20.12.24         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ - ನೆನಪಿನಲ್ಲಿರುವ ಅಭ್ಯಾಸ ಮಾಡಿ ಆಗ ಸದಾ ಹರ್ಷಿತಮುಖಿ ಮತ್ತು ಖುಷಿಯಿಂದ ಅರಳಿರುತ್ತೀರಿ, ತಂದೆಯ ಸಹಯೋಗವು ಸಿಗುತ್ತಾ ಇರುವುದು, ಎಂದೂ ಬಾಡುವುದಿಲ್ಲ”

ಪ್ರಶ್ನೆ:
ನೀವು ಮಕ್ಕಳು ಈ ಈಶ್ವರೀಯ ವಿದ್ಯಾರ್ಥಿ ಜೀವನವನ್ನು ಯಾವ ನಶೆಯಲ್ಲಿ ಕಳೆಯಬೇಕಾಗಿದೆ?

ಉತ್ತರ:
ಸದಾ ಈ ನಶೆಯಿರಲಿ - ನಾವು ಈ ವಿದ್ಯೆಯಿಂದ ರಾಜಕುಮಾರ-ಕುಮಾರಿಯರಾಗುತ್ತೇವೆ, ಈ ಜೀವನವನ್ನು ಹಾಡುತ್ತಾ-ನಲಿಯುತ್ತಾ, ಜ್ಞಾನದ ನರ್ತನ ಮಾಡುತ್ತಾ ಕಳೆಯಬೇಕಾಗಿದೆ. ಸದಾ ವಾರಸುಧಾರರಾಗಿ ಹೂಗಳಾಗುವ ಪುರುಷಾರ್ಥ ಮಾಡುತ್ತಾ ಇರಿ. ಇದು ರಾಜಕುಮಾರ-ಕುಮಾರಿಯರಾಗುವ ಕಾಲೇಜಾಗಿದೆ. ಇಲ್ಲಿ ಓದಲೂಬೇಕು, ಓದಿಸಲೂಬೇಕು ಮತ್ತು ಪ್ರಜೆಗಳನ್ನೂ ತಯಾರು ಮಾಡಬೇಕಾಗಿದೆ ಆಗಲೇ ರಾಜರಾಗುವಿರಿ. ತಂದೆಯಲ್ಲಂತೂ ವಿದ್ಯೆಯು ಇದ್ದೇ ಇದೆ ಆದ್ದರಿಂದ ಅವರಿಗೆ ಓದುವ ಅವಶ್ಯಕತೆಯಿಲ್ಲ.

ಗೀತೆ:
ಬಾಲ್ಯದ ದಿನಗಳನ್ನು ಮರೆಯಬಾರದು...

ಓಂ ಶಾಂತಿ.
ಈ ಗೀತೆಯು ವಿಶೇಷವಾಗಿ ಮಕ್ಕಳಿಗಾಗಿ ಇದೆ. ಭಲೆ ಇದು ಸಿನೆಮಾದ ಗೀತೆಯಾಗಿದೆ ಆದರೆ ಕೆಲವೊಂದು ಗೀತೆಗಳು ನಿಮಗಾಗಿಯೇ ಇವೆ. ಯಾರು ಸುಪುತ್ರ ಮಕ್ಕಳಿದ್ದಾರೆಯೋ ಅವರಿಗೆ ಈ ಗೀತೆಯನ್ನು ಕೇಳುವ ಸಮಯದಲ್ಲಿ ಅದರ ಅರ್ಥವನ್ನು ಹೃದಯದಲ್ಲಿ ತಂದುಕೊಳ್ಳಬೇಕು. ತಂದೆಯು ತಿಳಿಸುತ್ತಾರೆ - ನನ್ನ ಮುದ್ದಾದ ಮಕ್ಕಳೇ ಎಂದು ಏಕೆಂದರೆ ನೀವು ಮಕ್ಕಳಾಗಿದ್ದೀರಿ. ಯಾವಾಗ ಮಕ್ಕಳಾಗುವಿರೋ ಆಗಲೇ ತಂದೆಯ, ಆಸ್ತಿಯ ನೆನಪಿರುತ್ತದೆ. ಮಕ್ಕಳೇ ಆಗಿಲ್ಲವೆಂದರೆ ನೆನಪು ಮಾಡಬೇಕಾಗುತ್ತದೆ. ನಾವು ಭವಿಷ್ಯದಲ್ಲಿ ತಂದೆಯ ಆಸ್ತಿಯನ್ನು ಪಡೆಯುತ್ತೇವೆಂದು ಮಕ್ಕಳಿಗೆ ಸ್ಮೃತಿಯಿರುತ್ತದೆ. ಇದು ರಾಜಯೋಗವಾಗಿದೆ ಪ್ರಜಾಯೋಗವಲ್ಲ. ನಾವು ಭವಿಷ್ಯದಲ್ಲಿ ರಾಜಕುಮಾರ-ಕುಮಾರಿಯರಾಗುತ್ತೇವೆ. ಈಗ ಭವಿಷ್ಯದಲ್ಲಿ ರಾಜಕುಮಾರ-ಕುಮಾರಿಯರಾಗುತ್ತೇವೆ. ನಾವು ಶಿವತಂದೆಯ ಮಕ್ಕಳಾಗಿದ್ದೇವೆ, ಉಳಿದಂತೆ ಯಾರೆಲ್ಲಾ ಮಿತ್ರಸಂಬಂಧಿಗಳು ಮೊದಲಾದವರಿದ್ದಾರೆಯೋ ಅವರೆಲ್ಲರನ್ನೂ ಮರೆಯಬೇಕಾಗಿದೆ. ಒಬ್ಬ ತಂದೆಯ ವಿನಃ ಮತ್ತ್ಯಾರೂ ನೆನಪಿಗೆ ಬರಬಾರದು, ದೇಹವೂ ನೆನಪಿಗೆ ಬರಬಾರದು. ದೇಹಾಭಿಮಾನವನ್ನು ಬಿಟ್ಟು ದೇಹೀ-ಅಭಿಮಾನಿಯಾಗಬೇಕಾಗಿದೆ. ದೇಹಾಭಿಮಾನದಲ್ಲಿ ಬರುವುದರಿಂದಲೇ ಅನೇಕ ಪ್ರಕಾರದ ಸಂಕಲ್ಪ-ವಿಕಲ್ಪಗಳು ಬೀಳಿಸಿಬಿಡುತ್ತದೆ. ನೆನಪು ಮಾಡುವ ಅಭ್ಯಾಸವನ್ನು ಮಾಡುತ್ತಿದ್ದರೆ ಸದಾ ಹರ್ಷಿತಮುಖಿಯಾಗಿ ಅರಳಿರುವ ಹೂವಾಗುತ್ತೀರಿ. ನೆನಪನ್ನು ಮರೆಯುವುದರಿಂದ ಹೂ ಬಾಡಿಹೋಗುತ್ತದೆ. ಸಾಹಸ ಮಕ್ಕಳದು, ಸಹಯೋಗ ತಂದೆಯದು. ಮಕ್ಕಳೇ ಆಗದಿದ್ದರೆ ತಂದೆಯು ಯಾವ ಮಾತಿನ ಸಹಯೋಗ ಕೊಡುತ್ತಾರೆ? ಏಕೆಂದರೆ ಅಂತಹವರ ತಂದೆ-ತಾಯಿಯು ರಾವಣ ಮಾಯೆಯಾಗಿರುತ್ತದೆ. ಅದರಿಂದ ಬೀಳುವ ಸಹಯೋಗವೇ ಸಿಗುತ್ತದೆ ಬಾಲ್ಯದ ದಿನಗಳನ್ನು ಮರೆಯಬಾರದು ಎಂಬ ಗೀತೆಯು ನೀವು ಮಕ್ಕಳಿಗಾಗಿಯೇ ಮಾಡಲ್ಪಟ್ಟಿದೆ. ತಂದೆಯನ್ನು ನೆನಪು ಮಾಡಬೇಕು, ನೆನಪು ಮಾಡದಿದ್ದರೆ ಇಂದು ಹಂಸಗಳಾಗಿ ಮತ್ತೆ ನಾಳೆ ಅಳುತ್ತಾ ಇರುತ್ತೀರಿ. ನೆನಪು ಮಾಡುವುದರಿಂದ ಸದಾ ಹರ್ಷಿತಮುಖಿಯಾಗಿರುತ್ತೀರಿ. ನೀವು ಮಕ್ಕಳಿಗೆ ತಿಳಿದಿದೆ, ಒಂದೇ ಗೀತಾಶಾಸ್ತ್ರವಾಗಿದೆ. ಇದರಲ್ಲಿ ಕೆಲವೊಂದು ಶಬ್ಧಗಳು ಸರಿಯಾಗಿದೆ. ಯುದ್ಧದ ಮೈದಾನದಲ್ಲಿ ಸತ್ತರೆ ಸ್ವರ್ಗದಲ್ಲಿ ಹೋಗುತ್ತಾರೆಂದು ಅದರಲ್ಲಿ ಬರೆದಿದೆ ಆದರೆ ಇಲ್ಲಿ ಹಿಂಸಾಯುದ್ಧದ ಮಾತಿಲ್ಲ. ನೀವು ಮಕ್ಕಳು ತಂದೆಯಿಂದ ಶಕ್ತಿಯನ್ನು ತೆಗೆದುಕೊಂಡು ಮಾಯೆಯ ಮೇಲೆ ಜಯಗಳಿಸಬೇಕಾಗಿದೆ ಆದ್ದರಿಂದ ಅವಶ್ಯವಾಗಿ ತಂದೆಯನ್ನು ನೆನಪು ಮಾಡಬೇಕು. ಆಗಲೇ ನೀವು ಸ್ವರ್ಗದ ಮಾಲೀಕರಾಗುವಿರಿ. ಇದಕ್ಕೆ ಅವರು ಸ್ಥೂಲ ಆಯುಧಗಳನ್ನು ತೋರಿಸಿದ್ದಾರೆ. ಜ್ಞಾನದ ಕತ್ತಿ, ಜ್ಞಾನದ ಬಾಣ ಎಂಬ ಶಬ್ಧಗಳನ್ನು ಕೇಳಿ ಸ್ಥೂಲರೂಪದಲ್ಲಿ ಆ ಆಯುಧಗಳನ್ನು ಕೊಟ್ಟುಬಿಟ್ಟಿದ್ದಾರೆ. ವಾಸ್ತವದಲ್ಲಿ ಇವು ಜ್ಞಾನದ ಮಾತುಗಳಾಗಿವೆ ಬಾಕಿ ಇಷ್ಟೊಂದು ಭುಜಗಳು ಯಾರಿಗೂ ಇರುವುದಿಲ್ಲ. ಇದು ಯುದ್ಧದ ಮೈದಾನವಾಗಿದೆ. ಯೋಗದಲ್ಲಿದ್ದು ಶಕ್ತಿಗಳನ್ನು ತೆಗೆದುಕೊಂಡು ವಿಕಾರಗಳ ಮೇಲೆ ಜಯಗಳಿಸಬೇಕಾಗಿದೆ. ತಂದೆಯನ್ನು ನೆನಪು ಮಾಡುವುದರಿಂದ ಆಸ್ತಿಯ ನೆನಪೂ ಬರುವುದು. ವಾರಸುಧಾರರೇ ಆಸ್ತಿಯನ್ನು ತೆಗೆದುಕೊಳ್ಳುತ್ತಾರೆ. ವಾರಸುಧಾರರಾಗದಿದ್ದರೆ ಮತ್ತೆ ಪ್ರಜೆಗಳಾಗಿಬಿಡುತ್ತಾರೆ. ಇದು ರಾಜಯೋಗವಾಗಿದೆಯೇ ಹೊರತು ಪ್ರಜಾಯೋಗವಲ್ಲ. ಈ ತಿಳುವಳಿಕೆಯನ್ನು ತಂದೆಯ ವಿನಃ ಮತ್ತ್ಯಾರೂ ಕೊಡಲು ಸಾಧ್ಯವಿಲ್ಲ.

ತಂದೆಯು ತಿಳಿಸುತ್ತಾರೆ - ಮಕ್ಕಳೇ, ನಾನು ಈ ಸಾಧಾರಣ ತನುವಿನ ಆಧಾರವನ್ನು ತೆಗೆದುಕೊಂಡು ಬರಬೇಕಾಗುತ್ತದೆ. ಪ್ರಕೃತಿಯ ಆಧಾರವನ್ನು ತೆಗೆದುಕೊಳ್ಳದೆ ನೀವು ಮಕ್ಕಳಿಗೆ ರಾಜಯೋಗವನ್ನು ಹೇಗೆ ಕಲಿಸಲಿ? ಆತ್ಮವು ಶರೀರವನ್ನು ಬಿಟ್ಟಾಗ ಯಾವುದೇ ಮಾತನಾಡಲು ಸಾಧ್ಯವಿಲ್ಲ ಮತ್ತೆ ಯಾವಾಗ ಶರೀರ ಧಾರಣೆ ಮಾಡಿ ಮಗುವು ಸ್ವಲ್ಪ ದೊಡ್ಡದಾಗುವುದೋ ಆಗ ಹೊರ ಬರುತ್ತದೆ ಮತ್ತು ಬುದ್ಧಿಯು ಬೆಳವಣಿಗೆಯಾಗುತ್ತದೆ. ಚಿಕ್ಕಮಕ್ಕಳಂತೂ ಪವಿತ್ರರಾಗಿರುತ್ತಾರೆ, ಅವರಲ್ಲಿ ವಿಕಾರವಿರುವುದಿಲ್ಲ. ಸನ್ಯಾಸಿಗಳು ಏಣಿಯನ್ನೇರಿ ಮತ್ತೆ ಕೆಳಗಿಳಿಯುತ್ತಾರೆ. ತಮ್ಮ ಜೀವನವನ್ನು ಅರ್ಥಮಾಡಿಕೊಳ್ಳುತ್ತಾರೆ. ಮಕ್ಕಳಂತೂ ಮೊದಲಿನಿಂದಲೇ ಪವಿತ್ರರಾಗಿರುತ್ತಾರೆ ಆದ್ದರಿಂದ ಮಕ್ಕಳು ಮತ್ತು ಮಹಾತ್ಮರು ಒಂದೇ ಸಮಾನರೆಂದು ಗಾಯನ ಮಾಡುತ್ತಾರೆ. ಅಂದಾಗ ನೀವು ಮಕ್ಕಳೂ ತಿಳಿದುಕೊಂಡಿದ್ದೀರಿ - ನಾವು ಈ ಶರೀರವನ್ನು ಬಿಟ್ಟು ರಾಜಕುಮಾರ-ಕುಮಾರಿಯರಾಗುತ್ತೇವೆ. ಮೊದಲೂ ಸಹ ಆಗಿದ್ದೆವು, ಈಗ ಪುನಃ ಆಗುತ್ತೇವೆ. ವಿದ್ಯಾರ್ಥಿಗಳಿಗೆ ಇಂತಿಂತಹ ವಿಚಾರಗಳಿರುತ್ತವೆ, ಇದೂ ಸಹ ಅವರ ಬುದ್ಧಿಯಲ್ಲಿ ಬರುವುದು - ಯಾರು ಮಕ್ಕಳಾಗಿರುವರೋ ಅವರು ಮತ್ತೆ ಆಜ್ಞಾಕಾರಿಗಳು, ಪ್ರಾಮಾಣಿಕರಾಗಿ ಶ್ರೀಮತದಂತೆ ನಡೆಯುತ್ತಾರೆ ಇಲ್ಲವೆಂದರೆ ಶ್ರೇಷ್ಠಪದವಿಯನ್ನು ಪಡೆಯಲು ಸಾಧ್ಯವಿಲ್ಲ. ಶಿಕ್ಷಕರಂತೂ ಓದಿಯೇ ಇದ್ದಾರೆ. ಅವರು ಓದಿ ನಂತರ ಓದಿಸುತ್ತಾರೆಂದಲ್ಲ, ಆ ಶಿಕ್ಷಕರಲ್ಲಿ ವಿದ್ಯೆಯು ಇದ್ದೇ ಇದೆ. ಅವರಿಗೆ ಜ್ಞಾನಸಾಗರನೆಂದು ಹೇಳಲಾಗುತ್ತದೆ. ಸೃಷ್ಟಿಯ ಆದಿ-ಮಧ್ಯ-ಅಂತ್ಯದ ಜ್ಞಾನವು ಮತ್ತ್ಯಾರಿಗೂ ತಿಳಿದಿಲ್ಲ. ಮೊದಲಿಗೆ ಅವರು ತಂದೆಯಾಗಿದ್ದಾರೆಂಬ ನಿಶ್ಚಯವಿರಬೇಕು. ಒಂದುವೇಳೆ ಅದೃಷ್ಟದಲ್ಲಿಲ್ಲವೆಂದರೆ ಮತ್ತೆ ಅವರಲ್ಲಿ ಏರುಪೇರು ನಡೆಯುತ್ತಿರುತ್ತದೆ. ಅವರು ಮುಂದೆ ನಡೆಯುವರೊ ಇಲ್ಲವೊ ಗೊತ್ತಿಲ್ಲ. ತಂದೆಯು ತಿಳಿಸುತ್ತಾರೆ - ಯಾವಾಗ ನೀವು ತಂದೆಯ ಮಡಿಲಿಗೆ ಬರುವಿರೋ ಆಗ ಈ ವಿಕಾರಗಳ ಖಾಯಿಲೆಯು ಇನ್ನೂ ಜೋರಾಗಿ ಹೊರಬರುತ್ತದೆ. ವೈದ್ಯರೂ ಸಹ ಔಷಧಿಯನ್ನು ಕೊಟ್ಟಾಗ ಇರುವ ಖಾಯಿಲೆಯೆಲ್ಲವೂ ಇನ್ನೂ ಹೆಚ್ಚಾಗಿ ಹೊರಬರುವುದು ಎಂದು ಹೇಳುತ್ತಾರೆ ಹಾಗೆಯೇ ತಂದೆಯೂ ಹೇಳುತ್ತಾರೆ. ನೀವು ಮಕ್ಕಳಾಗುತ್ತೀರೆಂದರೆ ದೇಹಾಭಿಮಾನದ ಮತ್ತು ಕಾಮ, ಕ್ರೋಧದ ರೋಗವು ಹೆಚ್ಚುವುದು ಇಲ್ಲದಿದ್ದರೆ ಪರೀಕ್ಷೆಯು ಹೇಗಾಗುವುದು? ಯಾವುದರಲ್ಲಾದರೂ ತಬ್ಬಿಬ್ಬಾದರೆ ಕೇಳುತ್ತಾ ಇರಿ. ನೀವು ಶಕ್ತಿಶಾಲಿಗಳಾಗುತ್ತೀರೆಂದರೆ ಮಾಯೆಯೂ ಸಹ ಹೆಚ್ಚಿನದಾಗಿ ನಿಮ್ಮ ಹಿಂದೆ ಬೀಳುತ್ತದೆ. ನೀವು ಮಲ್ಲಯುದ್ಧದಲ್ಲಿದ್ದೀರಿ, ತಂದೆಗೆ ಮಕ್ಕಳಾಗದೇ ಇದ್ದರೆ ಮಲ್ಲಯುದ್ಧದ ಮಾತೇ ಇರುವುದಿಲ್ಲ. ಅವರಂತೂ ತಮ್ಮದೇ ಸಂಕಲ್ಪ-ವಿಕಲ್ಪಗಳಲ್ಲಿ ಮುಳುಗುತ್ತಿರುತ್ತಾರೆ, ಯಾವುದೇ ಸಹಯೋಗವು ಸಿಗುವುದಿಲ್ಲ. ತಂದೆಯು ತಿಳಿಯುತ್ತಾರೆ - ತಂದೆ-ತಾಯಿ ಎಂದು ಹೇಳುತ್ತಾರೆಂದಲ್ಲ, ತಂದೆಯ ಮಕ್ಕಳಾಗಬೇಕಾಗುತ್ತದೆ. ಅದು ಮತ್ತೆ ಅವರ ಹೃದಯದಲ್ಲಿ ಇವರು ನಮ್ಮ ಆತ್ಮಿಕ ತಂದೆಯಾಗಿದ್ದಾರೆಂದು ಪಕ್ಕಾ ನಿಶ್ಚಯವಾಗಿಬಿಡುತ್ತದೆ. ಇದು ಯುದ್ಧದ ಮೈದಾನವಾಗಿದೆ, ಈ ಬಿರುಗಾಳಿಗಳಲ್ಲಿ ನಾವು ನಿಲ್ಲುತ್ತೇವೆಯೋ ಇಲ್ಲವೋ ಗೊತ್ತಿಲ್ಲವೆಂದು