31.01.25         Morning Kannada Murli       Om Shanti           BapDada Madhuban


“ಮಧುರ ಮಕ್ಕಳೇ - ಪುಣ್ಯಾತ್ಮರಾಗಬೇಕೆಂದರೆ ತಮ್ಮ ದಿನಚರಿಯನ್ನು ನೋಡಿಕೊಳ್ಳಿ - ಯಾವುದೇ ಪಾಪವು ಆಗುತ್ತಿಲ್ಲವೆ, ಸತ್ಯದ ಖಾತೆಯು ಜಮಾ ಆಗಿದೆಯೇ?”

ಪ್ರಶ್ನೆ:
ಎಲ್ಲದಕ್ಕಿಂತ ದೊಡ್ಡ ಪಾಪ ಯಾವುದು?

ಉತ್ತರ:
ಯಾರ ಪ್ರತಿಯಾದರೂ ಕೆಟ್ಟ ದೃಷ್ಟಿಯನ್ನಿಡುವುದು ಎಲ್ಲದಕ್ಕಿಂತ ದೊಡ್ಡಪಾಪವಾಗಿದೆ. ನೀವು ಪುಣ್ಯಾತ್ಮರಾಗುವಂತಹ ಮಕ್ಕಳು ಯಾರ ಮೇಲೂ ವಿಕಾರೀ ದೃಷ್ಟಿಯನ್ನಿಡಬಾರದು ಅಂದಾಗ ಪರಿಶೀಲನೆ ಮಾಡಿಕೊಳ್ಳಬೇಕು - ನಾವು ಎಷ್ಟು ಯೋಗದಲ್ಲಿರುತ್ತೇವೆ? ಯಾವುದೇ ಪಾಪವನ್ನು ಮಾಡುತ್ತಿಲ್ಲವೆ? ಶ್ರೇಷ್ಠಪದವಿಯನ್ನು ಪಡೆಯಬೇಕೆಂದರೆ ಎಚ್ಚರಿಕೆಯನ್ನಿಡಿ - ಅಂಶಮಾತ್ರವೂ ಕುದೃಷ್ಟಿಯಿರಬಾರದು. ತಂದೆಯು ಕೊಡುವ ಶ್ರೀಮತದಂತೆ ಪೂರ್ಣವಾಗಿ ನಡೆಯುತ್ತಾ ಇರಿ.

ಗೀತೆ:
ಮುಖವನ್ನು ನೋಡಿಕೋ ಪ್ರಾಣಿ........

ಓಂ ಶಾಂತಿ.
ಬೇಹದ್ದಿನ ತಂದೆಯು ತಾವು ಮಕ್ಕಳಿಗೆ ತಿಳಿಸುತ್ತಾರೆ - ಮಕ್ಕಳೇ, ತಮ್ಮನ್ನು ಸ್ವಲ್ಪ ಪರಿಶೀಲನೆ ಮಾಡಿಕೊಳ್ಳಿ. ನಾವು ಇಡೀ ಜೀವನದಲ್ಲಿ ಎಷ್ಟು ಪಾಪ ಮಾಡಿದ್ದೇವೆ - ಎಷ್ಟು ಪುಣ್ಯ ಮಾಡಿದ್ದೇವೆಂಬುದು ಮನುಷ್ಯರಿಗೆ ತಿಳಿದಿರುತ್ತದೆ ಅಂದಮೇಲೆ ನೀವೂ ಸಹ ಪ್ರತಿನಿತ್ಯವೂ ನಿಮ್ಮ ದಿನಚರಿಯನ್ನು ನೋಡಿಕೊಳ್ಳಿ - ಎಷ್ಟು ಪಾಪ ಮತ್ತು ಎಷ್ಟು ಪುಣ್ಯ ಮಾಡಿದ್ದೇವೆ? ಯಾರನ್ನೂ ಬೇಸರಪಡಿಸಲಿಲ್ಲವೆ? ನಾವು ಜೀವನದಲ್ಲಿ ಏನೇನು ಮಾಡಿದ್ದೇವೆ? ಎಷ್ಟು ಪಾಪ ಮಾಡಿದ್ದೇವೆ? ಎಷ್ಟು ದಾನ-ಪುಣ್ಯ ಮಾಡಿದ್ದೇನೆಂದು ಪ್ರತಿಯೊಬ್ಬ ಮನುಷ್ಯರೂ ತಿಳಿದುಕೊಳ್ಳಬಹುದು. ಮನುಷ್ಯರು ತೀರ್ಥಯಾತ್ರೆಗಳಿಗೆ ಹೋಗುತ್ತಾರೆಂದರೆ ದಾನ-ಪುಣ್ಯವನ್ನು ಮಾಡುತ್ತಾರೆ, ಪಾಪವಾಗದಂತೆ ಎಚ್ಚರವಹಿಸುತ್ತಾರೆ ಅಂದಾಗ ತಂದೆಯು ಮಕ್ಕಳೊಂದಿಗೇ ಕೇಳುತ್ತಾರೆ - ಮಕ್ಕಳೇ, ಎಷ್ಟು ಪಾಪ ಮತ್ತು ಎಷ್ಟು ಪುಣ್ಯ ಮಾಡಿದ್ದೀರಿ? ಈಗ ನೀವು ಮಕ್ಕಳು ಪುಣ್ಯಾತ್ಮರಾಗಬೇಕಾಗಿದೆ. ಯಾವುದೇ ಪಾಪಕರ್ಮವನ್ನು ಮಾಡಬಾರದಾಗಿದೆ. ಪಾಪಕರ್ಮಗಳೂ ಸಹ ಅನೇಕ ಪ್ರಕಾರದ್ದಾಗಿರುತ್ತದೆ. ಯಾರ ಮೇಲಾದರೂ ವಿಕಾರೀ ದೃಷ್ಟಿಯು ಹೋಗುತ್ತದೆಯೆಂದರೆ ಇದೂ ಸಹ ಪಾಪವಾಗಿದೆ. ಕುದೃಷ್ಟಿಯಿರುವುದೇ ವಿಕಾರದ ಮೇಲೆ, ಅದು ಎಲ್ಲದಕ್ಕಿಂತ ಕೆಟ್ಟದ್ದಾಗಿದೆ ಆದ್ದರಿಂದ ಎಂದೂ ವಿಕಾರಿದೃಷ್ಟಿಯು ಇರಬಾರದು. ಬಹಳಷ್ಟು ಸ್ತ್ರೀ-ಪುರುಷರಿಗೆ ವಿಕಾರದ ದೃಷ್ಟಿಯೇ ಇರುತ್ತದೆ. ಕುಮಾರ-ಕುಮಾರಿಯರಿಗೂ ಸಹ ವಿಕಾರದ ದೃಷ್ಟಿಯು ಬಂದುಬಿಡುತ್ತದೆ. ಈಗ ತಂದೆಯು ತಿಳಿಸುತ್ತಾರೆ - ಮಕ್ಕಳೇ, ಈ ವಿಕಾರ ದೃಷ್ಟಿಯು ಇರಬಾರದು ಇಲ್ಲವಾದರೆ ನಿಮ್ಮನ್ನು ಕೋತಿಗಳೆಂದು ಹೇಳಬೇಕಾಗುತ್ತದೆ. ನಾರದನ ಉದಾಹರಣೆಯಿದೆಯಲ್ಲವೆ - ನಾನು ಲಕ್ಷ್ಮಿಯನ್ನು ವರಿಸುತ್ತೇನೆಯೇ ಎಂದು ನಾರದನು ಕೇಳಿದರು. ನೀವೂ ಸಹ ಹೇಳುತ್ತೀರಲ್ಲವೆ - ನಾವು ಲಕ್ಷ್ಮಿಯನ್ನು ವರಿಸುತ್ತೇವೆ, ನಾರಿಯಿಂದ ಲಕ್ಷ್ಮಿ, ನರನಿಂದ ನಾರಾಯಣರಾಗುತ್ತೇವೆ. ಇದಕ್ಕೆ ತಂದೆಯು ತಿಳಿಸುತ್ತಾರೆ - ತಮ್ಮನ್ನು ಹೃದಯಪೂರ್ವಕವಾಗಿ ಕೇಳಿಕೊಳ್ಳಿ - ನಾವು ಎಷ್ಟರವರೆಗೆ ಪುಣ್ಯಾತ್ಮರಾಗಿದ್ದೇವೆ? ಯಾವುದೆ ಪಾಪವನ್ನು ಮಾಡುತ್ತಿಲ್ಲವೆ? ಎಷ್ಟು ಯೋಗದಲ್ಲಿರುತ್ತೇವೆ?

