04.02.25 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ - ತಂದೆಯು
ನಿಮಗೆ ಅವಿನಾಶಿ ಜ್ಞಾನರತ್ನಗಳ ದಾನವನ್ನು ಕೊಡುತ್ತಾರೆ, ಅದನ್ನು ನೀವು ಅನ್ಯರಿಗೆ ದಾನ ಮಾಡುತ್ತಾ
ಇರಿ, ಈ ದಾನದಿಂದಲೇ ಸದ್ಗತಿಯಾಗಿಬಿಡುವುದು”
ಪ್ರಶ್ನೆ:
ಯಾವ
ಹೊಸಮಾರ್ಗವನ್ನು ನೀವು ಮಕ್ಕಳ ವಿನಃ ಮತ್ತ್ಯಾರೂ ಅರಿತುಕೊಂಡಿಲ್ಲ?
ಉತ್ತರ:
ಮನೆಯ ಮಾರ್ಗ
ಹಾಗೂ ಸ್ವರ್ಗಕ್ಕೆ ಹೋಗುವ ಮಾರ್ಗವು ಈಗ ನಿಮಗೆ ತಂದೆಯ ಮೂಲಕ ಸಿಕ್ಕಿದೆ. ನೀವು
ತಿಳಿದುಕೊಂಡಿದ್ದೀರಿ - ಶಾಂತಿಧಾಮ, ನಾವಾತ್ಮಗಳ ಮನೆಯಾಗಿದೆ, ಸ್ವರ್ಗವೇ ಬೇರೆ, ಶಾಂತಿಧಾಮವೇ
ಬೇರೆಯಾಗಿದೆ. ಈ ಹೊಸಮಾರ್ಗವನ್ನು ನಿಮ್ಮ ವಿನಃ ಅನ್ಯ ಯಾರೂ ಅರಿತುಕೊಂಡಿಲ್ಲ. ನೀವು ಹೇಳುತ್ತೀರಿ
- ಈಗ ಕುಂಭಕರ್ಣನ ನಿದ್ರೆಯನ್ನು ಬಿಡಿ, ಕಣ್ಣುಗಳನ್ನು ತೆರೆಯಿರಿ, ಪಾವನರಾಗಿ. ಪಾವನರಾಗಿಯೇ ಮನೆಗೆ
ಹೋಗಲು ಸಾಧ್ಯ.
ಗೀತೆ:
ಎದ್ದೇಳಿ
ಪ್ರಿಯತಮೆಯರೇ ಎದ್ದೇಳಿ...........
ಓಂ ಶಾಂತಿ.
ಭಗವಾನುವಾಚ, ಇದನ್ನು ತಂದೆಯು ತಿಳಿಸಿದ್ದಾರೆ - ಮನುಷ್ಯರಿಗಾಗಲಿ, ದೇವತೆಗಳಿಗಾಗಲಿ ಭಗವಂತನೆಂದು
ಹೇಳಲಾಗುವುದಿಲ್ಲ ಏಕೆಂದರೆ ಇವರಿಗೆ ಸಾಕಾರರೂಪವಿದೆ ಬಾಕಿ ಪರಮಪಿತ ಪರಮಾತ್ಮನಿಗೆ ಆಕಾರಿರೂಪವಾಗಲಿ,
ಸಾಕಾರಿರೂಪವಾಗಲಿ ಇಲ್ಲ ಆದ್ದರಿಂದ ಅವರಿಗೆ ಶಿವಪರಮಾತ್ಮಾಯನಮಃ ಎಂದು ಹೇಳುತ್ತಾರೆ. ಜ್ಞಾನಸಾಗರ
ಅವರೊಬ್ಬರೇ ಆಗಿದ್ದಾರೆ. ಯಾವುದೇ ಮನುಷ್ಯರಲ್ಲಿ ಜ್ಞಾನವಿರಲು ಸಾಧ್ಯವಿಲ್ಲ. ಯಾವುದರ ಜ್ಞಾನ?
ರಚಯಿತ ಮತ್ತು ರಚನೆಯ ಆದಿ-ಮಧ್ಯ-ಅಂತ್ಯದ ಜ್ಞಾನ, ಆತ್ಮ ಮತ್ತು ಪರಮಾತ್ಮನ ಈ ಜ್ಞಾನವು ಯಾರಲ್ಲಿಯೂ
ಇಲ್ಲ ಆದ್ದರಿಂದ ತಂದೆಯು ಬಂದು ಜಾಗೃತಗೊಳಿಸುತ್ತಾರೆ. ಹೇ ಪ್ರಿಯತಮೆಯರೇ, ಹೇ ಭಕ್ತಿನಿಯರೇ
ಎದ್ದೇಳಿ, ಸ್ತ್ರೀ ಅಥವಾ ಪುರುಷರೆಲ್ಲರೂ ಭಕ್ತಿನಿಯರಾಗಿದ್ದಾರೆ, ಭಗವಂತನನ್ನು ನೆನಪು ಮಾಡುತ್ತಾರೆ.
ವಧುಗಳೆಲ್ಲರೂ ಒಬ್ಬ ವರನನ್ನು ನೆನಪು ಮಾಡುತ್ತಾರೆ. ಪ್ರಿಯತಮೆಯರಾದ ಆತ್ಮರೆಲ್ಲರೂ ಪರಮಪಿತ
ಪರಮಾತ್ಮನಾದ ಪ್ರಿಯತಮನನ್ನು ನೆನಪು ಮಾಡುತ್ತಾರೆ. ಎಲ್ಲರೂ ಸೀತೆಯರಾಗಿದ್ದಾರೆ, ಒಬ್ಬ ಪರಮಪಿತ
ರಾಮನಾಗಿದ್ದಾರೆ. ರಾಮ ಶಬ್ಧವನ್ನು ಏಕೆ ಹೇಳುತ್ತಾರೆ? ರಾವಣರಾಜ್ಯವೂ ಇದೆಯಲ್ಲವೆ. ಇದರ
ಹೋಲಿಕೆಯಲ್ಲಿ ರಾಮರಾಜ್ಯವೆಂದು ಹೇಳಲಾಗುತ್ತದೆ. ರಾಮನು ತಂದೆಯಾಗಿದ್ದಾರೆ, ಅವರಿಗೆ ಈಶ್ವರನೆಂದು
ಹೇಳುತ್ತಾರೆ, ಭಗವಂತನೆಂದೂ ಹೇಳುತ್ತಾರೆ. ಅವರ ಮೂಲಹೆಸರಾಗಿದೆ - ಶಿವ. ಅಂದಾಗ ಅವರು ಈಗ
ತಿಳಿಸುತ್ತಾರೆ - ಎದ್ದೇಳಿ ಪ್ರಿಯತಮೆಯರೇ, ಈಗ ನವಯುಗ ಬರುತ್ತಿದೆ, ಹಳೆಯದು ಸಮಾಪ್ತಿಯಾಗುತ್ತಿದೆ,
ಈ ಮಹಾಭಾರತ ಯುದ್ಧದ ನಂತರ ಸತ್ಯಯುಗವು ಸ್ಥಾಪನೆಯಾಗುತ್ತದೆ ಮತ್ತು ಈ ಲಕ್ಷ್ಮಿ-ನಾರಾಯಣರ
ರಾಜ್ಯವಾಗುತ್ತದೆ. ಹಳೆಯ ಕಲಿಯುಗವು ಸಮಾಪ್ತಿಯಾಗುತ್ತಿದೆ. ಆದ್ದರಿಂದ ತಂದೆಯು ತಿಳಿಸುತ್ತಾರೆ -
ಮಕ್ಕಳೇ, ಕುಂಭಕರ್ಣನ ನಿದ್ರೆಯನ್ನು ಬಿಡಿ, ಈಗ ಕಣ್ಣನ್ನು ತೆರೆಯಿರಿ. ಹೊಸಪ್ರಪಂಚವು ಬರುತ್ತಿದೆ,
ಹೊಸಪ್ರಪಂಚಕ್ಕೆ ಸ್ವರ್ಗ, ಸತ್ಯಯುಗವೆಂದು ಕರೆಯಲಾಗುತ್ತದೆ. ಇದು ಹೊಸಮಾರ್ಗವಾಗಿದೆ. ಮನೆ ಹಾಗೂ
ಸ್ವರ್ಗದಲ್ಲಿ ಹೋಗುವ ಈ ಮಾರ್ಗವನ್ನು ಯಾರೂ ತಿಳಿದುಕೊಂಡಿಲ್ಲ. ಸ್ವರ್ಗವೇ ಬೇರೆಯಾಗಿದೆ,
ಶಾಂತಿಧಾಮವೇ ಬೇರೆಯಾಗಿದೆ, ಅಲ್ಲಿ ಆತ್ಮಗಳಿರುತ್ತಾರೆ. ಎದ್ದೇಳಿ, ನೀವು ರಾವಣರಾಜ್ಯದಲ್ಲಿ
ಪತಿತರಾಗಿಬಿಟ್ಟಿದ್ದೀರೆಂದು ಈಗ ತಂದೆಯು ಹೇಳುತ್ತಾರೆ. ಈ ಸಮಯದಲ್ಲಿ ಒಬ್ಬರೂ ಪವಿತ್ರ ಆತ್ಮನಿರಲು
ಸಾಧ್ಯವಿಲ್ಲ, ಪುಣ್ಯಾತ್ಮರೆಂದು ಹೇಳುವುದಿಲ್ಲ. ಭಲೆ ಮನುಷ್ಯರು ದಾನ-ಪುಣ್ಯ ಮಾಡುತ್ತಾರೆ ಆದರೆ
ಒಬ್ಬರೂ ಪವಿತ್ರ ಆತ್ಮಗಳಿಲ್ಲ. ಇಲ್ಲಿ ಕಲಿಯುಗದಲ್ಲಿ ಪತಿತ ಆತ್ಮಗಳಿದ್ದಾರೆ. ಸತ್ಯಯುಗದಲ್ಲಿ
ಪಾವನ ಆತ್ಮಗಳಿರುತ್ತಾರೆ. ಆದ್ದರಿಂದ ಹೇಳುತ್ತಾರೆ - ಹೇ ಶಿವತಂದೆಯೇ, ಬಂದು ನಮ್ಮನ್ನು ಪಾವನ
ಆತ್ಮರನ್ನಾಗಿ ಮಾಡಿ, ಇದು ಪವಿತ್ರತೆಯ ಮಾತಾಗಿದೆ. ಈ ಸಮಯದಲ್ಲಿ ತಂದೆಯು ಬಂದು ನೀವು ಮಕ್ಕಳಿಗೆ
ಅವಿನಾಶಿ ಜ್ಞಾನರತ್ನಗಳ ದಾನವನ್ನು ಕೊಡುತ್ತಾರೆ. ನೀವೂ ಸಹ ಅನ್ಯರಿಗೆ ದಾನ ಮಾಡುತ್ತಾ ಇರಿ, ಆಗ
ಪಂಚವಿಕಾರಗಳ ಗ್ರಹಣವು ಬಿಟ್ಟುಹೋಗುವುದೆಂದು ತಿಳಿಸುತ್ತಾರೆ. ಈ ಐದು ವಿಕಾರಗಳ ದಾನವನ್ನು
ಕೊಟ್ಟಿದ್ದೇ ಆದರೆ ದುಃಖದ ಗ್ರಹಣವು ಬಿಡುಗಡೆಯಾಗುವುದು. ಪವಿತ್ರರಾಗಿ ಸುಖಧಾಮದಲ್ಲಿ ಹೋಗುವಿರಿ.
ಐದು ವಿಕಾರಗಳಲ್ಲಿ ಮೊಟ್ಟಮೊದಲನೆಯದು ಕಾಮವಾಗಿದೆ, ಅದನ್ನು ಬಿಟ್ಟು ಪವಿತ್ರರಾಗಿ. ಹೇ ಪತಿತ-ಪಾವನ,
ನಮ್ಮನ್ನು ಪಾವನ ಮಾಡಿ ಎಂದು ತಾವಾಗಿಯೇ ಹೇಳುತ್ತಾರೆ. ಪತಿತರೆಂದು ವಿಕಾರಿಗಳಿಗೆ ಹೇಳಲಾಗುತ್ತದೆ.
ಈ ಸುಖ ಮತ್ತು ದುಃಖದ ಆಟವು ಭಾರತಕ್ಕಾಗಿಯೇ ಇದೆ. ತಂದೆಯು ಭಾರತದಲ್ಲಿಯೇ ಬಂದು ಸಾಧಾರಣ
ತನುವಿನಲ್ಲಿ ಪ್ರವೇಶ ಮಾಡುತ್ತಾರೆ ಮತ್ತೆ ಇವರ ಚರಿತ್ರೆಯನ್ನು ಕುಳಿತು ತಿಳಿಸಿಕೊಡುತ್ತಾರೆ.
ಇವರೆಲ್ಲರೂ ಬ್ರಾಹ್ಮಣ-ಬ್ರಾಹ್ಮಿಣಿಯರಾಗಿದ್ದಾರೆ, ಪ್ರಜಾಪಿತ ಬ್ರಹ್ಮನ ಸಂತಾನರಾಗಿದ್ದಾರೆ. ನೀವು
ಎಲ್ಲರಿಗೆ ಪವಿತ್ರರಾಗುವ ಯುಕ್ತಿಯನ್ನು ತಿಳಿಸುತ್ತೀರಿ, ನೀವು ಬ್ರಹ್ಮಾಕುಮಾರ-ಕುಮಾರಿಯರು
ವಿಕಾರದಲ್ಲಿ ಹೋಗಲು ಸಾಧ್ಯವಿಲ್ಲ. ನೀವು ಬ್ರಾಹ್ಮಣರದು ಇದೊಂದೇ ಜನ್ಮವಾಗಿದೆ, ದೇವತಾವರ್ಣದಲ್ಲಿ
ನೀವು 21 ಜನ್ಮಗಳನ್ನು ತೆಗೆದುಕೊಳ್ಳುತ್ತೀರಿ. ವೈಶ್ಯ, ಶೂದ್ರವರ್ಣದಲ್ಲಿ 63 ಜನ್ಮಗಳನ್ನು
ತೆಗೆದುಕೊಳ್ಳುತ್ತೀರಿ. ಬ್ರಾಹ್ಮಣ ವರ್ಣದಲ್ಲಿ ಇದೊಂದೇ ಅಂತಿಮ ಜನ್ಮವಾಗಿದೆ, ಇದರಲ್ಲಿಯೇ
ಪವಿತ್ರರಾಗಬೇಕಾಗಿದೆ. ತಂದೆಯು ತಿಳಿಸುತ್ತಾರೆ - ಪವಿತ್ರರಾಗಿ ತಂದೆಯ ನೆನಪು ಅಥವಾ ಯೋಗಬಲದಿಂದ
ವಿಕರ್ಮಗಳು ಭಸ್ಮವಾಗುತ್ತವೆ, ಇದೊಂದು ಜನ್ಮದಲ್ಲಿ ಪವಿತ್ರರಾಗಬೇಕಾಗಿದೆ. ಸತ್ಯಯುಗದಲ್ಲಂತೂ ಯಾರೂ
ಪತಿತರಾಗುವುದಿಲ್ಲ. ಈಗ ಈ ಅಂತಿಮ ಜನ್ಮದಲ್ಲಿ ಪಾವನರಾಗಿರುತ್ತೀರೆಂದರೆ 21 ಜನ್ಮಗಳು
ಪಾವನರಾಗಿರುತ್ತೀರಿ. ಪಾವನರಾಗಿದ್ದಿರಿ ಈಗ ಪತಿತರಾಗಿದ್ದೀರಿ. ಪತಿತರಾದ ಕಾರಣವೇ ಕರೆಯುತ್ತೀರಿ.
