18.12.24 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ -
ಸರ್ವಶಕ್ತಿವಂತ ತಂದೆಯೊಂದಿಗೆ ಬುದ್ಧಿಯೋಗವನ್ನಿಡುವುದರಿಂದ ಶಕ್ತಿಯೂ ಸಿಗುತ್ತದೆ, ನೆನಪಿನಿಂದಲೇ
ಆತ್ಮರೂಪಿ ಬ್ಯಾಟರಿಯು ಚಾರ್ಜ್ ಆಗುತ್ತದೆ, ಆತ್ಮವು ಪವಿತ್ರ ಸತೋಪ್ರಧಾನವಾಗುತ್ತದೆ”
ಪ್ರಶ್ನೆ:
ಸಂಗಮಯುಗದಲ್ಲಿ
ನೀವು ಮಕ್ಕಳು ಯಾವ ಪುರುಷಾರ್ಥ ಮಾಡುತ್ತೀರಿ, ಅದರ ಫಲದಲ್ಲಿ ದೇವತಾ ಪದವಿಯೇ ಸಿಗುತ್ತದೆ?
ಉತ್ತರ:
ಸಂಗಮಯುಗದಲ್ಲಿ
ನಾವು ಶೀತಲರಾಗುವ ಪುರುಷಾರ್ಥ ಮಾಡುತ್ತೇವೆ. ಶೀತಲ ಅರ್ಥಾತ್ ಪವಿತ್ರರಾಗುವುದರಿಂದ ನಾವು
ದೇವತೆಗಳಾಗಿಬಿಡುತ್ತೇವೆ. ಎಲ್ಲಿಯವರೆಗೆ ಶೀತಲರಾಗುವುದಿಲ್ಲವೋ ಅಲ್ಲಿಯವರೆಗೆ ದೇವತೆಗಳಾಗಲೂ
ಸಾಧ್ಯವಿಲ್ಲ. ಸಂಗಮಯುಗದಲ್ಲಿ ಶೀತಲ ದೇವಿಯರಾಗಿ ಎಲ್ಲರ ಮೇಲೆ ಜ್ಞಾನದ ತಣ್ಣೀರನ್ನು ಹಾಕಿ
ಎಲ್ಲರನ್ನೂ ಶೀತಲಗೊಳಿಸಬೇಕಾಗಿದೆ. ಎಲ್ಲರ ತಾಪವನ್ನು ಕಳೆಯಬೇಕಾಗಿದೆ. ತಾವೂ ಶೀತಲರಾಗಬೇಕು ಮತ್ತು
ಎಲ್ಲರನ್ನೂ ಮಾಡಬೇಕು.
ಓಂ ಶಾಂತಿ.
ಮಕ್ಕಳು ಮೊಟ್ಟಮೊದಲಿಗೆ ಒಂದೇ ಮಾತನ್ನು ತಿಳಿದುಕೊಳ್ಳಬೇಕಾಗಿದೆ - ನಾವೆಲ್ಲರೂ ಸಹೋದರರಾಗಿದ್ದೇವೆ
ಮತ್ತು ಶಿವತಂದೆಯು ಎಲ್ಲರ ತಂದೆಯಾಗಿದ್ದಾರೆ. ಅವರಿಗೆ ಸರ್ವಶಕ್ತಿವಂತನೆಂದು ಕರೆಯಲಾಗುತ್ತದೆ.
ನಿಮ್ಮಲ್ಲಿ ಸರ್ವಶಕ್ತಿಗಳಿತ್ತು, ನೀವು ಇಡೀ ವಿಶ್ವದ ಮೇಲೆ ರಾಜ್ಯ ಮಾಡುತ್ತಿದ್ದಿರಿ, ಭಾರತದಲ್ಲಿ
ಈ ದೇವಿ-ದೇವತೆಗಳ ರಾಜ್ಯವಿತ್ತು, ನೀವೇ ಪವಿತ್ರ ದೇವಿ-ದೇವತೆಗಳಾಗಿದ್ದಿರಿ. ನಿಮ್ಮ ಕುಲ ಅಥವಾ
ರಾಜಧಾನಿಯಲ್ಲಿ ಎಲ್ಲರೂ ನಿರ್ವಿಕಾರಿಗಳಾಗಿದ್ದರು. ಯಾರು ನಿರ್ವಿಕಾರಿಗಳಾಗಿದ್ದರು? ಆತ್ಮಗಳು. ಈಗ
ಪುನಃ ನೀವು ನಿರ್ವಿಕಾರಿಗಳಾಗುತ್ತಿದ್ದೀರಿ, ಸರ್ವಶಕ್ತಿವಂತನ ನೆನಪಿನಿಂದ ಶಕ್ತಿಯನ್ನು
ತೆಗೆದುಕೊಳ್ಳುತ್ತಿದ್ದೀರಿ. ತಂದೆಯು ತಿಳಿಸಿದ್ದಾರೆ - ಆತ್ಮವೇ 84 ಜನ್ಮಗಳ
ಪಾತ್ರವನ್ನಭಿನಯಿಸುತ್ತದೆ ಎಂದು. ಆತ್ಮದಲ್ಲಿಯೇ ಸತೋಪ್ರಧಾನತೆಯ ಶಕ್ತಿಯಿತ್ತು, ಅದು ನಂತರ
ದಿನ-ಪ್ರತಿದಿನ ಕಡಿಮೆಯಾಗುತ್ತಾ ಹೋಗುತ್ತದೆ. ಸತೋಪ್ರಧಾನರಿಂದ ತಮೋಪ್ರಧಾನರಾಗಲೇಬೇಕಾಗಿದೆ. ಹೇಗೆ
ಬ್ಯಾಟರಿಯ ಶಕ್ತಿಯು ಕಡಿಮೆಯಾದಂತೆ ವಾಹನವು ನಿಂತುಹೋಗುತ್ತದೆ. ಬ್ಯಾಟರಿಯು ಖಾಲಿಯಾಗಿಬಿಡುತ್ತದೆ.
