26.01.25    Avyakt Bapdada     Kannada Murli    15.12.2003     Om Shanti     Madhuban


ತಂದೆಯನ್ನು ಪ್ರತ್ಯಕ್ಷ ಮಾಡುವುದಕ್ಕೋಸ್ಕರ ಸಾಧಾರಣತೆಯನ್ನು ಅಲೌಕಿಕತೆಯಲ್ಲಿ ಪರಿವರ್ತನೆ ಮಾಡಿಕೊಂಡು ದರ್ಶನೀಯಮೂರ್ತಿಗಳಾಗಿ


ಇಂದು ಬಾಪ್ದಾದಾ ತನ್ನ ಎಲ್ಲಾ ಕಡೆಯ ಬ್ರಾಹ್ಮಣ ಮಕ್ಕಳ ಮಸ್ತಕದ ಮಧ್ಯೆ ಭಾಗ್ಯದ ಮೂರು ನಕ್ಷತ್ರಗಳು ಹೊಳೆಯುತ್ತಿರುವುದನ್ನು ನೋಡುತ್ತಿದ್ದಾರೆ. ಇದು ಎಷ್ಟು ಶ್ರೇಷ್ಠ ಭಾಗ್ಯವಾಗಿದೆ! ಹಾಗೂ ಎಷ್ಟು ಸಹಜವಾಗಿ ಪ್ರಾಪ್ತಿಯಾಗಿದೆ! ಮೊದಲನೆಯದು - ಅಲೌಕಿಕ ಶ್ರೇಷ್ಠ ಜನ್ಮದ ಭಾಗ್ಯವಾಗಿದೆ, ಎರಡನೆಯದು - ಶ್ರೇಷ್ಠ ಸಂಬಂಧದ ಭಾಗ್ಯ, ಮೂರನೆಯದು - ಸರ್ವಪ್ರಾಪ್ತಿಗಳ ಭಾಗ್ಯವಾಗಿದೆ. ಹೊಳೆಯುತ್ತಿರುವ ಭಾಗ್ಯದ ಮೂರೂ ನಕ್ಷತ್ರಗಳನ್ನು ನೋಡಿ ಬಾಪ್ದಾದಾರವರೂ ಸಹ ಹರ್ಷಿತರಾಗುತ್ತಿದ್ದಾರೆ. ಜನ್ಮದ ಭಾಗ್ಯವನ್ನು ನೋಡಿ, ಸ್ವಯಂ ಭಾಗ್ಯವಿದಾತ ತಂದೆಯ ಮೂಲಕ ತಮ್ಮೆಲ್ಲರ ಜನ್ಮವಾಗಿದೆ. ಯಾವಾಗ ಜನ್ಮದಾತನೇ ಭಾಗ್ಯವಿದಾತನಾಗಿರುತ್ತಾರೆಯೋ ಆಗ ಜನ್ಮವೂ ಸಹ ಎಷ್ಟು ಆಲೌಕಿಕ ಮತ್ತು ಶ್ರೇಷ್ಠವಾಗಿದೆ! ತಮ್ಮೆಲ್ಲರಿಗೂ ಸಹ ತಮ್ಮ ಈ ಭಾಗ್ಯದ ಜನ್ಮದ ನಶೆ ಮತ್ತು ಖುಷಿಯಿದೆಯಲ್ಲವೆ! ಜೊತೆಜೊತೆಗೆ ಸಂಬಂಧದ ವಿಶೇಷತೆಯನ್ನು ನೋಡಿ - ಇಡೀ ಕಲ್ಪದಲ್ಲಿ ಇಂತಹ ಸಂಬಂಧವು ಬೇರೆ ಯಾವ ಆತ್ಮನಿಗೂ ಇಲ್ಲ. ತಾವು ವಿಶೇಷ ಆತ್ಮಗಳಿಗೇ ಒಬ್ಬರ ಮೂಲಕ ಮೂರೂ ಸಂಬಂಧಗಳು ಪ್ರಾಪ್ತಿಯಾಗಿದೆ. ಒಬ್ಬರೇ ತಂದೆಯೂ ಆಗಿದ್ದಾರೆ, ಶಿಕ್ಷಕನೂ ಆಗಿದ್ದಾರೆ ಹಾಗೂ ಸದ್ಗುರುವೂ ಆಗಿದ್ದಾರೆ. ಹೀಗೆ ಒಬ್ಬರ ಮೂಲಕ ಮೂರು ಸಂಬಂಧಗಳು ಬ್ರಾಹ್ಮಣ ಆತ್ಮಗಳ ವಿನಃ ಬೇರೆ ಯಾರಿಗೂ ಇಲ್ಲ. ಅನುಭವವಿದೆಯಲ್ಲವೆ! ತಂದೆಯ ಸಂಬಂಧದಲ್ಲಿ ಆಸ್ತಿಯನ್ನೂ ಕೊಡುತ್ತಿದ್ದಾರೆ, ಪಾಲನೆಯನ್ನೂ ಮಾಡುತ್ತಿದ್ದಾರೆ. ಆಸ್ತಿಯೂ ಸಹ ಎಷ್ಟು ಶ್ರೇಷ್ಠ ಮತ್ತು ಅವಿನಾಶಿಯಾಗಿದೆ ನೋಡಿ! ನಮ್ಮ ಪಾಲನಾಕರ್ತ ಭಗವಂತನಾಗಿದ್ದಾರೆಂದು ಜಗತ್ತಿನ ಮನುಷ್ಯರು ಹೇಳುತ್ತಾರೆ. ಆದರೆ ತಾವು ಮಕ್ಕಳು ನಮ್ಮ ಪಾಲನಾಕರ್ತ ಸ್ವಯಂ ಭಗವಂತನಾಗಿದ್ದಾರೆ ಎಂಬ ಮಾತನ್ನು ನಿಶ್ಚಯ ಮತ್ತು ನಶೆಯಿಂದ ಹೇಳುತ್ತೀರಿ. ಇಂತಹ ಪಾಲನೆ, ಪರಮಾತ್ಮನ ಪಾಲನೆ, ಪರಮಾತ್ಮನ ಪ್ರೀತಿ, ಪರಮಾತ್ಮನ ಆಸ್ತಿ ಯಾರಿಗೆ ಪ್ರಾಪ್ತಿಯಾಗಿದೆ! ಅಂದಾಗ ಒಬ್ಬರೇ ತಂದೆಯೂ ಆಗಿದ್ದಾರೆ, ಪಾಲನಾಕರ್ತನೂ ಆಗಿದ್ದಾರೆ, ಶಿಕ್ಷಕನೂ ಆಗಿದ್ದಾರೆ.