ಪತಿತರನ್ನಾಗಿ ಯಾರು ಮಾಡಿದರು? ರಾವಣನ ಆಸುರೀ ಮತ. ನನ್ನ ವಿನಃ ನೀವು ಮಕ್ಕಳನ್ನು ರಾವಣರಾಜ್ಯದಿಂದ,
ದುಃಖದಿಂದ ಮತ್ತ್ಯಾರೂ ಮುಕ್ತಗೊಳಿಸಲು ಸಾಧ್ಯವಿಲ್ಲ. ಎಲ್ಲರೂ ಕಾಮಚಿತೆಯನ್ನೇರಿ
ಭಸ್ಮವಾಗಿಬಿಟ್ಟಿದ್ದಾರೆ. ನಾನು ಬಂದು ಜ್ಞಾನಚಿತೆಯ ಮೇಲೆ ಕುಳ್ಳೀರಿಸಬೇಕಾಗುತ್ತದೆ, ಜ್ಞಾನದ
ಜಲವನ್ನು ಹಾಕಬೇಕಾಗುತ್ತದೆ. ಎಲ್ಲರ ಸದ್ಗತಿ ಮಾಡಬೇಕಾಗಿದೆ. ಯಾರು ಒಳ್ಳೆಯ ರೀತಿಯಲ್ಲಿ
ವಿದ್ಯೆಯನ್ನು ಓದುವರೋ ಅವರಿಗೇ ಸದ್ಗತಿಯಾಗುತ್ತದೆ. ಉಳಿದವರೆಲ್ಲರೂ ಶಾಂತಿಧಾಮದಲ್ಲಿ
ಹೊರಟುಹೋಗುತ್ತಾರೆ. ಸತ್ಯಯುಗದಲ್ಲಿ ಕೇವಲ ದೇವಿ-ದೇವತೆಗಳೇ ಇದ್ದರು, ಅವರಿಗೆ ಸದ್ಗತಿಯು ಸಿಕ್ಕಿದೆ,
ಉಳಿದೆಲ್ಲರಿಗೆ ಮುಕ್ತಿ ಅಥವಾ ಗತಿಯು ಸಿಗುತ್ತದೆ. 5000 ವರ್ಷಗಳ ಮೊದಲು ಈ ದೇವತೆಗಳ ರಾಜ್ಯವಿತ್ತು,
ಇದು ಲಕ್ಷಾಂತರ ವರ್ಷಗಳ ಮಾತಲ್ಲ. ತಂದೆಯು ತಿಳಿಸುತ್ತಾರೆ - ಮಧುರಾತಿ ಮಧುರ ಮಕ್ಕಳೇ, ತಂದೆಯಾದ
ನನ್ನನ್ನು ನೆನಪು ಮಾಡಿ. ಮನ್ಮನಾಭವ ಶಬ್ಧವು ಪ್ರಸಿದ್ಧವಾಗಿದೆ. ಭಗವಾನುವಾಚ - ಯಾವ ದೇಹಧಾರಿಗಳಿಗೂ
ಭಗವಂತನೆಂದು ಹೇಳಲಾಗುವುದಿಲ್ಲ. ಆತ್ಮಗಳು ಒಂದು ಶರೀರವನ್ನು ಬಿಟ್ಟು ಇನ್ನೊಂದನ್ನು
ತೆಗೆದುಕೊಳ್ಳುತ್ತವೆ. ಕೆಲವೊಮ್ಮೆ ಸ್ತ್ರೀ, ಕೆಲವೊಮ್ಮೆ ಪುರುಷನಾಗುತ್ತಾರೆ ಭಗವಂತನೆಂದೂ
ಜನನ-ಮರಣದ ಆಟದಲ್ಲಿ ಬರುವುದಿಲ್ಲ. ಇದು ನಾಟಕದನುಸಾರ ನಿಗಧಿಯಾಗಿದೆ. ಒಂದು ಜನ್ಮವು ಇನ್ನೊಂದು
ಜನ್ಮಕ್ಕೆ ಹೋಲುವುದಿಲ್ಲ. ಮತ್ತೆ ನಿಮ್ಮ ಈ ಜನ್ಮವು ಪುನರಾವರ್ತನೆಯಾಗುವುದು ಆಗ ಇದೇ ಪಾತ್ರ, ಇದೇ
ಮುಖಲಕ್ಷಣಗಳನ್ನು ಪುನಃ ತೆಗೆದುಕೊಳ್ಳುತ್ತೀರಿ. ಈ ನಾಟಕವು ಅನಾದಿಯಾಗಿ ಮಾಡಿ-ಮಾಡಲ್ಪಟ್ಟಿದೆ, ಇದು
ಬದಲಾಗಲು ಸಾಧ್ಯವಿಲ್ಲ. ಶ್ರೀಕೃಷ್ಣನಿಗೆ ಯಾವ ಶರೀರವು ಸತ್ಯಯುಗದಲ್ಲಿತ್ತೋ ಅದು ಮತ್ತೆ
ಸತ್ಯಯುಗದಲ್ಲಿ ಸಿಗುತ್ತದೆ. ಆ ಆತ್ಮವೂ ಸಹ ಈಗ ಇಲ್ಲಿಯೇ ಇದೆ. ನಾವೇ ಆ ರೀತಿಯಾಗುತ್ತೇವೆಂದು
ನೀವೀಗ ತಿಳಿದುಕೊಂಡಿದ್ದೀರಿ. ಈ ಲಕ್ಷ್ಮೀ-ನಾರಾಯಣರ ಮುಖಲಕ್ಷಣಗಳು ನಿಖರವಾಗಿಲ್ಲ. ಕಲ್ಪದ ನಂತರ
ಪುನಃ ಅದೇ ರೀತಿ ಆಗುತ್ತವೆ. ಈ ಮಾತುಗಳನ್ನು ಹೊಸಬರು ಅರಿತುಕೊಳ್ಳಲು ಸಾಧ್ಯವಿಲ್ಲ. ಯಾವಾಗ
ಒಳ್ಳೆಯ ರೀತಿಯಲ್ಲಿ ಅವರಿಗೆ ತಿಳಿಸುವಿರೋ ಆಗ 84 ಜನ್ಮಗಳ ಚಕ್ರವನ್ನು ಅರಿತುಕೊಳ್ಳುತ್ತಾರೆ ಮತ್ತು
ಅವಶ್ಯವಾಗಿ ಪ್ರತಿಯೊಂದು ಜನ್ಮದಲ್ಲಿಯೂ ನಾಮ, ರೂಪ, ಮುಖಲಕ್ಷಣಗಳು ಬೇರೆ-ಬೇರೆಯಾಗಿರುತ್ತವೆ
ಎಂಬುದನ್ನು ತಿಳಿದುಕೊಳ್ಳುತ್ತಾರೆ. ಈಗ ಇವರ ಅಂತಿಮ 84ನೇ ಜನ್ಮದ ಮುಖಲಕ್ಷಣಗಳು ಈ ರೀತಿಯಿವೆ
ಆದ್ದರಿಂದ ನಾರಾಯಣನ ಮುಖಲಕ್ಷಣಗಳನ್ನು ಬಹಳ ಮಟ್ಟಿಗೆ ಇದೇ ರೀತಿಯಾಗಿ ತೋರಿಸುತ್ತಾರೆ. ಇಲ್ಲವೆಂದರೆ
ಮನುಷ್ಯರು ಅರಿತುಕೊಳ್ಳಲು ಸಾಧ್ಯವಿಲ್ಲ.