ಆತ್ಮದ ಬ್ಯಾಟರಿಯು ಪೂರ್ಣ ಖಾಲಿಯಾಗುವುದಿಲ್ಲ, ಅಲ್ಪಸ್ವಲ್ಪ ಶಕ್ತಿಯಿರುತ್ತದೆ. ಹೇಗೆ ಯಾರಾದರೂ
ಸತ್ತಾಗ ಜ್ಯೋತಿಯನ್ನಿಡುತ್ತಾರೆ, ಅದು ನಂದಿಹೋಗದಿರಲೆಂದು ಅದರಲ್ಲಿ ಎಣ್ಣೆಯನ್ನು ಹಾಕುತ್ತಲೇ
ಇರುತ್ತಾರೆ. ಈಗ ನೀವು ಮಕ್ಕಳು ತಿಳಿದುಕೊಂಡಿದ್ದೀರಿ, ನೀವಾತ್ಮಗಳಲ್ಲಿ ಪೂರ್ಣಶಕ್ತಿಯಿತ್ತು, ಆದರೆ
ಈಗಿಲ್ಲ. ಈಗ ಮತ್ತೆ ನೀವು ಸರ್ವಶಕ್ತಿವಂತ ತಂದೆಯೊಂದಿಗೆ ತಮ್ಮ ಬುದ್ಧಿಯೋಗವನ್ನಿಡುತ್ತೀರಿ,
ತಮ್ಮಲ್ಲಿ ಶಕ್ತಿಯನ್ನು ತುಂಬಿಕೊಳ್ಳುತ್ತೀರಿ ಏಕೆಂದರೆ ತಮ್ಮಲ್ಲಿ ಶಕ್ತಿಯು ಕಡಿಮೆಯಾಗಿಬಿಟ್ಟಿದೆ.
ಶಕ್ತಿಯು ಒಮ್ಮೆಲೆ ಕಡಿಮೆಯಾದರೆ ಶರೀರವೇ ಇರುವುದಿಲ್ಲ. ಆತ್ಮವು ತಂದೆಯನ್ನು ನೆನಪು
ಮಾಡುತ್ತಾ-ಮಾಡುತ್ತಾ ಒಮ್ಮೆಲೆ ಪವಿತ್ರವಾಗಿಬಿಡುತ್ತದೆ. ಸತ್ಯಯುಗದಲ್ಲಿ ನಿಮ್ಮ ಬ್ಯಾಟರಿಯು
ಪೂರ್ಣ ತುಂಬಿರುತ್ತದೆ ನಂತರ ನಿಧಾನವಾಗಿ ಕಲೆಗಳು ಅರ್ಥಾತ್ ಬ್ಯಾಟರಿಯು ಕಡಿಮೆಯಾಗುತ್ತಾ
ಹೋಗುತ್ತದೆ. ಕಲಿಯುಗದ ಅಂತ್ಯದ ಸಮಯಕ್ಕೆ ಆತ್ಮದಲ್ಲಿನ ಶಕ್ತಿಯು ಬಹಳ ಸ್ವಲ್ಪವೇ ಉಳಿಯುತ್ತದೆ.
ಹೇಗೆ ಶಕ್ತಿಯೇ ಹೊರಟುಹೋಗಿಬಿಡುತ್ತದೆ, ತಂದೆಯನ್ನು ನೆನಪು ಮಾಡುವುದರಿಂದ ಆತ್ಮವು ಮತ್ತೆ
ಸಂಪನ್ನವಾಗುತ್ತದೆ ಆದ್ದರಿಂದ ಈಗ ತಂದೆಯು ತಿಳಿಸುತ್ತಾರೆ - ಒಬ್ಬರನ್ನೇ ನೆನಪು ಮಾಡಬೇಕಾಗಿದೆ.
ಸರ್ವಶ್ರೇಷ್ಠನು ಭಗವಂತನಾಗಿದ್ದಾರೆ ಉಳಿದವರೆಲ್ಲರೂ ರಚನೆಯಾಗಿದ್ದಾರೆ. ರಚನೆಯಿಂದ ರಚನೆಗೆ
ಕ್ಷಣಿಕ ಆಸ್ತಿಯು ಸಿಗುತ್ತದೆ. ರಚಯಿತನಂತೂ ಒಬ್ಬರೇ ಪಾರಲೌಕಿಕ ತಂದೆಯಾಗಿದ್ದಾರೆ. ಉಳಿದವರೆಲ್ಲರೂ
ದೇಹಧಾರಿಗಳಾಗಿದ್ದಾರೆ. ಪಾರಲೌಕಿಕ ತಂದೆಯನ್ನು ನೆನಪು ಮಾಡುವುದರಿಂದ ಅಪರಿಮಿತ ಆಸ್ತಿಯು
ಸಿಗುತ್ತದೆ ಅಂದಮೇಲೆ ಮಕ್ಕಳು ಆಂತರ್ಯದಲ್ಲಿ ತಿಳಿಯಬೇಕು - ತಂದೆಯು ನಮಗಾಗಿ ಹೊಸಪ್ರಪಂಚ,
ಸ್ವರ್ಗದ ಸ್ಥಾಪನೆ ಮಾಡುತ್ತಿದ್ದಾರೆ. ನಾಟಕದ ಯೋಜನೆಯನುಸಾರ ಸ್ವರ್ಗದ ಸ್ಥಾಪನೆಯಾಗುತ್ತಿದೆ,
ಇದರಲ್ಲಿ ನೀವು ಮಕ್ಕಳೇ ಬಂದು ರಾಜ್ಯ ಮಾಡುತ್ತೀರಿ. ನಾನಂತೂ ಸದಾ ಪವಿತ್ರನಾಗಿದ್ದೇನೆ. ನಾನೆಂದೂ
ಗರ್ಭದಿಂದ ಜನ್ಮ ಪಡೆಯುವುದಿಲ್ಲ ಅಥವಾ ದೇವಿ-ದೇವತೆಗಳ ಥರಹ ಜನ್ಮ ಪಡೆಯುವುದಿಲ್ಲ. ಕೇವಲ ನೀವು
ಮಕ್ಕಳಿಗೆ ಸ್ವರ್ಗದ ರಾಜ್ಯಭಾಗ್ಯವನ್ನು ಕೊಡಲು ಈ ಬ್ರಹ್ಮಾರವರು 60 ವರ್ಷದ ವಾನಪ್ರಸ್ಥ
ಸ್ಥಿತಿಯಲ್ಲಿದ್ದಾಗ ಇವರ ತನುವಿನಲ್ಲಿ ನಾನು ಪ್ರವೇಶ ಮಾಡುತ್ತೇನೆ. ಇವರೇ ಮತ್ತೆ ಪೂರ್ಣ