ಪ್ರತಿಯೊಂದು ಆತ್ಮನ ಜೀವನದಲ್ಲಿ ವಿಶೇಷವಾಗಿ ಮೂರು ಸಂಬಂಧಗಳು ಅವಶ್ಯವಾಗಿದೆ. ಆದರೆ ಮೂರು ಸಂಬಂಧಗಳೂ ಬೇರೆ- ಬೇರೆಯಾಗಿರುತ್ತಾರೆ. ಆದರೆ ತಮಗೆ ಒಬ್ಬರಲ್ಲಿಯೇ ಮೂರು ಸಂಬಂಧಗಳಿವೆ. ವಿದ್ಯೆಯನ್ನು ನೋಡಿ – ಮೂರು ಕಾಲಗಳ ವಿದ್ಯೆಯಾಗಿದೆ, ತ್ರಿಕಾಲದರ್ಶಿಗಳಾಗುವ ವಿದ್ಯೆಯಾಗಿದೆ. ವಿದ್ಯೆಯನ್ನು ಸೋರ್ಸ್ ಆಫ್ ಇನ್ಕಮ್ (ಸಂಪಾದನೆಗೆ ಮೂಲ) ಎಂದು ಹೇಳಲಾಗುತ್ತದೆ. ವಿದ್ಯೆಯಿಂದ ಪದವಿಯು ಪ್ರಾಪ್ತಿಯಾಗುತ್ತದೆ. ಇಡೀ ವಿಶ್ವದಲ್ಲಿ ನೋಡಿ ಎಲ್ಲರಿಗಿಂತ ಶ್ರೇಷ್ಠಾತಿ ಶ್ರೇಷ್ಠ ಪದವಿಯು ರಾಜ್ಯ ಪದವಿಯೆಂದು ಗಾಯನವಿದೆ ಅಂದಮೇಲೆ ತಮಗೆ ಈ ವಿದ್ಯೆಯಿಂದ ಯಾವ ಪದವಿಯು ಪ್ರಾಪ್ತಿಯಾಗುತ್ತದೆ? ಈಗಲೂ ರಾಜರು ಮತ್ತು ಭವಿಷ್ಯದಲ್ಲಿಯೂ ರಾಜ್ಯಪದವಿ. ಈಗ ಸ್ವರಾಜ್ಯವಿದೆ, ರಾಜಯೋಗಿ ಸ್ವರಾಜ್ಯಾಧಿಕಾರಿಗಳಾಗಿದ್ದೀರಿ ಮತ್ತು ಭವಿಷ್ಯದ ರಾಜ್ಯಭಾಗ್ಯವಂತೂ ಅವಿನಾಶಿಯಾಗಿದೆ. ಇದಕ್ಕಿಂತ ಶ್ರೇಷ್ಠ ಪದವಿ ಯಾವುದೂ ಇಲ್ಲ. ಶಿಕ್ಷಕನ ಮೂಲಕ ಶಿಕ್ಷಣವೂ ಸಹ ತ್ರಿಕಾಲದರ್ಶಿಯದಾಗಿದೆ ಮತ್ತು ಪದವಿಯೂ ದೈವೀ ರಾಜ್ಯಪದವಿಯಾಗಿದೆ. ಇಂತಹ ಶಿಕ್ಷಕನ ಸಂಬಂಧವು ಬ್ರಾಹ್ಮಣ ಜೀವನದ ವಿನಃ ಮತ್ಯಾರಿಗೂ ಇಲ್ಲ, ಇರಲು ಸಾಧ್ಯವೂ ಇಲ್ಲ. ಜೊತೆಯಲ್ಲಿ ಸದ್ಗುರುವಿನ ಸಂಬಂಧ, ಸದ್ಗುರುವಿನ ಮೂಲಕ ಶ್ರೀಮತ, ಯಾವ ಶ್ರೀಮತದ ಗಾಯನವು ಇಂದಿಗೂ ಸಹ ಭಕ್ತಿಯಲ್ಲಿ ನಡೆಯುತ್ತಿದೆ. ತಾವು ನಿಶ್ಚಯದಿಂದ ಹೇಳುತ್ತೀರಿ, ನಮ್ಮ ಪ್ರತೀ ಹೆಜ್ಜೆ ಯಾವ ಆಧಾರದಿಂದ ನಡೆಯುತ್ತದೆ? ಪ್ರತೀ ಹೆಜ್ಜೆಯು ಶ್ರೀಮತದ ಆಧಾರದ ಮೇಲೆ ನಡೆಯುತ್ತದೆ. ಅಂದಾಗ ಪರಿಶೀಲನೆ ಮಾಡಿಕೊಳ್ಳಿ - ಪ್ರತೀ ಹೆಜ್ಜೆಯು ಶ್ರೀಮತದಂತೆ ನಡೆಯುತ್ತದೆಯೆ? ಭಾಗ್ಯವಂತೂ ಪ್ರಾಪ್ತಿಯಾಗಿದೆ ಆದರೆ ಜೀವನದಲ್ಲಿ ಆ ಭಾಗ್ಯದ ಪ್ರಾಪ್ತಿಯು ಅನುಭವವಾಗಿದೆಯೆ? ಪ್ರತೀ ಹೆಜ್ಜೆಯು ಶ್ರೀಮತದನುಸಾರವಿದೆಯೊ ಅಥವಾ ಕೆಲಕೆಲವೊಮ್ಮೆ ಮನಮತವಿಲ್ಲವೆ, ಪರಮತವಂತೂ ಬೆರೆಕೆಯಾಗುವುದಿಲ್ಲವೆ? ಇದರ ಗುರುತಾಗಿದೆ - ಒಂದುವೇಳೆ ಹೆಜ್ಜೆಯು ಶ್ರೀಮತದಂತಿದ್ದರೆ ಪ್ರತೀ ಹೆಜ್ಜೆಯಲ್ಲಿಯೂ ಪದಮಗಳ ಸಂಪಾದನೆಯು ಜಮಾ ಆಗುವ ಅನುಭವವಾಗುತ್ತದೆ. ಪ್ರತೀ ಹೆಜ್ಜೆಯು ಶ್ರೀಮತದನುಸಾರವಿದ್ದರೆ ಸಹಜವಾಗಿ ಸಫಲತೆಯು ಸಿಗುತ್ತದೆ. ಜೊತೆಜೊತೆಗೆ ಸದ್ಗುರುವಿನ ಮೂಲಕ ಪರದಾನಗಳ ಗಣಿಯು ಪ್ರಾಪ್ತಿಯಾಗಿದೆ. ವರದಾನವಿದೆ ಎನ್ನುವುದರ ಚಿಹ್ನೆ ಎಲ್ಲಿ ವರದಾನವಿರುವುದೋ ಅಲ್ಲಿ ಪರಿಶ್ರಮವೆನಿಸುವುದಿಲ್ಲ. ಅಂದಾಗ ಸದ್ಗುರುವಿನ ಸಂಬಂಧದಲ್ಲಿ ಶ್ರೇಷ್ಠಮತ ಮತ್ತು ಸದಾ ವರದಾನ ಪ್ರಾಪ್ತಿಯಾಗಿದೆ ಹಾಗೂ ವಿಶೇಷತೆಯು ಸಹಜ ಮಾರ್ಗದ್ದೇನಾಗಿದೆ ಎಂದರೆ, ಯಾವಾಗ ಒಬ್ಬರಲ್ಲಿಯೇ ಮೂರು ಸಂಬಂಧಗಳಿದೆ ಎಂದಮೇಲೆ ಒಬ್ಬರನ್ನು ನೆನಪು ಮಾಡುವುದು ಸಹಜ. ಮೂರು-ಸಂಬಂಧಗಳು ಬೇರೆ-ಬೇರೆಯಾಗಿ ನೆನಪು ಮಾಡುವ ಅವಶ್ಯಕತೆಯಿಲ್ಲ ಆದ್ದರಿಂದ ಒಬ್ಬ ತಂದೆಯ ವಿನಃ ಬೇರೆ ಯಾರೂ ಇಲ್ಲವೆಂದು ತಾವೆಲ್ಲರೂ ಹೇಳುತ್ತೀರಿ. ಇದು ಸಹಜವಾಗಿದೆ ಏಕೆಂದರೆ ಒಬ್ಬರಲ್ಲಿಯೇ ವಿಶೇಷ ಸಂಬಂಧಗಳು ಬಂದುಬಿಡುತ್ತವೆ ಅಂದಮೇಲೆ ಭಾಗ್ಯದ ನಕ್ಷತ್ರಗಳಂತೂ ಹೊಳೆಯುತ್ತಿವೆ ಏಕೆಂದರೆ ತಂದೆಯ ಮೂಲಕ ಸರ್ವರಿಗೆ ಪ್ರಾಪ್ತಿಗಳು ಆಗಿಯೇ ಇವೆ.

