01.02.25         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ - ನೀವು ಆತ್ಮಗಳ ಸ್ವಧರ್ಮವು ಶಾಂತಿಯಾಗಿದೆ, ನಿಮ್ಮ ದೇಶವು ಶಾಂತಿಧಾಮವಾಗಿದೆ, ನೀವಾತ್ಮಗಳು ಶಾಂತಸ್ವರೂಪರಾಗಿದ್ದೀರಿ ಆದ್ದರಿಂದ ನೀವು ಶಾಂತಿಯನ್ನು ಬೇಡಲು ಸಾಧ್ಯವಿಲ್ಲ”

ಪ್ರಶ್ನೆ:
ನಿಮ್ಮ ಯೋಗಬಲವು ಯಾವ ಚಮತ್ಕಾರ ಮಾಡುತ್ತದೆ?

ಉತ್ತರ:
ಯೋಗಬಲದಿಂದ ನೀವು ಇಡೀ ಪ್ರಪಂಚವನ್ನು ಪವಿತ್ರವನ್ನಾಗಿ ಮಾಡುತ್ತೀರಿ. ನೀವು ಕೆಲವರೇ ಯೋಗಬಲದಿಂದ ಈ ಪರ್ವತವನ್ನು ಎತ್ತಿ ಚಿನ್ನದ ಪರ್ವತವನ್ನು ಸ್ಥಾಪನೆ ಮಾಡುತ್ತೀರಿ. ಪಂಚತತ್ವಗಳು ಸತೋಪ್ರಧಾನವಾಗಿಬಿಡುತ್ತದೆ, ಒಳ್ಳೆಯ ಫಲವನ್ನು ಕೊಡುತ್ತದೆ. ಸತೋಪ್ರಧಾನ ತತ್ವಗಳಿಂದ ಈ ಶರೀರವೂ ಪವಿತ್ರವಾಗುತ್ತದೆ. ಅಲ್ಲಿನ ಫಲಗಳೂ ಸಹ ಬಹಳ ದೊಡ್ಡ-ದೊಡ್ಡದಾಗಿ ಮತ್ತು ಸ್ವಾಧಿಷ್ಟವಾಗಿರುತ್ತದೆ.

ಓಂ ಶಾಂತಿ.
ಯಾವಾಗ ಓಂ ಶಾಂತಿ ಎಂದು ಹೇಳಿದಾಗ ಬಹಳ ಖುಷಿಯಾಗಬೇಕು ಏಕೆಂದರೆ ಆತ್ಮವೇ ಶಾಂತ ಸ್ವರೂಪನಾಗಿದೆ, ಅದರ ಸ್ವಧರ್ಮವೇ ಶಾಂತಿಯಾಗಿದೆ. ಇದರ ಮೇಲೆ ಸನ್ಯಾಸಿಗಳೂ ಹೇಳುತ್ತಾರೆ. ನಿಮ್ಮ ಕೊರಳಿನಲ್ಲಿ ಶಾಂತಿಯ ಹಾರವೇ ಇದೆ. ಶಾಂತಿಯನ್ನು ಹೊರಗಡೆ ಎಲ್ಲಿ ಹುಡುಕುತ್ತೀರಿ, ಆತ್ಮವು ಸ್ವತಃ ಶಾಂತಸ್ವರೂಪನಾಗಿದೆ, ಈ ಶರೀರದಲ್ಲಿ ಪಾತ್ರವನ್ನಭಿನಯಿಸಲು ಬರಬೇಕಾಗುತ್ತದೆ. ಆತ್ಮವು ಸದಾ ಶಾಂತವಾಗಿದ್ದರೆ ಕರ್ಮವನ್ನು ಹೇಗೆ ಮಾಡುವುದು? ಕರ್ಮವನ್ನಂತೂ ಮಾಡಲೇಬೇಕಾಗಿದೆ. ಹಾ! ಶಾಂತಿಧಾಮದಲ್ಲಿ ಆತ್ಮಗಳು ಶಾಂತವಾಗಿರುತ್ತದೆ, ಅಲ್ಲಿ ಶರೀರವಿರುವುದಿಲ್ಲ. ನಾವಾತ್ಮಗಳು ಶಾಂತಿಧಾಮದ ನಿವಾಸಿಗಳಾಗಿದ್ದೇವೆಂದು ಯಾವ ಸನ್ಯಾಸಿಗಳೂ ತಿಳಿದುಕೊಂಡಿಲ್ಲ. ಮಕ್ಕಳಿಗೆ ತಿಳಿಸಲಾಗಿದೆ - ಶಾಂತಿಧಾಮವು ನಮ್ಮ ದೇಶವಾಗಿದೆ, ಮತ್ತೆ ನಾವು ಸುಖಧಾಮದಲ್ಲಿ ಬಂದು ಪಾತ್ರವನ್ನಭಿನಯಿಸುತ್ತೇವೆ ನಂತರ ದುಃಖಧಾಮದಲ್ಲಿ ರಾವಣರಾಜ್ಯವಾಗುತ್ತದೆ. ಇದು 84 ಜನ್ಮಗಳ ಕಥೆಯಾಗಿದೆ. ಹೇ ಅರ್ಜುನ, ನೀನು ತನ್ನ ಜನ್ಮಗಳ ಬಗ್ಗೆ ತಿಳಿದಿಲ್ಲವೆಂದು ಭಗವಾನುವಾಚ ಇದೆಯಲ್ಲವೆ. ಒಬ್ಬರಿಗೇಕೆ ಹೇಳುತ್ತಾರೆ? ಏಕೆಂದರೆ ಒಬ್ಬರದೇ ಗ್ಯಾರಂಟಿಯಿದೆ. ಈ ರಾಧೆ-ಕೃಷ್ಣರದು ಸಂಪೂರ್ಣ ಗ್ಯಾರಂಟಿಯಿರುವ ಕಾರಣ ಇವರಿಗೇ ಹೇಳುತ್ತಾರೆ. ಇದು ತಂದೆಗೂ ಗೊತ್ತಿದೆ, ಮಕ್ಕಳೂ ತಿಳಿದುಕೊಂಡಿದ್ದೀರಿ - ಇಲ್ಲಿ ಇರುವಂತಹ ಮಕ್ಕಳೆಲ್ಲರೂ 84 ಜನ್ಮಗಳನ್ನು ತೆಗೆದುಕೊಳ್ಳುವುದಿಲ್ಲ. ಕೆಲವರು ಮಧ್ಯದಲ್ಲಿ ಬರುತ್ತಾರೆ, ಕೆಲವರು ಅಂತಿಮದಲ್ಲಿ ಬರುತ್ತಾರೆ. ಆದರೆ ಇವರದಂತೂ (ಬ್ರಹ್ಮಾ) ನಿಶ್ಚಿತವಾಗಿದೆ. ಹೇ ಮಕ್ಕಳೇ ಎಂದು ತಂದೆಯು ಇವರಿಗೆ ಹೇಳುತ್ತಾರೆ ಅಂದಮೇಲೆ ಇವರು ಅರ್ಜುನನಾದರಲ್ಲವೆ. ರಥದಲ್ಲಿ ಕುಳಿತಿದ್ದಾರಲ್ಲವೆ. ನಾವು ಜನ್ಮಗಳನ್ನು ಹೇಗೆ ತೆಗೆದುಕೊಳ್ಳುತ್ತೇವೆ ಎಂಬುದನ್ನು ಮಕ್ಕಳೂ ತಿಳಿದುಕೊಳ್ಳುತ್ತೀರಿ. ಸೇವೆಯನ್ನೇ ಮಾಡಲಿಲ್ಲವೆಂದರೆ ಸತ್ಯಯುಗ, ಹೊಸಪ್ರಪಂಚದಲ್ಲಿ ಮೊಟ್ಟಮೊದಲಿಗೆ ಹೇಗೆ ಬರುತ್ತೀರಿ? ಇವರ ಅದೃಷ್ಟವು ಎಲ್ಲಿದೆ! ಯಾರು ಕೊನೆಯಲ್ಲಿ ಜನ್ಮತೆಗೆದುಕೊಳ್ಳುವರೋ ಅವರಿಗಂತೂ ಹಳೆಯ ಮನೆಯಾಗುತ್ತಾ ಹೋಗುತ್ತದೆಯಲ್ಲವೆ. ನಾನು ಇವರಿಗಾಗಿ (ಬ್ರಹ್ಮಾ) ಹೇಳುತ್ತೇನೆ ಏಕೆಂದರೆ ಇವರಪ್ರತಿ ನಿಮಗೂ ನಿಶ್ಚಯವಿದೆ. ಮಮ್ಮಾ-ಬಾಬಾ 84 ಜನ್ಮಗಳನ್ನು ತೆಗೆದುಕೊಳ್ಳುತ್ತಾರೆಂದು ನೀವೂ ಸಹ ತಿಳಿದುಕೊಳ್ಳುತ್ತೀರಿ. ಕುಮಾರಿಕಾ, ಜಾನಕಿ, ಇಂತಿಂತಹ ಮಹಾರಥಿಗಳೆಲ್ಲರೂ 84 ಜನ್ಮಗಳನ್ನು ತೆಗೆದುಕೊಳ್ಳುತ್ತಾರೆ. ಯಾರು ಸೇವೆ ಮಾಡುವುದಿಲ್ಲವೋ ಅವರು ಅವಶ್ಯವಾಗಿ ಕೆಲವು ಜನ್ಮಗಳ ನಂತರ ಬರುತ್ತಾರೆ. ನಾವಂತೂ ಅನುತ್ತೀರ್ಣರಾಗಿಬಿಡುತ್ತೇವೆ, ಕೊನೆಯಲ್ಲಿ ಬರುತ್ತೇವೆ ಎಂಬುದು ಅರ್ಥವಾಗುತ್ತದೆ. ಶಾಲೆಯಲ್ಲಿ ಓಟವನ್ನು ಓಡುವಾಗ ಗುರಿಯನ್ನು ತಲುಪಿ ಮತ್ತೆ ಹಿಂದಿರುಗಿ ಬರುತ್ತಾರಲ್ಲವೆ. ಎಲ್ಲರೂ ಏಕರಸವಾಗಿರಲು ಸಾಧ್ಯವಿಲ್ಲ. ಸ್ಪರ್ಧೆಯಲ್ಲಿ ಒಂದು ಕಾಲು ಇಂಚಿನಷ್ಟು ಅಂತರವಾಗುತ್ತದೆಯೆಂದರೂ ಸಹ ಪ್ಲಸ್ನಲ್ಲಿ ಬಂದುಬಿಡುತ್ತಾರೆ. ಇದೂ ಸಹ ಕುದುರೆ ಸ್ಪರ್ಧೆ ಎಂದು ಹೇಳುತ್ತಾರೆ. ಅಶ್ವ ಎಂದು ಕುದುರೆಗೆ ಹೇಳಲಾಗುತ್ತದೆ. ರಥಕ್ಕೂ ಕುದುರೆ ಎಂದು ಹೇಳಲಾಗುತ್ತದೆ. ಉಳಿದಂತೆ ದಕ್ಷಪ್ರಜಾಪಿತನು ಯಜ್ಞವನ್ನು ರಚಿಸಿದರು, ಅದರಲ್ಲಿ ಕುದುರೆಯನ್ನು ಸ್ವಾಹಾ ಮಾಡಿದರೆಂದು ಯಾವ ಮಾತುಗಳನ್ನು ತೋರಿಸುತ್ತಾರೆ, ಇದೇನೂ ಇಲ್ಲ. ದಕ್ಷಪ್ರಜಾಪಿತನೂ ಇಲ್ಲ, ಯಾವುದೇ ಯಜ್ಞವನ್ನು ರಚಿಸಿಲ್ಲ. ಪುಸ್ತಕಗಳಲ್ಲಿ ಭಕ್ತಿಮಾರ್ಗದ ಎಷ್ಟೊಂದು ದಂತಕಥೆಗಳಿವೆ. ಅದರ ಹೆಸರೇ ಕಥೆಯಾಗಿದೆ. ಬಹಳ ಕಥೆಗಳನ್ನು ಕೇಳುತ್ತಾರೆ. ನೀವಂತೂ ಇದನ್ನು ಓದುತ್ತೀರಿ, ವಿದ್ಯೆಗೆ ಕಥೆಯೆಂದು ಹೇಳುವುದಿಲ್ಲ. ಶಾಲೆಯಲ್ಲಿ ಓದುತ್ತಾರೆ, ಒಂದು ಲಕ್ಷ್ಯವಿರುತ್ತದೆ. ನಮಗೆ ಈ ವಿದ್ಯೆಯಿಂದ ನೌಕರಿ ಸಿಗುತ್ತದೆ. ಏನಾದರೊಂದು ಸಿಗುತ್ತದೆಯೆಂದು ಉದ್ದೇಶವಿರುತ್ತದೆ. ಈಗ ನೀವು ಮಕ್ಕಳು ಬಹಳ ದೇಹೀ-ಅಭಿಮಾನಿಗಳಾಗಬೇಕಾಗಿದೆ. ಇದೇ ಪರಿಶ್ರಮವಿದೆ, ತಂದೆಯನ್ನು ನೆನಪು ಮಾಡುವುದರಿಂದಲೇ ವಿಕರ್ಮಗಳು ವಿನಾಶವಾಗುತ್ತವೆ. ವಿಶೇಷವಾಗಿ ನೆನಪು ಮಾಡಬೇಕಾಗುತ್ತದೆ. ನಾನಂತೂ ಶಿವತಂದೆಯ ಮಗುವಾಗಿದ್ದೇನೆ ಮತ್ತೇನು ನೆನಪು ಮಾಡುವುದು ಎಂದಲ್ಲ. ತನ್ನನ್ನು