27.01.25         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ - ಯಾವಾಗ ನಿಮ್ಮದು ಕರ್ಮಾತೀತ ಸ್ಥಿತಿಯಾಗುವುದೋ ಆಗ ವಿಷ್ಣುಪುರಿಯಲ್ಲಿ ಹೋಗುತ್ತೀರಿ, ಗೌರವಪೂರ್ಣವಾಗಿ ಉತ್ತೀರ್ಣರಾಗುವ ಮಕ್ಕಳೇ ಕರ್ಮಾತೀತರಾಗುತ್ತಾರೆ”

ಪ್ರಶ್ನೆ:
ನೀವು ಮಕ್ಕಳಿಗಾಗಿ ಇಬ್ಬರೂ ತಂದೆಯರು ಯಾವ ಪರಿಶ್ರಮಪಡುತ್ತಾರೆ?

ಉತ್ತರ:
ಮಕ್ಕಳು ಸ್ವರ್ಗಕ್ಕೆ ಯೋಗ್ಯರಾಗಲು ಸರ್ವಗುಣ ಸಂಪನ್ನ, 16 ಕಲಾ ಸಂಪೂರ್ಣರನ್ನಾಗಿ ಮಾಡಲು ಬಾಪ್ದಾದಾ ಇಬ್ಬರೂ ಪರಿಶ್ರಮಪಡುತ್ತಾರೆ. ಇದು ಹೇಗೆ ನಿಮಗೆ ಡಬಲ್ ಇಂಜಿನ್ ಸಿಕ್ಕಿದೆ, ಇಂತಹ ಅದ್ಭುತವಾದ ವಿದ್ಯೆಯನ್ನು ಓದಿಸುತ್ತಾರೆ. ಯಾವುದರಿಂದ ನೀವು 21 ಜನ್ಮಗಳ ರಾಜ್ಯಭಾಗ್ಯವನ್ನು ಪಡೆಯುತ್ತೀರಿ.

ಗೀತೆ:
ಬಾಲ್ಯದ ದಿನಗಳನ್ನು ಮರೆಯಬಾರದು....................

ಓಂ ಶಾಂತಿ.
ಮಧುರಾತಿ ಮಧುರ ಅಗಲಿಹೋಗಿ ಮರಳಿಸಿಕ್ಕಿದ ಮಕ್ಕಳು ಗೀತೆಯನ್ನು ಕೇಳಿದಿರಿ. ಡ್ರಾಮಾದ ಯೋಜನೆಯನುಸಾರ ಇಂತಿಂತಹ ಗೀತೆಗಳನ್ನು ಆಯ್ಕೆಮಾಡಿಕೊಳ್ಳಲಾಗಿದೆ. ಇವರು ನಾಟಕದ ಹಾಡುಗಳ ಮೇಲೆ ವಾಣಿಯನ್ನು ಹೇಳುತ್ತಾರೆ ಎಂದು ಮನುಷ್ಯರು ಆಶ್ಚರ್ಯಪಡುತ್ತಾರೆ. ಇದೆಂತಹ ಜ್ಞಾನ! ವೇದಶಾಸ್ತ್ರ, ಉಪನಿಷತ್ತುಗಳೆಲ್ಲವನ್ನೂ ಬಿಟ್ಟರು, ಈಗ ಗೀತೆಯ ಮೇಲೆ ವಾಣಿಯು ನಡೆಯುತ್ತದೆ ಎಂದು ಆಶ್ಚರ್ಯಪಡುತ್ತಾರೆ. ಇದೂ ಸಹ ನೀವು ಮಕ್ಕಳ ಬುದ್ಧಿಯಲ್ಲಿದೆ - ನಾವು ಬೇಹದ್ದಿನ ತಂದೆಯ ಮಕ್ಕಳಾಗಿದ್ದೇವೆ, ಇವರಿಂದ ಅತೀಂದ್ರಿಯ ಸುಖವು ಸಿಗುತ್ತದೆ, ಇಂತಹ ತಂದೆಯನ್ನು ಮರೆಯಬಾರದು. ತಂದೆಯ ನೆನಪಿನಿಂದಲೇ ಜನ್ಮ-ಜನ್ಮಾಂತರದ ಪಾಪಗಳು ಭಸ್ಮವಾಗುತ್ತವೆ. ತಂದೆಯ ನೆನಪನ್ನು ಮರೆತು ಪಾಪವು ಉಳಿಯುವಂತಾಗಬಾರದು. ಇದರಿಂದ ಪದವಿಯೂ ಕಡಿಮೆಯಾಗುವುದು, ಇಂತಹ ತಂದೆಯನ್ನು ಬಹಳ ಚೆನ್ನಾಗಿ ನೆನಪು ಮಾಡುವ ಪುರುಷಾರ್ಥ ಮಾಡಬೇಕು ಹೇಗೆ ನಿಶ್ಚಿತಾರ್ಥವಾಗುತ್ತದೆಯೆಂದರೆ ಒಬ್ಬರು ಇನ್ನೊಬ್ಬರನ್ನು ನೆನಪು ಮಾಡುತ್ತಾರೆ. ನಿಮ್ಮದೂ ಸಹ ಈಗ ತಂದೆಯ ಜೊತೆ ನಿಶ್ಚಿತಾರ್ಥವಾಗಿದೆ ಮತ್ತು ಯಾವಾಗ ನೀವು ಕರ್ಮಾತೀತಸ್ಥಿತಿಯನ್ನು ಹೊಂದುತ್ತೀರೋ ಆಗ ನೀವು ವಿಷ್ಣುಪುರಿಯಲ್ಲಿ ಹೋಗುತ್ತೀರಿ. ಈಗ ಶಿವತಂದೆಯೂ ಇದ್ದಾರೆ, ಪ್ರಜಾಪಿತ ಬ್ರಹ್ಮಾತಂದೆಯೂ ಇದ್ದಾರೆ. ಒಬ್ಬರು ನಿರಾಕಾರಿ, ಇನ್ನೊಬ್ಬರು ಸಾಕಾರಿ - ಎರಡು ಇಂಜಿನ್ ಸಿಕ್ಕಿದೆ. ಇಬ್ಬರು ಪರಿಶ್ರಮಪಡುತ್ತಾರೆ - ಮಕ್ಕಳು ಸ್ವರ್ಗಕ್ಕೆ ಯೋಗ್ಯರಾಗಲು ಸರ್ವಗುಣ ಸಂಪನ್ನರು, 16 ಕಲಾ ಸಂಪೂರ್ಣರಾಗಬೇಕಾಗಿದೆ. ಇಲ್ಲಿ ಪರೀಕ್ಷೆಯನ್ನು ತೇರ್ಗಡೆ ಮಾಡಬೇಕಾಗಿದೆ. ಈ ಮಾತುಗಳು ಯಾವುದೇ ಶಾಸ್ತ್ರಗಳಲ್ಲಿಲ್ಲ. ಈ ವಿದ್ಯೆಯು ಬಹಳ ವಿಚಿತ್ರವಾಗಿದೆ - ಭವಿಷ್ಯದ 21 ಜನ್ಮಗಳಿಗಾಗಿ. ಮತ್ತೆಲ್ಲಾ ವಿದ್ಯೆಗಳು ಮೃತ್ಯುಲೋಕಕ್ಕಾಗಿ ಆದರೆ ಈ ವಿದ್ಯೆಯು ಅಮರಲೋಕಕ್ಕಾಗಿಯೇ ಇದೆ. ಅದಕ್ಕೋಸ್ಕರ ಇಲ್ಲಿಯೇ ಓದಬೇಕಲ್ಲವೆ! ಎಲ್ಲಿಯವರೆಗೆ ಆತ್ಮವು ಪವಿತ್ರವಾಗುವುದಿಲ್ಲವೋ ಅಲ್ಲಿಯವರೆಗೆ ಸತ್ಯಯುಗದಲ್ಲಿ ಹೋಗಲು ಸಾಧ್ಯವಿಲ್ಲ ಆದ್ದರಿಂದ ತಂದೆಯು ಸಂಗಮಯುಗದಲ್ಲಿಯೇ ಬರುತ್ತಾರೆ, ಇದಕ್ಕೆ ಪುರುಷೋತ್ತಮ ಕಲ್ಯಾಣಕಾರಿಯುಗವೆಂದು ಹೇಳಲಾಗುತ್ತದೆ. ಈ ಸಮಯದಲ್ಲಿ ನೀವು ಕವಡೆಯಿಂದ ವಜ್ರಸಮಾನಾರಾಗುತ್ತೀರಿ ಆದ್ದರಿಂದ ಶ್ರೀಮತದಂತೆ ನಡೆಯುತ್ತಾ ಇರಿ, ಶ್ರೀ ಶ್ರೀ ಎಂದು ಶಿವತಂದೆಗೇ ಹೇಳಲಾಗುತ್ತದೆ. ಮಾಲೆಯ ಅರ್ಥವನ್ನೂ ಸಹ ಮಕ್ಕಳಿಗೆ ತಿಳಿಸಿದ್ದಾರೆ. ಮೇಲೆ ಹೂ ಶಿವತಂದೆಯಾಗಿದ್ದಾರೆ ನಂತರ ಎರಡು ಜೋಡಿಮಣಿಗಳು ಪ್ರವೃತ್ತಿಮಾರ್ಗವಾಗಿದೆಯಲ್ಲವೆ ನಂತರ ಮಣಿಗಳಿರುತ್ತವೆ, ಯಾರು ವಿಜಯವನ್ನು ಹೊಂದಿದವರಾಗಿದ್ದಾರೆ ಅವರದೇ ರುದ್ರಮಾಲೆಯಾಗುತ್ತದೆ ಮತ್ತೆ ವಿಷ್ಣುವಿನ ಮಾಲೆಯಾಗುತ್ತದೆ. ಈ ಮಾಲೆಯ ಅರ್ಥವನ್ನು ಯಾರೂ ತಿಳಿದುಕೊಂಡಿಲ್ಲ, ತಂದೆಯು ಕುಳಿತು ತಿಳಿಸುತ್ತಾರೆ - ನೀವು ಮಕ್ಕಳು ಕವಡೆಯಿಂದ ವಜ್ರಸಮಾನರಾಗುತ್ತಿದ್ದೀರಿ, 63 ಜನ್ಮಗಳು ನೀವು ತಂದೆಯನ್ನು ನೆನಪು ಮಾಡುತ್ತಾ ಬಂದಿದ್ದೀರಿ. ನೀವೀಗ ಒಬ್ಬ ಪ್ರಿಯತಮನ ಪ್ರಿಯತಮೆಯರಾಗಿದ್ದೀರಿ. ಒಬ್ಬ ಭಗವಂತನಿಗೇ ಎಲ್ಲರೂ ಭಕ್ತರಾಗಿದ್ದೀರಿ. ಪತಿಯರ ಪತಿ, ತಂದೆಯರ ತಂದೆಯು ಅವರೊಬ್ಬರೇ ಆಗಿದ್ದಾರೆ. ನೀವು ಮಕ್ಕಳನ್ನು ರಾಜಾಧಿರಾಜರನ್ನಾಗಿ ಮಾಡುತ್ತಾರೆ ಆದರೆ ತಂದೆಯಂತೂ ಆಗುವುದಿಲ್ಲ. ತಂದೆಯು ಪದೇ-ಪದೇ ತಿಳಿಸುತ್ತಾರೆ - ಮಕ್ಕಳೇ, ತಂದೆಯ ನೆನಪಿನಿಂದಲೇ ನಿಮ್ಮ ಜನ್ಮ-ಜನ್ಮಾಂತರದ ಪಾಪಗಳು ಭಸ್ಮವಾಗುತ್ತದೆ. ಸಾಧು-ಸಂತರು ಆತ್ಮವು ನಿರ್ಲೇಪವೆಂದು ಹೇಳುತ್ತಾರೆ ಆದರೆ ತಂದೆಯು ತಿಳಿಸುತ್ತಾರೆ - ಒಳ್ಳೆಯ ಅಥವಾ ಕೆಟ್ಟಸಂಸ್ಕಾರವನ್ನು ಆತ್ಮವೇ ತೆಗೆದುಕೊಂಡು ಹೋಗುತ್ತದೆ. ಎಲ್ಲಿ ನೋಡಿದರಲ್ಲಿ ಭಗವಂತನೇ ಭಗವಂತನಿದ್ದಾರೆ, ಇದೆಲ್ಲವೂ ಭಗವಂತನ ಲೀಲೆಯಾಗಿದೆ ಎಂದು ಅವರು ಹೇಳುತ್ತಾರೆ. ವಾಮಮಾರ್ಗದಲ್ಲಿ ಸಂಪೂರ್ಣ ಕೊಳಕಾಗಿಬಿಡುತ್ತಾರೆ. ಇಂತಹ ಮತದ ಮೇಲೂ ಸಹ ಲಕ್ಷಾಂತರ ಮಂದಿ ನಡೆಯುತ್ತಿದ್ದಾರೆ. ಇದೂ ಸಹ ನಾಟಕದಲ್ಲಿ ನಿಗಧಿಯಾಗಿದೆ. ಸದಾ ಬುದ್ಧಿಯಲ್ಲಿ ಮೂರು ಧಾಮಗಳನ್ನು ನೆನಪಿಟ್ಟುಕೊಳ್ಳಿ - ಶಾಂತಿಧಾಮ, ಎಲ್ಲಿ ಆತ್ಮಗಳಿರುತ್ತಾರೆ. ಸುಖಧಾಮವೆಂದರೆ ಅಲ್ಲಿ ಹೋಗುವುದಕ್ಕಾಗಿ ನೀವು ಪುರುಷಾರ್ಥ ಮಾಡುತ್ತಿದ್ದೀರಿ. ದುಃಖಧಾಮವು ಅರ್ಧಕಲ್ಪದ ನಂತರ ಆರಂಭವಾಗುತ್ತದೆ, ಭಗವಂತನಿಗೆ ಪರಮಪಿತ ಪರಮಾತ್ಮನೆಂದು ಕರೆಯಲಾಗುತ್ತದೆ, ಅವರು ನರಕವನ್ನು ಸ್ಥಾಪನೆ ಮಾಡುವುದಿಲ್ಲ. ನಾನು ಸುಖಧಾಮವನ್ನೇ ಸ್ಥಾಪನೆ ಮಾಡುತ್ತೇನೆಂದು ತಂದೆಯು ತಿಳಿಸುತ್ತಾರೆ. ಇದು ಸೋಲು-ಗೆಲುವಿನ ಆಟವಾಗಿದೆ. ನೀವು ಮಕ್ಕಳು ಶ್ರೀಮತದಂತೆ ನಡೆದು ಈಗ ಮಾಯಾರೂಪಿ ರಾವಣನ ಮೇಲೆ ಜಯಗಳಿಸುತ್ತೀರಿ ಮತ್ತೆ ಅರ್ಧಕಲ್ಪದ ನಂತರ ರಾವಣರಾಜ್ಯವು ಆರಂಭವಾಗುತ್ತದೆ. ನೀವು ಮಕ್ಕಳೀಗ ಯುದ್ಧದ ಮೈದಾನದಲ್ಲಿದ್ದೀರಿ, ಇದನ್ನು ಬುದ್ಧಿಯಲ್ಲಿ ಧಾರಣೆ ಮಾಡಬೇಕು ಮತ್ತು ಅನ್ಯರಿಗೂ ತಿಳಿಸಬೇಕಾಗಿದೆ. ಅಂಧರಿಗೆ ಊರುಗೋಲಾಗಿ ಮನೆಯ ಮಾರ್ಗವನ್ನು ತಿಳಿಸಬೇಕಾಗಿದೆ ಏಕೆಂದರೆ ಎಲ್ಲರೂ ಆ ಮನೆಯನ್ನು ಮರೆತುಹೋಗಿದ್ದಾರೆ. ಇದೊಂದು ನಾಟಕವಾಗಿದೆ ಎಂದು ಎಲ್ಲರೂ ಹೇಳುತ್ತಾರೆ ಆದರೆ ಇದರ ಆಯಸ್ಸನ್ನು ಲಕ್ಷಾಂತರ ವರ್ಷಗಳೆಂದು ಹೇಳಿಬಿಡುತ್ತಾರೆ. ತಂದೆಯು ತಿಳಿಸುತ್ತಾರೆ - ರಾವಣನು ನಿಮ್ಮನ್ನು ಎಷ್ಟೊಂದು ಅಂಧರನ್ನಾಗಿ ಮಾಡಿಬಿಟ್ಟಿದ್ದಾನೆ! ತಂದೆಯು ಈಗ ಇವೆಲ್ಲಾ ಮಾತುಗಳನ್ನು ತಿಳಿಸುತ್ತಿದ್ದಾರೆ. ತಂದೆಗೇ ಜ್ಞಾನಪೂರ್ಣನೆಂದು ಕರೆಯಲಾಗುತ್ತದೆ ಅಂದರೆ ಅವರು ಪ್ರತಿಯೊಬ್ಬರ ಹೃದಯದಲ್ಲಿ ಕುಳಿತು ಅವರನ್ನು ನೋಡುವವರೆಂದಲ್ಲ. ಮನುಷ್ಯರಂತೂ ರಿದ್ಧಿ-ಸಿದ್ಧಿಯನ್ನು ಕಲಿಯುತ್ತಾರೆ ಅದರಿಂದ ನಿಮ್ಮ ಆಂತರ್ಯದ ಮಾತುಗಳನ್ನು ತಿಳಿಸುತ್ತಾರೆ. ಆದರೆ ಜ್ಞಾನಪೂರ್ಣನೆಂಬುದಕ್ಕೆ ಅರ್ಥವು ಇದಲ್ಲ. ಇದಂತೂ ತಂದೆಯದೇ ಮಹಿಮೆಯಾಗಿದೆ, ಅವರು ಜ್ಞಾನಸಾಗರ, ಆನಂದಸಾಗರನಾಗಿದ್ದಾರೆ. ಅವರು ಅಂತರ್ಯಾಮಿಯಾಗಿದ್ದಾರೆಂದು ಮನುಷ್ಯರು ಹೇಳುತ್ತಾರೆ ಆದರೆ ಈಗ ನೀವು ಮಕ್ಕಳು ತಿಳಿದುಕೊಂಡಿದ್ದೀರಿ - ತಂದೆಯಂತೂ ಶಿಕ್ಷಕನಾಗಿದ್ದಾರೆ, ನಮಗೆ ಓದಿಸುತ್ತಾರೆ ಅವರು ಆತ್ಮೀಯ ತಂದೆಯೂ ಆಗಿದ್ದಾರೆ, ಆತ್ಮೀಯ ಸದ್ಗುರುವೂ ಆಗಿದ್ದಾರೆ. ಅಲ್ಲಿ ದೈಹಿಕ ಶಿಕ್ಷಕರು, ಗುರುಗಳಿರುತ್ತಾರೆ. ಅದರಲ್ಲಿಯೂ ಅವರು ಬೇರೆ-ಬೇರೆಯವರಿರುತ್ತಾರೆ. ಒಬ್ಬರೇ ಮೂರು (ತಂದೆ-ಶಿಕ್ಷಕ-ಸದ್ಗುರು) ಪಾತ್ರಗಳನ್ನಭಿನಯಿಸಲು ಸಾಧ್ಯವಿಲ್ಲ. ಭಲೆ ಯಾರ ತಂದೆಯಾದರೂ ಶಿಕ್ಷಕನೂ ಆಗಿರಬಹುದು ಆದರೆ ಅವರೇ ಗುರುವೂ ಆಗಿರಲು ಸಾಧ್ಯವಿಲ್ಲ. ಅವರಾದರೂ ಮನುಷ್ಯರಾಗುತ್ತಾರೆ, ಇಲ್ಲಂತೂ ಪಾರಲೌಕಿಕ ಪರಮಪಿತ ಪರಮಾತ್ಮನೇ ಓದಿಸುತ್ತಾರೆ. ಆತ್ಮಕ್ಕೆ ಪರಮಾತ್ಮನೆಂದು ಹೇಳಲಾಗುವುದಿಲ್ಲ, ಇದನ್ನೂ ಸಹ ಯಾರೂ ತಿಳಿದುಕೊಂಡಿಲ್ಲ. ಪರಮಾತ್ಮನು ಅರ್ಜುನನಿಗೆ ಸಾಕ್ಷಾತ್ಕಾರ ಮಾಡಿಸಿದಾಗ ಸಾಕು ನಿಲ್ಲಿಸಿ, ಇಷ್ಟೊಂದು ಪ್ರಕಾಶತೆಯನ್ನು ನೋಡಲು ನನ್ನಿಂದಾಗುವುದಿಲ್ಲ ಎಂದು ಅವನು ಹೇಳಿದನೆಂದು ಹೇಳುತ್ತಾರೆ. ಇದೆಲ್ಲವನ್ನೂ ಕೇಳಿರುವುದರಿಂದ ಪರಮಾತ್ಮನು ಅಷ್ಟು ತೇಜೋಮಯನಾಗಿದ್ದಾರೆಂದು ತಿಳಿಯುತ್ತಾರೆ. ಆರಂಭದಲ್ಲಿ ತಂದೆಯ ಬಳಿ ಬರುತ್ತಿದ್ದವರು ಸಾಕ್ಷಾತ್ಕಾರದಲ್ಲಿ ಹೊರಟುಹೋಗುತ್ತಿದ್ದರು. ಸಾಕುಮಾಡಿ, ನನ್ನಿಂದ ನೋಡಲಾಗುವುದಿಲ್ಲ ಎಂದು ಹೇಳುತ್ತಿದ್ದರು ಅಂದರೆ ಮೊದಲು ಏನು ಕೇಳಿರುವರೋ ಅದೇ ಬುದ್ಧಿಯಲ್ಲಿಯೂ ಭಾವನೆಯಿರುತ್ತದೆ ಆದ್ದರಿಂದಲೇ ತಂದೆಯು ತಿಳಿಸುತ್ತಾರೆ - ಯಾರು ಯಾವ ಭಾವನೆಯಿಂದ ನೆನಪು ಮಾಡುವರೋ ಅದೇ ರೂಪದಲ್ಲಿ ನಾನು ಅವರ ಭಾವನೆಯನ್ನು ಪೂರ್ಣ ಮಾಡುತ್ತೇನೆ. ಯಾರಾದರೂ ಗಣೇಶನ ಪೂಜಾರಿಯಾಗಿದ್ದರೆ ಅವರಿಗೆ ಗಣೇಶನ ಸಾಕ್ಷಾತ್ಕಾರವನ್ನು ಮಾಡಿಸುತ್ತೇನೆ. ಸಾಕ್ಷಾತ್ಕಾರವಾಗುವುದರಿಂದ ನಾನು ಮುಕ್ತಿಧಾಮದಲ್ಲಿ ತಲುಪಿಬಿಟ್ಟೆನೆಂದು ತಿಳಿಯುತ್ತಾರೆ ಆದರೆ ಇಲ್ಲ, ಯಾರೂ ಮುಕ್ತಿಧಾಮದಲ್ಲಿ ಹೋಗಲು ಸಾಧ್ಯವಿಲ್ಲ. ನಾರದನ ದೃಷ್ಟಾಂತವೂ ಇದೆ, ನಾರದನು ಭಕ್ತಶಿರೋಮಣಿಯಾಗಿದ್ದನೆಂದು ಗಾಯನವಿದೆ. ನಾನು ಲಕ್ಷ್ಮಿಯನ್ನು ವರಿಸಲು ಯೋಗ್ಯನಾಗಿದ್ದೇನೆಯೇ? ಎಂದು ನಾರದನು ಕೇಳಿದಾಗ ತಮ್ಮ ಮುಖವನ್ನು ನೋಡಿಕೋ ಎಂದು ಹೇಳಿದರು. ಭಕ್ತರ ಮಾಲೆಯೂ ಆಗುತ್ತದೆ, ಸ್ತ್ರೀಯರಲ್ಲಿ ಭಕ್ತಮೀರಾ ಮತ್ತು ಪುರುಷರಲ್ಲಿ ನಾರದನು ಮುಖ್ಯವಾದವರೆಂದು ಗಾಯನವಿದೆ. ಇಲ್ಲಿ ಜ್ಞಾನದಲ್ಲಿ ಮುಖ್ಯ ಶಿರೋಮಣಿಯು ಸರಸ್ವತಿಯೆಂದು ಹೇಳಲಾಗಿದೆ. ನಂಬರ್ವಾರಂತೂ ಇರುತ್ತಾರಲ್ಲವೆ.

ತಂದೆಯು ತಿಳಿಸುತ್ತಾರೆ - ಮಕ್ಕಳೇ, ಮಾಯೆಯಿಂದ ಬಹಳ ಜಾಗೃತರಾಗಿರಿ, ಮಾಯೆಯು ಇಂತಹ ವಿರುದ್ಧವಾದ ಕೆಲಸವನ್ನು ಮಾಡಿಸಿಬಿಡುತ್ತದೆ ಅದರಿಂದ ಅಂತ್ಯದಲ್ಲಿ ಬಹಳ ಅಳಬೇಕಾಗುತ್ತದೆ, ಭಗವಂತನು ಬಂದರು ಆದರೆ ನಾವು ಆಸ್ತಿಯನ್ನು ತೆಗೆದುಕೊಳ್ಳಲಾಗಲಿಲ್ಲ ಎಂದು ಪಶ್ಚಾತ್ತಾಪಪಡಬೇಕಾಗುತ್ತದೆ. ಮತ್ತೆ ಪ್ರಜೆಗಳಲ್ಲಿಯೂ ಹೋಗಿ ದಾಸ-ದಾಸಿಯರಾಗುತ್ತಾರೆ. ಅಂತಿಮದಲ್ಲಿ ವಿದ್ಯೆಯಂತೂ ಮುಕ್ತಾಯವಾಗಿಬಿಡುತ್ತದೆ ಆಗ ಬಹಳ ಪಶ್ಚಾತ್ತಾಪ ಪಡಬೇಕಾಗುತ್ತದೆ ಆದ್ದರಿಂದ ಕೊನೆಯಲ್ಲಿ ಪಶ್ಚಾತ್ತಾಪ ಪಡಬಾರದೆಂದು ತಂದೆಯು ಮೊದಲಿನಿಂದಲೇ ತಿಳಿಸುತ್ತಾರೆ. ತಂದೆಯನ್ನು ಎಷ್ಟು ನೆನಪು ಮಾಡುತ್ತಾ ಇರುತ್ತೀರೋ ಆ ಯೋಗಾಗ್ನಿಯಿಂದ ಪಾಪಗಳು ಭಸ್ಮವಾಗುತ್ತವೆ, ಮೊದಲು ಆತ್ಮವು ಸತೋಪ್ರಧಾನವಾಗಿತ್ತು ನಂತರ ಅದರಲ್ಲಿ ತುಕ್ಕುಹಿಡಿಯುತ್ತಾ-ಹಿಡಿಯುತ್ತಾ ತಮೋಪ್ರಧಾನವಾಗಿದೆ. ಚಿನ್ನ, ಬೆಳ್ಳಿ, ತಾಮ್ರ, ಕಬ್ಬಿಣ..... ಎಂದು ಹೆಸರೂ ಇದೆ. ಈಗ ಕಬ್ಬಿಣಸಮಾನದ ಯುಗದಿಂದ ನೀವು ಸ್ವರ್ಣಿಮಯುಗದಲ್ಲಿ ಹೋಗಬೇಕಾಗಿದೆ. ಪವಿತ್ರರಾಗದ ವಿನಃ ಆತ್ಮಗಳು ಹೋಗಲು ಸಾಧ್ಯವಿಲ್ಲ. ಸತ್ಯಯುಗದಲ್ಲಿ ಪವಿತ್ರತೆಯಿತ್ತು ಆಗ ಸುಖ-ಶಾಂತಿಯೂ ಇತ್ತು. ಇಲ್ಲಿ ಪವಿತ್ರತೆಯಿಲ್ಲವಾದ್ದರಿಂದ ಸುಖ-ಶಾಂತಿಯೂ ಇಲ್ಲ. ಅಲ್ಲಿಗೆ ಮತ್ತು ಇಲ್ಲಿಗೆ ರಾತ್ರಿ-ಹಗಲಿನ ಅಂತರವಿದೆ, ಆದ್ದರಿಂದ ತಂದೆಯು ತಿಳಿಸುತ್ತಾರೆ - ಈ ಬಾಲ್ಯದ ದಿನಗಳನ್ನು ಮರೆಯಬಾರದು. ತಂದೆಯು ದತ್ತು ಮಾಡಿಕೊಂಡಿದ್ದಾರಲ್ಲವೆ. ಬ್ರಹ್ಮಾರವರ ಮೂಲಕ ದತ್ತುಮಾಡಿಕೊಳ್ಳುತ್ತಾರೆ. ಸ್ತ್ರೀಯನ್ನು ದತ್ತು ಮಾಡಿಕೊಳ್ಳಲಾಗುತ್ತದೆ. ಆದರೆ ಮಕ್ಕಳನ್ನು ರಚನೆ ಮಾಡಲಾಗುತ್ತದೆ. ಸ್ತ್ರೀಯನ್ನು ರಚನೆ ಎಂದು ಹೇಳುವುದಿಲ್ಲ, ಈ ತಂದೆಯೂ ಸಹ ದತ್ತುಮಾಡಿಕೊಳ್ಳುತ್ತಾರೆ - ಯಾರನ್ನು ಕಲ್ಪದ ಹಿಂದೆ ದತ್ತುಮಾಡಿಕೊಂಡಿದ್ದೆನೋ ನೀವು ಅದೇ ನನ್ನ ಮಕ್ಕಳಾಗಿದ್ದೀರಿ ಎಂದು ಹೇಳುತ್ತಾರೆ. ದತ್ತುಮಕ್ಕಳಿಗೆ ತಂದೆಯಿಂದ ಆಸ್ತಿಯು ಸಿಗುತ್ತದೆ. ಸರ್ವಶ್ರೇಷ್ಠ ತಂದೆಯಿಂದ ಸರ್ವಶ್ರೇಷ್ಠ ಆಸ್ತಿಯು ಸಿಗುತ್ತದೆ. ಅವರು ಭಗವಂತನಾಗಿದ್ದಾರೆ ನಂತರ ಎರಡನೆಯ ನಂಬರಿನಲ್ಲಿ ಈ ಲಕ್ಷ್ಮಿ-ನಾರಾಯಣ ಸತ್ಯಯುಗದ ಮಾಲೀಕರಾಗಿದ್ದಾರೆ. ಈಗ ನೀವು ಸತ್ಯಯುಗದ ಮಾಲೀಕರಾಗುತ್ತಿದ್ದೀರಿ. ಇನ್ನೂ ಸಂಪೂರ್ಣರಾಗಿಲ್ಲ, ಆಗುತ್ತಿದ್ದೀರಿ.

ಪಾವನರಾಗಿ ಪಾವನರನ್ನಾಗಿ ಮಾಡುವುದೇ ಆತ್ಮೀಯ ಸತ್ಯಸೇವೆಯಾಗಿದೆ. ನೀವೀಗ ಆತ್ಮಿಕ ಸೇವೆಯನ್ನು ಮಾಡುತ್ತೀರಿ ಆದ್ದರಿಂದ ನೀವು ಬಹಳ ಶ್ರೇಷ್ಠರಾಗಿದ್ದೀರಿ, ಶಿವತಂದೆಯು ಪತಿತರನ್ನು ಪಾವನರನ್ನಾಗಿ ಮಾಡುತ್ತಾರೆ. ನೀವೂ ಸಹ ಪಾವನರನ್ನಾಗಿ ಮಾಡುತ್ತೀರಿ. ರಾವಣನು ಎಷ್ಟೊಂದು ತುಚ್ಛಬುದ್ಧಿಯವರನ್ನಾಗಿ ಮಾಡಿಬಿಟ್ಟಿದ್ದಾನೆ! ಈಗ ತಂದೆಯು ಪುನಃ ಯೋಗ್ಯರನ್ನಾಗಿ ಮಾಡಿ ವಿಶ್ವದ ಮಾಲೀಕರನ್ನಾಗಿ ಮಾಡುತ್ತಾರೆ. ಇಂತಹ ತಂದೆಯನ್ನು ಕಲ್ಲು-ಮುಳ್ಳಿನಲ್ಲಿದ್ದಾರೆಂದು ಹೇಗೆ ಹೇಳುತ್ತೀರಿ? ತಂದೆಯು ತಿಳಿಸುತ್ತಾರೆ - ಈ ಆಟವು ಮಾಡಲ್ಪಟ್ಟಿದೆ, ಕಲ್ಪದ ನಂತರವೂ ಪುನಃ ಇದೇ ರೀತಿಯಾಗುವುದು. ಈಗ ನಾಟಕದ ಯೋಜನೆಯನುಸಾರ ನಾನು ನಿಮಗೆ ತಿಳಿಸಲು ಬಂದಿದ್ದೇನೆ, ಇದರಲ್ಲಿ ಸ್ವಲ್ಪವೂ ಅಂತರವಾಗುವುದಿಲ್ಲ. ತಂದೆಯು ಒಂದುಕ್ಷಣವೂ ತಡಮಾಡಲು ಸಾಧ್ಯವಿಲ್ಲ. ಹೇಗೆ ತಂದೆಯ ಪುನರವತರಣೆಯಾಗುತ್ತದೆಯೋ ಹಾಗೆಯೇ ನೀವು ಮಕ್ಕಳದೂ ಪುನರವತರಣೆಯಾಗುತ್ತದೆ, ನೀವು ಅವತರಿತರಾಗಿದ್ದೀರಿ. ಆತ್ಮವು ಇಲ್ಲಿಗೆ ಬಂದು ಸಾಕಾರದಲ್ಲಿ ಪಾತ್ರವನ್ನಭಿನಯಿಸುತ್ತದೆ, ಇದಕ್ಕೆ ಅವತರಣೆಯೆಂದು ಹೇಳಲಾಗುತ್ತದೆ. ಮೇಲಿನಿಂದ ಪಾತ್ರವನ್ನಭಿನಯಿಸಲು ಕೆಳಗೆ ಬಂದಿದ್ದೀರಿ, ತಂದೆಯದೂ ಸಹ ದಿವ್ಯ-ಅಲೌಕಿಕ ಜನ್ಮವಾಗಿದೆ. ಸ್ವಯಂ ತಂದೆಯೇ ತಿಳಿಸುತ್ತಾರೆ - ನಾನು ಪ್ರಕೃತಿಯ ಆಧಾರವನ್ನು ತೆಗೆದುಕೊಳ್ಳಬೇಕಾಗುತ್ತದೆ. ನಾನು ಈ (ಬ್ರಹ್ಮಾ) ತನುವಿನಲ್ಲಿ ಪ್ರವೇಶ ಮಾಡುತ್ತೇನೆ. ಇದು ನನ್ನ ನಿಗಧಿತವಾದ ಶರೀರವಾಗಿದೆ, ಇದು ಬಹಳ ದೊಡ್ಡ ವಿಚಿತ್ರವಾದ ಆಟವಾಗಿದೆ. ಈ ನಾಟಕದಲ್ಲಿ ಪ್ರತಿಯೊಬ್ಬರ ಪಾತ್ರವು ನಿಗಧಿಯಾಗಿದೆ, ಅದನ್ನು ಅಭಿನಯಿಸುತ್ತಲೇ ಇರುತ್ತಾರೆ. 21 ಜನ್ಮಗಳ ಪಾತ್ರವನ್ನು ಹೀಗೆಯೇ ಅಭಿನಯಿಸುತ್ತೀರಿ. ನಿಮಗೆ ಸ್ಪಷ್ಟವಾದ ಜ್ಞಾನವು ಸಿಕ್ಕಿದೆ, ಅದೂ ಸಹ ನಂಬರ್ವಾರ್ ಪುರುಷಾರ್ಥದನುಸಾರ. ತಂದೆಯು ಮಹಾರಥಿಗಳ ಮಹಿಮೆ ಮಾಡುತ್ತಾರಲ್ಲವೆ. ಈ ಪಾಂಡವರು ಮತ್ತು ಕೌರವರ ಯಾವ ಯುದ್ಧವಾಯಿತೆಂದು ತೋರಿಸುತ್ತಾರೆಯೋ ಇದೆಲ್ಲವೂ ಕಲ್ಪನೆಯ ಮಾತುಗಳಾಗಿವೆ. ಈಗ ನೀವು ತಿಳಿದುಕೊಂಡಿದ್ದೀರಿ - ಅವರು ದೈಹಿಕ ಡಬಲ್ ಹಿಂಸಕರಾಗಿದ್ದಾರೆ. ನೀವು ಆತ್ಮಿಕ ಡಬಲ್ ಅಹಿಂಸಕರಾಗಿದ್ದೀರಿ. ರಾಜ್ಯಭಾಗ್ಯವನ್ನು ತೆಗೆದುಕೊಳ್ಳಲು