ತಮೋಪ್ರಧಾನರಿಂದ ಸಂಪೂರ್ಣ ಸತೋಪ್ರಧಾನರಾಗುತ್ತಾರೆ. ಭಗವಂತನು ಸರ್ವಶ್ರೇಷ್ಠನಾಗಿದ್ದಾರೆ ನಂತರ
ಬ್ರಹ್ಮಾ-ವಿಷ್ಣು-ಶಂಕರ ಸೂಕ್ಷ್ಮವತನವಾಸಿಗಳು. ಈ ಬ್ರಹ್ಮಾ-ವಿಷ್ಣು-ಶಂಕರ ಎಲ್ಲಿಂದ ಬಂದರು? ಇದು
ಕೇವಲ ಸಾಕ್ಷಾತ್ಕಾರವಾಗುತ್ತದೆ. ಈ ಸೂಕ್ಷ್ಮವತನವು ನಡುವಿನದಾಗಿದೆ, ಅಲ್ಲಿ ಶರೀವೇ ಇಲ್ಲ ಕೇವಲ
ಸೂಕ್ಷ್ಮಶರೀರವನ್ನು ದಿವ್ಯದೃಷ್ಟಿಯಿಂದಲೇ ನೋಡಲಾಗುತ್ತದೆ. ಬ್ರಹ್ಮಾರವರಂತೂ
ಶ್ವೇತವಸ್ತ್ರಧಾರಿಯಾಗಿದ್ದಾರೆ ಮತ್ತು ವಿಷ್ಣು ವಜ್ರ-ವೈಡೂರ್ಯದಿಂದ ಶೃಂಗರಿಸಲ್ಪಟ್ಟಿದ್ದಾರೆ
ಮತ್ತು ಶಂಕರನ ಕೊರಳಿನಲ್ಲಿ ಸರ್ಪವನ್ನು ತೋರಿಸುತ್ತಾರೆ. ಇಂತಹ ಶಂಕರ ಮೊದಲಾದವರು ಯಾರೂ ಇರಲು
ಸಾಧ್ಯವಿಲ್ಲ. ಅಮರನಾಥದಲ್ಲಿ ಶಂಕರನು ಪಾರ್ವತಿಗೆ ಅಮರಕಥೆಯನ್ನು ತಿಳಿಸಿದರೆಂದು ತೋರಿಸುತ್ತಾರೆ.
ಸೂಕ್ಷ್ಮವತನದಲ್ಲಂತೂ ಮನುಷ್ಯಸೃಷ್ಟಿಯಿಲ್ಲ ಅಂದಮೇಲೆ ಅಲ್ಲಿ ಕಥೆಯನ್ನು ಹೇಗೆ ತಿಳಿಸುತ್ತಾರೆ?
ಬಾಕಿ ಸೂಕ್ಷ್ಮವತನದ ಕೇವಲ ಸಾಕ್ಷಾತ್ಕಾರ ಆಗುತ್ತದೆಯಷ್ಟೆ. ಯಾರು ಸಂಪೂರ್ಣ ಪವಿತ್ರರಾಗುವರೋ ಅವರ
ಸಾಕ್ಷಾತ್ಕಾರವಾಗುವುದು. ಇವರೇ ನಂತರ ಸತ್ಯಯುಗದಲ್ಲಿ ಹೋಗಿ ಸ್ವರ್ಗದ ಮಾಲೀಕರಾಗುತ್ತಾರೆ. ಅಂದಮೇಲೆ
ಬುದ್ಧಿಯಲ್ಲಿ ಬರಬೇಕು. ಇವರು ಈ ರಾಜ್ಯಭಾಗ್ಯವನ್ನು ಹೇಗೆ ಪಡೆದರು? ಯುದ್ಧ ಇತ್ಯಾದಿಯೇನೂ
ನಡೆಯುವುದಿಲ್ಲ. ದೇವತೆಗಳು ಹಿಂಸೆಯನ್ನು ಹೇಗೆ ಮಾಡುತ್ತಾರೆ! ಈಗ ನೀವು ತಂದೆಯನ್ನು ನೆನಪು ಮಾಡಿ,
ರಾಜ್ಯಭಾಗ್ಯವನ್ನು ಪಡೆಯುತ್ತೀರಿ. ಇದನ್ನು ಯಾರಾದರೂ ಒಪ್ಪಲಿ, ಒಪ್ಪದಿರಲಿ. ದೇಹಸಹಿತ ದೇಹದ ಎಲ್ಲಾ
ಧರ್ಮಗಳನ್ನು ಮರೆತು ನನ್ನೊಬ್ಬನನ್ನೇ ನೆನಪು ಮಾಡಿ ಎಂದು ಗೀತೆಯಲ್ಲಿಯೂ ಇದೆ. ಶರೀರದಲ್ಲಿ
ಮಮತ್ವವಿರಲು ತಂದೆಗೆ ಶರೀರವೇ ಇಲ್ಲ. ಆದ್ದರಿಂದಲೇ ಹೇಳುತ್ತಾರೆ - ನಾನು ಸ್ವಲ್ಪಸಮಯಕ್ಕಾಗಿ ಇದರ
ಆಧಾರವನ್ನು ತೆಗೆದುಕೊಳ್ಳುತ್ತೇನೆ ಇಲ್ಲವೆಂದರೆ ಜ್ಞಾನವನ್ನು ಹೇಗೆ ಕೊಡಲಿ? ನಾನು ಈ ವೃಕ್ಷದ
ಚೈತನ್ಯ ಬೀಜರೂಪನಾಗಿದ್ದೇನೆ, ಈ ವೃಕ್ಷದ ಜ್ಞಾನವು ನನ್ನ ಹತ್ತಿರವೇ ಇದೆ. ಈ ಸೃಷ್ಟಿಯ ಆಯಸ್ಸು
ಎಷ್ಟು? ಉತ್ಪತ್ತಿ, ಪಾಲನೆ, ವಿನಾಶವು ಹೇಗಾಗುತ್ತದೆ. ಇದು ಮನುಷ್ಯರಿಗೆ ಸ್ವಲ್ಪವೂ ಗೊತ್ತಿಲ್ಲ.
ಅವರು ಲೌಕಿಕ ವಿದ್ಯೆಯನ್ನು ಓದುತ್ತಾರೆ, ತಂದೆಯಂತೂ ಪಾರಲೌಕಿಕ ವಿದ್ಯೆಯನ್ನು ಓದಿಸಿ ಮಕ್ಕಳನ್ನು
ವಿಶ್ವದ ಮಾಲೀಕರನ್ನಾಗಿ ಮಾಡುತ್ತಾರೆ.
