29.01.25         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ - ನೀವು ತಮ್ಮ ಯೋಗಬಲದಿಂದಲೇ ವಿಕರ್ಮ ವಿನಾಶ ಮಾಡಿಕೊಂಡು ಪಾವನರಾಗಿ ಪಾವನಪ್ರಪಂಚವನ್ನಾಗಿ ಮಾಡಬೇಕಾಗಿದೆ, ಇದೇ ನಿಮ್ಮ ಸೇವೆಯಾಗಿದೆ”

ಪ್ರಶ್ನೆ:
ದೇವಿ-ದೇವತಾ ಧರ್ಮದ ಯಾವ ವಿಶೇಷತೆಯ ಗಾಯನವಿದೆ?

ಉತ್ತರ:
ದೇವಿ-ದೇವತಾ ಧರ್ಮವೇ ಬಹಳ ಸುಖ ನೀಡುವುದಾಗಿದೆ, ಅಲ್ಲಿ ದುಃಖದ ಹೆಸರು-ಗುರುತೂ ಇರುವುದಿಲ್ಲ. ನೀವು ಮಕ್ಕಳು 3/4 (ಮುಕ್ಕಾಲು) ಭಾಗ ಸುಖವನ್ನು ಪಡೆಯುತ್ತೀರಿ, ಒಂದುವೇಳೆ ಅರ್ಧಸುಖ-ಅರ್ಧದುಃಖವಿದ್ದರೂ ಸಹ ಮಜಾ ಬರುವುದಿಲ್ಲ.

ಓಂ ಶಾಂತಿ.
ಭಗವಾನುವಾಚ, ಭಗವಂತನೇ ತಿಳಿಸಿದ್ದಾರೆ - ಯಾವುದೇ ಮನುಷ್ಯನಿಗೆ ಭಗವಂತನೆಂದು ಹೇಳಲಾಗುವುದಿಲ್ಲ. ದೇವಿ-ದೇವತೆಗಳಿಗೂ ಸಹ ಭಗವಂತನೆಂದು ಹೇಳುವುದಿಲ್ಲ. ಭಗವಂತನು ನಿರಾಕಾರನಾಗಿದ್ದಾರೆ. ಅವರಿಗೆ ಯಾವುದೇ ಸಾಕಾರಿ ಅಥವಾ ಅಕಾರಿ ರೂಪವಿಲ್ಲ. ಸೂಕ್ಷ್ಮವತನವಾಸಿಗಳಿಗಾದರೂ ಸೂಕ್ಷ್ಮ ಆಕಾರ (ಶರೀರ) ವಿದೆ ಆದ್ದರಿಂದ ಅದಕ್ಕೆ ಸೂಕ್ಷ್ಮವತನವೆಂದು ಕರೆಯಲಾಗುತ್ತದೆ. ಇಲ್ಲಿ ಸಾಕಾರಿ ಮನುಷ್ಯಶರೀರವಿದೆ ಆಕಾರಣ ಇದಕ್ಕೆ ಸ್ಥೂಲವತನವೆಂದು ಹೇಳಲಾಗುತ್ತದೆ, ಸೂಕ್ಷ್ಮವತನದಲ್ಲಿ ಈ ಸ್ಥೂಲ ಪಂಚತತ್ವಗಳ ಶರೀರವಿರುವುದಿಲ್ಲ. ಈ ಪಂಚತತ್ವಗಳಿಂದಲೇ ಮನುಷ್ಯನ ಶರೀರವು ಮಾಡಲ್ಪಟ್ಟಿದೆ. ಇದಕ್ಕೆ ಮಣ್ಣಿನ ಗೊಂಬೆ ಎಂದು ಹೇಳುತ್ತಾರೆ. ಸೂಕ್ಷ್ಮವತನವಾಸಿಗಳಿಗೆ ಈ ಮಣ್ಣಿನ ಗೊಂಬೆ (ಶರೀರ) ಯಿರುವುದಿಲ್ಲ. ದೇವತಾಧರ್ಮದವರು ಮನುಷ್ಯರೇ ಆದರೆ ಅವರಿಗೆ ದೈವೀಗುಣವಂತ ಮನುಷ್ಯರೆಂದು ಹೇಳುತ್ತಾರೆ. ಶಿವತಂದೆಯಿಂದ ಈ ದೈವೀಗುಣಗಳನ್ನು ಪ್ರಾಪ್ತಿ ಮಾಡಿಕೊಂಡಿದ್ದಾರೆ. ದೈವೀಗುಣವಂತ ಮನುಷ್ಯರು ಹಾಗೂ ಆಸುರೀಗುಣವುಳ್ಳ ಮನುಷ್ಯರಲ್ಲಿ ಎಷ್ಟೊಂದು ಅಂತರವಿದೆ! ಮನುಷ್ಯರು ಶಿವಾಲಯ ಹಾಗೂ ವೇಶ್ಯಾಲಯದಲ್ಲಿರಲು ಯೋಗ್ಯರಾಗುತ್ತಾರೆ. ಸತ್ಯಯುಗಕ್ಕೆ ಶಿವಾಲಯವೆಂದು ಹೇಳಲಾಗುತ್ತದೆ, ಸತ್ಯಯುಗವು ಇಲ್ಲಿಯೇ ಆಗುತ್ತದೆ. ಯಾವುದೇ ಮೂಲವತನ ಅಥವಾ ಸೂಕ್ಷ್ಮವತನದಲ್ಲಿ ಸ್ಥಾಪನೆಯಾಗುವುದಿಲ್ಲ. ನೀವು ಮಕ್ಕಳಿಗೆ ತಿಳಿದಿದೆ - ಸತ್ಯಯುಗವು ಶಿವತಂದೆಯಿಂದ ಸ್ಥಾಪನೆಯಾಗಿರುವ ಶಿವಾಲಯವಾಗಿದೆ. ಯಾವಾಗ ಸ್ಥಾಪನೆ ಮಾಡಿದರು? ಸಂಗಮದಲ್ಲಿ. ಇದು ಪುರುಷೋತ್ತಮ ಯುಗವಾಗಿದೆ. ಈಗ ಈ ಪ್ರಪಂಚವು ಪತಿತ, ತಮೋಪ್ರಧಾನವಾಗಿದೆ. ಇದಕ್ಕೆ ಸತೋಪ್ರಧಾನ, ಹೊಸ ಪ್ರಪಂಚವೆಂದು ಹೇಳುವುದಿಲ್ಲ. ಹೊಸ ಪ್ರಪಂಚಕ್ಕೆ ಸತೋಪ್ರಧಾನವೆಂದು ಹೇಳಲಾಗುತ್ತದೆ. ಮತ್ತೆ ಅದೇ ಪ್ರಪಂಚವು ಯಾವಾಗ ಹಳೆಯದಾಗುವುದೋ ಆಗ ಅದಕ್ಕೆ ತಮೋಪ್ರಧಾನವೆಂದು ಹೇಳಲಾಗುತ್ತದೆ ನಂತರ ಅದು ಹೇಗೆ ಸತೋಪ್ರಧಾನವಾಗುತ್ತದೆ? ನೀವು ಮಕ್ಕಳ ಯೋಗಬಲದಿಂದ. ಯೋಗಬಲದಿಂದಲೇ ನಿಮ್ಮ ವಿಕರ್ಮಗಳು ವಿನಾಶವಾಗುತ್ತವೆ ಮತ್ತು ನೀವು ಪವಿತ್ರರಾಗಿಬಿಡುತ್ತೀರಿ. ನೀವು ಪವಿತ್ರರಾದರೆ ಪವಿತ್ರರಿಗಾಗಿ ಪವಿತ್ರ ಪ್ರಪಂಚವೇ ಬೇಕು. ಹೊಸ ಪ್ರಪಂಚವನ್ನು ಪವಿತ್ರ, ಹಳೆಯ ಪ್ರಪಂಚವನ್ನು ಅಪವಿತ್ರವೆನ್ನಲಾಗುತ್ತದೆ. ಪವಿತ್ರ ಪ್ರಪಂಚವನ್ನು ತಂದೆಯು ಸ್ಥಾಪನೆ ಮಾಡುತ್ತಾರೆ, ಪತಿತಪ್ರಪಂಚವನ್ನು ರಾವಣನು ಸ್ಥಾಪನೆ ಮಾಡುತ್ತಾನೆ, ಈ ಮಾತುಗಳನ್ನು ಯಾವುದೇ ಮನುಷ್ಯರು ತಿಳಿದುಕೊಂಡಿಲ್ಲ. ಈ ಪಂಚವಿಕಾರಗಳು ಇಲ್ಲದೇ ಇದ್ದಿದ್ದರೆ ಮನುಷ್ಯರು ದುಃಖಿಯಾಗಿ ತಂದೆಯನ್ನು ಏಕೆ ನೆನಪು ಮಾಡುತ್ತಿದ್ದರು! ತಂದೆಯು ತಿಳಿಸುತ್ತಾರೆ - ನಾನೇ ದುಃಖಹರ್ತ-ಸುಖಕರ್ತನಾಗಿದ್ದೇನೆ. ರಾವಣನ ಪಂಚವಿಕಾರಗಳ 10 ತಲೆಗಳ ಗೊಂಬೆಯನ್ನು ಮಾಡಿಬಿಟ್ಟಿದ್ದಾರೆ. ಆ ರಾವಣನನ್ನು ಶತ್ರುವೆಂದು ತಿಳಿದು ಸುಡುತ್ತಾರೆ ಅಂದರೆ ದ್ವಾಪರದ ಆದಿಯಿಂದಲೇ ಸುಡುವುದನ್ನು ಆರಂಭಿಸುತ್ತಾರೆಂದಲ್ಲ. ಯಾವಾಗ ತಮೋಪ್ರಧಾನರಾಗುವರೋ ಆಗ ಯಾವುದೋ ಮತ-ಮತಾಂತರದವರು ಕುಳಿತು ಈ ಹೊಸಪದ್ಧತಿಗಳನ್ನು ಮಾಡಿದ್ದಾರೆ. ಯಾರಾದರೂ ಬಹಳ ದುಃಖವನ್ನು ಕೊಟ್ಟಾಗ ಅವರ ಪ್ರತಿಮೆಯನ್ನು ಮಾಡಿ ಸುಡುತ್ತಾರೆ. ನೀವು ಮಕ್ಕಳಿಗೆ 3/4 ಸುಖವಿರುತ್ತದೆ. ಒಂದುವೇಳೆ ಅರ್ಧದುಃಖವಿದ್ದರೂ ಸಹ ಮಜವೇ ಇರುವುದಿಲ್ಲ. ತಂದೆಯು ತಿಳಿಸುತ್ತಾರೆ - ನಿಮ್ಮ ಈ ದೇವಿ-ದೇವತಾಧರ್ಮವು ಬಹಳ ಸುಖ ನೀಡುವಂತಹದ್ದಾಗಿದೆ. ಸೃಷ್ಟಿಯಂತೂ ಅನಾದಿಯಾಗಿ ಮಾಡಲ್ಪಟ್ಟಿದೆ. ಸೃಷ್ಟಿಯು ಏಕಾಯಿತು? ಇದು ಯಾವಾಗ ಮುಕ್ತಾಯವಾಗುವುದು? ಎಂಬ ಮಾತನ್ನು ಯಾರೂ ಕೇಳಲು ಸಾಧ್ಯವಿಲ್ಲ. ಈ ಚಕ್ರವು ಸುತ್ತುತ್ತಲೇ ಇರುತ್ತದೆ. ಶಾಸ್ತ್ರಗಳಲ್ಲಿ ಕಲ್ಪದ ಆಯಸ್ಸನ್ನು ಲಕ್ಷಾಂತರ ವರ್ಷಗಳೆಂದು ಬರೆದುಬಿಟ್ಟಿದ್ದಾರೆ. ಅವಶ್ಯವಾಗಿ ಸಂಗಮಯುಗವು ಬರುವುದು, ಯಾವಾಗ ಸೃಷ್ಟಿಯು ಬದಲಾಗುವುದು. ಈಗ ಹೇಗೆ ನೀವು ಇದನ್ನು ಅನುಭವ ಮಾಡುತ್ತೀರೋ ಹಾಗೆ ಮತ್ತ್ಯಾರೂ ಅರಿತುಕೊಳ್ಳುವುದಿಲ್ಲ. ಬಾಲ್ಯದಲ್ಲಿ ರಾಧೆ-ಕೃಷ್ಣರು ಎಂಬ ಹೆಸರಿರುತ್ತದೆ ನಂತರ ಸ್ವಯಂವರವಾಗುತ್ತದೆ. ಇಬ್ಬರೂ ಬೇರೆ-ಬೇರೆ ರಾಜಧಾನಿಯವರಾಗಿರುತ್ತಾರೆ ನಂತರ ಅವರ ಸ್ವಯಂವರವಾದಾಗ ಲಕ್ಷ್ಮಿ-ನಾರಾಯಣರಾಗುತ್ತಾರೆ - ಈ ಮಾತನ್ನೂ ಸಹ ಅರ್ಥಮಾಡಿಕೊಳ್ಳುವುದಿಲ್ಲ. ಈ ಮಾತುಗಳನ್ನು ತಂದೆಯೇ ತಿಳಿಸುತ್ತಾರೆ. ತಂದೆಯು ಜ್ಞಾನಪೂರ್ಣನಾಗಿದ್ದಾರೆ ಅಂದರೆ ಅವರು ಎಲ್ಲರ ಹೃದಯವನ್ನು ಹೊಕ್ಕು ನೋಡುವವರು ಎಂದಲ್ಲ. ಈಗ ನೀವು ಮಕ್ಕಳು ತಿಳಿದುಕೊಳ್ಳುತ್ತೀರಿ - ತಂದೆಯು ಬಂದು ಜ್ಞಾನವನ್ನು ತಿಳಿಸುತ್ತಾರೆ, ಜ್ಞಾನವು ಪಾಠಶಾಲೆಯಲ್ಲಿ ಸಿಗುತ್ತದೆ. ಪಾಠಶಾಲೆಯೆಂದಮೇಲೆ ಗುರಿ-ಧ್ಯೇಯವು ಅವಶ್ಯವಾಗಿ ಇರಬೇಕು. ಈಗ ನೀವು ಓದುತ್ತಿದ್ದೀರಿ, ಈ ಛೀ ಛೀ ಪ್ರಪಂಚದಲ್ಲಿ ನೀವು ರಾಜ್ಯಭಾರ ಮಾಡಲು ಸಾಧ್ಯವಿಲ್ಲ. ನೀವು ಪವಿತ್ರ, ಸತೋಪ್ರಧಾನ ಪ್ರಪಂಚದಲ್ಲಿ ರಾಜ್ಯಮಾಡುವಿರಿ. ರಾಜಯೋಗವನ್ನು ಸತ್ಯಯುಗದಲ್ಲಿ ಕಲಿಸಿಕೊಡಲಾಗುವುದಿಲ್ಲ. ಸಂಗಮಯುಗದಲ್ಲಿಯೇ ತಂದೆಯು ಬಂದು ರಾಜಯೋಗವನ್ನು ಕಲಿಸುತ್ತಾರೆ, ಇದು ಬೇಹದ್ದಿನ ಮಾತಾಗಿದೆ. ತಂದೆಯು ಯಾವಾಗ ಬರುತ್ತಾರೆಂಬುದೂ ಸಹ ಯಾರಿಗೂ ತಿಳಿದಿಲ್ಲ. ಘೋರ ಅಂಧಕಾರದಲ್ಲಿದ್ದಾರೆ! ಜ್ಞಾನಸೂರ್ಯನ ಹೆಸರಿನಿಂದ ಜಪಾನಿನಲ್ಲಿರುವವರು ತಮ್ಮನ್ನು ಸೂರ್ಯವಂಶಿಗಳೆಂದು ಕರೆಸಿಕೊಳ್ಳುತ್ತಾರೆ. ವಾಸ್ತವದಲ್ಲಿ ದೇವತೆಗಳು ಸೂರ್ಯವಂಶಿಗಳಾದರು. ಸೂರ್ಯವಂಶಿಯರ ರಾಜ್ಯವು ಸತ್ಯಯುಗದಲ್ಲಿಯೇ ಇತ್ತು. ಜ್ಞಾನಸೂರ್ಯ ಪ್ರಕಟ, ಅಜ್ಞಾನ ಅಂಧಕಾರ ವಿನಾಶವೆಂದು ಗಾಯನವಿದೆ ಅಂದಾಗ ಭಕ್ತಿಮಾರ್ಗದ ಅಂಧಕಾರ ವಿನಾಶವಾಗುವುದು. ಹೊಸ ಪ್ರಪಂಚವೇ ಹಳೆಯದು, ಹಳೆಯ ಪ್ರಪಂಚದಿಂದ ಮತ್ತೆ ಹೊಸದಾಗುತ್ತದೆ. ಇದು ಬೇಹದ್ದಿನ ಅತಿದೊಡ್ಡ ಮನೆಯಾಗಿದೆ. ಇದು ಎಷ್ಟು ದೊಡ್ಡ ರಂಗಮಂಚವಾಗಿದೆ! ಸೂರ್ಯ, ಚಂದ್ರ, ನಕ್ಷತ್ರಗಳು ಎಷ್ಟೊಂದು ಕಾರ್ಯಮಾಡುತ್ತದೆ! ರಾತ್ರಿಯಲ್ಲಿ ಬಹಳ ಕೆಲಸವು ನಡೆಯುತ್ತದೆ. ಹಾಗೆ ನೋಡಿದರೆ ಕೆಲವು ರಾಜರು ದಿನದಲ್ಲಿ ಮಲಗುತ್ತಾರೆ, ರಾತ್ರಿಯ ಸಮಯದಲ್ಲಿ ತಮ್ಮ ಸಭೆ ನಡೆಸುತ್ತಾರೆ. ಇದು ಈಗಲೂ ಸಹ ಕೆಲವೊಂದೆಡೆ ನಡೆಯುತ್ತಿದೆ. ಕಾರ್ಖಾನೆಗಳೂ ಸಹ ರಾತ್ರಿಯಲ್ಲಿಯೇ ನಡೆಯುತ್ತದೆ ಆದರೆ ಇದು ಹದ್ದಿನ ದಿನ-ರಾತ್ರಿಯಾಗಿದೆ, ಅದು ಬೇಹದ್ದಿನ ಮಾತಾಗಿದೆ. ಈ ಮಾತುಗಳನ್ನು ನಿಮ್ಮ ವಿನಃ ಮತ್ತ್ಯಾರ ಬುದ್ಧಿಯಲ್ಲಿಯೂ ಇಲ್ಲ. ಶಿವತಂದೆಯನ್ನೂ ಸಹ ತಿಳಿದುಕೊಂಡಿಲ್ಲ. ತಂದೆಯು ಪ್ರತಿಯೊಂದು ಮಾತನ್ನು ತಿಳಿಸುತ್ತಿರುತ್ತಾರೆ. ಬ್ರಹ್ಮನನ್ನು ಕುರಿತು ತಿಳಿಸುತ್ತಾರೆ - ಇವರು ಪ್ರಜಾಪಿತ ಬ್ರಹ್ಮನಾಗಿದ್ದಾರೆ, ತಂದೆಯು ಸೃಷ್ಟಿಯನ್ನು ರಚನೆ ಮಾಡಬೇಕೆಂದರೆ ಅವಶ್ಯವಾಗಿ ಇವರಲ್ಲಿ ಪ್ರವೇಶ ಮಾಡುತ್ತಾರೆ. ಪಾವನ ಮನುಷ್ಯರು ಅವಶ್ಯವಾಗಿ ಸತ್ಯಯುಗದಲ್ಲಿಯೇ ಇರುತ್ತಾರೆ, ಕಲಿಯುಗದಲ್ಲಿ ಎಲ್ಲರೂ ವಿಕಾರದಿಂದಲೇ ಜನ್ಮಪಡೆಯುತ್ತಾರೆ ಆದ್ದರಿಂದಲೇ ಪತಿತರೆಂದು ಕರೆಯುತ್ತಾರೆ. ವಿಕಾರವಿಲ್ಲದೆ ಸೃಷ್ಟಿಯು ಹೇಗೆ ನಡೆಯುತ್ತದೆಯೆಂದು ಮನುಷ್ಯರು ಹೇಳುತ್ತಾರೆ. ಅರೆ! ದೇವತೆಗಳಿಗೆ ನೀವು ಸಂಪೂರ್ಣ ನಿರ್ವಿಕಾರಿಗಳೆಂದು ಹೇಳುತ್ತೀರಿ. ಎಷ್ಟು ಶುದ್ಧತೆಯಿಂದ ಅವರ ಮಂದಿರವನ್ನು ಕಟ್ಟುತ್ತಾರೆ. ಬ್ರಾಹ್ಮಣರಲ್ಲದೆ ಮತ್ತ್ಯಾರನ್ನೂ ಒಳಗೆ ಬರಮಾಡಿಕೊಳ್ಳುವುದಿಲ್ಲ. ವಾಸ್ತವದಲ್ಲಿ ಈ ದೇವತೆಗಳನ್ನು ವಿಕಾರಿಗಳು ಸ್ಪರ್ಶಿಸುವುದಕ್ಕೂ ಸಾಧ್ಯವಿಲ್ಲ. ಆದರೆ ಇತ್ತೀಚೆಗೆ ಎಲ್ಲವೂ ಹಣದಿಂದಲೇ ನಡೆಯುತ್ತದೆ. ಯಾರಾದರೂ ಮನೆಯಲ್ಲಿ ಮಂದಿರ ಮಾಡಿಕೊಳ್ಳುತ್ತಾರೆಂದರೆ ಬ್ರಾಹ್ಮಣರನ್ನೇ ಕರೆಸುತ್ತಾರೆ. ಈಗಂತೂ ಕೇವಲ ಹೆಸರುಮಾತ್ರ ಬ್ರಾಹ್ಮಣರೆಂದಿದೆ ಆದರೆ ಅವರೂ ಸಹ ಪತಿತರಾಗಿದ್ದಾರೆ. ಈ ಪ್ರಪಂಚವೇ ವಿಕಾರಿಯಾಗಿದೆ ಆದ್ದರಿಂದ ಪೂಜೆಯೂ ವಿಕಾರಿಗಳಿಂದಲೇ ಆಗುತ್ತದೆ. ನಿರ್ವಿಕಾರಿಗಳು ಎಲ್ಲಿಂದ ಬರುವರು! ನಿರ್ವಿಕಾರಿಗಳು ಸತ್ಯಯುಗದಲ್ಲಿಯೇ ಇರುತ್ತಾರೆ, ವಿಕಾರದಲ್ಲಿ ಯಾರು ಹೋಗುವುದಿಲ್ಲವೋ ಅವರಿಗೆ ನಿರ್ವಿಕಾರಿಗಳೆಂದು ಹೇಳುತ್ತಾರೆಂದಲ್ಲ. ಶರೀರವಂತೂ ವಿಕಾರದಿಂದಲೇ ಜನ್ಮಪಡೆದಿದೆಯಲ್ಲವೆ! ತಂದೆಯು ಒಂದೇ ಮಾತನ್ನು ತಿಳಿಸಿದ್ದಾರೆ - ಇದೆಲ್ಲವೂ ರಾವಣರಾಜ್ಯವಾಗಿದೆ, ರಾಮರಾಜ್ಯದಲ್ಲಿ ಸಂಪೂರ್ಣ ನಿರ್ವಿಕಾರಿಗಳಿರುತ್ತಾರೆ. ರಾವಣರಾಜ್ಯದಲ್ಲಿ ವಿಕಾರಿಗಳಿದ್ದಾರೆ, ಸತ್ಯಯುಗದಲ್ಲಿ ಪವಿತ್ರತೆಯಿತ್ತು ಆಗ ಸುಖ-ಶಾಂತಿಯಿತ್ತು. ನೀವಿದನ್ನು ತೋರಿಸುತ್ತೀರಿ, ಸತ್ಯಯುಗದಲ್ಲಿ ಈ ಲಕ್ಷ್ಮಿ-ನಾರಾಯಣರ ರಾಜ್ಯವಿರುತ್ತದೆಯಲ್ಲವೆ, ಅಲ್ಲಿ ಪಂಚವಿಕಾರಗಳಿರುವುದಿಲ್ಲ, ಅದು ಪವಿತ್ರರಾಜ್ಯವಾಗಿತ್ತು. ಅದನ್ನು ಭಗವಂತನು ಸ್ಥಾಪನೆ ಮಾಡುತ್ತಾರೆ. ಭಗವಂತನು ಪತಿತರಾಜ್ಯವನ್ನೇನೂ ಸ್ಥಾಪನೆ ಮಾಡುವುದಿಲ್ಲ. ಸತ್ಯಯುಗದಲ್ಲಿ ಒಂದುವೇಳೆ ಪತಿತರಿದ್ದಿದ್ದರೆ ಭಗವಂತನನ್ನು ಕರೆಯುತ್ತಿದ್ದರಲ್ಲವೆ! ಅಲ್ಲಂತೂ ಯಾರೂ ಕರೆಯುವುದೇ ಇಲ್ಲ. ಸುಖದಲ್ಲಿ ಯಾರೂ ನೆನಪು ಮಾಡುವುದಿಲ್ಲ. ಸುಖದ ಸಾಗರ, ಪವಿತ್ರತೆಯ ಸಾಗರ ಎಂದು ಪರಮಾತ್ಮನ ಮಹಿಮೆಯನ್ನೂ ಮಾಡುತ್ತಾರೆ. ಶಾಂತಿಯು ಬೇಕೆಂದು ಎಲ್ಲರೂ ಕೇಳುತ್ತಾರೆ. ಈಗ ಇಡೀ ಪ್ರಪಂಚದಲ್ಲಿ ಸಂಪೂರ್ಣ ಶಾಂತಿಯನ್ನು ಮನುಷ್ಯರು ಹೇಗೆ ಸ್ಥಾಪಿಸುವರು? ಶಾಂತಿಯ ರಾಜ್ಯವು ಸ್ವರ್ಗದಲ್ಲಿ ಮಾತ್ರವೇ ಇತ್ತು. ಯಾವಾಗ ಪರಸ್ಪರ ಹೊಡೆದಾಡಿದರೆ ಆಗ ಅವರನ್ನು ಶಾಂತಗೊಳಿಸಲಾಗುತ್ತದೆ. ಸತ್ಯಯುಗದಲ್ಲಂತೂ ಒಂದೇ ರಾಜ್ಯವಿರುತ್ತದೆ.

