31.05.26 Avyakt Bapdada
Kannada
Murli 15.03.2010 Om Shanti Madhuban
“ಪರಮಾತ್ಮನ ಪ್ರೀತಿಗೆ
ಪಾತ್ರ ಆತ್ಮರೆ ದುಃಖಿಗಳಿಗೆ ಸುಖದ ಅಂಚಲಿ ಕೊಡಿ, ವ್ಯರ್ಥವನ್ನು ಸಮಾಪ್ತಿ ಮಾಡಿ ಸಮರ್ಥ ಆಗಿರಿ
ಮತ್ತು ಸಮಯವನ್ನು ಸಮೀಪ ತನ್ನಿರಿ”.
ಇಂದು ಬಾಪ್ದಾದಾ ತಮ್ಮ
ನಾಲ್ಕೂ ಕಡೆಯ ಪರಮಾತ್ಮ ಪ್ರೀತಿಯ ಮಕ್ಕಳನ್ನು ನೋಡುತ್ತಿದ್ದಾರೆ. ಇಂತಹ ಪರಮಾತ್ಮ ಪ್ರಿಯರು
ಕೋಟಿಯಲ್ಲಿ ಕೆಲವು ಮಕ್ಕಳಿದ್ದಾರೆ, ಈ ಸಮಯದಲ್ಲಿಯೇ ಪರಮಾತ್ಮನ ಪ್ರೀತಿಯ ಅನುಭವ ಮಾಡಲು ಸಾಧ್ಯ,
ಇಡೀ ಕಲ್ಪದಲ್ಲಿ ಆತ್ಮರ ಪ್ರೀತಿ, ಮಹಾತ್ಮರ ಪ್ರೀತಿ, ಧರ್ಮಾತ್ಮರ ಪ್ರೀತಿಯ ಅನುಭವ ಮಾಡಿದ್ದೀರಿ
ಆದರೆ ಪರಮಾತ್ಮನ ಪ್ರೀತಿಯ ಅನುಭವ ಈ ಸಂಗಮ ಯುಗದಲ್ಲಿ ಮಾತ್ರ ಸಿಗುತ್ತದೆ, ಅದನ್ನು ನೀವು ಮಕ್ಕಳು
ಈಗ ಅನುಭವ ಮಾಡುತ್ತಿರುವಿರಿ. ನಿಮ್ಮನ್ನು ಯಾರಾದರೂ ಪರಮಾತ್ಮ ಎಲ್ಲಿದ್ದಾರೆ? ಎಂದು ಕೇಳಿದರೆ ಏನು
ಉತ್ತರ ಕೊಡುತ್ತೀರಿ? ನನ್ನ ಜೊತೆಯಲ್ಲಿದ್ದಾರೆ. ನನ್ನ ಜೊತೆಯಲ್ಲಿಯೇ ಇರುತ್ತಾರೆ. ನನ್ನ
ಹೃದಯದಲ್ಲಿಯೇ ಇರುತ್ತಾರೆ. ಈ ರೀತಿ ಅನುಭವ ಮಾಡುತ್ತೀರಿ ಅಲ್ಲವೆ! ನಿಮಗೆ ಮಾತ್ರ ಗೊತ್ತಿದೆ ಮತ್ತು
ಪರಮಾತ್ಮ ನಮ್ಮ ಹೃದಯದಲ್ಲಿರುತ್ತಾರೆ ಎನ್ನುವ ಅನುಭವ ನಿಮಗೆ ಮಾತ್ರ ಇದೆ. ಪರಮಾತ್ಮ ಪ್ರೀತಿಯ ನಶೆ
ನಮಗೆ ಮಾತ್ರ ಅನುಭವ ಮಾಡುವ ಭಾಗ್ಯ ಇದೆ. ಯಾರೊಂದಿಗಾದರೂ ಪ್ರೀತಿ ಉಂಟಾದರೆ ಅದರ ಚಿನ್ಹೆ
ಏನಾಗಿರುತ್ತದೆ? ಅದರ ಚಿನ್ಹೆಯಾಗಿದೆ ಅವರ ಮೇಲೆ ಸಮರ್ಪಣೆ ಆಗುವುದು. ಹಾಗಾದರೆ ಪರಮಪಿತ ಪರಮಾತ್ಮ
ನಿಮ್ಮಿಂದ ಏನು ಬಯಸುತ್ತಾರೆ, ಅದು ನಿಮ್ಮೆಲ್ಲರಿಗೂ ತಿಳಿದಿದೆ. ನನ್ನ ಒಂದೊಂದು ಮಗು ತಂದೆಯ ಸಮಾನ
ಆಗಬೇಕು ಎನ್ನುವ ಇಚ್ಚೆ ನೀವು ಮಾಲೀಕ ಮಕ್ಕಳ ಪ್ರತಿ ಇದೆ. ತಂದೆ ಹಾಗೆಯೇ ಮಕ್ಕಳ ಸ್ಥಿತಿಯೂ
ಶ್ರೇಷ್ಠ ಆಗಬೇಕು. ಆ ಶ್ರೇಷ್ಠ ಸ್ಥಿತಿ ಯಾವುದು? ಸಂಪೂರ್ಣ ಪವಿತ್ರತೆಯ ಸ್ಥಿತಿ. ಎಂತಹ ಪವಿತ್ರತೆ
ಎಂದರೆ ಸ್ವಪ್ನದಲ್ಲಿಯೂ ಅಪವಿತ್ರತೆ ಬರಬಾರದು. ಇಂತಹ ಸಂಪೂರ್ಣ ಪವಿತ್ರತೆಯ ಸ್ಥಿತಿ
ಮಾಡಿಕೊಳ್ಳುತ್ತಿರುವಿರಾ? ಆ ಸಂಪೂರ್ಣ ಪವಿತ್ರತೆಯ ಸ್ಥಿತಿಯಲ್ಲಿ ಅಪವಿತ್ರತೆಯ ಹೆಸರು ಕುರುಹೂ ಸಹ
ಇರುವುದಿಲ್ಲ.
ವರ್ತಮಾನ ಸಮಯ ಸಮೀಪ
ಬರುವ ಕಾರಣ ಬಾಪ್ದಾದಾ ಈಗ ಇದೇ ಸೂಚನೆ ಕೊಡುತ್ತಿದ್ದಾರೆ ಏನೆಂದರೆ ಸಮಯದ ಸಮೀಪತೆಯ ಅನುಸಾರ
ವ್ಯರ್ಥ ಸಂಕಲ್ಪವೂ ಅಪವಿತ್ರತೆಯ ಚಿನ್ಹೆಯಾಗಿದೆ. ಯಾವುದೇ ಅಭಿಮಾನದ ಅಥವಾ ಅಪಮಾನದ ವ್ಯರ್ಥ
ಸಂಕಲ್ಪ ಇಡೀ ದಿನದಲ್ಲಿ ತನ್ನ ಕಡೆ ಸೆಳೆಯಲಿಲ್ಲ ತಾನೇ ಎಂದು ಪರಿಶೀಲನೆ ಮಾಡಿಕೊಳ್ಳಿ. ಏಕೆಂದರೆ
ನಡೆಯುತ್ತಾ ನಡೆಯುತ್ತಾ ತಂದೆ ಕೊಟ್ಟಿರುವ ವಿಶೇಷತೆಯನ್ನು ನನ್ನ ವಿಶೇಷತೆ ಎಂದು ತಿಳಿದು
ಅಭಿಮಾನದಲ್ಲಿ ಬಂದರೆ ಇದೂ ಸಹ ವ್ಯರ್ಥ ಸಂಕಲ್ಪ ಆಯಿತು ಮತ್ತು ನನಗೆ ಎಲ್ಲವೂ ತಿಳಿದಿದೆ, ನಾನು
ಕಡಿಮೆ ಏನಲ್ಲ, ನನ್ನ ಸಂಕಲ್ಪವೇ ಯಥಾರ್ಥವಾಗಿದೆ, ಶ್ರೇಷ್ಠವಾಗಿದೆ ಎನ್ನುವ ನನ್ನತನದ ಅಶುಭ
ಸಂಕಲ್ಪ, ಅಭಿಮಾನದ ಸಂಕಲ್ಪವೂ ಅಪವಿತ್ರತೆಯ ಅಂಶವಾಗಿದೆ. ಆದ್ದರಿಂದ ನನ್ನಲ್ಲಿ ಯಾವ ಅಪವಿತ್ರತೆಯ
ವ್ಯರ್ಥ ಸಂಕಲ್ಪದ ಯಾವ ಅಂಶ ನನ್ನಲ್ಲಿ ಉಳಿದುಕೊಂಡಿಲ್ಲ ತಾನೇ ಎಂದು ಪರಿಶೀಲನೆ ಮಾಡಿಕೊಳ್ಳಿ.
