15.11.26    Avyakt Bapdada     Kannada Murli    20.03.2012     Om Shanti     Madhuban


“ಸಂತುಷ್ಟತೆಯ ಶಕ್ತಿಯನ್ನು ಚಹರೆ ಮತ್ತು ಚಲನೆಯಲ್ಲಿ ಧಾರಣೆ ಮಾಡಿ ಬ್ರಹ್ಮಾ ತಂದೆಯ ಸಮಾನರಾಗಿ, ಸದಾ ಖುಷಿಯಾಗಿರಿ ಮತ್ತು ಖುಷಿಯನ್ನು ಹಂಚಿರಿ”


ಇಂದು ಭಲೆ ಸನ್ಮುಖದಲ್ಲಿರುವ, ಭಲೆ ದೂರದಲ್ಲಿರುವ ಸಂತುಷ್ಟಮಣಿ ಮಕ್ಕಳನ್ನು ನೋಡುತ್ತಿದ್ದಾರೆ. ಪ್ರತಿಯೊಬ್ಬ ಮಗು ತನ್ನ ಸಂತುಷ್ಟತೆಯ ಶಕ್ತಿಯಿಂದ ಹೊಳೆಯುತ್ತಾ ಮುಗುಳ್ನಗುತ್ತಾ ಮಿಲನವನ್ನಾಚರಿಸುತ್ತಿದ್ದಾರೆ. ಈ ಸಂತುಷ್ಟತೆಯ ಶಕ್ತಿಯು ಎಲ್ಲದಕ್ಕಿಂತ ಮಹಾನ್ ಆಗಿದೆ ಆದ್ದರಿಂದ ಇದರಲ್ಲಿ ಸರ್ವ ಪ್ರಾಪ್ತಿಗಳಿವೆ. ಸಂತುಷ್ಟತೆಯ ಶಕ್ತಿಯನ್ನು ಧಾರಣೆ ಮಾಡುವಂತಹ ಸಂತುಷ್ಟಮಣಿಗಳು ಸ್ವಯಂಗೂ ಸಹ ಪ್ರಿಯರು, ತಂದೆಗೂ ಪ್ರಿಯರು, ಪರಿವಾರಕ್ಕೂ ಪ್ರಿಯರಾಗಿರುತ್ತಾರೆ ಏಕೆಂದರೆ ಎಲ್ಲಿ ಸಂತುಷ್ಟತೆಯಿರುತ್ತದೆ ಅಲ್ಲಿ ಸರ್ವಶಕ್ತಿಗಳು ಸಂತುಷ್ಟತೆಯಲ್ಲಿ ಸಮಾವೇಶವಾಗಿರುತ್ತದೆ. ಸಂತುಷ್ಟತೆಯ ಶಕ್ತಿಯ ವಾಯುಮಂಡಲದಲ್ಲಿ ನಾಲ್ಕೂ ಕಡೆ ಹರಡುತ್ತದೆ. ಸಂತುಷ್ಟಮಣಿ ಆತ್ಮರು ಎಂದೂ ಸಹ ಮಾಯೆಯಿಂದ ಸೋಲುವುದಿಲ್ಲ, ಮಾಯೆಯು ಸೋಲುತ್ತದೆ. ಸಂತುಷ್ಟಮಣಿ ಆತ್ಮರು ಸರ್ವರ ಹೃದಯವನ್ನು ತಮ್ಮದನ್ನಾಗಿ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಸಂತುಷ್ಟಮಣಿ ಆತ್ಮರಿಗೆ ಭಲೆ ಮಾಯೆಯಾಗಿರಲಿ ಅಥವಾ ಪ್ರಕೃತಿಯ ಭಿನ್ನ-ಭಿನ್ನ ಏರುಪೇರುಗಳಾಗಿರಲಿ ಅದನ್ನು ಒಂದು ಕಾರ್ಟೂನ್ ನೋಡುತ್ತಿದ್ದೇವೆ ಎನ್ನುವಂತೆ ಅನುಭವ ಮಾಡುತ್ತಾರೆ. ಪ್ರತಿಯೊಬ್ಬರೂ ತಮ್ಮನ್ನು ಸಂತುಷ್ಟತೆಯ ಶಕ್ತಿಯಲ್ಲಿ ಸಂಪನ್ನರೆಂದು ತಿಳಿಯುತ್ತೀರಾ? ತಮ್ಮೊಂದಿಗೆ ಕೇಳಿಕೊಳ್ಳಿ - ನಾನು ಸಂತುಷ್ಟಮಣಿಯಾಗಿದ್ದೇನೆಯೇ? ಕೆಲವೊಮ್ಮೆ ಇರುತ್ತದೆ, ಸದಾ ಇರುವುದಿಲ್ಲ ಕೆಲವು ಮಕ್ಕಳು ಹೇಳುತ್ತಾರೆ ಆದರೆ ಕೆಲವೊಮ್ಮೆ ಎನ್ನುತ್ತಾರೆ. ಬಾಪ್ದಾದಾರವರಿಗೆ ಕೆಲವೊಮ್ಮೆ ಶಬ್ಧವು ಪ್ರಿಯವಾಗುವುದಿಲ್ಲ. ಬಾಪ್ದಾದಾರವರು ಸದಾ ಪ್ರತಿಯೊಂದು ಮಕ್ಕಳಿಗೆ ನೆನಪು-ಪ್ರೀತಿ ಕೊಡುತ್ತಾರೆ, ಖುಷಿ ಕೊಡುತ್ತಾರೆ ಅಂದಮೇಲೆ ಬಾಪ್ದಾದಾರವರಿಗೆ ಈ ಕೆಲವೊಮ್ಮೆ ಎನ್ನುವ ಶಬ್ಧ ಪ್ರಿಯವಾಗುವುದಿಲ್ಲ, ಸದಾ ಖುಷ್ನುಮಃ (ಪ್ರಸನ್ನಚಿತ್ತ). ಬಾಪ್ದಾದಾರವರು ಇದನ್ನೇ ಬಯಸುತ್ತಾರೆ - ಈ ಕೆಲವೊಮ್ಮೆ ಶಬ್ಧವನ್ನು ಪರಿವರ್ತನೆ ಮಾಡಲು ಸಾಧ್ಯವೇ! ಕೆಲವೊಮ್ಮೆ ಶಬ್ಧವು ಬ್ರಾಹ್ಮಣರ ಶಬ್ಧ ಕೋಶದಲ್ಲಿಯೇ ಇಲ್ಲ, ಸದಾ ಎನ್ನುವ ಶಬ್ಧವಿದೆ. ಅಂದಮೇಲೆ ಇಂದು ಎಲ್ಲಾ ಮಕ್ಕಳು ಯಾರು ತಂದೆಗೆ ಪ್ರಿಯ, ಮಾಯೆಯ ಪ್ರಭಾವದಿಂದ ಭಿನ್ನರಾಗಿದ್ದೀರಿ, ಇಂದು ಈ ಕೆಲವೊಮ್ಮೆ ಶಬ್ಧವನ್ನು ಸಮಾಪ್ತಿ ಮಾಡಲು ಸಾಧ್ಯವೇ? ಮಾಡಲು ಸಾಧ್ಯವಿದೆಯೇ? ಏಕೆಂದರೆ ಬಾಪ್ದಾದಾರವರು ಬಹಳಸಮಯದಿಂದ ಹೇಳುತ್ತಿದ್ದಾರೆ - ಯಾವುದೇ ಏರುಪೇರುಗಳು ಅಚಾನಕ್ ಬರುತ್ತದೆ. ಅದರ ತಯಾರಿಗಾಗಿ ಈಗಿನಿಂದಲೇ ಒಂದುವೇಳೆ ಕೆಲವೊಮ್ಮೆ ಎನ್ನುವಂತಹ ಸಂಸ್ಕಾರವಿರುತ್ತದೆಯೆಂದರೆ ಸದಾಕಾಲದ ರಾಜ್ಯಭಾಗ್ಯದ ಅಧಿಕಾರಿಗಳಾಗಲು ಸಾಧ್ಯವಿದೆಯೇ? ಬ್ರಹ್ಮಾ ತಂದೆಯೊಂದಿಗೆ ಎಲ್ಲರಿಗೂ ಹೃದಯದ ಪ್ರೀತಿಯಿದೆ. ಬ್ರಹ್ಮಾ ತಂದೆಯ ಜೊತೆ ಪ್ರತಿಜ್ಞೆಯಿದೆ - ಜೊತೆಯಿದ್ದೇವೆ, ಜೊತೆಯಲ್ಲಿ ಬರುತ್ತೇವೆ, ಜೊತೆಯಲ್ಲಿ ರಾಜ್ಯ ಮಾಡುತ್ತೇವೆ. ಈ ಪ್ರತಿಜ್ಞೆ ಪಕ್ಕಾ ಇದೆಯಲ್ಲವೆ! ಕತ್ತನ್ನು ಅಲುಗಾಡಿಸಿ. ಪಕ್ಕಾ ಇದೆಯೇ? ಎಷ್ಟು ಪಕ್ಕಾ ಇದೆ! ಬ್ರಹ್ಮಾ ತಂದೆಯು ಕೆಲವೊಮ್ಮೆ ಶಬ್ಧವನ್ನು ಹೇಳಿದರೇ! ತಮ್ಮೆಲ್ಲರಿಗೂ ಸದಾ ಅಮೃತವೇಳೆ ನೆನಪು-ಪ್ರೀತಿಯನ್ನು ಕೊಟ್ಟರು ಮತ್ತು ಸದಾ ತಂದೆಯ ಜೊತೆಗೂಡಿ ಜ್ಞಾನದ ಮಾತು, ಸ್ನೇಹದ ಮಾತುಗಳು, ಉಮ್ಮಂಗ-ಉತ್ಸಾಹದ ಮಾತುಗಳನ್ನು ತಿಳಿಸಿದರು ಅಂದಮೇಲೆ ಬಾಪ್ದಾದಾರವರೊಂದಿಗೆ ಪ್ರೀತಿಯಿದೆ ಆದ್ದರಿಂದ ಎಲ್ಲರಿಂದ ಕೈಯನ್ನೆತ್ತಿಸಿದರೆ ಎರಡೆರಡು ಕೈಯನ್ನೆತ್ತುತ್ತೀರಿ. ಹೌದಲ್ಲವೆ! ಪಕ್ಕಾ! ಯಾವಾಗ ಪ್ರೀತಿಯಿದೆಯೆಂದರೆ ಪ್ರಿಯವಾಗಿರುವವರ ಒಂದೊಂದು ಶಬ್ಧದೊಂದಿಗೂ ಪ್ರೀತಿಯಿರುತ್ತದೆ. ಬ್ರಹ್ಮಾ ತಂದೆಯು ಎಂದೂ ಸಹ ಶಿವ ತಂದೆಯೊಂದಿಗೆ ಇದನ್ನು ಹೇಳಲಿಲ್ಲ - ಕೆಲವೊಮ್ಮೆ ಆಗುತ್ತದೆ. ಸದಾ ಫಾಲೋಫಾದರ್ ಮಾಡಿದರು ಮತ್ತು ಜೊತೆಯಲ್ಲಿ ತಮಗೂ ಮಾಡಿಸಿದರು ಏಕೆಂದರೆ ಬ್ರಹ್ಮಾ ತಂದೆಗೆ ಮಕ್ಕಳೊಂದಿಗೆ ಹೃದಯದ ಪ್ರೀತಿಯಿದೆ ಆದ್ದರಿಂದ ತಮ್ಮ ಹೆಸರೂ ಸಹ ಏನಾಗಿದೆ? ಬ್ರಹ್ಮಾಕುಮಾರಿ ಎಂಬ ಹೆಸರಿದೆ, ಶಿವ ಕುಮಾರಿ ಎನ್ನುವ ಹೆಸರಿಲ್ಲ. ಯಾರಮೇಲೆ ಅರ್ಪಣೆಯಾಗುತ್ತೀರಿ? ಅವರ ಆಜ್ಞೆಯಲ್ಲಿ. ಏನನ್ನು ಹೇಳುವರು ಅದನ್ನು ಮಾಡಿದೆವು ಏಕೆಂದರೆ ಬ್ರಹ್ಮಾ ತಂದೆಯ ಜೊತೆ ಶಿವ ತಂದೆಯಿದ್ದಾರೆ. ಒಬ್ಬರಿಲ್ಲ. ಬಾಪ್ದಾದಾ, ಬಾಪ್ದಾದಾ ಎಂದು ಹೇಳುವಿರಲ್ಲವೆ!

