02.02.25    Avyakt Bapdada     Kannada Murli    31.12.2003     Om Shanti     Madhuban


ಈ ವರ್ಷ ನಿಮಿತ್ತ ಮತ್ತು ನಿರ್ಮಾಣರಾಗಿ ಜಮಾದ ಖಾತೆಯನ್ನು ಹೆಚ್ಚಿಸಿಕೊಳ್ಳಿ ಮತ್ತು ಅಖಂಡ ಮಹಾದಾನಿಗಳಾಗಿ


ಇಂದು ಅನೇಕ ಭುಜದಾರಿ ಬಾಪ್ದಾದಾ ತಮ್ಮ ಎಲ್ಲಾ ಕಡೆಯ ಭುಜಗಳನ್ನು ನೋಡುತ್ತಿದ್ದರು. ಕೆಲವು ಭುಜಗಳು ಸಾಕಾರದಲ್ಲಿ ಸಮ್ಮುಖದಲ್ಲಿದ್ದಾರೆ, ಇನ್ನು ಕೆಲವು ಭುಜಗಳು ಸೂಕ್ಷ್ಮರೂಪದಲ್ಲಿ ಕಾಣಿಸುತ್ತಿದ್ದಾರೆ. ಬಾಪ್ದಾದಾ ತಮ್ಮ ಅನೇಕ ಭುಜಗಳನ್ನು ನೋಡಿ ಹರ್ಷಿತರಾಗುತ್ತಿದ್ದರು. ಎಲ್ಲಾ ಭುಜಗಳು ನಂಬರ್ವಾರ್ ಬಹಳ ಆಲ್ರೌಂಡರ್, ಎವರ್ ರೆಡಿ, ಆಜ್ಞಾಕಾರಿ ಭುಜಗಳಾಗಿದ್ದಾರೆ. ಕೇವಲ ಬಾಪ್ದಾದಾರವರು ಸೂಚನೆ ಕೊಟ್ಟರೆ ಸಾಕು ಬಲಭುಜಗಳಾದ ಮಕ್ಕಳು ಹೇಳುತ್ತಾರೆ - ಆಯಿತು ಬಾಬಾ, ಬಂದುಬಿಟ್ಟೆವು ಬಾಬಾ. ಇಂತಹ ಅನನ್ಯ ಮಕ್ಕಳನ್ನು ನೋಡಿ ಎಷ್ಟೊಂದು ಖುಷಿಯಾಗುತ್ತದೆ! ಬಾಪ್ದಾದಾರವರಿಗೆ ಆತ್ಮಿಕ ನಶೆ ಇದೆ - ಬಾಪ್ದಾದಾರವರ ವಿನಃ ಮತ್ತ್ಯಾವುದೇ ಧರ್ಮಾತ್ಮರಿಗಾಗಲಿ, ಮಹಾತ್ಮರಿಗಾಗಲಿ ಇಂತಹ ಮತ್ತು ಇಷ್ಟೊಂದು ಸಹಯೋಗಿ ಭುಜಗಳು ಸಿಗುವುದಿಲ್ಲ. ನೋಡಿ, ಇಡೀ ಕಲ್ಪದಲ್ಲಿ ಪರಿಕ್ರಮಣ ಮಾಡಿದರೆ ಇಂತಹ ಭುಜಗಳು ಯಾರಿಗಾದರೂ ಸಿಕ್ಕಿದ್ದಾರೆಯೇ? ಅಂದಾಗ ಬಾಪ್ ದಾದಾ ಪ್ರತಿಯೊಂದು ಭುಜದ ವಿಶೇಷತೆಯನ್ನು ನೋಡುತ್ತಿದ್ದರು. ತಾವು ಇಡೀ ವಿಶ್ವದಿಂದ ಹಾರಿಸಲ್ಪಟ್ಟಿರುವ ವಿಶೇಷ ಭುಜಗಳಾಗಿದ್ದೀರಿ, ಪರಮಾತ್ಮನ ಸಹಯೋಗಿ ಭುಜಗಳಾಗಿದ್ದೀರಿ. ನೋಡಿ, ಇಂದು ಈ ಹಾಲ್ನಲ್ಲಿಯೂ ಎಷ್ಟೊಂದು ಮಂದಿ ತಲುಪಿಬಿಟ್ಟಿದ್ದೀರಿ! (ಇಂದು ಹಾಲ್ನಲ್ಲಿ 18000ಗಿಂತಲೂ ಹೆಚ್ಚಿನ ಸಹೋದರ-ಸಹೋದರಿಯರು ಕುಳಿತಿದ್ದಾರೆ) ಎಲ್ಲರೂ ತಮ್ಮನ್ನು ಪರಮಾತ್ಮನ ಭುಜವಾಗಿದ್ದೇನೆ ಎಂದು ಅನುಭವ ಮಾಡುತ್ತೀರಾ? ನಶೆ ಇದೆಯಲ್ಲವೇ!