ಮೂರನೆಯ ಭಾಗ್ಯದ ನಕ್ಷತ್ರವಾಗಿದೆ - ಮೂರನೆಯ ಭಾಗ್ಯದ ನಕ್ಷತ್ರವು ಇದು ಸರ್ವಪ್ರಾಪ್ತಿಗಳಾಗಿವೆ, ಬ್ರಾಹ್ಮಣರ ಖಜಾನೆಯಲ್ಲಿ ಯಾವುದೇ ಅಪ್ರಾಪ್ತ ವಸ್ತುವಿಲ್ಲವೆಂದು ಗಾಯನವಿದೆ ಅಂದಾಗ ತಮ್ಮ ಖಜಾನೆಗಳನ್ನೂ ನೆನಪು ಮಾಡಿಕೊಳ್ಳಿ. ಇಂತಹ ಖಜಾನೆಗಳು ಅಥವಾ ಸರ್ವಪ್ರಾಪ್ತಿಗಳು ಮತ್ತ್ಯಾರ ಮೂಲಕ ಪ್ರಾಪ್ತಿಯಾಗಲು ಸಾಧ್ಯವೆ! ಹೃದಯದಿಂದ ನನ್ನ ಬಾಬಾ ಎಂದು ಹೇಳಿದಿರಿ, ಖಜಾನೆಗಳು ಹಾಜರಾಯಿತು, ಆದ್ದರಿಂದ ಇಷ್ಟೂ ಶ್ರೇಷ್ಠಭಾಗ್ಯ ಸ್ಮೃತಿಯಲ್ಲಿರಲಿ, ಇದರಲ್ಲಿ ನಂಬರ್ವಾರ್ ಇದ್ದೀರಿ. ಈಗ ಬಾಪ್ದಾದಾ ಇದನ್ನೇ ಬಯಸುತ್ತಾರೆ - ಪ್ರತಿಯೊಂದು ಮಗುವೂ ಸಹ ಕೋಟಿಯಲ್ಲಿಯೂ ಕೆಲವರಾಗಿದ್ದಾರೆ ಅಂದಮೇಲೆ ಎಲ್ಲಾ ಮಕ್ಕಳು ನಂಬರ್ವಾರ್ ಅಲ್ಲ, ನಂಬರ್ವನ್ ಆಗಬೇಕಾಗಿದೆ. ಅಂದಮೇಲೆ ತಮ್ಮೊಂದಿಗೆ ತಾವು ಕೇಳಿಕೊಳ್ಳಿ - ನಂಬರ್ವಾರ್ನಲ್ಲಿದ್ದೀರಾ ಅಥವಾ ನಂಬರ್ವನ್ ಆಗಿದ್ದೀರಾ? ಏನಾಗಿದ್ದೀರಿ? ಶಿಕ್ಷಕಿ-ಸಹೋದರಿಯರು ನಂಬರ್ವನ್ ಆಗಿದ್ದೀರಾ ಅಥವಾ ನಂಬರ್ವಾರ್ ಇವೆ. ಆಗಿದ್ದೀರಾ? ಪಾಂಡವರು ನಂಬರ್ವನ್ ಅಥವಾ ನಂಬರ್ವಾರ್ ಆಗಿದ್ದೀರಾ? ಏನಾಗಿದ್ದೀರಿ? ಯಾರು ನಾನು ನಂಬರ್ವನ್ ಆಗಿದ್ದೇನೆ ಹಾಗೂ ಸದಾ ಆಗಿರುತ್ತೇನೆ ಎಂದು ತಿಳಿಯುತ್ತೀರೋ? ಇಂದು ನಂಬರ್ವನ್ ಮತ್ತೆ ನಾಳೆ ನಂಬರ್ವಾರ್ನಲ್ಲಿ ಬಂದುಬಿಡುವುದಲ್ಲವೇ? ಯಾರು ಇಷ್ಟೊಂದು ನಿಶ್ಚಯ ಬುದ್ದಿಯವರಿದ್ದಾರೆ - ನಾವು ಸದಾ ಹೇಗೆ ಬ್ರಹ್ಮಾ ತಂದೆಯು ನಂಬರ್ವನ ಆದರು ಹಾಗೆಯೇ ಅವರನ್ನು ಅನುಸರಿಸಿ ನಂಬರ್ವನ್ ಆಗುತ್ತೇವೆ ಮತ್ತು ಆಗಿರುತ್ತೇವೆ ಎನ್ನುವವರು ಕೈ ಎತ್ತಿ. ಸುಮ್ಮನೆ ಕೈ ಎತ್ತಿಬಿಡುವುದಲ್ಲ, ಯೋಚಿಸಿ ಕೈ ಎತ್ತಿ. ಪೂರ್ಣ ಕೈ ಎತ್ತಿ, ಅರ್ಧ ಕೈ ಎತ್ತಿದ್ದರೆ ಅವರು ಅರ್ಧವೇ. ಕೈಯನ್ನಂತೂ ಅನೇಕರು ಎತ್ತಿದ್ದೀರಿ. ನೋಡಿದಿರಾ, ದಾದಿ ನೋಡಿದಿರಾ, ಈಗ ನಂಬರ್ವನ್ ಆಗುವವರ ಲೆಕ್ಕವನ್ನು ತೆಗೆದುಕೊಳ್ಳಿ. ಜಾನಕಿ ದಾದಿಯವುರು ಲೆಕ್ಕವನ್ನು ತೆಗೆದುಕೊಳ್ಳಿ. ಡಬಲ್ ವಿದೇಶಿಗಳು ಕೈಯೆತ್ತಿದರು. ಎತ್ತಿರಿ ಆದರೆ ನಂಬರ್ವನ್ ಇದ್ದೀರಾ? ಕೈಯನ್ನೆತ್ತಿ ಬಾಪ್ದಾದಾರವರನ್ನಂತೂ ಖುಷಿಪಡಿಸಿದಿರಿ. ಶುಭಾಷಯಗಳು. ಒಳ್ಳೆಯದು - ಕೈಯನ್ನೆತ್ತುವುದರ ಅರ್ಥವೇ ಆಗಿದೆ - ತಮ್ಮ ಮೇಲೆ ತಮಗೆ ಧೈರ್ಯವಿದೆ ಮತ್ತು ಧೈರ್ಯವಿದ್ದರೆ ಬಾಪ್ದಾದಾರವರೂ ಸಹ ಸಹಯೋಗಿಯೂ ಆಗಿಯೇ ಆಗುತ್ತಾರೆ ಆದರೆ ಈಗ ಬಾಪ್ದಾದಾ ಏನನ್ನು ಬಯಸುತ್ತಾರೆ? ನಂಬರ್ವನ್ ಆಗಿದ್ದೀರಿ, ಇದಂತೂ ಖುಷಿಯ ಮಾತಾಗಿದೆ ಆದರೆ....... ಆದರೆ ತಿಳಿಸುವುದೇ ಅಥವಾ ಆದರೆ ಎನ್ನುವ ಶಬ್ದವು ಇಲ್ಲವೆ ಇಲ್ಲವೊ? ಬಾಪ್ದಾದಾರವರ ಬಳಿ ಆದರೆ ಇದೆ.

