25.01.25 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ - ನೀವು
ಚುರುಕಾದ ವಿದ್ಯಾರ್ಥಿಗಳಾಗಿ ಒಳ್ಳೆಯ ಅಂಕಗಳಿಂದ ತೇರ್ಗಡೆಯಾಗುವ ಪುರುಷಾರ್ಥ ಮಾಡಿ, ಸುಸ್ತಾದ
ವಿದ್ಯಾರ್ಥಿಗಳಾಗ ಬೇಡಿ, ಯಾರಿಗೆ ಇಡೀ ದಿನ ಮಿತ್ರಸಂಬಂಧಿಗಳ ನೆನಪು ಬರುವುದೋ ಅವರೇ
ಸುಸ್ತಾಗಿರುವವಿದ್ಯಾರ್ಥಿಗಳಾಗಿದ್ದಾರೆ”
ಪ್ರಶ್ನೆ:
ಸಂಗಮಯುಗದಲ್ಲಿ
ಎಲ್ಲರಿಗಿಂತ ಅದೃಷ್ಟವಂತರೆಂದು ಯಾರಿಗೆ ಹೇಳಲಾಗುತ್ತದೆ?
ಉತ್ತರ:
ಯಾರು ತಮ್ಮ
ತನು-ಮನ-ಧನವೆಲ್ಲವನ್ನೂ ಸಫಲ ಮಾಡಿದ್ದಾರೆ ಅಥವಾ ಮಾಡಿಕೊಳ್ಳುತ್ತಿದ್ದಾರೆಯೋ ಅವರೇ
ಅದೃಷ್ಟವಂತರಾಗಿದ್ದಾರೆ. ಕೆಲವರಂತೂ ಬಹಳ ಜಿಪುಣರಾಗಿರುತ್ತಾರೆ. ಅಂತಹವರ ಅದೃಷ್ಟದಲ್ಲಿಲ್ಲವೆಂದು
ತಿಳಿಯಲಾಗುತ್ತದೆ. ವಿನಾಶವು ಸಮ್ಮುಖದಲ್ಲಿ ನಿಂತಿದೆ. ಏನಾದರೂ ಪುಣ್ಯವನ್ನು
ಮಾಡಿಕೊಳ್ಳೋಣವೆಂಬುದನ್ನೂ ತಿಳಿದುಕೊಳ್ಳುವುದಿಲ್ಲ. ಅದೃಷ್ಟವಂತ ಮಕ್ಕಳು ಇದನ್ನು ತಿಳಿಯುತ್ತಾರೆ
- ತಂದೆಯು ಈಗ ಸನ್ಮುಖದಲ್ಲಿ ಬಂದಿದ್ದಾರೆ, ನಾವು ನಮ್ಮ ಸರ್ವಸ್ವವನ್ನು ಸಫಲ ಮಾಡಿಕೊಳ್ಳೋಣ.
ಧೈರ್ಯವನ್ನಿಟ್ಟು ಅನೇಕರ ಭಾಗ್ಯವನ್ನು ರೂಪಿಸಲು ನಿಮಿತ್ತರಾಗೋಣ.
ಗೀತೆ:
ಅದೃಷ್ಟವನ್ನುಬೆಳಗಿಸಿಕೊಂಡು ಬಂದಿದ್ದೇನೆ..........
ಓಂ ಶಾಂತಿ.
ಇಲ್ಲಂತೂ ನೀವು ಮಕ್ಕಳು ಅದೃಷ್ಟವನ್ನು ರೂಪಿಸಿಕೊಳ್ಳುತ್ತಿದ್ದೀರಿ. ಗೀತೆಯಲ್ಲಿ ಶ್ರೀಕೃಷ್ಣನ
ಹೆಸರನ್ನು ಹಾಕಿದ್ದಾರೆ ಮತ್ತು ತಿಳಿಸುತ್ತಾರೆ - ಭಗವಾನುವಾಚ, ನಾನು ನಿಮಗೆ ರಾಜಯೋಗವನ್ನು
ಕಲಿಸುತ್ತೇನೆ. ಈಗ ಕೃಷ್ಣಭಗವಾನುವಾಚವಂತೂ ಇಲ್ಲ. ಶ್ರೀಕೃಷ್ಣನ ಪದವಿಯು ನಮ್ಮ ಲಕ್ಷ್ಯವಾಗಿದೆ
ಮತ್ತೆ ಶಿವಭಗವಾನುವಾಚ ಏನೆಂದರೆ, ನಾನು ನಿಮ್ಮನ್ನು ರಾಜಾಧಿರಾಜರನ್ನಾಗಿ ಮಾಡುತ್ತೇನೆ ಅಂದಮೇಲೆ
ಮೊದಲು ಅವಶ್ಯವಾಗಿ ರಾಜಕುಮಾರ ಶ್ರೀಕೃಷ್ಣನಾಗುತ್ತಾನೆ ಅಂದಮೇಲೆ ಕೃಷ್ಣಭಗವಾನುವಾಚವಿಲ್ಲ. ಕೃಷ್ಣ
ನಿಮ್ಮೆಲ್ಲರ ಗುರಿ, ಉದ್ದೇಶವಾಗಿದೆ. ಇದು ನಿಮ್ಮ ಪಾಠಶಾಲೆಯಾಗಿದೆ. ಭಗವಂತನೇ ಓದಿಸುತ್ತಾರೆ,
ನೀವೆಲ್ಲರೂ ರಾಜಕುಮಾರ-ಕುಮಾರಿಯರಾಗಿದ್ದೀರಿ.
ತಂದೆಯು ತಿಳಿಸುತ್ತಾರೆ
- ನಾನು ಬಹಳ ಜನ್ಮಗಳ ಅಂತಿಮ ಜನ್ಮದಲ್ಲಿಯೂ ಅಂತ್ಯದಲ್ಲಿ ನಿಮಗೆ ಈ ಜ್ಞಾನವನ್ನು ತಿಳಿಸುತ್ತೇನೆ.