ಬಾಪ್ದಾದಾರವರಿಗೆ ಇದೇ ಖುಷಿ ಇದೆ - ಎಲ್ಲಾ ಕಡೆಯಿಂದ ಹೊಸ ವರ್ಷವನ್ನು ಆಚರಿಸಲು ಎಲ್ಲರೂ ಬಂದು ತಲುಪಿದ್ದೀರಿ ಆದರೆ ಹೊಸವರ್ಷವು ಏನನ್ನು ನೆನಪು ತರಿಸುತ್ತದೆ? ಹೊಸಯುಗ, ಹೊಸಜನ್ಮ. ಎಷ್ಟು ಅತೀ ಹಳೆಯ ಅಂತಿಮ ಜನ್ಮವಾಗಿದೆಯೋ ಅಷ್ಟು ಹೊಸ ಜನ್ಮವು ಎಷ್ಟು ಸುಂದರವಾಗಿರುತ್ತದೆ! ಇದು ಶ್ಯಾಮ ಮತ್ತು ಅದು ಸುಂದರ. ಇನ್ನೂ ಸ್ಪಷ್ಟ ಅಂದರೆ ಹೇಗೆ ಇಂದಿನ ದಿನ ಹಳೆಯ ವರ್ಷವೂ ಸ್ಪಷ್ಟವಾಗಿದೆ ಮತ್ತು ಹೊಸವರ್ಷವೂ ಸಮ್ಮುಖದಲ್ಲಿ ಸ್ಪಷ ್ಟವಾಗಿದೆಯೋ ಹಾಗೆಯೇ ತಮ್ಮ ಹೊಸಯುಗ ಹೊಸಜನ್ಮವೂ ಸ್ಪಷ್ಟವಾಗಿ ಸಮ್ಮುಖದಲ್ಲಿ ಬರುತ್ತಿದೆಯೇ? ಇಂದು ಕೊನೆಯ ಜನ್ಮದಲ್ಲಿ ಇದ್ದೀರಿ, ನಾಳೆ ಮೊದಲಿನ ಜನ್ಮದಲ್ಲಿ ಇರುತ್ತೀರಿ. ಇದು ಸ್ಪಷ್ಟವಾಗಿದೆಯೇ? ಸಮ್ಮುಖದಲ್ಲಿ ಬರುತ್ತಿದೆಯೇ? ಯಾರು ಆದಿಯ ಮಕ್ಕಳಿದ್ದಾರೆಯೋ ಅವರು ಬ್ರಹ್ಮಾತಂದೆಯನ್ನು ಅನುಭವ ಮಾಡಿದಿರಿ, ಬ್ರಹ್ಮಾತಂದೆಗೆ ಹೇಗೆ ತಮ್ಮ ಹೊಸ ಜನ್ಮದ ರಾಜ್ಯಪದವಿಯ ಶರೀರರೂಪೀ ವಸ್ತ್ರವು ಸದಾ ಮುಂದೆ ಕಾಣಿಸುತ್ತಿತ್ತು. ಯಾರೇ ಮಕ್ಕಳು ಮಿಲನ ಮಾಡಲು ಹೋದಾಗ ಅವರು ಅನುಭವ ಮಾಡುತ್ತಿದ್ದರು, ಬ್ರಹ್ಮಾತಂದೆಯ ಅನುಭವ ಹೀಗಿತ್ತು - ಇಂದು ನಾನು ವೃದ್ಧನಾಗಿದ್ದೇನೆ ಆದರೆ ನಾನೇ ನಾಳೆ ಚಿಕ್ಕ ಮಗುವಿನ ಶರೀರವನ್ನು ಧಾರಣೆ ಮಾಡುತ್ತೇನೆ. ಈ ಅನುಭವವು ಆದಿಯ ಹಳೆಯ ಮಕ್ಕಳಿಗೆ ನೆನಪಿದೆಯೇ? ಇದು ಇಂದು ಮತ್ತು ನಾಳೆಯ ಆಟವಾಗಿದೆ ಅಂದಮೇಲೆ ಭವಿಷ್ಯವೂ ಸಹ ಇಷ್ಟೊಂದು ಸ್ಪಷ್ಟ ಅನುಭವವಾಗಬೇಕು. ಇಂದು ಸ್ವರಾಜ್ಯ ಅಧಿಕಾರಿಗಳಾಗಿದ್ದೀರಿ. ನಾಳೆ ವಿಶ್ವರಾಜ್ಯಾಧಿಕಾರಿಗಳಾಗುತ್ತೀರಿ, ಈ ನಶೆ ಇದೆಯೇ? ನೋಡಿ ಇಂದು ಮಕ್ಕಳು ಕಿರೀಟವನ್ನು ಧಾರಣೆ ಮಾಡಿ ಕುಳಿತಿದ್ದಾರೆ (ಡಬಲ್ ವಿದೇಶಿ ಮಕ್ಕಳು ರಿಟ್ರೀಟ್ಗಾಗಿ ಬಂದಿದ್ದಾರೆ) ಅಂದಮೇಲೆ ನಶೆ ಇದೆಯೇ? ಕಿರೀಟವನ್ನು ಧರಿಸುವುದರಿಂದ ಯಾವ ನಶೆ ಇದೆ? ಇವರು ಫರಿಸ್ತೆಗಳ ನಶೆಯಲ್ಲಿ ಇದ್ದಾರೆ. ನಾವು ನಶೆಯಲ್ಲಿ ಇದ್ದೇವೆ ಎಂದು ಕೈಯನ್ನು ಅಲುಗಾಡಿಸುತ್ತಿದ್ದಾರೆ.

ಅಂದಾಗ ಈ ವರ್ಷದಲ್ಲಿ ಏನು ಮಾಡುತ್ತೀರಿ? ಹೊಸ ವರ್ಷದಲ್ಲಿ ಯಾವ ನವೀನತೆಯನ್ನು ಮಾಡುತ್ತೀರಿ? ಯಾವುದಾದರೂ ಯೋಜನೆಗಳನ್ನು ಮಾಡಿದ್ದೀರಾ? ಏನು ನವೀನತೆ ಮಾಡುತ್ತೀರಿ? ಸಮಾರಂಭಗಳನ್ನಂತೂ ಮಾಡುತ್ತಿರುತ್ತೀರಿ, ಒಂದು ಲಕ್ಷ ಜನರ ಸಭೆಯನ್ನು ಮಾಡಿದಿರಿ, ಎರಡು ಲಕ್ಷದ್ದನ್ನೂ ಮಾಡಿದಿರಿ. ಆದರೆ ಯಾವ ನವೀನತೆಯನ್ನು ಮಾಡಿ ತೋರಿಸುತ್ತೀರಿ? ಇಂದಿನ ಆತ್ಮಗಳು ಒಂದುಕಡೆ ಸ್ವಪ್ರಾಪ್ತಿಗಾಗಿಯೂ ಇಚ್ಚುಕರಾಗಿದ್ದಾರೆ ಆದರೆ ಧೈರ್ಯಹೀನರಾಗಿದ್ದಾರೆ, ಧೈರ್ಯವಿಲ್ಲ. ಕೇಳುವುದುಕ್ಕೂ ಬಯಸುತ್ತಾರೆ ಆದರೆ ಆಗುವ ಧೈರ್ಯವಿಲ್ಲ. ಇಂತಹ ಆತ್ಮಗಳನ್ನು ಪರಿವರ್ತನೆ ಮಾಡುವುದಕ್ಕೋಸ್ಕರ ಮೊದಲು ಆತ್ಮಗಳಿಗೆ ಸಾಹಸದ ರೆಕ್ಕೆಗಳನ್ನು ನೀಡಿ. ಸಾಹಸದ ರೆಕ್ಕೆಗಳ ಆಧಾರವು ಅನುಭವ ಆಗಿದೆ ಅಂದಾಗ ಅನುಭವ ಮಾಡಿಸಿ. ಅನುಭವವು ಇಂತಹ ವಸ್ತುವಾಗಿದೆ - ಸ್ವಲ್ಪ ಅಂಚಲಿ ಸಿಕ್ಕಿದ ನಂತರ ಅನುಭವ ಮಾಡುತ್ತಾರೆಂದರೆ ಅನುಭವದ ರೆಕ್ಕೆಗಳು ಎಂದಾದರೂ ಹೇಳಿ ಇಲ್ಲವೇ ಅನುಭವ ಕಾಲುಗಳೆಂದಾದರೂ ಹೇಳಿ ಅದರಿಂದ ಧೈರ್ಯದಲ್ಲಿ ಮುಂದುವರೆಯುತ್ತಾರೆ. ಇದಕ್ಕೋಸ್ಕರ ವಿಶೇಷವಾಗಿ ಈ ವರ್ಷ ನಿರಂತರ ಅಖಂಡ ಮಹಾದಾನಿಗಳಾಗಬೇಕು, ಅಖಂಡ. ಮನಸ್ಸಿನ ಮೂಲಕ ಶಕ್ತಿ ಸ್ವರೂಪರನ್ನಾಗಿ ಮಾಡಿ. ಮಹಾದಾನಿಗಳಾಗಿ ನಿರಂತರ ಶಕ್ತಿಗಳ ಅನುಭವ ಮಾಡಿಸಿ, ಮನಸ್ಸಿನ ಮೂಲಕ, ಪ್ರಕಂಪನಗಳ ಮೂಲಕ ಅನುಭವ ಮಾಡಿಸಿ. ವಾಚಾದ ಮೂಲಕ ಜ್ಞಾನ ದಾನ ಮಾಡಿ, ಕರ್ಮದ ಮೂಲಕ ಗುಣಗಳ ದಾನ ಮಾಡಿ. ಇಡೀ ದಿನ ಮನಸ್ಸಿನ ಮೂಲಕ ಇಲ್ಲವೇ ವಾಚಾ, ಅಥವಾ ಕರ್ಮ ಮೂರರ ಮೂಲಕ ಅಖಂಡ ಮಹಾದಾನಿಗಳಾಗಿ ಸಮಯ ಪ್ರಮಾಣ ಕೆಲ- ಕೆಲವೊಮ್ಮೆ ದಾನ ಮಾಡುವುದಲ್ಲ, ಅಖಂಡದಾನಿಗಳಾಗಿ ಏಕೆಂದರೆ ಆತ್ಮಗಳಿಗೆ ಈಗ ಇದರ ಅವಶ್ಯಕತೆ ಇದೆ ಅಂದಮೇಲೆ ಮಹಾದಾನಿಗಳಾಗುವುದಕ್ಕೋಸ್ಕರ ಮೊದಲು ತಮ್ಮ ಜಮಾದ ಖಾತೆಯನ್ನು ಪರಿಶೀಲನೆ ಮಾಡಿಕೊಳ್ಳಿ. ನಾಲ್ಕೂ ಸಬ್ಜೆಕ್ಟ್ ಗಳಲ್ಲಿ ಜಮಾದ ಖಾತೆಯೂ ಎಷ್ಟು ಪೆರ್ಸೆಂಟ್ನಲ್ಲಿ ಇದೆ? ಒಂದುವೇಳೆ ಸ್ವಯಂನಲ್ಲಿ ಜಮಾದ ಖಾತೆ ಇಲ್ಲವೆಂದರೆ ಮಹಾದಾನಿಗಳು ಹೇಗೆ ಆಗುತ್ತೀರಿ! ಮತ್ತು ಜಮಾದ ಖಾತೆಯನ್ನು ಪರಿಶೀಲನೆ ಮಾಡಿಕೊಳ್ಳುವ ಚಿಹ್ನೆ ಏನಾಗಿದೆ? ಮನಸಾ, ವಾಚಾ, ಕರ್ಮದ ಮೂಲಕ ಸೇವೆಯನ್ನಂತೂ ಮಾಡಿದಿರಿ ಆದರೆ ಜಮಾದ ಚಿನ್ಹೆ ಆಗಿದೆ - ಸೇವೆ ಮಾಡುತ್ತಿದ್ದರೂ ಸಹ ಮೊದಲು ಸ್ವಯಂನ ಸಂತುಷ್ಟತೆ ಇರುವುದು. ಜೊತೆ-ಜೊತೆಗೆ ಯಾರ ಸೇವೆ ಮಾಡುತ್ತೀರೋ ಆ ಆತ್ಮಗಳಲ್ಲಿ ಖುಷಿಯ ಸಂತುಷ್ಟತೆ ಬಂದಿತೇ? ಒಂದುವೇಳೆ ಎರಡೂ ಕಡೆ ಸಂತುಷ್ಟತೆ ಇಲ್ಲವೆಂದರೆ ತಿಳಿಯಿರಿ ಸೇವೆಯ ಖಾತೆಯಲ್ಲಿ ತಮ್ಮ ಸೇವೆಯ ಫಲವು ಜಮಾ ಆಗಲಿಲ್ಲ.

ಬಾಪ್ದಾದಾರವರು ಕೆಲ-ಕೆಲವೊಮ್ಮೆ ಮಕ್ಕಳ ಜಮಾದ ಖಾತೆಯನ್ನು ನೋಡುತ್ತಾರೆ. ಅದರಲ್ಲಿ ಕೆಲವೊಂದೆಡೆ ಹೆಚ್ಚಿನ ಪರಿಶ್ರಮವಿದೆ ಆದರೆ ಜಮಾದ ಫಲವು ಕಡಿಮೆ ಇದೆ. ಇದಕ್ಕೆ ಕಾರಣವೇನು? ಎರಡೂ ಕಡೆಯ ಸಂತುಷ್ಟತೆಯ ಕೊರತೆಯಾಗಿದೆ. ಒಂದುವೇಳೆ ಸ್ವಯಂ ಆಗಲಿ ಅನ್ಯರಾಗಲಿ, ಸಂತುಷ್ಟತೆಯ ಅನುಭವ ಮಾಡಲಿಲ್ಲವೆಂದರೆ ಜಮಾದ ಖಾತೆಯು ಕಡಿಮೆ ಆಗುತ್ತದೆ. ಬಾಪ್ದಾದಾರವರು ಬಹಳ ಸಹಜವಾಗಿ ಜಮಾದ ಖಾತೆಯನ್ನು ಹೆಚ್ಚಿಸಿಕೊಳ್ಳುವ ಗೋಲ್ಡನ್ ಬೀಗದ ಕೈಯನ್ನು ಮಕ್ಕಳಿಗೆ ಕೊಟ್ಟಿದ್ದೇವೆ. ಆ ಬೀಗದ ಕೈ ಯಾವುದಾಗಿದೆ ಎಂದು ತಿಳಿದಿದೆಯೇ? ಸಿಕ್ಕಿದೆಯಲ್ಲವೇ! ಸಹಜವಾಗಿ ಜಮಾದ ಖಾತೆಯನ್ನು ಸಂಪನ್ನ ಮಾಡಿಕೊಳ್ಳುವ ಬೀಗದ ಕೈ ಯಾವುದೆಂದರೆ ಯಾವುದೇ ಮನಸಾ-ವಾಚಾ-ಕರ್ಮಣ ಎಲ್ಲಿಯೇ ಸೇವೆ ಮಾಡುವ ಸಮಯದಲ್ಲಿ ಮೊದಲನೆಯದಾಗಿ ತಮ್ಮಲ್ಲಿ ನಿಮಿತ್ತ ಭಾವದ ಸ್ಮೃತಿ. ನಿಮಿತ್ತ ಭಾವ, ನಿರ್ಮಾಣ ಭಾವ, ಶುಭಭಾವ, ಆತ್ಮಿಕ ಸ್ನೇಹದ ಭಾವ, ಒಂದುವೇಳೆ ಈ ಭಾವದ ಸ್ಥಿತಿಯಲ್ಲಿ ಸ್ಥಿತರಾಗಿ ಸೇವೆ ಮಾಡುತ್ತೀರೆಂದರೆ ತಮ್ಮ ಈ ಭಾವದಿಂದ ಸಹಜವಾಗಿ ಆತ್ಮಗಳ ಭಾವನೆಯೂ ಪೂರ್ಣವಾಗಿಬಿಡುತ್ತದೆ. ಇಂದಿನ ಮಾನವರು ಪ್ರತಿಯೊಬ್ಬರ ಭಾವನೆ ಏನೆಂಬುದನ್ನು ನೋಟ್ ಮಾಡುತ್ತಾರೆ. ಇವರು ನಿಮಿತ್ತ ಭಾವದಿಂದ ಮಾಡುತ್ತಿದ್ದಾರೆಯೇ ಅಥವಾ ಅಭಿಮಾನದ ಭಾವದಿಂದ ಮಾಡುತ್ತಿದ್ದಾರೆಯೇ! ಎಲ್ಲಿ ನಿಮಿತ್ತ ಭಾವವಿದೆಯೋ ಅಲ್ಲಿ ನಿರ್ಮಾಣ ಭಾವವೂ ತಾನಾಗಿಯೇ ಬಂದುಬಿಡುತ್ತದೆ ಅಂದಮೇಲೆ ಜಮಾ ಆಯಿತೇ? ಎಷ್ಟು ಜಮಾ ಆಯಿತು ಎಂಬುದನ್ನು ಪರಿಶೀಲನೆ ಮಾಡಿಕೊಳ್ಳಿ ಏಕೆಂದರೆ ಈ ಸಮಯದ ಸಂಗಮಯುಗವೇ ಜಮಾ ಮಾಡಿಕೊಳ್ಳುವ ಯುಗವಾಗಿದೆ. ನಂತರ ಇಡೀ ಕಲ್ಪದಲ್ಲಿ ಈಗಿನ ಜಮಾದ ಪ್ರಾಲಬ್ಧ ವಿರುತ್ತದೆ.