ಏಕೆಂದರೆ ಈಗ ಪವಿತ್ರ ಪ್ರಪಂಚದ ಸ್ಥಾಪನೆಯ ಸಮಯ ಸಮೀಪ ತರುವವರು ನೀವು ಪರಮಾತ್ಮ ಪ್ರೀತಿಯ ಮಕ್ಕಳು
ನಿಮಿತ್ತ ಆಗಿರುವಿರಿ. ನಿಮಿತ್ತ ಆದವರ ಪ್ರಕಂಪನಗಳು ನಾಲ್ಕೂ ಕಡೆ ಹರಡುತ್ತವೆ. ಆದ್ದರಿಂದ ಯಾವ
ವ್ಯರ್ಥ ಸಂಕಲ್ಪ ನನ್ನನ್ನು ತನ ಕಡೆ ಸೆಳೆಯುತ್ತಿಲ್ಲ ತಾನೆ ಎಂದು ಪರಿಶೀಲನೆ ಮಾಡಿಕೊಳ್ಳಿ.
ಏಕೆಂದರೆ ಈಗ ಪವಿತ್ರ ಪ್ರಪಂಚ, ಪವಿತ್ರ ರಾಜ್ಯ ಸಮೀಪ ಬರುತ್ತಿದೆ. ದುಃಖ ಮತ್ತು ಅಶಾಂತಿ ನಾಲ್ಕೂ
ಕಡೆ ಭಿನ್ನ ಭಿನ್ನ ರೂಪದಲ್ಲಿ ಹೆಚ್ಚುತ್ತಿದೆ. ಅದಕ್ಕಾಗಿ ಪವಿತ್ರತೆಯ ಪ್ರಕಂಪನೆಗಳ ಅವಶ್ಯಕತೆ ಇದೆ.
ದುಃಖ ಅಶಾಂತಿಯ ಕಾರಣ ಅಪವಿತ್ರತೆಯಾಗಿದೆ. ಆ ಕಾರಣ ಅಪವಿತ್ರ ಆತ್ಮರಿಗೆ ಮತ್ತು ಭಕ್ತ ಆತ್ಮರಿಗೆ
ಡಬಲ್ ಸೇವೆಯ ಅವಶ್ಯಕತೆ ಇದೆ. ವಾಣಿಯ ಸೇವೆ ಬಹಳ ವಿಜೃಂಭಣೆಯಿಂದ ನಡೆಯುತ್ತಿರುವುದನ್ನು ಬಾಪ್ದಾದಾ
ನೋಡಿದ್ದಾರೆ, ನಿಮ್ಮ ದೂರನ್ನು ಸಹ ಸಮಾಪ್ತಿ ಮಾಡುತ್ತಿರುವಿರಿ. ಆದರೆ ಈಗ ಆತ್ಮರಿಗೆ ಹೆಚ್ಚಿನ
ಸಕಾಶ ಬೇಕಾಗಿದೆ. ಅದಾಗಿದೆ ಮನಸಾ ಸೇವೆಯ ಮೂಲಕ ಪ್ರಕಂಪನೆ ಕೊಡುವುದು, ಧೈರ್ಯ ಕೊಡುವುದು, ಉಮಂಗ
ಉತ್ಸಾಹ ಕೊಡುವುದು. ಹೀಗೆ ಈ ಸಮಯದಲ್ಲಿ ಡಬಲ್ ಸೇವೆಯ ಅವಶ್ಯಕತೆ ಇದೆ. ಅದಕ್ಕಾಗಿ ಬಾಪ್ದಾದಾ
ಹೇಳಿದ್ದಾರೆ ಪ್ರತಿಯೊಬ್ಬ ಮಗು ತಮ್ಮನ್ನು ಪೂರ್ವಜ ಎಂದು ತಿಳಿಯ ಬೇಕು. ಈ ಕಲ್ಪ ವೃಕ್ಷದ ತಳಹದಿ
ಪೂರ್ವಜ ಮತ್ತು ಪೂಜ್ಯ ಆತ್ಮರು ನೀವಾಗಿರುವಿರಿ. ಬಾಪ್ದಾದಾ ದುಃಖಿ ಆತ್ಮರ ಕೂಗನ್ನು
ಕೇಳುತ್ತಿರುತ್ತಾರೆ. ನೀವು ಮಕ್ಕಳ ಬಳಿಯೂ ಆ ಕೂಗು ತಲುಪಬೇಕು. ಎಷ್ಟು ಸಂಪೂರ್ಣ ಪವಿತ್ರ ಆತ್ಮ
ಆಗುತ್ತೀರಿ, ಆಗುತ್ತಿರುವಿರಿ, ಆಗಿಯೂ ಇರುವಿರಿ ಆದರೆ ಜೊತೆ ಜೊತೆಗೆ ಈಗ ಮನಸಾ ಸೇವೆಯನ್ನು
ಹೆಚ್ಚಿಸಬೇಕು.
