26.04.25         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ - ನೀವು ಪುರುಷೋತ್ತಮ ಸಂಗಮಯುಗೀ ಬ್ರಾಹ್ಮಣರು ಈಗ ಈಶ್ವರನ ಮಡಿಲಿಗೆ ಬಂದಿದ್ದೀರಿ, ಈಗ ನೀವು ಮನುಷ್ಯರಿಂದ ದೇವತೆಗಳಾಗಬೇಕೆಂದರೆ ದೈವೀಗುಣಗಳೂ ಬೇಕು”

ಪ್ರಶ್ನೆ:
ಬ್ರಾಹ್ಮಣ ಮಕ್ಕಳು ಯಾವ ಮಾತಿನಲ್ಲಿ ತಮ್ಮನ್ನು ಬಹಳ-ಬಹಳ ಸಂಭಾಲನೆ ಮಾಡಿಕೊಳ್ಳಬೇಕು ಮತ್ತು ಏಕೆ?

ಉತ್ತರ:
ಇಡೀ ದಿನದ ದಿನಚರಿಯಲ್ಲಿ ಯಾವುದೇ ಪಾಪಕರ್ಮವಾಗದಂತೆ ಸಂಭಾಲನೆ ಮಾಡಿಕೊಳ್ಳಬೇಕಾಗಿದೆ ಏಕೆಂದರೆ ನಿಮ್ಮ ಮುಂದೆ ತಂದೆಯು ಧರ್ಮರಾಜನ ರೂಪದಲ್ಲಿ ನಿಂತಿದ್ದಾರೆ. ಅಂದಾಗ ಪರಿಶೀಲನೆ ಮಾಡಿಕೊಳ್ಳಿ - ಯಾರಿಗೂ ದುಃಖವನ್ನು ಕೊಡಲಿಲ್ಲವೆ? ಶ್ರೀಮತದಂತೆ ಎಷ್ಟು ಪರ್ಸೆಂಟ್ ನಡೆಯುತ್ತೇವೆ? ರಾವಣನ ಮತದಂತೆ ನಡೆಯುತ್ತಿಲ್ಲವೆ? ಏಕೆಂದರೆ ತಂದೆಯ ಮಕ್ಕಳಾದ ಮೇಲೆ ಯಾವುದೇ ವಿಕರ್ಮವಾಗುತ್ತದೆಯೆಂದರೆ ಒಂದಕ್ಕೆ ನೂರುಪಟ್ಟು ಆಗಿಬಿಡುತ್ತದೆ.

ಓಂ ಶಾಂತಿ.
ಭಗವಾನುವಾಚ - ಇದನ್ನಂತೂ ಮಕ್ಕಳಿಗೆ ತಿಳಿಸಲಾಗಿದೆ - ಯಾವುದೇ ಮನುಷ್ಯರಿಗಾಗಲಿ ಅಥವಾ ದೇವತೆಗಳಿಗಾಗಲಿ ಭಗವಂತನೆಂದು ಹೇಳಲಾಗುವುದಿಲ್ಲ. ಇಲ್ಲಿ ಕುಳಿತುಕೊಂಡಾಗ ನಾವು ಸಂಗಮಯುಗೀ ಬ್ರಾಹ್ಮಣರೆಂದು ಬುದ್ಧಿಯಲ್ಲಿರುತ್ತದೆ. ಈ ನೆನಪು ಸಹ ಸದಾ ಯಾರಿಗೂ ಇರುವುದಿಲ್ಲ. ತಮ್ಮನ್ನು ಸತ್ಯವಾದ ಬ್ರಾಹ್ಮಣರೆಂದು ತಿಳಿಯುತ್ತಾರೆಯೇ? ಅದೂ ಇಲ್ಲ. ಬ್ರಾಹ್ಮಣ ಮಕ್ಕಳು ದೈವೀಗುಣವನ್ನು ಧಾರಣೆ ಮಾಡಬೇಕಾಗಿದೆ. ನಾವು ಸಂಗಮಯುಗೀ ಬ್ರಾಹ್ಮಣರಾಗಿದ್ದೇವೆ, ನಾವು ಶಿವತಂದೆಯ ಮೂಲಕ ಪುರುಷೋತ್ತಮರಾಗುತ್ತಿದ್ದೇವೆ. ಈ ನೆನಪೂ ಸಹ ಎಲ್ಲರಿಗೂ ಇರುವುದಿಲ್ಲ. ನಾವು ಪುರುಷೋತ್ತಮ ಸಂಗಮಯುಗೀ ಬ್ರಾಹ್ಮಣರೆಂಬುದನ್ನು ಸಹ ಪದೇ-ಪದೇ ಮರೆತುಹೋಗುತ್ತಾರೆ. ಇದು ಬುದ್ಧಿಯಲ್ಲಿದ್ದರೂ ಸಹ ಅಹೋ ಸೌಭಾಗ್ಯ! ಯಾವಾಗಲೂ ನಂಬರ್ವಾರ್ ಇದ್ದೇ ಇರುತ್ತಾರೆ. ಎಲ್ಲರೂ ತಮ್ಮ-ತಮ್ಮ ಬುದ್ಧಿಯನುಸಾರ ಪುರುಷಾರ್ಥಿಗಳಾಗಿದ್ದಾರೆ. ಈಗ ನೀವು ಸಂಗಮಯುಗಿಗಳಾಗಿದ್ದೀರಿ, ಪುರುಷೋತ್ತಮರಾಗುವವರಿದ್ದೀರಿ. ನಿಮಗೆ ತಿಳಿದಿದೆ - ಯಾವಾಗ ಪ್ರಿಯಾತಿಪ್ರಿಯ ತಂದೆಯನ್ನು ನೆನಪು ಮಾಡುತ್ತೇವೆಯೋ ಆಗಲೇ ನಾವು