30.11.24         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ - ತಂದೆಯನ್ನು ಪ್ರತ್ಯಕ್ಷ ಮಾಡಬೇಕು, ಅದಕ್ಕಾಗಿ ಮನ್ಮತವನ್ನು ಬಿಟ್ಟು ಶ್ರೀಮತದಂತೆ ನಡೆಯಿರಿ, ಆಗ ತಂದೆಯನ್ನು ಪ್ರತ್ಯಕ್ಷ ಮಾಡಲು ಸಾಧ್ಯ”

ಪ್ರಶ್ನೆ:
ಯಾವ ಮಕ್ಕಳ ರಕ್ಷಣೆಯನ್ನು ತಂದೆಯು ಅವಶ್ಯವಾಗಿ ಮಾಡಿಯೇ ಮಾಡುತ್ತಾರೆ?

ಉತ್ತರ:
ಯಾವ ಮಕ್ಕಳು ಸತ್ಯವಾಗಿದ್ದಾರೆಯೋ ಅವರ ರಕ್ಷಣೆಯು ಅವಶ್ಯವಾಗಿ ಆಗುತ್ತದೆ. ಒಂದುವೇಳೆ ರಕ್ಷಣೆಯಾಗುತ್ತಿಲ್ಲವೆಂದರೆ ಆಂತರ್ಯದಲ್ಲಿ ಒಂದಲ್ಲ ಒಂದು ಸುಳ್ಳು ಅಗತ್ಯವಾಗಿ ಇರುತ್ತದೆ. ಮುರಳಿಗೆ ತಪ್ಪಿಸಿಕೊಳ್ಳುವುದು, ಸಂಶಯದಲ್ಲಿ ಬರುವುದೆಂದರೆ ಆಂತರ್ಯದಲ್ಲಿ ಅಲ್ಪಸ್ವಲ್ಪ ಸುಳ್ಳಿದೆ ಎಂದರ್ಥ. ಅಂತಹವರ ಮೇಲೆ ಮಾಯೆಯು ಗುರಿಯಿಡುತ್ತದೆ.

ಪ್ರಶ್ನೆ:
ಯಾವ ಮಕ್ಕಳಿಗಾಗಿ ಮಾಯೆಯು ಆಯಸ್ಕಾಂತವಾಗಿದೆ?

ಉತ್ತರ:
ಯಾರು ಮಾಯೆಯ ಸುಂದರತೆಯಕಡೆ ಆಕರ್ಷಿತರಾಗುತ್ತಾರೆ, ಅಂತಹವರಿಗಾಗಿ ಮಾಯೆಯು ಆಯಸ್ಕಾಂತವಾಗಿದೆ. ಶ್ರೀಮತದಂತೆ ನಡೆಯುವ ಮಕ್ಕಳು ಆಕರ್ಷಿತರಾಗುವುದಿಲ್ಲ.

ಓಂ ಶಾಂತಿ.
ಆತ್ಮಿಕ ತಂದೆಯು ಕುಳಿತು ಆತ್ಮಿಕ ಮಕ್ಕಳಿಗೆ ತಿಳಿಸುತ್ತಾರೆ, ಇದನ್ನಂತೂ ನಿಶ್ಚಯ ಮಾಡಿಕೊಂಡಿದ್ದೀರಿ - ಆತ್ಮಿಕ ತಂದೆಯು ಆತ್ಮಿಕ ಮಕ್ಕಳಿಗೆ ಓದಿಸುತ್ತಾರೆ. ಅದಕ್ಕಾಗಿಯೇ ಆತ್ಮಗಳು ಪರಮಾತ್ಮನಿಂದ ಬಹಳಕಾಲ ಅಗಲಿದ್ದರೆಂಬ ಗಾಯನವಿದೆ....... ಮೂಲವತನದಲ್ಲಿದ್ದಾಗ ಅಗಲುವುದಿಲ್ಲ. ಅಲ್ಲಿ ಎಲ್ಲರೂ ಜೊತೆಯಲ್ಲಿರುತ್ತಾರೆ. ಬೇರೆಯಾಗುವುದೆಂದರೆ ಅವಶ್ಯವಾಗಿ ಅಲ್ಲಿಂದ ಅಗಲಿಹೋಗುವುದು, ಇಲ್ಲಿಗೆ ಬಂದು ತಮ್ಮ-ತಮ್ಮ ಪಾತ್ರವನ್ನಭಿನಯಿಸುತ್ತಾರೆ. ಸತೋಪ್ರಧಾನದಿಂದ ಇಳಿಯುತ್ತಾ-ಇಳಿಯುತ್ತಾ ತಮೋಪ್ರಧಾನರಾಗುತ್ತಾರೆ ಆದ್ದರಿಂದ ಪತಿತ-ಪಾವನ ಬಂದು ನಮ್ಮನ್ನು ಪಾವನ ಮಾಡು ಎಂದು ಕರೆಯುತ್ತಾರೆ. ತಂದೆಯೂ ಸಹ ಹೇಳುತ್ತಾರೆ - ನಾನು ಪ್ರತೀ 5000 ವರ್ಷಗಳ ನಂತರ ಬರುತ್ತೇನೆ. ಈ ಸೃಷ್ಟಿಚಕ್ರ 5000 ವರ್ಷಗಳದ್ದಾಗಿದೆ. ನೀವು ಮೊದಲು ಇದನ್ನು ತಿಳಿದುಕೊಂಡಿರಲಿಲ್ಲ. ಶಿವತಂದೆಯು ತಿಳಿಸುತ್ತಿದ್ದಾರೆಂದಾಗ ಅವಶ್ಯವಾಗಿ ಯಾರದಾದರೂ ತನುವಿನ ಮೂಲಕವೇ ತಿಳಿಸುತ್ತಾರೆ. ಮೇಲಿನಿಂದ ಯಾವುದೇ ರೀತಿಯ ಆಕಾಶವಾಣಿ (ಅಶರೀರಿವಾಣಿ) ಯಿಂದ ಹೇಳುವುದಿಲ್ಲ. ಶಕ್ತಿ ಅಥವಾ ಪ್ರೇರಣೆ ಮೊದಲಾದ ಯಾವುದೇ ಮಾತಿಲ್ಲ. ನೀವಾತ್ಮಗಳು ಶರೀರದಲ್ಲಿ ಬಂದು ವಾರ್ತಾಲಾಪ ಮಾಡುತ್ತೀರಿ ಹಾಗೆಯೇ ತಂದೆಯೂ ಸಹ ತಿಳಿಸುತ್ತಾರೆ - ನಾನು ಈ ಶರೀರದ ಮೂಲಕ ಸಲಹೆ ನೀಡುತ್ತೇನೆ ನಂತರ ಅದರಂತೆಯೇ ಯಾರು ನಡೆಯುತ್ತಾರೆಯೋ ಅವರು ತಮ್ಮ ಕಲ್ಯಾಣವನ್ನು ಮಾಡಿಕೊಳ್ಳುತ್ತಾರೆ. ಶ್ರೀಮತದಂತೆ ನಡೆಯುವುದು ಅಥವಾ ನಡೆಯದೇ ಇರುವುದು, ಶಿಕ್ಷಕನ ಮಾತನ್ನು ಕೇಳುವುದು ಅಥವಾ ಕೇಳದೇ ಇರುವುದು, ಇದು ತಮಗಾಗಿ ಕಲ್ಯಾಣ ಅಥವಾ ಅಕಲ್ಯಾಣ ಮಾಡಿಕೊಳ್ಳುವುದಾಗಿದೆ. ಓದದೇ ಇದ್ದಾಗ ಅಗತ್ಯವಾಗಿ ಅನುತ್ತೀರ್ಣರಾಗುತ್ತಾರೆ. ತಂದೆಯು ಇದನ್ನೂ ಸಹ ತಿಳಿಸುತ್ತಾರೆ - ಶಿವತಂದೆಯಿಂದ ಕಲಿತು ನಂತರ ಅನ್ಯರಿಗೆ ಕಲಿಸಬೇಕು. ಫಾದರ್ ಶೋಜ್ ಸನ್ (ತಂದೆಯ ಪ್ರತ್ಯಕ್ಷತೆ) ಮಾಡಬೇಕು. ಇಲ್ಲಿ ಶರೀರದ ಮಾತಲ್ಲ. ಇವರು ಆತ್ಮಿಕ ತಂದೆಯಾಗಿದ್ದಾರೆ. ಎಷ್ಟು ನಾವು ಶ್ರೀಮತದಂತೆ ನಡೆಯುತ್ತೇವೆಯೋ ಅಷ್ಟು ಆಸ್ತಿಯನ್ನು ಪಡೆಯುತ್ತೇವೆಂದು ನೀವು ತಿಳಿದುಕೊಂಡಿದ್ದೀರಿ. ಸಂಪೂರ್ಣವಾಗಿ ನಡೆಯುವುದರಿಂದ ಶ್ರೇಷ್ಠ ಪದವಿಯನ್ನು ಪಡೆಯುತ್ತಾರೆ, ನಡೆಯದೇ ಇರುವವರು ಶ್ರೇಷ್ಠಪದವಿಯನ್ನು ಪಡೆಯುವುದಿಲ್ಲ. ತಂದೆಯಂತೂ ತಿಳಿಸುತ್ತಾರೆ - ನನ್ನನ್ನು ನೆನಪು ಮಾಡಿದಾಗ ನಿಮ್ಮ ಪಾಪಗಳು ಮುರಿಯುತ್ತದೆ. ರಾವಣರಾಜ್ಯದಲ್ಲಿ ನಿಮ್ಮ ಪಾಪಗಳು ಏರಿವೆ, ವಿಕಾರದಲ್ಲಿ ಹೋಗುವುದರಿಂದ ಪಾಪಾತ್ಮರಾಗುತ್ತೀರಿ. ಪುಣ್ಯಾತ್ಮ ಹಾಗೂ ಪಾಪಾತ್ಮ ಅಗತ್ಯವಾಗಿ ಆಗುತ್ತಾರೆ, ಪುಣ್ಯಾತ್ಮರ ಮುಂದೆ ಪಾಪಾತ್ಮರು ಹೋಗಿ ತಲೆಬಾಗುತ್ತಾರೆ. ಮನುಷ್ಯರಿಗೆ ದೇವತೆಗಳು ಪುಣ್ಯಾತ್ಮರಾಗಿದ್ದಾರೆ, ಅವರೇ ನಂತರ ಪುನರ್ಜನ್ಮದಲ್ಲಿ ಬರುತ್ತಾ-ಬರುತ್ತಾ ಪಾಪಾತ್ಮರಾಗುತ್ತಾರೆಂದು ತಿಳಿದಿಲ್ಲ. ಅವರು ಸದಾ ಪುಣ್ಯಾತ್ಮರಾಗಿಯೇ ಇರುತ್ತಾರೆಂದು ತಿಳಿದಿರುತ್ತಾರೆ. ತಂದೆಯು ತಿಳಿಸುತ್ತಾರೆ - ಪುನರ್ಜನ್ಮವನ್ನು ತೆಗೆದುಕೊಳ್ಳುತ್ತಾ-ತೆಗೆದುಕೊಳ್ಳುತ್ತಾ ಸತೋಪ್ರಧಾನದಿಂದ ತಮೋಪ್ರಧಾನದವರೆಗೆ ಬರುತ್ತಾರೆ. ಯಾವಾಗ ಸಂಪೂರ್ಣ ಪಾಪಾತ್ಮರಾಗಿಬಿಡುತ್ತಾರೆಯೋ ಆಗ ತಂದೆಯನ್ನು ಕರೆಯುತ್ತಾರೆ. ಪುಣ್ಯಾತ್ಮರಾಗಿದ್ದಾಗ ನೆನಪು ಮಾಡುವ ಅವಶ್ಯಕತೆಯಿಲ್ಲ. ಇದನ್ನು ನೀವು ಮಕ್ಕಳು ತಿಳಿಸಿಕೊಡಬೇಕು, ಸೇವೆಯನ್ನೂ ಮಾಡಬೇಕು. ತಂದೆ (ಬ್ರಹ್ಮಾ) ಯಂತೂ ಹೋಗಿ ಎಲ್ಲರಿಗೂ ತಿಳಿಸುವುದಿಲ್ಲ. ಮಕ್ಕಳು ಸೇವೆಗೆ ಯೋಗ್ಯರಿದ್ದೀರಿ ಅಂದಾಗ ಮಕ್ಕಳೇ ಹೋಗಬೇಕಾಗುತ್ತದೆ. ಮನುಷ್ಯರಂತೂ ದಿನೇ-ದಿನೇ ಅಸುರರಾಗುತ್ತಾ ಹೋಗುತ್ತಾರೆ. ಅರಿವಿಲ್ಲದ ಕಾರಣ ವ್ಯರ್ಥಮಾಡುವುದರಲ್ಲಿ ತಡಮಾಡುವುದಿಲ್ಲ. ಗೀತೆಯ ಭಗವಂತ ಕೃಷ್ಣನೆಂದು ಮನುಷ್ಯರು ಹೇಳುತ್ತಾರೆ. ನೀವು ಹೇಳುತ್ತೀರಿ - ಕೃಷ್ಣನು ದೇಹಧಾರಿಯಾಗಿದ್ದಾನೆ, ಅವನಿಗೆ ದೇವತೆಯೆಂದು ಕರೆಯಲಾಗುತ್ತದೆ, ಕೃಷ್ಣನಿಗೆ ತಂದೆಯೆಂದು ಕರೆಯುವುದಿಲ್ಲ. ಇಲ್ಲಿ ಎಲ್ಲರೂ ತಂದೆಯನ್ನು ನೆನಪು ಮಾಡುತ್ತಾರಲ್ಲವೆ! ಆತ್ಮಗಳ ತಂದೆಯಂತೂ ಬೇರೆ ಯಾರೂ ಇರಲಾಗುವುದಿಲ್ಲ. ಈ ಪ್ರಜಾಪಿತ ಬ್ರಹ್ಮನೂ ಸಹ ಹೇಳುತ್ತಾರೆ - ನಿರಾಕಾರ ತಂದೆಯನ್ನು ನೆನಪು ಮಾಡಬೇಕು. ಇವರು (ಬ್ರಹ್ಮಾ) ಸಹ ಸಾಕಾರತಂದೆಯಾಗುತ್ತಾರೆ. ತುಂಬಾ ತಿಳಿಸಿಕೊಡಲಾಗುತ್ತದೆ, ಆದರೆ ಕೆಲವು ಮಕ್ಕಳು ತಿಳಿದುಕೊಳ್ಳದಕಾರಣ ಉಲ್ಟಾಮಾರ್ಗವನ್ನು ಹಿಡಿದು ಕಾಡಿನಲ್ಲಿ (ಹಳೆಯ ಪ್ರಪಂಚ) ಹೋಗಿ ಬೀಳುತ್ತಾರೆ. ತಂದೆಯಂತೂ ಸ್ವರ್ಗದಲ್ಲಿ ಹೋಗುವ ಮಾರ್ಗವನ್ನು ತಿಳಿಸುತ್ತಾರೆ. ನಂತರವೂ ಸಹ ಕಾಡಿನಕಡೆ ಹೋಗಿಬಿಡುತ್ತಾರೆ. ತಂದೆಯು ತಿಳಿಸುತ್ತಾರೆ - ನಿಮ್ಮನ್ನು ಕಾಡಿನಕಡೆ ಕರೆದೊಯ್ಯುವವನು ರಾವಣನಾಗಿದ್ದಾನೆ, ನೀವು ಮಾಯೆಗೆ ಸೋಲುತ್ತೀರಿ. ಮಾರ್ಗವನ್ನು ಮರೆತುಹೋದಾಗ ಆ ಕಾಡಿನ ಮುಳ್ಳಾಗಿಬಿಡುತ್ತೀರಿ. ಅಂತಹವರು ಸ್ವರ್ಗದಲ್ಲಿ ತಡವಾಗಿ ಬರುತ್ತಾರೆ. ಸ್ವರ್ಗದಲ್ಲಿ ಹೋಗುವ ಪುರುಷಾರ್ಥ ಮಾಡುವ ಸಲುವಾಗಿಯೇ ನೀವಿಲ್ಲಿಗೆ ಬಂದಿದ್ದೀರಿ. ತ್ರೇತಾಯುಗವನ್ನೂ ಸಹ ಸ್ವರ್ಗವೆಂದು ಕರೆಯುವುದಿಲ್ಲ ಏಕೆಂದರೆ ಶೇ. 25 ಕಡಿಮೆಯಾಯಿತಲ್ಲವೆ. ಅವರು ಅನುತ್ತೀರ್ಣದ ಲೆಕ್ಕದಲ್ಲಿ ಬರುತ್ತಾರೆ. ಹಳೆಯ ಪ್ರಪಂಚವನ್ನು ಬಿಟ್ಟು ಹೊಸ ಪ್ರಪಂಚಕ್ಕೆ ಹೋಗುವ ಸಲುವಾಗಿಯೇ ನೀವಿಲ್ಲಿಗೆ ಬಂದಿದ್ದೀರಿ. ತ್ರೇತಾಯುಗಕ್ಕೆ ಹೊಸ ಪ್ರಪಂಚವೆಂದು ಹೇಳುವುದಿಲ್ಲ. ಇಲ್ಲಿ ಅನುತ್ತೀರ್ಣರಾದವರು ತ್ರೇತಾಯುಗಕ್ಕೆ ಹೋಗಿಬಿಡುತ್ತಾರೆ ಏಕೆಂದರೆ ತಂದೆಯ ಮಾರ್ಗದಂತೆ ಸರಿಯಾಗಿ ನಡೆದುಕೊಳ್ಳುವುದಿಲ್ಲ, ಏರುಪೇರಿನಲ್ಲಿ ಬರುತ್ತಾರೆ. ಯಾವ ರೀತಿ ನೆನಪಿನಲ್ಲಿರಬೇಕು ಆ ರೀತಿ ಇಲ್ಲವೆಂಬ ಅನುಭವವನ್ನೂ ಮಾಡುತ್ತೀರಿ. ಸ್ವರ್ಗವಾಸಿಯಾಗುವವರಿಗೆ ಒಳ್ಳೆಯ ರೀತಿಯಲ್ಲಿ ತೇರ್ಗಡೆಯಾದವರೆಂದು ಹೇಳುತ್ತಾರೆ. ತ್ರೇತಾಯುಗದವರು ಅನುತ್ತೀರ್ಣದ ಲೆಕ್ಕದಲ್ಲಿ ಬರುತ್ತಾರೆ. ನೀವು ನರಕವಾಸಿಯಿಂದ ಸ್ವರ್ಗವಾಸಿಗಳಾಗುತ್ತೀರಿ. ಇಲ್ಲವೆಂದರೆ ನಂತರ ಅನುತ್ತೀರ್ಣವೆಂದು ಕರೆಯಲಾಗುವುದು. ಆ (ಲೌಕಿಕ) ವಿದ್ಯೆಯಂತೂ ಎರಡನೆ ಬಾರಿಯೂ ಓದುತ್ತಾರೆ ಆದರೆ ಇಲ್ಲಿ ಎರಡನೆ ವರ್ಷ ಓದುವ ಮಾತೇ ಇಲ್ಲ. ಯಾರು ಕಲ್ಪದ ಹಿಂದೆ ಉತ್ತೀರ್ಣರಾಗಿದ್ದಾರೆಯೋ ಅವರೇ ಜನ್ಮ-ಜನ್ಮಾಂತರ, ಕಲ್ಪ-ಕಲ್ಪಾಂತರ ಈ ಪರೀಕ್ಷೆಯಲ್ಲಿ ಪಾಸಾಗುತ್ತಾರೆ. ಈ ನಾಟಕದ ರಹಸ್ಯವನ್ನು ಚೆನ್ನಾಗಿ ತಿಳಿದುಕೊಳ್ಳಬೇಕು. ಕೆಲವರು ನಾವು ನಡೆಯಲು ಆಗುವುದಿಲ್ಲವೆಂದು ತಿಳಿದುಕೊಳ್ಳುತ್ತಾರೆ. ವೃದ್ಧರಾಗಿದ್ದಾಗ ಅಂತಹವರನ್ನು ಕೈಹಿಡಿದು ನಡೆಸಿದಾಗ ನಡೆಯುತ್ತಾರೆ ಇಲ್ಲವೆಂದರೆ ಬಿದ್ದುಬಿಡುತ್ತಾರೆ ಆದರೆ ಅದೃಷ್ಟದಲ್ಲಿಲ್ಲವೆಂದರೆ ಹೂವಾಗಲು ಎಷ್ಟೇ ಶಕ್ತಿಕೊಟ್ಟರೂ ಹೂವಾಗುವುದಿಲ್ಲ. ಎಕ್ಕದ ಹೂ ಸಹ ಹೂವಾಗಿದೆ, ಆದರೆ ಅವರು ಮುಳ್ಳು ಚುಚ್ಚುತ್ತಾರೆ (ದುಃಖವನ್ನೇ ಕೊಡುತ್ತಾರೆ).