ದೇಹಧಾರಿ ಮನುಷ್ಯರಿಗೆ
ಎಂದೂ ಭಗವಂತನೆಂದು ಕರೆಯಲು ಸಾಧ್ಯವಿಲ್ಲ. ಇವರಿಗೂ (ಬ್ರಹ್ಮಾ-ವಿಷ್ಣು-ಶಂಕರ) ಸಹ ತಮ್ಮ ಸೂಕ್ಷ್ಮ
ದೇಹವಿದೆ ಆದ್ದರಿಂದ ಇವರಿಗೂ ಭಗವಂತನೆಂದು ಹೇಳುವುದಿಲ್ಲ. ಈ ಶರೀರವು ಈ ದಾದಾರವರ ಆತ್ಮದ
ಸಿಂಹಾಸನವಾಗಿದೆ. ಅಕಾಲ ಸಿಂಹಾಸನವಾಗಿದೆಯಲ್ಲವೆ. ಇದು ಅಕಾಲಮೂರ್ತಿ ತಂದೆಯ ಸಿಂಹಾಸನವಾಗಿದೆ.
ಅಮೃತಸರದಲ್ಲಿಯೂ ಅಕಾಲ ಸಿಂಹಾಸನವಿದೆ, ಯಾರು ದೊಡ್ಡ-ದೊಡ್ಡವರಿರುವರೋ ಅವರು ಅಕಾಲ ಸಿಂಹಾಸನದ ಮೇಲೆ
ಹೋಗಿ ಕುಳಿತುಕೊಳ್ಳುತ್ತಾರೆ. ಈಗ ತಂದೆಯು ತಿಳಿಸುತ್ತಾರೆ - ಇವೆಲ್ಲವೂ (ಶರೀರಗಳು) ಆತ್ಮಗಳ
ಸಿಂಹಾಸನಗಳಾಗಿವೆ. ಆತ್ಮದಲ್ಲಿಯೇ ಒಳ್ಳೆಯ ಅಥವಾ ಕೆಟ್ಟ ಸಂಸ್ಕಾರವಿರುತ್ತದೆ. ಆದ್ದರಿಂದಲೇ ಇದು
ಕರ್ಮಗಳ ಫಲವೆಂದು ಹೇಳುತ್ತಾರೆ. ಎಲ್ಲಾ ಆತ್ಮಗಳಿಗೆ ತಂದೆಯು ಒಬ್ಬರೇ ಆಗಿದ್ದಾರೆ. ತಂದೆಯು ಯಾವುದೇ
ಶಾಸ್ತ್ರ ಮೊದಲಾದುವುಗಳನ್ನು ಓದಿ ತಿಳಿಸುವುದಿಲ್ಲ, ಈ ಮಾತುಗಳು ಶಾಸ್ತ್ರಗಳಲ್ಲಿಲ್ಲ ಆದ್ದರಿಂದಲೇ
ಮನುಷ್ಯರು ಸಿಡುಕುತ್ತಾರೆ ಮತ್ತು ಇವರು ಶಾಸ್ತ್ರಗಳನ್ನು ಒಪ್ಪುವುದೇ ಇಲ್ಲ ಎಂದು ಹೇಳುತ್ತಾರೆ.
ಸಾಧು-ಸಂತ ಮೊದಲಾದವರು ಗಂಗೆಯಲ್ಲಿ ಹೋಗಿ ಸ್ನಾನ ಮಾಡಿ ಪಾವನರಾಗಿಬಿಟ್ಟರೆ? ಯಾರೂ ಹಿಂತಿರುಗಿ
ಹೋಗಲು ಸಾಧ್ಯವಿಲ್ಲ, ಎಲ್ಲರೂ ಅಂತಿಮದಲ್ಲಿಯೇ ಹೋಗುತ್ತಾರೆ. ಹೇಗೆ ನೊಣಗಳ ಗುಂಪು ಹಾಗೂ ಸೊಳ್ಳೆಗಳ
ಗುಂಪು ಹೋಗುವುದೋ ಹಾಗೆಯೇ ಹೋಗುತ್ತಾರೆ. ನೊಣಗಳಲ್ಲಿಯೂ ರಾಣಿನೊಣವಿರುತ್ತದೆ, ಅದರ ಹಿಂದೆ ಎಲ್ಲವೂ
ಹೋಗುತ್ತವೆ ಹಾಗೆಯೇ ತಂದೆಯು ಹೋದಾಗ ಅವರ ಹಿಂದೆ ಎಲ್ಲಾ ಆತ್ಮಗಳು ಹೋಗುತ್ತಾರೆ. ಮೂಲವತನದಲ್ಲಿಯೂ
ಎಲ್ಲಾ ಆತ್ಮಗಳ ಸಮೂಹವಿದೆ, ಮತ್ತೆ ಇಲ್ಲಿ ಎಲ್ಲಾ ಮನುಷ್ಯರ ಸಮೂಹವಿದೆ, ಈ ಸಮೂಹವೂ ಸಹ ಒಂದು ದಿನ
ಇಲ್ಲಿಬಿಟ್ಟು ಹೋಗಬೇಕಾಗಿದೆ. ತಂದೆಯು ಬಂದು ಎಲ್ಲಾ ಆತ್ಮಗಳನ್ನು ಕರೆದುಕೊಂಡು ಹೋಗುತ್ತಾರೆ.
ಶಿವನ ಮೆರವಣಿಗೆಯ ಗಾಯನವಿದೆ. ಮಕ್ಕಳೆಂದಾದರೂ ಹೇಳಿ, ಹೆಣ್ಣು ಮಕ್ಕಳೆಂದಾದರೂ ಹೇಳಿ ತಂದೆಯು ಬಂದು
ಮಕ್ಕಳಿಗೆ ನೆನಪಿನ ಯಾತ್ರೆಯನ್ನು ಕಲಿಸುತ್ತಾರೆ. ಪವಿತ್ರವಾಗದೆ ಆತ್ಮವು ಹಿಂತಿರುಗಿ ಮನೆಗೆ ಹೋಗಲು
ಸಾಧ್ಯವಿಲ್ಲ. ಯಾವಾಗ ಪವಿತ್ರವಾಗುವುದೋ ಆಗ ಮೊದಲು ಶಾಂತಿಧಾಮದಲ್ಲಿ ಹೋಗುತ್ತಾರೆ ಮತ್ತೆ ಅಲ್ಲಿಂದ
ನಿಧಾನ-ನಿಧಾನವಾಗಿ ಬರುತ್ತಾ ಇರುತ್ತಾರೆ, ವೃದ್ಧಿಯಾಗುತ್ತಾ ಇರುತ್ತದೆ. ರಾಜಧಾನಿಯಾಗಬೇಕಲ್ಲವೆ.
ಎಲ್ಲರೂ ಒಟ್ಟಿಗೆ ಬರುವುದಿಲ್ಲ, ವೃಕ್ಷವು ನಿಧಾನ-ನಿಧಾನವಾಗಿ ವೃದ್ಧಿ ಹೊಂದುತ್ತದೆಯಲ್ಲವೆ!
ಮೊಟ್ಟಮೊದಲಿಗೆ ಆದಿಸನಾತನ ದೇವಿ-ದೇವತಾಧರ್ಮವಿರುತ್ತದೆ ಅದನ್ನು ತಂದೆಯು ಸ್ಥಾಪನೆ ಮಾಡುತ್ತಾರೆ.
ಯಾರು ದೇವತೆಗಳಾಗಬೇಕಾಗಿದೆಯೋ ಅವರೇ ಮೊಟ್ಟಮೊದಲಿಗೆ ಬ್ರಾಹ್ಮಣರಾಗುತ್ತಾರೆ.
ಬ್ರಹ್ಮಾಕುಮಾರ-ಕುಮಾರಿಯರಂತೂ ಇಲ್ಲಿ ಅನೇಕರಾಗುತ್ತಾರೆ, ಅವಶ್ಯವಾಗಿ ನಿಶ್ಚಯಬುದ್ಧಿಯವರಾದಾಗಲೇ
ಅಷ್ಟು ಹೆಚ್ಚಿನ ಅಂಕಗಳನ್ನು ತೆಗೆದುಕೊಳ್ಳುತ್ತಾರೆ. ನಿಮ್ಮಲ್ಲಿ ಯಾರು ಪಕ್ಕಾ ಇದ್ದಾರೆಯೋ ಅವರು
ಸತ್ಯಯುಗದಲ್ಲಿ ಮೊದಲಿಗೆ ಬರುತ್ತಾರೆ. ಸಂಶಯಬುದ್ಧಿಯವರು ಕೊನೆಯಲ್ಲಿಯೇ ಬರುತ್ತಾರೆ. ಮೂಲವತನದಲ್ಲಿ
ಎಲ್ಲಾ ಆತ್ಮಗಳಿರುತ್ತಾರೆ ನಂತರ ಕೆಳಗೆ ಬಂದಾಗ ವೃದ್ಧಿಯಾಗುತ್ತಾ ಹೋಗುತ್ತದೆ. ಶರೀರವಿಲ್ಲದೆ
ಆತ್ಮವು ಹೇಗೆ ಪಾತ್ರವನ್ನಭಿನಯಿಸುವುದು? ಇದು ಪಾತ್ರಧಾರಿಗಳ ಪ್ರಪಂಚವಾಗಿದೆ. ಇವರು
ನಾಲ್ಕೂಯುಗಗಳಲ್ಲಿ ತಿರುಗುತ್ತಾ ಇರುತ್ತಾರೆ, ಸತ್ಯಯುಗದಲ್ಲಿ ನಾವೇ ದೇವತೆಗಳಾಗಿದ್ದೆವು ನಂತರ
ಕ್ಷತ್ರಿಯ, ವೈಶ್ಯ, ಶೂದ್ರರಾಗುತ್ತೇವೆ. ಈಗ ಇದು ಪುರುಷೋತ್ತಮ ಸಂಗಮಯುಗವಾಗಿದೆ. ತಂದೆಯು ಬಂದಾಗಲೇ
ಈ ಯುಗವಾಗುತ್ತದೆ. ಈ ಬೇಹದ್ದಿನ ಜ್ಞಾನವನ್ನು ಈಗ ಬೇಹದ್ದಿನ ತಂದೆಯೇ ತಿಳಿಸುತ್ತಾರೆ. ಶಿವತಂದೆಗೆ
ತಮ್ಮ ಶರೀರದ ಯಾವುದೇ ಹೆಸರಿಲ್ಲ, ಈ ಶರೀರವಂತೂ ದಾದಾರವರದಾಗಿದೆ. ತಂದೆಯು ಇದನ್ನು
ಸ್ವಲ್ಪಸಮಯಕ್ಕಾಗಿ ಆಧಾರವಾಗಿ ತೆಗೆದುಕೊಂಡಿದ್ದಾರೆ. ತಂದೆಯು ತಿಳಿಸುತ್ತಾರೆ - ನಿಮ್ಮೊಂದಿಗೆ
ಮಾತನಾಡಲು ನನಗೆ ಮುಖವು ಬೇಕಲ್ಲವೆ. ಮುಖವಿಲ್ಲದಿದ್ದರೆ ತಂದೆಯು ಮಕ್ಕಳೊಂದಿಗೆ ಮಾತನಾಡುವುದಕ್ಕೂ
ಸಾಧ್ಯವಿಲ್ಲ. ಬೇಹದ್ದಿನ ಜ್ಞಾನವನ್ನು ಈ ಮುಖದಿಂದಲೇ ತಿಳಿಸುತ್ತೇನೆ, ಆದ್ದರಿಂದ ಇದಕ್ಕೆ
ಗೋಮುಖವೆಂದು ಹೇಳುತ್ತಾರೆ. ಪರ್ವತಗಳಿಂದ ನೀರು ಎಲ್ಲಿಂದಲಾದರೂ ಬರುವ ಸಾಧ್ಯತೆಯಿದೆ, ಮತ್ತೆ ಇಲ್ಲಿ
ಗೋಮುಖವನ್ನು ಮಾಡಿದ್ದಾರೆ, ಅದರಿಂದ ನೀರು ಬರುತ್ತದೆ. ಅದನ್ನವರು ಗಂಗಾಜಲವೆಂದು ತಿಳಿದು
ಕುಡಿಯುತ್ತಾರೆ. ಆ ನೀರಿಗೆ ಎಷ್ಟೊಂದು ಮಹತ್ವಿಕೆಯಿಡುತ್ತಾರೆ. ಈ ಪ್ರಪಂಚದಲ್ಲಿ ಎಲ್ಲವೂ
ಅಸತ್ಯವಾಗಿದೆ, ಒಬ್ಬ ತಂದೆಯೇ ಸತ್ಯವನ್ನು ತಿಳಿಸುತ್ತಾರೆ. ಮತ್ತೆ ಅಸತ್ಯ ಮನುಷ್ಯರು ತಂದೆಯ
ಜ್ಞಾನವನ್ನೂ ಸಹ ಅಸತ್ಯವೆಂದು ತಿಳಿಯುತ್ತಾರೆ. ಭಾರತದಲ್ಲಿ ಸತ್ಯಯುಗವಿದ್ದಾಗ ಇದಕ್ಕೆ