ಪುರುಷೋತ್ತಮರಾಗುತ್ತೇವೆ. ನೆನಪಿನಿಂದಲೇ ಪಾಪಗಳು ನಾಶವಾಗುತ್ತವೆ. ಒಂದುವೇಳೆ ಯಾವುದೇ ಪಾಪ ಮಾಡುತ್ತಾರೆಂದರೆ ಅದಕ್ಕೆ ಒಂದಕ್ಕೆ ನೂರರಷ್ಟು ಲೆಕ್ಕವು ಏರಿಬಿಡುತ್ತದೆ. ಮೊದಲು ಏನು ಪಾಪ ಮಾಡುತ್ತಿದ್ದರೋ ಅದು ಒಂದಕ್ಕೆ 10% ಏರುತ್ತಿತ್ತು. ಈಗಂತೂ 100% ಏರುತ್ತದೆ ಏಕೆಂದರೆ ಈಶ್ವರನ ಮಡಿಲಿಗೆ ಬಂದಮೇಲೂ ಪಾಪ ಮಾಡುತ್ತಾರೆ. ನೀವು ಮಕ್ಕಳಿಗೆ ತಿಳಿದಿದೆ - ತಂದೆಯು ಪುರುಷೋತ್ತಮರಿಂದ ದೇವತೆಗಳನ್ನಾಗಿ ಮಾಡಲು ನಮಗೆ ಓದಿಸುತ್ತಾರೆ. ಈ ನೆನಪು ಯಾರಿಗೆ ಸ್ಥಿರವಾಗಿದೆಯೋ ಅವರು ಬಹಳ ಅಲೌಕಿಕ ಸೇವೆಯನ್ನು ಮಾಡುತ್ತಿರುತ್ತಾರೆ. ಸದಾ ಹರ್ಷಿತರಾಗಲು ಅನ್ಯರಿಗೂ ಮಾರ್ಗವನ್ನು ತಿಳಿಸಬೇಕಾಗಿದೆ. ಭಲೆ ಎಲ್ಲಿಯೇ ಹೋಗುತ್ತೀರೆಂದರೆ ಬುದ್ಧಿಯಲ್ಲಿ ಇದು ನೆನಪಿರಲಿ - ನಾವು ಸಂಗಮಯುಗದಲ್ಲಿದ್ದೇವೆ, ಇದು ಪುರುಷೋತ್ತಮ ಸಂಗಮಯುಗವಾಗಿದೆ. ಅವರು ಪುರುಷೋತ್ತಮ ಮಾಸ ಅಥವಾ ವರ್ಷವೆಂದು ಹೇಳುತ್ತಾರೆ. ನಾವು ಪುರುಷೋತ್ತಮ ಈ ಸಂಗಮಯುಗೀ ಬ್ರಾಹ್ಮಣರೆಂದು ನೀವು ಹೇಳುತ್ತೀರಿ. ಈಗ ಪುರುಷೋತ್ತಮರಾಗುವ ಯಾತ್ರೆಯಲ್ಲಿದ್ದೇವೆ ಎಂಬುದನ್ನು ಬಹಳ ಚೆನ್ನಾಗಿ ಬುದ್ಧಿಯಲ್ಲಿ ಧಾರಣೆ ಮಾಡಿಕೊಳ್ಳಬೇಕಾಗಿದೆ. ಇದು ನೆನಪಿದ್ದರೂ ಸಹ ಮನ್ಮನಾಭವವಾಯಿತು. ನೀವು ಪುರುಷಾರ್ಥದನುಸಾರ ಮತ್ತು ಕರ್ಮದನುಸಾರ ಪುರುಷೋತ್ತಮರಾಗುತ್ತಿದ್ದೀರಿ. ದೈವೀಗುಣಗಳೂ ಬೇಕು, ಶ್ರೀಮತದಂತೆ ನಡೆಯಬೇಕಾಗುತ್ತದೆ. ಎಲ್ಲಾ ಮನುಷ್ಯರು ತಮ್ಮ ಮತದಂತೆ ನಡೆಯುತ್ತಾರೆ, ಅದು ರಾವಣನಮತವಾಗಿದೆ ಅಂದರೆ ನೀವೆಲ್ಲರೂ ಶ್ರೀಮತದಂತೆ ನಡೆಯುತ್ತೀರೆಂದಲ್ಲ. ನಿಮ್ಮಲ್ಲಿ ಅನೇಕರು ರಾವಣನ ಮತದನುಸಾರ ನಡೆಯುತ್ತಾರೆ. ಶ್ರೀಮತದನುಸಾರ ಕೆಲಕೆಲವರು ಕೆಲವಷ್ಟು ನಡೆಯುತ್ತಾರೆ. ಕೆಲವರಂತೂ 2% ಅಷ್ಟೇ ನಡೆಯುತ್ತಾರೆ. ಭಲೆ ಇಲ್ಲಿ ಕುಳಿತಿದ್ದಾರೆ ಆದರೂ ಸಹ ಶಿವತಂದೆಯ ನೆನಪಿನಲ್ಲಿರುವುದಿಲ್ಲ. ಬುದ್ಧಿಯೋಗವು ಎಲ್ಲೆಲ್ಲಿಯೋ ಅಲೆದಾಡುತ್ತಿರುತ್ತದೆ ಆದ್ದರಿಂದ ನಿತ್ಯವೂ ನೋಡಿಕೊಳ್ಳುತ್ತಿರಬೇಕು - ಇಂದು ಯಾವುದೇ ಪಾಪದ ಕೆಲಸವನ್ನು ಮಾಡಲಿಲ್ಲವೆ? ಯಾರಿಗೂ ದುಃಖವನ್ನು ಕೊಡಲಿಲ್ಲವೆ? ತಮ್ಮ ಮೇಲೆ ಬಹಳ ಸಂಭಾಲನೆ ಮಾಡಿಕೊಳ್ಳಬೇಕಾಗುತ್ತದೆ ಏಕೆಂದರೆ ಧರ್ಮರಾಜನೂ ನಿಂತಿದ್ದಾರಲ್ಲವೆ. ಈಗಿನ ಸಮಯವೇ ಎಲ್ಲಾ ಲೆಕ್ಕಾಚಾರಗಳನ್ನು ಸಮಾಪ್ತಿ ಮಾಡಿಕೊಳ್ಳುವುದಕ್ಕೋಸ್ಕರವೇ ಇದೆ ನಾವು ಜನ್ಮ-ಜನ್ಮಾಂತರದ ಪಾಪಿಗಳಾಗಿದ್ದೇವೆಂದು ಮಕ್ಕಳಿಗೆ ತಿಳಿದಿದೆ. ಎಲ್ಲಿಯೇ ಯಾವುದೇ ಮಂದಿರ ಅಥವಾ ಗುರುಗಳ ಬಳಿ ಇಲ್ಲವೆ ಇಷ್ಟದೇವತೆಯ ಬಳಿ ಹೋಗುತ್ತೀರೆಂದರೆ ಜನ್ಮ-ಜನ್ಮಗಳ ಪಾಪಿಯಾಗಿದ್ದೇವೆ. ನಮ್ಮ ರಕ್ಷಣೆ ಮಾಡಿ ದಯೆ ತೋರಿಸಿ ಎಂದು ಹೇಳುತ್ತಾರೆ. ಸತ್ಯಯುಗದಲ್ಲಿ ಎಂದೂ ಈ ಶಬ್ಧವು ಬರುವುದಿಲ್ಲ, ಇಲ್ಲಿ ಕೆಲವರು ಸತ್ಯವನ್ನು ಹೇಳುತ್ತಾರೆ, ಇನ್ನೂ ಕೆಲವರು ಸುಳ್ಳು ಹೇಳುತ್ತಾರೆ. ಇಲ್ಲಿಯೂ ಹಾಗೆಯೇ, ತಂದೆಯು ಯಾವಾಗಲೂ ತಿಳಿಸುತ್ತಾರೆ - ತಮ್ಮ ಜೀವನದ ಕಥೆಯನ್ನು ತಂದೆಗೆ ಬರೆದು ಕಳುಹಿಸಿ. ಅದರಲ್ಲಿ ಕೆಲವರು ಪೂರ್ಣ ಸತ್ಯವನ್ನು ಬರೆಯುತ್ತಾರೆ, ಕೆಲವರು ಮುಚ್ಚಿಡುತ್ತಾರೆ. ನಾಚಿಕೆಯಾಗುತ್ತದೆ. ಇದಂತೂ ನಿಮಗೆ ತಿಳಿದಿದೆ - ಕೆಟ್ಟಕರ್ಮವನ್ನು ಮಾಡುವುದರಿಂದ ಕೆಟ್ಟಫಲವೇ ಸಿಗುವುದು, ಅದಂತೂ ಅಲ್ಪಕಾಲದ ಮಾತಾಗಿದೆ. ಇದು ಬಹಳ ಕಾಲದ ಮಾತಾಗಿದೆ. ಒಂದುವೇಳೆ ಕೆಟ್ಟಕರ್ಮವನ್ನು ಮಾಡುತ್ತೀರೆಂದರೆ ಶಿಕ್ಷೆಗಳನ್ನೂ ಅನುಭವಿಸುತ್ತೀರಿ ಮತ್ತೆ ಸ್ವರ್ಗದಲ್ಲಿಯೂ ಬಹಳ ತಡವಾಗಿ ಬರುತ್ತೀರಿ. ಯಾರ್ಯಾರು ಪುರುಷೋತ್ತಮರಾಗುತ್ತಾರೆಂಬು
ದೆಲ್ಲವೂ ಈಗ ತಿಳಿಯುತ್ತದೆ. ಸತ್ಯಯುಗವು ಪುರುಷೋತ್ತಮ, ದೈವೀರಾಜ್ಯವಾಗಿದೆ. ಉತ್ತಮರಿಗಿಂತಲೂ ಉತ್ತಮ ಪುರುಷರಾಗುತ್ತೀರಲ್ಲವೆ ಮತ್ತೆಲ್ಲಿಯೂ ಹೀಗೆ ಯಾರದೇ ಮಹಿಮೆ ಮಾಡುವುದಿಲ್ಲ. ಮನುಷ್ಯರಂತೂ ದೇವತೆಗಳ ಗುಣಗಳನ್ನು ಸಹ ಅರಿತುಕೊಂಡಿಲ್ಲ. ಭಲೆ ಮಹಿಮೆಯನ್ನು ಹಾಡುತ್ತಾರೆ ಆದರೆ ಗಿಳಿಯ ತರಹ. ಆದ್ದರಿಂದ ತಂದೆಯೂ ಹೇಳುತ್ತಾರೆ - ಮೊದಲು ಭಕ್ತರಿಗೆ ತಿಳಿಸಿ, ಭಕ್ತರು ತಮ್ಮನ್ನು ನೀಚರೆಂದು ಹೇಳಿಕೊಳ್ಳುವಾಗ ಅವರನ್ನು ಪ್ರಶ್ನಿಸಿ - ನೀವು ಶಾಂತಿಧಾಮದಲ್ಲಿದ್ದಾಗ ಅಲ್ಲಿ ಪಾಪ ಮಾಡುತ್ತಿದ್ದಿರಾ? ಅಲ್ಲಂತೂ ಆತ್ಮಗಳೆಲ್ಲರೂ ಪವಿತ್ರವಾಗಿರುತ್ತಾರೆ. ಇಲ್ಲಿ ಅಪವಿತ್ರರಾಗಿದ್ದಾರೆ ಏಕೆಂದರೆ ತಮೋಪ್ರಧಾನ ಪ್ರಪಂಚವಾಗಿದೆ, ಹೊಸ ಪ್ರಪಂಚದಲ್ಲಂತೂ ಪವಿತ್ರರಿರುತ್ತಾರೆ. ಅಪವಿತ್ರರನ್ನಾಗಿ ಮಾಡುವವರು ರಾವಣನಾಗಿದ್ದಾನೆ.