ನೀವು ಮಕ್ಕಳು ತಂದೆಯನ್ನು ಅರಿತುಕೊಂಡಿದ್ದೀರಿ ಆದ್ದರಿಂದಲೇ ಇಲ್ಲಿ ಕುಳಿತಿದ್ದೀರಲ್ಲವೆ. ಪ್ರಪಂಚದ ಮನುಷ್ಯರಂತೂ ಈ ಬಾಪ್ದಾದಾ ಯಾರೆಂಬುದನ್ನು ಅರಿತುಕೊಂಡಿಲ್ಲ. ನೀವು ಬ್ರಾಹ್ಮಣ ಮಕ್ಕಳೇ ತಿಳಿದುಕೊಂಡಿದ್ದೀರಿ - ಪರಮಪಿತ ಪರಮಾತ್ಮನು ಬ್ರಹ್ಮಾರವರಲ್ಲಿ ಪ್ರವೇಶ ಮಾಡಿ ನಮಗೆ ಅವಿನಾಶಿ ಜ್ಞಾನರತ್ನಗಳ ಖಜಾನೆಯನ್ನು ಕೊಡುತ್ತಾರೆ. ಮನುಷ್ಯರ ಬಳಿ ವಿನಾಶಿ ಧನವಿರುತ್ತದೆ ಅದನ್ನೇ ದಾನ ಮಾಡುತ್ತಾರೆ. ಅದಂತೂ ಕಲ್ಲುಗಳ ಸಮಾನವಾಗಿದೆ ಆದರೆ ಇವು ಜ್ಞಾನರತ್ನಗಳಾಗಿವೆ. ಜ್ಞಾನಸಾಗರ ತಂದೆಯ ಬಳಿಯೇ ಜ್ಞಾನವಿದೆ. ಇದು ಒಂದೊಂದು ಲಕ್ಷಾಂತರ ರೂಪಾಯಿಗಳ ಬೆಲೆಯುಳ್ಳದ್ದಾಗಿದೆ. ರತ್ನಾಗರ ತಂದೆಯಿಂದ ಜ್ಞಾನರತ್ನಗಳನ್ನು ಧಾರಣೆ ಮಾಡಿ ಮತ್ತೆ ಈ ರತ್ನಗಳನ್ನು ದಾನ ಮಾಡಬೇಕಾಗಿದೆ. ಈ ರತ್ನಗಳನ್ನು ಯಾರೆಷ್ಟು ಕೊಡುವರೋ ಮತ್ತು ತೆಗೆದುಕೊಳ್ಳುವರೋ ಅಷ್ಟು ಶ್ರೇಷ್ಠಪದವಿಯನ್ನು ಪಡೆಯುತ್ತಾರೆ. ಅಂದಾಗ ತಂದೆಯು ತಿಳಿಸಿಕೊಡುತ್ತಾರೆ - ತಮ್ಮ ಆಂತರ್ಯವನ್ನು ನೋಡಿಕೊಳ್ಳಿ - ನಾವು ಎಷ್ಟು ಪಾಪಗಳನ್ನು ಮಾಡಿದ್ದೇವೆ? ಈಗ ಯಾವುದೇ ಪಾಪವಂತೂ ಆಗುತ್ತಿಲ್ಲವೆ? ಸ್ವಲ್ಪವೂ ಕುದೃಷ್ಟಿಯಿರಬಾರದು. ತಂದೆಯು ಯಾವ ಶ್ರೀಮತವನ್ನು ಕೊಡುತ್ತಾರೆಯೋ ಅದರಂತೆಯೇ ಪೂರ್ಣ ನಡೆಯುತ್ತಾ ಇರಬೇಕೆಂಬ ಎಚ್ಚರಿಕೆಯಿರಬೇಕು. ಎಷ್ಟೇ ಮಾಯೆಯ ಬಿರುಗಾಳಿಗಳು ಭಲೆ ಬರಲಿ ಆದರೆ ಕರ್ಮೇಂದ್ರಿಯಗಳಿಂದ ಯಾವುದೇ ವಿಕರ್ಮಗಳನ್ನು ಮಾಡಬಾರದು. ಯಾರ ಕಡೆಯಾದರೂ ಕುದೃಷ್ಟಿಯು ಹೋದರೆ ಅವರ ಮುಂದೆ ನಿಂತುಕೊಳ್ಳಲೂ ಬಾರದು, ಒಮ್ಮೆಲೆ ಅಲ್ಲಿಂದ ಹೊರಟುಹೋಗಬೇಕು. ಇವರಿಗೆ ಕುದೃಷ್ಟಿಯಿದೆಯೆಂದು ಅರ್ಥವಾಗುತ್ತದೆ. ಒಂದುವೇಳೆ ಶ್ರೇಷ್ಠಪದವಿಯನ್ನು ಪಡೆಯಬೇಕೆಂದರೆ ಬಹಳ ಎಚ್ಚರಿಕೆಯಿಂದಿರಬೇಕಾಗಿದೆ. ಕುದೃಷ್ಟಿಯಿದ್ದರೆ ಮತ್ತೆ ಕುರುಡರು-ಕುಂಟರಾಗಿಬಿಡುತ್ತೀರಿ. ತಂದೆಯು ಯಾವ ಶ್ರೀಮತವನ್ನು ಕೊಡುತ್ತಾರೆಯೋ ಅದರನುಸಾರ ನಡೆಯಬೇಕು. ತಂದೆಯನ್ನು ಮಕ್ಕಳೇ ಅರಿತುಕೊಳ್ಳುತ್ತಾರೆ. ತಿಳಿದುಕೊಳ್ಳಿ - ತಂದೆಯು ಎಲ್ಲಿಯಾದರೂ ಹೋಗುತ್ತಾರೆಂದರೆ ಬಾಪ್ದಾದಾ ಬಂದಿದ್ದಾರೆಂದು ಮಕ್ಕಳೇ ಅರಿತುಕೊಳ್ಳುವಿರಿ. ಅನ್ಯ ಮನುಷ್ಯರು ಬಹಳಷ್ಟು ನೋಡುತ್ತಾರೆ ಆದರೆ ಅವರಿಗೆ ಏನೂ ತಿಳಿದಿಲ್ಲ. ಇವರು ಯಾರು ಎಂದು ಯಾರಾದರೂ ಕೇಳಿದರೆ ತಿಳಿಸಿ - ಇವರು