ಸತ್ಯಖಂಡವೆಂದು ಕರೆಯಲಾಗುತ್ತಿತ್ತು, ಮತ್ತೆ ಭಾರತವೇ ಹಳೆಯದಾದಾಗ ಪ್ರತೀ ಮಾತು, ಪ್ರತೀ ವಸ್ತು
ಅಸತ್ಯವಾಗುತ್ತದೆ. ಎಷ್ಟೊಂದು ಅಂತರವಾಗಿಬಿಡುತ್ತದೆ! ತಂದೆಯು ತಿಳಿಸುತ್ತಾರೆ - ನೀವು ನನಗೆ
ಎಷ್ಟೊಂದು ನಿಂದನೆ ಮಾಡುತ್ತೀರಿ, ಸರ್ವವ್ಯಾಪಿ ಎಂದು ಹೇಳಿ ಎಷ್ಟೊಂದು ನಿಂದನೆ ಮಾಡಿದ್ದೀರಿ. ಈ
ಹಳೆಯ ಪ್ರಪಂಚದಿಂದ ನಮ್ಮನ್ನು ಕರೆದುಕೊಂಡು ಹೋಗಿ ಎಂದು ಶಿವತಂದೆಯನ್ನು ಕರೆಯುತ್ತೀರಿ. ತಂದೆಯು
ಹೇಳುತ್ತಾರೆ - ನನ್ನ ಎಲ್ಲಾ ಮಕ್ಕಳು ಕಾಮಚಿತೆಯನ್ನೇರಿ ಕಂಗಾಲಾಗಿಬಿಟ್ಟಿದ್ದೀರಿ. ತಂದೆಯು
ಮಕ್ಕಳಿಗೇ ಹೇಳುತ್ತಾರೆ - ನೀವು ಸ್ವರ್ಗದ ಮಾಲೀಕರಾಗಿದ್ದಿರಲ್ಲವೆ. ಸ್ಮೃತಿಯು ಬರುತ್ತಿದೆಯೇ?
ಮಕ್ಕಳಿಗೇ ತಿಳಿಸುತ್ತಾರೆ, ಇಡೀ ಪ್ರಪಂಚಕ್ಕಂತೂ ತಿಳಿಸುವುದಿಲ್ಲ. ಮಕ್ಕಳೇ ತಂದೆಯನ್ನರಿಯುತ್ತೀರಿ,
ಈ ಮಾತು ಪ್ರಪಂಚಕ್ಕೇನು ಗೊತ್ತು!
ಎಲ್ಲದಕ್ಕಿಂತ
ದೊಡ್ಡಮುಳ್ಳು ಕಾಮವಿಕಾರದ್ದಾಗಿದೆ. ಹೆಸರೇ ಆಗಿದೆ - ಪತಿತಪ್ರಪಂಚ. ಸತ್ಯಯುಗವು 100%
ಪವಿತ್ರವಾಗಿದೆ. ಮನುಷ್ಯರೇ ಪವಿತ್ರ ದೇವತೆಗಳ ಮುಂದೆ ಹೋಗಿ ನಮಸ್ಕಾರ ಮಾಡುತ್ತಾರೆ. ಭಲೆ ಅನೇಕ
ಭಕ್ತರು ಸಸ್ಯಹಾರಿಗಳಿದ್ದಾರೆ ಆದರೆ ಅವರು ವಿಕಾರದಲ್ಲಿ ಹೋಗುವುದಿಲ್ಲವೆಂದಲ್ಲ. ಹೀಗೆ ಅನೇಕ
ಬಾಲಬ್ರಹ್ಮಚಾರಿಗಳು ಇರುತ್ತಾರೆ. ಬಾಲ್ಯದಿಂದ ಎಂದೂ ಕೆಟ್ಟಪದಾರ್ಥ ಇತ್ಯಾದಿಗಳನ್ನು
ತಿನ್ನುವುದಿಲ್ಲ. ಸನ್ಯಾಸಿಗಳೂ ಸಹ ನಿರ್ವಿಕಾರಿಗಳಾಗಿ ಎಂದು ಹೇಳುತ್ತಾರೆ. ಮನೆ-ಮಠದ ಸನ್ಯಾಸ
ಮಾಡುತ್ತಾರೆ ಮತ್ತೆ ಇನ್ನೊಂದು ಜನ್ಮದಲ್ಲಿ ಯಾರಾದರೂ ಗೃಹಸ್ಥಿಯ ಬಳಿ ಜನ್ಮ ತೆಗೆದುಕೊಂಡು ಮತ್ತೆ
ಮನೆ-ಮಠವನ್ನು ಬಿಟ್ಟು ಕಾಡಿಗೆ ಹೊರಟುಹೋಗುತ್ತಾರೆ ಆದರೆ ಪತಿತರಿಂದ ಪಾವನರಾಗುತ್ತಾರೆಯೇ? ಇಲ್ಲ.
ಪತಿತ-ಪಾವನ, ತಂದೆಯ ಶ್ರೀಮತವಿಲ್ಲದೆ ಯಾರೂ ಪತಿತರಿಂದ ಪಾವನರಾಗಲು ಸಾಧ್ಯವಿಲ್ಲ. ಭಕ್ತಿಯು
ಇಳಿಯುವ ಕಲೆಯಾಗಿದೆ ಅಂದಮೇಲೆ ಪಾವನರು ಹೇಗೆ ಆಗುತ್ತಾರೆ? ಪಾವನರಾದರೆ ಮನೆಗೆ ಹೋಗುವರು,
ಸ್ವರ್ಗದಲ್ಲಿ ಬಂದುಬಿಡುವರು. ಸತ್ಯಯುಗೀ ದೇವತೆಗಳು ಎಂದಾದರೂ ಮನೆ-ಮಠವನ್ನು ಬಿಡುತ್ತಾರೆಯೇ?
ಸನ್ಯಾಸಿಗಳದು ಹದ್ದಿನ ಸನ್ಯಾಸವಾಗಿದೆ, ನಿಮ್ಮದು ಬೇಹದ್ದಿನ ಸನ್ಯಾಸವಾಗಿದೆ ಅಂದರೆ ಇಡೀ ಪ್ರಪಂಚ,
ಮಿತ್ರಸಂಬಂಧಿಗಳು ಇತ್ಯಾದಿ ಮತ್ತೆಲ್ಲದರ ಸನ್ಯಾಸ. ನಿಮಗಾಗಿ ಈಗ ಸ್ವರ್ಗದ ಸ್ಥಾಪನೆಯಾಗುತ್ತಿದೆ.
