28.01.25 Morning Kannada Murli Om Shanti
BapDada Madhuban
“ಮಧುರ ಮಕ್ಕಳೇ -
ಪಾಸ್-ವಿತ್-ಆನರ್ ಆಗಬೇಕೆಂದರೆ ಶ್ರೀಮತದಂತೆ ನಡೆಯುತ್ತಾ ಇರಿ, ಕುಸಂಗ ಮತ್ತು ಮಾಯೆಯ
ಬಿರುಗಾಳಿಯಿಂದ ತನ್ನನ್ನು ರಕ್ಷಣೆ ಮಾಡಿಕೊಳ್ಳಿ”
ಪ್ರಶ್ನೆ:
ತಂದೆಯು ಮಕ್ಕಳ
ಯಾವ ಸೇವೆಯನ್ನು ಮಾಡಿದ್ದಾರೆ, ಅದು ಮಕ್ಕಳೂ ಸಹ ಮಾಡಬೇಕಾಗುತ್ತದೆ?
ಉತ್ತರ:
ತಂದೆಯು
ಮುದ್ದಾದ ಮಕ್ಕಳೇ ಎಂದು ಹೇಳಿ ವಜ್ರಸಮಾನರನ್ನಾಗಿ ಮಾಡುವಂತಹ ಸೇವೆಯನ್ನು ಮಾಡುತ್ತಾರೆ. ಹಾಗೆಯೇ
ನಾವು ಮಕ್ಕಳಿಗೂ ಸಹ ತಮ್ಮ ಮಧುರ ಸಹೋದರರನ್ನು ವಜ್ರಸಮಾನರನ್ನಾಗಿ ಮಾಡಬೇಕು. ಇದರಲ್ಲಿ ಯಾವುದೇ
ತೊಂದರೆಯ ಮಾತಿಲ್ಲ. ಕೇವಲ ಒಬ್ಬ ತಂದೆಯನ್ನು ನೆನಪು ಮಾಡಿದ್ದೇ ಆದರೆ ವಜ್ರಸಮಾನರಾಗುತ್ತೀರೆಂದು
ಹೇಳಬೇಕು.
ಪ್ರಶ್ನೆ:
ತಂದೆಯು ಯಾವ
ಆದೇಶವನ್ನು ತನ್ನ ಮಕ್ಕಳಿಗೆ ಕೊಟ್ಟಿದ್ದಾರೆ?
ಉತ್ತರ:
ಮಕ್ಕಳೇ, ನೀವು ಸತ್ಯಸಂಪಾದನೆಯನ್ನು ಮಾಡಿಕೊಳ್ಳಿ ಮತ್ತು ಮಾಡಿಸಿರಿ. ನಿಮಗೆ ಯಾರಿಂದಲೂ ಸಹ ಸಾಲ
ತೆಗೆದುಕೊಳ್ಳಲು ಅನುಮತಿಯಿಲ್ಲ.
ಗೀತೆ:
ಈ ಪಾಪದ
ಪ್ರಪಂಚದಿಂದ........................
ಓಂ ಶಾಂತಿ.
ಹೊಸ ಪ್ರಪಂಚದಲ್ಲಿ ಹೋಗುವಂತಹ ಮಧುರಾತಿ ಮಧುರ ಆತ್ಮೀಯ ಮಕ್ಕಳಪ್ರತಿ ತಂದೆಯು ಬೆಳಗಿನ ವಂದನೆಗಳನ್ನು
ಮಾಡುತ್ತಿದ್ದಾರೆ. ಆತ್ಮೀಯ ಮಕ್ಕಳು ನಂಬರ್ವಾರ್ ಪುರುಷಾರ್ಥದನುಸಾರ ತಿಳಿದುಕೊಂಡಿದ್ದಾರೆ - ನಾವು
ಈ ಪ್ರಪಂಚದಿಂದ ದೂರಹೋಗುತ್ತಿದ್ದೇವೆ. ಎಲ್ಲಿಗೆ? ತಮ್ಮ ಮಧುರ ಶಾಂತಿಯ ಮನೆಗೆ. ಶಾಂತಿಧಾಮವೇ
ದೂರವಿದೆ, ಎಲ್ಲಿಂದ ನಾವು ಆತ್ಮರು ಬರುತ್ತೇವೆ ಅದು ಮೂಲವತನವಾಗಿದೆ, ಇದು ಸ್ಥೂಲವತನವಾಗಿದೆ. ಅದು
ನಾವಿರುವ ಆತ್ಮಗಳ ಮನೆಯಾಗಿದೆ, ಆ ಮನೆಯಲ್ಲಿ ತಂದೆಯ ವಿನಃ ಮತ್ತ್ಯಾರೂ ಕರೆದುಕೊಂಡು ಹೋಗಲು
ಸಾಧ್ಯವಿಲ್ಲ. ನೀವು ಎಲ್ಲಾ ಬ್ರಾಹ್ಮಣ-ಬ್ರಾಹ್ಮಿಣಿಯರು ಆತ್ಮೀಯ ಸೇವೆಯನ್ನು ಮಾಡುತ್ತಿದ್ದೀರಿ.
ಯಾರು ಕಲಿಸಿದರು? ದೂರದಲ್ಲಿ ಕರೆದುಕೊಂಡು ಹೋಗುವ ತಂದೆ. ಎಷ್ಟು ದೂರ ಕರೆದುಕೊಂಡು ಹೋಗುತ್ತಾರೆ?
ಎಣಿಸಲಾರದಷ್ಟು. ಒಬ್ಬ ಪಂಡ (ಮಾರ್ಗದರ್ಶಕ) ನ ಮಕ್ಕಳು ನೀವೂ ಸಹ ಪಂಡರಾಗಿದ್ದೀರಿ. ನಿಮ್ಮ ಹೆಸರೇ
ಪಾಂಡವಸೇನೆಯಾಗಿದೆ. ನೀವು ಮಕ್ಕಳು ಪ್ರತಿಯೊಬ್ಬರನ್ನೂ ದೂರ ಕರೆದುಕೊಂಡು ಹೋಗಲು ಯುಕ್ತಿಯನ್ನು
ತಿಳಿಸುತ್ತೀರಿ - ಮನ್ಮನಾಭವ. ತಂದೆಯನ್ನು ನೆನಪು ಮಾಡಿ. ತಂದೆ, ಈ ಪ್ರಪಂಚದಿಂದ ಎಲ್ಲಾದರೂ ದೂರ
ಕರೆದುಕೊಂಡು ಹೋಗಿ ಎಂದು ಹೇಳುತ್ತಾರೆ. ಹೊಸಪ್ರಪಂಚದಲ್ಲಾದರೂ ಈ ರೀತಿ ಹೇಳುವುದಿಲ್ಲ. ಇದು
ರಾವಣರಾಜ್ಯ, ಇದರಿಂದ ದೂರ ಕರೆದುಕೊಂಡು ಹೋಗಿ, ಇಲ್ಲಿ ಶಾಂತಿಯಿಲ್ಲ ಎಂದು ಹೇಳುತ್ತಾರೆ. ಇದರ
ಹೆಸರೇ ದುಃಖಧಾಮವಾಗಿದೆ. ಈಗ ತಂದೆಯು ತಮಗೆ ಯಾವುದೇ ಮೋಸಮಾಡುವುದಿಲ್ಲ. ಭಕ್ತಿಮಾರ್ಗದಲ್ಲಿ
ತಂದೆಯನ್ನು ಹುಡುಕಲು ನೀವು ಎಷ್ಟೊಂದು ಪೆಟ್ಟುತಿನ್ನುತ್ತೀರಿ. ನಾನು ಗುಪ್ತನಾಗಿದ್ದೇನೆ ಎಂದು
ತಂದೆಯು ತಾವೇ ಹೇಳುತ್ತಾರೆ. ಈ ಕಣ್ಣಿನಿಂದ ಯಾರೂ ನನ್ನನ್ನು ನೋಡಲು ಸಾಧ್ಯವಿಲ್ಲ. ಕೃಷ್ಣನ
ಮಂದಿರದಲ್ಲಿ ತಲೆಬಾಗಲು ಪಾದವನ್ನಿಡುತ್ತಾರೆ. ನೀವು ನಮಸ್ಕರಿಸಲು ನನಗಾದರೂ ಪಾದಗಳೇ ಇಲ್ಲ.