ಈ ಸಮಯದಲ್ಲಿ ವಿಶೇಷವಾಗಿ ಭಾರತ ಹಾಗು ಇಡೀ ಪ್ರಪಂಚದಲ್ಲಿ ರಾವಣರಾಜ್ಯವಿದೆ. ಯಥಾರಾಜ-ರಾಣಿ ತಥಾ ಪ್ರಜಾ. ಇಲ್ಲಿ ಹೈಯಸ್ಟ್, ಲೋಯಸ್ ಎಲ್ಲರೂ ಪತಿತರಾಗಿದ್ದಾರೆ, ತಂದೆಯು ತಿಳಿಸುತ್ತಾರೆ - ನಾನು ನಿಮ್ಮನ್ನು ಪಾವನರನ್ನಾಗಿ ಮಾಡಿ ಹೋಗುತ್ತೇನೆ ಮತ್ತೆ ನಿಮ್ಮನ್ನು ಪತಿತರನ್ನಾಗಿ ಯಾರು ಮಾಡುತ್ತಾರೆ? ರಾವಣ. ಈಗ ಮತ್ತೆ ನನ್ನ ಮತದಿಂದ ಪಾವನರಾಗುತ್ತಿದ್ದೀರಿ. ಮತ್ತೆ ಅರ್ಧಕಲ್ಪದ ನಂತರ ರಾವಣ ಮತದಂತೆ ಪತಿತರಾಗುತ್ತೀರಿ ಅರ್ಥಾತ್ ದೇಹಾಭಿಮಾನದಲ್ಲಿ ಬಂದು ವಿಕಾರಗಳಿಗೆ ವಶರಾಗಿಬಿಡುತ್ತೀರಿ ಅದಕ್ಕೆ ಆಸುರೀಮತವೆಂದು ಹೇಳಲಾಗುತ್ತದೆ. ಭಾರತವು ಪಾವನವಾಗಿತ್ತು, ಅದು ಈಗ ಪತಿತವಾಗಿದೆ, ಮತ್ತೆ ಪಾವನವಾಗಬೇಕಾಗಿದೆ. ಪಾವನವನ್ನಾಗಿ ಮಾಡಲು ಪತಿತ-ಪಾವನ ತಂದೆಯೇ ಬರಬೇಕಾಗುತ್ತದೆ. ಈ ಸಮಯದಲ್ಲಿ ನೋಡಿ, ಎಷ್ಟೊಂದು ಮನುಷ್ಯರಿದ್ದಾರೆ! ಮತ್ತೆ ನಾಳೆ ಎಷ್ಟು ಮಂದಿ ಇರಬಹುದು! ಯುದ್ಧವು ಆರಂಭವಾಗುವುದು. ಮೃತ್ಯುವಂತೂ ಸನ್ಮುಖದಲ್ಲಿ ನಿಂತಿದೆ. ನಾಳೆ ಇವರೆಲ್ಲರೂ ಎಲ್ಲಿಗೆ ಹೋಗುತ್ತಾರೆ? ಎಲ್ಲರ ಶರೀರ ಮತ್ತು ಈ ಹಳೆಯ ಪ್ರಪಂಚವು ವಿನಾಶವಾಗುತ್ತದೆ. ನಂಬರ್ವಾರ್ ಪುರುಷಾರ್ಥದನುಸಾರ ಈ ರಹಸ್ಯವು ಈಗ ನಿಮ್ಮ ಬುದ್ಧಿಯಲ್ಲಿದೆ. ನಾವು ಯಾರ ಸನ್ಮುಖದಲ್ಲಿ ಕುಳಿತಿದ್ದೇವೆಂಬುದನ್ನೂ ಸಹ ಹಲವರು ತಿಳಿದುಕೊಂಡಿಲ್ಲ. ಅವರು ಬಹಳ ಕಡಿಮೆ ಪದವಿಯನ್ನು ಪಡೆಯುವವರಾಗಿದ್ದಾರೆ. ಅದೃಷ್ಟದಲ್ಲಿಲ್ಲವೆಂದರೆ ನಾಟಕದನುಸಾರ ಅವರೇನು ತಾನೆ ಮಾಡಬಲ್ಲರು? ಈಗಂತೂ ಮಕ್ಕಳು ಸರ್ವೀಸ್ ಮಾಡಬೇಕಾಗಿದೆ, ತಂದೆಯನ್ನು ನೆನಪು ಮಾಡಬೇಕಾಗಿದೆ. ನೀವು ಸಂಗಮಯುಗೀ ಬ್ರಾಹ್ಮಣರಾಗಿದ್ದೀರಿ, ನೀವು ತಂದೆಯ ಸಮಾನ ಜ್ಞಾನಸಾಗರ, ಸುಖದಸಾಗರರಾಗಬೇಕಾಗಿದೆ. ಮಾಡುವಂತಹ ತಂದೆಯೂ ಸಹ ಸಿಕ್ಕಿದ್ದಾರಲ್ಲವೆ. ಸರ್ವಗುಣ ಸಂಪನ್ನ......ಎಂದು ದೇವತೆಗಳ ಮಹಿಮೆ ಮಾಡಲಾಗುತ್ತದೆ. ಈಗಂತೂ ಈ ಗುಣಗಳಿರುವವರು ಯಾರೂ ಇಲ್ಲ ಆದ್ದರಿಂದ ಸದಾ ತಮ್ಮೊಂದಿಗೆ ಕೇಳಿಕೊಳ್ಳುತ್ತಾ ಇರಿ - ನಾವು ಶ್ರೇಷ್ಠಪದವಿಯನ್ನು ಪಡೆಯಲು ಎಲ್ಲಿಯವರೆಗೆ ಯೋಗ್ಯರಾಗಿದ್ದೇವೆ? ಸಂಗಮಯುಗವನ್ನು ಬಹಳ ಚೆನ್ನಾಗಿ ನೆನಪು ಮಾಡಿ - ನಾವು ಸಂಗಮಯುಗೀ ಬ್ರಾಹ್ಮಣರು ಪುರುಷೋತ್ತಮರಾಗುವವರಿದ್ದೇವೆ. ಶ್ರೀಕೃಷ್ಣನು ಹೊಸಪ್ರಪಂಚದ ಪುರುಷೋತ್ತಮನಲ್ಲವೆ. ನಾವು ತಂದೆಯ ಸನ್ಮುಖದಲ್ಲಿ ಕುಳಿತಿದ್ದೇವೆ ಎಂದು ಮಕ್ಕಳಿಗೆ ಗೊತ್ತಿದೆ ಅಂದಮೇಲೆ ಇನ್ನೂ ಹೆಚ್ಚಿನದಾಗಿ ಓದಬೇಕಲ್ಲವೆ, ಓದಿಸಲೂ ಬೇಕಾಗಿದೆ. ಓದಿಸಲಿಲ್ಲವೆಂದರೆ ತಾವು ಓದುವುದಿಲ್ಲವೆಂದು ಸಿದ್ಧವಾಗುತ್ತದೆ, ಬುದ್ಧಿಯಲ್ಲಿ ಕುಳಿತುಕೊಳ್ಳುವುದಿಲ್ಲ. 5% ಸಹ ಕುಳಿತುಕೊಳ್ಳುವುದಿಲ್ಲ. ನಾವು ಸಂಗಮಯುಗೀ ಬ್ರಾಹ್ಮಣರೆಂಬುದೂ ಸಹ ನೆನಪಿರುವುದಿಲ್ಲ. ಬುದ್ಧಿಯಲ್ಲಿ ತಂದೆಯ ನೆನಪಿರಲಿ ಮತ್ತು ಚಕ್ರವು ಸುತ್ತುತ್ತಿರಲಿ. ಈ ತಿಳುವಳಿಕೆಯು ಬಹಳ ಸಹಜವಾಗಿದೆ! ತಮ್ಮನ್ನು ಆತ್ಮವೆಂದು ತಿಳಿದು ತಂದೆಯನ್ನು ನೆನಪು ಮಾಡಬೇಕಾಗಿದೆ. ಅವರು ಎಲ್ಲರಿಗಿಂತ ದೊಡ್ಡ ತಂದೆಯಾಗಿದ್ದಾರೆ, ತಿಳಿಸುತ್ತಾರೆ - ನನ್ನನ್ನು ನೆನಪು ಮಾಡಿದರೆ ನಿಮ್ಮ ವಿಕರ್ಮಗಳು ವಿನಾಶವಾಗುತ್ತವೆ. ನಾವೇ ಪೂಜ್ಯರು, ನಾವೇ ಪೂಜಾರಿಗಳು - ಈ ಮಂತ್ರವು ಬಹಳ ಚೆನ್ನಾಗಿದೆ. ಇದನ್ನು ಅವರು ಆತ್ಮವೇ ಪರಮಾತ್ಮನೆಂದು ಹೇಳಿಬಿಟ್ಟಿದ್ದಾರೆ. ಏನೆಲ್ಲವನ್ನೂ ಹೇಳುವರೋ ಎಲ್ಲವೂ ತಪ್ಪಾಗಿದೆ. ನಾವು ಪವಿತ್ರರಾಗಿದ್ದೇವೆ, 84 ಜನ್ಮದ ಚಕ್ರವನ್ನು ಸುತ್ತಿ ಈಗ ಈ ರೀತಿಯಾಗಿದ್ದೇವೆ, ಈಗ ನಾವು ಹಿಂತಿರುಗಿ ಹೋಗುತ್ತೇವೆ. ಇಂದು ಇಲ್ಲಿದ್ದೇವೆ ನಾಳೆ ಮನೆಗೆ ಹೋಗುತ್ತೇವೆ, ನಾವು ಬೇಹದ್ದಿನ ಮನೆಗೆ ಹೋಗುತ್ತೇವೆ. ಇದು ಬೇಹದ್ದಿನ ನಾಟಕವಾಗಿದೆ, ಇದು ಈಗ ಪುನರಾವರ್ತನೆಯಾಗಬೇಕಿದೆ. ತಂದೆಯು ತಿಳಿಸುತ್ತಾರೆ - ದೇಹಸಹಿತವಾಗಿ ದೇಹದ ಎಲ್ಲಾ ಧರ್ಮಗಳನ್ನು ಮರೆತು ತಮ್ಮನ್ನು ಆತ್ಮವೆಂದು ತಿಳಿಯಿರಿ. ಈಗ ಈ ಶರೀರವನ್ನು ಬಿಟ್ಟು ಮನೆಗೆ ಹೋಗುತ್ತೇವೆ, ಇದನ್ನು ಪಕ್ಕಾ ನೆನಪು ಮಾಡಿಕೊಳ್ಳಿ ನಾವು ಆತ್ಮವಾಗಿದ್ದೇವೆ, ಇದು ನೆನಪಿದ್ದರೂ ಮತ್ತು ತಮ್ಮ ಮನೆಯ ನೆನಪಿದ್ದರೂ ಸಹ ಬುದ್ಧಿಯಲ್ಲಿ ಇಡೀ ಪ್ರಪಂಚದ ಸನ್ಯಾಸವಾಗಿಬಿಟ್ಟಿದೆ ಎಂದರ್ಥ. ಶರೀರದ ಸನ್ಯಾಸವೆಂದರೆ ಎಲ್ಲದರ ಸನ್ಯಾಸ. ಆ ಹಠಯೋಗಿಗಳು ಇಡೀ ಸೃಷ್ಟಿಯ ಸನ್ಯಾಸವನ್ನೇನು ಮಾಡುವುದಿಲ್ಲ, ಅವರದು ಅರ್ಧಂಬರ್ಧ ಸನ್ಯಾಸವಾಗಿದೆ. ನೀವಂತೂ ಇಡೀ ಪ್ರಪಂಚದ ತ್ಯಾಗ ಮಾಡಬೇಕಾಗಿದೆ, ತಮ್ಮನ್ನು ದೇಹವೆಂದು ತಿಳಿಯುತ್ತೀರೆಂದರೆ ಮತ್ತೆ ಕೆಲಸವೂ ಅಂತಹದ್ದನ್ನೇ ಮಾಡುತ್ತೀರಿ. ದೇಹಾಭಿಮಾನಿಗಳಾಗುವುದರಿಂದ ಕಳ್ಳತನ, ಸುಲಿಗೆ, ಸುಳ್ಳು ಹೇಳುವುದು, ಪಾಪ ಮಾಡುವುದು..... ಇವೆಲ್ಲವೂ ಚಟಗಳಾಗಿಬಿಡುತ್ತವೆ. ಜೋರಾಗಿ ಮಾತನಾಡುವುದೂ ಹವ್ಯಾಸವಾಗಿಬಿಡುತ್ತದೆ. ಅಂತಹವರು ನನ್ನ ಧ್ವನಿಯೇ ಹಾಗೆ ಇದೆ ಎಂದು ಹೇಳುತ್ತಾರೆ. ದಿನದಲ್ಲಿ 25-30 ಪಾಪಗಳನ್ನಾದರೂ ಮಾಡಿಬಿಡುತ್ತಾರೆ. ಸುಳ್ಳು