ಹೆದರಬಾರದು. ಇದಕ್ಕೆ ನಿರ್ಬಲತೆಯೆಂದು ಹೇಳಲಾಗುತ್ತದೆ. ಇದರಲ್ಲಿ ಸಿಂಹವಾಗಬೇಕು, ಪುರುಷಾರ್ಥಕ್ಕಾಗಿ ಒಳ್ಳೆಯ ಮತವನ್ನು ತೆಗೆದುಕೊಳ್ಳಬೇಕು. ತಂದೆಯೊಂದಿಗೆ ಕೇಳಬೇಕು - ಅನೇಕ ಮಕ್ಕಳು ತಮ್ಮ ಸ್ಥಿತಿಯನ್ನು ಬರೆದು ಕಳುಹಿಸುತ್ತಾರೆ. ತಂದೆಯೇ ಸರ್ಟಿಫಿಕೇಟ್ ಕೊಡಬೇಕಾಗಿದೆ. ಇವರಿಂದ ಭಲೆ ಮುಚ್ಚಿಡಬಹುದು, ಆದರೆ ಶಿವತಂದೆಯಿಂದಂತೂ ಮುಚ್ಚಿಡಲು ಸಾಧ್ಯವಿಲ್ಲ. ಅನೇಕರು ಹೀಗೆ ಮುಚ್ಚಿಡುತ್ತಾರೆ ಆದರೆ ತಂದೆಯಿಂದ ಏನನ್ನೂ ಮುಚ್ಚಿಡಲು ಸಾಧ್ಯವಿಲ್ಲ. ಒಳ್ಳೆಯದರ ಫಲ ಒಳ್ಳೆಯದು, ಕೆಟ್ಟದರ ಫಲ ಕೆಟ್ಟದ್ದು ಸಿಗುತ್ತದೆ. ಸತ್ಯಯುಗ-ತ್ರೇತಾಯುಗದಲ್ಲಿ ಎಲ್ಲವೂ ಒಳ್ಳೆಯದೇ ಆಗುತ್ತದೆ. ಒಳ್ಳೆಯದು-ಕೆಟ್ಟದ್ದು, ಪಾಪ-ಪುಣ್ಯ ಇಲ್ಲಾಗುತ್ತದೆ ಆದರೆ ಅಲ್ಲಿ ದಾನ-ಪುಣ್ಯವನ್ನೂ ಸಹ ಮಾಡಲಾಗುವುದಿಲ್ಲ. ಇಲ್ಲಿನ ಪ್ರಾಲಬ್ಧವಿರುತ್ತದೆ. ಇಲ್ಲಿ ನಾವು ಸಂಪೂರ್ಣ ಸಮರ್ಪಣೆಯಾಗುತ್ತೇವೆಂದರೆ 21 ಜನ್ಮಗಳಿಗೆ ಪ್ರತಿಯಾಗಿ ಕೊಟ್ಟುಬಿಡುತ್ತಾರೆ ಆದ್ದರಿಂದ ತಂದೆಯನ್ನನುಸರಿಸಬೇಕಾಗಿದೆ. ಒಂದುವೇಳೆ ವಿರುದ್ಧವಾದ ಕೆಲಸಗಳನ್ನು ಮಾಡುತ್ತೀರೆಂದರೆ ತಂದೆಯ ಹೆಸರನ್ನು ಕೆಡಿಸುತ್ತಾರೆ ಆದ್ದರಿಂದ ಶಿಕ್ಷಣವನ್ನೂ ಕೊಡಬೇಕಾಗುತ್ತದೆ. ಎಲ್ಲರೂ ರೂಪಭಸಂತ (ಆತ್ಮದ ಸ್ಮೃತಿಯಲ್ಲಿದ್ದು ಜ್ಞಾನದ ಮಳೆಯನ್ನು ಸುರಿಸುವವರು) ರಾಗಬೇಕಾಗಿದೆ. ನಾವಾತ್ಮಗಳಿಗೆ ತಂದೆಯು ಓದಿಸಿದ್ದಾರೆ ಮತ್ತೆ ನಾವೂ ಸಹ ಜ್ಞಾನದ ಮಳೆಯನ್ನು ಸುರಿಸಬೇಕಾಗಿದೆ. ಸತ್ಯಬ್ರಾಹ್ಮಣರು ಸತ್ಯಗೀತೆಯನ್ನು ತಿಳಿಸಬೇಕಾಗಿದೆ ಮತ್ತ್ಯಾವುದೇ ಶಾಸ್ತ್ರಗಳ ಮಾತಿಲ್ಲ. ಗೀತೆಯು ಮುಖ್ಯವಾಗಿದೆ ಉಳಿದೆಲ್ಲವೂ ಗೀತೆಯ ಮಕ್ಕಳಾಗಿವೆ. ಅದರಿಂದ ಯಾರ ಕಲ್ಯಾಣವೂ ಆಗುವುದಿಲ್ಲ, ಯಾರೂ ನನ್ನೊಂದಿಗೆ ಮಿಲನ ಮಾಡುವುದಿಲ್ಲ. ನಾನೇ ಬಂದು ಸಹಜ ಜ್ಞಾನ, ಸಹಜ ಯೋಗವನ್ನು ಕಲಿಸುತ್ತೇನೆ. ಸರ್ವಶಾಸ್ತ್ರಮಯಿ ಶಿರೋಮಣಿ ಗೀತೆಯಾಗಿದೆ. ಆ ಸತ್ಯಗೀತೆಯ ಮೂಲಕ ಆಸ್ತಿಯು ಸಿಗುತ್ತದೆ. ಕೃಷ್ಣನಿಗೂ ಗೀತೆಯಿಂದ ಆಸ್ತಿಯು ಸಿಕ್ಕಿತು. ಗೀತೆಯ ತಂದೆ ಯಾರು ರಚಯಿತನಾಗಿದ್ದಾರೆಯೋ ಅವರೇ ಕುಳಿತು ಆಸ್ತಿಯನ್ನು ಕೊಡುತ್ತಾರೆ ಬಾಕಿ ಗೀತಾಶಾಸ್ತ್ರದಿಂದ ಆಸ್ತಿಯು ಸಿಗುವುದಿಲ್ಲ. ರಚಯಿತನೂ ಅವರೇ ಆಗಿದ್ದಾರೆ ಉಳಿದೆಲ್ಲರೂ ಅವರ ರಚನೆಯಾಗಿದೆ. ಮೊದಲನೆಯ ಶಾಸ್ತ್ರವು ಗೀತೆಯಾಗಿದೆ ನಂತರ ಬಂದು ಯಾವ ಶಾಸ್ತ್ರಗಳು ರಚಿಸಲ್ಪಡುತ್ತವೆಯೋ ಅವುಗಳಿಂದಲೂ ಆಸ್ತಿಯು ಸಿಗಲು ಸಾಧ್ಯವಿಲ್ಲ. ಆಸ್ತಿಯು ಸನ್ಮುಖದಲ್ಲಿಯೇ ಸಿಗುತ್ತದೆ, ಮುಕ್ತಿಯ ಆಸ್ತಿಯಂತೂ ಎಲ್ಲರಿಗೂ ಸಿಗಬೇಕಾಗಿದೆ, ಎಲ್ಲರೂ ಹಿಂತಿರುಗಿ ಹೋಗಬೇಕಾಗಿದೆ ಬಾಕಿ ಸ್ವರ್ಗದ ಆಸ್ತಿಯು ವಿದ್ಯೆಯಿಂದಲೇ ಸಿಗುತ್ತದೆ. ಯಾರೆಷ್ಟು ಓದುವರೋ ಅಷ್ಟು ಸಿಗುತ್ತದೆ. ತಂದೆಯು ಸನ್ಮುಖದಲ್ಲಿ ಓದಿಸುತ್ತಾರೆ, ಎಲ್ಲಿಯವರೆಗೆ ನಮಗೆ ಯಾರು ಓದಿಸುತ್ತಾರೆಂದು ನಿಶ್ಚಯವಿರುವುದಿಲ್ಲವೋ ಅಲ್ಲಿಯವರೆಗೆ ಏನು ಅರಿತುಕೊಳ್ಳುತ್ತಾರೆ? ಏನು ಪ್ರಾಪ್ತಿ ಮಾಡಿಕೊಳ್ಳುತ್ತಾರೆ? ಆದರೂ ಸಹ ತಂದೆಯಿಂದ ಜ್ಞಾನವನ್ನು ಕೇಳುತ್ತಾ ಇದ್ದರೆ ಜ್ಞಾನದ ವಿನಾಶವಾಗುವುದಿಲ್ಲ. ಎಷ್ಟು ಸುಖ ಸಿಗುವುದೋ ಮತ್ತೆ ಅನ್ಯರಿಗೆ ಸುಖ ಕೊಡುತ್ತಾರೆ. ಪ್ರಜೆಗಳನ್ನಾಗಿ ಮಾಡಿಕೊಂಡರೆ ತಾವೂ ರಾಜರಾಗಿಬಿಡುತ್ತಾರೆ.