ಇಂದು ಬಾಪ್ದಾದಾರವರು ಪ್ರತಿಯೊಂದು ಮಗುವಿನ ಬಾಯಿಂದ ಕೆಲವೊಮ್ಮೆ ಶಬ್ಧವನ್ನು ಸಮಾಪ್ತಿ ಮಾಡಲು ಬಯಸುತ್ತಾರೆ. ಅಂದಮೇಲೆ ತಾವೆಲ್ಲಾ ಮಕ್ಕಳು ತಂದೆಯ ಜೊತೆಗಾರರಾಗಿದ್ದೀರಿ. ಪ್ರೀತಿಯಿದೆಯಲ್ಲವೆ! ಪ್ರೀತಿಯಲ್ಲಂತು ತಮ್ಮನ್ನು ತಾವೂ ಅರ್ಪಣೆ ಮಾಡಿ ಬಿಡುತ್ತಾರೆ, ಇಲ್ಲಂತು ಕೇವಲ ಶಬ್ಧವನ್ನು ಅರ್ಪಣೆ ಮಾಡಬೇಕಾಗಿದೆ ಏಕೆಂದರೆ ಬಾಪ್ದಾದಾರವರು ಪ್ರತಿಯೊಂದು ಮಕ್ಕಳನ್ನು ಮಾಲೆಯ ವಿಜಯಿ ರತ್ನವನ್ನಾಗಿ ಮಾಡಲು ಬಯಸುತ್ತಾರೆ. ಅಂದಾಗ ತಮ್ಮನ್ನು ಮಾಲೆಯ ಮಣಿಯೆಂದು ತಿಳಿಯುತ್ತೀರಾ? ವಿಜಯಿಯೆಂದು ತಿಳಿಯುತ್ತೀರಾ? ಕೆಲ ಮಕ್ಕಳು ಹೇಳುತ್ತಾರೆ - ಬ್ರಾಹ್ಮಣರ ಸಂಖ್ಯೆಯಂತು ಬಹಳಷ್ಟಾಗಿದೆ ಮತ್ತು ಮಾಲೆಯು 108ರದಾಗಿದೆ ಅಂದಮೇಲೆ 108 ಮಾತ್ರವೇ ಬರುತ್ತಾರಲ್ಲವೆ! ಆದರೆ ಒಂದುವೇಳೆ ತಾವು ಸಂಪನ್ನರಾಗಿ, ವಿಜಯಿಯಾಗುತ್ತೀರೆಂದರೆ 108ರ ಮಾಲೆಯಿದೆಯೆಂದು ಯೋಚಿಸಬಾರದು, ಬಾಪ್ದಾದಾರವರು ಮಧ್ಯದಲ್ಲಿ ಲಡಿಗಳನ್ನು ಸೇರಿಸಿ ಬಿಡುತ್ತಾರೆ ಆದರೆ ತಾವು ವಿಜಯಿಗಳಾಗಬೇಕು. ಕೆಲವು ಮಕ್ಕಳು ಯೋಚಿಸುತ್ತಾರೆ - ನಂಬರ್ ಸಿಗುತ್ತದೆಯೋ ಅಥವಾ ಇಲ್ಲವೋ ಗೊತ್ತಿಲ್ಲ. ಒಂದುವೇಳೆ ತಾವು ಸಂಪನ್ನರಾಗುತ್ತೀರೆಂದರೆ ತಂದೆಯು ಖಂಡಿತ ಅಂಕಗಳನ್ನು ಕೊಡುತ್ತಾರೆ ಏಕೆಂದರೆ ಪ್ರತಿಯೊಂದು ಮಗುವಿನೊಂದಿಗೂ ತಂದೆಗೆ ಪ್ರೀತಿಯಿದೆ. ತಿಳಿಸಿದ್ದೆವಲ್ಲವೆ - ಭಲೆ ಯಾರು ಅಂತಿಮದಲ್ಲಿ ಬಂದಿರುವ ಮಗುವಾಗಿರಲಿ, ಅವರೊಂದಿಗೂ ತಂದೆಯ ಪ್ರೀತಿಯಿದೆ ಏಕೆಂದರೆ ಆ ಮಗು ಭಲೆ ಸ್ವಭಾವಕ್ಕೆ ವಶನಾಗಿರಬಹುದು ಆದರೆ ತಂದೆಯನ್ನು ತಿಳಿದು ನನ್ನ ಬಾಬಾ ಎಂದಂತು ಹೇಳಿದರು. ಪ್ರಪಂಚದಲ್ಲಿ ಎಷ್ಟೊಂದು ದೊಡ್ಡ-ದೊಡ್ಡ ಪದವೀಧರರು ತಂದೆಯನ್ನು ಗುರುತಿಸಲಿಲ್ಲ ಆದರೆ ಅಂತ್ಯದಲ್ಲಿ ಬಂದಿರುವ ಮಕ್ಕಳಂತು ಗುರುತಿಸಿದರು, ಅವರು ಯಾವುದೇ ಬಲಹೀನತೆಗೆ ವಶನಾಗಿರಬಹುದು ಆದರೆ ತಂದೆಯನ್ನಂತು ಗುರುತಿಸಿದರು. ನನ್ನ ಬಾಬಾ ಎಂದು ಪ್ರೀತಿಯಿಂದ ಹೇಳಿದರು ಆದ್ದರಿಂದ ತಂದೆಯವರು ಮೊದಲೂ ತಿಳಿಸಿದ್ದರು - ಅಂತಿಮದ ಮಗುವಿನ ಪ್ರತಿಯೂ ತಂದೆಯ ಪ್ರೀತಿಯಂತು ಇದ್ದೇ ಇದೆ ಆದರೆ ಅವರ ಪ್ರತಿ ವಿಶೇಷವಾದ ಕಲ್ಯಾಣದ ದೃಷ್ಟಿ, ಕಲ್ಯಾಣದ ವೃತ್ತಿಯೂ ಇದೆ - ಈ ಮಗು ಹೇಗಾದರೂ ಮುಂದುವರೆಯುತ್ತಾ ಇರಲಿ ಎಂದು. ಅಂದಮೇಲೆ ಬಾಪ್ದಾದಾರವರು ಇಂದು ಸ್ಪಷ್ಟವಾಗಿ ತಿಳಿಸುತ್ತಿದ್ದಾರೆ - ಇದು ಏಕೆ ಆಯಿತು, ಇದು ಏನಾಗುತ್ತದೆ ಎಂದು ತಾವು ಅನ್ಯ ಮಾತುಗಳನ್ನು ಯೋಚಿಸಬಾರದು, ತಾವು ತಮ್ಮನ್ನು ಯೋಗ್ಯ ಆತ್ಮನನ್ನಾಗಿ ಮಾಡಿಕೊಳ್ಳಿ. ಕರ್ಮ ಯೋಗಿ ಆತ್ಮನನ್ನಾಗಿ ಮಾಡಿಕೊಳ್ಳಿ. ಉಳಿದಂತೆ ತಂದೆಯು ಪ್ರತಿಯೊಂದು ಮಕ್ಕಳನ್ನು ಇಂತಹ ಯೋಗ್ಯಮಗುವಾಗಿ ಯಾರು ತಯಾರಾಗುತ್ತಾರೆ ಅವರಿಗೆ ಸರ್ವ ಪ್ರಾಪ್ತಿಯ ವರದಾನವನ್ನೂ ಸಹ ಕೊಟ್ಟು ಮುಂದುವರೆಸುತ್ತಾರೆ, ಹಿಂದೆ ಇಡುವುದಿಲ್ಲ.