ಅಂದಮೇಲೆ ಈ ವರ್ಷ ವಿಶೇಷವಾಗಿ ಯಾವ ಗಮನ ಕೊಡಬೇಕಾಗಿದೆ? ತಮ್ಮ- ತಮ್ಮ ಜಮಾದ ಖಾತೆಯನ್ನು ಪರಿಶೀಲನೆ ಮಾಡಿಕೊಳ್ಳಿ. ಪರಿಶೀಲಿಸುವವರಾಗಿ, ಪರಿವರ್ತಕರೂ ಸಹ ಆಗಿ ಏಕೆಂದರೆ ಸಮಯದ ಸಮೀಪತೆಯ ಚಿಹ್ನೆಗಳನ್ನು ನೋಡುತ್ತಿದ್ದೀರಿ ಮತ್ತು ಬಾಪ್ದಾದಾರವರೊಂದಿಗೆ ನಾವು ಸಮಾನರಾಗುತ್ತೇವೆಂಬ ಪ್ರತಿಜ್ಞೆಯನ್ನು ಮಾಡಿದ್ದೀರಿ? ಪ್ರತಿಜ್ಞೆ ಮಾಡಿದ್ದೀರಾ? ಮಾಡಿದ್ದೀರಲ್ಲವೇ? ಯಾರು ಪ್ರತಿಜ್ಞೆ ಮಾಡಿದ್ದೀರೋ ಅವರು ಕೈ ಎತ್ತಿ. ಪ್ರತಿಜ್ಞೆಯನ್ನು ಪಕ್ಕಾ ಮಾಡಿದ್ದೀರಾ? ಅಥವಾ ಪರ್ಸೆಂಟೇಜ್ನಲ್ಲಿಯೋ? ಪಕ್ಕಾ ಮಾಡಿದ್ದೀರಲ್ಲವೇ? ಅಂದಮೇಲೆ ಬ್ರಹ್ಮಾ ತಂದೆಯ ಸಮಾನ ಜಮಾದ ಖಾತೆಯೂ ಬೇಕಲ್ಲವೇ! ಬ್ರಹ್ಮಾತಂದೆಯ ಸಮಾನರಾಗಬೇಕೆಂದರೆ ಬ್ರಹ್ಮಾ ತಂದೆಯ ಯಾವ ವಿಶೇಷ ಚರಿತ್ರೆಯನ್ನು ನೋಡಿದಿರಿ? ಆದಿಯಿಂದ ಹಿಡಿದು ಅಂತ್ಯದವರೆಗೆ ಪ್ರತಿಯೊಂದು ಮಾತಿನಲ್ಲಿ ನಾನು ಎಂದು ಹೇಳಿದರೋ ಅಥವಾ ಬಾಬಾ ಎಂದು ಹೇಳಿದರೋ? ನಾನು ಮಾಡುತ್ತಿದ್ದೇನೆ ಆದರೆ ತಂದೆಯೇ ಮಾಡಿಸುತ್ತಿದ್ದಾರೆ. ಯಾರೊಂದಿಗೆ ಮಿಲನ ಮಾಡಲು ಬಂದಿದ್ದೀರಿ? ತಂದೆಯೊಂದಿಗೆ ಮಿಲನ ಮಾಡಲು ಬಂದಿದ್ದೀರಿ. ನನ್ನತನದ ಅಭಾವ, ವಿದ್ಯೆಯನ್ನು ನೋಡಿದ್ದೀರಲ್ಲವೇ! ನೋಡಿದಿರಾ? ಪ್ರತಿಯೊಂದು ಮುರಳಿಯಲ್ಲಿಯೂ ಬಾಬಾ" ಬಾಬಾ ಎಂದು ಎಷ್ಟು ಸಾರಿ ನೆನಪು ತರಿಸುತ್ತಾರೆ? ಅಂದಾಗ ಸಮಾನರಾಗುವುದು ಎಂಬುದರ ಅರ್ಥವೇ ಆಗಿದೆ - ಮೊದಲು ನಾನು ಎಂಬುದರ ಅಭಾವವಿರಲಿ. ಮೊದಲೇ ತಿಳಿಸಿದ್ದೇವೆ - ಬ್ರಾಹ್ಮಣರ ನನ್ನತನವೂ ಸಹ ಬಹಳ ರಾಯಲ್ ಆಗಿದೆ. ನೆನಪು ಇದೆಯಲ್ಲವೇ? ತಿಳಿಸಿದ್ದೇವಲ್ಲವೇ! ಬಾಪ್ ದಾದಾರವರ ಪ್ರತ್ಯಕ್ಷತೆಯನ್ನು ಎಲ್ಲರೂ ಬಯಸುತ್ತಾರೆ. ಬಾಪ್ದಾದಾರವರ ಪ್ರತ್ಯಕ್ಷತೆ ಮಾಡಬೇಕೆಂಬ ಬಹಳ ಯೋಜನೆಗಳನ್ನು ಮಾಡುತ್ತೀರಿ, ಒಳ್ಳೆಯ ಯೋಜನೆಗಳನ್ನು ಮಾಡುತ್ತೀರಿ, ಬಾಪ್ದಾದಾ ಖುಷಿ ಆಗಿದ್ದಾರೆ ಆದರೆ ಈ ರಾಯಲ್ ರೂಪದ ನನ್ನತನವು ಯೋಜನೆಯಲ್ಲಿ, ಸಫಲತೆಯಲ್ಲಿ ಕೆಲವೊಂದು ಪರ್ಸೆಂಟೇಜನ್ನು ಕಡಿಮೆ ಮಾಡಿಬಿಡುತ್ತದೆ. ಸ್ವಾಭಾವಿಕವಾಗಿ ಸಂಕಲ್ಪದಲ್ಲಿ, ಮಾತಿನಲ್ಲಿ, ಕರ್ಮದಲ್ಲಿ, ಪ್ರತಿಯೊಂದು ಸಂಕಲ್ಪದಲ್ಲೂ ಬಾಬಾ ಅಂದರೆ ಬಾಬಾನ ಸ್ಮೃತಿಯಲ್ಲಿ ಇರಿ. ನನ್ನತನವಲ್ಲ. ಬಾಪ್ದಾದಾರವರು ಮಾಡಿಸುತ್ತಿದ್ದಾರೆ. ಜಗದಂಬಾರವರ ವಿಶೇಷ ಧಾರಣೆಯೂ ಇದೇ ಆಗಿತ್ತು. ಜಗದಾಂಬಾರವರ ಘೋಷಣೆಯು ನೆನಪಿದೆಯೇ, ಹಳಬರಿಗೆ ನೆನಪಿರಬೇಕು. ನೆನಪಿದೆಯೇ? ಎಲ್ಲವೂ ಆಜ್ಞೆಯಂತೇ ನಡೆಯುತ್ತಿದೆ, ಮಾಡಿಸುವ ತಂದೆಯು ಮಾಡಿಸುತ್ತಿದ್ದಾರೆ ಎನ್ನುವುದು ಜಗದಾಂಬಾರವರ ವಿಶೇಷ ಧಾರಣೆ ಆಗಿತ್ತು ಅಂದಾಗ ನಂಬರ್ ತೆಗೆದುಕೊಳ್ಳಬೇಕು, ಸಮಾನರಾಗಬೇಕೆಂದರೆ ನಾನು, ನನ್ನತನವು ಸಮಾಪ್ತಿ ಆಗಲಿ, ಮುಖದಿಂದ ತಾನಾಗಿಯೇ ಬಾಬಾ ಶಬ್ಧವು ಬರುತ್ತಿರಲಿ, ಕರ್ಮದಲ್ಲಿ ತಮ್ಮ ಗುಣಗಳಲ್ಲಿ ತಂದೆಯ ಮೂರ್ತಿಯೂ ಕಾಣಿಸಲಿ ಆಗ ಪ್ರತ್ಯಕ್ಷ ಆಗುವುದು.