ಬಾಪ್ದಾದಾ ಆಗಿದ್ದಾರೆ. ಎಲ್ಲರ ಬಳಿಯೂ ಬ್ಯಾಡ್ಜ್ ಇರಲೇಬೇಕು, ಅದರ ಮೂಲಕ ತಿಳಿಸಿ - ಶಿವತಂದೆಯು ನಮಗೆ ಈ ದಾದಾರವರ ಮೂಲಕ ಅವಿನಾಶಿ ಜ್ಞಾನರತ್ನಗಳ ದಾನವನ್ನು ಕೊಡುತ್ತಾರೆ. ಇದು ಆತ್ಮೀಯ ಜ್ಞಾನವಾಗಿದೆ. ಆತ್ಮಿಕ ತಂದೆಯು ಕುಳಿತು ಈ ಆತ್ಮೀಯ ಜ್ಞಾನವನ್ನು ತಿಳಿಸುತ್ತಾರೆ. ಶಿವಭಗವಾನುವಾಚ, ಗೀತೆಯಲ್ಲಿ ಕೃಷ್ಣಭಗವಾನುವಾಚವೆಂಬುದು ತಪ್ಪಾಗಿದೆ. ಜ್ಞಾನಸಾಗರ, ಪತಿತ-ಪಾವನನೆಂದು ಶಿವನಿಗೇ ಕರೆಯಲಾಗುತ್ತದೆ, ಜ್ಞಾನದಿಂದಲೇ ಸದ್ಗತಿಯಾಗುತ್ತದೆ. ಇವು ಅವಿನಾಶಿ ಜ್ಞಾನರತ್ನಗಳಾಗಿವೆ, ಸದ್ಗತಿದಾತನು ಒಬ್ಬರೇ ತಂದೆಯಾಗಿದ್ದಾರೆ. ಇವೆಲ್ಲಾ ವಿಚಾರಗಳನ್ನು ಪೂರ್ಣರೀತಿಯಲ್ಲಿ ನೆನಪಿಟ್ಟುಕೊಳ್ಳಬೇಕು. ಈಗ ಮಕ್ಕಳೇ ತಿಳಿಯುತ್ತೀರಿ - ನಾವು ತಂದೆಯನ್ನು ಅರಿತುಕೊಂಡಿದ್ದೇವೆ ಮತ್ತು ತಂದೆಯೂ ಸಹ ನಾನು ಮಕ್ಕಳನ್ನು ಅರಿತುಕೊಂಡಿದ್ದೇನೆಂದು ತಿಳಿಯುತ್ತಾರೆ. ತಂದೆಯಂತೂ ಇವರೆಲ್ಲರೂ ನನ್ನ ಮಕ್ಕಳೆಂದು ಹೇಳುತ್ತಾರಲ್ಲವೆ ಆದರೆ ಎಲ್ಲರೂ ತಂದೆಯನ್ನು ಅರಿತುಕೊಂಡಿಲ್ಲ, ಅದೃಷ್ಟದಲ್ಲಿದ್ದರೆ ಮುಂದೆಹೋದಂತೆ ಅರಿತುಕೊಳ್ಳುತ್ತಾರೆ. ತಿಳಿದುಕೊಳ್ಳಿ - ಈ ಬಾಬಾರವರು ಎಲ್ಲಿಯಾದರೂ ಹೋಗುತ್ತಾರೆಂದರೆ ಇವರು ಯಾರು ಎಂದು ಕೇಳುತ್ತಾರೆ. ಅವಶ್ಯವಾಗಿ ಅವರು ಶುದ್ಧಭಾವದಿಂದಲೇ ಕೇಳುತ್ತಾರೆ ಆಗ ಇದೇ ಶಬ್ಧವನ್ನು ಹೇಳಿ - ಇವರು ಬಾಪ್ದಾದಾ ಆಗಿದ್ದಾರೆ, ಬೇಹದ್ದಿನ ತಂದೆಯು ನಿರಾಕಾರನಾಗಿದ್ದಾರೆ, ಅವರು ಎಲ್ಲಿಯವರೆಗೆ ಸಾಕಾರದಲ್ಲಿ ಬರುವುದಿಲ್ಲವೋ ಅಲ್ಲಿಯವರೆಗೆ ತಂದೆಯಿಂದ ಆಸ್ತಿಯು ಹೇಗೆ ಸಿಗುತ್ತದೆ? ಆದ್ದರಿಂದ ಶಿವತಂದೆಯು ಪ್ರಜಾಪಿತ ಬ್ರಹ್ಮಾರವರ ಮೂಲಕ ದತ್ತುಮಾಡಿಕೊಂಡು ಆಸ್ತಿಯನ್ನು ಕೊಡುತ್ತಾರೆ. ಇವರು ಪ್ರಜಾಪಿತ ಬ್ರಹ್ಮಾ ಮತ್ತು ಇವರು ಬ್ರಹ್ಮಾಕುಮಾರ-ಕುಮಾರಿಯರಾಗಿದ್ದಾರೆ. ಓದಿಸುವವರು ಜ್ಞಾನಸಾಗರನಾಗಿದ್ದಾರೆ. ಅವರಿಂದಲೇ ಆಸ್ತಿಯು ಸಿಗುತ್ತದೆ. ತಂದೆಯಿಂದ ಈ ಬ್ರಹ್ಮಾರವರೂ ಸಹ ಓದುತ್ತಾರೆ, ಇವರು ಬ್ರಾಹ್ಮಣರಿಂದ ದೇವತೆಯಾಗುವವರಿದ್ದಾರೆ. ತಿಳಿಸುವುದು ಎಷ್ಟು ಸಹಜವಾಗಿದೆ! ಯಾರಿಗೆ ಬೇಕಾದರೂ ಬ್ಯಾಡ್ಜ್ನ ಬಗ್ಗೆ ತಿಳಿಸುವುದು ಬಹಳ ಒಳ್ಳೆಯದಾಗಿದೆ. ತಿಳಿಸಿ, ತಂದೆಯು ಹೇಳುತ್ತಾರೆ - ನನ್ನನ್ನು ನೆನಪು ಮಾಡುವುದರಿಂದ ನಿಮ್ಮ ವಿಕರ್ಮಗಳು ವಿನಾಶವಾಗುತ್ತವೆ, ಪಾವನರಾಗಿ ಪಾವನಪ್ರಪಂಚದಲ್ಲಿ ಹೊರಟುಹೋಗುತ್ತೀರಿ. ಇವರು ಪತಿತ-ಪಾವನ ತಂದೆಯಾಗಿದ್ದಾರಲ್ಲವೆ. ನಾವೂ ಸಹ ಪಾವನರಾಗುವು ಪುರುಷಾರ್ಥ ಮಾಡುತ್ತಿದ್ದೇವೆ. ಯಾವಾಗ ವಿನಾಶದ ಸಮಯವು ಬರುವುದೋ ಆಗ ನಮ್ಮ ವಿದ್ಯಾಭ್ಯಾಸವು ಮುಕ್ತಾಯವಾಗುವುದು. ಇದನ್ನು ತಿಳಿಸುವುದು ಎಷ್ಟು ಸಹಜವಾಗಿದೆ. ಯಾರಾದರೂ ಎಲ್ಲಿಯೇ ಹೋಗುತ್ತಾರೆ, ಬರುತ್ತಾರೆಂದರೆ ಈ ಬ್ಯಾಡ್ಜ್ ಜೊತೆಯಲ್ಲಿ ಅವಶ್ಯವಾಗಿರಬೇಕು. ಬ್ಯಾಡ್ಜ್ನ ಜೊತೆ ಒಂದು ಚಿಕ್ಕ ಸಂದೇಶಪತ್ರವೂ ಇರಲಿ. ಅದರಲ್ಲಿ ಬರೆದಿರಲಿ, ಭಾರತದಲ್ಲಿ ತಂದೆಯು ಬಂದು ಪುನಃ ಆದಿಸನಾತನ ದೇವಿ-ದೇವತಾಧರ್ಮದ ಸ್ಥಾಪನೆ ಮಾಡುತ್ತಾರೆ, ಈ ಮಹಾಭಾರತ ಯುದ್ಧದ ಮೂಲಕ ಮತ್ತೆಲ್ಲಾ ಅನೇಕ ಧರ್ಮಗಳು ಕಲ್ಪದ ಹಿಂದಿನ ಥರಹ ನಾಟಕದ ಯೋಜನೆಯನುಸಾರ ಸಮಾಪ್ತಿಯಾಗುತ್ತದೆ. ಇಂತಹ ಪತ್ರಗಳು 2-4 ಲಕ್ಷದಷ್ಟು ಮುದ್ರಿಸಿ, ಯಾರೇ ಬಂದರೂ ಸಹ ಅವರಿಗೆ ಈ ಪತ್ರವನ್ನು ಕೊಡಬಹುದು. ಮೇಲೆ ತ್ರಿಮೂರ್ತಿ ಚಿತ್ರವಿರಲಿ, ಇನ್ನೊಂದುಕಡೆ ಸೇವಾಕೇಂದ್ರಗಳ ವಿಳಾಸವಿರಲಿ. ಮಕ್ಕಳಿಗೆ ಇಡೀ ದಿನದಲ್ಲಿ ಸರ್ವೀಸಿನ ವಿಚಾರಗಳೇ ನಡೆಯುತ್ತಿರಬೇಕು.

ಮಕ್ಕಳು ಗೀತೆಯನ್ನು ಕೇಳಿದಿರಿ - ಪ್ರತಿನಿತ್ಯವೂ ತಮ್ಮ ಲೆಕ್ಕಪತ್ರವನ್ನು ತೆಗೆಯಬೇಕು, ಇಂದು ಇಡೀ ದಿನದಲ್ಲಿ ನನ್ನ ಸ್ಥಿತಿಯು ಹೇಗಿತ್ತು? ತಂದೆಯು ಇಂತಹ ಬಹಳ ಮಂದಿ ಮನುಷ್ಯರನ್ನು ನೋಡಿದ್ದಾರೆ, ಪ್ರತಿನಿತ್ಯ ರಾತ್ರಿಯ ಸಮಯದಲ್ಲಿ ಇಡೀ ದಿನದ ಲೆಕ್ಕಪತ್ರವನ್ನು ಬರೆಯುತ್ತಾರೆ. ಯಾವುದೇ ಕೆಟ್ಟಕೆಲಸವನ್ನಂತೂ ಮಾಡಲಿಲ್ಲವೆ ಎಂದು ಪರಿಶೀಲನೆ ಮಾಡಿಕೊಳ್ಳುತ್ತಾರೆ, ಎಲ್ಲವನ್ನೂ ಬರೆಯುತ್ತಾರೆ. ಒಳ್ಳೆಯ ಜೀವನಕಥೆಯನ್ನು ಬರೆದಿಟ್ಟಿದ್ದರೆ ನಂತರ ಬರುವವರೂ ಸಹ ಈ ರೀತಿ ಕಲಿಯುತ್ತಾರೆಂದು ತಿಳಿಯುತ್ತಾರೆ. ಹೀಗೆ ಬರೆಯುವವರು ಒಳ್ಳೆಯ ವ್ಯಕ್ತಿಗಳೇ ಆಗಿದ್ದಾರೆ, ವಿಕಾರಿಗಳಂತೂ ಆಗಿಯೇ ಇದ್ದಾರೆ. ಇಲ್ಲಂತೂ ಆ ಮಾತಿಲ್ಲ. ನೀವು ತಮ್ಮ ಲೆಕ್ಕಪತ್ರವನ್ನು ಪ್ರತಿನಿತ್ಯವೂ ನೋಡಿಕೊಳ್ಳಿ ನಂತರ ಅದನ್ನು ತಂದೆಯ ಬಳಿ ಕಳುಹಿಸಬೇಕು ಆಗ ಒಳ್ಳೆಯ ಉನ್ನತಿಯೂ ಆಗುವುದು ಮತ್ತು ಭಯವೂ ಇರುವುದು. ಇಂದು ನನಗೆ ಕೆಟ್ಟದೃಷ್ಟಿಯು ಬಂದಿತು, ಈ ರೀತಿಯಾಯಿತು....... ಎಂಬುದೆಲ್ಲವನ್ನೂ ಸ್ಪಷ್ಟವಾಗಿ ಬರೆಯಬೇಕು. ಯಾರು ಪರಸ್ಪರ ಒಬ್ಬರು ಇನ್ನೊಬ್ಬರಿಗೆ ದುಃಖ ಕೊಡುವರೋ ಅವರಿಗೆ ಗಾಜಿû