ತಂದೆಯು ತಿಳಿಸುತ್ತಾರೆ - ಈ ಹಳೆಯ ಪ್ರಪಂಚವೇ ಈಗ ಸಮಾಪ್ತಿಯಾಗಲಿದೆ. ಈ ಮಹಾಭಾರತ ಯುದ್ಧದಲ್ಲಿ ಎಲ್ಲರೂ ವಿನಾಶವಾಗುತ್ತಾರೆ. ವಿನಾಶಕಾಲೇ ವಿಪರೀತಬುದ್ಧಿ ಎಂಬ ಅಕ್ಷರವನ್ನು ಬರೆಯಲಾಗಿದೆ. ಅವಶ್ಯವಾಗಿ ಪಾಂಡವರು ನೀವಲ್ಲವೆ. ನೀವು ಆತ್ಮೀಯ ಮಾರ್ಗದರ್ಶಕರಾಗಿದ್ದೀರಿ. ಎಲ್ಲರಿಗೆ ಮುಕ್ತಿಧಾಮದ ಮಾರ್ಗವನ್ನು ತೋರಿಸುತ್ತೀರಿ. ಅದು ಆತ್ಮಗಳ ಮನೆ ಶಾಂತಿಧಾಮವಾಗಿದೆ. ಇದು ದುಃಖಧಾಮವಾಗಿದೆ. ಆದ್ದರಿಂದ ಈಗ ತಂದೆಯು ತಿಳಿಸುತ್ತಾರೆ - ಈ ದುಃಖಧಾಮವನ್ನು ನೋಡುತ್ತಿದ್ದರೂ ಮರೆತುಹೋಗಿ. ಕೇವಲ ನಾವೀಗ ಶಾಂತಿಧಾಮದಲ್ಲಿ ಹೋಗಬೇಕಾಗಿದೆ. ಇದನ್ನು ಆತ್ಮವೇ ಹೇಳುತ್ತದೆ. ಆತ್ಮವೇ ಅನುಭೂತಿ ಮಾಡುತ್ತದೆ. ನಾನಾತ್ಮನಾಗಿದ್ದೇನೆಂದು ಆತ್ಮಕ್ಕೆ ಈಗ ಸ್ಮೃತಿಯು ಬಂದಿದೆ. ತಂದೆಯು ತಿಳಿಸುತ್ತಾರೆ - ನಾನು ಹೇಗಿದ್ದೇನೆ? ಯಾರಾಗಿದ್ದೇನೆ? ಎಂಬುದನ್ನು ಯಥಾರ್ಥವಾಗಿ ಅನ್ಯರ್ಯಾರೂ ಅರಿತುಕೊಳ್ಳಲು ಸಾಧ್ಯವಿಲ್ಲ. ನಾನು ಬಿಂದುವಾಗಿದ್ದೇನೆ ಎಂದು ನಿಮಗೇ ತಿಳಿಸಿದ್ದಾರೆ. ನಿಮಗಿದು ಪದೇ-ಪದೇ ಬುದ್ಧಿಯಲ್ಲಿರಬೇಕು - ನಾವು 84 ಜನ್ಮಗಳ ಚಕ್ರವನ್ನು ಹೇಗೆ ಸುತ್ತಿದ್ದೇವೆ. ಇದರಲ್ಲಿ ತಂದೆಯ ನೆನಪೂ ಬರುವುದು, ಮನೆಯ ನೆನಪೂ ಬರುವುದು, ಚಕ್ರದ ನೆನಪೂ ಬರುವುದು. ವಿಶ್ವದ ಇತಿಹಾಸ-ಭೂಗೋಳವನ್ನು ನೀವೇ ಅರಿತುಕೊಂಡಿದ್ದೀರಿ. ಎಷ್ಟೊಂದು ಖಂಡಗಳಿವೆ! ಎಷ್ಟೊಂದು ಯುದ್ಧಗಳಾಯಿತು. ಸತ್ಯಯುಗದಲ್ಲಿ ಯುದ್ಧದ ಮಾತೇ ಇಲ್ಲ. ರಾಮರಾಜ್ಯವೆಲ್ಲಿ! ರಾವಣ ರಾಜ್ಯವೆಲ್ಲಿ! ಈಗ ನೀವು ಹೇಗೆ ಈಶ್ವರೀಯ ರಾಜ್ಯದಲ್ಲಿದ್ದೀರಿ! ಏಕೆಂದರೆ ರಾಜ್ಯಸ್ಥಾಪನೆ ಮಾಡಲು ಈಶ್ವರನು ಇಲ್ಲಿಗೆ ಬಂದಿದ್ದಾರೆ. ಈಶ್ವರನಂತೂ ರಾಜ್ಯ ಮಾಡುವುದಿಲ್ಲ. ರಾಜ್ಯಭಾಗ್ಯವನ್ನು ತೆಗೆದುಕೊಳ್ಳುವುದಿಲ್ಲ, ನಿಷ್ಕಾಮ ಸೇವೆ ಮಾಡುತ್ತಾರೆ. ಸರ್ವಶ್ರೇಷ್ಠ ಭಗವಂತನು ಎಲ್ಲಾ ಆತ್ಮಗಳ ತಂದೆಯಾಗಿದ್ದಾರೆ. ಬಾಬಾ ಎಂದು ಹೇಳುವುದರಿಂದಲೇ ಒಮ್ಮೆಲೆ ಖುಷಿಯ ನಶೆಯೇರಬೇಕು. ನಿಮ್ಮ ಅಂತಿಮ ಸ್ಥಿತಿಯ ಅತೀಂದ್ರಿಯ ಸುಖದ ಗಾಯನವಿದೆ. ಯಾವಾಗ ಪರೀಕ್ಷೆಯ ದಿನಗಳು ಹತ್ತಿರ ಬರುವುದೋ ಆ ಸಮಯದಲ್ಲಿ ಎಲ್ಲವೂ ಸಾಕ್ಷಾತ್ಕಾರವಾಗುವುದು, ಅತೀಂದ್ರಿಯ ಸುಖವೂ ಸಹ ಮಕ್ಕಳಿಗೆ ನಂಬರ್ವಾರ್ ಇದೆ. ಕೆಲವರಂತೂ ತಂದೆಯ ನೆನಪಿನಲ್ಲಿ ಅಪಾರ ಖುಷಿಯಲ್ಲಿರುತ್ತಾರೆ.