ನಿಮ್ಮ ಬುದ್ಧಿಯು ಸ್ವರ್ಗದಕಡೆ ಇದೆ. ಮನುಷ್ಯರಂತೂ ನರಕದಲ್ಲಿಯೇ ಸಿಲುಕಿದ್ದಾರೆ. ನೀವು ಮಕ್ಕಳು
ತಂದೆಯ ನೆನಪಿನಲ್ಲಿ ತೊಡಗಿದ್ದೀರಿ.
ನಿಮ್ಮನ್ನು ಶೀತಲ
ದೇವಿಯರನ್ನಾಗಿ ಮಾಡಲು ಜ್ಞಾನಚಿತೆಯ ಮೇಲೆ ಕುಳ್ಳರಿಸಲಾಗುತ್ತದೆ. ಶೀತಲ ಎಂಬ ಶಬ್ಧದ ವಿರುದ್ಧ ಪದವು
ತಾಪವಾಗಿದೆ. ನಿಮ್ಮ ಹೆಸರೇ ಆಗಿದೆ - ಶೀತಲ ದೇವಿಯರು. ಅಂದರೆ ಒಬ್ಬರೇ ಇರುವುದಿಲ್ಲ ಅವಶ್ಯವಾಗಿ
ಅನೇಕರಿರುವರು. ಅವರೇ ಭಾರತವನ್ನು ಶೀತಲವನ್ನಾಗಿ ಮಾಡಿದ್ದಾರೆ. ಈ ಸಮಯದಲ್ಲಿ ಎಲ್ಲರೂ
ಕಾಮಚಿತೆಯನ್ನೇರಿ ಸುಟ್ಟುಹೋಗುತ್ತಿದ್ದಾರೆ. ಇಲ್ಲಿ ನಿಮ್ಮ ಹೆಸರು ಶೀತಲದೇವಿ ಎಂದಾಗಿದೆ. ನೀವು
ಶೀತಲರನ್ನಾಗಿ ಮಾಡುವಂತಹ ತಣ್ಣೀರನ್ನು ಹಾಕುವಂತಹ ದೇವಿಯರಾಗಿದ್ದೀರಿ. ನೀರನ್ನು
ಚಿಮುಕಿಸುತ್ತಾರಲ್ಲವೆ. ಇದು ಜ್ಞಾನದ ನೀರಾಗಿದೆ, ಇದನ್ನು ಆತ್ಮದ ಮೇಲೆ ಹಾಕಲಾಗುತ್ತದೆ. ಆತ್ಮವು
ಪವಿತ್ರವಾಗುವುದರಿಂದ ಶೀತಲವಾಗಿಬಿಡುತ್ತದೆ. ಈ ಸಮಯದಲ್ಲಿ ಇಡೀ ಪ್ರಪಂಚವು ಕಾಮಚಿತೆಯನ್ನೇರಿ
ಕಪ್ಪಾಗಿಬಿಟ್ಟಿದೆ. ಈಗ ಕಳಶವು ನೀವು ಮಕ್ಕಳಿಗೆ ಸಿಗುತ್ತದೆ. ಕಳಶದಿಂದ ತಾವೂ ಶೀತಲರಾಗುತ್ತೀರಿ
ಮತ್ತು ಅನ್ಯರನ್ನೂ ಮಾಡುತ್ತೀರಿ. ಇವರೂ ಸಹ ಶೀತಲರಾಗಿದ್ದಾರಲ್ಲವೆ! ಇಬ್ಬರೂ ಒಟ್ಟಿಗೆ ಇದ್ದಾರೆ,
ಮನೆ-ಮಠವನ್ನು ಬಿಡುವ ಮಾತಿಲ್ಲ ಆದರೆ ಗೋಶಾಲೆಯಾಗಿದೆ ಎಂದರೆ ಅವಶ್ಯವಾಗಿ ಯಾರಾದರೂ ಮನೆಯನ್ನು
ಬಿಟ್ಟಿರಬೇಕಲ್ಲವೆ. ಏತಕ್ಕಾಗಿ? ಜ್ಞಾನಚಿತೆಯನ್ನೇರಿ ಶೀತಲರಾಗುವುದಕ್ಕಾಗಿ ಅಲ್ಲವೆ. ಯಾವಾಗ ನೀವು
ಇಲ್ಲಿ ಶೀತಲರಾಗುವಿರೋ ಆಗಲೇ ದೇವತೆಗಳಾಗಲು ಸಾಧ್ಯ. ಈಗ ನೀವು ಮಕ್ಕಳ ಬುದ್ಧಿಯೋಗವು ಹಳೆಯ ಮನೆಯಕಡೆ
ಹೋಗಬಾರದು. ತಂದೆಯ ಜೊತೆ ಬುದ್ಧಿಯು ತಗುಲಿಹಾಕಿಕೊಂಡಿರಲಿ ಏಕೆಂದರೆ ನೀವೆಲ್ಲರೂ ತಂದೆಯ ಬಳಿ ಮನೆಗೆ
ಹೋಗಬೇಕಾಗಿದೆ. ತಂದೆಯು ತಿಳಿಸುತ್ತಾರೆ - ಮಧುರ ಮಕ್ಕಳೇ, ನಿಮ್ಮನ್ನು ಕರೆದುಕೊಂಡು ಹೋಗಲು ನಾನು
ಮಾರ್ಗದರ್ಶಕನಾಗಿ ಬಂದಿದ್ದೇನೆ. ಇದು ಶಿವಶಕ್ತಿ ಪಾಂಡವಸೇನೆಯಾಗಿದೆ. ನೀವು ಶಿವನಿಂದ ಶಕ್ತಿಯನ್ನು
ಪಡೆಯುವವರಾಗಿದ್ದೀರಿ. ತಂದೆಯು ಸರ್ವಶಕ್ತಿವಂತನಾಗಿದ್ದಾರೆ, ಪರಮಾತ್ಮನು ಸತ್ತಿರುವವರನ್ನೂ
ಬದುಕಿಸಬಲ್ಲರು ಎಂದು ಮನುಷ್ಯರು ತಿಳಿಯುತ್ತಾರೆ ಆದರೆ ತಂದೆಯು ತಿಳಿಸುತ್ತಾರೆ - ಮುದ್ದಾದ ಮಕ್ಕಳೇ,
ಈ ನಾಟಕದಲ್ಲಿ ಪ್ರತಿಯೊಬ್ಬರಿಗೆ ಅನಾದಿ ಪಾತ್ರವು ಸಿಕ್ಕಿದೆ, ನಾನೂ ಸಹ ರಚಯಿತ, ನಿರ್ದೇಶಕ,