ವಿದ್ಯಾರ್ಥಿಯೆಂದು ತಿಳಿದು ನೆನಪು ಮಾಡಬೇಕಾಗಿದೆ. ನಾವಾತ್ಮಗಳಿಗೆ ಶಿವತಂದೆಯು ಓದಿಸುತ್ತಿದ್ದಾರೆ ಎಂಬುದನ್ನೂ ಮರೆತುಹೋಗುತ್ತಾರೆ. ಶಿವತಂದೆಯೊಬ್ಬರೇ ಶಿಕ್ಷಕನಾಗಿದ್ದಾರೆ, ಅವರು ಸೃಷ್ಟಿಯ ಆದಿ-ಮಧ್ಯ-ಅಂತ್ಯದ ರಹಸ್ಯವನ್ನು ತಿಳಿಸುತ್ತಾರೆ, ಇದೂ ಸಹ ಮಕ್ಕಳಿಗೆ ನೆನಪಿರುವುದಿಲ್ಲ. ಪ್ರತಿಯೊಬ್ಬ ಮಗುವು ತಮ್ಮನ್ನು ಹೃದಯದಲ್ಲಿ ಕೇಳಿಕೊಳ್ಳಬೇಕಾಗಿದೆ - ಎಷ್ಟು ಸಮಯ ತಂದೆಯ ನೆನಪಿರುತ್ತದೆ? ಹೆಚ್ಚಿನ ಸಮಯವಂತೂ ಬಾಹರ್ಮುಖತೆಯಲ್ಲಿಯೇ ಹೋಗುತ್ತದೆ. ಈ ನೆನಪೇ ಮುಖ್ಯವಾಗಿದೆ, ಈ ಭಾರತದ ಸಹಜ ರಾಜಯೋಗಕ್ಕೆ ಬಹಳ ಮಹಿಮೆಯಿದೆ, ಆದರೆ ಯೋಗವನ್ನು ಯಾರು ಕಲಿಸುತ್ತಾರೆಂದು ಯಾರಿಗೂ ತಿಳಿದಿಲ್ಲ. ಗೀತೆಯಲ್ಲಿ ಕೃಷ್ಣನ ಹೆಸರನ್ನು ಹಾಕಿಬಿಟ್ಟಿದ್ದಾರೆ. ಕೃಷ್ಣನ ನೆನಪಿನಿಂದ ಒಂದು ಪಾಪವೂ ಭಸ್ಮವಾಗುವುದಿಲ್ಲ ಏಕೆಂದರೆ ಕೃಷ್ಣನು ಶರೀರಧಾರಿಯಾಗಿದ್ದಾನೆ. ಶರೀರ ಪಂಚತತ್ವಗಳಿಂದ ಮಾಡಲ್ಪಟ್ಟಿದೆ. ಕೃಷ್ಣನನ್ನು ನೆನಪು ಮಾಡುವುದೆಂದರೆ ಮಣ್ಣನ್ನು ನೆನಪು ಮಾಡಿದಿರಿ, ಪಂಚತತ್ವಗಳನ್ನು ನೆನಪು ಮಾಡಿದಿರೆಂದರ್ಥ. ಶಿವತಂದೆಯು ಅಶರೀರಿಯಾಗಿದ್ದಾರೆ ಆದ್ದರಿಂದ ತಿಳಿಸುತ್ತಾರೆ - ಮಕ್ಕಳೇ, ಅಶರೀರಿಯಾಗಿ, ತಂದೆಯಾದ ನನ್ನನ್ನು ನೆನಪು ಮಾಡಿ.

ಹೇ ಪತಿತ-ಪಾವನ ಎಂದು ಹೇಳುತ್ತೀರಿ ಅಂದಾಗ ಅವರು ಒಬ್ಬರೇ ಆದರಲ್ಲವೆ. ಗೀತೆಯ ಭಗವಂತ ಯಾರು ಎಂಬುದನ್ನು ಯುಕ್ತಿಯಿಂದ ಕೇಳಬೇಕು. ಭಗವಂತ ರಚಯಿತನಂತೂ ಒಬ್ಬರೇ ಆಗಿರುತ್ತಾರೆ. ಒಂದುವೇಳೆ ಮನುಷ್ಯರು ತಮ್ಮನ್ನು ಭಗವಂತನೆಂದು ಕರೆಸಿಕೊಂಡರೂ ಸಹ ನೀವೆಲ್ಲರೂ ನನ್ನ ಮಕ್ಕಳಾಗಿದ್ದೀರಿ ಎಂಬ ಮಾತನ್ನು ಎಂದೂ ಹೇಳಲು ಸಾಧ್ಯವಿಲ್ಲ. ತತ್ವಂ ಎಂದು ಹೇಳುತ್ತಾರೆ ಅಥವಾ ಈಶ್ವರ ಸರ್ವವ್ಯಾಪಿ ಎಂದು ಹೇಳುತ್ತಾರೆ. ನಾನು ಭಗವಂತ, ನೀವೂ ಭಗವಂತ, ಎಲ್ಲಿ ನೋಡಿದರಲ್ಲಿ ನೀನೇ ನೀನು, ಕಲ್ಲಿನಲ್ಲಿಯೂ ಇದ್ದೀಯಾ ಎಂದು ಹೇಳಿಬಿಡುತ್ತಾರೆ. ನೀವು ನನ್ನ ಮಕ್ಕಳಾಗಿದ್ದೀರಿ ಎಂದೂ ಈ ರೀತಿ ಹೇಳಲು ಸಾಧ್ಯವಿಲ್ಲ. ಹೇ ನನ್ನ ಮದ್ದಾದ ಆತ್ಮೀಯ ಮಕ್ಕಳೇ ಎಂದು ತಂದೆಯೇ ಹೇಳುತ್ತಾರೆ. ಹೀಗೆ ಮತ್ತ್ಯಾರೂ ಹೇಳಲು ಸಾಧ್ಯವಿಲ್ಲ. ಮುಸಲ್ಮಾನರನ್ನು ಒಂದುವೇಳೆ ನನ್ನ ಮುದ್ದಾದ ಮಕ್ಕಳೇ ಎಂದು ಯಾರಾದರೂ ಹೇಳಿದರೆ ಅವರು ಕೆನ್ನೆಗೆ ಹೊಡೆಯುತ್ತಾರೆ. ಈ ಮಾತನ್ನು ಪಾರಲೌಕಿಕ ತಂದೆಯೊಬ್ಬರೇ ಹೇಳಲು ಸಾಧ್ಯ. ಮತ್ತ್ಯಾರೂ ಸೃಷ್ಟಿಯ ಆದಿ-ಮಧ್ಯ-ಅಂತ್ಯದ ಜ್ಞಾನವನ್ನು ತಿಳಿಸಲು ಸಾಧ್ಯವಿಲ್ಲ. ನಿರಾಕಾರ ತಂದೆಯ ವಿನಃ ಮತ್ತ್ಯಾರೂ 84 ಜನ್ಮಗಳ ಏಣಿಯ ರಹಸ್ಯವನ್ನು ತಿಳಿಸಲು