ಬಾಪ್ದಾದಾರವರು ಇಂದು ಅಮೃತವೇಳೆ ದೇಶದಲ್ಲಿರಬಹುದು, ವಿದೇಶದಲ್ಲಿರಬಹುದು ನಾಲ್ಕೂ ಕಡೆ ಪರಿಕ್ರಮಣ ಮಾಡಿದರು. ಹಾಗೆ ನೋಡುವುದಾದರೆ ಬಾಪ್ದಾದಾರವರು ಮೆಜಾರಿಟಿ ಪರಿಕ್ರಮಣ ಹಾಕುತ್ತಲೇ ಇರುತ್ತಾರೆ ಆದರೆ ಇಂದು ಯಾವಾಗ ಪರಿಕ್ರಮಿಸಿದರು, ತಿಳಿಸಿದ್ದೆವಲ್ಲವೆ - ಬಾಪ್ದಾದಾರವರು ಪರಿಕ್ರಮಣ ಮಾಡಲು ಹೋಗುತ್ತಾರೆಂದರೆ ವಿಶೇಷವಾಗಿ ತಮ್ಮ ಪೂರ್ವಜರು ದಾದಿಯರೂ ಸಹ ಜೊತೆಯಲ್ಲಿ ಪರಿಕ್ರಮಣ ಮಾಡಲು ಹೊರಡುತ್ತಾರೆ. ಪರಿಕ್ರಮಣ ಮಾಡುತ್ತಾ ಏನು ನೋಡಿದರು? ತಾವೆಲ್ಲರೂ ತಿಳಿದುಕೊಂಡಿರುತ್ತೀರಿ. ಒಳ್ಳೊಳ್ಳೆಯ ಸಂಕಲ್ಪ ಮಾಡುತ್ತಾರೆ - ಅವಶ್ಯವಾಗಿ ಮಾಡಿತೋರಿಸುತ್ತೇವೆ, ಆಗಿ ತೋರಿಸುತ್ತೇವೆ, ಕೈಯಲ್ಲಿ ಕೈಯನ್ನಿಡಿದು ನಡೆಯುತ್ತೇವೆ ಅಂದಮೇಲೆ ಕೈ ಯಾವುದಾಗಿದೆ? ಶಿವ ತಂದೆಯಂತು ಫರಿಶ್ತಾ ರೂಪದಲ್ಲಿಯೂ ಇಲ್ಲ ಅಂದಮೇಲೆ ಕೈ ಯಾವುದಾಗಿದೆ? ಶ್ರೀಮತವು ಕೈಯಾಗಿದೆ. ವಿದೇಶದಲ್ಲಿ ಫ್ಯಾಷನ್ ಇದೆ - ಕೈಯಲ್ಲಿ ಕೈ ಜೋಡಿಸಿ ನಡೆಯುತ್ತಾರೆ. ಅಂದಮೇಲೆ ಇಲ್ಲಿ ಶ್ರೀಮತವು ಕೈ ಆಗಿದೆ. ತಾವೆಲ್ಲರೂ ಸಹ ಕೈಯಲ್ಲಿ ಕೈ ಜೋಡಿಸಿ ನಡೆಯುವವರಲ್ಲವೆ! ಶಕ್ತಿಯಿದೆಯೇ? ಬ್ರಹ್ಮಾ ತಂದೆಯನ್ನು ನೋಡಿ, ಹೆಜ್ಜೆ-ಹೆಜ್ಜೆಯಲ್ಲಿ ಏನು ಮಾಡಬೇಕು, ಹೇಗೆ ಮಾಡಬೇಕು ಎನ್ನುವುದನ್ನು ಶ್ರೀಮತದಂತೆ ನಡೆದು ತೋರಿಸಿದರು, ತಮ್ಮೆಲ್ಲರಿಗೂ ಉದಾಹರಣೆಯಾದರು. ಸಾಕಾರದಲ್ಲಿ ಉದಾಹರಣೆಯಾಗಿದ್ದರು. ನಿರಾಕಾರನ ಮಾತಂತು ಬಿಟ್ಟು ಬಿಡಿ ಆದರೆ ಬ್ರಹ್ಮಾ ತಂದೆಯು ಸಾಕಾರದಲ್ಲಿ ತಮ್ಮ ಜೊತೆಗಾರನಾಗಿದ್ದರು. ಹೇಗೆ ಬ್ರಹ್ಮಾ ತಂದೆಯು ತಂದೆಯ ಶ್ರೀಮತವೆಂಬ ಕೈಯಲ್ಲಿ ಕೈ ಜೋಡಿಸಿ ಫರಿಶ್ತೆಯಾದರು ಹಾಗೆಯೇ ಫಾಲೋಫಾದರ್ ಮಾಡಬೇಕಲ್ಲವೆ! ಫಾಲೋಫಾದರ್ ನೆನಪಿದೆಯಲ್ಲವೆ! ಏನನ್ನು ಫಾಲೋ ಮಾಡಬೇಕಾಗಿದೆ? ಎಲ್ಲಾ ಮಾತುಗಳನ್ನು ಸ್ಪಷ್ಟ ಮಾಡಿ ತೋರಿಸಿದರು, ಎಲ್ಲರೂ ಬ್ರಹ್ಮಾ ತಂದೆಯ ಚಹರೆ ಮತ್ತು ಚಲನೆಯನ್ನು ತಿಳಿದಿದ್ದೀರಲ್ಲವೆ! ತಮ್ಮ ಬುದ್ಧಿಯ ಮೂಲಕ ಬ್ರಹ್ಮಾ ತಂದೆಯನ್ನಂತು ಇಮರ್ಜ್ ಮಾಡಲು ಸಾಧ್ಯವಿದೆಯಲ್ಲವೆ! ಬ್ರಹ್ಮಾ ತಂದೆಯು ದಿನಚರಿಯನ್ನು ಹೇಗೆ ಮಾಡಿದರು, ಯಾವ ರೀತಿಯಲ್ಲಿ ಮಾಡಿದರು, ಸಾಕಾರ ತನುವಿನಲ್ಲಿ ಇರುತ್ತಾ, ಸಾಕಾರದಲ್ಲಿಯೂ ಎಲ್ಲವನ್ನು ಅನುಭವ ಮಾಡಿದ್ದೀರಿ. ಬ್ರಹ್ಮಾ ತಂದೆಯ ಚರಿತ್ರೆಯನ್ನಂತು ಎಲ್ಲರೂ ತಿಳಿದುಕೊಂಡಿರುತ್ತೀರಿ ಅಂದಮೇಲೆ ಫಾಲೋ ಫಾದರ್. ತಮ್ಮನ್ನು ಪಕ್ಕಾ ಮಾಡಿಕೊಳ್ಳಲು ಬ್ರಹ್ಮಾ ತಂದೆಯ ಪ್ರತಿಯೊಂದು ಹೆಜ್ಜೆಯನ್ನು ರಿವೈಜ್ ಮಾಡಿದ್ದೀರಿ. ಏನೇನು ಮಾಡಿದರು! 8 ಹೆಜ್ಜೆಯನ್ನು ಓದುತ್ತೀರಲ್ಲವೆ. ಅಷ್ಟೇ ಅದನ್ನು ಫಾಲೋ ಮಾಡಬೇಕಾಗಿದೆ. ಫಾಲೋ ಮಾಡುವುದು ಅರ್ಥಾತ್ ಬ್ರಹ್ಮಾ ತಂದೆಯ ಸಮಾನರಾಗುವುದು. ತಂದೆಯೊಂದಿಗೆ ಪ್ರೀತಿಯಿದೆ, ಇಬ್ಬರೂ ತಂದೆಯರೊಂದಿಗೆ ಪ್ರೀತಿಯಿದೆ. ಪ್ರೀತಿ ಎಂದರೆ ಮೊದಲೂ ತಿಳಿಸಿದ್ದೆವು - ಪ್ರೀತಿಯ ಪ್ರಾಕ್ಟಿಕಲ್ ರೂಪವಾಗಿ ಬ್ರಹ್ಮಾ ತಂದೆಯು ಮಾಡುವುದು ಮತ್ತು ಹೇಳುವುದು ಹಾಗೂ ಮಕ್ಕಳನ್ನು ತಂದೆಯ ಸಮಾನ ಮಾಡುವುದು - ಇದಾಗಿದೆ ಸತ್ಯವಾದ ಹೃದಯದ ಪ್ರೀತಿ. ಕೆಲವು ಮಕ್ಕಳು ಏನು ಮಾಡುತ್ತಾರೆ? ಬ್ರಹ್ಮಾ ತಂದೆಯ ಸಮಾನ ಮಾಡಬೇಕು ಎಂದು ಯೋಚಿಸುತ್ತಾರೆ ಆದರೆ ಮೊದಲು ಮಾಡಿದ ನಂತರ ಯೋಚಿಸುತ್ತಾರೆ, ಬ್ರಹ್ಮಾ ತಂದೆಯ ಸಮಾನವಂತು ಮಾಡಲಿಲ್ಲ ಆದರೆ ಕರ್ಮವನ್ನು ಮಾಡಿ ಬಿಟ್ಟಿದ್ದೀರಲ್ಲವೆ. ಆದರೆ ಫಾಲೋ ಮಾಡಬೇಕೆಂದರೆ ಮೊದಲು ಯೋಚಿಸಿ, ಸಂಕಲ್ಪ ಮಾಡುವ ಮೊದಲು ಈ ಸಂಕಲ್ಪವು ಬ್ರಹ್ಮಾ ತಂದೆಯ ಸಂಕಲ್ಪವಾಗಿತ್ತೆ ಎಂದು ಯೋಚಿಸಿ. ಒಂದುವೇಳೆ ಇದೆಯೆಂದರೆ ಪ್ರಾಕ್ಟಿಕಲ್ ಮಾಡಬೇಕಾಗಿದೆ. ಮಾಡಿದ ನಂತರ ಯೋಚಿಸಬಾರದು ಆದರೆ ಮೊದಲು ಯೋಚನೆ ಮಾಡಿ, ನಂತರ ಫಾಲೋ ಮಾಡಬೇಕು. ಬ್ರಹ್ಮಾ ತಂದೆಯನ್ನು ಫಾಲೋ ಮಾಡುವುದು ಅರ್ಥಾತ್ ಬ್ರಹ್ಮಾ ತಂದೆಯ ಸಮಾನರಾಗುವುದು. ಫಾಲೋ ಮಾಡಲು ಸಾಹಸವಿದೆಯೇ? ಸಾಹಸವಿದೆಯೇ? ಮಾಡಲೇಬೇಕು ಎಂದು ಯಾರು ತಿಳಿಯುತ್ತೀರಿ ಅವರು ಕೈಯೆತ್ತಿರಿ. ಮೊದಲು ಯೋಚನೆ ಮಾಡಿ ನಂತರ ಮಾಡಬೇಕಾಗಿದೆ. ಮಾಡಿದ ನಂತರ ಯೋಚಿಸಬಾರದು.

