25.04.25         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ - ತಂದೆಯ ಶ್ರೀಮತವು ನಿಮ್ಮನ್ನು ಸದಾ ಸುಖಿಯನ್ನಾಗಿ ಮಾಡುವಂತಹುದ್ದಾಗಿದೆ ಆದ್ದರಿಂದ ದೇಹಧಾರಿಗಳ ಮತವನ್ನು ಬಿಟ್ಟು ಒಬ್ಬ ತಂದೆಯ ಶ್ರೀಮತದಂತೆ ನಡೆಯಿರಿ”

ಪ್ರಶ್ನೆ:
ಯಾವ ಮಕ್ಕಳ ಬುದ್ಧಿಯ ಅಲೆದಾಟವು ಇಲ್ಲಿಯವರೆವಿಗೂ ನಿಂತಿಲ್ಲ?

ಉತ್ತರ:
ಯಾರಿಗೆ ಶ್ರೇಷ್ಠಾತಿಶ್ರೇಷ್ಠ ತಂದೆಯ ಮತದಲ್ಲಿ ಅಥವಾ ಈಶ್ವರನ ಮತದಲ್ಲಿ ಭರವಸೆಯಿಲ್ಲವೋ ಅವರ ಅಲೆದಾಟವು ಇಲ್ಲಿಯವರೆಗೂ ನಿಂತಿಲ್ಲ. ತಂದೆಯಲ್ಲಿ ಪೂರ್ಣನಿಶ್ಚಯವಿಲ್ಲದ ಕಾರಣ ಎರಡೂಕಡೆ ಕಾಲನ್ನಿಡುತ್ತಾರೆ. ಭಕ್ತಿ, ಗಂಗಾಸ್ನಾನ ಇತ್ಯಾದಿಗಳನ್ನೂ ಮಾಡುತ್ತಾರೆ ಮತ್ತು ತಂದೆಯ ಮತದಂತೆಯೂ ನಡೆಯುತ್ತಾರೆ. ಇಂತಹ ಮಕ್ಕಳ ಗತಿಯೇನಾಗುವುದು? ಶ್ರೀಮತದಂತೆ ನಡೆಯುವುದಿಲ್ಲ ಆದ್ದರಿಂದ ಪೆಟ್ಟುತಿನ್ನುತ್ತಾರೆ.

ಗೀತೆ:
ಈ ಪಾಪದ ಪ್ರಪಂಚದಿಂದ..............

ಓಂ ಶಾಂತಿ.
ಮಕ್ಕಳು ಈ ಭಕ್ತರ ಗೀತೆಯನ್ನು ಕೇಳಿದಿರಿ. ಈಗ ನೀವು ಈ ರೀತಿ ಹೇಳುವುದಿಲ್ಲ ಏಕೆಂದರೆ ನಿಮಗೆ ತಿಳಿದಿದೆ - ಶ್ರೇಷ್ಠಾತಿಶ್ರೇಷ್ಠ ತಂದೆಯು ನಮಗೆ ಸಿಕ್ಕಿದ್ದಾರೆ, ಅವರೊಬ್ಬರೇ ಶ್ರೇಷ್ಠಾತಿಶ್ರೇಷ್ಠನಾಗಿದ್ದಾರೆ ಉಳಿದಂತೆ ಯಾರೆಲ್ಲಾ ಈ ಸಮಯದ ಮನುಷ್ಯಮಾತ್ರರಿದ್ದಾರೆಯೋ ಅವರು ಬಹಳ ಕನಿಷ್ಟರಾಗಿದ್ದಾರೆ. ಶ್ರೇಷ್ಠಾತಿಶ್ರೇಷ್ಠ ಮನುಷ್ಯರೂ ಸಹ ಭಾರತದಲ್ಲಿ ಈ ದೇವಿ-ದೇವತೆಗಳೇ ಆಗಿದ್ದರು. ಸರ್ವಗುಣ ಸಂಪನ್ನರು.... ಎಂದು ಅವರ ಮಹಿಮೆಯೂ ಇದೆ. ಈಗ ಈ ದೇವತೆಗಳನ್ನು ಶ್ರೇಷ್ಠರನ್ನಾಗಿ ಯಾರು ಮಾಡಿದರು ಎಂಬುದು ಮನುಷ್ಯರಿಗೆ ತಿಳಿದಿಲ್ಲ. ಈಗಂತೂ ಸಂಪೂರ್ಣ ಪತಿತರಾಗಿಬಿಟ್ಟಿದ್ದಾರೆ. ತಂದೆಯು ಶ್ರೇಷ್ಠಾತಿಶ್ರೇಷ್ಠನಾಗಿದ್ದಾರೆ. ಸಾಧು-ಸಂತ ಮೊದಲಾದವರೆಲ್ಲರೂ ಅವರಿಗಾಗಿ ಸಾಧನೆ ಮಾಡುತ್ತಾರೆ. ಇಂತಹ ಸಾಧುಗಳ ಹಿಂದೆ ಮನುಷ್ಯರು ಎಷ್ಟೊಂದು ಅಲೆದಿದ್ದಾರೆ. ಈಗ ನೀವು ತಿಳಿದುಕೊಂಡಿದ್ದೀರಿ - ತಂದೆಯು ಬಂದಿದ್ದಾರೆ, ನಾವು ತಂದೆಯ ಬಳಿ ಹೋಗುತ್ತೇವೆ. ಅವರು ನಮಗೆ ಶ್ರೀಮತವನ್ನು ನೀಡಿ ಶ್ರೇಷ್ಠಾತಿಶ್ರೇಷ್ಠರು, ಸುಖಿಯನ್ನಾಗಿ ಮಾಡುತ್ತಾರೆ. ರಾವಣನ ಮತದಿಂದಲೇ ನೀವು ಎಷ್ಟೊಂದು ತುಚ್ಛಬುದ್ಧಿಯವರಾಗಿದ್ದೀರಿ. ಈಗ ನೀವು ಮತ್ತ್ಯಾರ ಮತದಂತೆಯೂ ನಡೆಯಬೇಡಿ. ನಾನು ಪತಿತ-ಪಾವನ ತಂದೆಯನ್ನು ಕರೆದಿರಿ ಅಂದಮೇಲೆ ಮತ್ತೆ ಮುಳುಗಿಸುವವರ ಹಿಂದೇಕೆ ಬೀಳುತ್ತೀರಿ! ಒಬ್ಬ ತಂದೆಯ ಮತವನ್ನು ಬಿಟ್ಟು ಅನೇಕರ ಬಳಿ ಹೋಗಿ ಏಕೆ ಮೋಸಹೋಗುತ್ತೀರಿ? ಕೆಲವು ಮಕ್ಕಳು ಜ್ಞಾನವನ್ನೂ ಕೇಳುತ್ತಾ ಇರುತ್ತಾರೆ ಮತ್ತೆ ಹೋಗಿ ಗಂಗಾಸ್ನಾನವನ್ನು ಮಾಡುತ್ತಾರೆ. ಗುರುಗಳ ಬಳಿಯೂ ಹೋಗುತ್ತಾರೆ. ತಂದೆಯು ತಿಳಿಸುತ್ತಾರೆ - ಆ ಗಂಗೆಯು ಪತಿತ-ಪಾವನಿಯಂತೂ ಅಲ್ಲ, ಆದರೂ ಸಹ ಮನುಷ್ಯರ ಮತದಂತೆ ನೀವು ಹೋಗಿ ಗಂಗಾಸ್ನಾನ ಇತ್ಯಾದಿಗಳನ್ನು ಮಾಡುತ್ತೀರಿ ಆದ್ದರಿಂದಲೇ ತಂದೆಯು ಹೇಳುತ್ತಾರೆ - ನಾನು ಶ್ರೇಷ್ಠಾತಿಶ್ರೇಷ್ಠ ತಂದೆಯಲ್ಲಿಯೂ ನಿಮಗೆ ಭರವಸೆಯಿಲ್ಲ. ಒಂದು ಕಡೆ ಈಶ್ವರೀಯ ಮತವು ಇನ್ನೊಂದು ಕಡೆ ಆಸುರೀಮತವು ಇದೆ. ಅವರ ಗತಿಯೇನಾಗುವುದು? ಎರಡೂಕಡೆ ಕಾಲನ್ನಿಟ್ಟರೆ ಕೆಳಗೆ ಬೀಳುತ್ತಾರೆ. ತಂದೆಯಲ್ಲಿಯೂ ಪೂರ್ಣನಿಶ್ಚಯವನ್ನಿಡುವುದಿಲ್ಲ. ಇದನ್ನೂ ಹೇಳುತ್ತಾರೆ - ಬಾಬಾ, ನಾವು ತಮ್ಮವರಾಗಿದ್ದೇವೆ, ತಮ್ಮ ಶ್ರೀಮತದಂತೆ ನಾವು ಶ್ರೇಷ್ಠರಾಗುತ್ತೇವೆ, ನಾವು ಶ್ರೇಷ್ಠಾತಿಶ್ರೇಷ್ಠ ತಂದೆಯ ಮತದಂತೆ ಹೆಜ್ಜೆಯನ್ನಿಡಬೇಕಾಗಿದೆ. ಶಾಂತಿಧಾಮ-ಸುಖಧಾಮದ ಮಾಲೀಕರನ್ನಾಗಿ ತಂದೆಯೇ ಮಾಡುತ್ತಾರೆ. ಮತ್ತೆ ತಂದೆಯು ತಿಳಿಸುತ್ತಾರೆ - ಯಾರ ಶರೀರದಲ್ಲಿ ನಾನು ಪ್ರವೇಶ ಮಾಡಿದ್ದೇನೆಯೋ ಅವರು ಮೊದಲು 12 ಜನ ಗುರುಗಳನ್ನು ಮಾಡಿಕೊಂಡಿದ್ದರು, ಆದರೂ ಸಹ ತಮೋಪ್ರಧಾನರೇ ಆದರು ಏನೂ ಪ್ರಯೋಜನವಾಗಲಿಲ್ಲ. ಈಗ ತಂದೆಯು ಸಿಕ್ಕಿರುವುದರಿಂದ ಎಲ್ಲವನ್ನೂ ಬಿಟ್ಟುಬಿಟ್ಟರು. ಶ್ರೇಷ್ಠಾತಿಶ್ರೇಷ್ಠ ತಂದೆಯು ಸಿಕ್ಕಿದರು ಮತ್ತು ತಂದೆಯು ತಿಳಿಸಿದರು - ಕೆಟ್ಟದನ್ನು ಕೇಳಬೇಡಿ, ಕೆಟ್ಟದ್ದನ್ನು ನೋಡಬೇಡಿ.... ಆದರೂ ಸಹ ಮನುಷ್ಯರು ಸಂಪೂರ್ಣ ಪತಿತ, ತಮೋಪ್ರಧಾನ ಬುದ್ಧಿಯವರಾಗಿದ್ದಾರೆ. ಇಲ್ಲಿಯೂ ಸಹ ಅನೇಕರಿದ್ದಾರೆ, ಶ್ರೀಮತದಂತೆ ನಡೆಯುವುದಿಲ್ಲ. ಅಷ್ಟು ಶಕ್ತಿಯಿಲ್ಲ. ಮಾಯೆಯು ಮೋಸಗೊಳಿಸುತ್ತಿರುತ್ತದೆ ಏಕೆಂದರೆ ರಾವಣನು ಶತ್ರು, ರಾಮನು ಮಿತ್ರನಾಗಿದ್ದಾನೆ. ಕೆಲವರು ರಾಮನೆಂದು ಹೇಳುತ್ತಾರೆ, ಕೆಲವರು ಶಿವನೆಂದು ಹೇಳುತ್ತಾರೆ. ಮೂಲ ಹೆಸರು ಶಿವತಂದೆಯೆಂದಾಗಿದೆ. ನಾನು ಪುನರ್ಜನ್ಮದಲ್ಲಿ ಬರುವುದಿಲ್ಲ, ನಾಟಕದಲ್ಲಿ ನನ್ನ ಹೆಸರು ಶಿವನೆಂದೇ ಇಡಲಾಗಿದೆ. ಒಂದು ವಸ್ತುವಿಗೆ 10 ಹೆಸರುಗಳನ್ನಿಟ್ಟಿರುವುದರಿಂದ ಮನುಷ್ಯರು ತಬ್ಬಿಬ್ಬಾಗಿದ್ದಾರೆ, ಯಾರಿಗೇನು ಬಂದಿತೋ ಆ ಹೆಸರನ್ನಿಟ್ಟುಬಿಟ್ಟರು. ನನ್ನ ಮೂಲಹೆಸರು ಶಿವನೆಂದಾಗಿದೆ. ನಾನು ಈ ಶರೀರದಲ್ಲಿ ಪ್ರವೇಶ ಮಾಡುತ್ತೇನೆ, ನಾನು ಕೃಷ್ಣ ಮೊದಲಾದವರಲ್ಲಿ ಬರುವುದಿಲ್ಲ. ವಿಷ್ಣು -ಸೂಕ್ಷ್ಮವತನದ ನಿವಾಸಿಯಾಗಿದ್ದಾರೆಂದು ಅವರು ತಿಳಿಯುತ್ತಾರೆ. ವಾಸ್ತವದಲ್ಲಿ ಕಂಬೈಂಡ್ ರೂಪವಾಗಿದೆ, ಪ್ರವೃತ್ತಿಮಾರ್ಗವಾಗಿದೆ. ನಾಲ್ಕುಭುಜಧಾರಿಗಳು ಯಾರೂ ಇರುವುದಿಲ್ಲ. ನಾಲ್ಕುಭುಜಗಳೆಂದರೆ ಪ್ರವೃತ್ತಿ ಮಾರ್ಗವಾಗಿದೆ, ಎರಡು ಭುಜಗಳೆಂದರೆ ನಿವೃತ್ತಿ ಮಾರ್ಗವಾಗಿದೆ. ತಂದೆಯು ಪ್ರವೃತ್ತಿ ಮಾರ್ಗದ ಧರ್ಮವನ್ನು ಸ್ಥಾಪನೆ ಮಾಡುತ್ತಾರೆ. ಸನ್ಯಾಸಿಗಳು ನಿವೃತ್ತಿ ಮಾರ್ಗದವರಾಗಿದ್ದಾರೆ. ಪ್ರವೃತ್ತಿ ಮಾರ್ಗದವರೇ ಮತ್ತೆ ಪಾವನರಿಂದ ಪತಿತರಾಗುತ್ತಾರೆ. ಆದ್ದರಿಂದ ಸೃಷ್ಟಿಯನ್ನು ತಮನ ಮಾಡಲು ಸನ್ಯಾಸಿಗಳದು ಪವಿತ್ರರಾಗುವ ಪಾತ್ರವಾಗಿದೆ. ಅವರೂ ಸಹ ಲಕ್ಷಾಂತರ-ಕೋಟ್ಯಾಂತರ ಅಂದಾಜಿನಲ್ಲಿದ್ದಾರೆ. ಮೇಳವಾದಾಗ ಅನೇಕರು ಬರುತ್ತಾರೆ, ಅವರು ಅಡಿಗೆ ಮಾಡಿಕೊಳ್ಳುವುದಿಲ್ಲ. ಗೃಹಸ್ಥಿಗಳ ಪಾಲನೆಯಲ್ಲಿಯೇ ಬೆಳೆಯುತ್ತಾರೆ. ಕರ್ಮ ಸನ್ಯಾಸ ಮಾಡಿದ ಮೇಲೆ ಮತ್ತೆ ಭೋಜನವೆಲ್ಲಿಂದ ಬರುವುದು! ಆದ್ದರಿಂದ ಗೃಹಸ್ಥಿಗಳಿಂದ ತಿನ್ನುತ್ತಾರೆ. ಗೃಹಸ್ಥಿಗಳು, ಇದು ಸಹ ನಮ್ಮ ದಾನವಾಯಿತು ಎಂದು ತಿಳಿಯುತ್ತಾರೆ. ಇವರು (ಬ್ರಹ್ಮಾ) ಪೂಜಾರಿ, ಪತಿತನಾಗಿದ್ದರು. ಮತ್ತೆ ಈಗ ಶ್ರೀಮತದಂತೆ ನಡೆದು ಪಾವನರಾಗುತ್ತಿದ್ದಾರೆ. ತಂದೆಯಿಂದ ಆಸ್ತಿಯನ್ನು ತೆಗೆದುಕೊಳ್ಳುವ ಪುರುಷಾರ್ಥ ಮಾಡುತ್ತಿದ್ದಾರೆ, ಆದ್ದರಿಂದಲೇ ತಂದೆಯು ತಿಳಿಸುತ್ತಾರೆ - ಮಕ್ಕಳೇ, ಮಾತಾಪಿತರನ್ನು ಅನುಕರಣೆ ಮಾಡಿ. ಮಾಯೆಯು ಪ್ರತಿಯೊಂದು ಮಾತಿನಲ್ಲಿ ಹಿಂದೆ ಬೀಳುತ್ತದೆ. ದೇಹಾಭಿಮಾನದಿಂದಲೇ ಮನುಷ್ಯರು ತಪ್ಪು ಮಾಡುತ್ತಾರೆ. ಭಲೆ ಬಡವರಿರಲಿ, ಸಾಹುಕಾರರಿರಲಿ ದೇಹಾಭಿಮಾನವು ಬಿಟ್ಟುಹೋಗಬೇಕು. ದೇಹಾಭಿಮಾನವನ್ನು ಬಿಡುವುದರಲ್ಲಿಯೇ ಬಹಳ ಪರಿಶ್ರಮವಿದೆ, ನೀವು ತಮ್ಮನ್ನು ಆತ್ಮವೆಂದು ತಿಳಿದು ದೇಹದಿಂದ ಪಾತ್ರವನ್ನಭಿನಯಿಸಿ, ನೀವು ದೇಹಾಭಿಮಾನದಲ್ಲಿ ಏಕೆ ಬರುತ್ತೀರಿ? ನಾಟಕದನುಸಾರ ದೇಹಾಭಿಮಾನದಲ್ಲಿ ಬರಲೇಬೇಕಾಗಿದೆ. ಈ ಸಮಯದಲ್ಲಂತೂ ಪಕ್ಕಾ ದೇಹಾಭಿಮಾನಿಗಳಾಗಿದ್ದಾರೆ. ತಂದೆಯು ತಿಳಿಸುತ್ತಾರೆ - ನೀವಂತೂ ಆತ್ಮವಾಗಿದ್ದೀರಿ, ಆತ್ಮವೇ ಎಲ್ಲವನ್ನೂ ಮಾಡುತ್ತದೆ, ಆತ್ಮವು ಶರೀರದಿಂದ ಬೇರೆಯಾದರೆ ಮತ್ತೆ ಶರೀರವನ್ನು ಕತ್ತರಿಸಿದರೂ ಸಹ ಯಾವುದೇ ಶಬ್ಧವು ಹೊರಬರುವುದಿಲ್ಲ. ನನ್ನ ಶರೀರಕ್ಕೆ ದುಃಖ ಕೊಡಬೇಡಿ ಎಂದು ಆತ್ಮವೇ ಹೇಳುತ್ತದೆ, ಆತ್ಮವು ಅವಿನಾಶಿಯಾಗಿದೆ, ಶರೀರವು ವಿನಾಶಿಯಾಗಿದೆ. ತಮ್ಮನ್ನು ಆತ್ಮವೆಂದು ತಿಳಿದು ತಂದೆಯಾದ ನನ್ನನ್ನು ನೆನಪು ಮಾಡಿ, ದೇಹಾಭಿಮಾನವನ್ನು ಬಿಡಿ.

ನೀವು ಮಕ್ಕಳು ಎಷ್ಟು ದೇಹೀ-ಅಭಿಮಾನಿಗಳಾಗುತ್ತೀರೋ ಅಷ್ಟು ಆರೋಗ್ಯವಂತರು ಮತ್ತು ನಿರೋಗಿಯಾಗುತ್ತಾ ಹೋಗುತ್ತೀರಿ. ಈ ಯೋಗಬಲದಿಂದಲೇ ನೀವು 21 ಜನ್ಮಗಳವರೆಗೆ ನಿರೋಗಿಯಾಗುತ್ತೀರಿ. ಎಷ್ಟು ಆಗುತ್ತೀರೋ ಅಷ್ಟು ಶ್ರೇಷ್ಠ ಪದವಿಯೂ ಸಿಗುವುದು. ಶಿಕ್ಷೆಗಳಿಂದ ಮುಕ್ತರಾಗುತ್ತೀರಿ, ಇಲ್ಲವಾದರೆ ಬಹಳ ಶಿಕ್ಷೆಯನ್ನನುಭವಿಸಬೇಕಾಗುವುದು ಅಂದಮೇಲೆ ಎಷ್ಟೊಂದು ದೇಹೀಅಭಿಮಾನಿಗಳಾಗಬೇಕಾಗಿದೆ. ಕೆಲವರ ಅದೃಷ್ಟದಲ್ಲಿ ಈ ಜ್ಞಾನವೇ ಇಲ್ಲ. ಎಲ್ಲಿಯವರೆಗೆ ನಿಮ್ಮ ಕುಲದಲ್ಲಿ ಬರುವುದಿಲ್ಲವೋ ಅರ್ಥಾತ್ ಬ್ರಹ್ಮಾಮುಖವಂಶಾವಳಿಯಾಗು
ವುದಿಲ್ಲವೋ ಅಂದರೆ ಬ್ರಾಹ್ಮಣರಾಗದ ಹೊರತು ದೇವತೆಗಳು ಹೇಗಾಗುತ್ತಾರೆ! ಭಲೆ ಅನೇಕರು ಬರುತ್ತಾರೆ, ಬಾಬಾ ಬಾಬಾ ಎಂದು ಬರೆಯುತ್ತಾರೆ ಅಥವಾ ಹೇಳುತ್ತಾರೆ ಆದರೆ ಕೇವಲ ನಾಮಮಾತ್ರಕ್ಕಷ್ಟೆ. ಒಂದೆರಡು ಪತ್ರ ಬರೆದು ಮತ್ತೆ ಮಾಯವಾಗಿಬಿಡುತ್ತಾರೆ. ಅವರೂ ಸಹ ಸತ್ಯಯುಗದಲ್ಲಿ ಬರುತ್ತಾರೆ ಆದರೆ ಪ್ರಜೆಗಳಲ್ಲಿ. ಪ್ರಜೆಗಳಂತೂ ಬಹಳ ಆಗುತ್ತಾರಲ್ಲವೆ. ಮುಂದೆ ಹೋದಂತೆ ಯಾವಾಗ ದುಃಖ ಹೆಚ್ಚುವುದೋ ಆಗ ಅನೇಕರು ಓಡಿಬರುವರು. ಭಗವಂತನು ಬಂದಿದ್ದಾರೆಂಬ ಸದ್ದು ಹರಡುವುದು. ನಿಮ್ಮ ಅನೇಕ ಸೇವಾಕೇಂದ್ರಗಳು ತೆರೆಯುತ್ತವೆ. ನೀವು ಮಕ್ಕಳ ಕೊರತೆಯೇನೆಂದರೆ ದೇಹೀ-ಅಭಿಮಾನಿಗಳಾಗುವುದಿಲ್ಲ ಅಂದರೆ ಇನ್ನೂ ಬಹಳ ದೇಹಾಭಿಮಾನವಿದೆ, ಅಂತಿಮದಲ್ಲಿ ಸ್ವಲ್ಪ ದೇಹಾಭಿಮಾನವಿದ್ದರೂ ಸಹ ಪದವಿಯು ಕಡಿಮೆಯಾಗಿಬಿಡುವುದು. ಮತ್ತೆ ಬಂದು ದಾಸ-ದಾಸಿಯರಾಗುತ್ತೀರಿ. ದಾಸ-ದಾಸಿಯರು ನಂಬರ್ವಾರ್ ಆಗಿ ಅನೇಕರಿರುತ್ತಾರೆ. ರಾಜರಿಗಂತೂ ದಾಸಿಯರು ಅನೇಕರು ಸಿಗುತ್ತಾರೆ, ಸಾಹುಕಾರರಿಗೆ ಸಿಗುವುದಿಲ್ಲ. ಮಕ್ಕಳು ನೋಡಿದ್ದೀರಿ - ರಾಧೆಯು ಎಷ್ಟೊಂದು ದಾಸಿಯರನ್ನು ವರದಕ್ಷಿಣೆಯಾಗಿ ಕರೆದುಕೊಂಡು ಬರುತ್ತಾಳೆ. ಮುಂದೆಹೋದಂತೆ ಬಹಳ ಸಾಕ್ಷಾತ್ಕಾರವಾಗುತ್ತದೆ. ದಾಸಿಗಳಾಗುವುದಕ್ಕಿಂತಲೂ ಸಾಹುಕಾರ ಪ್ರಜೆಗಳಾಗುವುದೇ ಒಳ್ಳೆಯದಾಗಿದೆ. ದಾಸಿ ಶಬ್ಧವು ಕೆಟ್ಟದ್ದಾಗಿದೆ! ಪ್ರಜೆಗಳಲ್ಲಿ ಸಾಹುಕಾರರಾದರೂ ಒಳ್ಳೆಯದು, ತಂದೆಯ ಮಕ್ಕಳಾಗುವುದರಿಂದ ಮಾಯೆಯು ಇನ್ನೂ ಚೆನ್ನಾಗಿ ಖಾತರಿ ಮಾಡುತ್ತದೆ. ಶಕ್ತಿಶಾಲಿಗಳೊಂದಿಗೆ ಶಕ್ತಿಶಾಲಿಯಾಗಿ ಹೋರಾಡುತ್ತದೆ, ದೇಹಾಭಿಮಾನವು ಬಂದುಬಿಡುತ್ತದೆ. ಅಂತಹವರು ಶಿವತಂದೆಯಿಂದಲೂ ಮುಖವನ್ನು ತಿರುಗಿಸಿಕೊಳ್ಳುತ್ತಾರೆ. ತಂದೆಯ ನೆನಪನ್ನು ಮಾಡುವುದೇ ಬಿಟ್ಟುಬಿಡುತ್ತಾರೆ. ಅರೆ! ತಿನ್ನುವುದಕ್ಕೆ ಬಿಡುವಿದೆ ಮತ್ತು ಯಾವ ತಂದೆಯು ವಿಶ್ವದ ಮಾಲೀಕರನ್ನಾಗಿ ಮಾಡುವರೋ ಅವರನ್ನು ನೆನಪು ಮಾಡಲು ಬಿಡುವಿರುವುದಿಲ್ಲವೆ? ಒಳ್ಳೊಳ್ಳೆಯ ಮಕ್ಕಳು, ಶಿವತಂದೆಯನ್ನು ಮರೆತು ದೇಹಾಭಿಮಾನದಲ್ಲಿ ಬಂದುಬಿಡುತ್ತಾರೆ. ಇಲ್ಲದಿದ್ದರೆ ಇಂತಹ ತಂದೆಯು ಯಾರು ಜೀವದಾನ ನೀಡುತ್ತಾರೆಯೋ ಅವರನ್ನು ನೆನಪು ಮಾಡಿ, ಪತ್ರವನ್ನಾದರೂ ಬರೆಯಲಿ. ಆದರೆ ಇಲ್ಲಿ ಮಾತೇ ಕೇಳಬೇಡಿ, ಮಾಯೆಯು ಒಮ್ಮೆಲೆ ಮೂಗನ್ನು ಹಿಡಿದು ಹಾರಿಸಿಬಿಡುತ್ತದೆ. ಹೆಜ್ಜೆ-ಹೆಜ್ಜೆಯಲ್ಲಿ ಶ್ರೀಮತದಂತೆ ನಡೆದರೆ ಒಂದೊಂದು ಹೆಜ್ಜೆಯಲ್ಲಿ ಪದುಮಗಳಷ್ಟಿದೆ. ನೀವು ಬಹಳಷ್ಟು ಧನವಂತರಾಗುತ್ತೀರಿ ಅಲ್ಲಿ ಎಣಿಕೆಯಿರುವುದಿಲ್ಲ. ಹಣ, ಅಂತಸ್ತು, ಅಧಿಕಾರ ಎಲ್ಲವೂ ಸಿಗುತ್ತದೆ. ಅಲ್ಲಿ ತಾಮ್ರ, ಕಬ್ಬಿಣ, ಕಂಚು ಇತ್ಯಾದಿಯೇನೂ ಇರುವುದಿಲ್ಲ. ಚಿನ್ನದ ನಾಣ್ಯಗಳಿರುತ್ತವೆ. ಮನೆಯನ್ನೇ ಚಿನ್ನದಿಂದ ಕಟ್ಟುತ್ತಾರೆಂದರೆ ಏನು ತಾನೇ ಇರುವುದಿಲ್ಲ. ಇಲ್ಲಂತೂ ಭ್ರಷ್ಟಾಚಾರಿ ರಾಜ್ಯವಾಗಿದೆ. ಯಥಾರಾಜ-ರಾಣಿ ತಥಾಪ್ರಜಾ. ಸತ್ಯಯುಗದಲ್ಲಿ ರಾಜ-ರಾಣಿ ಹೇಗೋ ಹಾಗೆಯೇ ಪ್ರಜೆಗಳೆಲ್ಲರೂ ಶ್ರೇಷ್ಠಾಚಾರಿಗಳಾಗಿರುತ್ತಾರೆ ಆದರೆ ಮನುಷ್ಯರ ಬುದ್ಧಿಯಲ್ಲಿ ಇದು ಕುಳಿತುಕೊಳ್ಳುವುದೇ ಇಲ್ಲ, ತಮೋಪ್ರಧಾನಬುದ್ಧಿಯವರಾಗಿದ್ದಾರೆ. ತಂದೆಯು ತಿಳಿಸುತ್ತಾರೆ - ನೀವೂ ಸಹ ಹಾಗೆಯೇ ಇದ್ದಿರಿ. ಇವರೂ (ಬ್ರಹ್ಮಾ) ಹಾಗೆಯೇ ಇದ್ದರು. ಈಗ ನಾನು ಬಂದು ದೇವತೆಯನ್ನಾಗಿ ಮಾಡುತ್ತೇನೆಂದರೂ ಸಹ ಆಗುವುದಿಲ್ಲ. ಪರಸ್ಪರ ಜಗಳವಾಡುತ್ತಿರುತ್ತಾರೆ. ನಾನು ಬಹಳ ಒಳ್ಳೆಯವನಾಗಿದ್ದೇನೆ, ನಾನು ಇದಾಗಿದ್ದೇನೆ...... ಎನ್ನುತ್ತಾರೆ. ನಾವು ನರಕದಲ್ಲಿದ್ದೇವೆ, ರೌರವ ನರಕದಲ್ಲಿ ಬಿದ್ದಿದ್ದೇವೆ ಎಂಬುದನ್ನು ಯಾರೂ ತಿಳಿದುಕೊಳ್ಳುವುದಿಲ್ಲ. ಇದನ್ನೂ ಸಹ ನೀವು ಮಕ್ಕಳೇ ನಂಬರ್ವಾರ್ ಪುರುಷಾರ್ಥದನುಸಾರ ಅರಿತುಕೊಂಡಿದ್ದೀರಿ. ಮನುಷ್ಯರಂತೂ ಸಂಪೂರ್ಣ ನರಕದಲ್ಲಿ ಬಿದ್ದಿದ್ದಾರೆ. ದಿನ-ರಾತ್ರಿ ಚಿಂತೆಗಳಲ್ಲಿ ಮುಳುಗಿರುತ್ತಾರೆ. ಜ್ಞಾನಮಾರ್ಗದಲ್ಲಿ ಯಾರು ಅನ್ಯರನ್ನು ತಮ್ಮ ಸಮಾನರನ್ನಾಗಿ ಮಾಡುವ ಸೇವೆ ಮಾಡುವುದಿಲ್ಲವೋ, ನನ್ನದು-ನಿನ್ನದೆಂಬ ಚಿಂತೆಯಲ್ಲಿರುತ್ತಾರೆಯೋ ಅವರು ರೋಗಿಗಳಾಗಿದ್ದಾರೆ. ತಂದೆಯ ವಿನಃ ಮತ್ತ್ಯಾರನ್ನಾದರೂ ನೆನಪು ಮಾಡಿದರೆ ವ್ಯಭಿಚಾರಿಯಾದರಲ್ಲವೆ. ತಂದೆಯು ತಿಳಿಸುತ್ತಾರೆ - ನನ್ನೊಬ್ಬನಿಂದಲೇ ಕೇಳಿರಿ, ಮತ್ತ್ಯಾರಮತವನ್ನೂ ಕೇಳಬೇಡಿ. ನನ್ನೊಬ್ಬನನ್ನು ನೆನಪು ಮಾಡಿ. ದೇವತೆಗಳನ್ನು ನೆನಪು ಮಾಡುವುದಾದರೂ ಒಳ್ಳೆಯದು ಆದರೆ ಮನುಷ್ಯರನ್ನು ನೆನಪು ಮಾಡುವುದರಲ್ಲಿ ಏನು ಲಾಭವಿದೆ! ಇಲ್ಲಂತೂ ತಂದೆಯು ತಿಳಿಸುತ್ತಾರೆ - ನೀವು ತಲೆಯನ್ನು ಹೇಗೆ ಬಾಗಿಸುತ್ತೀರಿ? ನೀವು ಈ ತಂದೆಯ (ಬ್ರಹ್ಮಾ) ಬಳಿ ಬಂದಾಗಲೂ ಸಹ ಶಿವತಂದೆಯನ್ನು ನೆನಪು ಮಾಡಿ ಬನ್ನಿ. ಶಿವತಂದೆಯನ್ನು ನೆನಪು ಮಾಡುವುದಿಲ್ಲವೆಂದರೆ ಪಾಪ ಮಾಡುತ್ತೀರೆಂದರ್ಥ. ತಂದೆಯು ತಿಳಿಸುತ್ತಾರೆ - ಮೊದಲು ಪವಿತ್ರವಾಗುವ ಪ್ರತಿಜ್ಞೆ ಮಾಡಿ, ಶಿವತಂದೆಯನ್ನು ನೆನಪು ಮಾಡಿ. ಬಹಳ ವ್ರತವಿದೆ. ಕೆಲವರೇ ವಿರಳ ಇದರಲ್ಲಿ ಬಹಳ ಪರಿಶ್ರಮಬೇಕು ಅಷ್ಟೊಂದು ಬುದ್ಧಿಯಿಲ್ಲ. ತಂದೆಯೊಂದಿಗೆ ಹೇಗೆ ನಡೆದುಕೊಳ್ಳಬೇಕು ಇದರಲ್ಲಿ ಬಹಳ ಪರಿಶ್ರಮವು ಬೇಕು. ಮಾಲೆಯ ಮಣಿಗಳಾಗುವುದು ಚಿಕ್ಕಮ್ಮನ ಮನೆಯಂತಲ್ಲ. ತಂದೆಯನ್ನು ನೆನಪು ಮಾಡುವುದು ಮುಖ್ಯವಾಗಿದೆ. ನೀವು ತಂದೆಯನ್ನು ನೆನಪು ಮಾಡಲು ಆಗುವುದಿಲ್ಲವೆ! ತಂದೆಯ ಸೇವೆ ಮತ್ತು ನೆನಪು ಎಷ್ಟೊಂದಿರಬೇಕು! ತಂದೆಯು ನಿತ್ಯವೂ ತಿಳಿಸುತ್ತಾರೆ, ತಮ್ಮ ಲೆಕ್ಕಪತ್ರವನ್ನಿಡಿ. ಯಾವ ಮಕ್ಕಳಿಗೆ ತಮ್ಮ ಕಲ್ಯಾಣದ ವಿಚಾರವಿರುತ್ತದೆಯೋ ಅವರು ಪ್ರತಿಯೊಂದು ಪ್ರಕಾರದಲ್ಲಿ ಸಂಪೂರ್ಣ ವ್ರತವನ್ನಿಟ್ಟುಕೊಳ್ಳುತ್ತಾರೆ. ಅವರ ಆಹಾರ-ಪಾನೀಯ ಎಲ್ಲವೂ ಸಾತ್ವಿಕವಾಗಿರುವುದು.

ತಂದೆಯು ಮಕ್ಕಳ ಕಲ್ಯಾಣಕ್ಕಾಗಿ ಎಷ್ಟೊಂದು ತಿಳಿಸುತ್ತಾರೆ, ಎಲ್ಲಾ ಪ್ರಕಾರದ ವ್ರತವಿರಬೇಕು, ತಮ್ಮನ್ನು ಪರಿಶೀಲನೆ ಮಾಡಿಕೊಳ್ಳಬೇಕು - ನಮ್ಮ ಆಹಾರ-ಪಾನೀಯಗಳು ವಿರುದ್ಧವಾಗಿ ಇಲ್ಲವೆ? ಲೋಭಿಯಾಗಿಲ್ಲ ತಾನೆ? ಎಲ್ಲಿಯವರೆಗೆ ಕರ್ಮಾತೀತ ಸ್ಥಿತಿಯನ್ನು ತಲುಪುವುದಿಲ್ಲವೋ ಅಲ್ಲಿಯವರೆಗೆ ಮಾಯೆಯು ಉಲ್ಟಾ-ಸುಲ್ಟಾ ಕಾರ್ಯಗಳನ್ನು ಮಾಡಿಸುತ್ತಿರುತ್ತದೆ. ಅದರಲ್ಲಿ ಇನ್ನೂ ಸಮಯವಿದೆ. ನಂತರ ವಿನಾಶವಾಗಲಿದೆ, ಬೆಂಕಿಯು ಹತ್ತಿಕೊಂಡಿದೆ ಎಂಬುದು ಅರ್ಥವಾಗಿದೆ. ಹೇಗೆ ಬಾಂಬುಗಳು ಬೀಳುತ್ತವೆ ಎಂಬುದನ್ನು ನೀವು ನೋಡುತ್ತೀರಿ, ಭಾರತದಲ್ಲಿ ರಕ್ತದ ನದಿಗಳು ಹರಿಯುತ್ತವೆ. ಬಾಂಬುಗಳಿಂದ ಒಬ್ಬರು ಇನ್ನೊಬ್ಬರನ್ನು ಸಮಾಪ್ತಿ ಮಾಡುತ್ತಾರೆ, ಪ್ರಾಕೃತಿಕ ವಿಕೋಪಗಳಾಗುತ್ತವೆ, ಭಾರತದ ಮೇಲೆ ಎಲ್ಲದಕ್ಕಿಂತ ದೊಡ್ಡ ಆಪತ್ತುಗಳಿವೆ. ನಾವು ಏನು ಸೇವೆ ಮಾಡುತ್ತೇವೆಂದು ತಮ್ಮ ಮೇಲೆ ಬಹಳ ಗಮನವನ್ನಿಡಬೇಕಾಗಿದೆ. ನಾವು ಎಷ್ಟು ಮಂದಿಯನ್ನು ತಮ್ಮ ಸಮಾನ ನರನಿಂದ ನಾರಾಯಣರನ್ನಾಗಿ ಮಾಡುತ್ತೇವೆಂದು ನೋಡಿಕೊಳ್ಳಬೇಕು. ಕೆಲವರು ಭಕ್ತಿಯಲ್ಲಿ ಬಹಳ ಸಿಕ್ಕಿಹಾಕಿಕೊಂಡಿರುವುದರಿಂದ ಈ ಕನ್ಯೆಯರೇನು ಓದಿಸುತ್ತಾರೆ ಎಂದು ತಿಳಿಯುತ್ತಾರೆ. ಇವರಿಗೆ ಓದಿಸುವವರು ಭಗವಂತನಾಗಿದ್ದಾರೆಂಬುದು ಅವರಿಗೆ ತಿಳಿದಿಲ್ಲ. ಹಣವಿದೆ ಅಥವಾ ಸ್ವಲ್ಪ ಓದಿರುತ್ತಾರೆಂದರೆ ಘರ್ಷಣೆ ಮಾಡಲು ತೊಡಗಿಬಿಡುತ್ತಾರೆ. ತಮ್ಮ ಗೌರವವನ್ನೇ ಕಳೆದುಕೊಳ್ಳುತ್ತಾರೆ. ಸದ್ಗುರುವಿನ ನಿಂದನೆ ಮಾಡಿಸುವವರು, ಪದವಿಯನ್ನು ಪಡೆಯುವುದಿಲ್ಲ ಅಂತಹವರು ಹೋಗಿ ಬಿಡುಗಾಸಿನ ಪದವಿಯನ್ನು ಪಡೆಯುತ್ತಾರೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿದ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ನನ್ನದು-ನಿನ್ನದೆಂಬುದನ್ನು ಬಿಟ್ಟು ಅನ್ಯರನ್ನು ತಮ್ಮ ಸಮಾನರನ್ನಾಗಿ ಮಾಡುವ ಸೇವೆ ಮಾಡಬೇಕಾಗಿದೆ. ಒಬ್ಬ ತಂದೆಯಿಂದಲೇ ಕೇಳಬೇಕಾಗಿದೆ, ತಂದೆಯನ್ನೇ ನೆನಪು ಮಾಡಬೇಕಾಗಿದೆ. ವ್ಯಭಿಚಾರಿಯಾಗಬಾರದು.