ಮುಖ್ಯಪಾತ್ರಧಾರಿಯಾಗಿದ್ದೇನೆ. ನಾಟಕದ ಪಾತ್ರವನ್ನು ನಾನು ಸ್ವಲ್ಪವೂ ಪರಿವರ್ತನೆ ಮಾಡಲು
ಸಾಧ್ಯವಿಲ್ಲ. ಪ್ರತೀ ಎಲೆಯೂ ಸಹ ಪರಮಾತ್ಮನ ಆಜ್ಞೆಯಿಂದ ಅಲುಗಾಡುತ್ತದೆ ಎಂದು ಮನುಷ್ಯರು
ತಿಳಿಯುತ್ತಾರೆ ಆದರೆ ಸ್ವಯಂ ಪರಮಾತ್ಮನು ಹೇಳುತ್ತಾರೆ - ನಾನೂ ಸಹ ನಾಟಕದಲ್ಲಿ ಅಧೀನನಾಗಿದ್ದೇನೆ,
ಇದರ ಬಂಧನದಲ್ಲಿ ಬಂಧಿತನಾಗಿದ್ದೇನೆ. ನನ್ನ ಆಜ್ಞೆಯಿಂದಲೇ ಎಲೆಗಳು ಅಲುಗಾಡುತ್ತದೆ ಎಂದಲ್ಲ. ಈ
ಸರ್ವವ್ಯಾಪಿಯ ಜ್ಞಾನವು ಇಡೀ ಭಾರತವಾಸಿಗಳನ್ನು ಸಂಪೂರ್ಣ ಕಂಗಾಲನ್ನಾಗಿ ಮಾಡಿಬಿಟ್ಟಿದೆ. ತಂದೆಯ
ಜ್ಞಾನದಿಂದ ಭಾರತಕ್ಕೆ ಮತ್ತೆ ಕಿರೀಟವು ಸಿಗುತ್ತದೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ
ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತಾ ಬಾಪ್ದಾದಾರವರ ನೆನಪು ಪ್ರೀತಿ ಹಾಗೂ
ನಮಸ್ತೆ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1.
ಸೂರ್ಯವಂಶದಲ್ಲಿ ಮೊಟ್ಟಮೊದಲಿಗೆ ಬರಲು ನಿಶ್ಚಯಬುದ್ಧಿಯವರಾಗಿ ಪೂರ್ಣ ಅಂಕಗಳನ್ನು
ತೆಗೆದುಕೊಳ್ಳಬೇಕಾಗಿದೆ. ಪಕ್ಕಾ ಬ್ರಾಹ್ಮಣರಾಗಬೇಕಾಗಿದೆ. ಬೇಹದ್ದಿನ ಜ್ಞಾನವನ್ನು
ಸ್ಮೃತಿಯಲ್ಲಿಟ್ಟುಕೊಳ್ಳಬೇಕಾಗಿದೆ.
2. ಜ್ಞಾನಚಿತೆಯ ಮೇಲೆ
ಕುಳಿತು ಶೀತಲರು ಅರ್ಥಾತ್ ಪವಿತ್ರರಾಗಬೇಕಾಗಿದೆ. ಜ್ಞಾನ ಮತ್ತು ಯೋಗದಿಂದ ಕಾಮದ ತಾಪವನ್ನು
ಸಮಾಪ್ತಿ ಮಾಡಬೇಕಾಗಿದೆ. ಬುದ್ಧಿಯೋಗವು ಸದಾ ಒಬ್ಬ ತಂದೆಯ ಕಡೆ ಸಿಲುಕಿಕೊಂಡಿರಲಿ.
ವರದಾನ:
ಬ್ರಾಹ್ಮಣ
ಜೀವನದಲ್ಲಿ ಶ್ರೇಷ್ಠ ಸ್ಥಿತಿ ರೂಪಿ ಮೆಡಲ್ ಪ್ರಾಪ್ತಿ ಮಾಡಿ ಕೊಳ್ಳುವಂತಹವರು ಚಿಂತೆಯಿಲ್ಲದ
ಚಕ್ರವರ್ತಿ ಭವ.
ನೀವೆಲ್ಲರೂ ತಮ್ಮ
ಸ್ವ-ಸ್ಥಿತಿ ಒಳ್ಳೆಯದರಲ್ಲಿ ಒಳ್ಳೆಯದನ್ನಾಗಿ ಮಾಡುವುದಕ್ಕಾಗಿಯೇ ಬ್ರಾಹ್ಮಣರಾಗಿರುವಿರಿ.
ಬ್ರಾಹ್ಮಣ ಜೀವನದಲ್ಲಿ ಶ್ರೇಷ್ಠ ಸ್ಥಿತಿಯೇ ನಿಮ್ಮ ಆಸ್ತಿಯಾಗಿದೆ. ಇದೇ ಬ್ರಾಹ್ಮಣ ಜೀವನದ ಮೆಡಲ್
ಆಗಿದೆ. ಯಾರು ಇಲ್ಲಿ ಮೆಡಲ್ ಪ್ರಾಪ್ತಿ ಮಾಡಿಕೊಳ್ಳುತ್ತಾರೆ ಅವರು ಸದಾ ಅಚಲ ಅಡೋಲ ಏಕರಸ
ಸ್ಥಿತಿಯಲ್ಲಿರುತ್ತಾ, ಸದಾ ನಿಶ್ಚಿಂತ, ಚಿಂತೆಯಿಲ್ಲದ ಚಕ್ರವರ್ತಿ ಆಗಿ ಬಿಡುವರು. ಅವರು ಸರ್ವ
ಇಚ್ಛೆಗಳಿಂದ ಮುಕ್ತ, ಇಚ್ಛಾ ಮಾತ್ರಂ ಅವಿಧ್ಯಾ ಸ್ವರೂಪರಾಗಿರುತ್ತಾರೆ.
ಸ್ಲೋಗನ್:
ಅಟಲ್ ನಿಶ್ಚಯ
ಮತ್ತು ನಶೆಯಿಂದ ಹೇಳಿರಿ “ನನ್ನ ಬಾಬಾ” ಅಂದಾಗ ಮಾಯೆಯ ಸಮೀಪವೂ ಬರಲು ಸಾಧ್ಯವಿಲ್ಲ.