04.04.25 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ - ನೀವೀಗ
ಪುರುಷೋತ್ತಮರಾಗಲು ಪುರುಷಾರ್ಥ ಮಾಡುತ್ತೀರಿ, ಪುರುಷೋತ್ತಮರು ದೇವತೆಗಳಾಗಿದ್ದಾರೆ ಏಕೆಂದರೆ ಅವರು
ಪಾವನರಾಗಿದ್ದಾರೆ, ನೀವು ಪಾವನರಾಗುತ್ತಿದ್ದೀರಿ”
ಪ್ರಶ್ನೆ:
ಬೇಹದ್ದಿನ
ತಂದೆಯು ನೀವು ಮಕ್ಕಳನ್ನು ಏಕೆ ಮಡಿಲಿಗೆ ತೆಗೆದುಕೊಂಡಿದ್ದಾರೆ?
ಉತ್ತರ:
ಏಕೆಂದರೆ
ನಾವೆಲ್ಲರೂ ಕಸದಬುಟ್ಟಿಯಲ್ಲಿ ಬಿದ್ದಿದ್ದೆವು, ತಂದೆಯು ನಮ್ಮನ್ನು ಕಸದಬುಟ್ಟಿಯಿಂದ ತೆಗೆದು
ಹೂಗಳನ್ನಾಗಿ ಮಾಡುತ್ತಾರೆ. ಆಸುರೀ ಗುಣಗಳಿರುವವರನ್ನು ದೈವೀಗುಣವಂತರನ್ನಾಗಿ ಮಾಡುತ್ತಾರೆ.
ನಾಟಕದನುಸಾರ ತಂದೆಯು ಬಂದು ನಿಮ್ಮನ್ನು ಕಸದಿಂದ ತೆಗೆದು ದತ್ತು ಮಾಡಿಕೊಂಡು ತನ್ನವರನ್ನಾಗಿ
ಮಾಡಿಕೊಂಡಿದ್ದಾರೆ.
ಗೀತೆ:
ಇಂದು
ಬೆಳಗ್ಗೆ-ಬೆಳಗ್ಗೆ ಬಂದವರು ಯಾರು.................
ಓಂ ಶಾಂತಿ.
ರಾತ್ರಿಯನ್ನು ದಿನವನ್ನಾಗಿ ಮಾಡಲು ತಂದೆಯು ಬರಬೇಕಾಗುತ್ತದೆ. ಈಗ ನೀವು ಮಕ್ಕಳು
ತಿಳಿದುಕೊಂಡಿದ್ದೀರಿ - ತಂದೆಯು ಬಂದಿದ್ದಾರೆ, ಮೊದಲು ನಾವು ಶೂದ್ರವರ್ಣದವರಾಗಿದ್ದೆವು,
ಶೂದ್ರಬುದ್ಧಿಯವರಾಗಿದ್ದೆವು. ವರ್ಣಗಳ ಚಿತ್ರವೂ ಸಹ ತಿಳಿಸಿಕೊಡಲು ಬಹಳ ಚೆನ್ನಾಗಿದೆ. ಮಕ್ಕಳಿಗೆ
ಗೊತ್ತಿದೆ - ನಾವು ಈ ವರ್ಣಗಳಲ್ಲಿ ಹೇಗೆ ಚಕ್ರವನ್ನು ಸುತ್ತುತ್ತೇವೆ, ಈಗ ನಮ್ಮನ್ನು ಪರಮಪಿತ
ಪರಮಾತ್ಮನು ಶೂದ್ರರಿಂದ ಬ್ರಾಹ್ಮಣರನ್ನಾಗಿ ಮಾಡಿದ್ದಾರೆ. ಕಲ್ಪ-ಕಲ್ಪವೂ, ಕಲ್ಪದ ಸಂಗಮಯುಗದಲ್ಲಿ
ನಾವು ಬ್ರಾಹ್ಮಣರಾಗುತ್ತೇವೆ. ಬ್ರಾಹ್ಮಣರಿಗೆ ಪುರುಷೋತ್ತಮರೆಂದು ಹೇಳುವುದಿಲ್ಲ.
ಪುರುಷೋತ್ತಮರೆಂದು ದೇವತೆಗಳಿಗೇ ಹೇಳುತ್ತಾರೆ. ಬ್ರಾಹ್ಮಣರು ಇಲ್ಲಿ ಪುರುಷೋತ್ತಮರಾಗಲು
ಪುರುಷಾರ್ಥ ಮಾಡುತ್ತೀರಿ. ಪತಿತರಿಂದ ಪಾವನರಾಗುವುದಕ್ಕಾಗಿಯೇ ತಂದೆಯನ್ನು ಕರೆಯುತ್ತಾರೆ ಅಂದಮೇಲೆ
ತಮ್ಮನ್ನು ಕೇಳಿಕೊಳ್ಳಬೇಕು - ನಾವು ಎಲ್ಲಿಯವರೆಗೆ ಪಾವನರಾಗಿದ್ದೇವೆ? ವಿದ್ಯಾರ್ಥಿಗಳೂ ಸಹ
ವಿದ್ಯಾಭ್ಯಾಸಕ್ಕಾಗಿ ವಿಚಾರಸಾಗರ ಮಂಥನ ಮಾಡುತ್ತಾರಲ್ಲವೆ! ಈ ವಿದ್ಯೆಯಿಂದ ನಾವು ಇದಾಗುತ್ತೇವೆಂದು
ತಿಳಿಯುತ್ತಾರೆ. ನೀವು ಮಕ್ಕಳ ಬುದ್ಧಿಯಲ್ಲಿದೆ, ನಾವೀಗ ದೇವತೆಗಳಾಗಲು ಬ್ರಾಹ್ಮಣರಾಗಿದ್ದೇವೆ. ಇದು
ಅಮೂಲ್ಯಜೀವನವಾಗಿದೆ ಏಕೆಂದರೆ ನೀವು ಈಶ್ವರೀಯ ಸಂತಾನರಾಗಿದ್ದೀರಿ. ಈಶ್ವರನು ನಿಮಗೆ ರಾಜಯೋಗವನ್ನು
ಕಲಿಸುತ್ತಿದ್ದಾರೆ, ಪತಿತರಿಂದ ಪಾವನರನ್ನಾಗಿ ಮಾಡುತ್ತಿದ್ದಾರೆ. ಪಾವನ ದೇವತೆಗಳಾಗುತ್ತೀರಿ.