ನಿಮ್ಮನ್ನು ಮುದ್ದಾದಂತಹ ಮಕ್ಕಳೆ ಎಂದು ಕರೆಯುತ್ತೇನೆ. ನೀವೂ ಸಹ ಅನ್ಯರನ್ನು ಮಧುರರಾದಂತಹ
ಸಹೋದರರೆ, ಪಾರಲೌಕಿಕ ತಂದೆಯನ್ನು ನೆನಪು ಮಾಡಿದ್ದೇ ಆದರೆ ವಿಕರ್ಮವಿನಾಶವಾಗುತ್ತದೆ ಎಂದು
ಹೇಳುತ್ತೀರಿ ಮತ್ತೆ ಯಾವುದೇ ಕಷ್ಟವಿಲ್ಲ. ಹೇಗೆ ತಂದೆಯು ವಜ್ರಸಮಾನರನ್ನಾಗಿ ಮಾಡುತ್ತಾರೆ, ಮಕ್ಕಳೂ
ಸಹ ಅನ್ಯರನ್ನು ವಜ್ರಸಮಾನರನ್ನಾಗಿ ಮಾಡುತ್ತಾರೆ. ಇದನ್ನೇ ಕಲಿಯಬೇಕಾಗಿದೆ. ಮನುಷ್ಯರನ್ನು
ವಜ್ರಸಮಾನರನ್ನಾಗಿ ಹೇಗೆ ಮಾಡಲಿ? ಡ್ರಾಮಾನುಸಾರ ಕಲ್ಪದ ಹಿಂದಿನಂತೆ ಕಲ್ಪ-ಕಲ್ಪವೂ ಸಂಗಮಯುಗದಲ್ಲಿ
ತಂದೆಯು ಬಂದು ನಮಗೆ ಕಲಿಸುತ್ತಾರೆ. ಮತ್ತೆ ನಾವು ಅನ್ಯರಿಗೆ ಕಲಿಸುತ್ತೇವೆ. ತಂದೆಯು
ವಜ್ರಸಮಾನರನ್ನಾಗಿ ಮಾಡುತ್ತಿದ್ದಾರೆ, ನಿಮಗೆ ತಿಳಿದಿದೆ - ಕೋಜಾಗಳ ಗುರು ಆಗಾಖಾನನನ್ನು
ಚಿನ್ನ-ಬೆಳ್ಳಿ, ವಜ್ರದಿಂದ ತುಲಾಭಾರ ಮಾಡಲಾಯಿತು. ನೆಹರೂರವರನ್ನೂ ಸಹ ಚಿನ್ನದಿಂದ ತುಲಾಭಾರ
ಮಾಡಲಾಗಿತ್ತು, ಅವರು ವಜ್ರಸಮಾನರನ್ನಾಗಿ ಮಾಡುವವರಾಗಿರಲಿಲ್ಲ. ತಂದೆಯು ನಿಮ್ಮನ್ನು
ವಜ್ರಸಮಾನರನ್ನಾಗಿ ಮಾಡುತ್ತಾರೆ. ಅವರನ್ನು ನೀವು ಯಾವುದರಿಂದ ತುಲಾಭಾರ ಮಾಡುತ್ತೀರಿ? ನೀವು ವಜ್ರ
ಮುಂತಾದೇನನ್ನು ಇಡುತ್ತೀರಿ? ನಿಮಗೆ ಇದರ ಅವಶ್ಯಕತೆಯೇ ಇಲ್ಲ. ಅವರು ರೇಸ್ ಮುಂತಾದುವುದರಲ್ಲಿ
ಬಹಳಷ್ಟು ಹಣವನ್ನು ಉಡಾಯಿಸುತ್ತಾರೆ. ಮನೆ, ಆಸ್ತಿ ಎಲ್ಲವನ್ನೂ ಮಾಡಿಕೊಳ್ಳುತ್ತಿರುತ್ತಾರೆ. ನೀವು
ಮಕ್ಕಳಂತೂ ಸತ್ಯಸಂಪಾದನೆ ಮಾಡಿಕೊಳ್ಳುತ್ತೀರಿ. ನೀವು ಯಾರಿಂದಲಾದರೂ ಬೇಡುತ್ತೀರೆಂದರೆ ಮತ್ತೆ 21
ಜನ್ಮಗಳಿಗಾಗಿ ತುಂಬಿಕೊಡಬೇಕಾಗುತ್ತದೆ. ನಿಮಗೆ ಯಾರಿಂದಲೂ ಬೇಡುವ ನಿಯಮವಿಲ್ಲ. ನೀವು
ತಿಳಿದುಕೊಂಡಿದ್ದೀರಿ - ಈ ಸಮಯದಲ್ಲಿ ಸುಳ್ಳು ಸಂಪಾದನೆಯಾಗಿದೆ, ಎಲ್ಲವೂ ಸಮಾಪ್ತಿಯಾಗುವುದಿದೆ.