ತಂದೆಯು ಎಷ್ಟೊಂದು ತಿಳಿಸುತ್ತಾರೆ. ನೆನ್ನೆ ನೀವು ಯಾವ ಶಿವನನ್ನು ಪೂಜೆ ಮಾಡುತ್ತಿದ್ದಿರಿ ಅವರೇ ಇಂದು ಓದಿಸುತ್ತಿದ್ದಾರೆ. ಪ್ರತಿಯೊಂದು ಮಾತಿನಲ್ಲಿ ಪುರುಷಾರ್ಥಕ್ಕಾಗಿ ಒತ್ತುಕೊಡಲಾಗುತ್ತದೆ. ಮಾಯೆಯು ಒಳ್ಳೊಳ್ಳೆಯ ಹೂಗಳನ್ನು ಕೆಳಗಡೆ ಬೀಳಿಸುವುದನ್ನು ನೋಡಲಾಗುವುದು, ಮೂಳೆಯನ್ನೇ ಮುರಿದುಬಿಡುತ್ತದೆ, ಅಂತಹವರನ್ನು ನಂತರ ಪದವಿದ್ರೋಹಿಗಳೆಂದು ಹೇಳಲಾಗುವುದು. ಯಾರು ಒಂದುರಾಜಧಾನಿಯನ್ನು ಬಿಟ್ಟು ಇನ್ನೊಂದು ರಾಜಧಾನಿಗೆ ಹೊರಟುಹೋಗುತ್ತಾರೆಯೋ ಅವರಿಗೆ ದ್ರೋಹಿಗಳೆಂದು ಹೇಳಲಾಗುತ್ತದೆ. ಹಾಗೆಯೇ ತಂದೆಯು ತಿಳಿಸುತ್ತಾರೆ - ನನ್ನ ಮಕ್ಕಳಾಗಿ ಯಾರು ಮಾಯೆಗೆ ವಶರಾಗಿಬಿಡುತ್ತಾರೆಯೋ ಅವರಿಗೂ ದ್ರೋಹಿಗಳೆಂದು ಹೇಳಲಾಗುವುದು. ಅವರ ನಡತೆಯೂ ಹಾಗೆಯೇ ಆಗಿಬಿಡುತ್ತದೆ. ಈಗ ತಂದೆಯು ನಿಮ್ಮನ್ನು ಮಾಯೆಯಿಂದ ಬಿಡಿಸಲು ಬಂದಿದ್ದಾರೆ. ಮಕ್ಕಳು ಹೇಳುತ್ತಾರೆ - ಮಾಯೆಯು ಬಹಳ ಬಲಶಾಲಿಯಾಗಿದೆ, ತನ್ನಕಡೆ ಬಹಳ ಸೆಳೆದುಬಿಡುತ್ತಾರೆ. ಮಾಯೆಯು ಹೇಗೆ ಆಯಸ್ಕಾಂತವಾಗಿದೆ! ಈ ಸಮಯದಲ್ಲಿ ಅದು ಆಯಸ್ಕಾಂತದ ರೂಪವನ್ನು ಧರಿಸುತ್ತದೆ. ಪ್ರಪಂಚದಲ್ಲಿ ಎಷ್ಟೊಂದು ಸುಂದರತೆಯು ಎಷ್ಟೊಂದು ಹೆಚ್ಚಾಗಿಬಿಟ್ಟಿದೆ. ಮೊದಲು ಸಿನಿಮಾ ಮೊದಲಾದುವುಗಳು ಇತ್ತೇನು! ಇದೆಲ್ಲವೂ 100 ವರ್ಷಗಳಿಂದ ತಯಾರಾಗಿವೆ. ತಂದೆ (ಬ್ರಹ್ಮಾ) ಯಂತೂ ಅನುಭವಿಯಲ್ಲವೆ! ಪ್ರತಿಯೊಂದು ಮಾತುಗಳು ನಿಖರವಾಗಿ ನೊಂದಾಯಿತವಾಗಿದೆ ಆದುದರಿಂದ ಮಕ್ಕಳು ಈ ನಾಟಕದ ಗುಹ್ಯರಹಸ್ಯವನ್ನು ಬಹಳ ಚೆನ್ನಾಗಿ ತಿಳಿದುಕೊಳ್ಳಬೇಕಾಗಿದೆ. 100 ವರ್ಷಗಳಲ್ಲಿ ಅಜಗಜಾಂತರ ವ್ಯತ್ಯಾಸದಲ್ಲಿ ಸ್ವರ್ಗದಂತೆ ಆಗಿಬಿಟ್ಟಿದೆ! ಆದುದರಿಂದ ಈಗ ಸ್ವರ್ಗವು ಇನ್ನೂ ಶೀಘ್ರವಾಗಿ ಆಗಲಿದೆ. ಈ ವಿಜ್ಞಾನವೂ ಬಹಳ ಉಪಯೋಗಕ್ಕೆ ಬರುತ್ತದೆ. ಇದೂ ಸಹ ತುಂಬಾ ಸುಖ ಕೊಡುವಂತಹದಾಗಿದೆಯಲ್ಲವೆ. ಆ ಸುಖವು ಸದಾಕಾಲಕ್ಕಾಗಿ ಉಳಿಯಲು ಈ ಹಳೆಯಪ್ರಪಂಚದ ವಿನಾಶವೂ ಸಹ ಆಗಬೇಕು. ಭಾರತದ ಭಾಗ್ಯದಲ್ಲಿ ಸತ್ಯಯುಗದ ಸುಖವಿದೆ. ಉಳಿದವರು ನಂತರ ಯಾವಾಗ ಭಕ್ತಿಮಾರ್ಗವು ಪ್ರಾರಂಭವಾಗುತ್ತದೆಯೋ ಆಗ ಬರುತ್ತಾರೆ. ಭಾರತವಾಸಿಗಳು ಇಳಿಯುವಾಗ ಅನ್ಯಧರ್ಮದವರು ನಂಬರ್ವಾರ್ ಆಗಿ ಬರುತ್ತಾರೆ. ಭಾರತವು ಇಳಿಯುತ್ತಾ-ಇಳಿಯುತ್ತಾ ಒಂದೇಸಾರಿ ಕೆಳಗೆ ಬಂದುಬಿಟ್ಟಿದೆ ನಂತರ ಹತ್ತಬೇಕು. ಇಲ್ಲಿಯೂ ಸಹ ಏರುತ್ತೀರಿ ನಂತರ ಇಳಿಯುತ್ತೀರಿ. ಎಷ್ಟೊಂದು ಇಳಿಯುತ್ತಾರೆಂದರೆ ಕೇಳಲೇಬೇಡಿ. ಕೆಲವರಂತೂ ತಂದೆಯೇ ಓದಿಸುತ್ತಾರೆಂದು ಒಪ್ಪುವುದೇ ಇಲ್ಲ. ಒಳ್ಳೊಳ್ಳೆಯ ಸೇವಾಧಾರಿ ಮಕ್ಕಳನ್ನು ತಂದೆಯೂ ಸಹ ಮಹಿಮೆ ಮಾಡುತ್ತಿದ್ದರು, ಅಂತಹ ಮಕ್ಕಳೇ ಮಾಯೆಯ ಮುಷ್ಟಿಯಲ್ಲಿ ಬಂದುಬಿಡುತ್ತಾರೆ. ಕುಸ್ತಿ ನಡೆಯುತ್ತದೆಯಲ್ಲವೆ! ಮಾಯೆಯು ಒಂದೇ ಸಾರಿ ಬೀಳಿಸಿಬಿಡುತ್ತದೆ ನಂತರವೂ ತಂದೆಯು ತಿಳಿಸುತ್ತಾರೆ - ಒಮ್ಮೆ ಜ್ಞಾನ ಕೇಳಿದರೂ ಸ್ವರ್ಗದಲ್ಲಿ ಖಂಡಿತ ಬರುತ್ತಾರೆ ಆದರೆ ಉತ್ತಮ ಪದವಿಯನ್ನು ಪಡೆಯುವುದಿಲ್ಲ. ಕಲ್ಪದ ಹಿಂದೆ ಯಾರು ಏನು ಪುರುಷಾರ್ಥ ಮಾಡಿದ್ದರೋ ಅಥವಾ ಪುರುಷಾರ್ಥ ಮಾಡುತ್ತಾ-ಮಾಡುತ್ತಾ ಬಿದ್ದಿರುತ್ತಾರೆ, ಅದೇ ರೀತಿ ಈಗಲೂ ಬೀಳುತ್ತಾ-ಏಳುತ್ತಿರುತ್ತಾರೆ. ಸೋಲು-ಗೆಲುವು ಆಗುತ್ತಿರುತ್ತದೆಯಲ್ಲವೆ! ಮಕ್ಕಳ ನೆನಪಿನ ಮೇಲೆ ಎಲ್ಲವೂ ಆಧಾರಿತವಾಗಿದೆ. ಮಕ್ಕಳಿಗೆ ಈ ಅಪಾರವಾದ ಖಜಾನೆಯು ಸಿಗುತ್ತದೆ. ಅಲ್ಲಂತೂ ಎಷ್ಟೊಂದು ಲಕ್ಷಾಂತರ ರೂಪಾಯಿಗಳಲ್ಲಿ ದಿವಾಳಿಯಾಗುತ್ತಾರೆ. ಕೆಲವರು ಕೇವಲ ಒಂದುಜನ್ಮಕ್ಕಾಗಿ ಲಕ್ಷಾಂತರ ರೂಪಾಯಿಗಳ ಶ್ರೀಮಂತರಾಗುತ್ತಾರೆ. ಮುಂದಿನ ಜನ್ಮದಲ್ಲಿ ಏನಾದರೂ ಇಷ್ಟೊಂದು ಹಣವಿರುತ್ತದೆಯೇನು! ಕರ್ಮಭೋಗವೂ ಬಹಳ ಇರುತ್ತದೆ. ಸ್ವರ್ಗದಲ್ಲಿ ಕರ್ಮಭೋಗದ ಮಾತಿರುವುದಿಲ್ಲ. ಈ ಸಮಯದಲ್ಲಿ ನೀವು 21 ಜನ್ಮಗಳಿಗಾಗಿ ಎಷ್ಟೊಂದು ಜಮಾ ಮಾಡಿಕೊಳ್ಳುತ್ತೀರಿ. ಯಾರು ಪೂರ್ಣ ಪುರುಷಾರ್ಥ ಮಾಡುತ್ತಾರೆಯೋ ಅವರು ಸಂಪೂರ್ಣ ಸ್ವರ್ಗದ ಆಸ್ತಿಯನ್ನು ಪಡೆಯುತ್ತಾರೆ. ನಾವು ಅವಶ್ಯವಾಗಿ ಸ್ವರ್ಗದ ಆಸ್ತಿಯನ್ನು ಪಡೆಯುತ್ತೇವೆಂದು ಬುದ್ಧಿಯಲ್ಲಿರಬೇಕಾಗಿದೆ. ನಾವು ನಂತರ ಕೆಳಗಡೆ ಇಳಿಯುತ್ತೇವೆಂದು ಯೋಚಿಸಬಾರದು. ಈಗ ಯಾರು ಎಲ್ಲರಿಗಿಂತ ಕೆಳಗಡೆ ಇಳಿದಿದ್ದಾರೆಯೋ ಅವರೇ ಏರಬೇಕಾಗಿದೆ. ಹೀಗೆ ತಾನಾಗಿಯೇ ಪುರುಷಾರ್ಥ ಆಗುತ್ತಿರುತ್ತದೆ. ತಂದೆಯು ತಿಳಿಸುತ್ತಾರೆ - ನೋಡಿ, ಮಾಯೆಯು ಎಷ್ಟೊಂದು ಬಲಶಾಲಿಯಾಗಿದೆ, ಮನುಷ್ಯರಲ್ಲಿ ಎಷ್ಟೊಂದು ಅಜ್ಞಾನ ತುಂಬಿದೆ. ಅಜ್ಞಾನವು ತುಂಬಿರುವಕಾರಣ ಪರಮಾತ್ಮನನ್ನು ಸರ್ವವ್ಯಾಪಿಯೆಂದುಹೇಳಿಬಿಟ್ಟಿದ್ದಾರೆ. ಭಾರತವು ಎಷ್ಟೊಂದು ಚೆನ್ನಾಗಿತ್ತು, ನಾವು ಈ ರೀತಿ (ದೇವತೆ) ಇದ್ದವರು ಮತ್ತೆ ಹೀಗೆ ಆಗುತ್ತಿದ್ದೇವೆಂದು ತಿಳಿದಿದ್ದೀರಿ. ಈ ದೇವತೆಗಳಿಗೆ ಎಷ್ಟೊಂದು ಮಹಿಮೆಯಿದೆ ಆದರೆ ನೀವು ಮಕ್ಕಳ ವಿನಃ ಬೇರೆ ಯಾರೂ ತಿಳಿದುಕೊಂಡಿಲ್ಲ. ಬೇಹದ್ದಿನ ತಂದೆಯು ಜ್ಞಾನಸಾಗರ ಬಂದು ನಮಗೆ ಓದಿಸುತ್ತಿದ್ದಾರೆ ಆದರೂ ಮಾಯೆಯು ಅನೇಕರನ್ನು ಸಂಶಯದಲ್ಲಿ ತಂದುಬಿಡುತ್ತದೆ, ಸುಳ್ಳು-ಕಪಟವನ್ನು ಬಿಡುವುದೇ ಇಲ್ಲ ಎಂದು ನೀವೇ ತಿಳಿದುಕೊಂಡಿದ್ದೀರಿ. ಆಕಾರಣ ತಂದೆಯು ಹೇಳುತ್ತಾರೆ - ತಮ್ಮ-ತಮ್ಮ ಸತ್ಯ-ಸತ್ಯವಾದ ಚಾರ್ಟನ್ನು ಬರೆಯಿರಿ. ಆದರೆ ದೇಹಾಭಿಮಾನ ಕಾರಣ ಸತ್ಯವನ್ನು ತಿಳಿಸುವುದಿಲ್ಲ ಆದ್ದರಿಂದ ಅದೂ ಸಹ ವಿಕರ್ಮವಾಗಿಬಿಡುತ್ತದೆ. ಸತ್ಯ ಹೇಳಬೇಕಲ್ಲವೆ! ಇಲ್ಲವೆಂದರೆ ತುಂಬಾ ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ. ಗರ್ಭಜೈಲಿನಲ್ಲಿಯೂ ಬಹಳ ಶಿಕ್ಷೆಯು ಸಿಗುತ್ತದೆ, ಅಲ್ಲಿಯೂ ತಪ್ಪಾಯಿತು-ತಪ್ಪಾಯಿತು ಮತ್ತೆ ನಾವು ಇಂತಹ ಕೆಲಸ ಮಾಡುವುದಿಲ್ಲವೆಂದು ಹೇಳುತ್ತಾರೆ. ಯಾವಾಗ ಯಾರಿಗಾದರೂ ಶಿಕ್ಷೆ ಸಿಗುವಾಗ ಆ ರೀತಿ ಹೇಳುತ್ತಾರೆ. ಶಿಕ್ಷೆ ಸಿಕ್ಕಿದರೂ ಸಹ ಹಾಗೆಯೇ ಮಾಡುತ್ತಿರುತ್ತಾರೆ. ಈಗ ನೀವು ಮಕ್ಕಳಿಗೆ ಗೊತ್ತಿದೆ, ಮಾಯೆಯ ರಾಜ್ಯ ಯಾವಾಗಿನಿಂದ ಪ್ರಾರಂಭವಾಯಿತೋ ಆಗಿನಿಂದ ಪಾಪ ಮಾಡುತ್ತಿರುತ್ತಾರೆ. ತಂದೆಯು ನೋಡುತ್ತಾರೆ - ಮಕ್ಕಳು ಇಷ್ಟೊಂದು ನಮ್ರರಾಗುವುದಿಲ್ಲ. ತಂದೆಯು ಎಷ್ಟು ನಮ್ರತೆಯುಳ್ಳ ಮಕ್ಕಳಂತೆ ನಡೆಯುತ್ತಾರೆ ಏಕೆಂದರೆ ನಾಟಕದನುಸಾರ ನಡೆಯುತ್ತಿರುತ್ತಾರೆ. ಆದ್ದರಿಂದ ಏನಾಯಿತೋ ಅದು ನಾಟಕ ಎಂದು ಹೇಳುತ್ತಾರೆ. ಮುಂದೆ ಹೀಗೆ ಆಗಬಾರದು ಎಂದೂ ಸಹ ತಿಳಿಸುತ್ತಾರೆ. ಇಲ್ಲಿ ಬಾಪ್ದಾದಾ ಇಬ್ಬರೂ ಜೊತೆಯಿದ್ದಾರಲ್ಲವೆ! ದಾದಾರವರ ಮತವು ತಮ್ಮದೇ ಆಗಿದೆ, ಈಶ್ವರನ ಮತವು ತಮ್ಮದೇ ಆಗಿದೆ. ಈ ಮತವನ್ನು ಕೊಡುವವರು ಯಾರು ಎಂದೂ ಸಹ ತಿಳಿದುಕೊಳ್ಳಬೇಕಾಗಿದೆ. ಅವರೂ (ಬ್ರಹ್ಮಾ) ಸಹ ತಂದೆಯಾಗಿದ್ದಾರಲ್ಲವೆ. ತಂದೆಗಂತೂ ಮಾನ್ಯತೆ ಕೊಡಬೇಕಾಗಿದೆ. ತಂದೆಯಾದರೂ ಅತೀ ದೊಡ್ಡವರಾಗಿದ್ದಾರೆ ಆದುದರಿಂದ ತಂದೆಯು ಹೇಳುತ್ತಾರೆ - ಸದಾ ಶಿವತಂದೆಯೇ ತಿಳಿಸುತ್ತಾರೆಂದು ತಿಳಿದುಕೊಳ್ಳಿ. ತಿಳಿದುಕೊಳ್ಳದಿದ್ದರೆ ಪದವಿಯನ್ನೂ ಸಹ ಪಡೆಯುವುದಿಲ್ಲ. ನಾಟಕದನುಸಾರವಾಗಿ ತಂದೆಯೂ ಇದ್ದಾರೆ, ದಾದಾರವರೂ ಇದ್ದಾರೆ. ತಂದೆಯ ಶ್ರೀಮತವು ಸಿಗುತ್ತದೆ. ಮಾಯೆಯು ಇಂತಹ ಮಹಾವೀರ, ಶಕ್ತಿಶಾಲಿಗಳಿಂದಲೂ ಒಂದಲ್ಲ ಒಂದು ಕರ್ಮವನ್ನು ಮಾಡಿಸಿಬಿಡುತ್ತದೆ. ಆಗ ಇವರು ತಂದೆಯ ಮತದಂತೆ ನಡೆಯುತ್ತಿಲ್ಲವೆಂದು ತಿಳಿಸಲಾಗುತ್ತದೆ. ಸ್ವಯಂ ಸಹ ಅನುಭವ ಮಾಡುತ್ತಾರೆ, ನಾನು ನನ್ನ ಅಸುರೀ ಮತದಂತೆ ಇದ್ದೇನೆ. ಶ್ರೀಮತವನ್ನು ಕೊಡುವಂತಹ ತಂದೆಯು ಇದ್ದಾರೆ, ಅವರದು ಈಶ್ವರೀಯ ಮತವಾಗಿದೆ. ಸ್ವಯಂ ತಂದೆಯು ಹೇಳುತ್ತಾರೆ - ಒಂದುವೇಳೆ ಇವರಿಂದ (ಬ್ರಹ್ಮಾ) ಒಂದುವೇಳೆ ಅಂತಹ ಮತವು ದೊರಕಿದಾಗ ಅದನ್ನು ಸರಿಮಾಡಲು ನಾನು ಕುಳಿತಿದ್ದೇನೆ. ಆದಾಗ್ಯೂ ನಾನು