ಇಂದು ಬಾಪ್ದಾದಾರವರು ವಿಶೇಷವಾಗಿ ಪ್ರತಿಯೊಂದು ಮಗುವಿನಲ್ಲಿ ಸಂತುಷ್ಟತೆಯ ಶಕ್ತಿಯನ್ನು ಬ್ರಹ್ಮಾ ತಂದೆಯ ಸಮಾನವಾಗಿ ನೋಡಲು ಬಯಸುತ್ತಾರೆ. ಈ ಒಂದು ಸಂತುಷ್ಟತೆಯ ಶಕ್ತಿಯಲ್ಲಿ ಎಲ್ಲಾ ಶಕ್ತಿಗಳೂ ಬಂದು ಬಿಡುತ್ತವೆ. ಅಂದಮೇಲೆ ಇಂದು ಬಾಪ್ದಾದಾರವರ ವಿಶೇಷ ವರದಾನವಿದೆ – ಸಂತುಷ್ಟತಾ ಶಕ್ತಿ ಭವ. ಏನೇ ಆಗಲಿ, ಎಂದೂ ಸಹ ತಮ್ಮ ಸಂತುಷ್ಟತೆಯನ್ನು ಬಿಡಬಾರದು. ಕೆಲವು ಮಕ್ಕಳು ಹೇಳುತ್ತಾರೆ, ಆತ್ಮಿಕ ವಾರ್ತಾಲಾಪ ಮಾಡುತ್ತಾರಲ್ಲವೆ ಆಗ ಹೇಳುತ್ತಾರೆ - ಸ್ವಯಂ ಸಂತುಷ್ಟರಾಗುವುದು ಸಹಜವಿದೆ ಆದರೆ ಅನ್ಯರನ್ನು ಸಂತುಷ್ಟ ಪಡಿಸುವುದು ಬಹಳ ಕಷ್ಟವಿದೆ. ಯಾರು ಏನೇ ಮಾಡುತ್ತಾರೆ, ಮಾಡುತ್ತಾರೆಂದರೆ ಇವರು ಸರಿಯಿಲ್ಲವೆಂದು ತಾವು ತಿಳಿಯುತ್ತೀರಿ ಅಂದಮೇಲೆ ತಾವು ಸ್ವಯಂ ಹೃದಯದಲ್ಲಿ ಏಕೆ ಇಟ್ಟುಕೊಳ್ಳುತ್ತೀರಿ? ಇವರು ಈ ರೀತಿ ಮಾಡುತ್ತಾರೆ, ಇವರು ಹೀಗೆ ಮಾಡುತ್ತಾರೆ, ಇವರ ಸ್ವಭಾವ ಈ ರೀತಿ ಇದೆ, ಇವರದು ಹೀಗಿದೆ ಎಂದು ಏಕೆ ಇಟ್ಟುಕೊಳ್ಳುತ್ತೀರಿ? ಹೃದಯದಲ್ಲಿ ಇಟ್ಟುಕೊಳ್ಳಬಾರದು ಏಕೆಂದರೆ ತಮ್ಮ ಹೃದಯದಲ್ಲಿ ತಂದೆಯನ್ನು ಕೂರಿಸಿದ್ದೀರಿ. ಕೂರಿಸಿಕೊಂಡಿದ್ದೀರಲ್ಲವೆ? ಕತ್ತನ್ನು ಅಲುಗಾಡಿಸಿ. ಪಕ್ಕಾ ಕೂರಿಸಿದ್ದೀರಾ? ಅಥವಾ ಕೂರಿಸುತ್ತಲೂ ಇರುತ್ತೀರಿ, ತೆಗೆಯುತ್ತಲೂ ಇರುತ್ತೀರಾ? ಒಂದುವೇಳೆ ಕೂರಿಸಿದ್ದೀರೆಂದರೆ ಹೃದಯದಲ್ಲಿ ಮಾತುಗಳನ್ನು ಕೂರಿಸುತ್ತೀರಿ. ಆಗ ತಂದೆಯ ಜೊತೆ ಮಾತುಗಳನ್ನೂ ಇಡುತ್ತೀರಿ. ಹೃದಯದಲ್ಲಿ ಇಡಬಾರದು.