ತಂದೆಯು (ಬ್ರಹ್ಮಾ) ನೋಡಿದರು - ಇವಂತೂ ಕವಡೆಗಳಾಗಿವೆ, ನಮಗೆ ಸತ್ಯಯುಗದಲ್ಲಿ ವಜ್ರಗಳು
ಸಿಗುತ್ತವೆಯೆಂದರೆ ಈ ಕವಡೆಗಳೇತಕ್ಕೆ? ಬೇಹದ್ದಿನ ತಂದೆಯಿಂದ ಆಸ್ತಿಯನ್ನೇಕೆ ಪಡೆಯಬಾರದು ಎಂದು
ನಿಶ್ಚಯ ಮಾಡಿಕೊಂಡೆವು. ಹೊಟ್ಟೆಗೆ ಊಟವಂತೂ ಸಿಕ್ಕಿಯೇ ಸಿಗುತ್ತದೆ. ಒಂದು ನಾಣ್ಣುಡಿಯೂ ಇದೆ -
ಯಾರ ಕೈ ದಾನ ಮಾಡುವುದಾಗಿರುವುದೋ ಅವರಿಗೆ ಎಂದೂ ಬಡತನವು ಬರುವುದಿಲ್ಲ....... ಅಂತಹವರು ಮೊದಲ
ನಂಬರನ್ನು ಪಡೆಯುತ್ತಾರೆ. ತಂದೆಗೆ ಅಕ್ಕಸಾಲಿಗನೆಂತಲೂ ಹೇಳುತ್ತಾರಲ್ಲವೆ ಆದ್ದರಿಂದ ತಂದೆಯು
ತಿಳಿಸುತ್ತಾರೆ - ನಿಮ್ಮ ಹಳೆಯ ವಸ್ತ್ರಗಳನ್ನು ಅದಲು-ಬದಲು ಮಾಡುತ್ತೇನೆ. ಯಾರಾದರೂ ಶರೀರಬಿಟ್ಟರೆ
ಹಳೆಯ ವಸ್ತ್ರಗಳನ್ನು ಕ್ರಿಯಾಕರ್ಮ ಮಾಡುತ್ತಾರಲ್ಲವೆ. ತಂದೆಯು ತಿಳಿಸುತ್ತಾರೆ - ನಾನು ನಿಮ್ಮಿಂದ
ಏನನ್ನು ತೆಗೆದುಕೊಳ್ಳುತ್ತೇನೆ. ಈ ಮಾದರಿಯನ್ನು ನೋಡಿ-ದ್ರೌಪದಿಯು ಒಬ್ಬರೇ ಇರಲಿಲ್ಲ, ನೀವೆಲ್ಲರೂ
ದ್ರೌಪದಿಯರಾಗಿದ್ದೀರಿ. ಬಾಬಾ, ನಮ್ಮನ್ನು ಅಪವಿತ್ರರಾಗುವುದರಿಂದ ರಕ್ಷಿಸಿ ಎಂದು ಬಹಳ
ಕರೆಯುತ್ತಾರೆ ಆದ್ದರಿಂದ ತಂದೆಯು ಎಷ್ಟು ಪ್ರೀತಿಯಿಂದ ತಿಳಿಸಿಕೊಡುತ್ತಾರೆ - ಮಕ್ಕಳೇ, ಈ
ಅಂತಿಮಜನ್ಮದಲ್ಲಿ ಪವಿತ್ರರಾಗಿ. ಹೇಗೆ ಲೌಕಿಕ ತಂದೆಯೂ ಸಹ ಮಕ್ಕಳಿಗೆ ಹೇಳುತ್ತಾರಲ್ಲವೆ - ನನಗಾದರೂ
ಮರ್ಯಾದೆಯನ್ನು ಕೊಡಿ, ಕುಲಕ್ಕೆ ಕಳಂಕ ತರಬೇಡಿ ಎಂದು. ನೀವು ಮಧುರಾತಿ ಮಧುರ ಮಕ್ಕಳಿಗೆ ಎಷ್ಟೊಂದು
ನಶೆಯಿರಬೇಕು! ತಂದೆಯು ನಿಮ್ಮನ್ನು ವಜ್ರಸಮಾನರನ್ನಾಗಿ ಮಾಡುತ್ತಾರೆ. ಇವರನ್ನೂ ಸಹ ತಂದೆಯೇ
ವಜ್ರಸಮಾನರನ್ನಾಗಿ ಮಾಡುತ್ತಾರೆ ಅಂದಮೇಲೆ ಅವರನ್ನು ನೆನಪು ಮಾಡಬೇಕಾಗಿದೆ. ಈ ಬ್ರಹ್ಮಾತಂದೆಯೂ ಸಹ
ತಿಳಿಸುತ್ತಾರೆ - ನನ್ನನ್ನು ನೆನಪು ಮಾಡುವುದರಿಂದ ನಿಮ್ಮ ವಿಕರ್ಮಗಳು ವಿನಾಶವಾಗುವುದಿಲ್ಲ. ನಾನು
ನಿಮ್ಮ ಗುರುವಲ್ಲ, ತಂದೆಯು ನನಗೆ ಕಲಿಸುತ್ತಾರೆ, ನಾನು ಮತ್ತೆ ನಿಮಗೆ ಕಲಿಸಿಕೊಡುತ್ತೇನೆ.
ವಜ್ರಸಮಾನರಾಗಬೇಕೆಂದರೆ ತಂದೆಯನ್ನು ನೆನಪು ಮಾಡಿ.
ತಂದೆಯು ತಿಳಿಸಿದ್ದಾರೆ
- ಭಕ್ತಿಮಾರ್ಗದಲ್ಲಿ ಭಲೆ ಯಾವುದೇ ದೇವತೆಯ ಭಕ್ತಿಮಾಡುತ್ತಿರುತ್ತಾರೆ ಆದರೂ ಸಹ ಬುದ್ಧಿಯು ಅಂಗಡಿ,
ಉದ್ಯೋಗ-ವ್ಯವಹಾರಗಳ ಕಡೆ ಓಡುತ್ತಿರುತ್ತದೆ ಏಕೆಂದರೆ ಅದರಿಂದ ಸಂಪಾದನೆಯಾಗುತ್ತದೆ. ತಂದೆಯು ತಮ್ಮ
ಅನುಭವವನ್ನೂ ಸಹ ತಿಳಿಸುತ್ತಾರೆ - ಯಾವಾಗ ಬುದ್ಧಿಯು ಅಲ್ಲಿ-ಇಲ್ಲಿ ಓಡುತ್ತಿತ್ತೋ ಆಗ ಈ ನೆನಪು
ಏಕೆ ಬರುತ್ತದೆಯೆಂದು ತನಗೆ ತಾನು ಏಟನ್ನು ಕೊಟ್ಟುಕೊಳ್ಳುತ್ತಿದ್ದೆನು. ಅಂದಾಗ ಈಗ ನಾವಾತ್ಮಗಳು
ತಂದೆಯೊಬ್ಬರನ್ನೇ ನೆನಪು ಮಾಡಬೇಕಾಗಿದೆ ಆದರೆ ಮಾಯೆಯು ಪದೇ-ಪದೇ ಮರೆಸಿಬಿಡುತ್ತದೆ,
ಪೆಟ್ಟುಬೀಳುತ್ತದೆ. ಮಾಯೆಯು ಬುದ್ಧಿಯೋಗವನ್ನು ತುಂಡರಿಸುತ್ತದೆ. ಹೀಗ್ಹೀಗೆ ತಮ್ಮೊಂದಿಗೆ
ಮಾತನಾಡಿಕೊಳ್ಳಬೇಕು. ತಂದೆಯು ತಿಳಿಸುತ್ತಾರೆ - ಈಗ ತಮ್ಮ ಕಲ್ಯಾಣ ಮಾಡಿಕೊಳ್ಳುತ್ತೀರಿ ಅಂದಮೇಲೆ
ಅನ್ಯರ ಕಲ್ಯಾಣವನ್ನೂ ಮಾಡಿ, ಸೇವಾಕೇಂದ್ರಗಳನ್ನು ತೆರೆಯಿರಿ. ಬಾಬಾ, ಇಂತಹ ಸ್ಥಳದಲ್ಲಿ
ಸೇವಾಕೇಂದ್ರವನ್ನು ತೆರೆಯುವುದೇ ಎಂದು ಮಕ್ಕಳು ಕೇಳುತ್ತಾರೆ. ತಂದೆಯು ತಿಳಿಸುತ್ತಾರೆ - ನಾನಂತೂ
ದಾತನಾಗಿದ್ದೇನೆ, ನನಗೇನೂ ಅವಶ್ಯಕತೆಯಿಲ್ಲ, ಈ ಮನೆ ಮೊದಲಾದುವುಗಳನ್ನು ನೀವು ಮಕ್ಕಳಿಗಾಗಿಯೇ
ಮಾಡುತ್ತೀರಲ್ಲವೆ! ಶಿವತಂದೆಯಂತೂ ನಿಮ್ಮನ್ನು ವಜ್ರಸಮಾನರನ್ನಾಗಿ ಮಾಡಲು ಬಂದಿದ್ದಾರೆ. ನೀವು
ಏನೆಲ್ಲವನ್ನೂ ಮಾಡುತ್ತೀರೋ ಅದು ನಿಮ್ಮ ಕೆಲಸಕ್ಕೆ ಬರುತ್ತದೆ. ಶಿಷ್ಯರನ್ನು ಮಾಡಿಕೊಳ್ಳಲು ಇವರೇನು
ಗುರುಗಳಲ್ಲ. ಈ ಮನೆಗಳನ್ನು ಮಕ್ಕಳೇ ತಾವಿರುವುದಕ್ಕಾಗಿ ಮಾಡುತ್ತೀರಿ. ಹಾ! ಸಹಯೋಗ ಕೊಡುವವರು
ಬಂದಾಗ ತಾವು ಹೋಗಿ ಹೊಸಮನೆಯಲ್ಲಿ ಇರಿ ಎಂದು ಖಾತರಿ ಮಾಡಲಾಗುತ್ತದೆ. ಕೆಲವರಂತೂ ಹೇಳುತ್ತಾರೆ -
ನಾವು ಹೊಸಮನೆಯಲ್ಲೇಕೆ ಇರುವುದು? ನಮಗಂತೂ ಹಳೆಯದೇ ಇಷ್ಟವಾಗುವುದು. ಹೇಗೆ ತಾವಿರುತ್ತೀರೋ ಹಾಗೆಯೇ
ನಾವೂ ಇರುತ್ತೇವೆ. ನಾನು ದಾತನಾಗಿದ್ದೇನೆ, ಇಷ್ಟನ್ನು ಕೊಟ್ಟಿದ್ದೇನೆ ಎಂದು ಯಾವುದೇ
ಅಹಂಕಾರವಿಲ್ಲ. ಬಾಪ್ದಾದಾರವರೇ ಇರುವುದಿಲ್ಲವೆಂದರೆ ನಾನೇಕೆ ಇರಲಿ? ನಮ್ಮನ್ನೂ ಸಹ ತಮ್ಮ
ಜೊತೆಯಿಟ್ಟುಕೊಳ್ಳಿ. ಎಷ್ಟು ತಮ್ಮ ಸಮೀಪವಿರುತ್ತೇವೆಯೋ ಅಷ್ಟು ಒಳ್ಳೆಯದು.
ತಂದೆಯು ತಿಳಿಸುತ್ತಾರೆ
- ಎಷ್ಟು ಪುರುಷಾರ್ಥ ಮಾಡುತ್ತೀರೋ ಅಷ್ಟು ಸುಖಧಾಮದಲ್ಲಿ ಶ್ರೇಷ್ಠಪದವಿಯನ್ನು ಪಡೆಯುವಿರಿ.
ಸ್ವರ್ಗದಲ್ಲಂತೂ ಎಲ್ಲರೂ ಹೋಗುವಿರಲ್ಲವೆ. ಭಾರತವಾಸಿಗಳಿಗೆ ತಿಳಿದಿದೆ - ಭಾರತವು ಪುಣ್ಯಾತ್ಮರ
ಪ್ರಪಂಚವಾಗಿತ್ತು, ಪಾಪದ ಹೆಸರು ಇರಲಿಲ್ಲ. ಈಗಂತೂ ಎಲ್ಲರೂ ಪಾಪಾತ್ಮರಾಗಿಬಿಟ್ಟಿದ್ದಾರೆ. ಇದು
ರಾವಣರಾಜ್ಯವಾಗಿದೆ, ಸತ್ಯಯುಗದಲ್ಲಿ ರಾವಣನಿರುವುದಿಲ್ಲ. ರಾವಣರಾಜ್ಯವಾಗುವುದೇ ಅರ್ಧಕಲ್ಪದ ನಂತರ.
ತಂದೆಯು ಇಷ್ಟು ತಿಳಿಸಿದರೂ ಸಹ ತಿಳಿದುಕೊಳ್ಳುವುದಿಲ್ಲ. ಕಲ್ಪ-ಕಲ್ಪವೂ ಇದೇ ರೀತಿಯಾಗುತ್ತಾ
ಬಂದಿದೆ, ಹೊಸಮಾತಿಲ್ಲ. ನೀವು ಪ್ರದರ್ಶನಿಗಳನ್ನು ಮಾಡುತ್ತೀರಿ, ಅದರಲ್ಲಿ ಎಷ್ಟೊಂದು ಮಂದಿ
ಬರುತ್ತಾರೆ. ಪ್ರಜೆಗಳಂತೂ ಅನೇಕರು ಆಗುವರು ಆದರೆ ವಜ್ರಸಮಾನರಾಗುವುದರಲ್ಲಿ ಸಮಯ ಹಿಡಿಸುತ್ತದೆ.
ಪ್ರಜೆಗಳಾದರೂ ಸಹ ಒಳ್ಳೆಯದೆ. ಈಗ ಇದು ಅಂತಿಮ ಸಮಯವಾಗಿದೆ. ಎಲ್ಲರ ಲೆಕ್ಕಾಚಾರಗಳು
ಸಮಾಪ್ತಿಯಾಗುತ್ತದೆ. ಅಷ್ಟರತ್ನಗಳ ಮಾಲೆಯು ಪಾಸ್-ವಿತ್-ಆನರ್ ಆಗುವವರದಾಗಿದೆ. ಅಷ್ಟರತ್ನಗಳೇ
ನಂಬರ್ವನ್ನಲ್ಲಿ ಬರುತ್ತಾರೆ. ಅವರಿಗೆ ಸ್ವಲ್ಪವೂ ಶಿಕ್ಷೆಯು ಸಿಗುವುದಿಲ್ಲ, ಕರ್ಮಾತೀತ
ಸ್ಥಿತಿಯನ್ನು ಪಡೆಯುತ್ತಾರೆ ನಂತರ 108ರ ಮಾಲೆಗೆ ನಂಬರ್ವಾರ್ ಎಂದು ಹೇಳಲಾಗುತ್ತದೆ. ಇದು
ಮಾಡಿ-ಮಾಡಲ್ಪಟ್ಟ ಅನಾದಿ ನಾಟಕವಾಗಿದೆ. ಇದನ್ನು ಸಾಕ್ಷಿಯಾಗಿ ಯಾರು ಚೆನ್ನಾಗಿ ಪುರುಷಾರ್ಥ
ಮಾಡುತ್ತಾರೆಂದು ನೋಡುತ್ತಾರೆ. ಕೆಲವು ಮಕ್ಕಳು ಕೊನೆಯಲ್ಲಿ ಬಂದರೂ ಸಹ ಶ್ರೀಮತದಂತೆ
ನಡೆಯುತ್ತಿರುತ್ತಾರೆ. ಇದೇ ರೀತಿ ಶ್ರೀಮತದಂತೆ ನಡೆಯುತ್ತಾ ಇದ್ದರೆ ಪಾಸ್-ವಿತ್-ಆನರ್ ಆಗಿ
ಅಷ್ಟರತ್ನಗಳ ಮಾಲೆಯಲ್ಲಿ ಬರಬಹುದಾಗಿದೆ. ಹಾ! ಕೆಲವೊಮ್ಮೆ ನಡೆಯುತ್ತಾ-ನಡೆಯುತ್ತಾ ಕೆಲವರ ಮೇಲೆ
ಗ್ರಹಚಾರವು ಬಂದುಬಿಡುತ್ತದೆ. ಈ ಬೀಳುವಿಕೆ-ಏಳುವಿಕೆಯು ಎಲ್ಲರ ಮುಂದೆ ಬರುತ್ತದೆ, ಇದು
ಸಂಪಾದನೆಯಾಗಿದೆ. ಕೆಲವೊಮ್ಮೆ ಬಹಳ ಖುಷಿಯಲ್ಲಿರುತ್ತಾರೆ, ಕೆಲವೊಮ್ಮೆ ಕಡಿಮೆ. ಮಾಯೆಯ ಬಿರುಗಾಳಿ
ಅಥವಾ ಕುಸ್ಸಂಗವು ಹಿಂದೆಳೆಯುತ್ತದೆ. ಖುಷಿಯೇ ಮರೆಯಾಗಿಬಿಡುತ್ತದೆ. ಸತ್ಸಂಗವು ಮೇಲೆತ್ತುವುದು,
ಕುಸ್ಸಂಗ ಕೆಳಗೆ ಬೀಳಿಸುವುದು ಎಂಬ ಗಾಯನವೂ ಇದೆ. ಈಗ ರಾವಣನ ಸಂಗವು ಬೀಳಿಸುತ್ತದೆ, ರಾಮನ ಸಂಗವು
ಮೇಲೆತ್ತುತ್ತದೆ. ರಾವಣನ ಮತದಿಂದ ಹೀಗೆ ಆಗಿದ್ದೀರಿ. ದೇವತೆಗಳೂ ಸಹ ವಾಮಮಾರ್ಗದಲ್ಲಿ ಹೋಗುತ್ತಾರೆ.
ಇದರಿಂದ ಅವರ ಚಿತ್ರಗಳನ್ನು ಕೆಟ್ಟದಾಗಿ ತೋರಿಸುತ್ತಾರೆ. ಇದು ವಾಮಮಾರ್ಗದಲ್ಲಿ ಹೋಗುವ
ಚಿಹ್ನೆಯಾಗಿದೆ, ಭಾರತದಲ್ಲಿಯೇ ರಾಮರಾಜ್ಯವಿತ್ತು, ಭಾರತದಲ್ಲಿಯೇ ಈಗ ರಾವಣರಾಜ್ಯವಿದೆ.
ರಾವಣರಾಜ್ಯದಲ್ಲಿ 100% ದುಃಖಿಯಾಗಿರುತ್ತಾರೆ, ಇದು ಆಟವಾಗಿದೆ. ಈ ಜ್ಞಾನವನ್ನು ಯಾರಿಗೆ ಬೇಕಾದರೂ
ತಿಳಿಸಲು ಬಹಳ ಸಹಜವಾಗಿದೆ.
(ನರ್ಸ್ ಒಬ್ಬರು ತಂದೆಯ
ಮುಂದೆ ಕುಳಿತಿದ್ದಾರೆ) ತಂದೆಯು ಈ ಮಗುವಿಗೆ ಹೇಳುತ್ತಾರೆ - ನೀವು ನರ್ಸ್ ಆಗಿದ್ದೀರಿ. ಆ
ಸೇವೆಯನ್ನು ಮಾಡುತ್ತಾ ಇರಿ ಜೊತೆಜೊತೆಗೆ ನೀವು ಈ ಸರ್ವೀಸನ್ನು ಮಾಡಬಹುದೇ? ರೋಗಿಗೂ ಸಹ ಈ
ಜ್ಞಾನವನ್ನು ತಿಳಿಸುತ್ತಾ ಇರಿ, ತಂದೆಯನ್ನು ನೆನಪು ಮಾಡಿದರೆ ವಿಕರ್ಮಗಳು ವಿನಾಶವಾಗುತ್ತವೆ. 21
ಜನ್ಮಗಳಿಗಾಗಿ ನೀವು ರೋಗಿಗಳಾಗುವುದಿಲ್ಲ. ಯೋಗದಿಂದಲೇ ಆರೋಗ್ಯ ಮತ್ತು ಈ 84 ಜನ್ಮಗಳ ಚಕ್ರವನ್ನು
ಅರಿತುಕೊಳ್ಳುವುದರಿಂದ ಐಶ್ವರ್ಯವು ಸಿಗುತ್ತದೆ. ನೀವಂತೂ ಬಹಳಷ್ಟು ಸರ್ವೀಸ್ ಮಾಡಬಲ್ಲಿರಿ. ಅನೇಕರ
ಕಲ್ಯಾಣ ಮಾಡಿ. ಹಣವನ್ನೂ ಸಹ ಈ ಆತ್ಮಿಕ ಸೇವೆಯಲ್ಲಿ ತೊಡಗಿಸಿ. ವಾಸ್ತವದಲ್ಲಿ ನೀವು ಮಕ್ಕಳೆಲ್ಲರೂ
ಸಹ ನರ್ಸ್ಗಳಾಗಿದ್ದೀರಿ. ಛೀ ಛೀ, ಕೊಳಕು ಮನುಷ್ಯರನ್ನು ದೇವತೆಗಳನ್ನಾಗಿ ಮಾಡುವುದು - ಇದು
ನರ್ಸ್ನ ಸಮಾನ ಮಾಡುವ ಸೇವೆಯಾಯಿತಲ್ಲವೆ. ತಂದೆಯೂ ಸಹ ತಿಳಿಸುತ್ತಾರೆ - ತಂದೆಯೇ ಬಂದು ನಮ್ಮನ್ನು
ಪಾವನ ಮಾಡಿ ಎಂದು ಪತಿತ ಮನುಷ್ಯರೇ ಕರೆಯುತ್ತಾರೆ. ನೀವೂ ಸಹ ಈ ರೋಗಿಗಳ ಸೇವೆ ಮಾಡಿ ಆಗ
ಬಲಿಹಾರಿಯಾಗುತ್ತಾರೆ. ನಿಮ್ಮ ಮೂಲಕ ಸಾಕ್ಷಾತ್ಕಾರವೂ ಆಗಬಹುದು. ಒಂದುವೇಳೆ ನೀವು
ಯೋಗಯುಕ್ತರಾಗಿದ್ದರೆ ದೊಡ್ಡ-ದೊಡ್ಡ ವೈದ್ಯರು ಮೊದಲಾದವರೆಲ್ಲರೂ ಸಹ ನಿಮ್ಮ ಚರಣಗಳಲ್ಲಿ ಬೀಳುವರು.