ನೋಡಿ, ನೀವು ಹೇಗೆ ಕುಳಿತಿದ್ದೀರಿ. ತಂದೆಯ ನೆನಪಿನಿಂದಲೇ ವಿಕರ್ಮಗಳು ವಿನಾಶವಾಗುತ್ತದೆಯೆಂದು ನಿಮಗೆ ತಿಳಿದಿದೆ. ನಿಮಗೆ ಇದೇ ಚಿಂತೆಯಿದೆ - ಪರಿಶ್ರಮವೆಲ್ಲವೂ ನೆನಪು ಮಾಡುವುದರಲ್ಲಿಯೇ ಇದೆ ಆದ್ದರಿಂದ ಭಾರತದ ಪ್ರಾಚೀನ ಯೋಗವೆಂದು ಗಾಯನವಿದೆ. ಹೊರಗಿನವರೂ (ವಿದೇಶಿಯರು) ಸಹ ಈ ಭಾರತದ ಪ್ರಾಚೀನ ಯೋಗವನ್ನು ಕಲಿಯಲು ಬಯಸುತ್ತಾರೆ. ಸನ್ಯಾಸಿಗಳು ನಮಗೆ ಈ ಯೋಗವನ್ನು ಕಲಿಸುತ್ತಾರೆಂದು ತಿಳಿಯುತ್ತಾರೆ, ವಾಸ್ತವದಲ್ಲಿ ಅವರು ಏನನ್ನೂ ಕಲಿಸುವುದಿಲ್ಲ. ಅವರದು ಹಠಯೋಗ ಸನ್ಯಾಸವಾಗಿದೆ. ನೀವು ಪ್ರವೃತ್ತಿಮಾರ್ಗದವರಾಗಿದ್ದೀರಿ, ನಿಮ್ಮದು ಆರಂಭದಲ್ಲಿಯೇ ರಾಜಧಾನಿಯಿತ್ತು, ಈಗ ಅಂತ್ಯವಾಗಿದೆ. ಈಗಂತೂ ಇದು ಪಂಚಾಯಿತಿ ರಾಜ್ಯವಾಗಿದೆ. ಪ್ರಪಂಚದಲ್ಲಿ ಬಹಳ ಅಂಧಕಾರವಿದೆ, ನಿಮಗೆ ತಿಳಿದಿದೆ - ಇನ್ನು ಮುಂದೆ ನಿರಪರಾಧಿಗಳ ಕೊಲೆಯಾಗಲಿದೆ. ಇದೂ ಸಹ ಒಂದು ಆಟವನ್ನು ತೋರಿಸುತ್ತಾರೆ ಆದರೆ ಇದು ಬೇಹದ್ದಿನ ಮಾತಾಗಿದೆ. ಎಷ್ಟೊಂದು ಕೊಲೆಗಳಾಗುತ್ತವೆ, ಪ್ರಾಕೃತಿಕ ವಿಕೋಪಗಳಾಗುತ್ತವೆ. ಎಲ್ಲರ ಮೃತ್ಯುವಾಗುತ್ತದೆ, ಇದಕ್ಕೆ ರಕ್ತಪಾತವೆಂದು ಹೇಳಲಾಗುತ್ತದೆ. ಇದರಲ್ಲಿ ನೋಡುವುದಕ್ಕೂ ಬಹಳ ಧೈರ್ಯವಿರಬೇಕು. ಅಂಜುಬುರಕರಂತೂ ಬಹಳ ಬೇಗನೆ ಮೂರ್ಛಿತರಾಗಿಬಿಡುತ್ತಾರೆ ಆದರೆ ಇದರಲ್ಲಿ ಬಹಳ ನಿರ್ಭಯತೆಯಿರಬೇಕು. ನೀವು ಶಿವಶಕ್ತಿಯರಾಗಿದ್ದೀರಲ್ಲವೆ, ಶಿವತಂದೆಯು ಸರ್ವಶಕ್ತಿವಂತನಾಗಿದ್ದಾರೆ. ನಾವು ಅವರಿಂದ ಶಕ್ತಿಯನ್ನು ತೆಗೆದುಕೊಳ್ಳುತ್ತೇವೆ. ಪತಿತರಿಂದ ಪಾವನರಾಗುವ ಯುಕ್ತಿಯನ್ನು ತಂದೆಯೇ ತಿಳಿಸುತ್ತಾರೆ. ತಂದೆಯು ಸಂಪೂರ್ಣ ಸಹಜವಾದ ಸಲಹೆಯನ್ನು ನೀಡುತ್ತಾರೆ - ಮಕ್ಕಳೇ, ನೀವು ಸತೋಪ್ರಧಾನರಾಗಿದ್ದಿರಿ, ಈಗ ತಮೋಪ್ರಧಾನರಾಗಿದ್ದೀರಿ. ಈಗ ತಂದೆಯು ತಿಳಿಸುತ್ತಾರೆ - ನೀವು ನನ್ನನ್ನು ನೆನಪು ಮಾಡಿದರೆ ಪಾವನ, ಸತೋಪ್ರಧಾನರಾಗಿಬಿಡುತ್ತೀರಿ. ಆತ್ಮವು ತಂದೆಯ ಜೊತೆ ಯೋಗವನ್ನಿಡಬೇಕಾಗಿದೆ, ಅದರಿಂದ ಪಾಪಗಳು ಭಸ್ಮವಾಗುತ್ತದೆ. ಅಥಾರಿಟಿಯೂ ತಂದೆಯೇ ಆಗಿದ್ದಾರೆ. ವಿಷ್ಣುವಿನ ನಾಭಿಯಿಂದ ಬ್ರಹ್ಮನು ಬಂದರು, ಅವರ ಮೂಲಕ ಕುಳಿತು ಎಲ್ಲಾ ವೇದ-ಶಾಸ್ತ್ರಗಳ ರಹಸ್ಯವನ್ನು ತಿಳಿಸಿದರೆಂದು ಚಿತ್ರಗಳಲ್ಲಿ ತೋರಿಸುತ್ತಾರೆ. ಈಗ ನೀವು ತಿಳಿದುಕೊಂಡಿದ್ದೀರಿ, ಬ್ರಹ್ಮನಿಂದ ವಿಷ್ಣು, ವಿಷ್ಣುವಿನಿಂದ ಬ್ರಹ್ಮನಾಗುತ್ತಾರೆ. ಬ್ರಹ್ಮಾರವರ ಮೂಲಕ ಸ್ಥಾಪನೆ ಮಾಡುತ್ತಾರೆ ಮತ್ತೆ ಯಾವ ಸ್ಥಾಪನೆಯಾಯಿತೋ ಅದರ ಪಾಲನೆಯನ್ನೂ ಅವಶ್ಯವಾಗಿ ಮಾಡುತ್ತಾರಲ್ಲವೆ. ಇದೆಲ್ಲವನ್ನೂ ಬಹಳ ಚೆನ್ನಾಗಿ ತಿಳಿಸಲಾಗುತ್ತದೆ. ಇದನ್ನು ಯಾರು ತಿಳಿದುಕೊಳ್ಳುವರೋ ಅವರಿಗೆ ಈ ಆತ್ಮಿಕ ಜ್ಞಾನವು ಎಲ್ಲರಿಗೆ ಹೇಗೆ ಸಿಗುವುದು, ನಮ್ಮ ಬಳಿ ಹಣವಿದ್ದರೆ ನಾವೇಕೆ ಸೇವಾಕೇಂದ್ರವನ್ನು ತೆರೆಯಬಾರದೆಂಬ ವಿಚಾರಗಳು ಬರುತ್ತವೆ. ತಂದೆಯು ತಿಳಿಸುತ್ತಾರೆ - ಒಳ್ಳೆಯದು, ಬಾಡಿಗೆ ಮನೆಯಾದರೂ ತೆಗೆದುಕೊಳ್ಳಿ, ಅದರಲ್ಲಿ ಈ ಆಸ್ಪತ್ರೆ ಮತ್ತು ವಿಶ್ವವಿದ್ಯಾಲಯವನ್ನು ತೆರೆಯಿರಿ. ಯೋಗದಿಂದ ಮುಕ್ತಿ, ಜ್ಞಾನದಿಂದ ಜೀವನ್ಮುಕ್ತಿಯಾಗುತ್ತದೆ, ಎರಡೂ ಆಸ್ತಿಗಳು ಸಿಗುತ್ತದೆ. ಇದರಲ್ಲಿ ಕೇವಲ ಮೂರುಹೆಜ್ಜೆಗಳಷ್ಟು ಭೂಮಿಯು ಬೇಕು, ಮತ್ತೇನೂ ಬೇಕಿಲ್ಲ. ಈಶ್ವರೀಯ ವಿಶ್ವವಿದ್ಯಾಲಯವನ್ನು ತೆರೆಯಿರಿ, ವಿಶ್ವವಿದ್ಯಾಲಯ ಅಥವಾ ಯೂನಿವರ್ಸಿಟಿ ಒಂದೇ ಮಾತಾಗಿದೆ. ಇದು ಮನುಷ್ಯರಿಂದ ದೇವತೆಗಳಾಗುವ ಎಷ್ಟು ದೊಡ್ಡ ಯುನಿವರ್ಸಿಟಿಯಾಗಿದೆ! ತಮ್ಮ ಖರ್ಚು ಹೇಗೆ ನಡೆಯುತ್ತದೆಯೆಂದು ಕೇಳುತ್ತಾರೆ, ಆಗ ತಿಳಿಸಿ - ಅರೆ! ಬ್ರಹ್ಮಾಕುಮಾರ-ಕುಮಾರಿಯರ ತಂದೆಗೆ ಇಷ್ಟೊಂದು ಮಂದಿ ಮಕ್ಕಳಿದ್ದಾರೆ, ನೀವು ಕೇಳಲು ಬಂದಿದ್ದೀರಾ! ಬೋರ್ಡನ್ನು ನೋಡಿ ಏನು ಬರೆಯಲ್ಪಟ್ಟಿದೆ? ಬಹಳ ವಿಚಿತ್ರವಾದ ಜ್ಞಾನವಾಗಿದೆ, ತಂದೆಯೂ ವಿಚಿತ್ರನಾಗಿದ್ದಾರಲ್ಲವೆ. ನೀವು ಹೇಗೆ ವಿಶ್ವದ ಮಾಲೀಕರಾಗುತ್ತೀರಿ? ಶಿವತಂದೆಗೆ ಶ್ರೀ ಶ್ರೀ ಎಂದು ಹೇಳುತ್ತಾರೆ ಏಕೆಂದರೆ ಶ್ರೇಷ್ಠಾತಿಶ್ರೇಷ್ಠನಾಗಿದ್ದಾರಲ್ಲವೆ. ಲಕ್ಷ್ಮಿ-ನಾರಾಯಣರಿಗೆ ಶ್ರೀಲಕ್ಷ್ಮಿ-ಶ್ರೀನಾರಾಯಣ ಎಂದು ಹೇಳಲಾಗುತ್ತದೆ. ಇವೆಲ್ಲವೂ ಬಹಳ ಚೆನ್ನಾಗಿ ಧಾರಣೆ ಮಾಡುವ ಮಾತುಗಳಾಗಿವೆ. ತಂದೆಯು ತಿಳಿಸುತ್ತಾರೆ - ನಾನು ನಿಮಗೆ ರಾಜಯೋಗವನ್ನು ಕಲಿಸುತ್ತೇನೆ, ಇದು ಸತ್ಯ-ಸತ್ಯವಾದ ಅಮರಕಥೆಯನ್ನು ತಿಳಿಸುತ್ತೇನೆ. ಕೇವಲ ಒಬ್ಬ ಪಾರ್ವತಿಗೆ ಅಮರಕಥೆಯನ್ನು ತಿಳಿಸಿರುವುದಿಲ್ಲ, ಎಷ್ಟೊಂದು ಮಂದಿ ಅಮರನಾಥಕ್ಕೆ ಹೋಗುತ್ತಾರೆ, ನೀವು ಮಕ್ಕಳು ರಿಫ್ರೆಷ್ ಆಗಲು ತಂದೆಯ ಬಳಿ ಬಂದಿದ್ದೀರಿ. ಇದನ್ನು ಮತ್ತೆ ಎಲ್ಲರಿಗೂ ತಿಳಿಸಬೇಕು, ಹೋಗಿ ರಿಫ್ರೆಷ್ ಮಾಡಬೇಕಾಗಿದೆ, ಸೇವಾಕೇಂದ್ರಗಳನ್ನು ತೆರೆಯಬೇಕಾಗಿದೆ. ತಂದೆಯು ತಿಳಿಸುತ್ತಾರೆ - ಕೇವಲ ಮೂರುಹೆಜ್ಜೆಗಳಷ್ಟು ಭೂಮಿಯನ್ನು ತೆಗೆದುಕೊಂಡು ಈ ಹಾಸ್ಪಿಟಲ್ ಕಮ್ ಯೂನಿರ್ಸಿಟಿಯನ್ನು ತೆರೆಯಿರಿ ಅದರಿಂದ ಅನೇಕರ ಕಲ್ಯಾಣವಾಗುವುದು. ಇದರಲ್ಲಿ ಏನೂ ಖರ್ಚಿಲ್ಲ. ಆರೋಗ್ಯ-ಐಶ್ವರ್ಯ ಮತ್ತು ಆನಂದವು ಒಂದುಸೆಕೆಂಡಿನಲ್ಲಿ ಸಿಕ್ಕಿಬಿಡುತ್ತದೆ. ಮಗು ಜನಿಸಿತೆಂದರೆ ವಾರಸುಧಾರನಾಯಿತು, ನಿಮಗೂ ಸಹ ನಿಶ್ಚಯವಾಯಿತು ಮತ್ತು ವಿಶ್ವದ ಮಾಲೀಕರಾದಿರಿ ಮತ್ತೆ ಪುರುಷಾರ್ಥದ ಮೇಲೆ ಆಧಾರಿತವಾಗಿದೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ತಂದೆಯ ಆತ್ಮಿಕ ಮಕ್ಕಳಿಗೆ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ಅಂತಿಮ ರಕ್ತಪಾತದ ದೃಶ್ಯವನ್ನು ನೋಡಲು ಬಹಳ-ಬಹಳ ನಿರ್ಭಯ, ಶಿವಶಕ್ತಿಯರಾಗಬೇಕಾಗಿದೆ. ಸರ್ವಶಕ್ತಿವಂತ ತಂದೆಯ ನೆನಪಿನಿಂದ ಶಕ್ತಿಯನ್ನು ತೆಗೆದುಕೊಳ್ಳಬೇಕಾಗಿದೆ.