ಬಾಪ್ದಾದಾ ನೋಡಿದರು - ಮನಸ್ಸಿನಲ್ಲಿ ಸಮಾವೇಶವಂತೂ ಆಗಿದೆ ಆದರೆ ಮನಸ್ಸಿನವರೆಗಷ್ಟೇ ಇದೆ, ಚಹರೆ ಮತ್ತು ಚಲನೆಯವರೆಗೂ ಬಂದಿಲ್ಲ. ಈಗ ಬಾಪ್ದಾದಾ ತಮ್ಮ ನಂಬರ್ವನ್ ಸ್ಥಿತಿಯನ್ನು ಚಲನೆ ಮತ್ತು ಚಹರೆಯಲ್ಲಿ ನೋಡಲು ಬಯಸುತ್ತಾರೆ. ಈಗ ಸಮಯದನುಸಾರ ನಂಬರ್ವನ್ ಎಂದು ಹೇಳುವವರ ಚಲನೆಯಲ್ಲಿ ದರ್ಶನೀಯ ಮೂರ್ತಿಯೆಂದು ಕಂಡುಬರಬೇಕು. ಇವರು ದರ್ಶನೀಯ ಮೂರ್ತಿಗಳೆಂದು ತಮ್ಮ ಚಹರೆಯೇ ತಿಳಿಸುವಂತಿರಬೇಕು. ತಮ್ಮ ಜಡಚಿತ್ರಗಳು ಅಂತಿಮ ಜನ್ಮದವರೆಗೂ, ಅಂತಿಮ ಸಮಯದವರೆಗೂ ದರ್ಶನೀಯ ಮೂರ್ತಿಗಳಂತೆ ಅನುಭವವಾಗುತ್ತದೆ, ಚೈತನ್ಯದಲ್ಲಿಯೂ ಸಹ ಹೇಗೆ ಬ್ರಹ್ಮಾತಂದೆಯನ್ನೂ ನೋಡಿದಿರಿ, ಸಾಕಾರ ಸ್ವರೂಪದಲ್ಲಿ ನೋಡಿದಿರಿ, ಸೂಕ್ಷ್ಮದೇವತೆಯಂತೂ ನಂತರ ಆದರು. ಆದರೆ ಸಾಕಾರ ಸ್ವರೂಪದಲ್ಲಿದ್ದರೂ ಸಹ ತಮ್ಮೆಲ್ಲರಿಗೆ ಹೇಗೆ ಕಾಣಿಸುತ್ತಿದ್ದರು? ಸಾಧಾರಣವಾಗಿ ಕಂಡುಬರುತ್ತಿದ್ದರೇ? ಅಂತಿಮ 84 ಜನ್ಮ, ಹಳೆಯ ಜನ್ಮ, 60 ವರ್ಷಗಳ ನಂತರದ ಆಯಸ್ಸು, ಆದರೂ ಸಹ ಆದಿಯಿಂದ ಅಂತ್ಯದವರೆಗೆ ದರ್ಶನೀಯ ಮೂರ್ತಿಯಾಗಿ ಎಲ್ಲರೂ ಅನುಭವ ಮಾಡಿದಿರಿ, ಮಾಡಿದಿರಲ್ಲವೆ? ಸಾಕಾರ ರೂಪದಲ್ಲಿ ಮಾಡಿದಿರಲ್ಲವೆ? ಹೀಗೆ ಯಾರು ನಂಬರ್ವನ್ ಎನ್ನುವುದಕ್ಕೆ ಕೈಯೆತ್ತಿದರೋ ಅವರ ಚಿತ್ರವನ್ನು ಟಿ.ವಿ.ಯಲ್ಲಿ ಸೆರೆ ಹಿಡಿದಿದ್ದೀರಲ್ಲವೆ. ಬಾಪ್ದಾದಾ ಅಂತಹವರ ಫೈಲನ್ನು ನೋಡುತ್ತಾರೆ. ಬಾಪ್ದಾದಾರವರ ಬಳಿ ಫೈಲಂತೂ ಇದೆಯಲ್ಲವೆ ಅಂದಾಗ ಈಗಿನಿಂದ ತಮ್ಮ ಪ್ರತೀ ನಡುವಳಿಕೆಯಿಂದ ಅನುಭವವಾಗಲಿ, ಕರ್ಮ ಸಾಧಾರಣವಾಗಿರಬಹುದು, ಯಾವುದೇ ಕೆಲಸ ಮಾಡುತ್ತಿರಬಹುದು, ಬ್ಯುಸಿನೆಸ್ (ವ್ಯವಹಾರ) ಮಾಡುತ್ತಿರಬಹುದು, ಚಿಕಿತ್ಸೆ ನೀಡುತ್ತಿರಬಹುದು, ನ್ಯಾಯ ತೀರ್ಮಾನಿಸುತ್ತಿರಬಹುದು, ಏನನ್ನೇ ಮಾಡುತ್ತಿರಿ ಆದರೆ ಯಾವ ಸ್ಥಾನದಲ್ಲಿ ತಾವು ಸಂಬಂಧ-ಸಂಪರ್ಕದಲ್ಲಿ ಬರುತ್ತೀರೋ ಅಥವಾ ಅಲ್ಲಿನವರು ತಮ್ಮ ಚಲನೆಯಿಂದ ಈ ರೀತಿ ಅನುಭವ ಮಾಡುತ್ತಾರೆಯೆ - ಇವರು ಭಿನ್ನವಾಗಿದ್ದಾರೆ, ಆಲೌಕಿಕವಾಗಿದ್ದಾರೆ? ಅಥವಾ ಇವರೂ ಸಹ ಸಾಧಾರಣವಾಗಿದ್ದಾರೆ, ಹೀಗೆ ಲೌಕಿಕದಲ್ಲಿಯೂ ಇರುತ್ತಾರೆಂದು ತಿಳಿಯುತ್ತಾರೆಯೆ? ಕೆಲಸದ ವಿಶೇಷತೆಯಲ್ಲ ಆದರೆ ಪ್ರತ್ಯಕ್ಷ ಜೀವನದ ವಿಶೇಷತೆಯಿರಬೇಕು. ಬಹಳ ಒಳ್ಳೆಯ ವ್ಯಾಪಾರಿಯಾಗಿದ್ದಾರೆ, ಬಹಳ ಒಳ್ಳೆಯ ತೀರ್ಮಾನ ಕೊಡುತ್ತಾರೆ ಅಥವಾ ಬಹಳ ಒಳ್ಳೆಯ ನಿರ್ದೇಶಕರಾಗಿದ್ದಾರೆ..... ಎಂದು ಹೇಳಿಸಿಕೊಳ್ಳುವವರಂತೂ ಅನೇಕರಿದ್ದಾರೆ. ಯಾವುದೇ ಒಂದು ಪುಸ್ತಕವು ಬಿಡುಗಡೆಯಾದರೆ ಅದರಲ್ಲಿ ವಿಶೇಷ ಆತ್ಮಗಳ ಹೆಸರಿರುತ್ತದೆ ಮತ್ತು ಹೀಗೆ ಅನೇಕರಿರುತ್ತಾರೆ. ಇಂತಹವರು ಈ ವಿಶೇಷತೆಯನ್ನು ಮಾಡಿದರು ಅಥವಾ ಇಂತಹವರು ಹೀಗೆ ಮಾಡಿದರು ಎಂದು ಹೆಸರು ಬಂದುಬಿಡುತ್ತದೆ ಆದರೆ ಯಾರೆಲ್ಲರೂ ಕೈಯನ್ನೆತ್ತಿದರೆ, ಎತ್ತುವುದಂತೂ ಎಲ್ಲರೂ ಎತ್ತಬೇಕು ಆದರೆ ಯಾರು ಕೈಯನ್ನೆತ್ತಿದ್ದೀರಿ ಹಾಗೂ ಎಲ್ಲರೂ ಎತ್ತಲೇಬೇಕು, ಅಂದಾಗ ತಮ್ಮ ಪ್ರತ್ಯಕ್ಷ ಚಲನೆಯಲ್ಲಿ ಆ ಪರಿವರ್ತನೆ ಕಂಡುಬರಲಿ. ಇಲ್ಲಿಯವರೆಗೆ ಈ ಶಬ್ಧವು ಹೊರಡಿಲ್ಲ. ಭಲೆ ಕಾರ್ಖಾನೆಯಲ್ಲಿ ಅಥವಾ ಇಲ್ಲಿಯೇ ಕೆಲಸ ಮಾಡುತ್ತೀರೆಂದರೆ ಇವರು ಸಾಧಾರಣ ಕರ್ಮ ಮಾಡುತ್ತಿದ್ದರೂ ಸಹ ದರ್ಶನೀಯ ಮೂರ್ತಿಗಳಾಗಿದ್ದಾರೆಂದು ಒಂದೊಂದು ಆತ್ಮನೂ ಹೇಳುವಂತಿರಬೇಕು. ಹೀಗೆ ಇರಲು ಸಾಧ್ಯವೆ? ಸಾಧ್ಯವೆ? ಮುಂದೆ ಕುಳಿತಿರುವವರು ಹೇಳಿ - ಇದು ಸಾಧ್ಯವೆ? ಈಗ ಫಲಿತಾಂಶದಲ್ಲಿ ಕಡಿಮೆ ಕೇಳಿಬರುತ್ತಿದೆ ಆದರೆ ಹೆಚ್ಚಿನ ಸಾಧಾರಣತೆಯು ಕಾಣಿಸುತ್ತಿದೆ. ಎಂದಾದರೂ ಯಾವುದೇ ವಿಶೇಷ ಕಾರ್ಯವನ್ನು ಮಾಡುತ್ತೀರೆಂದರೆ ಅದಕ್ಕಾಗಿ ವಿಶೇಷ ಗಮನವನ್ನು ಕೊಡುತ್ತೀರಿ. ಆದ್ದರಿಂದ ಸರಿ ಎನ್ನುವಂತೆ ಕಾಣಿಸುತ್ತದೆ ಆದರೆ ತಮಗೆ ತಂದೆಯೊಂದಿಗೆ ಪ್ರೀತಿಯಿದೆ, ತಂದೆಯೊಂದಿಗೆ ಪ್ರೀತಿಯಿದೆಯೇ? ಎಷ್ಟು ಪಸೆರ್ಂಟ್? ಟೀಚರ್ಸ್ ಕೈಯೆತ್ತಿರಿ. ಬಹಳ ಮಂದಿ ಟೀಚರ್ಸ್ ಬಂದುಬಿಟ್ಟಿದ್ದಾರೆ. ಹೇಳಿ, ಇದು ಸಾಧ್ಯವೆ? ಅಥವಾ ಕೆಲವೊಮ್ಮೆ ಸಾಧಾರಣ, ಕೆಲವೊಮ್ಮೆ ವಿಶೇಷವೋ? ಯಾವುದೇ ಶಬ್ದಗಳು ಮುಖದಿಂದ ಬರುತ್ತದೆಯೆಂದರೆ ಯಾವುದೇ ಕಾರ್ಯ ಮಾಡುತ್ತಿದ್ದರೂ ಸಹ ಭಾಷೆಯೂ ಅಲೌಕಿಕವಾಗಿರಬೇಕು, ಸಾಧಾರಣ ಭಾಷೆಯಲ್ಲ.