ವ್ರತವನ್ನು ತೆಗೆದುಕೊಂಡಿದ್ದೇನಲ್ಲವೆ. ವ್ರತವನ್ನು ತೆಗೆದುಕೊಂಡಿರುವಕಾರಣ ನಿಂದನೆ ಕೇಳಬೇಕಾಯಿತು, ಇಲ್ಲವೆಂದರೆ ಎಂದಿಗೂ ನಿಂದನೆ ಕೇಳಿದವರೇ ಅಲ್ಲ. ನನ್ನ ಕಾರಣ ಬಹಳ ನಿಂದನೆಯನ್ನು ಕೇಳುತ್ತಾರೆ ಅಂದಾಗ ಇವರನ್ನೂ ಸಹ ಸಂಭಾಲನೆ ಮಾಡಿಕೊಳ್ಳಬೇಕಾಗುತ್ತದೆ. ತಂದೆಯು ಖಂಡಿತವಾಗಿ ರಕ್ಷಿಸುತ್ತಾರೆ. ಹೇಗೆ ತಂದೆಯು ಮಕ್ಕಳ ರಕ್ಷಣೆ ಮಾಡುತ್ತಾರಲ್ಲವೆ. ಎಷ್ಟೆಷ್ಟು ಸತ್ಯತೆಯಿಂದ ನಡೆಯುತ್ತಾರೆಯೋ ಅಷ್ಟು ರಕ್ಷಣೆಯಾಗುತ್ತದೆ. ಸುಳ್ಳಿನ ರಕ್ಷಣೆಯಾಗುವುದಿಲ್ಲ. ಅವರಿಗಂತೂ ಶಿಕ್ಷೆಯೇ ಶಾಶ್ವತವಾಗಿಬಿಡುತ್ತದೆ ಆದ್ದರಿಂದ ತಂದೆಯು ತಿಳಿಸುತ್ತಾರೆ - ಮಾಯೆಯು ಒಮ್ಮೆಲೆ ಮೂಗನ್ನು ಹಿಡಿದುಕೊಂಡು ನಾಶಮಾಡಿಬಿಡುತ್ತದೆ. ಮಾಯೆಯು ತಿಂದು ಬಿಡುವ ಕಾರಣ ವಿದ್ಯೆಯನ್ನು ಬಿಟ್ಟುಬಿಡುತ್ತಾರೆಂದರೆ ಮಕ್ಕಳು ಸ್ವಯಂ ಅನುಭವ ಮಾಡುತ್ತಾರೆ. ಅಗತ್ಯವಾಗಿ ವಿದ್ಯೆಯನ್ನು ಓದಬೇಕೆಂದು ತಂದೆಯು ಹೇಳುತ್ತಾರೆ. ಒಳ್ಳೆಯದು- ಎಲ್ಲಾದರೂ ಯಾರದ್ದಾದರೂ ದೋಷವಿದೆಯೆಂದಾಗ, ಯಾರು ಏನು ಮಾಡುತ್ತಾರೆಯೋ ಅದರಂತೆ ಭವಿಷ್ಯದಲ್ಲಿ ಭೋಗಿಸುತ್ತಾರೆ ಏಕೆಂದರೆ ಈಗ ಪ್ರಪಂಚವು ಪರಿವರ್ತನೆಯಾಗುತ್ತಾ ಇದೆ. ಮಾಯೆಯು ಇಂದು ಖುಷಿಯೂ ಇಲ್ಲದಂತೆ ಗುರಿಯನ್ನಿಡುತ್ತದೆ. ನಂತರ ಈ ರೀತಿ ಬೇಡುತ್ತಾರೆ - ಬಾಬಾ, ಏನಾಯಿತೋ ಗೊತ್ತೇ ಇಲ್ಲ. ಯುದ್ಧದ ಮೈದಾನದಲ್ಲಿ ಯಾರಾದರೂ ನಮಗೆ ಗುರಿ ಇಡದಂತೆ ಬಹಳ ಎಚ್ಚರಿಕೆಯಿಂದ ಇರಬೇಕು. ಆದರೂ ಹೆಚ್ಚು ಬಲಶಾಲಿಯಾಗಿರುವವರು ಬೇರೆಯವರನ್ನು ಬೀಳಿಸಿಬಿಡುತ್ತಾರೆ. ಮುಂದಿನ ದಿನಕ್ಕೂ ಯುದ್ಧವನ್ನು ಮುಂದೂಡುತ್ತಾರೆ. ಮಾಯೆಯೊಂದಿಗಿನ ಯುದ್ಧವು ಅಂತ್ಯದವರೆವಿಗೂ ನಡೆಯುತ್ತಿರುತ್ತದೆ, ಏರುಪೇರಾಗುತ್ತಿರುತ್ತದೆ. ಕೆಲವು ಮಕ್ಕಳು ಸತ್ಯವನ್ನು ಹೇಳುತ್ತಾರೆ. ಕೆಲವರು ಏನು ಹೇಳುತ್ತಾರೆಯೋ ಎಂದು ತನ್ನ ಗೌರವಕ್ಕಾಗಿ ಬಹಳ ಭಯಪಡುತ್ತಾರೆ. ಎಲ್ಲಿಯವರೆಗೆ ನೀವು ಸತ್ಯವನ್ನು ತಿಳಿಸುವುದಿಲ್ಲವೋ ಅಲ್ಲಿಯವರೆಗೆ ಮುಂದುವರೆಯಲು ಸಾಧ್ಯವಿಲ್ಲ. ಆಂತರ್ಯದಲ್ಲಿಯೇ ಮನಸ್ಸು ಅಪ್ರಿಯವೆನಿಸುತ್ತದೆ ನಂತರ ಅದೇ ವೃದ್ಧಿಯಾಗುತ್ತಾ ಹೋಗುತ್ತದೆ. ಎಂದೂ ಸಹ ಸತ್ಯವನ್ನು ಹೇಳುವುದಿಲ್ಲ. ಒಂದುವೇಳೆ ಇಬ್ಬರಿದ್ದಾಗ ಈ ರೀತಿ ತಿಳಿಯುತ್ತಾರೆ. ಎರಡನೆಯವರು ತಂದೆಗೆ ಹೇಳಿಬಿಡುವ ಮೊದಲೇ ನಾವೇ ಹೇಳಿಬಿಡೋಣ. ಮಾಯೆಯು ಬಹಳ ಭಯಂಕರವಾಗಿದೆ. ಅವರ ಅದೃಷ್ಠದಲ್ಲಿ ಶ್ರೇಷ್ಠಪದವಿಯಿಲ್ಲದಕಾರಣ ಸರ್ಜನ್ನಿಂದ ಬಚ್ಚಿಟ್ಟುಕೊಳ್ಳುತ್ತಾರೆ, ಬಚ್ಚಿಟ್ಟುಕೊಳ್ಳುವಕಾರಣ ರೋಗವು ಬಿಡುಗಡೆಯಾಗುವುದಿಲ್ಲ. ಎಷ್ಟೆಷ್ಟು ಬಚ್ಚಿಟ್ಟುಕೊಳ್ಳುತ್ತೀರೋ ಅಷ್ಟಷ್ಟು ಬೀಳುತ್ತಲೇ ಇರುತ್ತಾರೆ. ಭೂತವಂತೂ ಎಲ್ಲರಲ್ಲಿಯೂ ಇದೆಯಲ್ಲವೆ. ಎಲ್ಲಿಯವರೆಗೆ ಕರ್ಮಾತೀತರಾಗುವುದಿಲ್ಲವೋ ಅಲ್ಲಿಯವರೆಗೆ ಅಪವಿತ್ರದೃಷ್ಟಿಯನ್ನು ಬಿಡುವುದೇ ಇಲ್ಲ. ಎಲ್ಲದಕ್ಕಿಂತ ದೊಡ್ಡ ಶತ್ರುವು ಕಾಮವಿಕಾರವಾಗಿದೆ, ಅದರಲ್ಲಿಯೇ ಕೆಲವರು ಬೀಳುತ್ತಿರುತ್ತಾರೆ. ತಂದೆಯಂತೂ ಮತ್ತೆ-ಮತ್ತೆ ತಿಳಿಸುತ್ತಾರೆ - ಶಿವತಂದೆಯ ವಿನಃ ಯಾವ ದೇಹಧಾರಿಯನ್ನೂ ನೆನಪು ಮಾಡಬಾರದು. ಕೆಲವರು ಎಂದಿಗೂ ಯಾರನ್ನೂ ನೆನಪು ಮಾಡದೇ ಇರುವಷ್ಟು ಪಕ್ಕಾ ಇದ್ದಾರೆ. ಹೇಗೆ ಪತಿವ್ರತಾ ಸ್ತ್ರೀಯ ಬುದ್ಧಿಯೆಂದೂ ಕೆಟ್ಟಬುದ್ಧಿಯಾಗಿರುವುದಿಲ್ಲ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತಾ ಬಾಪ್ದಾದಾರವರ ನೆನಪು ಪ್ರೀತಿ ಹಾಗೂ ನಮಸ್ತೆ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ನಮಗೆ ಓದಿಸುವವರು ಸ್ವಯಂ ಜ್ಞಾನಸಾಗರ, ಬೇಹದ್ದಿನ ತಂದೆಯಾಗಿದ್ದಾರೆ, ಇದರಲ್ಲಿ ಎಂದಿಗೂ ಸಂಶಯವನ್ನು ತಂದುಕೊಳ್ಳಬಾರದು, ಸುಳ್ಳು-ಕಪಟವನ್ನು ಬಿಟ್ಟು ಸತ್ಯ-ಸತ್ಯವಾದ ಚಾರ್ಟನ್ನು ಇಡಬೇಕು. ದೇಹಾಭಿಮಾನದಲ್ಲಿ ಬಂದು ಎಂದಿಗೂ ಪದವಿ ದ್ರೋಹಿಯಾಗಬಾರದು.

2. ನಾಟಕವನ್ನು ಬುದ್ಧಿಯಲ್ಲಿಟ್ಟುಕೊಂಡು ತಂದೆಯ ಸಮಾನ ಬಹಳ ಮಧುರ ಹಾಗೂ ನಮ್ರರಾಗಿರಬೇಕು, ತಮ್ಮ ಅಹಂಕಾರವನ್ನು ತೋರಿಸಬಾರದು. ತಮ್ಮ ಮತವನ್ನು ಬಿಟ್ಟು ಒಬ್ಬ ತಂದೆಯ ಶ್ರೇಷ್ಠಮತದಂತೆ ನಡೆಯಬೇಕು.

ವರದಾನ:
ಒಬ್ಬ ತಂದೆಯ ಪ್ರೀತಿಯಲ್ಲಿ ಲವಲೀನರಾಗಿ ಗುರಿಯನ್ನು ತಲುಪುವಂತಹ ಸರ್ವ ಆಕರ್ಷಣಾ ಮುಕ್ತ ಭವ.

ಬಾಪ್ದಾದಾ ಮಕ್ಕಳಿಗೆ ತಮ್ಮ ಸ್ನೇಹ ಮತ್ತು ಸಹಯೋಗದ ಮಡಿಲಿನಲ್ಲಿ ಕುಳ್ಳಿರಿಸಿಕೊಂಡು ಗುರಿಯತ್ತ ಕೊಂಡೊಯ್ಯುತ್ತಿದ್ದಾರೆ. ಈ ಮಾರ್ಗ ಪರಿಶ್ರಮದ್ದಲ್ಲ ಆದರೆ ಯಾವಾಗ ಮುಖ್ಯ ಮಾರ್ಗಕ್ಕೆ ಬದಲಾಗಿ ಗಲ್ಲಿಗಳಲ್ಲಿ ಹೋಗಿ ಬಿಡುವಿರಿ ಅಥವಾ ಗುರಿಯಿಂದ ಮುಂದೆ ಹೋಗಿ ಬಿಡುವಿರಿ ಆಗ ಮತ್ತೆ ವಾಪಸ್ಸು ಬರುವಲ್ಲಿ ಪರಿಶ್ರಮ ಪಡಬೇಕಾಗುವುದು. ಪರಿಶ್ರಮದಿಂದ ರಕ್ಷಿಸುವ ಸಾಧನೆಯಾಗಿದೆ ಒಬ್ಬರ ಪ್ರೀತಿಯಲ್ಲಿರಿ. ಒಬ್ಬ ತಂದೆಯ ಪ್ರೀತಿಯಲ್ಲಿರಿ ಒಬ್ಬ ತಂದೆಯ ಪ್ರೀತಿಯಲ್ಲಿ ಲವಲೀನರಾಗಿ ಎಲ್ಲಾ ಕಾರ್ಯ ಮಾಡಿದಿರಾದರೆ ಬೇರೆ ಏನೂ ಕಾಣುವುದಿಲ್ಲ, ಎಲ್ಲಾ ಆಕರ್ಷಣೆಗಳಿಂದ ಮುಕ್ತರಾಗಿ ಬಿಡುವಿರಿ.

ಸ್ಲೋಗನ್:
ತಮ್ಮ ಅದೃಷ್ಠಶಾಲಿಯ ಅನುಭವವನ್ನು ನಿಮ್ಮ ಮುಖ ಮತ್ತು ಚಲನೆಯಿಂದ ಮಾಡಿಸಿ.