31.08.25 Avyakt Bapdada
Kannada
Murli 15.12.2006 Om Shanti Madhuban
ಸ್ಮೃತಿ ಸ್ವರೂಪರು,
ಅನುಭವಿ ಮೂರ್ತಿಗಳಾಗಿ ಸೆಕೆಂಡಿನ ತೀವ್ರ ಗತಿಯಿಂದ ಪರಿವರ್ತನೆ ಮಾಡಿಕೊಂಡು ಪಾಸ್-ವಿತ್-ಆನರ್
ಆಗಿರಿ.
ಇಂದು ಬಾಪ್ದಾದಾ
ನಾಲ್ಕಾರು ಕಡೆಯ ಮಕ್ಕಳ ಮಸ್ತಕದಲ್ಲಿ ಹೊಳೆಯುತ್ತಿರುವ ಮೂರು ವಿಶೇಷ ಭಾಗ್ಯದ ರೇಖೆಗಳನ್ನು
ನೋಡುತ್ತಿದ್ದೇವೆ. ಎಲ್ಲರ ಮಸ್ತಕವು ಭಾಗ್ಯದ ರೇಖೆಗಳಿಂದ ಹೊಳೆಯುತ್ತಿದೆ. ಒಂದು ಪರಮಾತ್ಮ ಪಾಲನೆಯ
ಭಾಗ್ಯದ ರೇಖೆಯಾಗಿದೆ, ಎರಡನೆಯದು ಶ್ರೇಷ್ಠ ಶಿಕ್ಷಕನ ಮೂಲಕ ಶಿಕ್ಷಣದ ಭಾಗ್ಯದ ರೇಖೆ, ಮೂರನೆಯದು
ಸದ್ಗುರುವಿನ ಮೂಲಕ ಶ್ರೀಮತದ ಭಾಗ್ಯದ ರೇಖೆ. ವಾಸ್ತವದಲ್ಲಿ ತಮ್ಮ ಭಾಗ್ಯವು ಅಪಾರವಾಗಿದೆ, ಆದರೂ
ಇಂದು ಈ ವಿಶೇಷ ಮೂರು ರೇಖೆಗಳನ್ನು ನೋಡುತ್ತಿದ್ದೇವೆ. ತಾವೂ ಸಹ ತಮ್ಮ ಮಸ್ತಕದಲ್ಲಿ
ಹೊಳೆಯುತ್ತಿರುವ ರೇಖೆಗಳನ್ನು ಅನುಭವ ಮಾಡುತ್ತಿದ್ದೀರಲ್ಲವೆ. ಎಲ್ಲದಕ್ಕಿಂತ ಶ್ರೇಷ್ಠವಾಗಿದೆ -
ಪರಮಾತ್ಮ ಪ್ರೀತಿಯ ಪಾಲನೆಯ ರೇಖೆ. ಹೇಗೆ ತಂದೆಯು ಸರ್ವ ಶ್ರೇಷ್ಠನಾಗಿದ್ದಾರೆಯೋ ಹಾಗೆಯೇ ಪರಮಾತ್ಮ
ಪಾಲನೆಯೂ ಸಹ ಸರ್ವ ಶ್ರೇಷ್ಠವಾಗಿದೆ. ಈ ಪಾಲನೆಯು ಕೆಲವರಿಗೆ ಮಾತ್ರವೇ ಪ್ರಾಪ್ತಿಯಾಗುತ್ತವೆ ಆದರೆ
ತಾವೆಲ್ಲರೂ ಈ ಪಾಲನೆಗೆ ಪಾತ್ರರಾಗಿದ್ದೀರಿ. ಈ ಪಾಲನೆಯು ಇಡೀ ಕಲ್ಪದಲ್ಲಿ ತಾವು ಮಕ್ಕಳಿಗೆ ಒಂದೇ
ಬಾರಿ ಪ್ರಾಪ್ತಿಯಾಗುತ್ತದೆ. ಈಗಿಲ್ಲದಿದ್ದರೆ ಮತ್ತೆಂದೂ ಪ್ರಾಪ್ತಿಯಾಗುವುದಿಲ್ಲ. ಈ ಪರಮಾತ್ಮ
ಪಾಲನೆ, ಪರಮಾತ್ಮ ಪ್ರೀತಿ, ಪರಮಾತ್ಮ ಪ್ರಾಪ್ತಿಗಳು ಕೋಟಿಯಲ್ಲಿ ಕೆಲವು ಆತ್ಮರಿಗೆ
ಅನುಭವವಾಗುತ್ತದೆ. ತಾವೆಲ್ಲರೂ ಅನುಭವಿಗಳಾಗಿದ್ದೀರಲ್ಲವೆ! ಅನುಭವವಿದೆಯೇ? ಪಾಲನೆಯ ಅನುಭವವೂ ಇದೆ,
ವಿದ್ಯೆ ಮತ್ತು ಶ್ರೀಮತದ ಅನುಭವವೂ ಇದೆ. ಅನುಭವಿ ಮೂರ್ತಿಗಳಾಗಿದ್ದೀರಿ ಅಂದಮೇಲೆ ಸದಾ ತಮ್ಮ
ಮಸ್ತಕದಲ್ಲಿ ಈ ಭಾಗ್ಯದ ನಕ್ಷತ್ರವು ಹೊಳೆಯುತ್ತಿರುವುದು ಕಂಡು ಬರುತ್ತದೆಯೇ, ಸದಾ? ಅಥವಾ
ಕೆಲವೊಮ್ಮೆ ಹೊಳೆಯುತ್ತಿರುವ ನಕ್ಷತ್ರ, ಕೆಲವೊಮ್ಮೆ ಮಸುಕಾಗುತ್ತದೆಯೇ? ಡೀಲಾ ಆಗಬಾರದು. ಒಂದುವೇಳೆ
ಹೊಳೆಯುತ್ತಿರುವ ನಕ್ಷತ್ರವು ಮಸುಕಾಗುತ್ತದೆಯೆಂದರೆ ಅದಕ್ಕೆ ಕಾರಣವೇನು? ತಿಳಿದುಕೊಂಡಿದ್ದೀರಾ?
