31.07.24         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ- ನೀವು ತಮ್ಮ ಸಮಯವನ್ನು ವ್ಯರ್ಥ ಮಾಡಬಾರದು, ಒಳಗೆ ಜ್ಞಾನದ ಸ್ಮರಣೆ ಮಾಡುತ್ತಾ ಇರಿ ಆಗ ನಿದ್ರಾಜೀತರಾಗುತ್ತೀರಿ, ಆಕಳಿಕೆ ಇತ್ಯಾದಿ ಬರುವುದಿಲ್ಲ”

ಪ್ರಶ್ನೆ:
ನೀವು ಮಕ್ಕಳು ತಂದೆಗೆ ಏಕೆ ಬಲಿಹಾರಿಯಾಗಿದ್ದೀರಿ? ಬಲಿಹಾರಿಯಾಗುವ ಅರ್ಥವೇನಾಗಿದೆ?

ಉತ್ತರ:
ಬಲಿಹಾರಿಯಾಗುವುದು ಎಂದರೆ ತಂದೆಯ ನೆನಪಿನಲ್ಲಿ ಸಮಾವೇಶವಾಗಿಬಿಡುವುದು. ಯಾವಾಗ ತಂದೆಯ ನೆನಪಿನಲ್ಲಿ ಸಮಾವೇಶವಾಗಿಬಿಡುತ್ತೀರೋ ಆಗ ಆತ್ಮರೂಪಿ ಬ್ಯಾಟರಿಯು ಚಾರ್ಜ್ ಆಗುತ್ತಾ ಹೋಗುತ್ತದೆ. ಆತ್ಮರೂಪಿ ಬ್ಯಾಟರಿಯು ನಿರಾಕಾರ ತಂದೆಯೊಂದಿಗೆ ಜೋಡಿಸಲ್ಪಟ್ಟಾಗ ಬ್ಯಾಟರಿಯು ಚಾರ್ಜ್ ಆಗಿಬಿಡುತ್ತದೆ. ವಿಕರ್ಮಗಳು ವಿನಾಶವಾಗುತ್ತವೆ. ಸಂಪಾದನೆಯು ಜಮಾ ಆಗುತ್ತದೆ.

ಓಂ ಶಾಂತಿ.
ಆತ್ಮಿಕ ತಂದೆಯು ಕುಳಿತು ಆತ್ಮಿಕ ಮಕ್ಕಳಿಗೆ ತಿಳಿಸಿಕೊಡುತ್ತಾರೆ. ಈಗ ಇಲ್ಲಿ ನೀವು ಶರೀರದ ಜೊತೆ ಕುಳಿತಿದ್ದೀರಿ. ನಿಮಗೆ ಗೊತ್ತಿದೆ, ಮೃತ್ಯುಲೋಕದಲ್ಲಿ ಇದು ಅಂತಿಮ ಶರೀರವಾಗಿದೆ, ನಂತರ ಏನಾಗುವುದು? ತಂದೆಯ ಜೊತೆ ಶಾಂತಿಧಾಮದಲ್ಲಿ ಒಟ್ಟಿಗೆ ಇರುತ್ತೀರಿ. ಈ ಶರೀರವಿರುವುದಿಲ್ಲ. ನಂತರ ಸ್ವರ್ಗದಲ್ಲಿ ಬಂದಾಗ ನಂಬರ್ವಾರ್ ಪುರುಷಾರ್ಥದನುಸಾರ ಬರುತ್ತೀರಿ, ಎಲ್ಲರೂ ಒಟ್ಟಿಗೆ ಬರುವುದಿಲ್ಲ. ರಾಜಧಾನಿಯು ಸ್ಥಾಪನೆಯಾಗುತ್ತಿದೆ ಇದೆ, ಹೇಗೆ ತಂದೆಯು ಶಾಂತಿ, ಸುಖದ ಸಾಗರನಾಗಿದ್ದಾರೆ, ಮಕ್ಕಳನ್ನೂ ಸಹ ಇಂತಹ ಸುಖ-ಶಾಂತಿಯ ಸಾಗರರನ್ನಾಗಿ ಮಾಡುತ್ತಿದಾರೆ. ಇದರ ನಂತರ ಹೋಗಿ ಶಾಂತಿಧಾಮದಲ್ಲಿ ವಿರಾಜಮಾನವಾಗಬೇಕಾಗಿದೆ ಆದ್ದರಿಂದ ತಂದೆಯನ್ನು ಮತ್ತು ಮನೆಯನ್ನು, ಸುಖಧಾಮವನ್ನು