ಈಗ ವಿಶ್ವದಲ್ಲಿ ಸುಖ
ಶಾಂತಿ, ಸಂತೋಷ ಆತ್ಮರಲ್ಲಿ ಕಡಿಮೆಯಾಗುತ್ತಿದೆ. ಆದ್ದರಿಂದ ನೀವು ಪರಮಾತ್ಮನ ಪ್ರೀತಿಗೆ ಪಾತ್ರರಾದ
ಆತ್ಮರು ಈಗ ಪ್ರೀತಿಯ, ಸಂತುಷ್ಟತೆಯ, ಖುಷಿಯ ಅಂಚಲಿ ಕೊಡುವ ಅವಶ್ಯಕತೆ ಇದೆ. ದುಃಖಿಗಳಿಗೆ ಸುಖದ
ಅಂಚಲಿ ಕೊಡಿ. ಒಂದು ಮನಸಾ ಸೇವೆಯ ಮೂಲಕ ಸಕಾಶ ಕೊಡಿ ಮತ್ತು ಇನ್ನೊಂದು ನಿಮ್ಮ ಚಹರೆ ಮತ್ತು ಚಲನೆಯ
ಮೂಲಕ ತಂದೆಯನ್ನು ಪ್ರತ್ಯಕ್ಷ ಮಾಡಿರಿ. ಇದುವರೆಗೂ ಏನು ಸೇವೆ ಮಾಡಿದ್ದೀರಿ ಮತ್ತು
ಮಾಡುತ್ತಿರುವಿರಿ ಸೇವೆಯಲ್ಲಿ ನಾಲ್ಕೂ ಕಡೆ ಉಮಂಗ ಉತ್ಸಾಹ ಇದೆ ಅದನ್ನು ನೋಡಿ ಬಾಪ್ದಾದಾ
ಖುಷಿಯಾಗಿದ್ದಾರೆ. ಆದರೆ ಇನ್ನೂ ಒಂದು ಸೇವೆ ಉಳಿದುಕೊಂಡಿದೆ. ಬ್ರಹ್ಮಾಕುಮಾರಿಯರು ಮನುಷ್ಯ
ಆತ್ಮರನ್ನು ಒಳ್ಳೆಯವರನ್ನಾಗಿ ಮಾಡುತ್ತಾರೆ, ಯಾವ ಅಶುದ್ಧ ವ್ಯವಹಾರ ಇದೆ, ಅಶುದ್ಧ ವ್ಯವಹಾರದಿಂದ
ಮುಕ್ತ ಮಾಡುತ್ತಾರೆ ಯುವ ವರ್ಗದವರ ಬಗ್ಗೆ ಸರಕಾರದವರು ಏನು ಬಯಸುತ್ತಾರೆ ಆ ಸೇವೆಯನ್ನು ಬಹಳ
ಚೆನ್ನಾಗಿ ಮಾಡುತ್ತಾರೆ ಎನ್ನುವ ಮಾತು ಕೇಳಿ ಬರುತ್ತಿದೆ. ಆದರೆ ಇನ್ನೂ ತಂದೆ ಬಂದಿದ್ದಾರೆ,
ಪರಮಾತ್ಮ ಬಂದಿದ್ದಾರೆ, ಪರಮಾತ್ಮ ಜ್ಞಾನ ಇವರು ಕೊಡುತ್ತಿದ್ದಾರೆ, ನನ್ನ ತಂದೆ ಆಸ್ತಿ ಕೊಡಲು
ಬಂದಿದ್ದಾರೆ, ಈಗ ತಂದೆಯ ಕಡೆ ದೃಷ್ಟಿ ಹೋಗುವುದರಿಂದ ಅವರಿಗೂ ಪರಮಾತ್ಮನ ಪ್ರೀತಿ, ಪರಮಾತ್ಮನ
ಆಕರ್ಷಣೆ ಆಕರ್ಷಿತ ಮಾಡುತ್ತದೆ. ಒಳ್ಳೆಯದು, ಒಳ್ಳೆಯದು ಅಂತೂ ಆಯಿತು, ಆದರೆ ಪರಮಾತ್ಮ ತಂದೆಯ
ಪ್ರತ್ಯಕ್ಷತೆ ಆಕರ್ಷಿತ ಮಾಡಿ ಒಳ್ಳೆಯವರನ್ನಾಗಿ ಮಾಡುತ್ತದೆ. ಆದ್ದರಿಂದ ಈಗ ತಂದೆಯ ಪರಿಚಯ,
ಯಾರನ್ನು ನೆನಪು ಮಾಡುತ್ತಾರೆ ಅವರ ಜ್ಞಾನ, ಆ ಆಸ್ತಿ ಸಿಗುತ್ತಿದೆ. ಹೀಗೆ ಮನಸಾ ಸೇವೆಯ ಮೂಲಕ
ತಂದೆಯ ಸಮೀಪ ತನ್ನಿರಿ. ನಿಮ್ಮ ಚಹರೆ ಮತ್ತು ಚಲನೆಯ ಮೂಲಕ, ನಿಮ್ಮ ನಯನಗಳಲ್ಲಿ ತಂದೆಯ
ಪ್ರತ್ಯಕ್ಷತೆ ಆಗಬೇಕು. ಈಗ ಇದರ ಕುರಿತು ಪರಸ್ಪರ ಯೋಜನೆ ಮಾಡಿರಿ.
ಬಾಪ್ದಾದಾ ಯಾವ ಯೋಜನೆ
ಕೊಡುತ್ತಾರೆ ಅದನ್ನು ಸಮಯಾನುಸಾರ ಮಕ್ಕಳು ಬಹಳ ವಿಧಿ ಪೂರ್ವಕ, ಉಮಂಗ ಉತ್ಸಾಹದಿಂದ ಮಾಡಿದ್ದಾರೆ,
ಮಾಡುತ್ತಲೂ ಇದ್ದಾರೆ, ಇದನ್ನು ಬಾಪ್ದಾದಾ ನೋಡಿದ್ದಾರೆ ಮತ್ತು ಬಾಪ್ದಾದಾ ಇದಕ್ಕಾಗಿ ಎಲ್ಲ
ಮಕ್ಕಳಿಗೂ ಪದಮದಷ್ಟು ಶುಭಾಶಯ ಕೊಡುತ್ತಿದ್ದಾರೆ. ಈಗ ಭಗವಂತ ಆಸ್ತಿ ಕೊಡುತ್ತಿದ್ದಾರೆ
ಎನ್ನುವುದನ್ನು ಸೇರಿಸಿಕೊಳ್ಳಿ. ಈಗ ಆಸ್ತಿ ತೆಗೆದುಕೊಳ್ಳದಿದ್ದರೆ ಇನ್ನು ಯಾವಾಗ
ತೆಗೆದುಕೊಳ್ಳುತ್ತೀರಿ! ಮಕ್ಕಳ ದುಃಖ, ಅಶಾಂತಿಯ ವಾಯುಮಂಡಲವನ್ನು ನೋಡಿ ತಂದೆಗೆ ದಯೆ ಬರುತ್ತದೆ.
ತಂದೆ ಮತ್ತು ನಿಮಗೆ ಗೊತ್ತಿದೆ ಇದು ಅತೀ ಆಗುವುದು. ಅತೀ ಆಗದೆ ಅಂತ್ಯವಾಗುವುದಿಲ್ಲ. ಇಂತಹ
ಸಮಯದಲ್ಲಿ ಭಗವಂತ ಆಸ್ತಿ ಕೊಡುತ್ತಿದ್ದಾರೆ ಎನ್ನುವುದನ್ನು ಆತ್ಮರಿಗೆ ಅನುಭವ ಮಾಡಿಸಿರಿ, ಕೇವಲ
ಹೇಳುವುದಲ್ಲ. ತಂದೆಯ ಪ್ರತ್ಯಕ್ಷತೆ ಯಾವಾಗ ಮತ್ತು ಹೇಗೆ ಆಗುವುದು ಎಂದು ನೀವೆಲ್ಲರೂ
ಕೇಳುತ್ತೀರಲ್ಲವೆ. ಆದ್ದರಿಂದ ಕೇವಲ ಬ್ರಹ್ಮಾಕುಮಾರಿಯರವರೆಗೆ ತಲುಪಿದ್ದಾರೆ ಆದರೆ
ಬ್ರಹ್ಮಾಕುಮಾರಿಯರಿಗೆ ಕಲಿಸುವವರು ಯಾರು! ಬ್ರಹ್ಮಾಕುಮಾರಿಯರ ಬ್ರಹ್ಮಾಕುಮಾರರ ದಾತಾ ಯಾರು! ಈಗ
ಸಮಯ ಸಮೀಪ ತರಬೇಕು, ಸಮಾಪ್ತಿ ಮಾಡಬೇಕು. ಸಮಾಪ್ತಿಯನ್ನು ಸಮೀಪ ತರುವವರು ಯಾರು? ನಾನೇ ನಿಮಿತ್ತ
ಆಗಿದ್ದೇನೆ ಎಂದು ಪ್ರತಿಯೊಬ್ಬರೂ ತಿಳಿಯುತ್ತೀರಿ ಅಲ್ಲವೆ. ತಾವು ಮಕ್ಕಳಿಗೂ ಈ ಜವಾಬ್ದಾರಿಯನ್ನು
ತಂದೆ ಕೊಟ್ಟಿದ್ದಾರೆ. ಮಕ್ಕಳು ತಂದೆಯನ್ನು ಪ್ರತ್ಯಕ್ಷ ಮಾಡಬೇಕು. ಯಾರು ತಂದೆಯನ್ನು
ಅರಿತುಕೊಳ್ಳುತ್ತಾರೆ, ನೋಡಿ, ನೀವು ತಂದೆಯನ್ನು ಅರಿತುಕೊಂಡಿರಿ ಆಗ ಏನು ಮಾಡಿದಿರಿ?