ಅದರಿಂದ ಇಂತಹ ಶ್ರೀಕೃಷ್ಣನಾಗುವುದಕ್ಕಾಗಿ. ಈ ಪಾಠಶಾಲೆಯ ಶಿಕ್ಷಕರು ಶಿವತಂದೆಯಾಗಿದ್ದಾರೆ,
ಶ್ರೀಕೃಷ್ಣನಲ್ಲ. ಶಿವತಂದೆಯೇ ದೈವೀಧರ್ಮದ ಸ್ಥಾಪನೆ ಮಾಡುತ್ತಾರೆ. ನಾವು ಅದೃಷ್ಟವನ್ನು
ರೂಪಿಸಿಕೊಳ್ಳಲು ಬಂದಿದ್ದೇವೆಂದು ಮಕ್ಕಳು ಹೇಳುತ್ತೀರಿ. ನಾವು ಪರಮಪಿತ ಪರಮಾತ್ಮನಿಂದ ಈಗ
ಭಾಗ್ಯವನ್ನು ರೂಪಿಸಿಕೊಳ್ಳಲು ಬಂದಿದ್ದೇವೆಂದು ಆತ್ಮಕ್ಕೆ ಗೊತ್ತಿದೆ. ಇದು
ರಾಜಕುಮಾರ-ಕುಮಾರಿಯಾಗುವ ಅದೃಷ್ಟವಾಗಿದೆ. ರಾಜಯೋಗವಲ್ಲವೆ! ಶಿವತಂದೆಯ ಮೂಲಕ ಮೊಟ್ಟಮೊದಲಿಗೆ
ಸ್ವರ್ಗದ ಎರಡೆಲೆಗಳಾದ ರಾಧಾಕೃಷ್ಣರು ಬರುತ್ತಾರೆ. ಈ ರಾಧಾಕೃಷ್ಣರ ಚಿತ್ರವನ್ನು ಮಾಡಿರುವುದು
ಸರಿಯಾಗಿದೆ. ತಿಳಿಸಿಕೊಡಲು ಬಹಳ ಚೆನ್ನಾಗಿದೆ. ಗೀತೆಯ ಜ್ಞಾನದಿಂದಲೇ ಅದೃಷ್ಟವು ರೂಪುಗೊಳ್ಳುತ್ತದೆ.
ಅದೃಷ್ಟವು ಬೆಳಗಿತ್ತು ಮತ್ತೆ ಅದು ಈಗ ಮಲಗಿಬಿಟ್ಟಿದೆ. ಅನೇಕ ಜನ್ಮಗಳ ಅಂತಿಮದಲ್ಲಿ ನೀವು ಒಮ್ಮೆಲೆ
ತಮೋಪ್ರಧಾನರು, ಬಿಕಾರಿಗಳಾಗಿಬಿಟ್ಟಿದ್ದೀರಿ. ಈಗ ಮತ್ತೆ ರಾಜಕುಮಾರರಾಗಬೇಕಾಗಿದೆ. ಮೊದಲಿಗೆ
ಅವಶ್ಯವಾಗಿ ರಾಧೆ-ಕೃಷ್ಣರು ಆಗುತ್ತಾರೆ ಮತ್ತೆ ಅವರ ರಾಜಧಾನಿಯು ನಡೆಯುತ್ತದೆ. ರಾಜಧಾನಿಯಲ್ಲಿ
ಕೇವಲ ಒಬ್ಬರೇ ಇರುವುದಿಲ್ಲ ಅಲ್ಲವೆ. ಸ್ವಯಂವರದ ನಂತರ ರಾಧೆ-ಕೃಷ್ಣರು,
ಲಕ್ಷ್ಮಿ-ನಾರಾಯಣನಾಗುತ್ತಾರೆ. ನರನಿಂದ ರಾಜಕುಮಾರ ಅಥವಾ ನಾರಾಯಣನಾಗುವುದು ಒಂದೇ ಮಾತಾಗಿದೆ. ನೀವು
ಮಕ್ಕಳು ತಿಳಿದುಕೊಂಡಿದ್ದೀರಿ - ಈ ಲಕ್ಷ್ಮಿ-ನಾರಾಯಣರು ಸ್ವರ್ಗದ ಮಾಲೀಕರಾಗಿದ್ದರು, ಅವಶ್ಯವಾಗಿ
ಸಂಗಮಯುಗದಲ್ಲಿಯೇ ಸ್ಥಾಪನೆಯಾಗಿರುವುದು ಆದ್ದರಿಂದ ಸಂಗಮಯುಗಕ್ಕೆ ಪುರುಷೋತ್ತಮಯುಗವೆಂದು
ಕರೆಯಲಾಗುತ್ತದೆ. ಆದಿಸನಾತನ ದೇವಿ-ದೇವತಾಧರ್ಮದ ಸ್ಥಾಪನೆಯಾಗುತ್ತದೆ, ಉಳಿದೆಲ್ಲಾ ಧರ್ಮಗಳ
ವಿನಾಶವಾಗುತ್ತದೆ. ಸತ್ಯಯುಗದಲ್ಲಿ ಒಂದೇ ಧರ್ಮವಿತ್ತು, ಅದೇ ಇತಿಹಾಸ-ಭೂಗೋಳವು ಪುನಃ
ಪುನರಾವರ್ತನೆಯಾಗುವುದಿದೆ. ಪುನಃ ಸ್ವರ್ಗದ ಸ್ಥಾಪನೆಯಾಗುವುದು ಯಾವುದರಲ್ಲಿ ಲಕ್ಷ್ಮಿ-ನಾರಾಯಣರ
ರಾಜ್ಯವಿತ್ತು, ಫರಿಸ್ತಾನವಾಗಿತ್ತು ಅದೇ ಈಗ ಸ್ಮಶಾನವಾಗಿದೆ. ಎಲ್ಲರೂ ಕಾಮಚಿತೆಯ ಮೇಲೆ ಕುಳಿತು
ಭಸ್ಮವಾಗಿಬಿಡುತ್ತಾರೆ. ಸತ್ಯಯುಗದಲ್ಲಿ ನೀವು ಮಹಲುಗಳನ್ನು ನಿರ್ಮಿಸುತ್ತೀರಿ. ಕೆಳಗಿನಿಂದ ಯಾವುದೇ
ಚಿನ್ನದ ದ್ವಾರಿಕೆ ಅಥವಾ ಲಂಕೆಯು ಮೇಲೆ ಹೊರಬರುವುದಿಲ್ಲ. ದ್ವಾರಿಕೆಯಿರಬಹುದು ಲಂಕೆಯಂತೂ ಇರಲು
ಸಾಧ್ಯವಿಲ್ಲ. ರಾಮರಾಜ್ಯಕ್ಕೆ ಸತ್ಯಯುಗವೆಂದು ಕರೆಯಲಾಗುತ್ತದೆ. ಸತ್ಯಚಿನ್ನವೇನಿತ್ತೋ
ಅದೆಲ್ಲವನ್ನೂ ಲೂಟಿಮಾಡಿದರು. ನೀವು ತಿಳಿಸುತ್ತೀರಿ - ಭಾರತವು ಎಷ್ಟು ಧನವಂತನಾಗಿತ್ತು, ಈಗ
ಕಂಗಾಲಾಗಿದೆ. ಕಂಗಾಲ ಎಂಬ ಶಬ್ಧವನ್ನು ಬರೆಯುವುದು ಯಾವುದೆ ಕೆಟ್ಟಮಾತಲ್ಲ. ನೀವು ತಿಳಿಸಿ -
ಸತ್ಯಯುಗದಲ್ಲಿ ಒಂದೇ ಧರ್ಮವಿತ್ತು, ಅಲ್ಲಿ ಮತ್ತ್ಯಾವುದೇ ಧರ್ಮಗಳಿರಲಿಲ್ಲ. ಇದು ಹೇಗೆ ಸಾಧ್ಯ,
ಕೇವಲ ದೇವತೆಗಳೇ ಇರುವರೇ ಎಂದು ಕೆಲವರು ಕೇಳುತ್ತಾರೆ. ಅನೇಕ ಮತ-ಮತಾಂತರಗಳಿವೆ. ಒಂದುಮತವು
ಇನ್ನೊಂದಕ್ಕೆ ಹೋಲುವುದಿಲ್ಲ. ಎಷ್ಟು ವಿಚಿತ್ರವಾಗಿದೆ! ಎಷ್ಟೊಂದು ಪಾತ್ರಧಾರಿಗಳಿದ್ದಾರೆ! ಈಗ
ಸ್ವರ್ಗದ ಸ್ಥಾಪನೆಯಾಗುತ್ತಿದೆ. ನಾವು ಸ್ವರ್ಗವಾಸಿಗಳಾಗುತ್ತೇವೆ. ಇದು ನೆನಪಿದ್ದರೂ ಸಹ ಸದಾ
ಹರ್ಷಿತಮುಖಿಯಾಗಿರುತ್ತೀರಿ. ನೀವು ಮಕ್ಕಳಿಗಂತೂ ಬಹಳ ಖುಷಿಯಿರಬೇಕು ಏಕೆಂದರೆ ನಿಮ್ಮ
ಗುರಿ-ಧ್ಯೇಯವಂತೂ ಬಹಳ ಉನ್ನತವಾಗಿದೆಯಲ್ಲವೆ - ನಾವು ಮನುಷ್ಯರಿಂದ ದೇವತೆ,
ಸ್ವರ್ಗವಾಸಿಗಳಾಗುತ್ತೇವೆ. ಸ್ವರ್ಗದ ಸ್ಥಾಪನೆಯಾಗುತ್ತಿದೆ ಎಂಬುದನ್ನೂ ಸಹ ನೀವು ಬ್ರಾಹ್ಮಣರೇ
ಅರಿತುಕೊಂಡಿದ್ದೀರಿ. ಇದು ಸದಾ ನೆನಪಿರಬೇಕು ಆದರೆ ಮಾಯೆಯು ಪದೇ-ಪದೇ ಮರೆಸಿಬಿಡುತ್ತದೆ.
ಅದೃಷ್ಟದಲ್ಲಿಲ್ಲವೆಂದರೆ ಸುಧಾರಣೆಯಾಗುವುದಿಲ್ಲ. ಅರ್ಧಕಲ್ಪದಿಂದ ಸುಳ್ಳುಹೇಳುವ
ಹವ್ಯಾಸವಾಗಿಬಿಟ್ಟಿದೆ. ಅದು ಹೋಗುವುದೇ ಇಲ್ಲ. ಅಸತ್ಯವನ್ನೂ ಸಹ ಖಜಾನೆಯೆಂದು ತಿಳಿದು
ಇಟ್ಟುಕೊಳ್ಳುತ್ತಾರೆ, ಬಿಡುವುದೇ ಇಲ್ಲ ಅಂದಾಗ ಅವರ ಅದೃಷ್ಟವೇ ಹೀಗಿದೆ ಎಂದು ತಿಳಿಯಲಾಗುತ್ತದೆ.
ತಂದೆಯನ್ನು ನೆನಪೇ ಮಾಡುವುದಿಲ್ಲ. ಪೂರ್ಣಮಮತ್ವವು ಬಿಟ್ಟುಹೋದಾಗಲೇ ನೆನಪು ಉಳಿಯುವುದು. ಇಡೀ
ಪ್ರಪಂಚದಿಂದ ವೈರಾಗ್ಯ. ಮಿತ್ರಸಂಬಂಧಿಗಳು ಮೊದಲಾದವರನ್ನು ನೋಡಿಯೂ ನೋಡದಂತಿರಬೇಕು ಏಕೆಂದರೆ ತಮಗೆ
ಗೊತ್ತಿದೆ, ಇವರೆಲ್ಲರೂ ನರಕವಾಸಿಗಳು, ಇದು ಸ್ಮಶಾನವಾಗಿದೆ, ಇದೆಲ್ಲವೂ ಸಮಾಪ್ತಿಯಾಗಲಿದೆ, ಈಗ
ನಾವೆಲ್ಲರೂ ಹಿಂತಿರುಗಿ ಹೋಗಬೇಕಾಗಿದೆ. ಸುಖಧಾಮ-ಶಾಂತಿಧಾಮವನ್ನು ನೆನಪು ಮಾಡುತ್ತೇವೆ. ನಾವು
ನೆನ್ನೆಯ ದಿನ ಸ್ವರ್ಗವಾಸಿಗಳಾಗಿದ್ದೆವು, ರಾಜ್ಯಭಾರ ಮಾಡುತ್ತಿದ್ದೆವು, ಅದನ್ನು
ಕಳೆದುಕೊಂಡಿದ್ದೇವೆ, ಈಗ ಪುನಃ ನಾವು ಆ ರಾಜ್ಯವನ್ನು ಪಡೆಯುತ್ತೇವೆ. ಮಕ್ಕಳು ತಿಳಿದುಕೊಂಡಿದ್ದೀರಿ
- ಭಕ್ತಿಮಾರ್ಗದಲ್ಲಿ ಎಷ್ಟೊಂದು ತಲೆಬಾಗುವುದು! ಹಣವನ್ನು ವೆಚ್ಚಮಾಡಲಾಗುತ್ತದೆ. ಚೀರಾಡುತ್ತಲೇ
ಇರುತ್ತಾರೆ ಆದರೆ ಸಿಗುವುದೇನೂ ಇಲ್ಲ. ತಂದೆಯೇ ಬಂದು ಸುಖಧಾಮದಲ್ಲಿ ಕರೆದುಕೊಂಡು ಹೋಗಿ ಎಂದು
ಆತ್ಮವೇ ಕರೆಯುತ್ತದೆ. ಅದೂ ಸಹ ಯಾವಾಗ ಅಂತಿಮದಲ್ಲಿ ಬಹಳ ದುಃಖವಾಗುವುದೋ ಆಗಲೇ ನೆನಪು ಮಾಡುತ್ತಾರೆ.