ನೆನಪು ಮಾಡಬೇಕಾಗಿದೆ. ಇಲ್ಲಿ ನೀವು ಎಷ್ಟೆಷ್ಟು ಈ ಸ್ಥಿತಿಯಲ್ಲಿ ಕುಳಿತುಕೊಳ್ಳುತ್ತೀರೋ ನಿಮ್ಮ ಜನ್ಮ-ಜನ್ಮಾಂತರದ ಪಾಪಗಳು ಭಸ್ಮವಾಗುತ್ತವೆ, ಇದಕ್ಕೆ ಯೋಗಾಗ್ನಿಯೆಂದು ಹೇಳಲಾಗುತ್ತದೆ. ಸನ್ಯಾಸಿಗಳು ಸರ್ವಶಕ್ತಿವಂತನೊಂದಿಗೆ ಯೋಗವನ್ನಿಡುವುದಿಲ್ಲ, ಅವರು ಕೇವಲ ಇರುವ ಸ್ಥಾನವಾದ ಬ್ರಹ್ಮತತ್ವದೊಂದಿಗೆ ಯೋಗವನ್ನಿಡುತ್ತಾರೆ. ಅವರು ತತ್ವಯೋಗಿಗಳು ಬಹ್ಮ್ (ಅಥವಾ) ತತ್ವದೊಂದಿಗೆ ಯೋಗವನ್ನಿಡುವವರಾಗಿದ್ದಾರೆ. ಇಲ್ಲಿ ಜೀವಾತ್ಮರ ಆಟವು ನಡೆಯುತ್ತದೆ, ಅಲ್ಲಿ ಮಧುರ ಮನೆಯಲ್ಲಿ ಕೇವಲ ಆತ್ಮಗಳೇ ಇರುತ್ತಾರೆ. ಆ ಮಧುರ ಮನೆಯಲ್ಲಿ ಹೋಗುವುದಕ್ಕಾಗಿ ಇಡೀ ಪ್ರಪಂಚದವರು ಪುರುಷಾರ್ಥ ಮಾಡುತ್ತಾರೆ. ಸನ್ಯಾಸಿಗಳೂ ಸಹ ನಾವು ಬಹ್ಮ್ತತ್ವದಲ್ಲಿ ಲೀನವಾಗಿಬಿಡಬೇಕೆಂದು ಹೇಳುತ್ತಾರೆ ಆದರೆ ನಾವು ಬಹ್ಮ್ತತ್ವದಲ್ಲಿ ಹೋಗಿ ನಿವಾಸ ಮಾಡಬೇಕೆಂದು ಹೇಳುವುದಿಲ್ಲ. ಇದನ್ನಂತೂ ಈಗ ಮಕ್ಕಳು ಅರಿತುಕೊಂಡಿದ್ದೀರಿ. ಭಕ್ತಿಮಾರ್ಗದಲ್ಲಿ ಎಷ್ಟೊಂದು ವಿಸ್ತಾರವಾದ ಮಾತುಗಳನ್ನು ಕೇಳುತ್ತಿರುತ್ತಾರೆ. ಇಲ್ಲಂತೂ ತಂದೆಯು ಬಂದು ಕೇವಲ ಎರಡು ಶಬ್ಧಗಳನ್ನೇ ತಿಳಿಸುತ್ತಾರೆ. ಹೇಗೆ ಮಂತ್ರವನ್ನು ಜಪಿಸುತ್ತಾರಲ್ಲವೆ. ಕೆಲವರು ಗುರುಗಳನ್ನು ನೆನಪು ಮಾಡುತ್ತಾರೆ, ಕೆಲವರು ಮತ್ತೊಬ್ಬರನ್ನು ನೆನಪು ಮಾಡುತ್ತಾರೆ. ವಿದ್ಯಾರ್ಥಿಗಳು ಶಿಕ್ಷಕರನ್ನು ನೆನಪು ಮಾಡುತ್ತಾರೆ. ಈಗ ನೀವು ಮಕ್ಕಳಿಗೆ ಕೇವಲ ತಂದೆ ಮತ್ತು ಮನೆಯೇ ನೆನಪಿದೆ. ತಂದೆಯಿಂದ ನೀವು ಶಾಂತಿಧಾಮ ಮತ್ತು ಸುಖಧಾಮದ ಆಸ್ತಿಯನ್ನು ತೆಗೆದುಕೊಳ್ಳುತ್ತೀರಿ ಅದೇ ಮನಸ್ಸಿನಲ್ಲಿ ನೆನಪಿರುತ್ತದೆ- ಬಾಯಿಂದ ಏನೂ ಹೇಳಬೇಕಾಗಿಲ್ಲ ಏಕೆಂದರೆ ಬುದ್ಧಿಯಿಂದ ನೀವು ತಿಳಿದು