ನೀವು ಮಕ್ಕಳು
ತಿಳಿದುಕೊಂಡಿದ್ದೀರಿ - ಮಮ್ಮಾ-ಬಾಬಾರವರೇ ಈ ಲಕ್ಷ್ಮಿ-ನಾರಾಯಣರಾಗುತ್ತಾರೆ. ಇಲ್ಲಂತೂ ಪಂಚತತ್ವಗಳು
ಪವಿತ್ರವಾಗಿಲ್ಲ, ಈ ಶರೀರಗಳೆಲ್ಲವೂ ಪತಿತವಾಗಿದೆ. ಸತ್ಯಯುಗದಲ್ಲಿ ಶರೀರವೂ ಸಹ
ಪವಿತ್ರವಾಗಿರುತ್ತದೆ. ಕೃಷ್ಣನಿಗೆ ಅತಿಸುಂದರನೆಂದು ಹೇಳುತ್ತಾರೆ. ಪ್ರಾಕೃತಿಕ ಸೌಂದರ್ಯವಿರುತ್ತದೆ.
ಇಲ್ಲಿ ವಿದೇಶದಲ್ಲಿ ಭಲೆ ಬೆಳ್ಳಗಿನ ಮನುಷ್ಯರಿದ್ದಾರೆ ಆದರೆ ಅವರಿಗೆ ದೇವತೆಗಳೆಂದು ಹೇಳುವುದಿಲ್ಲ
ಏಕೆಂದರೆ ದೈವೀಗುಣಗಳಂತೂ ಇಲ್ಲ ಅಲ್ಲವೆ. ಅಂದಾಗ ತಂದೆಯು ಎಷ್ಟು ಚೆನ್ನಾಗಿ ಕುಳಿತು ತಿಳಿಸುತ್ತಾರೆ!
ಇದು ಶ್ರೇಷ್ಠಾತಿಶ್ರೇಷ್ಠ ವಿದ್ಯೆಯಾಗಿದೆ, ಇದರಿಂದ ನಿಮ್ಮದು ಎಷ್ಟೊಂದು ಶ್ರೇಷ್ಠ
ಸಂಪಾದನೆಯಾಗುತ್ತದೆ. ಎಣಿಸಲಾರದಷ್ಟು ವಜ್ರ-ವೈಡೂರ್ಯ, ಧನವಿರುತ್ತದೆ. ಅಲ್ಲಂತೂ ವಜ್ರ ವೈಡೂರ್ಯಗಳ
ಮಹಲಿತ್ತು ಈಗ ಅದು ಮರೆಯಾಗಿಬಿಟ್ಟಿದೆ. ಅಂದಾಗ ನೀವು ಎಷ್ಟೊಂದು ಧನವಂತರಾಗುತ್ತೀರಿ! 21
ಜನ್ಮಗಳಿಗಾಗಿ ಅಪರಮಪಾರ ಸಂಪಾದನೆಯಿದೆ, ಇದರಲ್ಲಿ ಬಹಳ ಪರಿಶ್ರಮ ಬೇಕು.
ದೇಹೀ-ಅಭಿಮಾನಿಗಳಾಗಬೇಕಾಗಿದೆ, ನಾವು ಆತ್ಮಗಳಾಗಿದ್ದೇವೆ, ಈ ಹಳೆಯ ಶರೀರವನ್ನು ಬಿಟ್ಟು ನಾವು
ಹಿಂತಿರುಗಿ ನಮ್ಮ ಮನೆಗೆ ಹೋಗಬೇಕಾಗಿದೆ. ತಂದೆಯು ಈಗ ಕರೆದುಕೊಂಡು ಹೋಗಲು ಬಂದಿದ್ದಾರೆ,
ನಾವಾತ್ಮಗಳು 84 ಜನ್ಮಗಳನ್ನು ಪೂರ್ಣ ಮಾಡಿದೆವು, ಈಗ ಮತ್ತೆ ಪಾವನರಾಗಬೇಕಾಗಿದೆ. ತಂದೆಯನ್ನು
ನೆನಪು ಮಾಡಬೇಕಾಗಿದೆ. ಇಲ್ಲವಾದರೆ ಇದು ಅಂತಿಮ ಸಮಯವಾಗಿರುವ ಕಾರಣ ಶಿಕ್ಷೆಗಳನ್ನನುಭವಿಸಿ
ಹಿಂತಿರುಗಿ ಹೋಗುತ್ತೀರಿ. ಲೆಕ್ಕಾಚಾರಗಳನ್ನು ಎಲ್ಲರೂ ಸಮಾಪ್ತಿ ಮಾಡಲೇಬೇಕಾಗಿದೆ.
ಭಕ್ತಿಮಾರ್ಗದಲ್ಲಿ ಕಾಶಿಗೆ ಹೋಗಿ ಬಲಿಹಾರಿಯಾಗುತ್ತಿದ್ದರು. ಆದರೂ ಸಹ ಯಾರೂ ಮುಕ್ತಿಯನ್ನು
ಹೊಂದಲಿಲ್ಲ. ಅದು ಭಕ್ತಿಮಾರ್ಗ, ಇದು ಜ್ಞಾನಮಾರ್ಗವಾಗಿದೆ. ಇದರಲ್ಲಿ ಜೀವಘಾತ ಮಾಡಿಕೊಳ್ಳುವ
ಅವಶ್ಯಕತೆಯಿಲ್ಲ. ಅದು ಜೀವಘಾತವಾಗಿದೆ, ಆದರೂ ಸಹ ಭಕ್ತರಿಗೆ ನಾವು ಮುಕ್ತಿಯನ್ನು ಹೊಂದುತ್ತೇವೆ
ಎಂಬ ಭಾವನೆಯಿರುತ್ತದೆ ಆದ್ದರಿಂದ ಪಾಪಗಳ ಲೆಕ್ಕಾಚಾರವು ಸಮಾಪ್ತಿಯಾಗಿ ಮತ್ತೆ ಆರಂಭವಾಗುತ್ತದೆ.