ಬಾಪ್ದಾದಾರವರು ಈ ರಾಯಲ್ ರೂಪದ ನಾನು-ನಾನು ಎಂಬ ಗೀತೆಯನ್ನು ಬಹಳ ಕೇಳುತ್ತಾರೆ, ನಾನು ಏನು ಮಾಡಿದಿನೋ ಅದೇ ಸರಿ, ನಾನು ಏನನ್ನು ಯೋಚಿಸಿದೆನೋ ಅದೇ ಸರಿ, ಅದೇ ಆಗಬೇಕು. ಈ ನಾನು ಎನ್ನುವುದು ಮೋಸಗೊಳಿಸುತ್ತದೆ. ಭಲೆ ಯೋಚಿಸಿ, ಹೇಳಿ ಆದರೆ ನಿಮಿತ್ತ ಮತ್ತು ನಿರ್ಮಾಣ ಭಾವದಿಂದ ನಾನು ಎಂದು ಹೇಳಿ. ಬಾಪ್ದಾದಾ ಮೊದಲೂ ಸಹ ಒಂದು ಆತ್ಮಿಕ ವ್ಯಾಯಾಮವನ್ನು ಕಲಿಸಿದ್ದರು, ಅದು ಯಾವುದು? ಈಗಿನ ಮಾಲೀಕರು, ಈಗೀಗ ಬಾಲಕರು. ವಿಚಾರವನ್ನು ತಿಳಿಸುವುದರಲ್ಲಿ ಮಾಲೀಕ. ಅದು ಮೆಜಾರಿಟಿ ಆತ್ಮಗಳಿಂದ ಅಂತಿಮ ತೀರ್ಮಾನವಾದಮೇಲೆ ಬಾಲಕತನ. ಈ ಮಾಲಿಕ ಮತ್ತು ಬಾಲಕ..... ಈ ಆತ್ಮಿಕ ವ್ಯಾಯಾಮವು ಅವಶ್ಯಕವಾಗಿದೆ. ಕೇವಲ ಬಾಪ್ದಾದಾರವರ ಮೂರು ಶಬ್ಧಗಳ ಶಿಕ್ಷಣವನ್ನು ನೆನಪು ಇಟ್ಟುಕೊಳ್ಳಿ. ಎಲ್ಲರಿಗೂ ನೆನಪಿದೆಯೇ? ಮನಸಿನಲ್ಲಿ ನಿರಾಕಾರಿ, ಮಾತಿನಲ್ಲಿ ನಿರಹಂಕಾರಿ, ಕರ್ಮದಲ್ಲಿ ನಿರ್ವಿಕಾರಿ. ಯಾವಾಗಲೇ ಸಂಕಲ್ಪ ಮಾಡುತ್ತೀರೆಂದರೆ ನಿರಾಕಾರಿ ಸ್ಥಿತಿಯಲ್ಲಿ ಸ್ಥಿತರಾಗಿ ಸಂಕಲ್ಪ ಮಾಡಿ. ಮತ್ತೆಲ್ಲವೂ ಮರೆತು ಹೋಗಲಿ ಆದರೆ ಮೂರು ಶಬ್ದಗಳನ್ನು ಮರೆಯಬೇಡಿ. ಈ ಸಾಕಾರ ರೂಪದ ಮೂರು ಶಬ್ದಗಳ ಶಿಕ್ಷಣವು ಉಡುಗೊರೆಯಾಗಿದೆ. ಅಂದಾಗ ಬ್ರಹ್ಮಾತಂದೆಯೊಂದಿಗೆ ಸಾಕಾರರೂಪದಲ್ಲಿಯೂ ಬಹಳ ಪ್ರೀತಿಯಿದೆ. ಈಗಲೂ ಸಹ ಕೆಲವರು ಡಬಲ್ ವಿದೇಶಿಯರು ಅನುಭವವನ್ನು ತಿಳಿಸುತ್ತಾರೆ - ಬ್ರಹ್ಮಾತಂದೆಯೊಂದಿಗೆ ಬಹಳ ಪ್ರೀತಿಯಿದೆ. ನೋಡಿಲ್ಲ ಆದರೂ ಸಹ ಪ್ರೀತಿಯಿದೆ. ಇದೆಯೇ? ಡಬಲ್ ವಿದೇಶಿಯರಿಗೆ ಬ್ರಹ್ಮಾ ತಂದೆಯೊಂದಿಗೆ ಹೆಚ್ಚಿನ ಪ್ರೀತಿಯಿದೆಯಲ್ಲವೇ. ಅಂದಮೇಲೆ ಯಾರೊಂದಿಗೆ ಪ್ರೀತಿಯಿರುತ್ತದೆಯೋ ಅವರ ಕೊಡುಗೆಯನ್ನು ಬಹಳ ಜೋಪಾನವಾಗಿ ಇಟ್ಟುಕೊಳ್ಳುತ್ತಾರೆ. ಭಲೆ ಅದು ಅತೀ ಚಿಕ್ಕ ಉಡುಗೊರೆ ಆಗಿರಬಹುದು ಆದರೆ ಯಾರೊಂದಿಗೆ ಪ್ರೀತಿ ಇರುತ್ತದೆಯೋ ಅವರ ಉಡುಗೊರೆಯನ್ನು ಬಹಳ ಜೋಪಾನವಾಗಿ ಇಟ್ಟುಕೊಳ್ಳುತ್ತಾರೆ, ಬಚ್ಚಿಡುತ್ತಾರೆ ಅಂದಾಗ ಬ್ರಹ್ಮಾ ತಂದೆಯೊಂದಿಗೆ ಪ್ರೀತಿಯಿದೆ ಅಂದರೆ ಈ ಮೂರು ಶಬ್ದಗಳೊಂದಿಗೆ ಪ್ರೀತಿಯಿದೆ. ಇದರಲ್ಲಿ ಸಂಪನ್ನರಾಗುವುದು ಅಥವಾ ಸಮಾನರಾಗುವುದು ಬಹಳ ಸಹಜವಾಗಿಬಿಡುತ್ತದೆ. ಬ್ರಹ್ಮಾತಂದೆಯೂ ಏನು ಹೇಳಿದರೆಂದು ನೆನಪು ಮಾಡಿಕೊಳ್ಳಿ.

ಹೊಸ ವರ್ಷದಲ್ಲಿ ವಾಚಾದ ಸೇವೆಯನ್ನು ಭಲೆ ಮಾಡಿ, ವಿಜೃಂಭಣೆಯಿಂದ ಮಾಡಿ ಆದರೆ ಅನುಭವ ಮಾಡಿಸುವ ಸೇವೆಯನ್ನು ಸದಾ ಗಮನದಲ್ಲಿ ಇಟ್ಟುಕೊಳ್ಳಿ. ಈ ಸಹೋದರಿಯ ಮೂಲಕ ಇಲ್ಲವೆ ಸಹೋದರನ ಮೂಲಕ ನಮಗೆ ಶಕ್ತಿಯ ಅನುಭವ ಆಯಿತು, ಶಾಂತಿಯ ಅನುಭವ ಆಯಿತು ಎಂದು ಎಲ್ಲರೂ ಅನುಭವ ಮಾಡಲಿ ಏಕೆಂದರೆ ಅನುಭವವನ್ನು ಎಂದೂ ಮರೆಯುವುದಿಲ್ಲ. ಕೇಳಿರುವುದು ಮರೆತುಹೋಗುತ್ತದೆ. ಅದು ಇಷ್ಟವಾಗುತ್ತದೆ ಆದರೆ ಮರೆತುಹೋಗುತ್ತದೆ. ಆದರೆ ಅನುಭವವು ಇಂತಹ ವಸ್ತು ಆಗಿದೆ ಅದು ಅವರನ್ನು ತಮ್ಮ ಮುಂದೆ ಎಳೆದು ತರುತ್ತದೆ. ಸಂಪರ್ಕದವರು ಸಂಬಂಧದಲ್ಲಿ ಬರುತ್ತಾರೆ ಏಕೆಂದರೆ ಸಂಬಂಧದ ವಿನಃ ಆಸ್ತಿಗೆ ಅಧಿಕಾರಿಗಳಾಗಲು ಸಾಧ್ಯವಿಲ್ಲ ಅಂದಾಗ ಅನುಭವವು ಸಂಬಂಧದಲ್ಲಿ ತರುವಂತಹದ್ದಾಗಿದೆ. ಒಳ್ಳೆಯದು.

ತಿಳಿಯಿತೇ? ಏನು ಮಾಡುತ್ತೀರಿ? ಚೆಕ್ ಮಾಡಿಕೊಳ್ಳಿ, ಪರಿಶೀಲಕರಾಗಿ, ಪರಿವರ್ತಕರಾಗಿ. ಅನುಭವ ಮಾಡಿಸುವ ಮೇಕರ್ ಆಗಿ, ಜಮಾದ ಖಾತೆಯನ್ನು ಚೆಕ್ ಮಾಡಿಕೊಳ್ಳುವ ಪರಿಶೀಲಕರಾಗಿ, ಒಳ್ಳೆಯದು.