ವರ್ಣಗಳ ಕುರಿತು ತಿಳಿಸುವುದು ಬಹಳ ಚೆನ್ನಾಗಿದೆ. ಸನ್ಯಾಸಿ ಮೊದಲಾದವರು ಈ ಮಾತುಗಳ ಮೇಲೆ
ನಿಲ್ಲುವುದಿಲ್ಲ. ಉಳಿದಂತೆ 84 ಜನ್ಮಗಳ ಲೆಕ್ಕವನ್ನು ಅರಿತುಕೊಳ್ಳುತ್ತಾರೆ ಮತ್ತು ನಾವು ಸನ್ಯಾಸ
ಧರ್ಮದವರು 84 ಜನ್ಮಗಳನ್ನು ತೆಗೆದುಕೊಳ್ಳುವುದಿಲ್ಲ ವೆಂದು ತಿಳಿದುಕೊಳ್ಳುತ್ತಾರೆ. ನಾವು 84
ಜನ್ಮಗಳನ್ನು ತೆಗೆದುಕೊಳ್ಳುವುದಿಲ್ಲ ಎಂಬ ಮಾತನ್ನು ಇಸ್ಲಾಮಿ, ಬೌದ್ಧಿಯರು ತಿಳಿಯುತ್ತಾರೆ. ಹಾ!
ಪುನರ್ಜನ್ಮವನ್ನಂತೂ ತೆಗೆದುಕೊಳ್ಳುತ್ತಾರೆ ಆದರೆ ಕಡಿಮೆ. ನೀವು ತಿಳಿಸಿಕೊಡುವುದರಿಂದ ಬಹಳ ಬೇಗನೆ
ಅರಿತುಕೊಳ್ಳುತ್ತಾರೆ. ತಿಳಿಸುವುದಕ್ಕೂ ಯುಕ್ತಿಬೇಕು. ನೀವು ಮಕ್ಕಳು ಇಲ್ಲಿ ಸನ್ಮುಖದಲ್ಲಿ
ಕುಳಿತುಕೊಂಡಿದ್ದೀರಿ ಆದ್ದರಿಂದ ತಂದೆಯು ಬುದ್ಧಿಯನ್ನು ರಿಫ್ರೆಷ್ ಮಾಡುತ್ತಾರೆ. ಹೇಗೆ ಅನ್ಯ
ಮಕ್ಕಳೂ ಸಹ ರಿಫ್ರೆಷ್ ಆಗಲು ಇಲ್ಲಿಗೆ ಬರುತ್ತಾರೆ. ನಿಮಗಂತೂ ಇದನ್ನು ಧಾರಣೆ ಮಾಡಿ ಎಂದು ಹೇಳಿ
ತಂದೆಯು ನಿತ್ಯವೂ ರಿಫ್ರೆಷ್ ಮಾಡುತ್ತಾರೆ. ಬುದ್ಧಿಯಲ್ಲಿ ಇದೇ ವಿಚಾರವು ನಡೆಯುತ್ತಿರಲಿ - ನಾವು
84 ಜನ್ಮಗಳನ್ನು ಹೇಗೆ ತೆಗೆದುಕೊಳ್ಳುತ್ತೇವೆ? ಶೂದ್ರರಿಂದ ಹೇಗೆ ಬ್ರಾಹ್ಮಣರಾಗಿದ್ದೇವೆ?
ಬ್ರಹ್ಮನ ಸಂತಾನರು ಬ್ರಾಹ್ಮಣರು ಅಂದಾಗ ಬ್ರಹ್ಮನೆಲ್ಲಿಂದ ಬಂದರು? ತಂದೆಯು ತಿಳಿಸುತ್ತಾರೆ - ನಾನು
ಅವರಿಗೆ ಬ್ರಹ್ಮನೆಂದು ಹೆಸರಿಡುತ್ತೇನೆ. ಈ ಬ್ರಹ್ಮಾಕುಮಾರ-ಕುಮಾರಿಯರೆಲ್ಲರೂ ಒಂದು ಪರಿವಾರವಾದಿರಿ
ಅಂದಾಗ ಅವಶ್ಯವಾಗಿ ದತ್ತುಮಕ್ಕಳಾಗಿದ್ದೀರಿ. ತಂದೆಯೇ ದತ್ತು ಮಾಡಿಕೊಳ್ಳುತ್ತಾರೆ. ಅವರಿಗೆ
ತಂದೆಯೆಂದು ಹೇಳಲಾಗುತ್ತದೆ, ದಾದಾರವರೆಂದು ಹೇಳುವುದಿಲ್ಲ. ತಂದೆಗೆ ತಂದೆಯೆಂದೇ ಹೇಳಲಾಗುತ್ತದೆ,
ತಂದೆಯಿಂದಲೇ ಆಸ್ತಿಯು ಸಿಗುತ್ತದೆ. ಕೆಲವರು ಚಿಕ್ಕಪ್ಪ, ದೊಡ್ಡಪ್ಪ ಅಥವಾ ವಂಶಾವಳಿಯವರು
ದತ್ತುಮಾಡಿಕೊಳ್ಳುತ್ತಾರೆ. ಹೇಗೆ ತಂದೆಯು ತಿಳಿಸಿದ್ದರು - ಒಂದು ಮಗು ಕಸದ ಡಬ್ಬಿಯಲ್ಲಿ
ಬಿದ್ದಿತ್ತು, ಅದನ್ನು ಯಾರೋ ಎತ್ತಿಕೊಂಡು ಹೋಗಿ ಮಡಿಲಿಗೆ ಕೊಟ್ಟರು ಏಕೆಂದರೆ ಅವರಿಗೆ
ಮಕ್ಕಳಿರಲಿಲ್ಲ ಆಗ ಮಗುವು ಯಾರ ಮಡಿಲಿಗೆ ಹೋಯಿತೋ ಅವರನ್ನೇ ಅಮ್ಮ, ಅಪ್ಪ ಎಂದು ಹೇಳತೊಡಗಿತಲ್ಲವೆ?
ಇದು ಬೇಹದ್ದಿನ ಮಾತಾಗಿದೆ. ನೀವು ಮಕ್ಕಳು ಸಹ ಹೇಗೆ ಬೇಹದ್ದಿನ ಕಸದ ಡಬ್ಬಿಯಲ್ಲಿ ಇದ್ದಿರಿ,
ವಿಷಯವೈತರಣೀ ನದಿಯಲ್ಲಿ ಬಿದ್ದಿದ್ದಿರಿ, ಎಷ್ಟೊಂದು ಕೊಳಕಾಗಿಬಿಟ್ಟಿದ್ದಿರಿ. ನಾಟಕದನುಸಾರ ತಂದೆಯು
ಬಂದು ಆ ಕೊಳಕಿನಿಂದ ಹೊರತೆಗೆದು ನಿಮ್ಮನ್ನು ದತ್ತು ಮಾಡಿಕೊಂಡಿದ್ದಾರೆ. ತಮೋಪ್ರಧಾನರಿಗೆ
ಕೊಳಕೆಂದೇ ಹೇಳುತ್ತಾರಲ್ಲವೆ. ಆಸುರೀ ಗುಣವುಳ್ಳ ಮನುಷ್ಯರು ದೇಹಾಭಿಮಾನಿಗಳಾಗಿದ್ದಾರೆ.