ಹೇಳುವುದು ಸಹ ಪಾಪವಾಯಿತಲ್ಲವೆ. ಅದೇ ಹವ್ಯಾಸವಾಗಿಬಿಡುತ್ತದೆ, ಆದ್ದರಿಂದ ತಂದೆಯು ತಿಳಿಸುತ್ತಾರೆ - ಶಬ್ಧ ಕಡಿಮೆ ಮಾಡುವುದನ್ನು ಕಲಿಯಿರಿ. ಇದನ್ನು ಕಡಿಮೆ ಮಾಡುವುದರಲ್ಲಿ ಏನೂ ತಡವಾಗುವುದಿಲ್ಲ. ನಾಯಿಯನ್ನು ಸಹ ಸಾಕುತ್ತಾರೆಂದರೆ ಅದು ಸಹ ಒಳ್ಳೆಯದಾಗಿಬಿಡುತ್ತದೆ. ಕೋತಿಯಲ್ಲಿ ಎಷ್ಟು ಚಂಚಲತೆಯಿರುತ್ತದೆ! ಆದರೂ ಸಹ ಅದು ಯಾರ ಜೊತೆಯಾದರೂ ಹೊಂದಿಕೊಳ್ಳುತ್ತದೆಯೆಂದರೆ ಕುಳಿತು ನರ್ತನ ಮಾಡುತ್ತದೆ. ಪ್ರಾಣಿಗಳು ಸಹ ಸುಧಾರಣೆಯಾಗುತ್ತದೆ. ಪ್ರಾಣಿಗಳನ್ನು ಸುಧಾರಣೆ ಮಾಡುವವರು ಮನುಷ್ಯರಾಗಿದ್ದಾರೆ, ಮನುಷ್ಯರನ್ನು ಸುಧಾರಣೆ ಮಾಡುವವರು ತಂದೆಯಾಗಿದ್ದಾರೆ. ತಂದೆಯು ತಿಳಿಸುತ್ತಾರೆ - ನೀವೂ ಸಹ ಪ್ರಾಣಿಗಳ ಸಮಾನರಾಗಿದ್ದೀರಿ ಆದ್ದರಿಂದಲೇ ನನ್ನನ್ನೂ ಸಹ ಮೀನು-ಮೊಸಳೆಯ ಅವತಾರ, ವರಾಹವತಾರ ಎಂದು ಹೇಳಿಬಿಡುತ್ತೀರಿ. ನಿಮ್ಮ ಚಟುವಟಿಕೆಯು ಹೇಗಿದೆಯೋ ಅದಕ್ಕಿಂತಲೂ ನನ್ನನ್ನು ಕೀಳು ಮಾಡಿಬಿಟ್ಟಿದ್ದೀರಿ. ಇದನ್ನೂ ಸಹ ನೀವೇ ತಿಳಿದುಕೊಂಡಿದ್ದೀರಿ, ಪ್ರಪಂಚದವರಿಗೆ ಗೊತ್ತಿಲ್ಲ. ಕೊನೆಯಲ್ಲಿ ನಿಮಗೆ ಇದು ಸಹ ಸಾಕ್ಷಾತ್ಕಾರವಾಗುವುದು. ಹೇಗೆ ಶಿಕ್ಷೆಯನ್ನನುಭವಿಸುತ್ತಾರೆ ಎಂಬುದು ಸಹ ನಿಮಗೆ ತಿಳಿಯುವುದು. ಅರ್ಧಕಲ್ಪ ಭಕ್ತಿಮಾಡಿದ್ದೀರಿ, ಈಗ ತಂದೆಯು ಸಿಕ್ಕಿದ್ದಾರೆ, ತಿಳಿಸುತ್ತಾರೆ - ಈಗ ನನ್ನ ಮತದಂತೆ ನಡೆಯಲಿಲ್ಲವೆಂದರೆ ಶಿಕ್ಷೆಯು ಇನ್ನೂ ಹೆಚ್ಚಾಗುವುದು ಆದ್ದರಿಂದ ಈಗ ಪಾಪಕರ್ಮಗಳನ್ನು ಮಾಡುವುದನ್ನು ಬಿಡಿ. ತಮ್ಮ ಚಾರ್ಟನ್ನಿಟ್ಟುಕೊಳ್ಳಿ. ಜೊತೆಯಲ್ಲಿ ಧಾರಣೆಯೂ ಬೇಕು. ಅನ್ಯರಿಗೆ ತಿಳಿಸುವ ಅಭ್ಯಾಸವೂ ಬೇಕು. ಪ್ರದರ್ಶನಿಯ ಚಿತ್ರಗಳನ್ನು ಕುರಿತು ಮನನ ಚಿಂತನೆ ಮಾಡಿ. ಯಾರಿಗೆ ಹೇಗೆ ತಿಳಿಸಿಕೊಡುವುದು ಎಂದು ಯುಕ್ತಿಯನ್ನು ರಚಿಸಿ. ಮೊಟ್ಟಮೊದಲಿಗೆ ಇದೇ ಮಾತನ್ನು ತಿಳಿಸಿ - ಗೀತೆಯ ಭಗವಂತ ಯಾರು? ಜ್ಞಾನಸಾಗರನಂತೂ ಪರಮಪಿತ ಪರಮಾತ್ಮನಾಗಿದ್ದಾರಲ್ಲವೆ. ಈ ತಂದೆಯು ಎಲ್ಲಾ ಆತ್ಮಗಳ ತಂದೆಯಾಗಿದ್ದಾರೆ ಅಂದಮೇಲೆ ತಂದೆಯ ಪರಿಚಯವಿರಬೇಕಲ್ಲವೆ. ಋಷಿ-ಮುನಿ ಮೊದಲಾದವರಿಗೂ ಸಹ ತಂದೆಯ ಪರಿಚಯವಾಗಲಿ, ರಚನೆಯ ಆದಿ-ಮಧ್ಯ-ಅಂತ್ಯದ ಪರಿಚಯವಾಗಲಿ ಅವರಲ್ಲಿ ಇಲ್ಲ. ಆದ್ದರಿಂದ ಮೊಟ್ಟಮೊದಲಿಗೆ ಇದನ್ನು ತಿಳಿಸಿ, ಬರೆಸಿಕೊಳ್ಳಿ - ಭಗವಂತನು ಒಬ್ಬರೇ ಆಗಿದ್ದಾರೆ, ಮತ್ತ್ಯಾರೂ ಇರಲು ಸಾಧ್ಯವಿಲ್ಲ. ಮನುಷ್ಯರು ತಮ್ಮನ್ನು ಭಗವಂತನೆಂದು ಕರೆಸಿಕೊಳ್ಳಲು ಸಾಧ್ಯವಿಲ್ಲ.