ನೀವು ಮಾಡಿ ನೋಡಿ. ಇಲ್ಲಿ ಮೋಡಗಳು ರಿಫ್ರೆಷ್ ಆಗಲು ಬರುತ್ತೀರಿ ಮತ್ತೆ ಹೋಗಿ ಮಳೆಯನ್ನು ಸುರಿಸಿ
ಅನ್ಯರನ್ನೂ ರಿಫ್ರೆಷ್ ಮಾಡುತ್ತೀರಿ. ಕೆಲವು ಮಕ್ಕಳಲ್ಲಿ ಮಳೆಯು ಎಲ್ಲಿಂದ ಬರುವುದೆಂದೂ ಸಹ
ತಿಳುವಳಿಕೆಯಿಲ್ಲ. ಇಂದ್ರನು ಮಳೆ ಸುರಿಸುತ್ತಾನೆ ಎಂದು ತಿಳಿಯುತ್ತಾರೆ. ಇಂದ್ರದನಸ್ಸು ಎಂದು
ತಿಳಿಯುತ್ತಾರಲ್ಲವೆ. ಶಾಸ್ತ್ರಗಳಲ್ಲಂತೂ ಎಷ್ಟೊಂದು ಮಾತುಗಳನ್ನು ಬರೆದಿದ್ದಾರೆ. ತಂದೆಯು
ತಿಳಿಸುತ್ತಾರೆ - ಇದೆಲ್ಲವೂ ನಾಟಕದಲ್ಲಿ ನಿಗಧಿಯಾಗಿದೆ, ಇವು ಕಲ್ಪದ ನಂತರವೂ ಆಗುವುದು. ನಾವು
ಯಾರದೇ ನಿಂದನೆ ಮಾಡುವುದಿಲ್ಲ ಏಕೆಂದರೆ ಇದು ಮಾಡಿ-ಮಾಡಲ್ಪಟ್ಟ ನಾಟಕವಾಗಿದೆ. ಇದು
ಭಕ್ತಿಮಾರ್ಗವೆಂದು ತಿಳಿಸಲಾಗುತ್ತದೆ. ಜ್ಞಾನ, ಭಕ್ತಿ, ವೈರಾಗ್ಯವೆಂದು ಹೇಳುತ್ತಾರೆ. ನೀವು
ಮಕ್ಕಳಿಗೆ ಈಗ ಈ ಹಳೆಯ ಪ್ರಪಂಚದಿಂದ ವೈರಾಗ್ಯವಿದೆ. ತಾವು ಸತ್ತರೆ ತಮ್ಮ ಪಾಲಿಗೆ ಜಗತ್ತೇ ಸತ್ತಂತೆ.
ಆತ್ಮವು ಶರೀರದಿಂದ ಬೇರೆಯಾಗಿಬಿಡುತ್ತದೆಯೆಂದರೆ ಅವರ ಪಾಲಿಗೆ ಪ್ರಪಂಚವೇ ಸಮಾಪ್ತಿಯಾಗುತ್ತದೆ.
ತಂದೆಯು ಮಕ್ಕಳಿಗೆ
ತಿಳಿಸುತ್ತಾರೆ - ಮಧುರ ಮಕ್ಕಳೇ, ವಿದ್ಯೆಯಲ್ಲಿ ಹುಡುಗಾಟಿಕೆ ಮಾಡಬೇಡಿ, ಎಲ್ಲವೂ ವಿದ್ಯೆಯ ಮೇಲೆ
ಆಧಾರಿತವಾಗಿದೆ. ವಕೀಲರಲ್ಲಿ ಕೆಲವರು ಲಕ್ಷ ರೂಪಾಯಿಗಳನ್ನು ಸಂಪಾದಿಸುತ್ತಾರೆ, ಇನ್ನೂ ಕೆಲವರಿಗೆ
ಧರಿಸಲು ಕೋಟೂ ಸಹ ಇರುವುದಿಲ್ಲ. ಎಲ್ಲವೂ ವಿದ್ಯೆಯ ಮೇಲೆ ಆಧಾರಿತವಾಗಿದೆ. ಈ ವಿದ್ಯೆಯು ಬಹಳ
ಸರಳವಾಗಿದೆ. ಕೇವಲ ಸ್ವದರ್ಶನ ಚಕ್ರಧಾರಿಗಳಾಗಬೇಕು ಅರ್ಥಾತ್ ತಮ್ಮ 84 ಜನ್ಮಗಳ
ಆದಿ-ಮಧ್ಯ-ಅಂತ್ಯವನ್ನು ಅರಿತುಕೊಳ್ಳಬೇಕಾಗಿದೆ. ಈಗ ಈ ಇಡೀ ವೃಕ್ಷದ್ದು ಜಡಜಡೀಭೂತ ಸ್ಥಿತಿಯಾಗಿದೆ.
ಈಗ ಇದರ ಬುನಾದಿಯೇ ಇಲ್ಲ ಬಾಕಿ ವೃಕ್ಷವೆಲ್ಲವೂ ನಿಂತಿದೆ. ಹಾಗೆಯೇ ಈ ಆದಿಸನಾತನ
ದೇವಿ-ದೇವತಾಧರ್ಮದ ಯಾವ ಬುಡವಿತ್ತೋ ಈಗ ಅದು ಇಲ್ಲ. ಧರ್ಮಭ್ರಷ್ಟರು,
ಕರ್ಮಭ್ರಷ್ಟರಾಗಿಬಿಟ್ಟಿದ್ದಾರೆ. ಮನುಷ್ಯರು ಯಾರಿಗೂ ಸದ್ಗತಿ ನೀಡಲು ಸಾಧ್ಯವಿಲ್ಲ. ತಂದೆಯು
ಕುಳಿತು ಇವೆಲ್ಲಾ ಮಾತುಗಳನ್ನು ತಿಳಿಸುತ್ತಾರೆ, ನೀವು ಸದಾಕಾಲಕ್ಕಾಗಿ ಸುಖಿಯಾಗಿಬಿಡುತ್ತೀರಿ.