ಬಾಪ್ದಾದಾರವರು ಈ ಯುಕ್ತಿಯನ್ನು ಮೊದಲೇ ತಿಳಿಸಿದ್ದಾರೆ - ಇಂತಹ ಆತ್ಮರ ಪ್ರತಿ ಸದಾ ಶುಭ ಭಾವನೆ, ಶುಭಕಾಮನೆಯನ್ನಿಟ್ಟು ತಮ್ಮ ಕಾಮನೆಯನ್ನು ಕಾರ್ಯದಲ್ಲಿ ತೊಡಗಿಸಿ. ಇವರು ಚೆನ್ನಾಗಿ ಮಾಡುತ್ತಿಲ್ಲವೆಂದರೆ ಅದನ್ನು ತಾವು ಕೆಟ್ಟ ವಸ್ತುವೆಂದು ತಿಳಿಯುತ್ತೀರಿ ಅಂದಮೇಲೆ ಒಂದುವೇಳೆ ಯಾರಾದರೂ ತಮಗೆ ಕೆಟ್ಟ ವಸ್ತುವನ್ನು ಕೊಟ್ಟರೆ ತಾವು ಇಟ್ಟುಕೊಳ್ಳುವಿರಾ? ಯಾವಾಗ ಕೆಟ್ಟ ವಸ್ತುವೆಂದು ತಿಳಿಯುತ್ತೀರೆಂದರೆ ಬುದ್ಧಿಯಲ್ಲಿ ಇಟ್ಟುಕೊಳ್ಳುವುದು, ಹೃದಯದಲ್ಲಿ ಇಟ್ಟುಕೊಂಡಿರೆಂದರೆ ಕೆಟ್ಟ ವಸ್ತುವನ್ನೇಕೆ ತೆಗೆದುಕೊಂಡಿರಿ? ಹಾಗೆಯೇ ತಮ್ಮ ಹೃದಯದಲ್ಲಿ ಸದಾ ತಂದೆಯನ್ನು ಕೂರಿಸಿಕೊಂಡು ತಂದೆಯ ಸಮಾನರಾಗಬೇಕು. ಈ ಪ್ರತಿಜ್ಞೆಯಂತು ಇದೆಯಲ್ಲವೆ, ತಂದೆಯ ಸಮಾನರಾಗಬೇಕಲ್ಲವೆ. ಪಕ್ಕಾ ಆಗುವಿರಾ? ಆಗುತ್ತೇವೆಯೋ ಅಥವಾ ಇಲ್ಲವೋ ಗೊತ್ತಿಲ್ಲ ಎಂದು ಹೇಳುವಿರಾ? ಈ ರೀತಿ ಯೋಚಿಸುವುದಿಲ್ಲವೇ? ಪ್ರೀತಿಯಿದೆ ಎಂದರೆ ಫಾಲೋ ಫಾದರ್. ಅಂದಮೇಲೆ ಬಾಪ್ದಾದಾರವರು ಈಗ ಒಂದೊಂದು ಮಗುವಿಗೆ ಶುಭ ಕಾಮನೆ, ಶುಭ ಭಾವನಾ ಸಂಪನ್ನ ಆತ್ಮರನ್ನಾಗಿ ನೋಡಲು ಬಯಸುತ್ತಾರೆ.

ಟೀಚರ್ಸ್ ಆಗುವಿರಾ? ನಿಮಿತ್ತ ಶಿಕ್ಷಕಿಯರೊಂದಿಗೆ ಬಾಪ್ದಾದಾರವರಿಗೆ ವಿಶೇಷ ಪ್ರೀತಿಯಿದೆ. ಪ್ರೀತಿ ಏಕೆ ಇದೆ? ಏಕೆಂದರೆ ತಂದೆಯ ಗದ್ದುಗೆಯ ಮೇಲೆ ಕುಳಿತುಕೊಳ್ಳುವ ಸಾಹಸವನ್ನಿಟ್ಟಿದ್ದಾರೆ. ಅಂದಮೇಲೆ ನಿಮಿತ್ತ ಶಿಕ್ಷಕಿಯರಿಗೆ ಸಾಹಸವಿದೆಯಲ್ಲವೇ! ಪ್ರತಿಯೊಬ್ಬ ನಿಮಿತ್ತ ಶಿಕ್ಷಕಿಯರಿಂದ ಬಾಬಾರವರು ಇದನ್ನು ಬಯಸುತ್ತಾರೆ - ಪ್ರತಿಯೊಬ್ಬರ ಫೀಚರ್ (ಲಕ್ಷಣ) ನಿಂದ ಫ್ಯೂಚರ್ (ಭವಿಷ್ಯ) ಕಾಣಿಸಲಿ. ನಿಮಿತ್ತ ಶಿಕ್ಷಕಿಯರಿಗೆ ಬಾಪ್ದಾದಾರವರು ಹೇಳುತ್ತಿದ್ದಾರೆ ಆದರೆ ತಾವೆಲ್ಲರೂ ಜೊತೆಗಾರರಲ್ಲವೆ! 75 ವರ್ಷಗಳ ಮೊದಲು ಚಿಕ್ಕ-ಚಿಕ್ಕ ಮಕ್ಕಳಿಗೆ ಬೋರ್ಡಿಂಗ್ನಲ್ಲಿ ಬಾಪ್ದಾದಾರವರು ಇದೇ ಶಿಕ್ಷಣ ಕೊಟ್ಟರು - ಖುಷ್ನುಮಃ ಮತ್ತು ಖುಷ್ಕಿಸ್ಮತ್ (ಭಾಗ್ಯಶಾಲಿ) ಇರುವಂತಹ ಆತ್ಮರಾಗಿದ್ದೀರಿ. ವಾಣಿಯ ಮೂಲಕ ಬಹಳಷ್ಟು ಸೇವೆಯನ್ನು ಮಾಡಿದಿರಿ ಮತ್ತು ಚೆನ್ನಾಗಿ ಮಾಡಿದ್ದೀರಿ, ಅದರ ಸರ್ಟಿಫಿಕೇಟ್ ಇದೆ ಆದರೆ ಈಗ ತಮ್ಮ ಚಹರೆ ಮತ್ತು ಚಲನೆಯಿಂದ ಸೇವೆಯಲ್ಲಿ ಮುಂದುವರೆಯಿರಿ. ಹೇಗೆ ಯಾರಾದರೂ ಬಡವರಾಗಿರುತ್ತಾರೆ ಅವರಿಗೆ ಲಾಟರಿಯಿಂದ ಹಣ ಸಿಕ್ಕಿತೆಂದರೆ ಅವರ ಚಹರೆ ಮತ್ತು ಚಲನೆಯು ಮಾತನಾಡುತ್ತದೆಯಲ್ಲವೆ! ಅವರ ಚಹರೆಯನ್ನು ನೋಡಿ ಎಲ್ಲರೂ ಅನುಭವ ಮಾಡುತ್ತಾರೆ - ಇಂದು ಇವರಿಗೆ ಏನೋ ಸಿಕ್ಕಿದೆ. ಹಾಗೆಯೇ ತಮ್ಮ ಚಲನೆ ಮತು ಚಹರೆಯಿಂದ ಇವರಿಗೆ ವಿಶೇಷವಾಗಿರುವ ಪ್ರಾಪ್ತಿಯಾಗಿದೆ ಎಂದು ಒಪ್ಪಿಕೊಳ್ಳಬೇಕು.