ಬಾಪ್ದಾದಾ ನೋಡಿದ್ದೇವೆ
- ಇದಕ್ಕೆ ಕಾರಣವೇನೆಂದರೆ, ಸ್ಮೃತಿ ಸ್ವರೂಪರಾಗಿಲ್ಲ. ನಾನಾತ್ಮನಾಗಿದ್ದೇನೆ ಎಂದುಕೊಳ್ಳುತ್ತೀರಿ
ಆದರೆ ಆಲೋಚನಾ ಸ್ವರೂಪರಾಗುತ್ತೀರಿ. ಸ್ಮೃತಿ ಸ್ವರೂಪರು ಕಡಿಮೆ ಆಗುತ್ತೀರಿ. ಎಲ್ಲಿಯವರೆಗೆ ಸದಾ
ಸ್ಮೃತಿ ಸ್ವರೂಪರಾಗುವುದಿಲ್ಲವೋ ಅಂದರೆ ಸ್ಮೃತಿಯೇ ಸಾಮರ್ಥ್ಯವನ್ನು ತರಿಸುತ್ತದೆ. ಸ್ಮೃತಿ
ಸ್ವರೂಪರೇ ಸಮರ್ಥ ಸ್ವರೂಪರು ಆದ್ದರಿಂದ ಭಾಗ್ಯದ ನಕ್ಷತ್ರದ ಹೊಳಪು ಕಡಿಮೆಯಾಗುತ್ತದೆ ಅಂದಮೇಲೆ
ತಮ್ಮನ್ನು ತಾವು ಕೇಳಿಕೊಳ್ಳಿ- ಹೆಚ್ಚು ಸಮಯ ಯೋಚನಾಸ್ವರೂಪರಾಗುತ್ತೀರೋ ಅಥವಾ ಸ್ಮೃತಿ
ಸ್ವರೂಪರಾಗುತ್ತೀರೋ? ಆಲೋಚನಾ ಸ್ವರೂಪರಾಗುವುದರಿಂದ ಬಹಳ ಚೆನ್ನಾಗಿ ಯೋಚಿಸುತ್ತೀರಿ, ನಾನು
ಇದಾಗಿದ್ದೇನೆ, ನಾನು ಇಂತಹವನಾಗಿದ್ದೇನೆ...... ಎಂದು. ಆದರೆ ಸ್ಮೃತಿಯಿಲ್ಲದಿರುವ ಕಾರಣ ಹೀಗೆ
ಆಲೋಚಿಸುತ್ತಾ ವ್ಯರ್ಥ ಸಂಕಲ್ಪ, ಸಾಧಾರಣ ಸಂಕಲ್ಪಗಳೂ ಸಹ ಬೆರಕೆಯಾಗಿ ಬಿಡುತ್ತವೆ. ವಾಸ್ತವದಲ್ಲಿ
ನೋಡಿದಾಗ ತಮ್ಮ ಅನಾದಿ ಸ್ವರೂಪವು ಸ್ಮೃತಿ ಸೋ ಸಮರ್ಥ ಸ್ವರೂಪವಾಗಿದೆ, ಕೇವಲ ಯೋಚಿಸುವವರಲ್ಲ,
ಸ್ವರೂಪರಾಗಿದ್ದೀರಿ. ಮತ್ತು ಆದಿಯಲ್ಲಿಯೂ ಈ ಸಮಯದ ಸ್ಮೃತಿ ಸ್ವರೂಪದ ಪ್ರಾಲಬ್ಧವು
ಪ್ರಾಪ್ತಿಯಾಗುತ್ತದೆ ಅಂದಾಗ ಅನಾದಿ ಮತ್ತು ಆದಿ ಸ್ಮೃತಿ ಸ್ವರೂಪವಾಗಿದೆ ಮತ್ತು ಈ ಸಮಯ
ಅಂತಿಮದಲ್ಲಿ ಸಂಗಮದ ಸಮಯದಲ್ಲಿಯೂ ಸ್ಮೃತಿ ಸ್ವರೂಪರಾಗುತ್ತೀರಿ. ಅಂದಾಗ ಆದಿ-ಅನಾದಿ ಮತ್ತು ಅಂತ್ಯ
ಮೂರೂ ಕಾಲಗಳಲ್ಲಿ ಸ್ಮೃತಿ ಸ್ವರೂಪರಾಗಿದ್ದೀರಿ. ಯೋಚನಾ ಸ್ವರೂಪರಲ್ಲ ಆದ್ದರಿಂದ ಬಾಪ್ದಾದಾ ಮೊದಲೂ
ಸಹ ಹೇಳಿದೆವು - ವರ್ತಮಾನ ಸಮಯದಲ್ಲಿ ಅನುಭವೀ ಮೂರ್ತಿಗಳಾಗುವುದು ಶ್ರೇಷ್ಠ ಸ್ಥಿತಿಯಾಗಿದೆ.
ನಾನಾತ್ಮನಾಗಿದ್ದೇನೆ, ಪರಮಾತ್ಮ ಪ್ರಾಪ್ತಿಯಾಗಿದೆ ಎಂದು ಆಲೋಚಿಸುತ್ತೀರಿ ಆದರೆ
ತಿಳಿದುಕೊಳ್ಳುವುದು ಮತ್ತು ಅನುಭವ ಮಾಡುವುದರಲ್ಲಿ ಬಹಳ ಅಂತರವಿದೆ. ಅನುಭವೀ ಮೂರ್ತಿಯು ಎಂದೂ ಸಹ
ಮಾಯೆಯೊಂದಿಗೆ ಮೋಸ ಹೋಗಲು ಸಾಧ್ಯವಿಲ್ಲ, ದುಃಖದ ಅನುಭೂತಿ ಮಾಡಲು ಸಾಧ್ಯವಿಲ್ಲ. ಈಗ
ಮಧ್ಯ-ಮಧ್ಯದಲ್ಲಿ ಯಾವ ಮಾಯೆಯ ಆಟವನ್ನು ನೋಡುತ್ತೀರೋ, ಆಟವನ್ನು ಆಡುತ್ತೀರೋ ಅದಕ್ಕೆ
ಕಾರಣವೇನೆಂದರೆ ಅನುಭವೀ ಮೂರ್ತಿಯ ಕೊರತೆ. ಅನುಭವದ ಅಥಾರಿಟಿಯು ಎಲ್ಲದಕ್ಕಿಂತ ಶ್ರೇಷ್ಠವಾಗಿದೆ
ಆದ್ದರಿಂದ ಬಾಪ್ದಾದಾ ನೋಡಿದೆವು - ಕೆಲವು ಮಕ್ಕಳು ಯೋಚಿಸುತ್ತಾರೆ ಆದರೆ ಸ್ವರೂಪದ ಅನುಭೂತಿಯು
ಕಡಿಮೆಯಿದೆ.
ಇಂದಿನ ಪ್ರಪಂಚದಲ್ಲಿ
ಮೆಜಾರಿಟಿ ಆತ್ಮರು ನೋಡುವ ಮತ್ತು ಕೇಳುವುದರಿಂದ ಸುಸ್ತಾಗಿ ಬಿಟ್ಟಿದ್ದಾರೆ, ಆದರೆ ಅನುಭವದ ಮೂಲಕ
ಪ್ರಾಪ್ತಿ ಮಾಡಿಕೊಳ್ಳಲು ಇಚ್ಛಿಸುತ್ತಾರೆ ಆದ್ದರಿಂದ ಅನುಭವಿಗಳೇ ಅನುಭವ ಮಾಡಿಸಲು ಸಾಧ್ಯ. ಮತ್ತು
ಅನುಭವಿ ಆತ್ಮನು ಸದಾ ಮುಂದುವರೆಯುತ್ತಾ ಇರುವರು, ಹಾರುತ್ತಾ ಇರುವರು ಏಕೆಂದರೆ ಅನುಭವೀ ಆತ್ಮನಲ್ಲಿ
ಉಮ್ಮಂಗ-ಉತ್ಸಾಹವು ಸದಾ ಇಮರ್ಜ್ ರೂಪದಲ್ಲಿರುತ್ತದೆ ಅಂದಮೇಲೆ ಪರಿಶೀಲನೆ ಮಾಡಿಕೊಳ್ಳಿ - ಪ್ರತೀ
ಮಾತಿನ ಅನುಭವಿಗಳಾಗಿದ್ದೀರಾ? ಅನುಭವದ ಅಥಾರಿಟಿಯು ತಮ್ಮ ಪ್ರತೀ ಕರ್ಮದಲ್ಲಿ ಕಂಡು ಬರುತ್ತದೆಯೇ?
ಪ್ರತೀ ಮಾತು, ಪ್ರತೀ ಸಂಕಲ್ಪವು ಅನುಭವದ ಅಥಾರಿಟಿಯಿಂದ ಇದೆಯೇ ಅಥವಾ ಕೇವಲ ತಿಳಿದುಕೊಳ್ಳುವ
ಆಧಾರದ ಮೇಲಿದೆಯೇ? ಒಂದಾಗಿದೆ- ತಿಳಿದುಕೊಳ್ಳುವುದು, ಇನ್ನೊಂದಾಗಿದೆ ಅನುಭವ ಮಾಡುವುದು. ಪ್ರತೀ
ಸಬ್ಜೆಕ್ಟ್ನಲ್ಲಿ ಜ್ಞಾನದ ಮಾತುಗಳನ್ನು ವರ್ಣನೆ ಮಾಡುವುದಂತೂ ಹೊರಗಿನ ಭಾಷಣಕಾರರೂ ಸಹ ಬಹಳ
ಚೆನ್ನಾಗಿ ಭಾಷಣ ಮಾಡಿ ಬಿಡುತ್ತಾರೆ ಆದರೆ ಪ್ರತೀ ಮಾತಿನ ಅನುಭವಿ ಸ್ವರೂಪರಾಗುವವರೇ ಜ್ಞಾನಿ
ಆತ್ಮರು. ಯೋಗ ಮಾಡುವವರು, ಯೋಗದಲ್ಲಿ ಕುಳಿತುಕೊಳ್ಳುವವರು ಅನೇಕರಿದ್ದಾರೆ ಆದರೆ ಯೋಗದ ಅನುಭವ
ಅರ್ಥಾತ್ ಶಕ್ತಿ ಸ್ವರೂಪರಾಗಬೇಕಾಗಿದೆ ಮತ್ತು ಶಕ್ತಿ ಸ್ವರೂಪದ ಗುರುತೇನೆಂದರೆ ಯಾವ ಸಮಯದಲ್ಲಿ
ಯಾವ ಶಕ್ತಿಯ ಅವಶ್ಯಕತೆಯಿದೆಯೋ ಆ ಸಮಯದಲ್ಲಿ ಆ ಶಕ್ತಿಯನ್ನು ಆಹ್ವಾನ ಮಾಡಿ ನಿರ್ವಿಘ್ನ
ಸ್ವರೂಪರಾಗಿ ಬಿಡುವುದು. ಒಂದುವೇಳೆ ಒಂದು ಶಕ್ತಿಯ ಕೊರತೆಯಿದೆ, ವರ್ಣನೆಯಿದೆ ಆದರೆ ಅದರ
ಸ್ವರೂಪರಾಗದಿದ್ದರೂ ಸಹ ಸಮಯದಲ್ಲಿ ಮೋಸ ಹೋಗುವ ಸಾಧ್ಯತೆಯಿದೆ. ಉದಾಹರಣೆಗೆ: ಸಹನಶಕ್ತಿಯು
ಬೇಕಾಗಿದೆ ಮತ್ತು ತಾವು ಎದುರಿಸುವ ಶಕ್ತಿಯನ್ನು ಉಪಯೋಗಿಸುತ್ತೀರಿ ಎಂದರೆ ಯೋಗಯುಕ್ತ ಅನುಭವೀ
ಸ್ವರೂಪರೆಂದು ಹೇಳಲಾಗುವುದಿಲ್ಲ. ನಾಲ್ಕೂ ಸಬ್ಜೆಕ್ಟ್ಗಳಲ್ಲಿ ಸ್ಮೃತಿ ಸ್ವರೂಪರು ಹಾಗೂ ಅನುಭವೀ
ಸ್ವರೂಪರ ಚಿಹ್ನೆಗಳು ಏನಿರುವುದು? ಸ್ಥಿತಿಯಲ್ಲಿ ನಿಮಿತ್ತ ಭಾವ, ವೃತ್ತಿಯಲ್ಲಿ ಸದಾ ಶುಭ ಭಾವ
ಆತ್ಮಿಕ ಭಾವ, ನಿಸ್ವಾರ್ಥ ಭಾವ. ವಾಯುಮಂಡಲದಲ್ಲಿ ಹಾಗೂ ಸಂಬಂಧ-ಸಂಪರ್ಕದಲ್ಲಿ ಸದಾ ನಿರ್ಮಾಣಭಾವ,
ವಾಣಿಯಲ್ಲಿ ಸದಾ ನಿರ್ಮಲವಾಣಿ. ಈ ವಿಶೇಷತೆಗಳು ಅನುಭವಿ ಮೂರ್ತಿ ಆತ್ಮನಲ್ಲಿ ಪ್ರತೀ ಸಮಯ
ಸ್ವಾಭಾವಿಕ ಸಂಸ್ಕಾರವಾಗಿರುತ್ತದೆ. ನ್ಯಾಚುರಲ್ ನೇಚರ್ ಆಗಿರುತ್ತದೆ. ಈಗ ಕೆಲವು ಮಕ್ಕಳು
ಕೆಲಕೆಲವೊಮ್ಮೆ ಹೇಳುತ್ತಾರೆ - ಈ ರೀತಿ ಮಾಡಬೇಕೆಂದು ನಮಗೇನು ಇಷ್ಟವಿಲ್ಲ ಆದರೆ ಇದು ನನ್ನ ಹಳೆಯ
ಸಂಸ್ಕಾರವಾಗಿದೆ ಎಂದು. ಸ್ವಾಭಾವಿಕ ಸಂಸ್ಕಾರವು ಅದೇ ಕೆಲಸ ಮಾಡುತ್ತದೆ, ಯೋಚಿಸಬೇಕಾಗುವುದಿಲ್ಲ
ಆದರೆ ಆ ಸ್ವಾಭಾವಿಕ ಸಂಸ್ಕಾರವೇ ಕೆಲಸ ಮಾಡತೊಡಗುತ್ತದೆ ಅಂದಾಗ ತಮ್ಮನ್ನು ಪರಿಶೀಲಿಸಿಕೊಳ್ಳಿ-
ನನ್ನ ಸ್ವಾಭಾವಿಕ ಸಂಸ್ಕಾರವು ಯಾವುದಾಗಿದೆ? ಒಂದುವೇಳೆ ಯಾವುದೇ ಹಳೆಯ ಸಂಸ್ಕಾರವು ಅಂಶ
ಮಾತ್ರದಲ್ಲಿದ್ದರೂ ಸಹ ಪ್ರತೀ ಸಮಯ ಅದು ಕಾರ್ಯದಲ್ಲಿ ಬರುತ್ತಾ-ಬರುತ್ತಾ ಪಕ್ಕಾ ಸಂಸ್ಕಾರವಾಗಿ
ಬಿಡುತ್ತದೆ. ಅದನ್ನು ಸಮಾಪ್ತಿ ಮಾಡುವುದಕ್ಕಾಗಿ ಹಳೆಯ ಸಂಸ್ಕಾರ, ಹಳೆಯ ಸ್ವಭಾವವನ್ನು ಸಮಾಪ್ತಿ
ಮಾಡಿಕೊಳ್ಳಲು ಬಯಸುತ್ತೀರಿ ಆದರೆ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ ಅದಕ್ಕೆ ಕಾರಣವೇನು?
ಎಲ್ಲದರಲ್ಲಿ ಜ್ಞಾನಪೂರ್ಣರಂತೂ ಆಗಿ ಬಿಟ್ಟಿದ್ದೀರಿ ಆದರೆ ಯಾವುದನ್ನು ಆಗಬಾರದೆಂದು ಬಯಸುತ್ತೀರೋ
ಅದು ಆಗಿ ಬಿಡುತ್ತದೆ. ಅದಕ್ಕೆ ಕಾರಣವೇನು? ಪರಿವರ್ತನೆ ಮಾಡಿಕೊಳ್ಳುವ ಶಕ್ತಿಯ ಕೊರತೆಯಿದೆ.
ಮೆಜಾರಿಟಿ ಮಕ್ಕಳಲ್ಲಿ ಪರಿವರ್ತನಾಶಕ್ತಿಯು ಕಂಡುಬರುತ್ತದೆ, ತಿಳಿದುಕೊಳ್ಳುತ್ತಾರೆ ವರ್ಣನೆಯನ್ನೂ
ಮಾಡುತ್ತಾರೆ. ಒಂದುವೇಳೆ ಎಲ್ಲರಿಗೆ ಪರಿವರ್ತನಾ ಶಕ್ತಿಯ ವಿಷಯದ ಮೇಲೆ ಬರೆಯಲು ಅಥವಾ ಭಾಷಣ ಮಾಡಲು
ಹೇಳಿದರೆ ಎಲ್ಲರೂ ಬಹಳ ಬುದ್ಧಿವಂತರಾಗಿದ್ದಾರೆ. ಬಹಳ ಚೆನ್ನಾಗಿ ಭಾಷಣವನ್ನೂ ಮಾಡುತ್ತಾರೆ,
ಬರೆಯುತ್ತಾರೆ ಮತ್ತು ಅನ್ಯರು ಯಾರಾದರೂ ಬಂದರೆ ಅವರಿಗೆ ಪರವಾಗಿಲ್ಲ, ಪರಿವರ್ತನೆ ಮಾಡಿಕೊಳ್ಳಿ
ಎಂದು ಬಹಳ ಚೆನ್ನಾಗಿ ತಿಳಿಸುತ್ತಾರೆ. ಆದರೆ ಸ್ವಯಂನಲ್ಲಿ ಮಾಡಿಕೊಳ್ಳುವ ಶಕ್ತಿ ಮತ್ತು ವರ್ತಮಾನ
ಸಮಯದ ಮಹತ್ವಿಕೆಯನ್ನು ಅರಿತುಕೊಂಡು ಪರಿವರ್ತನೆ ಮಾಡಿಕೊಳ್ಳುವುದರಲ್ಲಿ ಸಮಯ ತೊಡಗಿಸಬಾರದು.
ಸೆಕೆಂಡಿನಲ್ಲಿ ಪರಿವರ್ತನಾಶಕ್ತಿ ಬರಲಿ ಏಕೆಂದರೆ ಇದು ನನ್ನಿಂದ ಆಗಬಾರದು ಎಂದು ಯಾವಾಗ
ತಿಳಿದುಕೊಳ್ಳುತ್ತೀರಿ ಅಂದಮೇಲೆ ತಿಳಿದುಕೊಂಡಿದ್ದರೂ ಒಂದುವೇಳೆ ಪರಿವರ್ತನೆ ಮಾಡಿಕೊಳ್ಳಲು
ಸಾಧ್ಯವಾಗುತ್ತಿಲ್ಲವೆಂದರೆ ಅದಕ್ಕೆ ಕಾರಣವಾಗಿದೆ-ಯೋಚಿಸುತ್ತೀರಿ ಆದರೆ ಸ್ವರೂಪರಾಗುತ್ತಿಲ್ಲ. ಇಡೀ
ದಿನದಲ್ಲಿ ಹೆಚ್ಚು ಯೋಚನಾ ಸ್ವರೂಪರಾಗುತ್ತೀರಿ, ಸ್ಮೃತಿ ಸೋ ಸಮರ್ಥ ಸ್ವರೂಪರಾಗುವವರು ಮೆಜಾರಿಟಿ
ಕಡಿಮೆಯಿದ್ದಾರೆ.
ಈಗ ತೀವ್ರ ಗತಿಯ
ಸಮಯವಾಗಿದೆ, ತೀವ್ರ ಪುರುಷಾರ್ಥದ ಸಮಯವಾಗಿದೆ, ಸಾಧಾರಣ ಪುರುಷಾರ್ಥದ ಸಮಯವಲ್ಲ. ಸೆಕೆಂಡಿನಲ್ಲಿ
ಪರಿವರ್ತನೆಯ ಅರ್ಥವೇನೆಂದರೆ ಸ್ಮೃತಿಸ್ವ ರೂಪದ ಮೂಲಕ ಒಂದು ಸೆಕೆಂಡಿನಲ್ಲಿ ನಿರ್ವಿಕಲ್ಪ, ವ್ಯರ್ಥ
ಸಂಕಲ್ಪವು ನಿವೃತ್ತವಾಗಿ ಬಿಡಲಿ. ಏಕೆ? ಸಮಯದ ಸಮಾಪ್ತಿಯನ್ನು ಸಮೀಪ ತರಲು ನಿಮಿತ್ತರಾಗಿದ್ದೀರಿ
ಅಂದಮೇಲೆ ಈಗಿನ ಸಮಯದ ಮಹತ್ವದ ಪ್ರಮಾಣ ಪ್ರತೀ ಹೆಜ್ಜೆಯಲ್ಲಿ ಪದುಮದಷ್ಟು ಸಮಾವೇಶವಾಗಿದೆ
ಎಂಬುದನ್ನೂ ತಿಳಿದುಕೊಂಡಿದ್ದೀರಿ ಮತ್ತು ಅದನ್ನು ವೃದ್ಧಿ ಮಾಡಿಕೊಳ್ಳಬೇಕು ಎಂಬುದನ್ನೂ
ಬುದ್ಧಿಯಲ್ಲಿಟ್ಟುಕೊಳ್ಳುತ್ತೀರಿ ಆದರೆ ಕಳೆದುಕೊಳ್ಳುವ ವಿಚಾರವನ್ನೂ ಬುದ್ಧಿಯಲ್ಲಿಟ್ಟುಕೊಳ್ಳಿ.
ಒಂದುವೇಳೆ ಹೆಜ್ಜೆ-ಹೆಜ್ಜೆಯಲ್ಲಿ ಪದುಮದಷ್ಟು ಸಂಪಾದನೆಯಾಗುತ್ತದೆಯೆಂದರೆ ಹೆಜ್ಜೆ-ಹೆಜ್ಜೆಯಲ್ಲಿ
ಪದುಮದಷ್ಟನ್ನೂ ಕಳೆದುಕೊಳ್ಳುತ್ತೀರಿ, ಇಲ್ಲವೆ? ಈಗ ನಿಮಿಷದ ಮಾತು ಹೋಯಿತು, ಅನ್ಯರಿಗೆ ಒಂದು
ನಿಮಿಷ ಶಾಂತಿಯಲ್ಲಿರಿ ಎಂದು ಹೇಳುತ್ತೀರಿ ಆದರೆ ಈಗ ತಮ್ಮೆಲ್ಲರಿಗಾಗಿ ಸೆಕೆಂಡಿನ ಮಾತು ಆಗಬೇಕು.
ಹೇಗೆ ಹೌದು ಅಥವಾ ಇಲ್ಲ ಎಂದು ಯೋಚಿಸುವುದರಲ್ಲಿ ಎಷ್ಟು ಸಮಯ ಹಿಡಿಸುತ್ತದೆ? ಒಂದು ಸೆಕೆಂಡ್.
ಹಾಗೆಯೇ ಪರಿವರ್ತನಾ ಶಕ್ತಿಯು ಇಷ್ಟು ತೀವ್ರವಾಗಬೇಕು. ಇದು ಸರಿಯೇ ಅಥವಾ ಸರಿಯಿಲ್ಲವೆ ಎಂದು
ತಿಳಿದುಕೊಂಡಿರಿ ಅಂದಮೇಲೆ ಸರಿಯಿಲ್ಲದಿದ್ದರೆ ಅದಕ್ಕೆ ಬಿಂದುವನ್ನಿಡಿ ಮತ್ತು ಸರಿಯಿದ್ದರೆ ಅದನ್ನು
ಕಾರ್ಯದಲ್ಲಿ ತನ್ನಿರಿ. ಈಗ ಬಿಂದುವಿನ ಮಹತ್ವವನ್ನು ಕಾರ್ಯದಲ್ಲಿ ತೊಡಗಿಸಿರಿ. ಮೂರು ಬಿಂದುಗಳನ್ನು
ತಿಳಿದುಕೊಂಡಿದ್ದೀರಲ್ಲವೆ ಆದರೆ ಬಿಂದುವನ್ನು ಕಾರ್ಯದಲ್ಲಿ ತೊಡಗಿಸಿರಿ. ಹೇಗೆ ವೈಜ್ಞಾನಿಕ
ಶಕ್ತಿಯವರು ಎಲ್ಲಾ ಮಾತುಗಳಲ್ಲಿ ತೀವ್ರ ಗತಿಯನ್ನು ತರುತ್ತಿದ್ದಾರೆ ಮತ್ತು ಪರಿವರ್ತನೆಯ
ಶಕ್ತಿಯನ್ನೂ ಸಹ ಹೆಚ್ಚು ಕಾರ್ಯದಲ್ಲಿ ತೊಡಗಿಸುತ್ತಿದ್ದಾರೆ ಅಂದಮೇಲೆ ಈಗ ಶಾಂತಿಯ ಶಕ್ತಿಯವರೂ ಸಹ
ಒಂದುವೇಳೆ ಪರಿವರ್ತನೆ ಮಾಡಿಕೊಳ್ಳಬೇಕೆಂದರೆ ಈಗ ಲಕ್ಷ್ಯವನ್ನಿಟ್ಟುಕೊಳ್ಳಿ- ಜ್ಞಾನಪೂರ್ಣರಂತೂ
ಆಗಿದ್ದೀರಿ ಆದ್ದರಿಂದ ಈಗ ಶಕ್ತಿಪೂರ್ಣರಾಗಿ. ಅದೂ ಸೆಕೆಂಡಿನ ಗತಿಯಲ್ಲಿ! ಮಾಡುತ್ತಿದ್ದೇವೆ, ಆಗಿ
ಬಿಡುತ್ತೇವೆ...... ಮಾಡುತ್ತೇವೆ ಅಲ್ಲ. ಇದು ಆಗುತ್ತದೆಯೇ ಅಥವಾ ಕಷ್ಟವೇ? ಏಕೆಂದರೆ ಅಂತಿಮ
ಸಮಯದಲ್ಲಿ ಸೆಕೆಂಡಿನ ಪರೀಕ್ಷೆಯು ಬರುವುದು, ಒಂದು ನಿಮಿಷದ್ದಲ್ಲ ಅದಕ್ಕಾಗಿ ಸೆಕೆಂಡಿನ ಅಭ್ಯಾಸವು
ಬಹಳ ಕಾಲದಿಂದ ಇದ್ದಾಗಲೇ ಸೆಕೆಂಡಿನಲ್ಲಿ ಪಾಸ್-ವಿತ್-ಆನರ್ ಆಗುತ್ತೀರಲ್ಲವೆ. ಪರಮಾತ್ಮನ
ವಿದ್ಯಾರ್ಥಿಗಳಾಗಿದ್ದೀರಿ, ಪರಮಾತ್ಮನ ವಿದ್ಯೆಯನ್ನು ಓದುತ್ತಿದ್ದೀರಿ ಅಂದಮೇಲೆ ಪಾಸ್-ವಿತ್-ಆನರ್
ಆಗಲೇಬೇಕಲ್ಲವೆ. ಕೇವಲ ಪಾಸ್ ಮಾರ್ಕ್ಸ್ ತೆಗೆದುಕೊಂಡರೆ ಏನಾಯಿತು? ಪಾಸ್-ವಿತ್-ಆನರ್ ಆಗಬೇಕು.
ಯಾವ ಲಕ್ಷ್ಯವನ್ನಿಟ್ಟುಕೊಂಡಿದ್ದೀರಿ? ಪಾಸ್-ವಿತ್-ಆನರ್ ಆಗಬೇಕೆಂದು ಯಾರು ತಿಳಿದುಕೊಳ್ಳುತ್ತೀರೋ
ಅವರು ಕೈಯೆತ್ತಿರಿ. ಪಾಸ್-ವಿತ್-ಆನರ್, ಆನರ್ (ಗೌರವಾನ್ವಿತ) ಶಬ್ಧವನ್ನು ಅಂಡರ್ಲೈನ್ ಮಾಡಿಕೊಳ್ಳಿ.
ಒಳ್ಳೆಯದು - ಈಗ ಏನು ಮಾಡಬೇಕಾಗುವುದು? ಮಿನಿಟ್ ಮೋಟಾರು ಕಾಮನ್ ಆಗಿದೆ. ಅಂದಮೇಲೆ ಈಗ ಸೆಕೆಂಡಿನ
ಕೆಲಸವಾಗಿದೆ.
ಹಾ! ಪಂಜಾಬ್ನವರೇ, ಇದು
ಈಗ ಸೆಕೆಂಡಿನ ಕೆಲಸವಾಗಿದೆ. ಇದರಲ್ಲಿ ನಂಬರ್ವನ್ ಯಾರಾಗುವರು? ಪಂಜಾಬ್. ಇದೇನು ದೊಡ್ಡ ಮಾತು ಎಂದು
ಎಷ್ಟು ಹೆಮ್ಮೆಯಿಂದ ಹೇಳುತ್ತೀರಿ! ಬಹಳ ಚೆನ್ನಾಗಿ ಹೇಳುತ್ತೀರಿ. ಬಾಪ್ದಾದಾ ಇದನ್ನು ಕೇಳಿದಾಗ
ಬಹಳ ಖುಷಿ ಪಡುತ್ತೇವೆ. ಇದೇನು ದೊಡ್ಡ ಮಾತು, ಬಾಪ್ದಾದಾ ಜೊತೆಯಿದ್ದಾರೆಂದು ಹೇಳುತ್ತೀರಿ ಅಂದಮೇಲೆ
ಅಥಾರಿಟಿಯು ಜೊತೆಯಿದ್ದಾರೆಂದರೆ ಈಗ ಏನು ಮಾಡಬೇಕಾಗಿದೆ? ಈಗ ತೀವ್ರವಾಗಬೇಕಾಗುವುದು. ಸೇವೆಯನ್ನಂತೂ
ಮಾಡುತ್ತಿದ್ದೀರಿ ಮತ್ತು ಸೇವೆಯಿಲ್ಲದೆ ಮಾಡುವುದಾದರೂ ಏನು? ಖಾಲಿಯಾಗಿ ಕುಳಿತುಕೊಳ್ಳುವಿರಾ?
ಸೇವೆಯಂತೂ ಬ್ರಾಹ್ಮಣ ಆತ್ಮರ ಧರ್ಮವಾಗಿದೆ, ಕರ್ಮವಾಗಿದೆ ಆದರೆ ಸೇವೆಯ ಜೊತೆ ಜೊತೆಗೆ ಸಮರ್ಥ
ಸ್ವರೂಪರಾಗಿರಿ. ಎಷ್ಟೊಂದು ಸೇವೆಯ ಉಮ್ಮಂಗ-ಉತ್ಸಾಹವನ್ನು ತೋರಿಸಿದ್ದೀರಿ. ಇದಕ್ಕಾಗಿ
ಬಾಪ್ದಾದಾರವರಿಗೆ ಖುಷಿಯಾಗಿದೆ, ಶುಭಾಷಯಗಳನ್ನೂ ಕೊಡುತ್ತೇವೆ ಆದರೆ ಹೇಗೆ ಸೇವೆಯ ಕಿರೀಟವು
ಸಿಕ್ಕಿದೆಯಲ್ಲವೆ. ಕಿರೀಟವನ್ನು ಧರಿಸಿದ್ದೀರಿ, ನೋಡಿ ಎಷ್ಟು ಚೆನ್ನಾಗಿದೆ! ಹಾಗೆಯೇ ಈಗ ಸ್ಮೃತಿ
ಸ್ವರೂಪರಾಗುವ ಕಿರೀಟವನ್ನು ಧರಿಸಿ ತೋರಿಸಿರಿ. ಯುವ ವರ್ಗವಲ್ಲವೆ ಅಂದಮೇಲೆ ಏನು ಕಮಾಲ್
ಮಾಡುತ್ತೀರಿ? ಸೇವೆಯಲ್ಲಿಯೂ ನಂಬರ್ವನ್ ಮತ್ತು ಸಮರ್ಥ ಸ್ವರೂಪರಾಗುವುದರಲ್ಲಿಯೂ ನಂಬರ್ವನ್ ಆಗಿರಿ.