ಎಂದೂ ಅಕಾಲಮೃತ್ಯುವಾಗುವುದಿಲ್ಲ. ಇಂತಹವರು ಸತ್ತುಹೋದರೆಂಬ ಶಬ್ಧವು ಅಲ್ಲಿ ಇಲ್ಲವೇ ಇಲ್ಲ,ತಂದೆಯು
ಸಲಹೆ ನೀಡುತ್ತಾರೆ - ಅನೇಕರಿಗೆ ಮಾರ್ಗ ತಿಳಿಸುತ್ತೀರೆಂದರೆ ಅವರು ನಿಮ್ಮ ಮೇಲೆ
ಬಲಿಹಾರಿಯಾಗುತ್ತಾರೆ. ಕೆಲವರಿಗೆ ಸಾಕ್ಷಾತ್ಕಾರವೂ ಆಗಬಹುದು. ಸಾಕ್ಷಾತ್ಕಾರವು ಕೇವಲ ಗುರಿಯಾಗಿದೆ
ಅದಕ್ಕಾಗಿ ಓದಲೂಬೇಕಾಗುತ್ತದೆ, ಓದದೇ ವಕೀಲರಾಗಿಬಿಡುತ್ತಾರೆಯೇ! ಸಾಕ್ಷಾತ್ಕಾರವಾಯಿತೆಂದರೆ
ಮುಕ್ತರಾಗಿಬಿಟ್ಟೆವೆಂದಲ್ಲ. ಮೀರಾಳಿಗೆ ಸಾಕ್ಷಾತ್ಕಾರವಾಯಿತು, ಹಾಗೆಂದು ಹೇಳಿ ಕೃಷ್ಣಪುರಿಯಲ್ಲಿ
ಹೊರಟುಹೋದಳೆಂದಲ್ಲ. ನೌಧಾಭಕ್ತಿ ಮಾಡುವುದರಿಂದ ಸಾಕ್ಷಾತ್ಕಾರವಾಗುತ್ತದೆ. ಇಲ್ಲಿ ಇದೂ ಸಹ
ನೌಧಾನೆನಪಾಗಿದೆ. ಸನ್ಯಾಸಿಗಳು ಮತ್ತೆ ಬ್ರಹ್ಮ್ ಜ್ಞಾನಿ-ತತ್ವಜ್ಞಾನಿಗಳಾಗಿಬಿಡುತ್ತಾರೆ. ಈಗ ನಾವು
ಬ್ರಹ್ಮ್ತತ್ವದಲ್ಲಿ ಲೀನವಾಗಬೇಕಷ್ಟೆ ಎಂದು ತಿಳಿಯುತ್ತಾರೆ ಆದರೆ ಬ್ರಹ್ಮ್ತತ್ವವಂತೂ
ಪರಮಾತ್ಮನಲ್ಲ.
ಮಕ್ಕಳೇ, ತಮ್ಮ ಶರೀರ
ನಿರ್ವಹಣೆಗಾಗಿ ಉದ್ಯೋಗ-ವ್ಯವಹಾರಗಳನ್ನು ಭಲೆ ಮಾಡಿ ಆದರೆ ತಮ್ಮನ್ನು ನಿಮಿತ್ತರೆಂದು ತಿಳಿದು ಮಾಡಿ
ಆಗ ಶ್ರೇಷ್ಠಪದವಿಯು ಸಿಗುವುದು. ಮತ್ತೆ ಮಮತ್ವವೂ ಕಳೆಯುವುದು. ಈ ಬಾಬಾರವರು ತೆಗೆದುಕೊಂಡು ಏನು
ಮಾಡುತ್ತಾರೆ? ಇವರಂತೂ ಎಲ್ಲವನ್ನೂ ತ್ಯಾಗ ಮಾಡಿದರಲ್ಲವೆ. ಮನೆ, ಮಹಲು ಇತ್ಯಾದಿಯೇನೂ
ಮಾಡಬೇಕಾಗಿಲ್ಲ. ಈ ಮನೆಗಳನ್ನು ಮಾಡುತ್ತಾರೆ ಏಕೆಂದರೆ ಬಹಳ ಮಂದಿ ಮಕ್ಕಳು ಮುಂದೆ ಬರುವರು,
ಅಬುರೋಡಿನಿಂದ ಇಲ್ಲಿಯವರೆಗೂ ಸಾಲು ನಿಲ್ಲುವುದು. ಈಗಲೇ ನಿಮ್ಮ ಪ್ರಭಾವವಾಗಿಬಿಟ್ಟರೆ ತಲೆಯನ್ನೇ
ಕೆಡಿಸಿಬಿಡುತ್ತಾರೆ.ಹಿರಿಯ ವ್ಯಕ್ತಿಗಳು ಬರುತ್ತಾರೆಂದರೆ ಅಲ್ಲಿ ಗುಂಪೇ ಸೇರುತ್ತದೆ. ನಿಮ್ಮ
ಪ್ರಭಾವವು ಅಂತ್ಯದಲ್ಲಾಗುವುದು, ಈಗಲ್ಲ. ತಂದೆಯನ್ನು ನೆನಪು ಮಾಡುವ ಅಭ್ಯಾಸ ಮಾಡಬೇಕಾಗಿದೆ,
ಅದರಿಂದ ಪಾಪಗಳು ಭಸ್ಮವಾಗಲಿ. ಹೀಗೆ ನೆನಪಿನಲ್ಲಿ ಶರೀರಬಿಡಬೇಕಾಗಿದೆ. ಸತ್ಯಯುಗದಲ್ಲಿ
ಶರೀರಬಿಡುತ್ತಾರೆ. ಒಂದನ್ನು ಬಿಟ್ಟು ಇನ್ನೊಂದು ಶರೀರವನ್ನು ತೆಗೆದುಕೊಳ್ಳುತ್ತೇವೆಂದು
ತಿಳಿಯುತ್ತಾರೆ. ಇಲ್ಲಂತೂ ಎಷ್ಟೊಂದು ದೇಹಾಭಿಮಾನವಿರುತ್ತದೆ. ಅಂತರವಿದೆಯಲ್ಲವೆ! ಇವೆಲ್ಲಾ
ಮಾತುಗಳನ್ನು ಬರೆದುಕೊಳ್ಳಬೇಕು ಮತ್ತು ಅನ್ಯರಿಗೂ ಬರೆಸಬೇಕಾಗಿದೆ. ಅನ್ಯರನ್ನೂ ಸಹ ತಮ್ಮಸಮಾನ
ವಜ್ರಸಮಾನರನ್ನಾಗಿ ಮಾಡಬೇಕಾಗಿದೆ. ಎಷ್ಟು ಪುರುಷಾರ್ಥ ಮಾಡುತ್ತೀರೋ ಅಷ್ಟು ಶ್ರೇಷ್ಠಪದವಿಯನ್ನು
ಪಡೆಯುತ್ತೀರಿ. ಇದನ್ನು ತಂದೆಯೇ ತಿಳಿಸುತ್ತಾರೆ, ಇವರು ಯಾವುದೇ ಸಾಧು-ಮಹಾತ್ಮರಲ್ಲ.