ಈಗಂತೂ ಬಲಿಹಾರಿಯಾಗಲು ಬಹಳ ಕೆಲವರೇ ಧೈರ್ಯವನ್ನಿಡುತ್ತಾರೆ ಆದರೆ ಮುಕ್ತಿ-ಜೀವನ್ಮುಕ್ತಿಯು ಸಿಗಲು
ಸಾಧ್ಯವಿಲ್ಲ. ತಂದೆಯ ವಿನಃ ಮತ್ತ್ಯಾರೂ ಜೀವನ್ಮುಕ್ತಿಯನ್ನು ಕೊಡಲು ಸಾಧ್ಯವೇ ಇಲ್ಲ. ಆತ್ಮಗಳು
ಬರುತ್ತಿರುತ್ತಾರೆ ಅಂದಮೇಲೆ ಹಿಂತಿರುಗಿ ಮನೆಗೆ ಹೇಗೆ ಹೋಗುವುದು? ಅಂದಮೇಲೆ ತಂದೆಯೇ ಬಂದು ಸರ್ವರ
ಸದ್ಗತಿ ಮಾಡಿ ಹಿಂತಿರುಗಿ ಕರೆದುಕೊಂಡು ಹೋಗುತ್ತಾರೆ. ಸತ್ಯಯುಗದಲ್ಲಿ ಕಡಿಮೆ ಮನುಷ್ಯರಿರುತ್ತಾರೆ,
ಆತ್ಮವೆಂದೂ ವಿನಾಶ ಹೊಂದುವುದಿಲ್ಲ. ಆತ್ಮವು ಅವಿನಾಶಿ, ಶರೀರವು ವಿನಾಶಿಯಾಗಿದೆ. ಸತ್ಯಯುಗದಲ್ಲಿ
ಧೀರ್ಘಾಯಸ್ಸಿರುತ್ತದೆ, ದುಃಖದ ಮಾತಿಲ್ಲ. ಒಂದು ಶರೀರವನ್ನು ಬಿಟ್ಟು ಇನ್ನೊಂದನ್ನು
ತೆಗೆದುಕೊಳ್ಳುತ್ತಾರೆ. ಹೇಗೆ ಸರ್ಪದ ಉದಾಹರಣೆಯಿದೆ, ಅದಕ್ಕೆ ಸಾಯುವುದೆಂದು ಹೇಳುವುದಿಲ್ಲ,
ದುಃಖದ ಮಾತಿಲ್ಲ. ಈಗ ಸಮಯವೂ ಪೂರ್ಣವಾಯಿತು, ಈ ಶರೀರವನ್ನು ಬಿಟ್ಟು ಇನ್ನೊಂದನ್ನು
ತೆಗೆದುಕೊಳ್ಳುತ್ತೇವೆಂದು ತಿಳಿಯುತ್ತಾರೆ. ನೀವು ಮಕ್ಕಳು ಈ ಶರೀರದಿಂದ ಭಿನ್ನರಾಗುವ ಅಭ್ಯಾಸವನ್ನು
ಇಲ್ಲಿಯೇ ಮಾಡಬೇಕು. ನಾವಾತ್ಮಗಳಾಗಿದ್ದೇವೆ, ಈಗ ನಾವು ಮನೆಗೆ ಹೋಗಬೇಕಾಗಿದೆ. ನಂತರ
ಹೊಸಪ್ರಪಂಚದಲ್ಲಿ ಬರುತ್ತೇವೆ, ಹೊಸಶರೀರವನ್ನು ತೆಗೆದುಕೊಳ್ಳುತ್ತೇವೆ. ಈ ಅಭ್ಯಾಸ ಮಾಡಿ. ನಿಮಗೆ
ತಿಳಿದಿದೆ - ಆತ್ಮವು 84 ಶರೀರಗಳನ್ನು ತೆಗೆದುಕೊಳ್ಳುತ್ತದೆ, ಇದಕ್ಕೆ ಮನುಷ್ಯರು 84 ಲಕ್ಷ
ಜನ್ಮಗಳೆಂದು ಹೇಳಿಬಿಟ್ಟಿದ್ದಾರೆ. ತಂದೆಯನ್ನಂತೂ ಲೆಕ್ಕವಿಲ್ಲದಷ್ಟು
ಕಲ್ಲು-ಮುಳ್ಳಿನಲ್ಲಿದ್ದಾರೆಂದು ಹೇಳಿಬಿಡುತ್ತಾರೆ. ಇದಕ್ಕೆ ಧರ್ಮಗ್ಲಾನಿ ಎಂದು ಹೇಳಲಾಗುತ್ತದೆ.
ಮನುಷ್ಯರು ಸ್ವಚ್ಛಬುದ್ಧಿಯವರಿಂದ ಸಂಪೂರ್ಣ ತುಚ್ಛಬುದ್ಧಿಯವರಾಗಿಬಿಡುತ್ತಾರೆ. ಈಗ ತಂದೆಯು
ನಿಮ್ಮನ್ನು ಸ್ವಚ್ಛಬುದ್ಧಿಯವರನ್ನಾಗಿ ಮಾಡುತ್ತಾರೆ. ನೆನಪಿನಿಂದಲೇ ಸ್ವಚ್ಛವಾಗುತ್ತೀರಿ. ತಂದೆಯು
ತಿಳಿಸುತ್ತಾರೆ - ಈಗ ನವಯುಗವು ಬರುತ್ತಿದೆ, ಅದರ ಚಿಹ್ನೆಯಾಗಿ ಈ ಮಹಾಭಾರತ ಯುದ್ಧವಿದೆ, ಇದು ಅದೇ
ಅಣ್ವಸ್ತ್ರ ಯುದ್ಧಗಳಾಗಿವೆ, ಯಾವುದರಲ್ಲಿ ಅನೇಕ ಧರ್ಮಗಳ ವಿನಾಶ, ಒಂದು ಧರ್ಮದ ಸ್ಥಾಪನೆಯಾಗಿತ್ತು
ಅಂದಮೇಲೆ ಅವಶ್ಯವಾಗಿ ಭಗವಂತನು ಇರಬೇಕಲ್ಲವೆ. ಕೃಷ್ಣನು ಇಲ್ಲಿಗೆ ಬರಲು ಹೇಗೆ ಸಾಧ್ಯ? ಜ್ಞಾನಸಾಗರ
ನಿರಾಕಾರನೋ ಅಥವ ಕೃಷ್ಣನೊ? ಕೃಷ್ಣನಿಗೆ ಈ ಜ್ಞಾನವೇ ಇರುವುದಿಲ್ಲ, ಈ ಜ್ಞಾನವೇ ಮುಚ್ಚಿಹೋಗುತ್ತದೆ.