ಈಗ ಎಲ್ಲರು ಏನು ಮಾಡುವಿರಿ? ಬಾಪ್ದಾದಾರವರು ಹೊಸ ವರ್ಷದ ಉಪಹಾರ ಕೊಡುವಿರೋ ಅಥವಾ ಇಲ್ಲವೋ? ಹೊಸ ವರ್ಷದಲ್ಲಿ ಏನು ಮಾಡುತ್ತೀರಿ? ಒಬ್ಬರಿನ್ನೊಬ್ಬರಿಗೆ ಉಪಹಾರ ಕೊಡುತ್ತೀರಲ್ಲವೇ. ಒಬ್ಬರು ಶುಭಾಷಯದ ಪತ್ರವನ್ನು ಕೊಡುತ್ತೀರಿ, ಒಬ್ಬರು ಉಪಹಾರವನ್ನು ಕೊಡುತ್ತೀರಿ. ಬಾಪ್ದಾದಾರವರಿಗೆ ಕಾರ್ಡ್(ಪತ್ರ) ಬೇಡ, ರಿಕಾರ್ಡ್ ಬೇಕು. ಎಲ್ಲಾ ಮಕ್ಕಳ ರಿಕಾರ್ಡ್ ನಂಬರ್ ಒನ್ ಆಗಿರಬೇಕು, ಈ ರಿಕಾರ್ಡ್ ಬೇಕು. ನಿರ್ವಿಘ್ನರಾಗಿರಲಿ, ಈಗೀನ್ನೂ ಕೆಲ-ಕೆಲ ವಿಘ್ನದ ಮಾತುಗಳನ್ನು ಕೇಳುತ್ತೀರಲ್ಲವೇ, ಅಂದಾಗ ಬಾಪ್ದಾದಾರವರಿಗೆ ಒಂದು ನಗುವಿನ ಆಟ ನೆನಪಿಗೆ ಬರುತ್ತದೆ. ಆ ನಗುವಿನ ಆಟ ಯಾವುದೆಂದು ಗೊತ್ತಿದೆಯೇ? ಅದು ಆಟವಾಗಿದೆ – ವೃದ್ಧರು ಗೊಂಬೆಗಳ ಆಟವಾಡುತ್ತಿದ್ದಾರೆ. ವೃದ್ಧರಾಗಿದ್ದಾರೆ ಆದರೆ ಗೊಂಬೆಗಳ ಆಟವಾಡುತ್ತಿದ್ದಾರೆ, ಅಂದಾಗ ನಗುವಿನ ಆಟವಲ್ಲವೇ. ಈಗ ಏನೆಲ್ಲಾ ಚಿಕ್ಕ ಚಿಕ್ಕ ಮಾತುಗಳನ್ನು ಕೇಳುತ್ತೀರಿ, ನೋಡುತ್ತೀರಿ, ಅನಿಸುತ್ತದೆ ಇವರು ವಾನಪ್ರಸ್ಥಿಗಳು ಮತ್ತು ಇದೆಲ್ಲಾ ಮತುಗಳು ಚಿಕ್ಕದಾಗಿವೆ. ಈ ರಿಕಾರ್ಡ್ ತಂದೆಗೆ ಇಷ್ಟವಾಗುವುದಿಲ್ಲ. ಇದರ ಬದಲಾಗಿ ಕಾರ್ಡ್ ಬದಲಾಗಿ ರಿಕಾರ್ಡ್ ಕೊಡಿ - ನಿರ್ವಿಘ್ನ, ಚಿಕ್ಕ ಮಾತುಗಳು ಸಮಾಪ್ತಿ. ದೊಡ್ಡದನ್ನು ಚಿಕ್ಕದನ್ನಾಗಿ ಮಾಡುವುದನ್ನು ಕಲಿಯಿರಿ ಮತ್ತು ಚಿಕ್ಕದನ್ನು ಸಮಾಪ್ತಿ ಮಾಡಲು ಕಲಿಯಿರಿ. ಬಾಪ್ದಾದಾರವರು ಒಬ್ಬೊಬ್ಬ ಮುಗುವಿನ ಮುಖವನ್ನು, ಬಾಪ್ದಾದಾರವರ ಮುಖವನ್ನು ನೋಡುವ ದರ್ಪಣವನ್ನಾಗಿ ಮಾಡಲು ಬಯಸುತ್ತಾರೆ. ನಿಮ್ಮ ದರ್ಪಣದಲ್ಲಿ ಬಾಪ್ದಾದಾರವರು ಕಾಣಿಸಲಿ. ಇಂತಹ ವಿಚಿತ್ರ ದರ್ಪಣವನ್ನು ಬಾಪ್ದಾದಾರವರಿಗೆ ಉಪಹಾರವನ್ನಾಗಿ ಕೊಡಿ. ಪರಮಾತ್ಮ ಕಾಣಿಸುವಂತಹ ದರ್ಪಣ ಪ್ರಪಂಚದಲ್ಲಿ ಇಲ್ಲವೇ ಇಲ್ಲ. ನೀವು ಈ ಹೊಸ ವರ್ಷದ ಇಂತಹ ಉಪಹಾರವನ್ನು ಕೊಡಿ ಯಾವುದು ವಿಚಿತ್ರ ದರ್ಪಣವಾಗಿ ಬಿಡಲಿ. ಯಾರೇ ನೋಡಲಿ, ಯಾರೇ ಕೇಳಲಿ ಅವರಿಗೆ ಬಾಪ್ದಾದಾರವರೇ ಕಾಣಿಸಲಿ, ಕೇಳಲಿ. ತಂದೆಯ ದ್ವನಿಯೇ ಕೇಳಲಿ. ಅಂದಾಗ ಉಪಹಾರವನ್ನು ಕೊಡುವಿರಾ? ಕೊಡುವಿರಾ? ಯಾರು ಕೊಡುವುದರ ದೃಢ ಸಂಕಲ್ಪ ಮಾಡೂತ್ತೀರಿ, ಅವರು ಕೈ ಎತ್ತಿರಿ. ದೃಢ ಸಂಕಲ್ಪದ ಕೈ ಎತ್ತಿರಿ. ಡಬಲ್ ವಿದೇಶದವರು ಕೈ ಎತ್ತುತ್ತಿದ್ದಾರೆ. ಸಿಂಧಿ ಗ್ರೂಪ್ನವರು ಸಹ ಎತ್ತುತ್ತಿದ್ದಾರೆ. ಯೋಚಿಸಿ ಎತ್ತುತ್ತಿದ್ದಾರೆ.

ಒಳ್ಳೆಯದು. ಬಾಪ್ದಾದಾರವರಿಗೆ ಸಿಂಧಿ ಗ್ರೂಪ್ನವರ ಮೇಲೆ ಭರವಸೆಯಿದೆ, ಯಾವ ಭರವಸೆಯಿದೆ ಎಂದು ಹೇಳುವುದೇ? ಇದೇ ಬರವಸೆಯಿದೆ ಸಿಂಧಿ ಗ್ರೂಪ್ನಲ್ಲಿ ಒಬ್ಬ ಇಂತಹ ಮೈಕ್ ಚಾಲೆಂಜ್ ಮಾಡಲಿ ಏನಾಗಿದ್ದರು ಮತ್ತು ಏನಾಗಿ ಬಿಟ್ಟೆವು? ಇದರಿಂದ ಸಿಂಧಿಯರು ಎಚ್ಚೆತುಕೊಳ್ಳಲಿ. ಪಾಪ, ತಿಳಿದುಕೊಂಡೇ ಇಲ್ಲ. ದೇಶದ ಅವತಾರನ್ನು ತಿಳಿದುಕೊಂಡೇ ಇಲ್ಲ. ಸಿಂಧಿ ಗ್ರೂಪ್ನಲ್ಲಿ ಇಂತಹ ಮೈಕ್ ಬರಲಿ ಯಾರು ಚಾಲೆಂಜ್ ಮಾಡಲಿ ನಾವು ಯರ್ಥಾತ್ ಏನೆಂದು ತಿಳಿಸುತ್ತೇವೆ. ಸರಿಯಿದೆಯೇ? ಭರವಸೆಯಿದೆಯೇ? ಒಳ್ಳೆಯದು.

ನಾಲ್ಕೂ ಕಡೆಯ ಅಖಂಡ ಮಹಾದಾನಿ ಮಕ್ಕಳಿಗೆ, ನಾಲ್ಕೂ ಕಡೆಯ ತಂದೆಯ ಬಲಭುಜಗಳು, ಆಜ್ಞಾಕಾರಿಭುಜಗಳಿಗೆ, ನಾಲ್ಕೂ ಕಡೆಯ ಸರ್ವಆತ್ಮರಿಗೆ ಸಾಹಸದ ರೆಕ್ಕೆಗಳನ್ನು ನೀಡುವಂತಹ ಸಾಹಸವಂತ ಆತ್ಮಗಳಿಗೆ, ನಾಲ್ಕೂ ಕಡೆಯ ಸದಾ ತಂದೆಯ ಸಮಾನ ಪ್ರತಿಯೊಂದು ಕರ್ಮದಲ್ಲಿ ಅನುಕರಣೆ ಮಾಡುವಂತಹ ಬ್ರಹ್ಮಾತಂದೆ ಮತ್ತು ಜಗದಾಂಬಾರವರ ಶಿಕ್ಷಣವನ್ನು ಸದಾ ಪ್ರತ್ಯಕ್ಷ ಜೀವನದಲ್ಲಿ ತರುವಂತಹ ಸರ್ವ ಮಕ್ಕಳಿಗೆ ನೆನಪು, ಪ್ರೀತಿ, ಆಶೀರ್ವಾದ ಮತ್ತು ನಮಸ್ತೆ.