ಕಾಮ-ಕ್ರೋಧವು ದೊಡ್ಡ ವಿಕಾರಗಳಲ್ಲವೆ ಅಂದಾಗ ನೀವು ರಾವಣನ ದೊಡ್ಡ ಕಸದಬುಟ್ಟಿಯಲ್ಲಿ ಬಿದ್ದಿದ್ದಿರಿ.
ವಾಸ್ತವದಲ್ಲಿ ನೀವು ಅನಾಥರು ಆಗಿದ್ದಿರಿ, ಕಸದಿಂದ ಹೊರಬಂದು ಸುಂದರ ದೇವತೆಗಳಾಗಲು ಬೇಹದ್ದಿನ
ತಂದೆಯ ಮಡಿಲನ್ನು ತೆಗೆದುಕೊಂಡಿದ್ದೀರಿ. ಈ ಸಮಯದಲ್ಲಿ ಇಡೀ ಪ್ರಪಂಚವೇ ಕಸದ ಬುಟ್ಟಿಯಲ್ಲಿ
ಬಿದ್ದಿದೆ. ತಂದೆಯು ಬಂದು ನೀವು ಮಕ್ಕಳನ್ನು ಕಸದಿಂದ ಹೊರತೆಗೆದು ತನ್ನವರನ್ನಾಗಿ
ಮಾಡಿಕೊಳ್ಳುತ್ತಾರೆ ಆದರೆ ಕಸದ ಬುಟ್ಟಿಯಲ್ಲಿರುವವರು ಈ ರೀತಿ ಸಿಕ್ಕಿಹಾಕಿಕೊಂಡಿದ್ದಾರೆ. ಅವರನ್ನು
ಹೊರತೆಗೆದರೂ ಸಹ ಅವರಿಗೆ ಕಸವೇ ಇಷ್ಟವಾಗುತ್ತದೆ. ತಂದೆಯು ಬಂದು ಬೇಹದ್ದಿನ ಕಸದಿಂದ
ಹೊರತೆಗೆಯುತ್ತಾರೆ. ಬಾಬಾ ಬಂದು ನಮ್ಮನ್ನು ಮುಳ್ಳುಗಳ ಕಾಡಿನಿಂದ ಹೂಗಳನ್ನಾಗಿ ಮಾಡಿ ಈಶ್ವರೀಯ
ಹೂದೋಟದಲ್ಲಿ ಕುಳ್ಳ್ಳಿರಿಸಿ ಎಂದು ಕರೆಯುತ್ತೀರಿ. ಈಗ ಅಸುರರ ಕಾಡಿನಲ್ಲಿ ಬಿದ್ದಿದ್ದೀರಿ. ತಂದೆಯು
ನೀವು ಮಕ್ಕಳನ್ನು ಹೂದೋಟದಲ್ಲಿ ಕರೆದುಕೊಂಡು ಹೋಗುತ್ತಾರೆ. ಶೂದ್ರರಿಂದ ಬ್ರಾಹ್ಮಣರಾಗಿದ್ದೀರಿ,
ನಂತರ ದೇವತೆಗಳಾಗುತ್ತೀರಿ. ಇದು ದೇವತೆಗಳ ರಾಜಧಾನಿಯಾಗಿದೆ, ಭಲೆ ಪಾಂಡವರೆಂದು ಹೆಸರಿದೆ ಆದರೆ
ಪಾಂಡವರಿಗೆ ರಾಜ್ಯವಿಲ್ಲ. ರಾಜ್ಯವನ್ನು ಪ್ರಾಪ್ತಿ ಮಾಡಿಕೊಳ್ಳಲು ತಂದೆಯ ಜೊತೆ ಕುಳಿತಿದ್ದೀರಿ.
ಬೇಹದ್ದಿನ ರಾತ್ರಿಯು ಮುಕ್ತಾಯವಾಗಿ ಈಗ ಬೇಹದ್ದಿನ ದಿನ ಆರಂಭವಾಗುತ್ತದೆ. ಗೀತೆಯನ್ನು
ಕೇಳಿದ್ದೀರಲ್ಲವೆ - ಇಂದು ಬೆಳಗ್ಗೆ-ಬೆಳಗ್ಗೆ ಬಂದವರು ಯಾರು..... ರಾತ್ರಿಯನ್ನು ಕಳೆದು
ದಿನವನ್ನಾಗಿ ಮಾಡಲು ಅರ್ಥಾತ್ ಸ್ವರ್ಗದ ಸ್ಥಾಪನೆ, ನರಕದ ವಿನಾಶ ಮಾಡಿಸಲು ತಂದೆಯು
ಬೆಳಗ್ಗೆ-ಬೆಳಗ್ಗೆ ಬರುತ್ತಾರೆ. ಇದು ಬುದ್ಧಿಯಲ್ಲಿದ್ದರೂ ಸಹ ಖುಷಿಯಲ್ಲಿರುವಿರಿ. ಯಾರು ಹೊಸ
ಪ್ರಪಂಚದಲ್ಲಿ ಶ್ರೇಷ್ಠ ಪದವಿಯವರಿದ್ದಾರೆಯೋ ಅವರೆಂದೂ ತಮ್ಮ ಆಸುರೀ ಸ್ವಭಾವವನ್ನು
ತೋರಿಸುವುದಿಲ್ಲ. ಯಾವ ಯಜ್ಞದಿಂದ ಇಷ್ಟು ಶ್ರೇಷ್ಠರಾಗುವರೋ ಆ ಯಜ್ಞದ ಸೇವೆಯನ್ನು ಬಹಳ
ಪ್ರೀತಿಯಿಂದ ಮಾಡುತ್ತಾರೆ. ಈ ಯಜ್ಞದಲ್ಲಂತೂ ಮೂಳೆ-ಮೂಳೆಗಳನ್ನು ಸವೆಸಬೇಕು. ತಮ್ಮನ್ನು
ನೋಡಿಕೊಳ್ಳಬೇಕು - ಈ ಚಲನೆಯಿಂದ ನಾವು ಶ್ರೇಷ್ಠಪದವಿಯನ್ನು ಹೇಗೆ ಪಡೆಯುತ್ತೇವೆ? ಬುದ್ಧಿಯಿಲ್ಲದ
ಚಿಕ್ಕಮಕ್ಕಳಂತೂ ಅಲ್ಲವಲ್ಲವೆ! ರಾಜರು ಹೇಗೆ, ಪ್ರಜೆಗಳು ಹೇಗಾಗುತ್ತಾರೆಂಬುದನ್ನು
ಅರಿತುಕೊಳ್ಳಬಹುದಾಗಿದೆ. ತಂದೆಯು ಅನುಭವೀ ರಥವನ್ನು ತೆಗೆದುಕೊಂಡಿದ್ದಾರೆ, ಯಾರು ರಾಜರು
ಮೊದಲಾದವರನ್ನು ಬಹಳ ಚೆನ್ನಾಗಿ ತಿಳಿದುಕೊಂಡಿದ್ದಾರೆ. ರಾಜರ ಬಳಿಯಿರುವ ದಾಸ-ದಾಸಿಯರಿಗೂ ಸಹ ಬಹಳ
ಸುಖ ಸಿಗುತ್ತದೆ. ಅವರು ರಾಜರ ಬಳಿಯೇ ಇರುತ್ತಾರೆ ಆದರೆ ಕರೆಸಿಕೊಳ್ಳುವುದು ದಾಸ-ದಾಸಿಯರೆಂದೇ
ಅಲ್ಲವೆ. ಸುಖವಂತೂ ಇರುತ್ತದೆ, ರಾಜ-ರಾಣಿಯರು ಏನು ತಿನ್ನುವರೋ ಅದು ಇವರಿಗೂ ಸಿಗುತ್ತದೆ.