ಈಗ ಬಾಪ್ದಾದಾರವರಿಗೆ ಎಲ್ಲಾ ಮಕ್ಕಳ ಪ್ರತಿ ಈ ಶ್ರೇಷ್ಠ ಆಸೆಯಿದೆ - ಇದರ ನಂತರ ತಂದೆಯ ಪ್ರತ್ಯಕ್ಷತೆಯಾಗುವುದು. ತಮ್ಮ ಕರ್ಮ, ಚಲನೆ, ಚಹರೆ ಸ್ವತಹವಾಗಿಯೇ ಸಿದ್ಧಮಾಡುವುದು, ಭಾಷಣದಿಂದ ಸಿದ್ಧವಾಗುವುದಿಲ್ಲ. ಭಾಷಣವಂತೂ ಒಂದು ಬಾಣವನ್ನು ಹೊಡೆಯುವುದಾಗಿದೆ. ಆದರೆ ಇವರನ್ನು ಈ ರೀತಿ ಮಾಡುವವರು ಯಾರು! ಎಂದು ಪ್ರತ್ಯಕ್ಷತೆಯಾಗುವುದು. ತಮ್ಮನ್ನು ಹೀಗೆ ಮಾಡುವವರು ಯಾರೆಂದು ತಾವೇ ಹುಡುಕುತ್ತಾರೆ, ತಾವೇ ಕೇಳುತ್ತಾರೆ. ರಚನೆಯು ರಚಯಿತನನ್ನು ಪ್ರತ್ಯಕ್ಷ ಮಾಡುತ್ತದೆ.

ಅಂದಮೇಲೆ ಈ ವರ್ಷ ಏನು ಮಾಡುತ್ತೀರಿ? ಗ್ರಾಮಸೇವೆ ಮಾಡಬೇಕು. ಎಂದು ದಾದಿಯಂತೂ ತಿಳಿಸಿದರು. ಭಲೆ ಅದನ್ನು ಮಾಡಿ ಆದರೆ ಬಾಪ್ ದಾದಾರವರು ಈಗ ಈ ಪರಿವರ್ತನೆಯನ್ನು ನೋಡಲು ಬಯಸುತ್ತಾರೆ. ಒಂದು ವರ್ಷದಲ್ಲಿ ಪರಿವರ್ತನೆಯಾಗಲು ಸಾಧ್ಯವಿದೆಯೆ? ಒಂದು ವರ್ಷದಲ್ಲಿ? ನಂತರದ ಸೀಜನ್ ಯಾವಾಗ ಪ್ರಾರಂಭವಾಗುವುದೋ ಆಗ ಎಲ್ಲದರಲ್ಲಿಯೂ ಅಂತರವು ಕಂಡುಬರಬೇಕು, ಎಲ್ಲಾ ಸೇವಾಕೇಂದ್ರಗಳಿಂದ ಇದೇ ಮಹಾನ್ ಪರಿವರ್ತನೆಯ ಕೂಗು ಹೊರಡಬೇಕು. ನಂತರ ಪರಿವರ್ತನೆ, ಪರಿವರ್ತನೆ....... ಎಂಬ ಗೀತೆಯನ್ನು ಹಾಡುತ್ತಾರೆ. ಸಾಧಾರಣ ಮಾತು ತಮ್ಮ ಭಾಗ್ಯದ ಮುಂದೆ ಸರಿಯೆನಿಸುವುದಿಲ್ಲ. ಇದಕ್ಕೆ ಕಾರಣವಾಗಿದೆ - ನಾನು, ಈ ನಾನು, ನನ್ನತನ, ನಾನು ಏನು ಯೋಚಿಸಿದೆನೊ, ಏನು ಹೇಳುತ್ತೇನೆಯೋ, ಏನು ಮಾಡುತ್ತೇನೆಯೋ ಅದೇ ಸರಿಯಾಗಿದೆ, ಈ ನನ್ನತನದ ಕಾರಣ ಅಭಿಮಾನವೂ ಬರುತ್ತದೆ, ಕ್ರೋಧವೂ ಬರುತ್ತದೆ. ಎರಡೂ ತನ್ನ ಕೆಲಸ ಮಾಡುತ್ತವೆ. ತಂದೆಯ ಪ್ರಸಾದವಾಗಿದೆ ಅಂದಮೇಲೆ ಇದರಲ್ಲಿ ನಾನು ಎಂಬ ಶಬ್ದವು ಎಲ್ಲಿಂದ ಬಂದಿತು! ಪ್ರಸಾದವನ್ನು ಯಾರಾದರೂ ನನ್ನತನದಲ್ಲಿ ತರಲು ಸಾಧ್ಯವೆ? ಒಂದುವೇಳೆ ಬುದ್ದಿಯೂ ಇದೆ. ಕಲೆಯೂ ಇದೆ, ಯಾವುದಾದರೂ ವಿಶೇಷತೆಯೂ ಇದೆ ಆದರೆ ಬಾಪ್ದಾದಾರವರು ವಿಶೇಷತೆಗೆ, ಬುದ್ಧಿಗೆ ಪ್ರೋತ್ಸಾಹ ನೀಡುತ್ತಾರೆ ಆದರೆ ಅದರಲ್ಲಿ ನಾನು ಎಂಬುದನ್ನು ತರಬೇಡಿ, ಈ ನನ್ನತನವನ್ನು ಸಮಾಪ್ತಿ ಮಾಡಿಬಿಡಿ. ಇದು ಸೂಕ್ಷ್ಮವಾದ ನನ್ನತನವಾಗಿದೆ. ಈ ನನ್ನತನವು ದರ್ಶನೀಯಮೂರ್ತಿಗಳಾಗಲು ಬಿಡುವುದಿಲ್ಲ ಅಂದಾಗ ದಾದಿಯರು ಏನು ಹೇಳುತ್ತೀರಿ? ಪರಿವರ್ತನೆಯಾಗಲು ಸಾಧ್ಯವೆ? ಸಾಧ್ಯವೆ? ಮೂವರು ಪಾಂಡವರು ತಿಳಿಸಿ, ಮೂವರೂ ವಿಶೇಷ ಆತ್ಮಗಳಾಗಿದ್ದೀರಲ್ಲವೆ! ಮೂವರೂ ತಿಳಿಸಿ, ಇದು ಸಾಧ್ಯವೆ? ಸಾಧ್ಯವೆ? ಒಳ್ಳೆಯದು- ಈಗ ಇದರ ಕಮ್ಯಾಂಡರ್ (ದಂಡಾಧಿಕಾರಿ) ಆಗಬೇಕು. ಅನ್ಯಮಾತುಗಳಲ್ಲಿ ಕಮ್ಯಾಂಡರ್ ಆಗಬಾರದು, ಪರಿವರ್ತನೆಯಲ್ಲಿ ಕಮ್ಯಾಂಡರ್ ಆಗಬೇಕು. ಮಧುಬನದವರು ಆಗುತ್ತೀರಾ? ಆಗುತ್ತೀರಾ? ಮಧುಬನದವರು ಕೈಯೆತ್ತಿ. ಒಳ್ಳೆಯದು- ಆಗುತ್ತೀರಾ? ಬಾಂಬೆಯವರು ಕೈಯೆತ್ತಿ, ಬಾಂಬೆಯವರು ಆಗುತ್ತೀರಾ? ಒಂದುವೇಳೆ ಆಗುತ್ತೇವೆ ಎನ್ನುವುದಾದರೆ ಕೈಯನ್ನು ಅಲುಗಾಡಿಸಿ. ಒಳ್ಳೆಯದು. ದೆಹಲಿಯವರು ಕೈಯೆತ್ತಿ. ಅಂದಾಗ ದೆಹಲಿಯವರು ಮಾಡುತ್ತೀರಾ? ಟೀಚರ್ಸ್ ತಿಳಿಸಿ. ನೋಡುತ್ತೇವೆ. ಪ್ರತೀ ತಿಂಗಳು ಬಾಪ್ದಾದಾ ರಿಪೋರ್ಟ್ ತೆಗೆದುಕೊಳ್ಳುತ್ತಾರೆ. ಸಾಹಸವಿದೆಯಲ್ಲವೆ? ಶುಭಾಷಯಗಳು.