ಎಂದು ಹೇಳುತ್ತಾರೆ. ಜನ್ಮ-ಜನ್ಮಾಂತರದ ಪಾಪಗಳು ನಿಮ್ಮ ತಲೆಯ ಮೇಲಿದೆ. ಈಗ ನೀವು ನೆನಪಿನ ಬಲದಿಂದ ಪಾಪಗಳ ಹೊರೆಯನ್ನು ಇಳಿಸಿಕೊಳ್ಳಬೇಕಾಗಿದೆ ಆದ್ದರಿಂದ ಇಡೀ ದಿನದಲ್ಲಿ ನಾವು ಎಷ್ಟು ಗಾಜಿû ಆಗಿದ್ದೇವೆ? ಎಂದು ನಿತ್ಯವೂ ನೋಡಿಕೊಳ್ಳಬೇಕು. ಅನ್ಯರಿಗೆ ದುಃಖವನ್ನು ಕೊಡುವುದೆಂದರೆ ಗಾಜಿû ಆಗುವುದಾಗಿದೆ, ಪಾಪವಾಗಿಬಿಡುತ್ತದೆ. ತಂದೆಯು ತಿಳಿಸುತ್ತಾರೆ ಗಾಜಿû ಆಗಿ ಯಾರಿಗೂ ದುಃಖವನ್ನು ಕೊಡಬೇಡಿ, ನಾವು ಎಷ್ಟು ಪಾಪ ಮತ್ತು ಎಷ್ಟು ಪುಣ್ಯವನ್ನು ಮಾಡಿದ್ದೇವೆ ಎಂದು ತಮ್ಮನ್ನು ಸಂಪೂರ್ಣ ಪರಿಶೀಲನೆ ಮಾಡಿಕೊಳ್ಳಿ. ಯಾರಾದರೂ ಸಿಗಲಿ ಅವರಿಗೆ ಈ ಮಾರ್ಗವನ್ನು ತಿಳಿಸಬೇಕಾಗಿದೆ. ಎಲ್ಲರಿಗೆ ಬಹಳ ಪ್ರೀತಿಯಿಂದ ತಿಳಿಸಿ - ತಂದೆಯನ್ನು ನೆನಪು ಮಾಡಬೇಕು ಮತ್ತು ಪವಿತ್ರರಾಗಬೇಕಾಗಿದೆ, ಗೃಹಸ್ಥವ್ಯವಹಾರದಲ್ಲಿರುತ್ತಾ ಕಮಲಪುಷ್ಪ ಸಮಾನ ಪವಿತ್ರರಾಗಬೇಕಾಗಿದೆ. ಭಲೆ ನೀವು ಸಂಗಮಯುಗದಲ್ಲಿದ್ದೀರಿ ಆದರೆ ಇದಂತೂ ರಾವಣರಾಜ್ಯವಲ್ಲವೆ! ಈ ಮಾಯಾವೀ ವಿಷಯವೈತರಣೀ ನದಿಯಲ್ಲಿರುತ್ತಲೂ ಕಮಲಪುಷ್ಫ ಸಮಾನ ಪವಿತ್ರರಾಗಬೇಕಾಗಿದೆ. ಕಮಲದ ಹೂವಿಗೆ ಬಹಳಷ್ಟು ಸಸಿಗಳಿರುತ್ತವೆ. ಆದರೂ ಸಹ ನೀರಿನಿಂದ ಅದು ಮೇಲಿರುತ್ತದೆ. ಗೃಹಸ್ಥಿಯಾಗಿದೆ, ಬಹಳಷ್ಟು ಸಸ್ಯಗಳಿಗೆ ಜನ್ಮನೀಡುತ್ತವೆ ಅಂದರೆ ಈ ದೃಷ್ಟಾಂತವು ನಿಮಗೋಸ್ಕರವಿದೆ. ವಿಕಾರಗಳಿಂದ ಭಿನ್ನವಾಗಿರಿ, ಇದೊಂದು ಜನ್ಮದಲ್ಲಿ ಪವಿತ್ರರಾಗಿರಿ ಮತ್ತೆ ಇದು ಅವಿನಾಶಿಯಾಗಿಬಿಡುವುದು. ನಿಮಗೆ ತಂದೆಯು ಅವಿನಾಶಿ ಜ್ಞಾನರತ್ನಗಳನ್ನು ಕೊಡುತ್ತಾರೆ ಉಳಿದೆಲ್ಲವೂ ಕಲ್ಲುಗಳಾಗಿವೆ. ಅವರಂತೂ ಭಕ್ತಿಯ ಮಾತುಗಳನ್ನೇ ತಿಳಿಸುತ್ತಾರೆ. ಜ್ಞಾನಸಾಗರ, ಪತಿತ-ಪಾವನನು ಒಬ್ಬರೇ ಆಗಿದ್ದಾರೆ ಅಂದಮೇಲೆ ಇಂತಹ ತಂದೆಯೊಂದಿಗೆ ಮಕ್ಕಳಿಗೆ ಎಷ್ಟೊಂದು ಪ್ರೀತಿಯಿರಬೇಕು! ತಂದೆಗೆ ಮಕ್ಕಳೊಂದಿಗೆ, ಮಕ್ಕಳಿಗೆ ತಂದೆಯೊಂದಿಗೆ ಪ್ರೀತಿಯಿರುತ್ತದೆ, ಇನ್ನ್ಯಾರೊಂದಿಗೂ ಸಂಬಂಧವಿಲ್ಲ. ಯಾರು ತಂದೆಯ ಮತದನುಸಾರ ನಡೆಯುವುದಿಲ್ಲವೋ ಅವರು ಮಲತಾಯಿ ಮಕ್ಕಳಾಗಿದ್ದಾರೆ. ರಾವಣನ ಮತದಂತೆ ನಡೆಯುತ್ತಾರೆಂದರೆ ರಾಮನ ಮತದವರಾಗಲಿಲ್ಲ, ಅರ್ಧಕಲ್ಪ ರಾವಣ ಸಂಪ್ರದಾಯವಿತ್ತು ಆದ್ದರಿಂದ ಇದಕ್ಕೆ ಭ್ರಷ್ಟಾಚಾರಿ ಪ್ರಪಂಚವೆಂದು ಕರೆಯಲಾಗುತ್ತದೆ. ಈಗ ನೀವು ಮತ್ತೆಲ್ಲವನ್ನೂ ಬಿಟ್ಟು ಒಬ್ಬ ತಂದೆಯ ಮತದಂತೆ ನಡೆಯಬೇಕಾಗಿದೆ. ಪರಸ್ಪರ ಬ್ರಾಹ್ಮಣರ ಮತವು ಸಿಕ್ಕಿದರೂ ಸಹ ಪರಿಶೀಲನೆ ಮಾಡಿಕೊಳ್ಳಬೇಕು - ಈ ಮತವು ಸರಿಯೇ ಅಥವಾ ತಪ್ಪಾಗಿದೆಯೇ? ನೀವು ಮಕ್ಕಳಿಗೆ ಈಗ ಸತ್ಯ ಮತ್ತು ಅಸತ್ಯತೆಯ ತಿಳುವಳಿಕೆ ಸಿಕ್ಕಿದೆ. ಯಾವಾಗ ಸತ್ಯತಂದೆಯು ಬಂದರೋ ಆಗಲೇ ಸತ್ಯ ಮತ್ತು ಅಸತ್ಯವೇನೆಂಬುದನ್ನು ತಿಳಿಸಿದರು. ತಂದೆಯು ತಿಳಿಸುತ್ತಾರೆ - ನೀವು ಅರ್ಧಕಲ್ಪ ನೀವು ಭಕ್ತಿಮಾರ್ಗದ ಶಾಸ್ತ್ರಗಳನ್ನು ಕೇಳಿದ್ದೀರಿ, ಈಗ ನಾನು ನಿಮಗೆ ಏನನ್ನು ತಿಳಿಸುತ್ತೇನೆಯೋ ಇದು ಸತ್ಯವೇ ಅಥವಾ ಅವರು ಹೇಳುವುದು ಸತ್ಯವೇ? ಈಶ್ವರ ಸರ್ವವ್ಯಾಪಿಯೆಂದು ಅವರು ಹೇಳುತ್ತಾರೆ ಆದರೆ ನಾನಂತೂ ನಿಮ್ಮ ತಂದೆಯಾಗಿದ್ದೇನೆಂದು ಹೇಳುತ್ತೇನೆ ಅಂದಮೇಲೆ ನಿರ್ಣಯ ಮಾಡಿ - ಯಾವುದು ಸರಿ? ಇದನ್ನೂ ಸಹ ಮಕ್ಕಳಿಗೇ ತಿಳಿಸಲಾಗುತ್ತದೆಯಲ್ಲವೆ? ಯಾವಾಗ ಬ್ರಾಹ್ಮಣರಾಗುವಿರೋ ಆಗಲೇ ಅರಿತುಕೊಳ್ಳುವಿರಿ. ರಾವಣನ ಸಂಪ್ರದಾಯವರಂತೂ ಬಹಳಷ್ಟಿದ್ದಾರೆ, ನೀವು ಕೆಲವರೇ ಇದ್ದೀರಿ ಅದರಲ್ಲಿಯೂ ನಂಬರ್ವಾರ್ ಇದ್ದೀರಿ. ಒಂದುವೇಳೆ ಯಾರಿಗಾದರೂ ಕುದೃಷ್ಟಿಯಿದ್ದರೆ ಅವರನ್ನು ರಾವಣ ಸಂಪ್ರದಾಯದವರೆಂದು ಕರೆಯಲಾಗುವುದು. ಯಾವಾಗ ದೃಷ್ಟಿಯು ಸಂಪೂರ್ಣವಾಗಿ ಪರಿವರ್ತನೆಯಾಗಿ ದೈವೀ ದೃಷ್ಟಿಯಾಗುವುದೋ ಆಗ ರಾಮನ ಸಂಪ್ರದಾಯದವರೆಂದು ತಿಳಿಯಲಾಗುತ್ತದೆ. ಪ್ರತಿಯೊಬ್ಬರೂ ತಮ್ಮ ಸ್ಥಿತಿಯನ್ನು ತಿಳಿಯಬಹುದಲ್ಲವೆ! ಮೊದಲಂತೂ ಜ್ಞಾನವಿರಲಿಲ್ಲ, ಈಗಂತೂ ತಂದೆಯು ತಿಳಿಸುತ್ತಾರೆ ಆದ್ದರಿಂದ ನೋಡಿಕೊಳ್ಳಬೇಕು - ಅವಿನಾಶಿ ಜ್ಞಾನರತ್ನಗಳ ದಾನವನ್ನು ಮಾಡುತ್ತೇನೆಯೇ? ಮನುಷ್ಯರು ಭಲೆ ವಿನಾಶೀ ಧನದ ದಾನ ಮಾಡುತ್ತಾರೆ. ಈಗ ನೀವು ಅವಿನಾಶಿ ಧನದ ದಾನ ಮಾಡಬೇಕೇ ವಿನಃ ವಿನಾಶೀ ಧನವಲ್ಲ. ಒಂದುವೇಳೆ ವಿನಾಶೀ ಧನವಿದ್ದರೆ ಅದನ್ನು ಅಲೌಕಿಕ ಸೇವೆಯಲ್ಲಿ ತೊಡಗಿಸುತ್ತಾ ಹೋಗಿ. ಪತಿತರಿಗೆ ದಾನ ಮಾಡುವುದರಿಂದ ಪತಿತರೇ ಆಗಿಬಿಡುತ್ತೀರಿ. ಈಗ ನೀವು ತಮ್ಮ ಧನವನ್ನು ದಾನ ಮಾಡುತ್ತೀರೆಂದರೆ ಇದಕ್ಕೆ ಪ್ರತಿಯಾಗಿ 21 ಜನ್ಮಗಳಿಗಾಗಿ ಹೊಸ ಪ್ರಪಂಚದಲ್ಲಿ ಸಿಗುತ್ತದೆ. ಇವೆಲ್ಲವೂ ತಿಳಿದುಕೊಳ್ಳುವಂತಹ ಮಾತುಗಳಾಗಿವೆ. ತಂದೆಯು ಸರ್ವೀಸಿನ ಯುಕ್ತಿಗಳನ್ನು ತಿಳಿಸುತ್ತಿರುತ್ತಾರೆ. ಎಲ್ಲರ ಮೇಲೆ ದಯೆತೋರಿಸಿ ಪರಮಪಿತ ಪರಮಾತ್ಮನು ಬ್ರಹ್ಮಾರವರ ಮೂಲಕ ಸ್ಥಾಪನೆ ಮಾಡುತ್ತಾರೆಂದು