ಇಂದು ಬಾಪ್ದಾದಾರವರು ಏನು ಬಯಸುತ್ತಾರೆ? ಬ್ರಹ್ಮಾ ತಂದೆಯ ಸಮಾನರಾಗಿ. ಫಾಲೋ ಫಾದರ್. ಏಕೆಂದರೆ ಸಮಯದ ಪರಿಸ್ಥಿತಿಗಳಂತು ಏರುಪೇರಿನಲ್ಲಿ ಬರುತ್ತಿದೆ ಮತ್ತು ಮುಂದೆ ಬರುತ್ತಲೂ ಇರುತ್ತದೆ ಆದ್ದರಿಂದ ಬಾಪ್ದಾದಾರವರು ಪ್ರತಿಯೊಂದು ಮಕ್ಕಳಿಗೆ ಇದೇ ಶಿಕ್ಷಣ ಕೊಡಲು ಬಯಸುತ್ತಾರೆ - ಸದಾ ಖುಷಿಯಾಗಿರಿ ಮತ್ತು ಖುಷಿಯನ್ನು ಹಂಚಿ. ಖುಷಿಯನ್ನು ಎಷ್ಟು ಹಂಚುತ್ತೀರಿ ಅಷ್ಟು ಹೆಚ್ಚಾಗುತ್ತದೆ. ತಮ್ಮ ಖುಷಿಯಾಗಿರುವ ಮುಖವನ್ನು ನೋಡಿ ಅನ್ಯರೂ ಸಹ 5 ನಿಮಿಷಕ್ಕಾದರೂ ಖುಷಿಯಾಗಲಿ. ದುಃಖಿ ಆತ್ಮರು ತಮ್ಮನ್ನು ನೋಡಿ 5 ನಿಮಿಷಕ್ಕಾದರೂ ಖುಷಿಯಾಗಿ ಬಿಡುತ್ತಾರೆಂದರೆ ಅವರಿಗಾಗಿ ಇದು ಬಹಳ ಹೃದಯ ಪ್ರಿಯವಾಗುವಂತಹ ಮಾತಾಗಿರುತ್ತದೆ ಅಂದಮೇಲೆ ಬಾಪ್ದಾದಾರವರು ಇಂದು ಪ್ರತಿಯೊಬ್ಬ ಮಕ್ಕಳು ವಿಶೇಷವಾಗಿ ಸಂತುಷ್ಟತೆಯ ಶಕ್ತಿಯನ್ನು ಚಲನೆ ಮತ್ತು ಚಹರೆಯಿಂದ ಧಾರಣೆ ಮಾಡಿ ಮತ್ತು ಅನ್ಯರಿಗೂ ಮಾಡಿಸುವಂತಹ ವಿಶೇಷವಾಗಿ ಗಮನ ಸೆಳೆಯುತ್ತಿದ್ದಾರೆ. ಒಳ್ಳೆಯದು.

ಎಲ್ಲರೂ ಇಂದು ಯಾರು ಮೊದಲಬಾರಿ ಬಂದಿದ್ದೀರಿ ಅವರು ಎದ್ದುನಿಲ್ಲಿರಿ. ನೋಡಿ, ತಮಗೆ ಕಾಣಿಸುತ್ತಿದೆಯೇ. ಅರ್ಧ ಕ್ಲಾಸ್ ಮೊದಲ ಬಾರಿಯದಾಗಿದೆ. ಕೈಯೆತ್ತಿರಿ. ನೋಡಿ ಎಲ್ಲರ ಕೈಯನ್ನು ನೋಡಿ. ಎಷ್ಟೊಂದುಮಂದಿ ತಮ್ಮ ಹೊಸ-ಹೊಸ ಸಹೋದರ-ಸಹೋದರಿಯರು ತಮ್ಮ ಜೊತೆಗಾರರಾಗಿದ್ದಾರೆ. ಶುಭಾಷಯಗಳು, ಬಹಳ-ಬಹಳ ಶುಭಾಷಯಗಳು. ಈಗ ಇಲ್ಲಿಯವರೆಗೆ ಹೇಗೆ ತಲುಪಿದ್ದೀರಲ್ಲವೇ! ಬಾಪ್ದಾದಾರವರೊಂದಿಗೆ ಮಿಲನ ಮಾಡುವವರೆಗೆ ತಲುಪಿದ್ದೀರಿ, ಮುಂದೆ ಏನು ಮಾಡಬೇಕು? ಬ್ರಹ್ಮಾ ತಂದೆಯನ್ನು ಫಾಲೋ ಫಾದರ್ ಮಾಡಬೇಕು. ಬಾಪ್ದಾದಾರವರಿಗೂ ಸಹ ತಾವು ಮಕ್ಕಳನ್ನು ನೋಡಿ ಖುಷಿಯಾಗುತ್ತದೆ - ವಾಹ್! ಮಕ್ಕಳು ಬಂದುಬಿಟ್ಟರು! ತಮ್ಮ ಸಹೋದರ-ಸಹೋದರಿಯರನ್ನು ನೋಡಿ ಇಡೀ ಪರಿವಾರಕ್ಕೂ ಖುಷಿಯಾಗುತ್ತದೆ - ನಮ್ಮ ಸಹೋದರ-ಸಹೋದರಿಯರು ಬಂದು ಬಿಟ್ಟರು, ಬಂದು ಬಿಟ್ಟರು, ಬಂದು ಬಿಟ್ಟರು. ಈಗ ಫಾಲೋ ಬ್ರಹ್ಮಾ ಬಾಬಾ. ಯಾವಾಗ ಏನೇ ಆಗಲಿ, ಯಾವುದೇ ಪ್ರಶ್ನೆಯಿರಲಿ ಅಥವಾ ಸಮಸ್ಯೆಗಳಿರಲಿ, ಸಮಸ್ಯೆಗಳದೇ ಪ್ರಪಂಚವಾಗಿದೆ. ಆಗ ತಕ್ಷಣ ತಮ್ಮ ನಿಮಿತ್ತ ಶಿಕ್ಷಕಿಯರ ಮೂಲಕ ಅದರ ನಿವಾರಣೆ ಮಾಡಿಕೊಳ್ಳಿ. ಎರಡು ದಿನ ಆಯಿತು, ಈ ರೀತಿಯಿದೆ, ಎನ್ನುವಂತೆ ಮಾಡಬಾರದು ಏಕೆಂದರೆ ಬಹಳ ಅಂತ್ಯದಲ್ಲಿ ಬಂದಿದ್ದೀರಲ್ಲವೆ ಮತ್ತು ಬಹಳಷ್ಟು ಮುಂದೆ ಹೋಗಲು ಬಯಸುತ್ತೀರಲ್ಲವೆ! ಹಿಂದೆ ಉಳಿದುಕೊಳ್ಳುವುದು ಬಯಸುತ್ತೀರಾ? ಇಲ್ಲ. ಮುಂದೆ ಹೋಗಲು ಬಯಸುತ್ತೀರೆಂದರೆ ಇದನ್ನು ಮಾಡಬೇಕಾಗಿದೆ - ಹೃದಯದಲ್ಲಿ ಯಾವುದೇ ವ್ಯರ್ಥ ಮಾತುಗಳನ್ನು ಇಟ್ಟುಕೊಳ್ಳಬಾರದು. ಇದಕ್ಕಾಗಿ ಅಮೃತವೇಳೆಯಾದ ನಂತರ ತಂದೆಯೊಂದಿಗೆ ಮಿಲನ ಮಾಡಿದ ನಂತರ, ಒಂದು ಅಮೃತವೇಳೆ ಅವಶ್ಯವಾಗಿ ಮಾಡಬೇಕು ಮತ್ತು ಅದರ ನಂತರ ತಮ್ಮ ಇಡೀ ದಿನದ ದಿನಚರಿಯಲ್ಲಿ ಮನಸ್ಸನ್ನು ಬ್ಯುಜಿಯಿಡುವಂತಹ ಯಾವುದಾದರೂ ಡ್ರಿಲ್ನ್ನು ಮಾಡುತ್ತಿರಬೇಕು. ಬಾಪ್ದಾದಾರವರು ಅನೇಕ ಡ್ರಿಲ್ನ್ನು ತಿಳಿಸಿ ಕೊಟ್ಟಿದ್ದಾರೆ ಆದರೆ ಅದರಲ್ಲಿ ಯಾವುದಾದರೊಂದು ಡ್ರಿಲ್ ಜೊತೆ ಜೊತೆಯಲ್ಲಿ ಮಾಡುತ್ತಿರಬೇಕು. ಬಾಪ್ದಾದಾರವರು ಎಲ್ಲರಿಗಾಗಿ ಹೇಳುತ್ತಾರೆ, ಹಳಬರಾಗಿರಬಹುದು ಅಥವಾ ಹೊಸಬರಿರಬಹುದು - ಮಧ್ಯ-ಮಧ್ಯದಲ್ಲಿ ಸಮಯವನ್ನು ತೆಗೆದು ಅಶರೀರಿಯಾಗುವ ಡ್ರಿಲ್ನ್ನು ಅವಶ್ಯವಾಗಿ ಮಾಡಬೇಕಾಗಿದೆ ಏಕೆಂದರೆ ಬರುವಂತಹ ಸಮಯದಲ್ಲಿ ಸೆಕೆಂಡಿನಲ್ಲಿ ಅಶರೀರಿಯಾಗಬೇಕಾಗುತ್ತದೆ. ಅಂದಮೇಲೆ ಈ ಡ್ರಿಲ್ಗಾಗಿ ಕೆಲವರು ಹೇಳುತ್ತಾರೆ - ಸಮಯ ಸಿಗಲಿಲ್ಲ, ಯಾರೆಷ್ಟೇ ಬ್ಯುಜಿಯಿರಬಹುದು, ಬಾಯಾರಿಕೆಯಾದರೆ ನೀರು ಕುಡಿಯಲು ಏಳುವುದಿಲ್ಲವೇ? ಅವಶ್ಯಕವಾದುದೆಂದು ತಿಳಿದು ಏಳುತ್ತೀರಲ್ಲವೆ. ಅಂದಮೇಲೆ ಈ ಒಂದು ನಿಮಿಷದ ಅಶರೀರಿಯಾಗುವ ಡ್ರಿಲ್ನ ಅಭ್ಯಾಸವನ್ನು ಈಗ ಅವಶ್ಯವಾಗಿ ಮಾಡಬೇಕು. ಆ ಸಮಯದಲ್ಲಿ ಅಭ್ಯಾಸ ಮಾಡಲು ಸಾಧ್ಯವಾಗುವುದಿಲ್ಲ. ಕೆಲವರು ಸಮಯ ಬಂದಾಗ ಮಾಡಿ ಬಿಡುತ್ತೇವೆ ಎಂದು ತಿಳಿಯುತ್ತಾರಲ್ಲವೆ ಆದರೆ ಆಗುವುದಿಲ್ಲ. ಈ ಜನ್ಮ-ಜನ್ಮಾಂತರದ ದೇಹಾಭಿಮಾನದ ಅಭ್ಯಾಸವು ಆ ಸಮಯದಲ್ಲಿ ಅಶರೀರಿಯಾಗಲು ಬಿಟ್ಟು ಕೊಡುವುದಿಲ್ಲ ಆದ್ದರಿಂದ ಈಗಿನಿಂದ ಸಮಯವನ್ನು ತೆಗೆದು ಇಡೀ ದಿನದಲ್ಲಿ ಸಮಯ-ಪ್ರತಿಸಮಯ ಯಾವ ಸಮಯವನ್ನಾದರೂ ನಿಶ್ಚಿತಗೊಳಿಸಿ, ಒಂದು ಸೆಕೆಂಡಿನಲ್ಲಿ ಅಶರೀರಿ ಆತ್ಮನಾಗಿದ್ದೇನೆ, ಆತ್ಮ ಸ್ವರೂಪದಲ್ಲಿ ಸ್ಥಿತರಾಗಿ ಬಿಡಿ. ದೇಹಾಭಿಮಾನವು ತನ್ನಕಡೆ ಸೆಳೆಯಬಾರದು. ಈ ಅಭ್ಯಾಸವನ್ನು ಎಲ್ಲರೂ ಮಾಡಬೇಕಾಗಿದೆ. ಭಲೆ ಹಳಬರಿರಬಹುದು ಅಥವಾ ಹೊಸಬರಿರಬಹುದು ಏಕೆಂದರೆ ಬಾಪ್ದಾದಾರವರು ಸ್ವಲ್ಪ ಸಮಯದಿಂದ ಈ ಮಾತನ್ನು ಹೇಳುತ್ತಿದ್ದಾರೆ ಆದರೆ ಅವಶ್ಯವಾಗಿ ಮಾಡಬೇಕಾಗಿದೆ. ಇಲ್ಲವೆಂದರೆ ಶ್ರೀಮತದ ಕೈಯಲ್ಲಿ ಕೈ ಜೋಡಿಸಿ ನಡೆಯುವುದಕ್ಕೆ ಸಾಧ್ಯವಾಗುವುದಿಲ್ಲ. ತಮ್ಮ ಪ್ರತಿಜ್ಞೆಯಾಗಿದೆ - ಜೊತೆಯಲ್ಲಿ ನಡೆಯುತ್ತೇವೆ, ಜೊತೆಯಲ್ಲಿ ರಾಜ್ಯದಲ್ಲಿ ಬರುತ್ತೇವೆ ಅಂದಮೇಲೆ ಈ ಡ್ರಿಲ್ನ್ನು ಎಲ್ಲರೂ ಮಾಡಬೇಕಾಗಿದೆ. ಉಳಿದಂತೆ ಯಾರೆಲ್ಲಾ ಹೊಸಬರು ಬಂದಿದ್ದೀರಿ, ಖುಷಿಯಾಗಿರಿ, ಪ್ರಸನ್ನರಾಗಿರಿ, ಮುಂದುವರೆಯುತ್ತಾ ಮುಂದೆ ಸಾಗಿರಿ. ಒಳ್ಳೆಯದು.