ಹೊರಗಿನವರಿಗೆ ತಿನ್ನಲು ಸಾಧ್ಯವಿಲ್ಲ. ದಾಸಿಯರಲ್ಲಿಯೂ ನಂಬರ್ವಾರ್ ಇರುತ್ತಾರೆ. ಕೆಲವರು ಶೃಂಗಾರ
ಮಾಡುವವರು, ಕೆಲವರು ಮಕ್ಕಳನ್ನು ಸಂಭಾಲನೆ ಮಾಡುವವರು, ಇನ್ನೂ ಕೆಲವರು ಕಸಗುಡಿಸುವವರು. ಇಲ್ಲಿನ
ರಾಜರಿಗೇ ಇಷ್ಟೊಂದು ಮಂದಿ ದಾಸ-ದಾಸಿಯರಿದ್ದಾರೆಂದಮೇಲೆ ಅಲ್ಲಿ ಇನ್ನೆಷ್ಟಿರಬಹುದು! ಎಲ್ಲರಿಗೂ
ಅವರವರದೇ ಆದ ಹೊಣೆಗಾರಿಕೆ ಇರುತ್ತದೆ, ಇರುವ ಸ್ಥಾನವೂ ಬೇರೆಯಿರುತ್ತದೆ. ಅವರೇನೂ ರಾಜ-ರಾಣಿಯರ
ಹಾಗೆ ಶೃಂಗರಿಸಲ್ಪಟ್ಟಿರುವುದಿಲ್ಲ. ಹೇಗೆ ಕೆಲಸದವರ ಮನೆಗಳಿರುತ್ತವೆಯಲ್ಲವೆ. ಒಳಗಡೆ ಅವಶ್ಯವಾಗಿ
ಬರುತ್ತಾರೆ ಆದರೆ ಕೆಲಸಗಾರರ ಮನೆಗಳಲ್ಲಿರುತ್ತಾರೆ. ಆದ್ದರಿಂದ ತಂದೆಯು ಒಳ್ಳೆಯರೀತಿಯಲ್ಲಿ
ತಿಳಿಸುತ್ತಾರೆ - ತಮ್ಮ ಮೇಲೆ ದಯೆ ತೋರಿಸಿಕೊಳ್ಳಿ. ನಾವು ಶ್ರೇಷ್ಠಾತಿ ಶ್ರೇಷ್ಠರಾಗಬೇಕು, ನಾವೀಗ
ಶೂದ್ರರಿಂದ ಬ್ರಾಹ್ಮಣರಾಗಿದ್ದೇವೆ, ಅಹೋ ಸೌಭಾಗ್ಯ ಮತ್ತೆ ನಾವೇ ದೇವತೆಗಳಾಗುತ್ತೇವೆ! ಈ
ಸಂಗಮಯುಗವು ಬಹಳ ಕಲ್ಯಾಣಕಾರಿಯಾಗಿದೆ. ನಿಮ್ಮ ಪ್ರತಿಯೊಂದು ಮಾತಿನಲ್ಲಿ ಕಲ್ಯಾಣವು ಸಮಾವೇಶವಾಗಿದೆ.
ಶ್ರೀನಾಥದ್ವಾರದಲ್ಲಿ ಭೋಜನವನ್ನು ತಯಾರಿಸುತ್ತಾರೆ ಸಂಪೂರ್ಣ ಶಾಂತಿಯಲ್ಲಿದ್ದು ಮಾಡುತ್ತಾರೆ.
ಶ್ರೀನಾಥನ ನೆನಪೇ ಇರುತ್ತದೆ, ಭಕ್ತರು ತಮ್ಮ ಭಕ್ತಿಯಲ್ಲಿ ಬಹಳ ಮಸ್ತರಾಗಿರುತ್ತಾರೆ ಮತ್ತೆ ನೀವು
ಜ್ಞಾನದಲ್ಲಿ ಮಸ್ತರಾಗಿರಬೇಕು. ಕೃಷ್ಣನಿಗೆ ಅಂತಹ ಭಕ್ತಿಮಾಡುತ್ತಾರೆ ಕೇಳಲೇಬೇಡಿ. ಬೃಂದಾವನದಲ್ಲಿ
ಇಬ್ಬರು ಹೆಣ್ಣು ಮಕ್ಕಳಿದ್ದಾರೆ, ಪೂರ್ಣ ಭಕ್ತಿನಿಯರಾಗಿದ್ದಾರೆ. ನಾವು ಇಲ್ಲಿಯೇ
ಇದ್ದುಬಿಡುತ್ತೇವೆ, ಕೃಷ್ಣನ ನೆನಪಿನಲ್ಲಿ ಇಲ್ಲಿಯೇ ಶರೀರ ಬಿಡುತ್ತೇವೆಂದು ಹೇಳುತ್ತಾರೆ.