ಗುರುತಿಸಿದಿರಿ, ಅರಿತುಕೊಂಡಿರಿ, ಮಗು ಆಗಿ ಆಸ್ತಿಗೆ ಅಧಿಕಾರಿ ಆದಿರಿ. ಇನ್ನು ಮುಂದೆ ಆಸ್ತಿ
ಪಡೆಯುವ ಆತ್ಮರ ಸಾಲು ನಿಲ್ಲುತ್ತದೆ. ಮತ್ತು ಸಾಲು ಈಗ ನಿಂತಿಲ್ಲ ಎಕೆ? ಏಕೆಂದರೆ ಇದುವರೆಗೂ ಕೆಲವು
ಕೆಲವು ಮಕ್ಕಳು ವ್ಯರ್ಥ ಸಂಕಲ್ಪಗಳ ಸಾಲಿನಲ್ಲಿ ನಿಂತಿದ್ದಾರೆ. ಏನು, ಏಕೆ, ಹೇಗೆ, ಈಗ ಇದರ
ಸಮಾಪ್ತಿಯಲ್ಲಿ ಸಮಯ ಕೊಡುತ್ತಾರೆ ಆದರೆ ವ್ಯರ್ಥ ಸಮಾಪ್ತಿಯಾಗಿಲ್ಲ. ವ್ಯರ್ಥ ಸಮರ್ಥ ಆಗುವುದರಲ್ಲಿ
ತಡೆಯೊಡ್ಡುತ್ತಿದೆ.
ಆದ್ದರಿಂದ ಬಾಪ್ದಾದಾ
ಇಂದು ವ್ಯರ್ಥ ಸಂಕಲ್ಪಗಳನ್ನು ಸಮಾಪ್ತ ಮಾಡಲು ನಾಲ್ಕೂ ಕಡೆಯ ಮಕ್ಕಳಿಗೆ ಧೈರ್ಯ ಕೊಡುತ್ತಿದ್ದಾರೆ
ಏನೆಂದರೆ ಈಗ ಈ ವ್ಯರ್ಥವನ್ನು ಸಮಾಪ್ತಿ ಮಾಡಿ ಸದಾ ಸಮರ್ಥರಾಗಿ ಸಮರ್ಥ ಮಾಡಿರಿ. ಕೇವಲ ಸಂದೇಶ
ಕೊಡುವುದಲ್ಲ, ಸಮರ್ಥ ಮಾಡಿರಿ, ಸಮರ್ಥ ಆಗಿರಿ, ಸಮರ್ಥ ಮಾಡಿರಿ. ವ್ಯರ್ಥದ ಸಮಾಪ್ತಿಯ ದಿನವನ್ನು
ಆಚರಿಸಿರಿ. ಸಾಧ್ಯವಿದೆಯೇ? ವ್ಯರ್ಥ ಸಂಕಲ್ಪ ನಮಗೂ ನಷ್ಟ ಮಾಡುತ್ತದೆ, ಸಮಯವನ್ನೂ ಹಾಳು ಮಾಡುತ್ತದೆ,
ಚಹರೆಯಲ್ಲಿ ಸದಾ ಖುಷಿಯ, ಅದೃಷ್ಟದ ಅನುಭವ ಕಡಿಮೆ ಮಾಡಿಸುತ್ತದೆ. ಆದ್ದರಿಂದ ಈಗ ಸಮಾಪ್ತಿಯ
ಸಮಯವನ್ನು ಸಮೀಪ ತರಬೇಕು, ಯಾರಿಗಾಗಿ? ನಿಮಗಾಗಿ ಅಲ್ಲವೆ! ಸಮಾಪ್ತಿಯ ಸಮಯವನ್ನು ಸಮೀಪ ತರಬೇಕು,
ಅದಕ್ಕಾಗಿ ವ್ಯರ್ಥವನ್ನು ಸಮಾಪ್ತಿ ಮಾಡಬೇಕು, ಮಾಡಲೇ ಬೇಕು, ಸ್ವಪ್ನದಲ್ಲಿಯೂ ಬರಬಾರದು, ಸಂಕಲ್ಪ
ಬಿಡಿ ಸ್ವಪ್ನದಲ್ಲಿಯೂ ಬರಬಾರದು ಇಂತಹ ಸಾಹಸ ಇರುವ ಮಕ್ಕಳು ಕೈ ಎತ್ತಿರಿ. ಮನಸ್ಸಿನ ಕೈ
ಎತ್ತಿರುವಿರಿ ಅಲ್ಲವೆ! ಬಾಹುಗಳ ಕೈ ಅಲ್ಲ ಮನಸ್ಸಿನ ಕೈ ಎತ್ತಿರುವಿರಿ ಅಲ್ಲವೆ? ಯಾರು ಮನಸ್ಸಿನ
ಕೈ ಎತ್ತಿದ್ದೀರಿ ಅವರು ಕೈ ಎತ್ತಿರಿ, ಮನಸ್ಸಿನ ಕೈ. ಒಳ್ಳೆಯದು.
ಈಗ ಬಾಪ್ದಾದಾ ಎಲ್ಲಾ
ಮಕ್ಕಳಿಗೆ ಈ ವರದಾನವನ್ನು ಕೊಡುತ್ತಿದ್ದಾರೆ ಏನೆಂದರೆ ನೀವೆಲ್ಲರೂ ಬರಲಿರುವ ಹೊಸ ಜಗತ್ತಿನಲ್ಲಿ
21 ಜನ್ಮ ಬಹಳ ಸುಖಿಯಾಗಿರುತ್ತೀರಿ. ಪರಿಶ್ರಮ ಪಡುವುದಿಲ್ಲ. ಪ್ರಪಂಚದ ಗೊಂದಲದಲ್ಲಿ ಬರುವುದಿಲ್ಲ.