ಸಂದೇಶ ಕೊಡುವುದೂ ಸಹ ಬ್ರಾಹ್ಮಣ ಜೀವನದ ಧರ್ಮ ಮತ್ತು ಕರ್ಮವಾಗಿದೆ ಆದರೆ ಈಗ ಬಾಪ್ದಾದಾ ಸೂಚನೆ
ನೀಡುತ್ತಿದ್ದೇವೆ. ಪರಿವರ್ತನೆಯ ಮೆಷಿನರಿಯನ್ನು ತೀವ್ರ ಮಾಡಿಕೊಳ್ಳಿ. ಇಲ್ಲದಿದ್ದರೆ
ಪಾಸ್-ವಿತ್-ಆನರ್ ಆಗುವುದರಲ್ಲಿ ಕಷ್ಟವಾಗುವುದು. ಬಹಳ ಕಾಲದ ಅಭ್ಯಾಸ ಬೇಕಾಗಿದೆ, ಯೋಚಿಸಿದಿರಿ
ಮತ್ತು ಮಾಡಿ ಬಿಟ್ಟಿರಿ. ಕೇವಲ ಯೋಚನಾ ಸ್ವರೂಪರಾಗಬೇಡಿ, ಸಮರ್ಥ ಸ್ಮೃತಿ ಸೋ ಸಮರ್ಥ ಸ್ವರೂಪರಾಗಿರಿ.
ವ್ಯರ್ಥವನ್ನು ತೀವ್ರ ಗತಿಯಿಂದ ಸಮಾಪ್ತಿ ಮಾಡಿರಿ. ವ್ಯರ್ಥ ಸಂಕಲ್ಪ, ವ್ಯರ್ಥ ಮಾತು, ವ್ಯರ್ಥ
ಕರ್ಮ, ವ್ಯರ್ಥ ಸಮಯ ಮತ್ತು ಸಂಬಂಧ-ಸಂಪರ್ಕದಲ್ಲಿಯೂ ವ್ಯರ್ಥ ವಿಧಿ-ರೀತಿ ಎಲ್ಲವನ್ನೂ ಸಮಾಪ್ತಿ
ಮಾಡಿರಿ. ಯಾವಾಗ ಬ್ರಾಹ್ಮಣ ಆತ್ಮರು ತೀವ್ರ ಗತಿಯಿಂದ ಈ ಸ್ವಯಂನ ವ್ಯರ್ಥದ ಸಮಾಪ್ತಿ ಮಾಡುತ್ತೀರೋ
ಆಗ ಆತ್ಮರ ಆಶೀರ್ವಾದಗಳು ಮತ್ತು ತಮ್ಮ ಪುಣ್ಯದ ಖಾತೆಯನ್ನು ತೀವ್ರ ಗತಿಯಿಂದ ಜಮಾ
ಮಾಡಿಕೊಳ್ಳುತ್ತೀರಿ.
ಬಾಪ್ದಾದಾ ಮೊದಲೂ ಸಹ
ತಿಳಿಸಿದ್ದೇವೆ. ಬಾಪ್ದಾದಾ ಮೂರು ಖಾತೆಗಳನ್ನು ಪರಿಶೀಲನೆ ಮಾಡುತ್ತೇವೆ. ಪುರುಷಾರ್ಥದ ಗತಿಯ ಖಾತೆ,
ಆಶೀರ್ವಾದಗಳ ಖಾತೆ, ಪುಣ್ಯದ ಖಾತೆ. ಆದರೆ ಮೆಜಾರಿಟಿ ಮಕ್ಕಳ ಖಾತೆಯಲ್ಲಿ ಇನ್ನೂ ಸಂಪನ್ನತೆಯ
ಕೊರತೆಯಿದೆ ಆದ್ದರಿಂದ ಬಾಪ್ದಾದಾ ಇಂದು ಇದೇ ಸ್ಲೋಗನ್ ನೆನಪಿಗೆ ತರಿಸುತ್ತಿದ್ದೇವೆ - ಈಗ
ತೀವ್ರರಾಗಿ ತೀವ್ರ ಪುರುಷಾರ್ಥಿಗಳಾಗಿರಿ. ತೀವ್ರ ಗತಿಯಿಂದ ಸಮಾಪ್ತಿ ಮಾಡುವವರಾಗಿ. ತೀವ್ರ
ಗತಿಯಿಂದ ಮನಸ್ಸಾ ಸೇವೆಯ ಮೂಲಕ ವಾಯುಮಂಡಲವನ್ನು ಪರಿವರ್ತನೆ ಮಾಡುವವರಾಗಿರಿ.
ಬಾಪ್ದಾದಾ ಒಂದು
ಮಾತಿನಲ್ಲಿ ಎಲ್ಲಾ ಮಕ್ಕಳ ಪ್ರತಿ ಬಹಳ ಖುಷಿ ಪಟ್ಟಿದ್ದಾರೆ, ಅದು ಯಾವ ಮಾತಿನಲ್ಲಿ? ತಂದೆಯೊಂದಿಗೆ
ಎಲ್ಲರಿಗೂ ಜಿಗರಿ ಪ್ರೀತಿಯಿದೆ, ಇದಕ್ಕಾಗಿ ಶುಭಾಷಯಗಳು ಆದರೆ ಏನು ಮಾಡಬೇಕೆಂದು ಹೇಳುವುದೇ! ಈ
ಸೀಜನ್ನಿನ ಸಮಾಪ್ತಿಯ ಸಮಯದೊಳಗೆ ಇನ್ನೂ ಸಮಯವಿದೆ, ಈ ಸೀಜನ್ನಿನ ಸಮಾಪ್ತಿಯೊಳಗೆ ತೀವ್ರ ಗತಿಯ
ಯಾವುದಾದರೂ ಶೌರ್ಯವನ್ನು ತೋರಿಸಿರಿ, ಇಷ್ಟವಿದೆಯೇ? ಲಕ್ಷ್ಯ ಮತ್ತು ಲಕ್ಷಣ ಎರಡನ್ನೂ
ಸ್ಮೃತಿಯಲ್ಲಿಟ್ಟುಕೊಳ್ಳುತ್ತೇವೆಂದು ಯಾರು ತಿಳಿದುಕೊಳ್ಳುತ್ತೀರೋ ಅವರು ಕೈಯೆತ್ತಿರಿ. ಲಕ್ಷ್ಯ
ಮತ್ತು ಲಕ್ಷಣ ಎರಡನ್ನೂ ಸನ್ಮುಖದಲ್ಲಿಟ್ಟುಕೊಳ್ಳುವವರು ಕೈಯೆತ್ತಿರಿ. ಡಬಲ್ ವಿದೇಶಿಯರೂ ಸಹ
ಇಟ್ಟುಕೊಳ್ಳುತ್ತೀರಿ, ಟೀಚರ್ಸ್ ಸಹ ಇಟ್ಟುಕೊಳ್ಳುತ್ತೀರಿ ಮತ್ತು ಯುವಕರೂ ಇಟ್ಟುಕೊಳ್ಳುವರು ಹಾಗೂ
ಮೊದಲಿನ ಸಾಲಿನವರೂ ಇಟ್ಟುಕೊಳ್ಳುವರು ಅಂದಮೇಲೆ ಮುಂಚಿತವಾಗಿಯೇ ಪದಮಾಪದಮ, ಪದಮದಷ್ಟು ಶುಭಾಷಯಗಳು.
ಒಳ್ಳೆಯದು.
