಂಧಕಾರದಿಂದ ಘೋರ ಪ್ರಕಾಶಗೊಳಿಸುತ್ತಾರೆ.
ಆದರೂ ಸಹ ಕೆಲ ಕೆಲವರು ಬಾಬಾ ಎಂದು ಹೇಳಿ ಮತ್ತೆ ಮುಖ ತಿರುಗಿಸಿಕೊಳ್ಳುತ್ತಾರೆ, ವಿದ್ಯೆಯನ್ನೇ
ಬಿಟ್ಟು ಬಿಡುತ್ತಾರೆ. ಭಗವಂತನು ವಿಶ್ವದ ಮಾಲೀಕರನ್ನಾಗಿ ಮಾಡಲು ಓದಿಸುತ್ತಾರೆ. ಇಂತಹ
ವಿದ್ಯೆಯನ್ನು ಬಿಟ್ಟರೆ ಅವರಿಗೆ ಮಹಾಮೂರ್ಖರೆಂದು ಹೇಳಲಾಗುತ್ತದೆ. ಇಲ್ಲಿ ಇಷ್ಟೊಂದು ಜಬರ್ದಸ್ತ್
ಖಜಾನೆಯು ಸಿಗುತ್ತದೆ. ಇಂತಹ ತಂದೆಯನ್ನು ಬಿಡುವುದೇ? ಒಂದು ಗೀತೆಯೂ ಇದೆ - ತಾವು ಪ್ರೀತಿಯನ್ನಾದರೂ
ಮಾಡಿ, ಇಲ್ಲವೆ ತಿರಸ್ಕರಿಸಿ ಆದರೆ ನಾವು ತಮ್ಮ ಧರೆಯನ್ನು ಬಿಟ್ಟು ಹೋಗುವುದಿಲ್ಲ. ತಂದೆಯು
ಬೇಹದ್ದಿನ ರಾಜ್ಯಭಾಗ್ಯವನ್ನು ಕೊಡಲು ಬಂದಿದ್ದಾರೆ. ಇಲ್ಲಿ ಬಿಡುವ ಮಾತೇ ಇಲ್ಲ. ಹಾ! ಒಳ್ಳೆಯ
ಲಕ್ಷಣಗಳನ್ನು ಧಾರಣೆ ಮಾಡಿಕೊಳ್ಳಬೇಕಾಗಿದೆ. ಇವರು ನಮಗೆ ಬಹಳ ತೊಂದರೆ ಕೊಡುತ್ತಾರೆಂದರೆ
ಸ್ತ್ರೀಯರು ದೂರು ಕೊಡುತ್ತಾರೆ. ಇತ್ತೀಚೆಗಂತೂ ಮನುಷ್ಯರು ಬಹಳ ಕೆಟ್ಟು ಹೋಗಿದ್ದಾರೆ ಆದ್ದರಿಂದ
ತಮ್ಮನ್ನು ರಕ್ಷಿಸಿಕೊಳ್ಳಬೇಕು. ಸಹೋದರರು-ಸಹೋದರಿಯರ ರಕ್ಷಣೆ ಮಾಡಬೇಕಾಗಿದೆ. ನಾವಾತ್ಮಗಳು
ಎಂತಹದ್ದೇ ಪರಿಸ್ಥಿತಿಯಲ್ಲಿ ತಂದೆಯಿಂದ ಆಸ್ತಿಯನ್ನು ಅವಶ್ಯವಾಗಿ ತೆಗೆದುಕೊಳ್ಳಬೇಕಾಗಿದೆ.
ತಂದೆಯನ್ನು ಬಿಡುವುದರಿಂದ ಆಸ್ತಿಯು ಸಮಾಪ್ತಿಯಾಗುತ್ತದೆ. ನಿಶ್ಚಯ ಬುದ್ಧಿ ವಿಜಯಂತಿ, ಸಂಶಯ
ಬುದ್ಧಿ ವಿನಃಶ್ಯಂತಿ ಮತ್ತೆ ಪದವಿಯು ಕಡಿಮೆಯಾಗಿ ಬಿಡುತ್ತದೆ. ಜ್ಞಾನವನ್ನು ಜ್ಞಾನ ಸಾಗರ
ತಂದೆಯೊಬ್ಬರೇ ಕೊಡಲು ಸಾಧ್ಯ. ಭಲೆ ಯಾರೆಷ್ಟಾದರೂ ತಮ್ಮನ್ನು ಜ್ಞಾನಿಗಳೆಂದು ತಿಳಿದುಕೊಳ್ಳಲಿ ಆದರೆ
ತಂದೆಯು ತಿಳಿಸುತ್ತಾರೆ - ಎಲ್ಲರ ಬಳಿ ಶಾಸ್ತ್ರಗಳು ಮತ್ತು ಭಕ್ತಿಯ ಜ್ಞಾನವಿದೆ. ಯಾವುದಕ್ಕೆ
ಸತ್ಯ ಜ್ಞಾನವೆಂದು ಹೇಳಲಾಗುತ್ತದೆ ಎಂಬುದನ್ನೂ ಸಹ ಮನುಷ್ಯರು ತಿಳಿದುಕೊಂಡಿಲ್ಲ. ಒಳ್ಳೆಯದು.
ಮಧುರಾತಿ ಮಧುರ ಅಗಲಿ
ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ.
ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ಗಮನವಿರಲಿ -
ಮುರುಳಿ ಕೇಳುವ ಸಮಯದಲ್ಲಿ ಬುದ್ಧಿಯೋಗವು ಹೊರಗಡೆ ಅಲೆಯುತ್ತಿಲ್ಲವೆ? ಸದಾ ಸ್ಮೃತಿಯಿರಲಿ - ನಾವು
ಶಿವ ತಂದೆಯ ಮಹಾವಾಕ್ಯಗಳನ್ನು ಕೇಳುತ್ತಿದ್ದೇವೆ. ಇದೂ ಸಹ ನೆನಪಿನ ಯಾತ್ರೆಯಾಗಿದೆ.
2. ತಮ್ಮನ್ನು ತಾವು
ನೋಡಿಕೊಳ್ಳಿ - ನನ್ನಲ್ಲಿ ಜ್ಞಾನ, ಯೋಗ ಮತ್ತು ದೈವೀ ಗುಣಗಳಿವೆಯೇ? ಲೋಭದ ಭೂತವಿಲ್ಲವೆ? ಮಾಯೆಗೆ
ವಶವಾಗಿ ಯಾವುದೇ ವಿಕರ್ಮವಂತೂ ಆಗುತ್ತಿಲ್ಲವೆ?
ವರದಾನ:
ನಿಮಿತ್ತ ಭಾವದ
ಸ್ಮತಿಯಿಂದ ಹಲ್ ಚಲ್ ಅನ್ನು ಸಮಾಪ್ತಿ ಮಾಡುವಂತಹ ಸದಾ ಅಚಲ-ಅಡೋಲ ಭವ.
ನಿಮಿತ್ತ ಭಾವದಿಂದ ಅನೇಕ
ಪ್ರಕಾರದ ನಾನು ಎನ್ನುವುದು, ನನ್ನದು ಎನ್ನುವುದು ಸಹಜವಾಗಿ ಸಮಾಪ್ತಿಯಾಗಿ ಬಿಡುವುದು. ಈ ಸ್ಮತಿ
ಸರ್ವ ಪ್ರಕಾರದ ಹಲ್-ಚಲ್ ನಿಂದ ಬಿಡಿಸಿಕೊಂಡು ಅಚಲ-ಅಡೋಲ ಸ್ಥಿತಿಯ ಅನುಭವ ಮಾಡಿಸುತ್ತದೆ.
ಸೇವೆಯಲ್ಲಿಯೂ ಸಹಾ ಪರಿಶ್ರಮ ಪಡುವ ಅಗತ್ಯವಿಲ್ಲ. ಏಕೆಂದರೆ ನಿಮಿತ್ತರಾಗುವಂತಹವರ ಬುದ್ಧಿಯಲ್ಲಿ
ಸದಾ ನೆನಪಿರುತ್ತದೆ ಏನು ಕರ್ಮ ನಾನು ಮಾಡುತ್ತೇನೆ ನನ್ನನ್ನು ನೋಡಿ ಎಲ್ಲರೂ ಮಾಡುತ್ತಾರೆ. ಸೇವೆಗೆ
ನಿಮಿತ್ತರಾಗುವುದು ಅರ್ಥಾತ್ ಸ್ಟೇಜ್ ಮೇಲೆ ಬರುವುದು. ಸ್ಟೇಜ್ ನ ಕಡೆ ಸ್ವತಃವಾಗಿ ಎಲ್ಲರ ದೃಷ್ಠಿ
ಹೋಗುತ್ತದೆ. ಆದ್ದರಿಂದ ಈ ಸ್ಮತಿಯೂ ಸಹಾ ಸುರಕ್ಷತೆಗೆ ಸಾಧನವಾಗಿ ಬಿಡುವುದು.
ಸ್ಲೋಗನ್:
ಸರ್ವ
ಮಾತುಗಳಿಂದ ನ್ಯಾರಾ ಆಗಿ ಆಗ ಪರಮಾತ್ಮ ತಂದೆಯ ಆಶ್ರಯದ ಅನುಭವವಾಗುವುದು.
ಅವ್ಯಕ್ತ ಸೂಚನೆ:-
ಸಹಜಯೋಗಿ ಆಗಬೇಕಂದರೆ ಪರಮಾತ್ಮನ ಪ್ರೀತಿಯ ಅನುಭವಿಯಾಗಿರಿ.
ವರ್ತಮಾನ ಸಮಯ
ಅಲೆದಾಡುತ್ತಿರುವ ಆತ್ಮಗಳಿಗೆ ಒಂದು ಶಾಂತಿ ಬೇಕಾಗಿದೆ, ಮತ್ತೊಂದು ಆತ್ಮಿಕ ಸ್ನೇಹ ಬೇಕಾಗಿದೆ.
ಪ್ರೇಮ ಮತ್ತು ಶಾಂತಿಯೇ ಎಲ್ಲಾ ಸ್ಥಳದಲ್ಲಿ ಅಭಾವವಿದೆ ಅದಕ್ಕೆ ಏನೇ ಪ್ರೋಗ್ರಾಮ್ ಮಾಡುತ್ತೀರೆಂದರೆ
ಅದರಲ್ಲಿ ಮೊದಲು ತಂದೆಯ ಸಂಬಂಧದ ಸ್ನೇಹದ ಮಹಿಮೆ ಮಾಡಿ ಮತ್ತು ಅದರ ಪ್ರೀತಿಯಿಂದ ಆತ್ಮರ ಸಂಬಂಧ
ಜೋಡಿಸಿದ ನಂತರ ಶಾಂತಿಯ ಅನುಭವ ಮಾಡಿಸಿರಿ. ಪ್ರೇಮ ಸ್ವರೂಪ ಮತ್ತು ಶಾಂತಿ ಸ್ವರೂಪ ಎರಡರ
ಬ್ಯಾಲೆನ್ಸ್ಯಿರಲಿ.