ಜೀವನಕ್ಕೆ ಏನು ಬೇಕು, ತನು, ಮನ, ಧನ ಎಲ್ಲವೂ ಸಿಗುತ್ತದೆ. ಆರೊಗ್ಯವಾದ ಶರೀರ, ಸಂತುಷ್ಟ ಮನಸ್ಸು,
ಅಪಾರ ಧನ, ಇದು ನಿಮಗೆ 21 ಜನ್ಮ ಖಂಡಿತ ಸಿಗುತ್ತದೆ. ಬಾಪ್ದಾದಾ ಅವರಿಗೆ ಒಪ್ಪಿಗೆ ಇದೆ, ನೀವು
ಕೇವಲ ಒಂದು ಕೆಲಸ ಮಾಡಿರಿ. ಪ್ರತಿನಿತ್ಯ ಆಶ್ರಮಕ್ಕೆ ಬರಲು ಆಗದಿದ್ದರೆ ಫೋನ ಮಾಡಿರಿ. ಈ ಕಿವಿಯ
ಫೋನ್ (ಮೊಬೈಲ್) ಇದೆ ಅಲ್ಲವೆ, ಅದರಿಂದ ಮಾಡಿರಿ. ನಿಮ್ಮ ಸಂಪರ್ಕದಲ್ಲಿರುವ ಟೀಚರ್ ಜೊತೆ ನಿಮ್ಮ
ಸಮಯವನ್ನು ನಿಗದಿ ಮಾಡಿಕೊಳ್ಳಿ, ಇಂತಹ ಸಮಯದಲ್ಲಿ ನಾವು ಫೋನ್ ಮಾಡುತ್ತೇವೆ, ಮತ್ತು ಆಗ ಪ್ರತಿ
ನಿತ್ಯದ ಮಹಾವಾಕ್ಯ ಏನಿದೆ ಯಾವುದಕ್ಕೆ ಮುರಳಿ ಎಂದು ಹೇಳುತ್ತಾರೆ, ಆ ವರದಾನ ಮತ್ತು ಆರಂಭದ
ಮಾಹಾವಾಕ್ಯಗಳನ್ನು ಕೇಳಿರಿ. ಏಕೆ? ಬಾಪ್ದಾದಾ ಏಕೆ ಹೇಳುತ್ತಾರೆ? ಮಾಡುವುದಿದ್ದರೆ ಕೈ ಎತ್ತಿರಿ,
ಒಳ್ಳೆಯದು, ಈಗಿನ ಕಾಲದಲ್ಲಿ ಮಾತುಗಳು ಬಹಳ ಬೇಗ ಬದಲಾವಣೆ ಆಗುತ್ತವೆ. ಸರಕಾರದ ಕಾನೂನುಗಳು
ಬದಲಾಗುತ್ತವೆ, ಮನುಷ್ಯರ ವೃತ್ತಿಯೂ ಸಹ ಬದಲಾಗುತ್ತವೆ. ಈ ಕಾರಣದಿಂದ ಪ್ರತಿಯೊಬ್ಬರ ಜೀವನದಲ್ಲಿ
ಮಾತುಗಳಂತೂ ಬಂದೇ ಬರುತ್ತವೆ, ವ್ಯರ್ಥ ಮಾತುಗಳು, ಈ ವ್ಯರ್ಥ ಮಾತುಗಳನ್ನು ಸಮಾಪ್ತಿ ಮಾಡಲು ಸಮರ್ಥ
ಸಂಕಲ್ಪಗಳು ಬೇಕು. ವ್ಯರ್ಥವನ್ನು ಸಮಾಪ್ತಿ ಮಾಡಲು ಸಮರ್ಥ ಸಂಕಲ್ಪಗಳು ಬೇಕು. ಅದನ್ನು ಪ್ರತಿ
ನಿತ್ಯ ಕೇಳಬೇಕು. ವರದಾನ ಏನಿದೆ ಅದು ಶ್ರೇಷ್ಠ ಸಂಕಲ್ಪವಾಗಿದೆ. ವ್ಯರ್ಥ ಬಂದಾಗ ಮನಸ್ಸಿಗೆ
ಶ್ರೇಷ್ಠ ಸಂಕಲ್ಪ ಬೇಕಾಗುತ್ತದೆ. ಮನಸ್ಸು ಖಾಲಿಯಾಗಿರಲು ಸಾಧ್ಯವಿಲ್ಲ. ಮನಸ್ಸಿಗೆ ಒಂದಿಲ್ಲ ಒಂದು
ಸಂಕಲ್ಪ ಬೇಕು. ಆದ್ದರಿಂದ ವ್ಯರ್ಥವನ್ನು ಸಮರ್ಥ ಮಾಡಲು ನಿಮಗೆ ಈ ವರದಾನ ಮತ್ತು ಸ್ಲೋಗನ್ ಮತ್ತು
ಆದಿಯ ವಾಕ್ಯಗಳು ಮನಸ್ಸನ್ನು ಬದಲಿಸಲು ಬೇಕಾಗುತ್ತದೆ. ಇದನ್ನು ಮಾಡಲು ಸಾಧ್ಯವೇ? ಮಾಡಲು ಸಾಧ್ಯವೇ?
ಕೆಲವರು ಮಾಡುತ್ತಲೂ ಇದ್ದಾರೆ. ಏಕಂದರೆ ನೀವು ಅನುಭವಿ ಆಗಿ ಅನೇಕರನ್ನು ಅನುಭವಿ ಮಾಡುವ ತಂದೆಯ
ಸೇವೆಯನ್ನು ನೀವು ಮಾಡಲು ಸಾಧ್ಯವಿದೆ. ಈಗ ಸಮಯ ತೀವ್ರವಾಗಿ ಹೋಗುತ್ತಿದೆ. ಆದ್ದರಿಂದ ತೀವ್ರವಾದ ಈ
ಸಮಯದಲ್ಲಿ ನಿಮ್ಮ ಸೇವೆಯೂ ತೀವ್ರವಾಗಿ ನಡೆಯುತ್ತದೆ. ಬಾಪ್ದಾದಾ ಅವರಿಗೆ ನೀವೆಲ್ಲರೂ ಬಂದಿರುವುದು
ಬಹಳ ಖುಷಿಯಾಗಿದೆ. ಮಕ್ಕಳನ್ನು ನೋಡಿ, ಆಗಾಗ ಬರುವವರಿದ್ದರೂ ಮಕ್ಕಳೇ ಅಲ್ಲವೆ. ಮಕ್ಕಳನ್ನು ತಂದೆ
ನೋಡುತ್ತಾರೆ. ಆದ್ದರಿಂದ ನೀವು ಸ್ವಲ್ಪ ಸಮಯ ಯಾವಾಗ ಅಮೃತವೇಳೆ ಏಳುತ್ತೀರಿ, ಮಲಗಿಯೇ ಇದ್ದರೂ,
ಕಣ್ಣು ತೆರೆದ ತಕ್ಷಣ ಮೊಟ್ಟ ಮೊದಲು ಶಿವ ಬಾಬಾ ಅವರಿಗೆ ಗುಡ್ ಮಾರ್ನಿಂಗ್ ಹೇಳಿರಿ. ಮಾಡಲು
ಸಾಧ್ಯವೆ? ನೋಡಿ ಬೆಳಗ್ಗೆ ಎದ್ದ ತಕ್ಷಣ ಒಳ್ಳೆಯವರ ಮುಖ ನೋಡಿದರೆ ಒಳ್ಳೆಯದಾಗುತ್ತದೆ, ಯಾರಾದರೂ
ಕೆಟ್ಟವರನ್ನು ನೋಡಿದರೆ ಏನು ಹೇಳುತ್ತಾರೆ? ಇಂದು ಯಾರ ಮುಖ ನೋಡಿದೆನೊ ಇಡೀ ದಿನ ಕೆಟ್ಟು ಹೋಯಿತು.
ಹಾಗಾದರೆ ಒಳ್ಳೆಯವರಲ್ಲಿ ಒಳ್ಳೆಯವರು ಯಾರು? ಶಿವ ಬಾಬಾ. ಶಿವ ಬಾಬಾ ಅವರೊಂದಿಗೆ ಪ್ರೀತಿ ಇದೆ
ಅಲ್ಲವೆ. ಆದ್ದರಿಂದ ಕಣ್ಣು ತೆರೆದ ತಕ್ಷಣ ಶಿವ ಬಾಬಾ ಗುಡ್ ಮಾರ್ನಿಂಗ್, ಮತ್ತು ರಾತ್ರಿ ಮಲಗುವಾಗ,
ಹಾಸಿಗೆಯ ಮೇಲೆ ಹೋದಾಗ ಶಿವ ಬಾಬಾ ಗುಡ್ ನೈಟ್ ಎಂದು ಹೇಳಿರಿ. ಇದು ಸಹಜ ಆಗಿದೆಯಲ್ಲವೆ. ಆಗ ನಿಮ್ಮ
ಇಡೀ ದಿನ ಚೆನ್ನಾಗಿರುತ್ತದೆ. ಏಕೆಂದರೆ ವರದಾನ ಅಂದರೆ ಶುಭ ಸಂಕಲ್ಪ ತೆಗೆದುಕೊಂಡಿರಿ ಅಲ್ಲವೆ. ಈ
ರೀತಿ ಮಾಡಿರಿ. ನಿಮ್ಮ ಮೇಲೆ ಬಾಪ್ದಾದಾ ಅವರಿಗೆ ಪ್ರೀತಿ ಇದೆಯಲ್ಲವೆ. ಇದನ್ನು ಮಾಡುವುದರಿಂದ ನೀವು
ಇನ್ನೂ ಮುಂದುವರೆಯಲು ಸಾಧ್ಯವಾಗುತ್ತದೆ. ನಿಮ್ಮ ಜೀವನದಲ್ಲಿಯೂ ಖುಷಿಯ ಅನುಭವ ಮಾಡುವಿರಿ. ಎಂದೂ
ದುಃಖದ ಅಲೆ ಬರುವುದಿಲ್ಲ. ಹಾಗಾದರೆ ಒಪ್ಪಿಗೆ ಇದೆಯೇ ಮತ್ತು ಸಹಜ ಯೋಗಿ ಆಗಿರಿ ಸಾಕು. ನಾನು ಆತ್ಮ,
ಶಿವಬಾಬಾ ಅವರ ಮಗು ಆಗಿದ್ದೇನೆ. ಇದನ್ನು ನೆನಪು ಮಾಡಲು ಸಾಧ್ಯವಿದೆಯಲ್ಲವೆ! ಹಾಗಾದರೆ ಬಹಳ
ಒಳ್ಳೆಯದು.
ಈಗ ತಾವೆಲ್ಲರು
ವಾರಸಧಾರರೂ ಇದ್ದೀರಿ ಹಾಗು ವಾರಸಧಾರರು ಆಗುವವರಿದ್ದೀರಿ. ಯಾರು ತಮ್ಮನ್ನು ಬಾಪ್ದಾದಾರವರ ಪಕ್ಕಾ
ವಾರಿಸ್ ಎಂದು ತಿಳಿದಿದ್ದೀರಿ, ಅವರು ಕೈ ಎತ್ತಿರಿ. ವಾರಸಧಾರರಾಗಿದ್ದೀರಾ? ವಿ.ಐ.ಪಿಗಳು ಕೂಡ ಕೈ
ಎತ್ತುತ್ತಿದ್ದಾರೆ. ಚಪ್ಪಾಳೆಯಾದರು ತಟ್ಟಿ. ಒಳ್ಳೆಯದು. ಈಗ ವಾರಸು ಗುಣದವರು ಇಂದು, ಎಂದಿನಿಂದಲೋ
ಅಲ್ಲ, ಆದರೆ ಇಂದಿನಿಂದಲೇ ವ್ಯರ್ಥ ಸಂಕಲ್ಪಗಳನ್ನು ಸಮಾಪ್ತಿ ಮಾಡಿಯೇ ಮಾಡುತ್ತೇವೆ ಎನ್ನುವ ದೃಢ
ಸಂಕಲ್ಪ ಮಾಡಿರಿ ಹಾಗೂ ಬಾಪ್ದಾದಾರವರಿಗೆ ಈ ಸಂಕಲ್ಪವನ್ನು ಕೊಡಿರಿ. ತಮಗೆ ಇದರ ಒಪ್ಪಿಗೆ ಇದೆಯೇ?
ಹಾಗಾದರೆ ಕೈ ಎತ್ತಿ. ಒಳ್ಳೆಯದು. ಯಾರು ಈ ರೀತಿಯಾಗಿ ಪಕ್ಕಾ ಮನಸ್ಸಿನ ಸಂಕಲ್ಪ ಇದೆ ಎಂದು
ತಿಳಿದಿದ್ದೀರೋ, ಅವರು ಕೈ ಎತ್ತಿರಿ. ಕೇವಲ ಕೈ ಎತ್ತುವುದಲ್ಲ, ಆದರೆ ಮನಸ್ಸಿನ ಕೈ ಎತ್ತುವವರು ಕೈ
ಎತ್ತಿರಿ. ಒಳ್ಳೆಯದು. ಹಿಂದೆ ಕುಳಿತಿರುವವರು ಕೂಡ ಕೈ ಎತ್ತುತ್ತಿದ್ದಾರೆ. ಯಾರು ಪಕ್ಕಾ
ಆಗಿದ್ದೀರೊ, ಅವರು ಎರಡು ಕೈ ಎತ್ತಿ. ಇಂದು ಯಾವ ದಿನ? ವ್ಯರ್ಥ ಸಮಾಪ್ತಿ ಮಾಡುವ ಅರ್ಥಾತ್
ಸಮರ್ಥರಾಗುವ ದಿನ. ಸದಾ ಸಮರ್ಥ. ಎರಡನೆಯ ಕಾರ್ಯ ಯಾವುದು? ದುಃಖ ಮತ್ತು ಅಶಾಂತಿಯನ್ನು ಸಮಾಪ್ತಿ
ಮಾಡುವ ದಿನವನ್ನು ಸಮೀಪ ತರುವ ದಿನ. ಎರಡು ಕಾರ್ಯಗಳಿವೆ. ಒಂದು ಸದಾ ಸಮರ್ಥರಾಗುವುದು ಮತ್ತು
ಎರಡನೆಯದು ಸಮರ್ಥ ಸಮಯವನ್ನು ಸಮೀಪ ತರುವುದು. ಎರಡೂ ಒಪ್ಪಿಗೆ ಇದೆಯೇ? ತಲೆಯಾಡಿಸಿರಿ. ಏಕೆಂದರೆ
ಬಾಪ್ದಾದಾರವರ ಬಳಿ ಮೊರೆ ಹಾಗೂ ದುಃಖದ ಕೂಗು ಬಹಳ ಕೇಳಿ ಬರುತ್ತದೆ. ತಮ್ಮ ಬಳಿ ಏಕೆ ಕೇಳಿ
ಬರುವುದಿಲ್ಲವೋ ಗೊತ್ತಿಲ್ಲ. ಬಾಪ್ದಾದಾರವರಿಗೆ ಈ ರೀತಿಯಾಗಿ ಕೇಳಿ ಬರುವಾಗ, ಮಕ್ಕಳಾದ ತಾವು, ಯಾರು
ಸ್ವಯಂನ್ನು ವಾರಸರು ಎಂದು ತಿಳಿದಿದ್ದೀರಿ, ಆಸ್ತಿ ತೆಗೆದುಕೊಳ್ಳುವವರಾಗಿದ್ದೀರಿ. ಹಾಗಾದರೆ ಆಸ್ತಿ
ತೆಗೆದುಕೊಳ್ಳುವವರು, ಅನ್ಯರಿಗೆ ಆಸ್ತಿ ಪ್ರಾಪ್ತಿ ಮಾಡಿಸುವ ಬಗ್ಗೆ ದಯೆ ಬರಬೇಕಲ್ಲವೇ? ಏಕೆ ದಯೆ
ಬರುವುದಿಲ್ಲ? ವೈರಾಗ್ಯ, ಬೇಹದ್ದಿನ ವೈರಾಗ್ಯ ಮತ್ತು ದಯೆ ಬರಬೇಕು. ಚಿಕ್ಕ ಚಿಕ್ಕ ಮಾತುಗಳಲ್ಲಿ,
ಏಕೆ ಎನ್ನುವ ಸಾಲಿನಲ್ಲಿ (ಕ್ಯೂ) ನಿಲ್ಲಲು ಸಮಯ ಕೊಡಬೇಡಿರಿ. ಈಗ, ಹೇ ಬಾಪ್ದಾದಾರವರ ಅಗಲಿದ
ಪದಮಾಪದಮ ವರದಾನಗಳ ವರದಾನೀ ಮಕ್ಕಳೇ! ಈಗ ದೃಢ ಸಂಕಲ್ಪ ಮಾಡಿರಿ. ಮತ್ತು ದೃಢ ಸಂಕಲ್ಪದ ಬೀಗ ಹಾಕಿರಿ.