ಸಾಧ್ಯವಿಲ್ಲ. ಅವರ ಮೂಲ ಹೆಸರೇ ಶಿವನೆಂದಾಗಿದೆ. ಮನುಷ್ಯರು ಇಲ್ಲಿ ಅನೇಕ ಹೆಸರುಗಳನ್ನಿಟ್ಟುಬಿಟ್ಟಿದ್ದಾರೆ. ಅನೇಕ ಭಾಷೆಗಳಿವೆ ಆದ್ದರಿಂದ ತಮ್ಮ-ತಮ್ಮ ಭಾಷೆಗಳಲ್ಲಿ ಹೆಸರನ್ನಿಟ್ಟುಕೊಳ್ಳುತ್ತಾರೆ. ಹೇಗೆ ಬಾಂಬೆಯಲ್ಲಿ ಬಬುಲ್ನಾಥನೆಂದು ಹೇಳುತ್ತಾರೆ ಆದರೆ ಅವರು ಅರ್ಥವನ್ನು ತಿಳಿದುಕೊಂಡಿಲ್ಲ. ನೀವು ತಿಳಿದುಕೊಂಡಿದ್ದೀರಿ - ತಂದೆಯು ಮುಳ್ಳುಗಳನ್ನು ಹೂಗಳನ್ನಾಗಿ ಮಾಡುವಂತಹವರಾಗಿದ್ದಾರೆ. ಭಾರತದಲ್ಲಿ ಶಿವತಂದೆಯ ಸಾವಿರಾರು ಹೆಸರುಗಳಿವೆ. ಅದರ ಅರ್ಥವನ್ನು ತಿಳಿದುಕೊಂಡಿಲ್ಲ. ತಂದೆಯು ಮಕ್ಕಳಿಗೇ ತಿಳಿಸಿಕೊಡುತ್ತಾರೆ, ಅದರಲ್ಲಿ ಮಾತೆಯರನ್ನು ತಂದೆಯು ಹೆಚ್ಚಿನದಾಗಿ ಮುಂದಿಡುತ್ತಾರೆ. ಇತ್ತೀಚೆಗೆ ಸ್ತ್ರೀಯರಿಗೆ ಹೆಚ್ಚಿನ ಮಾನ್ಯತೆಯಿದೆ ಏಕೆಂದರೆ ತಂದೆಯು ಬಂದಿದ್ದಾರಲ್ಲವೆ. ತಂದೆಯು ಮಾತೆಯರ ಮಹಿಮೆಯನ್ನು ಹೆಚ್ಚಿಸುತ್ತಾರೆ. ನೀವು ಶಿವಶಕ್ತಿ ಸೇನೆಯಾಗಿದ್ದೀರಿ, ನೀವೇ ಶಿವತಂದೆಯನ್ನು ಅರಿತುಕೊಂಡಿದ್ದೀರಿ. ಸತ್ಯವಂತೂ ಒಬ್ಬರೇ ತಂದೆಯಾಗಿದ್ದಾರೆ. ಸತ್ಯದ ದೋಣಿಯು ಅಲುಗಾಡುತ್ತದೆ ಆದರೆ ಮುಳುಗುವುದಿಲ್ಲ ಅಂದಾಗ ನೀವು ಸತ್ಯವಂತರಾಗಿದ್ದೀರಿ, ಹೊಸಪ್ರಪಂಚದ ಸ್ಥಾಪನೆ ಮಾಡುತ್ತಿದ್ದೀರಿ. ಉಳಿದೆಲ್ಲಾ ಅಸತ್ಯ ದೋಣಿಗಳು ಸಮಾಪ್ತಿಯಾಗುತ್ತವೆ. ನೀವೂ ಸಹ ಇಲ್ಲಿ ರಾಜ್ಯ ಮಾಡುವವರಲ್ಲ, ನೀವು ಇನ್ನೊಂದು ಜನ್ಮದಲ್ಲಿ ಸತ್ಯಯುಗದಲ್ಲಿ ಬಂದು ರಾಜ್ಯಮಾಡುತ್ತೀರಿ. ಇವು ಬಹಳ ಗುಪ್ತಮಾತುಗಳಾಗಿವೆ, ಇದನ್ನು ನೀವೇ ತಿಳಿದುಕೊಂಡಿದ್ದೀರಿ. ಈ ತಂದೆಯು ಸಿಗದೇ ಇದ್ದಿದ್ದರೆ ಏನೂ ತಿಳಿದುಕೊಳ್ಳುತ್ತಿರಲಿಲ್ಲ. ಈಗ ತಿಳಿದುಕೊಂಡಿದ್ದೀರಿ.

ಇವರು ಯುಧಿಷ್ಠರ (ಬ್ರಹ್ಮಾ) ನಾಗಿದ್ದಾರೆ, ಯುದ್ಧದ ಮೈದಾನದಲ್ಲಿ ಯುದ್ಧವನ್ನು ನಿಲ್ಲಿಸುವವರಾಗಿದ್ದಾರೆ. ಇದು ಅಹಿಂಸಕ ಯುದ್ಧವಾಗಿದೆ. ಹೊಡೆದಾಟಕ್ಕೆ ಮನುಷ್ಯರು ಹಿಂಸೆಯೆಂದು ತಿಳಿಯುತ್ತಾರೆ. ತಂದೆಯು ತಿಳಿಸುತ್ತಾರೆ - ಕಾಮವೇ ಮೊಟ್ಟಮೊದಲ ಹಿಂಸೆಯಾಗಿದೆ ಆದ್ದರಿಂದ ಕಾಮ ಮಹಾಶತ್ರುವೆಂದು ಹೇಳಿದ್ದಾರೆ. ಇದರ ಮೇಲೆ ಜಯಗಳಿಸಬೇಕಾಗಿದೆ. ಮೂಲಮಾತೇ ಕಾಮವಿಕಾರದ್ದಾಗಿದೆ. ಪತಿತರೆಂದರೆ ವಿಕಾರಿಗಳು, ಪತಿತರಾಗುವವರಿಗೆ ವಿಕಾರಿಗಳೆಂದು ಕರೆಯುತ್ತಾರೆ. ಅವರು ವಿಕಾರದಲ್ಲಿ ಹೋಗುತ್ತಾರೆ. ಕ್ರೋಧ ಮಾಡುವವರಿಗೆ ಇವರು ವಿಕಾರಿ ಎಂದು ಹೇಳುವುದಿಲ್ಲ. ಕ್ರೋಧಿಗೆ ಕ್ರೋಧಿಯೆಂತಲೂ, ಲೋಭಿಗೆ ಲೋಭಿಯೆಂತಲೂ ಹೇಳುತ್ತಾರೆ. ದೇವತೆಗಳಿಗೆ ನಿರ್ವಿಕಾರಿಗಳೆಂದು ಹೇಳಲಾಗುತ್ತದೆ. ದೇವತೆಗಳು ನಿರ್ಲೋಭಿ, ನಿರ್ಮೋಹಿ ನಿರ್ವಿಕಾರಿಗಳಾಗಿದ್ದಾರೆ, ಅವರೆಂದೂ ವಿಕಾರದಲ್ಲಿ ಹೋಗುವುದಿಲ್ಲ. ವಿಕಾರವಿಲ್ಲದೆ ಮಕ್ಕಳು ಹೇಗೆ ಜನ್ಮಪಡೆಯುತ್ತಾರೆ? ಎಂದು ನಿಮ್ಮನ್ನು ಪ್ರಶ್ನಿಸುತ್ತಾರೆ. ದೇವತೆಗಳನ್ನು ನಿರ್ವಿಕಾರಿಗಳೆಂದು ಒಪ್ಪುತ್ತೀರಲ್ಲವೆ, ಅದು ನಿರ್ವಿಕಾರಿ ಪ್ರಪಂಚವಾಗಿದೆ. ದ್ವಾಪರ, ಕಲಿಯುಗವು ವಿಕಾರಿ ಪ್ರಪಂಚವಾಗಿದೆ, ತನ್ನನ್ನು ವಿಕಾರಿ, ದೇವತೆಗಳನ್ನು ನಿರ್ವಿಕಾರಿಗಳೆಂದು ಹೇಳುತ್ತಾರಲ್ಲವೆ. ನಾವೂ ಸಹ ವಿಕಾರಿಗಳಾಗಿದ್ದೇವು, ಈಗ ಇವರ ತರಹ ನಿರ್ವಿಕಾರಿಗಳಾಗುತ್ತಿದ್ದೇವೆ ಎಂಬುದನ್ನು ನೀವೀಗ ತಿಳಿದಿದ್ದೀರಿ. ಈ ಲಕ್ಷ್ಮಿ-ನಾರಾಯಣರೂ ಸಹ ನೆನಪಿನ ಬಲದಿಂದ ಈ ಪದವಿಯನ್ನು ಪಡೆದಿದ್ದರು, ಈಗ ಪುನಃ ಪಡೆಯುತ್ತಿದ್ದಾರೆ, ನಾವೇ ದೇವಿ-ದೇವತೆಗಳಾಗಿದ್ದೆವು, ನಾವು ಕಲ್ಪದ ಹಿಂದೆಯೂ ಇಂತಹ ರಾಜ್ಯವನ್ನು ಪಡೆದಿದ್ದೆವು, ಯಾವುದನ್ನು ಕಳೆದುಕೊಂಡೆವೋ ಈಗ ಮತ್ತೆ ಅದನ್ನು ಪಡೆಯುತ್ತಿದ್ದೇವೆ. ಈ ಚಿಂತನೆಯು ಬುದ್ಧಿಯಲ್ಲಿದ್ದರೂ ಖುಷಿಯಿರುವುದು ಆದರೆ ಮಾಯೆಯು ಈ ಸ್ಮೃತಿಯನ್ನು ಮರೆಸಿಬಿಡುತ್ತದೆ. ತಂದೆಗೆ ಗೊತ್ತಿದೆ, ನೀವು ಸ್ಥಿರವಾಗಿ ನೆನಪಿನಲ್ಲಿರಲು ಸಾಧ್ಯವಿಲ್ಲ. ನೀವು ಮಕ್ಕಳು ಅಡೋಲರಾಗಿ ನೆನಪು ಮಾಡುತ್ತಾ ಇದ್ದರೆ ಬಹಳ ಬೇಗನೆ ಕರ್ಮಾತೀತ ಸ್ಥಿತಿಯಾಗುವುದು ಮತ್ತು ಆತ್ಮವು ಹಿಂತಿರುಗಿ ಹೋಗಿಬಿಡುವುದು. ಆದರೆ ಇಲ್ಲ, ಮೊಟ್ಟಮೊದಲನೆಯ ಪದವಿಗೆ ಇವರು (ಬ್ರಹ್ಮಾ) ಹೋಗುವವರಿದ್ದಾರೆ. ನಂತರ ಶಿವತಂದೆಯ ಮೆರವಣಿಗೆಯಿದೆ. ವಿವಾಹದಲ್ಲಿ ಮಾತೆಯರು ಮಣ್ಣಿನ ಮಡಿಕೆಗಳಲ್ಲಿ ಜ್ಯೋತಿಯನ್ನು ಬೆಳಗಿಸಿಕೊಂಡು, ತೆಗೆದುಕೊಂಡು ಹೋಗುತ್ತಾರಲ್ಲವೆ. ಇದು ಚಿಹ್ನೆಯಾಗಿದೆ. ಪ್ರಿಯತಮನಾದ ಶಿವತಂದೆಯಂತೂ ಸದಾಜಾಗೃತ ಜ್ಯೋತಿಯಾಗಿದ್ದಾರೆ. ನಮ್ಮ ಜ್ಯೋತಿಯನ್ನು ಜಾಗೃತ ಮಾಡಿದ್ದಾರೆ. ಇಲ್ಲಿಯ ಮಾತನ್ನು ಭಕ್ತಿಮಾರ್ಗದಲ್ಲಿ ತೆಗೆದುಕೊಂಡು ಹೋಗಿದ್ದಾರೆ. ನೀವು ಯೋಗಬಲದಿಂದ ತಮ್ಮ ಜ್ಯೋತಿಯನ್ನು ಬೆಳಗಿಸಿಕೊಳ್ಳುತ್ತೀರಿ. ಯೋಗಬಲದಿಂದ ನೀವು ಪವಿತ್ರರಾಗುತ್ತೀರಿ. ಜ್ಞಾನದಿಂದ ಧನವು ಸಿಗುತ್ತದೆ, ವಿದ್ಯೆಗೆ ಆದಾಯದ ಮೂಲವೆಂದು ಹೇಳಲಾಗುತ್ತದೆಯಲ್ಲವೆ. ಯೋಗಬಲದಿಂದ ನೀವು ಇಡೀ ವಿಶ್ವ ಅದರಲ್ಲಿಯೂ ವಿಶೇಷವಾಗಿ ಭಾರತವನ್ನು ಪವಿತ್ರವನ್ನಾಗಿ ಮಾಡುತ್ತೀರಿ. ಇದರಲ್ಲಿ ಕನ್ಯೆಯರು ಬಹಳ ಒಳ್ಳೆಯ ಸಹಯೋಗವನ್ನು ನೀಡುತ್ತೀರಿ. ಸರ್ವೀಸ್ ಮಾಡಿ ಶ್ರೇಷ್ಠಪದವಿಯನ್ನು ಪಡೆಯಬೇಕಾಗಿದೆ, ಜೀವನವನ್ನು ವಜ್ರಸಮಾನ ಮಾಡಿಕೊಳ್ಳಬೇಕಾಗಿದೆ, ಕಡಿಮೆಯಲ್ಲ. ಫಾಲೋ ಫಾದರ್-ಮದರ್ ಎಂದು ಗಾಯನ ಮಾಡಲಾಗುತ್ತದೆ. ತಂದೆ-ತಾಯಿ ಮತ್ತು ಅನನ್ಯ ಸಹೋದರ-ಸಹೋದರಿಯರನ್ನು ನೋಡಬೇಕಾಗಿದೆ.

ನೀವು ಮಕ್ಕಳು ಪ್ರದರ್ಶನಿಯಲ್ಲಿಯೂ ತಿಳಿಸಬಹುದು - ನಿಮಗೆ ಇಬ್ಬರು ತಂದೆಯರಿದ್ದಾರೆ - ಲೌಕಿಕ ಮತ್ತು ಪಾರಲೌಕಿಕ. ಇದರಲ್ಲಿ ಯಾರು ದೊಡ್ಡವರು? ಅವಶ್ಯವಾಗಿ ಬೇಹದ್ದಿನ ತಂದೆಯೇ ದೊಡ್ಡವರಾದರಲ್ಲವೆ. ಆಸ್ತಿಯು ಅವರಿಂದಲೇ ಸಿಗಬೇಕಾಗಿದೆ. ಈಗ ಆಸ್ತಿಯನ್ನು ಕೊಡುತ್ತಿದ್ದಾರೆ. ವಿಶ್ವದ ಮಾಲೀಕರನ್ನಾಗಿ ಮಾಡುತ್ತಿದ್ದಾರೆ. ಭಗವಾನುವಾಚ - ನಿಮಗೆ ರಾಜಯೋಗವನ್ನು ಕಲಿಸುತ್ತೇನೆ ಮತ್ತೆ ನೀವು ಇನ್ನೊಂದು ಜನ್ಮದಲ್ಲಿ ವಿಶ್ವದ ಮಾಲೀಕರಾಗುತ್ತೀರಿ. ತಂದೆಯು ಕಲ್ಪ-ಕಲ್ಪ ಭಾರತದಲ್ಲಿ ಬಂದು ಭಾರತವನ್ನು ಬಹಳ ಸಾಹುಕಾರನನ್ನಾಗಿ ಮಾಡುತ್ತಾರೆ. ಈ ವಿದ್ಯೆಯಿಂದ ನೀವು ವಿಶ್ವದ ಮಾಲೀಕರಾಗುತ್ತೀರಿ, ಆ ವಿದ್ಯೆಯಿಂದೇನು ಸಿಗುತ್ತದೆ? ಇಲ್ಲಂತೂ ನೀವು 21 ಜನ್ಮಗಳಿಗಾಗಿ ವಜ್ರಸಮಾನರಾಗುತ್ತೀರಿ. ಆ ವಿದ್ಯೆಯಲ್ಲಿ ರಾತ್ರಿ-ಹಗಲಿನ ಅಂತರವಿದೆ, ಇಲ್ಲಂತೂ ತಂದೆ, ಶಿಕ್ಷಕ, ಸದ್ಗುರುವಂತೂ ಒಬ್ಬರೇ ಆಗಿದ್ದಾರೆ ಆದ್ದರಿಂದ ತಂದೆಯ ಆಸ್ತಿ, ಶಿಕ್ಷಕನ ಆಸ್ತಿ, ಗುರುವಿನ ಆಸ್ತಿ ಎಲ್ಲವನ್ನೂ ಕೊಡುತ್ತಾರೆ. ಈಗ ತಂದೆಯು ತಿಳಿಸುತ್ತಾರೆ - ದೇಹಸಹಿತವಾಗಿ ಎಲ್ಲವನ್ನೂ ಮರೆಯಬೇಕಾಗಿದೆ. ತಾವು ಸತ್ತರೆ ತಮ್ಮ ಪಾಲಿಗೆ ಜಗತ್ತೇ ಸತ್ತಂತೆ. ತಂದೆಗೆ ದತ್ತು ಮಕ್ಕಳಾಗಿದ್ದೀರಿ ಅಂದಮೇಲೆ ಮತ್ತ್ಯಾರನ್ನು ನೆನಪು ಮಾಡುತ್ತೀರಿ? ಅನ್ಯರನ್ನು ನೋಡುತ್ತಿದ್ದರೂ ನೋಡಿಯೂ ನೋಡದಂತೆ ಪಾತ್ರದಲ್ಲಿಯೂ ಬರುತ್ತೀರಿ ಏಕೆಂದರೆ ಈಗ ನಾವು ಮನೆಗೆ ಹೋಗಬೇಕಾಗಿದೆ. ಮತ್ತೆ ಇಲ್ಲಿ ಬಂದು ಪಾತ್ರವನ್ನಭಿನಯಿಸಬೇಕಾಗಿದೆ ಎಂದು ಬುದ್ಧಿಯಲ್ಲಿದೆ. ಇದು ಬುದ್ಧಿಯಲ್ಲಿದ್ದರೂ ಸಹ ಬಹಳ ಖುಷಿಯಿರುವುದು. ಮಕ್ಕಳು ದೇಹದ ಪರಿವೆಯನ್ನು ಬಿಟ್ಟುಬಿಡಬೇಕಾಗಿದೆ. ಈ ಹಳೆಯ ವಸ್ತುವನ್ನು ಇಲ್ಲಿಯೇ ಬಿಟ್ಟು ಈಗ ಹಿಂತಿರುಗಿ ಮನೆಗೆ ಹೋಗಬೇಕಾಗಿದೆ. ನಾಟಕವು ಮುಕ್ತಾಯವಾಗುತ್ತದೆ, ಹಳೆಯ ಸೃಷ್ಟಿಗೆ ಬೆಂಕಿ ಬೀಳುತ್ತಿದೆ. ಅಂಧರ ಮಕ್ಕಳು ಅಂಧರು, ಅಜ್ಞಾನ ನಿದ್ರೆಯಲ್ಲಿ ಮಲಗಿಬಿಟ್ಟಿದ್ದಾರೆ. ಇವರು ಮಲಗಿರುವ ಮನುಷ್ಯನನ್ನು ತೋರಿಸಿದ್ದಾರೆಂದು ಮನುಷ್ಯರು ತಿಳಿಯುತ್ತಾರೆ ಆದರೆ ಇದು ಅಜ್ಞಾನ ನಿದ್ರೆಯ ಮಾತಾಗಿದೆ. ಇದರಿಂದ ನೀವು ಜಾಗೃತಗೊಳಿಸುತ್ತೀರಿ. ಜ್ಞಾನ ಅರ್ಥಾತ್ ಸತ್ಯಯುಗ, ದಿನವಾಗಿದೆ. ಅಜ್ಞಾನವೆಂದರೆ ರಾತ್ರಿ, ಕಲಿಯುಗವಾಗಿದೆ. ಇವು ಬಹಳ ತಿಳಿದುಕೊಳ್ಳುವ ಮಾತುಗಳಾಗಿವೆ. ಕನ್ಯೆಗೆ ವಿವಾಹವಾಗುತ್ತದೆಯೆಂದರೆ ತಂದೆ, ತಾಯಿ, ಅತ್ತೆ, ಮಾವ ಮೊದಲಾದವರು ನೆನಪಿಗೆ ಬರುವರು. ಅವರನ್ನು ಮರೆಯಬೇಕಾಗುತ್ತದೆ. ಇಂತಹ ದಂಪತಿಗಳೂ ಇದ್ದಾರೆ ನಾವು ದಂಪತಿಗಳಾಗಿದ್ದರೂ ಎಂದೂ ವಿಕಾರದಲ್ಲಿ ಹೋಗುವುದಿಲ್ಲ ಎಂದು ಸನ್ಯಾಸಿಗಳಿಗೆ ತೋರಿಸುತ್ತಾರೆ. ಜ್ಞಾನದ ಕತ್ತಿಯು ಮಧ್ಯದಲ್ಲಿದೆ. ಪವಿತ್ರರಾಗಬೇಕು ಎಂದು ತಂದೆಯ ಆಜ್ಞೆಯಾಗಿದೆ. ನೋಡಿ, ರಮೇಶ್ ಮತ್ತು ಉಷಾ ಇದ್ದಾರೆ, ಎಂದೂ ಪತಿತರಾಗಿಲ್ಲ, ಒಂದುವೇಳೆ ನಾವು ಪತಿತರಾದರೆ 21 ಜನ್ಮಗಳಿಗಾಗಿ ರಾಜ್ಯಭಾಗ್ಯವು ಸಮಾಪ್ತಿಯಾಗುವುದು. ದಿವಾಳಿಯಾಗುತ್ತೇವೆಂಬ ಭಯವಿದೆ. ಕೆಲಕೆಲವರು ಅನುತ್ತೀರ್ಣರಾಗಿಬಿಡುತ್ತಾರೆ. ಗಂಧರ್ವ ವಿವಾಹದ ಹೆಸರಂತೂ ಇದೆಯಲ್ಲವೆ. ನಿಮಗೆ ತಿಳಿದಿದೆ - ಪವಿತ್ರರಾಗುವುದರಿಂದ ಬಹಳ ಶ್ರೇಷ್ಠಪದವಿಯು ಸಿಗುತ್ತದೆ. ಒಂದು ಜನ್ಮಕ್ಕಾಗಿ ಪವಿತ್ರರಾಗಬೇಕಾಗಿದೆ, ಯೋಗಬಲದಿಂದ ಕರ್ಮೇಂದ್ರಿಯಗಳ ಮೇಲೂ ನಿಯಂತ್ರಣ ಶಕ್ತಿಯು ಬಂದುಬಿಡುತ್ತದೆ. ಯೋಗಬಲದಿಂದ ನೀವು ಇಡೀ ವಿಶ್ವವನ್ನು ಪವಿತ್ರವನ್ನಾಗಿ ಮಾಡುತ್ತೀರಿ. ನೀವು ಕೆಲವರೇ ಮಕ್ಕಳು ಯೋಗಬಲದಿಂದ ಇಡೀ ಬೆಟ್ಟವನ್ನು ಹಾರಿಸಿ ಚಿನ್ನದ ಪರ್ವತವನ್ನು ಸ್ಥಾಪನೆ ಮಾಡುತ್ತೀರಿ. ಮನುಷ್ಯರು ಇದನ್ನು ತಿಳಿದುಕೊಂಡಿಲ್ಲ, ಅವರಂತೂ ಗೋವರ್ಧನ ಪರ್ವತದ ಹಿಂದೆ ಸುತ್ತಾಡುತ್ತಿರುತ್ತಾರೆ. ತಂದೆಯೇ ಇಡೀ ಪ್ರಪಂಚವನ್ನು ಸ್ವರ್ಣೀಮ ಯುಗವನ್ನಾಗಿ ಮಾಡುತ್ತಾರೆ. ಹಿಮಾಲಯವು ಚಿನ್ನದ್ದಾಗಿಬಿಡುತ್ತದೆ ಎಂದಲ್ಲ. ಸತ್ಯಯುಗದಲ್ಲಂತೂ ಚಿನ್ನದ ಗಣಿಗಳು ತುಂಬಿರುತ್ತವೆ. ಪಂಚತತ್ವಗಳು ಸತೋಪ್ರಧಾನವಾಗಿರುತ್ತದೆ, ಬಹಳ ಒಳ್ಳೆಯ ಫಲಗಳನ್ನುಕೊಡುತ್ತವೆ, ಸತೋಪ್ರಧಾನ ತತ್ವಗಳಿಂದ ಈ ಶರೀರವೂ ಸತೋಪ್ರಧಾನವಾಗುತ್ತವೆ. ಅಲ್ಲಿನ ಫಲಗಳು ಬಹಳ ದೊಡ್ಡದು ಮತ್ತು ಸ್ವಾಧಿಷ್ಟವಾಗಿರುತ್ತವೆ. ಹೆಸರೇ ಆಗಿದೆ - ಸ್ವರ್ಗ, ಅಂದಾಗ ತನ್ನನ್ನು ಆತ್ಮವೆಂದು ತಿಳಿದು ತಂದೆಯನ್ನು ನೆನಪು ಮಾಡಿರುವುದರಿಂದಲೇ ವಿಕಾರಗಳು ಬಿಟ್ಟುಹೋಗುತ್ತವೆ. ದೇಹಾಭಿಮಾನವು ಬರುವುದರಿಂದ ವಿಕಾರದ ಚೇಷ್ಟೆಯುಂಟಾಗುತ್ತದೆ. ಯೋಗಿಗಳೆಂದೂ ವಿಕಾರದಲ್ಲಿ ಹೋಗುವುದಿಲ್ಲ, ಭಲೆ ಜ್ಞಾನವಿದೆ ಆದರೆ ಯೋಗಿಗಳಾಗಿಲ್ಲವೆಂದರೆ ಕೆಳಗೆ ಬೀಳುವರು. ಹೇಗೆ ಪುರುಷಾರ್ಥವು ದೊಡ್ಡದೊ, ಪ್ರಾಲಬ್ಧವು ದೊಡ್ಡದೋ ಎಂದು ಕೇಳಿದಾಗ ಪುರುಷಾರ್ಥವು ದೊಡ್ಡದೆಂದು ಹೇಳಲಾಗುತ್ತದೆ. ಹಾಗೆಯೇ ಇದರಲ್ಲಿ ಯೋಗವು ದೊಡ್ಡದೆಂದು ಹೇಳುತ್ತಾರೆ. ಯೋಗದಿಂದಲೇ ಪತಿತರಿಂದ ಪಾವನರಾಗುತ್ತೀರಿ. ನಾವು ಬೇಹದ್ದಿನ ತಂದೆಯಿಂದ ಓದುತ್ತೇವೆಂದು ನೀವು ಮಕ್ಕಳು ಹೇಳುತ್ತೀರಿ. ಮನುಷ್ಯರಿಂದ ಓದುವುದರಿಂದ ಏನು ಸಿಗುತ್ತದೆ? ತಿಂಗಳಿನಲ್ಲಿ ಏನು ಸಂಪಾದನೆಯಾಗುತ್ತದೆ? ಇಲ್ಲಿ ನೀವು ಒಂದೊಂದು ರತ್ನವನ್ನು ಧಾರಣೆ ಮಾಡಿಕೊಳ್ಳುತ್ತೀರಿ. ಇವು ಲಕ್ಷಾಂತರ ರೂಪಾಯಿಗಳ ಮೌಲ್ಯವಾಗಿದೆ. ಅಲ್ಲಿ ಹಣವ್ನನು ಎಣಿಕೆ ಮಾಡುವುದಿಲ್ಲ. ಲೆಕ್ಕವಿಲ್ಲದಷ್ಟು ಹಣವಿರುತ್ತದೆ, ಎಲ್ಲರಿಗೆ ತಮ್ಮ-ತಮ್ಮ ಜಮೀನು ಇರುತ್ತದೆ. ಈಗ ತಂದೆಯು ತಿಳಿಸುತ್ತಾರೆ - ನಾನು ನಿಮಗೆ ರಾಜಯೋಗವನ್ನು ಕಲಿಸುತ್ತೇನೆ. ಇದು ಗುರಿ-ಧ್ಯೇಯವಾಗಿದೆ. ಪುರುಷಾರ್ಥ ಮಾಡಿ ಶ್ರೇಷ್ಠರಾಗಬೇಕಾಗಿದೆ. ರಾಜಧಾನಿಯು ಸ್ಥಾಪನೆಯಾಗುತ್ತಿದೆ, ಈ ಲಕ್ಷ್ಮೀ-ನಾರಾಯಣರು ಹೇಗೆ ಪ್ರಾಲಬ್ಧವನ್ನು ಪಡೆದರು. ಇವರ ಪ್ರಾಲಬ್ಧವನ್ನು ಅರಿತುಕೊಂಡ ಮೇಲೆ ಮತ್ತೇನು ಬೇಕು? ಈಗ ನೀವು ತಿಳಿದುಕೊಂಡಿದ್ದೀರಿ - ಕಲ್ಪದ 5000 ವರ್ಷಗಳ ನಂತರ ತಂದೆಯು ಬರುತ್ತಾರೆ, ಬಂದು ಭಾರತವನ್ನು ಸ್ವರ್ಗವನ್ನಾಗಿ ಮಾಡುತ್ತಾರೆ. ಅಂದಮೇಲೆ ಮಕ್ಕಳಿಗೆ ಸೇವೆ ಮಾಡುವ ಉಮ್ಮಂಗವಿರಬೇಕು. ಎಲ್ಲಿಯವರೆಗೆ ಅನ್ಯರಿಗೆ ಮಾರ್ಗವನ್ನು ತಿಳಿಸುವುದಿಲ್ಲವೋ ಅಲ್ಲಿಯವರೆಗೆ ಭೋಜನವನ್ನು ಸ್ವೀಕರಿಸುವುದಿಲ್ಲವೆನ್ನುವಷ್ಟು ಉಮ್ಮಂಗ-ಉತ್ಸಾಹವಿರಬೇಕು. ಆಗಲೇ ಶ್ರೇಷ್ಠಪದವಿಯನ್ನು ಪಡೆಯುತ್ತೀರಿ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ತಂದೆಯ ಆತ್ಮಿಕ ಮಕ್ಕಳಿಗೆ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ಈಶ್ವರೀಯ ಸೇವೆ ಮಾಡಿ ತಮ್ಮ ಜೀವನವನ್ನು 21 ಜನ್ಮಗಳಿಗಾಗಿ ವಜ್ರಸಮಾನ ಮಾಡಿಕೊಳ್ಳಬೇಕಾಗಿದೆ. ಮಾತಾಪಿತಾ ಮತ್ತು ಅನನ್ಯ ಸಹೋದರ-ಸಹೋದರಿಯರನ್ನೇ ಅನುಸರಿಸಬೇಕಾಗಿದೆ.