ಬಾಪ್ದಾದಾರವರು ಸಹೋದರ ನಿರ್ವೈರವರನ್ನು ನಿಲ್ಲಿಸಿದರು.

ಬಾಪ್ದಾದಾರವರು ಸಮಾಚಾರವನ್ನು ಕೇಳಿದ್ದಾರೆ. ತಮ್ಮ ಯಾವ ರೂಪ ರೇಖೆಯನ್ನು (ಯೋಜನೆ) ತಯಾರು ಮಾಡಿದ್ದೀರಿ, ಅದು ಚೆನ್ನಾಗಿದೆ ಮತ್ತು ಮುಂದೆಯೂ ಚೆನ್ನಾಗಿ ಆಗುತ್ತದೆ ಆದ್ದರಿಂದ ಮುಂದುವರೆಸುತ್ತಾ ನಡೆಯಿರಿ. ಬಾಪ್ದಾದಾರವರು ಸಮಾಚಾರವನ್ನು ಕೇಳಿದರು.

ಐ.ಟಿ.ಗ್ರೂಪ್:- ಚಿತ್ರ ಮತ್ತು ಬೋರ್ಡ್ ಸಹ ಚೆನ್ನಾಗಿ ತಯಾರು ಮಾಡುತ್ತೀರಿ. ಬಾಪ್ದಾದಾರವರು ಮೊದಲೇ ತಿಳಿಸಿದ್ದಾರೆ. ಬಾಪ್ದಾದಾರವರು ನೋಡಿದರು - ಪ್ರತಿಯೊಂದು ವರ್ಗದವರು ಏನಾದರೊಂದು ನವೀನತೆಯನ್ನು ಮಾಡುತ್ತಿದ್ದಾರೆ ಮತ್ತು ಈಗ ಪ್ರತಿಯೊಂದು ವರ್ಗದಲ್ಲಿ ಧ್ವನಿ ಮೊಳಗಿದೆ (ವಿಸ್ತಾರಗೊಂಡಿದೆ), ಹೇಗೆ ಡಾಕ್ಟರುಗಳ ಸೇವೆಯಲ್ಲಿ, ಮೆಡಿಕಲ್ ವಿಂಗ್ನಲ್ಲಿ ಈಗ ಹೃದಯದ ಚಿಕಿತ್ಸೆಯನ್ನು ಅಫಿಷಿಯಲ್ ಆಗಿ ಹಾಕಿದ್ದಾರೆ, ಅಂದಮೇಲೆ ಈ ಯಾವ ಅಫಿಶಿಯಲ್ ಪುಸ್ತಕದಲ್ಲಿ ಹಾಕಿದ್ದಾರೆ ಅದನ್ನು ಬಾಪ್ದಾದಾರವರು ನೋಡಿದರು. ಅದು ಜಾಹಿರಾತಿಗಾಗಿ ಚೆನ್ನಾಗಿದೆ. ಹಾಗೆಯೇ ಅನ್ಯ ಜೋನ್ನವರೂ ಸಹ ಒಳ್ಳೊಳ್ಳೆಯ ನಿಮಿತ್ತರಾಗಿರುವರು ಯಾರು ವಿಸ್ತಾರ ಮಾಡಬಹುದು ಅವರೊಂದಿಗೆ ಸಂಬಂಧವನ್ನಿಟ್ಟಿದ್ದೀರಿ ಮತ್ತು ಅವರ ಫಲಿತಾಂಶವೂ ಇದೆ. ಅಂದಮೇಲೆ ಬಾಪ್ದಾದಾರವರು ಪ್ರತಿಯೊಂದು ವರ್ಗದವರಿಗೆ ಇದನ್ನೇ ಹೇಳುತ್ತಾರೆ - ಹೇಗೆ ಈಗ ಮುಂದುವರೆಯುತ್ತಿದ್ದೀರಿ ಹಾಗೆಯೇ ಮತ್ತಷ್ಟು ಮುಂದುವರೆಯುತ್ತಾ ಹೋಗುವಿರೆಂದರೆ ತಮ್ಮಮೇಲೆ ಎಲ್ಲರ ದೃಷ್ಟಿ ಹರಿಯುತ್ತದೆ. ನಿಧಾನ -ನಿಧಾನವಾಗಿ ವಿಶ್ವದಲ್ಲಿ ಪ್ರಸಿದ್ಧರಾಗುವಿರಿ ಆದ್ದರಿಂದ ಬಾಪ್ದಾದಾರವರಿ ಈ ವರ್ಗದವರಿಗೂ ಶುಭಾಷಯಗಳನ್ನು ಕೊಡುತ್ತಿದ್ದಾರೆ. ಎಲ್ಲರೂ ಒಳ್ಳೆಯ ಪುರುಷಾರ್ಥ ಮಾಡುತ್ತಿದ್ದೀರಿ ಮತ್ತು ಪುರುಷಾರ್ಥದ ಜೊತೆ ಬಾಪ್ದಾದಾರವರು ತಮ್ಮ ಜೊತೆಯಿದ್ದಾರೆ. ಒಳ್ಳೆಯದು.