ಕರ್ಮಯೋಗಿಗಳಾಗಿರಿ. ಕರ್ಮ ಯೋಗೀ ಜೀವನದವರಾಗಿದ್ದೀರಿ. ಜೀವನ ಸದಾಕಾಲ ಇರುತ್ತದೆ, ಆಗ ಈಗಲ್ಲ. ಈಗ
ತಮ್ಮ ದಯಾಳು, ಕೃಪಾಳು, ದುಃಖ ಹರ್ತಾ, ಸುಖಕರ್ತಾ ಸ್ವರೂಪವನ್ನು ಪ್ರಕಟ ಮಾಡಿರಿ. ಬಾಪ್ದಾದಾರವರು
ಅಚಾನಕ ಸಮಯದ ಬಗ್ಗೆ ಬಹಳ ಕಾಲದಿಂದ ಹೇಳಿದ್ದಾರೆ. ಹಾಗಾದರೆ, ಅಚಾನಕ್ ಆಗುವ ಮೊದಲು ಭಕ್ತರ
ಮೊರೆಯನ್ನಾದರೂ ಪೂರ್ಣ ಮಾಡಿರಿ. ದುಃಖಿಗಳ ದುಃಖದ ಕರೆಯನ್ನಾದರೂ ಕೇಳಿರಿ. ಈಗ ಎಲ್ಲ ಚಿಕ್ಕವರು,
ದೊಡ್ಡವರು ವಿಶ್ವ ಪರಿವರ್ತಕ, ವಿಶ್ವದ ದುಃಖವನ್ನು ಪರಿವರ್ತನೆ ಮಾಡಿ ಸುಖದ ಪ್ರಪಂಚ ತರಲು
ತಮ್ಮನ್ನು ಜವಾಬ್ದಾರರು ಎಂದು ತಿಳಿಯಿರಿ.
ಬಾಪ್ದಾದಾ ಹೀಗೆ
ಎಲ್ಲಿಯವರೆಗೆ ಬರಲು ಸಾಧ್ಯ? ಆದ್ದರಿಂದ ಎಲ್ಲವೂ ಅಕಸ್ಮಿಕವಾಗಿ ಆಗಲಿದೆ. ಹಾಗಾಗಿ, ವಾರಸುಧಾರರು
ಆಸ್ತಿಯನ್ನು ಪ್ರಾಪ್ತಿ ಮಾಡಿಸಿರಿ, ದಯಾಹೃದಯದವರಾಗುವ ಪಾತ್ರ ಮಾಡಿರಿ. ಎಂದೋ ಆಗುತ್ತದೆ ಎನ್ನುವ
ವಿಚಾರ ಮಾಡಬೇಡಿರಿ. ಅಕಸ್ಮಿಕವಾಗಿ ಆಗುತ್ತದೆ. ಆದ್ದರಿಂದ ವ್ಯರ್ಥವನ್ನು ಸಮಾಪ್ತಿ ಮಾಡಲೇ ಬೇಕು.
ಆಗಲೇ ಬೇಕು, ಮಾಡಲೇ ಬೇಕು. ಬಾಪ್ದಾದಾರವರು ಪರಿಣಾಮವನ್ನು ನೋಡಿದರು, ಎಲ್ಲರ ಕರ್ಮದ ಗತಿಯನ್ನು
ಪರೀಕ್ಷಿಸಿದರು. ಪುರುಷಾರ್ಥದ ಗತಿಯನ್ನು ಚೆಕ್ ಮಾಡಿದರು. ಖಜಾನೆಗಳ ಜಮಾಖಾತೆಯನ್ನು ಚೆಕ್ ಮಾಡಿದರು.
ಹಾಗಾದರೆ ಪರಿಣಾಮದಲ್ಲಿ ಏನು ನೋಡಿರಬಹುದು? ಜಮಾ ಮಾಡುವ ಪುರುಷಾರ್ಥವನ್ನು ಬಹಳ ಚೆನ್ನಾಗಿ
ಮಾಡಿದ್ದೀರಿ, ಆದರೆ ಜಮಾ ಮಾಡುವುದರ ಶೇಕಡದಲ್ಲಿ ಅಂತರವಿದೆ. ಎಷ್ಟು ಜಮಾ ಆಗಿದೆಯೆಂದು
ತಿಳಿಯುತ್ತೀರಿ, ಆದರೆ ಜಮಾ ಆದರೂ ಅದರ ಶೇಕಡದಲ್ಲಿ ವ್ಯತ್ಯಾಸವಿದೆ, ಸ್ವಲ್ಪ ಜಮಾ ಆಗುತ್ತದೆ,
ಸದಾಕಾಲಕ್ಕಾಗಿ ಜಮಾ ಆಗುವುದಿಲ್ಲ. ಎಷ್ಟು ಜಮಾ ಮಾಡುತ್ತೀರೊ, ಆದರೆ ಸದಾಕಾಲದ ಜಮಾದಲ್ಲಿ ಅಂತರವಿದೆ.
ಆದ್ದರಿಂದ ಬಾಪ್ದಾದಾರವರು ಒಂದೊಂದು ವಿಷಯದಲ್ಲಿ ದೃಢ ಸಂಕಲ್ಪ ಮಾಡಿಸುತ್ತಾರೆ. ಕ್ರೋಧದ ಬಗ್ಗೆ
ಮಾಡಿಸಿದರು, ಆದರೆ ಮನಸ್ಸಿನಲ್ಲಿಯೂ ಕೂಡ ಯಾರ ಪ್ರತಿ ಏರುಪೇರಾಗಬಾರದು. ಏಕೆ, ಏನು ಎನ್ನುವ
ಪ್ರಶ್ನೆ ಬರಬಾರದು. ಮಾತಿನ ಮೇಲೆ ಹತೋಟಿ ಪಡೆದಿದ್ದೀರಿ, ಕೆಲವರು ಒಳ್ಳೆಯ ಪುರುಷಾರ್ಥ ಮಾಡಿದ್ದೀರಿ.
ಆದರೆ ಮನಸ್ಸಿನಲ್ಲಿ ಸ್ವಲ್ಪ ಸ್ವಲ್ಪ ಏರುಪೇರಾಗುತ್ತದೆ. ಅದನ್ನು ತೆಗೆದುಹಾಕುವ ಪ್ರಯತ್ನ
ಮಾಡುತ್ತಿದ್ದಾರೆ. ಆದರೂ ಕೂಡ ಗಮನ ಕೊಟ್ಟಿರುವುದಕ್ಕಾಗಿ ಬಾಪ್ದಾದಾ ಹರ್ಷಿತರಾಗಿದ್ದಾರೆ. ನನಗೇ
ಹಾನಿಯಿದೆ ಎನ್ನುವ ಅರಿವು ಬಂದಿದೆ. ತಿಳಿಯಿತೇ? ಒಳ್ಳೆಯದು.