ಒಳ್ಳೆಯದು. ಇಂಡೋರ್ನವರು ಕೈಯೆತ್ತಿ. ಇಂಡೋರ್ನವರದು ಸೇವೆಯ ಟರ್ನ್ ಆಗಿದೆ. ಅಂದಾಗ ಇಂಡೋರ್ನ ಟೀಚರ್ಸ್ ಕೈಯೆತ್ತಿರಿ. ಟೀಚರ್ಸ್ ಮಾಡುವಿರಾ? ಇಂಡೋರ್ನವರು ಮಾಡುತ್ತೀರಾ? ಕೈಯನ್ನು ಅಲುಗಾಡಿಸಿ. ಎಲ್ಲಾ ಕೈಗಳು ಆಡುತ್ತಿಲ್ಲ. ಮಾಡುತ್ತೀರಾ ಅಥವಾ ಮಾಡಿಸುತ್ತೀರಾ? ದಾದಿಯರೇ ನೋಡಿ. ಟಿ.ವಿ.ಯಲ್ಲಿ ನೋಡುತ್ತಿದ್ದಾರೆ. ಗುಜರಾತಿನವರು ಕೈಯೆತ್ತಿದ್ದಾರೆ. ಗುಜರಾತಿನವರು ಮಾಡುತ್ತೀರಾ? ಕೈ ಅಲುಗಾಡಿಸುವುದಂತೂ ಸಹಜವಾಗಿದೆ, ಆದರೆ ಈಗ ಮನಸ್ಸನ್ನು ಅಲುಗಾಡಿಸಬೇಕಾಗಿದೆ. ಏಕೆ ಇಷ್ಟೊಂದು ದುಃಖವನ್ನು ನೋಡಿ ದಯೆ ಬರುತ್ತಿಲ್ಲವೆ? ಈಗ ಪರಿವರ್ತನೆಯಾಗುವುದೆಂದರೆ ಒಳ್ಳೆಯದು. ಈಗ ಪ್ರತ್ಯಕ್ಷತೆಯ - ಯೋಜನೆಯು ಪ್ರಾಯೋಗಿಕ ಜೀವನವಾಗಿದೆ. ಉಳಿದಂತೆ ಕಾರ್ಯಕ್ರಮಗಳನ್ನು ಮಾಡುತ್ತೀರಿ ಆದರೆ ಇದಂತೂ ಬ್ಯುಸಿಯಾಗಿರುವುದಕ್ಕೆ ಚೆನ್ನಾಗಿದೆ ಆದರೆ ಪ್ರತ್ಯಕ್ಷತೆಯಾಗುವುದು ತಮ್ಮ ಚಲನೆ ಮತ್ತು ಚಹರೆಯಿಂದ. ಮತ್ಯಾವುದಾದರೂ ಜೋನ್ ಉಳಿದುಕೊಂಡಿದೆಯೆ? ಯು.ಪಿ (ಉತ್ತರಪ್ರದೇಶ) ಯವರು ಕೈಯೆತ್ತಿ. ಯು.ಪಿ.ಯವರು ಕಡಿಮೆ ಮಂದಿಯಿದ್ದಾರೆ. ಒಳ್ಳೆಯದು- ಯು.ಪಿ.ಯವರು ಮಾಡುತ್ತೀರಾ? ಮಹಾರಾಷ್ಟ್ರದವರು ಕೈ ಎತ್ತಿ. ಪೂರ್ಣ ಕೈಯೆತ್ತಿ. ಒಳ್ಳೆಯದು. ಮಹಾರಾಷ್ಟ್ರದವರು ಮಾಡುತ್ತೀರಾ? ಶುಭಾಷಯಗಳು. ರಾಜಸ್ಥಾನದವರು ಕೈ ಎತ್ತಿ. ಟೀಚರ್ಸ್ ಕೈ ಅಲುಗಾಡಿಸಿ. ಕರ್ನಾಟಕದವರು ಕೈ ಎತ್ತಿ. ಒಳ್ಳೆಯದು - ಕರ್ನಾಟಕದವರು ಮಾಡುತ್ತೀರಾ? ಆಂಧ್ರಪ್ರದೇಶದವರು ಕೈ ಎತ್ತಿ. ಇವರಂತೂ ಚರ್ಚೆ ಮಾಡಿದ್ದಾರೆ. ಡಬಲ್ ವಿದೇಶಿಯರು ಕೈ ಎತ್ತಿ. ಜಯಂತಿ ಎಲ್ಲಿ ಇದ್ದ. ಡಬಲ್ ವಿದೇಶಿಯರು ಮಾಡುತ್ತಾರೆ. ಈಗ ನೋಡಿ ಸಭೆಯ ಮಧ್ಯದಲ್ಲಿ ಹೇಳಿದ್ದಾರೆ. ಎಲ್ಲರೂ ಧೈರ್ಯವನ್ನು ಬಹಳ ಚೆನ್ನಾಗಿ ತೋರಿಸಿದ್ದೀರಿ ಇದಕ್ಕಾಗಿ ಪದಮದಷ್ಟು ಶುಭಾಷಯಗಳು. ಹೊರಗಡೆಯು ಕೇಳುತ್ತಿದ್ದಾರೆ, ತಮ್ಮ-ತಮ್ಮ ದೇಶಗಳಲ್ಲಿಯೂ ಕೇಳುತ್ತಿದ್ದಾರೆ. ಅವರೂ ಸಹ ಕೈ ಎತ್ತುತ್ತಿದ್ದಾರೆ.