ಒಳ್ಳೆಯಮನೆಯಲ್ಲಿ ಹೋಗಿ ಇರಿ, ಜ್ಞಾನವನ್ನು ತೆಗೆದುಕೊಳ್ಳಿ ಎಂದು ಅವರಿಗೆ ಅನೇಕರು ಹೇಳುತ್ತಾರೆ
ಆದರೆ ನಾವಂತೂ ಇಲ್ಲಿಯೇ ಇರುತ್ತೇವೆಂದು ಹೇಳುತ್ತಾರೆ ಅಂದಾಗ ಅವರಿಗೆ ಭಕ್ತಶಿರೋಮಣಿ ಎಂದು
ಹೇಳಲಾಗುತ್ತದೆ. ಕೃಷ್ಣನಿಗೆ ಎಷ್ಟೊಂದು ಬಲಿಹಾರಿಯಾಗುತ್ತಾರೆ, ಈಗ ನೀವು ತಂದೆಗೆ
ಬಲಿಹಾರಿಯಾಗಬೇಕಾಗಿದೆ. ಮೊಟ್ಟಮೊದಲು ಆರಂಭದಲ್ಲಿ ಶಿವತಂದೆಗೆ ಎಷ್ಟೊಂದು ಮಂದಿ ಬಲಿಹಾರಿಯಾದರು,
ಅನೇಕರು ಬಂದರು. ಯಾವಾಗ ಭಾರತಕ್ಕೆ ಬಂದರೋ ಆಗ ಅನೇಕರಿಗೆ ತಮ್ಮ ಮನೆಯ ನೆನಪು ಬಂದಿತು, ಅನೇಕರು
ಹೊರಟುಹೋದರು. ಗ್ರಹಚಾರಿಯು ಅನೇಕರ ಮೇಲೆ ಬರುತ್ತದೆಯಲ್ಲವೆ. ಕೆಲಕೆಲವೊಮ್ಮೆ ಕೆಲವೊಂದು ದೆಶೆಯು
ಕುಳಿತುಬಿಡುತ್ತದೆ. ತಂದೆಯು ತಿಳಿಸಿದ್ದಾರೆ - ಯಾರೇ ಬಂದರೂ ಸಹ ತಿಳಿಸಿ, ತಾವು ಎಲ್ಲಿಗೆ
ಬಂದಿದ್ದೀರಿ? ಹೊರಗೆ ಬೋರ್ಡನ್ನು ನೋಡಿದಿರಾ? ಬ್ರಹ್ಮಾಕುಮಾರ-ಕುಮಾರಿಯರು ಎಂದಿದೆ, ಇದು
ಪರಿವಾರವಲ್ಲವೆ. ಒಬ್ಬರು ನಿರಾಕಾರ ಪರಮಪಿತ ಪರಮಾತ್ಮನಾಗಿದ್ದಾರೆ, ಇನ್ನೊಬ್ಬರು ಪ್ರಜಾಪಿತ
ಬ್ರಹ್ಮಾನೆಂದೂ ಗಾಯನವಿದೆ. ಇವರೆಲ್ಲರೂ ಅವರ ಮಕ್ಕಳಾಗಿದ್ದಾರೆ, ಶಿವತಂದೆಯು ತಾತನಾಗಿದ್ದಾರೆ,
ಆಸ್ತಿಯೂ ಅವರಿಂದಲೇ ಸಿಗುತ್ತದೆ. ಅವರು ಸಲಹೆ ನೀಡುತ್ತಾರೆ -ನನ್ನನ್ನು ನೆನಪು ಮಾಡಿದರೆ ನೀವು
ಪತಿತರಿಂದ ಪಾವನರಾಗಿಬಿಡುತ್ತೀರಿ. ಕಲ್ಪದ ಮೊದಲೂ ಸಹ ಈ ಸಲಹೆಯನ್ನು ಕೊಟ್ಟಿದ್ದೆನು, ಎಷ್ಟು
ಶ್ರೇಷ್ಠವಿದ್ಯೆಯಾಗಿದೆ! ನಾವು ತಂದೆಯಿಂದ ಆಸ್ತಿಯನ್ನು ತೆಗೆದುಕೊಳ್ಳುತ್ತಿದ್ದೇವೆ ಎಂಬುದೂ ಸಹ
ನಿಮ್ಮ ಬುದ್ಧಿಯಲ್ಲಿದೆ.
ನೀವು ಮಕ್ಕಳು
ಮನುಷ್ಯರಿಂದ ದೇವತೆಗಳಾಗುವ ವಿದ್ಯೆಯನ್ನು ಓದುತ್ತಿದ್ದೀರಿ, ನೀವು ಅವಶ್ಯವಾಗಿ ದೈವೀಗುಣಗಳನ್ನು
ಧಾರಣೆ ಮಾಡಬೇಕಾಗಿದೆ. ನಿಮ್ಮ ಆಹಾರ-ಪಾನೀಯ, ಮಾತು-ನಡವಳಿಕೆ ಇಷ್ಟು ಘನತೆಯಿಂದಿರಬೇಕು. ದೇವತೆಗಳು
ಎಷ್ಟು ಕಡಿಮೆ ತಿನ್ನುತ್ತಾರೆ. ಅವರಲ್ಲಿ ಯಾವುದೇ ಲಾಲಸೆಯಿರುವುದಿಲ್ಲ. 36 ಪ್ರಕಾರದ ಭೋಜನ
ತಯಾರಾಗಿರುತ್ತದೆ. ಆದರೆ ಎಷ್ಟು ಕಡಿಮೆ ತಿನ್ನುತ್ತಾರೆ! ಆಹಾರ-ಪಾನೀಯಗಳ
ಲಾಲಸೆಯನ್ನಿಟ್ಟುಕೊಳ್ಳುವುದಕ್ಕೂ ಆಸುರೀ ಚಲನೆಯೆಂದು ಹೇಳಲಾಗುತ್ತದೆ. ದೈವೀಗುಣಗಳನ್ನು ಧಾರಣೆ
ಮಾಡಬೇಕೆಂದರೆ ಆಹಾರ-ಪಾನೀಯಗಳು ಬಹಳ ಶುದ್ಧ ಮತ್ತು ಸಾಧಾರಣವಾಗಿರಬೇಕು ಆದರೆ ಮಾಯೆಯು ಈ ರೀತಿಯಿದೆ,
ಅದು ಒಮ್ಮೆಲೆ ಕಲ್ಲುಬುದ್ಧಿಯವರನ್ನಾಗಿ ಮಾಡಿಬಿಡುತ್ತದೆ ಮತ್ತೆ ಅಂತಹ ಪದವಿಯೇ ಸಿಗುತ್ತದೆ.
ತಂದೆಯು ತಿಳಿಸುತ್ತಾರೆ - ತಮ್ಮ ಕಲ್ಯಾಣ ಮಾಡಿಕೊಳ್ಳಲು ದೈವೀಗುಣಗಳನ್ನು ಧಾರಣೆ ಮಾಡಿ. ಚೆನ್ನಾಗಿ
ಓದಿ ಓದಿಸುತ್ತೀರೆಂದರೆ ನಿಮಗೂ ಬಹುಮಾನವು ಸಿಗುವುದು. ತಂದೆಯು ಕೊಡುವುದಿಲ್ಲ, ನೀವೇ ತಮ್ಮ
ಪುರುಷಾರ್ಥದಿಂದ ಪಡೆಯುತ್ತೀರಿ ಅಂದಾಗ ತಮ್ಮನ್ನು ನೋಡಿಕೊಳ್ಳಬೇಕು - ನಾವು ಎಲ್ಲಿಯವರೆಗೆ ಸೇವೆ
ಮಾಡುತ್ತೇವೆ? ನಾವು ಏನಾಗುತ್ತೇವೆ? ಈ ಸಮಯದಲ್ಲಿ ಶರೀರವು ಬಿಟ್ಟುಹೋದರೆ ಏನು ಸಿಗುವುದು?
ತಂದೆಯೊಂದಿಗೆ ಯಾರಾದರೂ ಕೇಳಿದರೆ ತಂದೆಯು ಇವರ ಚಟುವಟಿಕೆಯಿಂದ ಇಂತಹ ಪದವಿಯನ್ನು ಪಡೆಯುತ್ತಾರೆಂದು
ತಿಳಿದುಬರುತ್ತದೆಯೆಂದು ತಕ್ಷಣ ತಿಳಿಸಿಬಿಡುತ್ತಾರೆ. ಪುರುಷಾರ್ಥವನ್ನೇ ಮಾಡಲಿಲ್ಲವೆಂದರೆ
ಕಲ್ಪ-ಕಲ್ಪಾಂತರಕ್ಕಾಗಿ ತಮ್ಮನ್ನು ಮೋಸಗೊಳಿಸಿಕೊಳ್ಳುತ್ತಾರೆ. ಚೆನ್ನಾಗಿ ಸೇವೆ ಮಾಡುವವರು
ಅವಶ್ಯವಾಗಿ ಒಳ್ಳೆಯ ಪದವಿಯನ್ನು ಪಡೆಯುತ್ತಾರೆ. ಇವರು ಹೋಗಿ ದಾಸ-ದಾಸಿಯರಾಗುತ್ತಾರೆಂದು ಒಳಗೆ
ತಿಳಿದಿರುತ್ತದೆ ಆದರೆ ಹೇಳುವುದಿಲ್ಲ. ಶಾಲೆಯಲ್ಲಿಯೂ ನಾವು ಸೀನಿಯರ್ ಆಗುತ್ತೇವೆಯೇ ಅಥವಾ ಜೂನಿಯರ್
ಆಗುತ್ತೇವೆಯೇ ಎಂದು ತಿಳಿಯುತ್ತಾರೆ. ಇಲ್ಲಿಯೂ ಹಾಗೆಯೇ. ಯಾರು ಸೀನಿಯರ್ ಆಗಿರುವರೋ ಅವರು
ರಾಜ-ರಾಣಿಯಾಗುತ್ತಾರೆ, ಜೂನಿಯರ್ ಆಗಿರುವವರು ಕಡಿಮೆ ಪದವಿಯನ್ನು ಪಡೆಯುತ್ತಾರೆ. ಸಾಹುಕಾರರಲ್ಲಿಯೂ
ಸೀನಿಯರ್ ಮತ್ತು ಜೂನಿಯರ್ ಇರುತ್ತಾರೆ, ದಾಸ-ದಾಸಿಯರಲ್ಲಿಯೂ ಹೀಗೆಯೇ ಇರುತ್ತದೆ. ಸೀನಿಯರ್
ಆಗಿರುವವರ ದರ್ಜೆಯು ಉತ್ತಮವಾಗಿರುತ್ತದೆ. ಕಸಗುಡಿಸುವಂತಹ ದಾಸಿಗೆ ಒಳಗೆ ಮಹಲಿನಲ್ಲಿ ಬರುವುದಕ್ಕೂ
ಅನುಮತಿಯಿರುವುದಿಲ್ಲ. ಇವೆಲ್ಲಾ ಮಾತುಗಳನ್ನು ನೀವು ಮಕ್ಕಳು ಬಹಳ ಚೆನ್ನಾಗಿ ಅರಿತುಕೊಳ್ಳುತ್ತೀರಿ.
ಕೊನೆಯಲ್ಲಿ ಇನ್ನೂ ತಿಳಿದುಕೊಳ್ಳುತ್ತಾಹೋಗುತ್ತೀರಿ. ಶ್ರೇಷ್ಠರನ್ನಾಗಿ ಮಾಡುವವರಿಗೆ ಗೌರವವನ್ನು
ಇಡಬೇಕಾಗಿದೆ. ನೋಡಿ ಕುಮಾರಿಕಾ ಇದ್ದಾರೆ, ಸೀನಿಯರ್ ಆಗಿದ್ದಾರೆ. ಅಂದಮೇಲೆ ಗೌರವವನ್ನು
ಇಡಬೇಕಾಗಿದೆ.
ತಂದೆಯು ಮಕ್ಕಳ ಗಮನ
ಸೆಳೆಯುತ್ತಾರೆ - ಯಾವ ಮಕ್ಕಳು ಮಹಾರಥಿಯಾಗಿದ್ದಾರೆಯೋ ಅವರಿಗೆ ಗೌರವವನ್ನಿಡಿ, ಗೌರವ
ಕೊಡಲಿಲ್ಲವೆಂದರೆ ತಮ್ಮಮೇಲೆ ಪಾಪದ ಹೊರೆಯನ್ನು ಏರಿಸಿಕೊಳ್ಳುತ್ತೀರಿ. ಇವೆಲ್ಲಾ ಮಾತುಗಳನ್ನು
ತಂದೆಯು ಗಮನಕ್ಕೂ ತರುತ್ತಾರೆ. ಬಹಳ ಎಚ್ಚರಿಕೆಯಿರಬೇಕು - ನಂಬರ್ವಾರ್ ಯಾರಿಗೆ ಹೇಗೆ ಗೌರವ
ಕೊಡಬೇಕು ಎಂದು ತಂದೆಯು ಪ್ರತಿಯೊಬ್ಬರನ್ನೂ ಅರಿತಿದ್ದಾರಲ್ಲವೆ. ಯಾರಿಗಾದರೂ ನೇರವಾಗಿ ಹೇಳಿದರೆ,
ವಿರೋಧಿಗಳಾಗುವುದರಲ್ಲಿ ತಡಮಾಡುವುದಿಲ್ಲ. ಮತ್ತೆ ಕುಮಾರಿಯರು ಮಾತೆಯರ ಮೇಲೂ ಬಂಧನವನ್ನು
ಹಾಕುತ್ತಾರೆ. ಕಷ್ಟವನ್ನು ಸಹನೆ ಮಾಡಬೇಕಾಗುತ್ತದೆ. ಬಹುತೇಕವಾಗಿ ಮಾತೆಯರೇ ಬರೆಯುತ್ತಾರೆ - ಬಾಬಾ,
ನಮಗೆ ಇವರು ಬಹಳ ತೊಂದರೆ ಕೊಡುತ್ತಾರೆ, ನಾವು ಏನು ಮಾಡುವುದು? ಅವರು ಹೆದರಿಸಲು ನೀವೇನು
ಪ್ರಾಣಿಯಲ್ಲ. ಒಳಗೆ ನಿಮಗೇ ಮನಸ್ಸಿದೆ, ಆದ್ದರಿಂದಲೇ ಏನು ಮಾಡಲಿ ಎಂದು ಕೇಳುತ್ತೀರಿ. ಇದರಲ್ಲಿ
ಕೇಳುವ ಮಾತೇ ಇಲ್ಲ. ಆತ್ಮವು ತನಗೇ ಶತ್ರು, ತನಗೆ ತಾನೆ ಮಿತ್ರನಾಗಿದೆ. ಏನು ಬೇಕೋ ಅದನ್ನು
ಮಾಡಿಕೊಳ್ಳಿ. ಕೇಳುವುದೆಂದರೆ ಇಷ್ಟವಿದೆಯೆಂದರ್ಥ. ಮುಖ್ಯ ಮಾತು ನೆನಪಿನದಾಗಿದೆ, ನೆನಪಿನಿಂದಲೇ
ನೀವು ಪಾವನರಾಗುತ್ತೀರಿ. ಈ ಲಕ್ಷ್ಮೀ-ನಾರಾಯಣರು ಸಂಪೂರ್ಣ ಪಾವನರಲ್ಲವೆ. ಮಮ್ಮಾರವರು ಎಷ್ಟೊಂದು
ಸೇವೆ ಮಾಡುತ್ತಿದ್ದರು, ನಾವು ಮಮ್ಮಾರವರಿಗಿಂತಲೂ ಬುದ್ಧಿವಂತರಾಗಿದ್ದಾರೆಂದು ಯಾರೂ ಹೇಳಲು
ಸಾಧ್ಯವಿಲ್ಲ. ಮಮ್ಮಾರವರು ಜ್ಞಾನದಲ್ಲಿ ಎಲ್ಲರಿಗಿಂತ ತೀಕ್ಷ್ಣವಾಗಿದ್ದರು, ಯೋಗದ ಕೊರತೆಯೂ
ಅನೇಕರಲ್ಲಿದೆ, ನೆನಪಿನಲ್ಲಿರುವುದಿಲ್ಲ. ನೆನಪೇ ಮಾಡದಿದ್ದರೆ ವಿಕರ್ಮವಿನಾಶವು ಹೇಗಾಗುತ್ತದೆ!