ಗಾಯನವಿದೆ ಆದರೆ ಅರ್ಥವನ್ನು ತಿಳಿದುಕೊಂಡಿಲ್ಲ. ಪರಮಾತ್ಮನನ್ನೇ ಸರ್ವವ್ಯಾಪಿಯೆಂದು ಹೇಳಿಬಿಟ್ಟಿದ್ದಾರೆ ಆದ್ದರಿಂದ ಮಕ್ಕಳಿಗೆ ಸರ್ವೀಸಿನ ಬಹಳ ಅಭಿರುಚಿಯಿರಬೇಕು. ಅನ್ಯರ ಕಲ್ಯಾಣ ಮಾಡುತ್ತೀರೆಂದರೆ ತಮ್ಮದೂ ಕಲ್ಯಾಣವಾಗುವುದು. ದಿನ-ಪ್ರತಿದಿನ ತಂದೆಯು ಬಹಳ ಸಹಜ ಮಾಡುತ್ತಾಹೋಗುತ್ತಾರೆ. ಈ ತ್ರಿಮೂರ್ತಿ ಚಿತ್ರವು ಬಹಳ ಒಳ್ಳೆಯ ಚಿತ್ರವಾಗಿದೆ, ಇದರಲ್ಲಿ ಶಿವತಂದೆಯೂ ಇದ್ದಾರೆ, ಪ್ರಜಾಪಿತ ಬ್ರಹ್ಮನೂ ಇದ್ದಾರೆ. ಪ್ರಜಾಪಿತ ಬ್ರಹ್ಮಾಕುಮಾರ-ಕುಮಾರಿಯರ ಮೂಲಕ ಪುನಃ ಭಾರತದಲ್ಲಿ 100% ಸುಖ-ಶಾಂತಿ-ಪವಿತ್ರತೆ ದೈವೀ ಸ್ವರಾಜ್ಯವನ್ನು ಸ್ಥಾಪನೆ ಮಾಡುತ್ತಿದ್ದಾರೆ. ಉಳಿದಂತೆ ಈ ಮಹಾಭಾರತ ಯುದ್ಧದಿಂದ ಅನೇಕ ಧರ್ಮಗಳು ಕಲ್ಪದ ಹಿಂದಿನ ತರಹ ವಿನಾಶವಾಗಿಬಿಡುತ್ತವೆ. ಇಂತಿಂತಹ ಪತ್ರಗಳನ್ನು ಮುದ್ರಣ ಮಾಡಿಸಿ ಹಂಚಬೇಕು. ತಂದೆಯು ಎಷ್ಟು ಸಹಜಮಾರ್ಗವನ್ನು ತಿಳಿಸುತ್ತಾರೆ, ಪ್ರದರ್ಶನಿಯಲ್ಲಿಯೂ ಪತ್ರಗಳನ್ನು ಹಂಚಿ. ಅದರ ಮೂಲಕ ತಿಳಿಸುವುದು ಸಹಜವಾಗುತ್ತದೆ. ಹಳೆಯ ಪ್ರಪಂಚದ ವಿನಾಶವಂತೂ ಖಂಡಿತ ಆಗುವುದಿದೆ, ಹೊಸಪ್ರಪಂಚದ ಸ್ಥಾಪನೆಯಾಗುತ್ತಿದೆ. ಒಂದು ಆದಿಸನಾತನ ದೇವಿ-ದೇವತಾಧರ್ಮದ ಸ್ಥಾಪನೆಯಾಗುತ್ತಿದೆ. ಉಳಿದೆಲ್ಲವೂ ಕಲ್ಪದ ಹಿಂದಿನ ತರಹ ವಿನಾಶವಾಗಿಬಿಡುತ್ತವೆ. ನೀವು ಎಲ್ಲಿಗಾದರೂ ಹೋಗಿ, ಜೇಬಿನಲ್ಲಿ ಸಂದೇಶ ಪತ್ರಗಳಿರಲಿ ಮತ್ತು ಬ್ಯಾಡ್ಜ್ಗಳಿರಲಿ. ಸೆಕೆಂಡಿನಲ್ಲಿ ಜೀವನ್ಮುಕ್ತಿಯೆಂದು ಗಾಯನವಿದೆ ಅಂದಾಗ ತಿಳಿಸಿ, ಇವರು ತಂದೆಯಾಗಿದ್ದಾರೆ, ಇವರು ದಾದಾ (ಸಹೋದರ) ಆಗಿದ್ದಾರೆ. ಆ ತಂದೆಯನ್ನು ನೆನಪು ಮಾಡುವುದರಿಂದ ಈ ಸತ್ಯಯುಗೀ ದೇವತಾ ಪದವಿಯನ್ನು ಪಡೆಯುತ್ತೇವೆ. ಹಳೆಯ ಪ್ರಪಂಚದ ವಿನಾಶ, ಹೊಸ ಪ್ರಪಂಚದ ಸ್ಥಾಪನೆ ವಿಷ್ಣುಪುರಿಯು ಹೊಸಪ್ರಪಂಚದಲ್ಲಿ ಇವರ ರಾಜ್ಯವಿರುವುದು ಎಷ್ಟು ಸಹಜವಾಗಿದೆ. ಮನುಷ್ಯರು ತೀರ್ಥಸ್ಥಾನಗಳಿಗೆ ಹೋಗಿ ಎಷ್ಟೊಂದು ಪೆಟ್ಟುತಿನ್ನುತ್ತಾರೆ. ಆರ್ಯಸಮಾಜಿಗಳೂ ಸಹ ರೈಲಿನಲ್ಲಿ ಹೋಗುತ್ತಾರೆ, ಇದಕ್ಕೆ ಧರ್ಮದ ಪೆಟ್ಟುಗಳೆಂದು ಹೇಳಲಾಗುತ್ತದೆ. ವಾಸ್ತವದಲ್ಲಿ ಅಧರ್ಮದ ಪೆಟ್ಟುಗಳಾಗಿವೆ. ಧರ್ಮದಲ್ಲಂತೂ ಪೆಟ್ಟುತಿನ್ನುವ ಅವಶ್ಯಕತೆಯಿಲ್ಲ. ನೀವು ವಿದ್ಯೆಯನ್ನು ಓದುತ್ತಿದ್ದೀರಿ. ಭಕ್ತಿಮಾರ್ಗದಲ್ಲಿ ಮನುಷ್ಯರು ಏನೇನು ಮಾಡುತ್ತಿರುತ್ತಾರೆ!