ನೀವು ನೋಡುತ್ತೀರಿ - ಈಗ
ಈ ಹಳೆಯಪ್ರಪಂಚವು ಸಮಾಪ್ತಿಯಾಗುವುದಿದೆ. ಇದು ನಮ್ಮ ಅಂತಿಮಜನ್ಮವಾಗಿದೆ, ಇದರಲ್ಲಿ ನಮಗೆ ಸಂಪೂರ್ಣ
ಜ್ಞಾನವು ಸಿಕ್ಕಿದೆ. ಜ್ಞಾನವನ್ನು ಪೂರ್ಣಧಾರಣೆ ಮಾಡಬೇಕಾಗಿದೆ. ಭೂಕಂಪ ಇತ್ಯಾದಿಗಳು ಆಕಸ್ಮಿಕವಾಗಿ
ಆಗುತ್ತದೆಯಲ್ಲವೆ. ಹಿಂದೂಸ್ಥಾನ-ಪಾಕೀಸ್ತಾನದ ವಿಭಜನೆಯಲ್ಲಿ ಎಷ್ಟೊಂದು ಮಂದಿ ಸತ್ತಿರಬಹುದು. ನೀವು
ಮಕ್ಕಳಿಗೆ ಆರಂಭದಿಂದ ಹಿಡಿದು ಅಂತ್ಯದವರೆಗೆ ಎಲ್ಲವೂ ಅರ್ಥವಾಗಿದೆ. ಇನ್ನೂ ಏನು ಉಳಿದಿದೆಯೋ ಅದೂ
ಸಹ ತಿಳಿಯುತ್ತಾಹೋಗುತ್ತದೆ. ಚಿನ್ನದಿಂದ ಮಾಡಿರುವುದು ಕೇವಲ ಒಂದು ಸೋಮನಾಥ ಮಂದಿರವೇನಲ್ಲ, ಇನ್ನೂ
ಅಕ್ಕಪಕ್ಕದ ಮಹಲು-ಮಂದಿರಗಳು ಚಿನ್ನದಿಂದ ಮಾಡಲ್ಪಟ್ಟಿರುತ್ತವೆ ಮತ್ತೆ ಏನಾಗುತ್ತದೆ ಮತ್ತೆ
ಅದೆಲ್ಲವೂ ಎಲ್ಲಿ ಮರೆಯಾಗಿಬಿಡುತ್ತದೆ? ಭೂಕಂಪದಲ್ಲಿ ಒಳಗೆ ಹೊರಟುಹೋಗಿ ಅದು ಸಿಗುವುದೇ ಇಲ್ಲವೆಂದು
ಹೇಳುವುದೇ? ಒಳಗಡೆ ಮುಚ್ಚಿಹೋಗುತ್ತದೆಯೇ..... ಏನಾಗುತ್ತದೆ? ಮುಂದೆಹೋದಂತೆ ನಿಮಗೆ ಎಲ್ಲವೂ
ಅರ್ಥವಾಗುವುದು. ಚಿನ್ನದ ದ್ವಾರಿಕೆಯು ಸಮುದ್ರದ ಕೆಳಗಡೆ ಹೊರಟುಹೋಯಿತೆಂದು ಹೇಳುತ್ತಾರೆ. ಈಗ ನೀವು
ಹೇಳುತ್ತೀರಿ - ನಾಟಕದಲ್ಲಿ ಅದು ಕೆಳಗೆ ಹೊರಟುಹೋಯಿತು ಮತ್ತೆ ಚಕ್ರವು ಸುತ್ತಿದಾಗ ಮೇಲೆ ಬರುವುದು
ಅಂದರೆ ಅದನ್ನು ಪುನಃ ಸ್ಥಾಪನೆ ಮಾಡಬೇಕಾಗುವುದು. ಈ ಚಕ್ರವನ್ನು ಬುದ್ಧಿಯಲ್ಲಿ ಸ್ಮರಣೆ ಮಾಡುತ್ತಾ
ಬಹಳ ಖುಷಿಯಿರಬೇಕು. ಈ ಚಿತ್ರವನ್ನಂತೂ ಜೇಬಿನಲ್ಲಿಟ್ಟುಕೊಂಡಿರಬೇಕು. ಈ ಬ್ಯಾಡ್ಜ್ ಬಹಳ ಸರ್ವೀಸಿಗೆ
ಯೋಗ್ಯವಾಗಿದೆ ಆದರೆ ಅಷ್ಟು ಸರ್ವೀಸನ್ನು ಯಾರೂ ಮಾಡುತ್ತಿಲ್ಲ. ನೀವು ಮಕ್ಕಳು ರೈಲಿನಲ್ಲಿಯೂ ಸಹ
ಬಹಳ ಸರ್ವೀಸ್ ಮಾಡಬಲ್ಲಿರಿ ಆದರೆ ನಾವು ರೈಲಿನಲ್ಲಿ ಏನು ಸರ್ವೀಸ್ ಮಾಡಿದೆವೆಂದು ಯಾರೂ ಸಹ
ಸಮಾಚಾರವನ್ನೇ ಬರೆಯುವುದಿಲ್ಲ. ಮೂರನೆಯ ದರ್ಜೆಯಲ್ಲಿಯೂ ಸಹ ಸರ್ವೀಸ್ ಮಾಡಬಹುದಾಗಿದೆ, ಆಗುತ್ತದೆ.