ಕೊಂಡಿದ್ದೀರಿ- ಶಾಂತಿಧಾಮದ ನಂತರ ಸುಖಧಾಮವು ಬರುತ್ತದೆ. ನಾವು ಮೊದಲು ಮುಕ್ತಿಯಲ್ಲಿ ನಂತರ ಜೀವನ್ಮುಕ್ತಿಯಲ್ಲಿ ಹೋಗುತ್ತೇವೆ. ಮುಕ್ತಿ-ಜೀವನ್ಮುಕ್ತಿದಾತ ಒಬ್ಬ ತಂದೆಯೇ ಆಗಿದ್ದಾರೆ. ತಂದೆಯು ಮಕ್ಕಳಿಗೆ ಪದೇ ಪದೇ ತಿಳಿಸುತ್ತಾರೆ- ಮಕ್ಕಳೇ, ಸಮಯವನ್ನು ವ್ಯರ್ಥ ಮಾಡಬಾರದು, ಜನ್ಮ-ಜನ್ಮಾಂತರದ ಪಾಪದ ಹೊರೆಯು ತಲೆಯ ಮೇಲಿದೆ, ಈ ಜನ್ಮದ ಪಾಪ ಮೊದಲಾದವುಗಳ ಸ್ಮೃತಿಯಿರುತ್ತದೆ, ಸತ್ಯಯುಗದಲ್ಲಿ ಈ ಮಾತುಗಳಿರುವುದಿಲ್ಲ, ಇಲ್ಲಿ ಮಕ್ಕಳಿಗೆ ಗೊತ್ತಿದೆ- ಜನ್ಮ-ಜನ್ಮಾಂತರದ ಪಾಪದ ಹೊರೆಯಿದೆ. ಮೊಟ್ಟಮೊದಲನೆಯದ ಕಾಮವಿಕಾರದ ವಿಕರ್ಮವಾಗಿದೆ. ಯಾವುದನ್ನು ಜನ್ಮ-ಜನ್ಮಾಂತರದಿಂದ ಮಾಡುತ್ತಾ ಬಂದಿದ್ದೀರಿ ಮತ್ತು ತಂದೆಯ ನಿಂದನೆಯನ್ನೂ ಬಹಳ ಮಾಡಿದ್ದೀರಿ, ತಂದೆಯು ಸರ್ವರ ಸದ್ಗತಿ ಮಾಡುತ್ತಾರೆ. ಅಂತಹವರಿಗೆ ಎಂತಹ ನಿಂದನೆ ಮಾಡಿದ್ದಾರೆ, ಇದೆಲ್ಲವೂ ಗಮನದಲ್ಲಿಡಬೇಕಾಗಿದೆ. ಈಗ ಎಷ್ಟು ಸಾಧ್ಯವೋ ಅಷ್ಟು ತಂದೆಯನ್ನು ನೆನಪು ಮಾಡುವ ಪುರುಷಾರ್ಥ ಮಾಡಬೇಕಾಗಿದೆ. ವಾಸ್ತವದಲ್ಲಿ ಗುರುವಲ್ಲ. ವಾಹ್! ಸದ್ಗುರುವೆಂದು ಹೇಳಲಾಗುತ್ತದೆ. ವಾಹ್ ಗುರು ಎಂಬುದಕ್ಕೆ ಏನೂ ಅರ್ಥವಿಲ್ಲ ಆದ್ದರಿಂದ ವಾಹ್ ಸದ್ಗುರು! ಮುಕ್ತಿ-ಜೀವನ್ಮುಕ್ತಿಯನ್ನು ಅವರೇ ಕೊಡುತ್ತಾರಲ್ಲವೆ. ಆ ಗುರುಗಳಂತೂ ಅನೇಕರಿದ್ದಾರೆ ಆದರೆ ಇವರು ಒಬ್ಬರೇ ಸದ್ಗುರುವಾಗಿದ್ದಾರೆ. ನೀವೂ ಸಹ ಅನೇಕ ಗುರುಗಳನ್ನು ಮಾಡಿಕೊಂಡಿದ್ದೀರಿ. ಪ್ರತೀ ಜನ್ಮದಲ್ಲಿ 2-4 ಜನ ಗುರುಗಳನ್ನು ಮಾಡಿಕೊಳ್ಳುತ್ತಾರೆ, ಗುರುಗಳನ್ನಾಗಿ ಮಾಡಿಕೊಂಡು ಅನ್ಯಸ್ಥಾನಗಳಿಗೆ ಹೋಗುತ್ತಾರೆ. ಬಹುಷಃ ಇಲ್ಲಿಂದ ಒಳ್ಳೆಯ ಮಾರ್ಗವು ಸಿಗುತ್ತದೆ ಎಂದು ಹೇಳಿ ಬೇರೆ-ಬೇರೆ ಗುರುಗಳಿಂ&#