ಈಗೀಗ ಅಭ್ಯಾಸ ಮಾಡಿರಿ -
ಒಂದು ಸೆಕೆಂಡಿನಲ್ಲಿ ನಿರ್ವಿಕಲ್ಪ, ನಿರ್ವರ್ಥ ಸಂಕಲ್ಪಧಾರಿಗಳಾಗಿ ಏಕಾಗ್ರ, ಒಬ್ಬ ತಂದೆಯ ವಿನಃ
ಯಾರೂ ಇಲ್ಲ - ಈ ಒಂದೇ ಸಂಕಲ್ಪದಲ್ಲಿ ಏಕಾಗ್ರರಾಗಿ ಕುಳಿತುಕೊಳ್ಳಬಲ್ಲಿರಾ! ಮತ್ತ್ಯಾವುದೇ
ಸಂಕಲ್ಪವಿರಬಾರದು. ಒಂದೇ ಸಂಕಲ್ಪದ ಏಕಾಗ್ರತೆಯ ಶಕ್ತಿಯ ಅನುಭವದಲ್ಲಿ ಕುಳಿತು ಬಿಡಿ. ಸಮಯ
ಹಿಡಿಸಬಾರದು, ಕೇವಲ ಒಂದು ಸೆಕೆಂಡಿನಲ್ಲಿ ಸ್ಥಿತರಾಗಿರಿ. ಒಳ್ಳೆಯದು.
ನಾಲ್ಕಾರು ಕಡೆಯ ಮಕ್ಕಳು
ಯಾರೆಲ್ಲರೂ ವಿಶೇಷ ನೆನಪು-ಪ್ರೀತಿಯನ್ನು ಕಳುಹಿಸಿದ್ದಾರೆ ಆ ಪ್ರತಿಯೊಬ್ಬ ಮಗು ತಮ್ಮ ಹೆಸರು
ಸಹಿತವಾಗಿ ನೆನಪು-ಪ್ರೀತಿ ಮತ್ತು ಹೃದಯದ ಆಶೀರ್ವಾದಗಳನ್ನು ಸ್ವೀಕಾರ ಮಾಡಿರಿ. ಬಾಪ್ದಾದಾ
ನೋಡುತ್ತಿದ್ದೇವೆ- ಎಲ್ಲರ ಹೃದಯದಲ್ಲಿ ಬರುತ್ತದೆ- ನಮ್ಮ ನೆನಪುಗಳು, ನಮ್ಮ ನೆನಪುಗಳು.... ಆದರೆ
ತಾವು ಮಕ್ಕಳು ಯಾವ ಸಮಯದಲ್ಲಿ ಸಂಕಲ್ಪ ಮಾಡುತ್ತೀರಿ ಅದೇ ಸಮಯದಲ್ಲಿ ಬಾಪ್ದಾದಾರವರ ಬಳಿ ತಲುಪಿ
ಬಿಡುತ್ತದೆ, ಆದ್ದರಿಂದ ಎಲ್ಲಾ ಮಕ್ಕಳಿಗೆ ಪ್ರತಿಯೊಬ್ಬರಿಗೂ ಹೆಸರು ಮತ್ತು ವಿಶೇಷತಾ ಸಂಪನ್ನ
ನೆನಪು-ಪ್ರೀತಿಯನ್ನು ಕೊಡುತ್ತಿದ್ದೇವೆ.
ಸರ್ವ ಸದಾ ಸ್ಮೃತಿ
ಸ್ವರೂಪ, ಸಮರ್ಥ ಸ್ವರೂಪ ಅನುಭವ ಸ್ವರೂಪ ಶ್ರೇಷ್ಠ ಮಕ್ಕಳಿಗೆ, ಸದಾ ಏನು ಶುಭವನ್ನು ಆಲೋಚಿಸಿದರೋ
ಅದನ್ನು ಶೀಘ್ರವಾಗಿ ಮಾಡುವಂತಹ, ಹೇಗೆ ಶೀಘ್ರ ದಾನದ ಮಹತ್ವಿಕೆಯಿದೆಯೋ ಹಾಗೆಯೇ ಶೀಘ್ರ
ಪರಿವರ್ತನೆಗೂ ಮಹತ್ವಿಕೆಯಿದೆ ಅಂದಾಗ ಶೀಘ್ರ ಪರಿವರ್ತನೆ ಮಾಡಿಕೊಳ್ಳುವಂತಹ ವಿಶ್ವ ಪರಿವರ್ತಕ
ಮಕ್ಕಳಿಗೆ, ಸದಾ ಪರಮಾತ್ಮ ಪಾಲನೆ, ಪರಮಾತ್ಮ ಪ್ರೀತಿ, ಪರಮಾತ್ಮ ವಿದ್ಯೆ ಮತ್ತು ಪರಮಾತ್ಮ
ಶ್ರೀಮತವನ್ನು ಪ್ರತೀ ಕರ್ಮದಲ್ಲಿ ತರುವಂತಹ ಮಹಾವೀರ ಮಕ್ಕಳಿಗೆ, ಸದಾ ಸಾಹಸ ಮತ್ತು ಏಕಾಗ್ರತೆ,
ಏಕತೆಯ ಮೂಲಕ ನಂಬರ್ವನ್ ತೀವ್ರ ಪುರುಷಾರ್ಥ ಮಾಡುವ ಮಕ್ಕಳಿಗೆ ಬಾಪ್ದಾದಾರವರ ಹೃದಯದ ನೆನಪು-ಪ್ರೀತಿ
ಮತ್ತು ಹೃದಯದ ಆಶೀರ್ವಾದಗಳು ಹಾಗೂ ನಮಸ್ತೆ.
ದಾದಿಯರೊಂದಿಗೆ:-
ಎಲ್ಲರೂ ಒಳ್ಳೆಯ
ಪಾತ್ರವನ್ನಭಿನಯಿಸುತ್ತಿದ್ದೀರಿ. ಬಾಪ್ದಾದಾ ಪ್ರತಿಯೊಬ್ಬರ ಪಾತ್ರವನ್ನು ನೋಡಿ ಖುಷಿ ಪಡುತ್ತೇವೆ.
ಚಿಕ್ಕ-ಚಿಕ್ಕವರೂ ಸಹ ಒಳ್ಳೆಯ ಪಾತ್ರವನ್ನಭಿನಯಿಸುತ್ತಿದ್ದಾರೆ. ನಾವಂತೂ ಚಿಕ್ಕವರೆಂದು
ತಿಳಿದುಕೊಳ್ಳಬೇಡಿ, ಚಿಕ್ಕವರು ಪ್ರಭುವಿಗಿಂತಲೂ ಚತುರರು. ಶಕ್ತಿಯರದು ತಮ್ಮದೇ ಪಾತ್ರವಾಗಿದೆ,
ಪಾಂಡವರದು ತಮ್ಮದೇ ಪಾತ್ರವಾಗಿದೆ. ಪಾಂಡವರಿಲ್ಲದಿದ್ದರೂ ಕೆಲಸ ನಡೆಯುವುದಿಲ್ಲ,
ಶಕ್ತಿಯರಿಲ್ಲದಿದ್ದರೂ ಕೆಲಸ ನಡೆಯುವುದಿಲ್ಲ ಆದ್ದರಿಂದ ಭಾರತದಲ್ಲಿ ಚತುರ್ಭುಜನ ನೆನಪಾರ್ಥವಿದೆ
ಮತ್ತ್ಯಾವುದೇ ಧರ್ಮದಲ್ಲಿ ಚತುರ್ಭುಜನನ್ನು ತೋರಿಸುವುದಿಲ್ಲ ಆದರೆ ಭಾರತದ ನೆನಪಾರ್ಥದಲ್ಲಿ
ಚತುರ್ಭುಜದ ಮಹತ್ವಿಕೆಯಿದೆ. ಅಂದಮೇಲೆ ಇಬ್ಬರೂ ಒಳ್ಳೆಯ ಪಾತ್ರವನ್ನಭಿನಯಿಸುತ್ತಿದ್ದೀರಿ ಆದರೆ ಈಗ
ಸ್ವಲ್ಪ ತೀವ್ರವಾಗಿ ಮಾಡಿರಿ, ಸಾಕು. ಕೆಲಕೆಲವೊಮ್ಮೆ ಸ್ವಲ್ಪ ಡೀಲಾ ಆಗಿ ಬಿಡುತ್ತಾರೆ. ಈಗ ಡೀಲಾ
ಅಗುವ ಸಮಯವಲ್ಲ, ಭಿನ್ನ-ಭಿನ್ನ ಮಾತುಗಳಂತೂ ಬಂದೇ ಬರುತ್ತವೆ ಆದರೆ ನಾವು ಮಾತುಗಳ ರಹಸ್ಯವನ್ನು
ತಿಳಿದು ರಹಸ್ಯಯುಕ್ತ, ಯೋಗಯುಕ್ತ, ಸ್ನೇಹಯುಕ್ತ, ಸಹಯೋಗ ಯುಕ್ತರಾಗಿ ನಡೆಯಬೇಕಾಗಿದೆ.