ಹಾಗೆಯೇ ನೋಡಿ ಯಾರು ಶ್ರೇಷ್ಠ ಆತ್ಮಗಳಿರುತ್ತಾರೆ ಅವರ ಪ್ರತಿಯೊಂದು ವಚನಕ್ಕೆ ಸತ್ಯವಚನ ಎನ್ನಲಾಗುತ್ತದೆ. ಸತ್ಯವಚನ ಮಹಾರಾಜ್ ಎಂದು ಹೇಳುತ್ತಾರಲ್ಲವೇ ಅಂದಮೇಲೆ ತಾವು ಮಹಾ-ಮಹಾರಾಜರಾಗಿದ್ದೀರಿ. ತಮ್ಮೆಲ್ಲರ ಪ್ರತಿಯೊಂದು ವಚನವನ್ನು ಯಾರೇ ಕೇಳಿದರೂ ಸಹ ಅವರು ಸತ್ಯವಚನ ಎಂಬುದನ್ನು ಮನಸ್ಸಿನಲ್ಲಿ ಅನುಭವ ಮಾಡುತ್ತಾರೆ. ನಿಮ್ಮ ಮನಸ್ಸಿನಲ್ಲಿ ಬಹಳಷ್ಟು ತುಂಬಿದೆ, ಬಾಪ್ದಾದಾರವರ ಬಳಿ ಮನಸ್ಸನ್ನು ನೋಡುವ ಟಿ.ವಿ.ಯೂ ಸಹ ಇದೆ. ಇಲ್ಲಿ ಈ ಟಿ.ವಿ.ಯು ಹೊರಗಡೆಯ ಮುಖವನ್ನು ತೋರಿಸುತ್ತದೆಯಲ್ಲವೇ. ಆದರೆ ಬಾಪ್ದಾದಾರವರ ಬಳಿ ಪ್ರತಿಯೊಬ್ಬರ ಪ್ರತಿಯೊಂದು ಸಮಯದ ಮನಸ್ಸಿನ ಗತಿ (ವೇಗ) ಯ ಯಂತ್ರವಿದೆ ಅಂದಮೇಲೆ ಮನಸ್ಸಿನಲ್ಲಿ ಬಹಳಷ್ಟು ಕಾಣಿಸುತ್ತದೆ, ಯಾವಾಗ ಮನಸ್ಸಿನ ಟಿ.ವಿಯನ್ನು ನೋಡುತ್ತಾರೆ. ಆಗ ಖುಷಿಯಾಗುತ್ತಾರೆ, ಬಹಳ ಖಜಾನೆ ಇದೆ, ಬಹಳ ಶಕ್ತಿಗಳೂ ಇದೆ ಆದರೆ ಕರ್ಮದಲ್ಲಿ ಯಥಾ ಶಕ್ತಿಯಾಗಿಬಿಡುತ್ತದೆ. ಈಗ ಕರ್ಮದತನಕ ತನ್ನಿ, ವಚನದ ತನಕ ತನ್ನಿ, ಚೆಹರೆಯತನಕ ತನ್ನಿ, ನಡವಳಿಕೆಯತನಕ ತನ್ನಿ. ಆಗ ಎಲ್ಲರೂ ಹೇಳುತ್ತಾರೆ. ತಮ್ಮ ಒಂದು ಗೀತೆ ಇದೆಯಲ್ಲವೇ, ಶಕ್ತಿಯರು ಬಂದರು..... ಎಲ್ಲರೂ ಶಿವಶಕ್ತಿಯರು. ಪಾಂಡವರೂ ಸಹ ಶಕ್ತಿಯರಾಗಿದ್ದೀರಿ. ನಂತರ ಶಕ್ತಿಯರು ಶಿವತಂದೆಯನ್ನು ಪ್ರತ್ಯಕ್ಷ ಮಾಡುತ್ತಾರೆ. ಈಗ ಚಿಕ್ಕ ಚಿಕ್ಕ ಆಟಪಾಟಗಳನ್ನು ನಿಲ್ಲಿಸಿ. ಈಗ ವಾನಪ್ರಸ್ಥ ಸ್ಥಿತಿಯನ್ನು ಇಮರ್ಜ್ ಮಾಡಿಕೊಳ್ಳಿ ಅಂದಮೇಲೆ ಬಾಪ್ದಾದಾ ಎಲ್ಲಾ ಮಕ್ಕಳನ್ನು, ಈ ಸಮಯದಲ್ಲಿ ಬಾಪ್ದಾದಾರವರ ಅಸೆಗಳನ್ನು ಪೂರ್ಣ ಮಾಡುವಂತಹ ಆಸೆಗಳ ನಕ್ಷತ್ರಗಳನ್ನು ನೋಡುತ್ತಿದ್ದಾರೆ. ಯಾವುದೇ ಮಾತು ಬರಲಿ, ಈ ಸ್ಲೋಗನ್ ನೆನಪು ಇಟ್ಟುಕೊಳ್ಳಬೇಕು - ಪರಿವರ್ತನೆ, ಪರಿವರ್ತನೆ, ಪರಿವರ್ತನೆ.

ನಾಲ್ಕೂ ಕಡೆಯ ಬಹಳ-ಬಹಳ-ಬಹಳ ಭಾಗ್ಯವಂತ ಆತ್ಮಗಳಿಗೆ, ಇಡೀ ವಿಶ್ವದ ಮಧ್ಯೆ ಕೋಟಿಯಲ್ಲಿ ಕೆಲವರು, ಕೆಲವರಲ್ಲಿಯೂ ಕೆಲವು ವಿಶೇಷ ಆತ್ಮಗಳಿಗೆ ಸದಾ ತಮ್ಮ ಚಲನೆ ಹಾಗೂ ಚಹರೆಯ ಮೂಲಕ ಬಾಪ್ದಾದಾರವರನ್ನು ಪ್ರತ್ಯಕ್ಷ ಮಾಡುವಂತಹ ವಿಶೇಷ ಮಕ್ಕಳಿಗೆ, ಸದಾ ಸಹಯೋಗ ಹಾಗೂ ಸ್ನೇಹದ ಬಂಧನದಲ್ಲಿ ಇರುವಂತಹ ಶ್ರೇಷ್ಠ ಆತ್ಮಗಳಿಗೆ ಸದಾ ಬ್ರಹ್ಮಾತಂದೆಯ ಸಮಾನ ಪ್ರತಿಯೊಂದು ಕರ್ಮದಲ್ಲಿ ಅಲೌಕಿಕ ಕರ್ಮ ಮಾಡುವಂತಹ ಅಲೌಕಿಕ ಆತ್ಮಗಳಿಗೆ, ಬಾಪ್ದಾದಾರವರ ನೆನಪು ಪ್ರೀತಿ ಹಾಗೂ ನಮಸ್ತೆ.

ವಿಂಗ್ಸ್ ನ ಸೇವೆಗಳ ಪ್ರತಿ ಬಾಪ್ದಾದಾರವರ ಪ್ರೇರಣೆಗಳು:- ಒಳ್ಳೆಯದು. ಈ ವರ್ಗಗಳ ಸೇವೆಯಲ್ಲಿ ಒಳ್ಳೆಯ ಫಲಿತಾಂಶವು ಕಾಣಿಸುತ್ತದೆ ಏಕೆಂದರೆ ಪ್ರತಿಯೊಂದು ವರ್ಗದವರು ಶ್ರಮಪಡುತ್ತಾರೆ, ಸಂಪರ್ಕವನ್ನು ಹೆಚ್ಚಿಸುತ್ತಾ ಹೋಗುತ್ತಾರೆ. ಆದರೆ ಬಾಪ್ದಾದಾ ಬಯಸುತ್ತಾರೆ - ಹೇಗೆ ವೈದ್ಯಕೀಯ ವರ್ಗದವರು ಮೆಡಿಟೇಷನ್ ಮೂಲಕ ಹೃದಯದ ತೊಂದರೆಯನ್ನು ಸರಿ ಪಡಿಸಬಹುದು ಎಂದು ಪ್ರತ್ಯಕ್ಷ ಪ್ರಮಾಣವನ್ನು ಕೊಟ್ಟರು. ತಾವೆಲ್ಲರೂ ಕೇಳಿದ್ದೀರಲ್ಲವೇ. ಹಾಗೆಯೇ ಜಗತ್ತಿನವರು ಪ್ರತ್ಯಕ್ಷ ಪ್ರಮಾಣವನ್ನು ಬಯಸುತ್ತಾರೆ. ಈ ಪ್ರಕಾರದಿಂದ ಯಾರೆಲ್ಲಾ ಬಂದಿದ್ದೀರಿ. ಪ್ರೋಗ್ರಾಮ ಮಾಡಲೇಬೇಕು, ಮಾಡುತ್ತೀರಿ. ಆದರೆ ಅಂತಹ ಯಾವುದಾದರೂ ಯೋಜನೆಯನ್ನು ಮಾಡಿ, ಅದರಿಂದ ಪ್ರತ್ಯಕ್ಷ ಫಲಿತಾಂಶ ಎಲ್ಲರ ಮುಂದೆ ಬರಲಿ. ಎಲ್ಲಾ ವರ್ಗದವರಿಗೆ ಬಾಪ್ದಾದಾ ಹೇಳುತ್ತಿದ್ದಾರೆ. ಇದು ಸರ್ಕಾರದತನಕವೂ ಸಹ ತಲುಪುತ್ತಿದೆಯಲ್ಲವೇ! ಹಾಗೂ ಅಲ್ಲಿ-ಇಲ್ಲಿ ಶಬ್ದವಂತೂ ಹರಡುತ್ತಿದೆ - ಮೆಡಿಟೇಷನ್ ಮೂಲಕವೂ ಸಹ ಸಾಧ್ಯವಿದೆ. ಈಗ ಇದನ್ನು ಇನ್ನಷ್ಟು ಹೆಚ್ಚಿಸಬೇಕು.

ಈಗ ಪ್ರತ್ಯಕ್ಷತೆಯ ಪ್ರಮಾಣವನ್ನು ಕೊಡಿ, ಮೆಡಿಟೇಷನ್ ಮೂಲಕ ಎಲ್ಲವೂ ಸಾಧ್ಯವಿದೆ ಎಂಬುದು ಎಲ್ಲಾ ಕಡೆ ಹರಡಲಿ. ಎಲ್ಲರ ಗಮನ ಯೋಗದ ಕಡೆ ಇರಲಿ, ಆಧ್ಯಾತ್ಮಿಕತೆಯ ಕಡೆ ಇರಲಿ. ತಿಳಿಯಿತೇ. ಒಳ್ಳೆಯದು.

ವರದಾನ:
ಸೈಲೆನ್ಸ್ ನ ಶಕ್ತಿಯ ಮೂಲಕ ವಿಶ್ವದಲ್ಲಿ ಪ್ರತ್ಯಕ್ಷತೆಯ ನಗಾರಿ ಬಾರಿಸುವಂತಹ ಶಾಂತ ಸ್ವರೂಪ ಭವ

ಗಾಯನವಿದೆ “ವಿಜ್ಞಾನದ ಮೇಲೆ ಶಾಂತಿಯ ವಿಜಯ" ("ಸೈನ್ಸ್ನ ಮೇಲೆ ಸೈಲೆನ್ಸ್ನ ವಿಜಯ") ವಾಣಿಯಿಂದಲ್ಲ. ಎಷ್ಟೆಷ್ಟು ಸಮಯ ಅಥವಾ ಸಂಪರ್ಣತೆಯ ಸಮೀಪ ಬರುತ್ತಾ ಹೋಗುವಿರಿ ಅಷ್ಟೂ ಆಟೋಮೆಟಿಕ್ ಶಬ್ದದಲ್ಲಿ ಅಧಿಕವಾಗಿ ಬರುವುದರಿಂದ ವೈರಾಗ್ಯ ಬರುತ್ತಾ ಹೋಗುವುದು. ಹೇಗೆ ಈಗ ಇಚ್ಛೆ ಪಡುತ್ತಿದ್ದರೂ ಅಭ್ಯಾಸ ಶಬ್ದದಲ್ಲಿ ತರುತ್ತದೆ ಅದೇ ರೀತಿ ಇಚ್ಛೆ ಇದ್ದರೂ ಸಹ ಶಬ್ದದಿಂದ ದೂರವಾಗಿಬಿಡುವಿರಿ. ಪ್ರೋಗ್ರಾಮ್ ಅನುಸಾರ ಶಬ್ದದಲ್ಲಿ ಬರುವಿರಿ ಯಾವಾಗ ಈ ವ್ಯತ್ಯಾಸ ಕಂಡುಬರುತ್ತದೆ ಆಗ ತಿಳಿಯಿರಿ ಈಗ ವಿಜಯದ ನಗಾರಿ ಬಾರಿಸುವುದಿದೆ. ಅದಕ್ಕಾಗಿ ಎಷ್ಟು ಸಮಯ ಸಿಗುವುದೋ ಅಷ್ಟು ಶಾಂತಸ್ವರೂಪ ಸ್ಥಿತಿಯಲ್ಲಿರುವ ಅಭ್ಯಾಸಿಗಳಾಗಿ.

ಸ್ಲೋಗನ್:
ಜಿರೋ ತಂದೆಯ ಜೊತೆಯಿರುವಂತಹವರೇ ಹೀರೋ ಪಾತ್ರಧಾರಿಗಳಾಗಿದ್ದಾರೆ.

ತಮ್ಮ ಶಕ್ತಿಶಾಲಿ ಮನಸ್ಸಾ ಮೂಲಕ ಸಕಾಶ ಕೊಡುವ ಸೇವೆಯನ್ನು ಮಾಡಿರಿ

ವರ್ತಮಾನ ಸಮಯ ವಿಶ್ವ ಕಲ್ಯಾಣ ಮಾಡುವ ಸಹಜ ಸಾಧನ ತಮ್ಮ ಶ್ರೇಷ್ಠ ಸಂಕಲ್ಪಗಳ ಏಕಾಗ್ರತೆ ಮೂಲಕ, ಸರ್ವ ಆತ್ಮಗಳ ಅಲೆದಾಡುತ್ತಿರುವ ಬುದ್ಧಿಯನ್ನು ಏಕಾಗ್ರ ಮಾಡಬೇಕು. ಇಡೀ ವಿಶ್ವದ ಸರ್ವ ಆತ್ಮಗಳು ವಿಶೇಷವಾಗಿ ಇದನ್ನೇ ಬಯಸುತ್ತಾರೆ ಅಲೆದಾಡುತ್ತಿರುವ ಬುದ್ಧಿ ಏಕಾಗ್ರವಾಗಲಿ ಅಥವಾ ಮನಸ್ಸನ್ನು ಚಂಚಲತೆಯಿಂದ ಏಕಾಗ್ರವಾಗಿ ಬಿಡಲಿ. ಇದು ವಿಶ್ವದ ಬೇಡಿಕೆ ಅಥವಾ ಬಯಕೆ ಆಗಲೇ ಪೂರ್ಣವಾಗಬೇಕೆಂದರೆ ಏಕಾಗ್ರವಾಗಿ ಮನಸ್ಸಾ ಶಕ್ತಿಯ ದಾನ ಮಾಡಿ.