ಭಕ್ತಿಮಾರ್ಗದಲ್ಲಿ ನಿಮ್ಮದೂ ಸಹ ಚಿತ್ರಗಳಾಗುತ್ತವೆ, ನೀವು ಪೂಜ್ಯರೇ ಪೂಜಾರಿಗಳಾಗುತ್ತೀರಿ,
ಕಲೆಗಳು ಕಡಿಮೆಯಾಗಿಬಿಡುತ್ತದೆ, ಆಯಸ್ಸು ಸಹ ಕಡಿಮೆಯಾಗುತ್ತಾ ಹೋಗುತ್ತದೆ ಏಕೆಂದರೆ
ಭೋಗಿಗಳಾಗುತ್ತಾರೆ. ಸತ್ಯಯುಗದಲ್ಲಿ ಯೋಗಿಗಳಾಗಿರುತ್ತಾರೆ. ಯಾರದಾದ್ದರೂ ನೆನಪಿನಲ್ಲಿ
ಯೋಗವನ್ನಿಡುತ್ತೀರೆಂದಲ್ಲ, ಅಲ್ಲಿರುವುದೇ ಪವಿತ್ರ ಆತ್ಮಗಳು. ಕೃಷ್ಣನಿಗೂ ಸಹ ಯೋಗೇಶ್ವರನೆಂದು
ಹೇಳುತ್ತಾರೆ. ಈ ಸಮಯದಲ್ಲಿ ಕೃಷ್ಣನ ಆತ್ಮವು ತಂದೆಯ ಜೊತೆ ಬುದ್ಧಿಯೋಗವನ್ನಿಡುತ್ತಿದೆ. ಕೃಷ್ಣನ
ಆತ್ಮವು ಈ ಸಮಯದಲ್ಲಿ ಯೋಗೇಶ್ವರನಾಗಿದೆ, ಸತ್ಯಯುಗದಲ್ಲಿ ಯೋಗೇಶ್ವರನೆಂದು ಹೇಳುವುದಿಲ್ಲ, ಅಲ್ಲಿ
ರಾಜಕುಮಾರನಾಗುತ್ತಾರೆ ಅಂದಾಗ ನಿಮ್ಮದು ಅಂತಿಮದಲ್ಲಿ ಇಂತಹ ಸ್ಥಿತಿಯಿರಬೇಕು ತಂದೆಯ ವಿನಃ
ಮತ್ತ್ಯಾವ ಶರೀರದ ನೆನಪು ಬರಬಾರದು. ಶರೀರ ಮತ್ತು ಹಳೆಯ ಪ್ರಪಂಚದಿಂದ ಮಮತ್ವವು ಕಳೆಯಲಿ,
ಸನ್ಯಾಸಿಗಳಿರುವುದೇ ಹಳೆಯ ಪ್ರಪಂಚದಲ್ಲಿ ಆದರೆ ಗೃಹಸ್ಥದಿಂದ ಮಮತ್ವವನ್ನು ಕಳೆಯುತ್ತಾರೆ.
ಬ್ರಹ್ಮ್ತತ್ವವನ್ನು ಈಶ್ವರನೆಂದು ತಿಳಿದು ಅದರೊಂದಿಗೆ ಯೋಗವನ್ನಿಡುತ್ತಾರೆ, ತಮ್ಮನ್ನು ಬ್ರಹ್ಮ್
ಜ್ಞಾನಿ, ತತ್ವಜ್ಞಾನಿಗಳೆಂದು ಹೇಳಿಕೊಳ್ಳುತ್ತಾರೆ. ನಾವು ಬ್ರಹ್ಮ್ತತ್ವದಲ್ಲಿ
ಲೀನವಾಗಿಬಿಡುತ್ತೇವೆಂದು ತಿಳಿಯುತ್ತಾರೆ ಆದರೆ ತಂದೆಯು ತಿಳಿಸುತ್ತಾರೆ - ಇದೆಲ್ಲವೂ ತಪ್ಪಾಗಿದೆ,
ಸತ್ಯವನ್ನು ನಾನೇ ಹೇಳುತ್ತೇನೆ. ನನಗೆ ಸತ್ಯವೆಂದು ಕರೆಯಲಾಗುತ್ತದೆ.
ತಂದೆಯು ತಿಳಿಸುತ್ತಾರೆ
- ನೆನಪಿನ ಯಾತ್ರೆಯು ಬಹಳ ಪಕ್ಕಾ ಆಗಬೇಕು. ಜ್ಞಾನವು ಬಹಳ ಸಹಜ ಆದರೆ
ದೇಹೀ-ಅಭಿಮಾನಿಯಾಗುವುದರಲ್ಲಿಯೇ ಪರಿಶ್ರಮವಿದೆ. ತಂದೆಯು ತಿಳಿಸುತ್ತಾರೆ - ಯಾವ ದೇಹದ ನೆನಪೂ
ಬರಬಾರದು, ಇದು ಭೂತಗಳ ನೆನಪು, ಭೂತಪೂಜೆಯಾಗಿದೆ. ನಾನಂತೂ ಅಶರೀರಿಯಾಗಿದ್ದೇನೆ. ನೀವು ನನ್ನನ್ನು
ನೆನಪು ಮಾಡಬೇಕಾಗಿದೆ. ಈ ಕಣ್ಣುಗಳಿಂದ ನೋಡುತ್ತಲೂ ಬುದ್ಧಿಯಿಂದ ತಂದೆಯನ್ನು ನೆನಪು ಮಾಡಿ, ತಂದೆಯ
ಆದೇಶದಂತೆ ನಡೆಯಿರಿ ಆಗ ಧರ್ಮರಾಜನ ಶಿಕ್ಷೆಗಳಿಂದ ಮುಕ್ತರಾಗುತ್ತೀರಿ. ಪಾವನರಾಗುತ್ತೀರೆಂದರೆ
ಶಿಕ್ಷೆಗಳೂ ಸಮಾಪ್ತಿಯಾಗುತ್ತದೆ. ಇದು ಅತಿದೊಡ್ಡ ಗುರಿಯಾಗಿದೆ. ಪ್ರಜೆಗಳಾಗುವುದು ಬಹಳ ಸಹಜ,
ಅದರಲ್ಲಿಯೂ ಸಾಹುಕಾರ ಪ್ರಜೆಗಳು, ಬಡಪ್ರಜೆಗಳು ಯಾರ್ಯಾರು ಆಗುತ್ತಾರೆ ಎಂಬುದೆಲ್ಲವನ್ನೂ
ತಿಳಿಸುತ್ತಾರೆ. ಅಂತಿಮದಲ್ಲಿ ನಿಮ್ಮ ಬುದ್ಧಿಯೋಗವು ತಂದೆ ಮತ್ತು ಮನೆಯೊಂದಿಗಿರಬೇಕು. ಹೇಗೆ
ನಾಟಕದಲ್ಲಿ ಪಾತ್ರಧಾರಿಗಳ ಪಾತ್ರವು ಪೂರ್ಣವಾಗುತ್ತದೆಯೆಂದರೆ ಬುದ್ಧಿಯು ಮನೆಯ ಕಡೆ
ಹೊರಟುಹೋಗುತ್ತದೆ. ಇದು ಬೇಹದ್ದಿನ ಮಾತಾಗಿದೆ. ಅದು ಕ್ಷಣಿಕ ಸಂಪಾದನೆಯಾಗಿರುತ್ತದೆ, ಇದು
ಅಪರಿಮಿತ ಸಂಪಾದನೆಯಾಗಿದೆ. ಒಳ್ಳೆಯ ಪಾತ್ರಧಾರಿಗಳ ಸಂಪಾದನೆಯು ಬಹಳ ಆಗುತ್ತದೆಯಲ್ಲವೆ ಅಂದಾಗ
ತಂದೆಯು ತಿಳಿಸುತ್ತಾರೆ - ಗೃಹಸ್ಥ ವ್ಯವಹಾರದಲ್ಲಿರುತ್ತಾ ಬುದ್ಧಿಯೋಗವನ್ನು ಅಲ್ಲಿಡಬೇಕಾಗಿದೆ.