ನಮ್ಮದು ವಿದ್ಯಾರ್ಥಿ ಜೀವನವಾಗಿದೆ, ಆಟವಾಡುತ್ತಾ-ನಲಿಯುತ್ತಾ, ಜ್ಞಾನದ ನರ್ತನ ಮಾಡುತ್ತಾ ನಾವು ಹೋಗಿ ರಾಜಕುಮಾರರಾಗುತ್ತೇವೆ. ನಾವು ರಾಜಕುಮಾರರಾಗುತ್ತೇವೆಂದು ವಿದ್ಯಾರ್ಥಿಗಳಿಗೆ ತಿಳಿದಿದ್ದರೆ ಖುಷಿಯ ನಶೆಯೂ ಏರುವುದು. ಇದಂತೂ ರಾಜಕುಮಾರ-ಕುಮಾರಿಯರ ಕಾಲೇಜಾಗಿದೆ. ಸತ್ಯಯುಗದಲ್ಲಿ ರಾಜಕುಮಾರ-ಕುಮಾರಿಯರ ಕಾಲೇಜು ಬೇರೆ-ಬೇರೆಯಾಗಿರುತ್ತವೆ. ವಿಮಾನಗಳಲ್ಲಿ ಹೋಗುತ್ತಾರೆ, ಅಲ್ಲಿನ ವಿಮಾನಗಳೂ ಸಹ ಸುರಕ್ಷಿತವಾಗಿರುತ್ತದೆ. ಅವೆಂದೂ ಬೀಳಲು ಸಾಧ್ಯವಿಲ್ಲ. ಎಂದೂ ಯಾವುದೇ ಪ್ರಕಾರದ ಅಪಘಾತವೂ ಆಗುವುದಿಲ್ಲ. ಇವೆಲ್ಲವೂ ತಿಳಿದುಕೊಳ್ಳುವ ಮಾತುಗಳಾಗಿವೆ. ಒಂದನೆಯದಾಗಿ ತಂದೆಯ ಜೊತೆ ಬುದ್ಧಿಯೋಗವನ್ನಿಡಬೇಕು. ಎರಡನೆಯದಾಗಿ ಯಾರ್ಯಾರು ಮುಳ್ಳುಗಳಿಂದ ಮೊಗ್ಗುಗಳಾಗಿದ್ದಾರೆ ಎಂದು ತಂದೆಗೆ ಎಲ್ಲಾ ಸಮಾಚಾರವನ್ನು ತಿಳಿಸಬೇಕು. ತಂದೆಯ ಜೊತೆ ಪೂರ್ಣಸಂಬಂಧವನ್ನಿಡಬೇಕು ಮತ್ತೆ ಶಿಕ್ಷಕರೂ ಸಹ ಸಲಹೆಯನ್ನು ಕೊಡುತ್ತಾ ಇರುತ್ತಾರೆ. ಯಾರು ವಾರಸುಧಾರರಾಗಿ ಹೂಗಳಾಗುವ ಪುರುಷಾರ್ಥ ಮಾಡುತ್ತಾರೆ? ಮುಳ್ಳುಗಳಿಂದ ಮೊಗ್ಗುಗಳಂತೂ ಆದರು ಆದರೆ ಯಾವಾಗ ಮಕ್ಕಳಾಗುವರೋ ಆಗಲೇ ಮೊಗ್ಗುಗಳಿಂದ ಹೂಗಳಾಗುವರು. ಇಲ್ಲವೆಂದರೆ ಮೊಗ್ಗು-ಮೊಗ್ಗಾಗಿಯೇ ಉಳಿಯುತ್ತಾರೆ ಅರ್ಥಾತ್ ಪ್ರಜೆಗಳಲ್ಲಿ ಬಂದುಬಿಡುತ್ತಾರೆ. ಈಗ ಯಾರು ಎಂತಹ ಪುರುಷಾರ್ಥ ಮಾಡುವರೋ ಅಂತಹ ಪದವಿಯನ್ನು ಪಡೆಯುವರು. ಒಬ್ಬರು ಮುಂದೆ ಓದಬೇಕಾದರೆ ನಾವು ಅವರ ಬಾಲವನ್ನು ಹಿಡಿದುಕೊಂಡು ಹೋಗುತ್ತೇವೆಂದಲ್ಲ. ಭಾರತವಾಸಿಗಳು ಹೀಗೆ ತಿಳಿಯುತ್ತಾರೆ ಆದರೆ ಬಾಲವನ್ನು ಹಿಡಿದುಕೊಳ್ಳುವ ಮಾತೇ ಇಲ್ಲ. ಇಲ್ಲಿ ಯಾರು ಮಾಡುವರೋ ಅವರು ಪಡೆಯುವರು. ಯಾರು ಪುರುಷಾರ್ಥ ಮಾಡುವರೋ ಅವರಿಗೆ 21 ಜನ್ಮಗಳ ಪ್ರಾಲಬ್ಧವಾಗುವುದು. ವೃದ್ಧರಂತೂ ಅವಶ್ಯವಾಗಿ ಆಗುತ್ತಾರೆ ಆದರೆ ಅಕಾಲಮೃತ್ಯು ಇರುವುದಿಲ್ಲ. ಎಷ್ಟು ದೊಡ್ದ ಪದವಿಯಾಗಿದೆ! ಇವರ ಅದೃಷ್ಟವು ಬೆಳಗಿದೆ, ವಾರಸುಧಾರರಾಗಿದ್ದಾರೆ ಎಂದು ತಂದೆಯು ತಿಳಿಯುತ್ತಾರೆ. ಇನ್ನೂ ಪುರುಷಾರ್ಥಿಗಳಾಗಿದ್ದಾರೆ ಆದ್ದರಿಂದ ಬಾಬಾ, ಇಂತಿಂತಹ ವಿಘ್ನಗಳು ಬರುತ್ತವೆ, ಈ ರೀತಿಯಾಗುತ್ತವೆ ಎಂದು ದೂರನ್ನು ಕೊಡುತ್ತಾರೆ ಅಂದಾಗ ಪ್ರತಿಯೊಬ್ಬರೂ ತಮ್ಮ ಚಾರ್ಟನ್ನು ಕೊಡಬೇಕಾಗಿದೆ. ಇಷ್ಟೊಂದು ಪರಿಶ್ರಮವು ಮತ್ತ್ಯಾವುದೇ ಸತ್ಸಂಗದಲ್ಲಿ ಇರುವುದಿಲ್ಲ. ತಂದೆಯು ಚಿಕ್ಕ-ಚಿಕ್ಕ ಮಕ್ಕಳನ್ನೂ ಸಹ ಸಂದೇಶಿಗಳನ್ನಾಗಿ ಮಾಡಿಬಿಡುತ್ತಾರೆ. ಯುದ್ಧದಲ್ಲಿ ಸಂದೇಶವನ್ನು ತೆಗೆದುಕೊಂಡು ಹೋಗುವವರೂ ಬೇಕಲ್ಲವೆ. ಇದು ಯುದ್ಧದ ಮೈದಾನವಾಗಿದೆ, ಇಲ್ಲಿ ನೀವು ಸನ್ಮುಖದಲ್ಲಿ ಕೇಳುತ್ತೀರಿ ಆದ್ದರಿಂದ ಬಹಳ ಇಷ್ಟವಾಗುತ್ತದೆ, ಮನಸ್ಸಿಗೆ ಖುಷಿಯಾಗುತ್ತದೆ. ಹೊರಗೆ ಹೋದಾಗ ಕೊಕ್ಕರೆಗಳ ಸಂಗವು ಸಿಕ್ಕಿತೆಂದರೆ ಖುಷಿಯು ಹಾರಿಹೋಗುತ್ತದೆ. ಅಲ್ಲಿ ಮಾಯೆಯ ಧೂಳಿದೆಯಲ್ಲವೆ ಆದ್ದರಿಂದಲೇ ಪಕ್ಕಾ ಆಗಬೇಕಾಗಿದೆ.

ತಂದೆಯು ಎಷ್ಟೊಂದು ಪ್ರೀತಿಯಿಂದ ಓದಿಸುತ್ತಾರೆ, ಎಷ್ಟೊಂದು ಸೌಕರ್ಯವನ್ನು ನೀಡುತ್ತಾರೆ. ಇಂತಹವರು ಅನೇಕರಿದ್ದಾರೆ, ಚೆನ್ನಾಗಿದೆ-ಚೆನ್ನಾಗಿದೆ ಎಂದು ಹೇಳಿ ಮಾಯವಾಗಿಬಿಡುತ್ತಾರೆ. ಕೆಲವರೇ ವಿರಳ ಎದ್ದುನಿಲ್ಲುತ್ತಾರೆ. ಇಲ್ಲಂತೂ ಜ್ಞಾನದ ನಶೆಯಿರಬೇಕು ಹೇಗೆ ಮಧ್ಯಪಾನದ ನಶೆಯಿರುತ್ತದೆಯಲ್ಲವೆ. ಯಾರಾದರೂ ದಿವಾಳಿಯಾದವರು ಮಧ್ಯಪಾನ ಮಾಡಿದರೆ ಹೆಚ್ಚಿನದಾಗಿ ನಶೆಯೇರಿ ನಾನು ರಾಜಾಧಿರಾಜನಾಗಿದ್ದೇನೆ ಎಂದು ತಿಳಿಯುತ್ತಾರೆ. ಇಲ್ಲಿ ನೀವು ಮಕ್ಕಳಿಗೆ ಪ್ರತಿನಿತ್ಯವೂ ಜ್ಞಾನಾಮೃತದ ಪಾನವು ಸಿಗುತ್ತದೆ. ಧಾರಣೆ ಮಾಡುವುದಕ್ಕಾಗಿ ದಿನ-ಪ್ರತಿದಿನ ಇಂತಹ ಒಳ್ಳೊಳ್ಳೆಯ ಅಂಶಗಳು ಸಿಗುತ್ತಿರುತ್ತವೆ, ಆದುದರಿಂದ ಮುರುಳಿಯನ್ನು ಹೇಗಾದರೂ ಮಾಡಿ ಓದಬೇಕಾಗಿದೆ ಹೇಗೆ ಗೀತೆಯನ್ನು ಪ್ರತಿನಿತ್ಯವೂ ಗೀತಾಪಠಣ ಮಾಡುತ್ತಾರಲ್ಲವೆ! ಇಲ್ಲಿಯೂ ಸಹ ಪ್ರತಿನಿತ್ಯವೂ ತಂದೆಯಿಂದ ಓದಬೇಕಾಗಿದೆ. ನನ್ನ ಉನ್ನತಿ ಆಗುತ್ತಿಲ್ಲ ಕಾರಣವೇನು ಎಂದು ಕೇಳಬೇಕು. ಬಂದು ತಿಳಿದುಕೊಳ್ಳಬೇಕು. ಅವರು ನಮ್ಮ ತಂದೆಯಾಗಿದ್ದಾರೆಂದು ಯಾರಿಗೆ ಪೂರ್ಣ ನಿಶ್ಚಯವಿದೆಯೋ ಅವರೇ ಬರುತ್ತಾರೆ. ನಿಶ್ಚಯಬುದ್ಧಿಯವರಾಗಲು ಪುರುಷಾರ್ಥ ಮಾಡುತ್ತಿದ್ದೇನೆ ಎಂದಲ್ಲ. ನಿಶ್ಚಯವು ಒಂದೇ ಆಗಿರುತ್ತದೆ, ಇದರಲ್ಲಿ ಪರ್ಸೆಂಟೇಜ್ ಇರುವುದಿಲ್ಲ. ತಂದೆಯು ಒಬ್ಬರೇ ಆಗಿದ್ದಾರೆ, ಅವರಿಂದ ಆಸ್ತಿಯು ಸಿಗುತ್ತದೆ. ಇಲ್ಲಿ ಸಾವಿರಾರು ಮಂದಿ ಓದುತ್ತಾರೆ ಆದರೂ ಸಹ ನಾನು ಹೇಗೆ ನಿಶ್ಚಯವಿಡಲಿ ಎಂದು ಕೇಳಿದರೆ ಅವರಿಗೆ ದೌರ್ಭಾಗ್ಯಶಾಲಿ ಎಂದು ಹೇಳಲಾಗುತ್ತದೆ. ಯಾರು ತಂದೆಯನ್ನು ಅರಿತುಕೊಂಡು ಒಪ್ಪಿಕೊಳ್ಳುವರೋ ಅವರೇ ಸೌಭಾಗ್ಯವಂತರು. ಬಂದು ನನ್ನ ಮಗುವಾಗು ಎಂದು ಯಾವುದಾದರೂ ರಾಜನು ಹೇಳಿದರೆ ಅವರ ಮಡಿಲಿನಲ್ಲಿ ಹೋದ ತಕ್ಷಣವೇ ನಿಶ್ಚಯವಾಗಿಬಿಡುತ್ತದೆಯಲ್ಲವೆ. ನಿಶ್ಚಯವಿಡುವುದು ಹೇಗೆ ಎಂದು ಹೇಳುವುದಿಲ್ಲ. ಇದು ರಾಜಯೋಗವಾಗಿದೆ. ತಂದೆಯಂತೂ ಸ್ವರ್ಗದ ರಚಯಿತನಾಗಿದ್ದಾರೆ ಅಂದಮೇಲೆ ಸ್ವರ್ಗದ ಮಾಲೀಕರನ್ನಾಗಿ ಮಾಡುತ್ತಾರೆ. ನಿಶ್ಚಯವಾಗದಿದ್ದರೆ ನಿಮ್ಮ ಅದೃಷ್ಟದಲ್ಲಿಲ್ಲ, ಅಂತಹವರಿಗೆ ಯಾರೇನು ಮಾಡಲು ಸಾಧ್ಯ. ಒಪ್ಪದಿದ್ದರೆ ಮತ್ತೆ ಪುರುಷಾರ್ಥವನ್ನೂ ಹೇಗೆ ಮಾಡಲು ಸಾಧ್ಯ! ಅವರು ಪುರುಷಾರ್ಥದಲ್ಲಿ ಕುಂಟುತ್ತಲೇ ಇರುವರು, ಕುಂಟುತ್ತಲೇ ನಡೆಯುವರು. ಬೇಹದ್ದಿನ ತಂದೆಯಿಂದ ಕಲ್ಪ-ಕಲ್ಪವೂ ಬೇಹದ್ದಿನ ಆಸ್ತಿಯು ಸಿಗುವುದು. ದೇವತೆಗಳಿರುವುದೇ ಸ್ವರ್ಗದಲ್ಲಿ, ಕಲಿಯುಗದಲ್ಲಂತೂ ರಾಜ್ಯಭಾಗ್ಯವಿಲ್ಲ. ಪ್ರಜೆಗಳ ಮೇಲೆ ಪ್ರಜೆಗಳ ರಾಜ್ಯವಾಗಿದೆ. ಪತಿತಪ್ರಪಂಚವನ್ನು ಪಾವನ ಪ್ರಪಂಚವನ್ನಾಗಿ ತಂದೆಯು ಮಾಡದೆ ಇನ್ನ್ಯಾರು ಮಾಡುವರು? ಅದೃಷ್ಟದಲ್ಲಿಲ್ಲದಿದ್ದರೆ ಅಂತಹವರು ಅರಿತುಕೊಳ್ಳುವುದೂ ಇಲ್ಲ. ಇವಂತೂ ಸಂಪೂರ್ಣ ಸಹಜ ತಿಳಿದುಕೊಳ್ಳುವ ಮಾತುಗಳಾಗಿವೆ. ಲಕ್ಷ್ಮಿ-ನಾರಾಯಣರು ಈ ರಾಜ್ಯಪದವಿಯ ಪ್ರಾಲಬ್ಧವನ್ನು ಯಾವಾಗ ಪಡೆದರು. ಅವಶ್ಯವಾಗಿ ಅದು ಅವರ ಹಿಂದಿನ ಜನ್ಮದ ಶ್ರೇಷ್ಠಕರ್ಮಗಳಿಂದಲೇ ಪ್ರಾಲಬ್ಧವನ್ನು ರೂಪಿಸಿಕೊಂಡಿದ್ದಾರೆ. ಲಕ್ಷ್ಮಿ-ನಾರಾಯಣರು ಸ್ವರ್ಗದ ಮಾಲೀಕರಾಗಿದ್ದರು. ಈಗ ನರಕವಾಗಿದೆ, ಅಂದಮೇಲೆ ಇಂತಹ ಶ್ರೇಷ್ಠಕರ್ಮ ಅಥವಾ ರಾಜಯೋಗವನ್ನು ತಂದೆಯ ವಿನಃ ಮತ್ತ್ಯಾರೂ ಕಲಿಸಲು ಸಾಧ್ಯವಿಲ್ಲ. ಈಗ ಎಲ್ಲರ ಅಂತಿಮ ಜನ್ಮವಾಗಿದೆ. ತಂದೆಯು ರಾಜಯೋಗವನ್ನು ಕಲಿಸುತ್ತಿದ್ದಾರೆ, ದ್ವಾಪರದಲ್ಲೇನು ರಾಜಯೋಗವನ್ನು ಕಲಿಸುವುದಿಲ್ಲ. ದ್ವಾಪರದ ನಂತರ ಸತ್ಯಯುಗವು ಬರುವುದಿಲ್ಲ. ಇಲ್ಲಿ ಬಂದಾಗ ಬಹಳ ಚೆನ್ನಾಗಿ ತಿಳಿದುಕೊಂಡು ಹೋಗುತ್ತಾರೆ. ಹೊರಗಡೆ ಹೋದತಕ್ಷಣವೇ ಖಾಲಿಯಾಗಿಬಿಡುತ್ತಾರೆ. ಹೇಗೆ ಡಬ್ಬಿಯಲ್ಲಿ ಕಲ್ಲುಗಳು ಮಾತ್ರವೇ ಉಳಿಯುತ್ತವೆ, ರತ್ನಗಳು ಹೊರಟುಹೋಗುತ್ತವೆ. ಜ್ಞಾನವನ್ನು ಕೇಳುತ್ತಾ-ಕೇಳುತ್ತಾ ಮತ್ತೆ ವಿಕಾರದಲ್ಲಿ ಬಿದ್ದರೆ ಸಮಾಪ್ತಿ. ಬುದ್ಧಿಯಿಂದ ಜ್ಞಾನರತ್ನಗಳು ಹೊರಟುಹೋಗುತ್ತವೆ. ಬಾಬಾ, ಪರಿಶ್ರಮಪಡುತ್ತಾ-ಪಡುತ್ತಾ ಮತ್ತೆ ಇಂದು ಕೆಳಗೆ ಬಿದ್ದೆನೆಂದು ಅನೇಕರು ಬರೆಯುತ್ತಾರೆ. ಬಿದ್ದರೆಂದರೆ ತಮ್ಮ ಕುಲಕ್ಕೆ ಇನ್ನೂ ಕಳಂಕ ತಂದರು, ತಮ್ಮ ಅದೃಷ್ಟಕ್ಕೆ ಅಡ್ಡಗೆರೆಯನ್ನು ಎಳೆದುಕೊಂಡರು ಎಂದರ್ಥ. ಮನೆಯಲ್ಲಿಯೂ ಸಹ ಮಕ್ಕಳು ಒಂದುವೇಳೆ ಯಾವುದೇ ಅಕರ್ತವ್ಯ ಮಾಡುತ್ತಾರೆಂದರೆ ಇಂತಹ ಮಕ್ಕಳು ಸಾಯುವುದೇ ಒಳ್ಳೆಯದೆಂದು ಹೇಳುತ್ತಾರಲ್ಲವೆ ಅಂದಾಗ ಈ ಬೇಹದ್ದಿನ ತಂದೆಯು ಹೇಳುತ್ತಾರೆ - ಮಕ್ಕಳೇ, ಕುಲಕಳಂಕಿತರಾಗಬೇಡಿ. ಒಂದುವೇಳೆ ವಿಕಾರಗಳ ದಾನವನ್ನು ಕೊಟ್ಟು ಮತ್ತೆ ಹಿಂತಿರುಗಿ ಪಡೆದರೆ ಪದವಿಭ್ರಷ್ಟವಾಗಿಬಿಡುವುದು. ಪುರುಷಾರ್ಥ ಮಾಡಿ ವಿಜಯಗಳಿಸಬೇಕಾಗಿದೆ. ಒಂದುವೇಳೆ ಪೆಟ್ಟುಬಿದ್ದರೆ ಮತ್ತೆ ಎದ್ದುನಿಲ್ಲಿ. ಪದೇ-ಪದೇ ಪೆಟ್ಟುತಿನ್ನುತ್ತಿದ್ದರೆ ಸೋಲನ್ನನುಭವಿಸಿ ಮೂರ್ಛಿತರಾಗಿಬಿಡುತ್ತೀರಿ. ತಂದೆಯಂತೂ ಬಹಳಷ್ಟು ತಿಳಿಸುತ್ತಾರೆ ಆದರೆ ಇದರಲ್ಲಿ ನಿಲ್ಲಬೇಕಷ್ಟೆ. ಮಾಯೆಯು ಬಹಳ ತೀಕ್ಷ್ಣವಾಗಿದೆ. ಪವಿತ್ರತೆಯ ಪ್ರತಿಜ್ಞೆ ಮಾಡಿ ಒಂದುವೇಳೆ ಮತ್ತೆ ಕೆಳಗೆ ಬಿದ್ದರೆ ಬಹಳ ಜೋರಾಗಿ ಪೆಟ್ಟುಬೀಳುತ್ತದೆ. ದೋಣಿಯು ಪಾರಾಗುವುದೇ ಪವಿತ್ರತೆಯಿಂದ. ಪವಿತ್ರತೆಯಿದ್ದಾಗ ಭಾರತದ ಕಿರೀಟವು ಹೊಳೆಯುತ್ತಿತ್ತು, ಈಗಂತೂ ಘೋರ ಅಂಧಕಾರವಿದೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತಾ ಬಾಪ್ದಾದಾರವರ ನೆನಪು ಪ್ರೀತಿ ಹಾಗೂ ನಮಸ್ತೆ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ಈ ಯುದ್ಧದ ಮೈದಾನದಲ್ಲಿ ಮಾಯೆಗೆ ಹೆದರಬಾರದು. ತಂದೆಯಿಂದ ಪುರುಷಾರ್ಥಕ್ಕಾಗಿ ಒಳ್ಳೆಯ ಮತವನ್ನು ತೆಗೆದುಕೊಳ್ಳಬೇಕು. ಆಜ್ಞಾಕಾರಿಗಳು, ಪ್ರಾಮಾಣಿಕರಾಗಿ ಶ್ರೀಮತದಂತೆ ನಡೆಯುತ್ತಿರಬೇಕಾಗಿದೆ.

2. ಆತ್ಮಿಕ ನಶೆಯಲ್ಲಿರಲು ಪ್ರತಿನಿತ್ಯವೂ ಜ್ಞಾನಾಮೃತದ ಪಾನ ಮಾಡಬೇಕಾಗಿದೆ. ನಿತ್ಯವೂ ಮುರುಳಿಯನ್ನು ಓದಬೇಕಾಗಿದೆ. ಅದೃಷ್ಟವಂತರಾಗಲು ತಂದೆಯಲ್ಲೆಂದೂ ಸಂಶಯ ಬರದಿರಲಿ.

ವರದಾನ:
ಬ್ರಹ್ಮಾ ತಂದೆಯ ಸಮಾನ ಜೀವನ್ಮುಕ್ತ ಸ್ಥಿತಿಯ ಅನುಭವ ಮಾಡುವಂತಹ ಕರ್ಮದ ಬಂಧನಗಳಿಂದ ಮುಕ್ತ ಭವ.

ಬ್ರಹ್ಮಾ ತಂದೆಯು ಕರ್ಮವನ್ನು ಮಾಡುತ್ತಿದ್ದರೂ ಕರ್ಮಗಳ ಬಂಧನದಲ್ಲಿ ಸಿಲುಕಲಿಲ್ಲ. ಸಂಬಂಧಗಳನ್ನು ನಿಭಾಯಿಸುತ್ತಿದ್ದರೂ ಸಂಬಂಧಗಳ ಬಂಧನದಲ್ಲಿ ಬಂಧಿತರಾಗಲಿಲ್ಲ. ಅವರು ಹಣ ಮತ್ತು ಸಾಧನಗಳ ಬಂಧನಗಳಿಂದಲೂ ಮುಕ್ತರಾಗಿದ್ದರು, ಜವಾಬ್ದಾರಿಯನ್ನು ಸಂಭಾಲನೆ ಮಾಡುತ್ತಿದ್ದರೂ ಜೀವನ್ಮುಕ್ತ ಸ್ಥಿತಿಯ ಅನುಭವ ಮಾಡಿದರು. ಹೀಗೆಯೇ ಫಾಲೋ ಫಾದರ್ ಮಾಡಿರಿ. ಯಾವುದೇ ಹಿಂದಿನ ಲೆಕ್ಕಾಚಾರಗಳ ಬಂಧನದಲ್ಲಿ ಬಂಧಿತರಾಗಬಾರದು. ಸಂಸ್ಕಾರ, ಸ್ವಭಾವ, ಪ್ರಭಾವ ಮತ್ತು ಒತ್ತಡಗಳ ಬಂಧನದಲ್ಲಿಯೂ ಬರಬಾರದು, ಆಗಲೇ ಕರ್ಮ ಬಂಧನ ಮುಕ್ತ, ಜೀವನ್ಮುಕ್ತ ಎಂದು ಹೇಳಲಾಗುತ್ತದೆ.

ಸ್ಲೋಗನ್:
ತಮೋಗುಣಿ ವಾಯುಮಂಡಲದಲ್ಲಿ ಸ್ವಯಂನ್ನು ಸುರಕ್ಷಿತವಾಗಿಟ್ಟುಕೊಳ್ಳಬೇಕೆಂದರೆ ಸಾಕ್ಷಿಯಾಗಿ ಆಟವನ್ನು ನೋಡುವ ಅಭ್ಯಾಸ ಮಾಡಿ.