2. ಪಾವನರಾಗಿ ಅನ್ಯರನ್ನೂ ಪಾವನರನ್ನಾಗಿ ಮಾಡುವ ಆತ್ಮೀಯ ಸತ್ಯಸೇವೆಯನ್ನು ಮಾಡಬೇಕಾಗಿದೆ. ಡಬಲ್ ಅಹಿಂಸಕರಾಗಬೇಕಾಗಿದೆ, ಅಂಧರಿಗೆ ಊರುಗೋಲಾಗಿ ಎಲ್ಲರಿಗೆ ಮನೆಯ ಮಾರ್ಗವನ್ನು ತಿಳಿಸಬೇಕಾಗಿದೆ.

ವರದಾನ:
ನಾನು ಮತ್ತು ನನ್ನತನವನ್ನು ಸಮಾಪ್ತಿ ಮಾಡಿ ಸಮಾನತೆ ಅಥವಾ ಸಂಪೂರ್ಣತೆಯ ಅನುಭವ ಮಾಡುವಂತಹ ಸತ್ಯ ತ್ಯಾಗಿ ಭವ

ಪ್ರತಿ ಸೆಕೆಂಡ್, ಪ್ರತಿ ಸಂಕಲ್ಪದಲ್ಲಿ ಬಾಬಾ-ಬಾಬಾ ನೆನಪಿನಲ್ಲಿರಲಿ, ನನ್ನ ತನ ಸಮಾಪ್ತಿಯಾಗಿ ಬಿಡಲಿ, ಯಾವಾಗ ನಾನೇ ಇಲ್ಲ ಎಂದಮೇಲೆ ನನ್ನದೂ ಇಲ್ಲ. ನನ್ನ ಸ್ವಭಾವ, ನನ್ನ ಸಂಸ್ಕಾರ, ನನ್ನ ನೇಚರ್, ನನ್ನ ಕೆಲಸ ಅಥವಾ ಡ್ಯೂಟಿ, ನನ್ನ ಹೆಸರು, ನನ್ನ ಕೀರ್ತಿ ...... ಯಾವಾಗ ಈ ನಾನು ಮತ್ತು ನನ್ನತನ ಸಮಾಪ್ತಿಯಾಗಿ ಬಿಡುತ್ತದೆ ಆಗ ಇದೇ ಸಮಾನತೆ ಮತ್ತು ಸಂಪೂರ್ಣತೆಯಾಗಿದೆ. ಈ ನಾನು ಮತ್ತು ನನ್ನತನದ ತ್ಯಾಗವೇ ದೊಡ್ಡದರಲ್ಲಿ ದೊಡ್ಡ ಸೂಕ್ಷ್ಮ ತ್ಯಾಗವಾಗಿದೆ. ಈ ನನ್ನತನವೆಂಬ ಅಶ್ವವನ್ನು ಅಶ್ವಮೇಧ ಯಜ್ಞದಲ್ಲಿ ಸ್ವಾಹ ಮಾಡಿ ಯಾವಾಗ ಅಂತಿಮ ಆಹುತಿ ಬೀಳುವುದು ಆಗ ವಿಜಯದ ನಗಾರಿ ಭಾರಿಸುವುದು.

ಸ್ಲೋಗನ್:
ಹಾ ಜೀ ಎನ್ನುತ್ತಾ ಸಹಯೋಗದ ಕೈಯನ್ನು ಮುಂದೆ ಚಾಚುವುದು ಅರ್ಥಾತ್ ಆಶೀರ್ವಾದ ಮಾಲೆಯನ್ನು ಧರಿಸುವುದಾಗಿದೆ.

ತಮ್ಮ ಶಕ್ತಿಶಾಲಿ ಮನಸ್ಸಾ ಮೂಲಕ ಸಕಾಶ ಕೊಡುವ ಸೇವೆಯನ್ನು ಮಾಡಿರಿ

ಮನಸ್ಸಾ ಮೂಲಕ ಸಕಾಶ ಯಾವಾಗ ಕೊಡಲು ಸಾಧ್ಯವೆಂದರೆ ನಿರಂತರ ಏಕರಸ ಸ್ಥಿತಿಯಲ್ಲಿ ಸ್ಥಿತರಾಗುವ ಅಭ್ಯಾಸವಾದಾಗ. ಇದಕ್ಕಾಗಿ ಮೊದಲು ವ್ಯರ್ಥ ಸಂಕಲ್ಪಗಳನ್ನು ಶುದ್ಧ ಸಂಕಲ್ಪಗಳಲ್ಲಿ ಪರಿವರ್ತನೆ ಮಾಡಿ. ನಂತರ ಮಾಯೆ ಮೂಲಕ ಬರುವಂತಹ ಅನೇಕ ಪ್ರಕಾರದ ವಿಘ್ನಗಳನ್ನು ಈಶ್ವರೀಯ ಲಗನ್ನ ಆಧಾರದಿಂದ ಸಮಾಪ್ತಿ ಮಾಡಿ. ಒಬ್ಬ ತಂದೆ ಬಿಟ್ಟರೆ ಬೇರೆ ಯಾರಿಲ್ಲ ಪಾಠದ ಏಕಾಗ್ರತೆಯ ಶಕ್ತಿಯನ್ನು ಹೆಚ್ಚಿಸಿ.