ಯಾರು ಕಲ್ಪದ ಹಿಂದೆ ತಿಳಿದುಕೊಂಡಿರುವರೋ, ಮನುಷ್ಯರಿಂದ ದೇವತೆಗಳಾಗಿರುವರೋ ಅವರೇ
ತಿಳಿದುಕೊಳ್ಳುತ್ತಾರೆ. ಮನುಷ್ಯರಿಂದ ದೇವತೆಗಳೆಂದು ಗಾಯನವಿದೆ, ಮನುಷ್ಯರಿಂದ ಕ್ರಿಶ್ಚಿಯನ್ನರು
ಅಥವಾ ಮನುಷ್ಯರಿಂದ ಸಿಖ್ಖರು ಎಂದು ಹೇಳುವುದಿಲ್ಲ. ಮನುಷ್ಯರಿಂದ ದೇವತೆಗಳಾದರು ಅರ್ಥಾತ್
ಆದಿಸನಾತನ ದೇವಿ-ದೇವತಾಧರ್ಮದ ಸ್ಥಾಪನೆಯಾಯಿತು ಉಳಿದವರೆಲ್ಲರೂ ತಮ್ಮ-ತಮ್ಮ ಧರ್ಮದಲ್ಲಿ
ಹೊರಟುಹೋದರು. ವೃಕ್ಷದಲ್ಲಿ ತೋರಿಸಲಾಗುತ್ತದೆ - ಯಾವ-ಯಾವ ಧರ್ಮಗಳು ಪುನಃ ಯಾವಾಗ
ಸ್ಥಾಪನೆಯಾಗುತ್ತದೆ? ದೇವತೆಗಳು ಹಿಂದೂಗಳಾಗಿಬಿಟ್ಟರು, ಹಿಂದೂಗಳಿಂದ ಮತ್ತೆ ಬೇರೆ-ಬೇರೆ
ಧರ್ಮಗಳಲ್ಲಿ ಸೇರಿಹೋಗಿದ್ದಾರೆ. ಯಾರು ತಮ್ಮ ಶ್ರೇಷ್ಠಧರ್ಮ ಮತ್ತು ಕರ್ಮವನ್ನು ಬಿಟ್ಟು
ಅನ್ಯಧರ್ಮಗಳಲ್ಲಿ ಹೋಗಿ ಕುಳಿತಿದ್ದಾರೆಯೋ ಅವರು ಪುನಃ ಮರಳಿ ಬರುತ್ತಾರೆ. ಕೊನೆಯಲ್ಲಿ ಸ್ವಲ್ಪ
ತಿಳಿದುಕೊಂಡರೂ ಸಹ ಪ್ರಜೆಗಳಲ್ಲಿ ಬಂದುಬಿಡುತ್ತಾರೆ. ದೇವಿ-ದೇವತಾಧರ್ಮದಲ್ಲಿ ಎಲ್ಲರೂ
ಬರುವುದಿಲ್ಲ. ಎಲ್ಲರೂ ತಮ್ಮ-ತಮ್ಮ ವಿಭಾಗದಲ್ಲಿರುತ್ತಾರೆ. ನಿಮ್ಮ ಬುದ್ಧಿಯಲ್ಲಿ ಇವೆಲ್ಲಾ
ಮಾತುಗಳಿವೆ. ಪ್ರಪಂಚದಲ್ಲಿ ಏನೇನನ್ನೋ ಮಾಡುತ್ತಿರುತ್ತಾರೆ. ದವಸ-ಧಾನ್ಯಗಳಿಗಾಗಿ ಎಷ್ಟೊಂದು
ಪ್ರಬಂಧ ಮಾಡುತ್ತಾರೆ, ದೊಡ್ಡ-ದೊಡ್ಡ ಯಂತ್ರಗಳನ್ನಿಡುತ್ತಾರೆ ಆದರೆ ಆಗುವುದೇನೂ ಇಲ್ಲ. ಸೃಷ್ಟಿಯು
ತಮೋಪ್ರಧಾನವಾಗಲೇಬೇಕು, ಏಣಿಯನ್ನು ಕೆಳಗಿಳಿಯಲೇಬೇಕಾಗಿದೆ. ನಾಟಕದಲ್ಲಿ ಯಾವುದು
ನೊಂದಾವಣೆಯಾಗಿದೆಯೋ ಅದೇ ಆಗುತ್ತಿರುತ್ತದೆ ಅಂದಾಗ ಪುನಃ ಹೊಸ ಪ್ರಪಂಚದ ಸ್ಥಾಪನೆಯು ಅವಶ್ಯವಾಗಿ
ಆಗುತ್ತದೆ. ಯಾವ ವಿಜ್ಞಾನವನ್ನು ಈಗ ಕಲಿಯುತ್ತಿದ್ದಾರೆ, ಕೆಲವು ವರ್ಷಗಳಲ್ಲಿಯೇ ಬಹಳ
ತೀಕ್ಷ್ಣವಾಗಿಬಿಡುತ್ತಾರೆ. ಇದರಿಂದ ಸತ್ಯಯುಗದಲ್ಲಿ ಬಹಳ ಒಳ್ಳೊಳ್ಳೆಯ ವಸ್ತುಗಳು ತಯಾರಾಗುತ್ತವೆ.
ಈ ವಿಜ್ಞಾನವು ಸತ್ಯಯುಗದಲ್ಲಿ ಸುಖಕೊಡುವಂತದ್ದಾಗಿರುತ್ತದೆ. ಇಲ್ಲಿ ಸುಖವು ಸ್ವಲ್ಪವೇ ಇದೆ,
ದುಃಖವು ಬಹಳ ಇದೆ. ಈ ವಿಜ್ಞಾನವು ಬಂದು ಎಷ್ಟು ವರ್ಷಗಳಾಯಿತು! ಮೊದಲಂತೂ ಈ ವಿದ್ಯುತ್, ಗ್ಯಾಸ್
ಇತ್ಯಾದಿಗಳಂತೂ ಏನೂ ಇರಲಿಲ್ಲ ಈಗಂತೂ ನೋಡಿ ಏನಾಗಿಬಿಟ್ಟಿದೆ! ಸತ್ಯಯುಗದಲ್ಲಂತೂ ಬಹುಬೇಗನೆ
ಕೆಲಸಗಳಾಗುತ್ತಿರುತ್ತದೆ. ಇಲ್ಲಿಯೂ ಸಹ ನೋಡಿ, ಮನೆಗಳು ಹೇಗೆ ನಿರ್ಮಾಣವಾಗುತ್ತವೆ! ಎಲ್ಲವೂ
ಸಿದ್ಧವಾಗಿರುತ್ತದೆ. ಎಷ್ಟೊಂದು ಅಂತಸ್ತುಗಳನ್ನು ಕಟ್ಟುತ್ತಾರೆ. ಅಲ್ಲಿ ಈ ರೀತಿ ಇರುವುದಿಲ್ಲ
ಏಕೆಂದರೆ ಅಲ್ಲಿ ಎಲ್ಲರಿಗೂ ತಮ್ಮತಮ್ಮದೇ ಆದ ಜಮೀನಿರುತ್ತದೆ. ಕಂದಾಯವೇನೂ ಬೀಳುವುದಿಲ್ಲ. ಅಲ್ಲಿ
ಅಪಾರಧನವಿರುತ್ತದೆ. ಬಹಳಷ್ಟು ಜಮೀನಿರುತ್ತದೆ. ನದಿಗಳೆಲ್ಲವೂ ಇರುತ್ತದೆ ಬಾಕಿ ನಂತರ ಅಗೆಯಲು
ಅಲ್ಲಿ ನಾಲೆ (ಪುಷ್ಕರಣಿ) ಗಳಿರುವುದಿಲ್ಲ.