ನೀವು ಮಕ್ಕಳಿಗೆ ಇಡೀ ದಿನ ಇದೇ ಸ್ಮೃತಿಯು ಬರುತ್ತಿರಲಿ. ಓಹೋ! ಬಾಬಾ, ತಾವು ನಮ್ಮನ್ನು ಹೇಗಿದ್ದವರನ್ನು ಹೇಗೆ ಮಾಡಿದಿರಿ! ತಮ್ಮಿಂದ ನಮಗೆ ಎಷ್ಟೊಂದು ಸುಖ ಸಿಗುತ್ತದೆ...... ತಂದೆಯನ್ನು ನೆನಪು ಮಾಡುತ್ತಾ ಆನಂದಭಾಷ್ಫಗಳು ಬಂದುಬಿಡುತ್ತವೆ. ಬಾಬಾ, ತಾವು ಬಂದು ದುಃಖದಿಂದ ಬಿಡಿಸುತ್ತೀರಿ. ವಿಷಯಸಾಗರದಿಂದ ಕ್ಷೀರಸಾಗರದೆಡೆಗೆ ಕರೆದುಕೊಂಡು ಹೋಗುತ್ತೀರಿ, ತಮ್ಮದು ಚಮತ್ಕಾರವಾಗಿದೆ ಬಾಬಾ ಎಂದು ಇಡೀ ದಿನ ಇದೇ ನಶೆಯಲ್ಲಿರಬೇಕು. ತಂದೆಯು ಯಾವ ಸಮಯದಲ್ಲಿ ನಿಮಗೆ ನೆನಪು ತರಿಸುವರೋ ಆಗ ನೀವು ಎಷ್ಟು ಗದ್ಗದಿತರಾಗುತ್ತೀರಿ. ಶಿವತಂದೆಯು ನಮಗೆ ರಾಜಯೋಗವನ್ನು ಕಲಿಸುತ್ತಾರೆ. ಅವಶ್ಯವಾಗಿ ಶಿವರಾತ್ರಿಯನ್ನೂ ಆಚರಿಸಲಾಗುತ್ತದೆ ಆದರೆ ಮನುಷ್ಯರು ಗೀತೆಯಲ್ಲಿ ಶಿವತಂದೆಯ ಬದಲು ಕೃಷ್ಣನ ಹೆಸರನ್ನು ಹಾಕಿಬಿಟ್ಟಿದ್ದಾರೆ. ಇದು ಮೊಟ್ಟಮೊದಲನೆಯ ಅತಿದೊಡ್ಡ ತಪ್ಪಾಗಿದೆ. ನಂಬರ್ವನ್ ಗೀತೆಯಲ್ಲಿಯೇ ತಪ್ಪು ಮಾಡಿಬಿಟ್ಟಿದ್ದಾರೆ. ನಾಟಕವೇ ಹೀಗೆ ಮಾಡಲ್ಪಟ್ಟಿದೆ, ತಂದೆಯು ಬಂದು ಈ ತಪ್ಪನ್ನು ತಿಳಿಸುತ್ತಾರೆ - ಪತಿತ-ಪಾವನನು ನಾನಾಗಿದ್ದೇನೆಯೋ ಅಥವಾ ಕೃಷ್ಣನೋ? ನಾನು ನಿಮಗೆ ರಾಜಯೋಗವನ್ನು ಕಲಿಸಿ ಮನುಷ್ಯರಿಂದ ದೇವತೆಗಳನ್ನಾಗಿ ಮಾಡಿದೆನು. ನನ್ನದೇ ಗಾಯನವಿದೆಯಲ್ಲವೆ - ಅಕಾಲಮೂರ್ತಿ, ಅಯೋನಿಜ, ಅವಿನಾಶಿ........ ಈ ಮಹಿಮೆಯನ್ನು ಕೃಷ್ಣನಿಗೆ ಮಾಡಲು ಸಾಧ್ಯವಿಲ್ಲ. ಕೃಷ್ಣನು ಪುನರ್ಜನ್ಮದಲ್ಲಿ ಬರುತ್ತಾನೆ., ನೀವು ಮಕ್ಕಳಲ್ಲಿಯೂ ನಂಬರ್ವಾರ್ ಇದ್ದಾರೆ, ಕೆಲವರ ಬುದ್ಧಿಯಲ್ಲಷ್ಟೆ ಈ ಮಾತುಗಳಿರುತ್ತವೆ. ಜ್ಞಾನದ ಜೊತೆ ನಡುವಳಿಕೆಯೂ ಚೆನ್ನಾಗಿರಬೇಕು. ಮಾಯೆಯೇನೂ ಕಡಿಮೆಯಿಲ್ಲ, ಯಾರು ಮೊಟ್ಟಮೊದಲು ಬರುವರೋ ಅವರು ಬಹಳ ಶಕ್ತಿಶಾಲಿಗಳಾಗಿರುತ್ತಾರೆ. ಪಾತ್ರಧಾರಿಗಳಲ್ಲಿಯೂ ಭಿನ್ನ-ಭಿನ್ನ ಪ್ರಕಾರದವರಿರುತ್ತಾರೆ. ನಾಯಕ-ನಾಯಕಿಯ ಪಾತ್ರವು ಭಾರತವಾಸಿಗಳಿಗೇ ಸಿಕ್ಕಿದೆ. ನೀವು ಎಲ್ಲರನ್ನೂ ರಾವಣರಾಜ್ಯದಿಂದ ಬಿಡಿಸುತ್ತೀರಿ. ಶ್ರೀಮತದನುಸಾರ ನಿಮಗೆ ಎಷ್ಟೊಂದು ಬಲವು ಸಿಗುತ್ತದೆ! ಮಾಯೆಯು ಬಹಳ ಮೋಸಗಾರನಾಗಿದೆ, ನಡೆಯುತ್ತಾ-ನಡೆಯುತ್ತಾ ಮೋಸಗೊಳಿಸುತ್ತದೆ.