2. ತಮ್ಮ ಕಲ್ಯಾಣಕ್ಕಾಗಿ ಆಹಾರ-ಪಾನೀಯಗಳ ಬಹಳ ವ್ರತವನ್ನಿಟ್ಟುಕೊಳ್ಳಬೇಕಾಗಿದೆ. ನಾನು ಲೋಭಿಯಂತೂ ಆಗಿಲ್ಲವೆ? ಮಾಯೆಯು ಉಲ್ಟಾ ಕೆಲಸವನ್ನು ಮಾಡಿಸುವುದಿಲ್ಲವೆ?

ವರದಾನ:
ನಿರ್ಣಯ ಶಕ್ತಿ ಮತ್ತು ನಿಯಂತ್ರಣ ಶಕ್ತಿ ಮೂಲಕ ಸದಾ ಸಫಲತಾ ಮೂರ್ತ ಭವ

ಯಾವುದೇ ಲೌಕಿಕ ಅಥವಾ ಅಲೌಕಿಕ ಕಾರ್ಯದಲ್ಲಿ ಸಫಲತೆಯನ್ನು ಪ್ರಾಪ್ತಿ ಮಾಡಿಕೊಳ್ಳುವುದಕ್ಕಾಗಿ ವಿಶೇಷ ನಿಯಂತ್ರಣ ಶಕ್ತಿ ಮತ್ತು ನಿರ್ಣಯ ಶಕ್ತಿಯ ಅವಶ್ಯಕತೆಯಿರುತ್ತದೆ. ಏಕೆಂದರೆ ಯಾವಾಗ ಯಾವುದೇ ಆತ್ಮ ನಿಮ್ಮ ಸಂಪರ್ಕದಲ್ಲಿ ಬಂದಾಗ ಮೊದಲು ನಿರ್ಣಯ ಮಾಡಲಾಗುತ್ತದೆ, ಇವರಿಗೆ ಯಾವ ವಸ್ತುವಿನ ಅವಶ್ಯಕತೆಯಿದೆ, ನಾಡಿ ಮೂಲಕ ಪರಿಶೀಲಿಸಿ ಅದರ ಪ್ರಮಾಣ ಅವರನ್ನು ತೃಪ್ತರನ್ನಾಗಿ ಮಾಡುವುದು ಮತ್ತು ಸ್ವಯಂನ ನಿಯಂತ್ರಣ ಶಕ್ತಿಯಿಂದ ಅನ್ಯರ ಮೇಲೆ ತಮ್ಮ ಅಚಲ ಸ್ಥಿತಿಯ ಪ್ರಭಾವ ಹಾಕುವುದು – ಇವೇ ಎರಡು ಶಕ್ತಿಗಳು ಸೇವೆಯ ಕ್ಷೇತ್ರದಲ್ಲಿ ಸಫಲತಾ ಮೂರ್ತರನ್ನಾಗಿ ಮಾಡಿಬಿಡುತ್ತದೆ.

ಸ್ಲೋಗನ್:
ಸರ್ವ ಶಕ್ತಿವಂತನನ್ನು ಜೊತೆಗಾರರನ್ನಾಗಿ ಮಾಡಿಕೊಂಡರೇ ಮಾಯೆಯ ಪೇಪರ್ ಟೈಗರ್ ಆಗಿ ಬಿಡುವುದು.

ಅವ್ಯಕ್ತ ಸೂಚನೆ: ಕಂಬೈಂಡ್ ರೂಪದ ಸ್ಮೃತಿಯಿಂದ ಸದಾ ವಿಜಯಿಯಾಗಿರಿ

ಸೇವೆಯ ಕ್ಷೇತ್ರದಲ್ಲಿ ಯಾವ ಭಿನ್ನ-ಭಿನ್ನ ಪ್ರಕಾರದ ಸ್ವ ಪ್ರತಿ ಅಥವಾ ಸೇವೆಯ ಪ್ರತಿ ವಿಘ್ನ ಬರುತ್ತದೆ, ಅದರ ಕಾರಣವು ಕೇವಲ ಇದೇ ಇರುತ್ತದೆ, ಸ್ವಯಂನ್ನು ಕೇವಲ ಸೇವಾಧಾರಿ ಎಂದು ತಿಳಿಯುತ್ತಾರೆ ಆದರೆ ಈಶ್ವರೀಯ ಸೇವಾಧಾರಿಯಾಗಿದ್ದೇನೆ, ಕೇವಲ ಸರ್ವೀಸ್ನಲ್ಲಿ ಅಲ್ಲ ಆದರೆ ಈಶ್ವರೀಯ ಸೇವೆಯಲ್ಲಿದ್ದೇನೆ – ಇದೇ ಸ್ಮೃತಿಯಿಂದ ನೆನಪು ಮತ್ತು ಸೇವೆ ಸ್ವತಃ ಕಂಬೈಂಡ್ ಆಗಿಬಿಡುತ್ತದೆ.