ಮಕ್ಕಳಲ್ಲಿ ಎಷ್ಟೊಂದು
ಖುಷಿಯಿರಬೇಕು - ಈಗ ನಮಗೆ ಡಬಲ್ ಇಂಜಿನ್ ಸಿಕ್ಕಿದೆ. ಬೆಟ್ಟಗಳ ಮೇಲೆ ಹೋಗಬೇಕಾದರೆ ರೈಲಿಗೆ ಡಬಲ್
ಇಂಜಿನ್ ಹಾಕಬೇಕಾಗುತ್ತದೆ. ನೀವು ಮಕ್ಕಳೂ ಸಹ ಬೆರಳಿನ ಸಹಯೋಗವನ್ನು ಕೊಡುತ್ತೀರಲ್ಲವೆ. ನೀವು
ಕೆಲವರೇ ಇದ್ದೀರಿ, ನಿಮ್ಮ ಮಹಿಮೆಯ ಗಾಯನವೂ ಇದೆ. ತಿಳಿದುಕೊಂಡಿದ್ದೀರಿ - ನಾವು ಈಶ್ವರೀಯ
ಸೇವಾಧಾರಿಗಳಾಗಿದ್ದೇವೆ, ಶ್ರೀಮತದನುಸಾರ ಸೇವೆ ಮಾಡುತ್ತಿದ್ದೇವೆ. ತಂದೆಯೂ ಸಹ ಸೇವೆ ಮಾಡಲು
ಬಂದಿದ್ದಾರೆ. ಒಂದುಧರ್ಮದ ಸ್ಥಾಪನೆ ಅನೇಕ ಧರ್ಮಗಳ ವಿನಾಶ ಮಾಡಿಸುತ್ತಾರೆ. ಸ್ವಲ್ಪ ಮುಂದೆಹೋದಂತೆ
ನೋಡುವಿರಿ - ಬಹಳಷ್ಟು ಹೊಡೆದಾಟಗಳಾಗುತ್ತವೆ. ಈಗಲೂ ಸಹ ಹೊಡೆದಾಡಿ ಬಾಂಬುಗಳನ್ನು ಎಲ್ಲಿ
ಹಾಕಿಬಿಡುವರೋ ಎಂದು ಹೆದರುತ್ತಿದ್ದಾರೆ. ಪದೇ-ಪದೇ ಪರಸ್ಪರ ಬಹಳಷ್ಟು ಹೊಡೆದಾಡುತ್ತಿರುತ್ತಾರೆ.
ಮಕ್ಕಳಿಗೆ ಗೊತ್ತಿದೆ - ಹಳೆಯ ಪ್ರಪಂಚದ ಸಮಾಪ್ತಿಯಾಗಲೇಬೇಕಾಗಿದೆ ಮತ್ತೆ ನಾವುನಮ್ಮ ಮನೆಗೆ
ಹೊರಟುಹೋಗುತ್ತೇವೆ. ಈಗ 84 ಜನ್ಮಗಳ ಚಕ್ರವು ಪೂರ್ಣವಾಗಿದೆ, ಎಲ್ಲರೂ ಒಟ್ಟಿಗೆ ಹೊರಟುಹೋಗುತ್ತಾರೆ.
ನಿಮ್ಮಲ್ಲಿಯೂ ಸಹ ಕೆಲವರಿಗೇ ಇದು ಸದಾ ನೆನಪಿರುತ್ತದೆ. ಡ್ರಾಮಾನುಸಾರ ಚುರುಕು ಮತು ಸುಸ್ತಿನ
ಎರಡುಪ್ರಕಾರದ ವಿದ್ಯಾರ್ಥಿಗಳಿದ್ದಾರೆ. ಚುರುಕಾದ ವಿದ್ಯಾರ್ಥಿಗಳು ಒಳ್ಳೆಯ ಅಂಕಗಳಿಂದ
ತೇರ್ಗಡೆಯಾಗುತ್ತಾರೆ. ಯಾರು ಆಲಸಿಗಳಾಗುತ್ತಾರೆಯೋ ಅವರಿಂದ ಇಡೀದಿನ ಹೊಡೆದಾಡುವುದು, ಜಗಳವಾಡುವುದೇ
ಆಗುತ್ತಿರುತ್ತದೆ, ತಂದೆಯನ್ನು ನೆನಪೇ ಮಾಡುವುದಿಲ್ಲ. ಇಡೀ ದಿನ ಮಿತ್ರಸಂಬಂಧಿಗಳೇ ನೆನಪಿಗೆ
ಬರುತ್ತಿರುತ್ತಾರೆ. ಎಲ್ಲವನ್ನೂ ಇಲ್ಲಿ ಮರೆತುಹೋಗಬೇಕಾಗುತ್ತದೆ. ನಾವಾತ್ಮಗಳಾಗಿದ್ದೇವೆ, ಈ
ಶರೀರರೂಪಿ ಬಾಲಕ್ಕೆ ಸಿಲುಕಿಕೊಂಡಿದ್ದಾರೆ. ನಾವು ಕರ್ಮಾತೀತ ಸ್ಥಿತಿಯನ್ನು ಪಡೆಯುತ್ತೇವೆ ನಂತರ
ಬಾಲವು ಬಿಟ್ಟುಹೋಗುತ್ತದೆ. ಇದೇ ಚಿಂತೆಯಾಗಿದೆ - ಕರ್ಮಾತೀತ ಸ್ಥಿತಿಯಾಗಿಬಿಟ್ಟರೆ ಈ ಶರೀರವು
ಸಮಾಪ್ತಿಯಾಗುವುದು. ನಾವು ಶ್ಯಾಮನಿಂದ ಸುಂದರರಾಗಿಬಿಡುವೆವು, ಪರಿಶ್ರಮವಂತೂಪಡಬೇಕಲ್ಲವೆ.
ಪ್ರದರ್ಶನಿಯಲ್ಲಿಯೂ ಸಹ ನೋಡಿ, ಎಷ್ಟೊಂದು ಪರಿಶ್ರಮಪಡುತ್ತಾರೆ. ಮಹೇಂದ್ರ(ಭೋಪಾಲ್) ಎಷ್ಟೊಂದು
ಸಾಹಸವನ್ನು ತೋರಿಸಿದ್ದಾರೆ! ಒಂಟಿಯಾಗಿ ಎಷ್ಟೊಂದು ಪರಿಶ್ರಮದಿಂದ ಪ್ರದರ್ಶನಿ ಇತ್ಯಾದಿಯನ್ನು
ಮಾಡುತ್ತಾರೆ. ಪರಿಶ್ರಮದ ಫಲವಂತೂ ಸಿಗುತ್ತದೆಯಲ್ಲವೆ. ಪ್ರತಿಯೊಬ್ಬರೂ ಚಮತ್ಕಾರವನ್ನು
ತೋರಿಸುತ್ತಾರೆ, ಅನೇಕರ ಕಲ್ಯಾಣ ಮಾಡುತ್ತಾರೆ. ಮಿತ್ರಸಂಬಂಧಿಗಳು ಮೊದಲಾದವರ ಸಹಯೋಗದಿಂದಲೇ
ಎಷ್ಟೊಂದು ಕೆಲಸ ಮಾಡಿದ್ದಾರೆ, ಚಮತ್ಕಾರವಾಗಿದೆ. ಮಿತ್ರಸಂಬಂಧಿಗಳಿಗೆ ತಿಳಿಸುತ್ತಾರೆ - ಈ ಹಣ
ಇತ್ಯಾದಿಯೆಲ್ಲವನ್ನೂ ಈ ಕಾರ್ಯದಲ್ಲಿ ತೊಡಗಿಸಿ ಸುಮ್ಮನೆ ಇಟ್ಟುಕೊಂಡು ಏನು ಮಾಡುತ್ತೀರಿ?