ನಾಲ್ಕೂ ಕಡೆಯ ದೂರದಲ್ಲಿ ಕುಳಿತಿದ್ದರೂ ಹೃದಯದಲ್ಲಿ ಸಮಾವೇಶವಾಗಿರುವಂತಹ ಮಕ್ಕಳನ್ನು ಬಾಪ್ದಾದಾರವರೂ ನೋಡುತ್ತಿದ್ದಾರೆ. ಎಲ್ಲರ ಪ್ರೀತಿಯ ಸುಗಂಧವು ಮಧುಬನದಲ್ಲಿ ತಲುಪುತ್ತಿದೆ. ಅಂದಮೇಲೆ ಎಲ್ಲರೂ ಈಗ ತೀವ್ರ ಗತಿಯಿಂದ ನಡೆಯಬೇಕಾಗಿದೆ, ತೀವ್ರ ಪುರುಷಾರ್ಥ ಮಾಡಬೇಕಾಗಿದೆ, ತೀವ್ರತೆಯು ಪ್ರಪಂಚದ ಮನುಷ್ಯರಲ್ಲಿ ಸುಖವನ್ನು ತರಬೇಕಾಗಿದೆ. ದುಃಖಿಯನ್ನು ಸುಖಿಯನ್ನಾಗಿ ಮಾಡಬೇಕಾಗಿದೆ. ಈ ಸುಖಿಯಾಗುವ ಸಂದೇಶವನ್ನು ಕೊಟ್ಟು ಎಲ್ಲರನ್ನು ಸುಖಿಯನ್ನಾಗಿ ಮಾಡಬೇಕಾಗಿದೆ, ಈ ಸೇವೆಯಲ್ಲಿ ತೀವ್ರತೆಯೂ ಇದೆ ಮತ್ತು ಅವಶ್ಯವಾಗಿ ತೀವ್ರತೆ ತರಬೇಕಾಗಿದೆ. ಒಳ್ಳೆಯದು - ಎಲ್ಲರೂ ಬಹಳ-ಬಹಳ ನೆನಪು-ಪ್ರೀತಿಯನ್ನು ಸ್ವೀಕಾರ ಮಾಡಿರಿ.

ವರದಾನ:
ಸ್ವಯಂನ ವಿಶ್ರಾಂತಿಯನ್ನೂ ತ್ಯಾಗ ಮಾಡಿ ಸೇವೆ ಮಾಡುವಂತಹ ಸದಾ ಸಂತುಷ್ಟ, ಸದಾ ಹರ್ಷಿತ ಭವ.

ಸೇವಾಧಾರಿಗಳು ಸ್ವಯಂನ ರಾತ್ರಿ-ಹಗಲಿನ ವಿಶ್ರಾಂತಿಯನ್ನೂ ತ್ಯಾಗ ಮಾಡಿ, ಸೇವೆಯಲ್ಲಿಯೇ ವಿಶ್ರಾಂತಿಯ ಅನುಭವ ಮಾಡುತ್ತಾರೆ. ಅವರ ಸಂಪರ್ಕದಲ್ಲಿ ಇರುವವರು ಅಥವಾ ಸಂಬಂಧದಲ್ಲಿ ಬರುವವರು ಸಮೀಪತೆಯ ಅನುಭವವನ್ನು ಈ ರೀತಿ ಮಾಡುತ್ತಾರೆ, ಹೇಗೆಂದರೆ ಶೀತಲತೆ ಅಥವಾ ಶಕ್ತಿ, ಶಾಂತಿಯ ಜಲಪಾತದ ಕೆಳಗೆ ಕುಳಿತಿದ್ದೇವೆ. ಶ್ರೇಷ್ಠ ಚಾರಿತ್ರ್ಯವಂತ ಸೇವಾಧಾರಿಯು ಕಾಮಧೇನುವಾಗಿ, ಸದಾಕಾಲಕ್ಕಾಗಿ ಸರ್ವರ ಮನೋಕಾಮನೆಗಳನ್ನು ಪೂರ್ಣಗೊಳಿಸುತ್ತಾರೆ. ಇಂತಹ ಸೇವಾಧಾರಿಗಳಿಗೆ ಸ್ವತಹವಾಗಿಯೇ ಸದಾ ಹರ್ಷಿತ ಮತ್ತು ಸದಾ ಸಂತುಷ್ಟವಾಗಿರುವ ವರದಾನವು ಪ್ರಾಪ್ತಿಯಾಗುತ್ತದೆ.

ಸ್ಲೋಗನ್:
ಜ್ಞಾನ ಸ್ವರೂಪರು ಆಗಬೇಕೆಂದರೆ, ಪ್ರತೀ ಸಮಯದಲ್ಲಿ ಅಧ್ಯಯನದ ಬಗ್ಗೆ ಗಮನವಿಡಿ, ತಂದೆ ಹಾಗೂ ವಿದ್ಯೆಯಲ್ಲಿ ಸಮಾನ ಪ್ರೀತಿಯಿರಲಿ.

ಅವ್ಯಕ್ತ ಸೂಚನೆ:- ಬ್ರಹ್ಮಾ ತಂದೆ ಸಮಾನ ಸಂಪನ್ನ ಮತ್ತು ಸಂಪೂರ್ಣ ಸ್ಥಿತಿಯಲ್ಲಿ ಅನುಭವ ಮಾಡಿರಿ.

ವ್ಯರ್ಥ ಸಂಕಲ್ಪ ಅಥವಾ ವಿಕಲ್ಪ ಏನು ನಡೆಯುತ್ತದೆ ಅದರ ಕಾರಣ ಒಂದೇ ಶಬ್ದ ಬುದ್ಧಿಯಲ್ಲಿ ಬರುತ್ತದೆ ಇದು ಏಕೆ ಆಯಿತು, ಏಕೆಯಿಂದ ವ್ಯರ್ಥ ಸಂಕಲ್ಪಗಳ ಕ್ಯೂ ಶುರುವಾಗುತ್ತದೆ. ಈ ಕ್ಯೂನ ಸಮಾಪ್ತಿಯ ನಂತರವೇ ಸಂಪೂರ್ಣತೆ ಬರುತ್ತದೆ ನಂತರ ಆ ಕ್ಯೂ ನಿಲ್ಲುವುದು. ಯಾವಾಗ ಏಕೆ ಎನ್ನುವ ಶಬ್ದ ಸಮಾಪ್ತಿಯಾಗುತ್ತದೆ ಆಗ ಡ್ರಾಮಾದ ಭಾವಿಯ ಮೇಲೆ ಏಕರಸ ಸ್ಥಿರವಾಗಿರುವುದು.

ವಿಶೇಷ ಸೂಚನೆ:– ತಿಂಗಳಿನ ಮೂರನೇ ರವಿವಾರದ ಯೋಗಾಭ್ಯಾಸ.

ಇಂದು ತಿಂಗಳಿನ ಮೂರನೇ ರವಿವಾರವಾಗಿದೆ, ಎಲ್ಲಾ ಸಹೋದರ ಸಹೋದರಿಯರು ಸಂಘಟಿತ ರೂಪದಲ್ಲಿ ಒಟ್ಟಿಗೆ ಸೇರಿ ಸಂಜೆ 6.30ಯಿಂದ 7.30ರವರೆಗೆ ತಮ್ಮ ಶಕ್ತಿ ಸ್ವರೂಪ ಸ್ಥಿತಿಯಲ್ಲಿ ಸ್ಥಿತರಾಗಿ, ಜ್ಞಾನ ಸೂರ್ಯನ ಶಕ್ತಿಶಾಲಿ ಕಿರಣಗಳನ್ನು ಸ್ವಯಂನಲ್ಲಿ ಧಾರಣೆ ಮಾಡಿ ಆ ಕಿರಣಗಳ ಮೂಲಕ ವಿಶ್ವ ಪರಿವರ್ತನೆಯ ಸೇವೆಯಲ್ಲಿ ಸಹಯೋಗಿಯಾಗಿರಿ.