ಹೇಗೆ ಅವರು ಒಬ್ಬರು ಇನ್ನೊಬ್ಬರ ಪ್ರಿಯತಮ-ಪ್ರಿಯತಮೆಯರಿರುತ್ತಾರೆ, ಇಲ್ಲಂತೂ ಒಬ್ಬ ಪ್ರಿಯತಮನಿಗೆ
ಎಲ್ಲರೂ ಪ್ರಿಯತಮೆಯರಾಗಿದ್ದಾರೆ, ಅವರನ್ನೇ ಎಲ್ಲರೂ ನೆನಪು ಮಾಡುತ್ತಾರೆ. ಅವರು ವಿಚಿತ್ರ
ಯಾತ್ರಿಕನಾಗಿದ್ದಾರಲ್ಲವೆ. ಈ ಸಮಯದಲ್ಲಿ ಎಲ್ಲಾ ದುಃಖಗಳಿಂದ ಬಿಡಿಸಿ ಸದ್ಗತಿಯಲ್ಲಿ ಕರೆದುಕೊಂಡು
ಹೋಗಲು ಬಂದಿದ್ದಾರೆ. ಅವರಿಗೆ ಸತ್ಯ-ಸತ್ಯವಾದ ಪ್ರಿಯತಮನೆಂದು ಹೇಳಲಾಗುತ್ತದೆ. ಹೇಗೆ ಅವರು ಒಬ್ಬರು
ಇನ್ನೊಬ್ಬರ ಶರೀರದ ಮೇಲೆ ಪ್ರಿಯತಮೆಯರಾಗುತ್ತಾರೆ, ವಿಕಾರದ ಮಾತಿಲ್ಲ. ಅದಕ್ಕೆ ದೇಹಾಭಿಮಾನದ
ಯೋಗವೆಂದು ಹೇಳುತ್ತಾರೆ ಆದರೆ ಅದು ಭೂತಗಳ ನೆನಪಾಯಿತು, ಮನುಷ್ಯರನ್ನು ನೆನಪು ಮಾಡುವುದೆಂದರೆ
ಭೂತಗಳನ್ನು, ಪ್ರಕೃತಿಯನ್ನು ನೆನಪು ಮಾಡುವುದಾಗಿದೆ. ತಂದೆಯು ತಿಳಿಸುತ್ತಾರೆ - ಪ್ರಕೃತಿಯನ್ನು
ಮರೆತು ನನ್ನನ್ನು ನೆನಪು ಮಾಡಿ, ಪರಿಶ್ರಮವಿದೆಯಲ್ಲವೇ ಮತ್ತೇ ದೈವೀಗುಣಗಳೂ ಬೇಕು. ಅನ್ಯರೊಂದಿಗೆ
ದ್ವೇಷವನ್ನು ತೀರಿಸಿಕೊಳ್ಳುವುದೂ ಸಹ ಆಸುರೀಗುಣವಾಗಿದೆ. ಸತ್ಯಯುಗದಲ್ಲಿ ಇರುವುದೇ ಒಂದು ಧರ್ಮ,
ಅಲ್ಲಿ ಸೇಡಿನ ಮಾತಿಲ್ಲ. ಅದು ಅದ್ವೈತ ದೇವತಾ ಧರ್ಮವಾಗಿದೆ ಯಾವುದನ್ನು ಶಿವತಂದೆಯ ವಿನಃ
ಮತ್ತ್ಯಾರೂ ಸ್ಥಾಪನೆ ಮಾಡಲು ಸಾಧ್ಯವಿಲ್ಲ. ಸೂಕ್ಷ್ಮವತನವಾಸಿ ದೇವತೆಗಳಿಗೆ ಫರಿಶ್ತೆಗಳೆಂದು
ಹೇಳಲಾಗುತ್ತದೆ. ಈ ಸಮಯದಲ್ಲಿ ನೀವು ಬ್ರಾಹ್ಮಣರಾಗಿದ್ದೀರಿ ನಂತರ ಫರಿಶ್ತೆಗಳಾಗುತ್ತೀರಿ ಮತ್ತೆ
ಹಿಂತಿರುಗಿ ಹೋಗುತ್ತೀರಿ ನಂತರ ಹೊಸಪ್ರಪಂಚದಲ್ಲಿ ಬಂದು ದೈವೀಗುಣವಂತ ಮನುಷ್ಯರು ಅರ್ಥಾತ್
ದೇವತೆಗಳಾಗುತ್ತೀರಿ. ಈಗ ಶೂದ್ರರಿಂದ ಬ್ರಾಹ್ಮಣರಾಗುತ್ತೀರಿ. ಪ್ರಜಾಪಿತ ಬ್ರಹ್ಮನ ಮಗುವಾಗದಿದ್ದರೆ
ಆಸ್ತಿಯನ್ನು ಹೇಗೆ ಪಡೆಯುತ್ತೀರಿ? ಈ ಪ್ರಜಾಪಿತ ಬ್ರಹ್ಮಾ ಮತ್ತು ಮಮ್ಮಾರವರೇ ಮತ್ತೆ
ಲಕ್ಷ್ಮಿ-ನಾರಾಯಣರಾಗುತ್ತಾರೆ. ನೋಡಿ, ನಿಮಗೆ ಜೈನರು ನಮ್ಮ ಜೈನಧರ್ಮವು ಎಲ್ಲದಕ್ಕಿಂತ ಹಳೆಯದಾಗಿದೆ
ಎಂದು ಹೇಳುತ್ತಾರೆ. ವಾಸ್ತವದಲ್ಲಿ ಆದಿದೇವ ಬ್ರಹ್ಮನಿಗೇ ಮಹಾವೀರನೆಂದು ಹೇಳುತ್ತಾರೆ.
ಅಲ್ಲಿರುವುದು ಬ್ರಹ್ಮನೇ, ಆದರೆ ಕೆಲವರು ಯಾರೋ ಜೈನಮುನಿಯು ಬಂದು, ಅವರು ಮಹಾವೀರನೆಂದು
ಹೆಸರನ್ನಿಟ್ಟರು. ಈಗ ನೀವೆಲ್ಲರೂ ಮಹಾವೀರರಾಗಿದ್ದೀರಲ್ಲವೆ. ಮಾಯೆಯ ಮೇಲೆ ಜಯಗಳಿಸುತ್ತಿದ್ದೀರಿ,
ನೀವೆಲ್ಲರೂ ಬಹದ್ದೂರರಾಗುತ್ತೀರಿ. ಸತ್ಯ-ಸತ್ಯ ಮಹಾವೀರರು-ಮಹಾವೀರಿಣಿಯರು ನೀವೇ ಆಗಿದ್ದೀರಿ.
ನಿಮ್ಮ ಹೆಸರು ಶಿವಶಕ್ತಿಯರೆಂದಾಗಿದೆ. ಶಿವಶಕ್ತಿಯರದು ಸಿಂಹದ ಮೇಲೂ ಮತ್ತು ಮಹಾರಥಿಗಳದು ಆನೆಯ
ಮೇಲೂ ಸವಾರಿಯಾಗುತ್ತದೆ. ತಂದೆಯು ಮತ್ತೆ ಸ್ಮೃತಿ ತರಿಸುತ್ತಾರೆ - ಗುರಿಯು ಬಹಳ ಉನ್ನತವಾಗಿದೆ.
ಒಬ್ಬ ತಂದೆಯನ್ನು ನೆನಪು ಮಾಡಿದರೆ ವಿಕರ್ಮಗಳು ವಿನಾಶವಾಗುತ್ತದೆ ಮತ್ತ್ಯಾವುದೇ ಮಾರ್ಗವಿಲ್ಲ.