ಧೈರ್ಯವಾಗಿ ಸೇವಾಕೇಂದ್ರಗಳನ್ನು ತೆರೆದಿದ್ದಾರೆ ಅನೇಕರ ಭಾಗ್ಯವನ್ನು ರೂಪಿಸಿದ್ದಾರೆ. ಇಂತಹವರು
5-7 ಮಂದಿ ಇದ್ದರೆ ಎಷ್ಟೊಂದು ಸೇವೆಯಾಗುವುದು. ಕೆಲಕೆಲವರಂತೂ ಬಹಳ ಜಿಪುಣರಾಗಿರುತ್ತಾರೆ ಅಂಥಹವರ
ಅದೃಷ್ಟದಲ್ಲಿಲ್ಲವೆಂದು ತಿಳಿಯಲಾಗುತ್ತದೆ. ವಿನಾಶವು ಸನ್ಮುಖದಲ್ಲಿ ನಿಂತಿದೆ. ಭಾಗ್ಯವನ್ನು
ರೂಪಿಸಿಕೊಳ್ಳೋಣವೆಂದು ತಿಳಿಯುವುದೇ ಇಲ್ಲ. ಈಗ ಮನುಷ್ಯರು ಈಶ್ವರಾರ್ಥವಾಗಿ ಯಾವ ದಾನ
ಮಾಡುತ್ತಾರೆಯೋ ಅದರಿಂದ ಏನೂ ಸಿಗುವುದಿಲ್ಲ. ಈಶ್ವರನಂತೂ ಈಗ ಸ್ವರ್ಗದ ರಾಜ್ಯಭಾಗ್ಯವನ್ನು ನೀಡಲು
ಬಂದಿದ್ದಾರೆ. ದಾನ-ಪುಣ್ಯ ಮಾಡುವವರಿಗೆ ಏನೂ ಸಿಗುವುದಿಲ್ಲ. ಸಂಗಮಯುಗದಲ್ಲಿ ಯಾರು ತಮ್ಮ
ತನು-ಮನ-ಧನವೆಲ್ಲವನ್ನೂ ಸಫಲ ಮಾಡಿದ್ದಾರೆ ಹಾಗೂ ಮಾಡುತ್ತಿದ್ದಾರೆಯೋ ಅವರೇ ಅದೃಷ್ಟವಂತರಾಗಿದ್ದಾರೆ
ಆದರೆ ಅದೃಷ್ಟದಲ್ಲಿಲ್ಲದಿದ್ದರೆ ಅರಿತುಕೊಳ್ಳುವುದೇ ಇಲ್ಲ. ನಿಮಗೆ ತಿಳಿದಿದೆ - ಅವರೂ
ಬ್ರಾಹ್ಮಣರಾಗಿದ್ದಾರೆ, ನಾವೂ ಬ್ರಾಹ್ಮಣರಾಗಿದ್ದೇವೆ. ನಾವು ಪ್ರಜಾಪಿತ
ಬ್ರಹ್ಮಾಕುಮಾರ-ಕುಮಾರಿಯರಾಗಿದ್ದೇವೆ. ಅವರು ಕುಖವಂಶಾವಳಿ, ನೀವು ಮುಖವಂಶಾವಳಿಯಾಗಿದ್ದೀರಿ.
ಶಿವಜಯಂತಿಯು ಸಂಗಮಯುಗದಲ್ಲಿಯೇ ಆಗುತ್ತದೆ. ಈಗ ಸ್ವರ್ಗವನ್ನಾಗಿ ಮಾಡಲು ತಂದೆಯು ಮನ್ಮನಾಭವದ
ಮಂತ್ರವನ್ನು ಕೊಡುತ್ತಾರೆ - ನನ್ನನ್ನು ನೆನಪು ಮಾಡಿದರೆ ನೀವು ಪವಿತ್ರರಾಗಿ ಪವಿತ್ರಪ್ರಪಂಚದ
ಮಾಲೀಕರಾಗಿಬಿಡುತ್ತೀರಿ. ಹೀಗೆ ಯುಕ್ತಿಯಿಂದ ಸಂದೇಶಪತ್ರಿಕೆಗಳನ್ನು ಮುದ್ರಿಸಬೇಕು. ಪ್ರಪಂಚದಲ್ಲಿ
ಅನೇಕರು ಮರಣಹೊಂದುತ್ತಿರುತ್ತಾರೆ. ಎಲ್ಲಿಯಾದರೂ ಯಾರಾದರೂ ಶರೀರಬಿಟ್ಟರೆ ಅಲ್ಲಿ ಸಂದೇಶಪತ್ರವನ್ನು
ಹಂಚಬೇಕು. ತಂದೆಯು ಯಾವಾಗ ಬರುವರೋ ಆಗಲೇ ಈ ಹಳೆಯಪ್ರಪಂಚದ ವಿನಾಶವಾಗುತ್ತದೆ ನಂತರ ಸ್ವರ್ಗದ
ಬಾಗಿಲು ತೆರೆಯುತ್ತದೆ. ಒಂದುವೇಳೆ ಯಾರಾದರೂ ಸುಖಧಾಮದಲ್ಲಿ ಹೋಗಬಯಸಿದರೆ ಇದು ಮಂತ್ರವಾಗಿದೆ -
ಮನ್ಮನಾಭವ. ಇಂತಹ ಸಂದೇಶದ ಮಧುರ ಪತ್ರಿಕೆಯು ಎಲ್ಲರ ಬಳಿಯಿರಬೇಕು ಸ್ಮಶಾನದಲ್ಲಿಯೂ ಸಹ ಹಂಚಬಹುದು.
ಮಕ್ಕಳಿಗೆ ಸರ್ವೀಸಿನ ನಶೆಯಿರಬೇಕಾಗಿದೆ. ಸರ್ವೀಸಿನ ಯುಕ್ತಿಗಳನ್ನಂತೂ ತಂದೆಯು ಬಹಳ ತಿಳಿಸುತ್ತಾರೆ.
ಇವನ್ನು ಚೆನ್ನಾಗಿ ಬರೆದಿಟ್ಟುಕೊಳ್ಳಬೇಕು. ಗುರಿ-ಧ್ಯೇಯವಂತೂ ಬರೆಯಲ್ಪಟ್ಟಿದೆ,
ತಿಳಿಸಿಕೊಡುವುದಕ್ಕೂ ಬಹಳ ಒಳ್ಳೆಯ ಯುಕ್ತಿಯಿರಬೇಕು. ಒಳ್ಳೆಯದು.