ನಿಯಮವು ಹೇಳುತ್ತದೆ - ಕೊನೆಯಲ್ಲಿ ನೆನಪಿನಲ್ಲಿದ್ದೇ ಶರೀರ ಬಿಡಬೇಕಾಗಿದೆ. ಶಿವತಂದೆಯ
ನೆನಪಿನಲ್ಲಿಯೇ ಪ್ರಾಣವು ಈ ಶರೀರದಿಂದ ಹೊರಟುಹೋಗಲಿ. ಒಬ್ಬ ತಂದೆಯ ವಿನಃ ಮತ್ತ್ಯಾರ ನೆನಪೂ
ಬರಬಾರದು. ಎಲ್ಲಿಯೂ ಆಸಕ್ತಿಯಿರಬಾರದು. ಇದನ್ನು ಅಭ್ಯಾಸ ಮಾಡಬೇಕಾಗುತ್ತದೆ, ನಾವು ಅಶರೀರಿಯಾಗಿ
ಬಂದಿದ್ದೆವು ಮತ್ತೆ ಅಶರೀರಿಯಾಗಿ ಹೋಗಬೇಕಾಗಿದೆ. ಮಕ್ಕಳಿಗೆ ಪದೇ-ಪದೇ ತಿಳಿಸುತ್ತಿರುತ್ತೇವೆ -
ಬಹಳ ಮಧುರರಾಗಬೇಕಾಗಿದೆ, ದೈವೀಗುಣಗಳೂ ಇರಬೇಕು. ದೇಹಾಭಿಮಾನದ ಭೂತವು ಇರುತ್ತದೆಯಲ್ಲವೆ.
ಆದ್ದರಿಂದ ತಮ್ಮ ಮೇಲೆ ಬಹಳ ಗಮನವಿಡಬೇಕಾಗಿದೆ. ಬಹಳ ಪ್ರೀತಿಯಿಂದ ನಡೆಯಬೇಕಾಗಿದೆ. ತಂದೆಯನ್ನು
ನೆನಪು ಮಾಡಿ ಮತ್ತು ಚಕ್ರವನ್ನು ನೆನಪು ಮಾಡಿ. ಚಕ್ರದ ರಹಸ್ಯವನ್ನು ಯಾರಿಗಾದರು ತಿಳಿಸಿದರೆ, ಅವರು
ಆಶ್ಚರ್ಯಚಕಿತರಾಗುತ್ತಾರೆ. 84 ಜನ್ಮಗಳದೇ ಯಾರಿಗೂ ನೆನಪಿಲ್ಲವೆಂದರೆ 84 ಲಕ್ಷ ಜನ್ಮಗಳನ್ನು
ಯಾರಾದರೂ ನೆನಪು ಮಾಡಲು ಸಾಧ್ಯವೇ? ಇದು ವಿಚಾರದಲ್ಲಿಯೂ ಬರುವುದಿಲ್ಲ. ಈ ಚಕ್ರವನ್ನು ಬುದ್ಧಿಯಲ್ಲಿ
ನೆನಪಿಟ್ಟುಕೊಂಡರೂ ಅಹೋ ಸೌಭಾಗ್ಯವಾಗಿದೆ. ಈಗ ನಾಟಕವು ಪೂರ್ಣವಾಗುತ್ತದೆ, ಹಳೆಯ ಪ್ರಪಂಚದೊಂದಿಗೆ
ವೈರಾಗ್ಯವಿರಬೇಕು. ಬುದ್ಧಿಯೋಗವು ಶಾಂತಿಧಾಮ, ಸುಖಧಾಮದಲ್ಲಿರಲಿ. ಗೀತೆಯಲ್ಲಿಯೇ ಮನ್ಮನಾಭವವಿದೆ.
ಯಾವುದೇ ಗೀತಾಪಾಠಿಗಳು ಮನ್ಮನಾಭವದ ಅರ್ಥವನ್ನು ತಿಳಿದುಕೊಂಡಿಲ್ಲ. ನೀವು ಮಕ್ಕಳು
ತಿಳಿದುಕೊಂಡಿದ್ದೀರಿ, ಭಗವಾನುವಾಚ- ದೇಹದ ಎಲ್ಲಾ ಸಂಬಂಧಗಳನ್ನು ಬಿಟ್ಟು ತಮ್ಮನ್ನು ಆತ್ಮನೆಂದು
ತಿಳಿಯಿರಿ. ಯಾರು ಹೇಳಿದರು? ಕೃಷ್ಣ ಭಗವಂತನೇ? ನಾವಂತೂ ಶಾಸ್ತ್ರಗಳನ್ನೇ ಒಪ್ಪುತ್ತೇವೆ. ಭಲೆ
ಭಗವಂತನೇ ಬಂದರೂ ಸಹ ನಾವು ಒಪ್ಪುವುದಿಲ್ಲ. ಅವಶ್ಯವಾಗಿ ಶಾಸ್ತ್ರಗಳನ್ನು ಓದುತ್ತಾ ಇರುತ್ತೇವೆಂದು
ಕೆಲವರು ಹೇಳುತ್ತಾರೆ. ಭಗವಂತನು ರಾಜಯೋಗವನ್ನು ಕಲಿಸಲು ಬಂದಿದ್ದಾರೆ, ಸ್ಥಾಪನೆಯಾಗುತ್ತಿದೆ, ಈ
ಶಾಸ್ತ್ರಗಳೆಲ್ಲವೂ ಭಕ್ತಿಮಾರ್ಗದ್ದಾಗಿದೆ, ಭಗವಂತನ ನಿಶ್ಚಯವಾಗಿಬಿಟ್ಟರೆ ಆಸ್ತಿಯನ್ನು ಪಡೆಯಲು
ತೊಡಗಿಬಿಡುತ್ತಾರೆ ಮತ್ತೆ ಭಕ್ತಿಯೂ ಹಾರಿಹೋಗುತ್ತದೆ ಆದರೆ ನಿಶ್ಚಯವೂ ಇರಬೇಕಲ್ಲವೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ
ಹೋಗಿ ಮರಳಿ ಸಿಕ್ಕಿದ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ.
ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ದೇವತೆಗಳಾಗಲು
ಬಹಳ ರಾಯಲ್ ಸಂಸ್ಕಾರಗಳನ್ನು ಧಾರಣೆ ಮಾಡಿಕೊಳ್ಳಬೇಕಾಗಿದೆ. ಆಹಾರ-ಪಾನೀಯಗಳು ಬಹಳ ಶುದ್ಧ ಮತ್ತು
ಸಾಧಾರಣವಾಗಿರಬೇಕಾಗಿದೆ. ಲಾಲಸೆಯನ್ನಿಟ್ಟುಕೊಳ್ಳಬಾರದು. ತಮ್ಮ ಕಲ್ಯಾಣ ಮಾಡಿಕೊಳ್ಳುವುದಕ್ಕಾಗಿ
ದೈವೀಗುಣಗಳನ್ನು ಧಾರಣೆ ಮಾಡಬೇಕಾಗಿದೆ.
2. ತಮ್ಮ ಮೇಲೆ
ಗಮನವನ್ನಿಡುತ್ತಾ ಎಲ್ಲರೊಂದಿಗೆ ಬಹಳ ಪ್ರೀತಿಯಿಂದ ನಡೆಯಬೇಕಾಗಿದೆ. ತಮಗಿಂತಲೂ ಯಾರು
ಹಿರಿಯರಿದ್ದಾರೆಯೋ ಅವರಿಗೆ ಅವಶ್ಯವಾಗಿ ಗೌರವವನ್ನಿಡಬೇಕು, ಬಹಳ-ಬಹಳ ಮಧುರರಾಗಬೇಕು. ದೇಹದ
ಅಭಿಮಾನದಲ್ಲಿ ಬರಬಾರದು.
ವರದಾನ:
ಕಳೆದುಹೋದ
ಮಾತುಗಳನ್ನು ದಯಾಹೃದಯಿಯಾಗಿ ಅಳವಡಿಸಿಕೊಳ್ಳುವಂತಹ ಶುಭಚಿಂತಕ ಭವ
ಒಂದುವೇಳೆ ಯಾರದ್ದಾದರು
ಕಳೆದು ಹೋದ ಬಲಹೀನತೆಯ ಮಾತನ್ನು ಯಾರಾದರು ಹೇಳಿದರೆ, ಶುಭಭಾವನೆಯಿಂದ ದೂರ ಮಾಡಿಬಿಡಿ. ವ್ಯರ್ಥ
ಚಿಂತನೆ ಅಥವಾ ಬಲಹೀನತೆಯ ಮಾತು ಪರಸ್ಪರರಲ್ಲಿ ನಡಯಲೇ ಬಾರದು. ಕಳೆದುಹೋದ ಮಾತುಗಳಿಗೆ
ದಯಾಹೃದಯಿಗಳಾಗಿ ಅಳವಡಿಸಿಕೊಂಡುಬಿಡಿ. ಅಳವಡಿಸಿಕೊಂಡು ಶುಭಭಾವನೆಯಿಂದ ಆ ಆತ್ಮರ ಪ್ರತಿ ಮನಸಾ ಸೇವೆ
ಮಾಡುತ್ತಿರಿ. ಭಲೆ, ಯಾರಾದರು ಸಂಸ್ಕಾರಗಳ ವಶರಾಗಿ ಯಾವುದೇ ಉಲ್ಟಾ ಹೇಳುತ್ತಾ, ಮಾಡುತ್ತಾ ಅಥವಾ
ಕೇಳುತ್ತಾ ಇದ್ದರೆ ಅವರನ್ನು ಪರಿವರ್ತನೆ ಮಾಡಿ. ಒಬ್ಬರಿಂದ ಇಬ್ಬರಿಗೆ, ಇಬ್ಬರಿಂದ ಮೂವರಿಗೆ -
ಹೀಗೆ ವ್ಯರ್ಥ ಮಾತುಗಳ ಮಾಲೆಯಾಗದಿರಲಿ. ಈ ರೀತಿ ಗಮನವಿಡಬೇಕು ಅರ್ಥಾತ್ ಶುಭಚಿಂತಕರಾಗಬೇಕು.
ಸ್ಲೋಗನ್:
ಸಂತುಷ್ಟಮಣಿಯಾಗಿರಿ ಆಗ ಪ್ರಭು ಪ್ರಿಯ, ಲೋಕ ಪ್ರಿಯ ಮತ್ತು ಸ್ವಯಂ ಪ್ರಿಯರಾಗಿಬಿಡುವಿರಿ.
ಅವ್ಯಕ್ತ ಸೂಚನೆ:
ಕಂಬೈಂಡ್ ರೂಪದ ಸ್ಮೃತಿಯಿಂದ ಸದಾ ವಿಜಯಿಯಾಗಿರಿ
ಹೇಗೆ ಶರೀರ ಮತ್ತು ಆತ್ಮ
ಕಂಬೈಂಡ್ ಆಗಿದ್ದರೆ ಜೀವನವಿದೆ. ಒಂದುವೇಳೆ ಆತ್ಮ ಶರೀರದಿಂದ ಬೇರೆಯಾದರೆ ಜೀವನ
ಸಮಾಪ್ತಿಯಾಗಿಬಿಡುತ್ತದೆ. ಹೀಗೆ ಯೋಗಿ ಜೀವನ ಅರ್ಥಾತ್ ಕರ್ಮ ಯೋಗವಿಲ್ಲದೇ ಇಲ್ಲ, ಯೋಗ
ಕರ್ಮವಿಲ್ಲದೇ ಇಲ್ಲ. ಸದಾ ಕಂಬೈಂಡ್ ಆಗಿದ್ದರೆ ಸಫಲತೆ ಸಿಗುತ್ತಿರುತ್ತದೆ.