2. ಕರ್ಮಾತೀತ ಸ್ಥಿತಿಯನ್ನು ತಲುಪಲು ದೇಹಸಹಿತ ಎಲ್ಲವನ್ನೂ ಮರೆಯಬೇಕಾಗಿದೆ. ತಮ್ಮ ನೆನಪನ್ನು ಅಡೋಲ ಮತ್ತು ಸ್ಥಿರ ಮಾಡಿಕೊಳ್ಳಬೇಕಾಗಿದೆ. ದೇವತೆಗಳ ತರಹ, ನಿರ್ಲೋಭಿ, ನಿರ್ಮೋಹಿ, ನಿರ್ವಿಕಾರಿಗಳಾಗಬೇಕಾಗಿದೆ.

ವರದಾನ:
ಒದ್ದಾಡುತ್ತಿರುವ ಆತ್ಮಗಳಿಗೆ ಒಂದು ಸೆಕೆಂಡ್ನಲ್ಲಿ ಗತಿ-ಸದ್ಗತಿ ಕೊಡುವಂತಹ ಮಾಸ್ಟರ್ ದಾತ ಭವ

ಹೇಗೆ ಸ್ಥೂಲ ಸೀಜನ್ಗಾಗಿ ತಯಾರಿ ನಡೆಸುವಿರಿ, ಸೇವಾಧಾರಿ ಸಾಮಗ್ರಿಗಳು ಎಲ್ಲವನ್ನೂ ತಯಾರಿ ಮಾಡಿಕೊಳ್ಳುವಿರಿ ಯಾವುದರಿಂದ ಯಾರಿಗೂ ಯಾವುದೇ ತೊಂದರೆ ಆಗದಿರಲಿ ಎಂದು, ಸಮಯ ವ್ಯರ್ಥವಾಗದೇಯಿರಲಿ ಎಂದು. ಅದೇರೀತಿ ಈಗ ಎಲ್ಲಾ ಆತ್ಮಗಳಿಗೆ ಗತಿ-ಸದ್ಗತಿ ಮಾಡುವಂತಹ ಅಂತಿಮ ಸೀಜûನ್ ಬರುವುದಿದೆ, ಒದ್ದಾಡುತ್ತಿರುವ ಆತ್ಮಗಳನ್ನು ಕ್ಯೂ ನಲ್ಲಿ ಕಾಯ್ದು ನಿಲ್ಲುವಂತಹ ಕಷ್ಟ ಕೊಡಬೇಡಿ, ಬರುತ್ತಿರಲಿ ಮತ್ತು ಪಡೆದುಕೊಂಡು ಹೋಗುತ್ತಿರಲಿ, ಅದಕ್ಕಾಗಿ ಎವರೆಡಿಯಾಗಿ. ಪುರುಷಾರ್ಥಿ ಜೀವನದಲ್ಲಿ ಇರುವುದರಿಂದ ಮೆಲೆ ದಾತತನದ ಸ್ಥಿತಿಯಲ್ಲಿರಿ. ಪ್ರತಿ ಸಂಕಲ್ಪ, ಪ್ರತಿ ಸೆಕೆಂಡ್ ನಾನು ಮಾಸ್ಟರ್ ದಾತ ಆಗಿರುವೆ ಎಂದು ತಿಳಿದು ನಡೆಯಿರಿ.

ಸ್ಲೋಗನ್:
ಹಜೂರ್ನನ್ನು ಬುದ್ಧಿಯಲ್ಲಿ ಹಾಜಿರ್ ಆಗಿಟ್ಟುಕೊಳ್ಳಿ ಆಗ ಸರ್ವಪ್ರಾಪ್ತಿಗಳು ಜೀ ಹಜೂóರ್ ಮಾಡುವುದು.

ಅವ್ಯಕ್ತ ಸೂಚನೆ: ಏಕಾಂತಪ್ರಿಯರಾಗಿ ಏಕತೆ ಮತ್ತು ಏಕಾಗ್ರತೆಯನ್ನು ತಮ್ಮದಾಗಿಸಿಕೊಳ್ಳಿ

ಏಕತೆಯ ಜೊತೆಯಲ್ಲಿ ಏಕಾಂತಪ್ರಿಯರಾಗಬೇಕು. ಯಾರದ್ದು ಅನೇಕ ಕಡೆಯಿಂದ ಬುದ್ಧಿಯೋಗವು ತುಂಡಾಗಿರುತ್ತದೆ ಮತ್ತು ಒಬ್ಬರ ಪ್ರಿಯವಾಗಿರುತ್ತಾರೆ ಅವರೆ ಏಕಾಂತಪ್ರಿಯರಾಗುವರು. ಒಬ್ಬರ ಪ್ರಿಯರಾಗುವ ಕಾರಣ ಒಬ್ಬರದ್ದೇ ನೆನಪಿನಲ್ಲಿರಲು ಸಾಧ್ಯ. ಏಕಾಂತಪ್ರಿಯ ಅರ್ಥಾತ್ ಒಬ್ಬರನ್ನು ಬಿಟ್ಟರೆ ಬೇರೆ ಯಾರಿಲ್ಲ. ಸರ್ವ ಸಂಬಂಧ, ಸರ್ವ ರಸಗಳು ಒಬ್ಬರಿಂದ ತೆಗೆದುಕೊಳ್ಳುವವರೇ ಏಕಾಂತ ಪ್ರಿಯರಾಗಲು ಸಾಧ್ಯ.