ಮಧುರಾತಿ ಮಧುರ ಅಗಲಿ
ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತಾ ಬಾಪ್ದಾದಾರವರ ನೆನಪು ಪ್ರೀತಿ ಹಾಗೂ
ನಮಸ್ತೆ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1. ಕರ್ಮಾತೀತ
ಸ್ಥಿತಿಯನ್ನು ಪ್ರಾಪ್ತಿ ಮಾಡಿಕೊಳ್ಳಲು ಈ ಶರೀರರೂಪಿ ಬಾಲವನ್ನು ಮರೆಯಬೇಕಾಗಿದೆ. ಒಬ್ಬ ತಂದೆಯ
ವಿನಃ ಯಾವುದೇ ಮಿತ್ರಸಂಬಂಧಿಗಳು ಮೊದಲಾದವರ ನೆನಪು ಬರಬಾರದು, ಈ ಪರಿಶ್ರಮಪಡಬೇಕಾಗಿದೆ.
2. ಶ್ರೀಮತದನುಸಾರ
ಈಶ್ವರೀಯ ಸೇವಾಧಾರಿಗಳಾಗಬೇಕಾಗಿದೆ. ತನು-ಮನ-ಧನವೆಲ್ಲವನ್ನೂ ಸಫಲ ಮಾಡಿ ತಮ್ಮ ಶ್ರೇಷ್ಠಭಾಗ್ಯವನ್ನು
ರೂಪಿಸಿಕೊಳ್ಳಬೇಕಾಗಿದೆ.
ವರದಾನ:
ಕರ್ಮಭೋಗ ರೂಪಿ
ಪರಿಸ್ಥಿತಿಯ ಆಕರ್ಷಣೆಯನ್ನೂ ಸಮಾಪ್ತಿ ಮಾಡುವಂತಹ ಸಂಪೂರ್ಣ ನಷ್ಟೋಮೋಹ ಭವ
ಇಲ್ಲಿಯವರೆಗೆ ಪ್ರಕೃತಿ
ಮೂಲಕ ಮಾಡಲ್ಪಟ್ಟಿರುವ ಪರಿಸ್ಥಿತಿಗಳ ಅವಸ್ಥೆಗಳು ತಮ್ಮ ಕಡೆಗೆ ಸ್ವಲ್ಪ ಸ್ವಲ್ಪ ಆಕರ್ಷಿತ
ಮಾಡುತ್ತವೆ. ಎಲ್ಲದಕ್ಕಿಂತ ಹೆಚ್ಚು ತಮ್ಮ ದೇಹದ ಲೆಕ್ಕಾಚಾರ, ಉಳಿದಿರುವ ಕರ್ಮಭೋಗದ ರೂಪದಲ್ಲಿ
ಬರುವಂತಹ ಪರಿಸ್ಥಿತಿ ತಮ್ಮ ಆಕರ್ಷಣೆ ಮಾಡುತ್ತವೆ – ಯಾವಾಗ ಈ ಆಕರ್ಷಣೆಯು ಸಮಾಪ್ತಿಯಾಗುತ್ತದೆ ಆಗ
ಸಂಪೂರ್ಣ ನಷ್ಟೋಮೋಹವೆಂದು ಹೇಳಲಾಗುತ್ತದೆ. ಯಾವುದೇ ದೇಹದ ಅಥವಾ ದೇಹದ ಪ್ರಪಂಚದ ಪರಿಸ್ಥಿತಿ
ಸ್ಥಿತಿಯನ್ನು ಅಲುಗಾಡಿಸಲು ಸಾಧ್ಯವಿಲ್ಲ – ಇದೇ ಸಂಪೂರ್ಣ ಸ್ಥಿತಿಯಾಗಿದೆ. ಯಾವಾಗ ಇಂತಹ
ಸ್ಥಿತಿಯನ್ನು ತಲುಪುತ್ತೇವೆ ಆಗ ಸೆಕೆಂಡ್ನಲ್ಲಿ ತಮ್ಮ ಮಾಸ್ಟರ್ ಸರ್ವಶಕ್ತಿವಂತನ ಸ್ವರೂಪದಲ್ಲಿ
ಸಹಜವಾಗಿ ಸ್ಥಿತಿರಾಗಬಹುದು.
ಸ್ಲೋಗನ್:
ಪವಿತ್ರತೆಯ
ವೃತ್ತ ಎಲ್ಲದಕ್ಕಿಂತ ಶ್ರೇಷ್ಠ ಸತ್ಯನಾರಾಯಣನ ವೃತ್ತವಾಗಿದೆ – ಇದರಲ್ಲಿ ಅತೀಂದ್ರಿಯ ಸುಖ
ಸಮಾವೇಶವಾಗಿದೆ.
ತಮ್ಮ ಶಕ್ತಿಶಾಲಿ ಮನಸ್ಸಾ
ಮೂಲಕ ಸಕಾಶ ಕೊಡುವ ಸೇವೆಯನ್ನು ಮಾಡಿರಿ
ಮನಸ್ಸಾ ಸೇವೆ ಬೇಹದ್ದಿನ
ಸೇವೆಯಾಗಿದೆ. ಎಷ್ಟು ನೀವು ಮನಸ್ಸಾನಿಂದ, ವಾಣಿಯಿಂದ ಸ್ವಯಂ ಸಾಂಪೆಲ್ ಆಗಿರಿ, ಸಾಂಪೆಲ್ನ್ನು ನೋಡಿ
ಸ್ವತಃವಾಗಿ ಆಕರ್ಷಿತರಾಗುವರು. ಯಾವುದೇ ಸ್ಥೂಲ ಕಾರ್ಯ ಮಾಡುತ್ತಾ ಮನಸ್ಸಾ ಮೂಲಕ ವೈಬ್ರೇಷನ್
ಹರಡಿಸುವ ಸೇವೆ ಮಾಡಿ. ಹೇಗೆ ಯಾವುದೇ ವ್ಯಾಪಾರಸ್ಥರಿದ್ದಾರೆ ಸ್ವಪ್ನದಲ್ಲಿಯೂ ತಮ್ಮ ವ್ಯಾಪಾರ
ನೋಡುತ್ತಾರೆ, ಹಾಗೆಯೇ ನಿಮ್ಮ ಕರ್ತವ್ಯವಾಗಿದೆ – ವಿಶ್ವ ಕಲ್ಯಾಣ ಮಾಡುವುದು. ಇದೇ ನಿಮ್ಮ
ಕರ್ತವ್ಯವಾಗಿದೆ, ಈ ಕರ್ತವ್ಯವನ್ನು ಸ್ಮೃತಿಯಲ್ಲಿಟ್ಟುಕೊಂಡು ಸದಾ ಸೇವೆಯಲ್ಲಿ ಬಿಜಿûಯಾಗಿರಿ.