ಮಕ್ಕಳು ಗೀತೆಯಲ್ಲಿಯೂ ಕೇಳಿದಿರಿ - ಮುಖವನ್ನು ನೋಡಿಕೋ ಪ್ರಾಣಿ......... ನಿಮ್ಮ ವಿನಃ ಮತ್ತ್ಯಾರೂ ಹೀಗೆ ಮುಖವ (ಅಂತರ್ಮುಖ) ನ್ನು ನೋಡಿಕೊಳ್ಳಲು ಸಾಧ್ಯವಿಲ್ಲ. ಭಗವಂತನಿಗೂ ಸಹ ನೀವು ತೋರಿಸಬಹುದಾಗಿದೆ - ಇವು ಜ್ಞಾನದ ಮಾತುಗಳಾಗಿವೆ. ನೀವು ಮನುಷ್ಯರಿಂದ ದೇವತೆ, ಪಾಪಾತ್ಮರಿಂದ ಪುಣ್ಯಾತ್ಮರಾಗುತ್ತೀರಿ. ಪ್ರಪಂಚದವರು ಈ ಮಾತುಗಳನ್ನು ಸ್ವಲ್ಪವೂ ಅರಿತುಕೊಂಡಿಲ್ಲ. ಈ ಲಕ್ಷ್ಮಿ-ನಾರಾಯಣರು ಹೇಗೆ ಸ್ವರ್ಗದ ಮಾಲೀಕರಾದರೆಂದು ಯಾರಿಗೂ ತಿಳಿದಿಲ್ಲ. ನೀವು ಮಕ್ಕಳು ಎಲ್ಲವನ್ನೂ ಅರಿತುಕೊಂಡಿದ್ದೀರಿ. ಯಾರಿಗಾದರೂ ಬುದ್ಧಿಗೆ ಬಾಣವು ನಾಟಿಬಿಟ್ಟರೆ ಅವರ ಜೀವನದ ದೋಣಿಯು ಪಾರಾಗುವುದು. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ತಂದೆಯ ಆತ್ಮಿಕ ಮಕ್ಕಳಿಗೆ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1. ಒಂದುವೇಳೆ ಸ್ಥೂಲ (ವಿನಾಶಿ) ಧನವಿದ್ದರೆ ಅದನ್ನು ಸಫಲ ಮಾಡಿಕೊಳ್ಳಲು ಅಲೌಕಿಕ ಸೇವೆಯಲ್ಲಿ ತೊಡಗಿಸಬೇಕಾಗಿದೆ. ಅವಿನಾಶಿ ಧನದ ದಾನವನ್ನು ಅವಶ್ಯವಾಗಿ ಮಾಡಬೇಕಾಗಿದೆ.

2. ತಮ್ಮ ಲೆಕ್ಕಪತ್ರವನ್ನು ನೋಡಿಕೊಳ್ಳಬೇಕಾಗಿದೆ - ನನ್ನ ಸ್ಥಿತಿಯು ಹೇಗಿದೆ? ಇಡೀ ದಿನದಲ್ಲಿ ಯಾವುದೇ ಕೆಟ್ಟಕೆಲಸಗಳು ಆಗುತ್ತಿಲ್ಲವೆ? ಪರಸ್ಪರ ದುಃಖವನ್ನು ಕೊಡುತ್ತಿಲ್ಲವೆ? ಯಾರ ಪ್ರತಿಯೂ ಕುದೃಷ್ಟಿಯು ಹೋಗುತ್ತಿಲ್ಲವೆ?

ವರದಾನ:
ಡಬಲ್ ಲೈಟ್ ಆಗಿ ಸರ್ವ ಸಮಸ್ಯೆಗಳಿಗೆ ಹೈಜಂಪ್ ಹಾಕಿ ಪಾರಾಗುವಂತಹ ತೀವ್ರ ಪುರುಷಾರ್ಥಿ ಭವ

ಸದಾ ಸ್ವಯಂನ್ನು ಅಮೂಲ್ಯ ರತ್ನವೆಂದು ತಿಳಿದು ಬಾಪ್ದಾದಾರವರ ಹೃದಯದ ಡಬ್ಬಿಯಲ್ಲಿರಿ ಅರ್ಥಾತ್ ಸದಾ ತಂದೆಯ ನೆನಪಿನಲ್ಲಿ ಸಮಾವೇಶವಾಗಿರಿ ಆಗ ಯಾವುದೇ ಮಾತಿನಲ್ಲಿ ಪರಿಶ್ರಮದ ಅನುಭವ ಮಾಡುವುದಿಲ್ಲ, ಎಲ್ಲಾ ಹೊರೆ ಸಮಾಪ್ತಿಯಾಗಿ ಬಿಡುತ್ತದೆ ಇದೇ ಸಹಜಯೋಗದಿಂದ ಡಬಲ್ ಲೈಟ್ ಆಗಿ, ಪುರುಷಾರ್ಥದಲ್ಲಿ ಹೈ ಜಂಪ್ ಹಾಕಿ ತೀವ್ರ ಪುರುಷಾರ್ಥಿಯಾಗಿ ಬಿಡುವಿರಿ. ಯಾವಾಗಲಾದರೂ ಯಾವುದೇ ಕಷ್ಟದ ಅನುಭವವಾದಾಗ ತಂದೆಯ ಎದುರಿಗೆ ಕುಳಿತುಬಿಡಿ ಮತ್ತು ಬಾಪ್ದಾದಾರವರ ವರದಾನದ ಹಸ್ತ ಸ್ವಯಂ ಮೇಲೆ ಅನುಭವ ಮಾಡಿ ಇದರಿಂದ ಸೆಕೆಂಡಿನಲ್ಲಿ ಸರ್ವ ಸಮಸ್ಯೆಗಳಿಗೆ ಸಮಾಧಾನ ಸಿಕ್ಕಿಬಿಡುತ್ತದೆ.

ಸ್ಲೋಗನ್:
ಸಹಯೋಗದ ಶಕ್ತಿ ಅಸಂಭವ ಮಾತನ್ನೂ ಸಹ ಸಂಭವ ಮಾಡಿಬಿಡುತ್ತದೆ. ಇದೇ ಸರಕ್ಷತೆಯ ಕೋಟೆಯಾಗಿದೆ.

ತಮ್ಮ ಶಕ್ತಿಶಾಲಿ ಮನಸ್ಸಾ ಮೂಲಕ ಸಕಾಶ ಕೊಡುವ ಸೇವೆಯನ್ನು ಮಾಡಿರಿ

ಸಮಯ ಪ್ರಮಾಣ ನಾಲ್ಕಾರು ಕಡೆ ಸಕಾಶ ಕೊಡುವುದು, ವೈಬ್ರೇಷನ್ ಕೊಡುವುದು, ಮನಸ್ಸಾ ಮೂಲಕ ವಾಯುಮಂಡಲ ಮಾಡುವುದರ ಕಾರ್ಯ ಮಾಡಬೇಕಾಗಿದೆ. ಈಗ ಇದೇ ಸೇವೆಯ ಅವಶ್ಯಕತೆಯಿದೆ. ಹೇಗೆ ಸಾಕಾರ ರೂಪದಲ್ಲಿ ನೋಡಿ – ಯಾವುದೇ ಇಂತಹ ಅಲೆಯ ಸಮಯ ಯಾವಾಗ ಬರುತ್ತಿತು ಆಗ ಹಗಲು ರಾತ್ರಿ ಸಕಾಶ ಕೊಡುವ, ನಿರ್ಬಲರಲ್ಲಿ ಬಲ ತುಂಬುವ ಗಮನವಿರುತ್ತಿತ್ತು. ಸಮಯ ತೆಗೆದು ಆತ್ಮಗಳಿಗೆ ಸಕಾಶ ಕೊಡುವ ಸೇವೆ ನಡೆಯುತ್ತಿತ್ತು. ಇಂತಹ ಫಾಲೋ ಫಾದರ್ ಮಾಡಿ.