ಒಳ್ಳೆಯದಲ್ಲವೆ. (ದಾದೀಜಿಯೊಂದಿಗೆ) ಬಹಳ ಚೆನ್ನಾಗಿದೆಯಲ್ಲವೆ. ನೋಡಿ, ಎಷ್ಟು ಮಂದಿ ಬಂದಿದ್ದಾರೆ!
ಏಕೆ ಬಂದಿದ್ದಾರೆ? ಇವರೆಲ್ಲರೂ ಏಕೆ ಬಂದಿದ್ದಾರೆ? ತಮ್ಮೊಂದಿಗೆ ಮಿಲನ ಮಾಡಲು ಬಂದಿದ್ದಾರೆ.
ಬಾಪ್ದಾದಾರವರ ಜೊತೆಯಂತೂ ಮಿಲನ ಮಾಡಲು ಬಂದಿದ್ದಾರೆ ಆದರೆ ಜೊತೆಯಲ್ಲಿ ದಾದಿಯರಿಲ್ಲದಿದ್ದರೂ ಸಹ
ಮಜಾ ಬರುವುದಿಲ್ಲ ಎಂದು ಹೇಳುತ್ತಾರಲ್ಲವೆ. ತಾವೆಲ್ಲರೂ ಇಲ್ಲದಿದ್ದರೂ ಸಹ ಮಜಾ ಬರುವುದಿಲ್ಲ.
ವರದಾನ:
ಸ್ಮತಿಯ ಸ್ವಿಚ್
ಮೂಲಕ ಸ್ವ ಕಲ್ಯಾಣ ಮತ್ತು ಸರ್ವರ ಕಲ್ಯಾಣ ಮಾಡುವಂತಹ ಸಿದ್ಧಿ ಸ್ವರೂಪ ಭವ.
ಸ್ಥಿತಿಯ ಆಧಾರ
ಸ್ಮತಿಯಾಗಿದೆ. ಇದೇ ಶಕ್ತಿಶಾಲಿ ಸ್ಮತಿ ಇರಲಿ “ನಾನು ತಂದೆಯವನು ಮತ್ತು ತಂದೆ ನಮ್ಮವರು”. ಆಗ ಇದೇ
ಸ್ಮತಿಯಿಂದ ಸ್ವಯಂನ ಸ್ಥಿತಿ ಶಕ್ತಿಶಾಲಿಯಾಗಿರುತ್ತದೆ ಮತ್ತು ಬೇರೆಯವರಿಗೂ ಸಹಾ
ಶಕ್ತಿಶಾಲಿಯನ್ನಾಗಿ ಮಾಡುವಿರಿ. ಹೇಗೆ ಸ್ವಿಚ್ ಆನ್ ಮಾಡುವುದರಿಂದ ಪ್ರಕಾಶವಾಗಿ ಬಿಡುವುದು ಅದೇ
ರೀತಿ ಈ ಸ್ಮತಿಯೂ ಸಹಾ ಒಂದು ಸ್ವಿಚ್ ಆಗಿದೆ. ಸದಾ ಸ್ಮತಿರೂಪಿ ಸ್ವಿಚ್ ನ ಮೇಲೆ ಗಮನವಿರಲಿ ಆಗ
ಸ್ವಯಂ ನ ಮತ್ತು ಸರ್ವರ ಕಲ್ಯಾಣವನ್ನು ಮಾಡುತ್ತಿರುವಿರಿ. ಹೊಸ ಜನ್ಮವಾಯಿತು ಎಂದರೆ ಹೊಸ
ಸ್ಮತಿಗಳಿರಲಿ. ಹಳೆಯ ಎಲ್ಲ ಸ್ಮøತಿಗಳು ಸಮಾಪ್ತಿ-ಈ ವಿಧಿಯಿಂದ ಸಿದ್ಧಿ ಸ್ವರೂಪದ ವರದಾನ
ಪ್ರಾಪ್ತಿಯಾಗಿ ಬಿಡುವುದು.
ಸ್ಲೋಗನ್:
ಅತೀಂದ್ರೀಯ
ಸುಖದ ಅನುಭೂತಿ ಮಾಡುವುದಕ್ಕಾಗಿ ತಮ್ಮ ಶಾಂತ ಸ್ವರೂಪದ ಸ್ಥಿತಿಯಲ್ಲಿ ಸ್ಥಿತರಾಗಿರಿ.
ಅವ್ಯಕ್ತ ಸೂಚನೆ:-
ಸಹಜಯೋಗಿ ಆಗಬೇಕಂದರೆ ಪರಮಾತ್ಮನ ಪ್ರೀತಿಯ ಅನುಭವಿಯಾಗಿರಿ.
ಬಾಪ್-ದಾದಾರವರು ಪ್ರೇಮದ
ಬಂಧನದಲ್ಲಿ ಬಂಧಿತರಾಗಿದ್ದಾರೆ. ಬಿಡಿಸಿಕೊಳ್ಳಬೇಕೆಂದರೂ ಬಿಡಿಸಿಕೊಳ್ಳಲು ಸಾಧ್ಯವಿಲ್ಲ, ಅದಕ್ಕೇ
ಭಕ್ತಿಯಲ್ಲಿ ಬಂಧನದ ಚಿತ್ರ ತೋರಿಸಿದ್ದಾರೆ. ಪ್ರಾಕ್ಟಿಕಲ್ನಲ್ಲಿ ಪ್ರೇಮದ ಬಂಧನದಲ್ಲಿ
ಅವ್ಯಕ್ತರಾಗಿದ್ದರೂ ಬಂಧನವಿದೆ. ವ್ಯಕ್ತದಿಂದ ಬಿಡಿಸಿಕೊಂಡರೂ ಬಿಡಿಸಿಕೊಳ್ಳಲು ಸಾಧ್ಯವಿಲ್ಲ, ಈ
ಪ್ರೇಮದ ಹಗ್ಗ ಬಹಳ ಬಲಶಾಲಿಯಾಗಿದೆ. ಇಂತಹ ಪ್ರೇಮ ಸ್ವರೂಪರಾಗಿ, ಒಬ್ಬರಿನ್ನೊಬ್ಬರನ್ನು ಪ್ರೇಮದ
ಹಗ್ಗದಿಂದ ಬಂಧಿಸಿ ಸಮೀಪ ಸಂಬಂಧದ ಅಥವಾ ತಮ್ಮತನದ ಅನುಭೂತಿ ಮಾಡಿಸಿ.