ಈ ಜ್ಞಾನವು ಬಹಳ ಮಜದಿಂದ
ಕೂಡಿದೆ, ಇದನ್ನು ಬಹಳ ಚೆನ್ನಾಗಿ ಧಾರಣೆ ಮಾಡಬೇಕಾಗಿದೆ. ತಂದೆಯಿಂದ ಕೇಳಿದೆವು ಮತ್ತೆ ಇಲ್ಲಿಯದು
ಇಲ್ಲಿಯೇ ಉಳಿಯಿತು ಎನ್ನುವಂತಾಗಬಾರದು. ಗೀತೆಯಲ್ಲಿಯೂ ಸಹ ಕೇಳಿದಿರಲ್ಲವೆ - ಜೊತೆಯಲ್ಲಿ
ಕರೆದುಕೊಂಡು ಹೋಗಿ ಎಂದು ಹೇಳುತ್ತಾರೆ. ನೀವು ಇದನ್ನು ಮೊದಲು ತಿಳಿದುಕೊಂಡಿರಲಿಲ್ಲ. ಈಗ ತಂದೆಯು
ತಿಳಿಸಿದ್ದಾರೆ ಆದ್ದರಿಂದ ತಿಳಿದುಕೊಂಡಿದ್ದೀರಿ. ಒಳ್ಳೆಯದು.
ಮಧುರಾತಿ ಮಧುರ ಅಗಲಿ
ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತಾ ಬಾಪ್ದಾದಾರವರ ನೆನಪು ಪ್ರೀತಿ ಹಾಗೂ
ನಮಸ್ತೆ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1.
ವಿದ್ಯಾಭ್ಯಾಸದಲ್ಲೆಂದೂ ಹುಡುಗಾಟಿಕೆ ಮಾಡಬಾರದು. ಸ್ವದರ್ಶನಚಕ್ರಧಾರಿಗಳಾಗಿರಬೇಕಾಗಿದೆ.
ವಜ್ರಸಮಾನರನ್ನಾಗಿ ಮಾಡುವ ಸೇವೆ ಮಾಡಬೇಕಾಗಿದೆ.
2. ಸತ್ಯಸಂಪಾದನೆ
ಮಾಡಿಕೊಳ್ಳಬೇಕು ಮತ್ತು ಅನ್ಯರಿಂದಲೂ ಮಾಡಿಸಬೇಕಾಗಿದೆ. ತಮ್ಮ ಎಲ್ಲಾ ಹಳೆಯ ವಸ್ತುಗಳನ್ನು
ಬದಲಾಯಿಸಬೇಕಾಗಿದೆ. ಕೆಟ್ಟಸಂಗದಿಂದ ತಮ್ಮ ಸಂಭಾಲನೆ ಮಾಡಿಕೊಳ್ಳಬೇಕಾಗಿದೆ.
ವರದಾನ:
ಜಗತ್ತಿನ
ಬೆಳಕಾಗಿ ಭಕ್ತರನ್ನು ದೃಷ್ಠಿಯಿಂದ ತೃಪ್ತರನ್ನಾಗಿ ಮಾಡುವಂತಹ ದರ್ಶನೀಯ ಮೂರ್ತಿ ಭವ
ಇಡೀ ವಿಶ್ವ ತಾವು
ಜಗತ್ತಿನ ಕಣ್ಣುಗಳಿಂದ ದೃಷ್ಠಿ ಪಡೆಯುವುದಕ್ಕಾಗಿ ಕಾತರರಾಗಿದ್ದಾರೆ. ಯಾವಾಗ ನೀವು ಜಗತ್ತಿನ ಬೆಳಕು
ತಮ್ಮ ಸಂಪೂರ್ಣ ಸ್ಟೇಜ್ವರೆಗೆ ತಲುಪುವಿರಿ ಅರ್ಥಾತ್ ಸಂಪೂರ್ಣತೆಯ ಕಣ್ಣು ತೆರೆಯುವಿರಿ ಆಗ
ಸೆಕೆಂಡಿನಲ್ಲಿ ವಿಶ್ವ ಪರಿವರ್ತನೆಯಾಗಿ ಬಿಡುವುದು. ನಂತರ ನೀವು ದರ್ಶನೀಯ ಮೂರ್ತಿ ಆತ್ಮರು ತಮ್ಮ
ದೃಷ್ಟಿಯಿಂದ ಭಕ್ತ ಆತ್ಮರಿಗೆ ತೃಪ್ತಿ ಮಾಡಬಹುದು. ದೃಷ್ಟಿಯಿಂದ ತೃಪ್ತಿ ಪಡೆಯುವವರ ಸಾಲು ಬಹಳ
ಉದ್ದವಾಗಿರುವುದು ಆದ್ದರಿಂದ ಸಂಪೂರ್ಣತೆಯ ಕಣ್ಣು ತೆರೆದಿರಲಿ. ಕಣ್ಣುಗಳನ್ನು
ಅಲುಗಾಡಿಸುತ್ತಿರುವುದು ಮತ್ತು ಸಂಕಲ್ಪಗಳಿಂದ ಗುಟಕರಿಸುವುದು ಹಾಗೂ ತೂಕಡಿಸುವುದನ್ನು ನಿಲ್ಲಿಸಿ
ಆಗ ದರ್ಶನೀಯ ಮೂರ್ತಿಗಳಾಗಬಹುದು.
ಸ್ಲೋಗನ್:
ನಿರ್ಮಲ ಸ್ವಭಾವ
ನಿರ್ಮಾಣತೆಯ ಗುರುತಾಗಿದೆ. ನಿರ್ಮಲರಾಗಿ ಆಗ ಸಫಲತೆ ಸಿಗುವುದು.
ತಮ್ಮ ಶಕ್ತಿಶಾಲಿ ಮನಸ್ಸಾ
ಮೂಲಕ ಸಕಾಶ ಕೊಡುವ ಸೇವೆಯನ್ನು ಮಾಡಿರಿ
ಮನಸ್ಸು-ಬುದ್ಧಿಯನ್ನು
ಏಕಾಗ್ರ ಮಾಡುವುದಕ್ಕೆ ಮನಮನಾಭವದ ಮಂತ್ರವನ್ನು ಸದಾ ಸ್ಮೃತಿಯಲ್ಲಿಟ್ಟುಕೊಳ್ಳಿ. ಮನಮನಾಭವದ
ಮಂತ್ರದ ಪ್ರಾಕ್ಟಿಕಲ್ ಧಾರಣೆಯಿಂದ ಮೊದಲನೇ ನಂಬರ್ ಬರಲು ಸಾಧ್ಯ. ಮನಸ್ಸಿನ ಏಕಾಗ್ರತೆ ಅರ್ಥಾತ್
ಒಬ್ಬರ ನೆನಪಿನಲ್ಲಿರುವುದು, ಏಕಾಗ್ರ ಆಗುವುದೇ ಏಕಾಂತವಾಗಿದೆ. ಯಾವಾಗ ಸರ್ವ ಆಕರ್ಷಣೆಗಳ
ವೈಬ್ರೇಷನ್ನಿಂದ ಅಂತರ್ಮುಖಿಯಾಗಿ ಆಗ ಮನಸ್ಸಾ ಮೂಲಕ ಪೂರ್ಣ ವಿಶ್ವಕ್ಕೆ ಸಕಾಶ ಕೊಡುವ ಸೇವೆ ಮಾಡ
ಬಹುದು.