ಡಬಲ್ ವಿದೇಶಿಗಳ ಪ್ರತಿ ಮತ್ತು ಭಾರತದ ಮಕ್ಕಳ ಪ್ರತಿ ಡಬಲ್ ಗುಡ್ ನೈಟ್ ಮತ್ತು ಗುಡ್ ಮಾನಿರ್ಂಗ್ ನೀಡುತ್ತಿದ್ದೇವೆ. ಈಗ ಖುಷಿ ಆಗುತ್ತಿದ್ದೀರಲ್ಲವೇ! ಅಂತಹ ಮಾತು ಏನಾದರೂ ಬಂದಾಗ ಈ ದಿನದ ನೆನಪು ಮಾಡಿಕೊಂಡು ಖುಷಿಯಲ್ಲಿ ತೇಲಾಡುತ್ತೀರಿ. ಖುಷಿಯ ಉಯ್ಯಾಲೆಯಲ್ಲಿ ಸದಾ ತೂಗಾಡುತ್ತಾ ಇರಿ. ಎಂದೂ ಸಹ ದುಃಖದ ಅಲೆ ಬರಬಾರದು. ದುಃಖವನ್ನು ಕೊಡುವಂತಹ ಆತ್ಮರು ಪ್ರಪಂಚದಲ್ಲಿ ಅನೇಕರಿದ್ದಾರೆ. ತಾವು ಸುಖವನ್ನು ಕೊಡುವಂತಹ, ಸುಖವನ್ನು ತಗೆದುಕೊಳ್ಳುವಂತಹ ಸುಖದಾತನ ಮಕ್ಕಳು ಸುಖಸ್ವರೂಪರಾಗಿದ್ದೀರಿ. ಕೆಲವೊಮ್ಮೆ ಸುಖದ ಉಯ್ಯಾಲೆಯಲ್ಲಿ ತೂಗಿರಿ. ಕೆಲವೊಮ್ಮೆ ಪ್ರೀತಿಯ ಉಯ್ಯಾಲೆಯಲ್ಲಿ, ಶಾಂತಿಯ ಉಯ್ಯಾಲೆಯಲ್ಲಿ ತೂಗಾಡುತ್ತಾ ಇರಿ. ಕೆಳಗಡೆ ಮಣ್ಣಿನಲ್ಲಿ ಕಾಲನ್ನು ಇಡಬೇಡಿ. ತೂಗುತ್ತಲೇ ಇರಿ. ಖುಷಿಯಾಗಿದ್ದು ಎಲ್ಲರನ್ನು ಖುಷಿಯಾಗಿಡಬೇಕು. ಮತ್ತು ಜನರಿಗೆ ಖುಷಿಯನ್ನು ಹಂಚಬೇಕು. ಒಳ್ಳೆಯದು.

ವರದಾನ:
ಫರಿಸ್ಥಾತನದ ಸ್ಥಿತಿಯ ಮುಖಾಂತರ ತಂದೆಯ ಸ್ನೇಹದ ರಿಟರ್ನ್ ಕೊಡುವಂತಹ ಸಮಾಧಾನ ಸ್ವರೂಪ ಭವ

ಫರಿಸ್ಥಾತನದ ಸ್ಥಿತಿಯಲ್ಲಿ ಸ್ಥಿತರಾಗುವುದು - ಇದೇ ತಂದೆಗೆ ಸ್ನೇಹದ ರಿಟರ್ನ್ ಕೊಡುವುದಾಗಿದೆ. ಇಂತಹ ರಿಟರ್ನ್ ಕೊಡುವಂತಹವರು ಸಮಾಧಾನ ಸ್ವರೂಪರಾಗಿಬಿಡುವರು. ಸಮಾಧಾನ ಸ್ವರೂಪರಾಗುವುದರಿಂದ ಸ್ವಯಂನ ಹಾಗೂ ಅನ್ಯ ಆತ್ಮರ ಸಮಸ್ಯೆಗಳು ಸ್ವತಃ ಸಮಾಪ್ತಿಯಾಗಿಬಿಡುತ್ತದೆ. ಈಗ ಇಂತಹ ಸೇವೆ ಮಾಡುವ ಸಮಯವಾಗಿದೆ, ತೆಗೆದುಕೊಳ್ಳುವುದರ ಜೊತೆಗೆ ಕೊಡುವಂತಹ ಸಮಯವಾಗಿದೆ ಆದ್ದರಿಂದ ಈಗ ತಂದೆಯ ಸಮಾನ ಉಪಕಾರಿಗಳಾಗಿ, ಕೂಗನ್ನು ಕೇಳುತ್ತಾ ನಿಮ್ಮ ಫರಿಸ್ಥಾರೂಪದ ಮುಖಾಂತರ ಅಂತಹ ಆತ್ಮಗಳ ಬಳಿಗೆ ತಲುಪಿಬಿಡಿ ಮತ್ತು ಸಮಸ್ಯೆಗಳಿಂದ ಸುಸ್ತಾಗಿರುವ ಆತ್ಮಗಳ ಸುಸ್ತನ್ನು ದೂರ ಮಾಡಿ.

ಸ್ಲೋಗನ್:
ವ್ಯರ್ಥದಲ್ಲಿ ಕೇರ್ಲೆಸ್ ಆಗಿ ಆದರೆ ಮರ್ಯಾದೆಗಳಲ್ಲಿ ಅಲ್ಲ.

ಅವ್ಯಕ್ತ ಸೂಚನೆ: ಏಕಾಂತಪ್ರಿಯರಾಗಿ ಏಕತೆ ಮತ್ತು ಏಕಾಗ್ರತೆಯನ್ನು ತಮ್ಮದಾಗಿಸಿಕೊಳ್ಳಿ

ಪರಸ್ಪರದ ಸಂಸ್ಕಾರಗಳಲ್ಲಿರುವ ಭಿನ್ನತೆಯನ್ನು ಏಕತೆಯಲ್ಲಿ ತರಬೇಕು. ಏಕತೆಗಾಗಿ ವರ್ತಮಾನದ ಭಿನ್ನತೆಯನ್ನು ಅಳಿಸಿ ಎರಡು ಮಾತುಗಳನ್ನು ತನ್ನಿ - ಒಂದು – ಏಕನಾಮಿಯಾಗಿ ಸದಾ ಪ್ರತಿಯೊಂದು ಮಾತಿನಲ್ಲಿ ಒಬ್ಬರದ್ದೇ ಹೆಸರನ್ನು ತೆಗೆದುಕೊಳ್ಳಿ, ಜೊತೆ-ಜೊತೆಗೆ ಸಂಕಲ್ಪಗಳ, ಸಮಯ ಮತ್ತು ಜ್ಞಾನ ಖಜಾನೆಯ ಏಕಾನಾಮಿ (ಉಳಿತಾಯ) ಮಾಡಿ. ನಂತರ ನಾನು ಎನ್ನುವುದು ಸಮಾವೇಶವಾಗಿ ಒಂದು ತಂದೆಯಲ್ಲಿ ಎಲ್ಲಾ ಭಿನ್ನತೆ ಸಮಾವೇಶವಾಗಿಬಿಡುತ್ತದೆ.