ನೀವು ಮಕ್ಕಳಿಗೆ ಈಗ ನಿಶ್ಚಯವಿದೆ - ಭಗವಂತನು ನಿರಾಕಾರನಾಗಿದ್ದಾರೆ, ಆ ತಂದೆಯು ನಮಗೆ ಓದಿಸುತ್ತಾರೆ. ನಾವು ವಿದ್ಯಾರ್ಥಿಗಳಾಗಿದ್ದೇವೆ. ಅವರು ತಂದೆಯೂ ಆಗಿದ್ದಾರೆ, ಶಿಕ್ಷಕನೂ ಆಗಿದ್ದಾರೆ, ಸದ್ಗುರುವೂ ಆಗಿದ್ದಾರೆ. ಒಬ್ಬರನ್ನು ನೆನಪು ಮಾಡಿದರೆ ಶಿಕ್ಷಕ ಮತ್ತು ಸದ್ಗುರು ಇಬ್ಬರ ನೆನಪೂ ಬಂದುಬಿಡುವುದು. ಬುದ್ಧಿಯು ಅಲೆದಾಡಬಾರದು, ಕೇವಲ ಶಿವನೆಂದು ಹೇಳಬಾರದು, ಶಿವನು ನಮ್ಮ ತಂದೆಯೂ ಆಗಿದ್ದಾರೆ, ಪಾರಲೌಕಿಕ ಶಿಕ್ಷಕನೂ ಆಗಿದ್ದಾರೆ, ನಮ್ಮನ್ನು ಜೊತೆಯಲ್ಲಿ ಕರೆದುಕೊಂಡು ಹೋಗುತ್ತಾರೆ. ಅವರೊಬ್ಬರಿಗೆ ಎಷ್ಟೊಂದು ಮಹಿಮೆಯಿದೆ! ಅವರನ್ನೇ ನೆನಪು ಮಾಡಬೇಕಾಗಿದೆ. ಇವರು ಹೋಗಿ ಬ್ರಹ್ಮಾಕುಮಾರ-ಕುಮಾರಿಯರನ್ನು ಗುರುವನ್ನಾಗಿ ಮಾಡಿಕೊಂಡಿದ್ದಾರೆಂದು ಕೆಲವರು ಹೇಳುತ್ತಾರೆ. ನೀವು ಗುರುವಂತೂ ಆಗುತ್ತೀರಲ್ಲವೆ ಆದರೆ ನಿಮಗೆ ತಂದೆಯೆಂದು ಹೇಳುವುದಿಲ್ಲ, ಶಿಕ್ಷಕ-ಗುರುಗಳೆಂದು ಹೇಳಬಹುದು, ತಂದೆಯೆಂದು ಹೇಳುವಂತಿಲ್ಲ. ತಂದೆ, ಶಿಕ್ಷಕ, ಸದ್ಗುರು - ಈ ಮೂರನ್ನೂ ಒಬ್ಬ ತಂದೆಗೇ ಹೇಳಲಾಗುತ್ತದೆ. ಅವರು ಎಲ್ಲರಿಗಿಂತ ದೊಡ್ಡ ತಂದೆಯಾಗಿದ್ದಾರೆ. ಇವರಿಗಿಂತಲೂ (ಬ್ರಹ್ಮಾ) ಮೇಲಿನವರು ಆ (ಶಿವ) ತಂದೆಯಾಗಿದ್ದಾರೆ, ಇದನ್ನು ಬಹಳ ಚೆನ್ನಾಗಿ ತಿಳಿಸಿಕೊಡಬೇಕಾಗಿದೆ. ಪ್ರದರ್ಶನಿಯಲ್ಲಿ ತಿಳಿಸಿಕೊಡುವುದಕ್ಕೂ ಬುದ್ಧಿವಂತಿಕೆ ಬೇಕು ಆದರೆ ತಮ್ಮಲ್ಲಿ ಇಷ್ಟು ಧೈರ್ಯವಿದೆಯೆಂಬುದನ್ನು ತಿಳಿಯುವುದಿಲ್ಲ. ದೊಡ್ಡ-ದೊಡ್ಡ ಪ್ರದರ್ಶನಿಗಳಾಗುತ್ತದೆಯೆಂದರೆ ಒಳ್ಳೊಳ್ಳೆಯ ಸೇವಾಧಾರಿ ಮಕ್ಕಳುಹೋಗಿ ಸರ್ವೀಸ್ ಮಾಡಬೇಕು. ತಂದೆಯೇನು ನಿರಾಕರಿಸುವುದಿಲ್ಲ. ಮುಂದೆಹೋದಂತೆ ಸಾಧು-ಸಂತ ಮೊದಲಾದವರಿಗೂ ಸಹ ನೀವು ಜ್ಞಾನದ ಬಾಣವನ್ನು ಹೊಡೆಯುತ್ತೀರಿ, ಅವರು ಹೋಗುವುದಾದರೂ ಎಲ್ಲಿಗೆ! ಇದೊಂದೇ ಅಂಗಡಿಯಾಗಿದೆ. ಈ ಅಂಗಡಿಯಿಂದಲೇ ಎಲ್ಲರ ಸದ್ಗತಿಯಾಗಬೇಕಾಗಿದೆ. ಇದು ಇಂತಹ ಅಂಗಡಿಯಾಗಿದೆ ನೀವು ಎಲ್ಲರಿಗೆ ಪವಿತ್ರರಾಗುವ ಮಾರ್ಗವನ್ನು ತಿಳಿಸುತ್ತೀರಿ,ಅವರು ಆಗಲಿ, ಆಗದಿರಲಿ. ನೀವು ಮಕ್ಕಳ ಗಮನವು ವಿಶೇಷವಾಗಿ ಸರ್ವೀಸಿನ ಮೇಲಿರಬೇಕು. ಭಲೆ ಮಕ್ಕಳು ಬುದ್ಧಿವಂತರಿದ್ದಾರೆ ಆದರೆ ಪೂರ್ಣ ಸರ್ವೀಸ್ ಮಾಡಲಿಲ್ಲವೆಂದರೆ ಇವರ ಮೇಲೆ ರಾಹುವಿನ ದೆಶೆಯು ಕುಳಿತಿದೆ ಎಂದು ತಿಳಿಯುತ್ತಾರೆ. ದೆಶೆಗಳಂತೂ ಎಲ್ಲರ ಮೇಲಿರುತ್ತದೆಯಲ್ಲವೆ. ಮಾಯೆಯ ನೆರಳು ಬೀಳುತ್ತದೆಯೆಂದರೆ ಮತ್ತೆ ಎರಡು ದಿನಗಳ ನಂತರ ಸರಿ ಹೋಗುತ್ತಾರೆ. ಮಕ್ಕಳು ಸರ್ವೀಸಿನ ಅನುಭವವನ್ನು ಪಡೆದು ಬರಬೇಕಾಗಿದೆ. ಪ್ರದರ್ಶನಿಯಂತೂ ಮಾಡುತ್ತಿರುತ್ತಾರೆ, ಆದರೆ ಅವಶ್ಯವಾಗಿ ಗೀತೆಯನ್ನು ಕೃಷ್ಣನು ಹೇಳಲಿಲ್ಲ, ಶಿವಭಗವಂತನೇ ತಿಳಿಸಿದ್ದಾರೆ ಎಂಬ ಮಾತನ್ನು ಮನುಷ್ಯರು ಅರಿತುಕೊಂಡು ತಕ್ಷಣ ಏಕೆ ಬರೆಯುತ್ತಿಲ್ಲ? ಕೆಲವರಂತೂ ಕೇವಲ ಇದು ಬಹಳ ಚೆನ್ನಾಗಿದೆ ಎಂದು ಹೇಳಿಬಿಡುತ್ತಾರೆ, ಮನುಷ್ಯರಿಗಾಗಿ ಬಹಳ ಕಲ್ಯಾಣಕಾರಿಯಾಗಿದೆ, ಎಲ್ಲರಿಗೆ ತೋರಿಸಬೇಕಾಗಿದೆ ಎಂದು ಹೇಳುತ್ತಾರೆ ಆದರೆ ನಾನೂ ಸಹ ಈ ಆಸ್ತಿಯನ್ನು ಪಡೆದುಕೊಳ್ಳುವೆನು..... ಎಂಬ ಮಾತನ್ನು ಯಾರೂ ಹೇಳುವುದಿಲ್ಲ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿದ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ದೇಹಾಭಿಮಾನದಲ್ಲಿ ಬಂದು ಜೋರಾಗಿ ಮಾತನಾಡಬಾರದು. ಈ ಹವ್ಯಾಸವನ್ನು ಬಿಡಬೇಕಾಗಿದೆ. ಕಳ್ಳತನ ಮಾಡುವುದು, ಸುಳ್ಳು ಹೇಳುವುದು... ಇದೆಲ್ಲವೂ ಪಾಪವಾಗಿದೆ, ಇದರಿಂದ ಪಾರಾಗಲು ದೇಹೀ-ಅಭಿಮಾನಿಗಳಾಗಿರಬೇಕಾಗಿದೆ.