ಈಗ, ನಾಲ್ಕೂ ಕಡೆಯ
ಪರಮಾತ್ಮ ಪ್ರಿಯ ಮಕ್ಕಳಿಗೆ, ಸದಾ ತಂದೆಯ ಪ್ರೀತಿಯಲ್ಲಿ ಹಾರುತ್ತಾ ಇರುತ್ತಾರೊ, ತೀವ್ರ
ಪುರುಷಾರ್ಥಿಗಳಾಗಿದ್ದಾರೆಯೋ ಮತ್ತು ಸೇವೆಯಲ್ಲಿ ನಿರ್ವಿಘ್ನ ಸತ್ಯ ಸೇವಾಧಾರಿಯಾಗಿದ್ದಾರೆಯೋ,
ಇಂತಹ ನಾಲ್ಕೂ ಕಡೆಯ ಮಕ್ಕಳನ್ನು ಬಾಪ್ದಾದಾರವರು ನೋಡುತ್ತಿದ್ದಾರೆ. ಜೊತೆ ಜೊತೆಗೆ ದೂರ
ಇರುವವರನ್ನೂ ನೋಡುತ್ತಿದ್ದಾರೆ ಮತ್ತು ಇಲ್ಲಿ ಶಾಂತಿವನದಲ್ಲಿಯೂ ಅನೇಕ ಸ್ಥಾನಗಳಲ್ಲಿ
ಸ್ಕ್ರೀನ್ನಲ್ಲಿ ನೋಡುತ್ತಿರುವ, ಕೇಳುತ್ತಿರುವ, ಎಲ್ಲ ಮಕ್ಕಳಿಗೂ ಬಾಪ್ದಾದಾ ಸದಾ ಖುಷಿಯಲ್ಲಿರಿ
ಮತ್ತು ಖುಷಿಯನ್ನು ಹಂಚಿರಿ ಎನ್ನುವ ವರದಾನ ಕೊಡುತ್ತಿದ್ದಾರೆ. ಖುಷಿಯ ಮುಖ, ಯಾರಾದರೂ ತಮ್ಮ ಮುಖ
ನೋಡಲಿ, ಆ ಮುಖವನ್ನು ನೋಡಿ ಖುಷಿಯಾಗಬೇಕು. ಅವರು ಹೇಗೇ ಇರಲಿ, ತಮ್ಮ ಖುಷಿಯ ಮುಖವನ್ನು ನೋಡಿ
ಸ್ವಯಂ ಖುಷಿಯಾಗಲಿ, ಈ ವರದಾನ ನಾಲ್ಕೂ ಕಡೆಯ ಮಕ್ಕಳಿಗೆ ಮತ್ತು ಸಮ್ಮುಖ ಕುಳಿತುಕೊಂಡಿರುವ
ಮಕ್ಕಳಿಗೆ ವರದಾನವಾಗಿದೆ. ಎಂದಿಗೂ ಮುಖ ಬಾಡಬಾರದು. ತಾವು ಬಾಡಿದರೆ, ವಿಶ್ವದ ಪರಿಸ್ಥಿತಿ
ಏನಾಗಬೇಕು ! ತಾವು ಸದಾ ಖುಷಿಯ ಮುಖದವರು ಹಾಗು ಖುಷಿಯ ಚಲನೆಯುಳ್ಳವರು ಆಗಿರಬೇಕು ಮತ್ತು
ಅನ್ಯರನ್ನು ಮಾಡಬೇಕು. ಇಂತಹ ತೀವ್ರ ಪುರುಷಾರ್ಥಿ ಮಕ್ಕಳಿಗೆ ಬಾಪ್ದಾದಾರವರ ನೆನಪು, ಪ್ರೀತಿ ಮತ್ತು
ಮಧುರಾತಿ ಮಧುರ ಮಕ್ಕಳಿಗೆ ನಮಸ್ತೆ.
ವರದಾನ:
ತಮ್ಮ
ಮೂರ್ತಿಯಿಂದ ತಂದೆ ಹಾಗೂ ಶಿಕ್ಷಕನ ಚಹರೆಯನ್ನು ಪ್ರತ್ಯಕ್ಷಗೊಳಿಸುವಂತಹ ಅನುಭವಿ ಮೂರ್ತಿ ಭವ.
ತಮ್ಮ ಸತ್ಯ ಸ್ಥಾನದಲ್ಲಿ
ಸ್ಥಿತರಾಗುವುದೇ ನೆನಪಿನ ಯಾತ್ರೆಯಾಗಿದೆ, ಯಾರಾಗಿದ್ದೇನೆ ಹೇಗಿದ್ದೇನೆಯೋ ಅದರಲ್ಲಿ
ಸ್ಥಿತರಾಗಿರಬೇಕು - ಇದೇ ಸತ್ಯ ಸ್ವರೂಪದ ನಿಶ್ಚಯ ಹಾಗೂ ಅನೇಕ ಬಾರಿಯ ವಿಜಯದ ಸ್ಮೃತಿಯಿಂದ ಸದಾ
ನಶೆಯ ಸ್ಥಿತಿಯ ಸಾಗರನಲ್ಲಿ ತೇಲಾಡುತ್ತಿರುತ್ತೀರಿ. ಯಾವಾಗ ಸುಖದಾತನ ಮಕ್ಕಳಾಗಿದ್ದೀರಿ ಅಂದಮೇಲೆ
ದುಃಖದ ಪ್ರಕಂಪನಗಳು ಹೇಗೆ ಬರಲು ಸಾಧ್ಯವಾಗುವುದು! ಸರ್ವ ಶಕ್ತಿವಂತನ ಮಕ್ಕಳು ಶಕ್ತಿಹೀನರಾಗಲು
ಹೇಗೆ ಸಾಧ್ಯ! ಇದೇ ಸ್ಥಾನದ ಅನುಭವಗಳಲ್ಲಿ ಇರುತ್ತೀರೆಂದರೆ ತಮ್ಮ ಮೂರ್ತಿಯಿಂದ ತಂದೆ ಅಥವಾ
ಶಿಕ್ಷಕನ ಚಹರೆಯು ಸ್ವತಹವಾಗಿಯೇ ಪ್ರತ್ಯಕ್ಷವಾಗುವುದು.
ಸ್ಲೋಗನ್:
ಯಾರ ಚಹರೆ ಹಾಗೂ
ಚಲನೆಯಲ್ಲಿ ದಿವ್ಯತೆಯಿರುವುದೋ ಅವರೇ ಸತ್ಯವಾದಿ ಆಗಿದ್ದಾರೆ.
ಅವ್ಯಕ್ತ ಸೂಚನೆಗಳು:-
ಸದಾ ಅಚಲ, ಅಡೋಲ, ಏಕರಸ ಸ್ಥಿತಿಯ ಅನುಭವ ಮಾಡಿ.
ಸಮಯ ಪ್ರಮಾಣ ಈಗ ಸದಾ
ಅಚಲ ಅಡೋಲ ಸರ್ವ ಖಜಾನೆಗಳಿಂದ ಸಂಪನ್ನರಾಗಿ. ಸ್ವಲ್ಪವೂ ಸಹ ಏರುಪೇರು ಆಗುತ್ತೀರಿ ಎಂದರೆ ಸರ್ವ
ಖಜಾನೆಗಳ ಅನುಭವ ಆಗುವುದಿಲ್ಲ. ತಂದೆಯ ಮೂಲಕ ಸಿಕ್ಕಿರುವ ಖಜಾನೆಗಳನ್ನು ಸದಾ ಖಾಯಂ ಆಗಿ
ಇಟ್ಟುಕೊಳ್ಳುವ ಸಾಧನ ಆಗಿದೆ ಸದಾ ಅಚಲ ಅಡೋಲರಾಗಿ ಇರುವುದು. ಅಚಲರಾಗಿರುವುದರಿಂದ ಸದಾ ಖುಷಿಯ
ಅನುಭವ ಆಗುತ್ತಾ ಇರುತ್ತದೆ. ಹೇಗೆ ವಿನಾಶಿ ಧನ, ಹೆಸರು - ಮಾನ್ಯತೆ - ಆಡಂಬರ, ಪದವಿ ಇತ್ಯಾದಿಗಳು
ಸಿಗುತ್ತದೆ ಎಂದರೆ ಖುಷಿಯಾಗುತ್ತದೆ ಅಲ್ಲವೇ. ಇದಂತೂ ಅವಿನಾಶಿ ಖುಷಿಯಾಗಿದೆ ಆದರೆ ಈ ಖುಷಿ ಅವರಿಗೆ
ಇರುತ್ತದೆ ಯಾರು ಅಚಲ ಅಡೋಲ ಏಕ-ರಸ ಸ್ಥಿತಿಯಲ್ಲಿ ಇರುತ್ತಾರೆ.