ತಂದೆಯು ಪ್ರೀತಿಯ ಸಾಗರನಾಗಿದ್ದಾರೆ ಅಂದಮೇಲೆ ನೀವು ಮಕ್ಕಳೂ ಸಹ ತಂದೆಯ ಸಮಾನ ಪ್ರೀತಿಯ ಸಾಗರನಾಗಬೇಕಾಗಿದೆ, ಎಂದೂ ಕಟುವಚನವನ್ನು ಮಾತನಾಡಬಾರದು. ಯಾರಿಗಾದರೂ ದುಃಖಕೊಟ್ಟರೆ ದುಃಖಿಯಾಗಿಯೇ ಸಾಯುವರು ಆದ್ದರಿಂದ ಈ ಚಟಗಳನ್ನು ಕಳೆಯಬೇಕು. ವಿಷಯಸಾಗರದಲ್ಲಿ ಮುಳುಗುವುದೇ ಕೆಟ್ಟದಕ್ಕಿಂತ ಕೆಟ್ಟ ಚಟವಾಗಿದೆ. ತಂದೆಯೂ ಸಹ ತಿಳಿಸುತ್ತಾರೆ - ಕಾಮ ಮಹಾಶತ್ರುವಾಗಿದೆ. ಎಷ್ಟೊಂದು ಮಂದಿ ಕನ್ಯೆಯರು ಪೆಟ್ಟುತಿನ್ನುತ್ತಾರೆ. ಕೆಲಕೆಲವರಂತೂ ತಮ್ಮ ಮಕ್ಕಳಿಗೆ ಭಲೆ ಪವಿತ್ರರಾಗಿರಿ ಎಂದು ಹೇಳುತ್ತಾರೆ. ಅರೆ! ಮೊದಲು ತಾನು ಪವಿತ್ರನಾಗಿ ಮಕ್ಕಳನ್ನು ತಂದೆಗೆ ಕೊಟ್ಟುಬಿಟ್ಟಿರಿ. ಖರ್ಚಿನ ಹೊರೆಯಿಂದ ಇನ್ನೂ ಮುಕ್ತರಾದಿರಿ ಏಕೆಂದರೆ ಇವರ ಅದೃಷ್ಟದಲ್ಲಿ ಏನಿದೆಯೋ ತಿಳಿದಿಲ್ಲ. ಮುಂದೆ ಸುಖವಾದ ಮನೆ ಸಿಗುವುದೋ ಅಥವಾ ಇಲ್ಲವೋ ಅದಕ್ಕಿಂತಲೂ ಸಮರ್ಪಣೆ ಮಾಡಿಸುವುದೇ ಒಳ್ಳೆಯದೆಂದು ತಿಳಿಯುತ್ತಾರೆ. ಈಗಿನ ಸಮಯದಲ್ಲಿ ಮಕ್ಕಳಿಗೆ ಬಹಳಷ್ಟು ಖರ್ಚಾಗುತ್ತದೆ. ಬಡವರಂತೂ ಬಹುಬೇಗನೆ ಕೊಟ್ಟುಬಿಡುತ್ತಾರೆ. ಕೆಲವರಿಗಂತೂ ಮೋಹವಿರುತ್ತದೆ, ಮೊದಲು ಒಬ್ಬರು ಕಾಡುಜನಾಂಗದ ಸ್ತ್ರೀಯರು ಬರುತ್ತಿದ್ದರು, ಅವರು ಜ್ಞಾನದಲ್ಲಿ ಬರಲು ಬಿಡಲಿಲ್ಲ ಏಕೆಂದರೆ ಇವರು ಜಾದೂ ಮಾಡುವರೆಂಬ ಭಯವಿತ್ತು. ಭಗವಂತನಿಗೆ ಜಾದೂಗರನೆಂತಲೂ ಕರೆಯುತ್ತಾರೆ, ದಯಾಸಾಗರನೆಂದೂ ಭಗವಂತನಿಗೇ ಹೇಳುತ್ತಾರೆಯೇ ಹೊರತು ಕೃಷ್ಣನಿಗೆ ಹೇಳುವುದಿಲ್ಲ. ನಿರ್ದಯಿಯಿಂದ ಬಿಡಿಸುವವರೇ ದಯಾಹೃದಯಿಯಾಗಿದ್ದಾರೆ. ರಾವಣನು ನಿರ್ದಯಿಯಾಗಿದ್ದಾನೆ.

ಮೊಟ್ಟಮೊದಲು ಜ್ಞಾನವಾಗಿದೆ, ಜ್ಞಾನ-ಭಕ್ತಿ ನಂತರ ವೈರಾಗ್ಯ. ಭಕ್ತಿ, ಜ್ಞಾನ ಮತ್ತೆ ವೈರಾಗ್ಯವೆಂದು ಹೇಳುವುದಿಲ್ಲ. ಜ್ಞಾನದ ವೈರಾಗ್ಯವೆಂದೂ ಹೇಳಲಾಗುವುದಿಲ್ಲ. ಭಕ್ತಿಯಿಂದ ವೈರಾಗ್ಯವು ಬರುತ್ತದೆ ಆದ್ದರಿಂದ ಜ್ಞಾನ, ಭಕ್ತಿ, ವೈರಾಗ್ಯ - ಇದು ಸರಿಯಾದ ಶಬ್ಧವಾಗಿದೆ. ತಂದೆಯು ನಿಮಗೆ ಬೇಹದ್ದಿನ ಅರ್ಥಾತ್ ಹಳೆಯಪ್ರಪಂಚದಿಂದ ವೈರಾಗ್ಯ ತರಿಸುತ್ತಾರೆ. ಸನ್ಯಾಸಿಗಳಂತೂ ಕೇವಲ ಗೃಹಸ್ಥದಿಂದ ವೈರಾಗ್ಯವನ್ನು ಹೊಂದುತ್ತಾರೆ. ಇದೂ ಸಹ ನಾಟಕದಲ್ಲಿ ನಿಗಧಿಯಾಗಿದೆ. ಮನುಷ್ಯರ ಬುದ್ಧಿಯಲ್ಲಿ ಕುಳಿತುಕೊಳ್ಳುವುದೇ ಇಲ್ಲ. ಭಾರತವು 100% ಸಾಹುಕಾರ, ನಿರ್ವಿಕಾರಿ, ಆರೋಗ್ಯವಂತನಾಗಿದ್ದು ಇಲ್ಲಿ ಎಂದೂ ಅಕಾಲಮೃತ್ಯುವಾಗುತ್ತಿರಲಿಲ್ಲ. ಇವೆಲ್ಲಾ ಮಾತುಗಳ ಧಾರಣೆಯು ಕೆಲವು ಮಂದಿಗೇ ಆಗುತ್ತದೆ. ಯಾರು ಚೆನ್ನಾಗಿ ಸರ್ವೀಸ್ ಮಾಡುವರೋ ಅವರು ಬಹಳ ಸಾಹುಕಾರರಾಗುತ್ತಾರೆ. ಮಕ್ಕಳಿಗಂತೂ ಇಡೀ ದಿನ ಬಾಬಾ, ಬಾಬಾ ಎಂದೇ ನೆನಪಿರಬೇಕು. ಆದರೆ ಮಾಯೆಯು ನೆನಪು ಮಾಡಲು ಬಿಡುವುದಿಲ್ಲ. ತಂದೆಯು ತಿಳಿಸುತ್ತಾರೆ - ಸತೋಪ್ರಧಾನರಾಗಬೇಕೆಂದರೆ ನಡೆಯುತ್ತಾ-ತಿರುಗಾಡುತ್ತಾ, ತಿನ್ನುತ್ತಲೂ ನನ್ನನ್ನು ನೆನಪು ಮಾಡಿ. ನಾನು ನಿಮ್ಮನ್ನು ವಿಶ್ವದ ಮಾಲೀಕರನ್ನಾಗಿ ಮಾಡುತ್ತೇನೆ ಅಂದಮೇಲೆ ನೀವು ನೆನಪು ಮಾಡುವುದಿಲ್ಲವೆ! ಅನೇಕರಿಗೆ ಮಾಯೆಯ ಬಿರುಗಾಳಿಗಳು ಬಹಳಷ್ಟು ಬರುತ್ತವೆ, ತಂದೆಯು ತಿಳಿಸುತ್ತಾರೆ - ಇದೆಲ್ಲವೂ ಆಗುತ್ತದೆ. ನಾಟಕದಲ್ಲಿ ನಿಗಧಿಯಾಗಿದೆ. ಸ್ವರ್ಗದ ಸ್ಥಾಪನೆಯೂ ಸಹ ಆಗಲೇಬೇಕಾಗಿದೆ. ಸದಾ ಹೊಸ ಪ್ರಪಂಚವಂತೂ ಇರಲು ಸಾಧ್ಯವಿಲ್ಲ. ಚಕ್ರವು ತಿರುಗುತ್ತದೆಯೆಂದರೆ ಮತ್ತೆ ಅವಶ್ಯವಾಗಿ ಕೆಳಗಿಳಿಯುತ್ತೀರಿ. ಪ್ರತಿಯೊಂದು ವಸ್ತುವು ಹೊಸದರಿಂದ ಹಳೆಯದು ಅವಶ್ಯವಾಗಿ ಆಗುತ್ತದೆ. ಈ ಸಮಯದಲ್ಲಿ ಮಾಯೆಯು ಎಲ್ಲರನ್ನೂ ಏಪ್ರಿಲ್ಫೂಲ್ ಮಾಡಿಬಿಟ್ಟಿದೆ. ತಂದೆಯು ಬಂದು ಪವಿತ್ರರನ್ನಾಗಿ ಮಾಡುತ್ತಾರೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತಾ ಬಾಪ್ದಾದಾರವರ ನೆನಪು ಪ್ರೀತಿ ಹಾಗೂ ನಮಸ್ತೆ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ತಂದೆಯ ಸಮಾನ ಪ್ರೀತಿಯ ಸಾಗರರಾಗಬೇಕಾಗಿದೆ. ಎಂದೂ ಯಾರಿಗೂ ದುಃಖ ಕೊಡಬಾರದು. ಕಟುವಚನಗಳನ್ನು ಮಾತನಾಡಬಾರದು, ಕೆಟ್ಟಚಟಗಳನ್ನು ಅಳಿಸಬೇಕಾಗಿದೆ.

2. ತಂದೆಯೊಂದಿಗೆ ಮಧುರಾತಿ ಮಧುರವಾದ ಮಾತುಗಳನ್ನಾಡುತ್ತಾ ಇದೇ ನಶೆಯಲ್ಲಿರಬೇಕಾಗಿದೆ - ಓಹೋ ತಂದೆಯೇ, ತಾವು ನಮ್ಮನ್ನು ಹೇಗಿದ್ದವರನ್ನು ಹೇಗೆ ಮಾಡಿದಿರಿ! ತಾವು ನಮಗೆ ಎಷ್ಟು ಸುಖವನ್ನು ಕೊಟ್ಟಿದ್ದೀರಿ! ಬಾಬಾ, ತಾವು ಕ್ಷೀರಸಾಗರದಲ್ಲಿ ಕರೆದುಕೊಂಡು ಹೋಗುವಿರಿ..... ಇಡೀ ದಿನ ಬಾಬಾ, ಬಾಬಾ ಎಂದು ನೆನಪಿರಲಿ.

ವರದಾನ:
ಸರ್ವ ಸಂಬಂಧ ಮತ್ತು ಸರ್ವ ಗುಣಗಳ ಅನುಭೂತಿಯಲ್ಲಿ ಸಂಪನ್ನರಾಗುವಂತಹ ಸಂಪೂರ್ಣ ಮೂರ್ತಿ ಭವ

ಸಂಗಮಯುಗದಲ್ಲಿ ವಿಶೇಷ ಸರ್ವ ಪ್ರಾಪ್ತಿಗಳಲ್ಲಿ ಸ್ವಯಂಗೆ ಸಂಪನ್ನರಾಗಬೇಕು ಆದ್ದರಿಂದ ಸರ್ವ ಖಜಾನೆ, ಸರ್ವ ಸಂಬಂಧ, ಸರ್ವ ಗುಣ ಮತ್ತು ಕರ್ತವ್ಯವನ್ನು ಎದುರಿಗಿಟ್ಟುಕೊಂಡು ಚೆಕ್ ಮಾಡಿಕೊಳ್ಳಿ ನಾನು ಸರ್ವ ಮಾತುಗಳಲ್ಲಿ ಅನುಭವಿಯಾಗಿರುವೆನಾ ಎಂದು. ಒಂದುವೇಳೆ ಯಾವುದಾದರೂ ಮಾತಿನ ಅನುಭವ ಕೊರತೆಯಿದ್ದರೆ ಅದರಲ್ಲಿ ಸ್ವಯಂಗೆ ಸಂಪನ್ನರನ್ನಾಗಿ ಮಾಡಿಕೊಳ್ಳಿ. ಒಂದಾದರೂ ಸಂಬಂಧ ಅಥವಾ ಗುಣದಲ್ಲಿ ಕೊರತೆಯಿದ್ದಲ್ಲಿ ಸಂಪೂರ್ಣ ಸ್ಟೇಜ್ ಅಥವಾ ಸಂಪೂರ್ಣ ಮೂರ್ತಿ ಎಂದು ಹೇಳಿಸಿಕೊಳ್ಳುವುದಿಲ್ಲ ಆದ್ದರಿಂದ ತಂದೆಯ ಗುಣ ಅಥವಾ ತಮ್ಮ ಆದಿ ಸ್ವರೂಪದ ಗುಣಗಳ ಅನುಭವ ಮಾಡಿ ಆಗ ಸಂಪೂರ್ಣ ಮೂರ್ತಿಯಾಗುವಿರಿ.

ಸ್ಲೋಗನ್:
ಜೋಶ್ನಲ್ಲಿ ಬರುವುದೂ ಸಹ ಮನಸ್ಸಿನಿಂದ ಅಳುವುದು -ಈಗ ಅಳುವ ಫೈಲ್ ಸಮಾಪ್ತಿ ಮಾಡಿ.

ತಮ್ಮ ಶಕ್ತಿಶಾಲಿ ಮನಸ್ಸಾ ಮೂಲಕ ಸಕಾಶ ಕೊಡುವ ಸೇವೆಯನ್ನು ಮಾಡಿರಿ

ಮನಸ್ಸಾ ಸೇವೆ ಮಾಡುವುದಕ್ಕೆ ಸರ್ವ ಶಕ್ತಿಗಳನ್ನು ತಮ್ಮ ಜೀವನದ ಅಂಗ ಮಾಡಿಕೊಳ್ಳಿರಿ. ಇಂತಹ ತಂದೆ ಸಮಾನ ಪರಿಪೂರ್ಣರಾಗಿ ಯಾವುದರಿಂದ ಯಾವುದೇ ರೀತಿಯ ಕೊರತೆಯಿರಬಾರದು ಆಗ ಶ್ರೇಷ್ಠ ಸಂಕಲ್ಪಗಳ ಏಕಾಗ್ರತೆಯ ಮೂಲಕ ಅರ್ಥಾತ್ ಮನಸ್ಸಾ ಮೂಲಕ ಸ್ವತಃ ಸಕಾಶ ಹರಡಿಸಿರಿ.