2. ಮೃತ್ಯುವು ಸನ್ಮುಖದಲ್ಲಿದೆ ಆದ್ದರಿಂದ ತಂದೆಯ ಶ್ರೀಮತದಂತೆ ನಡೆದು ಪಾವನರಾಗಬೇಕಾಗಿದೆ. ತಂದೆಯ ಮಕ್ಕಳಾದ ಮೇಲೂ ಯಾವುದೇ ಕೆಟ್ಟಕೆಲಸವನ್ನು ಮಾಡಬಾರದು. ಶಿಕ್ಷೆಗಳಿಂದ ಪಾರಾಗುವ ಪುರುಷಾರ್ಥ ಮಾಡಬೇಕು.

ವರದಾನ:
ಲೋಕಪ್ರಿಯ ಸಭೆಯ ಟಿಕೇಟ್ನ್ನು ಬುಕ್ ಮಾಡುವಂತಹ ರಾಜ್ಯಸಿಂಹಾಸನ ಅಧಿಕಾರಿ ಭವ

ಯಾವುದೇ ಸಂಕಲ್ಪ ಅಥವಾ ವಿಚಾರ ಮಾಡುತ್ತೀರೆಂದರೆ ಮೊದಲು ಪರಿಶೀಲನೆ ಮಾಡಿರಿ- ಈ ವಿಚಾರ ಅಥವಾ ಸಂಕಲ್ಪವು ಪ್ರಭುಪ್ರಿಯವಾಗಿದೆಯೇ? ತಂದೆಗೆ ಯಾರು ಪ್ರಿಯರಾಗುತ್ತಾರೆ,ಅವರು ಸ್ವತಃ ವಾಗಿ ಲೋಕಪ್ರಿಯರಾಗುತ್ತಾರೆ. ಸಂಕಲ್ಪದಲ್ಲಿ ಸ್ವಾರ್ಥವಿದೆಯೆಂದರೆ ಮನಃಪ್ರಿಯವೆಂದು ಹೇಳಲಾಗುತ್ತದೆ ಮತ್ತು ವಿಶ್ವಕಲ್ಯಾಣಾರ್ಥವಿದೆಯೆಂದರೆ ಲೋಕಪ್ರಿಯ ಅಥವಾ ಪ್ರಭುಪ್ರಿಯವೆಂದು ಹೇಳಲಾಗುತ್ತದೆ. ಲೋಕಪ್ರಿಯ ಸಭೆಯ ಸದಸ್ಯರಾಗುವುದು ಅರ್ಥಾತ್ ರಾಜ್ಯಸಿಂಹಾಸನವನ್ನು ಪ್ರಾಪ್ತಿ ಮಾಡಿಕೊಳ್ಳುವುದು, ಲಾ ಆರ್ಡರ್ನ ರಾಜ್ಯಾಧಿಕಾರಿ ಅಥವಾ ರಾಜ್ಯಸಿಂಹಾಸವನ್ನು ಪ್ರಾಪ್ತಿ ಮಾಡಿಕೊಳ್ಳುವುದು.

ಸ್ಲೋಗನ್:
ಪರಮಾತ್ಮನ ಜೊತೆಯ ಅನುಭವ ಮಾಡುತ್ತೀರೆಂದರೆ, ಎಲ್ಲವನ್ನೂ ಸಹಜವಾಗಿ ಅನುಭವ ಮಾಡುತ್ತಾ ಸುರಕ್ಷಿತವಾಗಿರುತ್ತೀರಿ.

ಅವ್ಯಕ್ತ ಸೂಚನೆ: ಕಂಬೈಂಡ್ ರೂಪದ ಸ್ಮೃತಿಯಿಂದ ಸದಾ ವಿಜಯಿಯಾಗಿರಿ

ಹೇಗೆ ಶಿವ ಶಕ್ತಿ ಕಂಬೈಂಡ್ ರೂಪವಾಗಿದ್ದಾರೆ ಹಾಗೆಯೇ ಪಾಂಡವಪತಿ ಮಾತು ಪಾಂಡವರು ಸದಾ ಕಂಬೈಂಡ್ ಆಗಿದ್ದಾರೆ. ಪಾಂಡವಪತಿ ಪಾಂಡವರು ಇಲ್ಲದೇ ಏನು ಮಾಡಲು ಸಾಧ್ಯವಿಲ್ಲ. ಯಾರು ಹೀಗೆ ಕಂಬೈಂಡ್ ರೂಪದಲ್ಲಿ ಸದಾ ಇರುತ್ತಾರೆ ಅವರ ಮುಂದೆ ಬಾಪ್ದಾದಾರವರು ಸಾಕಾರದಲ್ಲಿ ಹೇಗೆ ಎಲ್ಲಾ ಸಂಬಂಧಗಳಿಂದ ಮುಂದೆ ಇರುತ್ತಾರೆ. ಎಲ್ಲಿ ಕರೆದರೂ ಅಲ್ಲಿ ಸೆಕೆಂಡಿನಲ್ಲಿ ಹಾಜೀರ್ ಅದಕ್ಕೆ ಹೇಳಲಾಗುತ್ತದೆ ಹಾಜೀರವಾಗಿರುವಂತಹ ಮಾಲೀಕ (ಹಜೀರಾ ಹಜೂರ್)