ಯೋಗಬಲದ ಆಧಾರದ ಮೇಲೆ ವಿಶ್ವದ ಮೇಲೆ ರಾಜ್ಯಮಾಡುತ್ತೀರಿ. ಈಗ ನಾವು ಮನೆಗೆ ಹೋಗಬೇಕಾಗಿದೆ, ಇದು
ಹಳೆಯ ಪ್ರಪಂಚವಾಗಿದೆ, ಬೇಹದ್ದಿನ ಸನ್ಯಾಸವಾಗಿದೆ ಎಂದು ಆತ್ಮವು ಹೇಳುತ್ತದೆ. ಗೃಹಸ್ಥ
ವ್ಯವಹಾರದಲ್ಲಿರುತ್ತಾ ಪವಿತ್ರರಾಗಬೇಕು, ಚಕ್ರವನ್ನು ಅರಿತುಕೊಳ್ಳುವುದರಿಂದ ಚಕ್ರವರ್ತಿ
ರಾಜರಾಗಿಬಿಡುತ್ತೀರಿ. ಒಳ್ಳೆಯದು.
ಮಧುರಾತಿ ಮಧುರ ಅಗಲಿ
ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ.
ಆತ್ಮಿಕ ತಂದೆಯ ಆತ್ಮಿಕ ಮಕ್ಕಳಿಗೆ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ಧರ್ಮರಾಜನ
ಶಿಕ್ಷೆಗಳಿಂದ ಪಾರಾಗಲು ಯಾರದೇ ದೇಹವನ್ನು ನೆನಪು ಮಾಡಬಾರದು, ಈ ಕಣ್ಣುಗಳಿಂದ ಎಲ್ಲವನ್ನೂ
ನೋಡುತ್ತಿದ್ದರೂ ಒಬ್ಬ ತಂದೆಯನ್ನೇ ನೆನಪು ಮಾಡಬೇಕಾಗಿದೆ. ಅಶರೀರಿಯಾಗುವ ಅಭ್ಯಾಸ ಮಾಡಬೇಕಾಗಿದೆ,
ಪಾವನರಾಗಬೇಕಾಗಿದೆ.
2. ಮುಕ್ತಿ ಮತ್ತು
ಜೀವನ್ಮುಕ್ತಿಯ ಮಾರ್ಗವನ್ನು ಎಲ್ಲರಿಗೆ ತಿಳಿಸಬೇಕಾಗಿದೆ. ಈಗ ನಾಟಕವು ಮುಕ್ತಾಯವಾಯಿತು, ಮನೆಗೆ
ಹೋಗಬೇಕಾಗಿದೆ - ಈ ಸ್ಮೃತಿಯಿಂದ ಬೇಹದ್ದಿನ ಸಂಪಾದನೆಯನ್ನು ಜಮಾ ಮಾಡಿಕೊಳ್ಳಬೇಕಾಗಿದೆ.
ವರದಾನ:
ಒಂದು ಸೆಕೆಂಡಿನ
ಆಟದಿಂದ ಇಡೀ ಕಲ್ಪದ ಅದೃಷ್ಟವನ್ನು ರೂಪಿಸಿಕೊಳ್ಳುವ ಶ್ರೇಷ್ಠ ಅದೃಷ್ಠಶಾಲಿ ಭವ
ಈ ಸಂಗಮದ ಸಮಯಕ್ಕೆ
ವರದಾನವು ಸಿಕ್ಕಿದೆ- ಏನು ಬೇಕು, ಹೇಗೆ ಬೇಕು, ಎಷ್ಟು ಬೇಕು ಅಷ್ಟೂ ಭಾಗ್ಯವನ್ನು
ರೂಪಿಸಿಕೊಳ್ಳಬಹುದು. ಏಕೆಂದರೆ ಭಾಗ್ಯವಿದಾತ ತಂದೆಯು ಅದೃಷ್ಟವನ್ನು ರೂಪಿಸಿಕೊಳ್ಳುವ ಬೀಗದ
ಕೈಯನ್ನು ಮಕ್ಕಳ ಕೈಯಲ್ಲಿ ಕೊಟ್ಟಿದ್ದಾರೆ. ಲಾಸ್ಟ್ನಲ್ಲಿರುವವರೂ ಸಹ ಫಾಸ್ಟ್ ಆಗಿ ಹೋಗುತ್ತಾ
ಫಸ್ಟ್ ಬರಬಹುದು. ಕೇವಲ ಸೇವೆಗಳ ವಿಸ್ತಾರದಲ್ಲಿ ಸ್ವಯಂನ ಸ್ಥಿತಿಯನ್ನು ಸೆಕೆಂಡಿನಲ್ಲಿ
ಸಾರಸ್ವರೂಪವನ್ನಾಗಿ ಮಾಡಿಕೊಳ್ಳುವ ಅಭ್ಯಾಸವನ್ನು ಮಾಡಿರಿ. ಈಗೀಗ ಡೈರೆಕ್ಷನ್ ಸಿಕ್ಕಿತು- ಒಂದು
ಸೆಕೆಂಡಿನಲ್ಲಿ ಮಾಸ್ಟರ್ ಬೀಜವಾಗಿರಿ ಎಂದರೆ ಸಮಯ ಹಿಡಿಸಬಾರದು. ಈ ಒಂದು ಸೆಕೆಂಡಿನ ಆಟದಿಂದ
ಇಡೀಕಲ್ಪದ ಅದೃಷ್ಟವನ್ನು ರೂಪಿಸಿಕೊಳ್ಳಬಹುದು.
ಸ್ಲೋಗನ್:
ಡಬಲ್ ಸೇವೆಯ
ಮೂಲಕ ಶಕ್ತಿಶಾಲಿ ವಾಯುಮಂಡಲವನ್ನಾಗಿ ಮಾಡಿಕೊಳ್ಳುತ್ತೀರೆಂದರೆ ಪ್ರಕೃತಿಯು ದಾಸಿಯಾಗಿಬಿಡುತ್ತದೆ.
ಅವ್ಯಕ್ತ ಸೂಚನೆ:
ಏಕಾಂತಪ್ರಿಯರಾಗಿ ಏಕತೆ ಮತ್ತು ಏಕಾಗ್ರತೆಯನ್ನು ತಮ್ಮದಾಗಿಸಿಕೊಳ್ಳಿ
ಅನೇಕ ವೃಕ್ಷಗಳ ರೆಂಬೆ
ಕೊಂಬೆಗಳು ಈಗ ಒಂದೇ ಗಂಧದ ವೃಕ್ಷವಾಗಿ ಬಿಟ್ಟಿತು. ಜನ ಹೇಳುತ್ತಾರೆ – ಇಬ್ಬರು ನಾಲ್ಕು ಮಾತೆಯರು
ಒಟ್ಟಿಗೆ ಜೊತೆಯಲ್ಲಿ ಇರಲು ಸಾಧ್ಯವಿಲ್ಲ ಮತ್ತು ಈಗ ಮಾತೆಯರು ಇಡೀ ವಿಶ್ವದಲ್ಲಿ ಏಕತೆಯನ್ನು
ಸ್ಥಾಪನೆ ಮಾಡುವುದಕ್ಕೆ ನಿಮಿತ್ತರಾಗಿದ್ದಾರೆ. ಮಾತೆಯರೇ ಭಿನ್ನತೆಯಲ್ಲಿ ಏಕತೆಯನ್ನು ತಂದಿದ್ದಾರೆ.
ದೇಶ ಭಿನ್ನವಾಗಿದೆ, ಭಾಷೆ ಭಿನ್ನವಾಗಿದೆ, ಸಂಸ್ಕೃತಿ ಭಿನ್ನವಾಗಿದೆ ಆದರೆ ನೀವು ಭಿನ್ನತೆಯನ್ನು
ಏಕತೆಯಲ್ಲಿ ತಂದಿದ್ದೀರಿ.